ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 29/04/2020

By blogger on ಬುಧವಾರ, ಏಪ್ರಿಲ್ 29, 2020                                 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 29/04/2020 
                                                                                                         
ಶಹಪೂರ ಪೊಲೀಸ ಠಾಣೆ ಗುನ್ನೆ ನಂ:- 132/2020. ಕಲಂ 279, 338 ಐ.ಪಿ.ಸಿ.  :-  ದಿನಾಂಕ: 21-04-2020 ರಂದು 7:30 ಪಿ.ಎಮ್.ಕ್ಕೆ  ಆರೋಪಿತನು ತನ್ನ ಮೊಟಾರ ಸೈಕಲ್ನಂ. ಕೆ.ಎ.33-ಆರ್.6329 ನೇದ್ದನ್ನು ಹತ್ತಿಗುಡೂರು ಕಡೆಯಿಮದ ಅತೀವೆಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಹಳ್ಳದ ಬ್ರಿಡ್ಜ ಹತ್ತಿರ ನಡೆದುಕೊಮಡು ಹೊರಟ ಶ್ರೀ ರವಿ ತಂದೆ ಮಹಾದೇವಪ್ಪ ಬಡಿಗೇರ ಈತನಿಗೆ ಡಿಕ್ಕಿ ಪಡಿಸಿ ಕೆಳಗೆ ಬೀಳಿಸಿ ಭಾರೀ ಗಾಯ ಮಾಡಿರುತ್ತಾನೆ  ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಉಪಚಾರ ಕೊಡಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡುತ್ತಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ  ಅಂತಾ ಇದ್ದ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.132/2020 ಕಲಂ. 279, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 133/2020 ಕಲಂ 87  ಕೆ.ಪಿ ಆಕ್ಟ:- ಇಂದು ದಿನಾಂಕ 29/04/2020   ರಂದು ಸಾಯಂಕಾಲ 18-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಹನುಮರಡ್ಡೆಪ್ಪ ಪಿ.ಐ  ಶಹಾಪೂರ ಪೊಲೀಸ್ ಠಾಣೆ ಇವರು 07 ಜನ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಇಂದು ದಿನಾಂಕ 29/04/2020   ರಂದು ಮದ್ಯಾಹ್ನ 15-15 ಗಂಟೆಗೆ ಠಾಣೆಯಲ್ಲಿದ್ದಾಗ  ದೋರನಳ್ಳಿ ಗ್ರಾಮದ ಸಿದ್ದಾರೂಢ ಮಠದ ಹತ್ತಿರ ಕೆಲವು ಜನರೂ ಇಸ್ಪೇಟ್ ಎಲೆಗಳ ಸಹಾಯದಿಂದ ಅದರ-ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ  ಫಿರ್ಯಾದಿಯವರು ತಮ್ಮ ಜೊತೆಯಲಿ ಠಾಣೆಯ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ ಕೆಎ-333-ಜಿ-0138 ನೇದ್ದರಲ್ಲಿ ಹೋಗಿ ದಾಳಿ ಮಾಡಿ 07 ಜನ ಆಪಾಧಿತರನ್ನು ಹಿಡಿದು ಆಪಾಧಿತರಿಂದ  ಜೂಜಾಟಕ್ಕೆ ಬಳಸಿದ ನಗದು ಹಣ 19120=00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 133/2020 ಕಲಂ 87 ಕೆ.ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡಿರುತ್ತದೆ.ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:-134/2020 ಕಲಂ: 188, 269 ಐಪಿಸಿ:- ಇಂದು ದಿನಾಂಕ; 29/04/2020 ರಂದು 20-00 ಗಂಟೆಗೆ ಸ||ತ|| ಪಿಯರ್ಾದಿ ಶ್ರೀ ಸುನೀಲ್ ಪಿ.ಸಿ.221 ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ವರದಿ ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಕರೋನಾ ವೈರಸ್ (ಕೋವಿಡ-19) ಲಾಕಡೌನ್ ಪ್ರಯುಕ್ತ ಪರೀಷ್ಕೃತ ಆಧೇಶ ಸಂ.ಕಂ.ಕೋ:33:2019-20 ದಿನಾಂಕ.15/04/2020 ರ ಆಧೇಶ ಹೋರಡಿಸಿದ್ದು ಇರುತ್ತದೆ. ಶಹಾಪೂರ ನಗರದಲ್ಲಿ ಕೊರೋನಾ ವೈರಸ ಹರಡದಂತೆ ಮುಂಜಾಗೃತ ಕ್ರಮಕ್ಕಾಗಿ ಇಂದು ದಿನಾಂಕ; 29/04/2020 ರಂದು ಮದ್ಯಾಹ್ನ 2-00 ಗಂಟೆಗೆ ಹಳೆ ಬಸ್ಸ ನಿಲ್ದಾಣಮುಂದೆ ಪಾಯಿಂಟಗೆ ಬ/ಬ ಕರ್ತವ್ಯಕ್ಕೆ ನನಗೆ ಮತ್ತು ಪರಶೂರಾಮ ಹೆಚ್.ಜಿ. 189. ಜೆಟ್ಟೆಪ್ಪ ಹೆಚ್.ಜಿ. 210. ರವರಿಗೆ ಕರ್ತವ್ಯಕ್ಕೆ ನೇಮಿಸಿದ್ದು ಸದರಿ ಕರ್ತವ್ಯಕ್ಕೆ ನಾನು ಮತ್ತು ಪರಸುರಾಮ ಹೆಚ್.ಜಿ. 189. ಜೆಟ್ಟೆಪ್ಪ ಹೆಚ್.ಜಿ. 210 ರವರು ಸದರಿ ಬಸ್ಸ ನಿಲ್ದಾಣದ ಮುಂದಿನ ಪಾಯಿಂಟಗೆ ಹೋಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಾಯಂಕಾಲ 6-30 ಗಂಟೆಯ ಸುಮಾರಿಗೆ ಚಾಮನಾಳ ಕಾಂಪ್ಲೇಕ್ಸ ಮುಂದೆ ಇರುವ ಪಾನ ಶಾಪ ತೆರೆದು ಸಾರ್ವಜನಿಕರಿಗೆ ಗುಂಪುಗುಡಿಸಿ ವ್ಯಾಪಾರ ಮಾಡುತ್ತಿದ್ದರು ನಾವು ನೋಡಿ ಅಲ್ಲಿಗೆ ಹೋದಾಗ ಸದರಿ ಪಾನಶಾಪನಲ್ಲಿ ವಸ್ತಗಳನ್ನು ತೆಗೆದುಕೊಳ್ಳುತ್ತಿದ್ದವರು ನಮ್ಮನ್ನು ನೋಡಿ ಓಡಿ ಹೋದರು ಅಗತ್ಯ ದಿನಬಳಕೆಯ ವಸ್ತುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಂಗಡಿಗಳು ತೆರೆಯಬಾರದು ಅಂತಾ ಸಕರ್ಾರದ ಆದೇಶವಿದ್ದರೂ ಕೂಡಾ ಅವದಿ ಮೀರಿ ಪಾನಶಾಪ ತೆರದು ವ್ಯಾಪಾರ ಮಾಡುತ್ತಿದ್ದರು ಸದರಿ ಪಾನಶಾಪದಲ್ಲಿ ಇದ್ದವರಿಗೆ ವಿಚಾರಿಸಲು ತಮ್ಮ ಹೆಸರು 1] ಮಹ್ಮದ್ ಹುಸೇನ ತಂದೆ ಮಹ್ಮದ ಖಾಜಾ ಹುಸೇನ್ ಖುರೇಶಿ ವ|| 52 ಜಾ|| ಮುಸ್ಲಿಂ ಉ|| ವ್ಯಾಪಾರ ಸಾ|| ಚಾಮನಾಳ ಹಾ|| ವ|| ಚಾಮನಾಳ ಕಾಂಪ್ಲೆಕ್ಸ ಶಹಾಪೂರ 2] ಮಹ್ಮದ ಖಾಲಿದ ತಂದೆ ಮಹ್ಮದ ಖಾಜಾ ಹುಸೇನ್ ಖುರೇಶಿ ವ|| 35 ಜಾ|| ಮುಸ್ಲಿಂ ಉ|| ವ್ಯಾಪಾರ ಸಾ|| ಚಾಮನಾಳ ಹಾ|| ವ|| ಚಾಮನಾಳ ಕಾಂಪ್ಲೆಕ್ಸ ಶಹಾಪೂರ ಅಂತಾ ತಿಳಿಸಿದರು ಸದರಿಯವರು ಸಕರ್ಾರದ ಆದೇಶ ಉಲ್ಲಂಘನೆ ಮಾಡಿ ವ್ಯಾಪಾರ ಮಾಡುತ್ತಿದ್ದು ಜನರು ಗುಂಪಾಗಿ ಸೇರುವದರಿಂದ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ವೈರಸ್ ಸೊಂಕು ಹರಡುವ ಸಂಭವಿರುವ ಬಗ್ಗೆ ತಿಳಿದ್ದಿದ್ದು ಸಹ ವಿದಿ ವಿರುದ್ದವಾಗಿ ಜನರನ್ನು ಸೇರಿಸಿ ಪಾನಶಾಪ ತೆರೆದು ವಸ್ತುಗಳನ್ನು ಮಾರಾಟ ಮಾಡಿ  ಕೃತ್ಯವೆಸಗಿದ್ದು ಇರುತ್ತದೆ.  ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.134/2020 ಕಲಂ 188, 269 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:-113/2020 ಕಲಂ 379 ಐ.ಪಿ.ಸಿ.  ಮತ್ತು ಕಲಂ. 44(1) ಕೆ.ಎಮ್.ಎಮ್.ಸಿ.ಆರ್.ಆಕ್ಟ 1994:- ಇಂದು ದಿನಾಂಕ:29-04-2020 ರಂದು 08:45 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಸಾಹೇಬಗೌಡ ಎಂ ಪಾಟೀಲ್ ಪಿಐ ಸುರಪೂರ ಪೊಲೀಸ್ ಠಾಣೆ ಸಾಹೇಬರು ಮೂರು ಮರಳು ತುಂಬಿದ ಟ್ಯಾಕ್ಟರಗಳೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ ಸಾರಾಂಶವೆನೆಂದರೆ, ಇಂದು ದಿನಾಂಕ:29-04-2020 ರಂದು 5-30 ಎ.ಎಮ್ ಸುಮಾರಿಗೆ ನಾನು ಸಂಗಡ ಶ್ರೀ ಮಂಜುನಾಥ ಹೆಚ್ಸಿ-176, ಶ್ರೀ ಶರಣಪ್ಪ ಸಿಪಿಸಿ-224 ರವರೊಂದಿಗೆ ಗಾಂದಿ ಚೌಕದಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಯಾರೋ ಮೂವರು ವ್ಯಕ್ತಿಗಳು ತಮ್ಮ ಟ್ಯಾಕ್ಟರದಲ್ಲಿ ಕನರ್ಾಳ  ಸೀಮಾಂತರದ ಕೃಷ್ಣಾ ನಧಿ ಪಾತ್ರದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ರುಕ್ಮಾಪೂರ ಕ್ರಾಸ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ಸಂಗಡ ಇದ್ದ ಶ್ರೀ ಮಂಜುನಾಥ ಹೆಚ್ಸಿ-176, ಶ್ರೀ ಶರಣಪ್ಪ ಸಿಪಿಸಿ-224 ಹಾಗೂ ಜೀಪ ಚಾಲಕನಾದ ಶ್ರೀ ಮಾಹಾಂತೇಶ ಎಪಿಸಿ-48 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ ರವರಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಬರಲು ಸೂಚಿಸಿದ ಮೇರೆಗೆ ಮಂಜುನಾಥ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದ್ರಿ ವ|| 56 ವರ್ಷ ಜಾ|| ಮುಸ್ಲಿಂ ಉ|| ಡ್ರೈವರ ಸಾ|| ದೇವಾಪೂರ 2) ಕೃಷ್ಣಪ್ಪ ತಂದೆ ಅಯ್ಯಪ್ಪ ಡೊಳ್ಳ ವ|| 55 ವರ್ಷ ಜಾ|| ಕುರಬರ ಉ|| ಕೂಲಿಕೆಲಸ ಸಾ|| ವೆಂಕಟಾಪೂರ ಇವರನ್ನು ಬೆಳಿಗ್ಗೆ 06:00 ಗಂಟೆಗೆ ಗಾಂದಿ ಚೌಕ ಹತ್ತಿರ ಕರೆದುಕೊಂಡು ಬಂದಿದ್ದು, ಸದರಿ ಪಂಚರಿಗೆ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಪಂಚರು ಮತ್ತು ಸಿಬ್ಬಂಧಿಯೊಂದಿಗೆ ನಮ್ಮ ಠಾಣೆಯ ಸಕರ್ಾರಿ ಜೀಪ ನಂಬರ ಕೆಎ-33 ಜಿ-0238 ನೇದ್ದರಲ್ಲಿ ಕುಳಿತುಕೊಂಡು ಬೆಳಿಗ್ಗೆ 06:15 ಕ್ಕೆ ಗಾಂದಿಚೌಕದಿಂದ ಹೊರಟು ಬೆಳಿಗ್ಗೆ 06:50 ಗಂಟೆಗೆ ರುಕ್ಮಾಪೂರ ಕ್ರಾಸ ಹತ್ತಿರ ಹೋಗಿ ನಮ್ಮ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ನಿಂತುಕೊಂಡೆವು. ಅಂದಾಜ ಬೆಳಿಗ್ಗೆ 07:00 ಗಂಟೆಗೆ ರುಕ್ಮಾಪೂರ ಕಡೆಯಿಂದ ಮೂರು ಟ್ಯಾಕ್ಟರಗಳ ಚಾಲಕರು ತಮ್ಮ ಟ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ಸಿಬ್ಬಂಧಿಯವರ ಸಹಾಯದಿಂದ ಸದರಿ ಟ್ಯಾಕ್ಟರಗಳ ಚಾಲಕರಿಗೆ ಕೈ ಮಾಡಿ ನಿಲ್ಲಿಸಲು ಸೂಚಿಸಿದಾಗ ಮೂರು ಟ್ಯಾಕ್ಟರ ಚಾಲಕರು ನಮ್ಮ ಪೊಲೀಸ್ ಜೀಪನ್ನು ನೋಡಿ ತಮ್ಮ ಮೂರು ಟ್ಯಾಕ್ಟರಗಳನ್ನು ನಮ್ಮಿಂದ ಸ್ವಲ್ಪ ಅಂತರದ ರೋಡಿನ ಸೈಡಿನಲ್ಲಿ ನಿಲ್ಲಿಸಿ ಕೆಳಗೆ ಇಳಿದು ರಸ್ತೆಯ ಪಕ್ಕದಲ್ಲಿ ಓಡಿ ಹೋದರು. ನಂತರ ನಾನು ಪಂಚರ ಸಮಕ್ಷಮ ಸದರಿ ಟ್ಯಾಕ್ಟರಗಳ ಹತ್ತಿರ ಹೋಗಿ ಪರೀಶಿಲಿಸಿ ನೋಡಲು. 1) ಒಂದು ಮಹೇಂದ್ರ 415 ಆ ಕಂಪನಿ ಟ್ಯಾಕ್ಟರ ಇದ್ದು ಅದರ ಇಂಜಿನ್ ನಂ. ಚಏಇ4ಙಂಂ5467 ಚೆಸ್ಸಿ ನಂ. ಒಃಓಂಂಂಗಿಃಇಏಚಇ01510 ಇದ್ದು ಟ್ರಾಲಿಗೆ ನಂಬರ ಇರುವುದಿಲ್ಲ. ಅದರಲ್ಲಿ 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆ. 2) ಒಂದು ಸ್ವರಾಜ್ಯ 735 ಈಇ ಕಂಪನಿಯ ಟ್ಯಾಕ್ಟರ ಇದ್ದು ಅದರ ಇಂಜಿನ್ ನಂಬರ 39.1354/ಈಇ002482ಂ  ಚೆಸ್ಸಿ ನಂ. ಘಙಖಿಇ31419126315   ಇದ್ದು ಟ್ರಾಲಿಗೆ ನಂಬರ ಇರುವುದಿಲ್ಲ. ಟ್ರಾಲಿಯಲ್ಲಿ 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆೆ. 3) ಒಂದು ಸ್ವರಾಜ್ಯ 735 ಈಇ ಕಂಪನಿಯ ಟ್ಯಾಕ್ಟರ ಇದ್ದು ಅದರ ಇಂಜಿನ್ ನಂಬರ 39.1354/ಇಊ006464ಂ  ಚೆಸ್ಸಿ ನಂ. ಘಗಿಖಿಏ31419112742  ಇದ್ದು ಟ್ರಾಲಿಗೆ ನಂಬರ ಇರುವುದಿಲ್ಲ. ಟ್ರಾಲಿಯಲ್ಲಿ 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆೆ. ಹೀಗೆ ಒಟ್ಟು ಮೂರು ಟ್ಯಾಕ್ಟರದಲ್ಲಿಯ ಒಟ್ಟು 06 ಘನ ಮೀಟರ ಮರಳು ಇದ್ದು ಅದರ ಅ.ಕಿ 4800/- ರೂಗಳು ಆಗುತ್ತದೆ.  ಮರಳು ತುಂಬಿದ ಎರಡು ಟ್ಯಾಕ್ಟರಗಳನ್ನು ಪಂಚರ ಸಮಕ್ಷಮ 07:00 ಎ.ಎಮ್ ದಿಂದ 08:00 ಎ.ಎಮ್.ದವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡು ಟ್ಯಾಕ್ಟರಗಳನ್ನು ಜಪ್ತಿ ಪಡಿಸಿಕೊಂಡು ತಾಬಾಕ್ಕೆ ತಗೆದುಕೊಂಡಿದ್ದು ಇರುತ್ತದೆ. ಕಾರಣ ಸದರಿ ಮೂರು ಟ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಂದಾಜು 4800/- ರೂ.ಗಳ ಕಿಮ್ಮತ್ತಿನ ಅಂದಾಜು 06 ಘನ ಮೀಟರ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಮೂರು ಮರಳು ತುಂಬಿದ ಟ್ಯಾಕ್ಟರಗಳನ್ನು ಖಾಸಗಿ ಚಾಲಕರ ಸಹಾಯದಿಂದ ಠಾಣೆಗೆ ಬೆಳಿಗ್ಗೆ 08:45 ಎ.ಎಂ.ಕ್ಕೆ ತಂದು ಒಪ್ಪಿಸಿ ವರದಿಯೊಂದಿಗೆ ಜಪ್ತಿ ಪಂಚನಾಮೆಯನ್ನು ನೀಡಿದ್ದು, ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ  ನಂ. 113/2020 ಕಲಂ: 379 ಐಪಿಸಿ ಮತ್ತು 44(1) ಕೆ.ಎಂ.ಎಂ.ಸಿ.ಆರ್ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 114/2020 ಕಲಂ 465,468,471,188 ಐಪಿಸಿ:-           ಇಂದು ದಿನಾಂಕ:29-04-2020 ರಂದು 6 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಮೌನೇಶ ತಂದೆ ವಿರಭದ್ರಪ್ಪ ಕಂಬಾರ (ಕ್ರಿಪ್ರ ಸಂಚಾರಿ ಧಳ ಕೊವೀಡ್-19) ಪ್ಲಾಯಿಂಗ ಸ್ಕಾಡ್ ಸುರಪೂರ ಇವರು ಠಾಣೆಗೆ ಬಂದು ಒಂದು ಗಣಕೀಕೃತ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ, ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಕೋವಿಡ್-19 ರೋಗ ನಿಯಂತ್ರಣ ಕುರಿತು ತಂಡವನ್ನು ನೇಮಕ ಮಾಡಿದ್ದು ನಮ್ಮ ತಂಡದಲ್ಲಿ ನನ್ನೊಂದಿಗೆ ಶ್ರೀ ಶಿವಪ್ಪ ತಂದೆ ಬೀಮಪ್ಪ ತಳವಾರ ವಯಾ:48 ಉ:ಕಿರಿಯ ಅಭಿಯಂತರರು ಕಾಡಾ ಹಸನಾಪೂರ ಕ್ಯಾಂಪ ಇವರು ಸದಸ್ಯರಾಗಿದ್ದು ಇರುತ್ತದೆ. ದಿನಾಂಕ: 28-04-2020 ರಂದು ಸುಮಾರು ಮಧ್ಯಾಹ್ನ 12:30 ಗಂಟೆ ಸುಮಾರಿಗೆ ನಾನು ನಮ್ಮ ಸದಸ್ಯರಾದ ಶಿವಪ್ಪ ತಳವಾರ ಸುರಪೂರದಲ್ಲಿರುವಾಗ ನಮಗೆ ಮಾಹಿತಿ ತಿಳಿದಿದ್ದೆನೆಂದರೆ ಸುರಪೂರದ ಕನರ್ಾಟಕ ಬ್ಯಾಂಕ ಹತ್ತಿರ ಇರುವ ಶಸಿ ಜರಾಕ್ಷ ಸೆಂಟರದಲ್ಲಿ ಮಾನ್ಯ ಸಹಾಯಕ ಆಯುಕ್ತರು ಯಾದಗಿರಿ ಇವರ ಸಹಿಉಳ್ಳ ಜಿಲ್ಲಾಡಳಿತ ಯಾದಗಿರಿ ಜಿಲ್ಲೆ ''ಅಔಗಿಆ-19 ಇಒಇಖಉಇಓಅಙ ಗಿಇಊಅಐಇ ಕಂಖಖ ''ಪಾಸನ್ನು ನಕಲಿಯಾಗಿ ಮುದ್ರಿಸುತ್ತಿದ್ದಾರೆ. ಅಂತಾ ಮಾಹಿತಿ ಮೇರೆಗೆ ನಾವು ಹಾಗೂ ಸುರಪೂರದ ತಹಸೀಲ್ದಾರರಾದ ಶ್ರೀ ನಿಂಗಣ್ಣ ಬಿರೆದಾರ ಮೂವರು ಮಧ್ಯಾಹ್ನ 1 ಗಂಟೆಗೆ ಶಶಿ ಜರಾಕ್ಷ ಅಂಗಡಿಗೆ ಹೋಗಿ ದಾಳಿ ಮಾಡಲು ಶಸಿ ಜರಾಕ್ಷ ಅಂಗಡಿಗೆ ಹೋಗಿ ನೋಡಲು ಅಲ್ಲಿ ಮೂರು ಕೊವಿಡ್-19 ಎಮರಜೇನ್ಸಿ ವೈಕಲ್ ಆನ್ ಡ್ಯೂಟಿ ಪಾಸಗಳು ದೊರೆತಿದ್ದು, ಅವುಗಳ ಮೇಲೆ ನಗರಸಭೆ ಸುರಪೂರ ಗಖಉಇಓಖಿ ಔಓ ಆಗಖಿಙ ಅಔಗಿಆ-19  ಅಂತಾ  ಪ್ರಿಂಟ ಮಾಡಿಸಿದ್ದರು ಆಗ ಅಲ್ಲೆ ಇದ್ದ ಒಬ್ಬ ವ್ಯಕ್ತಿಗೆ ವಿಚಾರಿಸಲು ನಗರಸಭೆ ಸುರಪೂರದ ಜೀವನ್ ಮತ್ತು ಸುನೀಲ ಇವರು ನಮಗೆ ಪ್ರಿಂಟ ಮಾಡಲು ತಿಳಿಸಿರುತ್ತಾರೆ ಅಂತಾ ಹೇಳಿ ಅವನು ಅಲ್ಲಿಂದ ಓಡಿಹೊದನು. ನಂತರ ತಹಸೀಲ್ದಾರ ಸಾಹೇಬರು ನಾವು ಪ್ರಿಂಟ ಮಾಡಿದ ಮೂರು ಪಾಸಗಳನ್ನು ತಾಬಾಕ್ಕೆ ತಗೆದುಕೊಂಡಿದ್ದು ಅವುಗಳನ್ನು ಈ ಕೂಡಾ ಲಗತ್ತಿಸಿ ಸಲ್ಲಿಸಿದ್ದು, ನಗರ ಸಭೆ ಸುರಪೂರವರಿಗೆ ವಿಚಾರ ಮಾಡಿ ಇಂದು ಠಾಣೆಗೆ ಬಂದು ದೂರು ಸಲ್ಲಿಸಿದ್ದು, ನಗರಸಭೇಯ ಜೀವನ್ ಮತ್ತು ಸುನೀಲ ಹಾಗೂ ಶಶಿ ಜರಾಕ್ಷ ಸೆಂಟರ ಮೂವರು ಕೂಡಿ ವಂಚನೆ ಮಾಡುವ ಉದ್ದೇಶದಿಂದ ಸಹಾಯಕ ಆಯುಕ್ತರರ ಸಹಿ ಉಳ್ಳ ಗುರುತಿನ ಪಾಸಗಳನ್ನು ಪ್ರಿಂಟ ಮಾಡಿದ್ದು, ಮೂವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಶೋರಾಪೂರ  ಪೊಲೀಸ್ ಠಾಣೆ ಗುನ್ನೆ ನಂ:- 115/2020 ಕಲಂ: 87 ಕೆ.ಪಿ.ಕಾಯ್ದೆ;- ಇಂದು ದಿನಾಂಕ: 29/04/2020 ರಂದು 8:15 ಪಿ.ಎಮ್. ಕ್ಕೆ ನಾನು ಠಾಣೆಯಲ್ಲಿದ್ದಾಗ ಶ್ರೀ ಚೇತನ್ ಪಿ.ಎಸ್.ಐ (ಕಾ&ಸು-1) ಸಾಹೇಬರು ಸುರಪೂರ ಪೊಲೀಸ್ ಠಾಣೆ ರವರು 11 ಜನ ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ಠಾಣೆಗೆ ಬಂದು ವರದಿ ಸಾರಾಂಶವೆನಂದರೆ ಇಂದು ದಿನಾಂಕ:29/04/2020 ರಂದು 4  ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಸುರಪುರ ಪಟ್ಟಣದ ಯುಕೆಪಿ ಕ್ಯಾಂಪ ಪಕ್ಕದಲ್ಲಿರುವ ಸಾರ್ವಜನಿಕ ಖುಲ್ಲಾ  ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ನಾನು ಮತ್ತು ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ನಿಂಗಪ್ಪ ಹೆಚ್ಸಿ-118 3) ಶ್ರೀ ಮನೊಹರ ಹೆಚ್ಸಿ-105 4) ಶ್ರೀ ದೇವಿಂದ್ರಪ್ಪ ಸಿಪಿಸಿ-184 5) ಶ್ರೀ ಮಂಜುನಾಥ ಸಿಪಿಸಿ-271 6) ಶ್ರೀ ರವಿಕುಮಾರ ಸಿಪಿಸಿ-376 7) ಶ್ರೀ ವಿರೇಶ ಸಿಪಿಸಿ-374 8) ಶ್ರೀ ಮಾನಯ್ಯ ಸಿಪಿಸಿ-372 9) ಶ್ರೀ ಪರಮೇಶ ಸಿಪಿಸಿ-142 ವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ಚಂದ್ರಶೇಖರ ತಂದೆ ಬಸಪ್ಪ ದೊಡ್ಡಮನಿ ವ|| 29 ವರ್ಷ ಉ|| ಒಕ್ಕಲುತನ ಜಾ|| ಮಾದಿಗ ಸಾ|| ಚನ್ನೂರ ತಾ|| ಹುಣಸಗಿ 2) ಶ್ರೀ ಭೀಮರಾಯ @ ಮುದಕಪ್ಪ ತಂದೆ ಭಾಗಪ್ಪ ನಡುವಿನಮನಿ ವ|| 35 ವರ್ಷ ಉ|| ಕೂಲಿ ಜಾ|| ಮಾದಿಗ ಸಾ|| ದುಮ್ಮದ್ರಿ ತಾ|| ಜೇವಗರ್ಿ ಇವರನ್ನು 5 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 5:15 ಪಿ.ಎಂ ಕ್ಕೆ ಒಂದು ಖಾಸಗಿ ವಾಹನ ನೇದ್ದರಲ್ಲಿ ಠಾಣೆಯಿಂದ ಹೊರಟು 5:40 ಪಿ.ಎಂ ಕ್ಕೆ ಸುರಪುರ ಪಟ್ಟಣದ ಯುಕೆಪಿ ಕ್ಯಾಂಪ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಯು.ಕೆ.ಪಿ ಕ್ಯಾಂಪ್ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 5:45 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿ ಒಟ್ಟು 11 ಜನರು ಸಿಕ್ಕಿದ್ದು ಅವರ ಅವರ ಹೆಸರು, ವಿಳಾಸ ವಿಚಾರಿಸಿದ್ದು 1) ಪರಶುರಾಮ ತಂದೆ ಶಂಕ್ರೆಪ್ಪ ಅಗ್ನಿ ವ|| 30 ವರ್ಷ ಉ|| ಗೌಂಡಿಕೆಲಸ ಜಾ|| ಮಾದಿಗ ಸಾ|| ದಿವಳಗುಡ್ಡ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 430/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಬಸವರಾಜ ತಂದೆ ನಾಗಪ್ಪ ದೊಡ್ಡಮನಿ ವ|| 28 ವರ್ಷ ಉ|| ಗೌಂಡಿಕೆಲಸ ಜಾ|| ಮಾದಿಗ ಸಾ|| ದಿವಳಗುಡ್ಡ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 300/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಮರೆಪ್ಪ ತಂದೆ ಹೈಯ್ಯಾಳಪ್ಪ ಹಾದಿಮನಿ ವ|| 35 ವರ್ಷ ಉ|| ಗೌಂಡಿಕೆಲಸ ಜಾ|| ಕುರಬರ ಸಾ|| ದಿವಳಗುಡ್ಡ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 420/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಶಿವಲಿಂಗಪ್ಪ ತಂದೆ ಶರಣಪ್ಪ ಚೊಟೆಗೋಳ ವ|| 35 ವರ್ಷ ಉ|| ಕೂಲಿ ಜಾ|| ಕುರಬರ ಸಾ|| ನೀಲೂರ ತಾ|| ಅಫಜಲಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 350/- ರೂಗಳು ವಶಪಡಿಸಿಕೊಳ್ಳಲಾಯಿತು. 5) ಶರಬಣ್ಣ ತಂದೆ ತಿಪ್ಪಣ್ಣ ವ|| 40 ವರ್ಷ ಉ||ಗೌಂಡಿಕೆಲಸ ಜಾ|| ಮಾದಿಗ ಸಾ|| ದಿವಳಗುಡ್ಡ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 450/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಭೀಮಪ್ಪ ತಂದೆ ದುರ್ಗಪ್ಪ ಕೋಳೆನವರ ವ|| 40 ವರ್ಷ ಉ|| ಗೌಂಡಿಕೆಲಸ ಜಾ|| ಮಾದಿಗ ಸಾ|| ದಿವಳಗುಡ್ಡ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 400/- ರೂಗಳು ವಶಪಡಿಸಿಕೊಳ್ಳಲಾಯಿತು. 7) ನಿಂಗಪ್ಪ ತಂದೆ ತಿಪ್ಪಣ್ಣ ದೊಡ್ಡಮನಿ ವ|| 45 ವರ್ಷ ಉ|| ಗೌಂಡಿಕೆಲಸ ಜಾ|| ಮಾದಿಗ ಸಾ|| ದಿವಳಗುಡ್ಡ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 450/- ರೂಗಳು ವಶಪಡಿಸಿಕೊಳ್ಳಲಾಯಿತು. 8) ಭೀಮಪ್ಪ ತಂದೆ ಹಣಮಂತ ಕೊಂಬು ವ|| 25 ವರ್ಷ ಉ|| ಗೌಂಡಿಕೆಲಸ ಜಾ|| ಮಾದಿಗ ಸಾ|| ರುಕ್ಮಾಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 500/- ರೂಗಳು ವಶಪಡಿಸಿಕೊಳ್ಳಲಾಯಿತು. 9) ಸುಭಾಷ ತಂದೆ ದುರ್ಗಪ್ಪ ವ|| 30 ವರ್ಷ ಉ|| ಕೂಲಿ ಜಾ|| ಮಾದಿಗ ಸಾ|| ರುಕ್ಮಾಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 550/- ರೂಗಳು ವಶಪಡಿಸಿಕೊಳ್ಳಲಾಯಿತು. 10) ಮಾನಪ್ಪ ತಂದೆ ಬಸಪ್ಪ ಕೊಂಬಿನವರ ವ|| 28 ವರ್ಷ ಉ|| ಕೂಲಿ ಜಾ|| ಮಾದಿಗ ಸಾ|| ರುಕ್ಮಾಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 400/- ರೂಗಳು ವಶಪಡಿಸಿಕೊಳ್ಳಲಾಯಿತು. 11) ಹುಲಗಪ್ಪ ತಂದೆ ನಿಂಗಪ್ಪ ಕೊಂಬಿನವರ ವ|| 40 ವರ್ಷ ಉ|| ಕೂಲಿ ಜಾ|| ಮಾದಿಗ ಸಾ|| ರುಕ್ಮಾಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 450/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆ ಇಟ್ಟ ಹಣ 4250/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 8950/- ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 5:45 ಪಿ.ಎಮ್ ದಿಂದ 6:45 ಪಿ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ 11 ಜನ ಆರೋಪಿರೊಂದಿಗೆ ಮರಳಿ ಠಾಣೆಗೆ ರಾತ್ರಿ 7:15 ಗಂಟೆಗೆ ಬಂದು ಸದರಿ ಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!