ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 23/04/2020

By blogger on ಗುರುವಾರ, ಏಪ್ರಿಲ್ 23, 2020

                                    ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 23/04/2020 
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ 12/2020 ಕಲಂ 174 ಸಿ.ಆರ್.ಪಿ.ಸಿ:- ಇಂದು ದಿನಾಂಕ 23/04/2020 ರಂದು 00-30 ಎ.,ಎಂಕ್ಕೆ ಪಿಯರ್ಾದಿ ಶ್ರೀ ಮತಿ ಅನೀಫಾ ಗಂಡ ದಸ್ತಗೀರಸಾಬ ಅಕ್ಕಲಕೋಟ ವ|| 45 ವರ್ಷ ಜಾ||ಮುಸ್ಲಿಂ, ಉ|| ಕೂಲಿ ಸಾ|| ಮುತ್ತಕೊಡ ಹಾ||ವ ದೇವಿ ನಗರ ಶಹಾಪೂರ ಕೊಡುವ ದೂರು ಅಜರ್ಿ ಸಾರಂಶವೆನಂದರೆ. ನನ್ನ ಗಂಡ ದಸ್ತಗೀರಿಸಾಬ ಇತನಿಗೆ ನಾವೂ ಇಬ್ಬರೂ ಹೆಂಡತಿಯರಿದ್ದು, ನಾನು ಸುಮಾರಿ 10 ವರ್ಷಗಳಿಂದೆ ಶಹಾಪೂರದ ದೇವಿನಗರದ ಮಲ್ಲಣ್ಣ ತಂದೆ ಸಾಯಿಬಣ್ಣ ಇವರ ಮನೆಯಲ್ಲಿ ಬಾಡಿಗೆ ಪಡೆದುಕೊಂಡು, ನಾನು ಮತ್ತು ನನ್ನ ಮಗ ಶಾರುಕ ವ|| 19 ವರ್ಷ, ನನ್ನ ಮಗಳು ತಸ್ಲೀಮಾ ವ|| 17 ಉ|| ವಿದ್ಯಾಥರ್ಿ ಸಾ|| ಮುತ್ತಕೋಡ ಹಾ|| ದೇವಿ ನಗರ ಶಹಾಪೂರ ಇದ್ದು ನಾವೂ ಕೂಲಿ ಕೆಲಸ ಮಾಡಿಕೊಂಡು ಉಪ ಜೀವಿಸುತ್ತಿದ್ದೇವು, ನನ್ನ ಮಗಳಾದ ತಸ್ಲೀಮಾ ಇವಳು ಸ್ವಲ್ಪಾ ಯಥಾರ್ತ ಇದ್ದು, ಬಹಳ ಮುಂಗೋಪಿ, ದುಡಿಕಿನ ಸ್ವಬಾವದವಳಾಗಿದ್ದಳು, 
ಹೀಗಿದ್ದು ದಿನಾಂಕ 22/04/2020 ರಂದು ಮುಂಜಾನೆ 10:00 ಎ.ಎಂ ಸುಮಾರಿಗೆ ಮುಸರಿ ತಿಕ್ಕುವ ಸಲ್ಲುವಾಗಿ ನಾನು ಬುದ್ದಿಮಾತಿಗೆ ಸದರ ತಸ್ಲೀಮಾ ಇವಳಿಗೆ ಬೈಯ್ದಿದ್ದು ಇರುತ್ತದೆ, 
ಇಂದು ಸಾಯಾಂಕಾಲ 9:00 ಪಿ.ಎಂ ಕ್ಕೆ ಊಟಾ ಮಾಡಿ ಮನೆಯಲ್ಲಿ ಇದ್ದಾಗ ನನ್ನ ಮಗ ಶಾರಾಕು ಇತನು ಸಂಡಾಸಕ್ಕೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋಗಿದ್ದು, ನನ್ನ ಮಗಳು ಪಕ್ಕದ ಮನೆಯಲ್ಲಿ ಟಿ.ವಿ ನೋಡಲು ಹೋಗುತ್ತೆನೆ ಅಂತಾ ಹೆಳಿ ಹೋಗಿದ್ದಳು, 9:30 ಪಿ.ಎಂ ಆದರೂ ಮನೆಗೆ ಬಾರದೆ ಇದ್ದಾಗ, ನನ್ನ ಮಗ ಶಾರುಕ ಮತ್ತು ನಾನು ಅಲ್ಲಿ ಇಲ್ಲಿ ಪಕ್ಕದ ಮನೆಯವರಿಗೆ ವಿಚಾರಿಸಿದಾಗ ನಮ್ಮ ಮನೆಗೆ ಬಂದಿರುವದಿಲ್ಲಾ ಅಂತಾ ತಿಳಿಸಿದ್ದು, ನಾವೂ ಆಕಡೆ ಈ ಕಡೆ ಎಲ್ಲಾ ಕಡೆ ಹುಡಿಕಾಡಿದರು ಸಿಕ್ಕಿರುವದಿಲ್ಲಾ, 10:00 ಪಿ.ಎಂ ಕ್ಕೆ ನಮ್ಮ ಪಕ್ಕದ ರೂಮಿನಲ್ಲಿ ಯಾರು ಬಾಡಿಗೆ ಇರದ ಕಾರಣ ನಾವೂ ಕಟ್ಟಿಗೆ ಹಾಕಿದ್ದು, ಸದರ ಮನೆಯ ಕೀಲಿ ತೆಗಿದಿತ್ತು, ನಾವೂ ಒಳಗಡೆ ಹೋಗಿ ನೋಡಲಾಗಿ ನನ್ನ ಮಗಳು ತಸ್ಲೀಮಾ ಇವಳು ತೋಟ್ಟಲ ಕೊಂಡಿಗೆ ಸೀರಿಯಿಂದ ನೇಣುಹಾಕಿಕೊಂಡಿದ್ದು ನಾನು ಚಿರಾಡುತ್ತಾ ನಾನು ಮತ್ತು ನನ್ನ ಮಗ ಶಾರುಕ ನನ್ನ ಮಗಳ ಜೀವ ಇರಬಹುದೆಂದು ತಿಳಿದು ಕುಡಗೊಲಿನಿಂದ ಸೀರೆ ಕತ್ತರಿಸಿ ಕೇಳಗೆ ಇಳಿಸಿಲಾಗಿ ನನ್ನ ಮಗಳು ತಸ್ಲಿಮಾ ಇವಳು ಮೃತ ಪಟ್ಟಿದ್ದು ಇರುತ್ತದೆ, ಸದರ ನನ್ನ ಮಗಳು ತಸ್ಲೀಮಾ ಇವಳು ಬುದ್ದಿಮಾತಿಗೆ ಬೈಯ್ದುದನ್ನ ಮನ್ನಿಸಿನ ಮೆಲೆ ಪರಿಣಾಮ ಮಾಡಿಕೊಂಡು, ತಸ್ಲೀಮಾ ಇವಳು ಸ್ವಲ್ಪ ಮಾನಸಿಕ ಆಸ್ಥವ್ಯೆಸ್ಥ ಇದ್ದರಿಂದ ದುಡಿಕಿನಿಂದ ನೆಣುಹಾಕಿಕೊಂಡು ಮೃತ ಪಟ್ಟಿದ್ದು ಇರುತ್ತದೆ,
ಕಾರಣ ನನ್ನ ಮಗಳು ತಸ್ಲೀಮಾ ತಂದೆ ದಸ್ತಿಗಿರಸಾಬ ಅಕ್ಕಲಕೋಟ ವ|| 17 ವರ್ಷ ಜಾ|| ಮುಸ್ಲಿಂ ಉ|| ವಿದ್ಯಾಥರ್ಿ ಇವಳು ದಿನಾಂಕ 22/04/2020 ರಂದು ರಾತ್ರಿ 9 ಪಿ.ಎಂ ದಿಂದ 10. ಪಿ.ಎಂದ ಒಳಗೆ ತನಗಿದ್ದು ಮಾನಸಿಕ ಕಾಯಿಲೆ ಮತ್ತು ದುಡಿಕಿನ ಸ್ವಬಾವದಿಂದ ನಮ್ಮ ಪಕ್ಕದ ರೂಮಿನಲ್ಲಿ ತೋಟ್ಟಲಕೊಂಡಿಗೆ ನೆಣುಹಾಕಿಕೊಂಡು ಮೃತ ಪಟ್ಟಿದ್ದು ಯಾರ ಮೇಲೆ ಯಾವೂದೆ ರೀತಿಯಾ ಸಂಶಾಯ ವಗೇರಾ ಇರುವದಿಲ್ಲಾ ನಮಗೆ ಕಾನೂನ ಬಗ್ಗೆ ತಿಳವಳಿಕೆ ಇಲ್ಲದ ಕಾರಣ, ನಮ್ಮ ಏರಿಯಾದ ಮುಂಕಡರು ತಿಳಿಸಿದ ಮೇಲೆ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಮುಂದಿನ ಕ್ರಮ ಜರುಗಿಸಲಿಮಾನ್ಯರವಲ್ಲಿ ವಿನಂತಿ, ಹರಿಶ ತಂದೆ ತುಳಜರಾಮ ಇವರ ಕೈಯಿಂದ ಬರೆಯಿಸಿದ ಅಜರ್ಿ ಇರುತ್ತದೆ, ಅಂತಾ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಯು,ಡಿ,ಆರ್, ನಂ-12/2020 ಕಲಂ 174 ಸಿ.ಆರ್.ಪಿ.ಸಿ. ನೇದ್ದರ ಪ್ರಕಾರ ಯು.ಡಿ,ಆರ್. ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.

          

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 127/2020.ಕಲಂ 87 ಆ್ಯಕ್ಟ :-    ಇಂದು ದಿನಾಂಕ 23/04/2020 ರಂದು ಬೆಳಿಗ್ಗಿನಜಾವ 4-30 ಗಂಟೆಗೆ ಸ||ತ|| ಶ್ರೀ ಹನುಮರೆಡೆಪ್ಪ ಪಿ.ಐ. ಸಾಹೇಬರು ಠಾಣೆಗೆ ಬಂದು 9 ಜನ ಆರೋಪಿಗಳು, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ. ದಿನಾಂಕ 23/04/2020 ರಂದು ಬೆಳಿಗ್ಗೆ 00-10 ಗಂಟೆಗೆ ಠಾಣೆಯಲ್ಲಿದ್ದಾಗ ಬೀರನೂರ ಗ್ರಾಮದ ಭೀಮಾಶಂಕರ ಗುಡಿ ಮುಂದೆ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೆರೆಗೆ, ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪುರ ರವರಿಗೆ ಪತ್ರ ವ್ಯವಹಾರ ಮಾಡಿ ಬೆಳಿಗ್ಗಿನಜಾವ 00-30 ಗಂಟೆಗೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರಿದ್ದ ಸಿದ್ದೇಶ್ವರ ಪಿ.ಎಸ್.ಐ.(ಕಾ.ಸೂ) ಸಿಬ್ಬಂದಿಯವರಾದ ಶರಣಪ್ಪ ಹೆಚ್.ಸಿ 164, ಗೋಕುಲ್ ಹುಸೇನ್ ಪಿ.ಸಿ. 172. ಗುರುಶೇಖರ ಪಿ.ಸಿ.186. ಸುರೇಶ ಪಿ.ಸಿ.200. ದೇವರಾಜ ಪಿ.ಸಿ.282. ನಾಗನಗೌಡ ಪಿ.ಸಿ.371. ರಾಮಚಂದ್ರ ಪಿ.ಸಿ.266. ನಿಂಗಪ್ಪ ಪಿ.ಸಿ.284. ಧರ್ಮರಾಜ ಪಿ.ಸಿ.45. ಜೀಪ ಚಾಲಕ ನಾಗರೆಡ್ಡಿ ಎ.ಪಿ.ಸಿ. 161. ರವರಿಗೆ ಮಾಹಿತಿ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ರಾಮಚಂದ್ರ ಪಿ.ಸಿ.266 ರವರಿಗೆ 00-40 ಗಂಟೆಗೆ ಕಳುಹಿಸಿಕೊಟ್ಟಿದ್ದು, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 30 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 50 ಉ|| ಕೂಲಿ ಕೆಲಸ ಜಾ|| ಪ.ಜಾತಿ ಸಾ|| ದೇವಿನಗರ ಶಹಾಪೂರ ಇವರನ್ನು 00-50 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ನಾನು ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಲು ಕೇಳಿಕೊಂಡ ಮೇರೆಗೆ ಒಪ್ಪಿಕೊಂಡರು. 

       ಮಾನ್ಯ ಡಿವೈ.ಎಸ್.ಪಿ. ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ನಾನು ಮತ್ತು ಸಿಬ್ಬಂದಿಯವರು ಹಾಗೂ ಪಂಚರು ಎಲ್ಲರು ಕೂಡಿ ದಾಳಿಕುರಿತು ಠಾಣೆ ಜೀಪ ನಂ ಕೆಎ-33ಜಿ-0138 ನೇದ್ದರಲ್ಲಿ  ಠಾಣೆಯಿಂದ 01-00 ಗಂಟೆಗೆ ಹೊರಟು ಬೀರನೂರ ಗ್ರಾಮದ ಭೀಮಾಶಂಕರ ಗುಡಿಯ ಹತ್ತಿರ ಸ್ವಲ್ಪ ದರೂರದಲ್ಲಿ 01-40 ಗಂಟೆಗೆ ಹೋಗಿ ಜೀಪನಿಲ್ಲಿಸಿ ಜೀಪನಿಂದ ಕೆಳಗಡೆ ಎಲ್ಲರು ಇಳಿದು ಹನುಮಾನ ಗುಡಿಯ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮನೆಗಳ ಗೋಡೆಗಳ ಮರೆಯಲ್ಲಿ ನಿಂತು  01-45 ಗಂಟೆಗೆ ನಿಗಮಾಡಿ ನೋಡಲಾಗಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದರು ಜೂಜಾಟ ಆಡುತಿದ್ದವರಲ್ಲಿ ಒಬ್ಬನು ಅಂದರಕ್ಕೆ 50 ರೂಪಾಯಿ ಅಂದರೆ ಇನ್ನೊಬ್ಬನು ಬಾಹರಕ್ಕೆ 50 ರೂಪಾಯಿ ಅಂತ ಹೇಳಿ ಜೂಜಾಟ ಆಡುತಿದ್ದರು, ಆಗ ನಾವು ಮತ್ತು ಪಂಚರು ಸದರಿಯವರು ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು, 01-50 ನಾವೆಲ್ಲರೂ ಸದರಿಯವರ ಮೇಲೆ ದಾಳಿ ಮಾಡಿದಾಗ 9 ಜನರು ಸಿಕ್ಕಿದ್ದು. ನಾನು ಪಂಚರ ಸಮಕ್ಷಮದಲ್ಲಿ ಅವರ ಹೆಸರು ವಿಳಾಸ ವಿಚಾರಿಸಿಲಾಗಿ ಅವರು ತಮ್ಮ ಹೆಸರು ಒಬ್ಬೊಬ್ಬರಾಗಿ ಈ ಕೆಳಗಿನಂತೆ ಹೇಳಿ ತಮ್ಮ ಹತ್ತಿರವಿದ್ದ ಹಣವನ್ನು ಹಾಜರಪಡಿಸಿದ್ದನ್ನು ಈ ಕೆಳಗಿನಂತೆ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿರುತ್ತದೆ. 
 1] ಶ್ರೀಶೈಲ ತಂದೆ ಬಾಲಪ್ಪ ಹಳಿಮನಿ ವ|| 30 ಜಾ|| ಹೊಲೇಯ ಉ|| ಒಕ್ಕಲುತನ ಸಾ|| ಬೀರನೂರ. ಈತನ 
    ಹತ್ತಿರ ನಗದು ಹಣ 1240/- ರೂಪಾಯಿ ಸಿಕ್ಕವು 
2] ಚನ್ನಪ್ಪ ತಂದೆ ಶೀವಣ್ಣ ಮಾಚನೂರ ವ|| 52 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಬೀರನೂರ. ಈತನ 
    ಹತ್ತಿರ ನಗದು ಹಣ 900/- ರೂಪಾಯಿ ಸಿಕ್ಕವು 
3] ಹಣಮಂತ್ರಾಯ ತಂದೆ ಮಲ್ಲಯ್ಯ ತಲಗೇರಿ ವ|| 25 ಜಾ|| ಬೇಡರ ಉ|| ಒಕ್ಕಲುತನ ಸಾ|| ಬೀರನೂರ. ಈತನ ಹತ್ತಿರ    
    ನಗದು ಹಣ 950/- ರೂಪಾಯಿ ಸಿಕ್ಕವು 
4] ನಂದಪ್ಪ ತಂದೆ ಅಯ್ಯಪ್ಪ ಬೂದನೂರ ವ|| 35 ಜಾ|| ಹೊಲೇಯ ಉ|| ಒಕ್ಕಲುತನ ಸಾ|| ಪರಸಾಪೂರ. ಈತನ ಹತ್ತಿರ 
    ನಗದು ಹಣ 840/- ರೂಪಾಯಿ ಸಿಕ್ಕವು
5] ಭೀಮರಾಯ ತಂದೆ ಸಿದ್ದಪ್ಪ ದೋಡ್ಮನಿ ವ|| ಸಮಾಜಸೇವೆ ಜಾ|| ಹೋಲೆಯ ಸಾ|| ಸಾವೂರ. ಈತನ ಹತ್ತಿರ
    ನಗದು ಹಣ 950/- ರೂಪಾಯಿ ಸಿಕ್ಕವು 
6] ಉಮ್ಮಣ್ಣಗೌಡ ತಂದೆ ಶಂಕ್ರೆಪ್ಪ ಕಲಕೇರಿ ವ|| 30 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಬೀರನೂರ. ಈತನ 
     ಹತ್ತಿರ ನಗದು ಹಣ 760/- ರೂಪಾಯಿ ಸಿಕ್ಕವು 
7] ಮಲ್ಲಪ್ಪ ತಂದೆ ಮೈಲಾರೆಪ್ಪ ಬೊಂಬೈಕರ್ ವ|| 40 ಜಾ|| ಮಾದಿಗ ಉ|| ಒಕ್ಕಲುತನ ಸಾ|| ಸಾವೂರ. ಈತನ 
    ಹತ್ತಿರ ನಗದು ಹಣ 850/- ರೂಪಾಯಿ ಸಿಕ್ಕವು 
8] ಸಾಬಣ್ಣ ತಂದೆ ಭೀಮಣ್ಣ ದೊಡ್ಮನಿ ವ|| 32 ಉ|| ಒಕ್ಕಲುತನ ಜಾ|| ಹೊಲೇಯ ಸಾ|| ಸಾವೂರ. ಈತನ 
    ಹತ್ತಿರ ನಗದು ಹಣ 900/- ರೂಪಾಯಿ ಸಿಕ್ಕವು
 9] ಧಶವನ ತಂದೆ ನಿಂಗಯ್ಯ ಕವಲಿ ವ|| 32 ಜಾ|| ಒಕ್ಕಲುತನ ಸಾ|| ಬೇಡರ ಸಾ|| ಪರಸಾಪೂರ. ಈತನ 
     ಹತ್ತಿರ ನಗದು ಹಣ 950/- ರೂಪಾಯಿ ಸಿಕ್ಕವು
ಕಣದಲ್ಲಿ ಪಣಕ್ಕೆ ಇಟ್ಟ ಹಣ 1200/- ಸಿಕ್ಕವು ಹೀಗೆ ಒಟ್ಟು 9550/- ರೂಪಾಯಿ ಹಾಗೂ 52 ಇಸ್ಪೇಟ್ ಎಲೆಗಳನ್ನು ಒಂದು ಲಕೊಟೇಯಲ್ಲಿ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ 02-00 ಗಂಟೆಯಿಂದ 03-00 ಗಂಟೆಯವರೆಗೆ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಕೇಸಿನ ಪುರಾವೆ ಕುರಿತು ತಾಬೆಗೆ ತೆಗೆದುಕೊಂಡಿರುತ್ತೆನೆ. ಮತ್ತು ಜೂಜಾಟದಲ್ಲಿ ಸಿಕ್ಕ 9 ಜನರನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 03-40 ಗಂಟೆಗೆ ಬಂದು ವರದಿಯನ್ನು ತಯ್ಯಾರಿಸಿ 4-30 ಗಂಟೆಗೆ 9 ಜನ ಆರೋಪಿತರನ್ನು ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರು ಪಡಿಸಿ ಮುಂದಿನ ಕ್ರಮ ಕೈಕೊಳ್ಳುವಂತೆ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 127/2020 ಕಲಂ 87 ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 48/2020 ಕಲಂ: 505(2),504,506 ಐಪಿಸಿ- ಇಂದು ದಿನಾಂಕ: 23/04/2020 ರಂದು 5-45 ಪಿಎಮ್ ಕ್ಕೆ ಶ್ರೀ ರಹಿಂಸಾಬ ತಂದೆ ಜಲಾಲಸಾಬ ಮುಲ್ಲಾ, ವ:40, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ತುಮಕೂರು ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ದಿನಾಂಕ: 17/04/2020 ರಂದು ನಮ್ಮೂರ ಬಸ್ಸು @ ಬಸವರಾಜ ತಂದೆ ಸಿದ್ದಪ್ಪ ಹಾಲಗೇರಾ ಸಾ:ಕಂದಳ್ಳಿ ಹಾ:ವ:ತುಮಕೂರು ಈತನು ತನ್ನ ಮೊಬೈಲಿನ ವಾಟ್ಸಪ್ ಸ್ಟೇಟಸ್ನಲ್ಲಿ 'ಕೇಳಿಸಿಕೊಳ್ಳಿ ಮುಸ್ಲಿಂ ಹಂದಿಗಳ ಇನ ಮೇಲೆ ಮಸೀದಿ ಮುಂದೆ ಹಂದಿಗಳನು ಸಾಕಿಕೊಳ್ಳಿ ಯಾಕೆ ಅಂದ್ರೆ ನಿಮ್ಮ ಮಸಿದಿಗೆ ಯಾವಾಗ ಬೆಂಕಿ ಬಿಳತ್ತೊ ಗೊತ್ತಿಲ್ಲ. ಡೆಲ್ಲಿ ಅಲ್ಲಿ ಆಗಿದ್ದು, ಇನ್ನು ಮುಂದೆ ಕನರ್ಾಟಕದಲ್ಲಿ ಆಗುತ್ತೆ ಬೊಳಿ ಮಕ್ಳ ಜೈ ಶಿವಾಜಿ' ಎಂದು ಸ್ಟೇಟಸ್ ಎಂದು ಇಟ್ಟುಕೊಂಡಿದ್ದು, ಗೊತ್ತಾಗಿ ನಾನು ಮತ್ತು ಇಸ್ಮಾಯಿಲ್ ತಂದೆ ಬಂದಿಸಾಬ ಇಬ್ಬರೂ ನಮ್ಮೂರ ಮೇನ ರೋಡ ನೀರಿನ ಟಾಕಿ ಹತ್ತಿರ ಸಾಯಂಕಾಲ 6 ಗಂಟೆ ಸುಮಾರಿಗೆ ಹೋಗಿ ಅಲ್ಲಿದ್ದ ಬಸ್ಸು @ ಬಸವರಾಜ ತಂದೆ ಸಿದ್ದಪ್ಪ ಹಾಲಗೇರಾ ಸಾ:ಕಂದಳ್ಳಿ ಹಾ:ವ:ತುಮಕೂರು ಈತನಿಗೆ ಹೀಗೆಕೆ ವಾಟ್ಸಾಪನಲ್ಲಿ ಸ್ಟೇಟಸ್ ಇಟ್ಟಿದ್ದಿ ಎಂದು ಕೇಳಲು ಹೋದರೆ ಇಡುತ್ತೇನೆ ನೋಡ್ರಲೇ ಬೋಸಡಿ ಮಕ್ಕಳೆ ನೀವೆನು ನನ್ನ ಸೆಂಟಾ ಕಿತ್ತಿಕೊಳ್ಳಿರಿ ಎಂದು ನಮಗೆ ಬಾಯಿಗೆ ಬಂದಂತೆ ಅವಾಚ್ಯ ಬೈಯತೊಡಗಿದನು. ನಾವು ಹೀಗೆಲ್ಲ ಬೈಯಬೇಡ ಎಂದು ಹೇಳಿದರು ಕೂಡಾ ಕೇಳದೆ ಮಕ್ಕಳೆ ಇನ್ನೊಂದು ಸಲ ನನಗೆ ಏನಾದರೂ ಕೇಳಲು ಬಂದರೆ ನಿಮಗೆ ಒಬ್ಬೊಬ್ಬರಿಗೆ ಕಡಿದು ಖಲಾಸ ಮಾಡುತ್ತೇನೆ ಎಂದು ನಮಗೆ ಜೀವ ಬೆದರಿಕೆ ಹಾಕಿದನು. ಕಾರಣ ಸದರಿಯವನು ನಮ್ಮ ಧರ್ಮದವರ ಭಾವನೆಗಳಿಗೆ ಧಕ್ಕೆ ತರುವುದಲ್ಲದೆ ಎರಡು ಸಮುದಾಯದವರ ಮಧ್ಯ ದ್ವೇಷ ಬೆಳೆಸುವ ಸ್ಟೇಟಸ್ ಇಟ್ಟಿರುತ್ತಾನೆ. ಇದನ್ನು ಕೇಳಲು ಹೋದರೆ ನಮಗೆ ಅವಾಚ್ಯ ಬೈದು ಜೀವ ಬೆದರಿಕೆ ಕೂಡಾ ಹಾಕಿರುತ್ತಾನೆ. ಆದ್ದರಿಂದ ಸದರಿ ಬಸ್ಸು @ ಬಸವರಾಜ ತಂದೆ ಸಿದ್ದಪ್ಪ ಹಾಲಗೇರಾ ಸಾ:ಕಂದಳ್ಳಿ ಹಾ:ವ:ತುಮಕೂರು ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ. ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 48/2020 ಕಲಂ: 505(2),504,506 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 54/2020 ಕಲಂ 143, 147, 148, 323, 324, 504, 506 ಸಂ 149 ಐಪಿಸಿ:-ದಿನಾಂಕ 23/04/2020 ರಂದು ಬೆಳಿಗ್ಗೆ 8-30 ಗಂಟೆಗೆ ಫಿರ್ಯಾಧಿ ಮತ್ತು ಅವನ ಮನೆಯವರೆಲ್ಲರೂ ತಮ್ಮ ಮನೆಯ ಹತ್ತಿರ ಇರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ತಮ್ಮ ಕೈಯಲ್ಲಿ ಕಲ್ಲು ಮತ್ತು ಬಡಿಗೆಗಳನ್ನು ಹಿಡಿದುಕೊಂಡು ಬಂದು ಏ ಬೋಸಡಿ ಮಗನೇ ನಿನ್ನೆ ಹೊಲದಲ್ಲಿ ತಕರಾರು ಮಾಡಿದ್ದಿ ನಿಮಗೆ ಬಹಳ ಸೊಕ್ಕುಯಿದೆ ಇವತ್ತು ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿ ಫಿರ್ಯಾಧಿ ಮತ್ತು ಅವರ ಮನೆಯವರ ಜೋತೆಗೆ ಜಗಳ ತೆಗೆದು ಕಟ್ಟಿಗೆಯಿಂದ, ಕಲ್ಲಿನಿಂದ ಫಿರ್ಯಾಧಿಗೆ ಮತ್ತು ಅವನ ತಂಗಿಗೆ ಹೊಡೆಬಡೆ ಮಾಡಿ ರಕ್ತಗಾಯ, ಗುಪ್ತಗಾಯ, ತರಚಿದ ಗಾಯಗಳು ಮಾಡಿ ಜೀವದ ಭಯ ಹಾಕಿರುವ ಬಗ್ಗೆ ಪ್ರಕರಣ ದಾಖಲು ಆಗಿರುತ್ತದೆ.


ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ;- ಪಿ.ಎ.ಆರ್. ನಂ. 06/2020 ಕಲಂ. 107 ಸಿ.ಆರ್.ಪಿ.ಸಿ:- ಇಂದು ದಿನಾಂಕ: 13.02.2020 ರಂದು ಮದ್ಯಾಹ್ನ 3.45 ಪಿ.ಎಂ ಕ್ಕೆ ಕೊಂಕಲ್ ಗ್ರಾಮಕ್ಕೆ ಹಳ್ಳಿ ಬೇಟಿ ಕುರಿತು ಮತ್ತು ಪೆಟ್ರೊಲಿಂಗ್ ಕುರಿತು  ಬೇಟಿ ನೀಡಿದಾಗ ಗ್ರಾಮದಲ್ಲಿ ಗೊತ್ತಾಗಿದ್ದೆನೆೆಂದರೆ ಈ ಮೆಲ್ಕಂಡ ಎರಡು ಪಾಟರ್ಿಯ ಜನರು ಆಸ್ತಿಯ ವಿಷಯದಲ್ಲಿ ವೈಷ್ಯಮ್ಯ ಇಟ್ಟುಕೊಂಡಿದ್ದು ಇವರು ಯಾವದೇ ಸಮಯದಲ್ಲಿ ಹೊಡೆದಾಡುವ ಸಂಬವ ಕಾಣಿಸಿದ್ದರಿಂದ ಹಾಗೂ ಪ್ರಾಣ ಹಾನಿ ಸಂಬವ ಆಗುವದು ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಠಾಣೆಗೆ ಬಂದು ಮುಂಜಾಗೃತ ಕ್ರಮವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.


ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 52/2020 ಕಲಂ, 87 ಕೆ.ಪಿ ಆ್ಯಕ್ಟ್ :- ಇಂದು ದಿನಾಂಕ 23/04/2020 ರಂದು 07.10 ಪಿಎಂ ಕ್ಕೆ ಶ್ರೀ ಸೊಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ರವರ ಠಾಣೆಗೆ ಬಂದು ಒಂದು ವರದಿ ಹಾಜರ ಪಡೆಸಿದ್ದು, ಅದರ ಸಾರಂಶ ಏನಂದರೆ ಉಕ್ಕನಾಳ ಖೇಮುನಾಯ್ಕ ತಾಂಡಾದ ಅಂಗನಾಡಿ ಕೇಂದ್ರದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 07 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 4000=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು 05.45 ಪಿಎಮ್ ದಿಂದ 06.45 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 09.10 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರಪಡಿಸಿದ್ದರಿಂದ ಠಾಣೆ ಗುನ್ನೆ ನಂ 52/2020 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 128/2020. ಕಲಂ 87 ಕೆ.ಪಿ.ಆಕ್ಟ :- ಆರೋಪಿತರು ದಿನಾಂಕ: 23-04-2020 ರಂದು 4:30 ಪಿ.ಎಮ್.ಕ್ಕೆ ಎಮ್ . ಸಗರ ಬಿ ಗ್ರಾಮದ ಯು.ಕೆ.ಪಿ. ಕ್ಯಾಂಪ ಹತ್ತಿರ ಸಾರ್ವಜನಿಕ ಸ್ಥಳದಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಕೂಡಿ ದುಂಡಾಗಿ ಕುಳಿತು 52 ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಇಸ್ಪೀಟ ಜೂಜಾಟ ಆಡುತ್ತಿದ್ದಾಗ ಫಿಯರ್ಾದಿದಾರರು ಸಿಬ್ಬಂದಿಯೊಂದಿಗೆ ಹೊಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಅವರಿಂದ ಒಟ್ಟು 6300- ರೂ. ನಗದು ಹಣ , ಮತ್ತು 52 ಇಸ್ಪೀಟ ಎಲೆಗಳನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು ಸದರಿ ವರದಿಯು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 128/2020 ಕಲಂ.87 ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು. ಗುರಮಿಠಕಲ್  ಪೊಲೀಸ್ ಠಾಣೆ ಗುನ್ನೆ ನಂ:- 73/2020 ಕಲಂ: 87 ಕೆ.ಪಿ. ಆಕ್ಟ್ :- ದಿನಾಂಕ 23.04.2020 ರಂದು ಸಂಜೆ 04:00 ಗಂಟೆಗೆ ಸುಮಾರಿಗೆ ಈ ಮೇಲ್ಕಂಡ ಆರೋಪಿತರು ದೇವರಳ್ಳಿ ಗ್ರಾಮದ ಯಲ್ಲಮ್ಮ ದೇವಿ ಗುಡಿಯ ಹತ್ತಿರ ಸಾರ್ವಜನಿಕ ಖೂಲ್ಲಾ ಸ್ಥಳದಲ್ಲಿ ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ್ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ಸಾಹೇಬರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳೀ ಆರೋಪಿತರ ವಶದಲ್ಲಿದ್ದ 2000/- ಮತ್ತು 52 ಇಸ್ಪೀಟ್ ಎಲೆಗಳನ್ನು ಸೇರಿ ಒಟ್ಟು 2000/- ರೂ ಬೆಲೆಯ ಮುದ್ದೆ ಮಾಲನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 73/2020 ಕಲಂ: 87 ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  
ನಾರಾಯಣಪೂರ  ಪೊಲೀಸ್ ಠಾಣೆ ಗುನ್ನೆ ನಂ:- 26/2020 ಕಲಂ: 87 ಕೆ.ಪಿ ಯಾಕ್ಟ್:- ಇಂದು ದಿನಾಂಕ:23/04/2020 ರಂದು 2:00 ಪಿ.ಎಂ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಜ್ಞಾಫನ ಪತ್ರ ನೀಡಿದ್ದು ಇದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ, ಯರಕಿಹಾಳ ಸೀಮಾಂತರದ ಗದ್ದೆಪ್ಪ ಗೌಂಡಿ ಸಾ:ಯರಕಿಹಾಳ ರವರ ಹೊಲದ ಬದುವಿನಲ್ಲಿ ಕೆಲವು ಜನರು ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದ ಮೇರೆಗೆ ಜೂಜಾಟ ಆಡುವವರ ಮೇಲೆ ಪ್ರಕರಣ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಂ.ಎಪ್.ಸಿ ನ್ಯಾಯಾಲಯ ಸುರಪೂರ ರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಕಾರಣ ನೀವು ಪ್ರಕರಣ ದಾಖಲಿಸಲು ಈ ಜ್ಞಾಪನಾ ಪತ್ರದ ಮೂಲಕ ಸೂಚಿಸಿದೆ ಅಂತಾ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:26/2020 ಕಲಂ 87 ಕೆಪಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ. 
        ನಂತರ ಪಿ.ಎಸ್.ಐ ಸಾಹೇಬರು 7:30 ಪಿ.ಎಂ ಕ್ಕೆ ಮರಳಿ ಠಾಣೆಗೆ ಬಂದು 05 ಜನ ಆರೋಪಿತರು ನಗದು ಹಣ 5830/- ರೂ, 52 ಇಸ್ಪೆಟ ಎಲೆಗಳನ್ನು ಜಪ್ತುಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಫನ ಪತ್ರ ನೀಡಿದ್ದು ಇರುತ್ತದೆ. 
ಆರೋಪಿತರ ಹೆಸರು ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
1) ಬಾಲಚಂದ್ರ ತಂದೆ ಮೋತಿಲಾಲ ಪವಾರ ವಯ:28 ವರ್ಷ, ಜಾ:ಹಿಂದೂ ಲಂಬಾಣಿ, ಸಾ:ಕುರೇಕನಾಳ ತಾಂಡಾ ತಾ:ಹುಣಸಗಿ. 
2) ರವಿ ತಂದೆ ಒಬ್ಬಣ್ಣ ಪವಾರ ವಯ:32 ವರ್ಷ, ಜಾ:ಹಿಂದೂ ಲಂಬಾಣಿ, ಸಾ: ಕುರೇಕನಾಳ ತಾಂಡಾ ತಾ:ಹುಣಸಗಿ. 
3) ಗೋಪಿಲಾಲ್ ತಂದೆ ಕೃಷ್ಣ ರಾಠೋಡ ವಯ:34 ವರ್ಷ, ಜಾ:ಹಿಂದೂ ಲಂಬಾಣಿ, ಸಾ:ಕುರೇಕನಾಳ ತಾಂಡಾ ತಾ:ಹುಣಸಗಿ. 
4) ರಾಮು ತಂದೆ ಪೂರಪ್ಪ ಪವಾರ ವಯ:30 ವರ್ಷ, ಜಾ:ಹಿಂದೂ ಲಂಬಾಣಿ, ಸಾ:ಕುರೇಕನಾಳ ತಾಂಡಾ ತಾ:ಹುಣಸಗಿ. 
5) ಬಸವರಾಜ ತಂದೆ ಯಂಕಣ್ಣ ರಾಠೋಡ ವಯ:27 ವರ್ಷ, ಜಾ:ಹಿಂದೂ ಲಂಬಾಣಿ, ಸಾ:ಕುರೇಕನಾಳ ತಾಂಡಾ ತಾ:ಹುಣಸಗಿ.

ಇಬ್ಬರು ಆರೋಪಿತರು ಓಡಿಹೋಗಿರುತ್ತಾರೆ ಅವರ ಹೆಸರು ಈ ಕೇಳಗಿನಂತೆ ಇರುತ್ತದೆ 
1) ಲಾಲಪ್ಪ ತಂದೆ ಲೋಕನಾಥ ಪವಾರ ಸಾ:ಕುರೇಕನಾಳ ತಾಂಡಾ ತಾ:ಹುಣಸಗಿ. 
2) ಬಾಲಚಂದ್ರ ತಂದೆ ಗಂಗಪ್ಪ ಪವಾರ  ಸಾ:ಕುರೇಕನಾಳ ತಾಂಡಾ ತಾ:ಹುಣಸಗಿ.ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ:- 40/2020 ಕಲಂ. 87 ಕೆ.ಪಿ ಎಕ್ಟ್ 1963:- ಇಂದು ದಿನಾಂಕ; 23/04/2020 ರಂದು 4-30 ಪಿಎಮ್ ಕ್ಕೆ ಶ್ರೀ ಶರಣಗೌಡ ಎಮ್ ನ್ಯಾಮಣ್ಣವರ ಸಿ.ಪಿ.ಐ  ಯಾದಗಿರಿ ವೃತ್ತ ಯಾದಗಿರಿ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ.23/04/2020 ರಂದು  4-00 ಪಿಎಮ್ ಕ್ಕೆ ಯಾದಗಿರಿ ವೃತ್ತ ಕಛೇರಿಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಂಜ್ ಏರಿಯಾದ ಅನಪೂರ ಲೇಔಟ್ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಭಾತ್ಮೀ ಬಂದಿದ್ದು ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 4-30 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.40/2020 ಕಲಂ.87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!