ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22/04/2020

By blogger on ಬುಧವಾರ, ಏಪ್ರಿಲ್ 22, 2020






                                  ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22/04/2020 
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 59/2020 ಕಲಂ. 279,337,338 ಐಪಿಸಿ 187 ಐ ಎಮ್ವಿಅಕ್ಟ್  :- ದಿನಾಂಕ.21.04.2020 ರಂದು ಸಾಯಂಕಾಲ 6-30 ಗಂಟೆಗೆ ರಾಯಚೂರ ಸುರಕ್ಷಾ ಆಸ್ಪತ್ರೆಯಿಂದ ಪೊನ್ ಮೂಲಕ ಎಮ್.ಎಲ್.ಸಿ ಮಾಹಿತಿ ಬಂದಿದ್ದು ಸದರಿ ಆಸ್ಪತ್ರೆಗೆ ಭೆಟಿ ನೀಡಿ ಅಲ್ಲಿ ಉಪಚಾರ ಪಡೆಯುತಿದ್ದ ಗಾಯಾಳುವಿನ ತಂದೆ ಮಾರೆಪ್ಪ ತಂದೆ ಚಂದ್ರಾಮಪ್ಪ ಕಾಕಿ ಈತನ ಫಿಯರ್ಾದಿ ಹೇಳಿಕೆ ಪಡೆದಿದ್ದು ಸಾರಾಂಶವೇನೆಂದರೆ, ದಿನಾಂಕ: 21.04.2020 ರಂದು ಮಧ್ಯಾನ್ಹ 2-30 ಗಂಟೆ ಸುಮಾರಿಗೆ ಅಂಗಳದಲ್ಲಿ ಆಟವಾಡುತ್ತಾ ಹಾಸ್ಟಲ್ ಹತ್ತಿರ ರೋಡಿನ ಮೇಲೆ ಹೋದ ಫಿಯರ್ಾದಿಯ ಮಗ ಮಲ್ಲಿಕಾಜರ್ುನ ತಂದೆ ಮಾರೆಪ್ಪ ಕಾಕಿ ವಯ|| 6 ವರ್ಷ ಈತನಿಗೆ ರಾಯಚೂರ ಕಡೆಯಿಂದ ಬಂದ ಬೊಲೆರೋ ಕಾರ ನಂಬರ ಕೆಎ-33, ಎಮ್.-7743 ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿಪಡಿಸಿ ಅಪಘಾತಪಡಿಸಿದ್ದು, ಸದರಿ ಅಫಘಾತದಲ್ಲಿ ಮಲ್ಲಿಕಾಜರ್ುನ ಈತನ ತಲೆಯ ಎಡಭಾಗಕ್ಕೆ, ಎಡಗಾಲು ತೊಡೆಮೂಳೇಗೆ ಭಾರಿ ರಕ್ತಗಾಯವಾಗಿದ್ದು. ಮೈ, ಕೈಗೆ ಸಣ್ಣ-ಪುಟ್ಟ ತೆರಚಿದ ಗಾಯಗಳಾಗಿರುತ್ತವೆ. ಕಾರ ಚಾಲಕನು ತನ್ನ ವಾಹನ ಬಿಟ್ಟು ಓಡಿಹೋಗಿದ್ದು ಸದರಿಯವನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಫಿಯರ್ಾದಿ ಸಾರಾಂಶ ಇರುತ್ತದೆ.

          

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 45/2020 ಕಲಂ: 143,147,504,341,323 ಸಂ 149 ಐಪಿಸಿ:- ಇಂದು ದಿನಾಂಕ: 22/04/2020 ರಂದು 3-30 ಪಿಎಮ್ ಕ್ಕೆ ಶ್ರೀ ಬಸ್ಸು @ ಬಸವರಾಜ ತಂದೆ ಸಿದ್ದಪ್ಪ ಹಾಲಗೇರಾ, ವ:23, ಜಾ:ಕಬ್ಬಲಿಗ, ಉ:ಡ್ರೈವರ ಸಾ:ಕಂದಳ್ಳಿ ಹಾ:ವ: ತುಮಕೂರು ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಸಲ್ಲಿಸಿದ್ದರ ಸಾರಾಂಶವೇನಂದರೆ ದಿನಾಂಕ: 17/04/2020 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಸ್ನೇಹಿತರು ತುಮಕೂರಿನ ಮುಖ್ಯ ರಸ್ತೆಯ ನೀರಿನ ಟಾಕಿ ಹತ್ತಿರ ನಡೆದುಕೊಂಡು ಹೊರಟಾಗ ತುಮಕೂರಿನ ಮುಸ್ಲಿಂ ಸಮುದಾಯದವರಾದ 1) ರಾಜಾ ತಂದೆ ಬಂದಿಸಾಬ ಕೋರಬಾ, 2) ಅಬ್ದುಲ್ ತಂದೆ ಸೈದಪ್ಪ ಕೋರಬಾ, 3) ಅಬ್ದುಲ್ ದುಬೈ, 4) ರಹಿಮ್ ದುಬೈ, 5) ದಾವೂದ ಮರಡಿ, 6) ಕಾಸಿಂಸಾಬ ತಂದೆ ಇಬ್ರಾಹಿಂ, 7) ಮಹಿಬೂಬ ಮರಡಿ, 8) ಬಾಬು ಮರಡಿ, 9) ಮಹಿಬೂಬ ತಂದೆ ಕುಡ್ಡ ಬಂದಿಸಾ ಮತ್ತು 10) ಬಾಬು ಕುಮನೂರು ಇವರೆಲ್ಲರೂ ಅಕ್ರಮಕೂಟ ಕಟ್ಟಿಕೊಂಡು ಬಂದವರೆ ನನಗೆ ತಡೆದು ನಿಲ್ಲಿಸಿ, ಲೇ ಮಗನೆ ನಾವು ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ್ದನ್ನು ಪೊಲೀಸರಿಗೆ ಹೇಳಿ ಅವರನ್ನು ಕರೆಸ್ತಿಯಾ ಮಗನೆ ಎಂದು ನನಗೆ ಅಬ್ದುಲ್ ಮತ್ತು ರಹಿಮ್ ಇವರು ಹಿಡಿದುಕೊಂಡಾಗ ರಾಜಾ ಮತ್ತು ಅಬ್ದುಲ್ ತಂದೆ ಸೈದಪ್ಪ ಇವರು ಕೈ ಮುಷ್ಟಿ ಮಾಡಿ ಮನಸ್ಸಿಗೆ ಬಂದಂಗೆ ಹೊಡೆದಿರುತ್ತಾರೆ. ಮದ್ಯದಲ್ಲಿ ನನ್ನ ತಾಯಿಗೂ ಬಾಯಿಗೆ ಬಂದಂತೆ ಬೈದಿರುತ್ತಾರೆ. ಇನ್ನುಳಿದವರು ನನಗೆ ಈ ಮಗನದು ಊರಲ್ಲಿ ಬಹಳ ಆಗ್ಯಾದ ಬೇವೂರಿಂದ ಬಂದು ನಮ್ಮೂರಲ್ಲಿ ನಡೆಸುತ್ತಾನೆ ಸೂಳೆ ಮಗ ಎಂದು ಜಗಳ ತೆಗೆದು ಕೈಯಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ಆಗ ಜಗಳವನ್ನು ಅಲ್ಲಿಯೇ ನನ್ನೊಂದಿಗೆ ಇದ್ದ ಸಿದ್ದು ತಂದೆ ಶರಣಪ್ಪ ಸುಣಗಾರ, ಸಿದ್ದು ತಂದೆ ಶರಭಲಿಂಗಪ್ಪ ಕಂಟೆಕಾಯಿ ಮತ್ತು ಭೀಮು ಅಗಸರ ಇವರು ಬಂದು ಬಿಡಿಸಿರುತ್ತಾರೆ. ಆದ್ದರಿಂದ ವಿನಾಕಾರಣ ಮಗನೆ ನೀನು ನಾವು ಮಸೀದಿಯಲ್ಲಿ ಪ್ರಾರ್ಥನೆ ಮಾಡುವುದು ಪೊಲೀಸರಿಗೆ ಹೇಳಿದಿ ಎಂದು ಜಗಳ ತೆಗೆದು ಅವಾಚ್ಯ ಬೈದು ತಡೆದು ನಿಲ್ಲಿಸಿ, ಕೈಯಿಂದ ಹೊಡೆದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಮ್ಮೂರ ಹಿರಿಯರು ಊರಲ್ಲಿಯೇ ವಿಚಾರ ಮಾಡಿ ಬಗೆಹರಿಸೋಣ ಎಂದು ಹೇಳಿ ಅವರಿಗೆ ಕರೆಸಿದರೆ ಅವರು ನಾವು ಬರಂಗಿಲ್ಲ ನೀವು ಏನು ಮಾಡುತ್ತಿರಿ ಮಾಡಿಕೊಳ್ಳಿರಿ ಎಂದು ಹೇಳಿದ್ದರಿಂದ ನಮ್ಮ ಹಿರಿಯರು ನೀನು ಹೋಗಿ ದೂರು ಸಲ್ಲಿಸು ಅಂತಾ ನನಗೆ ಹೇಳಿದ್ದರಿಂದ ನಾನು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ನನ್ನ ಅಂತಹ ಪೆಟ್ಟುಗಳಾಗಿಲ್ಲದ ಕಾರಣ ಉಪಚಾರಕ್ಕೆ ಹೋಗುವುದಿಲ್ಲ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 45/2020 ಕಲಂ: 143,147,504,341,323 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.  



ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 46/2020 ಕಲಂ: 188,269,270 ಸಂ 149 ಐಪಿಸಿ:- ಇಂದು ದಿನಾಂಕ: 22/04/2020 ರಂದು 5-30 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ಇವರು ಠಾಣೆಗೆ ಬಂದು ಸರಕಾರಿ ತಫರ್ೆಯಿಂದ ಫಿರ್ಯಾಧಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ: 22/04/2020 ರಂದು 3:30 ಪಿಎಮ್ ಸುಮಾರಿಗೆ ತುಮಕೂರು ಗ್ರಾಮದ ಶ್ರೀ ಬಸ್ಸು @ ಬಸವರಾಜ ತಂದೆ ಸಿದ್ದಪ್ಪ ಹಾಲಗೇರಾ ಇವರ ಫಿರ್ಯಾಧಿ ಮೇಲಿಂದ ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 45/2020 ಕಲಂ: 143,147,504,341,323 ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನಾನು ಸಂಗಡ ಪ್ರಕಾಶ ಹೆಚ್.ಸಿ 18 ರವರೊಂದಿಗೆ ಸಾಯಂಕಾಲ 5 ಗಂಟೆ ಸುಮಾರಿಗೆ ತುಮಕೂರು ಗ್ರಾಮಕ್ಕೆ ಭೇಟಿ ನೀಡಿ ಹೊಸ ಬೀಟ್ ಸದಸ್ಯರಿಗೆ ಭೇಟಿಯಾಗಿ ಮಾಹಿತಿ ಸಂಗ್ರಹಿಸಿದಾಗ ತಿಳಿದುಬಂದಿದ್ದೇನಂದರೆ ಈಗ ನಮ್ಮ ರಾಜ್ಯದಲ್ಲಿ ಕೋವಿಡ್-19 (ಕೋರೋನಾ) ಎಂಬ ಮಹಾಮಾರಿ ಭಯಂಕರ ರೋಗವು ಸಾಂಕ್ರಾಮಿಕವಾಗಿ ಹರಡುತ್ತಿರುವುದರಿಂದ ಮಾನ್ಯ ಘನ ಕನರ್ಾಟಕ ಸರಕಾರವು ಸಾರ್ವಜನಿಕ ಸಭೆ ಸಮಾರಂಭಗಳಾದ ಜಾತ್ರೆ, ಸಂತೆ, ಮದುವೆ ಮುಂತಾದವುಗಳನ್ನು ಮತ್ತು 5 ಅಥವಾ 5 ಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವುದನ್ನು ನಿರ್ಬಂಧಿಸಿ ಸಂಪೂರ್ಣ ಲಾಕಡೌನ ಆದೇಶ ಹೊರಡಿಸಿರುತ್ತಾರೆ. ಅದರಂತೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಕೂಡಾ ಲಾಕಡೌನ ಮಾಡಿ ಯಾವುದೇ ಜಾತ್ರೆ ಸಮಾರಂಭ ಮಾಡದಂತೆ ಹಾಗೂ 5 ಅಥವಾ 5 ಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದು ಇರುತ್ತದೆ. ಹೀಗಿದ್ದರು ಕೂಡಾ ತುಮಕೂರು ಗ್ರಾಮದ ಮೊದಲನೇ ಪಾಟರ್ಿಯವರಾದ ಮುಸ್ಲಿಂ ಸಮುದಾಯದ 1) ರಾಜಾ ತಂದೆ ಬಂದಿಸಾಬ ಕೋರಬಾ, 2) ಅಬ್ದುಲ್ ತಂದೆ ಸೈದಪ್ಪ ಕೋರಬಾ, 3) ಅಬ್ದುಲ್ ದುಬೈ, 4) ರಹಿಮ್ ದುಬೈ, 5) ದಾವೂದ ಮರಡಿ, 6) ಕಾಸಿಂಸಾಬ ತಂದೆ ಇಬ್ರಾಹಿಂ, 7) ಮಹಿಬೂಬ ಮರಡಿ, 8) ಬಾಬು ಮರಡಿ, 9) ಮಹಿಬೂಬ ತಂದೆ ಕುಡ್ಡ ಬಂದಿಸಾ ಮತ್ತು 10) ಬಾಬು ಕುಮನೂರು ಇವರೆಲ್ಲರೂ ಅಕ್ರಮಕೂಟ ಕಟ್ಟಿಕೊಂಡು ಮನೆಯಿಂದ ಹೊರಗಡೆ ಬಂದು 2 ನೇ ಪಾಟರ್ಿಯ ಬಸ್ಸು @ ಬಸವರಾಜನೊಂದಿಗೆ ನಾವು ಮಸೀದಿಯಲ್ಲಿ ಪ್ರಾರ್ಥನೆ ಮಾಡುವುದನ್ನು ಪೊಲೀಸರಿಗೆ ಯಾಕೇ ಹೇಳಿದಿ ಭೊಸುಡಿ ಮಗನೆ ಎಂದು ಜಗಳ ತೆಗೆದು ತಡೆದು ನಿಲ್ಲಿಸಿ, ಕೈಯಿಂದ ಹೊಡಬಡೆ ಮಾಡಿರುತ್ತಾರೆ. ಅದೇ ರೀತಿಯಾಗಿ 2 ನೇ ಪಾಟರ್ಿಯವರಾದ 1) ಬಸ್ಸು @ ಬಸವರಾಜ ತಂದೆ ಸಿದ್ದಪ್ಪ ಹಾಲಗೇರಾ, 2) ಸಿದ್ದು ತಂದೆ ಶರಣಪ್ಪ ಸುಣಗಾರ, 3) ಸಿದ್ದು ತಂದೆ ಶರಭಲಿಂಗಪ್ಪ ಕಂಟೆಕಾಯಿ ಮತ್ತು 4) ಭೀಮು ಅಗಸರ ಎಲ್ಲರೂ ಸಾ:ತುಮಕೂರು ಇವರು ಕೂಡಾ ಮನೆಯಿಂದ ಹೊರಗಡೆ ಬಂದು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಸರಕಾರದ ಲಾಕಡೌನ ಆದೇಶ ಉಲ್ಲೇಂಘನೆ ಮಾಡಿರುತ್ತಾರೆ. ಕಾರಣ ಎಲ್ಲರೂ ಒಂದು ಕಡೆ ಸೇರಿದರೆ ಕೋವಿಡ್-19 (ಕೋರೋನಾ) ಎಂಬ ಮಹಾಮಾರಿ ಸಾಂಕ್ರಾಮಿಕ ರೋಗ ಹರಡುತ್ತದೆ ಅಂತಾ ಗೊತ್ತಿದ್ದರು, ಕೂಡಾ ಉದ್ದೇಶ ಪೂರ್ವಕವಾಗಿ ಒಂದು ಕಡೆ ಸೇರಿ ಜಗಳ ಮಾಡಿ ಸದರಿ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಅಪಾಯಕಾರಿ ಸೊಂಕು ಹರಡುವ ನಿರ್ಲಕ್ಷತನವನ್ನು ತೋರಿಸಿರುತ್ತಾರೆ. ಕಾರಣ ಸದರಿಯವರು ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಅಪಾಯಕಾರಿ ಸೊಂಕು ಹರಡುವ ನಿರ್ಲಕ್ಷತನವನ್ನು ತೋರಿಸಿರುವುದರಿಂದ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಈ ಮೂಲಕ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 46/2020 ಕಲಂ: 188,269,270 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 47/2020 ಕಲಂ: 143,147,504,341,354,323,506 ಸಂ 149 ಐಪಿಸಿ:- ಇಂದು ದಿನಾಂಕ: 22/04/2020 ರಂದು 6-45 ಪಿಎಮ್ ಕ್ಕೆ ಶ್ರೀಮತಿ ಕಮಲಿಬಾಯಿ ಗಂಡ ಸುರೇಶ ಚವ್ಹಾಣ, ವ:25, ಜಾ:ಲಮ್ಮಾಣಿ, ಉ:ಕೂಲಿ ಸಾ:ಬಿರನಕಲ್ ತಾಂಡಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ಈಗ್ಗೆ ಸುಮಾರು ಒಂದು ವಾರದ ಹಿಂದೆ ನಮ್ಮ ತಾಂಡಾದಲ್ಲಿ ಅಬಕಾರಿ ಇಲಾಖೆಯವರು ಅಬಕಾರಿ ದಾಳಿ ಮಾಡಿ ಬೆಲ್ಲದ ಕೊಳೆ ಇತ್ಯಾದಿ ನಾಶಪಡಿಸಿರುತ್ತಾರೆ. ಅದರಂತೆ ನಮ್ಮ ಬಾಜು ಮನಯವಳಾದ ಶಾಂತಿಬಾಯಿ ಗಂಡ ಶಾಂತಪ್ಪ ಚವ್ಹಾಣ ಇವರ ಮನೆ ಮೇಲೆ ಕೂಡಾ ದಾಳಿ ಮಾಡಿರುತ್ತಾರೆ. ಈ ದಾಳಿಯಾದ ನಂತರದಿಂದ ಸದರಿ ಶಾಂತಿಬಾಯಿ ಮತ್ತು ಸಂಗಡಿಗರು ನಮ್ಮ ಮೇಲೆ ಅಬಕಾರಿ ದಾಳಿ ಆಗಲು ನಿವೇ ಹೇಳಿರುತ್ತಿರಿ ಅಂತಾ ವಿನಾಕಾರಣ ನಮಗೆ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈಯುವುದು ಜಗಳ ಮಾಡುವುದು ಮಾಡುತ್ತಿದ್ದಳು. ಹೀಗಿದ್ದು ದಿನಾಂಕ: 16/04/2020 ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ನಾನು ಸಂಡಾಸಕ್ಕೆ ಹೋಗಿ ನನ್ನ ಮನೆಗೆ ವಾಪಸ ಬರುತ್ತಿದ್ದಾಗ ಅವರ ಮನೆ ಹತ್ತಿರ ಶಾಂತಿಬಾಯಿ ಮತ್ತು ಸಂಗಡಿಗರು ನನಗೆ ನೋಡಿ ಇದೆ ಭೊಸುಡಿ ಸರಾಯಿ ಹೇಳಿ ನಮ್ಮ ಸರಾಯಿ ಹಿಡಿಸಿದ್ದಾಳೆ ಎಂದು ಬೈಯುತ್ತಿದ್ದಾಗ ನಾನು ಏಕೆ ನನಗೆ ಬೈಯುತ್ತಿಯಾ ಅಂತಾ ಅವರ ಮನೆ ಮುಂದೆ ದಾರಿ ಮೇಲೆ ನಿಂತು ಕೇಳುತ್ತಿದ್ದಾಗ 1) ಶಾಂತಿಬಾಯಿ ಗಂಡ ಶಾಂತಪ್ಪ ಚವ್ಹಾಣ, 2) ದಾಮ್ಲ್ಯಾ ತಂದೆ ದೇಶ್ಯಾ ರಾಠೋಡ, 3) ಜಂಭಣ್ಣ ತಂದೆ ದಾಮ್ಲ್ಯಾ ರಾಠೋಡ, 4) ಗೋಪಾಲ ತಂದೆ ದಾಮ್ಲ್ಯಾ ರಾಠೋಡ, 5) ಸುನೀಲ ತಂದೆ ದಾಮ್ಲ್ಯಾ ರಾಠೋಡ, 6) ಅನೀಲ ತಂದೆ ದಾಮ್ಲ್ಯಾ ರಾಠೋಡ, 7) ದೇವಿಬಾಯಿ ಗಂಡ ದಾಮ್ಲ್ಯಾ ರಾಠೋಡ, 8) ಸತ್ಯನಾರಾಯಣ ಎಮ್. ಕೊಳ್ಳೂರು ಎಲ್ಲರೂ ಸಾ:ಬೀರನಕಲ್ ತಾಂಡಾ ಇವರೆಲ್ಲರೂ ಸೇರಿ ಅಕ್ರಮಕೂಟ ರಚಿಸಿಕೊಂಡು ಬಂದವರೆ ನನಗೆ ತಡೆದು ನಿಲ್ಲಿಸಿ, ಅವಾಚ್ಯ ಬೈದು ಶಾಂತಿಬಾಯಿ ಇವಳು ಬಂದು ನನಗೆ ಕೈಯಿಂದ ಕಪಾಳಕ್ಕೆ ಹೊಡೆದು ನನ್ನ ಕೂದಲೂ ಹಿಡಿದು ನಿಲ್ಲಿಸಿದಳು. ಆಗ ಜಂಭಣ್ಣ ಮತ್ತು ಗೋಪಾಲ ಇಬ್ಬರೂ ನನ್ನ ಸೀರೆ ಸೆರಗು ಹಿಡಿದು ಎಳೆದು ಕೆಳಗಡೆ ಬಿಸಾಕಿ ನನ್ನ ಎದೆಯ ಮೇಲೆ ಗೋಪಾಲ ಕುಳಿತುಕೊಂಡು ಕೈಯಿಂದ ಮುಷ್ಟಿ ಮಾಡಿ ಮುಖಕ್ಕೆ, ಎದೆಗೆ ಹೊಡೆದಿರುತ್ತಾನೆ. ಸುನಿಲ್ ಮತ್ತು ಅನಿಲ್ ಇಬ್ಬರೂ ಕೂಡಾ ನನ್ನ ಸೀರೆ ಸೆರಗು ಜಗ್ಗಾಡಿ ಕೈಯಿಂದ ಹೊಡೆದಿರುತ್ತಾರೆ. ದೇವಿಬಾಯಿ ಇವಳು ನನ್ನ ಕೂದಲು ಹಿಡಿದು ಹೊಡೆದಿರುತ್ತಾಳೆ. ಅವರು ನನ್ನ ಕೊರಳಿಗೆ ಕೈ ಹಾಕಿ ಸೆರಗು ಜಗ್ಗಾಡಿದಾಗ ನನ್ನ ಕೊರಳಲ್ಲಿದ್ದ ಬಂಗಾರದ ಜೀರಾಮಣಿ ಮತ್ತು ತಾಳಿ ಸರ ಅಂದಾಜು ಒಂದು (01) ತೊಲೆಯದು ಹರಿದು ಜಗಳದಲ್ಲಿ ಬಿದ್ದಿರುತ್ತದೆ. ಆಗ ಜಗಳವನ್ನು ಅಲ್ಲಿಯೇ ಇದ್ದ ಜುಮ್ಮಿಬಾಯಿ ಗಂಡ ನಾಗಪ್ಪ, ದೇವಪ್ಪ ತಂದೆ ಸುಬ್ಬಣ್ಣ ಮತ್ತು ತಿಪ್ಪಣ್ಣ ತಂದೆ ಕೇಶಪ್ಪ ರಾಠೋಡ ಇವರು ಬಂದು ನನಗೆ ಹೊಡೆಯುವುದು ಬಿಡಿಸಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿ ಬೋಸುಡಿ ಇನ್ನೊಂದು ಸಲ ಸಿಕ್ಕರೆ ನಿನ್ನ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಕಾರಣ ಸದರಿಯವರ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 47/2020 ಕಲಂ: 143,147,504,341,354,323,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.  


ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ;- 70/2020 ಕಲಂ: 87 ಕೆ.ಪಿ. ಆಠ್ಟಿ್:- ದಿನಾಂಕ 22.04.2020 ರಂದು ಮಧ್ಯಾಹ್ನ 3:30 ಗಂಟೆಗೆ ಸುಮಾರಿಗೆ ಈ ಮೇಲ್ಕಂಡ ಆರೋಪಿತರು ಗುರುಮಠಕಲ್ ಪಟ್ಟಣದ ಖಾಸ ಮಠದ ಹತ್ತಿರ ಸಾರ್ವಜನಿಕ ಖೂಲ್ಲಾ ಸ್ಥಳದಲ್ಲಿ ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ್ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ಸಾಹೇಬರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳೀ ಆರೋಪಿತರ ವಶದಲ್ಲಿದ್ದ 1550/- ಮತ್ತು 52 ಇಸ್ಪೀಟ್ ಎಲೆಗಳನ್ನು ಸೇರಿ ಒಟ್ಟು 1550/- ರೂ ಬೆಲೆಯ ಮುದ್ದೆ ಮಾಲನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 70/2020 ಕಲಂ: 87 ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  


ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 71/2020 ಕಲಂ 447,435 ಐಪಿಸಿ;-ಪಿರ್ಯಾಧಿ ತನ್ನ ಜಮೀನು ಸವರ್ೆ ನಂ. 655/ಅ ವಿಸ್ತೀರ್ಣ 1 ಎಕರೆ 4 ಗುಂಟೆ ಜಮೀನಿನಲ್ಲಿ ಹೊಲದಲ್ಲಿ ಬೆಳೆದ ಜೋಳದ ಕಣಕಿ (ಸೊಪ್ಪಿ) ದನಕರುಗಳಿಗೆ ಹಾಕಲು ಕೂಡಿಟಿದ್ದು ಇರುತ್ತದೆ. ದಿನಾಂಕ 22.04.2020 ರಂದು ರಾತ್ರಿ 00.30 ಗಂಟೆ ಸುಮಾರಿಗೆ ಪಿರ್ಯಾಧಿ ಸದರಿ ಜಮೀನಿನಲ್ಲಿ ಸಂಡಸ ಮಾಡಲು ಹೋಗಿ ಮರಳಿ ಮನೆ ಕಡೆ ಬರುತ್ತಿದ್ದಾಗ ಅದೇ ಸಮಯದಲ್ಲಿ ಆರೋಪಿತನು ಪಿರ್ಯಾಧಿ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಹೊಲದಲ್ಲಿ ಬೆಳೆದ ವ್ಯವಸಾಯೋತ್ಪನ್ನವನ್ನು ನಷ್ಟವನ್ನುಂಟು ಮಾಡುವ ಉದ್ದೇಶದಿಂದ ರಾತ್ರಿ 00.40 ಗಂಟೆ ಸುಮಾರಿಗೆ ಪಿರ್ಯಾಧಿ ಜೋಳದ ಬಣಮಿಗೆ ಕಡ್ಡಿ ಕೊರೆದು ಬೆಂಕಿ ಹಚ್ಚಿ ಸುಮಾರು 24ಸಾವಿರ ರೂಗಳ ಮೋಲ್ಯದ 4 ಟ್ರ್ಯಾಕ್ಟರ ಜೋಳದ ಕಣಿಕಿಗೆ (ಸೊಪ್ಪಿ) ಸುಟ್ಟ ಬಗ್ಗೆ ಅಪರಾಧ.



ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 72/2020 ಕಲಂ 87 ಕೆ.ಪಿ ಆಠ್ಟಿ್:- ಇಂದು ದಿನಾಂಕ 22.04.2020 ರಂದು ಮದದ್ಯಾಹ್ನ 12.45 ಗಂಟೆಗೆ ಪಿರ್ಯಾಧಿ ಗುರುಮಠಖಲ ಪಟ್ಟಣದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಗುರುಮಠಕಲ ಪಟ್ಟಣದ ಹೊರವಲಯ ದಗರ್ಾದ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಹಣ ಪಣಕ್ಕಿಟ್ಟು ಅಂದಾರ ಬಾಹರ ದೈವಲಿಲೆ ಇಸ್ಪೀಟರ ಆಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮೀ ಮೇರೆಗೆ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಸಮಯ 4.20 ಗಂಟೆಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರಿಂದ 1] 52 ಇಸ್ಪೀಟ ಎಲೆಗಳು, 2] ನಗದು ಹಣ 6100/-ರೂ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆ ಪೊರೈಸಿ ಮರಳಿ ಠಾಣೆಗೆ ಸಮಯ ಸಂಜೆ 6.00 ಗಂಟೆಗೆ ಬಂದು ಆರೋಪಿತರ ವಿರುದ್ದ ಕಾನೂನು ಕ್ರಮಕ್ಕಾಗಿ ವರದಿ ನೀಡಿದ್ದು ಇರುತ್ತದೆ.



ಶಹಾಪೂರ  ಪೊಲೀಸ್ ಠಾಣೆ ಗುನ್ನೆ ನಂ:- 126/2020  ಕಲಂ 87  ಕೆ.ಪಿ ಆಕ್ಟ :- ಇಂದು ದಿನಾಂಕ 22/04/2020 ರಂದು ಸಾಯಂಕಾಲ 19-15 ಗಂಟೆಗೆ  ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಹನುಮರಡೆಪ್ಪ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು, 07 ಜನ ಆಪಾಧಿತರು ಹಾಗೂ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ,  ಫಿರ್ಯಾದಿಯವರು ಇಂದು ದಿನಾಂಕ 22/04/2020 ರಂದು ಮದ್ಯಾಹ್ನ 15-10 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ ಮಂಡಗಳ್ಳಿ ಗ್ರಾಮದ  ಹನುಮಾನ ಗುಡಿಯ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಿಬ್ಬಂದಿ ಮತ್ತು ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ 07 ಜನ ಜೂಜಾಟ ಆಡುತಿದ್ದವರನ್ನು ಹಿಡಿದು ಅವರ ಅವರಿಂದ ನಗದು ಹಣ 4800=00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು ಸಾಯಂಕಾಲ 17-00 ಗಂಟೆಯಿಂದ 18-00 ಗಂಟೆಯ ಅವಧಿಯಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ  ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 126/2020  ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  



ಭಿಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 53/2020 ಕಲಂ 273, 284 ಐಪಿಸಿ & 32, 34 ಕೆಇ ಯಾಕ್ಟ :- ಇಂದು ದಿನಾಂಕ:22.04.2020 ರಂದು 11.30 ಎ.ಎಮ್ ಕ್ಕೆ ಆರೋಪಿತನು ಮದ್ರಕಿ ಗ್ರಾಮದಲ್ಲಿನ ಈರಣ್ಣ ಅರಳಹಳ್ಳಿ ಈತನ ಪಂಚರ ಅಂಗಡಿಯ ಪಕ್ಕದಲ್ಲಿನ ಸಾರ್ವಜನಿಕ ಸ್ಥಳದಲ್ಲಿ 5 ಲೀಟರನ 2 ಪ್ಲಾಸ್ಟಿಕ ಕ್ಯಾನಗಳಲ್ಲಿ ಅಂದಾಜು 10 ಲೀಟರದಷ್ಟು ಕಳ್ಳಭಟ್ಟಿ ಸರಾಯಿಯನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ಪಂಚರ ಸಮಕ್ಷಮ ಫಿಯರ್ಾದಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಕಳ್ಳಭಟ್ಟಿ ಸರಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಆರೋಪಿತನು ಅನರ್ಹವಾದಂತಹ ಸ್ಥಿತಿಯಲ್ಲಿರುವ ಪದಾರ್ಥವು ಮಾನವ ಜೀವಕ್ಕೆ ಸೇವಿಸಲು ಹಾನಿಕಾರವಾಗಿದೆ ಎಂದು ತಿಳಿದೂ ಅಲ್ಲದೆ ಸದರ ಪಾನೀಯ (ಕಳ್ಳಭಟ್ಟಿ ಸರಾಯಿ) ಸೇವನೆಯಿಂದ ಮಾನವ ಜೀವಕ್ಕೆ ಹಾನಿ ಇದೆ ಎಂದು ತಿಳಿದೂ ಮಾರಾಟ ಮಾಡುತ್ತಿದ್ದರಿಂದ ಸದರ ಕಳ್ಳಭಟ್ಟಿ ಸರಾಯಿಯನ್ನು ಪಂಚರ ಸಮಕ್ಷಮ 11.45 ಎ.ಎಮ್ ದಿಂದ 12.45 ಪಿ.ಎಮ್. ವರೆಗೆ  ಜಪ್ತಿಪಡಿಸಿಕೊಂಡು ಮರಳಿ ಠಾಣೆಗೆ ಬಂದು ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಅದೆ.



ಭೀಗುಡಿ  ಪೊಲೀಸ್ ಠಾಣೆ ಗುನ್ನೆ ನಂ:- 54/2020 ಕಲಂ 87 ಕೆಪಿ ಯ್ಯಾಕ್ಟ:- ಇಂದು ದಿನಾಂಕ 22/04/2020 ರಂದು 05.30 ಪಿ.ಎಮ್.ಕ್ಕೆ ಹೊತಪೇಟ ಗ್ರಾಮದಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಹೋಗಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 08.30 ಪಿ.ಎಮ್ ಕ್ಕೆ ದಾಳಿ ಮಾಡಿ ದಾಳಿಯಲ್ಲಿ ಸಿಕ್ಕ 03 ಜನ ಆರೋಪಿತರಿಂದ ಹಾಗು ಕಣದಲ್ಲಿಂದ ನಗದು ಒಟ್ಟು ಹಣ 2920/- ರೂ, 52 ಇಸ್ಪೇಟ ಎಲೆಗಳನ್ನು 08.30 ಪಿ.ಎಮ್ ದಿಂದ 09.30 ಪಿ.ಎಮ್ ವರೆಗೆ ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿರುತ್ತಾರೆ




ಗೋಗಿ  ಪೊಲೀಸ್ ಠಾಣೆ ಗುನ್ನೆ ನಂ:- 48/2020  143, 147, 148, 341, 504, 506 ಸಂ: 149 ಐಪಿಸಿ;- ಇಂದು ದಿನಾಂಕ: 22/04/2020 ರಂದು 01.30 ಪಿಎಂ ಕ್ಕೆ ಪಿಯರ್ಾದಿ ಶ್ರೀಮತಿ. ಸೂಗಮ್ಮ ಗಂಡ ಶರಣಪ್ಪ ಹೂಗಾರ ವಯಾ:60 ಉ: ಹೊಲಮನಿ ಕೆಲಸ ಸಾ: ಕರಕಳ್ಳಿ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಹಾಜರ ಪಡೆಸಿದ್ದು, ಸದರಿ ಅಜರ್ಿ ಸಾರಂಶ ಏನಂದರೆ, ನಾನು ಎಂದಿನಂತೆ ನನ್ನ ಸೊಸೆಯಾದ ಲಕ್ಷ್ಮೀ ಗಂಡ ನಾಗಪ್ಪ @ ನಾಗರಡ್ಡಿ ಹೂಗಾರ ಇವರ ಜೋತೆ ಕೆಲಸಕ್ಕೆ ಹೊಗಿ ತೋಗರಿ ಕಟ್ಟಿಗೆ ಗುಣಕಿ ಆರಿಸುತ್ತಿದ್ದಾಗ ನನ್ನೂರಿನವರಾದ ಸಿದ್ದಯ್ಯ ತಂದೆ ಮಲ್ಲೇಶಯ್ಯ ಸ್ವಾಮಿ, ಅಶೋಕ ತಂದೆ ಮಡಿವಾಳಪ್ಪ ಮಾಸ್ತಾರ, ಮಲ್ಲಣ್ಣಗೌಡ ತಂದೆ ಬಸ್ಸಣ್ಣಗೌಡ, ಜಗಪ್ಪ ತಂದೆ ಹಣಮಂತ್ರಾಯ ವಡ್ಡೊಡಗಿ, ಮೋಹನ ರಡ್ಡಿ ತಂದೆ ಹಣಮಂತ್ರಾಯಗೌಡ ಚಳ್ಳಗಿ, ಮಲ್ಲಣ್ಣ ತಂದೆ ಭೀಮಣ್ಣಗೌಡ ಪೊಲೀಸ್ ಪಾಟೀಲ, ಗೀರಿಶ ತಂದೆ ಭಿಮಣ್ಣಗೌಡ ಪೊಲೀಸ್ ಪಾಟೀಲ, ಸಂಗಣ್ಣ ತಂದೆ ಚಂದಣ್ಣ ಹೂಗಾರ, ದೇವರಡ್ಡಿ ತಂದೆ ಅಂಬ್ರಣ್ಣ ವಡ್ಡೊಡಗಿ, ಅಂಬ್ರಣ್ಣ ತಂದೆ ದೇವರಡ್ಡಿ ವಡ್ಡಡಗಿ, ಭೀಮಣ್ಣ ತಂದೆ ದೇವರಡ್ಡಿ ವಡ್ಡಡಗಿ, ಬಲವಂತ್ರಾಯ ತಂದೆ ಹಣಮಂತ್ರಾಯ ವಡ್ಡಡಗಿ ಮತ್ತು ಸಂಗಯ್ಯ ತಂದೆ ಮಲ್ಲಯ್ಯ ಹೀರೇಮಠ ಶಿವಣ್ಣ ತಂದೆ ಅಂಬ್ಲಣ್ಣ ಕರಣಗಿ ಸಾ: ಎಲ್ಲರೂ ಕರಕಳ್ಳಿ ತಾ: ಶಹಾಪೂರ ಜಿ: ಯಾದಗಿರಿ ಇವರೆಲ್ಲರೂ ಕೊಡಲಿ ಬಡಿಗೆ ತಗೆದುಕೊಂಡು ಇಂದು ದಿನಾಂಕ: 22/04/2020 ರಂದು ಬೆಳಿಗ್ಗೆ 08.00 ಗಂಟೆಗೆ ನನ್ನ ಹೊಲಕ್ಕೆ ಬಂದು ನಿನ್ನ ಗಂಡ ಮತ್ತು ನಿನ್ನ ಮಕ್ಕಳು ಎಲ್ಲಿದ್ದಾರೆ ಆ ಸೂಳೆ ಮಕ್ಕಳಿಗೆ ಬಹಾಳ ಆಗ್ಯಾದ ಅಂತಾ ಬೈಯ್ ತೊಡಗಿದರು, ಆಗ ನಾನು ಮತ್ತು ನನ್ನ ಸೋಸಿ ಇಬ್ಬರು ಅಂಜಿ ಹೊಲದಿಂದ ಮನೆ ಕೆಡೆಗೆ ಹೋಗುವಾಗ ಮೇಲಿನವರೆಲ್ಲರೂ ನಮಗೆ ತಡದು ನಿಲ್ಲಿಸಿ, ಊರಲ್ಲಿ ನಮ್ಮನ್ನ ಎದರು ಹಾಕಿಕೊಂಡು ನೀವು ಬದುಕೋಕಾಗಲ್ಲ, ನಿಮ್ಮ ಮನಿ ಕಿತ್ತಿಸಿದರು ಇನ್ನು ನಿಮಗೆ ಬುದ್ದಿ ಬಂದಿಲ್ಲ, ಆ ಸೂಳೆ ಮಕ್ಕಳಿಗೆ, ನಿಮ್ಮ ಹೊಲದಲ್ಲಿ ಕಂಬ ಮುರಿದ ಬಗ್ಗೆ ಕೇಸ್ ಮಾಡಿಸಿದರು ನಿಮಗೆ ಏನು ಮಾಡಿಕೊಳ್ಳಲು ಆಗಿಲ್ಲ ಸೂಳೆ ಮಕ್ಕಳೆ ಅಂತಾ ಅವಾಚ್ಯವಾಗಿ ಬೈಯ್ದಿದ್ದು, ನನಗೆ ನನ್ನ ಸೋಸೆಗೆ ಹಾಗೂ ನನ್ನ ಗಂಡ ಮತ್ತು ಮಕ್ಕಳಿಗೆ ಹೊಡೆಯಲು ಬಂದವರು ಕೇವಲ ನಾನು ಮತ್ತು ನನ್ನ ಸೋಸೆಯಾದ ಲಕ್ಷ್ಮೀ ಇಬ್ಬರು ಮಾತ್ರ ಹೊಲದಲ್ಲಿದ್ದ ಕಾರಣ ನನಗೆ ಮತ್ತು ನನ್ನ ಸೊಸೆಗೆ ಹೆದರಿಸಿ ಅವಾಚ್ಯವಾದ ಶಬ್ದಗಳಿಂದ ಬೈಯ್ದು ನಿಮಗೆ ಖಲಾಸ್ ಮಾಡುತ್ತೇವೆ ಜೀವ ಬೆದರಿಕೆ ಹಾಕಿ ಹೊಗಿರುತ್ತಾರೆ. ಅಷ್ಟರಲ್ಲಿ ನಮ್ಮ ಅಳಿಯ ನಿಂಗಣ್ಣ ತಂದೆ ಬಸವರಾಜ ಹೂಗಾರ ಸಾ: ತಳ್ಳಳ್ಳಿ ಹಾ: ವ: ಕರಕಳ್ಳಿ, ಮತ್ತು ನಮ್ಮ ಮಗಳು ಪದ್ಮಾವತಿ ಗಂಡ ನಿಂಗಣ್ಣ ಹೂಗಾರ ಹಾಗೂ ಪಕ್ಕದ ಹೊಲದವನಾದ ಅಂಬ್ಲಪ್ಪ ತಂದೆ ದೇವಿಂದ್ರಪ್ಪ ಪೂಜಾರಿ ಇವರುಗಳು ಬಂದಿದ್ದು, ಅವರು ಕೂಡ ಘಟನೆಯನ್ನು ನೋಡಿರುತ್ತಾರೆ. ಕಾರಣ ನಮಗೆ ನನ್ನ ಗಂಡ ಮತ್ತು ಮಕ್ಕಳಿಗೆ ಹೊಡೆಯಲು ಬಂದು ನಮಗೆ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಮೇಲಿನ ಎಲ್ಲರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 48/2020 ಕಲಂ, 143, 147, 148, 341, 504, 506 ಸಂ: 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.





ಗೋಗಿ  ಪೊಲೀಸ್ ಠಾಣೆ ಗುನ್ನೆ ನಂ:-  49/2020 ಕಲಂ, 87 ಕೆ.ಪಿ ಆ್ಯಕ್ಟ್:- ಇಂದು ದಿನಾಂಕ 22/04/2020 ರಂದು 06.55 ಪಿಎಂ ಕ್ಕೆ ಶ್ರೀ ಸೊಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ರವರ ಠಾಣೆಗೆ ಬಂದು ಒಂದು ವರದಿ ಹಾಜರ ಪಡೆಸಿದ್ದು, ಅದರ ಸಾರಂಶ ಏನಂದರೆ ಗೋಗಿ ಗ್ರಾಮದ ಹನುಮಾನ ದೇವರ ಗುಡಿಯ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 05 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 2600=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು 05.35 ಪಿಎಮ್ ದಿಂದ 06.35 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 07.55 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರಪಡಿಸಿದ್ದರಿಂದ ಠಾಣೆ ಗುನ್ನೆ ನಂ 49/2020 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ಗೋಗಿ  ಪೊಲೀಸ್ ಠಾಣೆ ಗುನ್ನೆ ನಂ:- 50/2020 ಕಲಂ, 87 ಕೆ.ಪಿ ಆ್ಯಕ್ಟ್:- ಇಂದು ದಿನಾಂಕ 22/04/2020 ರಂದು 09.10 ಪಿಎಂ ಕ್ಕೆ ಶ್ರೀ ಸೊಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ರವರ ಠಾಣೆಗೆ ಬಂದು ಒಂದು ವರದಿ ಹಾಜರ ಪಡೆಸಿದ್ದು, ಅದರ ಸಾರಂಶ ಏನಂದರೆ ಚಾಮನಾಳ ಗ್ರಾಮದ ಸರಕಾರಿ ಆಸ್ಪತ್ರೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 11 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 10300=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು 07.40 ಪಿಎಮ್ ದಿಂದ 08.30 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 09.10 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರಪಡಿಸಿದ್ದರಿಂದ ಠಾಣೆ ಗುನ್ನೆ ನಂ 50/2020 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ಗೋಗಿ  ಪೊಲೀಸ್ ಠಾಣೆ ಗುನ್ನೆ ನಂ:-  51/2020  273, 328 ಐಪಿಸಿ ಮತ್ತು ಕಲಂ: 32, 34 ಕೆಇ ಯಾಕ್ಟ :- ಇಂದು ದಿನಾಂಕ: 22/04/2020 ರಂದು 11.50 ಪಿಎಮ್ ಕ್ಕೆ ಶ್ರೀ ಸೋಮಲಿಂಗ್ ಒಡೆಯರ ಪಿಎಸ್ಐ ಗೋಗಿ ಪೊಲೀಸ ಠಾಣೆ ರವರು ಮುದ್ದೇಮಾಲು ಮತ್ತು ಜಪ್ತಿಪಂಚನಾಮೆ ತಂದು ಹಾಜರ್ ಪಡಿಸಿ ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದು ವರದಿ ನೀಡಿದ್ದು, ಸದರಿ ವರದಿ ಸಾರಾಂಶವೆನೆಂದರೆ, ನಾಗನಟಗಿ ಭಿಮಲಾನಾಯ್ಕ ತಾಮಡಾದಲ್ಲಿನ ರೋಡಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಳ್ಳಬಟ್ಟಿ ಸರಾಯಿಯು ಮಾನವ ಜೀವಕ್ಕೆ ಹಾನಿಕಾರಕ ಅಂತಾ ಗೊತ್ತಿದ್ದು, ಕೂಡ ಕಳ್ಳ ಬಟ್ಟಿ ಸರಾಯಿ ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಕೊಂಡು 10.30 ಪಿಎಂಕ್ಕೆ ದಾಳಿ ಮಾಡಿದ್ದು, ಅನಧಿಕೃತವಾಗಿ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯು ಓಡಿ ಹೋಗಿದ್ದು, ಅವನ ಹೆಸರು ವಿಚಾರಿಸಿಲಾಗಿ ಬಸ್ಸು ತಂದೆ ದೇವಲು ಪವಾರ ವಯಾ:38 ಸಾ; ನಾಗನಟಗಿ ಬೀಮಲಾ ನಾಯ್ಕ ತಾಂಡಾ ತಾ: ಶಹಾಪೂರ ಅಂತಾ ತಿಳಿದು ಬಂದಿದ್ದು, ಸ್ಥಳದಲ್ಲಿ ಮೇಲಿನ ಮುದ್ದೆ ಮಾಲು, ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿಪಡಿಸಿಕೊಂಡು ಮುದ್ದೆಮಾಲು, ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ಸೂಚಿಸಿ ವರದಿ ನೀಡಿದ್ದು, ಸದರಿ ವರದಿ ಸಾರಂಶದ ಮೇರೆಗೆ ಠಾಣೆ ಗುನ್ನೆ ನಂ: 51/2020 ಕಲಂ: 273, 328 ಐಪಿಸಿ ಮತ್ತು ಕಲಂ: 32, 34 ಕೆಇ ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.



ಕೆಂಭಾವಿ  ಪೊಲೀಸ್ ಠಾಣೆ ಗುನ್ನೆ ನಂ:- 73/2020 ಕಲಂ: 379 ಐ.ಪಿ.ಸಿ ಮತ್ತು 44(1) ಕೆ.ಎಮ್.ಎಮ್.ಸಿ ರೂಲ್:- ಇಂದು ದಿ: 22/04/2020 ರಂದು 7.30 ಎಎಮ್ಕ್ಕೆ ಶ್ರೀ ಸುದರ್ಶನರೆಡ್ಡಿ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ಇಂದು ದಿನಾಂಕ: 22/04/2020 ರಂದು 04.00 ಎ.ಎಮ್ಕ್ಕೆ ಸಿಬ್ಬಂದಿಯವರಾದ 1) ಭೀರಪ್ಪ ಪಿಸಿ-195 2) ಸಂಗಮೇಶ ಪಿಸಿ-244 3) ಶಿವಶರಣಪ್ಪ ಪಿಸಿ-188 ಹಾಗು ಜೀಪ ಚಾಲಕನಾದ 4) ಪೆದ್ದಪ್ಪಗೌಡ ಪಿಸಿ-214 ನೇದ್ದವರೊಂದಿಗೆ ಕೆಂಭಾವಿ ಪಟ್ಟಣದಲ್ಲಿ ಪೆಟ್ರೋಲಿಂಗದಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ, ಮಂಗಳೂರ ಕಡೆಯಿಂದ ಬೈಚಬಾಳ ಕಡೆಗೆ ಒಂದು ಟ್ರಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವ ಬಗ್ಗೆ ಭಾತ್ಮಿ ಬಂದ ಮೇರೆಗೆ ಭೀರಪ್ಪ ಪಿಸಿ-195 ರವರ ಮುಖಾಂತರ ಇಬ್ಬರೂ ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ಹಾಗೂ ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ಸಾ|| ಇಬ್ಬರೂ ಕೆಂಭಾವಿ ಈ ಎರಡು ಜನರಿಗೆ ಕೆಂಭಾವಿ ಠಾಣೆಗೆ ಕರೆಯಿಸಿ ಸದರಿಯವರಿಗೂ ಸಹ ಭಾತ್ಮಿ ವಿಷಯ ತಿಳಿಯಿಸಿ, ಸದರ ಪಂಚರು ಹಾಗೂ ನಾವು ಠಾಣೆಯಿಂದ 04.30 ಎ.ಎಮ್ಕ್ಕೆ ಸರಕಾರಿ ಜೀಪ್ ನಂಬರ ಕೆಎ-33 ಜಿ-0074 ನೇದ್ದರಲ್ಲಿ ಹೊರಟು 05.00 ಎ.ಎಮ್ಕ್ಕೆ ಬೈಚಬಾಳ ಗ್ರಾಮದ ಜನತಾ ಕಾಲೊನಿ ಹತ್ತಿರ ನಿಂತಾಗ ಮಂಗಳೂರ ಗ್ರಾಮದ ಕಡೆಯಿಂದ ಒಂದು ಟ್ರಾಕ್ಟರ ಮರಳು ತುಂಬಿಕೊಂಡು ಬಂದಿದ್ದು, ಸದರಿ ಟ್ರಾಕ್ಟರನ್ನು ಸಿಬ್ಬಂದಿಯವರ ಸಹಾಯದೊಂದಿಗೆ 05.10 ಎ.ಎಮ್ ಕ್ಕೆ ಹಿಡಿದು ನಿಲ್ಲಿಸಿ ಅದರ ಚಾಲಕನಿಗೆ ವಿಚಾರಿಸಲು ಆತನು ತನ್ನ ಹೆಸರು ರಾಜಾಸಾಬ ತಂದೆ ಬಡೆಸಾಬ ನಾಯ್ಕೊಡಿ ಸಾ|| ಮಂಗಳೂರ ಅಂತ ತಿಳಿಸಿದ್ದು, ಚಾಲಕನಿಗೆ ಮರಳಿನ ಬಗ್ಗೆ ವಿಚಾರಿಸಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲಾ ಮತ್ತು ಸರಕಾರಕ್ಕೆ ರಾಜಧನ ಕಟ್ಟಿರುವುದಿಲ್ಲಾ ಅಂತ ತಿಳಿಸಿದ್ದು, ನಂತರ ಟ್ರಾಕ್ಟರ ಪರಿಶೀಲಿಸಿ ನೋಡಲಾಗಿ ಸ್ವರಾಜ್ಯ-735 ಟ್ರ್ಯಾಕ್ಟರ ಇಂಜಿನ ನಂಬರ ನೋಡಲಾಗಿ ಕೆಎ.33/ಟಿಎ-3567 ಅಂತ ಇದ್ದು ಹಾಗು ಟ್ರೈಲಿಗೆ ಯಾವದೇ ನಂಬರ ಇರುವದಿಲ.್ಲ ಸದರ ಟ್ರ್ಯಾಕ್ಟರದಲ್ಲಿ ಮರಳು ತುಂಬಿದ್ದು ಅದರ ಮಾಲಿಕನ ಹೆಸರು ಕೇಳಿ ತಿಳಿಯಲಾಗಿ ಎವೆಂಕಟೇಶ ತಂದೆ ಮಲ್ಲಾಚಾರ್ಯ ಜೋಶಿ ಸಾ|| ಕುರಿ ಹಯ್ಯಾಳ ತಾ: ಶಹಾಪೂರ ಅಂತಾ ತಿಳಿಸಿ, ಟ್ರ್ಯಾಕ್ಟರನ್ನು ಅಲ್ಲಿಯೇ ಬಿಟ್ಟು ಜಾಲಿ ಗಿಡದಲ್ಲಿ ಓಡಿ ಹೋದನು. ಸದರಿ ಟ್ರಾಕ್ಟರದಲ್ಲಿ ಅಂದಾಜು 1600/- ರೂ ಕಿಮ್ಮತ್ತಿನ ಮರಳು ಇತ್ತು. ಸದರಿ ಟ್ರಾಕ್ಟರನ್ನು ಪಂಚರ ಸಮಕ್ಷಮದಲ್ಲಿ 05.10 ಎ.ಎಮ್ದಿಂದ 06.10 ಎ.ಎಮ್ದವರೆಗೆ ಜೀಪಿನ ಲೈಟಿನ ಬೆಳಕಿನಲ್ಲಿ ಪಂಚರ ಸಮಕ್ಷಮದಲ್ಲಿ ಪಂಚನಾಮೆಯನ್ನು ಕೈಕೊಂಡು ಸದರಿ ಟ್ರ್ಯಾಕ್ಟರನ್ನು ಮರಳು ಸಮೇತ ಜಪ್ತ ಪಡೆಸಿಕೊಂಡಿದ್ದು ಇರುತ್ತದೆ. ನಂತರ ಸದರಿ ಟ್ರಾಕ್ಟರನ್ನು, ಒಬ್ಬ ಖಾಸಗಿ ಚಾಲಕನ ಸಹಾಯದಿಂದ ಮರಳು ತುಂಬಿದ ಟ್ರಾಕ್ಟರನ್ನು 07.30 ಎ.ಎಮ್ಕ್ಕೆ ಠಾಣೆಗೆ ತಂದು ಮುಂದಿನ ಕ್ರಮ ಜರುಗಿಸಲು  ಒಪ್ಪಿಸಿದ್ದು ಇರುತ್ತದೆ. ಆದ್ದರಿಂದ ಸಕರ್ಾರಕ್ಕೆ ರಾಜಧನ (ರಾಯಲ್ಟಿ) ತುಂಬದೆ ಟ್ರಾಕ್ಟರದಲ್ಲಿ ಮರಳನ್ನು ಕಳ್ಳತನ ಮಾಡಿಕೊಂಡು  ಹೋಗುತ್ತಿದ್ದ ಟ್ರಾಕ್ಟರ ಚಾಲಕ ಹಾಗು ಅದರ ಮಾಲಿಕ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸುಚಿಸಿದ ಮೇರೆಗೆ  ಸದರಿ ವರದಿ ಆಧಾರದ ಮೇಲಿಂದ ಠಾಣೆ ಗುನ್ನೆ ನಂ 73/2020 ಕಲಂ: 379 ಐಪಿಸಿ & 44(1) ಕೆ.ಎಮ್.ಎಮ್.ಸಿ ರೂಲ್ ಅಡಿಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.



ಹುಣಸಗಿ  ಪೊಲೀಸ್ ಠಾಣೆ ಗುನ್ನೆ ನಂ:- 42/2020 304 ಐಪಿಸಿ:- ಇಂದು ದಿನಾಂಕ:22/02/2020 ರಂದು 23.10 ಗಂಟೆಗೆ ರಾಮು ತಂದೆ ವಾಲು ಚವ್ಹಾಣ ವಯ-35 ವರ್ಷ ಜಾ:ಲಂಬಾಣಿ ಉ:ಒಕ್ಕಲುತನ ಸಾ:ಕೊಳಿಹಾಳ ದೊಡ್ಡ ತಾಂಡಾ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಬರೆಯಿಸಿದ ದೂರು ಹಾಜರಪಡಿಸಿದ್ದು ಏನೆಂದರೆ, ಈಗ 3-4 ದಿನಗಳಿಂದಾ ನಮ್ಮ ತಮ್ಮನ ಮಗಳಾದ ವಾಸಂತಾ ಇವಳಿಗೆ ಜ್ವರ ಬಂದಿದ್ದು, ದಿ:21/04/2020 ರಂದು ಕೋಳಿಹಾಳ ಗ್ರಾಮ ಪಂಚಾಯತಿ ಹತ್ತಿರ ಇರುವ ಆರೋಪಿ ಖಾಸಗಿ ದವಾಖಾನೆಗೆ ಹೋಗಿ ತೋರಿಸಿದ್ದ, ಆಗ ಆರೋಪಿತನು ವಾಸಂತಿಗೆ 2 ಇಂಜಕ್ಷನ್ ಮಾಡಿ ಮಾತ್ರೆಗಳನ್ನು ಕೊಟ್ಟಿದ್ದು ಇರುತ್ತದೆ. ಮನೆಗೆ ಬಂದು ವಾಸಂತಾ ಮಾತ್ರೆಗಳನ್ನು ತೆಗೆದುಕೊಂಡಿರುತ್ತಾಳೆ. ಅಂದೇ ರಾತ್ರಿ 10.30 ಗಂಟೆಯ ಸುಮಾರಿಗೆ ವಾಸಂತಾಗೆ ಅತಿಯಾದ ನೋವಿನಿಂದಾ ಬಳಲಿ ಬೆಳಗಿನ ಜಾವ 05.30 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾಳೆ. ಇಂದು ದಿ:22/04/2020 ರಂದು ಬೆಳಿಗ್ಗೆ 09.30 ಗಂಟೆಗೆ ಶ್ರೀನಿವಾಸಪುರ ಸರಕಾರಿ ದವಾಖಾನೆಯ ಡಾಕ್ಟರ ಬಂದು ನಮ್ಮ ಮಗಳಿಗೆ ನೀಡಿದ ಗುಳಿಗೆಗಳನ್ನು ಪರಶೀಲೆನೆ ಮಾಡಿ ಅವುಗಳಲ್ಲಿ ಯಾವುದೋ ಒಂದು ಗುಳಿಗೆ ಜನರಿಗೆ ಕೊಡಬಾರದು ಎಂದು ಬ್ಯಾನ್ ಆದ ಗುಳಿಗೆಯನ್ನು ಕೊಟ್ಟಿರುತ್ತಾರೆ ಎಂದು ಹೇಳಿದರು. ಈ ಬಗ್ಗೆ ನಮಗೆ ಯಾವುದೇ ಕಾನೂನಿನ ತಿಳುವಳಿಕೆ ಇಲ್ಲದೆ ವಾಸಂತಾ ಇವಳಿಗೆ ಹಿಂದು ದರ್ಮದ ಪ್ರಕಾರ ಮಣ್ಣು ಮಾಡಿರುತ್ತೇವೆ. ಯಾವು ಗುಳಿಗೆಗಳನ್ನು ಕೊಟ್ಟರೆ ವಾಸಂತಾಳ ಪ್ರಾಣಕ್ಕೆ ಹಾನಿಯಾಗುವ ಸಂಭವ ಇದೆ ಎಂದು ಗೊತ್ತಿದ್ದು ಗುಳಿಗೆ ಕೊಟ್ಟಿದ್ದಕ್ಕೆ ವಾಸಂತಾ ಇವಳು ಮೃತಪಟ್ಟಿರುತ್ತಾಳೆ ಕಾರಣ ಆರ್.ಎಮ್.ಪಿ ಡಾಕ್ಟರ್ ಅಜೀತ್ ತಂದೆ ಬಿಶ್ವಾಸ್ಕುಮಾರ ಸಾ:ಕೊಳಿಹಾಳ ಇವರ ಮೇಲೆ ಕಾನೂನ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಮೇಲಿಂದಾ ಕ್ರಮ ಜರುಗಿಸಲಾಗಿದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!