ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06/05/2020
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 42/2020 ಕಲಂ: 143,147,323,324,504,506,149 ಐಪಿಸಿ:- ಇಂದು ದಿನಾಂಕ; 06/05/2020 ರಂದು 7-30 ಪಿಎಮ್ ಕ್ಕೆ ಶ್ರೀ ಅಂಬರೇಶ ತಂದೆ ಯಲ್ಲಪ್ಪ ಮರಗಮರ ವ;23 ಜಾ; ಸಿಂಧುಹಳ್ಳಿ (ಹರಿಜನ) ಉ; ಹಂದಿಕಾಯುವುದು, ಪೋತರಾಜ ಸಾ; ಹೊಸಳ್ಳಿಕ್ರಾಸ ಶಶಿಧರ ಕಾಲೋನಿ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ನೀಡಿದ್ದರ ಸಾರಾಂಶವೆನೆಂದರೆ, ನಾನು ಹಂದಿಗಳ ವ್ಯಾಪಾರ ಮಾಡಿಕೊಂಡಿರುತ್ತೇನೆ. ಯಾದಗಿರಿ ನಗರದ ಅಲ್ಲಲ್ಲಿ ನಮ್ಮ ಹಂದಿಗಳು ಮೇಯಲು ಬಿಟ್ಟಿರುತ್ತೇವೆ. ಹಿಗೀದ್ದು ನಿನ್ನೆ ದಿನಾಂಕ; 05/05/2020 ರಂದು ಬೆಳೆಗ್ಗೆ 8-00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಮಾವನಾದ ಬಾಲಪ್ಪ ತಂದೆ ನಾರಾಯಣಪ್ಪ ಇಬ್ಬರೂ ಕೂಡಿಕೊಂಡು ಯಾದಗಿರಿ ನಗರದಲ್ಲಿರುವ ನಮ್ಮ ಹಂದಿಗಳನ್ನು ನೋಡಿಕೊಳ್ಳುತ್ತಾ ತಿರುಗಾಡುತ್ತಾ ಬಾಲಾಜಿ ದೇವಸ್ಥಾನದ ಹತ್ತಿರವಿರುವ ವನಿಕೇರಾ ಲೇಔಟ ಹತ್ತಿರ ಬಂದಾಗ ನಮ್ಮ ಹಂದಿಗಳನ್ನು ಅಂಬೇಡ್ಕರ ನಗರದ ಮೌನೇಶ ತಂದೆ ಸಂಜೀವಪ್ಪ, ನಾಗರಾಜ ತಂದೆ ಸಂಜೀವಪ್ಪ, ಬಾಲರಾಜ ತಂದೆ ಯಂಕಪ್ಪ, ಯಲ್ಲಪ್ಪ ತಂದೆ ರಂಗಪ್ಪ ಮತ್ತು ಅಯ್ಯಪ್ಪ ಎಂಬುವವರು ನಮ್ಮ ಹಂದಿಗಳನ್ನು ಹಿಡಿದುಕೊಂಡು ನಿಂತಾಗ ನಾವು ಯಾಕೆ ನಮ್ಮ ಹಂದಿಗಳನ್ನು ಹಿಡಿದುಕೊಂಡು ನಿಂತಿದ್ದೀರಿ ಅಂತಾ ಅಂದಿದ್ದಕ್ಕೆ ಅವರು ಲೇ ಬೋಸಡಿ ಮಕ್ಕಳೇ ಇವು ನಮ್ಮ ಹಂದಿಗಳು ಇರುತ್ತವೆ ಅಂತಾ ಬೈದಾಗ ಆಗ ನಾವು ನಮ್ಮ ಹಂದಿಗಳಿಗೆ ಕಿವಿಗಳನ್ನು ಕೋಯ್ದು ಗುರುತು ಮಾಡಿದ್ದೇವೆ ಆದ್ದರಿಂದ ಇವು ನಮ್ಮ ಹಂದಿಗಳು ಇರುತ್ತವೆ ಅಂತಾ ಅಂದಾಗ ಅವರು ಮತ್ತೆ ನಮಗೆ ಇವು ನಿಮ್ಮ ಹಂದಿಗಳು ಇರಬಹುದು ನಾವೆ ತೆಗೆದುಕೊಂಡು ಮಾರಾಟ ಮಾಡುತ್ತೇವೆ ಏನು ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳಿ ಅಂತಾ ಅಂದಾಗ ನಾವು ಯಾಕೆ ಸುಮ್ಮನೆ ನಮ್ಮ ಜೋತೆ ತಕರಾರು ಮಾಡುತ್ತೀರಾ ನಮ್ಮ ಹಂದಿಗಳು ಇರುತ್ತವೆ ಬಿಟ್ಟು ಬಿಡಿ ಅಂತಾ ಅಂದಾಗ ಅವರು ಮತ್ತೆ ನಮ್ಮ ಹಂದಿಗಳು ಅಂತಾ ಮಾತಾಡುತ್ತೀರಿ ಮಕ್ಕಳೇ ನೀವು ಹಿಂದಿನದೂ ಮರೆತ್ತೀದ್ದೀರಾ ಇವತ್ತು ನಮ್ಮ ತಂಟೆಗೆ ಬಂದರೆ ನಿಮಗೂ ಕೂಡಾ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದಾಗ ನಾವು ನಮ್ಮ ಹಂದಿಗಳನ್ನು ತೆಗೆದುಕೊಳ್ಳಲು ಹೋದಾಗ ಮೌನೇಶ ಈತನು ಬಡಿಗೆಯಿಂದ ನನ್ನ ಮೂಗಿಗೆ ಹೊಡೆದಾಗ ಮೂಗಿನಿಂದ ರಕ್ತ ಸೋರಿದ್ದು, ನಾಗೇಶ ಮತ್ತು ಬಾಲರಾಜ ಇವರು ಕೈಯಿಂದ ಕಪಾಳಕ್ಕೆ ಹೊಡೆದು ಕಾಲಿನಿಂದ ಬೆನ್ನಿಗೆ ಮತ್ತು ಹೊಟ್ಟೆಗೆ ಒದ್ದರು. ಯಲ್ಲಪ್ಪ ಈತನು ಕೈ ಮುಷ್ಠಿ ಮಾಡಿ ನನಗೆ ಗದ್ದಕ್ಕೆ ಗುದ್ದಿದನು. ನಮ್ಮ ಮಾವ ಬಾಲಪ್ಪ ಈತನು ಜಗಳ ಬಿಡಿಸಲು ಬಂದಾಗ ಅಯ್ಯಪ್ಪ ಈತನು ಕೈಯಿಂದ ಕಪಾಳಕ್ಕೆ ಹೊಡೆದನು. ನಮ್ಮ ಮಾವ ಜಗಳ ಬಿಡಿಸುತ್ತಿರುವಾಗ ಇವತ್ತು ಉಳಿದಿದಿ ಮಗನೇ ಇನ್ನೊಂದು ಸಲಾ ಸೀಗು ನಿನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋದರು ನಂತರ ನಾನು ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರಗೆ ಬಂದು ಸೇರಿಕೆಯಾಗಿದ್ದು ಆ ಸಮಯದಲ್ಲಿ ನಾನು ಪೋಲಿಸರ ಮುಂದೆ ಯಾವುದೇ ಹೇಳಿಕೆ ನೀಡಿರುವುದಿಲ್ಲ. ನಂತರ ಮನೆಯಲ್ಲಿ ವಿಚಾರಿಸಿ ಠಾಣೆಗೆ ಬಂದು ದೂರು ಸಲ್ಲಿಸುತ್ತೇನೆ ಅಂತಾ ಹೇಳಿದ್ದು ಈಗ ನಾನು ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಹೇಳಿಕೆ ನೀಡಿದ್ದು ನಮಗೆ ಹೊಡೆಬಡೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.42/2020 ಕಲಂ. 143, 147, 323, 324, 504, 506 ಸಂ.149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 57/2020 ಕಲಂ: 87 ಕೆ.ಪಿ ಎಠ್ಟಿ್:- ಇಂದು ದಿನಾಂಕ: 06/05/2020 ರಂದು 4-15 ಪಿಎಮ್ ಕ್ಕೆ ಮಾನ್ಯ ಪಿ.ಎಸ್.ಐ ವಡಗೇರಾ ರವರು ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಮತ್ತು ವರದಿ ಸಲ್ಲಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ: 06/05/2020 ರಂದು ವಡಗೇರಾ ಕಂಠಿ ತಾಂಡಾ ಸೀಮಾಂತರದ ಗಾಳಿ ಮರೆಮ್ಮ ದೇವಸ್ಥಾನದ ಖಾಲಿ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೇಟ್ ಜೂಜಾಟ ಆಡುತ್ತಿದ್ದಾಗ ನಾವು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಆರೋಪಿತರಾದ 1) ಈರಪ್ಪ ತಂದೆ ಭೀಮಶಪ್ಪ ಚವ್ಹಾಣ, ವ:21, ಜಾ:ಲಮ್ಮಾಣಿ ಸಾ:ಕಂಠಿ ತಾಂಡಾ ಈತನ ಹತ್ತಿರ ನಗದು ಹಣ 260/- ಮತ್ತು 17 ಇಸ್ಪೀಟ ಎಲೆಗಳು ದೊರೆತ್ತಿದ್ದು, ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ 2) ಮೂಕ್ಯಾ ತಂದೆ ದಾಮ್ಲ್ಯಾ ಪವ್ಹಾರ, ವ:30, 3) ಬಸವರಾಜ ತಂದೆ ಹಣಮಂತ ಪವ್ಹಾರ, ವ:30, 4) ಢಾಕಪ್ಪ ತಂದೆ ಧಾರಪ್ಪ ರಾಠೋಡ, ವ:30, 5) ಶಂಕರ ತಂದೆ ದೇನ್ಯಾ ಪವ್ಹಾರ, ವ:30, 6) ತೀರಪ್ಪ ತಂದೆ ಹರಿಲಾಲ ಪವ್ಹಾರ, ವ:20, 7) ಸಂತೋಷ ತಂದೆ ಈರಪ್ಪ ಚವ್ಹಾಣ, ವ:25 ಎಲ್ಲರೂ ಸಾ:ಕಂಠಿ ತಾಂಡಾ ವಡಗೇರಾ ಎಂದು ಹೇಳಿದನು. ಸದರಿ ಸ್ಥಳದಲ್ಲಿ ಎಲ್ಲರ ಮದ್ಯದಲ್ಲಿ ನಗದು ಹಣ 1250/- ರೂ. ಹಾಗೂ 35 ಇಸ್ಪಿಟ್ ಎಲೆಗಳು ದೊರೆತ್ತಿದ್ದು, ಹೀಗೆ ಒಟ್ಟು 1510/- ರೂ. ಗಳು ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳು ದೊರೆತ್ತಿದ್ದು, ಸದರಿ ಸಿಕ್ಕ ಆರೋಪಿ ಮತ್ತು ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯೊಂದಿಗೆ ಹಾಜರಪಡಿಸುತ್ತಿದ್ದು, ಸದರಿ ಅಪರಾಧವು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದುಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯಕ್ಕೆ ಅನುಮತಿ ಕೋರಿ ಪತ್ರ ಬರೆದುಕೊಂಡಿದ್ದು, ನ್ಯಾಯಾಲಯದ ಅನುಮತಿ ಪಡೆದುಕೊಂಡು 7-30 ಪಿಎಮ್ ಕ್ಕೆ ಗುನ್ನೆ ನಂ. 57/2020 ಕಲಂ: 87 ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 143,147,504,448,354,324,506 ಸಂ 149 ಐಪಿಸಿ;- ಇಂದು ದಿನಾಂಕ: 06/05/2020 ರಂದು 8-15 ಪಿಎಮ್ ಕ್ಕೆ ಶ್ರೀಮತಿ ಶಾಂತಮ್ಮ ಗಂಡ ಬೂದೆಪ್ಪಗೌಡ ದಳಪತಿ, ವ:75, ಜಾ:ಲಿಂಗಾಯತ, ಉ:ಮನೆಕೆಲಸ ಸಾ:ಮನಗನಾಳ ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ: 06/05/2020 ರಂದು ಮದ್ಯಾಹ್ನ 3 ಪಿಎಮ್ ಸುಮಾರಿಗೆ ನಾನು ಮನೆಯ ಅಂಗಳದಲ್ಲಿದ್ದಾಗ 1) ಈಶಪ್ಪ ತಂದೆ ಗಂಗಪ್ಪ ಉಪ್ಪಾರ, 2) ಅಮಾತೆಪ್ಪ ತಂದೆ ಗಂಗಪ್ಪ, 3) ಸುಭಾಶ ತಂದೆ ಶರಣಪ್ಪ, 4) ಸಣ್ಣ ಭೀಮಪ್ಪ ತಂದೆ ಸಣ್ಣ ತಿಮ್ಮಣ್ಣ, 5) ಭದ್ರಪ್ಪ ತಂದೆ ಅಮಲಪ್ಪ, 6) ನಾಗಪ್ಪ ತಂದೆ ಬಾಲಣ್ಣ, 7) ಭೀಮಪ್ಪ ತಂದೆ ಗಂಗಪ್ಪ ಉಪ್ಪಾರ ಎಲ್ಲರೂ ಸಾ:ಮನಗನಾಳ ಇವರು ಅಕ್ರಮಕೂಟ ಕಟ್ಟಿಕೊಂಡು ಬಂದು ನಮ್ಮ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಮನೆ ಮುಂದಿನಿಂದ ದಾರಿ ಸಂಬಂಧ ಜಗಳ ತೆಗೆದು ನನ್ನ ಸೀರೆ ಸೆರಗು ಹಿಡಿದು ಜಗ್ಗಾಡಿ, ಕಟ್ಟಿಗೆ ಮತ್ತು ಕಲ್ಲಿನಿಂದ ಹಲ್ಲೆ ಮಾಡಿ ತೆಲೆ ಹಿಂಭಾಗ ರಕ್ತಗಾಯ ಮಾಡಿದ್ದು, ಬಿಡಿಸಲು ಬಂದ ನನ್ನ ಮೊಮ್ಮಗ ಅಮರೇಶನಿಗೆ ಕೂಡಾ ಕಟ್ಟಿಗೆ ಮತ್ತು ಕಲ್ಲಿನಿಂದ ಹಲ್ಲೆ ಮಾಡಿರುತ್ತಾರೆ. ಜಗಳವನ್ನು ದೇವರಾಜ ತಂದೆ ಸೋಮಶೇಖರ ಬಿರೆದಾರ, ಬಸನಗೌಡ ತಂದೆ ಸೋಮಶೇಖರ ಇವರು ಬಂದು ಜಗಳ ಬಿಡಿಸಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ ಸೂಳೆ ಮಕ್ಕಳೆ ಇನ್ನೊಮ್ಮ ಬಂದು ನಿಮಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 58/2020 ಕಲಂ: 143,147,504,448,324,354,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 144/2020.ಕಲಂ, 143,147,148,323,324,504,506ಸಂ,149. ಐ.ಪಿ.ಸಿ.:- ಇಂದು ದಿನಾಂಕ 06/05/2020 ರಂದು ಬೆಳಿಗ್ಗೆ 8-30 ಗಂಟೆಗೆ ಸರಕಾರಿ ಆಸ್ಪತೆಯಿಂದ ಎಂ.ಎಲ್.ಸಿ.ಇದೆ ಅಂತ ಮಾಹಿತಿ ಬಂದಮೇರೆಗೆ ಆಸ್ಪತ್ರೆಗೆ 8-20 ಎ.ಎಂ.ಕ್ಕೆ ಹೋಗಿ ಉಪಚಾರ ಪಡೆಯುತ್ತಿದ್ದ ಗಾಯಾಳು ಭೀಮಣ್ಣ ತಂದೆ ಹೋನ್ನಪ್ಪ ಕಾಕನರ ವ|| 25 ಜಾ|| ಯಾದವ ಉ|| ಒಕ್ಕಲುತನ ಸಾ|| ಗೋಲಗೆರಿ ದೊಡ್ಡಿ ರಸ್ತಾಪೂರ ಇವರ ಹೇಳಿಕೆಯನ್ನು 10-00 ಎ.ಎಂ ವರೆಗೆ ಪಡೆದುಕೊಂಡು ಮರಳಿ ಠಾಣೆಯಗೆ 10-30 ಎ.ಎಂ. ಕ್ಕೆ ಬಂದು ಸದರಿ ಹೇಳಿಕೆಯ ಸಾರಾಂಶವೆನೆಂದರೆ. ಹೀಗಿದ್ದು ದಿನಾಂಕ 05/05/2020 ರಂದು ರಾತ್ರಿ 10-00 ಗಂಟೆಗೆ ನಮ್ಮೂರ ಹನುಮಾನ ದೇವರ ಗುಡಿಯ ಮುಂದೆ ನಾನು ಮತ್ತು ನಮ್ಮ ಚಿಕ್ಕಪ್ಪನಾದ ತಿಮ್ಮಯ್ಯ ತಂದೆ ಯಲ್ಲಪ್ಪ ಕಾಕನರ. ಮತ್ತು ಶರಬಣ್ಣ ತಂದೆ ಸಾಯಬಣ್ಣ ಜಾಣಕರ, ಮೂರು ಜನರು ಮಾತನಾಡುತ್ತ ನಿಂತಾಗ ನಮ್ಮ ಅಣ್ಣತಮ್ಮಕಿಯ 1] ಶೇಖಪ್ಪ ತಂದೆ ಯಮನಪ್ಪ ಕಾಕನರ. 2] ಸೋಮಯ್ಯ ತಂದೆ ಚಲಮಣ್ಣ ಕಾಕನರ. 3] ಯಮನಪ್ಪ ತಂದೆ ಮೈಲಾರೆಪ್ಪ ಕಾಕನರ. 4] ಭೀಮರಾಯ ತಂದೆ ಆಶಪ್ಪ ಕಾಕನರ 5] ತಿಮ್ಮಯ್ಯ ತಂದೆ ಯಮನಪ್ಪ ಕಾಕನರ. 6] ಶಿವಪ್ಪ ತಂದೆ ಯಂಕಪ್ಪ ಕಾಕನರ 7] ಯಂಕಪ್ಪ ತಂದೆ ತಿಮ್ಮಯ್ಯ ಕಾಕನರ. 8] ಯಲ್ಲಪ್ಪ ತಂದೆ ಪವಾಡೆಪ್ಪ ಕಾಕನರ. 9] ಸುಬಾಷ ತಂದೆ ಯಲ್ಲಪ್ಪ ಕಾಕನರ ಇವರೆಲ್ಲರು ಕೂಡಿಕೊಂಡು ಎಕೊದ್ದೇಶದಿಂದ ಅವಾಶ್ಚ ಶಬ್ದಗಳಿಂದ ಬೈಯುತ್ತ ಅವರಲ್ಲಿ ಕೆಲವರು ತಮ್ಮ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಬಂದವರೆ. ಶೇಖಪ್ಪನು ಲೇ ಭೀಮ್ಯಾ. ಶರಬ್ಯಾ ಸೂಳಿ ಮಕ್ಕಳೆ ನಾವು ಹೋಡೆಯುವ ಮರಮ ನಿವು ಹೋಡೆದು ನಮ್ಮೊಂದಿಗೆ ತಕರಾರು ಮಾಡಿತ್ತಿರೆನೆಲೆ ಸೂಳಿ ಮಕ್ಕಳೇ ಅಂತ ಬೈದನು. ಆಗ ನಾನು ಮತ್ತು ಶರಬಣ್ಣ ಇಬ್ಬರು ನಮಗೆ ಯಾಕ ಬೈಯುತ್ತಿರಿ ಅಂತ ಅಂದಾಗ ಎದರು ಮಾಡನಾಡುತ್ತಿರೆನೆಲ್ಲೇ ಅಂತ ಅಂದವರೆ, ಅವರಲ್ಲಿ ಶೇಖಪ್ಪನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಎಡಗೈ ಹಸ್ತದ ಕಿಲಿನ ಹತ್ತಿರ. ಮೋಳಕೈಗೆ, ತೋಳಿಗೆ ಹೋಡೆದು ರಕ್ತಗಾಯ ಮತ್ತು ಗುಪ್ತಗಾಯ ಮಾಡಿದನು. ಸೋಮರಾಯ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಶರಬಣ್ಣನ ಎಡಗೈ ಕಿಲಿನ ಹತ್ತಿರ. ಎಡಗೈ ಮೋಳಕೈಗೆ ಎಡಗಡೆ ಸೊಂಟಕ್ಕೆ ಹೋಡೆದು ಗುಪ್ತಗಾಯ ಮಾಡಿದನು. ಯಮನಪ್ಪ, ತಿಮ್ಮಯ್ಯ. ಶೀವಪ್ಪ ಈ ಮೂರುಜನರು ಕೂಡಿ ಶರಬಣ್ಣನಿಗೆ ನೆಲಕ್ಕೆ ಹಾಕಿ ಎಳೆದಾಡಿದರು ಆಗ ನಮಗೆ ಹೋಡೆಯುವದನ್ನು ಬಿಡಿಸಿಕೊಳ್ಳಲು ನನ್ನ ಚಿಕ್ಕಪ್ಪ ತಿಮ್ಮಯ್ಯ ಈತನು ಬಂದಾಗ ಭೀಮರಾಯನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ತಿಮ್ಮಯ್ಯನ ಬಲಗಡೆ ತಲೆಗೆ ಹೋಡೆದು ರಕ್ತಗಾಯ ಮಾಡಿದನು, ಬಲಗಡೆ ಜುಬ್ಬಕ್ಕೆ ಹೋಡೆದು ಗುಪ್ತಗಾಯ ಮಾಡಿದನು. ಯಂಕಪ್ಪ. ಯಲ್ಲಪ್ಪ. ಸುಬಾಷ ಮೂವರು ಕೂಡಿ ತಿಮ್ಮಯ್ಯನಿಗೆ ನೆಲಕ್ಕೆ ಹಾಕಿ ಎಳೆದಾಡಿ ಕೈಯಿಂದ ಹೋಡೆದರು ಆಗ ಅಲ್ಲೆ ಹೋರಟಿದ್ದ ನಮ್ಮ ತಂದೆಯಾದ ಹೋನ್ನಪ್ಪ ತಂದೆ ಯಲ್ಲಪ್ಪ ಕಾಕನರ. ದೊಡ್ಡಲಚಮಪ್ಪ ತಂದೆ ಮರೇಪ್ಪ ಜಾಣಕರ. ಬೋಜಪ್ಪ ತಂದೆ ಶರಬಣ್ಣ ಜಾಣಕರ ಇವರು ಸದರಿ ಜಗಳವನ್ನು ನೋಡಿ ಬಂದು ಜಗಳ ಬಿಡಿಸಿಕೊಂಡರು. ಆಗ ಅವರೆಲ್ಲರು ನಮಗೆ ಇವತ್ತು ಉಳಿದುಕೊಂಡಿರಿ ಮಕ್ಕಳೆ ಇನ್ನೊಮ್ಮಿ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಕಲಾಸ ಮಾಡುತ್ತೆವೆ ಅಂತ ಜೀವದ ಭಯ ಹಾಕಿ ಹೋದರು ಸದರಿ ಜಗಳವು ನಮ್ಮೂರ ಹನುಮಾನ ದೇವರ ಗುಡಿಯ ಲೈಟಿನ ಬೆಳಕಿನಲ್ಲಿ ರಾತ್ರಿ 10-00 ಗಂಟೆಯಿಂದ 10-30 ಗಂಟೆಯ ಅವದಿಯಲ್ಲಿ ಜರುಗಿರುತ್ತದೆ. ನಂತರ ನಾವು ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ಅಂತ ಹೇಳಿಕೆಯ ಸಾರಾಂಶದ ಮೆಲಿಂದ ಠಾಣೆಯ ಗುನ್ನೆ ನಂ 144/2020 ಕಲಂ 143,147,148,323,324,504,506,ಸಂ, 149 ಐ,ಪಿ,ಸಿ, ನ್ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಗೆ ಕೈಕೊಂಡೆನು.
ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 57/2020 ಕಲಂ 279 ಐ.ಪಿ.ಸಿ ಸಂ. 188 ಐಎಮ್ವಿ ಯಾಕ್ಟ:- ದಿನಾಂಕ: 06/05/2020 ರಂದು 11 ಎ.ಎಮ್ ಸುಮಾರಿಗೆ ಫಿಯರ್ಾದಿಯು ತನ್ನ ಕಾರ್ ನಂ:ಕೆಎ-33, ಎಮ್-6482 ನೇದ್ದನ್ನು ಚಲಾಯಿಸಿಕೊಂಡು ಭೀ.ಗುಡಿಯ ಜ್ವರ ತಪಾಸಣಾ ಕೇಂದ್ರದ ಕಡೆಗೆ ಭೀ.ಗುಡಿ-ಕಲಬುರಗಿ ಮುಖ್ಯ ರಸ್ತೆಯ ಮೇಲೆ ಹೊರಟಾಗ ಕಾರ್ ಹಿಂದಿನಿಂದ ಆರೋಪಿತನು ತನ್ನ ಮೋಟರ್ ಸೈಕಲ್ ನಂ:ಕೆಎ-33, ಡಬ್ಲು-2272 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಕಾರ್ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಜಖಂ ಗೊಳಿಸಿ ತನ್ನ ಮೋಟರ್ ಸೈಕಲ್ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಮನೆಯಲ್ಲಿ ವಿಚಾರಿಸಿಕೊಂಡು ಇಂದು ತಡವಾಗಿ ಠಾಣೆಗೆ ದೂರು ನೀಡಿದ್ದು ಇರುತ್ತದೆ.
ಶೊರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 128/2020 ಕಲಂ 279 ಐಪಿಸಿ :- ಇಂದು ದಿನಾಂಕ:06/05/2020 ರಂದು 7:30 ಎ.ಎಂ. ಕ್ಕೆ ಶ್ರೀ ಹಣಮಂತ್ರಾಯ ತಂದೆ ಬಸಣ್ಣ ಟಣಕೆದಾರ ವ|| 35 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಚಿಗರಿಹಾಳ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ದೂರು ಅಜರ್ಿಯ ಸಾರಾಂಶವೆನೆಂದರೆ ದಿನಾಂಕ:04/05/2020 ರಂದು ಸಾಯಂಕಾಲ ಸುಮಾರಿಗೆ ಸುರಪುರದಲ್ಲಿ ಕೆಲಸ ಇದ್ದ ಪ್ರಯುಕ್ತ ನಾನು ಮತ್ತು ನಮ್ಮ ಗೆಳೆಯನಾದ ತಿಪ್ಪಣ್ಣ ತಂದೆ ಶಿವಪ್ಪ ಬಡಿಗೇರ ಇಬ್ಬರು ಬಂದು ಕೆಲಸ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಅಂದಾಜು 9:10 ಪಿ.ಎಂ ಸುಮಾರಿಗೆ ಹೊಗುವಾಗ ಸುರಪುರ-ಕೆಂಭಾವಿ ಮುಖ್ಯ ರಸ್ತೆಯ ದೇವರಗೋನಾಲ ದಾಟಿ ಮಾಚಗುಂಡಾಳ ಕ್ರಾಸ ಹತ್ತಿರ ನಮ್ಮ ಮುಂದೆ ಬರುತ್ತಿದ್ದ ರಾತ್ರಿ 9:30 ಪಿಎಂ ಸುಮಾರಿಗೆ ಕೆಂಬಾವಿ ಕಡೆಯಿಂದ ಒಂದು ಕಾರ ಅತಿವೇಗ ಮತ್ತು ಅಲಕ್ಷ ತನದಿಂದ ನಡೆಸಿಕೊಂಡು ಬಂದು ಕವರ್ಿನಲ್ಲಿ ಕಾರ ನಿಯಂತ್ರಣ ತಪ್ಪಿ ರೋಡ ಕೇಳಗೆ ಬಿದ್ದಿದ್ದು ನಾನು ಮತ್ತು ತಿಪ್ಪಣ್ಣ ಇಬ್ಬರು ಹೊಗಿ ನೋಡಲು ನಮ್ಮೂರ ಹಣಮಂತ್ರಾಯ ತಂದೆ ದೇವಿಂದ್ರಪ್ಪ ಬೋಜನವರ ಇತನು ಕಾರಿನಲ್ಲಿದ್ದು ಕಾರಿನಿಂದ ಹೊರಗಡೆ ಕರೆದುಕೊಂದು ಬಂದು ನೊಡಲಾಗಿ ಹಣಮಂತ್ರಾಯನಿಗೆ ಯಾವುದೇ ಗಾಯವಾಗಿರುವದಿಲ್ಲ ಕಾರ ಹಣಮಂತ್ರಾಯನು ನಡೆಸುತ್ತಿದ್ದನು ಕಾರ ನೋಡಲಾಗಿ ಕಾರ ನಂ. ಕೆಎ-33 ಎ-8369 ನೇದ್ದು ಇದ್ದು ಕಾರ ಸಂಪೂರ್ಣ ನುಜ್ಜುಗುಜ್ಜಾಗಿದ್ದು ನಡೆಸಿಕೊಂಡು ಹೊಗುವ ಸ್ಥಿತಿಯಲ್ಲಿ ಇರಲಿಲ್ಲ. ಹಣಮಂತ್ರಯನಿಗೆ ನಮ್ಮ ಮೋಟರ್ ಸೈಕಲ್ನಲ್ಲಿ ಕರೆದುಕೊಂಡು ನಮ್ಮೂಜರಿಗೆ ಹೊಗಿದ್ದು ಹಣಮಂತ್ರಾಯನ ತಂದೆ ದೇವಿಂದ್ರಪ್ಪ ತಂದೆ ಭೀಮರಾಯ ಬೋಜನವರ ಇವರಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಪಿಯರ್ಾದಿ ನಿಡಿದ್ದು ಇರುತ್ತದೆ. ಸದರಿ ಅಪಘಾತವು ನಮ್ಮೂರ ಹಣಮಂತ್ರಾಯ ಬೋಜನವರ ಈತನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಾ ಕರವಿಂಗದಲ್ಲಿ ಆಯಾ ತಪ್ಪಿ ಕಾರ ಪಲ್ಟಿ ಮಾಡಿದ್ದು ಇರುತ್ತದೆ ಅಂತಾ ಮುಂದಿನ ಕ್ರಮಕ್ಕಾಗಿ ವಿನಂತಿ ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 129/2020 ಕಲಂ 379 ಐ.ಪಿ.ಸಿ. ಮತ್ತು ಕಲಂ. 44(1) ಕೆ.ಎಮ್.ಎಮ್.ಸಿ.ಆರ್.ಆಕ್ಟ 1994:- ಇಂದು ದಿನಾಂಕ:06-05-2020 ರಂದು 08:45 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಸಾಹೇಬಗೌಡ ಎಂ ಪಾಟೀಲ್ ಪಿಐ ಸುರಪೂರ ಪೊಲೀಸ್ ಠಾಣೆ ಸಾಹೇಬರು ಮೂರು ಮರಳು ತುಂಬಿದ ಟ್ಯಾಕ್ಟರಗಳೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ ಸಾರಾಂಶವೆನೆಂದರೆ, ಇಂದು ದಿನಾಂಕ:06-05-2020 ರಂದು 5-30 ಎ.ಎಮ್ ಸುಮಾರಿಗೆ ನಾನು ಸಂಗಡ ಶ್ರೀ ಮಂಜುನಾಥ ಹೆಚ್ಸಿ-176, ಶ್ರೀ ಮಂಜುನಾಥ ಸಿಪಿಸಿ-271, ಶ್ರೀ ರವಿಕುಮಾರ ಸಿಪಿಸಿ-376 ರವರೊಂದಿಗೆ ಗಾಂದಿ ಚೌಕದಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಯಾರೋ ಮೂವರು ವ್ಯಕ್ತಿಗಳು ತಮ್ಮ ಟ್ರ್ಯಾಕ್ಟರದಲ್ಲಿ ಕನರ್ಾಳ ಸೀಮಾಂತರದ ಕೃಷ್ಣಾ ನದಿ ಪಾತ್ರದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ಲಕ್ಷ್ಮೀಪೂರ ಕ್ರಾಸ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ಸಂಗಡ ಇದ್ದ ಶ್ರೀ ಮಂಜುನಾಥ ಹೆಚ್ಸಿ-176, ಶ್ರೀ ಮಂಜುನಾಥ ಸಿಪಿಸಿ-271, ಶ್ರೀ ರವಿಕುಮಾರ ಸಿಪಿಸಿ-376 ಹಾಗೂ ಜೀಪ ಚಾಲಕನಾದ ಶ್ರೀ ಮಾಹಾಂತೇಶ ಎಪಿಸಿ-48 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ ರವರಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಬರಲು ಸೂಚಿಸಿದ ಮೇರೆಗೆ ಮಂಜುನಾಥ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದ್ರಿ ವ|| 50 ವರ್ಷ ಜಾ|| ಮುಸ್ಲಿಂ ಉ|| ಡ್ರೈವರ ಸಾ|| ದೇವಾಪೂರ 2) ಕೃಷ್ಣಪ್ಪ ತಂದೆ ಅಯ್ಯಪ್ಪ ಡೊಳ್ಳ ವ|| 52 ವರ್ಷ ಜಾ|| ಕುರಬರ ಉ|| ಕೂಲಿಕೆಲಸ ಸಾ|| ವೆಂಕಟಾಪೂರ ಇವರನ್ನು ಬೆಳಿಗ್ಗೆ 06:00 ಗಂಟೆಗೆ ಗಾಂದಿ ಚೌಕ ಹತ್ತಿರ ಕರೆದುಕೊಂಡು ಬಂದಿದ್ದು, ಸದರಿ ಪಂಚರಿಗೆ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಪಂಚರು ಮತ್ತು ಸಿಬ್ಬಂಧಿಯೊಂದಿಗೆ ನಮ್ಮ ಠಾಣೆಯ ಸಕರ್ಾರಿ ಜೀಪ ನಂಬರ ಕೆಎ-33 ಜಿ-0238 ನೇದ್ದರಲ್ಲಿ ಕುಳಿತುಕೊಂಡು ಬೆಳಿಗ್ಗೆ 06:15 ಕ್ಕೆ ಗಾಂದಿಚೌಕದಿಂದ ಹೊರಟು ಬೆಳಿಗ್ಗೆ 06:40 ಗಂಟೆಗೆ ಲಕ್ಷ್ಮೀಪೂರ ಕ್ರಾಸ ಹತ್ತಿರ ಹೋಗಿ ನಮ್ಮ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ನಿಂತುಕೊಂಡೆವು. ಅಂದಾಜ ಬೆಳಿಗ್ಗೆ 07:00 ಗಂಟೆಗೆ ಲಕ್ಷ್ಮೀಪೂರ ಕಡೆಯಿಂದ ಮೂರು ಟ್ಯಾಕ್ಟರಗಳ ಚಾಲಕರು ತಮ್ಮ ಟ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ಸಿಬ್ಬಂಧಿಯವರ ಸಹಾಯದಿಂದ ಸದರಿ ಟ್ಯಾಕ್ಟರಗಳ ಚಾಲಕರಿಗೆ ಕೈ ಮಾಡಿ ನಿಲ್ಲಿಸಲು ಸೂಚಿಸಿದಾಗ ಮೂರು ಟ್ಯಾಕ್ಟರ ಚಾಲಕರು ನಮ್ಮ ಪೊಲೀಸ್ ಜೀಪನ್ನು ನೋಡಿ ತಮ್ಮ ಮೂರು ಟ್ಯಾಕ್ಟರಗಳನ್ನು ನಮ್ಮಿಂದ ಸ್ವಲ್ಪ ಅಂತರದ ರೋಡಿನ ಸೈಡಿನಲ್ಲಿ ನಿಲ್ಲಿಸಿ ಕೆಳಗೆ ಇಳಿದು ರಸ್ತೆಯ ಪಕ್ಕದಲ್ಲಿ ಓಡಿ ಹೋದರು. ನಂತರ ನಾನು ಪಂಚರ ಸಮಕ್ಷಮ ಸದರಿ ಟ್ಯಾಕ್ಟರಗಳ ಹತ್ತಿರ ಹೋಗಿ ಪರೀಶಿಲಿಸಿ ನೋಡಲು. 1) ಒಂದು ಮಹೇಂದ್ರ 475 ಆ ಕಂಪನಿ ಟ್ಯಾಕ್ಟರ ಇದ್ದು ಅದರ ಇಂಜಿನ್ ನಂ. ಚಎಎಖ00426 ಚೆಸ್ಸಿ ಹತ್ತಿರ ಕಿಖಿಅ02ಎ1 ಅಂತಾ ಬರೆದಿದ್ದು ಟ್ರಾಲಿಗೆ ನಂಬರ ಇರುವುದಿಲ್ಲ. ಅದರಲ್ಲಿ 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆ. 2) ಒಂದು ಸ್ವರಾಜ್ಯ 735 ಘಿಖಿ ಕಂಪನಿಯ ಟ್ಯಾಕ್ಟರ ಇದ್ದು ಅದರ ಇಂಜಿನ್ ನಂಬರ 39.1357/ಖಙಕ16911 ಚೆಸ್ಸಿ ನಂ. ಘಚಖಿಂ28432119324 ಇದ್ದು ಟ್ರಾಲಿಗೆ ನಂಬರ ಇರುವುದಿಲ್ಲ. ಟ್ರಾಲಿಯಲ್ಲಿ 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆೆ. 3) ಒಂದು ಸ್ವರಾಜ್ಯ 735 ಈಇ ಕಂಪನಿಯ ಟ್ಯಾಕ್ಟರ ಇದ್ದು ಅದರ ಇಂಜಿನ್ ನಂಬರ 39.1354/ಖಚಂ00547 ಚೆಸ್ಸಿ ನಂ. ಘಚಖಿಂ31419120760 ಇದ್ದು ಟ್ರಾಲಿಗೆ ನಂಬರ ಇರುವುದಿಲ್ಲ. ಟ್ರಾಲಿಯಲ್ಲಿ 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆೆ. ಹೀಗೆ ಒಟ್ಟು ಮೂರು ಟ್ಯಾಕ್ಟರದಲ್ಲಿಯ ಒಟ್ಟು 06 ಘನ ಮೀಟರ ಮರಳು ಇದ್ದು ಅದರ ಅ.ಕಿ 4800/- ರೂಗಳು ಆಗುತ್ತದೆ. ಮರಳು ತುಂಬಿದ ಮೂರು ಟ್ಯಾಕ್ಟರಗಳನ್ನು ಪಂಚರ ಸಮಕ್ಷಮ 07:00 ಎ.ಎಮ್ ದಿಂದ 08:00 ಎ.ಎಮ್.ದವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡು ಟ್ಯಾಕ್ಟರಗಳನ್ನು ಜಪ್ತಿ ಪಡಿಸಿಕೊಂಡು ತಾಬಾಕ್ಕೆ ತಗೆದುಕೊಂಡಿದ್ದು ಇರುತ್ತದೆ. ಕಾರಣ ಸದರಿ ಮೂರು ಟ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಂದಾಜು 4800/- ರೂ.ಗಳ ಕಿಮ್ಮತ್ತಿನ ಅಂದಾಜು 06 ಘನ ಮೀಟರ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಮೂರು ಮರಳು ತುಂಬಿದ ಟ್ಯಾಕ್ಟರಗಳನ್ನು ಖಾಸಗಿ ಚಾಲಕರ ಸಹಾಯದಿಂದ ಠಾಣೆಗೆ ಬೆಳಿಗ್ಗೆ 08:45 ಎ.ಎಂ.ಕ್ಕೆ ತಂದು ಒಪ್ಪಿಸಿ ವರದಿಯೊಂದಿಗೆ ಜಪ್ತಿ ಪಂಚನಾಮೆಯನ್ನು ನೀಡಿದ್ದು, ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 129/2020 ಕಲಂ: 379 ಐಪಿಸಿ ಮತ್ತು 44(1) ಕೆ.ಎಂ.ಎಂ.ಸಿ.ಆರ್ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 09/2020 ಕಲಂ. 174 ಸಿಆರ್ಪಿಸಿ:- ಇಂದು ದಿನಾಂಕ:06/05/2020 ರಂದು 10 ಎ.ಎಮ್ ಕ್ಕೆ ಪಿಯರ್ಾಧಿದಾರರಾದ ಶ್ರೀ ದೇವರಾಜ ತಂದೆ ಖಂಡಪ್ಪ ಗೊರವರ ಸಾ:ಹೇಮನೂರ ಹೇಳಿಕೆಯ ಸಾರಾಂಶವೆನೆಂದರೆ ನಮ್ಮ ತಂದೆ-ತಾಯಿಗೆ ನಾವು 6 ಜನ ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಕ್ಕಳಿದ್ದು. ಅವಳಿಗೆ ಮೈಲಾಪೂರದ ಶರಣಪ್ಪ ಗುಡ್ಡೇರ ಎಂಬುವರಿಗೆ ಕೊಟ್ಟು ಮದುವೆ ಮಾಡಿರುತ್ತೆವೆ. ನಮ್ಮ ಹಿರಿಯ ಅಣ್ಣ ಮಲ್ಲಿನಾಥ ಈತನಿಗೆ ನಮ್ಮ ಅತ್ತೆಯ ಮಗಳೊಂದಿಗೆ ಮದುವೆ ಮಾಡಿರುತ್ತಾರೆ. ಅವರು 3-4 ವರ್ಷಗಳು ನಮ್ಮ ಗ್ರಾಮದಲ್ಲಿ ಇದ್ದು ನಂತರ ಅವರು ಮೈಸೂರದಲ್ಲಿ ಅಣ್ಣ ಮತ್ತು ಅತ್ತಿಗೆ ಎಲ್ಲರೂ ಕೂಡಿ ಸಂಸಾರ ಮಾಡಿಕೊಂಡು ಇರುತ್ತಿದ್ದರು. ಹೀಗೆ ಕಳೆದ 7 ವರ್ಷಗಳ ಹಿಂದೆ ನಮ್ಮ ಅಣ್ಣ ಮಲ್ಲಿನಾಥ ಹಾಗೂ ಅತ್ತಿಗೆ ಸೀತಮ್ಮ ಇಬ್ಬರಿಗೂ ಸಂಸಾರಿಕ ವಿಷಯದಲ್ಲಿ ತಕರಾರು ಆಗಿ ಅಲ್ಲಿಂದ ನನ್ನ ಅಣ್ಣನು ಅತ್ತಿಗೆಯೊಂದಿಗೆ ಜಗಳಮಾಡಿಕೊಂಡು ಹೇಮನೂರ ಗ್ರಾಮಕ್ಕೆ ಬಂದು ವಾಸಮಾಡುತ್ತಿದ್ದನು. ನನ್ನ ಅತ್ತಿಗೆ ತನ್ನ ಮುರು ಜನ ಮಕ್ಕಳೊಂದಿಗೆ ಹೊಟೆಲದಲ್ಲಿ ಕೆಲಸ ಮಾಡಿಕೊಂಡು ಮೈಸೂರಿನಲ್ಲಿ ವಾಸವಾಗಿರುತ್ತಾಳೆ. ಅಲ್ಲಿಂದ ನನ್ನ ಅಣ್ಣನು ಆಗಾಗ ಮಕ್ಕಳ ಬಗ್ಗೆ ಚಿಂತೆ ಮಾಡುತ್ತ ಇರುತ್ತಿದ್ದನು. ನಾವು ಅವನಿಗೆ ಮಕ್ಕಳಿಗೆ ಕರೆದರಾಯಿತು ಅಂತ ಬುದ್ದಿ ಮಾತು ಹೇಳುತ್ತಿದ್ದವು. ಆದರೆ ಇತ್ತಿಚಿನ ದಿನಗಳಲ್ಲಿ ದಿನಾಲು ಹೆಂಡತಿ ಮಕ್ಕಳ ಬಗ್ಗೆ ಮನಸ್ಸಿಗೆ ಹಚ್ಚಿಕೊಂಡು ಬಹಳ ಚಿಂತೆ ಮಾಡುತ್ತಾ ಇರುತ್ತಿದ್ದನು. ಅದೇ ಚಿಂತೆಯಲ್ಲಿ ಮಾನಸಿಕವಾಗಿ ನೊಂದಿದ್ದನು. ದಿನಾಂಕ: 02/05/2020 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ನನ್ನ ಅಣ್ಣ ಮಲ್ಲಿನಾಥನು ಸಂಡಾಸಕ್ಕೆ ಹೋಗಿ ಬಂದು ಮನೆ ಮುಂದೆ ವಾಂತಿ ಮಾಡುತ್ತಿದ್ದನು ಯಾಕೆ ಏನಾಗಿದೆ ಎಂದು ವಿಚಾರಿಸಿದಾಗ ನಾನು ಹೆಂಡತಿ ಮಕ್ಕಳ ನೆನಪಿನಲ್ಲಿ ಚಿಂತೆಯಲ್ಲಿ ಮಾನಸಿಕವಾಗಿ ನೊಂದು ಕ್ರೀಮಿನಾಷಕ ಸೇವಿಸಿರುತ್ತೆನೆ ಅಂತ ಹೇಳಿರುತ್ತಾನೆ. ಆಗ ನಾನು ಮತ್ತು ನನ್ನ ತಮ್ಮ ಚಂದ್ರಶೇಖರ ಇಬ್ಬರು ಒಂದು ಮೋಟಾರ ಸೈಕಲ್ನಲ್ಲಿ ಕೂಡಿಸಿಕೊಂಡು ಸಕರ್ಾರಿ ಆಸ್ಪತ್ರೆ ಸುರಪೂರಕ್ಕೆ ಸೇರಿಕೆ ಮಾಡಿದ್ದು. ಅಲ್ಲಿ ವೈದ್ಯರು ಪ್ರಥಮ ಉಪಚಾರ ಮಾಡಿ ಬಳಿಕ ಹೆಚ್ಚಿನ ಉಪಚಾರಕ್ಕಾಗಿ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರಿಂದ ಅಲ್ಲಿಂದ ಜಿಲ್ಲಾ ಆಸ್ಪತ್ರೆ ಯಾದಗಿರಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ. ಅದೆ ದಿನ ಪುನ: ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ರೀಮ್ಸ್ ಆಸ್ಪತ್ರೆ ರಾಯಚೂರಗೆ ಮದ್ಯಾಹ್ನ 1 ಗಂಟೆ ಸುಮಾರಿಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತೆವೆ. ನಂತರ ಅತ್ತಿಗೆ ಸೀತಮ್ಮ ಇವರಿಗೆ ಅಣ್ಣ ಮಲ್ಲಿನಾಥ ವಿಷ ಸೇವನೆ ಮಾಡಿದ ವಿಷಯ ತಿಳಿಸಿರುತ್ತೆವೆ. ಕೋರೋನಾ ವೈರಸ್ದ ಪರಿಣಾಮದಿಂದ ಲಾಕ್ ಡೌನ ಇದ್ದುದ್ದರಿಂದ ಅವರು ಬಂದಿರುವದಿಲ್ಲ. ನನ್ನ ಅಣ್ಣ ಮಲ್ಲಿನಾಥನು ರೀಮ್ಸ್ ಆಸ್ಪತ್ರೆ ರಾಯಚೂರಿನಲ್ಲಿ ಉಪಚಾರ ಪಡೆಯುತ್ತಾ ಚಿಕಿತ್ಸೆ ಫಲಕಾರಿಯಾಗದೇ ಇಂದು ದಿನಾಂಕ:06/05/2020 ರಮದು 7:54 ಎ.ಎಮ್ ಸುಮಾರಿಗೆ ಮೃತಪಟ್ಟಿರುವ ವಿಷಯ ಅಲ್ಲದ್ದ ನನ್ನ ತಮ್ಮನಾದ ಚಂದ್ರಶೇಖರ ಈತನು ತಿಳಿಸಿರುತ್ತಾನೆ. ನನ್ನ ಅಣ್ಣನು ತನ್ನ ಸಂಸಾರದ ಬಗ್ಗೆ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಅದೇ ಚಿಂತೆಯಲ್ಲಿ ಕೊರಗುತ್ತಾ ಕ್ರೀಮಿನಾಶಕ ಔಷದ ಸೇವನೆ ಮಾಡಿ ಮೃತಪಟ್ಟಿದ್ದು. ಈ ಬಗ್ಗೆ ನಮ್ಮದು ಯಾರ ಮೇಲೆ ಯಾವುದೇ ರೀತಿಯ ಸಂಶಯ, ದೂರು ಇರುವದಿಲ್ಲ. ಕಾರಣ ಮಾನ್ಯರವರು ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತ ಹೇಳಿಕೆ ನೀಡಿದ್ದು ನಿಜ ಇದೆ.
ಅಂತ ಹೇಳಿಕೆ ನೀಡಿದ್ದ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ.09/2020 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂ 71/2020, ಕಲಂ, 143,147,148, 323. 324, 354.504.506. ಸಂಗಡ 149 ಐ ಪಿ ಸಿ :- ಇಂದು ದಿನಾಂಕ: 06-05-2020 ರಂದು ರಾತ್ರಿ 08-40 ಗಂಟೆಗೆ ಪಿಯರ್ಾಧಿದಾರನಾದ ಶಂಕ್ರಪ್ಪ ತಂದೆ ಸಾಂಬಶಿವ ಸಂಬ್ರ ವ|| 24 ವರ್ಷ ಜಾ|| ಕುರಬರ ಉ|| ಒಕ್ಕಲುತನ ಸಾ|| ಈಡ್ಲೂರ ತಾ|| ಗುರಮಿಠಕಲ್ ಜಿ|| ಯಾದಗಿರಿ ಈತನು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ ಪಿಯರ್ಾಧಿ ಸಾರಂಶವೆನೆಂದರೆ ದಿನಾಂಕ: 06-05-2020 ರಂದು ರಾತ್ರಿ 06-40 ಗಂಟೆಗೆ ಈಡ್ಲೂರ ಗ್ರಾಮದ ಮಲ್ಲಯ್ಯ ಗುಡಿಯ ಹತ್ತಿರ ಪಿಯರ್ಾಧಿದಾರನು ಕುಳಿತುಕೊಂಡಿರುವಾಗ ಆರೋಪಿತರು ಹಳೆ ವೈಷ್ಯಮ್ಯ ಇಟ್ಟುಕೊಂಡು ಬಂದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಮಾಡಿದ್ದು ಪಿಯರ್ಾಧಿದಾರನ ತಾಯಿಗೆ ಸಿರೆ ಸೇರಗು ಹಿಡಿದು ಎಳದಾಡಿ ಅವಮಾನ ಮಾಡಿದ್ದು ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿ ಜೀವ ಖಲಾಸ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂ 72/2020, ಕಲಂ, 143,147,148, 323. 324, 504.506. ಸಂಗಡ 149 ಐ ಪಿ ಸಿ :- ಇಂದು ದಿನಾಂಕ: 06-05-2020 ರಂದು ರಾತ್ರಿ 09-00 ಗಂಟೆಗೆ ಪಿಯರ್ಾಧಿದಾರನಾದ ಮಲ್ಲಪ್ಪ ತಂದೆ ಕೀಷ್ಠಪ್ಪ ಗುರಮಿಠಕಲ್ ವ|| 45 ವರ್ಷ ಜಾ|| ಕುರಬರ ಉ|| ಒಕ್ಕಲುತನ ಸಾ|| ಈಡ್ಲೂರ ತಾ|| ಗುರಮಿಠಕಲ್ ಜಿ|| ಯಾದಗಿರಿ ಈತನು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ ಪಿಯರ್ಾಧಿ ಸಾರಂಶವೆನೆಂದರೆ ದಿನಾಂಕ: 06-05-2020 ರಂದು ರಾತ್ರಿ 06-40 ಗಂಟೆಗೆ ಈಡ್ಲೂರ ಗ್ರಾಮದ ಮಲ್ಲಯ್ಯ ಗುಡಿಯ ಹತ್ತಿರ ಪಿಯರ್ಾಧಿದಾರನು ಕುಳಿತುಕೊಂಡಿರುವಾಗ ಆರೋಪಿತರು ಹಳೆ ವೈಷ್ಯಮ್ಯ ಇಟ್ಟುಕೊಂಡು ಬಂದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಮಾಡಿದ್ದು ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿ ಜೀವ ಖಲಾಸ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.
Hello There!If you like this article Share with your friend using