ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 27/04/2020
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:-. ಯು.ಡಿ ಆರ್.ನಂ.08/2020 ಕಲಂ 174 ??.???.??.??:- ಇಂದು ದಿನಾಂಕ,27/04/2020 ರಂದು 11-15 ಎಎಂಕ್ಕೆ ರಾಯಚೂರು ರಿಮ್ಸ್ ಆಸ್ಪತ್ರೆಯಿಂದ ಡೆತ್ ಎಮ್.ಎಲ್.ಸಿ ಮಾಹಿತಿ ಮೇರೆಗೆ ರಿಮ್ಸ್ ಆಸ್ಪತ್ರೆ ರಾಯಚೂರಗೆ 1-15 ಪಿಎಮ್ ಕ್ಕೆ ಭೇಟಿ ನೀಡಿ ಎಮ್.ಎಲ್.ಸಿ ವಸೂಲ ಮಾಡಿಕೊಂಡು ಹಾಜರಿದ್ದ ಮೃತನ ಹೆಂಡತಿ ಪಿರ್ಯಾಧಿ ಶ್ರೀಮತಿ ಹಸೀನಾ ಬೇಗಂ ಗಂಡ ಮಹ್ಮದ ಮಜೀಬ ಜೈನಾವಾಲೆ ಸಾ; ಪಟೇಲವಾಡಿ ಯಾದಗಿರಿ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನನ್ನ ಗಂಡನಾದ ಮಹ್ಮದ ಮಜೀಬ ತಂದೆ ಅಬ್ದುಲ ಅಜೀಜ ಜೈನಾವಾಲೆ ವ;45 ಜಾ; ಮುಸ್ಲಿಂ ಉ; ಆಟೋಚಾಲಕ ಸಾ; ಪಟೇಲವಾಡಿ ಯಾದಗಿರಿ ಈತನು ಆಟೋ ಚಾಲನೆ ಮಾಡಿಕೊಂಡಿದ್ದು ನಮಗತೆ 3 ಜನ ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು ಇರುತ್ತಾರೆ. ನನ್ನ ಗಂಡನಿಗೆ ಸುಮಾರು 8-9 ವರ್ಷಗಳಿಂದ ಮೈಯಲ್ಲಿ ಆರಾಮವಿರಲಿಲ್ಲ ಮತ್ತು ಮಾನಸಿಕ ಅಸ್ವಸ್ಥನಂತೆ ವತರ್ಿಸುತ್ತಿದ್ದನು. ನನ್ನ ಗಂಡನಿಗೆ ಆರಾಮವಿಲ್ಲದ ಹಲವಾರು ಮಾನಸಿಕ ಆಸ್ಪತ್ರೆಗಳಿಗೆ ತೋರಿಸಿದರು ಕಡಿಮೆ ಆಗಿರಲಿಲ್ಲ. ಬೆಸಿಗೆ ಕಾಲದಲ್ಲಿ ಬಿಸಿಲಿನ ಕಾರಣದಿಂದ ಹೆಚ್ಚಾಗಿ ಮಾನಸಿಕವಾಗಿ ವತರ್ಿಸುತ್ತಿದ್ದನು. ನನ್ನ ಗಂಡ ಮಹ್ಮದ ಮುಜೀಬನು ಸಿಟ್ಟಿಗೆ ಬರುವುದು ಮಾಡಿಕೊಂಡು ಮನೆಯಲ್ಲಿ ಹುಚ್ಚು ಹುಚ್ಚು ಮಾಡುತ್ತಿದ್ದನು. ಹಿಗೀದ್ದು ಇಂದು ದಿನಾಂಕ; 27/04/2020 ರಂದು ಬೆಳೆಗ್ಗೆ ನಾವು ಮನೆಯವರೆಲ್ಲರೂ ರಂಜಾನ ಇದ್ದ ಕಾರಣ ಬೆಳಗಿನ ಜಾವ ಎದ್ದು ಪ್ರಾರ್ಥನೆ ಮುಗಿಸಿಕೊಂಡು ನಂತರ ಮಲಗಿದಾಗ ನಮ್ಮ ಮನೆಯ ಮುಂದೆ 8-00 ಎಎಮ್ ಸುಮಾರಿಗೆ ಚಿರಾಡುವ ಸಪ್ಪಳ ಕೇಳಿ ನಾನು ಮತ್ತು ನನ್ನ ಮಕ್ಕಳು ಕೂಡಿಕೊಂಡು ಹೊರಗೆ ಬಂದು ನೋಡಲಾಗಿ ನನ್ನ ಗಂಡ ಮಹ್ಮದ ಮುಜೀಬ ಈತನು ಮೈಗೆ ಬೆಂಕಿ ಹಚ್ಚಿಕೊಂಡಿದ್ದು ನಾವು ಬೆಂಕಿಯನ್ನು ಆರಿಸಿ ಕೂಡಲೇ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಅಂಬುಲೆನ್ಸದಲ್ಲಿ ಕರೆದುಕೊಂಡು ಹೋದಾಗ ಹೆಚ್ಚಿನ ಉಪಚಾರ ಕುರಿತು ಯಾದಗಿರದಿಂದ ರಾಯಚೂರಿಗೆ ಕಳಿಸಿಕೊಟ್ಟಿದ್ದು ಅಂಬುಲೆನ್ಸದಲ್ಲಿ ರಾಯಚೂರಿಗೆ ಬರುತ್ತಿರುವಾಗ ಯರಮರಸ್ ಹತ್ತಿರ 10-30 ಎಎಮ್ ಸುಮಾರಿಗೆ ಮೃತಪಟ್ಟಿದ್ದು ರಾಯಚೂರು ರಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ದೇಹದ ತುಂಬಾ ಸುಟ್ಟ ಗಾಯಗಳು ಆಗಿರುತ್ತವೆ. ಕಾರಣ ನನ್ನ ಗಂಡನು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ಆರಾಮವಾಗದ ಕಾರಣ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಇಂದು ಬೆಳೆಗ್ಗೆ 8-00 ಎಎಮ್ ಸುಮಾರಿಗೆ ಮನೆಯ ಮುಂದೆ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದು ಯಾರ ಮೇಲೆಯೂ ಸಂಶಯ ಇರುವುದಿಲ್ಲ. ಮುಂದಿನ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ನೀಡಿದ್ದು ಪಡೆದುಕೊಂಡು ನಂತರ ಮೃತನ ಶವಮಹಜರ ಪಂಚನಾಮೆ ಹಾಗೂ ಮೃತದೇಹವನ್ನು ಪಿ.ಎಮ್.ಇ ಗೆ ಒಳಪಡಿಸಿ ಮರಳಿ ಠಾಣೆಗೆ 7-00 ಪಿಎಮ್ ಕ್ಕೆ ಬಂದು ಪಿರ್ಯಾಧಿಯ ಹೇಳಿಕೆಯ ಸಾರಾಂಶದ ಮೇಲಿಂದ ಯಾದಗಿರಿ ನಗರ ಠಾಣೆ ಯು.ಡಿ.ಆರ್ ನಂ.08/2020 ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 34/2020 ಕಲಂ: 457,380 ಐಪಿಸಿ:- ಇಂದು ದಿನಾಂಕ 27.04.2020 ರಂದು 11:30 ಎಎಮ್ಕ್ಕೆ ಫಿಯರ್ಾದಿ ಬಸವರಾಜ ತಂದೆ ಸಂಗಪ್ಪ ಗುತ್ತೇದಾರ ವ:51 ವರ್ಷ ಉ: ಸ.ಹಿ.ಪ್ರಾ. ಶಾಲೆ ಕಕ್ಕೇರಾ ಮುಖ್ಯಗುರುಗಳು ಜಾ: ಇಳಿಗೇರ್ ಸಾ: ಬೊಮ್ಮಗುಡ್ಡ ಹಾ:ವ: ರಾಜನಕೊಳೂರು ತಾ-ಹುಣಸಗಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿಕೊಂಡು ತಂದು ಹಾಜರುಪಡಿಸಿದ ಅಜರ್ಿಯ ಸಾರಾಂಶವೆನೆಂದರೆ ನಾನು ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಕಕ್ಕೇರಾದಲ್ಲಿ ದಿನಾಂಕ:21.04.2016 ರಿಂದ ಮುಖ್ಯ ಗುರುಗಳು ಅಂತ ಕರ್ತವ್ಯ ನಿರ್ವಹಿಸುತ್ತಿದ್ದು. ನಮ್ಮ ಶಾಲೆಯು ಮಾರ್ಚ 16 ರಿಂದ ಕೊರೊನೊ ನಿಮಿತ್ಯ ರಜೆ ಘೋಷಿಸಿದ್ದರಿಂದ ನಮ್ಮ ಶಾಲೆಯ ನನ್ನೊಂದಿಗೆ ಕೆಲಸ ಮಾಡುವ ಸಹ ಶಿಕ್ಷಕರಾದ ರಮಜಾನ ತಂದೆ ಸೈಪನ್ ಸಾಬ ಲೋಣಿ ಸಾ: ಚಡಚಣ, ರವಿ ತಂದೆ ಬಸವಂತಪ್ಪ ಭಜಂತ್ರಿ ಸಾ: ಗೂಡುರು ತಾ: ಇಲ್ಕಲ್ಲ, ಕುಮಾರಿ ರಿಜ್ವಾನಾ ಬೇಗಂ ತಂದೆ ಲಾಲಸಾ ನದಾಪ್ ಸಾ: ಚನ್ನೂರು ಇವರುಗಳು ತಮ್ಮ-ತಮ್ಮ ಊರಿಗೆ ಹೋಗಿದ್ದು. ನಾನು ಆಗಾಗ ನಮ್ಮ ಶಾಲೆಗೆ ಹೋಗಿ ಶಾಲಾ ಮಕ್ಕಳಿಗೆ ಅಕ್ಕಿ ವಿತರಿಸಲು ಹಾಗೂ ಇತರ ಶಾಲೆಯ ಕೆಲಸಗಳನ್ನು ಮಾಡುತ್ತಿದ್ದು. ನಮ್ಮ ಶಾಲೆಗೆ ಡಿಡಿಪಿಐ ಯಾದಗಿರಿ ರವರ ಕಾರ್ಯಲಯದಿಂದ ಮಕ್ಕಳಿಗೆ ಕಲಿಸಲು 5 ಹೆಚ್ಪಿ ಕಂಪನಿಯ ಕಂಪ್ಯೂಟರ್ಗಳನ್ನು ಕೊಟ್ಟಿದ್ದು. ಅವುಗಳನ್ನು ಕಂಪ್ಯೂಟರ್ ಕೋಣೆಯಲ್ಲಿ ಇಟ್ಟಿದ್ದು ಇರುತ್ತದೆ. ನಾನು ದಿನಾಂಕ:22/04/2020 ರಂದು ಬೆಳಿಗ್ಗೆ 10:00 ಗಂಟೆಗೆ ನಮ್ಮ ಶಾಲೆಗೆ ಹೋಗಿದ್ದು. ಶಾಲೆಯಲ್ಲಿಯ ಎಲ್ಲಾ ಕೊಠಡಿಗಳನ್ನು ಪರಿಶೀಲಿಸಿದ್ದು. ಎಲ್ಲಾ ಕೊಠಡಿಗಳು ಹಾಗೂ ಕಂಪ್ಯೂಟರ್ ಕೋಣೆಯು ಸುಸ್ಥಿತಿಯಲ್ಲಿದ್ದು. ಎಲ್ಲಾ ಕೋಣೆಗಳಿಗೆ ಕೀಳಿ ಹಾಕಿಕೊಂಡು ನಾನು ಸಾಯಂಕಾಲ 4:00 ಗಂಟೆಯ ಸುಮಾರಿಗೆ ಕಕ್ಕೇರಾದಿಂದ ರಾಜನಕೊಳೂರಕ್ಕೆ ಬಂದಿದ್ದು. ನಂತರ ದಿನಾಂಕ: 23.04.2020 ರಂದು ಬೆಳಿಗ್ಗೆ 9:00 ಎಎಮ್ ಕ್ಕೆ ನಾನು ರಾಜನಕೊಳುರದಲ್ಲಿದಾಗ ಕಕ್ಕೇರಾ ಉದರ್ು ಶಾಲೆಯ ಶಿಕ್ಷಕರಾದ ಇಸ್ಮಾಯಿಲ್ ತಂದೆ ಸಾಹೇಬ ಪಟೇಲ್ ಇಂಡಿ ಇವರು ನನಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ ನಾನು ನಮ್ಮ ಶಾಲೆಗೆ ಹೋಗುವಾಗ ನಿಮ್ಮ ಶಾಲೆಯ ಕಂಪ್ಯೂಟರ್ ಕೋಣೆಯ ಶಾಲೆಯ ಬಾಗಿಲಿಗೆ ಹಾಕಿದ ಕೀಲಿ ಮುರಿದಿದ್ದು. ಬಾಗಿಲು ತೆರೆದಿದ್ದು. ನೀನು ಬೇಗನೇ ಬಾ ಅಂತಾ ತಿಳಿಸಿದ ಮೇರೆಗೆ ನಾನು 9:45 ಎಎಮ್ ಕ್ಕೆ ನಮ್ಮ ಶಾಲೆಗೆ ಹೋಗಿದ್ದು. ಅಲ್ಲಿ ನನಗೆ ಪೋನಾ ಮಾಡಿದ ಇಸ್ಮಾಯಿಲ್ ಶಿಕ್ಷಕರು ಮತ್ತು ಗ್ರಾಮದ ಬಸಪ್ಪ ತಂದೆ ಪರಮಣ್ಣ ಪುಟ್ಟೇರ್ ರವರು ಇದ್ದು ಎಲ್ಲರೂ ಕೂಡಿ ನಮ್ಮ ಶಾಲೆಯ ಕಂಪ್ಯೂಟರ್ ಕೋಣೆಯ ಹತ್ತಿರ ಹೋಗಿ ನೋಡಲಾಗಿ ಕಂಪ್ಯೂಟರ್ ಇಟ್ಟಿರುವ ಶಾಲೆಯ ಕೋಣೆಯ ಬಾಗಿಲಿಗೆ ಹಾಕಿದ ಕೀಲಿ ಮುರಿದಿದ್ದು. ಕೀಲಿ ಕಪ್ಪೆಯು ಅಲ್ಲಿಯೇ ಬಿದ್ದಿದ್ದು. ಬಾಗಿಲು ತೆರೆದಿದ್ದು. ನಾವೆಲ್ಲರೂ ಒಳಗಡೆ ಹೋಗಿ ನೋಡಲಾಗಿ ಕಂಪ್ಯೂಟರ್ ಕೋಣೆಯಲ್ಲಿಟ್ಟಿದ್ದ. ಹೆಚ್ಪಿ ಕಂಪನಿಯ 4 ಮಾನಿಟರ್ಗಳು ಇವುಗಳ ಅ:ಕಿ: 4,000/- ರೂ, ಹಾಗೂ ಒಂದು ಹೆಚ್ಪಿ ಕಂಪನಿಯ ಸಿ.ಪಿ.ಯು ಅ:ಕಿ:2,000/- ರೂ ಹೀಗೆ ಒಟ್ಟು 6,000 ಮೌಲ್ಯದ ಮಾನಿಟರ್ಗಳು, ಮತ್ತು ಸಿಪಿಯು ಅನ್ನು ಯಾರೋ ಕಳ್ಳರು ದಿನಾಂಕ:22.04.2020 ರ ರಾತ್ರಿ 10:00 ಗಂಟೆಯಿಂದ ದಿನಾಂಕ:23.04.2020 ರ ಬೆಳಗಿನ 9:00 ಗಂಟೆಯ ಮಧ್ಯದ ಅವಧಿಯಲ್ಲಿ ಕಂಪ್ಯೂಟರ್ ಕೋಣೆಗೆ ಹಾಕಿದ ಕೀಲಿಯನ್ನು ಮುರಿದು ಒಳಗೆ ಹೋಗಿ ಕಳುವು ಮಾಡಿಕೊಂಡು ಹೋಗಿದ್ದು. ನಾನು ನನ್ನ ಮೇಲಾಧಿಕಾರಿಗಳೊಂದಿಗೆ ಈ ಬಗ್ಗೆ ವಿಚಾರ ಮಾಡಿಕೊಂಡು ತಡವಾಗಿ ಬಂದು ದೂರು ನೀಡಿದ್ದು. ನಾನು ಕಳುವಾದ ನಮ್ಮ ಶಾಲೆಯ ಮಾನಿಟರ್ ಗಳನ್ನು ಮತ್ತು ಸಿಪಿಯುನ್ನು ನೋಡಿದಲ್ಲಿ ಗುರುತಿಸುತ್ತೇನೆ. ನಮ್ಮ ಶಾಲೆಯ ಕಕ್ಕೇರಾ ಪಟ್ಟಣದ ವಾಲ್ಮೀಖಿ ವೃತ್ತ ಹತ್ತಿರ ಇದ್ದುದರಿಂದ ಅನೇಕ ಜನ ಸಾರ್ವಜನಿಕರು ಮತ್ತು ಮಕ್ಕಳು ಸುದ್ದಿ ತಿಳಿದು ಬಂದು ನೋಡಿ ಹೋಗಿರುತ್ತಾರೆ. ತಾವು ಸದರಿ ಕಳ್ಳರನ್ನು ಪತ್ತೆ ಮಾಡಿ ಕಳುವಾದ ಮಾನಿಟರ್ಗಳು ಮತ್ತ ಸಿ.ಪಿಯು ಗಳನ್ನು ಪತ್ತೆ ಮಾಡಿ ಕಳುವು ಮಾಡಿದ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:34/2020 ಕಲಂ:457 380 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 29/2020 ಕಲಂ: 32, 34 ಕೆ.ಇ ಆಕ್ಟ್ ಮತ್ತು 273, 284 ಐಪಿಸಿ:-ದಿನಾಂಕ: 25/04/2020 ರಂದು ರಾತಿ 6:40 ಪಿ.ಎಂ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ತಾವು ಪೂರೈಸಿದ ಕಳ್ಳಭಟ್ಟಿ ಸಾರಾಯಿ ದಾಳಿ ಮಾಡಿದ ಜಪ್ತಿ ಪಂಚನಾಮೆ ಹಾಗು ಮುದ್ದೆಮಾಲಿನೊಂದಿಗೆ ಠಾಣೆಗೆ ಹಾಜರಾಗಿ ಜ್ಞಾಪನಾ ಪತ್ರ ನೀಡಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದು, ಅದರ ಸಾರಾಂಶವೆನೆಂದರೆ, ದಿನಾಂಕ: 25/04/2020 ರಂದು 4:45 ಪಿ.ಎಂ ಕ್ಕೆ ನಾನು ಠಾಣೆಯಲ್ಲಿ ಇದ್ದಾಗ ನಾರಾಯಣಪೂರ ಯು.ಕೆ.ಪಿ ಕ್ಯಾಂಪದಲ್ಲಿ ಜಿ-56 ಮನೆಯ ಹಿಂದುಗಡೆ ಕೆ.ಬಿ.ಜೆ.ಎನ್.ಎಲ್ ಖುಲ್ಲಾ ಜಾಗೆಯಲ್ಲಿ ವ್ಯಕ್ತಿ ಅನಧಿಕೃತವಾಗಿ ಕಳ್ಳ ಭಟ್ಟಿ ಸರಾಯಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಹಾಗು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಠಾಣೆಯಿಂದ ಸರಕಾರಿ ಜೀಪ್ ನಂ ಕೆ.ಎ-33 ಜಿ.0098 ನೇದ್ದರಲ್ಲಿ ಠಾಣೆಯಿಂದ 5:10 ಹೊರಟು ಭಾತ್ಮೀ ಬಂದ ಸ್ಥಳಕ್ಕೆ 5:15 ಪಿ.ಎಮ್ ಕ್ಕೆ ಹೋಗಿ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುವದನ್ನು ಖಾತರಿ ಪಡಿಸಿಕೊಂಡು ದಾಳಿ ಕುರಿತು ಹತ್ತಿರ ಹೋಗುತ್ತಿರುವಾಗ ಸಮವಸ್ತ್ರದಲ್ಲಿದ್ದ ನಮಗೆ ನೋಡಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದವನು ಓಡಿ ಹೋಗಿದ್ದು ನಾವು ಅವನನ್ನು ನೋಡಿ ಗುತರ್ಿಸಿದ್ದು ನಂತರ ನಾನು ಪೊಲೀಸ್ ಬಾತ್ಮಿದಾರರಿಗೆ ಓಡಿಹೋದವನ ಹೆಸರು ವಿಚಾರಿಸಲಾಗಿ ಅವರು ಅವನ ಹೆಸರು ಕಣ್ಣಪ್ಪ ತಂದೆ ಮೋತಿಲಾಲ್ ರಾಠೋಡ ವಯ:33ವರ್ಷ, ಜಾ:ಹಿಂದೂ ಲಂಬಾಣಿ, ಉ:ಕೂಲಿ ಕೆಲಸ ಸಾ:ಬಸರಿಗಿಡದ ತಾಂಡಾ ಹಾ:ವ:ನಾರಾಯಣಪೂರ ಯು.ಕೆ.ಪಿ ಕ್ಯಾಂಪ್ ಅಂತಾ ತಿಳಿಸಿದ್ದು ಇರುತ್ತದೆ. ನಂತರ ಸ್ಥಳದಲ್ಲಿ ಇದ್ದ ಅಂದಾಜು 05 ಲೀಟರ್ ಅಳತೆಯ ಒಂದು ಬಿಳಿಯ ಪ್ಲಾಸ್ಟಿಕ್ ಕ್ಯಾನ್ ಇದ್ದು, ಅದರಲ್ಲಿ ಅಂದಾಜು 4. 1/2 ಲೀಟರ್ ದಷ್ಟು ಕಳ್ಳ ಭಟ್ಟಿ ಸಾರಾಯಿ ಇದ್ದು, ಅದರ ಅಂದಾಜು 450/- ರೂ ಆಗುತ್ತಿದ್ದು ಹಾಗೂ ಕ್ಯಾನಿನ ಪಕ್ಕದಲ್ಲಿ ಒಂದು ಸ್ಟಿಲನ ಗ್ಲಾಸ ಇದ್ದು ಕಳ್ಳಭಟ್ಟಿ ಸಾರಾಯಿ ಇದ್ದ ಕ್ಯಾನನ್ನು ಮತ್ತು ಒಂದು ಸ್ಟೀಲ್ನ ಗ್ಲಾಸನ್ನು ಪ್ರಕರಣದ ಮುಂದಿನ ತನಿಖೆ ಕುರಿತು ವಶಕ್ಕೆ ತಗೆದುಕೊಂಡು ಸದರಿಯವನು ಮಾನವನು ಸೇವಿಸಿದರೆ ಜೀವಕ್ಕೆ ಹಾನಿಯುಂಟಾಗುವ ಕಳ್ಳಬಟ್ಟಿ ಸಾರಾಯಿಯನ್ನು ಅನಧಿಕೃತವಾಗಿ ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು ದಿನಾಂಕ: 25/04/2020 ರಂದು 5:30 ಪಿ.ಎಮ್ ದಿಂದ 6:30 ಪಿ.ಎಮ್ ವರೆಗೆ ಕೈಕೊಂಡು 6:40 ಪಿ.ಎಂ ಕ್ಕೆ ಜಪ್ತಿ ಮಾಡಿದ ಮುದ್ದೆಮಾಲನ್ನು ಜಪ್ತಿ ಪಂಚನಾಮೆಯೊಂದಿಗೆ ತಮ್ಮ ವಶಕ್ಕೆ ಈ ಜ್ಞಾಪನ ಪತ್ರದೊಂದಿಗೆ ನೀಡುತ್ತಿದ್ದು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅಂತಾ ಇದ್ದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:29/2020 ಕಲಂ: 32, 34, ಕೆ.ಇ ಆಕ್ಟ ಮತ್ತು 273, 284, ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 55/2020 273, 328 ಐಪಿಸಿ ಮತ್ತು ಕಲಂ: 32, 34 ಕೆಇ ಯಾಕ್ಟ:- ಇಂದು ದಿನಾಂಕ: 27/04/2020 ರಂದು 08.25 ಪಿಎಮ್ ಕ್ಕೆ ಶ್ರೀ ಸೋಮಲಿಂಗ್ ಒಡೆಯರ ಪಿಎಸ್ಐ ಗೋಗಿ ಪೊಲೀಸ ಠಾಣೆ ರವರು ಮುದ್ದೇಮಾಲು ಮತ್ತು ಜಪ್ತಿಪಂಚನಾಮೆ ತಂದು ಹಾಜರ್ ಪಡಿಸಿ ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದು ವರದಿ ನೀಡಿದ್ದು, ಸದರಿ ವರದಿ ಸಾರಾಂಶವೆನೆಂದರೆ, ಗಂಗನಾಳ ಗ್ರಾಮದ ಕ್ರಾಸ್ ನಲ್ಲಿನ ಬಸ್ ತಂಗುದಾಣದ ಹತ್ತಿರ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕಳ್ಳಬಟ್ಟಿ ಸರಾಯಿಯು ಮಾನವ ಜೀವಕ್ಕೆ ಹಾನಿಕಾರಕ ಅಂತಾ ಗೊತ್ತಿದ್ದು, ಕೂಡ ಕಳ್ಳ ಬಟ್ಟಿ ಸರಾಯಿ ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಕೊಂಡು 06.20 ಪಿಎಂಕ್ಕೆ ದಾಳಿ ಮಾಡಿದ್ದು, ಅನಧಿಕೃತವಾಗಿ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯು ಓಡಿ ಹೋಗಿದ್ದು, ಅವನ ಹೆಸರು ವಿಚಾರಿಸಿಲಾಗಿ ಸಿದ್ದಪ್ಪ ತಂದೆ ಕನಕಪ್ಪ ಟಣಕೇದಾರ ಜಾ: ಬೇಡರ ಸಾ: ಗಂಗನಾಳ ತಾ: ಶಹಾಪೂರ ಅಂತಾ ತಿಳಿದು ಬಂದಿದ್ದು, ಸ್ಥಳದಲ್ಲಿ ಮೇಲಿನ ಮುದ್ದೆ ಮಾಲು, ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿಪಡಿಸಿಕೊಂಡು ಮುದ್ದೆಮಾಲು, ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ಸೂಚಿಸಿ ವರದಿ ನೀಡಿದ್ದು, ಸದರಿ ವರದಿ ಸಾರಂಶದ ಮೇರೆಗೆ ಠಾಣೆ ಗುನ್ನೆ ನಂ: 55/2020 ಕಲಂ: 273, 328 ಐಪಿಸಿ ಮತ್ತು ಕಲಂ: 32, 34 ಕೆಇ ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using