ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/04/2020
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 51/2020 ಕಲಂ 279, 337, 338, 304(ಎ) ಐಪಿಸಿ:- ಇಂದು ದಿನಾಂಕ 17/04/2020 ರಂದು 4-30 ಎ.ಎಂ. ಕ್ಕೆ ಜಿಜಿಎಚ್ ಯಾದಗಿರಿಯಿಂದ ಗಾಯಾಳು ಎಂ.ಎಲ್.ಸಿ. ಪೋನ ಮಾಹಿತಿ ಮೇರೆಗೆ ನಾನು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳುದಾರರ ಸಂಬಂಧಿಕರಾದ ಶ್ರೀ ನಾಗಪ್ಪ ತಂದೆ ಅಣ್ಣಪ್ಪ ಆವಂಟಗೇರ ಸಾ: ಪಂಗರಗಾ ತಾ: ಚಿಂಚೋಳಿ ಇವರ ಹೇಳಿಕೆಯನ್ನು ಪಡೆದುಕೊಂಡ ಸಾರಾಂಶವೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು, ನಾನು, ನನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಸುಮಾರು ವರ್ಷಗಳಿಂದ ಬೆಂಗಳೂರಿನ ಫಣಿಚಂದ್ರ ಎಂಬ ಏರಿಯಾದಲ್ಲಿ ಇದ್ದಿರುತ್ತೆವೆ, ಈಗ ಸುಮಾರು ದಿವಸಗಳಿಂದ ಬೆಂಗಳೂರಿನಲ್ಲಿ ಕೋರೋನಾ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತಿರುವ ಹಿನ್ನಲೆಯಲ್ಲಿ ಸರಕಾರವು ಲಾಕ್ ಡೌನ್ ಘೋಷಣೆ ಮಾಡಿದ್ದು, ಆದ್ದರಿಂದ ಮನೆಯಿಂದ ನಮಗೆ ಆಚೆ ಬರಲು ಸಾಧ್ಯವಾಗದೇ ಹಾಗೂ ಕೂಲಿ ಕೆಲಸ ಮಾಡದೇ ಹೆಂಡತಿ ಮಕ್ಕಳಿಗೆ ಬಹಳ ತೊಂದರೆ ಆಗಿತ್ತು, ಹೀಗಾಗಿ ನಾನು ನಮ್ಮ ಸ್ವಂತ ಊರಿಗೆ ಬರಬೇಕೆಂದರೆ ಸಾಧ್ಯವಾಗಿರಲಿಲ್ಲ,
ಹೀಗಿದ್ದು ನಿನ್ನೆ ದಿನಾಂಕ 16/04/2020 ರಂದು ಮಧ್ಯಾಹ್ನ ಸುಮಾರಿಗೆ ಹುಸೇನಸಾಬ ಸಾಃ ಸೂಳೆಭಾವಿ ತಾಃ ಹುನಗುಂದ ಎಂಬುವವನು ನನಗೆ ಪರಿಚಯವಿದ್ದು, ಆತನಿಗೆ ತನ್ನ ಕಾರಿನಲ್ಲಿ ನಮಗೆ ನಮ್ಮೂರಿಗೆ ತೆಗೆದುಕೊಂಡು ಒಯ್ದು ಬಿಡಬೇಕು ಅಂತಾ ಕೇಳಿದಾಗ ಅವನು ನಮ್ಮ ಜೋತೆಗೆ ಬಾಡಿಗೆ ಮಾತಾಡಿದನು, ನಂತರ ಅವನು ನಮ್ಮೂರಿಗೆ ಹೋಗಲು ಕಾರಿನ ಪಾಸ್ ತೆಗೆದುಕೊಂಡು ಬರುವದಾಗಿ ಹೇಳಿ ಹೋಗಿ ಸಾಯಂಕಾಲ 7-00 ಗಂಟೆಯ ಸುಮಾರಿಗೆ ನಾವು ವಾಸವಾಗಿ ಇರುವ ಫಣಿಚಂದ್ರ ಏರಿಯಾಕ್ಕೆ ಬಂದನು, ಅವನ ಕಾರ ನಂ ಕೆ.ಎ-26-ಎ-6418 ಅಂತಾಯಿದ್ದು, ಆ ಕಾರಿನಲ್ಲಿ 1)ನಾನು, ನನ್ನ ಹೆಂಡತಿಯಾದ 2)ಸಂಗೀತಾ, ನನ್ನ ಮಕ್ಕಳಾದ 3)ವಿಜಯ 4)ವಿನೋಧ 5)ವಿಕಾಸ ಮತ್ತು ನನಗೆ ಸಂಬಂಧಿಕರಾದ 6)ಕಲಾವತಿ ಗಂಡ ಈಶ್ವರ, ಇವರ ಮಕ್ಕಳಾದ 7)ಗಿರಿಜಾ ತಂದೆ ಈಶ್ವರ ಮತ್ತು 8)ನರಸಿಂಗ @ ಶ್ರೀಕಾಂತ ತಂದೆ ಈಶ್ವರ ನಾವೆಲ್ಲರೂ ಕೂಡಿಕೊಂಡು ಕುಳಿತುಕೊಂಡೆವು, ನಂತರ ಕಾರ ಚಾಲಕನು ತನ್ನ ಕಾರನ್ನು ಓಡಿಸಿಕೊಂಡು ಬೆಂಗಳೂರಿನಿಂದ ನಮ್ಮೂರ ಕಡೆಗೆ ಓಡಿಸಿಕೊಂಡು ಹೋಗುತ್ತಿದ್ದನು, ಇಂದು ದಿನಾಂಕ 17/04/2020 ರಂದು ಬೆಳಗಿನ ಜಾವ ರಾಯಚೂರ ಮಾರ್ಗಗವಾಗಿ ರಾಮಸಮುದ್ರ ಗ್ರಾಮದ ಕಡೆಗೆ ಬರುವಾಗ ಮಾರ್ಗಮದ್ಯ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಮೈಲಾಪೂರ-ರಾಮಸಮುದ್ರ ರೋಡಿನ ಮೇಲೆ ಕಾರ ಪಲ್ಟಿ ಮಾಡಿ ಅಪಘಾತ ಮಾಡಿದನು, ಈ ಅಪಘಾತದಲ್ಲಿ ನನಗೆ ಯಾವುದೇ ಗಾಯಗಳು ಆಗಿರುವದಿಲ್ಲ, ಆದರೆ ನನ್ನ ಹೆಂಡತಿ ಸಂಗೀತಾ, ನನ್ನ ಮಕ್ಕಳಾದ ವಿಜಯ, ವಿನೋಧ, ವಿಕಾಸ ಮತ್ತು ನನ್ನ ಸಂಬಂಧಿಕರಾದ ಗಿರಿಜಾ ತಂದೆ ಈಶ್ವರ ಮತ್ತು ನರಸಿಂಗ @ ಶ್ರೀಕಾಂತ ತಂದೆ ಈಶ್ವರ ಮತ್ತು ಕಾರ ಚಾಲಕ ಹುಸೇನಸಾಬ ಇವರೆಲ್ಲರಿಗೆ ಭಾರಿ ರಕ್ತಗಾಯ, ಗುಪ್ತಗಾಯ ಮತ್ತು ತರಚಿದ ಗಾಯಗಳು ಆಗಿದ್ದವು, ಕಲಾವತಿ ಗಂಡ ಈಶ್ವರ ಇವಳಿಗೆ ತಲೆಗೆ ಭಾರಿ ರಕ್ತಗಾಯ, ಗುಪ್ತಗಾಯ ಮತ್ತು ಎದೆಗೆ, ಬೆನ್ನಿಗೆ ಭಾರಿ ಗುಪ್ತಗಾಯಗಳು ಹಾಗೂ ಅಲ್ಲಲ್ಲಿ ತರಚಿದಗಾಯಗಳು ಆಗಿದ್ದವು, ಸ್ವಲ್ಪ ಸಮಯದ ನಂತರ ಅಲ್ಲಿಗೆ 108 ಅಂಬುಲೆನ್ಸ ವಾಹನ ಬಂದಿದ್ದು, ಆಗ ನಾನು ಗಾಯ ಹೊಂದಿದ್ದ ಎಲ್ಲರನ್ನು ಆ ವಾಹನದಲ್ಲಿ ಹಾಕಿಕೊಂಡು ಉಪಚಾರಕ್ಕಾಗಿ ಯಾದಗಿರಿ ಜಿಜಿಎಚ್ ಕ್ಕೆ ಬರುವಾಗ ಮಾರ್ಗದಲ್ಲಿ ರಾಮಸಮುದ್ರ ಹತ್ತಿರ ಕಲಾವತಿ ಇವಳು ಬೆಳಗಿನ ಜಾವ 4-00 ಗಂಟೆಗೆ ಸತ್ತಿರುತ್ತಾಳೆ, ಈ ಅಪಘಾತವು ಇಂದು ದಿನಾಂಕ 17/04/2020 ರಂದು ಬೆಳಗಿನ ಜಾವ 3-30 ಗಂಟೆಗೆ ನಡೆದಿರುತ್ತದೆ, ಈ ಅಪಘಾತವು ಕಾರ ಚಾಲಕನಾದ ಹುಸೇನಸಾಬ ತಂದೆ ನಬಿಸಾಬ ನಧಾಫ್ ಇತನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗಿದ್ದರಿಂದ ಕಾರ ಪಲ್ಟಿಯಾಗಿ ಈ ಅಪಘಾತ ಸಂಭವಿಸಿದ್ದು ಇರುತ್ತದೆ, ಆದ್ದರಿಂದ ಕಾರ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 51/2020 ಕಲಂ 279, 337, 338, 304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 46/2020 ಕಲಂ 379 ಐಪಿಸಿ ಮತ್ತು 44(1) ಕೆಎಮ್ಎಮ್ಸಿ ರೂಲ್ 1994:- ಇಂದು ದಿನಾಂಕ: 17/04/2020 ರಂದು 7.50 ಎ.ಎಂ.ಕ್ಕೆ ಮಾನ್ಯ ಸಿಪಿಐ ಶಹಾಪುರ ವೃತ್ತ ರವರು ಮರಳು ತುಂಬಿದ ಒಂದು ಟ್ರಾಕ್ಟರ್ದೊಂದಿಗೆ ಬಂದು ವರದಿ ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ ಇಂದು ದಿನಾಂಕ 17/04/2020 ರಂದು 6 ಎ.ಎಮ್. ಕ್ಕೆ ಶಿರವಾಳ ಗ್ರಾಮದಲ್ಲಿನ ಅಣಬಿ ಕ್ರಾಸ್ ಹತ್ತಿರ ಇದ್ದಾಗ ಅದೇ ಸಮಯಕ್ಕೆ ಹುರಸಗುಂಡಗಿ ಕಡೆಯಿಂದ ಒಂದು ಮರಳು ತುಂಬಿದ ಟ್ರಾಕ್ಟರ್ ನಂ:ಕೆಎ-36, ಟಿಎ-5781 ಅದರಲ್ಲಿ ಅಂದಾಜು 2000/- ರೂ ಕಿಮ್ಮತ್ತಿನ ಮರಳು ತುಂಬಿಕೊಂಡು ಬಂದಾಗ ಟ್ರಾಕ್ಟರ್ ಚಾಲಕ ನಮಗೆ ನೋಡಿ ಓಡಿ ಹೋಗಿದ್ದು ಇರುತ್ತದೆ. ಟ್ರಾಕ್ಟರ್ ಚಾಲಕ ಮತ್ತು ಮಾಲಿಕ ಸಕರ್ಾರಕ್ಕೆ ರಾಜಧನ(ರಾಯಲ್ಟಿ)ವನ್ನು ಕಟ್ಟದೇ ಟ್ರಾಕ್ಟರದಲ್ಲಿ ಇಬ್ರಾಹಿಂಪೂರ ಸಿಮಾಂತರದಲ್ಲಿ ಬರುವ ಹಳ್ಳದಿಂದ ಕಳ್ಳತನದಿಂದ ಮರಳು ಲೋಡ ಮಾಡಿಕೊಂಡು ಬಂದಿದ್ದು ಇರುತ್ತದೆ. ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಕೈಕೊಂಡು ಮರಳು ಸಮೇತ ಟ್ರಾಕ್ಟರ್ನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದರಿಂದ ಭೀ.ಗುಡಿ ಠಾಣೆ ಗುನ್ನೆ ನಂ. 46/2020 ಕಲಂ 379 ಐಪಿಸಿ & 44(1) ಕೆ.ಎಮ್.ಎಮ್.ಸಿ ರೂಲ್ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 47/2020 ಕಲಂ 87 ಕೆಪಿ ಯ್ಯಾಕ್ಟ:- ಇಂದು ದಿನಾಂಕ 17/04/2020 ರಂದು 06.20 ಪಿ.ಎಮ್.ಕ್ಕೆ ಹೊತಪೇಟ ಗ್ರಾಮದಲ್ಲಿನ ಹಣಮಂತ ದೇವರ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪ್ರಕರಣ ದಾಖಲಿಸಿಕೊಳ್ಳು ಮತ್ತು ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಹೋಗಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 08.30 ಪಿ.ಎಮ್ ಕ್ಕೆ ದಾಳಿ ಮಾಡಿ ದಾಳಿಯಲ್ಲಿ ಸಿಕ್ಕ 05 ಜನ ಆರೋಪಿತರಿಂದ ಹಾಗು ಕಣದಲ್ಲಿಂದ ನಗದು ಒಟ್ಟು ಹಣ 15500/- ರೂ, 52 ಇಸ್ಪೇಟ ಎಲೆಗಳನ್ನು 08.30 ಪಿ.ಎಮ್ ದಿಂದ 09.30 ಪಿ.ಎಮ್ ವರೆಗೆ ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿರುತ್ತಾರೆ.
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 42/2020 ಕಲಂ: 279, 338 ಐಪಿಸಿ:- ಇಂದು ದಿನಾಂಕ:17/04/2020 ರಂದು 6-15 ಪಿಎಮ್ ಕ್ಕೆ ಶ್ರೀಮತಿ ನಾಗಮ್ಮ ಗಂಡ ಹುಸೇನಪ್ಪ ಚಂದ್ರಾಸ ಸಾ:ಬಿಳ್ಹಾರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ಮೊನ್ನೆ ದಿನಾಂಕ: 15/04/2020 ರಂದು ಬೆಳಗ್ಗೆ 8-30 ಗಂಟೆ ಸುಮಾರಿಗೆ ನನ್ನ ಗಂಡನಾದ ಹುಸೇನಪ್ಪ ತಂದೆ ಮಲ್ಲಪ್ಪ ಈತನು ನಮ್ಮೂರ ನ್ಯಾಯಬೆಲೆ ಅಂಗಡಿ ಮುಂದೆ ಕಟ್ಟೆ ಮೇಲೆ ಕಾಲು ಇಳೆ ಬಿಟ್ಟು ಕುಳಿತುಕೊಂಡಾಗ ರಿಯರ್ ಅಟೋ ನಂ. ಕೆಎ 33 ಎ 9921 ನೇದ್ದರ ಚಾಲಕನಾದ ತಾಯಪ್ಪ ತಂದೆ ಸಿದ್ದಪ್ಪ ನಾಲ್ವಡಗಿ ಸಾ:ಹೊರಟೂರು ಈತನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಬಲಗಡೆಯಿಂದ ಕಟ್ ಹೊಡೆದು ನನ್ನ ಗಂಡನ ಎಡಗಾಲ ಪಿಕ್ಕೆ ಕಂಡಕ್ಕೆ ಗುದ್ದಿ ಎಲುಬು ಮುರಿದು ಭಾರಿ ಗಾಯಪಡಿಸಿ, ಸ್ವಲ್ಪ ಹೊತ್ತು ಅಲ್ಲಿಯೇ ನಿಂತು ಅಲ್ಲಿಂದ ಓಡಿ ಹೋದನು. ಅಲ್ಲಿಯೇ ಇದ್ದ ಮರೆಪ್ಪ ತಂದೆ ಶಿವಪ್ಪ ಈತನು ಅಪಘಾತವನ್ನು ನೋಡಿ ನನ್ನ ಗಂಡನಿಗೆ ಉಪಚಾರ ಕುರಿತು ಯಾದಗಿರಿಗೆ ಕರೆದುಕೊಂಡು ಬಂದಿರುತ್ತಾರೆ. ಕಾರಣ ನನ್ನ ಗಂಡನಿಗೆ ಅಪಘಾತಪಡಿಸಿದ ಅಟೋ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 42/2020 ಕಲಂ: 279, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ;- 45/2020 ಕಲಂ, 87 ಕೆ.ಪಿ ಆ್ಯಕ್ಟ್:- ದಿನಾಂಕ 17/04/2020 ರಂದು 07.55 ಪಿಎಂ ಕ್ಕೆ ಶ್ರೀ ಸೊಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ರವರ ಠಾಣೆಗೆ ಬಂದು ಒಂದು ವರದಿ ಹಾಜರ ಪಡೆಸಿದ್ದು, ಅದರ ಸಾರಂಶ ಏನಂದರೆ ಬಾಣತಿಹಾಳ ಗ್ರಾಮದ ಯಲ್ಲಮ್ಮ ದೇವಿ ಗುಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 06 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 42030=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು 06.35 ಪಿಎಮ್ ದಿಂದ 07.30 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 07.55 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರಪಡಿಸಿದ್ದರಿಂದ ಠಾಣೆ ಗುನ್ನೆ ನಂ 45/2020 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ಯಾದಗಿರ ಪೊಲೀಸ್ ಠಾಣೆ ಗುನ್ನೆ ನಂ:- 38/2020 ಕಲಂ: 188, 269 ಐಪಿಸಿ:- ಇಂದು ದಿನಾಂಕ; 17/04/2020 ರಂದು 10-30 ಎಮ್ ಕ್ಕೆ ಶ್ರೀ ಬೀರಲಿಂಗಪ್ಪ ಹಿರಿಯ ಸಹಾಯಕ ತೋಟಗಾರಿಕೆ ನಿದರ್ೇಶಕರು ತೋಟಗಾರಿಕೆ ಇಲಾಖೆ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ಮಾನ್ಯ ಜಿಲ್ಲಾದಿಕಾರಿಗಳು ಯಾದಗಿರಿ ರವರು ಕರೋನಾ ವೈರಸ್ (ಕೋವಿಡ-19) ಲಾಕಡೌನ್ ಪ್ರಯುಕ್ತ ಪರೀಷ್ಕೃತ ಆಧೇಶ ಸಂ.ಕಂ.ಕೋ:33:2019-20 ದಿನಾಂಕ.15/04/2020 ರ ಆಧೇಶದಂತೆ ನಮಗೆ ಕ್ಷೀಪ್ರ ಸಂಚಾರಿ ದಳ ಯಾದಗಿರಿ ನಗರದಲ್ಲಿ ಕರ್ತವ್ಯಕ್ಕೆ ನೇಮಿಸಿದ್ದರಿಂದ ನಾನು ಮತ್ತು ದತ್ತಪ್ಪ ಸಹಾಯಕ ನಿದರ್ೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ ಹಾಗೂ ಜೀಪ ಚಾಲಕ ಧನಂಜಯರೆಡ್ಡಿ ಶಿಕ್ಷಣ ಇಲಾಖೆ ಯಾದಗಿರಿ ರವರು ಕೂಡಿಕೊಂಡು ಸಕರ್ಾರಿ ವಾಹನ ಸಂಖ್ಯೆ ಕೆಎ.33.ಜಿ.0230 ನೇದ್ದರಲ್ಲಿ ಇಂದು ದಿನಾಂಕ; 17/04/2020 ರಂದು ಬೆಳಿಗ್ಗೆಯಿಂದ ಯಾದಗಿರಿ ನಗರದಲ್ಲಿ ಕೊರೋನಾ ವೈರಸ ಹರಡದಂತೆ ಮುಂಜಾಗೃತ ಕ್ರಮಕ್ಕಾಗಿ ಕರ್ತವ್ಯದಲ್ಲಿದ್ದಾಗ ಯಾದಗಿರಿ ನಗರದ ಸುಭಾಸ ಚೌಕ ಹತ್ತಿರ 9-30 ಎಎಂಕ್ಕೆ ಬಂದಾಗ ಸುಬಾಸ ಚೌಕದಲ್ಲಿ ಸನಾ ಮೋಬೈಲ್ ಅಂಗಡಿಯವನು ಮೋಬೈಲ ಅಂಗಡಿ ತೆರೆದು ಸಾರ್ವಜನಿಕರಿಗೆ ಮೋಬೈಲ್ ಮಾರಾಟ ಮಾಡುತ್ತಿದ್ದನ್ನು ಗಮನಿಸಿ ಅಲ್ಲಿಗೆ ಹೋದಾಗ ಮೋಬೈಲ್ ತೆಗೆದುಕೊಳ್ಳುತ್ತಿರುವವರು ನಮ್ಮನ್ನು ನೋಡಿ ಓಡಿ ಹೋದರು ಅಗತ್ಯ ದಿನಬಳಕೆಯ ವಸ್ತುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಂಗಡಿಗಳು ತೆರೆಯಬಾರದು ಅಂತಾ ಸಕರ್ಾರದ ಆದೇಶವಿದ್ದರೂ ಕೂಡಾ ಮೊಬೈಲ ಅಂಗಡಿಯವನು ವ್ಯಾಪಾರ ಮಾಡುವ ಸಲುವಾಗಿ ತನ್ನ ಮೊಬೈಲ ಅಂಗಡಿಯನ್ನು ತೆರೆದಿದ್ದನು. ಮೋಬೈಲ್ ಅಂಗಡಿಯಲ್ಲಿದ್ದವನಿಗೆ ವಿಚಾರಿಸಲು ತನ್ನ ಹೆಸರು ಮಹಮ್ಮದ ಓವೈಸ್ ಅಲಿ ತಂದೆ ಶೇಖ ಅಹೆಮದ ಅಲಿ ಅಂತಾ ತಿಳಿಸಿದ್ದು ಸದರಿಯವನು ಸಕರ್ಾರದ ಆದೇಶ ಉಲ್ಲಂಘನೆ ಮಾಡಿ ವ್ಯಾಪಾರ ಮಾಡುತ್ತಿದ್ದು ಜನರು ಗುಂಪಾಗಿ ಸೇರುವದರಿಂದ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ವೈರಸ್ ಸೊಂಕು ಹರಡುವ ಸಂಭವಿರುವ ಬಗ್ಗೆ ತಿಳಿದ್ದಿದ್ದು ಸಹ ವಿದಿ ವಿರುದ್ದವಾಗಿ ಜನರನ್ನು ಸೇರಿಸಿ ಮೊಬೈಲಗಳನ್ನು ಮಾರಾಟ ಮಾಡಿ ಕೃತ್ಯವೆಸಗಿದ್ದು ಇರುತ್ತದೆ. ಕಾರಣ ಕರೋನಾ ವೈರಸ್ (ಕೋವಿಡ-19) ಲಾಕಡೌನ್ ಪ್ರಯುಕ್ತ ಸಾರ್ವಜನಿಕರು ಗುಂಪುಗುಡುವುದು ಮಾಡಬಾರದು ಅಂತಾ ಸಕರ್ಾರದ ಆಧೇಶ ಇದ್ದರೂ ಹಾಗೂ ನಗರದಲ್ಲಿ ಕಲಂ.144 ಸಿ.ಆರ್.ಪಿ.ಸಿ ಜಾರಿ ಇದ್ದರು ಕೂಡಾ ಸಕರ್ಾರದ ಆದೇಶ ಉಲ್ಲಂಘನೆ ಮಾಡಿ ಸುಭಾಸಚೌಕ ಹತ್ತಿರದ ಸನಾ ಮೊಬೈಲ ಅಂಗಡಿಯಲ್ಲಿ ಮೊಬೈಲಗಳನ್ನು ಮಾರಾಟ ಮಾಡುವ ಸಲುವಾಗಿ ಜನರನ್ನು ಗುಂಪು ಸೇರಿಸಿ ಸಕರ್ಾರದ ಆಧೇಶ ಉಲ್ಲಂಘನೆ ಮಾಡಿದ್ದು ಹಾಗೂ ಜನರು ಗುಂಪಾಗಿ ಸೇರುವದರಿಂದ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ವೈರಸ್ ಸೊಂಕು ಹರಡುವ ಸಂಭವಿರುವ ಬಗ್ಗೆ ತಿಳಿದ್ದಿದ್ದು ಸಹ ವಿಧಿ ವಿರುದ್ದವಾಗಿ ಜನರನ್ನು ಸೇರಿಸಿ ಈ ಕೃತ್ಯವೆಸಗಿದ್ದು ಇರುತ್ತದೆ. ಕಾರಣ ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.38/2020 ಕಲಂ 188, 269 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 67/2020 ಕಲಂ: 87 ಕೆ.ಪಿ. ಆಠ್ಟಿ್:- ದಿನಾಂಕ 17.04.2020 ರಂದು ಸಂಜೆ 04:00 ಗಂಟೆಗೆ ಸುಮಾರಿಗೆ ಈ ಮೇಲ್ಕಂಡ ಆರೋಪಿತರು ಗಾಜರಕೊಟ್ ಗ್ರಾಮದ ದಂಡಕೆರೆಯ ಹತ್ತಿರ ಮಶಮ್ಮ ಗುಡಿಯ ಹಿಂದೆ ಸಾರ್ವಜನಿಕ ಖೂಲ್ಲಾ ಸ್ಥಳದಲ್ಲಿ ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ್ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ಸಾಹೇಬರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳೀ ಆರೋಪಿತರ ವಶದಲ್ಲಿದ್ದ 12990/- ಮತ್ತು 52 ಇಸ್ಪೀಟ್ ಎಲೆಗಳನ್ನು ಸೇರಿ ಒಟ್ಟು 12990/- ರೂ ಬೆಲೆಯ ಮುದ್ದೆ ಮಾಲನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 67/2020 ಕಲಂ: 87 ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು
ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ:- 107/2020 ಕಲಂ: 3 & 7 ಇಅ ಂಅಖಿ 1955:- ಇಂದು ದಿನಾಂಕ:17-04-2020 ರಂದು 10 ಪಿ ಎಂ ಕ್ಕೆ ಶ್ರೀ ಅಪ್ಪಯ್ಯ ಹಿರೇಮಠಆಹಾರ ನಿರೀಕ್ಷಕರು ಸುರಪೂರರವರುಠಾಣೆಗೆ ಬಂದುಒಂದುದೂರುಅಜರ್ಿ ನಿಡಿದ್ದು ಸಾರಾಂಶವೆನೆಂದರೆಇಂದು ದಿನಾಂಕ 17/04/2020 ರಂದು ಬೆಳಿಗ್ಗೆ 08 ಗಂಟೆ ಸುಮಾರಿಗೆ ನಾನು ಮನೆಯಲ್ಲಿರುವಾಗ ಶ್ರೀ ನಿಂಗಪ್ಪ ಬಿರಾದಾರ ತಹಸೀಲ್ದಾರರು ಸುರಪೂರಇವರು ತಹಶೀಲ ಕಾಯರ್ಾಲಯಕ್ಕೆ ಬರ ಹೇಳಲು ತಿಳಿಸಿದ ಮೇರೆಗೆ ನಾನು ತಹಸೀಲ ಕಾಯರ್ಾಲಯಕ್ಕೆ ಬೆಳಿಗ್ಗೆ 08-30 ಗಂಟೆ ಸುಮಾರಿಗೆ ತಹಸೀಲ ಕಾಯರ್ಾಲಯಕ್ಕೆ ಹೋದಾಗ ತಹಸೀಲ ಕಾಯರ್ಾಲಯದಲ್ಲಿ ತಹಸೀಲ್ದಾರ ಸಾಹೇಬರೊಂಂದಿಗೆ ಶ್ರೀ ಗುರಬಪ್ಪ ಪಾಟೀಲ ಕಂದಾಯ ನೀರಿಕ್ಷಕರು, ಕುಮಾರಿ ಮಲ್ಲಮ್ಮಗ್ರಾಮ ಲೇಖಪಾಲಕರುದೇವಿಕೇರಾಗ್ರಾಮ, ಶ್ರೀ ಪ್ರಧಿಪಕುಮಾರತಂದೆ ಪಾಂಡುರಂಗರಾವ್ ನಲವಾಡೆಗ್ರಾಮ ಲೇಖ ಪಾಲಕರು ಮಾಚಗುಂಡಾಳ ಶ್ರೀ ಲಾಲಸಾಬ ತಂದೆಇಮಾಮಸಾಬ ಪೀರಾಪೂರ ಶೀಶು ಅಭಿವೃದ್ದಿಯೋಜನಾ ಅಧಿಕಾರಿಗಳು(ಸಿಡಿಪಿಓ) ಸುರಪೂರ, ಶ್ರೀ ಯಲ್ಲಪ್ಪತಂದೆಚಂಧ್ರಾಮಪ್ಪ ವಯಾ: 50 ವರ್ಷಜಾತಿ: ಕಬ್ಬಲಿಗಗ್ರಾಮಸಹಾಯಕದೇವಿಕೇರಾಇವರೆಲ್ಲರೂ ಹಾಜರಿದ್ದು ನಮ್ಮೆಲ್ಲರಿಗೂ ತಹಸೀಲ್ದಾರ ಸಾಹೇಬರು ವಿಷಯ ತಿಳಿಸಿದ್ದೆನೆಂದರೆ ದೇವಿಕೇರಾ ಸಿಮಾಂತರದಲ್ಲಿ ಬರುವ ಸವರ್ೇ ನಂಬರ 41/2 ರಲ್ಲಿಇವರು ಮುಭಾರಕತಂದೆ ಗುಲಾಮ ಅಹ್ಮದ, ಮೈನುದ್ದಿನ ತಂದೆ ಗುಲಾಮ ಅಹ್ಮದ, ಇಬ್ಬರು ಸಾ:ತಿಮ್ಮಾಪೂರಇವರುತಮಗೆ ಸಂಬಂಧಿಸಿದ ಗೋಡಾವನದಲ್ಲಿ ಸಾರ್ವಜನಿಕರಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ವಿತರಿಸಬೇಕಾದ ಅಕ್ಕಿಗಳನ್ನು ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದಾರೆಂದು ಮಾಹಿತಿಇದ್ದು ದಾಳಿ ಕುರಿತು ಹೋಗೊಣಅಂತಾ ಹೇಳಿ 1) ಶ್ರೀ ಪ್ರಧಿಪಕುಮಾರತಂದೆ ಪಾಂಡುರಂಗರಾವ್ ನಲವಾಡೆ ವಯಾ:32 ವರ್ಷ ಉ:ಗ್ರಾಮ ಲೇಕ್ಕಾಧಿಕಾರಿಜಾತಿ:ಮರಾಠಾ ಸಾ:ಸುರಪೂರ 2) ಶ್ರೀ ಯಲ್ಲಪ್ಪತಂದೆಚಂಧ್ರಾಮಪ್ಪ ವಯಾ: 50 ವರ್ಷಜಾತಿ: ಕಬ್ಬಲಿಗಗ್ರಾಮಸಹಾಯಕದೇವಿಕೇರಾಇವರನ್ನು ಪಂಚರನ್ನಾಗಿಸಿಕೊಂಡು ಎಲ್ಲರೂಕೂಡಿ ತಹಸೀಲ ಕಾಯರ್ಾಲಯದಿಂದ ತಹಸೀಲ್ದಾರ ಸಾಹೇಬರೊಂದಿಗೆ ತಹಸೀಲ ಕಾಯರ್ಾಲಯ ಸರಕಾರಿಜೀಪ ನಂ:ಕೆಎ-33, ಜಿ-0233 ನೇದ್ದರಲ್ಲಿಎಲ್ಲರೂಕೂಡಿದೇವಿಕೇರಾ ಸಿಮಾಂತರ ಸವರ್ೇ ನಂಬರ 41/2 ರಲ್ಲಿಯ ಹೊಲದಲ್ಲಿರುವಗೋದಾಮ ಹತ್ತಿರ ಬೇಳಿಗ್ಗೆ 09-30 ಗಂಟೆಗೆ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಗೋದಾಮದ ಹತ್ತಿರ ಹೋಗುತ್ತಿದ್ದಂತೆ ನಮ್ಮನ್ನು ನೋಡಿಇಬ್ಬರು ವ್ಯಕ್ತಿಗಳು ಗೋದಾಮದಿಂದ ಓಡಿ ಹೋದರು ನಂತರ ನಾವೆಲ್ಲರೂಗೋದಾಮದ ಒಳಗಡೆ ಹೋಗಿ ತಹಸೀಲ್ದಾರ ಸಾಹೇಬರೊಂದಿಗೆ ಪರೀಶಿಲಿಸಿ ನೋಡಲುಅಕ್ಕಿಯ ಪ್ಲಾಸ್ಟೀಕ ಚೀಲಗಳನ್ನು ಸಂಗ್ರಹಿಸಿದ್ದು ಪರೀಶಿಲಿಸಿ ನೋಡಲುಒಟ್ಟು 234 ಪ್ಲಾಸ್ಟಿಕ ಅಕ್ಕಿ ತುಂಬಿದ ಚೀಲಗಳಿದ್ದು, ಅವುಗಳನ್ನು ಪಂಚರ ಸಮಕ್ಷಮ ಬೆಳಿಗ್ಗೆ 09-45 ಗಂಟೆಯಿಂದ 11-45 ಗಂಟೆಯವರೆಗೆ ಪಂಚರ ಸಮಕ್ಷಮಜಪ್ತಿ ಪಡಿಸಿಕೊಂಡು, ನಂತರಒಂದುಟ್ಯಾಕ್ಟರ ನಂಬರ ಕೆಎ-33 ಟಿಎ-2333 ನೇದ್ದರಲ್ಲಿ ಹಾಕಿಕೊಂಡು ನಂಧಿ ವೇ ಬ್ರಿಡ್ಜಗೆತಗೆದುಕೊಂಡು ಹೋಗಿ ಪಂಚರ ಸಮಕ್ಷಮತೂಕ ಮಾಡಿಸಲು (3170 ಕೆಜಿ +3150 ಕೆಜಿ + 3150 ಕೆಜಿ +2030 ಕೆಜಿ) ಒಟ್ಟು 11500/- ಕೆಜಿತೂಕದ ಅಕ್ಕಿಗಳಿದ್ದು ಅವುಗಳ ಅಂದಾಜುಕಿಮ್ಮತ್ತು 2,62,631/- ರೂಗಳು ಆಗುತ್ತದೆ. ಹೀಗೆ ಒಟ್ಟು 11500/- ಕೆಜಿ ಅಕ್ಕಿಗಳ ಒಟ್ಟು 234 ಅಕ್ಕಿ ಚೀಲಗಳನ್ನು ಜಪ್ತಿಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಇರುತ್ತದೆ. ನಂತರ 234 ಅಕ್ಕಿ ಚೀಲಗಳನ್ನು ಅದೇಟ್ಯಾಕ್ಟರದಲ್ಲಿ ಹಾಕಿಕೊಂಡು ಸುರಪೂರದ ಸರಕಾರಿ ಕೆಎಪ್ಸಿಎಸ್ಸಿ ಗೋದಾಮದಲ್ಲಿಇಟ್ಟಿದ್ದುಇರುತ್ತದೆ. ಸಕರ್ಾರದಿಂದ ಮಂಜೂರಾಗಿ ಬಂದಅಂಗನವಾಡಿ ಮಕ್ಕಳಿಗೆ ವಿತರಿಸಬೇಕಾದಅಕ್ಕಿಯನ್ನು, ಅಂಗನವಾಡಿ ಮಕ್ಕಳಿಗೆ ವಿತರಿಸದೆಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವಉದ್ದೇಶಕ್ಕಾಗಿತಮ್ಮಗೋದಾಮದಲ್ಲಿ ಸಂಗ್ರಹ ಮಾಡಿದ ಮುಭಾರಕ ಹಾಗೂ ಮೈನೊದ್ದಿನ ಇಬ್ಬರ ಮೇಲೆ ಅಗತ್ಯ ವಸ್ತುಗಳ ಕಾಯ್ದೆ 1955 ಅಡಿಯಲ್ಲಿ ಕಾನೂನು ಕ್ರಮಜರುಗಿಸಲುದೂರುಅಜರ್ಿಯ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.
Hello There!If you like this article Share with your friend using