ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25/04/2020

By blogger on ಶನಿವಾರ, ಏಪ್ರಿಲ್ 25, 2020

                                   ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25/04/2020 
                                                                                                       
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 08/2020 ಕಲಂ 107 ಸಿಆರ್ ಪಿಸಿ:-ನಾನು ಶ್ರೀಮತಿ ಸುವಣರ್ಾ ಮ.ಪಿ.ಎಸ್.ಐ ಸೈದಾಪೂರ ಪೊಲೀಸ್ ಠಾಣೆ ಇದ್ದು ಮಾನ್ಯರವರಲ್ಲಿ ವಿನಂತಿಸಿಕೊಳ್ಳುವದೆನೆಂದರೆ ದಿನಾಂಕ: 25-04-2020 ರಂದು ಬೆಳಿಗ್ಗೆ 10.00 ಗಂಟೆಗೆ ಕೋವಿಡ-19 ಬಂದೋಬಸ್ತ ಪ್ರಯುಕ್ತ ಪೆಟ್ರೋಲಿಂಗ ಕುರಿತು ನಾನು ಸಂಗಡ ಬಸವರಾಜ ಪಿಸಿ-234 ರವರನ್ನು ಕರೆದುಕೊಂಡು ದೊಡ್ಡ ಸಂಬರ(ವಂಕಸಂಬ್ರ) ಗ್ರಾಮಕ್ಕೇ ಹೋದಾಗ ಗ್ರಾಮದ ಪರಿಸ್ಥಿತಿ ಬಗ್ಗೆ ಪೊಲಿಸ್ ಬಾತ್ಮಿದಾರರಿಗೆ ಊರಿನ ಹಿರಿಯ ಮುಖಂಡರಿಗೆ ಗ್ರಾಮದ ಬಗ್ಗೆ ವಿಚಾರಿಸಲಾಗಿ ತಿಳಿದು ಬಂದಿದ್ದೇನೇಂದರೆ, ದಿನಾಂಕ. 20.04.2020 ರಿಂದ ವಂಕಸಂಬ್ರ ಗ್ರಾಮದ ಯಲ್ಲಮ್ಮ ಕುಂಟೆ ಕೆರೆಯಲ್ಲಿ ಕೆರೆಯ ಫಲವತ್ತಾದ ಮಣ್ಣನ್ನು ರೈತರು ತಮ್ಮ ಜಮೀನುಗಳಿಗೆ ಒಯ್ಯುವ ವಿಷಯಯದಲ್ಲಿ ಸಣ್ಣ ಸಂಬರ ಮತ್ತು ದೊಡ್ಡ ಸಂಬರ ಗ್ರಾಮದ ಜನರಲ್ಲಿ ತಕರಾರು ಆಗಿದ್ದು, ಒಬ್ಬರಿಗೊಬ್ಬರು ವೈರತ್ವ ಬೆಳೆಸಿಕೊಂಡಿದ್ದು, ದ್ವéೇಷ ಸಾಧಿಸುತ್ತಿರುತ್ತಾರೆ ಮತ್ತು ಸದರಿ ವಿಷಯದಲ್ಲಿ ಸದ್ಯ ದೇಶದಲ್ಲಿ ಕೊರೊನಾ ವೈರಸ ಹರಡುತ್ತಿರುವ ಸಂಬಂದ ಯಾರು ಒಟ್ಟಿಗೆ ಒಂದೇ ಕಡೆಗೆ ಸೆರುವಂತಿಲ್ಲ ಅಂತ ಮಾನ್ಯ ತಹಶೀಲದಾರ ಸಾಹೇಬರು ಗುರುಮಠಕಲರವರು ಕಲಂ.144 ಸಿ.ಆರ್.ಪಿಸಿ ಅಡಿಯಲ್ಲಿ ನಿರ್ಭಂಧ ವಿಧಿಸಿದರು ಕೂಡಾ ಊರಲ್ಲಿ ಒಂದನೇ ಪಾಟರ್ಿಯ ಜನರಾದ ;- 1)ಎಸ್. ಆರ್. ರಾಘವೇಂದ್ರ ತಂದೆ ಮಾಣಿಕಪ್ಪ ಕೊಮಟಿ ವಯ|| 55 ವರ್ಷ,ಜಾ|| ಕೊಮಟಿ ಉ|| ವ್ಯಾಪಾರ ಸಾ|| ಸಣ್ಣ ಸಂಬರ ಸಂಗಡ 20 ಜನರು ಎಲ್ಲರೂ ಸ|| ಸಣ್ಣ ಸಂಬರ ತಾ|| ಗುರುಮಠಕಲ ಜಿ|| ಯಾದಗಿರಿ ಮತ್ತು ಎರಡನೆ ಪಾಟರ್ಿಯ ಜನರಾದ 1) ಸಿದ್ದಪ್ಪ ತಂದೆ ನಾಗಪ್ಪ ಸಾಧು ಕುರುಬರ  ವಯ|| 45 ಉ|| ಒಕ್ಕಲುತನ ಸಂಗಡ 19 ಜನರು ಎಲ್ಲರೂ ಸಾ|| ದೊಡ್ಡ ಸಂಬರ ತಾ|| ಗುರುಮಠಕಲ್ ಜಿ|| ಯಾದಗಿರಿಎರಡೂ ಪಾಟರ್ಿಯ ಜನರು ಒಬ್ಬರಿಗೊಬ್ಬರು ಕೆರೆಯ ಮಣ್ಣು ತೆಗೆದುಕೊಂಡು ಹೋಗುವ  ಸಂಬಂಧ ತೀವೃ ವೈಷ್ಯಮ್ಯ ಬೆಳಸಿಕೊಂಡಿದ್ದು ಇವರು ಯಾವುದೇ ಸಮಯದಲ್ಲಿ  ಜಗಳ ಮಾಡಿಕೊಂಡು ಆಸ್ತಿ ಪಾಸ್ತಿಗೆ ಹಾನಿ ಉಂಟು ಮಾಡುವ ಸಂಭವ ಇದ್ದು, ಸದರಿಯವರು ಊರಲ್ಲಿ ಶಾಂತಿ ಸುವ್ಯವಸ್ಥಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿರುವದು ಕಂಡು ಬಂದಿದ್ದರಿಂದ ಮರಳಿ 02-00 ಪಿ.ಎಮ್ ಕ್ಕೆ ಠಾಣೆಗೆ ಬಂದು ಎರಡನೆಯ ಪಾಟರ್ೀಯ ಜನರ ಮೇಲೆ ಮುಂಜಾಗ್ರತಾ ಕ್ರಮವಾಗಿ ಠಾಣಾ ಪಿಎಆರ್ ನಂ. 8/2020 ಕಲಂ. 107 ಸಿಆರ್ಪಿಸಿ ನೆದ್ದರಲ್ಲಿ ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ. ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಬರಮಾಡಿಕೊಂಡು ಕಲಂ.116(3) ಸಿಆರ್ಪಿಸಿ ಅಡಿಯಲ್ಲಿ ಇಂಟಿರಿಯಮ್ ಬಾಂಡ ಮತ್ತು ಮುಚ್ಚಳಿಕೆಯನ್ನು ಬರೆಯಿಸಿಕೊಳ್ಳಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 07/2020 ಕಲಂ 107 ಸಿಆರ್ ಪಿಸಿ:-ನಾನು ಶ್ರೀಮತಿ ಸುವಣರ್ಾ ಮ.ಪಿ.ಎಸ್.ಐ ಸೈದಾಪೂರ ಪೊಲೀಸ್ ಠಾಣೆ ಇದ್ದು ಮಾನ್ಯರವರಲ್ಲಿ ವಿನಂತಿಸಿಕೊಳ್ಳುವದೆನೆಂದರೆ ದಿನಾಂಕ: 25-04-2020 ರಂದು ಬೆಳಿಗ್ಗೆ 10.00 ಗಂಟೆಗೆ ಕೋವಿಡ-19 ಬಂದೋಬಸ್ತ ಪ್ರಯುಕ್ತ ಪೆಟ್ರೋಲಿಂಗ ಕುರಿತು ನಾನು ಸಂಗಡ ಬಸವರಾಜ ಪಿಸಿ-234 ರವರನ್ನು ಕರೆದುಕೊಂಡು ದೊಡ್ಡ ಸಂಬರ(ವಂಕಸಂಬ್ರ) ಗ್ರಾಮಕ್ಕೇ ಹೋದಾಗ ಗ್ರಾಮದ ಪರಿಸ್ಥಿತಿ ಬಗ್ಗೆ ಪೊಲಿಸ್ ಬಾತ್ಮಿದಾರರಿಗೆ ಊರಿನ ಹಿರಿಯ ಮುಖಂಡರಿಗೆ ಗ್ರಾಮದ ಬಗ್ಗೆ ವಿಚಾರಿಸಲಾಗಿ ತಿಳಿದು ಬಂದಿದ್ದೇನೇಂದರೆ, ದಿನಾಂಕ. 20.04.2020 ರಿಂದ ವಂಕಸಂಬ್ರ ಗ್ರಾಮದ ಯಲ್ಲಮ್ಮ ಕುಂಟೆ ಕೆರೆಯಲ್ಲಿ ಕೆರೆಯ ಫಲವತ್ತಾದ ಮಣ್ಣನ್ನು ರೈತರು ತಮ್ಮ ಜಮೀನುಗಳಿಗೆ ಒಯ್ಯುವ ವಿಷಯಯದಲ್ಲಿ ಸಣ್ಣ ಸಂಬರ ಮತ್ತು ದೊಡ್ಡ ಸಂಬರ ಗ್ರಾಮದ ಜನರಲ್ಲಿ ತಕರಾರು ಆಗಿದ್ದು, ಒಬ್ಬರಿಗೊಬ್ಬರು ವೈರತ್ವ ಬೆಳೆಸಿಕೊಂಡಿದ್ದು, ದ್ವéೇಷ ಸಾಧಿಸುತ್ತಿರುತ್ತಾರೆ ಮತ್ತು ಸದರಿ ವಿಷಯದಲ್ಲಿ ಸದ್ಯ ದೇಶದಲ್ಲಿ ಕೊರೊನಾ ವೈರಸ ಹರಡುತ್ತಿರುವ ಸಂಬಂದ ಯಾರು ಒಟ್ಟಿಗೆ ಒಂದೇ ಕಡೆಗೆ ಸೆರುವಂತಿಲ್ಲ ಅಂತ ಮಾನ್ಯ ತಹಶೀಲದಾರ ಸಾಹೇಬರು ಗುರುಮಠಕಲರವರು ಕಲಂ.144 ಸಿ.ಆರ್.ಪಿಸಿ ಅಡಿಯಲ್ಲಿ ನಿರ್ಭಂಧ ವಿಧಿಸಿದರು ಕೂಡಾ ಊರಲ್ಲಿ ಒಂದನೇ ಪಾಟರ್ಿಯ ಜನರಾದ ;- 1)ಎಸ್. ಆರ್. ರಾಘವೇಂದ್ರ ತಂದೆ ಮಾಣಿಕಪ್ಪ ಕೊಮಟಿ ವಯ|| 55 ವರ್ಷ,ಜಾ|| ಕೊಮಟಿ ಉ|| ವ್ಯಾಪಾರ ಸಾ|| ಸಣ್ಣ ಸಂಬರ ಸಂಗಡ 20 ಜನರು ಎಲ್ಲರೂ ಸ|| ಸಣ್ಣ ಸಂಬರ ತಾ|| ಗುರುಮಠಕಲ ಜಿ|| ಯಾದಗಿರಿ ಮತ್ತು ಎರಡನೆ ಪಾಟರ್ಿಯ ಜನರಾದ 1) ಸಿದ್ದಪ್ಪ ತಂದೆ ನಾಗಪ್ಪ ಸಾಧು ಕುರುಬರ  ವಯ|| 45 ಉ|| ಒಕ್ಕಲುತನ ಸಂಗಡ 19 ಜನರು ಎಲ್ಲರೂ ಸಾ|| ದೊಡ್ಡ ಸಂಬರ ತಾ|| ಗುರುಮಠಕಲ್ ಜಿ|| ಯಾದಗಿರಿಎರಡೂ ಪಾಟರ್ಿಯ ಜನರು ಒಬ್ಬರಿಗೊಬ್ಬರು ಕೆರೆಯ ಮಣ್ಣು ತೆಗೆದುಕೊಂಡು ಹೋಗುವ  ಸಂಬಂಧ ತೀವೃ ವೈಷ್ಯಮ್ಯ ಬೆಳಸಿಕೊಂಡಿದ್ದು ಇವರು ಯಾವುದೇ ಸಮಯದಲ್ಲಿ  ಜಗಳ ಮಾಡಿಕೊಂಡು ಆಸ್ತಿ ಪಾಸ್ತಿಗೆ ಹಾನಿ ಉಂಟು ಮಾಡುವ ಸಂಭವ ಇದ್ದು, ಸದರಿಯವರು ಊರಲ್ಲಿ ಶಾಂತಿ ಸುವ್ಯವಸ್ಥಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿರುವದು ಕಂಡು ಬಂದಿದ್ದರಿಂದ ಮರಳಿ 01-00 ಪಿ.ಎಮ್ ಕ್ಕೆ ಠಾಣೆಗೆ ಬಂದು ಒಂದನೇಯ ಪಾಟರ್ೀಯ ಜನರ ಮೇಲೆ ಮುಂಜಾಗ್ರತಾ ಕ್ರಮವಾಗಿ ಠಾಣಾ ಪಿಎಆರ್ ನಂ. 7/2020 ಕಲಂ. 107 ಸಿಆರ್ಪಿಸಿ ನೆದ್ದರಲ್ಲಿ ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ. ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಬರಮಾಡಿಕೊಂಡು ಕಲಂ.116(3) ಸಿಆರ್ಪಿಸಿ ಅಡಿಯಲ್ಲಿ ಇಂಟಿರಿಯಮ್ ಬಾಂಡ ಮತ್ತು ಮುಚ್ಚಳಿಕೆಯನ್ನು ಬರೆಯಿಸಿಕೊಳ್ಳಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ.


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 60/2020 ಕಲಂ 32,34 ಕೆ,ಇ ಯಾಕ್ಟ್ ಮತ್ತು 284  ಐಪಿಸಿ:- ಇಂದು ದಿನಾಂಕ: 25-04-2020 ರಂದು 01-45 ಪಿ.ಎಮ್ ಕ್ಕೆ ಸುವರ್ಣ ಪಿ.ಎಸ್.ಐ ರವರು ಜ್ಞಾಪನ ಪತ್ರದೊಂದಿಗೆ ಕಳ್ಳಬಟ್ಟಿ ಸರಾಯಿ ಜಪ್ತಿಪಂಚನಾಮೆ ಮತ್ತು 02 ಲೀಟರ ಕಳ್ಳಬಟ್ಟಿ ಸರಾಯಿ ಮತ್ತು 900 ಕೆ.ಜಿ ಕಳ್ಳಬಟ್ಟಿ ತಯಾರಿಸುವ ಕಚ್ಚಾ ಬೆಲ್ಲ ಅ|| ಕಿ|| 18000=00 ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 60/2020 ಕಲಂ. 32, 34 ಕೆ.ಇ ಕಾಯ್ದೆ ಮತ್ತು 284 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 50/2020 ಕಲಂ: 273 ಐಪಿಸಿ ಸಂ 32, 34 ಕೆ.ಇ ಎಕ್ಟ 1965 :- ಇಂದು ದಿನಾಂಕ: 25/04/2020 ರಂದು 5-30 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ: 25/04/2020 ರಂದು ಮದ್ಯಾಹ್ನ ನಾನು ಮತ್ತು ಪ್ರಕಾಶ ಹೆಚ್.ಸಿ 18 (ಪಿ) ಮತ್ತು ಮೃತ್ಯಂಜಯ ಸ್ವಾಮಿ ಪಿಸಿ 390 ಎಲ್ಲರೂ ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ ಬಿಳ್ಹಾರ ಗ್ರಾಮದ ಮಡಿವಾಳ ವೃತ್ತದ ಹತ್ತಿರ ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರಿಗೆ ಅಕ್ರಮವಾಗಿ ಹೆಂಡವನ್ನು ಮಾರಾಟ ಮಾಡುತ್ತಿದ್ದಾನೆ. ಸದರಿ ಹೆಂಡ ಅಪಾಯಕಾರಿ ಪಾನಿಯ ಎಂದು ಗೊತ್ತಿದ್ದರು ಕೂಡಾ ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರಿಗೆ ಮತ್ತು ನಮ್ಮ ಸಿಬ್ಬಂದಿಯವರಿಗೆ ದಾಳಿ ಬಗ್ಗೆ ತಿಳಿಸಿ, ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಸರಕಾರಿ ಜೀಪ ನಂ. ಕೆಎ 33 ಜಿ 115 ನೇದ್ದರಲ್ಲಿ ಕರೆದುಕೊಂಡು ಹೊರಟು 3-50 ಪಿಎಮ್ ಕ್ಕೆ ಬಿಳ್ಹಾರ ಗ್ರಾಮದ ಮಡಿವಾಳ ವೃತ್ತದ ಹತ್ತಿರ ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ, ಅಲ್ಲಿಂದ ನಡೆದುಕೊಂಡು ಹೋಗಿ ಶೇಖಮ್ಮ ಗಂಡ ಶೇಖಪ್ಪ ಇವರ ಮನೆಯನ್ನು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಖಾಲಿ ಸ್ಥಳದಲ್ಲಿ ಒಬ್ಬನು 50/- ರೂ. ಗೆ ಒಂದು ಲೀಟರ ಹೆಂಡ ಕುಡಿಯಿರಿ ಎಂದು ಕೂಗಿ ಕರೆದು ಹೆಂಡ ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು 1 ಪಿಎಮ್ ಕ್ಕೆ ಅವನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿಯಬೇಕೆನ್ನುವಷ್ಟರಲ್ಲಿ ಅವನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದನು. ಅಲ್ಲಿದ್ದ ಪೊಲೀಸ್ ಬಾತ್ಮಿದಾರರಿಗೆ ಅವನ ಹೆಸರು ವಿಳಾಸ ಕೇಳಲಾಗಿ ಮಲ್ಲಿಕಾಜರ್ುನ ತಂದೆ ಯಲ್ಲಪ್ಪ ಕಾಡ್ಲೂರು, ವ:36, ಜಾ:ಕುರುಬರ, ಉ:ಡ್ರೈವರ ಸಾ:ಬಿಳ್ಹಾರ ತಾ:ವಡಗೇರಾ ಎಂದು ಹೇಳಿದರು. ಸದರಿ ವ್ಯಕ್ತಿ ಹೆಂಡ ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ 1 ಲೀಟರಿನ ಪ್ಲಾಸ್ಟಿಕ ಬಾಟಲಗಳಲ್ಲಿ ಹೆಂಡ ತುಂಬಿದ್ದು, ಎಣಿಸಿ ನೋಡಲಾಗಿ 1 ಲೀಟರಿನ 50 ಬಾಟಲಿಗಳಲ್ಲಿ ಅಂದಾಜು 50 ಲೀಟರ್ ಹೆಂಡ ಇದ್ದು, ಅ:ಕಿ: 2500/- ರೂ. ಆಗಬಹುದು. ಸದರಿ ಹೆಂಡದಿಂದ ಶ್ಯಾಂಪಲ್ ಮತ್ತು ತಜ್ಞರ ಪರೀಕ್ಷೆ ಕುರಿತು ಒಂದು ಲೀಟರಿನ ಪ್ಲಾಸ್ಟಿಕ ಬಾಟಲಿಯಲ್ಲಿ ಪ್ರತ್ಯೇಕ ಪಡೆದುಕೊಂಡು ನಮ್ಮ ಸಮಕ್ಷಮ ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲೆದು ನಾವು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಘಆಉ ಅಂತಾ ಅರಗಿನಿಂದ ಸೀಲ್ ಮಾಡಿ ಜಪ್ತಿಪಡಿಸಿಕೊಂಡರು ಉಳಿದ ಹೆಂಡವನ್ನು ತಾಬಕ್ಕೆ ಪಡೆದುಕೊಂಡರು. 4 ಪಿಎಮ್ ದಿಂದ 5 ಪಿಎಮ್ ದ ವರೆಗೆ ಜಪ್ತಿ ಪಂಚನಾಮೆ ಜರುಗಿಸಿ, 5-30 ಪಿಎಮ್ ಕ್ಕೆ ಮುದ್ದೆಮಾಲಿನೊಂದಿಗೆ ಪೊಲೀಸ ಠಾಣೆಗೆ ಬಂದು ಜಪ್ತಿ ಪಂಚನಾಮೆ ಪ್ರಿಂಟ ಹಾಕಿ ವರದಿ ತಯಾರಿಸಿ ಕೊಡುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ಕೊಟ್ಟ ದೂರು ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 50/2020 ಕಲಂ: 273 ಐಪಿಸಿ ಸಂ 32, 34 ಕೆ.ಇ ಎಕ್ಟ 1965 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 53/2020 279, 304(ಎ) ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ್ ;- ಇಂದು ದಿನಾಂಕ: 25/04/2020 ರಂದು 8-10 ಎಎಮ್ ಕ್ಕೆ ಅಜರ್ಿದಾರರಾದ ಶ್ರೀಮತಿ ಲಕ್ಷ್ಮೀಬಾಯಿ ಗಂಡ ಶಾಂತಪ್ಪ ಬೇವಿನಕಟ್ಟಿ ವಯಾ:40 ವರ್ಷ ಉ: ಕೂಲಿ ಜಾ: ಮಾದರ ಸಾ: ಹಾರಣಗೇರಾ ತಾ: ಶಹಾಪೂರ ಇವರು ಠಾಣೆಗೆ ಹಾಜರಾಗಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನ್ನ ಗಂಡನಾದ ಶಾಂತಪ್ಪ ತಂದೆ ಅಂಬ್ಲಪ್ಪ ಬೇವಿನಕಟ್ಟಿ ವಯಾ:48 ವರ್ಷ ಉ: ಕೂಲಿ ಜಾ: ಮಾದರ ಸಾ: ಹಾರಣಗೇರಾ ಈತನು ನಿನ್ನೆ ದಿನಾಂಕ:24/04/2020 ರಂದು 05.30 ಪಿಎಂ ಸುಮಾರಿಗೆ ಕಿರಾಣಿ ಮತ್ತು ಕಾಯಿಪಲ್ಲೆ ತಗೆದುಕೊಂಡು ಬರಲು ಅಂತಾ ತನ್ನ ಮೋಟಾರ್ ಸೈಕಲ್ ನಂ: ಕೆಎ-33-ಜೆ-0719 ನೇದ್ದರ ಮೇಲೆ ದರ್ಶನಾಪೂರ ಗ್ರಾಮಕ್ಕೆ ಹೋಗಿದ್ದನು. ನಂತರ ರಾತ್ರಿ 08.00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಇದ್ದಾಗ ನಮ್ಮೂರಿನ ರಸೂಲಸಾಬ ತಂದೆ ಹುಸೇನಸಾಬ ಇವರು ಪೋನ ಮಾಡಿ ನಿನ್ನ ಗಂಡನಾದ ಶಾಂತಪ್ಪ ಈತನು ದರ್ಶನಾಪೂರ ಗ್ರಾಮದಿಂದ ಹಾರಣಗೆರಾ ಗ್ರಾಮಕ್ಕೆ ಬರುತ್ತಿರುವಾಗ ದರ್ಶನಾಪೂರ-ಹಾರಣಗೇರಾ ರೋಡಿನ ದರ್ಶನಾಪೂರ ದಿಂದ ಅಂದಾಜು 1/2 ಕೀ.ಮೀ ಅಂತರಲ್ಲಿ ರೋಡಿನಲ್ಲಿ ಬರುತ್ತಿದ್ದಾಗ, ಅಂದಾಜು ಸಮಯ 07.30 ಪಿಎಂ ಸುಮಾರಿಗೆ ಅದೆ ರೋಡಿನಲ್ಲಿ ದರ್ಶನಾಪೂರ ಕಡೆಯಿಂದ ಹಾಣಗೇರಾ ಕಡೆಗೆ ಹಿಂದಿನಿಂದ ಹೊರಟಿದ್ದ ಒಂದು ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರ ಅನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಹಿಂದಿನಿಂದ ಡಿಕ್ಕಿ ಮಾಡಿದ ಅದರಿಂದಾಗಿ ಶಾಂತಪ್ಪ ಈತನು ರೊಡಿನಲ್ಲಿ ಬಿದ್ದನು, ಟ್ರ್ಯಾಕ್ಟರ ಕಿಂತಲು ಇನ್ನು ಸ್ವಲ್ಪ ಹಿಂದೆ ಹೊರಟಿದ್ದ ನಾನು ಮತ್ತು ಬಸವರಾಜ ತಂದೆ ಜೆಟ್ಟೆಪ್ಪ ಪೂಜಾರಿ ಇಬ್ಬರು ಹೋಗಿ ನೋಡಲಾಗಿ ಅಪಘಾತದಲ್ಲಿ ಶಾಂತಪ್ಪ ರೋಡಿನಲ್ಲಿ ಬಿದ್ದುದ್ದರಿಂದ ಶಾಂತಪ್ಪನ ತಲೆಗೆ ಎಡ ಕಿವಿಯ ಹಿಂದೆ ಭಾರಿ ರಕ್ತಗಾಯವಾಗಿ ರಕ್ತಸ್ರಾವವಾಗುತ್ತಿತ್ತು, ನಂತರ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಟ್ರ್ಯಾಕ್ಟರ ಚಾಲಕನು ನಾವು ಹಿಂದಿನಿಂದ ಬರುತ್ತಿರುವದನ್ನು ನೋಡಿ ತನ್ನ ಟ್ರ್ಯಾಕ್ಟರನ್ನು ಅತೀವೆಗ ವಾಗಿ ಓಡಿಸಿಕೊಂಡು ಹೋಗಿರುತ್ತಾನೆ. ನಾವು ನಂಬರ ನೋಡಿರುವದಿಲ್ಲ. ಟ್ರ್ಯಾಕ್ಟರನ್ನು ಪುನಃ ನೋಡಿದಲ್ಲಿ ಗುರುತಿಸುತ್ತೇವೆ. ಅಂತಾ ತಿಳಿಸಿದರು. ಆಗ ನಾನು ನನ್ನ ಮಗನಾದ ಬಸವರಾಜ ನಮ್ಮ ಅಣ್ಣ-ತಮ್ಮಕಿಯವರಾದ ಶಾಂತಕುಮಾರ ತಂದೆ ಬಸ್ಸಪ್ಪ ಬೇವಿನ ಕಟ್ಟಿ, ಬಸವರಾಜ ತಂದೆ ಭಾಗಪ್ಪ ಬೇವಿನಕಟ್ಟಿ, ಭೀಮರಾಯ ತಂದೆ ಚನ್ನಬಸ್ಸಪ್ಪ ಬೇವಿನಕಟ್ಟಿ ಎಲ್ಲರೂ ಕೂಡಿ ದರ್ಶನಾಪೂರ ಹತ್ತಿರ ರೋಡಿನಲ್ಲಿ ಹೋಗಿ ನೋಡಲಾಗಿ ನನ್ನ ಗಂಡನಾದ ಶಾಂತಪ್ಪ ತಂದೆ ಅಂಬ್ಲಪ್ಪ ಬೇವಿನಕಟ್ಟಿ ವಯಾ:48 ವರ್ಷ ಉ: ಕೂಲಿ ಜಾ: ಮಾದರ ಸಾ: ಹಾರಣಗೇರಾ ಈತನಿಗೆ ತಲೆಗೆ ಎಡ ಕಿವಿಯ ಹಿಂದೆ ಭಾರಿ ರಕ್ತಗಾಯವಾಗಿ, ರಕ್ತಸ್ರಾವವಾಗಿತ್ತು, ಬಲಗಾಲಿನ ಮೋಳಕಾಲಿಗೆ ಮತ್ತು ಮುಂಗಾಲಿಗೆ ತರಚಿದ ರಕ್ತಗಾಯ ಆಗಿತ್ತು, ಬಲಗಾಲಿನ ಹಿಮ್ಮಡಿಯ ಸ್ವಲ್ಪ ಮೇಲೆ ರಕ್ತಗಾಯ ಆಗಿತ್ತು, ಮತ್ತು ನನ್ನ ಗಂಡನು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಇದನ್ನು ನೋಡಿದ ನನಗೆ ದುಖಃ ಮತ್ತು ಗಾಬರಿಯಾಗಿ ನಾನು ಮೇಲಿಂದ ಮೇಲೆ ಸೊನ್ನಿ ಮುಚ್ಚಿದ್ದರಿಂದ ನನಗೆ ಆರೈಕೆ ಮಾಡಿ ಬೆಳಗಿನ ಜಾವ ನನ್ನ ಗಂಡನ ಶವವನ್ನು ಶಹಾಪೂರ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ತಡವಾಗಿ ಇಂದು ದಿನಾಂಕ:25/04/2020 ರಂದು 08.10 ಎಎಂ ಕ್ಕೆ ಠಾಣೆಗೆ ಬಂದು ಈ ದೂರು ಸಲ್ಲಿಸಿರುತ್ತೇನೆ. ಆದುದರಿಂದ ಅತಿವೇಗ ನಿಷ್ಕಾಳಜಿತನದಿಂದ ಟ್ರ್ಯಾಕ್ಟರ ನಡೆಸಿ ಅಪಘಾತ ಮಾಡಿದ ಚಾಲಕನಿಗೆ ಮತ್ತು ಸದರಿ ಟ್ರ್ಯಾಕ್ಟರ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ. ಅಜರ್ಿ ಮೇಲಿಂದ ಠಾಣೆ ಗುನ್ನೆ ನಂ: 53/2020 ಕಲಂ, 279, 304(ಎ) ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ  ಪೊಲೀಸ್ ಠಾಣೆ ಗುನ್ನೆ ನಂ:- 08/2020 ಕಲಂ. 174 ಸಿಆರ್ಪಿಸಿ:- ಇಂದು ದಿನಾಂಕ:25/04/2020 ರಂದು 4:30 ಪಿ.ಎಮ್ ಕ್ಕೆ ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ಪಿಯರ್ಾದಿದಾರರಿಗೆೆ ಇಬ್ಬರೂ ಗಂಡು ಮಕ್ಕಳು ಹಾಗೂ ಇಬ್ಬರೂ ಹೆಣ್ಣು ಮಕ್ಕಳಿದ್ದು. ಹೀಗೆ 4 ಜನ ಮಕ್ಕಳಿರುತ್ತಾರೆ ಅವರಲ್ಲಿ ಹಿರಿಯ ಮಗಳಾದ ಶಾಂತಮ್ಮ @ಪಾರ್ವತಿ ವ:20 ಇವಳನ್ನು ಚಂದ್ಲಾಪೂರ ಗ್ರಾಮದ ರಂಗಯ್ಯ ತಂದೆ ಬಸವರಾಜ ದೇವದುಗರ್ಾ ಎಂಬಾತನಿಗೆ ಕೊಟ್ಟು ದಿನಾಂಕ:19-03-2020 ರಂದು ಮದುವೆ ಮಾಡಿಕೊಟ್ಟಿರುತ್ತೆವೆ. ನನ್ನ ಮಗಳ ಮದುವೆ ರುಕ್ಮಾಪೂರ ಗ್ರಾಮದ ಕೊಟ್ಟೂರ ಬಸವೇಶ್ವರ ದೇವಸ್ಥಾನದಲ್ಲಿ ಸಾಂಪ್ರದಾಯ ಪ್ರಕಾರ ಆಗಿರುತ್ತದೆ. ಮದುವೆ ಆದ ಬಳಿಕ ನನ್ನ ಮಗಳು ತನ್ನ ಗಂಡನ ಮನೆಯಲ್ಲಿ ಸಂಸಾರಿಕ ಜೀವನ ನಡೆಸುತ್ತಿದ್ದಳು ನನ್ನ ಮಗಳಾದ ಶಾಂತಮ್ಮ @ಪಾರ್ವತಿ ಇವಳಿಗೆ ಚಿಕ್ಕಂದನಿಂದ ಮಾನಸಿಕ ಕಾಯಿಲೆ ಇದ್ದು ಆಗಾಗ ಕಾಯಿಲೆಯಿಂದಾಗಿ ಅರೆಹುಚ್ಚಿಯಂತೆ ವತರ್ಿಸುತ್ತಿದ್ದಳು ನಾವು ಆಕೆಗೆ ಹಲವಾರು ಕಡೆ ತೋರಿಸಿದರು ಗುಣಮುಖವಾಗಿರಲಿಲ್ಲ ಅದೇ ಮಾನಸಿಕ ಕಾಯಿಲೆಯಿಂದಾಗಿ ನಿನ್ನೆ ದಿನಾಂಕ:24/04/2020 ರಂದು ಮುಂಜಾನೆ 5:30 ಎ.ಎಮ್ ಸುಮಾರಿಗೆ ಚಂದ್ಲಾಪೂರ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಕ್ರೀಮಿನಾಷಕ ಔಷದ ಸೇವನೆ ಮಾಡಿದ್ದು ಅದನ್ನು ನೋಡಿ ನನ್ನ ಅಳಿಯ ರಂಗಯ್ಯ ಹಾಗೂ ಆತನ ತಂದೆ ಬಸವರಾಜ ನನ್ನ ಮಗಳ ಮೈದುನ ಬಂಡೆಪ್ಪ ಇವರೆಲ್ಲರೂ ಕೂಡಿ ಖಾಸಗಿ ವಾಹನದಲ್ಲಿ ಉಪಚಾರಕ್ಕಾಗಿ ಸುರಪೂರ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಪ್ರಥಮ ಉಪಚಾರ ಮಾಡಿಸಿ ನಮಗೆ ಪೋನ ಮುಖಾಂತರ ಮಾಹಿತಿ ತಿಳಿಸಿದಾಗ ನಾವು ಗಂಡ ಹೆಂಡತಿ ಸುರಪೂರ ಆಸ್ಪತ್ರೆಗೆ ಹೋಗಿ ವಿಚಾರಿಸಿರುತ್ತೆವೆ. ಉಪಚಾರ ಪಡೆಯುತ್ತಾ ನನ್ನ ಮಗಳು ತನಗೆ ಗಂಡನ ಮನೆಯಲ್ಲಿ ಗಂಡ ಮಾವ ಹಾಗೂ ಅವರ ಕುಟುಂಬದವರು ಯಾರು ಯಾವುದೇ ರೀತಿಯಿಂದ ಕಿರುಕುಳ ಕೊಟ್ಟಿರುವದಿಲ್ಲ. ನನಗೆ ಚನ್ನಾಗಿ ನೋಡಿಕೊಂಡಿರುತ್ತಾರೆ. ಅಂತ ತಿಳಿಸಿರುತ್ತಾರೆ. ಅಲ್ಲಿಂದ ನಾವು ನನ್ನ ಮಗಳಿಗೆ ಅಂಬ್ಯುಲೇನ್ಸ ವಾಹನದಲ್ಲಿ ಹಾಕಿಕೊಂಡು ಜಿಲ್ಲಾ ಸಕರ್ಾರಿ ಆಸ್ಪತ್ರೆ ಯಾದಗಿರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಪುನಾ: ಅಲ್ಲಿಂದ ವೈದ್ಯರ ಸಲಹೇ ಮೇರೆಗೆ ಹೆಚ್ಚಿನ ಉಪಚಾರಕ್ಕಾಗಿ ನನ್ನ ಮಗಳಿಗೆ ಆಂಬ್ಯುಲೆನ್ಸ ವಾಹನದಲ್ಲಿ ಹಾಕಿಕೊಂಡು ನಿನ್ನೆ ಮದ್ಯಾಹ್ನ ರೀಮ್ಸ ಆಸ್ಪತ್ರೆ ರಾಯಚೂರಿನಲ್ಲಿ ತಂದು ಸೇರಿಕೆ ಮಾಡಿರುತ್ತೆವೆ. ರೀಮ್ಸ ಆಸ್ಪತ್ರೆಯಲ್ಲಿ ನನ್ನ ಮಗಳು ಉಪಚಾರ ಪಡೆಯುತ್ತಾ ಚಿಕಿತ್ಸೆ ಫಲಕಾರಿಯಾಗದೇ ಇಂದು ದಿನಾಂಕ:25-04-2020 ರಂದು 10:49 ಎ.ಎಮ್ ಸುಮಾರಿಗೆ ಮೃತಪಟ್ಟಿರುತ್ತಾಳೆ. 
     ನನ್ನ ಮಗಳು ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಾ ಕ್ರೀಮಿನಾಷಕ ಔಷದ ಸೇವನೆ ಮಾಡಿ ಮೃತಪಟ್ಟಿದ್ದು. ಈ ಬಗ್ಗೆ ನನ್ನದು ಯಾರ ಮೇಲೆ ಯಾವುದೇ ರೀತಿಯ ದೂರು ಇರುವದಿಲ್ಲ. ಅಂತ ಹೇಳಿಕೆ ಕೊಟ್ಟಿದು ನಿಜ ವಿರುತ್ತದೆ. 
 ಅಂತ ಹೇಳಿಕೆ ನೀಡಿದ್ದ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ.08/2020 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. ನಾರಾಯಣಪೂರ  ಪೊಲೀಸ್ ಠಾಣೆ ಗುನ್ನೆ ನಂ:- 28/2020 ಕಲಂ: 323, 341, 504, 506, 354, 498(ಎ)  ಸಂಗಡ 34 ಐಪಿಸಿ.:- ಇಂದು ದಿನಾಂಕ:25/04/2020 ರಂದು 1:00 ಪಿ.ಎಮ್ ಕ್ಕೆ ಫಿಯರ್ಾದಿ ಮಂಜುಳಾ ಗಂಡ ಶಿವಪ್ಪ ನಾಲತವಾಡ ವಯ:22 ವರ್ಷ, ಜಾ:ಹಿಂದೂ ಬೇಡರ, ಉ:ಹೊಲ, ಮನೆ ಕೆಲಸ, ಸಾ:ನಾರಾಯಣಪೂರ ತಾ:ಹುಣಸಗಿ, ಜಿ:ಯಾದಗಿರಿ ರವರು ಠಾಣೆಗೆ ಹಾಜರಾಗಿ ಬಾಯಿ ಮಾತಿನ ಹೇಳಿಕೆ ಫಿರ್ಯದಿ ನೀಡಿದ್ದರ ಸಾರಾಂಶವೆನೆಂದರೆ, ಫಿಯರ್ಾದಿದಾರರಿಗೆ 2017 ನೇ ಸಾಲಿನಲ್ಲಿ ನಾರಾಯಣಪೂರ ಗ್ರಾಮದ ಶಿವಪ್ಪ ತಂದೆ ಗದ್ದೆಪ್ಪ ನಾಲತವಾಡ ಈತನೊಂದಿಗೆ ಮದುವೆ ಮಾಡಿದ್ದು ಇರುತ್ತದೆ. ಮದುವೆಯಾಗುವದಕ್ಕಿಂತ ಮುಂಚೆಯೇ ಫಿಯರ್ಾದಿ ಗಂಡನಿಗೆ ಸುಮಾರು ಎರಡು ವರ್ಷಗಳ ಹಿಂದೇ ಮೋಟಾರು ಸೈಕಲ್ ರಸ್ತೆ ಅಪಘಾತದಲ್ಲಿ ಕೈಕಾಲು, ತಲೆಗೆ ಪೆಟ್ಟಾಗಿ ಇರುತ್ತದೆ. ರಸ್ತೆ ಅಪಘಾತದಲ್ಲಿ ಗಾಯಹೊಂದಿದ್ದರಿಂದ ಅಪಘಾತ ವಿಮೆಯ ಹಣವು ಫಿಯರ್ಾದಿಯ ಮದುವೆಯ ನಂತರ ಬಂದಿದ್ದು, ನಂತರ ಈ ಎರಡು ವರ್ಷಗಳ ಹಿಂದೆ ಫಿಯರ್ಾದಿಯ ಗಂಡ ಮೃತಪಟ್ಟಿದ್ದು ಇರುತ್ತದೆ. ಫಿಯರ್ಾದಿಯ ಉಪಜೀವನಕ್ಕೆ ಹಿರಿಯರ ಆಸ್ತಿಯಲ್ಲಿ ಎರಡು ಎಕರೆ ಜಮೀನು ಹಾಗು ವಾಸಿಸಲು ಒಂದು ಮನೆ ನೀಡಿದ್ದು ಇರುತ್ತದೆ. ಫಿಯರ್ಾದಿಯು ಗಂಡನ ರಸ್ತೆ ಅಪಘಾತದಲ್ಲಿ ಬಂದ ವಿಮೆ ಹಣವನ್ನು ನನಗೂ ಸ್ವಲ್ಪ ಕೊಡಿ ಅಂತ ಕೇಳಿದರೆ ಮನೆ ಹಾಗು ಜಮೀನು ಕೊಡುವ ಸಮಯದಲ್ಲಿ ಮುಂದೆ ಕೊಡುತ್ತೇವೆ ಅಂತ ಹೇಳಿದರು. ಹೀಗಿದ್ದು ದಿನಾಂಕ:23.04.2020 ರಂದು ಮುಂಜಾನೆ 08:30 ಎ.ಎಮ್ ಸುಮಾರಿಗೆ ಫಿಯರ್ಾದಿಯ ಡ್ಯಾಂ ಹೊಲದಲ್ಲಿ ಕವಳಿಯ ಹುಲ್ಲು ಕೂಡಿಯಾಕಲು ಹೊರಟಾಗ ಅಲ್ಲಿಯೇ ಇದ್ದ ಆರೋಪಿತರಲ್ಲಿ ಒಬ್ಬರಾದ ಫಿಯರ್ಾದಿಯ ಭಾವ ಬಸಪ್ಪ ತಂದೆ ಗದ್ದೆಪ್ಪ ಈತನು ಫಿಯರ್ಾದಿಯ ಹತ್ತಿರ ಬಂದು ಫಿಯರ್ಾದಿಗೆ ಹೊಲದಲ್ಲಿ ಹೋಗದಂತೆ ತಡೆದು ಸೂಳೀ, ರಂಡಿ ನಮ್ಮ ತಮ್ಮನೇ ಸತ್ತು ಹೋಗಿದ್ದಾನೆ ನೀನು ಮಾತ್ಮಾತಿಗೆ ವಿಮಾ ಹಣ ಕೊಡು ಅಂತಾ ಕೇಳುತ್ತಿ ನಿನಗೇಕೆ ಹಣ ಕೊಡಬೇಕು ಅಂತಾ ಅಂದು ಯಾಕೆ ಹೊಲದಲ್ಲಿ ಹೋಗುತ್ತೀ? ನಿನ್ನದೇನಿದೆ ಇಲ್ಲಿ ರಂಡಿ ಬೋಸಡಿ ಅಂತಾ ಬೈದು ಫಿಯರ್ಾದಿಯ ಕೂದಲು ಹಿಡಿದು ಎಳೆದಾಡಿ, ಕೈಯಿಂದ ಫಿಯರ್ಾದಿಯ ಬೆನ್ನಿಗೆ, ಕಪಾಳಕ್ಕೆ ಹೊಡೆದು ಗುಪ್ತಪೆಟ್ಟು ಮಾಡಿದನು. ಅಲ್ಲಿಯೇ ಪಕ್ಕದ ಹೊಲದಲ್ಲಿದ್ದ ಫಿಯರ್ಾದಿಯ ಮಾವ ಗದ್ದೆಪ್ಪ, ಅತ್ತೆ ಯಲ್ಲಮ್ಮ ಭಾವ ಸಂಜೀವಪ್ಪ ಇವರೆಲ್ಲರೂ ಕೂಡಿ ಬಂದು ಫಿಯರ್ಾದಿಗೆ ಈ ರಂಡೀ ಮಾತ್ಮಾತಿಗೆ ರಸ್ತೆ ಅಪಘಾತದಲ್ಲಿ ಬಂದ ಅಪಘಾತ ವಿಮಾ ಹಣ ಕೊಡು ಅಂತಾ ಕೇಳತಾಳ ಸೂಳಿ ಆಕೇಗೇನು ಸಂಬಂಧ ಎಂದು ಅವಾಚ್ಯ ಶಬ್ದಗಳಿಂದ ಬೈದು ಈ ರಂಡಿಗೆ ಖಲಾಸ್ ಮಾಡ್ರಿ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಫಿಯರ್ಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:28/2020 ಕಲಂ:323, 341, 504, 506, 354, 498(ಎ) ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಕೊಂಡೆನು.ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ:- 41/2020 ಕಲಂ. 87 ಕೆ.ಪಿ ಎಕ್ಟ್ 1963:- ಇಂದು ದಿನಾಂಕ.25/04/2020 ರಂದು 4-30 ಪಿಎಂಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್.ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಠಾಣೆರವರು ಒಂದು ಜ್ಞಾಪನಾ ಪತ್ರ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ. 25/04/2020 ರಂದು  4-00 ಪಿಎಮ್ ಕ್ಕೆ ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಂಡಿಗೇರಾ ಏರಿಯಾದ ಪಿರಗಾಸಾಬ ದಗರ್ಾ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಭಾತ್ಮೀ ಬಂದಿದ್ದು ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 4-30 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.41/2020 ಕಲಂ.87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 55/2020 ಕಲಂ 87 ಕೆಪಿ ಯ್ಯಾಕ್ಟ:- ಇಂದು ದಿನಾಂಕ 25/04/2020 ರಂದು 05.00 ಪಿ.ಎಮ್.ಕ್ಕೆ  ಹೊತಪೇಟ ಮುಂದಿನ ತಾಂಡಾ ಸೀಮಾಂತರದಲ್ಲಿನ ಯಲ್ಲಮ್ಮ ಆಯಿ ಗುಡಿ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪ್ರಕರಣ ದಾಖಲಿಸಿಕೊಳ್ಳು ಮತ್ತು ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಹೋಗಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 08.00 ಪಿ.ಎಮ್ ಕ್ಕೆ ದಾಳಿ ಮಾಡಿ ದಾಳಿಯಲ್ಲಿ ಸಿಕ್ಕ 06 ಜನ ಆರೋಪಿತರಿಂದ ಹಾಗು ಕಣದಲ್ಲಿಂದ ನಗದು ಒಟ್ಟು ಹಣ 8500/- ರೂ, 52 ಇಸ್ಪೇಟ ಎಲೆಗಳನ್ನು 08.00 ಪಿ.ಎಮ್ ದಿಂದ 09.00 ಪಿ.ಎಮ್ ವರೆಗೆ ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿರುತ್ತಾರೆ.
ಗೋಗಿ  ಪೊಲೀಸ್ ಠಾಣೆ ಗುನ್ನೆ ನಂ:-  54/2019  273, 328 ಐಪಿಸಿ ಮತ್ತು ಕಲಂ: 32, 34 ಕೆಇ ಯಾಕ್ಟ:-            ಇಂದು ದಿನಾಂಕ: 25/04/2020 ರಂದು 08.15 ಪಿಎಮ್ ಕ್ಕೆ ಶ್ರೀ ಸೋಮಲಿಂಗ್ ಒಡೆಯರ ಪಿಎಸ್ಐ ಗೋಗಿ ಪೊಲೀಸ ಠಾಣೆ ರವರು ಮುದ್ದೇಮಾಲು ಮತ್ತು ಜಪ್ತಿಪಂಚನಾಮೆ ತಂದು ಹಾಜರ್ ಪಡಿಸಿ ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದು ವರದಿ ನೀಡಿದ್ದು, ಸದರಿ ವರದಿ ಸಾರಾಂಶವೆನೆಂದರೆ, ಶೆಟ್ಟಿಕೇರಾ-ವನದುಗರ್ಾ ರೋಡಿನ ಕಲಾಲ ದೊಡ್ಡಿ ಕ್ರಾಸ್ನಲ್ಲಿ ರೋಡಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಳ್ಳಬಟ್ಟಿ ಸರಾಯಿಯು ಮಾನವ ಜೀವಕ್ಕೆ ಹಾನಿಕಾರಕ ಅಂತಾ ಗೊತ್ತಿದ್ದು, ಕೂಡ ಕಳ್ಳ ಬಟ್ಟಿ ಸರಾಯಿ ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಕೊಂಡು 05.30 ಪಿಎಂಕ್ಕೆ ದಾಳಿ ಮಾಡಿದ್ದು, ಅನಧಿಕೃತವಾಗಿ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯು ಓಡಿ ಹೋಗಿದ್ದು, ಅವನ ಹೆಸರು ವಿಚಾರಿಸಿಲಾಗಿ ಭೀಮರಾಯ @ ಭೀಮಣ್ಣ ತಂದೆ ಯಂಕಪ್ಪ ಗೆಜ್ಜಿ ಜಾ: ಬೇಡರ ಸಾ: ವನದುಗರ್ಾ ತಾ: ಶಹಾಪೂರ. ಅಂತಾ ತಿಳಿದು ಬಂದಿದ್ದು, ಸ್ಥಳದಲ್ಲಿ ಮೇಲಿನ ಮುದ್ದೆ ಮಾಲು, ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿಪಡಿಸಿಕೊಂಡು ಮುದ್ದೆಮಾಲು, ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ಸೂಚಿಸಿ ವರದಿ ನೀಡಿದ್ದು, ಸದರಿ ವರದಿ ಸಾರಂಶದ ಮೇರೆಗೆ ಠಾಣೆ ಗುನ್ನೆ ನಂ: 54/2020 ಕಲಂ: 273, 328 ಐಪಿಸಿ ಮತ್ತು ಕಲಂ: 32, 34 ಕೆಇ ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!