ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/04/2020

By blogger on ಸೋಮವಾರ, ಏಪ್ರಿಲ್ 20, 2020


                                 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/04/2020 
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 53/2020 ಕಲಂ 323, 324, 326, 504, 506 ಸಂ 34 ಐಪಿಸಿ:-ದಿನಾಂಕ 19/04/2020 ರಂದು ರಾತ್ರಿ 8-30 ಗಂಟೆಗೆ ಫಿರ್ಯಾಧಿ ಮತ್ತು ಅವನ ಮನೆಯವರೆಲ್ಲರೂ ತಮ್ಮ ಮನೆಯ ಹತ್ತಿರ ಇರುವಾಗ ಆರೋಪಿತನನ್ನು ಕರೆದು ನೀನು ನಮ್ಮ ಹೊಲ ಏಕೆ ಗಳೆ ಹೊಡೆದಿದ್ದಿ ಅಂತಾ ಕೇಳಿದಕ್ಕೆ ಆರೋಪಿತರೆಲ್ಲರೂ ಕೂಡಿ ಏ ಸೂಳೇ ಮಗನೇ ನೀನು ಯಾರು ಕೇಳುವವ ನೀನು ನಮ್ಮ ಜೋತೆಗೆ ತಕರಾರು ಮಾಡುತ್ತಿ ಸೂಳೇ ಮಗನೇ ಅಂತಾ ಬೈದು ಫಿರ್ಯಾಧಿ ಜೋತೆಗೆ ಜಗಳ ತೆಗೆದು ಕಟ್ಟಿಗೆಯಿಂದ, ಕಲ್ಲಿನಿಂದ ಫಿರ್ಯಾಧಿಗೆ ಮತ್ತು ಅವನ ಅಣ್ಣನಿಗೆ ಹೊಡೆಬಡೆ ಮಾಡಿ ಭಾರಿ ರಕ್ತಗಾಯ, ಗುಪ್ತಗಾಯ, ತರಚಿದ ಗಾಯಗಳು ಮಾಡಿ ಜೀವದ ಭೈ ಹಾಕಿರುವ ಬಗ್ಗೆ ಪ್ರಕರಣ ದಾಖಲು ಆಗಿರುತ್ತದೆ."

          

"ಭಿಗುಡಿ ಪೊಲೀಸ ಠಾಣೆ ಗುನ್ನೆ ನಂ:- 50/2020  ಕಲಂ 273, 328 ಐಪಿಸಿ & 32, 34 ಕೆಇ ಯಾಕ್ಟ:- ಇಂದು ದಿನಾಂಕ:20.04.2020 ರಂದು 05.00 ಪಿ.ಎಮ್ ಕ್ಕೆ ಆರೋಪಿತನು ಶಿರವಾಳ ಗ್ರಾಮದ ಸಿದ್ದಲಿಂಗೇಶ್ವರ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಿಹೆಚ್ ಪೌಡರದಿಂದ ಸೇಂದಿಯನ್ನು ತಯ್ಯಾರಿಸಿ 2  ಲೀಟರನ ಪ್ಲಾಸ್ಟಿಕ ಬಾಟಲಿಯಲ್ಲಿ 2 ಲೀಟರದಷ್ಟು ಸೇಂದಿಯನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ಪಂಚರ ಸಮಕ್ಷಮ ಫಿಯರ್ಾದಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ 2 ಲೀಟರ ಸೇಂದಿಯನ್ನು ಹಾಗೂ 260 ಗ್ರಾಮ್ ಸಿಹೆಚ್ ಪೌಡರನ್ನು ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಆರೋಪಿತನು ಅನರ್ಹವಾದಂತಹ ಸ್ಥಿತಿಯಲ್ಲಿರುವ ಪದಾರ್ಥವು ಮಾನವ ಜೀವಕ್ಕೆ ಸೇವಿಸಲು ಹಾನಿಕಾರವಾಗಿದೆ ಎಂದು ತಿಳಿದೂ ಈ ಪದಾರ್ಥವನ್ನು ಮಾರಾಟ ಮಾಡಿದ್ದು ಅಲ್ಲದೆ ಸಿಹೆಚ್ ಪೌಡರದಿಂದ ತಯ್ಯಾರಿಸಿದ ಸೇಂದಿ ಸೇವನೆಯಿಂದ ಮಾನವ ಜೀವಕ್ಕೆ ಹಾನಿ ಇದೆ ಎಂದು ತಿಳಿದೂ ಮಾರಾಟ ಮಾಡುತ್ತಿದ್ದರಿಂದ ಸದರ ಸೇಂದಿ ಹಾಗೂ ಸಿಹೆಚ್ ಪೌಡರನ್ನು ಪಂಚರ ಸಮಕ್ಷಮ 05.10 ಪಿ.ಎಮ್ ದಿಂದ 06.10 ಪಿ.ಎಮ್. ವರೆಗೆ ಜಪ್ತಿಪಡಿಸಿಕೊಂಡು ಮರಳಿ ಠಾಣೆಗೆ ಬಂದು ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಅದೆ."ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 49/2020 ಕಲಂ 379 ಐಪಿಸಿ ಮತ್ತು 44(1) ಕೆಎಮ್ಎಮ್ಸಿ ರೂಲ್ 1994:- ಇಂದು ದಿನಾಂಕ: 20/04/2020 ರಂದು 8.50 ಎ.ಎಂ.ಕ್ಕೆ ಮಾನ್ಯ ಸಿಪಿಐ ಶಹಾಪುರ ವೃತ್ತ ರವರು ಮರಳು ತುಂಬಿದ ಒಂದು ಟ್ರಾಕ್ಟರ್ದೊಂದಿಗೆ ಬಂದು ವರದಿ ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ ಇಂದು ದಿನಾಂಕ 20/04/2020 ರಂದು 7 ಎ.ಎಮ್. ಕ್ಕೆ ಶಿರವಾಳ ಗ್ರಾಮದಲ್ಲಿನ ವಾಲ್ಮೀಕಿ ಚೌಕ್ ಹತ್ತಿರ ಇದ್ದಾಗ ಅದೇ ಸಮಯಕ್ಕೆ ಹುರಸಗುಂಡಗಿ ಕಡೆಯಿಂದ ಒಂದು ಮರಳು ತುಂಬಿದ ಸೋನಾಲಿಕಾ ಕಂಪನಿಯ ಟ್ರಾಕ್ಟರ್ ಇಂಜಿನ್ ನಂ:3105ಇಐಗ93ಎ886731ಈ20 ಅದರಲ್ಲಿ ಅಂದಾಜು 2000/- ರೂ ಕಿಮ್ಮತ್ತಿನ ಮರಳು ತುಂಬಿಕೊಂಡು ಬಂದಾಗ ಟ್ರಾಕ್ಟರ್ ಚಾಲಕ ನಮಗೆ ನೋಡಿ ಓಡಿ ಹೋಗಿದ್ದು ಇರುತ್ತದೆ. ಟ್ರಾಕ್ಟರ್ ಚಾಲಕ ಮತ್ತು ಮಾಲಿಕ ಸಕರ್ಾರಕ್ಕೆ ರಾಜಧನ(ರಾಯಲ್ಟಿ)ವನ್ನು ಕಟ್ಟದೇ ಟ್ರಾಕ್ಟರದಲ್ಲಿ ಇಬ್ರಾಹಿಂಪೂರ ಸಿಮಾಂತರದಲ್ಲಿ ಬರುವ ಹಳ್ಳದಿಂದ ಕಳ್ಳತನದಿಂದ ಮರಳು ಲೋಡ ಮಾಡಿಕೊಂಡು ಬಂದಿದ್ದು ಇರುತ್ತದೆ. ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಕೈಕೊಂಡು ಮರಳು ಸಮೇತ ಟ್ರಾಕ್ಟರ್ನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದರಿಂದ ಭೀ.ಗುಡಿ ಠಾಣೆ ಗುನ್ನೆ ನಂ:49/2020 ಕಲಂ 379 ಐಪಿಸಿ & 44(1) ಕೆ.ಎಮ್.ಎಮ್.ಸಿ ರೂಲ್ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.


"ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 124/2020.ಕಲಂ 87 ಆ್ಯಕ್ಟ:- ಇಂದು ದಿನಾಂಕ: 20/04/2020 ರಂದು 20-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾಧಿ ಶ್ರೀ ಹನುಮರೆಡೆಪ್ಪ ಪಿ.ಐ.  ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ 6 ಜನ ಆರೋಪಿತರು ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ದಿನಾಂಕ 20/04/2020 ರಂದು ಠಾಣೆಯಲ್ಲಿದ್ದಾಗ ಸಗರ ಗ್ರಾಮದ ಸಿಮಾಂತರದ ಹಜರತ ಸೂಫಿ ಸರ್ಮಸ್ತ ದಗರ್ಾದ ಹತ್ತಿರ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಏಲೆಗಳ ಸಹಾಯದಿಂದ ಅಂದರ ಬಾಹಾರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಸಗರ ಗ್ರಾಮಕ್ಕೆ ಹೋಗಿ ದಾಳಿ ಮಾಡಿದ್ದು 6 ಜನ ಆರೋಪಿತರು ಸಿಕ್ಕಿದ್ದು ಅಂಶೋದನೆ ಮಾಡಲಾಗಿ ಮತ್ತು ಕಣದಲ್ಲಿ ಒಟ್ಟು 9870/- ರೂ ಹಾಗೂ 52 ಇಸ್ಪೇಟ ಏಲೆಗಳು ಸಿಕ್ಕಿದ್ದು ಮುದ್ದೆಮಾಲಗಳನ್ನು ದಿನಾಂಕ 20/04/2020 ರಂದು 17-30 ಗಂಟೆಯಿಂದ 18-30 ಗಂಟೆಯವರೆಗೆ  ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಸದರಿ ಆರೋಪಿತರ ವಿರುದ್ದ ಠಾಣೆ ಗುನ್ನೆ ನಂ  124/2020 ಕಲಂ 87 ಕೆ.ಪಿ.ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ""ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ;- 71/2020 ಕಲಂ: 87 ಕೆಪಿ ಯಾಕ್ಟ:- ಇಂದು ದಿ : 20/04/2020 ರಂದು 16.30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಕೊಟ್ಟ ಜ್ಞಾಪನ ಪತ್ರದ ಸಾರಾಂಶವೇನೆಂದರೆ, ಇಂದು ದಿನಾಂಕ:20.04.2020 ರಂದು 1500 ಗಂಟೆಗೆ ಕೆಂಭಾವಿ ಪೊಲೀಸ್ ಠಾಣೆಯ ಹದ್ದಿಯ ಪೈಕಿ ನಗನೂರ ಗ್ರಾಮದ ಕಡೆಗೆ ಕರೋನಾ ಮಹಮಾರಿ ನಿಮಿತ್ಯವಾಗಿ ಪೆಟ್ರೋಲಿಂಗ ಕುರಿತು ಹೋದಾಗ ಕೆಂಭಾವಿ ಸೀಮಾಂತರದ ದೇವೀಂದ್ರಪ್ಪ ಕೊಡಗಾನೂರ ಇವರ ಹೊಲದ ಪಕ್ಕದ ರಸ್ತೆಯ ಪಕ್ಕದ ಬೇವಿನ ಮರದ ಕೆಳಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ್-ಬಾಹರ್ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಖುದ್ದಾಗಿ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಸುಮಾರು 09-10 ಜನರು ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ 1520 ಗಂಟೆಗೆ ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡು ನಂತರ ಠಾಣೆಗೆ 1540 ಗಂಟೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ  ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು 1630 ಗಂಟೆಗೆ ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ. 71/2020 ಕಲಂ : 87 ಕೆಪಿ ಆಕ್ಟ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು. ನಂತರ ಪಿರ್ಯಾದಿದಾರರು ದಾಳಿ ಕೈಕೊಂಡಿದ್ದು ದಾಳಿಯಲ್ಲಿ 05 ಜನ ಆರೋಪಿತರಿಗೆ ದಸ್ತಗಿರಿ ಮಾಡಿದ್ದು 05 ಜನರು ಓಡಿಹೋಗಿದ್ದು ಕಣದಲ್ಲಿ ಸಿಕ್ಕ 5360/- ರೂಪಾಯಿ ನಗದು ಹಣ ಹಾಗು 52 ಇಸ್ಪೀಟ ಎಲೆಗಳನ್ನು ಹಾಗು 1 ಬಿಳಿ ಬರಕಾವನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ ಅಂತ ಮಾನ್ಯರವರಲ್ಲಿ ವಿನಂತಿ ಇರುತ್ತದೆ."ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!