ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/05/2020

By blogger on ಮಂಗಳವಾರ, ಮೇ 5, 2020







                            ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/05/2020 
                                                                                                               
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 56/2020 ಕಲಂ 279, 338 ಐಪಿಸಿ ಸಂ 187 ಐ.ಎಂ.ವಿ. ಕಾಯ್ದೆ:- ದಿನಾಂಕ 05/05/2020 ರಂದು ಮಧ್ಯಾಹ್ನ 12-15 ಗಂಟೆಗೆ ಫಿರ್ಯಾದಿ ಅಣ್ಣನು ತನ್ನ ಅಪಾಚಿ ಮೋಟಾರ ಸೈಕಲ್ ನಂ ಟಿ.ಎಸ್.-06-ಇ.ಯು-5763 ನೆದ್ದರ ಮೇಲೆ ಕುಳಿತುಕೊಂಡು ನಾರಾಯಣ ಪೇಠದಿಂದ ಯಾದಗಿರಿಗೆ ಬರುವಾಗ ಮಾರ್ಗಮಧ್ಯ ರಾಮಸಮುದ್ರ-ಮುಂಡರಗಿ ರೋಡಿನ ಮೇಲೆ ಎದುರುಗಡೆ ಯಾದಗಿರಿ ಕಡೆಯಿಂದ ಒಂದು ಮೋಟಾರ ಸೈಕಲ್ ನಂ ಕೆ.ಎ-32-ಇ.ಎಸ್-5852 ನೆದ್ದರ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಓಡಿಸಿಕೊಂಡು ಬಂದು ಫಿರ್ಯಾದಿಯ ಅಣ್ಣನ ಬಲಗಾಲಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಫಿರ್ಯಾಧಿ ಬಲಗಾಲಿಗೆ ಭಾರಿ ರಕ್ತಗಾಯ ಮತ್ತು ಭಾರಿ ಗುಪ್ತಗಾಯ ಆಗಿ ಕಾಲು ಮುರಿದಿರುತ್ತದೆ, ಅಪಘಾತ ಮಾಡಿ ಆರೋಪಿತನು ತನ್ನ ಮೋಟಾರ ಸೈಕಲ್ ನಿಲ್ಲಿಸದೇ ಹಾಗೇ ಓಡಿಸಿಕೊಂಡು ಹೋದ ಬಗ್ಗೆ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.



ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 76/2020 ಕಲಂ 306, 34 ಐಪಿಸಿ:-               ಸುಮಾರು ಎರಡು ವರ್ಷಗಳ ಹಿಂದೆ ಪಿರ್ಯಾದಿಯ ತಂದೆ ಶರಣಪ್ಪ ಮತ್ತು ಆರೋಪಿತರ ಮಧ್ಯೆ ಜಮೀನು ಸವರ್ೆ ನಂ. 108, 109 ನೇದ್ದರ ಜಾಗದ ಸಲುವಾಗಿ ತಂಟೆ ತಕಾರಾರು ಇದ್ದು, ಇದೇ ಕಾರಣಕ್ಕೆ ದಿನಾಂಕ 28/04/2020 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ಪಿರ್ಯಾದಿಯ ತಂದೆ ಶರಣಪ್ಪ ನೊಂದಿಗೆ ಜಗಳ ಮಾಡಿ ನಿನ್ನದು ಬಹಳ ಆಗಿದೆ ನೀನು ಎಲ್ಲಿಯಾದರೂ ಹೋಗಿ ಸಾಯಿ ಇಲ್ಲದಿದ್ದರೆ, ನಾಳೆ ಬೆಳಗಾಗುವದರೋಳಗಾಗಿ ನಿನಗೆ ಖಲಾಸ್ ಮಾಡುತ್ತೇವೆ ಅಂತಾ ಸಾಯಲು ಪ್ರಚೋದನೆ ನೀಡಿದ್ದರಿಂದ ಪಿರ್ಯಾದಿಯ ತಂದೆ ಶರಣಪ್ಪ ಪೂಜಾರಿ ಈತನು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನನೊಂದು ದಿನಾಂಕ 28/04/2020 ರಂದು ಸಂಜೆ 05.00 ಗಂಟೆ ಸುಮಾರಿಗೆ  ಸವರ್ೆನಂ 109 ನೇದ್ದರಲ್ಲಿ ಯಾವುದೋ ಕ್ರಿಮಿನಾಶಕ ಔéಷದ ಸೇವನೆ ಮಾಡಿ ದಿನಾಂಕ 29/04/2020 ರಂದು ಉಪಚಾರ ಕುರಿತು ರಾಯಚೂರ್ ರೀಮ್ಸ್ ಆಸ್ಪತ್ರೆಗೆ ಸೇರಿಕೆಯಾಗಿ ಉಪಚಾರ ಪಡೆಯುತ್ತಾ ಚಿಕಿತ್ಸೆ ಫಲಿಸದೇ ನಿನ್ನೆ ದಿನಾಂಕ04.05.2020 ರಂದು ರಾತ್ರಿ 09.45 ಗಂಟೆಗೆ ಮೃತಪಟ್ಟ ಬಗ್ಗೆ ಪಿರ್ಯಾದಿ ಇರುತ್ತದೆ.  



ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 69/2019 ಕಲಂ 379 ಐಪಿಸಿ:- ಇಂದು ದಿನಾಂಕ: 05-05-2020 ರಂದು ಬೆಳಿಗ್ಗೆ 06-35 ಗಂಟೆಗೆ ಶ್ರಿಮತಿ ಸುವರ್ಣ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಅಜಲಾಪೂರದಲ್ಲಿ ಮರಳು ತುಂಬಿದ ಟ್ರ್ಯಾಕ್ಟರ ಜಪ್ತಿ ಮಾಡಿಕೊಂಡು ಜಪ್ತಿಪಂಚನಾಮೆ ಮತ್ತು ಒಂದು ಮರಳು ತುಂಬಿದ ಟ್ರ್ಯಾಕ್ಟರನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ  ಮೇಲಿಂದ ಠಾಣಾ ಗುನ್ನೆ ನಂ.69/2020 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.



ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 78/2020 143 147 148 188 324 269 308 504 506 ಸಂಗಡ 149 ಐಪಿಸಿ.:-ದಿನಾಂಕ:05/05/2020 ರಂದು 16:15 ಗಂಟೆಗೆ ಪಿಯರ್ಾದಿ ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಅಗ್ನಿ ಗ್ರಾಮದ ಅಪ್ಪಾಸಾಹೇಬಗೌಡ ತಂದೆ ಶಿವನಗೌಡ ಪೊಲೀಸ್ ಪಾಟೀಲ ಹಾಗು ಅಗತೀರ್ಥ ಗ್ರಾಮದ ಬಾಬುಗೌಡ ಪಾಟೀಲ ಇವರ ಮಧ್ಯ ಸುಮಾರು ವರ್ಷಗಳಿಂದ ರಾಜಕೀಯವಾಗಿ ವೈಷ್ಯಮ್ಯ ಬೆಳೆದು ಒಬ್ಬರಿಗೊಬ್ಬರು ಹಗೆತನ ಸಾಧಿಸುತ್ತಾ ಬಂದಿದ್ದು, ನಮ್ಮೂರಿನಲ್ಲಿ ನಮ್ಮ ಜನಾಂಗದವರು ಅಗತೀರ್ಥ ಬಾಪುಗೌಡ ಇವರ ಪರವಾಗಿ ಇರುತ್ತೇವೆ ಅಂತಾ ನಮ್ಮ ಜನಾಂಗದವರ ಮೇಲೆ ನಮ್ಮೂರ ಅಪ್ಪಸಾಹೇಬಗೌಡ ತಂದೆ ಶಿವನಗೌಡ ಪೊಲೀಸ್ ಪಾಟೀಲ್ ಹಾಗೂ ರಾಜಶೇಖರಗೌಡ ತಂದೆ ಶಂಕ್ರಗೌಡ ಪೊಲೀಸ್ ಪಾಟೀಲ್ ಈ ಎರಡು ಜನರು ನಮ್ಮ ಮೇಲೆ ಹಗೆತನ ಸಾದಿಸುತ್ತಿದ್ದರು, ನಿನ್ನೆ ದಿನಾಂಕ:04/05/2020 ರಂದು ಸಾಯಾಂಕಾಲ 6 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ಇದ್ದಾಗ ನಮ್ಮೂರ ಅಪ್ಪಾಸಾಹೇಬಗೌಡ ತಂದೆ ಶಿವನಗೌಡ ಇವರು ಬಾಬುಗೌಡ ಅಗತಿರ್ಥ ಇವರ ಬೆಂಬಲಿಗನಾದ ರಾಮಪ್ಪ ಹರಿಜನ ಈತನು ಕುಡಿದು ಒದರಾಡಿದ ವಿಷಯದಲ್ಲಿ ಅಪ್ಪಾಸಾಹೇಬಗೌಡ ತಂದೆ ಶಿವನಗೌಡ ಹಾಗೂ ರಾಜಶೇಖರಗೌಡ ತಂದೆ ಶಂಕ್ರಗೌಡ ಪೊಲೀಸ್ ಪಾಟೀಲ್ ಹಾಗೂ ಇನ್ನೂ ಇತರೆ 10 ರಿಂದ 15 ಜನರು ಸೇರಿ ಗುಂಪುಕಟ್ಟಿಕೊಂಡು ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ಕೇ ಕೇ ಹಾಕುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಒಬ್ಬರಿಗೆ ಖಾಲಾಸ್ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ, ಸದ್ಯೆ ಕರೋನಾ ಕೊವಿಡ್-19 ನಿಮಿತ್ಯವಾಗಿ ಜಾರಿಯಲ್ಲಿದ್ದ ನೀತಿ ಸಂಹಿತೆಯನ್ನು ಉಲ್ಲಂಘನೆಮಾಡಿ ತಮ್ಮ ಮನೆಯ ಮೇಲೆ ನಿಂತು ಕಲ್ಲು ತೂರಾಟ ಮಾಡಿದ್ದು, ಆ ಕಲ್ಲುಗಳು ಮನೆಯ ಮುಂದೆ ಇದ್ದ ನನ್ನ ಮಗಳಾದ ಗಬರ್ಿಣಿ ನಾಗಮ್ಮಾ ಇವಳಿಗೆ ಬಡಿಯುತ್ತವೆ ಅಂತಾ ನಾನು ನಡುವೆ ಹೋಗಿ ನನ್ನ ಮಗಳಿಗೆ ಮನೆಯೊಳಗೆ ಕರೆದುಕೊಂಡು ಬರಲು ಹೋಗುವಾಗ ಕಲ್ಲು ನನ್ನ ಎರಡು ಮೊಳಕಾಲಿಗೆ ಬಡಿದು ರಕ್ತಗಾಯವಾಗಿದ್ದು, ಹಾಗೂ ಇನ್ನೂ ಇತರರಾದ ನಮ್ಮ ಮನೆಯ ಆಜು ಬಾಜು ಜನರಾದ ಅನುಶುಬಾಯಿ ಗಂಡ ಭೀಮನಗೌಡ ಮಾಲಿಪಾಟೀಲ್, ಮಾಹಾದೇವಿ ಗಂಡ ಶ್ರೀಶೈಲ್ ಸಗರ, ನಿಂಗಮ್ಮಾ ಗಂಡ ಸಿದ್ರಾಮಗೌಡ ಮಾಲಿಪಾಟೀಲ್, ರೇಣುಕಾ ಗಂಡ ಬಸವರಾಜ ಬಸರಕೋಡ, ಇವರಿಗೆ ಸಹ ಕಲ್ಲುಗಳು ಬಡಿದು ಒಳಪೇಟ್ಟು, ರಕ್ತಗಾಯಮಾಡಿರುತ್ತಾರೆ. ಅಲ್ಲದೇ ಅವರೆಲ್ಲರೂ ಈಗ ಕರೋನಾ ಮಾಮಾರಿ ರೋಗದ ಸೊಂಕು ಹರಡುವ ಸಂಭವವಿದ್ದಂತಹ ವೇಳೆಯಲ್ಲಿ ಈ  ರೀತಿಯಾದ ಕೃತ್ಯವನ್ನು ವೇಸಗಿರುತ್ತಾರೆ. ಕಾರಣ ಅಪ್ಪಾಸಾಹೇಬಗೌಡ ತಂದೆ ಶಿವನಗೌಡ ಹಾಗೂ ರಾಜಶೇಖರಗೌಡ ತಂದೆ ಶಂಕ್ರಗೌಡ ಪೊಲೀಸ್ ಪಾಟೀಲ್ ಹಾಗೂ ಇತರರು ಕೂಡಿಕೊಂಡು ಮಾನವರ ಮೇಲೆ ಕಲ್ಲು ತೂರಾಟ ಮಾಡಿದರೇ ಮಾನವ ಜೀವಕ್ಕೆ ಹಾನಿ ಆಗುತ್ತದೆ ಅಂತಾ ಗೊತ್ತಿದ್ದರೂ ಕೂಡಾ ನಮ್ಮಗಳ ಮೇಲೆ ಕಲ್ಲು ತೂರಾಟ ಮಾಡಿ ಗುಪ್ತಗಾಯ ಹಾಗೂ ರಕ್ತಗಾಯಪಡಿಸಿದ್ದು ಇರುತ್ತದೆ. ನಮ್ಮ ಅಪಕ್ಕ ಪಕ್ಕದವರಿಗೆ ಸಣ್ಣ ಪುಟ್ಟ ಗಾಯವಾಗಿದ್ದರಿಂದ ಆಸ್ಪತ್ರೆಗೆ ಹೊಗುವದಿಲ್ಲಾ. ನನಗೆ ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಬೇಕು, ಕಾರಣ ಮೇಲೆ ಹೇಳಿದ ಅಪ್ಪಸಾಹೇಬಗೌಡ ತಂದೆ ಶಿವನಗೌಡ ಪೊಲಿಸ್ ಪಾಟೀಲ್ ಹಾಗೂ ರಾಜಶೇಖರಗೌಡ ತಂದೆ ಶಂಕ್ರಗೌಡ ಪೊಲೀಸ್ ಪಾಟೀಲ್ ಹಾಗೂ ಇನ್ನೂ ಇತರರ  ಮೇಲೆ ಕಾನೂನ ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ಸಾರಾಂಶ ಮೇಲಿಂದ ಮೇಲಿನಂತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. 



ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 79/2020 143 147 148 188 324 269 308 504 506 ಸಂಗಡ 149 ಐಪಿಸಿ.:-ದಿನಾಂಕ:05/05/2020 ರಂದು 17:30 ಗಂಟೆಗೆ ಪಿಯರ್ಾದಿ ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ನಮ್ಮೂರಿನ ಅಪ್ಪಾಸಾಹೆಬಗೌಡ ತಂದೆ ಶಿವನಗೌಡ ಪೊಲಿಸ್ ಪಾಟೀಲ್, ಹಾಗೂ ಅಗತಿರ್ಥ ಗ್ರಾಮದ ಬಾಬುಗೌಡ ಪಾಟೀಲ್ ಇವರ ಮದ್ಯೆ ಸುಮಾರು ವರ್ಷಗಳಿಂದ ರಾಜಕೀಯವಾಗಿ ವೈಷಮ್ಯ ಬೆಳೆದು ಒಬ್ಬರಿಗೊಬ್ಬರು ಹಗೆತನ ಸಾದಿಸುತ್ತಾ ಬಂದಿರುತ್ತಾರೆ. ನಮ್ಮೂರಿನಲ್ಲಿ ನಮ್ಮ ಜನಾಂಗದವರು ಅಪ್ಪಾಸಾಹೆಬಗೌಡ ತಂದೆ ಶಿವನಗೌಡ ಪೊಲಿಸ್ ಪಾಟೀಲ್ ಇವರ ಪರವಾಗಿ ಇರುತ್ತೇವೆ ಅಂತಾ ನಮ್ಮ ಜನಾಂಗದವರ ಮೇಲೆ ಅಗತಿರ್ಥ ಗ್ರಾಮದ ಬಾಬುಗೌಡ ಪಾಟೀಲ್ ಇವರು ನಮ್ಮ ಮೇಲೆ ಹಗೆತನ ಸಾದಿಸುತ್ತಿದ್ದರು. 

     ನಿನ್ನೆ ದಿನಾಂಕ:04/05/2020 ರಂದು ಸಾಯಾಂಕಾಲ 6 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ಇದ್ದಾಗ ನಮ್ಮೂರ ಬಾಬುಗೌಡ ಪಾಟೀಲ ಈತನ ಬೆಂಬಲಿಗನಾದ ರಾಮಪ್ಪ ಹರಿಜನ ಈತನು ಕುಡಿದು ಒದರಾಡಿದ ವಿಷಯದಲ್ಲಿ ಗಲಾಟೆಯಾಗಿದ್ದು, ಅದೇ ವಿಷಯವಾಗಿ 1) ಬಾಬುಗೌಡ @ ಸಾಹೇಬಗೌಡ ತಂದೆ ಬಸವಂತ್ರಾಯಗೌಡ ಪಾಟೀಲ ಸಾ: ಅಗತಿರ್ಥ ಹಾಗೂ  ಜಗನ್ನಾಥರಾವ ತಂದೆ ಶಂಕರರಾವ ಕುಲಕಣರ್ಿ ಸಾ:ಅಗ್ನಿಹಾಗೂ ಇನ್ನೂ ಇತರೆ 20 ರಿಂದ 25 ಜನರು ಸೇರಿ ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ಕೇ ಕೇ ಹಾಕುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಒಬ್ಬಬೊಬ್ಬರಿಗೆ ಖಾಲಾಸ್ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕುತ್ತಾ, ಸದ್ಯೆ ಕರೋನಾ ಕೊವಿಡ್-19 ನಿಮಿತ್ಯವಾಗಿ ಜಾರಿಯಲ್ಲಿದ್ದ ನೀತಿ ಸಂಹಿತೆಯನ್ನು ಉಲ್ಲಂಘನೆಮಾಡಿ ಕಲ್ಲು ತೂರಾಟ ಮಾಡಿದ್ದು, ಆ ಕಲ್ಲುಗಳು ಮನೆಯ ಮುಂದೆ ಇದ್ದ ನನಗೆ ಬಡಿದು ಅಲ್ಲಿಲ್ಲಿ ಒಳಪೆಟ್ಟು ಆಗಿದ್ದು ಇರುತ್ತದೆ. ಕಲ್ಲು ತೂರಾಟ ಮಾಡುವದನ್ನು ನಮ್ಮೂರ 1) ಮಲ್ಲಮ್ಮ ಗಂಡ ಬಸಪ್ಪ ಹಟ್ಟಿ, 2) ಆರ್ಯಮ್ಮ ಗಂಡ ಭೀಮಪ್ಪ ಬಡಿಗೇರ, 3) ಜೆಟ್ಟೆಮ್ಮ ಗಂಡ ಶಂಕ್ರಪ್ಪ ಹಟ್ಟಿ 4) ಕಾಂತಮ್ಮ ಗಂಡ ಶಿವಪ್ಪ ಸೂಗುರ ಇವರುಗಳು ನೋಡಿರುತ್ತಾರೆ. ಈಗ ಕರೋನಾ ಮಾಹಾಮಾರಿ ರೋಗದ ಸೊಂಕು ಹರಡುವ ಸಂಭವವಿದ್ದಂತಹ ವೇಳೆಯಲ್ಲಿ ಈ ರೀತಿಯಾದ ಕೃತ್ಯವನ್ನು ಎಸಗಿರುತ್ತಾರೆ.

      ಕಾರಣ ಬಾಬುಗೌಡ @ ಸಾಹೇಬಗೌಡ ತಂದೆ ಬಸವಂತ್ರಾಯಗೌಡ ಪಾಟೀಲ ಸಾ:ಅಗತಿರ್ಥ ಹಾಗೂ  ಜಗನ್ನಾಥರಾವ ತಂದೆ ಶಂಕರರಾವ ಕುಲಕಣರ್ಿ ಸಾ:ಅಗ್ನಿ ಹಾಗೂ ಇತರರು ಕೂಡಿಕೊಂಡು ಮಾನವರ ಮೇಲೆ ಕಲ್ಲು ತೂರಾಟ ಮಾಡಿದರೇ ಮಾನವ ಜೀವಕ್ಕೆ ಹಾನಿ ಆಗುತ್ತದೆ ಅಂತಾ ಗೊತ್ತಿದ್ದರೂ ಕೂಡಾ ನಮ್ಮಗಳ ಮೇಲೆ ಕಲ್ಲು ತೂರಾಟ ಮಾಡಿ ಗುಪ್ತಗಾಯಪಡಿಸಿದ್ದು ಇರುತ್ತದೆ. ನನಗೆ ಸಣ್ಣಪುಟ್ಟ ಒಳಪಪೆಟ್ಟು ಆಗಿದ್ದರಿಂದಾ ಆಸ್ಪತ್ರೆಗೆ ಹೊಗುವದಿಲ್ಲಾ. ಕಾರಣ ಮೇಲೆ ಹೇಳಿದ ಬಾಬುಗೌಡ @ ಸಾಹೇಬಗೌಡ ತಂದೆ ಬಸವಂತ್ರಾಯಗೌಡ ಪಾಟೀಲ ಸಾ:ಅಗತಿರ್ಥ ಹಾಗೂ  ಜಗನ್ನಾಥರಾವ ತಂದೆ ಶಂಕರರಾವ ಕುಲಕಣರ್ಿ ಸಾ:ಅಗ್ನಿ ಹಾಗೂ ಇನ್ನೂ ಇತರರ  ಮೇಲೆ ಕಾನೂನ ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ಸಾರಾಂಶ ಮೇಲಿಂದ ಮೇಲಿನಂತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.



ಕೆಂಭಾವಿ  ಪೊಲೀಸ್ ಠಾಣೆ ಗುನ್ನೆ ನಂ:- 80/2020 ಕಲಂ: 143.147.148.323.324.326,354.504.506 ಸಂಗಡ 149 ಐ.ಪಿ.ಸಿ:- ಇಂದು ದಿನಾಂಕ 05/05/2020 ರಂದು 11.00 ಎ.ಎಮ್ ಕ್ಕೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಪೋನ ಮೂಲಕ ಎಮ್.ಎಲ್.ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ಜಿಲ್ಲಾ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಶ್ರೀಮತಿ ಹಿರಿಬಾಯಿ ಬಸವರಾಜ ಚವ್ಹಾಣ ಜಾತಿ: ಲಂಬಾಣಿ ವಯಾ: 35 ವರ್ಷ ಉ|| ಕೂಲಿಕೆಲಸ ಜಾ|| ಲಂಬಾಣಿ ಸಾ|| ಚಾಮನಾಳ  ತಾಂಡಾ ತಾ: ಶಹಾಪೂರ ರವರು ಲಿಖಿತ ಅಜರ್ಿ ಸಲ್ಲಿಸಿದ  ಸಾರಾಂಶವೆನೆಂದರೆ  ದಂಡ ಸೋಲಾಪೂರ ತಾಂಡಾದ ಪಿರ್ಯಾದಿ ತಮ್ಮನ ಮನೆ ಮುಂದೆ ಬಾಯಿ ಮಾಡುವ ಶಬ್ದ ಕೇಳಿ ಪಿರ್ಯಾದಿ ಮತ್ತು ಪಿರ್ಯಾದಿ ಮಗ ಇಬ್ಬರೂ ಕೂಡಿ ದಂಡಸೋಲಾಪೂರ ತಾಂಡಾದ ಪಿರ್ಯಾದಿ ತಮ್ಮನ ಮನೆಯ ಹತ್ತಿರ ಹೋಗಿ ಆರೋಪಿತರಿಗೆ ಯಾಕೆ ನಮ್ಮ ತಮ್ಮನ ಜೋತೆ ಸುಮ್ಮನೆ ಜಗಳ ಆಡುತ್ತಿರಿ ಅಂತಾ ಅಂದಿದ್ದಕ್ಕೆ ಆರೋಪಿತರೆಲ್ಲರೂ ಗುಂಪು ಕಟ್ಟಿಕೊಂಡು ಬಂದು ಅವರಲ್ಲಿಯ ಗೋಪಾಲ ತಂದೆ ಲೋಕೇಶ ಈತನು ಕೈಯಲ್ಲಿ ತಲವಾರ ಹಿಡಿದುಕೊಂಡು ಬಂದು ತಲವಾರದಿಂದ ಪಿರ್ಯಾದಿ ತಲೆಗೆ ಹೊಡೆದು ಭಾರೀ ರಕ್ತಗಾಯ ಮಾಡಿದಲ್ಲದೇ ಅನಿಲ್ ತಂದೆ ಲೊಕೇಶ ಹಾಗೂ ಮಾನಸಿಂಗ ತಂದೆ ಲೊಕೇಶ ಇವರಿಬ್ಬರು ಬಡಿಗೆಯಿಂದ ಪಿರ್ಯಾದಿ ಮಗನ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು ಮತ್ತು ಪಿರ್ಯಾದಿಗೆ ರವಿ ತಂದೆ ಲೋಕೇಶ ಈತನು ಮಾನಬಂಗ ಮಾಡುವ ಉದ್ದೇಶದಿಂದ ಸೀರೆ ಹಿಡಿದು ಎಳೆದಾಡಿ ಕಪಾಳಕ್ಕೆ ಹೊಡೆದು, ಉಳಿದವರೆಲ್ಲರೂ ಕೂಡಿ ಪಿರ್ಯಾದಿ ಮತ್ತು ಪಿರ್ಯಾದಿ ಮಗನಿಗೆ ಕೈಯಿಂದ ಕಾಲಿನಿಂದ ಹೊಟ್ಟೆಗೆ, ಬೆನ್ನಿಗೆ, ಹೊಡೆದು ರಕ್ತಗಾಯ ಮತ್ತು ಒಳಪೆಟ್ಟು ಮಾಡಿದ್ದು ಇರುತ್ತದೆ. ನಂತರ ಪಿರ್ಯಾದಿ ಮತ್ತು ಪಿರ್ಯಾದಿ ಮಗ ಇಬ್ಬರು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆ ಸೇರಿಕೆಯಾಗಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಆಗಿದ್ದು ಇದೆ ಅಂತಾ ಗಾಯಾಳು ಕೊಟ್ಟ ಅಜರ್ಿ ಪಡೆದುಕೊಂಡು ಠಾಣೆಗೆ ಬಂದು ಗಾಯಾಳು ಲಿಖಿತ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 80/2020 ಕಲಂ 143.147.148.323.324.326.354.504.506 ಸಂಗಡ 149 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.




ಭೀಗುಡಿ  ಪೊಲೀಸ್ ಠಾಣೆ ಗುನ್ನೆ ನಂ:- 56/2020 ಕಲಂ 32, 34 ಕೆ.ಇ ಎಕ್ಟ್:- ಇಂದು ದಿನಾಂಕ: 05/05/2020 ರಂದು 1.45 ಪಿ.ಎಮ್.ಕ್ಕೆ ಆರೋಪಿತರು ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಮದ್ರಕಿ ಸೀಮಾಂತರದಲ್ಲಿನ ಸಿದ್ದಲಿಂಗೇಶ್ವರ ಹಾಳ ಧಾಬಾದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 2 ಪಿಎಮ್ ಕ್ಕೆ ದಾಳಿ ಮಾಡಿ ಆರೋಪಿತರಿಗೆ ಹಿಡಿದು ಅವರಿಂದ 90 ಎಮ್.ಎಲ್ ನ 180 ಓರಿಜಿನಲ್ ಚ್ವೈಸ್ ವಿಸ್ಕಿ ಪೌಚಗಳು, ಅ.ಕಿ. 5657/- ರೂ, ಕಿಮ್ಮತ್ತಿನ ಮದ್ಯವನ್ನು ಜಪ್ತಿಪಡಿಸಿಕೊಂಡು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.  



ಶೊರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 124/2020 ಕಲಂ 379 ಐ.ಪಿ.ಸಿ.  ಮತ್ತು ಕಲಂ. 44(1) ಕೆ.ಎಮ್.ಎಮ್.ಸಿ.ಆರ್.ಆಕ್ಟ 1994:- ಇಂದು ದಿನಾಂಕ:05-05-2020 ರಂದು 9:15 ಎ.ಎಂ ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಎಸ್.ಎಂ ಪಾಟೀಲ್ ಪಿಐ ಸುರಪೂರ ಪೊಲೀಸ್ ಠಾಣೆ ಇವರು ಮರಳು ತುಂಬಿದ ಟ್ಯಾಕ್ಟರನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ ಸಾರಾಂಶವೆನೆಂದರೆ, ಇಂದು ದಿನಾಂಕ:05-05-2020 ರಂದು ಮುಂಜಾನೆ 6 ಗಂಟೆ ಸುಮಾರಿಗೆ ನಾನು ಠಾಣೆಯಲಿದ್ದಾಗ ಮಾಹಿತಿ ತಿಳಿದು ಬಂದ್ದಿದ್ದೆನೆಂದರೆ ಕನರ್ಾಳ ಸೀಮಾಂತರದ ಕೃಷ್ಣಾ ನದಿ ತೀರದಿಂದ ಮರಳನ್ನು ಕಳ್ಳತನದಿಂದ ತಮ್ಮ ಟ್ಯಾಕ್ಟರಗಳಲ್ಲಿ ತುಂಬಿಕೊಂಡು ಯಾರೋ ಸುರಪುರ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂಧಿಯವರಾದ ಶ್ರೀ ಮಂಜುನಾಥ ಸಿಹೆಚ್ಸಿ-176, ಶ್ರೀ ಮಂಜುನಾಥ ಸಿಪಿಸಿ-271 ಹಾಗೂ ಜೀಪ್ ಚಾಲಕ ಶ್ರೀ ಮಹಾಂತೇಶ ಎಪಿಸಿ-48 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಸೂಚಿಸಿದ ಮೇರೆಗೆ ಮಂಜುನಾಥ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದ್ರಿ ವ|| 56 ವರ್ಷ ಜಾ|| ಮುಸ್ಲಿಂ ಉ|| ಡ್ರೈವರ ಸಾ|| ದೇವಾಪೂರ 2) ಕೃಷ್ಣಪ್ಪ ತಂದೆ ಅಯ್ಯಪ್ಪ ಡೊಳ್ಳ ವ|| 55 ವರ್ಷ ಜಾ|| ಕುರಬರ ಉ|| ಕೂಲಿಕೆಲಸ ಸಾ|| ವೆಂಕಟಾಪೂರ ಇವರನ್ನು ಬೆಳಿಗ್ಗೆ 06:15 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿ ಪಂಚರಿಗೆ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಪಂಚರು ಮತ್ತು ಸಿಬ್ಬಂಧಿಯೊಂದಿಗೆ ನಮ್ಮ ಠಾಣೆಯ ಸಕರ್ಾರಿ ಜೀಪ ನಂಬರ ಕೆಎ-33 ಜಿ-0238 ನೇದ್ದರಲ್ಲಿ ಎಲ್ಲರು ಕುಳಿತುಕೊಂಡು ಬೆಳಿಗ್ಗೆ 6:30 ಗಂಟೆಗೆ ಠಾಣೆಯಿಂದ ಹೊರಟು ಬೆಳಿಗ್ಗೆ 07 ಗಂಟೆಗೆ ರುಕ್ಮಾಪುರ ಕ್ರಾಸ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ನಿಂತುಕೊಂಡೆವು. ಅಂದಾಜ ಬೆಳಿಗ್ಗೆ 7:10 ಗಂಟೆಗೆ ರುಕ್ಮಾಪುರ ಕಡೆಯಿಂದ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ಸಿಬ್ಬಂಧಿಯವರ ಸಹಾಯದಿಂದ ಸದರಿ ಟ್ಯಾಕ್ಟರ ಚಾಲಕನಿಗೆ ಕೈ ಮಾಡಿ ನಿಲ್ಲಿಸಲು ಸೂಚಿಸಿದಾಗ ಟ್ಯಾಕ್ಟರ ಚಾಲಕನು ನಮ್ಮನ್ನು ನೋಡಿ ಟ್ಯಾಕ್ಟರನ್ನು ನಮ್ಮಿಂದ ಸ್ವಲ್ಪ ಅಂತರದ ರೋಡಿನ ಸೈಡಿನಲ್ಲಿ ನಿಲ್ಲಿಸಿ ಕೆಳಗೆ ಇಳಿದು ರಸ್ತೆಯ ಪಕ್ಕದಲ್ಲಿ ಓಡಿ ಹೋದನು ನಂತರ ನಾನು ಪಂಚರ ಸಮಕ್ಷಮ ಸದರಿ ಟ್ಯಾಕ್ಟರ ಹತ್ತಿರ ಹೋಗಿ ಪರೀಶಿಲಿಸಿ ನೋಡಲು. ಒಂದು ನೀಲಿ ಬಣ್ಣದ ಸ್ವರಾಜ 735 ಎಫ್ಇ ಕಂಪನಿಯ ಟ್ರ್ಯಾಕ್ಟರ ಇದ್ದು ಅದಕ್ಕೆ ನಂಬರ ಬರೆದಿರುವದಿಲ್ಲ ಅದರ ಇಂಜಿನ ನಂ. 39.1354/ಆಏ008700ಂ ಚೆಸ್ಸಿ ನಂ. ಘಘಿಖಿಐ31419053025  ಇದ್ದು ಟ್ರ್ಯಾಲಿಗೆ ನಂಬರ ಇರುವದಿಲ್ಲ. ಅದರಲ್ಲಿ ಅಂದಾಜು 2 ಘನ ಮೀಟರ ಮರಳು ತುಂಬಿದ್ದು ಅದರ ಅ.ಕಿ 1600/- ರೂಗಳು ಆಗುತ್ತದೆ. ಮರಳು ತುಂಬಿದ ಟ್ಯಾಕ್ಟರನ್ನು ಪಂಚರ ಸಮಕ್ಷಮ ಬೆಳಿಗ್ಗೆ 07:10 ಗಂಟೆಯಿಂದ 08:10 ಗಂಟೆಯ ವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡು ಟ್ಯಾಕ್ಟರನ್ನು ಜಪ್ತಿ ಪಡಿಸಿಕೊಂಡು ತಾಬಾಕ್ಕೆ ತಗೆದುಕೊಂಡಿದ್ದು ಇರುತ್ತದೆ. ಕಾರಣ ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲಿಕ ಇಬ್ಬರು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಮರಳು ತುಂಬಿದ ಟ್ಯಾಕ್ಟರನ್ನು ಖಾಸಗಿ ಚಾಲಕನ ಸಹಾಯದಿಂದ ಬೆಳಿಗ್ಗೆ 8:45 ಗಂಟೆಗೆ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ಸಾರಾಂಶದ ಮೇಲಿಂದ  ಠಾಣೆ ಗುನ್ನೆ  ನಂ. 124/2020 ಕಲಂ: 379 ಐಪಿಸಿ ಮತ್ತು 44(1) ಕೆ.ಎಂ.ಎಂ.ಸಿ.ಆರ್ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ




ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 125/2020 ಕಲಂ: 323, 324, 354, 448, 504, 506 ಸಂ. 34 ಐಪಿಸಿ:- ಇಂದು ದಿನಾಂಕ:05/05/2020 ರಂದು 2:30 ಪಿ.ಎಂ.ಕ್ಕೆ ಠಾಣೆಯ ಎಸ್ ಹೆಚ್ ಡಿ ಕರ್ತವ್ಯದಲ್ಲಿರುವಾಗ ಶ್ರೀಮತಿ  ಮಹಿಬೂಬು ಉನ್ನಿಸಾಬೇಗಂ ಗಂಡ ಮಹ್ಮದ ಫಕರುದ್ದಿನ್ ವಯಾ:85 ವರ್ಷ ಜಾತಿ:ಮುಸ್ಲಿಂ ಉ:ನಿವೃತ್ತ ಶಿಕ್ಷಕಿ ಸಾ|| ಉಪ್ಪಾರ ಮೊಹಲ್ಲಾ ವಾರ್ಡ ನಂ.05 ಸುರಪೂರ ಇವಳು ಠಾಣೆಗೆ ಬಂದು ಒಂದು ಗಣಕೀಕೃತ ಅಜರ್ಿ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ:04-05-2020 ರಂದು ರಾತ್ರಿ 9-30 ಗಂಟೆಗೆ ನಾನು ನನ್ನ ಸೊಸೆಯಾದ ಮಾಲನಬಿ ಇಬ್ಬರು ಮನೆಯಲ್ಲಿ ರಂಜಾನ್ ಹಬ್ಬದ ನಿಮಿತ್ಯ ರೋಜಾ ಬಿಟ್ಟು ನಮಾಜ್ ಮಾಡುವಾಗ ನಮ್ಮ ಕೆಳಗಿನ ಮನೆಯವರಾದ 1) ನವೀದಖಾನ ತಂದೆ ಮಹಿಬೂಬಖಾನ ಹಾಗೂ ಅವರ ತಮ್ಮಂದಿರರಾದ 2) ಸೈಯಿದಖಾನ 3) ಮೋಹೀದ್ಖಾನ  4) ವಾಹಿದ್ ಇವರೆಲ್ಲರೂ ಕೈಯಲ್ಲಿ ಖಾರದ ಪುಡಿ ಹಾಗೂ ಬಡಿಗೆಗಳನ್ನು ಹಿಡಿದುಕೊಂಡು ನಮ್ಮ ಮನೆಯ ಒಳಗಡೆ ಬಂದವರೆ ನಮಗೆ ಅವಾಚ್ಯವಾಗಿ ಬೈಯುತ್ತಾ ನನಗೂ ಮತ್ತು ನನ್ನ ಸೋಸೆ ಮಾಲನ್ ಬಿ ಗಂಡ ಮಹ್ಮದ ಯುಸುಪ್ ಉದ್ದಿನ ಇಬ್ಬರಿಗೂ ಕೈ ಹಿಡಿದು ಎಳೆಯಲು ಪ್ರಾರಂಬಿಸಿದರು. ಆಗ ನಾನು ನನ್ನ ಸೋಸೆ ಮನೆಯಿಂದ ಹೊರಗಡೆ ಅಂಗಳ ಮುಂದೆ ಬಂದಾಗ ಅದೆ ಸಮಯಕ್ಕೆ ಹೊರಗಡೆ ಇಂದ ಬಂದ ನನ್ನ ಮಗ ಮಹ್ಮದ ಯುಸುಪ್ ಉದಿನ್ ಯಾಕೇ ಎಂದು ಕೇಳಿದಾಗ ಅವನಿಗೆ ಅವರೆಲ್ಲರೂ ತಮ್ಮ ಕೈಯಲ್ಲಿ ತಂದಿದ್ದ ಖಾರದ ಪುಡಿಯನ್ನು ಅವನ ಮೈಮೇಲೆ ಎರಚಿ ಎದೆಯ ಮೇಲಿನ ಅಂಗಿ ಹಿಡಿದು ಎಲ್ಲರೂ ಮನ ಬಂದಂತ್ತೆ ಬಡಿಗೆಗಳಿಂದ ಮುಖಕ್ಕೆ ಹೊಡೆದು ರಕ್ತಗಾಯ ಮಾಡಿದವರೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಹಾಗೂ ನಿನ್ನ ಜೀವಂತ ಸಮಾಧಿಯನ್ನು ಮಾಡುತ್ತೇವೆ ಎಂದು ಕುಡಿದು ಬಂದು ನನ್ನ ಮಗನನ್ನು ಕೆಳಗೆ ಬಿಳಿಸಿದಾಗ ನಾನು ನನ್ನ ಸೊಸೆ ನನ್ನ ಮಗನನ್ನು ಬಿಡಿಸಿಕೊಳ್ಳಲು ಹೋದಾಗ ಮೂಗಿನ ತುಂಬ ರಕ್ತ ಹರಿಯುವುದನ್ನು ಗಾಬರಿಗೊಂಡು ನೋಡಿ ನಾವು ಅಳುತ್ತಿರುವಾಗ ಅವರೆಲ್ಲರೂ ಬೋಸಡಿ ನಿನ್ನ ಮಗನು ಊರಲ್ಲಿ ಇರಲಾರದ ಸಮಯವನ್ನು ನೋಡಿ ನಾವು ಮನೆಗೆ ನುಗ್ಗಿ ನಿನ್ನ ಹಾಗೂ ನಿನ್ನ ಮೊಮ್ಮಕ್ಕಳನ್ನು ಜೀವಂತ ಸಮಾಧಿ ಮಾಡುವತನಕ ಸಮಾಧಾನವಿಲ್ಲವೆಂದು ಓಡಿ ಹೊದರು. ಇದಾದ ನಂತರ ನನ್ನ ಮಗನನ್ನು ಕರೆದುಕೊಂಡು ಹತ್ತಿರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈಧ್ಯಾಧಿಕಾರಿಗಳ ಹತ್ತಿರ ಉಪಚಾರ ಮಾಡಿಸಿಕೊಂಡು ಸರಕಾರಿ ಅಂಬುಲೇನ್ಸದಲ್ಲಿ ಮಧ್ಯ ರಾತ್ರಿ 2 ಗಂಟೆಗೆ ಯಾದಿಗಿರಿ ಹೆಚ್ಚಿನ ಚಿಕಿತ್ಸೆಗಾಗಿ ವೈಧ್ಯಾದಿಕಾರಿಗಳ ಅನುಮತಿ ಮೆರೆಗೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ಆಡ್ಮಿಟ್ ಮಾಡಿ ಇಂದು ತಡವಾಗಿ ಠಾಣೆಗೆ ಬಂದಿರುತ್ತೇವೆ. ಕಾರಣ ದಯಾಳುಗಳಾದ ತಾವುಗಳು ಈ ಹಿಂದೆ ಹಲವು ಬಾರಿ ಈ ಕುಡುಕರು ನಮ್ಮ ಮನೆಯಲ್ಲಿ ಬಾಡಿಗೆ ಇರುವ ಬಾಡಿಗೆಗಾರರಿಗೆ ತೊಂದರೆ ಕೊಡುತ್ತಾ ಅಂಜಿಸುವದು ಮಾಡಿ ಗುಂಡಾಗಿರಿ ಮಾಡುತ್ತಾ ತಿರುಗಾಡುತ್ತಿದ್ದಾರೆ ಹಾಗೂ ಈ ಒಂದು ಘಟನೆಗೆ ನಮ್ಮ ಮನೆಯಲ್ಲಿರುವ ಸಿಸಿ ಕ್ಯಾಮರಾದಲ್ಲಿ ದೃಶ್ಯವಳಿಗಳು ಸೇರೆಯಾಗಿರುತ್ತವೆ. ಆದ್ದರಿಂದ ದಯಾಳುಗಳಾದ ತಾವುಗಳು ಸದರಿ ಆರೋಪಿಗಳ ಮೇಲೆ ನಿದ್ರಾಕ್ಷಣ ಕ್ರಮ ತಗೆದುಕೊಂಡು ನನಗೂ ಮತ್ತು ನನ್ನ ಕುಟುಂಬಸ್ಥರಿಗೂ ನನ್ನ ಆಸ್ತಿಗೆ ಯಾವುದೇ ಧಕ್ಕೆ ಬರದಂತೆ ರಕ್ಷಣೆ ನೀಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೆನೆ ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು



ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:-. 126/2020 ಕಲಂ: 323, 324, 504, 506 ಸಂ. 34 ಐಪಿಸಿ:- ಇಂದು ದಿನಾಂಕ:05/05/2020 ರಂದು 4 ಪಿ.ಎಂ.ಕ್ಕೆ ಠಾಣೆಯ ಎಸ್ ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀಮತಿ  ಅಶ್ರಪ್ ಬೇಗಂ ತಂದೆ ದಿ||ಮಹಿಬೂಬಖಾನ ವಯಾ:32 ವರ್ಷ ಉ|| ಮನೆ ಕೆಲಸ ಜಾತಿ||ಮುಸ್ಲಿಂ ಸಾ||ಉಪ್ಪಾರ ಮೊಹಲ್ಲಾ ಸುರಪೂರ ಇವಳು ಠಾಣೆಗೆ ಬಂದು ಒಂದು ಗಣಕೀಕೃತ ಅಜರ್ಿ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ನಿನ್ನೆ ದಿನಾಂಕ:04-05-2020 ರಂದು ರಾತ್ರಿ 08-30 ಗಂಟೆ ಸುಮಾರಿಗೆ ನಾನು ನಮ್ಮ ಅಣ್ಣನಾದ ತೋಹಿದಖಾನ್ ನನ್ನ ತಾಯಿಯಾದ ಮಮತಾಜ ಬೇಗಂ ನನ್ನ ಅಕ್ಕಳಾದ ಅನೀಜ ಬೇಗಂ ಎಲ್ಲರೂ ಮನೆಯಲ್ಲಿರುವಾಗ ನಮ್ಮ ಮೆನಯ ಕೇಳಗಡೆ ಇರುವ 1) ಯುಸುಪ್ ಉದ್ದಿನ ತಂದೆ ಫಕರುದ್ದಿನ 2) ಮಾಲನ್ ಬಿ ಗಂಡ ಯುಸುಪ್ ಉದ್ದಿನ 3) ಮುಂತಾಸೀರ್ ತಂದೆ ಯುಸುಪ್ ಉದ್ದಿನ ಇವರು ನಮ್ಮ ಮನೆಯ ಹತ್ತಿರ ಬಂದವರೆ ಮನೆಯಲ್ಲಿ ಕುಳಿತ ನಮಗೆ ಮನೆಯ ಮುಂದೆ ಯಾಕೇ ತಿರುಗಾಡುತ್ತಿರಿ ಸುಳೆ ಮಕ್ಕಳೆ ಅಂತಾ ಅವಾಚ್ಯವಾಗಿ ಬೈಯುತ್ತಿರುವಾಗ ನಾವು ಹೊರಗಡೆ ಬಂದು ಯಾಕೇ ಬೈಯುತ್ತಿ ಅಂತಾ ಕೇಳಿದಾಗ ಆಗ ಯುಸುಪ್ ಉದ್ದಿನ ಅಲ್ಲೆ ಬಿದ್ದ ಒಂದು ಬಡಿಗೆಯನ್ನು ತಗೆದುಕೊಂಡು ನನ್ನ ಹಾಗೂ ನಮ್ಮ ಅಕ್ಕಳಾದ ಅನೀಜ ಬೇಗಂ ಇಬ್ಬರಿಗೂ ಹೊಡೆಯಲು ಬಂದಾಗ ನಾವು ಚಿರಾಡಿ ತಪ್ಪಿಸಿಕೊಂಡಾಗ ಆಗ ಬಿಡಿಸಲು ಬಂದ ನನ್ನ ತಮ್ಮನಾದ ಮೊಹೀದಖಾನ ಈತನಿಗೆ ಯುಸುಪ್ ಉದ್ದಿನ ಇತನು ಬಡಿಗೆಯಿಂದ ತಲೆಗೆ ಕಾಲಿಗೆ ಹೊಡೆದು ಮತ್ತು ಮಾಲನ್ ಬೀ ಮತ್ತು ಆಕೆಯ ಮಗ ಮುಂತಾಸೀರ ಇಬರು ಕೈಯಿಂದ ಕಪಾಳಕ್ಕೆ ಹೊಟ್ಟೆಗೆ ಎದೆಗೆ ಹೊಡೆದು ಗುಪ್ತಗಾಯ ಪಡಿಸಿ ನಮ್ಮ ತಂಟೆಗೆ ಬಂದರೆ ನಿಮಗೆ ಖಲಾಸ ಮಾಡದೆ ಬಿಡುವದಿಲ್ಲ ಅಂತಾ ನಮಗೆ ಜೀವದ ಬೇದರಿಕೆ ಹಾಕಿ ಹೊರಟು ಹೋಗಿರುತ್ತಾನೆ ನಿನ್ನೆ ರಾತ್ರಿಯಾಗಿದ್ದರಿಂದ ನನ್ನ ತಮ್ಮ ಮೋಹಿದಖಾನಗೆ ಸರಕಾರಿ ಆಸ್ಪತ್ರೆಗೆ ತೋರಿಸಿ ಉಪಚಾರ ಮಾಡಿಸಿ ಮನೆಗೆ ಹೋಗಿ ನನ್ನ ಅಣ್ಣನಾದ ತೋಹಿದಖಾನ ಈತನಿಗೆ ವಿಚಾರ ಮಾಡಿ ಇಂದು ಠಾಣೆಗೆ ತಡವಾಗಿ ಬಂದು ದೂರು ನಿಡಿದ್ದು ಇರುತ್ತದೆ. ನನ್ನ ತಮ್ಮನಾದ ಮೊಹಿದಖಾನ ಈತನಿಗೆ ಹೊಡೆ ಬಡೆ ಮಾಡಿ ನಮಗೆ ಅವಾಚ್ಯ ಬೈದು ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.



ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:-. 127/2020 ಕಲಂ: 87 ಕೆ.ಪಿ.ಕಾಯ್ದೆ:- ಇಂದು ದಿನಾಂಕ: 05/05/2020 ರಂದು 7-45 ಪಿ.ಎಮ್. ಕ್ಕೆ ನಾನು ಠಾಣೆಯಲ್ಲಿದ್ದಾಗ ಶ್ರೀ ಚೇತನ್ ಪಿ.ಎಸ್.ಐ (ಕಾ&ಸು-1) ಸಾಹೇಬರು ಸುರಪೂರ ಪೊಲೀಸ್ ಠಾಣೆ ರವರು 19 ಜನ ಆರೋಪಿತರೊಂದಿಗೆ ಠಾಣೆಗೆ ಬಂದು, ಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ವರದಿ ಸಾರಾಂಶವೆನಂದರೆ ಇಂದು ದಿನಾಂಕ:05/05/2020 ರಂದು 3 ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಶೆಳ್ಳಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕೆಲವುಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ನಾನು ಮತ್ತು ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೊಹರ ಹೆಚ್ಸಿ-105 3) ಶ್ರೀ ಉಮಾಕಾಂತ ಹೆಚ್ಸಿ-192 4) ಶ್ರೀ ಶರಣಗೌಡ ಸಿಪಿಸಿ-218 5) ಶ್ರೀ ಪರಮೇಶ ಸಿಪಿಸಿ-142 6) ದೇವಿಂದ್ರಪ್ಪ ಸಿಪಿಸಿ-184 7) ಶ್ರೀ ಮಂಜುನಾಥ ಸಿಪಿಸಿ-271 8) ಜಗದಿಶ ಸಿಪಿಸಿ-335 9) ಶ್ರೀ ಬಸಪ್ಪ ಸಿಪಿಸಿ-393 10) ಶ್ರೀ ದಯಾನಂದ ಸಿಪಿಸಿ-337 11) ಶ್ರೀ ವಿರೇಶ ಸಿಪಿಸಿ-374 12) ಶ್ರೀ ಮಾನಯ್ಯ ಸಿಪಿಸಿ-372 13) ಶ್ರೀ ಮಲ್ಲಯ್ಯ ಸಿಪಿಸಿ-51 ವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ಮಾನಪ್ಪ ತಂದೆ ನಿಂಗಪ್ಪ ಬಂಡಾರಿ ವ|| 40 ವರ್ಷ ಜಾ|| ಹೊಲೆಯ ಉ|| ಒಕ್ಕಲುತನ ಸಾ|| ಶೆಳ್ಳಿಗಿ 2) ಶ್ರೀ ನಾಗಪ್ಪ ತಂದೆ ದೊಡ್ಡನಂದಪ್ಪ ನರಿಬೋಳ ವ|| 35 ವರ್ಷ ಜಾ|| ಲಿಂಗಾಯತ ಉ|| ಡ್ರೈವರ ಸಾ|| ಶೆಳ್ಳಿಗಿ ಇವರನ್ನು 4 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 4:15 ಪಿ.ಎಂ ಕ್ಕೆ ಒಂದು ಖಾಸಗಿ ವಾಹನ ನೇದ್ದರಲ್ಲಿ ಠಾಣೆಯಿಂದ ಹೊರಟು 4:45 ಪಿ.ಎಂ ಕ್ಕೆ ಶೆಳ್ಳಗಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಶಾಲೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 4:50 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿ ಒಟ್ಟು 19 ಜನರು ಸಿಕ್ಕಿದ್ದು ಅವರ ಅವರ ಹೆಸರು, ವಿಳಾಸ ವಿಚಾರಿಸಿದ್ದು 1) ಅಮರೆಗೌಡ ತಂದೆ ಮಲ್ಕಪ್ಪ ಪೊಲೀಸ್ ಪಾಟೀಲ್ ವ|| 36 ವರ್ಷ ಉ|| ಒಕ್ಕಲುತನ ಜಾ|| ಲಿಂಗಾಯತ ಸಾ|| ಶೆಳ್ಳಗಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 550/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಬಲಭೀಮ ತಂದೆ ಅಯ್ಯಣ್ಣ ಸುಬೇದಾರ ವ|| 37 ವರ್ಷ ಉ|| ಒಕ್ಕಲುತನ ಸಾ|| ಲಿಂಗಾಯತ ಸಾ|| ಶೆಳ್ಳಗಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 500/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಸಿದ್ರಾಮೇಶ ತಂದೆ ಬಸವರಾಜ ಮನಗುಳಿ ವ|| 19 ವರ್ಷ ಜಾ|| ಲಿಂಗಾಯತ ಉ|| ಕಿರಾಣಿ ವ್ಯಾಪಾರ ಸಾ|| ಶೆಳ್ಳಗಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 550/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಹಣಮಂತ ತಂದೆ ಬಾಲಪ್ಪ ಕೊಂಡೆಕರ ವ|| 49 ವರ್ಷ ಜಾ|| ಬೇಡರು ಉ|| ಕೂಲಿ ಸಾ|| ಶೆಳ್ಳಗಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 350/- ರೂಗಳು ವಶಪಡಿಸಿಕೊಳ್ಳಲಾಯಿತು. 5) ಚಂದಪ್ಪ ತಂದೆ ರಂಗಪ್ಪ ಕವಲಿ ವ|| 30 ವರ್ಷ ಜಾ|| ಬೇಡರು ಉ|| ಕೂಲಿ ಸಾ|| ಶೆಳ್ಳಗಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 500/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಶಿವು ತಂದೆ ಹಣಮಂತ್ರಾಯ ಮನಗುಳಿ ವ|| 25 ವರ್ಷ ಜಾ|| ಲಿಂಗಾಯತ ಉ|| ಡ್ರೈವರ ಸಾ|| ಶೆಳ್ಳಗಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 600/- ರೂಗಳು ವಶಪಡಿಸಿಕೊಳ್ಳಲಾಯಿತು. 7) ರಾಜಕುಮಾರ ತಂದೆ ಯಲ್ಲಪ್ಪ ಕೊಂಡಿಕಾರ ವ|| 21 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಶೆಳ್ಳಗಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 350/- ರೂಗಳು ವಶಪಡಿಸಿಕೊಳ್ಳಲಾಯಿತು. 8) ಮಹೇಶ ತಂದೆ ಚಂದ್ರಶೇಖರ ಹುಗಾರ ವ|| 24 ವರ್ಷ ಜಾ|| ಹುಗಾರ ಉ|| ಎಲೆಕ್ಟ್ರಿಶಿಯನ್ ಸಾ|| ಶೆಳ್ಳಗಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 300/- ರೂಗಳು ವಶಪಡಿಸಿಕೊಳ್ಳಲಾಯಿತು. 9) ಆದನಗೌಡ ತಂದೆ ಪರಮೇಗೌಡ ಮಾಲಿ ಪಾಟೀಲ್ ವ|| 21 ವರ್ಷ ಜಾ|| ಲಿಂಗಾಯತ ಉ|| ವ್ಯಾಪಾರ ಸಾ|| ಶೆಳ್ಳಗಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 550/- ರೂಗಳು ವಶಪಡಿಸಿಕೊಳ್ಳಲಾಯಿತು. 10) ರಾಚಪ್ಪ ತಂದೆ ಬಸಣ್ಣ ಹುಗಾರ ವ|| 31 ವರ್ಷ ಜಾ|| ಹುಗಾರ ಉ|| ಡ್ರೈವರ ಸಾ|| ಶೆಳ್ಳಗಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 350/- ರೂಗಳು ವಶಪಡಿಸಿಕೊಳ್ಳಲಾಯಿತು. 11) ಮಲ್ಲಿಕಾಜರ್ುನ ತಂದೆ ಸಂಗಣ್ಣ ಮನಗುಳಿ ವ|| 21 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಶೆಳ್ಳಗಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 450/- ರೂಗಳು ವಶಪಡಿಸಿಕೊಳ್ಳಲಾಯಿತು. 12) ಶಾಂತಪ್ಪ ತಂದೆ ಅಯ್ಯಪ್ಪ ಕೋಳಿಹಾಳ ವ|| 34 ವರ್ಷ ಜಾ|| ಲಿಂಗಾಯತ ಉ|| ಡ್ರೈವರ ಸಾ|| ಶೆಳ್ಳಗಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 350/- ರೂಗಳು ವಶಪಡಿಸಿಕೊಳ್ಳಲಾಯಿತು. 13) ಗೌಡಪ್ಪ ತಂದೆ ನಿಂಗಪ್ಪ ಹೊಸಮನಿ ವ|| 40 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಶೆಳ್ಳಗಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 300/- ರೂಗಳು ವಶಪಡಿಸಿಕೊಳ್ಳಲಾಯಿತು. 14) ಹಣಮಂತ ತಂದೆ ರಂಗಪ್ಪ ಕವಲಿ ವ|| 23 ವರ್ಷ ಜಾ|| ಬೇಡರು ಉ|| ಡ್ರೈವರ ಸಾ|| ಶೆಳ್ಳಗಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 500/- ರೂಗಳು ವಶಪಡಿಸಿಕೊಳ್ಳಲಾಯಿತು. 15) ಹಣಮಂತ ತಂದೆ ಭೀಮರಾಯ ದೊಡ್ಡಮನಿ ವ|| 32 ವರ್ಷ ಜಾ|| ಮಾದಿಗ ಉ|| ಗೌಂಡಿಕೆಲಸ ಸಾ|| ಹೆಬ್ಬಾಳ(ಬಿ) ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 300/- ರೂಗಳು ವಶಪಡಿಸಿಕೊಳ್ಳಲಾಯಿತು. 16) ಭೀಮಣ್ಣ ತಂದೆ ಹಣಮಂತ ಬಡಿಗೇರ  ವ|| 32 ವರ್ಷ ಜಾ|| ಮಾದಿಗ ಉ|| ಗೌಂಡಿ ಕೆಲಸ ಸಾ|| ಶೆಳ್ಳಗಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 450/- ರೂಗಳು ವಶಪಡಿಸಿಕೊಳ್ಳಲಾಯಿತು. 17) ಶರಣಪ್ಪ ತಂದೆ ಜಟ್ಟೆಪ್ಪ ದೊಡ್ಡಮನಿ ವ|| 29 ವರ್ಷ ಜಾ|| ಮಾದಿಗ ಉ|| ಡ್ರೈವರ ಸಾ|| ಶೆಳ್ಳಗಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 600/- ರೂಗಳು ವಶಪಡಿಸಿಕೊಳ್ಳಲಾಯಿತು. 18) ಸಿದ್ದಪ್ಪ ತಂದೆ ಅಯ್ಯಪ್ಪ ಕಟ್ಟಿಮನಿ ವ|| 34 ವರ್ಷ ಜಾ|| ಮಾದಿಗ ಉ|| ಹಮಾಲಿ ಸಾ|| ಮಾಳಿಂಗರಾಯನ ಗುಡಿಯ ಹತ್ತಿರ ಹುಣಸಗಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 350/- ರೂಗಳು ವಶಪಡಿಸಿಕೊಳ್ಳಲಾಯಿತು. 19) ಬಸಪ್ಪ ತಂದೆ ರಾಮಪ್ಪ ಚಲವಾದಿ ವ|| 40 ವರ್ಷ ಜಾ|| ಹೊಲೆಯ ಉ|| ಒಕ್ಕಲುತನ ಸಾ|| ಶೆಳ್ಳಗಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 500/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆ ಇಟ್ಟ ಹಣ 4640/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 13040/- ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 4:50  ಪಿ.ಎಮ್ ದಿಂದ 6:20 ಪಿ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ 19 ಜನ ಆರೋಪಿರೊಂದಿಗೆ ಮರಳಿ ಠಾಣೆಗೆ ರಾತ್ರಿ 7 ಗಂಟೆಗೆ ಬಂದು ಸದರಿ ಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


ಗೋಗಿ  ಪೊಲೀಸ್ ಠಾಣೆ ಗುನ್ನೆ ನಂ:- 61/2020 379 ಐಪಿಸಿ & 44(1) ಕೆ.ಎಂ.ಎಂ.ಆರ್.ಸಿ ಕಾಯ್ದೆ 1994.:- ಇಂದು ದಿನಾಂಕ: 05/05/2020 ರಂದು 08-50 ಎಎಮ್ ಕ್ಕೆ ಶ್ರೀ ಶ್ರೀ. ಶ್ರೀನಿವಾಸ ಅಲ್ಲಾಪೂರ ಸಿಪಿಐ ಶಹಾಪೂರ ವೃತ್ತ  ರವರು ಒಂದು ಮರಳು ತುಂಬಿದ ಟ್ರ್ಯಾಕ್ಟರ್, ಒಬ್ಬ ಆರೋಪಿಯೊಂದಿಗೆ ಜಪ್ತಿ ಪಂಚನಾಮೆ ಜೋತೆಗೆ ಠಾಣೆಗೆ ಬಂದು ವರದಿ ನೀಡಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 05/05/2020 ರಂದು 05.55 ಎಎಮ್ ಸುಮಾರಿಗೆ, ಕೊರೊನಾ ಪ್ರಯುಕ್ತ ಶ್ರೀ. ಜೀಪ ಚಾಲಕ ಮಲಕಾರಿ ಎ.ಹೆಚ್.ಸಿ-07, ರವರೊಂದಿಗೆ ವಿಶೇಷ ಪೆಟ್ರೋಲಿಂಗ್ ಕರ್ತವ್ಯದ ಮೇಲೆ ಗೋಗಿ ಪೇಠ ಗ್ರಾಮದಲ್ಲಿದ್ದಾಗ ಕಾಡಂಗೇರಾ ಕಡೆಯಿಂದ ಚಾಮನಾಳ ಮಾರ್ಗವಾಗಿ ನಗನೂರ ಕಡೆಗೆ ಟ್ರ್ಯಾಕ್ಟರ್ದಲ್ಲಿ ಅಕ್ರಮವಾಗಿ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟಕ್ಕೆ ಹೋಗುತ್ತಿದ್ದಾರೆ ಅಂತಾ ಖಚಿತ ಭಾತ್ಮೀ ಬಂದಿದ್ದು,  ನಾನು, ಗೋಗಿ ಠಾಣೆಗೆ ಬಂದು ಪ್ರೇಮಸಿಂಗ ಸಿಪಿಸಿ-318 ರವರ ಮೂಲಕ ಪಂಚರಾದ 1) ಅಶೋಕ ತಂದೆ ಶರಣಪ್ಪ ಬಡಿಗೇರ  ವಯ|| 29 ವರ್ಷ ಜಾ|| ಹರಿಜನ ಉ|| ಒಕ್ಕಲುತನ ಸಾ|| ಗೋಗಿಪೇಠ ತಾ|| ಶಹಾಪೂರ ಜಿ: ಯಾದಗಿರಿ. 2) ಜಾಪರಸಾಬ ತಂದೆ ಮಹ್ಮದ ಹುಸೇನ್ ಕಂಬಾರ ವಯ|| 43 ವರ್ಷ ಜಾ|| ಮುಸ್ಲಿಂ ಉ|| ಕೂಲಿ ಸಾ|| ಗೋಗಿಪೇಠ ತಾ|| ಶಹಾಪೂರ ಜಿ||ಯಾದಗಿರಿ ರವರಿಗೆ ಕರೆಯಿಸಿ ಬಾತ್ಮಿ ವಿಷಯ ತಿಳಿಸಿ, ಪಂಚರಾಗಲು ಕೋರಿದ್ದು, ಸದರಿಯವರು ಒಪ್ಪಿಕೊಂಡ ಮೇರೆಗೆ ಸದರಿ ಪಂಚರು, ಮತ್ತು ಸಿಬ್ಬಂದಿಯವರಾದ ಪ್ರೇಮಸಿಂಗ್ ಸಿಪಿಸಿ-318, ಹನುಮಂತ್ರಾಯ ಸಿಪಿಸಿ-331 ಮತ್ತು ಜೀಪ ಚಾಲಕ ಮಲಕಾರಿ ಎ.ಹೆಚ್.ಸಿ-07 ರವರಿಗೆ ರವರೊಂದಿಗೆ ನಮ್ಮ ಸರಕಾರಿ ಜೀಪ್ ನಂ: ಕೆಎ-33 ಜಿ-0153 ನೇದ್ದರಲ್ಲಿ 06:25 ಪಿಎಮ್ ಕ್ಕೆ ಹೊರಟೆವು. 
      ನಂತರ ಚಾಮನಾಳ ಗ್ರಾಮಕ್ಕೆ 06.50 ಎಎಂ ಕ್ಕೆ ಹೊಗಿ, ಚಾಮನಾಳ ಗ್ರಾಮದಲ್ಲಿನ ಕಾಡಂಗೇರಾ ಕ್ರಾಸ್ ಹತ್ತಿರ ನಿಂತಾಗ 07-15 ಎಎಮ್ ಕ್ಕೆ ಕಾಡಂಗೇರಾ ಕಡೆಯಿಂದ ಒಂದು ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ನೋಡಿ, ಸದರಿ ಟ್ರ್ಯಾಕ್ಟರ್ ನಿಲ್ಲಿಸಿ ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಹುಲಗಪ್ಪ ತಂದೆ ಮಾನಪ್ಪ ಬಂಟನೂರ ವಯಾ:25 ಉ: ಡ್ರೈವರ ಜಾ: ಬೇಡರ ಸಾ: ಗೌಡಗೇರಾ ತಾ: ಸುರಪೂರ ಅಂತಾ ತಿಳಿಸಿದ್ದು, ಸದರಿ ಟ್ರ್ಯಾಕ್ಟರದಲ್ಲಿಯ ಮರಳಿನ ಬಗ್ಗೆ ರಾಯಲ್ಟಿ ಕೇಳಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲಾ ಅಂತಾ ತಿಳಿಸಿದ್ದು, ತನ್ನ ಟ್ರ್ಯಾಕ್ಟರ್ ಮಾಲೀಕ ತಿರುಪತಿ ತಂದೆ ದ್ಯಾವಪ್ಪ ದೋರೆ ವ:40 ಸಾ: ಗೌಡಗೇರಾ ಇವರು ತನಗೆ ಮರಳು ತುಂಬಿಕೊಂಡು ಬರಲು ತಿಳಿಸಿದ್ದರಿಂದ ತೆಗೆದುಕೊಂಡು ಹೊರಟಿರುವುದಾಗಿ ತಿಳಿಸಿದನು. ನಂತರ ಸಿಪಿಐ ಸಾಹೇಬರು ನಮ್ಮ ಸಮಕ್ಷಮ ಟ್ರ್ಯಾಕ್ಟರ್ನ್ನು ಪರಿಶೀಲಿಸಲಾಗಿ 1) ಸ್ವರಾಜ 735 ಘಿಖಿ ನೀಲಿ ಬಣ್ಣದ ಟ್ರ್ಯಾಕ್ಟರ ಇದ್ದು ಅದರ ನಂಬರ ಇರುವದಿಲ್ಲ. ಟ್ರ್ಯಾಕ್ಟರ ಇಂಜಿನ ನಂ:39.1357/ಖಂಉ06697 ಚೆಸ್ಸಿ ನಂ: ಒಃಓಂಕ48ಂಆಏಖಿಉ11727 ಅ.ಕಿ.1,00,000=00 ಮತ್ತು 2) ಒಂದು ನೀಲಿ ಬಣ್ಣದ ರೇಣುಕಾ ಟ್ರೈಲರ್ಸ ಶಹಾಪೂರ ಅಂತಾ ಬರೆದಿರುವ ಟ್ರ್ಯಾಲಿ ನಂಬರ ಇರುವದಿಲ್ಲ. ಅ.ಕಿ.50,000=00 ಸದರಿ ಟ್ರ್ಯಾಲಿಯಲ್ಲಿ 3) ಅಂದಾಜು ಒಂದು ಬ್ರಾಸ್ ಮರಳು ಅ.ಕಿ.1500=00 ರೂ ಇದ್ದು, ಅವುಗಳನ್ನು ನಮ್ಮ ಸಮಕ್ಷಮದಲ್ಲಿ ದಿನಾಂಕ:05/05/2020 ರಂದು 07.20 ಎ.ಎಮ್ ದಿಂದ 08.20 ಎಎಮ್ ದವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡು ತಾಬೆಗೆ ತಗೆದುಕೊಂಡಿದ್ದು, ಇರುತ್ತದೆ. ಸದರಿ ಟ್ರ್ಯಾಕ್ಟರ್ನ ಚಾಲಕ ಮತ್ತು ಮಾಲೀಕನು ಸರಕಾರಕ್ಕೆ ಹಣ ತುಂಬದೇ ಮರಳನ್ನು ಕಳ್ಳತನ ಮಾಡಿಕೊಂಡು ಸಾಗಿಸುತ್ತಿರುವುದಾಗಿ ತಿಳಿದುಬಂದಿದ್ದರಿಂದ ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ಠಾಣೆಗೆ 08.50 ಎಎಮ್ ಕ್ಕೆ ತಂದು ಹಾಜರ್ ಪಡಿಸಿದ್ದು ಇರುತ್ತದೆ. ಆದ್ದರಿಂದ ಸಕರ್ಾರಕ್ಕೆ ಹಣ ತುಂಬದೇ ಮರಳನ್ನು ಕಳ್ಳತನ ಮಾಡಿಕೊಂಡು ಸಾಗಿಸುತ್ತಿದ್ದ ಸದರಿ ಟ್ರ್ಯಾಕ್ಟರ್ ಚಾಲಕ ಮತ್ತು ಟ್ರಾಯಕ್ಟರ ಮಾಲೀಕನ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಲಾಗಿದೆ. ಅಂತಾ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 61/2020 ಕಲಂ, 379 ಐಪಿಸಿ & 44(1) ಕೆ.ಎಂ.ಎಂ.ಆರ್.ಸಿ ಕಾಯ್ದೆ 1994 ನೇದ್ದರ ಪ್ರಕಾರ ಗುನ್ನೆ ದಾಖಲೆ ಮಾಡಿಕೊಂಡು ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!