ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/04/2020

By blogger on ಭಾನುವಾರ, ಏಪ್ರಿಲ್ 19, 2020

                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/04/2020 
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 52/2020 ಕಲಂ 323, 324. 504, 506 ಸಂಗಡ 34 ಐಪಿಸಿ:- ಇಂದು ದಿನಾಂಕ 19-04-2020 ರಂದು 5-30 ಪಿ.ಎಂ ಕ್ಕೆ ಫಿರ್ಯಾಧಿದಾರರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧೀ ಹೇಳಿಕೆ ಸಲ್ಲಿಸಿದ್ದು ಸಾರಾಂಶವೆನೆಂದರೆ ಆರೋಪಿತರ ಮತ್ತು ಫಿರ್ಯಾಧಿಯ ಹೋಲ ಅಕ್ಕಪಕ್ಕದಲ್ಲಿದ್ದು ಆರೋಪಿತರು ಹೋಲದ ಮ್ಯಾರಿಯ ತಮಗೆ  ಸಂಬಂಧಪಟ್ಟ ಗಿಡಗಳು ಈಗಾಗಲೇ ಕಡಿದುಕೊಂಡಿದ್ದು ಆದರೇ ಫಿರ್ಯಾಧಿದಾರರು ತಮಗೆ ಸಂಬಂದಿಸಿದ ಮ್ಯಾರಿಯ ಮೇಲಿದ್ದ ಗಿಡಗಳು ಕಡಿಕೊಂಡಿದ್ದಕ್ಕೆ ಆರೋಪಿತರು ಫಿರ್ಯಾಧಿದಾರರ ಸಂಗಡ ಜಗಳಾ ತೆಗೆದು ಫಿರ್ಯಾಧಿಗೆ ಬಡಿಗೆಯಿಂದ ತಲೆಯ ಮೇಲೆ ಹೋಡೆದು ರಕ್ತಗಾಯ ಗೊಳಿಸಿ ದ್ದು ಅಲ್ಲದೇ ಕೈಯಿಂದ ಹೊಡೆದು ಝೀವದ ಭಯ ಹಾಕಿದ್ದು ಇರುತ್ತದೆ ಅಂತಾ ಫಿರ್ಯಾಧಿ ಸಾರಾಂಶವಿರುತ್ತದೆ.

          

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 68/2020 ಕಲಂ 273, 284 ಐಪಿಸಿ ಮತ್ತು ಕಲಂ 32, 34 ಕೆ.ಇ ಆಠ್ಟಿ್ :- ಇಂದು ದಿನಾಂಕ 19.04.2020 ರಂದು ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಆರೋಪಿತನು ತನ್ನ ಮನೆ ಮುಂದೆ ರಸ್ತೆಯ ಮೆಲೆ ಅಕ್ರಮವಾಗಿ ಕಳ್ಳಬಟ್ಟಿ ಸರಾಯಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಭಾತ್ಮೀ ಮೇರೆಗೆ ಇಬ್ಬರೂ ಪಂಚರನ್ನು ಸಂಗಡ ಕರೆದುಕೊಂಡು ಗಿದ್ದಬಂಡಿ ತಾಂಡಕ್ಕೆ ಹೋಗಿ ಭಾತ್ಮೀ ಇದ್ದ ಸ್ಥಳಕ್ಕೆ ಬೆಳಿಗ್ಗೆ 8.20 ಗಂಟೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನು ಓಡಿ ಹೋದ ಸ್ಥಳದಲ್ಲಿದ್ದ 4 ಲೀಟರ ಕಳ್ಳಬಟ್ಟಿ ಸರಾಯಿ ಒಟ್ಟು ಅದರ ಅ.ಕಿ 1200/-ರೂ ಮೌಲ್ಯದ ಕಳ್ಳಬಟ್ಟಿ ಸರಾಯಿ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಮುದ್ದೆ ಮಾಲು ಮೂಲ ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಓಡಿ ಹೋದ ಆರೋಪಿತನ ವಿರುದ್ದ ಕಾನೂನು ಕ್ರಮಕ್ಕಾಗಿ ವರದಿ ನೀಡಿದ್ದು ಇರುತ್ತದೆ 


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 69/2020 ಕಲಂ: 273, 284 ಐಪಿಸಿ ಮತ್ತು 32, 34 ಕೆಇ ಆಕ್ಟ್:- ದಿನಾಂಕ: 19.04.2020 ರಂದು ಸಂಜೆ 04-00 ಗಂಟೆಗೆ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಗುರುಮಠಕಲ್ ಪಟ್ಟಣದಲ್ಲಿ ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ಸಂಜೆ 04:00 ಗಂಟೆಗೆ ಆರೋಪಿತರು ಪುಟಪಾಕ ತಾಂಡಾದ ಸೇವಾಲಾಲ್ ದೇವರ ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಅಕ್ರಮವಾಗಿ ಮಾನವನು ಸೇವಿಸಿದರೆ ಜೀವಕ್ಕೆ ಹಾನಿಯುಂಟಾಗುವ ಕಳ್ಳಭಟ್ಟಿ ಸರಾಯಿಯನ್ನು ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಹೊರಟು ಸಮಯ ಸಂಜೆ 04:00 ಗಂಟೆಗೆ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳೀ ಮಾಡಿದಾಗ ಅಲ್ಲಿಗೆ ಕುಡಿಯಲು ಮತ್ತು ಕೊಳ್ಳಲು ಬಂದಿದ್ದ ಸಾರ್ವಜನಿಕರೊಂದಿಗೆ ಮಾರಾಟ ಮಾಡುತ್ತಿದ್ದ ಆರೋಪಿತರು ಸಹ ಓಡಿ ಹೋಗಿದ್ದು ಅಲ್ಲಿ ಸ್ಥಳದಲ್ಲಿದ್ದ ಒಂದು ಬಿಳಿ ಬಣ್ಣದ ಪ್ಲಾಸ್ಟೀಕ್ ಕ್ಯಾನ್ನಲ್ಲಿ 4 ಲೀಟರ ಕಳ್ಳಭಟ್ಟಿ ಸರಾಯಿ ಅ.ಕಿ-1200/- ನೇದ್ದನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯ ಮೂಲಕ ಜಪ್ತಿ ಪಡಿಸಿಕೊಂಡು ವಶಕ್ಕೆ ತೆಗೆದುಕೊಂಡು ನಂತರ ಸಮಯ ಸಂಜೆ 05:30 ಗಂಟೆಗೆ ಮರಳಿ ಠಾಣೆಗೆ ಬಂದು ಮುದ್ದೆ ಮಾಲು ಮತ್ತು ಮೂಲ ಜಪ್ತಿಪಂಚನಾಮೆಯನ್ನು ಹಾಜರುಪಡಿಸಿ ದಾಳಿಯ ಕಾಲಕ್ಕೆ ಓಡಿ ಹೋದ ಆರೋಪಿತನ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದ ಅದರ ಸಾರಾಂಶದ ಮೇಲಿಂದ ಪ್ರಕರಣದ ದಾಖಲಿಸಿಕೊಂಡೆನು.  ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 123/2020  ಕಲಂ 87  ಕೆ.ಪಿ ಆಕ್ಟ :- ಇಂದು ದಿನಾಂಕ 19/04/2020 ರಂದು ರಾತ್ರಿ 20-15 ಗಂಟೆಗೆ  ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಹನುಮರಡೆಪ್ಪ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು, 04 ಜನ ಆಪಾಧಿತರು ಹಾಗೂ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ,  ಫಿರ್ಯಾದಿಯವರು ಇಂದು ದಿನಾಂಕ 19/04/2020 ರಂದು ಮದ್ಯಾಹ್ನ 15-45 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ ಅನ್ವರ ಗ್ರಾಮದ  ಹನುಮಾನ ಗುಡಿಯ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ  ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಿಬ್ಬಂದಿ ಮತ್ತು ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ 04 ಜನ ಜೂಜಾಟ ಆಡುತಿದ್ದವರನ್ನು ಹಿಡಿದು ಅವರ ಅಂಗಶೋಧನೆ ಮಾಡಿದಾಗ 8220=00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು ಸಾಯಂಕಾಲ 17-30 ಗಂಟೆಯಿಂದ 18-30 ಗಂಟೆಯ ಅವಧಿಯಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ  ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 123/2020  ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.                                                                                                          ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ;- 70/2020 ಕಲಂ  15[ಎ],32[3]  ಕೆ. ಇ ಯಾಕ್ಟ :- ಇಂದು ದಿನಾಂಕ: 19/04/2020 ರಂದು ಮದ್ಯಾಹ್ನ 3 ಗಂಟೆ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಮುದನೂರ [ಕೆ] ಗ್ರಾಮದ ಶಿವ ದೇವಾಲಯದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಎರಡು ಜನರು ಸರಕಾರದ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯವನ್ನು ಮಾರಾಟ ಮಾಡಿ ಮಧ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದಾರೆಂದು ಮಾಹಿತಿ ಮೇರೆಗೆ ನಾನು ಠಾಣೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಪಂಚರಿಗೂ ಸಹ ಮಾಹಿತಿ ತಿಳಿಸಿ ದಾಳಿ ಮಾಡಲು ಸಹಕರಿಸಲು ತಿಳಿಸಿದ್ದು ಅವರು ಒಪ್ಪಿದ್ದರಿಂದ,  ಠಾಣೆಯಲ್ಲಿದ್ದ ಶಂಕರಗೌಡ ಹೆಚ್ ಸಿ 33, ಬಲರಾಮ ಹೆಚ್ ಸಿ 146, ಶಿವಲಿಂಗಪ್ಪ ಹೆಚ್ ಸಿ 185, ಬೀರಪ್ಪ, ಪಿಸಿ-195, ಚಂದಪ್ಪ ಪಿಸಿ-316, ಸಂಗಮೇಶ ಪಿಸಿ 244, ಹಾಗೂ ಜೀಪ ಚಾಲಕನಾದ ಪೆದ್ದಪ್ಪಗೌಡ ಪಿಸಿ-214 ರವರನ್ನು ಕರೆದುಕೊಂಡು ಸರಕಾರಿ ಜೀಪ ನಂಬರ ಕೆಎ-33 ಜಿ-0074 ಠಾಣೆಯಿಂದ 03.30 ಪಿ.ಎಮ್ಕ್ಕೆ ಹೊರಟು 04 ಪಿಎಮ್ಕ್ಕೆ ಮುದನೂರ [ಕೆ] ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಅಂದರೆ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ಸ್ಥಳದಿಂದ ಸುಮಾರು 100 ಅಡಿ ದೂರದಲ್ಲಿ ನಿಂತು ನಾನು, ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಹೋಗುತ್ತಿದ್ದಾಗ ನಮ್ಮನ್ನು ನೋಡಿ ಅಲ್ಲಿ ಸೇರಿದ್ದ ಜನರು ಓಡಿ ಹೋದರು. ಮಧ್ಯ ಮಾರಾಟ ಮಾಡುತ್ತಿದ್ದವರು ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ನಾನು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ಸದರಿ ವ್ಯಕ್ತಿಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಒಬ್ಬ ವ್ಯಕ್ತಿ ಸಿಕ್ಕಿದ್ದು ಒಬ್ಬ ವ್ಯಕ್ತಿ ಓಡಿ ಹೋಗಿದ್ದು ಸಿಕ್ಕ ವ್ಯಕ್ತಿಯ ಹೆಸರು ಮತ್ತು ವಿಳಾಸವನ್ನು ವಿಚಾರಿಸಲು ಮಂಜುನಾಥ ತಂದೆ ಯಂಕೋಬಾ  ಗುತ್ತೆದಾರ ವ|| 35 ಜಾ|| ಈಳಗೇರ ಉ|| ಕೂಲಿಕೆಲಸ ಸಾ|| ಮುದನೂರ [ಕೆ] ಅಂತ ತಿಳಿಸಿದ್ದು ನಂತರ ಓಡಿ ಹೋದ ವ್ಯಕ್ತಿಯ ಬಗ್ಗೆ ಸಿಕ್ಕ ವ್ಯಕ್ತಿಯಿಂದ ವಿಚಾರಿಸಿ ತಿಳಿಯಲಾಗಿ ಸಿದ್ದಪ್ಪ ತಂದೆ ಮಹಾದೇವಪ್ಪ ಗುತ್ತೆದಾರ ಸಾ|| ಮುದನೂರ [ಕೆ] ಅಂತ ತಿಳಿಸಿದನು. ನಂತರ ಸದರಿ ಸ್ಥಳದಲ್ಲಿದ್ದ ಒಂದು ಹಳೆಯ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿ ನೋಡಲಾಗಿ ಅದರಲ್ಲಿ ಮಧ್ಯ ತುಂಬಿದ್ದು ಸದರ ಚೀಲದಲ್ಲಿ 90 ಎಮ್ಎಲ್ನ ಓರಿಜಿನಲ್ ಚೊಯಿಸ್ನ ಒಟ್ಟು 10 ಪೌಚುಗಳು ಇದ್ದು ಒಂದು ಪೌಚಿನ ಬೆಲೆ 30.32 ಪೈಸೆ ಅಂತ ಇದ್ದು ಒಟ್ಟು 10 ಪೌಚ್ಗಳ ಬೆಲೆ 303.20/- ರೂ ಆಗುತ್ತಿದ್ದು ನಂತರ ಮಂಜುನಾಥನಿಗೆ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಮಾರಾಟ ಮಾಡಲು ಹಾಗೂ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದರ ಬಗ್ಗೆ ಯಾವುದಾದರು ಅಧಿಕೃತ ಪರವಾನಿಗೆ ಇದೆಯೇ ಎಂದು ವಿಚಾರಿಸಲಾಗಿ, ತಮ್ಮ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದನು. ಸದರಿ ಮಧ್ಯ ತುಂಬಿದ 90 ಎಮ್ಎಲ್ನ 10 ಓರಿಜಿನಲ್ ಚ್ವಾಯೀಸ್ ಪೌಚ್ಗಳನ್ನು 4 ಪಿ.ಎಮ್ದಿಂದ 5 ಪಿ.ಎಮ್ದವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತಪಡಿಸಿಕೊಳ್ಳಲಾಯಿತು, ನಂತರ ಮೇಲ್ಕಂಡ ಆರೋಪಿಯನ್ನು 5.30 ಪಿ.ಎಮ್ಕ್ಕೆ ಠಾಣೆಗೆ ಕರೆದುಕೊಂಡು ಬಂದು ಸದರಿ ಆರೋಪಿತನ ವಿರುದ್ದ ಕಲಂ: 15 (ಎ), 32 (3) ಕೆಇ ಆಕ್ಟ ರೀತ್ಯಾ ಕ್ರಮ ಜರುಗಿಸಲು ಈ ನನ್ನ ವಿಶೇಷ ವರದಿಯನ್ನು ನೀಡಿದ್ದರ ಸಾರಾಂಶ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 70/2020 ಕಲಂ: 15 (ಎ), 32 (3) ಕೆಇ ಆಕ್ಟ ನೇದ್ದರ ಪ್ರಕರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಅದೆ.  ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ:- 108/2020 273, 328 ಐಪಿಸಿ ಮತ್ತು ಕಲಂ.32, 34 ಕೆ ಇ ಕಾಯ್ದೆ 1965:-           ಇಂದು ದಿನಾಂಕ: 19/04/2020 ರಂದು ಮಧ್ಯಾಹ್ನ 01-30 ಗಂಟೆಗೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ ಸರಕಾರಿ ತಫರ್ೇ ಫಿರ್ಯಾಧಿ ಶ್ರೀ ಎಸ್.ಎಮ್,ಪಾಟೀಲ ಪಿ.ಐ ಸುರಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ:19-04-2020 ರಂದು ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ಸುರಪೂರ-ಶಹಾಪೂರ ಮುಖ್ಯ ರಸ್ತೆಯ ಹತ್ತಿರ ಇರುವ ಮರೆಮ್ಮ ದೇವಿಯ ಗುಡಿಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ಮಧ್ಯಾಹ್ನ 01-30 ಗಂಟೆಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಮಾಡಿದ್ದು ಆರೋಪಿತನು ಓಡಿ ಹೋಗಿದ್ದು ಸ್ಥಳದಲ್ಲಿದ್ದ ಅಂದಾಜು 30 ಲೀಟರನಷ್ಟು ಕಳ್ಳಭಟ್ಟಿ ಸರಾಯಿ ಅ.ಕಿ 6000 ಕಿಮ್ಮತ್ತಿನದು ಇದ್ದು ಅದರಲ್ಲಿ ಪರೀಕ್ಷೆ ಕುರಿತು ಅರ್ಧ ಲೀಟರನಷ್ಟು ಪ್ರತ್ಯಕವಾಗಿ ಜಪ್ತಿ ಪಡಿಸಿಕೊಂಡು  ಸದರಿ ಮುದ್ದೆಮಾಲು ಸಮೇತ  ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಸದರಿ  ಆರೋಪಿತನ ವಿರುದ್ದ ಠಾಣೆ ಗುನ್ನೆ ನಂ 108/2020 ಕಲಂ 273, 328 ಐ.ಪಿ.ಸಿ ಮತ್ತು ಕಲಂ.32, 34 ಕೆ ಇ ಕಾಯ್ದೆ 1965 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ:- 109/2020 ಕಲಂ: 87 ಕೆ.ಪಿ.ಕಾಯ್ದೆ;- ಇಂದು ದಿನಾಂಕ: 19/04/2020 ರಂದು 8:30 ಪಿ.ಎಮ್. ಕ್ಕೆ ನಾನು ಠಾಣೆಯಲ್ಲಿದ್ದಾಗಶ್ರೀ ಎಸ್.ಎಂ ಪಾಟೀಲ್ ಪಿಐ ಸಾಹೇಬರು ಸುರಪೂರ ಪೊಲೀಸ್ಠಾಣೆರವರು 9 ಜನಆರೋಪಿತರೊಂದಿಗೆಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ಠಾಣೆಗೆ ಬಂದು ವರದಿ ಸಾರಾಂಶವೆನಂದರೆಇಂದು ದಿನಾಂಕ:19/04/2020 ರಂದು 5 ಪಿ.ಎಂ ಸುಮಾರಿಗೆಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ಠಾಣಾ ವ್ಯಾಪ್ತಿಯಗೋಡಿಹಾಳ ಟಿ ಗ್ರಾಮದಜನತಾ ಮಡ್ಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿದ್ದಾರೆಅಂತಾಖಚಿತ ಬಾತ್ಮಿ ಬಂದ ಮೇರೆಗೆ, ನಾನು ಮತ್ತುಚಂದ್ರಶೇಖರ ಪಿಎಸ್ಐ (ಕಾ&ಸು-2) ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ನಿಂಗಪ್ಪ ಹೆಚ್ಸಿ-118 3) ಶ್ರೀ ಮನೋಹರ ಹೆಚ್ಸಿ-106 4) ಶ್ರೀ ದೇವಿಂದ್ರಪ್ಪ ಸಿಪಿಸಿ-184 5) ಶ್ರೀ ಮಂಜುನಾಥ ಸಿಪಿಸಿ-271 6) ಶ್ರೀ ಪರಮೇಶ ಸಿಪಿಸಿ-142 7) ಶ್ರೀ ಬಸವರಾಜ ಸಿಪಿಸಿ-180 8) ಬಸಪ್ಪ ಸಿಪಿಸಿ-393 9) ಶ್ರೀ ಜಗದೀಶ ಸಿಪಿಸಿ-335, 10) ಶ್ರೀ ವಿರೇಶ ಸಿಪಿಸಿ-374, 11) ರವಿಕುಮಾರ ಸಿಪಿಸಿ-376, 12) ಶ್ರೀ ಮಾನಯ್ಯ ಸಿಪಿಸಿ-372, 13) ಶ್ರೀ ಶರಣಗೌಡ ಸಿಪಿಸಿ-218 ವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ಮಲ್ಲನಗೌಡತಂದೆ ಪರಮಣ್ಣಗೌಡ ಮಾಲಿ ಪಾಟೀಲ್ ವ|| 34 ವರ್ಷಜಾ|| ಬೇಡರು ಉ|| ವ್ಯಾಪಾರ ಸಾ|| ಗೋಡಿಹಾಳ ಟಿ 2) ಶ್ರೀ ಬಡೆಸಾಬ ತಂದೆ ಬಾಸುಮಿಯಾ ಮುಲ್ಲಾ ವ|| 28 ವರ್ಷಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಗೋಡಿಹಾಳ ಟಿ ಇವರನ್ನು 5:15 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡುಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 5:30 ಪಿ.ಎಂ ಕ್ಕೆ ಒಂದು ಖಾಸಗಿ ವಾಹನ ನೇದ್ದರಲ್ಲಿಠಾಣೆಯಿಂದ ಹೊರಟು 6:25 ಪಿ.ಎಂ ಕ್ಕೆ ಗೋಡಿಹಾಳ ಟಿ ಗ್ರಾಮದಜನತಾ ಮಡ್ಡಿ ಹತ್ತಿರಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಮಡ್ಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದಒಮ್ಮೆಲೆಅವರ ಮೇಲೆ 6:30 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿಒಟ್ಟು 9 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ಗುರುದೇವತಂದೆದೇವಿಂದ್ರಪ್ಪಕೋರಿ ವ|| 35 ವರ್ಷಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಚನ್ನಪಟ್ಟಣ ಇವನ ಹತ್ತಿರ 2100/- ರೂಗಳು ದೊರೆತವು 2) ಅಂಬ್ರಣ್ಣತಂದೆ ನಿಂಗಣ್ಣಚಿಂಚೋಡಿ ವ|| 25 ವರ್ಷಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಚನ್ನಪಟ್ಟಣ ಇವನ ಹತ್ತಿರ 2550/- ರೂಗಳು ದೊರೆತವು 3) ದೇವಪ್ಪತಂದೆ ಸೋಮಣ್ಣ ಹುಡೆದವರ ವ|| 26 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ಚನ್ನಪಟ್ಟಣ ಇವನ ಹತ್ತಿರ 2500/- ರೂಗಳು ದೊರೆತವು 4) ಹಣಮಂತ್ರಾಯತಂದೆ ನಿಂಗಪ್ಪ ನಾಯ್ಕೋಡಿ ವ|| 60 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ಚನ್ನಪಟ್ಟಣ ಇವನ ಹತ್ತಿರ 2000/- ರೂಗಳು ದೊರೆತವು 5) ರಾಮಣ್ಣತಂದೆ ಭೀಮಣ್ಣ ಹೊಂಡಿಕರ ವ|| 32 ವರ್ಷಜಾ|| ಬೇಡರು ಉ|| ಕೂಲಿ ಕೆಲಸ ಸಾ|| ಗೊಡಿಹಾಳ ಟಿ ಇವನ ಹತ್ತಿರ 2050/- ರೂಗಳು ದೊರೆತವು 6) ದೇವಗೌಡತಂದೆ ಹಣಮಂತ್ರಾಯಗೌಡ ಪೊಲೀಸ್ ಪಾಟೀಲ್ ವ|| 28 ವರ್ಷಜಾ|| ಬೇಡರು ಉ|| ಕೂಲಿ ಕೆಲಸ ಸಾ|| ಗೋಡಿಹಾಳ ಟಿ ಇವನ ಹತ್ತಿರ 1750/- ರೂಗಳು ದೊರೆತವು 7) ಶಣ್ಮೂಖಸ್ವಾಮಿತಂದೆಚನ್ನಬಸವ ಸ್ವಾಮಿ ಮಠ ವ|| 45 ವರ್ಷಜಾ|| ಜಂಗಮ ಉ|| ಒಕ್ಕಲುತನ ಸಾ|| ಹಾಲಭಾವಿ ಇವನ ಹತ್ತಿರ 2050/- ರೂಗಳು ದೊರೆತವು 8) ರಾಮಣಗೌಡತಂದೆ ನಂದಪ್ಪಗೌಡ ಪೊಲೀಸ್ ಪಾಟೀಲ್ ವ|| 38 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ಗೋಡಿಹಾಳ ಇವನ ಹತ್ತಿರ 2200/- ರೂಗಳು ದೊರೆತವು 9) ಮಲ್ಲಿಕಾಜರ್ುನತಂದೆಅಮರೇಶ ಬಾವಿಕಟ್ಟಿ ವ|| 28 ವರ್ಷಜಾ|| ಲಿಂಗಾಯತ ಉ|| ಡ್ರೈವರ ಸಾ|| ಗೋಡಿಗಹಾಳ ಇವನ ಹತ್ತಿರ 2400/- ರೂಗಳು ದೊರೆತವುಇದಲ್ಲದೆ ಪಣಕ್ಕೆಇಟ್ಟ ಹಣ 22,500/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 42,100/- ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿಜಪ್ತಿ ಪಂಚನಾಮೆಯನ್ನು 6:30 ಪಿ.ಎಮ್ ದಿಂದ 7:30 ಪಿ.ಎಮ್ ವರೆಗೆಜೀಪ್ನ ಲೈಟಿನ ಬೆಳಕಿನಲ್ಲಿ ಬರೆದುಕೊಂಡಿದ್ದುಇರುತ್ತದೆ. ನಂತರ 9 ಜನಆರೋಪಿರೊಂದಿಗೆ ಮರಳಿ ಠಾಣೆಗೆ ಬಂದು ಸದರಿಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದುಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!