ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 30/04/2020

By blogger on ಗುರುವಾರ, ಏಪ್ರಿಲ್ 30, 2020                           
                                    ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 30/04/2020 
                                                                                                               

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:-. 74/2020 ಕಲಂ: 25 ಶಸ್ತ್ರಗಳ ಅಧಿನಿಯಮ:- ಇಂದು ದಿನಾಂಕ 30.04.2020 ರಂದು ಪಿರ್ಯಾಧಿಯು ಸಾರ್ವಜನಿಕರಲ್ಲಿ ಕರೋನ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಸಿಬ್ಬಂದಿಯೊಂದಿಗೆ ಠಾಣಾ ವ್ಯಾಪ್ತಿಯ ನಜರಾಪೂರ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಸಮಯ ಬೆಳಿಗ್ಗೆ 11.00 ಗಂಟೆ ಸುಮಾರಿಗೆ ನಜರಾಪೂರ ದಬ್ದಬೆ ಪಾಲ್ಸ್ ರೋಡಿನ ಹತ್ತಿರ ಮೂರು ಜನರು ಪಿರ್ಯಾಧಿ ಜೀಪ ನೋಡಿ ಬಂದೂಕ ಕೆಳಗೆ ಬಿಸಾಡಿ ಓಡಿ ಹೋಗುತ್ತಿದ್ದಾಗ ಪಿರ್ಯಾಧಿ ಮತ್ತು ಸಿಬ್ಬಂದಿಯವರು ಬೆನ್ನು ಹತ್ತಿ ಓಡಿ ಹೋಗುತ್ತಿದ್ದವರನ್ನು ಹಿಡಿದ ವಿಚಾರಿಸಿದ್ದು ಆರೋಪಿ ಎ1 ಈತನು ಕಳೆದ 10-12 ವರ್ಷಗಳ ಕೆಳಗೆ ತಾನು ಬೆಟ್ಟದಳ್ಳಿ ಗ್ರಾಮದ ಶರಣಪ್ಪ ಬೋಯಿನ್ ಹತ್ತಿರ ಖರೀದಿ ಮಾಡಿದ ಬಂದೂಕ ಎಸ್.ಬಿ.ಎಂ.ಎಲ್ ಮಾದರಿಯ ಆಯುಧ ಇದ್ದು ಅದರ ಮೇಲೆ ಇಂಗ್ಲೀಷನಲ್ಲಿ  ಇಓಈಇಐಆ  ಬರೆದ ಮತ್ತು 1853 ಅಥವಾ 1953 ರಂತೆ ಅಸ್ಪಷ್ಟವಾಗಿ ಕಾಣುವ ನಾಲ್ಕು ಅಂಕೆಯ ನಂಬರಗಳು ಬಂದೂಕು ಅನಧಿಕೃತವಾಗಿ ತನ್ನ ಸ್ವಾಧಿನದಲ್ಲಿಟ್ಟುಕೊಂಡು ಆರೋಪಿ ಎ2 ಮತ್ತು ಎ3 ರವರ ಸಂಗಡ ಬೇಟೆಯಾಡಲು ಹೋಗುತ್ತಿದ್ದಾಗ ವಶಕ್ಕೆ ಪಡೆದು ಮರಳಿ ಬಂದೂಕು ಮತ್ತು ಆರೋಪಿತರೊಂದಿಗೆ ಠಾಣೆಗೆ ಬಂದು ಸಕರ್ಾರಿ ತಪರ್ೆ ಪಿರ್ಯಾಧಿ ವರದಿ ನೀಡಿದ್ದು ಇರುತ್ತದೆ

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 54/2020 ಕಲಂ: 379,511 ಐಪಿಸಿ:-ಇಂದು ದಿನಾಂಕ: 30/04/2020 ರಂದು 12-30 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ಇಂದು ದಿನಾಂಕ: 30/04/2020 ರಂದು 10 ಗಂಟೆ ಸುಮಾರಿಗೆ ನಾನು ಪೊಲೀಸ್ ಠಾಣೆಯಲ್ಲಿದ್ದಾಗ ನನಗೆ ಐಕೂರು  ಸೀಮಾಂತರದಲ್ಲಿ ಕೃಷ್ಣಾ ನದಿ ದಡದಿಂದ ಕಳ್ಳತನದಿಂದ ಮರಳನ್ನು ತುಂಬಿ ಟ್ರ್ಯಾಕ್ಟರಗಳಲ್ಲಿ ಸಾಗಿಸುತ್ತಿರುವುದಾಗಿ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಮತ್ತು ನಮ್ಮ ಸಿಬ್ಬಂದಿಯವರಾದ 1) ಗಂಗಾಧರ ಪಾಟೀಲ ಎ.ಎಸ್.ಐ ಮತ್ತು 2) ಪ್ರಕಾಶ ಹೆಚ್.ಸಿ 18 (ಪಿ) ರವರೊಂದಿಗೆ ಸಕರ್ಾರಿ ಜೀಪ ನಂ. ಕೆಎ 33 ಜಿ 115 ನೆದ್ದರಲ್ಲಿ ಹೊರಟು 10-30 ಎ.ಎಮ್ ಸುಮಾರಿಗೆ ಕೃಷ್ಣಾ ನದಿ ದಡದ ಸಮೀಪ ಹೋದಾಗ ಕೃಷ್ಣಾ ನದಿ ದಂಡೆಯಲ್ಲಿ ಕೆಲವರು ಟ್ರ್ಯಾಕ್ಟರ ಟ್ರ್ಯಾಲಿಗಳಲ್ಲಿ ಮರಳು ತುಂಬುತ್ತಿದ್ದರು. ಸ್ಥಳದಲ್ಲಿ 3 ಟ್ರ್ಯಾಲಿಗಳಿದ್ದು, ಅವುಗಳಲ್ಲಿ ಸಲಿಕೆ ಪುಟ್ಟಿಗಳಿಂದ ಮರಳು ತುಂಬುತ್ತಿದ್ದರು. ನಾವು ಹೋಗಿದ್ದನ್ನು ನೋಡಿದ ಅವರು ಟ್ರ್ಯಾಲಿಗಳನ್ನು ಬಿಟ್ಟು ಅಲ್ಲಿಂದ ಓಡಿ ಹೋದರು. ಸದರಿಯವರು ಟ್ರ್ಯಾಕ್ಟರ ಇಂಜನಗಳನ್ನು ಟ್ರ್ಯಾಲಿಗಳಿಂದ ಬೇರೆ ಕಡೆ ನಿಲ್ಲಿಸಿದ್ದು, ಸದರಿ ಇಂಜನಗಳನ್ನು ನಾವು ನೋಡಿ ಆ ಕಡೆ ಹೋಗವಷ್ಟರಲ್ಲಿ ಪರಾರಿಯಾಗಿರುತ್ತಾರೆ. ಸದರಿ 3 ಟ್ರ್ಯಾಲಿಗಳಲ್ಲಿ ತಲಾ 8-10 ಪುಟ್ಟಿಯಷ್ಟು ಮರಳು ಇರುತ್ತದೆ. ಟ್ರ್ಯಾಲಿಗಳನ್ನು ಒಂದೊಂದಾಗಿ ಪರಿಶೀಲಿಸಿ, ನೋಡಲಾಗಿ 1) ಟ್ರ್ಯಾಲಿ ನೊಂದಣಿ ಸಂ. ಚೆಸ್ಸಿ ನಂ. ಇಲ್ಲ, ಕೆಂಪು ಬಣ್ಣದ ಟ್ರ್ಯಾಲಿ ಇದ್ದು, ಬಲಭೀಮೇಶ್ವರ ಇಂಜನಿಯರಿಂಗ ವಕ್ರ್ಸ ಶಹಾಪೂರ ಅಂತಾ ಬರೆದಿದ್ದು ಇರುತ್ತದೆ. 2) ನೊಂದಣಿ ಸಂ. ಚೆಸ್ಸಿ ನಂ. ಇಲ್ಲ, ಕೆಂಪು ಬಣ್ಣದ ಟ್ರ್ಯಾಲಿ ಇದ್ದು, ವಿಶ್ವಗಂಗಾ ಇಂಜನಿಯರಿಂಗ ವಕ್ರ್ಸ ಶಹಾಪೂರ ಅಂತಾ ಬರೆದಿದ್ದು ಇರುತ್ತದೆ ಮತ್ತು 3) ನೊಂದಣಿ ಸಂ. ಚೆಸ್ಸಿ ನಂ. ಇಲ್ಲ, ಕೆಂಪು ಬಣ್ಣದ ಹಳೆಯ ಟ್ರ್ಯಾಲಿ ಇದ್ದು, ಭಾರತ ಇಂಜನಿಯರಿಂಗ ವಕ್ರ್ಸ ಶಹಾಪೂರ ಅಂತಾ ಬರೆದಿದ್ದು ಇರುತ್ತದೆ. ಸದರಿ ಟ್ರ್ಯಾಲಿಗಳ ಮಾಲಿಕ/ಚಾಲಕರು ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ಸಾಗಿಸಬೇಕೆಂದು ಕೃಷ್ಣಾ ನದಿಯಿಂದ ಮರಳನ್ನು ಟ್ರ್ಯಾಲಿಗಳಲ್ಲಿ ಸಲಿಕೆ ಮತ್ತು ಪುಟ್ಟಿಗಳಿಂದ ತುಂಬಲು ಪ್ರಯತ್ನಿಸುತ್ತಿದ್ದಾಗ ನಾವು ದಾಳಿ ಮಾಡಿದ್ದನ್ನು ನೋಡಿ ಓಡಿ ಹೋಗಿರುತ್ತಾರೆ. ಕಾರಣ ಸದರಿ ಟ್ರ್ಯಾಲಿಗಳ ಚಾಲಕ ಮತ್ತು ಮಾಲಿಕರ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಕುರಿತು ನಿಮಗೆ ದೂರು ನಿಡಿದ್ದು, ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ. 54/2020 ಕಲಂ: 379, 511 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನುಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 20/2020  ಕಲಂ 279,  338 ಐಪಿಸಿ  ಸಂ.187 ಐಎಂವಿ ಆ್ಯಕ್ಟ್:- ಇಂದು ದಿನಾಂಕ 30/04/2020 ರಂದು  ಬೆಳಿಗ್ಗೆ  9 ಎ.ಎಂ ದ ಸುಮಾರಿಗೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆ ಮೇಲೆ ಬರುವ ಯಾದಗಿರಿ ಗಂಜ ಏರಿಯಾದ  ಶ್ರೀಪಾಲ್ ದಾಲ್ ಮಿಲ್ ಹತ್ತಿರ ರಸ್ತೆಯ ಬದಿಯಲ್ಲಿ ಈ ಕೇಸಿನ ಪಿಯರ್ಾದಿ ಮತ್ತು ಪಿಯರ್ಾದಿ ಮಗನಾದ ಬಸವರಾಜ ಇಬ್ಬರು ನಡೆದುಕೊಂಡು ಹೊರಟಿದ್ದಾಗ ಆರೋಪಿತನು ತನ್ನ ನಂದಿನಿ ಹಾಲು ಸರಬುರಾಜು ಮಾಡುವ ವಾಹನವನ್ನು  ಹೊಸಳ್ಳಿ ಕ್ರಾಸ್ ಕಡೆಯಿಂದ ಗಂಜ್ ಕಡೆಗೆ ನಡೆಸಿಕೊಂಡು ಹೋಗುತ್ತಿದ್ದಾಗ ಅತೀವೇಗ ಮತ್ತು ಅಲಕ್ಷ್ಯತನದಿಂದ  ನಡೆಸಿ ಪಿಯರ್ಾದಿಗೆ ನೇರವಾಗಿ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಬಲಗಾಲಿನ ಮೊಳಕಾಲು ಕೆಳಗೆ ಮುರಿದಂತಾಗಿ ಭಾರೀ ರಕ್ತಗಾಯವಾಗಿರುತ್ತದೆ, ಬಲಗಣ್ಣಿನ ಉಬ್ಬಿನ ಮೇಲೆ, ಎಡಕಣ್ಣಿನ ಕೆಳಗೆ ತರಚಿದ ಗಾಯ, ಬಲಪಕ್ಕೆಗೆ ಗುಪ್ತಗಾಯವಾಗಿದ್ದು ಇರುತ್ತದೆ. ಈ ಘಟನೆಗೆ ಕಾರಣನಾದ ವಾಹನದ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ ವಾಹನ ಸಮೇತ ಘಟನಾ ಸ್ಥಳದಿಂದ ಓಡಿ ಹೋಗಿದ್ದು ಆತನ ಮೇಲೆ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತಾ ಪಿಯರ್ಾದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 20/2020 ಕಲಂ 279, 338 ಐಪಿಸಿ ಸಂಗಡ 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 135/2020. ಕಲಂ 87 ಕೆ.ಪಿ.ಆಕ್ಟ:- ಇಂದು ದಿನಾಂಕ 30-04-2020 ರಂದು 3.30 ಪಿ.ಎಮ್ ಕ್ಕೆ  ಶ್ರೀ ವೆಂಕಟೇಶ ಡಿ.ವೈಎಸ್ಪಿ ಸುರಪುರ ಉಪ-ವಿಭಾಗ ರವರು  ಠಾಣೆಗೆ ಹಾಜರಾಗಿ  ಜ್ಞಾಪನ ನೀಡಿದ್ದೇನಂದರೆ, ಇಂದು ದಿನಾಂಕ:30-04-2020 ರಂದು 1:30 ಪಿ.ಎಂ ಕ್ಕೆ   ಭಾತ್ಮೀದಾರರಿಂದ ತಿಳಿದು ಬಂದಿದ್ದೇನೆಂದರೆ,  ಶಾರದಳ್ಳಿ ಗ್ರಾಮದ ಹೊರಗಡೆ ಹುಣಸೇ ಮರದ ಕೆಳಗಡೆ  ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ್-ಬಾಹರ್ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಭಾತ್ಮೀ ಬಂದಿದ್ದರಿಂದ ಸದರಿ ವಿಷಯವನ್ನು ಖಚಿತಪಡಿಸಿಕೊಂಡು ನಂತರ ಶಹಾಪೂರ ಪೊಲೀಸ್ ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರಕ್ಕೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ಇದ್ದ ಜ್ಞಾಪನ ಪತ್ರವನ್ನು ಸ್ವೀಕರಿಸಿಕೊಂಡು ಠಾಣೆ ಗುನ್ನೆ ನಂ. 135/2020 ಕಲಂ 87 ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ
    ನಂತರ ದಾಳಿ ಮಾಡಿ ಒಟ್ಟು 14 ಜನ ಆರೋಪಿತರನ್ನು ದಸ್ತಗಿರಿ ಮಾಡಿಕೊಂಡು 32,640/- ರೂ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಮತ್ತು 1 ಬಿಳಿ ಬಣ್ಣದ ಬರಕಾವನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 136/2020 ಕಲಂ 87  ಕೆ.ಪಿ ಆಕ್ಟ:- ಇಂದು ದಿನಾಂಕ 30/04/2020   ರಂದು ಸಾಯಂಕಾಲ 18-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಹನುಮರಡ್ಡೆಪ್ಪ ಪಿ.ಐ  ಶಹಾಪೂರ ಪೊಲೀಸ್ ಠಾಣೆ ಇವರು 06 ಜನ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಇಂದು ದಿನಾಂಕ 30/04/2020   ರಂದು ಮದ್ಯಾಹ್ನ 15-15 ಗಂಟೆಗೆ ಠಾಣೆಯಲ್ಲಿದ್ದಾಗ  ದೋರನಳ್ಳಿ ಗ್ರಾಮದ ಸಿದ್ದಾರೂಢ ಮಠದ ಹತ್ತಿರ ಕೆಲವು ಜನರೂ ಇಸ್ಪೇಟ್ ಎಲೆಗಳ ಸಹಾಯದಿಂದ ಅದರ-ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ  ಫಿರ್ಯಾದಿಯವರು ತಮ್ಮ ಜೊತೆಯಲಿ ಠಾಣೆಯ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-0138 ನೇದ್ದರಲ್ಲಿ ಹೋಗಿ ದಾಳಿ ಮಾಡಿ 06 ಜನ ಆಪಾಧಿತರನ್ನು ಹಿಡಿದು ಆಪಾಧಿತರಿಂದ  ಜೂಜಾಟಕ್ಕೆ ಬಳಸಿದ ನಗದು ಹಣ 2700=00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 136/2020 ಕಲಂ 87 ಕೆ.ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡಿರುತ್ತದೆ.  ಶೋರಾಪೂರ  ಪೊಲೀಸ್ ಠಾಣೆ ಗುನ್ನೆ ನಂ:-  116/2019 ಕಲಂ 32 34 ಕನರ್ಾಟಕ ಅಭಕಾರಿ ಕಾಯ್ದೆ 1965:- ಇಂದು ದಿನಾಂಕ: 30/04/2020 ರಂದು 8:30 ಪಿ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀ ಚಂದ್ರಶೇಖರ ಪಿಎಸ್ಐ (ಕಾಸು-2) ಸಾಹೇಬರು ಇಬ್ಬರು ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲನ್ನು ಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:30/04/2020 ರಂದು ಸಾಯಂಕಾಲ 4:30 ಗಂಟೆ ಸುಮಾರಿಗೆ ಠಾಣೆಯಲ್ಲಿದ್ದಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ ಸುರಪುರ ನರಸಿಂಗಪೇಟ್ದ ಹೌಸಿಂಗ ಬೊರ್ಡ ಕಾಲೋನಿ ಹತ್ತಿರ ರಸ್ತೆಯ ಪಕ್ಕದಲ್ಲಿ ಕುಳಿತುಕೊಂಡು ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಮಧ್ಯದವನ್ನು ಸಂಗ್ರಹಿಸಿ ಹೊಗಿ ಬರುವ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮಲ್ಲಯ್ಯ ಸಿಪಿಸಿ-51 ಇವರನ್ನು ಕರೆದು ಅವರಿಗೆ ವಿಷಯ ತಿಳಿಸಿ ದಾಳಿ ಕುರಿತು ಹೋಗೊಣ ಅಂತಾ ಹೇಳಿ ಮಂಜುನಾಥ ಹೆಚ್ಸಿ-176 ಇವರ ಸಹಾಯದಿಂದ ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದ್ರಿ ವ|| 56 ವರ್ಷ ಜಾ|| ಮುಸ್ಲಿಂ ಉ|| ಡ್ರೈವರ ಸಾ|| ದೇವಾಪೂರ 2) ಕೃಷ್ಣಪ್ಪ ತಂದೆ ಅಯ್ಯಪ್ಪ ಡೊಳ್ಳ ವ|| 55 ವರ್ಷ ಜಾ|| ಕುರಬರ ಉ|| ಕೂಲಿಕೆಲಸ ಸಾ|| ವೆಂಕಟಾಪೂರ ಇವರನ್ನು 5 ಪಿ.ಎಂ.ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ಸದರಿ ಜಪ್ತಿ ಪಂಚನಾಮೆ ಕಾಲಕ್ಕೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿದ್ದು, ಸದರಿ ಪಂಚರು ಸಿಬ್ಬಂಧಿಯರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ. ಕೆಎ-33 ಜಿ-0094 ನೇದ್ದರಲ್ಲಿ 5:15 ಪಿ.ಎಂ.ಕ್ಕೆ ಠಾಣೆಯಿಂದ ಹೊರಟು ನರಸಿಂಗಪೇಟ್ ಹೌಸಿಂಗ ಬೊರ್ಡ ಕಾಲೋನಿ ಹತ್ತಿರ ಹೊಗಿದ್ದಂತೆ ಸ್ವಲ್ಪ ದೂರದಲ್ಲಿ ಜೀಪ್ ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಹೌಸಿಂಗ ಬೋರ್ಡ ಹತ್ತಿರ ರಸ್ತೆಯ ಪಕ್ಕದಲ್ಲಿ ಕುಳಿತುಕೊಂಡು ಒಂದು ಪ್ಲಾಸ್ಟಿಕ್ ಚೀಲ್ದಲ್ಲಿ ಮದ್ಯವನ್ನು ಸಂಗ್ರಹಿಸಿ ಹೊಗಿ ಬರುವ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ಅವರನ್ನು 5:45 ಪಿಎಂ ಕ್ಕೆ ಹಿಡಿದುಕೊಂಡಿದ್ದು, ಸಾರ್ವಜನಿಕರು ಓಡಿ ಹೊಗಿದ್ದು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಹೆಸರು ವಿಳಾಸ ವಿಚಾರಿಸಲು 1) ದೇವಣ್ಣ ತಂದೆ ಶಂಕ್ರಣ್ಣ ಪಾಸವಡಿ ವ|| 26 ವರ್ಷ ಜಾ|| ಉಪ್ಪಾರ ಉ|| ಸರಕಾರಿ ಆಸ್ಪತ್ರೆಯಲ್ಲಿ ನೌಕರ ಸಾ|| ತೆಗ್ಗಳ್ಳಿ ಹಾ||ವ||ಸುರಪುರ 2) ವಿನಯ ತಂದೆ ಶ್ರೀನಿವಾಸ ಕುಲ್ಕಣರ್ಿ ವ|| 26 ವರ್ಷ ಜಾ|| ಬ್ರಾಹ್ಮಣ ಉ|| ಕೆ.ಇ.ಬಿ ಯಲ್ಲಿ ಲೈನ್ ಮ್ಯಾನ ನೌಕರ ಸಾ|| ಪಾಂಡುರಂಗ ಗುಡಿಯ ಹತ್ತಿರ ಸುರಪುರ ಅಂತಾ ತಿಳಿಸಿದರು, ಸದರಿ ಮದ್ಯವನ್ನು ವೆಂಕಟೇಶ ಜಾಹಾಗಿರದಾರ ಸಾ|| ಅರಕೇರಾ (ಜೆ) ಇತನಿಂದ ತಂದಿರುವದಾಗಿ ಹೇಳಿದರು ಸದರಿಯವರಿಗೆ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ಪರವಾನಿಗೆ ಕೇಳಲು ತನ್ನ ಹತ್ತಿರ ಯಾವುದೆ ಪರವಾನಿಗೆ ಇರುವದಿಲ್ಲ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವದಾಗಿ ತಿಳಿಸಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಒಂದು ಪ್ಲಾಸ್ಟೀಕ ಚೀಲದಲ್ಲಿ 180 ಎಮ್.ಎಲ್ನ 30 ಬ್ಯಾಗ ಪೆಪರ ಡಿಲಕ್ಷ ವಿಸ್ಕಿ ಪೌಚಗಳಿದ್ದು, ಪ್ರತಿಯೊಂದಕ್ಕೆ 90.21/- ರೂಗಳು ಒಟ್ಟು 2706.3/- ರೂಗಳ ಕಿಮ್ಮತ್ತಿನ ಒಟ್ಟು 5400 ಎಮ್ಎಲ್ನ ಮಧ್ಯವಿದ್ದು ಅವರ ಹತ್ತಿರ ಮದ್ಯ ಮಾರಾಟ ಮಾಡಿದ ನಗದು ಹಣ 320/- ರೂಗಳು ದೋರೆತಿದ್ದು, ಹಾಗೂ ಸ್ಥಳದಲ್ಲಿದ್ದ ಒಂದು ಹೊಂಡಾ ಕಂಪನಿಯ ಮೋಟರ್ ಸೈಕಲ್ ನಂ. ಕೆಎ-28 ಇಡಿ-3619 ನೇದ್ದು ಅ.ಕಿ 50,000/- ರೂಗಳು, ಸದರಿ ಮದ್ಯದ ಪೌಚಗಳಲ್ಲಿ ಒಂದು 180 ಎಮ್.ಎಲ್.ನ ಮದ್ಯದ ಪೌಚನ್ನು ರಾಸಾಯನಿಕ ತಜ್ಞರ ಪರೀಕ್ಷೆಗಾಗಿ ಪಂಚರ ಸಮಕ್ಷಮ ಪ್ರತ್ಯೇಕವಾಗಿ ತಗೆದುಕೊಂಡು ಅದನ್ನು ಒಂದು  ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಬಾಯಿ ಹೊಲೆದು ಅದರ ಮೇಲೆ ಕೆ.ಎಲ್.ಆರ್ ಎಂಬ ಇಂಗ್ಲೀಷ ಅಕ್ಷರವುಳ್ಳ ಮುದ್ರೆಯನ್ನು ಅರಗಿನಲ್ಲಿ ಶಿಲ್ ಮಾಡಿ, ಪಂಚರು ಹಾಗು ನಾನು ಸಹಿ ಮಾಡಿ ಚೀಟಿ ಅಂಟಿಸಿದ್ದು,  ಉಳಿದ ಮದ್ಯದ ಪೌಚ್ಗಳನ್ನು ಜಪ್ತಿಪಡಿಸಿಕೊಂಡು ಒಂದು ಬಿಳಿ ಬಣ್ಣದ ಪ್ಲಾಸ್ಟೀಕ ಚೀಲದಲ್ಲಿ ಹಾಕಿ ಪಂಚರು ಹಾಗು ನಾನು ಸಹಿ ಮಾಡಿ ಚೀಟಿ ಅಂಟಿಸಿದ್ದು ಇರುತ್ತದೆ. ಸದರಿ ಆರೋಪಿತರು ಮಧ್ಯ ಮಾರಾಟದ ಬಗ್ಗೆ ಯಾವುದೆ ಪರವಾನಿಗೆ ಪಡೆಯದೆ ಅಕ್ರಮವಾಗಿ ಸಂಗ್ರಹಿಸಿ ಚಿಲ್ಲರೆಯಾಗಿ ಮಾರಾಟ ಮಾಡುತ್ತಿದ್ದು ಇರುತ್ತದೆ. ಸದರಿ ಪಂಚನಾಮೆಯನ್ನು 5:45 ಪಿ.ಎಮ್ ದಿಂದ 6:45 ಪಿ.ಎಮ್ ವರೆಗೆ ಸ್ಥಳದಲ್ಲಿಯೆ ಪಂಚನಾಮೆ ಮಾಡಿಕೊಂಡು, ನಂತರ ಮುದ್ದೆಮಾಲಿನೊಂದಿಗೆ ಠಾಣೆಗೆ 7:30 ಪಿ.ಎಮ್ ಕ್ಕೆ ಬಂದಿದ್ದು ಸದರಿ ಆರೋಪಿತರ ಮೇಲೆ ಕಲಂ. 32, 34 ಕನರ್ಾಟಕ ಅಬಕಾರಿ ಕಾಯ್ದೆ 1965 ರಿತ್ಯ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಲು ಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.116/2020 ಕಲಂ: 32 34 ಕೆ.ಇ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದ
ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!