ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04/05/2020

By blogger on ಸೋಮವಾರ, ಮೇ 4, 2020






                                   ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04/05/2020 
                                                                                                               
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 56/2020 ಕಲಂ: 9, 11(1) ಬಾಲ್ಯ ವಿವಾಹ ನಿಷೇಧ ಕಾಯ್ದೆ:- ಇಂದು ದಿನಾಂಕ: 04/05/2020 ರಂದು ಸರಕಾರಿ ಬಾಲಕಿಯರ ಬಾಲ ಮಂದಿರ ಯಾದಗಿರಿಗೆ ಭೇಟಿ ನೀಡಿ, ಅಧೀಕ್ಷಕರು ಬಾಲಕಿಯರ ಬಾಲ ಮಂದಿರ ಯಾದಗಿರಿ ರವರ ಸಮಕ್ಷಮ ಮರಿಯಮ್ಮ ಗಂಡ ದೇವಪ್ಪ ಕಡ್ಡಿಮಲ್ಲಪ್ಪ ವ:17 ವರ್ಷ, ಜಾ:ಹೊಲೆಯ ಸಾ:ಕದರಾಪೂರ ತಾ:ವಡಗೇರಾ ಇವಳ ಹೇಳಿಕೆ ಫಿರ್ಯಾಧಿ ಪಡೆದುಕೊಂಡಿದ್ದರ ಸಾರಾಂಶವೇನಂದರೆ ನನ್ನ ತವರು ಮನೆ ದೇವದುರ್ಗ ತಾಲೂಕಿನ ಬೂದುರು ಗ್ರಾಮ ಇರುತ್ತದೆ. ನನ್ನ ತಂದೆಯಾದ ಹಣಮಂತ, ತಾಯಿಯಾದ ಹೊನ್ನಮ್ಮ ಇಬ್ಬರೂ ನನ್ನ ಮದುವೆಗಿಂತ ಮುಂಚೆಯೇ ತೀರಿಕೊಂಡಿರುತ್ತಾರೆ. ಹೀಗಿದ್ದು ಈಗ ಸುಮಾರು 7-8 ತಿಂಗಳ ಹಿಂದೆ ನಮ್ಮಣ್ಣನಾದ ಭೀಮಣ್ಣ ಈತನು ನನಗೆ ಕದರಾಪೂರದ ದೇವಪ್ಪ ತಂದೆ ಕಡ್ಡಿ ಮಲ್ಲಪ್ಪ ಈತನೊಂದಿಗೆ ಮದುವೆ ನಿಶ್ಚಯ ಮಾಡಿದ್ದು, ನನ್ನ ಗಂಡನ ಅಣ್ಣನಾದ ದಂಡಪ್ಪ ತಂದೆ ಕಡ್ಡಿಮಲ್ಲಪ್ಪ, ಅವನ ಹೆಂಡತಿ ಸರಸ್ವತಿ ಗಂಡ ದಂಡಪ್ಪ ಮತ್ತು ಇತರರು ಸೇರಿ ಅಪ್ರಾಪ್ತ ವಯಸ್ಕಾಳದ ನನಗೆ ಕದರಾಪೂರದ ನನ್ನ ಗಂಡನ ಮನೆ ಮುಂದೆ ಮದುವೆ ಮಾಡಿಕೊಟ್ಟಿರುತ್ತಾರೆ. ಗೂಗಲ್ ಮಠ(ದೇವಸ್ಥಾನ)ದ ಸ್ವಾಮಿಗಳು ಬಂದು ತಾಳಿ ಕಟ್ಟಿಸಿರುತ್ತಾರೆ. ನನಗೆ ಕದರಾಪೂರ ಗ್ರಾಮದ ರಾಜಾ ತಂದೆ ರಾಮಪ್ಪ ಚಲುವಾದಿ ಈತನು ಪುಸಲಾಯಿಸಿ, ಅಪಹರಿಸಿಕೊಂಡು ಹೋಗಿ ಬಲತ್ಕಾರ ಮಾಡಿದ ಬಗ್ಗೆ ನಾನು ಈಗಾಗಲೇ ದೂರು ಕೊಟ್ಟಿರುತ್ತೇನೆ. ಆದರೆ ಆ ಸಮಯದಲ್ಲಿ ನಾನು ಗಾಬರಿಯಿಂದ ನನಗೆ ನಮ್ಮಣ್ಣ ಭೀಮಣ್ಣ, ಗಂಡನ ಅಣ್ಣನಾದ ದಂಡಪ್ಪ ಮತ್ತು ನೆಗೆಣ್ಣಿ ಸರಸ್ವತಿ ಇವರು ದೇವಪ್ಪನೊಂದಿಗೆ ಬಾಲ್ಯ ವಿವಾಹ ಮಾಡಿದ್ದನ್ನು ಹೇಳಿರುವುದಿಲ್ಲ. ಕಾರಣ ಅಪ್ರಾಪ್ತ ವಯಸ್ಸಿನವಳಾದ ನನಗೆ ಮದುವೆ ಮಾಡಿಕೊಂಡ ನನ್ನ ಗಂಡ ದೇವಪ್ಪ, ಮದುವೆ ಮಾಡಿದ ಭೀಮಣ್ಣ, ದಂಡಪ್ಪ ಮತ್ತು ಸರಸ್ವತಿ ಮತ್ತು ಇತರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಹೇಳಿ ಬರೆಸಿದ ಹೇಳಿಕೆ ನಿಜವಿರುತ್ತದೆ. ಸದರಿ ನನ್ನ ಮದುವೆ ಕಾಲಕ್ಕೆ ನನ್ನ ಗಂಡನ ಮನೆಯ ನೆರೆಹೊರೆಯವರು ಹಾಗೂ ಬಂಧು ಬಳಗದವರು ಹಾಜರಿರುತ್ತಾರೆ ಎಂದು ಕೊಟ್ಟ ಫಿರ್ಯಾಧಿ ಹೇಳಿಕೆಯನ್ನು 5 ಪಿಎಮ್ ದಿಂದ 6 ಪಿಎಮ್ ದ ವರೆಗೆ ಪಡೆದುಕೊಂಡು 6-30 ಪಿಎಮ್ ಕ್ಕೆ ಮರಳಿ ಪೊಲೀಸ್ ಠಾಣೆಗೆ ಬಂದು ಸದರಿ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 56/2020 ಕಲಂ: 9, 11(1) ಬಾಲ್ಯ ವಿವಾಹ ನಿಷೇಧ ಕಾಯ್ದೆ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.



ಶೊರಾಪೂರ ಪೊಲೀಸ ಠಾಣೆ ಗುನ್ನೆ ನಂ:- 121/2020 ಕಲಂ: 323, 324, 326, 504, 506 ಸಂ. 34 ಐಪಿಸಿ:- ಇಂದು ದಿನಾಂಕ:04/05/2020 ರಂದು 2-10 ಪಿ.ಎಂ.ಕ್ಕೆ ಠಾಣೆಯ ಎಸ್ ಹೆಚ್ಡಿ ಕರ್ತವ್ಯದಲ್ಲಿರುವಾಗ ನನಗೆ 5 ಜನ ಗಂಡು ಮಕ್ಕಳಿರುತ್ತಾರೆೆ ಶಹಾಪೂರ ತಾಲೂಕಿನ ಗೋಲಗೇರಿ ಗುಡಿಸಲು ಗ್ರಾಮದ ದೊಡ್ಡ ಬಸಪ್ಪ ತಂದೆ ಶರಬಣ್ಣ ಕಾಕನವರ ಇವರ ಮಗಳಾದ ಮಹಾದೇವಿ ಇವಳನ್ನು ನನ್ನ ಮೂರನೆ ಮಗನಾದ ಯಂಕಪ್ಪ ಈತನೊಂದಿಗೆ ಮದುವೆ ಮಾಡಿದ್ದು ಇರುತ್ತದೆ. ಸಧ್ಯ ಮಗನಾದ ಯಂಕಪ್ಪ ಈತನಿಗೆ 4 ವರ್ಷದ ಸುಮಿತ್ರಾ ಅನ್ನವು ಒಬ್ಬಳು ಹೆಣ್ಣು ಮಗಳಿರುತ್ತಾಳೆ. ನನ್ನ ಮಗ ಸೋಸೆ ಇಬ್ಬರು ಅನ್ನೊನ್ಯವಾಗಿದ್ದು, ಆವಾಗ ಆವಾಗ ಸಣ್ಣ ಪುಟ್ಟ ವಿಷಯಕ್ಕೆ ಮಗ ಸೊಸೆ ಜಗಳ ಮಾಡಿಕೊಂಡಾಗ ಮಗನಾದ ಯಂಕಪ್ಪ ಈತನು ಬುದ್ದಿ ಮಾತಿಗೆ ಒಂದೆಟು ಹೊಡೆದಾಗ ಸೋಸೆಯಾದ ಮಹಾದೇವಿ ಇವಳು ಅವರ ತಂದೆ ತಾಯಿಗೆ ನನ್ನ ಗಂಡ ಹೊಡೆದಿರುತ್ತಾನೆ ಅಂತಾ ಪೋನ ಮಾಡಿ ವಿಷಯ ತಿಳಿಸುತ್ತಿದ್ದಳು. ಹೀಗಿದ್ದು ದಿನಾಂಕ: 02-05-2020 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿಯಾದ ಯಲ್ಲಪ್ಪ, ಮಗನಾದ ಯಂಕಪ್ಪ ಮೂವರು ನಮ್ಮ ಮನೆಯ ಮುಂದಿನ ಅಂಗಳದಲ್ಲಿ ಕುಳಿತುಕೊಂಡಾಗ  ನಮ್ಮ ಸೋಸೆ ಮಹಾದೇವಿಯ ತಮ್ಮನಾದ ಯಮನಪ್ಪ ತಂದೆ ಬಸಪ್ಪ ಕಾಕನವರ ಚಿಕ್ಕಪ್ಪನಾದ ಸಣ್ಣ ಬಸಪ್ಪ ತಂದೆ ಶರಬಣ್ಣ ಕಾಕನವರ ದೊಡ್ಡಪ್ಪನ ಮಕ್ಕಳಾದ ಮರೆಪ್ಪ ತಂದೆ ರತ್ನಪ್ಪ ಕಾಕನವರ, ಹಾಗೂ ಶರಣಪ್ಪ ತಂದೆ ರತ್ನಪ್ಪ ಕಾಕನವರ ಈ ನಾಲ್ವರು ಬಂದವರೆ ಏನೋ ಯಂಕ್ಯಾ ಬೋಸಡಿ ಮಗನೆ ನಮ್ಮ ಮಗಳಿಗೆ ಮೂರು ದಿನ ಹೊಡಿ ಬಡಿ ಮಾಡಿದಿ ನಿನ್ನನ್ನು ಇವತ್ತು ಒಂದು ಕೈ ನೋಡೆ  ಬಿಡುತ್ತೆವೆ ಅಂದವರೆ ಅವರಲ್ಲಿಯ ಯಮನಪ್ಪ ಈತನು ಅಲ್ಲೆ ಬಿದ್ದ ಒಂದು ಬಡಿಗೆಯಿಂದ ಮಗ ಯಂಕಪ್ಪನ ಮೂಗಿನ ಮೇಲೆ ಜೋರಾಗಿ ಹೊಡೆದಾಗ ಯಂಕಪ್ಪನ ಮೂಗಿನ ಕಂಬಿ ಮುರಿದು ಭಾರಿ ರಕ್ತಗಾಯ ಹೊಂದಿ ನೆಲಕ್ಕೆ ಬಿದ್ದು ಹೊರಳಾಡಿ ಚಿರಾಡಿ ಅಳುತ್ತಿರುವಾಗ ಸಣ್ಣ ಬಸಪ್ಪ, ಮರೆಪ್ಪ, ಶರಣಪ್ಪ ಈ ಮೂವರು ಅವನಿಗೆ ಕಾಲಿನಿಂದ ಒದೆಯುತ್ತಿರುವಾಗ ಬಿಡಿಸಲು ಹೋದ ನನಗೆ ನನ್ನ ಹೆಂಡತಿಗೆ ಅವರೆಲ್ಲರೂ ನುಗಿಸಿಕೊಟ್ಟಾಗ ನಾವಿಬ್ಬರು ಕೇಳಗೆ ಬಿದ್ದಿದ್ದು ನನಗೆ ನನ್ನ ಹೆಂಡತಿ ಯಲ್ಲಮ್ಮ ಇಬ್ಬರಿಗೂ ಸೊಂಟಕ್ಕೆ ಗುಪ್ತ ಪೆಟ್ಟಾಗಿ ಚಿರಾಡುವಾಗ ನಮ್ಮ ಗ್ರಾಮದ ಬಾಬು ಬಾಗವಾನ ಮತ್ತು ರಾಜೇಶ ಅಜ್ಜಕೊಲ್ಲಿ ಇವರು ಬಂದು ಜಗಳ ಬಿಡಿಸಿದರು ಆಗ ಅವರು ಇವತ್ತು ಉಳದಿರಿ ಮಕ್ಕಳೆ ಇನ್ನೊಮ್ಮೆ ನಮ್ಮ ಮಗಳಿಗೆ ಹೊಡೆ  ಬಡೆ ಮಾಡಿದರೆ ನಿಮಗೆ ಖಲಾಸ ಮಾಡುತ್ತೆನೆ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೊಗಿರುತ್ತಾರೆ. ನಂತರ ಗಾಯಗೊಂಡ ನನ್ನ ಮಗ ಯಂಕಪ್ಪನನ್ನು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪೂರದಲ್ಲಿ ಉಪಚಾರ ಮಾಡಿಸಿ ಅಲ್ಲಿಂದ ಹೆಚಿನ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಯಾದಗಿರಿಗೆ ತೋರಿಸಿ ಅಲ್ಲಿಂದ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿ ಮಗನ ಹತ್ತಿರ ಉಪಚಾರ ಕಾಲದಲ್ಲಿ ಯಾರು ಇಲ್ಲದೆ ಇರುವದರಿಂದ ಇಂದು ಠಾಣೆಗೆ ತಡವಾಗಿ ಬಂದು ದೂರು ಅಜರ್ಿ ನಿಡಿದ್ದು ಇರುತ್ತದೆ. ನಮಗೆ ಹೊಡೆ ಬಡೆ ಮಾಡಿದ ಮೇಲೆ ಹೇಳಿದ ನಾಲ್ವರ ಮೇಲೆ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಿಕೊಡಲು ವಿನಂತಿ ಅಂತಾ ಕೊಟ್ಟ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.



ಶೊರಾಪೂರ ಪೊಲೀಸ ಠಾಣೆ ಗುನ್ನೆ ನಂ:- 122/2020 ಕಲಂ: 143, 147, 148, 323, 324, 354, 188, 269,504, 506 ಸಂ. 149 ಐಪಿಸಿ:- ಇಂದು ದಿನಾಂಕ:04/05/2020 ರಂದು 4 ಪಿ.ಎಂ.ಕ್ಕೆ ಠಾಣೆಯ ಎಸ್ ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀಮತಿ  ದೇವನಂದಮ್ಮ ಗಂಡ ಧರ್ಮಣ್ಣ ಸಾಹುಕಾರ ವಯಾ||45 ವರ್ಷ ಉ||ಹೊಲ ಮನೆ ಕೆಲಸ ಜಾತಿ||ಕುರಬರ ಸಾ||ಟಿ ಬೊಮ್ಮನಳ್ಳಿ ತಾ||ಸುರಪೂರ ಇವಳು ಠಾಣೆಗೆ ಬಂದು ಒಂದು ಗಣಕೀಕೃತ ಅಜರ್ಿ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ:02-05-2020 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಾನು ನನ್ನ ತಂದೆಯಾದ ಕಾಮಣ್ಣ ತಂದೆ ನಾಗಪ್ಪ ಮಾಲೀ ಪಾಟೀಲ ತಾಯಿಯಾದ ಮಾನಮ್ಮ ಮೂವರು ಮನೆಯಲ್ಲಿರುವಾಗ 1) ಲಂಕೆಪ್ಪ ತಂದೆ ರಾಯಪ್ಪ ಮಾಕನ್ನವರ 2) ಸಿದ್ದಪ್ಪ ತಂದೆ ನಿಂಗಪ್ಪ ಮಾಕನ್ನವರ 3) ನಿಂಗಪ್ಪ ತಂದೆ ರಾಯಪ್ಪ ಮಾಕನ್ನವರ 4) ಆಮಯ್ಯಾ ತಂದೆ ರಾಯಪ್ಪ ಮಾಕನ್ನವರ 5) ರೇವಣಸಿದ್ದಪ್ಪ ತಂದೆ ಬೀರಪ್ಪ ಅಮ್ಮಾಪೂರ 6) ನಿಂಗಪ್ಪ ತಂದೆ ಬೀರಪ್ಪ ಅಮ್ಮಾಪೂರ 7) ಚಂದಪ್ಪ ತಂದೆ ಬೀಮಶಪ್ಪ ಮಾಕನ್ನವರ 8) ಬೀರಪ್ಪ ತಂದೆ ನಿಂಗಪ್ಪ ಅಮ್ಮಾಪೂರ 9) ಈರಪ್ಪ ತಂದೆ ರಾಯಪ್ಪ ಮಾಕನ್ನವರ ಇವರೆಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಮನೆಯ ಹತ್ತಿರ ಬಂದವರೆ ನಮ್ಮ ಮನೆಯ ಮುಂದೆ ನಿಂತು ಎಲೇ ಕಾಮಣ್ಣ ಹೊರಗಡೆ ಬರ್ರಿ ಸುಳೆ ಮಕ್ಕಳೆ ನಮ್ಮ ದೇವಮ್ಮ ಮಾಕನ್ನವರ ಇವಳಿಗೆ ನಿಮ್ಮ ಮಗ ದೇವಿಂದ್ರಸ್ವಾಮಿ ಈತನು ಬೈದಿರುತ್ತಾನೆ ಇವತ್ತು ನಿಮಗೆ ಒಂದು ಕೈ ನೊಡೆ ಬಿಡುತ್ತೆವೆ ಅಂತಾ ಅವಾಚ್ಯ ಬೈಯುತ್ತಿರುವಾಗ ನಾನು ನನ್ನ ತಂದೆಯಾದ ಕಾಮಣ್ಣ ತಾಯಿಯಾದ ಮಾನಮ್ಮ ಮೂವರು ಮನೆಯ ಹೊರಗಡೆ ಬಂದು ಅವರ ಹತ್ತಿರ ಹೋಗಿ ಯಾಕೇ ಸುಮ್ಮನೆ ಬೈಯುತ್ತಿರಿ ಅಂತಾ ಕೇಳುವಷ್ಟರಲ್ಲಿ ಅವರಲ್ಲಿಯ ಲಂಕೆಪ್ಪ ಮಾಕನ್ನವರ ಈತನು ಅಲ್ಲೆ ಬಿದ್ದ ಒಂದು ಬಡಿಗೆಯಿಂದ ನಮ್ಮ ತಂದೆ ಕಾಮಣ್ಣನಿಗೆ ಬಿನ್ನಿಗೆ ಹೊಡೆದು ಗುಪ್ತ ಗಾಯ ಮಾಡಿದನು. ಸಿದ್ದಪ, ನಿಂಗಪ್ಪ ಮಾಕನ್ನವರ ಆಮಲಿಂಗಪ್ಪ, ರೇವಣಸಿದ್ದಪ್ಪ, ನಿಂಗಪ್ಪ ಅಮ್ಮಾಪೂರ ಇವರೆಲ್ಲರೂ ನಮ್ಮ ತಂದೆಯ ಎರಡು ಕೈಗಳನ್ನು ಒತ್ತಿ ಹಿಡಿದುಕೊಂಡಿದ್ದು, ಚಂದಪ್ಪ, ಬೀರಪ್ಪ, ಈರಪ್ಪ ಈ ಮೂವರು ಕಾಲಿನಿಂದ ಒದೆಯುತ್ತಿದ್ದರು. ಆಗ ಬಿಡಿಸಲು ಹೋದ ನನಗೆ ಲಂಕೆಪ್ಪ ಮತ್ತು ಸಿದ್ದಪ್ಪ ಇಬ್ಬರು ನನ್ನ ಕೈ ಹಿಡಿದು ಜಗ್ಗಾಡಿ ನನ್ನ ಸೀರೆ ಸೆರಗು ಹಿಡಿದು ಎಳೆದಾಡಿ ಅವಮಾನ ಮಾಡಿ ನುಕಿಸಿಕೊಟ್ಟು ಕೈಯಿಂದ ಹೊಡೆ ಬಡೆ ಮಾಡುತ್ತಿರುವಾಗ ಗ್ರಾಮದ ದೇವಿಂದ್ರಪ್ಪ ತಂದೆ ತಿಪ್ಪಣ್ಣ ನಾಯ್ಕೋಡಿ, ಶರಣಪ್ಪಗೌಡ ತಂದೆ ಬೀಮರಾಯಗೌಡ ಪೊಲೀಸ್ ಪಾಟೀಲ, ಬೀಮಣ್ಣ ತಂದೆ ಮಲಕಪ್ಪ ಸುಗೂರ, ಮಾನಪ್ಪ ತಂದೆ ಮಲ್ಲಪ್ಪ ಹೊಸಮನಿ ಇವರೆಲ್ಲರೂ ಬಂದು ಜಗಳವನ್ನು ಬಿಡಿಸಿದರು. ಆಗ ಅವರು ಇವತ್ತು ಉಳದಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಖಲಾಸ ಮಾಡುತ್ತೆವೆ ಅಂತಾ ಜೀವದ ಭಯ ಹಾಕಿ ಹೊರಟು ಹೋಗಿರುತ್ತಾರೆ. ನಾವು ಗಾಭರಿಗೊಂಡು ನಮಗೆ ಏನು ತೋಚದೆ ಇರುವದರಿಂದ ನಮ್ಮ ಮನೆಯಲ್ಲಿ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡಿದ್ದು ಇರುತ್ತದೆ.ನಮಗೆ ಹೊಡೆ ಬಡೆ ಮಾಡಿ ಗುಪ್ತಗಾಯ ಪಡಿಸಿ ಕೈ ಹಿಡಿದು ಎಳೆದಾಡಿ ಅವಮಾನ ಮಾಡಿ ಜೀವದ ಬೇದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಿಕೊಡಲು ವಿನಂತಿ ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.



ಶೊರಾಪೂರ ಪೊಲೀಸ ಠಾಣೆ ಗುನ್ನೆ ನಂ:- 123/2020 ಕಲಂ: 87 ಕೆ.ಪಿ.ಕಾಯ್ದೆ:- ಇಂದು ದಿನಾಂಕ: 04/05/2020 ರಂದು 7:30 ಪಿ.ಎಮ್. ಕ್ಕೆ ನಾನು ಠಾಣೆಯಲ್ಲಿದ್ದಾಗ ಶ್ರೀ ಚೇತನ್ ಪಿ.ಎಸ್.ಐ (ಕಾ&ಸು-1) ಸಾಹೇಬರು ಸುರಪೂರ ಪೊಲೀಸ್ ಠಾಣೆ ರವರು 05 ಜನ ಆರೋಪಿತರೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ವರದಿ ಸಾರಾಂಶವೆನಂದರೆ, ಇಂದು ದಿನಾಂಕ:04/05/2020 ರಂದು 4 ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟಾಪೂರ ಗ್ರಾಮದ ಚೈಕಾಳ ಹನುಮಾನ ದೇವರ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ನಿಂಗಪ್ಪ ಹೆಚ್ಸಿ-118 3) ಶರಣಗೌಡ ಸಿಪಿಸಿ-218 4) ಶ್ರೀ ಮಂಜುನಾಥ ಸಿಪಿಸಿ-271 5) ಜಗದೀಶ್ ಸಿಪಿಸಿ-335 6) ವಿರೇಶ ಸಿಪಿಸಿ-374 7) ಮಾನಯ್ಯ ಸಿಪಿಸಿ-372 ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ನರಸಪ್ಪ ತಂದೆ ಮಾನಯ್ಯ ಕರಿಗುಡ್ಡ ವಯಾ:31 ವರ್ಷ ಜಾ:ಬೇಡರು ಉ:ಡ್ರೈವರ್ ಸಾ:ವೆಂಕಟಾಪೂರ ಸುರಪೂರ 2) ಶ್ರೀ ಲಕ್ಷ್ಮಣ್ಣ ತಂದೆ ದ್ಯಾವಪ್ಪ ನಂದೇಳ್ಳಿ ವಯಾ:35 ವರ್ಷ ಜಾ:ಬೇಡರು ಉ:ಕೂಲಿ ಸಾ:ವೆಂಕಟಾಪೂರ ಸುರಪೂರ ಇವರನ್ನು 04:15 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 04:30 ಪಿ.ಎಂ ಕ್ಕೆ ಒಂದು ಖಾಸಗಿ ವಾಹನ ನೇದ್ದರಲ್ಲಿ ಠಾಣೆಯಿಂದ ಹೊರಟು 04:50 ಪಿ.ಎಂ ಕ್ಕೆ ವೆಂಕಟಾಪೂರ ಗ್ರಾಮದ ಚೈಕಾಳ ಹನುಮಾನ ದೇವರ ಗುಡಿಯ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಚೈಕಾಳ ಹನುಮಾನ ದೇವರ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 04:55 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಒಟ್ಟು 5 ಜನರು ಸಿಕ್ಕಿದ್ದು ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ಹಣಮಂತ ತಂದೆ ಅಜರ್ುನಪ್ಪ ಅಂಕೂಶ್ ವಯಾ:30 ವರ್ಷ ಜಾ:ಬೇಡರ ಉ:ಹಮಾಲಿ ಸಾ:ಡೋಣ್ಣಿಗೇರಿ ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 2100/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಭೀಮಣ್ಣ ತಂದೆ ತಿಪ್ಪಣ್ಣ ಪೂಜಾರಿ ವಯಾ:23 ವರ್ಷ ಜಾ:ಕುರುಬರ ಉ:ಕೂಲಿ ಸಾ:ವೆಂಕಟಾಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 2000/- ರೂಗಳು ವಶಪಡಿಸಿಕೊಳ್ಳಲಾಯಿತು. 3) ನಾಗಪ್ಪ ತಂದೆ ಹಣಮಂತ ಪೂಜಾರಿ ವಯಾ:24 ವರ್ಷ ಜಾ:ಕುರುಬರ ಉ:ಕೂಲಿ ಸಾ:ವೆಂಕಟಾಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1600/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಆನಂದ ತಂದೆ ವಿಶ್ವನಾಥ ಹಿರೇಮಠ್ ವಯಾ:20 ವರ್ಷ ಜಾ:ಜಂಗಮ ಉ:ಡ್ರೈವರ್ ಸಾ:ವೆಂಕಟಾಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 2000/- ರೂಗಳು ವಶಪಡಿಸಿಕೊಳ್ಳಲಾಯಿತು. 5) ಕರೆಪ್ಪ ತಂದೆ ಬಸವರಾಜ ಮದರಕಲ್ ವಯಾ:20 ವರ್ಷ ಜಾ:ಕುರುಬರ ಉ:ಕೂಲಿ ಸಾ:ವೆಂಕಟಾಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1300/- ರೂಗಳು ವಶಪಡಿಸಿಕೊಳ್ಳಲಾಯಿತು.  ಇದಲ್ಲದೆ ಪಣಕ್ಕೆ ಇಟ್ಟ ಹಣ 4230/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 13230/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 5 ಪಿ.ಎಮ್ ದಿಂದ 6 ಪಿ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ 5 ಜನ ಆರೋಪಿರೊಂದಿಗೆ ಮರಳಿ ಠಾಣೆಗೆ ರಾತ್ರಿ 6:30 ಗಂಟೆಗೆ ಬಂದು ಸದರಿ ಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ



ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 47/2020 379 ಐಪಿಸಿ ಮತ್ತು 44(1) ಕೆ.ಎಂ.ಎಂ.ಸಿ.ಆರ್ ಕಾಯ್ದೆ:- ಇಂದು ದಿನಾಂಕ:04/05/2020 ರಂದು 08.30 ಗಂಟೆಗೆ ಹುಣಸಗಿ ಠಾಣೆಯ ಪಿ.ಎಸ್.ಐ ಸಾಹೇಬರಾದ ಶ್ರೀ ಎನ್.ಎಸ್.ಜನಗೌಡ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ & ಜಪ್ತಿ ಪಂಚನಾಮೆ ಹಾಜರಪಡಿಸಿದ್ದು ಸಾರಾಂಶ ಏನೆಂದರೆ, ಇಂದು ದಿನಾಂಕ:04/05/2020 ರಂದು ಬೆಳಗಿನ ಜಾವ 05.00 ಗಂಟೆಗೆ ಹುಣಸಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಅರಕೇರಾ ಜೆ ಕಡೆಯಿಂದಾ ಟ್ರ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಶೋರಾಪುರ & ಮಾನ್ಯ ಸಿಪಿಐ ಹುಣಸಗಿ ರವರ ಮಾರ್ಗದರ್ಶನದಲ್ಲಿ ನಾನು ಮತ್ತ ಠಾಣೆಯ ಕೆಂಚಪ್ಪ ಪಿಸಿ-233, ಮತ್ತು ಡಿ.ಎಸ್.ಪಿ ಸಾಹೇಬರು ಶೋರಾಪುರ ರವರ ವಿಭಾಗದ ಕಚೇರಿಯ ಅಪರಾಧ ದಳದ ಸಿಬ್ಬಂದಿಯಾದ ರಾಘವೇಂದ್ರ ಪಿಸಿ-339, ಬಸವರಾಜ ಪಿಸಿ-116 ರವರು ಮತ್ತು ಇಬ್ಬರು ಪಂಚರಿಗೆ ಬರಮಾಡಿಕೊಂಡು ಠಾಣೆಯಿಂದಾ 05.20 ಗಂಟೆಗೆ ಹೊರಟು ಕೆಂಭಾವಿ ಮುಖ್ಯೆ ರಸ್ತೆಯ ಮೇಲೆ ಅರಕೇರಾ ಜೆ ಕ್ರಾಸ್ ಹತ್ತಿರ ಬೆಳಿಗ್ಗೆ 05.40 ಗಂಟೆಯ ಸುಮಾರಿಗೆ ಹೋಗಿ ರೋಡ ದಂಡೆಗೆ ಮರೆಯಲ್ಲಿ ಕಾಯುತ್ತಾ ನಿಂತಾಗ, ಬೆಳಿಗ್ಗೆ 05.55 ಗಂಟೆಯ ಸುಮಾರಿಗೆ ಮೂರು ಟ್ರ್ಯಾಕ್ಟರಗಳು ಮರಳು ತುಂಬಿಕೊಂಡು ಅರಕೇರಾ ಜೆ ರೋಡಿನಿಂದಾ ಕೆಂಭಾವಿ ರೋಡಿಗೆ ಬಂದು ಹುಣಸಗಿ ಕಡೆಗೆ ಮೂರು ಟ್ರ್ಯಾಕ್ಟರಗಳು ಹೊರಳಿಸಿದಾಗ ನಾವು ಎಲ್ಲಾ ಪೊಲೀಸರು ಒಮ್ಮೇಲೆ ರೋಡಿನ ಮೇಲೆ ಬಂದು ಕೈಸನ್ನೆ ಮಾಡಿ ಚಾಲಕರಗಳಿಗೆ ಟ್ರ್ಯಾಕ್ಟರ ನಿಲ್ಲಿಸಲು ಸನ್ನೆ ಮಾಡಿದಾಗ ಚಾಲಕರುಗಳು ತಮ್ಮ ತಮ್ಮ ಟ್ರ್ಯಾಕ್ಟರಗಳನ್ನು ನಿಲ್ಲಿಸಿ ನಮ್ಮಿಂದ ತಪ್ಪಿಸಿಕೊಂಡು ಓಡಿ ಹೋದರು. ನಂತರ ಮೂರು ಟ್ರ್ಯಾಕ್ಟರ ಟ್ರೇಲರಗಳಲ್ಲಿ ಮರಳು ತುಂಬಿದ್ದು ಅಂದಾಜ 6 ಘನ ಮೀಟರ ಮರಳು ಇದ್ದು ಅಕಿ:7200-00 ರೂ ಆಗಬಹುದು, ಮೂರು ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮದಲ್ಲಿ 06.10 ಎ.ಎಂ ದಿಂದಾ 07.10 ಎ.ಎಂ ವರಗೆ ಜಪ್ತಿ ಪಂಚನಾಮೆ ಮಾಡಿಕೊಂಡು ಬಂದಿದ್ದು ಅಂತಾ ಇತ್ಯಾದಿ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.




ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 48/2020 279 337 338 ಐಪಿಸಿ :- ದಿನಾಂಕ:04/05/2020 ರಂದುಹುಣಸಗಿ ಸರಕಾರಿ ದವಾಖಾನೆಯಿಂದಾ 12.15 ಗಂಟೆಗೆ ಪೋನ ಮುಖಾಂತರ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರಗೆ ಬೇಟಿ ಕೊಟ್ಟು ಗಾಯಳುದಾರರು ಮಾತನಾಡುವ ಸ್ಥಿತಿಯಲ್ಲಿರದ್ದರಿಂದ ಪ್ರತ್ಯಕ್ಷ ಸಾಕ್ಷಿದಾರನಾದ ಶಿವಪ್ಪ ತಂದೆ ಭೀಮಪ್ಪ ಮಾದರ ಸಾ:ಕಚಕನೂರ ಈತನಿಗೆ ವಿಚಾರಿಸಲು ಗಾಯಾಳುಗಳಾದ ಶಾಂತಪ್ಪ ದೊಡ್ಡಮನಿ & ಭಿಮಣ್ಣ ದೊಡ್ಡಮನಿ ಇಬ್ಬರೂ ಕೂಡಿ ಮೋಟರ್ ಸೈಕಲ್ ನಂ:ಕೆಎ-33 ಡಬ್ಲೂ-0497 ನೇದ್ದರ ಮೇಲೆ ಹುಣಸಗಿ ಕಡೆಗೆ ಹೊರಟಾಗ ಹೆಬ್ಬಾಳ(ಬಿ) ಗ್ರಾಮ ಪಂಚಾಯತಿ ದಾಟಿ ರಸ್ತೆಯ ಮೇಲೆ ಹೊರಟಾಗ ಮುಂದೆ ಹೊರಟ ಮಹಿಂದ್ರಾ ಟ್ರ್ಯಾಕ್ಟರ್ ನಂ: ಕೆಎ-33 ಟಿಎ-0424 ನೇದ್ದರ ಚಾಲಕನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಅದೆ ವೇಗದಲ್ಲಿ ಯಾವುದೇ ಕೈ ಸನ್ನೆ ಮಾಡದೇ ಒಮ್ಮೆಲೆ ಎಡಗಡೆ ಕಟ್ ಮಾಡಿದ್ದರಿಂದ ಟ್ರ್ಯಾಕ್ಟರ್ ಇಂಜಿನ ಗಾಯಾಳುದಾರರು ಹೊರಟ ಮೋಟರ್ ಸೈಕಲ್ಗೆ ಡಿಕ್ಕಿಕೊಟ್ಟಿದ್ದರಿಂದಾ ಕೆಳಗೆ ಬಿದ್ದು, ಗಾಯಾಳುಗಳಿಗೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿರುತ್ತವೆ ಅಂತಾ ಇತ್ಯಾದಿ ಹೇಳಿಕೆ ದೂರು ಕೊಟ್ಟಿದ್ದು ಪಡೆದುಕೊಂಡು ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಮೇಲಿಂದಾ ಕ್ರಮ ಜರುಗಿಸಲಾಗಿದೆ.   



ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 77/2020 ಕಲಂ: 279,337,338 ಐ.ಪಿ.ಸಿ ಆಕ್ಟ್  :- ಇಂದು ದಿನಾಂಕ 04.05.2020 ರಂದು 01.45 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಮಾನಪ್ಪ ತಂದೆ ಶರಣಪ್ಪ ಗಂಟೆೆಗೋಳ ವ|| 40 ಜಾ|| ಕುರಬರ ಉ|| ಕೂಲಿಕೆಲಸ ಸಾ|| ಪತ್ತೆಪೂರ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನಾನು ಸುಮಾರು ವರ್ಷಗಳಿಂದ ನಮ್ಮೂರ ಗುರಣಗೌಡ ಪತ್ತೆಪೂರ ಇವರ ಹೊಲದಲ್ಲಿ ಕೂಲಿಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ಹೀಗಿದ್ದು ಇಂದು ದಿನಾಂಕ 04/05/2020 ರಂದು ಬೆಳಿಗ್ಗೆ 10 ಗಂಟೆಗೆ ನಾನು ಹೊಲದಲ್ಲಿನ ಕಲ್ಲು ಆರಿಸಲು ಗುರಣಗೌಡ ಇವರ ಹೊಲಕ್ಕೆ ಹೋಗಿ ಕೆಲಸ ಮಾಡುತ್ತಿದ್ದಾಗ 12.45 ಗಂಟೆಯ ಸುಮಾರಿಗೆ ನನ್ನ ಮಗಳಾದ ಕುಮಾರಿ ವಿದ್ಯಾಶ್ರೀ ತಂದೆ ಮಾನಪ್ಪ ಗಂಟೆಗೋಳ ವ|| 11 ವರ್ಷ ಇವಳು ನನಗೆ ಮನೆಯಿಂದ ಬುತ್ತಿ ತೆಗೆದುಕೊಂಡು ಬಂದು ಹುಣಸಗಿ - ಕೆಂಭಾವಿ ರಸ್ತೆ ದಾಟುತ್ತಿದ್ದಾಗ ಒಮ್ಮಲೇ ಕೆಂಭಾವಿ ಕಡೆಯಿಂದ ಎರಡು ಜನರು ತಮ್ಮ ಮೋಟರ ಸೈಕಲ ಮೇಲೆ ಅತೀವೇಗ ಹಾಗು ಅಲಕ್ಷತನದಿಂದ ಬಂದವರೇ ರಸ್ತೆ ದಾಟುತ್ತಿದ್ದ ನನ್ನ ಮಗಳಾದ ಕುಮಾರಿ ವಿದ್ಯಾಶ್ರೀ ಇವಳಿಗೆ ಬಲವಾಗಿ ಡಿಕ್ಕಿಪಡಿಸಿ ಅವರು ಸಹ ತಮ್ಮ ಮೋಟರ ಸೈಕಲ ಸಮೇತ ರೋಡಿನ ಪಕ್ಕದಲ್ಲಿ ಬಿದ್ದಿದ್ದು ನಂತರ ಅಲ್ಲಿಯೇ ಹೊಲದಲ್ಲಿದ್ದ ನಾನು ಓಡಿ ಹೋಗಿ ನನ್ನ ಮಗಳಿಗೆ ನೋಡಲು ಹಣೆಗೆ, ಎಡಮೆಲಕಿನ ಹತ್ತಿರ ರಕ್ತಗಾಯವಾಗಿ, ಎಡಗಾಲ ಪಾದದ ಮೇಲೆ ಹಾಗು ಎಡಗಾಲ ಮೊಳಕಾಲಿನ ಹತ್ತಿರ ಭಾರೀ ರಕ್ತಗಾಯವಾಗಿ ಕಾಲು ಮುರಿದಿದ್ದು ಅಲ್ಲದೇ ಬಲಗಾಲ ತೊಡೆಯಲ್ಲಿಯೂ ಸಹ ಭಾರೀ ಗುಪ್ತಗಾಯವಾಗಿ ಕಾಲು ಮುರಿದಿತ್ತು. ನಂತರ ನನ್ನ ಮಗಳಿಗೆ ಅಪಘಾತ ಪಡಿಸಿದ ಮೋಟರ ಸೈಕಲ ನಂಬರ ನೋಡಲಾಗಿ ಕೆಎ-33 ವಾಯ್-1922 ಸೈನ ಗಾಡಿಯಿದ್ದು ಅದರ ಚಾಲಕ ಅಪಘಾತ ಪಡಿಸಿದ ತಕ್ಷಣ ಓಡಿಹೋಗಿದ್ದು ಸದರ ಮೋಟರ ಸೈಕಲ ಹಿಂದೆ ಕುಳಿತ ಅಲ್ಲಿಯೇ ಬಿದ್ದಿದ್ದ ವ್ಯಕ್ತಿಗೆ ವಿಚಾರಿಸಲು ಆತನು ತನ್ನ ಹೆಸರು ವಿರೇಶರಡ್ಡಿ ತಂದೆ ಬಸವರಾಜ ದೇಸಾಯಿ ಸಾ|| ಮುದನೂರ ಅಂತ ತಿಳಿಸಿದ್ದು ಅವನಿಗೂ ಸಹ ಬಲತೊಡೆಗೆ, ಎದೆಗೆ ಗುಪ್ತಗಾಯವಾಗಿ ಮುಖಕ್ಕೆ ತರಚಿದ ಗಾಯಗಳಾಗಿದ್ದು ನಂತರ ಸದರಿ ವ್ಯಕ್ತಿಯಿಂದ ನನ್ನ ಮಗಳಿಗೆ ಅಪಘಾತ ಪಡಿಸಿದ ಮೋಟರ ಸೈಕಲ ಚಾಲಕನ ಬಗ್ಗೆ ವಿಚಾರಿಸಿ ತಿಳಿಯಲಾಗಿ ಪ್ರಶಾಂತ ತಂದೆ ಬಸಲಿಂಗಪ್ಪ ಬೊಮನಳ್ಳಿ ಸಾ|| ಮುದನೂರ ಅಂತ ತಿಳಿಸಿದನು. ನಂತರ ನನ್ನ ಮಗಳಿಗೆ ಭಾರೀ ರಕ್ತಸ್ರಾವವಾಗುತ್ತಿದ್ದರಿಂದ ಸದರಿಯವಳನ್ನು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಬಂದು ಉಪಚಾರ ಪಡಿಸಿಕೊಂಡು ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ವಿಜಯಪುರದ ಭಾಗ್ಯವಂತಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೇನೆ. ಕಾರಣ ನನ್ನ ಮಗಳಿಗೆ ಅಪಘಾತ ಪಡಿಸಿದ ಶೈನ್ ಮೋಟರ ಸೈಕಲ ನಂಬರ ಕೆಎ-33 ವಾಯ್-1922 ನೇದ್ದರ ಚಾಲಕ ಪ್ರಶಾಂತ ತಂದೆ ಬಸಲಿಂಗಪ್ಪ ಬೊಮನಳ್ಳಿ ಸಾ|| ಮುದನೂರ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 77/2020 ಕಲಂ 279,337,338 ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 142/2020. ಕಲಂ 87 ಕೆ.ಪಿ.ಆಕ್ಟ:- ಆರೋಪಿತರು ದಿನಾಂಕ: 04-05-2020 ರಂದು 4:00 ಪಿ.ಎಮ್.ಕ್ಕೆ ಎಮ್ . ಶಹಾಪೂರ ನಗರದ ಮಡಿವಾಳೇಶ್ವರ ನಗರದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಕೂಡಿ ದುಂಡಾಗಿ ಕುಳಿತು 52 ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಇಸ್ಪೀಟ ಜೂಜಾಟ ಆಡುತ್ತಿದ್ದಾಗ ಫಿಯರ್ಾದಿದಾರರು ಸಿಬ್ಬಂದಿಯೊಂದಿಗೆ ಹೊಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಅವರಿಂದ ಒಟ್ಟು 5100- ರೂ. ನಗದು ಹಣ , ಮತ್ತು 52 ಇಸ್ಪೀಟ ಎಲೆಗಳನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು ಸದರಿ ವರದಿಯು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 142/2020 ಕಲಂ.87 ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.



ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 143/2020 ಕಲಂ 87  ಕೆ.ಪಿ ಆಕ್ಟ:- ಇಂದು ದಿನಾಂಕ 04/05/2020   ರಂದು ರಾತ್ರಿ 21-15  ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಹನುಮರಡ್ಡೆಪ್ಪ ಪಿ.ಐ ಶಹಾಪೂರ ಪೊಲೀಸ್ ಠಾಣೆ ಇವರು 06 ಜನ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಇಂದು ದಿನಾಂಕ 04/05/2020 ರಂದು ಸಾಯಂಕಾಲ ಪೆಟ್ರೋಲಿಂಗ ಕರ್ತವ್ಯ ಕುರಿತು ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ ಜೀಪ್ ಚಾಲಕ ನಾಗರಡ್ಡಿ  ಎ.ಪಿ.ಸಿ 161 ರವರೊಂದಿಗೆ ಮೋಟಗಿ ಹೊಟೇಲ್ ಕಡೆಗೆ ಹೋದಾಗ ಸಾಯಂಕಾಲ 18-10 ಗಂಟೆಯ ಸುಮಾರಿಗೆ ಶಹಾಪೂರ ಪಟ್ಟಣದ ನ್ಯೂ ಮೈಸೂರ  ಮೆಡಿಕಲ್ ಹತ್ತಿರ ಸಾಯಿ ಪ್ರಿಂಟಿಂಗ್ ಪ್ರೇಸ್ ಎದರುಗಡೆ ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರೂ ಇಸ್ಪೇಟ್ ಎಲೆಗಳ ಸಹಾಯದಿಂದ ಅದರ-ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ, ಸಮೀಪದಲ್ಲಿರುವ ಭೀ-ಗುಡಿ ಪೊಲೀಸ್ ಠಾಣೆಗೆ ಹೋಗಿ ಶ್ರೀ ರಾಜಕುಮಾರ ಪಿ.ಎಸ್.ಐ ಮತ್ತು ಭೀ-ಗುಡಿ ಠಾಣೆಯ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಶಹಾಪೂರ ಪಟ್ಟಣದ ನ್ಯೂ ಮೇಡಿಕಲ್ ಹತ್ತಿರ ಇರುವ ಸಾಯಿ ಪ್ರಿಂಟಿಂಗ್ ಪ್ರೇಸ್ ಹತ್ತಿರ ಹೋಗಿ ದಾಳಿ ಮಾಡಿ ಸಾರ್ವಜನಿಕ ಸ್ಥಳದಲಿ ಜೂಜಾಟ ಆಡುತಿದ್ದ 06 ಜನ ಆಪಾಧಿತರನ್ನು ಹಿಡಿದು ಆಪಾಧಿತರಿಂದ  ಜೂಜಾಟಕ್ಕೆ ಬಳಸಿದ ನಗದು ಹಣ 4500=00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು ಸಾಯಂಕಾಲ 19-30 ಗಂಟೆಯಿಂದ ರಾತ್ರಿ 20-30 ಗಂಟೆಯವರೆಗೆ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 143/2020 ಕಲಂ 87 ಕೆ.ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡಿರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!