ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 28/04/2020

By blogger on ಬುಧವಾರ, ಏಪ್ರಿಲ್ 29, 2020







                            ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 28/04/2020 
                                                                                                               

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:-. 51/2020 ಕಲಂ: 504, 341, 323 ಸಂ 34 ಐಪಿಸಿ ಮತ್ತು ಕಲಂ: 3 (1) (ಆರ್) (ಎಸ್) 3 (2) (ಗಿ-ಚಿ) ಎಸ್.ಸಿ/ಎಸ್.ಟಿ ಪಿ.ಎ ಎಕ್ಟ್-1989:- ಇಂದು ದಿನಾಂಕ: 28/04/2020 ರಂದು 4 ಪಿಎಮ್ ಕ್ಕೆ ಶ್ರೀ ವಿಲ್ಸನ್ ತಂದೆ ರಾಜು ಮುಂಡರಗಿ, ವ:22, ಜಾ:ಮಾದಿಗ, ಉ:ಒಕ್ಕಲುತನ ಸಾ:ಹಾಲಗೇರಾ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ಹಾಲಗೇರಾ ಸೀಮಾಂತರದಲ್ಲಿ ನಮ್ಮದೊಂದು ಹೊಲ ಇರುತ್ತದೆ. ಅದರ ಸವರ್ೆ ನಂ. 245 ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ: 27/04/2020 ರಂದು ಸಾಯಂಕಾಲ ನಾನು ಮತ್ತು ನಮ್ಮೂರ ಸ್ಯಾಮುವೇಲ್ ತಂದೆ ಮಲ್ಲಪ್ಪ ಇಬ್ಬರೂ ಸೇರಿ ಮೇಲ್ಕಂಡ ನಮ್ಮ ಹೊಲ ನೋಡಿಕೊಂಡು ಬರೋಣ ಎಂದು ಹೇಳಿ ಹೊಲಕ್ಕೆ ಹೋದೆವು. ಸಂಜೆ 6 ಪಿಎಮ್ ಸುಮಾರಿಗೆ ನಮ್ಮ ಹೊಲದಲ್ಲಿ ಹೋಗಿ ಹೊಲ ನೋಡುತ್ತಿದ್ದಾಗ ನಮ್ಮೂರ 1) ಮೋನಪ್ಪ ತಂದೆ ನಿಂಗಪ್ಪ ನಾಯ್ಕೋಡಿ, 2) ಹಣಮಂತ ತಂದೆ ಯಂಕಪ್ಪ ನಾಯ್ಕೋಡಿ ಇಬ್ಬರೂ ಜಾ:ಕಬ್ಬೇರ ಸಾ:ಹಾಲಗೇರಾ ಇವರಿಬ್ಬರೂ ಸೇರಿ ನಮ್ಮ ಹೊಲದಿಂದ ಮರಳು ಸಾಗಾಣಿಕೆ ಮಾಡಲು ಮರಳು ತೆಗೆಯುತ್ತಿರುವುದು ಕಂಡು ನಾನು ಹೋಗಿ ನಮ್ಮ ಹೊಲದಲ್ಲಿ ಏಕೆ ಮರಳು ತೆಗೆಯುತ್ತಿದ್ದಿರಿ ಎಂದು ಕೇಳಲು ಹೋದಾಗ ಇಬ್ಬರೂ ಸೇರಿ ಬಂದು ನನಗೆ ತಡೆದು ನಿಲ್ಲಿಸಿ, ಏನಲೇ ಮಾದಿಗ ಸೂಳೆ ಮಗನೆ ಮರಳು ತೆಗೆಯುತ್ತೇವೆ ನೀನೆನು ಮಾಡುತ್ತಿಯಾ ಎಂದು ನನಗೆ ಮೋನಪ್ಪ ಈತನು ಎದೆಯ ಮೇಲಿನ ಅಂಗಿ ಹಿಡಿದು ಕಪಾಳಕ್ಕೆ ಹೊಡೆದನು. ಹಣಮಂತ ನನಗೆ ಈ ಮಾದಿಗ ಸೂಳೆ ಮಗ ಯಾವಾಗಲು ಎದುರಾಡುತ್ತಾನೆ. ಇವತ್ತು ಇವನಿಗೆ ಬಿಡುವುದು ಬೇಡ ಅಂತಾ ಕೈಯಿಂದ ಮುಷ್ಠಿ ಮಾಡಿ ಮುಖಕ್ಕೆ ಗುದ್ದಿದ್ದನು. ಆಗ ಜಗಳವನ್ನು ಸಂಗಡವಿದ್ದ ಸ್ಯಾಮುವೇಲಪ್ಪ ಬಿಡಿಸಿರುತ್ತಾನೆ. ಕಾರಣ ನಮ್ಮ ಹೊಲದಲ್ಲಿ ಮರಳು ಸಾಗಾಣಿಕೆ ಮಾಡಲು ತೆಗೆಯಬೇಡಿ ಎಂದು ಕೇಳಲು ಹೊದರೆ ತಡೆದು ನಿಲ್ಲಿಸಿ, ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ಕೈಯಿಂದ ಹೊಡೆದಿರುತ್ತಾರೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ನನಗೆ ಕೈಯಿಂದ ಮಾತ್ರ ಹೊಡೆದಿದ್ದು, ಅಂತಹ ಪೆಟ್ಟುಗಳಾಗದ ಕಾರಣ ಉಪಚಾರ ಕುರಿತು ಆಸ್ಪತ್ರೆಗೆ ಹೋಗುವುದಿಲ್ಲ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 51/2020 ಕಲಂ: 504, 341, 323 ಸಂ 34 ಐಪಿಸಿ ಮತ್ತು ಕಲಂ: 3 (1) (ಆರ್) (ಎಸ್) 3 (2) (ಗಿ-ಚಿ) ಎಸ್.ಸಿ/ಎಸ್.ಟಿ ಪಿ.ಎ ಎಕ್ಟ್-1989 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 52/2020 ಕಲಂ: 188, 269, 270 ಐಪಿಸಿ:- ಇಂದು ದಿನಾಂಕ: 28/04/2020 ರಂದು 6-30 ಪಿಎಮ್ ಕ್ಕೆ ಪ್ರಕಾಶ ಹೆಚ್.ಸಿ 18 (ಪಿ) ಇವರು ಠಾಣೆಗೆ ಹಾಜರಾಗಿ ತಮ್ಮಲ್ಲಿ ಸರಕಾರಿ ತಫರ್ೆಯಿಂದ ಸಲ್ಲಿಸುವ ದೂರು ಅಜರ್ಿಯೇನಂದರೆ ನಿನ್ನೆ ದಿವಸ ದಿನಾಂಕ: 27/04/2020 ರಂದು ಹಾಲಗೇರಾ ಗ್ರಾಮದ ಸೀಮಾಂತರದಲ್ಲಿ ಯಾರೋ ಮೂರು ಜನ ಮನೆಯಿಂದ ಹೊರಗಡೆ ಬಂದು ಜಗಳ ಮಾಡಿಕೊಂಡಿರುತ್ತಾರೆ ಎಂದು ನನಗೆ ಗೊತ್ತಾಗಿ ನಾನು ಮಾನ್ಯ ಪಿ.ಎಸ್.ಐ ಸಾಹೇಬರ ಆದೇಶದಂತೆ ಈ ದಿವಸ ದಿನಾಂಕ: 28/04/2020 ರಂದು ಮದ್ಯಾಹ್ನ 3 ಗಂಟೆ ಸುಮಾರಿಗೆ ಹಾಲಗೇರಾ ಗ್ರಾಮಕ್ಕೆ ಭೇಟಿ ನೀಡಿ ಹೊಸ ಬೀಟ್ ಸದಸ್ಯರಿಗೆ ಭೇಟಿಯಾಗಿ ಮಾಹಿತಿ ಸಂಗ್ರಹಿಸಿದಾಗ ತಿಳಿದುಬಂದಿದ್ದೇನಂದರೆ ಈಗ ನಮ್ಮ ರಾಜ್ಯದಲ್ಲಿ ಕೋವಿಡ್-19 (ಕೋರೋನಾ) ಎಂಬ ಮಹಾಮಾರಿ ಭಯಂಕರ ರೋಗವು ಸಾಂಕ್ರಾಮಿಕವಾಗಿ ಹರಡುತ್ತಿರುವುದರಿಂದ ಮಾನ್ಯ ಘನ ಕನರ್ಾಟಕ ಸರಕಾರವು ಸಾರ್ವಜನಿಕ ಸಭೆ ಸಮಾರಂಭಗಳಾದ ಜಾತ್ರೆ, ಸಂತೆ, ಮದುವೆ ಮುಂತಾದವುಗಳನ್ನು ಮತ್ತು ಯಾರೂ ವಿನಾಕಾರಣ ಮನೆಯಿಂದ ಹೊರಗಡೆ ಬರುವುದು ಮತ್ತು ಬಂದು ಒಂದು ಕಡೆ ಸೇರುವುದನ್ನು ನಿರ್ಬಂಧಿಸಿ ಸಂಪೂರ್ಣ ಲಾಕಡೌನ ಆದೇಶ ಹೊರಡಿಸಿರುತ್ತಾರೆ. ಅದರಂತೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಕೂಡಾ ಲಾಕಡೌನ ಮಾಡಿ ಯಾವುದೇ ಜಾತ್ರೆ ಸಮಾರಂಭ ಮಾಡದಂತೆ ಮತ್ತು ಮನೆಯಿಂದ ಹೊರಡಗೆ ಬಂದು ಒಂದೆಡೆ ಸೇರುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದು ಇರುತ್ತದೆ. ಹೀಗಿದ್ದರು ಕೂಡಾ ಹಾಲಗೇರಾ ಗ್ರಾಮದ ಮೊದಲನೇ ಪಾಟರ್ಿಯವರಾದ 1) ಮೋನಪ್ಪ ತಂದೆ ನಿಂಗಪ್ಪ ನಾಯ್ಕೋಡಿ, 2) ಹಣಮಂತ ತಂದೆ ಯಂಕಪ್ಪ ನಾಯ್ಕೋಡಿ ಇಬ್ಬರೂ ಜಾ:ಕಬ್ಬಲಿಗ ಸಾ:ಹಾಲಗೇರಾ ಇವರು ಮನೆಯಿಂದ ಹೊರಗಡೆ ಬಂದು 2 ನೇ ಪಾಟರ್ಿಯ ವಿಲ್ಸನ ತಂದೆ ರಾಜು ಮುಂಡರಗಿ ಈತನು ಅವರಿಗೆ ನಮ್ಮ ಹೊಲದಲ್ಲಿ ಮರಳು ತೆಗೆಯಬೇಡಿ ಎಂದು ಹೇಳಿದ್ದಕ್ಕೆ ಮರಳು ತೆಗೆಯುತ್ತೇವೆ ನೋಡು ಮಾದಿಗ ಸೂಳೆ ಮಗನೆ ಎಂದು ಜಗಳ ತೆಗೆದು ತಡೆದು ನಿಲ್ಲಿಸಿ, ಕೈಯಿಂದ ಹೊಡಬಡೆ ಮಾಡಿರುತ್ತಾರೆ. ಅದೇ ರೀತಿಯಾಗಿ 2 ನೇ ಪಾಟರ್ಿಯವರಾದ 3) ವಿಲ್ಸನ ತಂದೆ ರಾಜು ಮುಂಡರಗಿ ಮತ್ತು 4) ಸ್ಯಾಮುವೇಲ ತಂದೆ ಮಲಪ್ಪ ಇಬ್ಬರೂ ಸಾ:ಹಾಲಗೇರಾ ಇವರು ಕೂಡಾ ಮನೆಯಿಂದ ಹೊರಗಡೆ ಬಂದು ತಮ್ಮ ಹೊಲದಲ್ಲಿ ಮರಳು ತೆಗೆಯಬೇಡಿ ಎಂದು ಜಗಳ ಮಾಡಿಕೊಂಡು ಸರಕಾರದ ಲಾಕಡೌನ ಆದೇಶ ಉಲ್ಲೇಂಘನೆ ಮಾಡಿರುತ್ತಾರೆ. ಕಾರಣ ಎಲ್ಲರೂ ಒಂದು ಕಡೆ ಸೇರಿದರೆ ಕೋವಿಡ್-19 (ಕೋರೋನಾ) ಎಂಬ ಮಹಾಮಾರಿ ಸಾಂಕ್ರಾಮಿಕ ರೋಗ ಹರಡುತ್ತದೆ ಅಂತಾ ಗೊತ್ತಿದ್ದರು, ಕೂಡಾ ಉದ್ದೇಶ ಪೂರ್ವಕವಾಗಿ ಒಂದು ಕಡೆ ಸೇರಿ ಜಗಳ ಮಾಡಿ ಸದರಿ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಅಪಾಯಕಾರಿ ಸೊಂಕು ಹರಡುವ ನಿರ್ಲಕ್ಷತನವನ್ನು ತೋರಿಸಿರುತ್ತಾರೆ. ಕಾರಣ ಸದರಿಯವರು ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಅಪಾಯಕಾರಿ ಸೊಂಕು ಹರಡುವ ನಿರ್ಲಕ್ಷತನವನ್ನು ತೋರಿಸಿರುವುದರಿಂದ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಈ ಮೂಲಕ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 52/2020 ಕಲಂ: 188, 269, 270 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.



ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 53/2020 ಕಲಂ: 504,341,323,506 ಸಂ 34 ಐಪಿಸಿ:- ಇಂದು ದಿನಾಂಕ: 28/04/2020 ರಂದು 8-15 ಪಿಎಮ್ ಕ್ಕೆ ಶ್ರೀ ನಿಂಗಪ್ಪ ತಂದೆ ಸಾಬಣ್ಣ ನಾಯ್ಕೋಡಿ, ವ:45, ಜಾ:ಕಬ್ಬಲಿಗ, ಉ:ಒಕ್ಕಲುತನ ಸಾ:ಹಾಲಗೇರಾ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನ್ನ ಮಗ ಮೋನಪ್ಪ ತಂದೆ ನಿಂಗಪ್ಪ ಈತನು ಕೂಲಿಕೆಲಸ ಮಾಡಿಕೊಂಡು ವಾಸವಾಗಿರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ: 27/04/2020 ರಂದು ಮದ್ಯಾಹ್ನ 3 ಗಂಟೆ ಸುಮಾರಿಗೆ ನನ್ನ ಮಗ ಮತ್ತು ನಮ್ಮೂರ ನಮ್ಮ ಜಾತಿಯ ಹಣಮಂತ ತಂದೆ ಯಂಕಪ್ಪ ನಾಯ್ಕೋಡಿ ಇಬ್ಬರೂ ಸೇರಿ ಹಾಲಗೇರಾ ಸೀಮಾಂತರದಲ್ಲಿರುವ ನಮ್ಮ ಹೊಲದ ಕಡೆ ಹೋಗಿ ಬರುವುದಾಗಿ ಹೇಳಿ ಹೋದರು. ನಾನು ಮನೆಯಲ್ಲಿದ್ದೇನು. ಅವರು ಹೋಗಿ ಬಹಳ ಹೊತ್ತಾದರು ಕೂಡಾ ಮರಳಿ ಬರಲಿಲ್ಲ. ಆಗ ಸಾಯಂಕಾಲ ನಾನು ನನ್ನ ಮಗ ಮನೆಗೆ ಬರಲಾರದ್ದಕ್ಕೆ ನಮ್ಮ ಹೊಲದ ಕಡೆ ಹೋಗಿ ನೋಡಿಕೊಂಡು ಬರೋಣ ಎಂದು ನಮ್ಮ ಹೊಲಕ್ಕೆ ಹೋಗುತ್ತಿದ್ದಾಗ ಸಾಯಂಕಾಲ 6 ಗಂಟೆ ಸುಮಾರಿಗೆ ದಾರಿಯಲ್ಲಿ ನಮ್ಮೂರ 1) ವಿಲ್ಸನ ತಂದೆ ರಾಜು ಮುಂಡರಗಿ, 2) ಅನೂಕ ತಂದೆ ರಾಜಪ್ಪ ಮಂಡರಗಿ ಮತ್ತು 3) ಯೇಸು ತಂದೆ ಸುಧಿರಪ್ಪ ಮಂಡರಗಿ ಈ ಮೂರು ಜನ ಸೇರಿಕೊಂಡು ಬಂದು ವಿಲ್ಸನ ಇವರ ಹೊಲದ ಹತ್ತಿರ ನನ್ನ ಮಗ ಮೋನಪ್ಪ ಮತ್ತು ಸಂಗಡ ಇದ್ದ ಹಣಮಂತ ಇಬ್ಬರಿಗೆ ತಡೆದು ನಿಲ್ಲಿಸಿ, ಮಕ್ಕಳೆ ನೀವು ನಮ್ಮ ಹೊಲದಲ್ಲಿ ಮರಳು ತೆಗೆಯಲು ಬಂದಿರುತ್ತಿರಿ, ನಿಮ್ಮ ಸೊಕ್ಕು ಜಾಸ್ತಿಯಾಗಿದೆ ಕಬ್ಬಲಿಗ ಸೂಳೆ ಮಕ್ಕಳೆ ಎಂದು ಜಗಳ ತೆಗೆದು ನನ್ನ ಮಗ ಮೋನಪ್ಪನಿಗೆ ಮತ್ತು ಹಣಮಂತನಿಗೆ ಇಬ್ಬರೂ ಸೇರಿ ಕೈಯಿಂದ ಮುಖಕ್ಕೆ, ಕಪಾಳಕ್ಕೆ ಹೊಡೆದರು. ಆಗ ನಾನು ಹೋಗಿ ಜಗಳ ಬಿಡಿಸಿದಾಗ ನಮ್ಮವರಿಗೆ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ ಕಬ್ಬಲಿಗ ಸೂಳೆ ಮಕ್ಕಳೆ ಇನ್ನೊಮ್ಮೆ ನಮ್ಮ ಹೊಲದ ಕಡೆ ಬಂದು ಹಣಕಿ ಹಾಕಿದರೆ ನಿಮಗೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೊದರು. ಆದ್ದರಿಂದ ವಿನಾಕಾರಣ ನನ್ನ ಮಗ ಮೋನಪ್ಪ ಮತ್ತು ಸಂಗಡ ಇದ್ದ ಹಣಮಂತ ಇವರಿಗೆ ಮರಳು ತೆಗೆಯಲು ಬಂದಿರುತ್ತಿರಿ ಎಂದು ಜಗಳ ತೆಗೆದು ಅವಾಚ್ಯ ಬೈದು ತಡೆದು ನಿಲ್ಲಿಸಿ, ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಬಂದು ಫಿರ್ಯಾಧಿ ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 53/2020 ಕಲಂ: 504,341,323,506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 61/2020 ಕಲಂ 32,34 ಕೆ,ಇ ಯಾಕ್ಟ್ ಮತ್ತು 284  ಐಪಿಸಿ:-ದಿನಾಂಕ: 28-04-2020 ರಂದು ಬೆಳಿಗ್ಗೆ 09-15 ಗಂಟೆಗೆ ಸುವರ್ಣ ಪಿ.ಎಸ್.ಐ ರವರು ಯಲಸತ್ತಿ ತಾಂಡದಲ್ಲಿ ಸಿಂಧಿ ಜಪ್ತಿ ಮಾಡಿಕೊಂಡು ಬಂದು ಜ್ಞಾಪನ ಪತ್ರದೊಂದಿಗೆ ಸಿಂಧಿ ಜಪ್ತಿಪಂಚನಾಮೆ ಮತ್ತು  ಸಿಂಧಿಯನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 61/2020 ಕಲಂ. 32, 34 ಕೆ.ಇ ಕಾಯ್ದೆ ಮತ್ತು 284 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.



ಸೈದಾಪೂರ  ಪೊಲೀಸ್ ಠಾಣೆ ಗುನ್ನೆ ನಂ:- 62/2020 ಕಲಂ 32,34 ಕೆ,ಇ ಯಾಕ್ಟ್ ಮತ್ತು 284  ಐಪಿಸಿ:-ದಿನಾಂಕ: 28-04-2020 ರಂದು ಮಧ್ಯಾಹ್ನ 02-30 ಗಂಟೆಗೆ ಸ,ತಫರ್ೇ ಶ್ರೀಮತಿ ಸುವರ್ಣ ಮ.ಪಿ.ಎಸ್.ಐ ರವರು ಕರಣಗಿ ಗ್ರಾಮದಲ್ಲಿ ಅಕ್ರಮವಾಗಿ ತಯ್ಯಾರಿಸಿ ಮಾರಾಟ ಮಾಡುತ್ತಿದ್ದ 25 ಲೀಟರ ಸಿಂದಿಯನ್ನು ಜಪ್ತಿ ಮಾಡಿಕೊಂಡು ಬಂದು ಠಾಣೆಗೆ ತಂದು ಹಾಜರುಪಡಿಸಿ  ಮುಂದಿನ ಕಾನೂನು ಕ್ರಮ ಕುರಿತು ಜ್ಞಾಪನ ಪತ್ರ ನೀಡಿರುತ್ತಾರೆ. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 62/2020 ಕಲಂ. 32, 34 ಕೆ.ಇ ಕಾಯ್ದೆ ಮತ್ತು 284 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.




ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಂ 63/2020, ಕಲಂ,143,147,148, 323. 324, 354.504.506.ಸಂಗಡ 149 ಐ ಪಿ ಸಿ    :- ಇಂದು ದಿನಾಂಕ: 28-04-2020 ರಂದು ರಾತ್ರಿ 08-30 ಗಂಟೆಗೆ ಪಿಯರ್ಾಧಿದಾರನಾದ ಹಣಮಂತ ತಂದೆ ಸಣ್ಣಸಾಬಣ್ಣ ವ|| 55 ವರ್ಷ ಜಾ|| ವಡ್ಡರ ಉ|| ಒಕ್ಕಲುತನ ಸಾ|| ಕರಣಿಗಿ ತಾ|| ಗುರಮಿಠಕಲ್ ಜಿ|| ಯಾದಗಿರಿ ಈತನು ಠಾಣೆಗೆ ಹಾಜರಾಗಿ   ಹೇಳಿಕೆ ನೀಡಿದ ಪಿಯರ್ಾಧಿ ಸಾರಂಶವೆನೆಂದರೆ ದಿನಾಂಕ: 28-04-2020 ರಂದು ರಾತ್ರಿ 07-00 ಗಂಟೆಗೆ ನಮ್ಮ ಮನೆಯವರೆಲ್ಲರು ಮನೆಯ ಹತ್ತಿರ ಇರುವಾಗ ಆರೋಪಿತರು ಬಂದು  ಲೇ ಸೂಳೆ ಮಕ್ಕಳೆ ನಮ್ಮ ಮಗಳು ಲಕ್ಷ್ಮೀಯನ್ನು ಎಷ್ಟು ದಿನ ನಮ್ಮ ಮನೆಯಲ್ಲಿ ಬಿಡುತ್ತಿರಿಲೆ ಸೂಳೆ ಮಕ್ಕಳೆ ಅಂತಾ ಬೈದು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿ ಕೂದಲು ಹಿಡಿದು ಎಳದಾಡಿ ಕೆಳಗೆ ಬಿಳಿಸಿ ಅವಮಾನ ಮಾಡಿ ನಿಮಗೆ ಒಂದು ಗತಿ ಕಾಣಿಸುತ್ತೆವೆ ಇವತ್ತು ಒಂದು ಜೀವ ಖಲಾಸ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ. 



ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:-64/2020, ಕಲಂ,143,147,148,323.324, 354.504.506.ಸಂಗಡ 149 ಐ ಪಿ ಸಿ   :-  ಇಂದು ದಿನಾಂಕ: 28-04-2020 ರಂದು ರಾತ್ರಿ 10-30 ಗಂಟೆಗೆ ಪಿಯರ್ಾಧಿ ಲಕ್ಷ್ಮೀ ಗಂಡ ಅಂಜಪ್ಪ ಸಾ:: ಕರಣಗಿ ಇವಳು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ ಪಿಯರ್ಾಧಿ ಸಾರಂಶವೆನೆಂದರೆ ದಿನಾಂಕ: 28-04-2020 ರಂದು ರಾತ್ರಿ 07-00 ಗಂಟೆಗೆ ಫಿಯರ್ಾದಿ ಮತ್ತು ಆಕೆಯ ಸಂಬಂಧಿಕರು ತಮ್ಮ  ಮನೆಯ ಬಳಿ ಇರುವಾಗ ಆರೋಪಿತರು ಗುಂಪುಕಟ್ಟಿಕೊಂಡು, ಕೈಯಲ್ಲಿ ಕಟ್ಟಿಗೆ, ಕಲ್ಲು ಹಿಡಿದುಕೊಂಡು ಬಂದು, ಅವಾಚ್ಯವಾಗಿ ಅವಾಚ್ಯವಾಗಿ ಬೈದು, ಕೈಯಿಂದ, ಕಟ್ಟಿಗೆಯಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿ, ರಕ್ತಗಾಯ ಮಾಡಿ, ನನಗೆ ಕೂದಲು ಹಿಡಿದು ಎಳದಾಡಿ ಅವಮಾನ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.



ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 56/2020  273, 328 ಐಪಿಸಿ ಮತ್ತು ಕಲಂ: 32, 34 ಕೆಇ ಯಾಕ್ಟ:- ಇಂದು ದಿನಾಂಕ: 28/04/2020 ರಂದು 07.15 ಪಿಎಮ್ ಕ್ಕೆ ಶ್ರೀ ಸೋಮಲಿಂಗ್ ಒಡೆಯರ ಪಿಎಸ್ಐ ಗೋಗಿ ಪೊಲೀಸ ಠಾಣೆ ರವರು ಮುದ್ದೇಮಾಲು ಮತ್ತು ಜಪ್ತಿಪಂಚನಾಮೆ ತಂದು ಹಾಜರ್ ಪಡಿಸಿ ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದು ವರದಿ ನೀಡಿದ್ದು, ಸದರಿ ವರದಿ ಸಾರಾಂಶವೆನೆಂದರೆ, ನಾಗನಟಗಿ ಗ್ರಾಮದಲ್ಲಿನ ಮೇಗಾನಾಯ್ಕ ತಾಂಡಾ ಕ್ರಾಸ್ ನಲ್ಲಿನ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕಳ್ಳಬಟ್ಟಿ ಸರಾಯಿಯು ಮಾನವ ಜೀವಕ್ಕೆ ಹಾನಿಕಾರಕ ಅಂತಾ ಗೊತ್ತಿದ್ದು, ಕೂಡ ಕಳ್ಳ ಬಟ್ಟಿ ಸರಾಯಿ ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಕೊಂಡು 05.25 ಪಿಎಂಕ್ಕೆ ದಾಳಿ ಮಾಡಿದ್ದು, ಅನಧಿಕೃತವಾಗಿ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯು ಓಡಿ ಹೋಗಿದ್ದು, ಅವನ ಹೆಸರು ವಿಚಾರಿಸಿಲಾಗಿ ತುಕಾರಾಮ ತಂದೆ ಮಾನು ಪವಾರ ಜಾ: ಲಂಬಾಣಿ ಸಾ: ನಾಘನಟಗಿ ಮೇಘಾನಾಯ್ಕ ತಾಂಡಾ ತಾ: ಶಹಾಪೂರ ಅಂತಾ ತಿಳಿದು ಬಂದಿದ್ದು, ಸ್ಥಳದಲ್ಲಿ ಮೇಲಿನ ಮುದ್ದೆ ಮಾಲು, ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿಪಡಿಸಿಕೊಂಡು ಮುದ್ದೆಮಾಲು, ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ಸೂಚಿಸಿ ವರದಿ ನೀಡಿದ್ದು, ಸದರಿ ವರದಿ ಸಾರಂಶದ ಮೇರೆಗೆ ಠಾಣೆ ಗುನ್ನೆ ನಂ: 56/2020 ಕಲಂ: 273, 328 ಐಪಿಸಿ ಮತ್ತು ಕಲಂ: 32, 34 ಕೆಇ ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.



ಕೆಂಭಾವಿ  ಪೊಲೀಸ್ ಠಾಣೆ ಗುನ್ನೆ ನಂ:- 75/2020 ಕಲಂ: 143,147,353,323,188,269,270.323 504,  ಸಂ 149 ಐಪಿಸಿ:-ಇಂದು ದಿನಾಂಕ 28/04/2020 ರಂದು 1.15 ಪಿ.ಎಮ್ ಕ್ಕೆ ಪಿರ್ಯಾದಿದಾರರಾದ ???? ಅರುಣ ತಂದೆ ಲಕ್ಷ್ಮಣ ಚವ್ಹಾಣ, ವಯಸ್ಸು||38 ಜಾ|| ಹಿಂದೂ ಲಂಬಾಣಿ ಉ|| ಪ್ರಥಮ ದಜರ್ೆ ಸಹಾಯಕರು ಪುರಸಭೆ ಕೆಂಭಾವಿ ಹಾಗೂ ಕೊವಿಡ್-19 ನೋಡಲ್ ಆಫೀಸರ್-1, ಇದ್ದು ತಮ್ಮಲ್ಲಿ ಸಲ್ಲಿಸುವ ಪಿರ್ಯಾದಿ ಅಜರ್ಿ ಏನೆಂದರೆ, ನಿನ್ನೆ ದಿನಾಂಕ: 27/04/2020 ರಂದು ಬೆಳಿಗ್ಗೆ  11.20 ಗಂಟೆ ಸುಮಾರಿಗೆ ಶ್ರೀ ದೇವಿಂಧ್ರಪ್ಪ ಹೆಗಡೆ ಮುಖ್ಯಾಧಿಕಾರಿಗಳು ಪುರಸಭೆ ಕೆಂಭಾವಿ ರವರು ತಿಳಿಸಿದ್ದೇನೆಂದರೆ, ಮೇನ್ ಬಜಾರ ರಸ್ತೆಯಲ್ಲಿ ಇರುವ ಬಟ್ಟೆ ಅಂಗಡಿಯ ಮಾಲೀಕರಾದ ಮಹಾವೀರ ಗಾಮರ್ೆಂಟ್ಸ ಮಾಲೀಕರು ಮದನ್ ತಂ ಗಣೇಶರಾಮ್ ರಾಜಸ್ಥಾನ ಹಾಗೂ ವಿಮಲ್ ಗಾಮರ್ೇಂಟ್ಸ ಅಂಗಡಿಯ ಮಾಲೀಕರಾದ ಶ್ರೀ ದೇವಿಸಿಂಗ್ ತಂ ಕಿಮಸಿಂಗ್ ರಜಪೂತ, ಸಾ.ಕೆಂಭಾವಿ ಇವರುಗಳು ಕೊರೊನಾ ಕೊವಿಡ್-19 ಲಾಕ್ಡೌನ್ ಹಾಗೂ ಕಲಂ.144 ಉಲ್ಲಂಘನೆಮಾಡಿ ಅಂಗಡಿಯ ಶಟರ್ ಮುಚ್ಚಿ, ಒಳಗಡೆ ಸುಮಾರು ಜನಸೇರಿಸಿ ಕದ್ದುಮುಚ್ಚಿ ವ್ಯಾಪಾರ ಮಾಡುತ್ತಿದ್ದಾರೆ, ಅಂತ ಭಾತ್ಮಿ ಬಂದಿದ್ದು ತಾವು ಹೋಗಬೇಕು ಅಂತ ತಿಳಿಸಿದಾಗ ನಾನು ಹಾಗೂ ಮುಜಾಹಿದ್ ಮುಲ್ಲಾ ಕಿರಿಯ ಆರೋಗ್ಯ ನಿರೀಕ್ಷಕರು ನೋಡಲ್ ಆಫೀಸರ್-2 ಹಾಗೂ ಸಿಬ್ಬಂಧಿಗಳಾದ, ಶ್ರೀ ಬೀಮರಾಯ, ಶ್ರೀ ಸಿದ್ರಾಮಯ್ಯ, ಪ್ರಕಾಶ ಯಾಳಗಿ, ಮೌನೇಶ, ಕಾಶಿನಾಥ,  ರಾಜು, ಶ್ರೀ ಪ್ರಕಾಶ ಬಾಗ್ಲಿ, ಶ್ರೀ ಮಲ್ಲಿಕಾಜರ್ುನ, ಶ್ರೀ ಮಲ್ಲಣ್ಣ, ಶ್ರೀಬೀರಪ್ಪ, ಇವರುಗಳೊಂದಿಗೆ ಸದರ ಸ್ಥಳಕ್ಕೆ ಹೋಗಿ ನೋಡಲು ಮಹಾವೀರ ಗಾಮರ್ೆಂಟ್ಸ ಮಾಲೀಕರು ಮದನ್ ತಂ ಗಣೇಶರಾಮ್ ರಾಜಸ್ಥಾನ ಹಾಗೂ ವಿಮಲ್ ಗಾಮರ್ೇಂಟ್ಸ ಅಂಗಡಿಯ ಮಾಲೀಕರಾದ ಶ್ರೀ ದೇವಿಸಿಂಗ್ ತಂ ಕಿಮಸಿಂಗ್ ರಜಪೂತ, ಸಾ.ಕೆಂಭಾವಿ ಇವರುಗಳು ಕೊರೊನಾ ಕೊವಿಡ್-19 ಲಾಕ್ಡೌನ್ ಹಾಗೂ ಕಲಂ.144 ಉಲ್ಲಂಘನೆಮಾಡಿ ಅಂಗಡಿಯ ಶಟರ್ ಮುಚ್ಚಿ, ಒಳಗಡೆ ಸುಮಾರು ಜನಸೇರಿಸಿ ಕದ್ದುಮುಚ್ಚಿ ವ್ಯಾಪಾರ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡಿದ್ದು ಸದರಿಯವರು ಶೆಟರ್ ಒಳಗಡೆ ಕೀಲಿ ಹಾಕಿಕೊಂಡು ಒಳಗಡೆ ಜನ ಸೇರಿಸಿ ವ್ಯಾಪಾರ ಮಾಡುತ್ತಿದ್ದು ಈ ಬಗ್ಗೆ ಸದರಿ ಅಂಗಡಿ ಮಾಲಿಕರಿಗೆ ತಾವು ಕೊರೋನಾ ಕೊವಿಡ್-19 ಲಾಕ್ ಡೌನ್ ಮತ್ತು ಕಲಂ: 144 ಉಲ್ಲಂಘನೆ ಮಾಡಿದ್ದು ಇದರಿಂದಾಗಿ ಕೊರೋನಾ ವೈರಸ್ ಹರಡಲು ಪ್ರೇರೇಪಿಸಿದಂತಾಗುತ್ತದೆ ಅಂತ ತಿಳಿಹೇಳುತ್ತಿದ್ದಾಗ ಇದ್ದಕ್ಕಿದ್ದಂತೆ ಅಂಗಡಿ ಮಾಲಿಕರ ಪ್ರಚೋದನೆಯಿಂದ 1) ದೇವಿಂದ್ರಪ್ಪ ತಂ ಪರಮಣ್ಣ ಯಾಳಗಿ (ಶೇವಾಗ) ವಯಸ್ಸು 32 ಸಾ.ಕೆಂಭಾವಿ  2) ವಿಶ್ವನಾಥ ತಂ ಶರಣಪ್ಪ ಬಂಡೋಳಿ  ವಯಸ್ಸು 36 ಸಾ.ಕೆಂಭಾವಿ 3) ಯಮನಪ್ಪ ತಂ ನಂದಪ್ಪ ಯಾಳಗಿ ವಯಸ್ಸು 26 ಸಾ.ಕೆಂಭಾವಿ 4) ವಿಜಯ ಕುಮಾರ ತಂ ಶರಣಪ್ಪ ಬಂಡೋಳಿ ವಯಸ್ಸು 28 ಸಾ.ಕೆಂಭಾವಿ 5) ಮುತರ್ುಜಾ ತಂ ಲಾಳೆಸಾಬ ತೇಲಿ  ವಯಸ್ಸು 42  ಸಾ.ಕೆಂಭಾವಿ 6) ಮಂಜುನಾಥ ತಂ ಭಾಗಪ್ಪ ಅಂಗರಗಿ ವಯಸ್ಸು 30 ಸಾ.ಕೆಂಭಾವಿ 7) ಮಲ್ಲು ತಂ ಗಿರೆಪ್ಪ ಶಹಾಪುರ ಉಪ್ಪಾರ ವಯಸ್ಸು 27 ಸಾ.ಕೆಂಭಾವಿ 8] ಪ್ರಭು ತಂದೆ ಭೀಮರಾಯ ಶಹಾಪೂರ ವ|| 30 ಸಾ|| ಕೆಂಭಾವಿ ಈ ಎಲ್ಲಾ ಜನರು ಏಕಾಏಕಿ ನಮ್ಮ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ನನ್ನ ಮೇಲೆ ಹಾಗೂ ನೊಡಲ್ ಆಫೀಸರ್-2 ಮುಜಾಹೀದ್ ನಮ್ಮಿಬ್ಬರ ಮೇಲೆ ಎರಗಿ ಮುನಸಿಪಾಲಟಿ ಸೂಳೆಮಕ್ಕಳೆ ಬಜಾರದಲ್ಲಿ ಬಂದು ಗೂಂಡಾಗಿರಿ ಮಾಡುತ್ತೀರಿ ಅಂಗಡಿ ಮುಚ್ಚಲು ನಿಮಗೆ ಅಧಿಕಾರ ಯಾವ ಬೋಳಿ ಮಗ ಕೊಟ್ಟಿದ್ದಾನೆ ಅಂತ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ನಮ್ಮಿಬ್ಬರಿಗೂ ದಬ್ಬಾಡುತ್ತಿದ್ದಾಗ ಅಲ್ಲಿಯೇ ಇದ್ದ ನಮ್ಮ ಪುರಸಭೆ ಸಿಬ್ಬಂದಿಯವರಾದ ಶ್ರೀ ಬೀಮರಾಯ, ಶ್ರೀ ಸಿದ್ರಾಮಯ್ಯ, ಪ್ರಕಾಶ ಯಾಳಗಿ, ಮೌನೇಶ, ಕಾಶಿನಾಥ,  ರಾಜು, ಶ್ರೀ ಪ್ರಕಾಶ ಬಾಗ್ಲಿ, ಶ್ರೀ ಮಲ್ಲಿಕಾಜರ್ುನ, ಶ್ರೀ ಮಲ್ಲಣ್ಣ, ಶ್ರೀಬೀರಪ್ಪ ಇವರು ಬಂದು ಸದರಿಯವರನ್ನು ಹಿಡಿದು ತಡೆದು ವಾಪಸ್ ಕಳುಹಿಸಿದರು. ಆದ್ದರಿಂದ ಕೋವಿಡ್-19 ಲಾಕಡೌನ್ ಕಲಂ: 144 ಉಲ್ಲಂಘನೆ ಮಾಡಿದ ಬಟ್ಟೆ ಅಂಗಡಿ ಮಾಲಿಕರು ಹಾಗೂ ನಮ್ಮ ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿದವರ ವಿರುದ್ದ ಸೂಕ್ತ ಕಾನೂನು ಜರುಗಿಸಬೇಕು ಅಂತಾ ಅಜರ್ಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 75/2020 ಕಲಂ: 143,147,353,323,188,269,270.323 504,  ಸಂ 149 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ



ನಾರಾಯಣಪೂರ  ಪೊಲೀಸ್ ಠಾಣೆ ಗುನ್ನೆ ನಂ:- 31/2020 ಕಲಂ: ಮಹಿಳೆ ಮತ್ತು ಮಗು ಕಾಣೆಯಾದ ಬಗ್ಗೆ :- ದಿನಾಂಕ 27/04/2020 ರಂದು 3:00 ಎ.ಎಂ ಸುಮಾರಿಗೆ ಪ್ರಕರಣದ ಪಿಯರ್ಾದಿದಾರರ ತಂಗಿ ಜಯಶ್ರೀಯು ವ;24 ವರ್ಷ ಇವಳು ತನ್ನ ಗಂಡನೊಂದಿಗೆ ತಮ್ಮ ಮನೆಯ ಮ್ಯಾಳಗಿ ಮಲಗಿಕೊಂಡಾಗ ತನಗೆ ಚಳಿಆಗುತ್ತದೆ ನಾನು ಮಗುವನ್ನು ಕರೆದುಕೊಂಡು ಮನೆಯ ಒಳಗಡೆ ಹೋಗಿ ಮಲಗುತ್ತೇನೆ ಅಂತಾ ತನ್ನ ಗಂಡನಿಗೆ ಹೇಳಿ ತನ್ನ 1 1/2  ವರ್ಷದ ಗಂಡು ಮಗು ಸ್ವನೀತ್ ನನ್ನು ಕರೆದುಕೊಂಡು ಮನೆಯಲ್ಲಿ ಬಂದು ಮಲಗದೆ ತನ್ನ ಮಗುವಿನೊಂದಿಗೆ ಎಲ್ಲೋ ಕಾಣೆಯಾಗಿರುತ್ತಾಳೆ ಅಂತಾ ಪಿಯರ್ಾದಿಯ ಸಂಕ್ಷಿಪ್ತ ಸಾರಾಂಶವಿರುತ್ತದೆ.



ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:-  112/2020 ಕಲಂ  87 ಕೆ.ಪಿ. ಕಾಯ್ದೆ  :- ಇಂದು ದಿನಾಂಕ: 28/04/2020 ರಂದು 7 ಪಿ.ಎಮ್. ಕ್ಕೆ ಶ್ರೀ ಎಸ್ ಎಮ್ ಪಾಟೀಲ ಪಿ.ಐ  ಸಾಹೇಬರು ಸುರಪೂರ ಪೊಲೀಸ್ ಠಾಣೆ ರವರು 6 ಜನ ಆರೋಪಿತರೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ವರದಿ ಸಾರಾಂಶವೆನಂದರೆ, ಇಂದು ದಿನಾಂಕ:28/04/2020 ರಂದು 2 ಪಿ.ಎಂ. ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣೆಯ ವ್ಯಾಪ್ತಿಯ ಮಾಚಗುಂಡಾಳ ಸೀಮಾಂತರದ ರಾಮಣ್ಣ ಚೆನ್ನೂರ ಇವರ ಹೊಲದ ಪಕ್ಕದಲ್ಲಿರುವ ಶ್ರೀ ಸತ್ಯಂದೇವಿ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ನಾನು ಶ್ರೀ ಚೇತನ್ ಪಿ.ಎಸ್.ಐ (ಕಾ&ಸೂ) ಹಾಗೂ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೋಹರ ಹೆಚ್ಸಿ-105 3) ಶ್ರೀ ನಿಂಗಪ್ಪ ಹೆಚ್.ಸಿ-118 4) ಶ್ರೀ ವಿರೇಶ ಸಿಪಿಸಿ-374 5) ಶ್ರೀ ರವಿಕುಮಾರ ಪಿಸಿ-376 6) ಶ್ರೀ ಪರಮೇಶ ಸಿಪಿಸಿ-142 7) ಶ್ರೀ ದಯಾನಂದ ಪಿ.ಸಿ 337 8) ಶ್ರೀ ಮಂಜುನಾಥ ಸಿಪಿಸಿ-271 ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ಮಾಳಪ್ಪ ತಂದೆ ಭೀಮಣ್ಣ ಮಂಗಿಹಾಳ ವ|| 24 ವರ್ಷ ಜಾ|| ಕುರಬರ ಉ|| ಕೂಲಿ ಕೆಲಸ ಸಾ|| ಉದ್ದಾರ ಓಣಿ ಸುರಪುರ 2) ಶ್ರೀ ವೀರುಪಾಕ್ಷಪ್ಪ ತಂದೆ ಅಂಬ್ರಪ್ಪ ಬಡ್ರಯ್ಯ ಜಾ||ಬೇಡರ ವ|| 42 ವರ್ಷ ಉ|| ಒಕ್ಕಲುತನ ಸಾ|| ಕನರ್ಾಳ ಇವರನ್ನು 3 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 3-20 ಪಿ.ಎಮ್ ಕ್ಕೆ ಒಂದು ಖಾಸಗಿ ವಾಹನ ನೇದ್ದರಲ್ಲಿ ಹೊರಟು 3-55 ಪಿ.ಎಮ್ ಕ್ಕೆ ಮಾಚಗುಂಡಾಳ ಸೀಮಾಂತರದಲ್ಲಿ ರಾಮಣ್ಣ ಚನ್ನೂರ ಇವರ ಹೊಲದ ಪಕ್ಕದಲ್ಲಿರುವ ಸತ್ಯಂದೇವಿ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಗಿಡಿದ ಮರೆಯಾಗಿ ನಿಂತು ನೋಡಲು ಸತ್ಯಂದೇವಿ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 5 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿ ಒಟ್ಟು 6 ಜನರು ಸಿಕ್ಕಿದ್ದು ಅವರ ಹೆಸರು, ವಿಳಾಸ ವಿಚಾರಿಸಿದ್ದು 1) ಮಾರ್ಥಂಡಪ್ಪ ತಂದೆ ಭೀಮಣ್ಣ ದಿಲ್ವಾರ ವ|| 50 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ದೇವರಗೋನಾಲ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 8600/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಶ್ರೀದರ ತಂದೆ ಭೀಮಣ್ಣ ನಾಯಕ ವ|| 43 ವರ್ಷ ಜಾ|| ಬೇಡರು ಉ|| ವ್ಯಾಪರ ಸಾ|| ದೇವರಗೋನಾಲ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 6000/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಖಾಸಿಂ ತಂದೆ ಅಬ್ದುಲ್ ರಷಿದ್ ಉಸ್ತಾದ ವ|| 38 ವರ್ಷ ಜಾ|| ಮುಸ್ಲಿಂ ಉ|| ಟೇಲರ ಸಾ|| ಕಬಡಗೇರಾ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 6500/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಚನ್ನಯ್ಯ ತಂದೆ ಬಸವರಾಜ ಪುಜಾರಿ ವ|| 57 ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಕೆಲಸ ಸಾ|| ಮಾಚಗುಂಡಾಳ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 6500/- ರೂಗಳು ವಶಪಡಿಸಿಕೊಳ್ಳಲಾಯಿತು. 5) ಬಸವರಾಜ ತಂದೆ ದೇವಿಂದ್ರಪ್ಪ ಉದ್ದಾರ ವ|| 27 ವರ್ಷ ಜಾ|| ಕುರಬರ ಉ|| ಕೂಲಿ ಕೆಲಸ ಸಾ|| ಉದ್ದಾರ ಓಣಿ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 7500/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಲಕ್ಷ್ಮಣ ತಂದೆ ಹುಲಗಪ್ಪ ಹೊಳೆಮಕ್ಕಳು ವ|| 43 ವರ್ಷ ಜಾ|| ಕುರಬರ ಉ|| ಒಕ್ಕಲುತನ ಸಾ|| ಮಾಚಗುಂಡಾಳ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 6500/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆ ಇಟ್ಟ ಹಣ 60,000/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಹೀಗೆ ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 1,01,600/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು ಸಾಯಂಕಾಲ 5-00 ಪಿ.ಎಮ್ ದಿಂದ 6-00 ಪಿ.ಎಮ್ದ ಅವದಿಯಲ್ಲಿ ಸ್ಥಳದಲ್ಲಿಯೇ ಬರೆದುಕೊಂಡಿದ್ದು ಇರುತ್ತದೆ. ನಂತರ 6 ಜನ ಆರೋಪಿರೊಂದಿಗೆ ಮರಳಿ ಠಾಣೆಗೆ ರಾತ್ರಿ 6-30 ಗಂಟೆಗೆ ಬಂದು ಸದರಿ ಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ನೀಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ





ಶಹಾಪೂರ  ಪೊಲೀಸ್ ಠಾಣೆ ಗುನ್ನೆ ನಂ:- 131/2020.ಕಲಂ 87 ಆ್ಯಕ್ಟ:- ಇಂದು ದಿನಾಂಕ: 28/04/2020 ರಂದು 18-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾಧಿ ಶ್ರೀ ಹನುಮರೆಡೆಪ್ಪ ಪಿ.ಐ.  ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ 7 ಜನ ಆರೋಪಿತರು ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ದಿನಾಂಕ 28/04/2020 ರಂದು ಠಾಣೆಯಲ್ಲಿದ್ದಾಗ ಇಬ್ರಾಹಿಂಪೂರ ಗ್ರಾಮದ ಹನುಮಾನ ಗುಡಿಯ ಮುಂದೆ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಏಲೆಗಳ ಸಹಾಯದಿಂದ ಅಂದರ ಬಾಹಾರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಇಬ್ರಾಹಿಂಪೂರ ಗ್ರಾಮಕ್ಕೆ ಹೋಗಿ ದಾಳಿ ಮಾಡಿದ್ದು 7 ಜನ ಆರೋಪಿತರು ಸಿಕ್ಕಿದ್ದು ಅವರ ಹತ್ತಿರ ಮತ್ತು ಕಣದಲ್ಲಿ ಹಿಗೆ ಒಟ್ಟು 4820/- ರೂ ಹಾಗೂ 52 ಇಸ್ಪೇಟ ಏಲೆಗಳು ಸಿಕ್ಕಿದ್ದು ಮುದ್ದೆಮಾಲಗಳನ್ನು ದಿನಾಂಕ 28/04/2020 ರಂದು 15-30 ಗಂಟೆಯಿಂದ 16-30 ಗಂಟೆಯವರೆಗೆ  ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಸದರಿ  ಆರೋಪಿತರ ವಿರುದ್ದ ಠಾಣೆ ಗುನ್ನೆ ನಂ  131/2020 ಕಲಂ 87 ಕೆ.ಪಿ.,ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.


ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 35/2020 ಕಲಂ:273, 284 ಐಪಿಸಿ ಮತ್ತು 32, 34 ಕೆ.ಇ ಆಕ್ಟ್:- ಇಂದು ದಿನಾಂಕ:28.04.2020 ರಂದು 8:15 ಪಿಎಮ್ ಕ್ಕೆ ಪಿಎಸ್ಐ ರವರು ಠಾಣೆಗೆ ಹಾಜರಾಗಿ ತಾವು ಪೂರೈಸಿದ ಕಳ್ಳಭಟ್ಟಿ ಸರಾಯಿ ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲನ್ನು ಜ್ಞಾಪನಾ ಪತ್ರದೊಂದಿಗೆ ಹಾಜರ ಪಡಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದು. ಪಿಎಸ್ಐ ರವರು ಹಾಜರ ಪಡಿಸಿದ ಜ್ಞಾಪನಾ ಪತ್ರ ಹಾಗೂ ಕಳ್ಳಭಟ್ಟಿ ಸರಾಯಿ ಜಪ್ತಿ ಪಂಚನಾಮೆಯ ಸಾರಾಂಶವೆನೆಂದರೆ   ನಾನು ಇಂದು ದಿನಾಂಕ:28.04.2020 ರಂದು 5:00 ಪಿಎಮ್ ಕ್ಕೆ ಕಕ್ಕೇರಾ ಉಪ ಪೊಲೀಸ್ ಠಾಣೆಯಲ್ಲಿದ್ದಾಗ  ಕಕ್ಕೇರಾ  ದಿಂದ ಮಂಜಲಾಪೂಕ್ಕೆ ಹೋಗುವ ಮುಖ್ಯ ರಸ್ತೆಯ ಪಕ್ಕದಲ್ಲಿ ಕೆ.ಇ.ಬಿ ಹತ್ತಿರ ಯಂಕಪ್ಪ ತಂದೆ ರಾಶಪ್ಪ ಗುರಿಕಾರ ರವರ ಮನೆ ಸಮೀಪದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ವ್ಯಕ್ತಿಗಳು ರಸ್ತೆಯ ಪಕ್ಕದಲ್ಲಿ ನಿಂತು ಕಳ್ಳ ಭಟ್ಟಿ ಸರಾಯಿ ಮಾರಾಟ ಮಾಢುತ್ತಿರುವ ಬಗ್ಗೆ ಖಚಿತ ಭಾತ್ಮೀ ಬಂದಿದ್ದು, ದಾಳಿ ಕುರಿತು ಪಂಚರಾದ ಜೆಟ್ಟೆಪ್ಪ ತಂದೆ ಜೆಟ್ಟೆಪ್ಪ ದಳರ ಸಾ; ದಳರ ದೊಡ್ಡಿ ಕಕ್ಕೇರಾ, ಮಲ್ಲಪ್ಪ ತಂದೆ ಮಲ್ಲಪ್ಪ ಹುಲಿಕೇರಿ ಸಾ: ಅಸ್ಕೇರ ದೊಡ್ಡಿ ಕಕ್ಕೇರಾ ರವರಿಗೆ 5:10 ಪಿಎಮ್ ಕ್ಕೆ ಉಪ ಠಾಣೆಗೆ ಕರೆಯಿಸಿ ಸದರಿ ಪಂಚರಿಗೆ ಮತ್ತು  ಸಿಬ್ಬಂದಿಯವರಾದ  ಸಣೆಕೆಪ್ಪ ಹೆಚ್-27 ಬಸನಗೌಡ ಹೆಚ್ಸಿ-100, ರವಿಕೀರಣ ಹೆಚ್ಸಿ-39 ಚಂದಪ್ಪ ಪಿಸಿ-08  ವೆಂಕಟೇಶ ಪಿಸಿ-132 ರವರಿಗೆ ವಿಷಯ ತಿಳಿಸಿ  ನಂತರ 5:15 ಪಿಎಮ್ ಕ್ಕೆ   ಒಂದು ಖಾಸಗಿ ವಾಹನದಲ್ಲಿ ಉಪ ಠಾಣೆಯಿಂದ ಹೊರಟು ಬಾತ್ಮಿ ಬಂದ ಸ್ಥಳದ ಸಮೀಪಕ್ಕೆ 5:30 ಪಿ ಎಂ ಕ್ಕೆ ತಲುಪಿ  ಮರೆಯಲ್ಲಿ ವಾಹನವನ್ನು ನಿಲ್ಲಿಸಿ ವಾಹನದಿಂದ ಎಲ್ಲರೂ ಇಳಿದು ಬಾತ್ಮೀ ಬಂದ ಸ್ಥಳದ ಸಮೀಪ ನಡೆದುಕೊಂಡು ಹೋಗಿ 10-15 ನಿಮಿಷ ನಿಂತು ನೋಡಲಾಗಿ ಇಬ್ಬರೂ ನಿಂತು ಅನಧಿಕೃತವಾಗಿ ಸಾರ್ವಜನಿಕರಿಗೆ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುವವರು  ಖಚಿತ ಪಟ್ಟಿದ್ದು. ಸಿಬ್ಬಂದಿಯವರೊಂದಿಗೆ 5:45 ಪಿಎಮ್ ಕ್ಕೆ ದಾಳಿ ಮಾಡಿದಾಗ ಕಳ್ಳಭಟ್ಟಿ ಸರಾಯಿ ಕುಡಿಯಲು ಬಂದವರು ಹಾಗೂ ಮಾರಾಟ ಮಾಡುವವರು ನಮ್ಮನ್ನು ನೋಡಿ ಓಡಿ ಹೋಗಿದ್ದು  ಆಗ ಅಲ್ಲಿಯೇ ಇದ್ದ 1) ಹುಸೆನಸಾಬ ತಂದೆ ಮದನಸಾಬ ಶಹಾನಿ  ಸಾ:ಕಕ್ಕೇರಾ 2) ಮಹಿಬೂಬಸಾಬ ತಂದೆ ಮದನಸಾಬ ಶಹಾನಿ ಸಾ: ಕಕ್ಕೇರಾ ರವರಿಗೆ ಓಡಿ ಹೋದ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುವವರ ಹೆಸರು  ವಿಚಾರಿಸಲಾಗಿ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುವುವನ ಹೆಸರು 1) ವಿರುಪಾಕ್ಷಿ ತಂದೆ ಮಲ್ಲಿಕಾಜರ್ುನ ಅಂಗಡಿ ವ:27 ವರ್ಷ ಉ: ಒಕ್ಕಲುತನ ಜಾ: ಹಿಂದೂ ಬಣಜಿಗ ಸಾ: ಗೋಡಿಹಾಳ ತಾ: ಸುರಪೂರ 2) ಬಸವರಾಜ ತಂದೆ ಭೀಮಣ್ಣ ಘಂಟಿ ವ:40 ವರ್ಷ ಉ: ಗೌಂಡಿಕೆಲಸ ಜಾ: ಹಿಂದೂ ಕುರುಬರ ಸಾ: ಗೋಡಿಹಾಳ ತಾ: ಸುರಪೂರ ಅಂತಾ ತಿಳಿಸಿದ್ದು  ಸದರಿ ಸ್ಥಳ ಪರಶೀಲನೆ ಮಾಡಲಾಗಿ ಸದರಿ ಸ್ಥಳದಲ್ಲಿ ಒಂದು ಅಂದಾಜು 10 ಲೀಟರ್ ಅಳತೆಯ ಬಿಳಿಯ ಬಣ್ಣದ ಪ್ಲಾಸ್ಟಿಕ್ ಕ್ಯಾನ್ ಇದ್ದು, ಅದರಲ್ಲಿ ಅಂದಾಜು 6 ಲೀಟರ್ ದಷ್ಟು ಕಳ್ಳ ಭಟ್ಟಿ ಸಾರಾಯಿ ಇದ್ದು, ಅದರ ಅಂದಾಜು ಕಿಮ್ಮತ್ತು 600/- ರೂ  ಆಗುತ್ತಿದ್ದು ಹಾಗೂ ಕ್ಯಾನಿನ ಪಕ್ಕದಲ್ಲಿ ಐದು ಪ್ಲಾಸ್ಟಿಕ್ ಬಿಳಿ ಬಣ್ಣದ ಗ್ಲಾಸುಗಳು   ಹಾಗೂ ಸ್ಥಳದಲ್ಲಿ  ನಗದು ಹಣ 240/- ರೂಗಳು  ಇದ್ದು ಪ್ಲಾಸ್ತೀಕ್ ಕ್ಯಾನಿನಲ್ಲಿಯ 180 ಎಮ್ಎಲ್ ದಷ್ಟು ಕಳ್ಳಭಟ್ಟಿ ಸರಾಯಿಯನ್ನು ಒಂದು ಒಂದು ಗಾಜಿನ ಬಾಟಲಿಯಲ್ಲಿ ಹಾಕಿ ಅದನ್ನು ಒಂದು ಬಿಳಿಯ ಬಟ್ಟೆಯಲ್ಲಿ ಸುತ್ತಿ ದಾರದಿಂದ ಹೊಲಿದು ರಸಾಯನಿಕ ಪರೀಕ್ಷಗೆ ಕಳುಹಿಸುವ ಕುರಿತು. ಎಡಿಬಿ ಅಂತ ಇಂಗ್ಲೀಷ ಅಕ್ಷರದಿಂದ ಶಿಲ್ ಮಾಡಿಪಂಚರ ಮತ್ತು ನನ್ನ ಸಹಿ-ನಿಶಾನೆ ಚೀಟಿ ಅಂಟಿಸಿ ಜಪ್ತು ಮಾಡಿದ್ದು. ಸದರಿಯವಗಳನ್ನು ಇಂದು ದಿನಾಂಕ  28.04.2020 ರಂದು 5:45 ಪಿ ಎಂ ದಿಂದ 6:45 ಪಿ ಎಂದ ವರೆಗೆ ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚಾನಾಮೆ ಮಾಡುವ ಮೂಲಕ ಜಪ್ತುಪಡಿಸಿಕೊಂಡು ಮರಳಿ 8:15 ಪಿ ಎಂ ಕ್ಕೆ ಮರಳಿ ಠಾಣೆಗೆ ಬಂದು ನಾನು ಪೂರೈಸಿದ ಕಳ್ಳ ಭಟ್ಟಿ ಸಾರಾಯಿ ದಾಳಿ ಪಂಚನಾಮೆ ಮತ್ತು ಮುದ್ದೆಮಾಲನ್ನು ನಿಮ್ಮ ಮುಂದೆ ಹಾಜರುಪಡಿಸಿದ್ದು, ಸದರಿ ಪಂಚನಾಮೆ ಹಾಗು ಜ್ಞಾಪನಾ ಪತ್ರದ ಆದಾರದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ನಿಮಗೆ ಸೂಚಿಸಲಾಗಿದೆ. ಅಂತಾ ಇದ್ದು ಪಿ.ಎಸ್.ಐ ಸಾಹೇಬರು ಹಾಜರ ಪಡಿಸಿದ  ಜಪ್ತಿ ಪಂಚನಾಮೆ ಹಾಗು ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:35/2020 ಕಲಂ:273, 284 ಐಪಿಸಿ ಮತ್ತು 32, 34 ಕೆ.ಇ ಆಕ್ಟ್ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.. 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!