ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/04/2020

By blogger on ಶನಿವಾರ, ಏಪ್ರಿಲ್ 18, 2020
                                   ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/04/2020 
 ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 43/2020 ಕಲಂ:504,341,506 ಸಂ 34 ಐಪಿಸಿ:- ಇಂದು ದಿನಾಂಕ: 18/04/2020 ರಂದು 5-30 ಪಿಎಮ್ ಕ್ಕೆ ಶ್ರೀ ಮಹಾದೇವಪ್ಪ ತಂದೆ  ಮರೆಪ್ಪ ಶೇಕ್ಸಿಂಧೆ ವ.62 ಜಾ.ಕಬ್ಬಲಿಗರು ಉ. ಒಕ್ಕಲುತನ ಸಾ. ಬೆನಕನಹಳ್ಳಿ ತಾ.ವಡಗೇರಾ ರವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ ಸಾರಾಂಶವೇನಂದರೆ ನನ್ನ ಎರಡನೇ ಮಗಳಾದ ಮಹಾಲಕ್ಷ್ಮಿಯವರಿಗೆ  ಯಾದಗಿರಿ ತಾಲ್ಲೂಕಿ ಬಾಡಿಯಾಲ ಗ್ರಾಮದ  ಹಣಮಂತ್ರಾಯ ತಂದೆ ತಿಪ್ಪಣ್ಣ ರಾಮಣ್ಣನವರು ಇತನೋಂದಿಗೆ  ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಲಗ್ನ ಮಾಡಿಕೊಟ್ಟಿರುತ್ತದೆ ನನ್ನ ಮಕ್ಕಳು ಮತ್ತು ಕುಟುಂಬಗೋಸ್ಕರ ನನಗೆ ಸಾಲವಾಗಿದ್ದು ಆ ಸಾಲ ತೀರಿಸಬೇಕೆಂದು ನನ್ನ ಸ್ವಂತ ಜಮೀನು ಮಾರಾಟ ಮಾಡಬೇಕೆಂದು ನಿರ್ಧರಿಸಿದನು ಆಗ  ನನ್ನ ಅಳಿಯನಾದ ಹಣಮಂತ್ರಾಯನು ನಾನು ಖರೀದಿ ಮಾಡುತ್ತೇನೆ ಎಂದೂ ಅಂದಾಡುತ್ತಿದ್ದನು. ಹೀಗಿದ್ದು ದಿನಾಂಕ 16/04/2020 ರಂದು ಬೆಳ್ಳಗೆ 10:00 ಗಂಟೆ ಸುಮಾರಿಗೆ ನನ್ನ ಅಳಿಯನಾದ ಹಣಮಂತ್ರಾಯ ತಂದೆ ತಿಪ್ಪಣ್ಣ ರಾಮಣ್ಣನವರು ಮತ್ತು ಆತನ ಮಗನಾದ ಯಲ್ಲಪ್ಪ ತಂದೆ ಹಣಮಂತ್ರಾಯ ರಾಮಣ್ಣನವರು ಇಬ್ಬರೂ.ಸಾ. ಬಾಡಿಯಾಲ ಸೇರಿ ನನ್ನ ಮನೆಗೆ ಬಂದು ಸದರಿ ಹೊಲ ಕಡಿಮೆ ಬೆಲೆಗೆ ನಮಗೆ ಖರೀದಿ ಕೊಡು ಎಂದೂ ಕೇಳಿದಾಗ  ನಾನು ಹೀಗ ಏನು ಬೆಲೆಗೆ ನಡೆದಿದೆ ಅದೇ ಬೆಲೆಗೆ  ಮಾರಾಟ ಮಾಡುತ್ತೇನೆ  ನೀವು ಬೇಕಾದರೆ ಖರೀದಿ ಮಾಡಿ ಎಂದೂ ಹೇಳಿ ನಾನು ಮನೆ ಮುಂದಿನಿಂದ  ಹೊರಗಡೆ ಹೋಗುತ್ತಿದಾಗ  ನನಗೆ ನನ್ನ ಅಳಿಯ ಮತ್ತು ನನ್ನ ಮೊಮ್ಮಗ ಇಬ್ಬರೂ ಸೇರಿ ತಡೆದು ನನಗೆ ನಿಲ್ಲಿಸಿ ಎಲ್ಲಿಗೆ ಹೋಗುತ್ತಿ ಮಗನೇ ಎಷ್ಟೇ ಆದರೂ  ಹೊಲ ನಮಗೆ ಕೊಡಬೇಕೆಂದು ಜಗಳ ತೆಗದು ಇಬ್ಬರೂ ಸೇರಿ ಕೈಯಿಂದ ಮುಷ್ಟಿ ಮಾಡಿ ಮುಖಕ್ಕೆ ಎದೆಗೆ ಹೊಟ್ಟೆಗೆ ಗುದ್ದಿದ್ದರು. ಆಗ ಅಲ್ಲಿಯೇ ಇದ್ದ ಯಂಕಪ್ಪ ತಂದೆ ಭೀಮರಾಯ ಮತ್ತು ಪರಪ್ಪ ತಂದೆ ಭೀಮರಾಯ ಇವರು ಇಬ್ಬರೂ ಬಂದು ನನಗೆ ಹೊಡೆಯವುದನ್ನು ಬಿಡಿಸಿದ್ದರು. ಕಾರಣ ಜಮೀನು ಕಡಿಮೆ ಬೆಲೆಗೆ ನಮಗೆ ಮಾರಾಟ ಮಾಡಬೇಕೆಂದು ಜಗಳ ತೆಗೆದು ಹೊಡೆ-ಬಡೆ ಮಾಡಿದ ಮೇಲ್ಕಂಡ ಜನರ ಮೇಲೆ ಕಾನೂನು ಕ್ರಮ ಜರಗಿಸಲು ವಿನಂತಿ  ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಬಂದು ದೂರು ಕೊಡಲು  ತಡವಾಗಿರುತ್ತದೆ ಎಂದು ಕೊಟ್ಟ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 43/2020 ಕಲಂ: 504,341,323 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

          

ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 48/2020  ಕಲಂ 273, 328 ಐಪಿಸಿ & 32, 34 ಕೆಇ ಯಾಕ್ಟ:- ಇಂದು ದಿನಾಂಕ:18.04.2020 ರಂದು 06.00 ಪಿ.ಎಮ್ ಕ್ಕೆ ಆರೋಪಿತನು ಭೀ.ಗುಡಿಯ ಹೊತಪೇಟ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 5 ಲೀಟರನ 1 ಪ್ಲಾಸ್ಟಿಕ ಡಬ್ಬಿಯಲ್ಲಿ ಅಂದಾಜು 4 ಲೀಟರದಷ್ಟು ಕಳ್ಳಭಟ್ಟಿ ಸರಾಯಿಯನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ಪಂಚರ ಸಮಕ್ಷಮ ಫಿಯರ್ಾದಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಕಳ್ಳಭಟ್ಟಿ ಸರಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಆರೋಪಿತನು ಅನರ್ಹವಾದಂತಹ ಸ್ಥಿತಿಯಲ್ಲಿರುವ ಪದಾರ್ಥವು ಮಾನವ ಜೀವಕ್ಕೆ ಸೇವಿಸಲು ಹಾನಿಕಾರವಾಗಿದೆ ಎಂದು ತಿಳಿದೂ ಈ ಪದಾರ್ಥವನ್ನು ಮಾರಾಟ ಮಾಡಿದ್ದು ಅಲ್ಲದೆ ಸದರ ಪಾನೀಯ (ಕಳ್ಳಭಟ್ಟಿ ಸರಾಯಿ) ಸೇವನೆಯಿಂದ ಮಾನವ ಜೀವಕ್ಕೆ ಹಾನಿ ಇದೆ ಎಂದು ತಿಳಿದೂ ಮಾರಾಟ ಮಾಡುತ್ತಿದ್ದರಿಂದ ಸದರ ಕಳ್ಳಭಟ್ಟಿ ಸರಾಯಿಯನ್ನು ಪಂಚರ ಸಮಕ್ಷಮ 06.10 ಪಿ.ಎಮ್ ದಿಂದ 07.00 ಪಿ.ಎಮ್. ವರೆಗೆ  ಜಪ್ತಿಪಡಿಸಿಕೊಂಡು ಮರಳಿ ಠಾಣೆಗೆ ಬಂದು ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಅದೆ. ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 120/2020  ಕಲಂ 87  ಕೆ.ಪಿ ಆಕ್ಟ:- ಇಂದು ದಿನಾಂಕ 18/04/2020 ರಂದು ಸಾಯಂಕಾಲ 18-15 ಗಂಟೆಗೆ  ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಹನುಮರಡೆಪ್ಪ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು, 11 ಜನ ಆಪಾಧಿತರು ಹಾಗೂ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ,  ಫಿರ್ಯಾದಿಯವರು ಇಂದು ದಿನಾಂಕ 18/04/2020 ರಂದು ಮದ್ಯಾಹ್ನ 15-15 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ ಶಹಾಪೂರ ಪಟ್ಟಣ್ಣದ  ಹಳಿ ಪೇಠ ಏರಿಯಾದಲ್ಲಿ ಬರುವ ರಾಘವೇಂದ್ರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ  ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಿಬ್ಬಂದಿ ಮತ್ತು ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ 11 ಜನ ಜೂಜಾಟ ಆಡುತಿದ್ದವರನ್ನು ಹಿಡಿದು ಅವರ ಅಂಗಶೋಧನೆ ಮಾಡಿದಾಗ 4750 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು ಸಾಯಂಕಾಲ 16-30 ಗಂಟೆಯಿಂದ 17-30 ಗಂಟೆಯ ಅವಧಿಯಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ  ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 120/2020  ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 121/2020 273, 328 ಐಪಿಸಿ ಮತ್ತು 32. 34.ಕೆ.ಇ.ಯಾಕ್ಟ:- ಇಂದು ದಿನಾಂಕ: 18/04/2020 ರಂದು 19-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾಧಿ ಶ್ರೀ   ಚಂದ್ರಕಾಂತ ಪಿ.ಎಸ್.ಐ.(ಕಾ.ಸೂ) ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ ಮೂಲ ಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ಇಂದು 14-00 ಗಂಟೆಯ ಸುಮಾರಿಗೆ ಠಾಣೆಯಲ್ಲಿದ್ದಾಗ ಬಲಕಲ್ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಅಕ್ರಮವಾಗಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿದ್ದು ಒಬ್ಬ ಆರೋಪಿ ಸ್ಥಳದಲ್ಲಿದ್ದ ಅಂದಾಜು 2 ಲೀಟರನಷ್ಟು ಕಳ್ಳಭಟ್ಟಿ ಸರಾಯಿ ಅಂ.ಕಿ 400 ಕಿಮ್ಮತ್ತಿನದು ಅದರಲ್ಲಿ ಪರೀಕ್ಷೆ ಕುರಿತು ಅರ್ಧ ಲೀಟರನಷ್ಟು ಪ್ರತ್ಯಕವಾಗಿ ಪಡೆದುಕೊಂಡಿರುತ್ತದೆ ಸದರಿ ಮುದ್ದೆಮಾಲನ್ನು 16-00 ಗಂಟೆಯಿಂದ 17-00 ಗಂಟೆಯವರೆಗೆ  ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಸದರಿ  ಆರೋಪಿತನ ವಿರುದ್ದ ಠಾಣೆ ಗುನ್ನೆ ನಂ  121/2020 ಕಲಂ 273, 328 ಐ.ಪಿ.ಸಿ ಮತ್ತು 32. 34 ಕೆ.ಇ. ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ;- 122/2020. ಕಲಂ 273, 328 ಐಪಿ.ಸಿ.ಮತ್ತು 32, 34 ಕೆ.ಇ. ಆಕ್ಟ:- ಆರೋಪಿತರು ದಿನಾಂಕ: 18-04-2020 ರಂದು 8:20 ಪಿ.ಎಮ್.ಕ್ಕೆ  ಆರೋಪತರು ಇಬ್ರಾಹಿಂಪೂರ ಗ್ರಾಮದಲ್ಲಿ ಕಳ್ಳಬಟ್ಟಿ ಸಾರಾಯಿ ಕುಡಿದರೆ ಮಾನವನ ಜೀವಕ್ಕೆ ಅಪಾಯವೆಂದು ಗೊತ್ತಿದ್ದರೂ ಸಹಿತ ಕಳ್ಳಬಟ್ಟಿ ಸಾರಾಯಿಯನ್ನು ಮಾರಾಟದಲ್ಲಿ ತೊಡಗಿದ್ದಾಗ ಫಿಯರ್ಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮದಲ್ಲಿ ಹೊಗಿ ದಾಳಿಮಾಡಿ ಆರೋಪಿತರಿಂದ 2 ಲೀಟರ ಕಳ್ಳಬಟ್ಟಿ ಸಾರಾಯಿ ವಶಪಡಿಸಿಕೊಂಡು  ತಂದು ಹಾಜರು ಪಡಿಸಿ ಕ್ರಮ ಜರುಗಿಸಲು ಸೂಚಿಸಿದ್ದು ಅದರ ಆಧಾರದ ಮೇಲಿಂದ ಠಾಣೆ ಗುನ್ನೆ ನಂ. 122/2020 ಕಲಂ. 273, 328 ಐ.ಪಿ.ಸಿ. ಮತ್ತು 32, 34 ಕೆ.ಇ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!