ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26/04/2020
ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 30/2020 ಕಲಂ: 87 ಕೆ.ಪಿ ಯಾಕ್ಟ್:- ದಿನಾಂಕ: 26/04/2020 ರಂದು 4:00 ಪಿ.ಎಂ ಕ್ಕೆ ಶ್ರೀ ಅಜರ್ುನಪ್ಪ ಅರಕೇರಾ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಫನ ಪತ್ರ ನೀಡಿದ್ದು ಇದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಜೋಗುಂಡಬಾವಿ ಸೀಮಾಂತರದ ಸಿದ್ದಪ್ಪ ತಂದೆ ನರಸಪ್ಪ ಬಿರಾದಾರ ಇವರ ಹೂಲದಲಿ ಇಸ್ಪೆಟ ಜೂಜಾಟ ಆಡುತ್ತಿದ್ದಾರೆ ಖಚಿತ ಬಾತ್ಮಿ ಬಂದ ಮೇರೆಗೆ ಜೂಜಾಟ ಆಡುವವರ ಮೇಲೆ ಎಪ್.ಐ ಆರ್ ದಾಖಲಿಸಲು ದಾಳಿಮಾಡುವ ಕುರಿತು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು ಕಾರಣ ನೀವು ಎಪ್ ಐ ಆರ್ ದಾಖಲಿಸಲು ಸೂಚಿಸಿದ ಅಂತಾ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 30/2020 ಕಲಂ 87, ಕೆಪಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.
ನಂತರ ಮಾನ್ಯ ಪಿ.ಎಸ್.ಐ ಸಾಹೇಬರು 6:40 ಪಿ.ಎಂ ಕ್ಕೆ ಮರಳಿ ಠಾಣೆಗೆ ಬಂದು 7 ಜನ ಆರೋಪಿತರು ನಗದು ಹಣ 10680/- ರೂ, 52 ಇಸ್ಪೆಟ ಎಲೆಗಳನ್ನು ಜಪ್ತುಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಫನ ಪತ್ರ ನೀಡಿದ್ದು ಇರುತ್ತದೆ.
ಆರೋಪಿತರ ಹೆಸರು ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
1).ಹುಲಗಪ್ಪ ತಂದೆ ಸಾಬಣ್ಣ ಬಿರಾದಾರ ವ:25 ವರ್ಷ ಉ:ಕೂಲಿ ಕೆಲಸ ಜಾ:ಕುರಬರ ಸಾ:ಕಮಾಲಪೂರ
2). ಬಸಪ್ಪ ತಂದೆ ದೊಡ್ಡಪ್ಪ ಬಿರಾದಾರ ವ:42 ವರ್ಷ ಉ:ಒಕ್ಕಲುತನ ಜಾ:ಕುರಬರ ಸಾ;ಕಮಾಲಪೂರ
3)ದೊಡ್ಡಪ್ಪ ತಂದೆ ಸಿದ್ದಪ್ಪ ಬಿರಾದಾರ ವ:40 ವರ್ಷ ಉ:ಕೂಲಿ ಕೆಲಸ ಜಾ:ಕುರಬರ ಸಾ:ಕಮಾಲಪೂರ
4) ನಬಿರಸೂಲ ತಂದೆ ಅಬ್ದುಲಸಾಬ ದೊಡ್ಡಮನಿ ವ:30 ವರ್ಷ ಉ:ಕೂಲಿ ಕೆಲಸ ಜಾ:ಮುಸ್ಲಿಂ ಸಾ:ಮಾರನಾಳ
5) ಶಿವಪ್ಪ ತಂದೆ ನಾಗಪ್ಪ ಮಾಲಿಗೌಡ ವ:35 ವರ್ಷ ಉ:ಕೂಲಿ ಕೆಲಸ ಜಾ:ಕುರಬರ ಸಾ:ಮಾರನಾಳ
6) ಬಸಪ್ಪ ತಂದೆ ಯಮನಪ್ಪ ಲೋಟಗೇರಿ ವ:40 ವರ್ಷ ಉ:ಕೂಲಿ ಕೆಲಸ ಜಾ:ಕುರಬರ ಸಾ:ವಿರೇಶನಗರ
7) ವಿರೇಶ ತಂದೆ ಜಂಬುನಾಥ ಕುಸಬಿ ವ:35 ವರ್ಷ ಉ:ವ್ಯಾಪಾರ ಜಾ:ಲಿಂಗಾಯತ ಸಾ:ವಿರೇಶನಗರ
7 ಜನ ಆರೋಪಿತರು ಓಡಿಹೋಗಿರುತ್ತಾರೆ ಅವರ ಹೆಸರು ಈ ಕೇಳಗಿನಂತೆ ಇರುತ್ತದೆ
1) ಬಸಪ್ಪ ಬಿರಾದಾರ ಸಾ:ಕಮಾಲಪೂರ
2) ನಾಗಪ್ಪ ಬಿರಾದಾರ ಸಾ:ಕಮಾಲಪೂರ
3) ಬಸಪ್ಪ ತಂದೆ ಗಂಗಪ್ಪ ಬಂಗಾಳಿ ಸಾ:ವಿರೇಶನಗರ
4) ಯಮನಪ್ಪ ತಂದೆ ಮುದಕಪ್ಪ ನಾಗರಬಟ್ಟದರ ಸಾ:ಮಾರನಾಳ
5) ಬೀರಪ್ಪ ತಂದೆ ಬಸಪ್ಪ ಎಮ್ಮೇರ ಸಾ:ಮಾರನಾಳ
6) ಬಸಪ್ಪ ತಂದೆ ಬಸಣ್ಣ ಸಾ:ಮಾರನಾಳ
7) ದಸ್ತಪ್ಪ ತಂದೆ ಬಸಪ್ಪ ಎಮ್ಮೇರ ಸಾ:ಮಾರನಾಳ
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:-. 74/2020 ಕಲಂ: 87 ಕೆಪಿ ಯಾಕ್ಟ:- ಇಂದು ದಿ : 26/04/2020 ರಂದು 16.30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಕೊಟ್ಟ ಜ್ಞಾಪನ ಪತ್ರದ ಸಾರಾಂಶವೇನೆಂದರೆ, ಇಂದು ದಿನಾಂಕ:26.04.2020 ರಂದು 1500 ಗಂಟೆಗೆ ಕೆಂಭಾವಿ ಪೊಲೀಸ್ ಠಾಣೆಯ ಹದ್ದಿಯ ಪೈಕಿ ಮಾಳಳ್ಳಿ ಗ್ರಾಮದ ಕಡೆಗೆ ಕರೋನಾ ಮಹಮಾರಿ ನಿಮಿತ್ಯವಾಗಿ ಪೆಟ್ರೋಲಿಂಗ ಕುರಿತು ಹೋದಾಗ ಮಾಳಳ್ಳಿ ಸೀಮಾಂತರದ ಅಯ್ಯಣಗೌಡ ಪಾಟೀಲ ಇವರ ಹೊಲದ ಪಕ್ಕದ ರಸ್ತೆಯ ಪಕ್ಕದ ಹುಣಸಿ ಮರದ ಕೆಳಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ್-ಬಾಹರ್ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಖುದ್ದಾಗಿ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಸುಮಾರು 06-07 ಜನರು ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ 1520 ಗಂಟೆಗೆ ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡು ನಂತರ ಠಾಣೆಗೆ 1540 ಗಂಟೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು 1630 ಗಂಟೆಗೆ ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ. 74/2020 ಕಲಂ : 87 ಕೆಪಿ ಆಕ್ಟ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು. ನಂತರ ಪಿರ್ಯಾದಿದಾರರು ದಾಳಿ ಕೈಕೊಂಡಿದ್ದು ದಾಳಿಯಲ್ಲಿ 07 ಜನ ಆರೋಪಿತರಿಗೆ ದಸ್ತಗಿರಿ ಮಾಡಿದ್ದು ಕಣದಲ್ಲಿ ಸಿಕ್ಕ 13,000/- ರೂಪಾಯಿ ನಗದು ಹಣ ಹಾಗು 52 ಇಸ್ಪೀಟ ಎಲೆಗಳನ್ನು ಹಾಗು 1 ಬಿಳಿ ಬರಕಾವನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ ಅಂತ ಮಾನ್ಯರವರಲ್ಲಿ ವಿನಂತಿ ಇರುತ್ತದೆ.
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 08/2020 174 ಸಿ.ಆರ್.ಪಿ.ಸಿ:- ಇಂದು ದಿನಾಂಕ: 26/04/2020 ರಂದು 08.30 ಪಿಎಮ್ ಕ್ಕೆ ಅಜರ್ಿದಾರನಾದ ಶ್ರೀ. ಪ್ರೇಮಚಂದ ತಂದೆ ವೇದ ಪ್ರಕಾಶ ವಯಾ:33 ಉ: ರಾಶಿಮಸಿನ ಆಪರೇಟರ ಜಾ: ಜಾಟ ಸಾ: ರಾಜೋಲ್ಕಾ ತಾ:ಜಿ: ಪಲ್ವಲ್ ರಾಜ್ಯ; ಹರಿಯಾಣ ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದನೆಂದರೆ, ನಾನು ಮತ್ತು ನಮ್ಮ ಅಣ್ಣನಾದ ಭಗತಸಿಂಗ್ ತಂದೆ ವೇದ ಪ್ರಕಾಶ ವಯಾ:39 ಉ: ಭತ್ತದ ರಾಶಿಮಸಿನ್ ಆಪರೇಟರ ಜಾ: ಜಾಟ ಸಾ: ರಾಜೋಲ್ಕಾ ತಾ:ಜಿ: ಪಲ್ವಲ್ ರಾಜ್ಯ: ಹರಿಯಾಣ ಇಬ್ಬರು ಭತ್ತದ ರಾಶಿಮಸಿನ ಆಪರೇಟರ ಅಂತಾ ಕೆಲಸ ಮಾಡುತ್ತೇವೆ. ನಾವು ಇಬ್ಬರು ಸುಮಾರು 4 ತಿಂಗಳಿಂದ ನಮ್ಮ ರಾಜ್ಯದಿಂದ ಬಂದು ಕನರ್ಾಟಕದ ಭತ್ತ ಬೆಳೆಯುವ ಏರಿಯಾದಲ್ಲಿ ಅಲ್ಲಲ್ಲಿ ವಸತಿ ಇದ್ದು, ರಾಶಿ ಮಾಡುತ್ತ ಇದ್ದೆವು. ನಾನು ನಮ್ಮ ಮಾಲಿಕ ರಾಶಿ ಮಸೀನ ಜೋತೆಗೆ ಶಿರಗುಪ್ಪಾದಲ್ಲಿ ಇದ್ದೇನು. ನಮ್ಮ ಅಣ್ಣನಾದ ಭಗತಸಿಂಗ್ ಈತನು ಅವರ ಭತ್ತದ ರಾಶಿಮಸಿನ ಜೋತೆಗೆ ಅವರ ಮಾಲಿಕರಾದ ಮತ್ತು ಬಾವನ ತಮ್ಮನಾದ ಮಹೇಶಕುಮಾರ ತಂದೆ ಜೋತೆಲಾಲ ವಯಾ:40 ಸಾ: ಪಲ್ವಲ್ ತಾ:ಜಿ: ಪಲ್ವಲ್ ರಾಜ್ಯ; ಹರಿಯಾಣ ಇವರೊಂದಿಗೆ ಶಹಾಪೂರ ತಾಲೂಕಿನ ಶೆಟ್ಟಿಕೇರಾ ಗ್ರಾಮದಲ್ಲಿ ಇದ್ದರು,
ಹಿಗಿದ್ದು, ನಿನ್ನೆ ದಿನಾಂಕ: 25/04/2020 ರಂದು 06.10 ಪಿಎಂ ಸುಮಾರಿಗೆ ನಮ್ಮ ಭಾವನ ತಮ್ಮನಾದ ಮಹೇಶಕುಮಾರ ತಂದೆ ಚೊಟೆಲಾಲ ವ:40 ವರ್ಷ ಈತನು ಪೋನ ಮಾಡಿ ತಾವು ಇದ್ದು 03.00 ಪಿಎಂ ವರೆಗೆ ಕೆಲಸ ಮಾಡಿ ಕೆಲಸ ಮುಗಿದ್ದಿದ್ದರಿಂದ ಶೇೆಟ್ಟಿಕೆರಾ ಗ್ರಾಮದ ಶಾಲೆಯ ಹತ್ತಿರ ನಮ್ಮ ಮಸೀನ ನಿಲ್ಲಿಸಿ ವಿಶ್ರಾಂತಿ ಮಾಡುವಾಗ ಭಗತ್ ಸಿಂಗ್ ಇವರಿಗೆ ಎದೆ ನೋವು ಕಾಣಿಸಿಕೊಂಡಿರುತ್ತದೆ. ಇಲ್ಲೆ ಇದ್ದ ಸುಭ್ರಮಣ್ಯ ತಂದೆ ವೆಂಕಟೇಶ ವೇಲಚೆಟ್ಟಿ ಇಬ್ಬರು ಕೂಡಿ ಭಗತ್ ಸಿಂಗ್ ಇವರಿಗೆ ಸುರಪೂರ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು, ನೀನು ಕೂಡಲೆ ಬರಬೇಕು ಅಂತಾ ತಿಳಿಸಿದರು. ಆಗ ನಾನು ಮತ್ತು ನಮ್ಮ ಭಾವನಾದ ಜೈ ನಾರಾಯಣ ತಂದೆ ಓಂಪ್ರಕಾಶ ವ:46 ಜಾ: ಜಾಟ ಸಾ: ಕೋಕಿಯಾಕ ತಾ: ಹತಿನ ಜಿ: ಪಲ್ವಲ್ ರಾಜ್ಯ: ಹರಿಯಾಣ ಇಬ್ಬರು ಕೂಡಿ ಸುರಪೂರಕ್ಕೆ ರಾತ್ರಿ 11.30 ಪಿಎಂ ಸುಮಾರಿಗೆ ಬಂದು ನೋಡಲಾಗಿ ನನ್ನ ಅಣ್ಣನಾದ ಭಗತ್ಸಿಂಗ್ ಈತನು ಆಸ್ಪತ್ರೆಗೆ ಬರುವಷ್ಟರಲ್ಲಿಯೇ 06.50 ಪಿಎಂ ಸುಮಾರಿಗೆ ಮೃತಪಟ್ಟಿದ್ದಾಗಿ ತಿಳಿಸಿದರು.
ನನ್ನ ಅಣ್ಣನಾದ ಭಗತಸಿಂಗ್ ತಂದೆ ವೇದಪ್ರಕಾಶ ವಯಾ:39 ಉ: ಭತ್ತದ ರಾಶಿಮಸಿನ್ ಆಪರೇಟರ ಜಾ: ಜಾಟ ಸಾ: ರಾಜೋಲ್ಕಾ ತಾ:ಜಿ: ಪಲ್ವಲ್ ರಾಜ್ಯ: ಹರಿಯಾಣ ಈತನು ಎದೆನೊವು ಅಂತಾ ಹೇಳಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಮಾರ್ಗದಲ್ಲಿ ಮೃತಪಟ್ಟಿದ್ದು, ನನ್ನ ಅಣ್ಣನ ಸಾವಿನ ವಿಷಯದಲ್ಲಿ ಯಾರ ಮೇಲು, ಯಾವುದೆ ರೀತಿಯ ಸಂಶಯ ಇರುವದಿಲ್ಲ, ಆದರೂ ನಮ್ಮ ಅಣ್ಣನ ಸಾವಿನ ನಿಜವಾದ ಕಾರಣ ತಿಳಿಯಲು ತಾವು ಮುಂದಿನ ಕ್ರಮ ಜರುಗಿಸಬೇಕು ಅಂತಾ ಶೆಟ್ಟಿಕೇರಾ ಗ್ರಾಮದವರಾದ ಶ್ರೀ. ಮಲ್ಲಿಕಾಜರ್ುನ ತಂದೆ ನಿಂಗಣ್ಣ ಸರಾಯಿಗಾರ ಸಾ: ಶೆಟ್ಟಿಕೇರಾ ಇವರ ಕಡೆಯಿಂದ ಹಿಂದಿಯಲ್ಲಿ ಹೇಳಿ ಕನ್ನಡದಲ್ಲಿ ಟೈಪ ಮಾಡಿಸಿದ್ದು, ಮಾನ್ಯರವರು ಮುಂದಿನ ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಮೇಲಿಂದ ಠಾಣೆ ಯು.ಡಿ.ಆರ್ ನಂ: 08/2020 ಕಲಂ, 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using