ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 21/04/2020

By blogger on ಮಂಗಳವಾರ, ಏಪ್ರಿಲ್ 21, 2020

                                     ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 21/04/2020 
ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 19/2020  ಕಲಂ 279,  338 ಐಪಿಸಿ :- ಇಂದು ದಿನಾಂಕ 21/04/2020 ರಂದು 01-30 ಪಿ.ಎಂ ದ ಸುಮಾರಿಗೆ ಯಾದಗಿರಿ ನಗರದ ಶುಭಂ ಪೆಟ್ರೋಲ್ ಬಂಕ್ ಹತ್ತಿರ ಮುಖ್ಯ ರಸ್ತೆಯ ಬದಿಯಲ್ಲಿ ಈ ಕೇಸಿನ ಪಿಯರ್ಾದಿ ಮತ್ತು ಗಾಯಾಳು ಖಂಡಪ್ಪ ಇಬ್ಬರು ನಡೆದುಕೊಂಡು ಹೊರಟಿದ್ದಾಗ ಆರೋಪಿತನು ತನ್ನ ಮೋಟಾರು ಸೈಕಲ್ ನಂಬರ ಕೆಎ-33, ಎಕ್ಸ್-6985 ನೇದ್ದನ್ನು ಹೊಸಳ್ಳಿ ಕ್ರಾಸ್ ಕಡೆಯಿಂದ ಗಂಜ್ ಕಡೆಗೆ ನಡೆಸಿಕೊಂಡು ಹೋಗುತ್ತಿದ್ದಾಗ ಅತೀವೇಗ ಮತ್ತು ಅಲಕ್ಷ್ಯತನದಿಂದ ಗಾಯಾಳು ಖಂಡಪ್ಪ ಈತನಿಗೆ ನೇರವಾಗಿ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಗಾಯಾಳು ಖಂಡಪ್ಪ ಈತನಿಗೆ ತಲೆಗೆ ಭಾರೀ ಗುಪ್ತಗಾಯವಾಗಿ ಬಲಕಿವಿಯಿಂದ ರಕ್ತ ಹೊರಬಂದು ಬೇವುಶ್ ಹೋಗಿದ್ದು ಇರುತ್ತದೆ. ಈ ಘಟನೆಗೆ ಕಾರಣನಾದ ಮೋಟಾರು ಸೈಕಲ್ ಸವಾರ ಶಂಕರ ತಂದೆ ಗೋಪಾಲ ಚವ್ಹಾಣ ಸಾ;ಆಶಾಪುರ ತಾಂಡ ಈತನ ಮೇಳೆ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತಾ ಪಿಯರ್ಾದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 19/2020 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

          

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 39/2020 ಕಲಂ 273,284,ಐಪಿಸಿ ಮತ್ತು 32, 34 ಕೆ ಇ ಆಕ್ಟ:- ಇಂದು ದಿನಾಂಕ.21/04/2020 ರಂದು 10-20 ಎಎಂಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಜಪ್ತಿ ಪಂಚನಾಮೆಯನ್ನು ಜ್ಞಾಪನ ಪತ್ರದೊಂದಿಗೆ ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ.21/04/2020 ರಂದು 8-00 ಎಎಂ ಸುಮಾರಿಗೆ ನಾನು ಮತ್ತು ಶ್ರೀ ಶಂಕರಗೌಡ ಸೋಮನಾಳ ಸಹಾಯಕ ಆಯುಕ್ತರು ಯಾದಗಿರಿ ಉಪವಿಭಾಗ ಯಾದಗಿರಿ ರವರು ಠಾಣೆಯಲ್ಲಿರುವಾಗ ಯಾದಗಿರಿ ನಗರದ ವಾಲ್ಮೀಕಿ ನಗರದ ಮಶಮ್ಮ ದೇವಿಯ ಗುಡಿಗೆ ಹೋಗುವ ಸಾರ್ವಜನಿಕ ರಸ್ತೆಯ ಮೇಲೆ ಯಾರೋ ಒಬ್ಬನು ಸಾರ್ವಜನಿಕರಿಗೆ ಕಳ್ಳಬಟ್ಟಿ ಸರಾಯಿಯನ್ನು ಕುಡಿಯಲು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಸದರಿ ಕಳ್ಳಬಟ್ಟಿ ಸರಾಯಿಯು ಮನುಷ್ಯನು ಸೇವನೆ ಮಾಡಿದಲ್ಲಿ ಮನುಷ್ಯನ ಪ್ರಾಣಕ್ಕೆ ಅಪಾಯವಾಗುವಂತಹ ಹಾಗೂ ಮಾನವನ ದೇಹಕ್ಕೆ ಮಾರಣಾಂತಿಕ ಹಾನಿಯುಂಟಾಗುವ ರಾಸಾಯನಿಕ ಮಿಶ್ರಿತ ಕಳ್ಳಬಟ್ಟಿ ಸರಾಯಿ ಇದ್ದು ಹಾನಿಕರವಾದ ಪಾನೀಯ ಮಾರಾಟ ಮಾಡುತ್ತಿದ್ದು  ದಾಳಿ ಕುರಿತು ನಾನು ಮತ್ತು ಶ್ರೀ ಶಂಕರಗೌಡ ಸೋಮನಾಳ ಸಹಾಯಕ ಆಯುಕ್ತರು ಯಾದಗಿರಿ ಉಪವಿಭಾಗ ಯಾದಗಿರಿ ರವರು ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣೆಯಿಂದ ಬೆಳೆಗ್ಗೆ 8:40 ಗಂಟೆಗೆ ಎಲ್ಲಾರು ಸೇರಿ ಇಲಾಖೆಯ ವಾಹನ ನಂ: ಕೆಎ-33-ಜಿ-0075 ರಲ್ಲಿ ಪೊಲೀಸ್ ಠಾಣೆಯಿಂದ ಹೊರಟು ಬೆಳೆಗ್ಗೆ 8:50 ಗಂಟೆಗೆ ವಾಲ್ಮೀಕಿ ನಗರದ ಮಶಮ್ಮ ದೇವಿ ಗುಡಿಗೆ ಹೋಗುವ ರೋಡಿನ ಮೇಲೆ ಯಾರೋ ಒಬ್ಬನು ತನ್ನ ಮೋಟಾರ ಸೈಕಲ ನಂ.ಕೆಎ.33.ಎಕ್ಸ್.3312 ನೇದ್ದರ ಮೇಲೆ ಕುಳಿತು ತನ್ನ ಮೋಟಾರ ಸೈಕಲ ಮೇಲೆ ಇಟ್ಟುಕೊಂಡಿದ್ದ ಒಂದು ಬಿಳಿ ಬಣ್ಣದ ಕ್ಯಾನ್ನಲ್ಲಿದ್ದ ಬಿಳಿ ಬಣ್ಣದ ದ್ರಾವಣವನ್ನು ಪ್ಲಾಸ್ಟಿಕ್ ಗ್ಲಾಸ್ಗಳಲ್ಲಿ ಹಾಕಿ ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಸಮಯ ಬೆಳೆಗ್ಗೆ 9:00 ಗಂಟೆಗೆ ದಾಳಿ ಮಾಡುವಷ್ಟರಲ್ಲಿ ಅಲ್ಲಿಗೆ ಕುಡಿಯಲು ಮತ್ತು ಕೊಳ್ಳಲು ಬಂದಿದ್ದ ಸಾರ್ವಜನಿಕರು ನಮಗೆ ನೋಡಿ ಓಡಿ ಹೋಗಿದ್ದು ಬಿಳಿ ದ್ರಾವಣ ಮಾರಾಟ ಮಾಡುತ್ತಿದ್ದ ವ್ಯಕ್ತಿಯೂ ಕೂಡ ಬಿಳಿ ಬಣ್ಣದ ದ್ರಾವಣದ ಪ್ಲಾಸ್ಟಿಕ ಕ್ಯಾನನ್ನು ಕೆಳಗಡೆ ನೆಲದ ಮೇಲೆ ಇಟ್ಟು ಮೋಟಾರ ಸೈಕಲ ಸಮೇತ ಓಡಿ ಹೋದನು. ನಂತರ ಓಡಿ ಹೋದವನ ಬಗ್ಗೆ ಮಾಹಿತಿ ಕೇಳಲಾಗಿ ಯಾರೂ ಅಂತಾ ತಿಳಿದು ಬಂದಿರುವುದಿಲ್ಲ. ಕೆಳಗಡೆ ಇಟ್ಟಿದ್ದ 5 ಲೀಟರ ಪ್ಲಾಸ್ಟಿಕ ಕ್ಯಾನ ನೋಡಲಾಗಿ ಒಳಗಡೆ ಕಳ್ಳಬಟ್ಟಿ ಸರಾಯಿ ಇದ್ದು ಮಾನವನು ಸೇವಿಸಿದರೆ ಜೀವಕ್ಕೆ ಹಾನಿಯನ್ನುಂಟು ಮಾಡುವ ಕಳ್ಳಭಟ್ಟಿ ಸರಾಯಿಯನ್ನು ಸಾರ್ವಜನಿಕರಿಗೆ ಕುಡಿಯಲು ಸದರಿಯವನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ದೃಡಪಟ್ಟಿರುತ್ತದೆ. ಕಳ್ಳಬಟ್ಟಿ ಸರಾಯಿಯನ್ನು ಒಂದು ಲೀಟರ ನೀರಿನ ಖಾಲಿ ಪ್ಲಾಸ್ಟೀಕ್ ಬಾಟಲಿಯಿಂದ ಅಳತೆ ಮಾಡಿ ನೋಡಲಾಗಿ ಅದರಲ್ಲಿ 4 ಲೀಟರ ಕಳ್ಳಭಟ್ಟಿ ಸರಾಯಿ ಇದ್ದು ಅದರ ಅ.ಕಿ-1200/- ರೂ ಇರುತ್ತದೆ. ನಂತರ ಅದರಿಂದ 1 ಲೀಟರನ ಪ್ಲಾಸ್ಟಿಕ ಬಾಟಲಿಯಲ್ಲಿ ಕಳ್ಳಭಟ್ಟಿ ಸರಾಯಿಯನ್ನು ಪ್ರತ್ಯೇಕವಾಗಿ ತೆಗೆದು ತುಂಬಿ ಪ್ಯಾಕ್ ಮಾಡಿ ಬಿಳಿ ಬಟ್ಟೆಯಿಂದ ಬಾಯಿ ಕಟ್ಟಿ ಅದರ ಮೇಲೆ ಙಖಿ ಎಂಬ ಅಕ್ಷರದಲ್ಲಿ ಅರಗಿನಿಂದ ಶೀಲ್ ಮಾಡಿ ಅದಕ್ಕೆ ನಾವು ಹಾಗೂ ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ರಾಸಾಯನೀಕ ಪರೀಕ್ಷೆ ಕುರಿತು ಎಫ್.ಎಸ್.ಎಲ್ಗೆ ಕಳುಹಿಸಲು ಪ್ರತ್ಯೇಕವಾಗಿ ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 21/04/2020 ರಂದು 9-00 ಎಎಂ ದಿಂದ 10-00 ಎಎಂ ದವರೆಗೆ ಲ್ಯಾಪಟ್ಯಾಪನಲ್ಲಿ ಜಪ್ತಿ ಪಂಚನಾಮೆಯನ್ನು ತಯ್ಯಾರಿಸಿ ನಂತರ 10-15 ಎಎಂಕ್ಕೆ ಯಾದಗಿರಿ ನಗರ ಠಾಣೆಗೆ ಬಂದು ಠಾಣೆಯಲ್ಲಿ ಪ್ರಿಂಟ್ ತೆಗೆದು  ಪಂಚರ ಸಹಿ ಮಾಡಿಸಿ 10-20 ಎಎಮ್ ಕ್ಕೆ ಜಪ್ತಿ ಪಂಚನಾಮೆಯನ್ನು ಜ್ಞಾಪನ ಪತ್ರದೊಂದಿಗೆ ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ್ದು ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.39/2020 ಕಲಂ.273, 284 ಐಪಿಸಿ ಮತ್ತು 32, 34, ಕೆ.ಇ ಆಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 58/2020 ಕಲಂ. 188. 269, 270 ಐಪಿಸಿ  :- ದಿನಾಂಕ: 21-04-2020 ರಂದು ರಾತ್ರಿ 10-00 ಗಂಟೆಗೆ ಪಿಯರ್ಾಧಿದಾರನಾದ ದೊಡ್ಡಬಸವರಾಜ ತಂದೆ ನಾಗರಾಜ ಬಾಗೇವಾಡಿ ವ|| 29 ವರ್ಷ ಜಾ|| ಕುರಬರ ಉ|| ಗ್ರಾಮಲೆಕ್ಕಾಧಿಕಾರಿ ಸಾ|| ವಿನೋಬನಗರ ತಾ|| ಹೂವಿನಹಡಗಲಿ ಜಿ|| ಬಳ್ಳಾರಿ ಇದ್ದು ಸದ್ಯ ನಸಲವಾಯಿ ಗ್ರಾಮ ಲೇಕ್ಕಾಧಿಕಾರಿ ಇವರು ಠಾಣೆಗೆ ಹಾಜರಾಗಿ ಪಿಯಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 21-04-2020 ರಂದು ಸಾಯಂಕಾ 06-10 ಗಂಟೆಗೆ ನಾಗಮ್ಮ ಈಕೆಯು ಜನರನ್ನು ಸೇರಿಸಿಕೊಂಡು ಈದಮ್ಮ ದೇವಸ್ಥಾನದ ಹತ್ತಿರ ಮೂತರ್ಿಯನ್ನು, ಒಂದು ಪುಸ್ತವನ್ನು, ಒಂದು ತ್ರೀಸೂಲವನ್ನು ಹೊರತೆಗೆದಿದ್ದು ಈಗ ಸದ್ಯ ಕರೋನಾ ವೈರಸ್ ಕೋವಿಡ್-19  ರೋಗ ಹರಡುವ ಸಂಭವ ಇದ್ದರು ಇವರು ಅದನ್ನು ನಿರ್ಲಕ್ಷವಹಿಸಿ, ಪ್ರಾಣಕ್ಕೆ ಅಪಾಯಕಾರಿ ರೋಗದ ಸೊಂಕನ್ನು ಹರಡುವ ಸಂಭವ ಇದ್ದರು ಸುಮಾರು ಜನರು ಸೇರಿ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ.


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 44/2020 ಕಲಂ: 188 ಐಪಿಸಿ:- ದಿನಾಂಕ: 21/04/2020 ರಂದು 7-45 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ರವರು ಪೊಲೀಸ್ ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ಈಗ ನಮ್ಮ ರಾಜ್ಯದಲ್ಲಿ ಕೋವಿಡ್-19 (ಕೋರೋನಾ) ಎಂಬ ಮಹಾಮಾರಿ ಭಯಂಕರ ರೋಗವು ಸಾಂಕ್ರಾಮಿಕವಾಗಿ ಹರಡುತ್ತಿರುವುದರಿಂದ ಮಾನ್ಯ ಘನ ಕನರ್ಾಟಕ ಸರಕಾರವು ಸಾರ್ವಜನಿಕ ಸಭೆ ಸಮಾರಂಭಗಳಾದ ಜಾತ್ರೆ, ಸಂತೆ, ಮದುವೆ ಮುಂತಾದವುಗಳನ್ನು ನಿರ್ಬಂಧಿಸಿ ಸಂಪೂರ್ಣ ಲಾಕಡೌನ ಆದೇಶ ಹೊರಡಿಸಿರುತ್ತದೆ. ಅದರಂತೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಕೂಡಾ ಲಾಕಡೌನ ಮಾಡಿ ಯಾವುದೇ ಜಾತ್ರೆ ಸಮಾರಂಭ ಮಾಡದಂತೆ ಮತ್ತು ದಿನಸಿ, ತರಕಾರಿ ಅಂಗಡಿಗಳನ್ನು ತೆರೆಯಲು ಬೆಳಗ್ಗೆ 8 ಗಂಟೆಯಿಂದ ಸಾಯಂಕಾಲ 4 ಗಂಟೆ ವರೆಗೆ ಸಮಯವನ್ನು ನಿಗದಿಪಡಿಸಿ ಆದೇಶ ಹೊರಡಿಸಿರುತ್ತಾರೆ. ಈ ಸಮಯದ ಅವಧಿಯಲ್ಲಿ ಅವಶ್ಯಕ ವಸ್ತುಗಳ ಅಂಗಡಿಗಳಾದ ದಿನಸಿ ಮತ್ತು ತರಕಾರಿ ಅಂಗಡಿಗಳನ್ನು ಮಾತ್ರ ತೆರೆದು ನಿಗದಿತ ಸಮಯಕ್ಕೆ ಮುಚ್ಚುವಂತೆ ಸ್ಪಷ್ಟ ಆದೇಶಗಳು ಇರುತ್ತವೆ. ಹೀಗಿದ್ದು ಇಂದು ದಿನಾಂಕ: 21/04/2020 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಾನು ಸಂಗಡ ಪ್ರಕಾಶ ಹೆಚ್.ಸಿ 18 ರವರೊಂದಿಗೆ ಖಾನಾಪೂರ ಗ್ರಾಮಕ್ಕೆ ಪೆಟ್ರೋಲಿಂಗ ಕುರಿತು ಹೋದಾಗ ಗ್ರಾಮದ ವೆಂಕಟೇಶ್ವರ ಚೌಕ ಹತ್ತಿರ 1) ಶರಣಪ್ಪ ತಂದೆ ಯಮನಪ್ಪ ಉಳ್ಳೆಸೂಗೂರು ಸಾ:ಖಾನಾಪೂರ ಈತನು ತನ್ನ 'ಪ್ರಾಣೇಶ ಕಿರಾಣಾ ಅಂಗಡಿ' ಎಂಬ ಹೆಸರಿನ ಕಿರಾಣಾ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದನು. 2) ರಮೇಶ ತಂದೆ ದಶರಥ ಓಭಾಳೆ ಸಾ:ಖಾನಾಪೂರ ಈತನು ವೆಂಕಟೇಶ್ವರ ಚೌಕ ಹತ್ತಿರ ಗ್ಯಾರೇಜ ಅಂಗಡಿಯನ್ನು ತೆರೆದು ಗಾಡಿಗಳನ್ನು ದುರಸ್ಥಿ ಮಾಡುತ್ತಿದ್ದನು. 3) ನಾಗಶೆಟ್ಟಿ ತಂದೆ ಬಸವರಾಜ ಅಂಗಡಿ ಸಾ:ಖಾನಾಪೂರ ಈತನು ಹಳೆ ಬಸ್ ಸ್ಟ್ಯಾಂಡ ಎದುರುಗಡೆ ತನ್ನ 'ನಿರೋಳಿ ಬಸವೇಶ್ವರ' ಎಂಬ ಕಿರಾಣಿ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದನು ಮತ್ತು 4) ಪರಮಣ್ಣ ತಂದೆ ಹಾದಿ ಬಸಪ್ಪ ಟಣಕೆದಾರ ಸಾ:ಖಾನಾಪೂರ ಈತನು ಹಳೆ ಬಸ್ ಸ್ಟ್ಯಾಂಡ ಹತ್ತಿರ ತನ್ನ ಕಿರಾಣ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದನು. ಅಂಗಡಿ ಹೆಸರು ಇರುವುದಿಲ್ಲ. ಸದರಿಯವರು ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಅವಶ್ಯಕ ವಸ್ತುಗಳಾದ ದಿನಸಿ ಅಂಗಡಿಗಳನ್ನು ನಿಗದಿತ ಸಮಯಕ್ಕೆ ಮುಚ್ಚಬೇಕೆಂದು ಸ್ಪಷ್ಟ ಆದೇಶಗಳಿದ್ದರೂ ಕೂಡಾ ಅವುಗಳನ್ನು ಉಲ್ಲಂಘಿಸಿ, ಗ್ಯಾರೇಜ ಮತ್ತು ಕಿರಾಣಾ ಅಂಗಡಿಗಳನ್ನು ಸಾಯಂಕಾಲ 7 ಗಂಟೆ ವರೆಗೆ ತೆರೆದು ವ್ಯಾಪಾರ ಮಾಡಿ ಸರಕಾರದ ಆದೇಶ ಉಲ್ಲಂಘನೆ ಮಾಡಿ ಅಪರಾಧ ಎಸಗಿರುತ್ತಾರೆ. ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸರಕಾರಿ ತಫರ್ೆಯಿಂದ ಈ ದೂರು ಸಲ್ಲಿಸಲಾಗಿದೆ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 44/2020 ಕಲಂ: 188 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ;- 125/2020. ಕಲಂ 87 ಕೆ.ಪಿ.ಆಕ್ಟ:-    ಇಂದು ದಿನಾಂಕ 21-04-2020 ರಂದು 3.00 ಪಿ.ಎಮ್ ಕ್ಕೆ  ಶ್ರೀ ವೆಂಕಟೇಶ ಡಿ.ವೈಎಸ್ಪಿ ಸುರಪುರ ಉಪ-ವಿಭಾಗ ರವರು  ಠಾಣೆಗೆ ಹಾಜರಾಗಿ  ಜ್ಞಾಪನ ನೀಡಿದ್ದೇನಂದರೆ, ಇಂದು ದಿನಾಂಕ:15-04-2020 ರಂದು 2:00 ಪಿ.ಎಂ ಕ್ಕೆ ಪೆಟ್ರೋಲಿಂಗ ಕುರಿತು ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಸಗರ ಗ್ರಾಮದ ಕಡೆಗೆ ಪೆಟ್ರೋಲಿಂಗ ಕುರಿತು ಹೋದಾಗ ಭಾತ್ಮೀದಾರರಿಂದ ತಿಳಿದು ಬಂದಿದ್ದೇನೆಂದರೆ, ಸಗರ ಸೀಮಾಂತರದ ಸೀಮಾಂತರದ ಸಗರ ಗ್ರಾಮದಿಂದ ತಿಮ್ಮಾಪುರ ದೊಡ್ಡಿಗೆ ಹೊಗುವ ಕೆನಾಲ ರಸ್ತೆಯ ಪಕ್ಕದ ಪಾರಿವಾಳ ಮಡ್ಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ್-ಬಾಹರ್ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಭಾತ್ಮೀ ಬಂದಿದ್ದರಿಂದ ಸದರಿ ವಿಷಯವನ್ನು ಖಚಿತಪಡಿಸಿಕೊಂಡು ನಂತರ ಶಹಾಪೂರ ಪೊಲೀಸ್ ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರಕ್ಕೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ಇದ್ದ ಜ್ಞಾಪನ ಪತ್ರವನ್ನು ಸ್ವೀಕರಿಸಿಕೊಂಡು ಠಾಣೆ ಗುನ್ನೆ ನಂ. 116/2020 ಕಲಂ 87 ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ
    ನಂತರ ದಾಳಿ ಮಾಡಿ ಒಟ್ಟು 13 ಜನ ಆರೋಪಿತರನ್ನು ದಸ್ತಗಿರಿ ಮಾಡಿಕೊಂಡು 1,27,170/- ರೂ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಮತ್ತು 1 ಬಿಳಿ ಬಣ್ಣದ ಬರಕಾವನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ


ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 46/2020  323, 324 504, 506 ಸಂ: 34 ಐಪಿಸಿ:-   ಇಂದು ದಿನಾಂಕ: 21/04/2020 ರಂದು 01.30 ಪಿಎಂ ಕ್ಕೆ ಅಜರ್ಿದಾರರಾದ ಶ್ರೀಮತಿ ರಸೀದಾಬಾನು ಗಂಡ ಅಬ್ದುಲ್ ಖಯೂಮ ಸಾಹು ವಯಾ:60 ವರ್ಷ ಉ: ಮನೆಗೆಲಸ ಜಾ: ಮುಸ್ಲೀಂ ಸಾ: ಗೋಗಿ ಪೇಠ  ತಾ: ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಹಾಜರ ಪಡೆಸಿದ್ದು, ಸದರಿ ಅಜರ್ಿಯ  ಸಾರಂಶ ಏನಂದರೆ, ದಿನಾಂಕ: 20/04/2020 ರಂದು ನಾನು ಮತ್ತು ನನ್ನ ಮಗನಾದ ಮಹ್ಮದ ಮುಜಮ್ಮೀಲ್ ತಂದೆ ಅಬ್ದುಲ್ ಖಯೂಂ ಸಾಹು ಮತ್ತು ನಮ್ಮ ಸೊಸೆ ಉಮೆ ತಂಜಲ್ಲಾ ಎಲ್ಲರೂ ಮನೆಯಲ್ಲಿ ಇದ್ದಾಗ 06.00 ಗಂಟೆಯ ಸುಮಾರಿಗೆ ನಮ್ಮ ಓಣಿಯ ನವಾಬ ತಂದೆ ಮಕ್ಸೂದ ಅಹ್ಮದ ವ:30 ವರ್ಷ ಜಾ: ಮುಸ್ಲೀಂ ಸಾ: ಗೋಗಿ ಪೇಠ ಈತನು ನಮ್ಮ ಮನೆಯ ಹಿಂದೆ ಹಿತ್ತಲ ಜಾಗದಲ್ಲಿ ಕಟ್ಟಿಗೆ ಕಡೆಯಲು ಬಂದಿದ್ದನು. ಆಗ ನಾನು ಮತ್ತು ನನ್ನ ಮಗನಾದ ಮಹ್ಮದ ಮುಜಮ್ಮೀಲ್ ತಂದೆ ಅಬ್ದುಲ್ ಖಯೂಂ ಸಾಹು ಇಬ್ಬರು ನಮ್ಮ ಜಾಗದಲ್ಲಿ ಕಟ್ಟಿಗೆ ಕಡೆದು ಕಸ್ ಹಾಕಬೇಡ ನೀನು ಕಸ ಹಾಕಿ ಹೊಗುತ್ತಿ ನಮಗೆ ಕಸ ಗೂಡಿಸಲು ಆಗುವದಿಲ್ಲ ಅಂತಾ ಅಂದಿದ್ದಕ್ಕೆ ನಮ್ಮ ಜೋತೆಗೆ ಜಗಳ ತಗೆದು ನಮಗೆ ಅವಾಚ್ಯವಾಗಿ ಬೈಯತೊಡಗಿದ ಆಗ ನಾನು, ನಮ್ಮ ಮಗನಿಗೆ ಮನೆಯಲ್ಲಿ ಕರೆದುಕೊಂಡು ಹೊದೆನು. ನಂತರ 06.30 ಪಿಎಂ ಸುಮಾರಿಗೆ ಸದರಿ 1) ನವಾಬ ತಂದೆ ಮಕ್ಸುದ ಅಹ್ಮದ ಹವಾಲ್ದಾರ ಅವರ ತಂದೆಯಾದ 2) ಮಕ್ಸುದ ಅಹ್ಮದ ತಂದೆ ಚಂದಾಸಾಬ ಹವಾಲ್ದಾರ 3) ಮೈಬೂಬ ತಂದೆ ಯೂಸೂಫ ಸಾಬ ಖೈನೂರ ಸಾ: ಎಲ್ಲರೂ ಗೋಗಿ ಪೇಠ ಇವರುಗಳು ಕೂಡಿ ನಮ್ಮ ಮನೆಯ ಮುಂದೆ ಬಂದು ನನ್ನ ಮಗನಾದ ಮಹ್ಮದ ಮುಜಮ್ಮೀಲ್ ತಂದೆ ಅಬ್ದುಲ್ ಖಯೂಂ ಸಾಹು ಈತನಿಗೆ ರಾಂಡಕಾ ಬಚ್ಚಾ ಅಂತಾ ಅವಾಚ್ಯವಾಗಿ ಬೈಯತೊಡಗಿದರು. ಮಕ್ಸೂದ ತಂದೆ ಚಂದಾಸಾಬ ಇತನು ಕೂಡ ಸೂಳೆ ಮಗನೆ ಹೊರಗೆ ಬಾ ಅಂತಾ ಅವಾಚ್ಯವಾಗಿ ಬೈಯತೊಡಗಿದೆನು. ಆಗ ನನ್ನ ಮಗನು ಮನೆಯ ಮುಂದೆ ಹೋಗಿ ಯಾಕೆ ಬೈಯುತ್ತಿ ನಮ್ಮ ಜಾಗದಲ್ಲಿ ಕಟ್ಟಿಗೆ ಕಡೆಯಬೇಡ ಅಂತಾ ಅಂದಿದ್ದಕ್ಕೆ ನಿನಗೆ ಸಿಟ್ಟು ಬಂತಾ ಅಂತಾ ಅಂದಿದ್ದಕ್ಕೆ ನವಾಬ ಈತನು ಬೋಸಡಿಕೆ ಇದು ನಿಮ್ಮ ಜಾಗ ಇದ್ರು, ಯಾರ ಜಾಗ ಇದ್ರು ನಾನು ಅಲ್ಲೆ ಕಟ್ಟಿಗೆ ಕಡೆಯುತ್ತಿನಿ ಏನೂ ಮಾಡುತ್ತಿ ಅಂತಾ ಅವಾಚ್ಯವಾಗಿ ಬೈಯುತ್ತಾ ನನ್ನ ಮಗನ ಎದೆಯ ಮೇಲಿನ ಅಂಗಿ ಹಿಡಿದು ಕಪಾಳಕ್ಕೆ ಹೊಡೆದನು, ಆಗ ಮೈಯಬೂಬ ಈತನು ಕೂಡ ನನ್ನ ಮಗನಿಗೆ ಅವಾಚ್ಯವಾಗಿ ಸೂವರ್ ಅಂತಾ ಬೈಯುತ್ತಾ ನನ್ನ ಮಗನ ಎರಡು ಕೈಗಳನ್ನು ಹಿಡಿದುಕೊಂಡನು, ಆಗ ನವಾಬ ಈತನು ಅಲ್ಲೆ ಕಟ್ಟಿಗೆ ಕಡೆಯಲು ತಂದು ಇಟ್ಟಿದ್ದ ಕೊಡಲಿಯಿಂದ ನನ್ನ ಮಗನ ತಲೆಗೆ ಹೊಡೆದು ತಲೆಯ ಎಡಭಾಗಿದಲ್ಲಿ ರಕ್ತಗಾಯ ಮಾಡಿದನು. ಅಷ್ಟರಲ್ಲಿ ನಾನು ಮತ್ತು ನನ್ನ ಸೊಸೆ ಉಮೆ ತಂಜಲ್ಲಾ ಮತ್ತು ನಮ್ಮ ಭಿಗರಾದ ಮಹ್ಮದ ಸಿದ್ದೀಕಿ ಹುಸೇನ ತಂದೆ ಮಹಿಮೂದ ಅಹ್ಮದ ಮಕ್ತಾಪೂರ ಸಾ: ಗೋಗಿ ಕೆ ಇವರು ನೋಡಿ ಬಿಡಿಸಿಕೊಂಡೆವು, ಆಗ ಮಕ್ಸೂದ ತಂದೆ ಚಂದಾಸಾಬ ಇತನು ಮಗನೆ ಇವತ್ತು ಉಳದಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನಗೆ ಖಲಾಸ ಮಾಡುತ್ತೇ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ನಾವು ನಿನ್ನೆ ನಮ್ಮ ಮಗನಿಗೆ ಶಹಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೊಗಿ ಉಪಚಾರ ಮಾಡಿಸಿ ಅಲ್ಲಿಂದ ಕಲಬುರಗಿಗೆ ಹೆಚ್ಚಿನ ಉಪಚಾರಕ್ಕೆ ಕಳುಹಿಸಿದ್ದರಿಂದ ಇಂದು ದಿ: 21/04/2020 ರಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ.
         ಕಾರಣ ನಮ್ಮ ಜಾಗದಲ್ಲಿ ಕಟ್ಟಿಗೆ ಕಡೆಯಬೇಡ ಅಂದಿದ್ದಕ್ಕೆ ನನ್ನ ಮಗನಿಗೆ ಅವಾಚ್ಯವಾಗಿ ಬೈಯ್ದು, ಕೈಯಿಂದ ಕೊಡಲಿಯಿಂದ ಹೊಡೆದು ರಕ್ತಗಾಯ ಮಾಡಿ ಜೀವದ ಭಯ ಹಾಕಿರುವ ಮೇಲಿನ ಮೂರು ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ. ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 46/2020 ಕಲಂ, 323, 324, 504, 506 ಸಂ: 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 47/2020  323, 324 504, 506 ಸಂ: 34 ಐಪಿಸಿ:- ಇಂದು ದಿನಾಂಕ: 21/04/2020 ರಂದು 07.30 ಪಿಎಂ ಕ್ಕೆ ಪಿಯರ್ಾದಿ ನವಾಬ ತಂದೆ ಮಕ್ಸೂದ ಸಾಬ ಹವಾಲ್ದಾರ ವಯಾ: 30 ವರ್ಷ ಉ: ಮೇಕ್ಯಾನಿಕ್ ಜಾ: ಮುಸ್ಲಿಂ ಸಾ:ಗೋಗಿ ಪೇಠ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು,  ಸದರಿ ಹೇಳಿಕೆ ಸಾರಂಶ ಏನಂದರೆ, ದಿನಾಂಕ: 20/04/2020 ರಂದು 06.00 ಪಿಎಂ ಸುಮಾರಿಗೆ ನಾನು, ನಮ್ಮ ಮನೆಯ ಹತ್ತಿರ ಇರುವ ದಗರ್ಾದ ಹತ್ತಿರ ನಮ್ಮ ಮನೆಗೆ ಉರುವಲು ಕಟ್ಟಿಗೆ ಕಡೆಯುತ್ತಿದ್ದಾಗ ನಮ್ಮ ಊರಿನವರಾದ ಮುಜಮ್ಮೀಲ್ ತಂದೆ ಅಬ್ದುಲ್ ಖಯೂಂ ಸಾಹು ಈತನು ಬಂದು ನಮ್ಮ ಜಾಗದಲ್ಲಿ ಏಕೆ ಕಟ್ಟಿಗೆ ಕಡೆಯುತ್ತಿದ್ದಿಯಾ ಅಂತಾ ಅವಾಚ್ಯಾಗಿ ಬೈಯ್ದು ನನ್ನ ಜೋತೆಯಲ್ಲಿ ಜಗಳ ತಗೆದನು. ಆಗ ನಾನು ನಿಮ್ಮ ಜಾಗದಲ್ಲಿ ಕಟ್ಟಿಗೆ ಕಡೆಯುತ್ತಿಲ್ಲ ದಗರ್ಾದ ಜಾಗದಲ್ಲಿ ಕಡೆಯುತ್ತಿದ್ದೇನೆ. ಅಂತಾ ಹೇಳಿದೆನು. ಆದರೂ ನನಗೆ ಬೈಯತೊಡಗಿದ ಅದಕ್ಕೆ ನಾನು ನನ್ನ ಕಟ್ಟಿಗೆಗಳನ್ನು ತಗೆದುಕೊಂಡು ಮನೆಗೆ ಹೊದೆನು. ನಂತರ 07.00 ಪಿಎಂ ಸುಮಾರಿಗೆ ನಾನು ನಮ್ಮ ಮನೆಯಿಂದ ಹೊರಗೆ ಹೋಗುತ್ತಿದ್ದಾಗ ಮುಜಮ್ಮೀಲ್ ತಂದೆ ಅಬ್ದುಲ್ ಖಯೂಂ ಸಾಹು ಈತನು ನನಗೆ ಕರೆದು ಇಲ್ಲಿ ಇನ್ನು ಒಂದು ಕಟ್ಟಿಗೆ ಬಿದ್ದಿರುತ್ತದೆ. ತಗೆದುಕೊಂಡು ಹೋಗು ಅಂತಾ ಕರೆದನು ನಾನು ಸದರಿ ನಮ್ಮ ಮನೆಯ ಹತ್ತಿರ ಇರುವ ದಗರ್ಾದ ಹತ್ತಿರ ಹೊಗಿ ನೋಡಲಾಗಿ ಅಲ್ಲಿ ಕಟ್ಟಿಗೆ ಇರಲಿಲ್ಲ. ನಾನು ಕಟ್ಟಿಗೆ ಇಲ್ಲ ಯಾಕೆ ಸುಳ್ಳು ಹಳುತ್ತಿ ಅಂತಾ ಅಂದಾಗ 1) ಮುಜಮ್ಮೀಲ್ ತಂದೆ ಅಬ್ದುಲ್ ಖಯೂಂ ಸಾಹು ಮತ್ತು ಅವರ ಮನೆಯಲ್ಲಿ ಇರುವ 2) ಹಾಜಿ ತಂಬುಲಿ ಇಬ್ಬರು ಕೂಡಿ ಬಂದು ಸೂಳೆ ಮಗನೆ ಆವಾಗಲೆ ಕಟ್ಟಿಗೆ ಕಡೆಯುವಾಗ ನನಗೆ ಎದರು ಮಾತಾಡುತ್ತಿ ಏನು ಅಂತಾ ಅವಾಚ್ಯವಾಗಿ ಬೈಯ್ದು, ಮುಜಮೀಲ್ ಇತನು ಅಲ್ಲೆ ಪಕ್ಕದಲ್ಲೆ ಇದ್ದ ಒಂದು ಕಟ್ಟಿಗೆಯಿಂದ ನನ್ನ ಬಲಗಾಲಿನ ಮೋಳಕಾಲಿಗೆ ಹೊಡೆದು ತರಚಿದ ಗಾಯ ಮಾಡಿರುತ್ತಾನೆ. ಹಾಜಿ ಈತನು ನನಗೆ ದಬ್ಬಿಸಿಕೊಟ್ಟಿರುತ್ತಾನೆ. ನಾನು ಕೆಳಗೆ ಬಿದ್ದಿದ್ದರಿಂದ ನನ್ನ ಎಡಗೈ ಮುಂಗೈಗೆ ಮತ್ತು ಎಡಗಡೆಯ ಕುತ್ತಗಿಯ ಹತ್ತಿರ ಒಳ ಪೆಟ್ಟಾಗಿರುತ್ತದೆ. ಅಷ್ಟರಲ್ಲಿ ನಮ್ಮ ತಂದೆಯಾದ ಮಕ್ಸೂದ ತಂದೆ ಚಂದಾಸಾಬ ಹವಾಲ್ದಾರ, ಮತ್ತು ಮೈಬೂಬ ತಂದೆ ಯೂಸೂಫಸಾಬ ಖೈನೂರ ಇವರು ನೋಡಿ ಬಿಡಿಸಿಕೊಂಡಿರುತ್ತಾರೆ. ಆಗ ಮುಜಮಿಲ್ಲ ಈತನು ಸೂಳೆ ಮಗನೆ ಇವತ್ತು ಉಳದಿದಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನಗೆ ಖಲಾಸ್ ಮಾಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ನಾನು ನಮ್ಮ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ:21/04/2020 ರಂದು ಠಾಣೆಗೆ ಬಂದು ಹೇಳಿಕೆ ನೀಡಿರುತ್ತೇನೆ. ನನಗೆ ಆಸ್ಪತ್ರ್ರೆಗೆ ಕಳುಹಿಸಿ ಕೊಡಬೆಕಾಗಿ ಮತ್ತು ನನಗೆ ಅವಾಶ್ಚವಾಗಿ ಬೈಯ್ದು, ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಮೇಲಿನ ಇಬ್ಬರು ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸ ಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 47/2020 ಕಲಂ, 323, 324, 504, 506 ಸಂ: 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಭಿಗುಡಿ  ಪೊಲೀಸ್ ಠಾಣೆ ಗುನ್ನೆ ನಂ:- 51/2020 ಕಲಂ 87 ಕೆಪಿ ಯ್ಯಾಕ್ಟ :- ಇಂದು ದಿನಾಂಕ 21/04/2020 ರಂದು 06.00 ಪಿ.ಎಮ್.ಕ್ಕೆ ಹಾಲಭಾವಿ ಸೀಮಾಂತರದಲ್ಲಿನ ಬಸನಗೌಡ ಪೊಲೀಸ್ ಪಾಟಿಲ್ ಇವರ ಹೊಲದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪ್ರಕರಣ ದಾಖಲಿಸಿಕೊಳ್ಳು ಮತ್ತು ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಹೋಗಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 08.20 ಪಿ.ಎಮ್ ಕ್ಕೆ ದಾಳಿ ಮಾಡಿ ದಾಳಿಯಲ್ಲಿ ಸಿಕ್ಕ 08 ಜನ ಆರೋಪಿತರಿಂದ ಹಾಗು ಕಣದಲ್ಲಿಂದ ನಗದು ಒಟ್ಟು ಹಣ 8100/- ರೂ, 52 ಇಸ್ಪೇಟ ಎಲೆಗಳನ್ನು 08.20 ಪಿ.ಎಮ್ ದಿಂದ 09.20 ಪಿ.ಎಮ್ ವರೆಗೆ ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿರುತ್ತಾರೆ.
ಭಿಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 52/2020 ಕಲಂ 341, 323, 324, 504, 506 ಸಂಗಡ 34 ಐಪಿಸಿ:-ದಿನಾಂಕ:21/04/2020 ರಂದು 1.30 ಪಿ.ಎಮ್. ಸುಮಾರಿಗೆ ಫಿಯರ್ಾದಿ ಮತ್ತು ಗಾಯಾಳು ಇಬ್ಬರೂ ಕೂಡಿ ಹುರಸಗುಂಡಗಿಯ ಕಡೆಗೆ ಹೊರಟಾಗ ಆರೋಪಿತರು ಫಿಯರ್ಾದಿಗೆ ತಡೆದು ನಿಲ್ಲಿಸಿ ನಾವು ಇಸ್ಪಿಟ ಆಡುವ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡುತ್ತಿ ಭೋಸಡಿ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಬಡಿಗೆಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿಯರ್ಾದಿ ಇರುತ್ತದೆ.ಕೊಡೆಕಲ್  ಪೊಲೀಸ್ ಠಾಣೆ ಗುನ್ನೆ ನಂ:- 32/2020 ಕಲಂ: 87  ಕೆ.ಪಿ ಆಠ್ಟಿ್:- ಇಂದು ದಿನಾಂಕ:21.04.2020 ರಂದು 11:00 ಎಎಮ್ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ ಠಾಣೆ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ನಾನು ಇಂದು ದಿನಾಂಕ:21.04.2020 ರಂದು ಮುಂಜಾನೆ 11:00 ಗಂಟೆಗೆ ಠಾಣೆಯಲ್ಲಿದ್ದಾಗ ಎಎಸ್ಐ  ರವರು ಬಂದು ನನಗೆ ತಿಳಿಸಿದ್ದೇನೆಂದರೆ, ಕಕ್ಕೇರಾ ಸೀಮಾಂತರದಲ್ಲಿಯ ನಂದಪ್ಪ ತಂದೆ ಅಂಬ್ರಪ್ಪ ಪೀಳಬಂಟಿ ರವರ ಹೊಲದ ಹತ್ತಿರ ಸಕರ್ಾರಿ  ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ್-ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಅವರವಲ್ಲಿ ಹಣವನ್ನು ಪಣಕ್ಕೆ ಕಟ್ಟಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತ ತಿಳಿಸಿದ್ದು. ಸದರಿ ಎಎಸ್ಐ ರವರು ಹೇಳಿದ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:32/2020 ಕಲಂ:87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
ನಂತರ ಮಾನ್ಯ ಪಿಎಸ್ಐ ಸಾಹೇಬರು 5:00 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು 52 ಇಸ್ಪೀಟ್ ಎಲೆಗಳು ಮತ್ತು 4020/-  ರೂ ನಗದು ಹಣಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. 

ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 
1) ಸೋಮನಾಥ ತಂದೆ ಪರಮಣ್ಣ ಬೋವಿ ವ:28 ವರ್ಷ ಜಾ: ಹಿಂದೂ ಕಬ್ಬಲಿಗ ಸಾ:ಕಕ್ಕೇರಾ ತಾ: ಸುರಪೂರ 
2) ಸೋಮಣ್ಣ ತಂದೆ ದುರಗಪ್ಪ ಪುಟ್ಟೇರ್ ವ: 25 ವರ್ಷ ಜಾ: ಕಬ್ಬೇರ ಉ: ಒಕ್ಕಲುತನ  ಸಾ:ಪುಟ್ಟೇರ ದೊಡ್ಡಿ ಕಕ್ಕೇರಾ 
3) ದೇವೀಂದ್ರಪ್ಪ ತಂದೆ ಪರಮಣ್ಣ ಬೂದಗುಂಪಿ ವ:36 ವರ್ಷ ಜಾ: ಕುರುಬರ ಉ: ಪಾನಶಾಪ್ ಸಾ:ಕಕ್ಕೇರಾ
4) ನಂದಪ್ಪ ತಂದೆ ಭೀಮಣ್ಣ ಅಮ್ಮಾಪೂರ ವ:36 ವರ್ಷ ಉ: ಒಕ್ಕಲುತನ ಸಾ: ಕಕ್ಕೇರಾ 
5) ದೇವಪ್ಪ ತಂದೆ ಪರಮಣ್ಣ ಪುಟ್ಟೇರ್ ವ:25 ವರ್ಷ ಜಾ: ಕಬ್ಬಲಿಗ ಉ: ಒಕ್ಕಲುತನ ಸಾ: ಕಕ್ಕೇರಾ 
6) ನಿಂಗಣ್ಣ ತಂದೆ ಸೋಮಪ್ಪ ಬೋವಿ ವ:35 ವರ್ಷ ಉ: ಮ್ಯಾಕಾನಿಕ್ ಜಾ: ಕಬ್ಬಲಿಗ ಸಾ: ಕಕ್ಕೇರಾ
ಕೊಡೆಕಲ್  ಪೊಲೀಸ್ ಠಾಣೆ ಗುನ್ನೆ ನಂ:- 33/2020 ಕಲಂ: 87  ಕೆ.ಪಿ ಆಠ್ಟಿ್:- ಇಂದು ದಿನಾಂಕ:21.04.2020 ರಂದು 2:00ಪಿಎಮ್ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ ಠಾಣೆ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ನಾನು ಇಂದು ದಿನಾಂಕ:21.04.2020 ರಂದು ಮುಂಜಾನೆ 2:00 ಗಂಟೆಗೆ ಠಾಣೆಯಲ್ಲಿದ್ದಾಗ ಬೀಟ್ ಸಿಬ್ಬಂಧಿ ಪಿಸಿ-216 ಲಿಂಗಪ್ಪ ಬಂದು ನನಗೆ ತಿಳಿಸಿದ್ದೇನೆಂದರೆ, ರಾಜನಕೊಳೂರು ಸೀಮಾಂತರ ಮುರಾಜರ್ಿ ಶಾಲೆಯ  ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ್-ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಅವರವಲ್ಲಿ ಹಣವನ್ನು ಪಣಕ್ಕೆ ಕಟ್ಟಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತ ತಿಳಿಸಿದ್ದು. ಸದರಿ ಎಎಸ್ಐ ರವರು ಹೇಳಿದ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:33/2020 ಕಲಂ:87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
ನಂತರ ಮಾನ್ಯ ಪಿಎಸ್ಐ ಸಾಹೇಬರು 7:45 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು 52 ಇಸ್ಪೀಟ್ ಎಲೆಗಳು ಮತ್ತು 3550/-  ರೂ ನಗದು ಹಣಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. 

ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 
11) ಮಲ್ಲಣ್ಣ ತಂದೆ ಬಸವರಾಜ ಮೇಟಿ ವ:30 ವರ್ಷ ಉ: ಒಕ್ಕಲುತನ ಜಾ: ಕುರುಬರ ಸಾ: ಬಲಶೆಟ್ಟಿಹಾಳ
2) ರಾಯಣ್ಣ ತಂದೆ ಪಿಡ್ಡಪ್ಪ ಮೇಟಿ ವ:32 ವರ್ಷ ಉ: ಒಕ್ಕಲುತನ ಜಾ: ಕುರುಬರ ಸಾ: ರಾಜನಕೊಳುರು
3) ನಿಂಗನಗೌಡ ತಂದೆ ನಾಗಪ್ಪಗೌಡ ಕೊಂಡಗುಳ್ಳಿ ವ:50 ವರ್ಷ ಉ: ಒಕ್ಕಲುತನ ಜಾ: ನೇಕಾರ ಸಾ: ರಾಜನಕೊಳುರು 
4) ಸಂತೋಷ ತಂದೆ ಶಿವಪ್ಪ ಮಸ್ಕಾನಾಳ ವ:30 ವರ್ಷ ಉ: ಕ್ಯೂಸರ್ ಚಾಲಕ ಜಾ:ನೇಕಾರ ಸಾ; ಹಗರಟಗಿ 
5) ಸಂತೋಷ ತಂದೆ ಯಂಕಣ್ಣ ಗುಂಡಕನಾಳ  ವ: 31 ವರ್ಷ ಉ: ಒಕ್ಕಲುತನ ಜಾ: ಲಿಂಗಾಯತ ರೆಡ್ಡಿ ಸಾ: ರಾಜನಕೊಳುರು

ಕೆಂಭಾವಿ  ಪೊಲೀಸ್ ಠಾಣೆ ಗುನ್ನೆ ನಂ:-  72/2020  ಕಲಂ: 273, 328 ಐಪಿಸಿ :-   ಇಂದು ದಿನಾಂಕ: 21.04.2020 ರಂದು 5.00 ಪಿ.ಎಮ್ ಸುಮಾರಿಗೆ ನಾನು ಹಾಗೂ ಸಿಬ್ಬಂದಿಯವರಾದ  ಶಿವಲಿಂಗಪ್ಪ ಹೆಚ್ಸಿ 185, ಬೀರಪ್ಪ ಪಿಸಿ 195, ಚಂದಪ್ಪ ಪಿಸಿ 316, ಸಂಗಮೇಶ ಪಿಸಿ 244 ಹಾಗು ಜೀಪ ಚಾಲಕ ಪೆದ್ದಪ್ಪಗೌಡ ಪಿ.ಸಿ-214 ರವರೊಂದಿಗೆ ಪೆಟ್ರೊಲಿಂಗ್ ಕುರಿತು ಏವೂರ ಹತ್ತಿರ ಇದ್ದಾಗ ಮಲ್ಲಾ ಕ್ರಾಸಿನಿಂದ ವಡಗೇರಾಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಅಂದರೆ ಸಾರ್ವಜನಿಕ ಸ್ಥಳದಲ್ಲಿ ಎರಡು ಜನರು ತಮ್ಮ ಮೋಟರ ಸೈಕಲ ಮೇಲೆ ಇಟ್ಟು ಪ್ಲಾಸ್ಟಿಕ್ ಬಾಟಲ್ಗಳಲ್ಲಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದಾರೆ ಅಂತ ಭಾತ್ಮಿ ಬಂದ ಮೇರೆಗೆ ಭೀರಪ್ಪ ಪಿಸಿ-195 ರವರ ಮುಖಾಂತರ ಪಂಚ ಜನರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವ|| 38 ಜಾ|| ಪ ಜಾತಿ ಉ||ಕೂಲಿ ಸಾ|| ಕೆಂಭಾವಿ 2) ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ವ|| 48 ಜಾ|| ಪ ಜಾತಿ ಉ|| ಕೂಲಿ ಸಾ|| ಕೆಂಭಾವಿ ಇವರನ್ನು 05.30 ಪಿಎಮ್ಕ್ಕೆ ಮಲ್ಲಾ ಬಸ್ಸ ನಿಲ್ದಾಣದ ಹತ್ತಿರ  ಕರೆಯಿಸಿ ಅವರಿಗೂ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ:ಕೆಎ 33 ಜಿ 0074 ನೇದ್ದರಲ್ಲಿ ಮಲ್ಲಾ ಬಸ್ಸ ನಿಲ್ದಾಣದಿಂದ 6 ಪಿಎಮ್ಕ್ಕೆ ಹೊರಟು ಮಲ್ಲಾ ಕ್ರಾಸಿನ ರಾಮನಗೌಡ ಹದನೂರ ಇವರ ಮನೆಯ ಪಕ್ಕದಲ್ಲಿ 6.15 ಪಿಎಮ್ಕ್ಕೆ ನಮ್ಮ ಜೀಪ್ ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಮಲ್ಲಾ ಕ್ರಾಸಿನಿಂದ ವಡಗೇರಾಕ್ಕೆ ಹೋಗುವ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಎರಡು ಜನರು ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುವದನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 6.20 ಪಿ.ಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುವ ಎರಡು ಜನರು ಸಿಕ್ಕಿಬಿದ್ದಿದ್ದು ಸದರಿಯವರ ಹೆಸರು ವಿಚಾರಿಸಲಾಗಿ ನಿಂಗಣ್ಣ ತಂದೆ ಮಹಾಂತಪ್ಪ ಅಖಂಡಳ್ಳಿ ವಯಾ|| 32 ಜಾ|| ಲಿಂಗಾಯತ ಉ|| ಕೂಲಿ ಸಾ|| ಯಡ್ರಾಮಿ ಅಂತ ತಿಳಿಸಿದ್ದು ಇಂತರ ಇನ್ನೊಬ್ಬ ವ್ಯಕ್ತಿಗೆ ವಿಚಾರಿಸಲಾಗಿ ಆತನು ತನ್ನ ಹೆಸರು ಅರುಣಕುಮಾರ ತಂದೆ ಹಣಮಂತ್ರಾಯ ಜಾಲಹಳ್ಳಿ ವ|| 34 ಜಾ|| ಲಿಂಗಾಯತ ಉ|| ಖಾಸಗಿಕೆಲಸ ಸಾ|| ಯಡ್ರಾಮಿ ಅಂತ ತಿಳಿಸಿದ್ದು ನಂತರ ಸದರ ಸ್ಥಳದಲ್ಲಿದ್ದ  2 ಲೀಟರನ 2 ಕಳ್ಳಭಟ್ಟಿ ಸರಾಯಿ ತುಂಬಿದ ಪ್ಲಾಸ್ಟಿಕ ಬಾಟಲ್ಗಳನ್ನು ಪಂಚರ ಸಮಕ್ಷಮ ವಶಕ್ಕೆ ಪಡೆದುಕೊಂಡಿದ್ದು, ಅಲ್ಲದೇ ಸದರ ಕೃತ್ಯಕ್ಕೆ ಬಳಸಿದ ಮೋಟರ ಸೈಕಲ ನಂಬರ ನೋಡಲಾಗಿ ಸ್ಟಾರ್ ಸಿಟಿ ಮೋಟರ ಸೈಕಲ ಇದ್ದು ಅದರ ನಂಬರ ನೋಡಲಾಗಿ ಕೆಎ-33 ಹೆಚ್-7378 ಅಂತ ಇದ್ದು ಅದನ್ನು ಸಹ ಜಪ್ತ ಪಡಿಸಿಕೊಂಡು  ನಂತರ ಸದರ ಬಾಟಲ್ಗಳಲ್ಲಿ 01 ಪ್ಲಾಸ್ಟಿಕ್ ಬಾಟಲನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಕುರಿತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಪ್ರತ್ಯೇಕವಾಗಿ ಬಿಳಿ ಬಟ್ಟೆಯಿಂದ ಹೊಲಿದು ಅದರ ಮೇಲೆ ಅರಗಿನಿಂದ ಏ ಅಂತ ಶೀಲ್ ಹಾಕಿ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಆರೋಪಿತನು ಅನರ್ಹವಾದಂತಹ ಸ್ಥಿತಿಯಲ್ಲಿರುವ ಪದಾರ್ಥವು ಮಾನವ ಜೀವಕ್ಕೆ ಸೇವಿಸಲು ಹಾನಿಕಾರವಾಗಿದೆ ಎಂದು ತಿಳಿದೂ ಈ ಪದಾರ್ಥವನ್ನು ಮಾರಾಟ ಮಾಡಿದ್ದು ಅಲ್ಲದೆ ಸದರ ಪಾನೀಯ (ಕಳ್ಳಭಟ್ಟಿ ಸರಾಯಿ) ಸೇವನೆಯಿಂದ ಮಾನವ ಜೀವಕ್ಕೆ ಹಾನಿ ಇದೆ ಎಂದು ತಿಳಿದೂ ಮಾರಾಟ ಮಾಡುತ್ತಿದ್ದರಿಂದ ಸದರ ಸ್ಥಳದಲ್ಲಿದ್ದ 2ಲೀಟರನ 02 ಪ್ಲಾಸ್ಟಿಕ್ ಬಾಟಲ್ಗಳಲ್ಲಿದ್ದ ಕಳ್ಳಭಟ್ಟಿ ಸರಾಯಿಯನ್ನು ಪಂಚರ ಸಮಕ್ಷಮ 6.20 ಪಿಎಮ್ದಿಂದ 7.50 ಪಿಎಮ್ದವರೆಗೆ ಜೀಪಿನ ಲೈಟಿನ ಬೆಳಕಿನಲ್ಲಿ ಜಪ್ತಪಡಿಸಿಕೊಂಡಿದ್ದು ನಂತರ ಸದರ ಕಳ್ಳಬಟ್ಟಿ ಸರಾಯಿಯೊಂದಿಗೆ ಮರಳಿ ಠಾಣೆಗೆ 8.45 ಪಿಎಮ್ಕ್ಕೆ ಬಂದು ಈ ವರದಿ ನೀಡಿದ್ದು ಕಾರಣ ಸದರಿ ಎರಡು ಜನ ಆರೋಪಿತರ ವಿರುದ್ದ ಮುಂದಿನ ಕ್ರಮ ಜರುಗಿಸಲು ಈ ಮೂಲಕ ನಿಮಗೆ ಆದೇಶಿಸಲಾಗಿದೆ ಅಂತ ಕೊಟ್ಟ ವರಧಿ ಆಧಾರದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 72/2020 ಕಲಂ 273, 328 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!