ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14/04/2020

By blogger on ಮಂಗಳವಾರ, ಏಪ್ರಿಲ್ 14, 2020





                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14/04/2020 
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 53/2020 ಕಲಂ 87 ಕೆ.ಪಿ ಕಾಯ್ದೆ:- ಇಂದು ದಿನಾಂಕ: 14-04-2020 ರಂದು 04.00 ಪಿಎಮ್ ಕ್ಕೆ ಪಿ.ಎಸ್.ಐ ರವರು ಠಾಣೆಗೆ ಬಂದು ಗ್ರಾಮ ಸೈದಾಪುರದ ಹೊಸಕೆರೆ ಹತ್ತಿರ  ಮಧ್ಯಾಹ್ನ 02.30 ಗಂಟೆಗೆ ಅಂದರ ಬಾಹರ ಇಸ್ಪೆಟ  ಜೂಜಾಟದ ಮೇಲೆ ದಾಳಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆ ಜೊತೆಗೆ 7 ಜನ ಆರೋಪಿತರು ಮತ್ತು ಮುದ್ದೆಮಾಲುಗಳನ್ನು ತಂದು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಾಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 53/2020 ಕಲಂ.87 ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.



ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 39/2020 ಕಲಂ: 273, 328 ಐಪಿಸಿ:- ಇಂದು ದಿನಾಂಕ: 12/04/2020 ರಂದು 12-30 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮುದ್ದೆಮಾಲು ಮತ್ತು ಜಪ್ತಿ ಪಂಚನಾಮೆ ಹಾಜರಪಡಿಸಿ, ವರದಿ ನೀಡಿದ್ದೇನಂದರೆ ಈ ಮೂಲಕ ನಿಮಗೆ ವರದಿ ಕೊಡುವುದೇನಂದರೆ ಇಂದು ದಿನಾಂಕ: 14/04/2020 ರಂದು ಬೆಳಗ್ಗೆ ನಾನು ಮತ್ತು ಪ್ರಕಾಶ ಹೆಚ್.ಸಿ 18 (ಪಿ) ಮತ್ತು ವೇಣುಗೋಪಾಲ ಪಿಸಿ 36 ಎಲ್ಲರೂ ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ ಕೊಂಕಲ್ ಗ್ರಾಮದ ಹನುಮಾನ ದೇವರ ಗುಡಿ ಹತ್ತಿರ ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರಿಗೆ ಅಕ್ರಮವಾಗಿ ಕಲಬೆರೆಕೆ ಹೆಂಡವನ್ನು ಮಾರಾಟ ಮಾಡುತ್ತಿದ್ದಾನೆ. ಸದರಿ ಹೆಂಡ ಸೇವನೆ ಮಾನವನ ಆರೋಗ್ಯಕ್ಕೆ ಹಾನಿಕರ ಎಂದು ಗೊತ್ತಿದ್ದರು ಕೂಡಾ ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರಿಗೆ ಮತ್ತು ನಮ್ಮ ಸಿಬ್ಬಂದಿಯವರಿಗೆ ದಾಳಿ ಬಗ್ಗೆ ತಿಳಿಸಿ, ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಸರಕಾರಿ ಜೀಪ ನಂ. ಕೆಎ 33 ಜಿ 115 ನೇದ್ದರಲ್ಲಿ ಕರೆದುಕೊಂಡು ಹೊರಟು 10-50 ಎಎಮ್ ಕ್ಕೆ ಕೊಂಕಲ್ ಗ್ರಾಮದ ಹೊರ ವಲಯದಲ್ಲಿ ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ, ಅಲ್ಲಿಂದ ನಡೆದುಕೊಂಡು ಹೋಗಿ ಹನುಮಾನ ದೇವರ ಗುಡಿಯನ್ನು ಮರೆ ಮಾಡಿಕೊಂಡು ನೋಡಲಾಗಿ ಅಲ್ಲಿ ಖಾಲಿ ಸ್ಥಳದಲ್ಲಿ ಒಬ್ಬನು ಹೆಂಡ ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು 11 ಎಎಮ್ ಕ್ಕೆ ನಾನು ಮತ್ತು ಸಿಬ್ಬಂದಿಯವರು ಅವನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿಯಬೇಕೆನ್ನುವಷ್ಟರಲ್ಲಿ ಅವನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದನು. ಅಲ್ಲಿದ್ದ ಪೊಲೀಸ್ ಬಾತ್ಮಿದಾರರಿಗೆ ಅವನ ಹೆಸರು ವಿಳಾಸ ಕೇಳಲಾಗಿ ಶರಣಪ್ಪ ತಂದೆ ಸಿದ್ದರಾಮಪ್ಪ ಕಾಳಬೆಳಗುಂದಿ, ವ:32, ಜಾ:ಹೊಲೆಯ, ಉ:ಕೂಲಿ ಸಾ:ಕೊಂಕಲ್ ತಾ:ವಡಗೇರಾ ಎಂದು ಹೇಳಿದರು. ಸದರಿ ವ್ಯಕ್ತಿ ಹೆಂಡ ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ 2 ಲೀಟರಿನ ಪ್ಲಾಸ್ಟಿಕ ಬಾಟಲಗಳಲ್ಲಿ ಹೆಂಡ ತುಂಬಿದ್ದು, ಎಣಿಸಿ ನೋಡಲಾಗಿ 2 ಲೀಟರಿನ 4 ಬಾಟಲಗಳಲ್ಲಿ ಹೆಂಡ ಇದ್ದು, ಅ:ಕಿ: 500/- ರೂ. ಆಗಬಹುದು. ಸದರಿ ಹೆಂಡದಿಂದ ಶ್ಯಾಂಪಲ್ ಮತ್ತು ತಜ್ಞರ ಪರೀಕ್ಷೆ ಕುರಿತು ಅರ್ಧ ಲೀಟರಿನ ಪ್ಲಾಸ್ಟಿಕ ಬಾಟಲಿಯಲ್ಲಿ ಪ್ರತ್ಯೇಕ ಪಡೆದುಕೊಂಡು ನಮ್ಮ ಸಮಕ್ಷಮ ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲೆದು ನಾವು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಘಆಉ ಅಂತಾ ಅರಗಿನಿಂದ ಸೀಲ್ ಮಾಡಿ ಜಪ್ತಿಪಡಿಸಿಕೊಂಡರು ಉಳಿದ ಹೆಂಡವನ್ನು ತಾಬಕ್ಕೆ ಪಡೆದುಕೊಂಡರು. 11 ಎಎಮ್ ದಿಂದ 12 ಪಿಎಮ್ ದ ವರೆಗೆ ಜಪ್ತಿ ಪಂಚನಾಮೆ ಜರುಗಿಸಿ, 12-30 ಪಿಎಮ್ ಕ್ಕೆ ಮುದ್ದೆಮಾಲಿನೊಂದಿಗೆ ಪೊಲೀಸ ಠಾಣೆಗೆ ಬಂದು ಜಪ್ತಿ ಪಂಚನಾಮೆ ಪ್ರಿಂಟ ಹಾಕಿ ವರದಿ ತಯಾರಿಸಿ ಕೊಡುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 39/2020 ಕಲಂ: 273, 328 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ವಡಗೆರಾ ಪೊಲೀಸ ಠಾಣೆ ಗುನ್ನೆ ನಂ:- 40/2020 ಕಲಂ: 87 ಕೆ.ಪಿ ಎಠ್ಟಿ್:- ಇಂದು ದಿನಾಂಕ: 14/04/2020 ರಂದು 4-30 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ 2 ಜನ ಆರೋಪಿತರು ಮತ್ತು ಮುದ್ದೆಮಾಲು ಹಾಜರಪಡಿಸಿ, ವರದಿ ನೀಡಿದ್ದೇನಂದರೆ ಇಂದು ದಿನಾಂಕ: 14/04/2020 ರಂದು ವಡಗೇರಾ ಸೀಮಾಂತರದ ಮೊರಾಜರ್ಿ ದೇಸಾಯಿ ಶಾಲೆ ಹಿಂದುಗಡೆ ಖಾಲಿ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೇಟ್ ಜೂಜಾಟ ಆಡುತ್ತಿದ್ದಾಗ ನಾವು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಆರೋಪಿತರಾದ 1) ಮಲ್ಲಪ್ಪ ತಂದೆ ನಿಂಗಪ್ಪ ಕೊಪ್ಪುರ, ವ:39, ಜಾ:ಬೇಡರ, ಉ:ಒಕ್ಕಲುತನ ಸಾ:ವಡಗೇರಾ ಈತನ ಹತ್ತಿರ ನಗದು ಹಣ 1160/- ಮತ್ತು 19 ಇಸ್ಪೀಟ ಎಲೆಗಳು ಮತ್ತು 2) ಕಾಡಪ್ಪ ತಂದೆ ಹಂಪಣ್ಣ ಹೂಗಾರ, ವ:42, ಜಾ:ಹೂಗಾರ, ಉ:ಪೂಜಾರಿಕೆ ಸಾ:ವಡಗೇರಾ ಈತನ ಹತ್ತಿರ ನಗದು ಹಣ 1950/- ರೂ. ನಗದು ಹಣ ದೊರೆತ್ತಿದ್ದು, ಸ್ಥಳದಲ್ಲಿ ಎಲ್ಲರ ಮದ್ಯದಲ್ಲಿ ನಗದು ಹಣ 350=00 ರೂ. ಹಾಗೂ 33 ಇಸ್ಪಿಟ್ ಎಲೆಗಳು ದೊರೆತ್ತಿದ್ದು, ಹೀಗೆ ಒಟ್ಟು 3460/- ರೂ. ಗಳು ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳು ದೊರೆತ್ತಿದ್ದು, ಸದರಿ ಇಬ್ಬರೂ  ಆರೋಪಿತರು ಮತ್ತು ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯೊಂದಿಗೆ ಹಾಜರಪಡಿಸುತ್ತಿದ್ದು, ಸದರಿ ಅಪರಾಧವು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದುಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡು ಅನುಮತಿ ಪಡೆದುಕೊಂಡು ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 40/2020 ಕಲಂ: 87 ಕೆ.ಪಿ ಎಕ್ಟ್ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.




ಗೋಗಿ  ಪೊಲೀಸ್ ಠಾಣೆ ಗುನ್ನೆ ನಂ:- 42/2020 379 ಐಪಿಸಿ & 44(1) ಕೆ.ಎಂ.ಎಂ.ಆರ್.ಸಿ ಕಾಯ್ದೆ 1994.:- ಇಂದು ದಿನಾಂಕ: 14/04/209 ರಂದು 08-15 ಎಎಮ್ ಕ್ಕೆ ಶ್ರೀ ಸೋಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ರವರು ಒಂದು ಮರಳು ತುಂಬಿದ ಟ್ರ್ಯಾಕ್ಟರ್ ಜೋತೆಗೆ ಠಾಣೆಗೆ ಬಂದು ವರದಿ ನೀಡಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 14/04/2020 ರಂದು 06-10 ಎಎಮ್ ಸುಮಾರಿಗೆ, ಕೊರೊನಾ ಪ್ರಯುಕ್ತ ಶ್ರೀ. ಪ್ರೇಮಸಿಂಗ್ ಸಿಪಿಸಿ-318, ಶ್ರೀ ನಿಂಗಯ್ಯ ಸಿಪಿಸಿ-330, ಶ್ರೀ ಶ್ರೀನಿವಾಸ ಸಿಪಿಸಿ-34 ರವರೊಂದಿಗೆ ವಿಶೇಷ ಪೆಟ್ರೋಲಿಂಗ್ ಕರ್ತವ್ಯದ ಮೇಲೆ ಗೋಗಿ ಪೇಠ ಗ್ರಾಮದಲ್ಲಿದ್ದಾಗ ಸುರಪೂರ ಕಡೆಯಿಂದ ಶೆಟ್ಟಿಕೇರಾ ಹೊಸಕೇರಾ ಮಾರ್ಗವಾಗಿ ಗೋಗಿ ಕಡೆಗೆ ಟ್ರ್ಯಾಕ್ಟರ್ದಲ್ಲಿ ಅಕ್ರಮವಾಗಿ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟಕ್ಕೆ ಹೋಗುತ್ತಿದ್ದಾರೆ ಅಂತಾ ಖಚಿತ ಭಾತ್ಮೀ ಬಂದಿದ್ದು,  ನಾನು, ಮೇಲಿನ ಇಬ್ಬಂದಿಯವರು ಮತ್ತು ಚಾಲಕ ಆರುನ ಬಾಬ ಹೆಚ್.ಜಿ-260 ರವರೊಂದಿಗೆ ಸರಕಾರಿ ಜೀಪ್ ನಂ: ಕೆಎ-33 ಜಿ-160 ನೇದ್ದರಲ್ಲಿ 06-15 ಎಎಮ್ ಕ್ಕೆ ಠಾಣೆಯಿಂದ ಹೋರಟು ಹೊಸಕೇರಾ ಕಡೆಗೆ ಹೊಗುತ್ತಿದ್ದಾಗ ಹೋಸ್ಕೆರಾ-ಗೋಗಿ ಮಧ್ಯದ ಮೇನ ಕೆನಾಲ ಹತ್ತಿರ 06.30 ಎಎಂ ಕ್ಕೆ ಹೋಗಿ ಕಾಯುತ್ತಾ ನಿಂತಾಗ, 06.50 ಎಎಂ ಕ್ಕೆ ಹೊಸ್ಕೇರಾ ಕಡೆಯಿದ ಒಂದು ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ನೋಡಿ, ಖಚಿತ ಪಡಿಸಿಕೊಂಡು ದಾಳಿ ಮಾಡಿ ಸದರಿ ಟ್ರ್ಯಾಕ್ಟರ್ ನಿಲ್ಲಿಸ ಬೇಕೆನ್ನುವಷ್ಟರಲ್ಲಿ ಸದರಿ ಚಾಲಕನು ತನ್ನ ಟ್ರ್ಯಾಕ್ಟರನ್ನು ನಮ್ಮಿಂದ ಸ್ವಲ್ಪ ದೂರದಲ್ಲಿಯೇ ನಿಲ್ಲಿಸಿ, ಮರಳುತುಂಬಿದ ಟ್ರ್ಯಾಕ್ಟರನ್ನು ಬಿಟ್ಟು ಓಡಿ ಹೊದನು. ಟ್ರ್ಯಾಕ್ಟರ್ನ್ನು ಪರಿಶೀಲಿಸಲಾಗಿ 1) ಸ್ವರಾಜ 735 ಈಇ ನೀಲಿ ಬಣ್ಣದ ಟ್ರ್ಯಾಕ್ಟರ ಇದ್ದು ಅದರ ನಂಬರ ಇರುವದಿಲ್ಲ. ಟ್ರ್ಯಾಕ್ಟರ ಇಂಜಿನ ನಂ:39.1354/ಖಙಕ17262 ಚೆಸ್ಸಿ ನಂ:ಘಚಖಿಂ30428119179 ಅ.ಕಿ.1,00,000=00  ಮತ್ತು 2) ಒಂದು ನೀಲಿ ಬಣ್ಣದ ವಿಶ್ವಗಂಗಾ ಟ್ರೈಲರ್ಸ ಶಹಾಪೂರ ಅಂತಾ ಬರೆದಿರುವ ಟ್ರ್ಯಾಲಿ ನಂಬರ ಇರುವದಿಲ್ಲ. ಅ.ಕಿ.50,000=00 ಸದರಿ ಟ್ರ್ಯಾಲಿಯಲ್ಲಿ 3) ಅಂದಾಜು ಒಂದು ಬ್ರಾಸ್ ಮರಳು ಅ.ಕಿ.1500=00 ರೂ ಇದ್ದು, ಸದರಿ ಟ್ರ್ಯಾಕ್ಟರ್ನ ಚಾಲಕ ಮತ್ತು ಮಾಲೀಕನು ಸರಕಾರಕ್ಕೆ ಹಣ ತುಂಬದೇ ಮರಳನ್ನು ಕಳ್ಳತನ ಮಾಡಿಕೊಂಡು ಸಾಗಿಸುತ್ತಿರುವುದಾಗಿ ತಿಳಿದುಬಂದಿದ್ದರಿಂದ ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ಠಾಣೆಗೆ 08.15 ಎಎಮ್ ಕ್ಕೆ ತಂದು ಹಾಜರ್ ಪಡಿಸಿದ್ದು ಇರುತ್ತದೆ. 
      ಆದ್ದರಿಂದ ಸಕರ್ಾರಕ್ಕೆ ಹಣ ತುಂಬದೇ ಮರಳನ್ನು ಕಳ್ಳತನ ಮಾಡಿಕೊಂಡು ಸಾಗಿಸುತ್ತಿದ್ದ ಸದರಿ ಟ್ರ್ಯಾಕ್ಟರ್ ಚಾಲಕ ಮತ್ತು ಟ್ರಾಯಕ್ಟರ ಮಾಲೀಕನ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ.ಅಂತಾ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 42/2020 ಕಲಂ, 379 ಐಪಿಸಿ & 44(1) ಕೆ.ಎಂ.ಎಂ.ಆರ್.ಸಿ ಕಾಯ್ದೆ 1994 ನೇದ್ದರ ಪ್ರಕಾರ ಗುನ್ನೆ ದಾಖಲೆ ಮಾಡಿಕೊಂಡು ತನಿಖೆ ಕೈಕೊಂಡೆನು.


ಗೋಗಿ ಪೊಲೀಸ್ ಠಾಣೆ ಗುನ್ನೆ ನಂ;- 43/2020 379 ಐಪಿಸಿ & 44(1) ಕೆ.ಎಂ.ಎಂ.ಆರ್.ಸಿ ಕಾಯ್ದೆ 1994.:- ಇಂದು ದಿನಾಂಕ: 14/04/209 ರಂದು ಶ್ರೀ ಸೋಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ರವರು ಒಂದು ಮರಳು ತುಂಬಿದ ಟ್ರ್ಯಾಕ್ಟರ್ನ ಸಮೇತ ಬಂದು 09.30 ಎಎಮ್ ಕ್ಕೆ ವರದಿ ನೀಡಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 14/04/2020 ರಂದು 07-20 ಎಎಮ್ ಸುಮಾರಿಗೆ, ಶ್ರೀ. ಪ್ರೇಮಸಿಂಗ್ ಸಿಪಿಸಿ-318, ಶ್ರೀ ನಿಂಗಯ್ಯ ಸಿಪಿಸಿ-330, ಶ್ರೀ ಶ್ರೀನಿವಾಸ ಸಿಪಿಸಿ-34 ರವರೊಂದಿಗೆ ಹೋಸ್ಕೆರಾ-ಗೋಗಿ ಮಧ್ಯದ ಮೇನ ಕೆನಾಲ ಹತ್ತಿರ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ ಹಿಡಿದುಕೊಂಡು ಠಾಣೆಗೆ ಬರುತ್ತಿರುವಾಗ ಸುರಪೂರ ಕಡೆಯಿಂದ ಶೆಟ್ಟಿಕೇರಾ ಹೊಸಕೇರಾ ಮಾರ್ಗವಾಗಿ ಗೋಗಿ ಕಡೆಗೆ ಇನ್ನೊಂದು ಟ್ರ್ಯಾಕ್ಟರ್ದಲ್ಲಿ ಅಕ್ರಮವಾಗಿ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟಕ್ಕೆ ಹೋಗುತ್ತಿದ್ದಾರೆ ಅಂತಾ ಖಚಿತ ಭಾತ್ಮೀ ಬಂದಿದ್ದು, ನಾನು, ಮೇಲಿನ ಇಬ್ಬಂದಿಯವರು ಮತ್ತು ಚಾಲಕ ಆರುನ ಬಾಬ ಹೆಚ್.ಜಿ-260 ರವರೊಂದಿಗೆ ಸರಕಾರಿ ಜೀಪ್ ನಂ: ಕೆಎ-33 ಜಿ-160 ನೇದ್ದರಲ್ಲಿ 07.30 ಎಎಮ್ ಕ್ಕೆ ಗೋಗಿ ಕೆ ಗ್ರಾಮದ ವನದುಗರ್ಾ ಕ್ರಾಸ್ ಹತ್ತಿರ ಬಂದು ಕಾಯುತ್ತಾ ನಿಂತಿರುವಾಗ 07.40 ಎಎಂ ಸುಮಾರಿಗೆ ಬಾತ್ಮಿ ಪ್ರಕಾರ ಒಂದು ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದನು. ಅದನ್ನು ನೋಡಿ, ಖಚಿತ ಪಡಿಸಿಕೊಂಡು ದಾಳಿ ಮಾಡಿ ಸದರಿ ಟ್ರ್ಯಾಕ್ಟರ್ ನಿಲ್ಲಿಸ ಬೇಕೆನ್ನುವಷ್ಟರಲ್ಲಿ ಸದರಿ ಚಾಲಕನು ತನ್ನ ಟ್ರ್ಯಾಕ್ಟರನ್ನು ನಮ್ಮಿಂದ ಸ್ವಲ್ಪ ದೂರದಲ್ಲಿಯೇ ರೋಡಿನಲ್ಲಿ ನಿಲ್ಲಿಸಿ, ಮರಳುತುಂಬಿದ ಟ್ರ್ಯಾಕ್ಟರನ್ನು ಬಿಟ್ಟು ಓಡಿ ಹೊದನು. ಟ್ರ್ಯಾಕ್ಟರ್ನ್ನು ಪರಿಶೀಲಿಸಲಾಗಿ 1) ಸ್ವರಾಜ 735 ಈಇ ನೀಲಿ ಬಣ್ಣದ ಟ್ರ್ಯಾಕ್ಟರ ಇದ್ದು ಅದರ ನಂಬರ ಇರುವದಿಲ್ಲ. ಟ್ರ್ಯಾಕ್ಟರ ಇಂಜಿನ ನಂ:39.1354/ಉಏ010146ಂ ಚೆಸ್ಸಿ ನಂ:ಘಖಖಿಐ31419111500  ಅ.ಕಿ.1,00,000=00  ಮತ್ತು 2) ಒಂದು ನೀಲಿ ಬಣ್ಣದ ಭಾರತ ಟ್ರೈಲರ್ಸ ಶಹಾಪೂರ ಅಂತಾ ಬರೆದಿರುವ ಟ್ರ್ಯಾಲಿ ನಂಬರ ಇರುವದಿಲ್ಲ. ಅ.ಕಿ.50,000=00 ಸದರಿ ಟ್ರ್ಯಾಲಿಯಲ್ಲಿ 3) ಅಂದಾಜು ಒಂದು ಬ್ರಾಸ್ ಮರಳು ಅ.ಕಿ.1500=00 ರೂ ಇದ್ದು, ಸದರಿ ಟ್ರ್ಯಾಕ್ಟರ್ನ ಚಾಲಕ ಮತ್ತು ಮಾಲೀಕನು ಸರಕಾರಕ್ಕೆ ಹಣ ತುಂಬದೇ ಮರಳನ್ನು ಕಳ್ಳತನ ಮಾಡಿಕೊಂಡು ಸಾಗಿಸುತ್ತಿರುವುದಾಗಿ ತಿಳಿದುಬಂದಿದ್ದರಿಂದ ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ಠಾಣೆಗೆ 08.15 ಎಎಮ್ ಕ್ಕೆ ತಂದು ಹಾಜರ್ ಪಡಿಸಿದ್ದು ಇರುತ್ತದೆ. 
      ಆದ್ದರಿಂದ ಸಕರ್ಾರಕ್ಕೆ ಹಣ ತುಂಬದೇ ಮರಳನ್ನು ಕಳ್ಳತನ ಮಾಡಿಕೊಂಡು ಸಾಗಿಸುತ್ತಿದ್ದ ಸದರಿ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲೀಕನ ಮೇಲೆ ಕಾನೂನು ಕ್ರಮ ಜರುಗಿಸಲು 09.30 ಎಎಂ ಕ್ಕೆ ಈ ವರದಿ ನೀಡಿ ಸೂಚಿಸಲಾಗಿದೆ.  ಅಂತಾ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 43/2020 ಕಲಂ, 379 ಐಪಿಸಿ & 44(1) ಕೆ.ಎಂ.ಎಂ.ಆರ್.ಸಿ ಕಾಯ್ದೆ 1994 ನೇದ್ದರ ಪ್ರಕಾರ ಗುನ್ನೆ ದಾಖಲೆ ಮಾಡಿಕೊಂಡು ತನಿಖೆ ಕೈಕೊಂಡೆನು.
  

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 41/2020 87  ಕೆ.ಪಿ ಯಾಕ್ಟ:- ದಿನಾಂಕ:14/04/2020 ರಂದು 13.00 ಗಂಟೆಗೆ ಹುಣಸಗಿ ಠಾಣೆಯ ಪಿ.ಎಸ್.ಐ ಸಾಹೇಬರಾದ ಶ್ರೀ ಎನ್.ಎಸ್.ಜನಗೌಡ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ ಹುಣಸಗಿ ಊರೊಳಗಿನ ನೀಲಕಂಠೇಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದ ಮೆರೆಗೆ ಸ್ಥಳಕ್ಕೆ ಬೇಟಿ ನೀಡಿ ಖಚಿತಪಡಸಿಕೊಂಡು ಜೂಜಾಟವನ್ನು ಆಡುವವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:41/2020 ಕಲಂ. 87 ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.
       ನಂತರ ಮಾನ್ಯ ಪಿ.ಎಸ್.ಐ ಸಾಹೇಬರಾದ ಶ್ರೀ  ಎನ್.ಎಸ್.ಜನಗೌಡ ರವರು ಠಾಣೆಗೆ 15.00 ಗಂಟೆಗೆ ಮರಳಿ ಠಾಣೆಗೆ ಬಂದು 6 ಜನ ಆರೋಪಿತರು & ನಗದು ಹಣ 5820/- ರೂ.ಗಳು ಹಾಗೂ 52 ಇಸ್ಪೀಟ್ ಎಲೆಗಳು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಲ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. ಆರೋಪಿತರ ಹೆಸರು ಈ ರೀತಿ ಇದೆ,  1) ಶಿವಯ್ಯ ತಂದೆ ಶಾಂತಯ್ಯ ಮದ್ದಾನಿಮಠ ವಯ:19 ವರ್ಷ ಜಾ:ಲಿಂಗಾಯತ ಉ:ವಿದ್ಯಾಥರ್ಿ ಸಾ:ಹುಣಸಗಿ 2) ಸಿದ್ರಾಮಯ್ಯ ತಂದೆ ಶಿವಲಿಂಗಯ್ಯ ದೇಸಾಯಿಗುರು ವಯ:27 ಜಾ:ಲಿಂಗಾಯತ ಉ:ಒಕ್ಕಲತನ ಸಾ:ಹುಣಸಗಿ 3) ವಿಶ್ವನಾಥ ತಂದೆ ಸಾಹೇಬಗೌಡ ಬಂಟನೂರ ವಯ:25 ವರ್ಷ ಜಾ:ಹಿಂದುರೆಡ್ಡಿ ಉ:ಪೇಂಟಿಂಗ ಸಾ:ಹುಣಸಗಿ 4) ಪ್ರವೀಣ ತಂದೆ ಮಲ್ಲಣ್ಣ ನೂಲಿನವರ ವಯ:26 ವರ್ಷ ಜಾ:ಲಿಂಗಾಯತ ಉ:ಕಿರಾಣಿ ವ್ಯಾಪಾರ ಸಾ:ಹುಣಸಗಿ 5) ಅಮರೇಶ ತಂದೆ ಗುರಪ್ಪ ಪರಂಪುರ ವಯ:27 ಜಾ:ಲಿಂಗಾಯತ ಉ:ಕೂಲಿಕೆಲಸ ಸಾ:ಹುಣಸಗಿ 6) ಗುರಸಂಗಯ್ಯ ತಂದೆ ಕರವೀರಯ್ಯ ಹಿರೇಮಠ ವಯ:42 ಜಾ:ಲಿಂಗಾಯತ ಉ:ವ್ಯಾಪಾರ ಸಾ:ಹುಣಸಗಿ ಅಂತಾ ಇರುತ್ತದೆ.


ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 63/2020 ಕಲಂ: 273, 284 ಐಪಿಸಿ ಮತ್ತು 32, 34 ಕೆಇ ಆಕ್ಟ್:- ದಿನಾಂಕ: 14.04.2020 ರಂದು ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಗುರುಮಠಕಲ್ ಪಟ್ಟಣದಲ್ಲಿ ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ಮಧ್ಯಾಹ್ನ 2:30 ಗಂಟೆಗೆ ಆರೋಪಿತರು ಪುಟಪಾಕ ತಾಂಡಾದ ಹನುಮಾನ ದೇವರ ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಅಕ್ರಮವಾಗಿ ಮಾನವನು ಸೇವಿಸಿದರೆ ಜೀವಕ್ಕೆ ಹಾನಿಯುಂಟಾಗುವ ಕಳ್ಳಭಟ್ಟಿ ಸರಾಯಿಯನ್ನು ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಹೊರಟು ಸಮಯ ಮಧ್ಯಾಹ್ನ 3:30 ಗಂಟೆಗೆ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳೀ ಮಾಡಿದಾಗ ಅಲ್ಲಿಗೆ ಕುಡಿಯಲು ಮತ್ತು ಕೊಳ್ಳಲು ಬಂದಿದ್ದ ಸಾರ್ವಜನಿಕರೊಂದಿಗೆ ಮಾರಾಟ ಮಾಡುತ್ತಿದ್ದ ಆರೋಪಿತರು ಸಹ ಓಡಿ ಹೋಗಿದ್ದು ಅಲ್ಲಿ ಸ್ಥಳದಲ್ಲಿದ್ದ ಒಂದು ಹಳದಿ ಬಣ್ಣದ ಪ್ಲಾಸ್ಟೀಕ್ ಕ್ಯಾನ್ನಲ್ಲಿ 4 ಲೀಟರ ಕಳ್ಳಭಟ್ಟಿ ಸರಾಯಿ ಅ.ಕಿ-1200/- ನೇದ್ದನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯ ಮೂಲಕ ಜಪ್ತಿ ಪಡಿಸಿಕೊಂಡು ವಶಕ್ಕೆ ತೆಗೆದುಕೊಂಡು ನಂತರ ಸಮಯ ಸಂಜೆ 05:00 ಗಂಟೆಗೆ ಮರಳಿ ಠಾಣೆಗೆ ಬಂದು ಮುದ್ದೆ ಮಾಲು ಮತ್ತು ಮೂಲ ಜಪ್ತಿಪಂಚನಾಮನೆಯನ್ನು ಹಾಜರುಪಡಿಸಿ ದಾಳೀಯ ಕಾಲಕ್ಕೆ ಓಡಿ ಹೋದ ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದ ಅದರ ಸಾರಾಂಶದ ಮೇಲಿಂದ ಪ್ರಕರಣದ ದಾಖಲಿಸಿಕೊಂಡೆನು.



ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 42/2020 ಕಲಂ 323, 324, 354, 504, 506 ಐಪಿಸಿ:-ದಿನಾಂಕ:14/04/2020 ರಂದು ಮದ್ಯಾಹ್ನ 3.30 ಗಂಟೆ ಸುಮಾರಿಗೆ ಫಿಯರ್ಾದಿ ಮನೆ ಮುಂದಿನ ದಾರಿಯ ಮೇಲೆ ಆರೋಪಿತನು ಹೊರಟಾಗ ಫಿಯರ್ಾದಿಯ ನಾಯಿ ಆರೋಪಿತನಿಗೆ ನೋಡಿ ಬೊಗಳಿದ್ದು ಆಗ ಆರೋಪಿತನು ನಾಯಿಗೆ ಕಲ್ಲಿನಿಂದ ಹೊಡೆಯುತ್ತಿರುವಾಗ ಫಿಯರ್ಾದಿಯು ಅವನ ಹತ್ತಿರ ಹೋಗಿ ನಮ್ಮ ನಾಯಿಗೆ ಯಾಕೆ ಹೊಡೆಯುತ್ತಿದ್ದೀ ಅಂತಾ ಕೇಳಿದ್ದಕ್ಕೆ ಆರೋಪಿತನು ಫಿಯರ್ಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಬಡಿಗೆಯಿಂದ ಹೊಡೆದು ಒಳಪೆಟ್ಟು ಮಾಡಿದ್ದು ಇರುತ್ತದೆ. ಆಗ ಫಿಯರ್ಾದಿಯ ಹೆಂಡತಿ ಬಿಡಿಸಲು ಬಂದಾಗ ಆರೋಪಿತನು ಅವಳಿಗೂ ಸಹ ಬಡಿಗೆಯಿಂದ ಹೊಡೆದು ಒಳಪೆಟ್ಟು ಮಾಡಿ ಕಾಲಿನಿಂದ ಹೊಟ್ಟೆಗೆ ಒದ್ದು ಅವಮಾನ ಮಾಡಿ ಜೀವದ ಬೆದರಿಕೆ ಹಾಕಿ ಅಲ್ಲಿಂದ ಹೋದ ಬಗ್ಗೆ ಲಿಖಿತ ಫಿಯರ್ಾದಿ ಇರುತ್ತದೆ.


ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 104/2020 ಕಲಂ: 87 ಕೆ.ಪಿ.ಕಾಯ್ದೆ:- ಇಂದು ದಿನಾಂಕ: 14/04/2020 ರಂದು8:30 ಪಿ.ಎಮ್. ಕ್ಕೆ ಶ್ರೀ ಚೇತನ್ ಪಿ.ಎಸ್.ಐ (ಕಾ&ಸು-1) ಸಾಹೇಬರು ಸುರಪೂರ ಪೊಲೀಸ್ಠಾಣೆರವರು 4 ಜನಆರೋಪಿತರೊಂದಿಗೆಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ಠಾಣೆಗೆ ಬಂದು ವರದಿ ಸಾರಾಂಶವೆನಂದರೆಇಂದು ದಿನಾಂಕ:14/04/2020 ರಂದು 5:30  ಪಿ.ಎಂ ಸುಮಾರಿಗೆಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ಠಾಣಾ ವ್ಯಾಪ್ತಿಯ ಹೆಮ್ಮಡಗಿಗ್ರಾಮದ ಬಸವಣ್ಣದೇವರಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿದ್ದಾರೆಅಂತಾಖಚಿತ ಬಾತ್ಮಿ ಬಂದ ಮೇರೆಗೆ, ನಾನು ಮತ್ತು ಸಿಬ್ಬಂಧಿಯವರಾದ 1) ಶ್ರೀ ಬಸವರಾಜ ಸಿಪಿಸಿ-180 2) ಶ್ರೀ ಶರಣಗೌಡ ಸಿಪಿಸಿ-218 3) ಶ್ರೀ ದೇವಿಂದ್ರಪ್ಪ ಸಿಪಿಸಿ-184 4) ಚಂದ್ರಾಮ ಸಿಪಿಸಿ-175 ವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ತಿಮ್ಮರೆಡ್ಡಿತಂದೆ ಬಸವರೆಡ್ಡಿತೋಟದ ವ|| 57 ವರ್ಷಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಸೂಗೂರ 2) ಶ್ರೀ ನಿಂಗಣ್ಣತಂದೆ ಭೀಮಣ್ಣಗುಜ್ಜಲ್ ವ|| 55 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ಚಂದ್ಲಾಪುರಇವರನ್ನು 5:45 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡುಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 6 ಪಿ.ಎಂ ಕ್ಕೆ ಒಂದು ಖಾಸಗಿ ವಾಹನ ನೇದ್ದರಲ್ಲಿಠಾಣೆಯಿಂದ ಹೊರಟು 6:15 ಪಿ.ಎಂ ಕ್ಕೆ ಹೆಮ್ಮಡಗಿಗ್ರಾಮದ ಬಸವಣ್ಣದೇವರಗುಡಿಯಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲುಗುಡಿಯ ಹತ್ತಿರ ಸಾರ್ವಜನಿಕರಸ್ತೆಯಲ್ಲಿ ಕೆಲವು ಜನರುದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದಒಮ್ಮೆಲೆಅವರ ಮೇಲೆ 7 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿಒಟ್ಟು 4 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ಶಂಕ್ರೆಪ್ಪತಂದೆ ಬಸಣ್ಣ ಹೊಂಟುರ ವ|| 60 ವರ್ಷಜಾ|| ಕುಂಬಾರ ಉ|| ಒಕ್ಕಲುತನ ಸಾ|| ಚಂದ್ಲಾಪುರ ಇವನ ಹತ್ತಿರ 900/- ರೂಗಳು ದೊರೆತವು 2) ಹಣಮಗೌಡತಂದೆ ಸಾಬಯ್ಯ ಮಾಲಿಗೌಡರ ವ|| 38 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ಅಡ್ಡೊಡಗಿ ಇವನ ಹತ್ತಿರ 500/- ರೂಗಳು ದೊರೆತವು 3) ವೀರುಪಾಕ್ಷಿತಂದೆಅಂಬ್ರಪ್ಪ ಶೇಳ್ಳಗಿ ವ|| 19 ವರ್ಷಜಾ|| ಲಿಂಗಾಯತ ಉ|| ವಿದ್ಯಾಥರ್ಿ ಸಾ|| ಹೆಮ್ಮಡಗಿ ಇವನ ಹತ್ತಿರ 800/- ರೂಗಳು ದೊರೆತವು 4) ಶಿವಲಿಂಗಪ್ಪ ತಂದೆ ಬಸನಗೌಡ ಮೇಟಿ ವ|| 45 ವರ್ಷಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಹೆಮ್ಮಡಗಿ ಇವನ ಹತ್ತಿರ 790/- ರೂಗಳು ದೊರೆತವುಇದಲ್ಲದೆ ಪಣಕ್ಕೆಇಟ್ಟ ಹಣ 3430/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 6420/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿಜಪ್ತಿ ಪಂಚನಾಮೆಯನ್ನು 7 ಪಿ.ಎಮ್ ದಿಂದ 8 ಪಿ.ಎಮ್ ವರೆಗೆಜೀಪಿನ ಲೈಟಿನ ಬೆಳಕಿನಲ್ಲಿ ಬರೆದುಕೊಂಡಿದ್ದುಇರುತ್ತದೆ. ನಂತರ 4 ಜನಆರೋಪಿರೊಂದಿಗೆ ಮರಳಿ ಠಾಣೆಗೆ ಬಂದು ಸದರಿಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದುಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ.ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ





ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 103/2020 ಕಲಂ: 87 ಕೆ.ಪಿ.ಕಾಯ್ದೆ:- ಇಂದು ದಿನಾಂಕ: 14/04/2020 ರಂದು 7:45 ಪಿ.ಎಮ್. ಕ್ಕೆ ಶ್ರೀ ಚಂದ್ರಶೇಖರ ಪಿ.ಎಸ್.ಐ (ಕಾ&ಸು-2) ಸಾಹೇಬರು ಸುರಪೂರ ಪೊಲೀಸ್ಠಾಣೆರವರು 20 ಜನಆರೋಪಿತರೊಂದಿಗೆಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ಠಾಣೆಗೆ ಬಂದು ವರದಿ ಸಾರಾಂಶವೆನಂದರೆಇಂದು ದಿನಾಂಕ:14/04/2020 ರಂದು 5  ಪಿ.ಎಂ ಸುಮಾರಿಗೆಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ಠಾಣಾ ವ್ಯಾಪ್ತಿಯಬೇವಿನಾಳ ಎಸ್.ಹೆಚ್ಗ್ರಾಮದಶಿವಪ್ಪ ಕಾಮನಟಗಿರವರ ಹೊಲದ ಪಕ್ಕದ ಸಾರ್ವಜನಿಕರಸ್ತೆಯಲ್ಲಿಕೆಲವು ಜನರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿದ್ದಾರೆಅಂತಾಖಚಿತ ಬಾತ್ಮಿ ಬಂದ ಮೇರೆಗೆ, ನಾನು ಮತ್ತು ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೋಹರ ಹೆಚ್ಸಿ-105 3) ಶ್ರೀ ಪರಮೇಶ ಸಿಪಿಸಿ-142 4) ದಯಾನಂದ ಪಿ.ಸಿ 337 5) ಶ್ರೀ ಮಂಜುನಾಥ ಸಿಪಿಸಿ-271 6) ಮಾನಯ್ಯ ಸಿಪಿಸಿ-372, 7) ವಿರೇಶ ಸಿಪಿಸಿ-374 8) ಶ್ರೀ ಜಗದೀಶ ಸಿಪಿಸಿ-335 9) ಶ್ರೀ ಬಸಪ್ಪ ಸಿಪಿಸಿ-393 10) ಶ್ರೀ ಶರಣಪ್ಪ ಸಿಪಿಸಿ-224 11) ಶ್ರೀ ಸುಭಾಷ ಸಿಪಿಸಿ-174 ವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಹಣಮಂತತಂದೆ ಹಣಮಪ್ಪ ಸಾಸಗೇರಾ ವ|| 42 ವರ್ಷಜಾ|| ಹೊಲೆಯ ಉ|| ಒಕ್ಕಲುತನ ಸಾ|| ಬೇವಿನಾಳ ತಾ:ಸುರಪೂರ 2) ಶ್ರೀ ಬಸವರಾಜತಂದೆ ಹಣಮಪ್ಪ ಮಾಲಿ ಬಿರಾದಾರ  ವ|| 50 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ಬೇವಿನಾಳ ತಾ:ಸುಪರೂರಇವರನ್ನು 5:15 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡುಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 5:30 ಪಿ.ಎಂ ಕ್ಕೆ ಒಂದು ಖಾಸಗಿ ವಾಹನ ನೇದ್ದರಲ್ಲಿಠಾಣೆಯಿಂದ ಹೊರಟು 6:00 ಪಿ.ಎಂ ಕ್ಕೆ ಬೇವಿನಾಳ ಎಸ್.ಹೆಚ್ಗ್ರಾಮದ ಶಿವಪ್ಪ ಕಾಮನಟಗಿರವರ ಹೊಲದಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಹೊಲದ ಪಕ್ಕದ ಸಾರ್ವಜನಿಕರಸ್ತೆಯಲ್ಲಿ ಕೆಲವು ಜನರುದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದಒಮ್ಮೆಲೆಅವರ ಮೇಲೆ 06:05 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿಒಟ್ಟು 20 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ಸಾಹೇಬಗೌಡತಂದೆರಾಮಲಿಂಗಪ್ಪದೋರಿ ವ|| 30 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ಬೆವಿನಾಳ ಎಸ್.ಹೆಚ್ ಇವನ ಹತ್ತಿರ 100/- ರೂಗಳು ದೊರೆತವು 2) ಭೀಮರಾಯತಂದೆಯಂಕಪ್ಪ ಅಗಸಿಮನಿ ವ|| 39 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ಬೇವಿನಾಳ ಎಸ್.ಹೆಚ್ ಇವನ ಹತ್ತಿರ 130/- ರೂಗಳು ದೊರೆತವು 3) ಸೋಮಯ್ಯತಂದೆ ಹಣಮಪ್ಪ ಮಾಲಿಬಿರಾದಾರ ವ|| 50 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ಬೇವಿನಾಳ ಎಸ್.ಹೆಚ್ ಇವನ ಹತ್ತಿರ 150/- ರೂಗಳು ದೊರೆತವು 4) ಮಲ್ಲನಗೌಡತಂದೆ ಬಸವರಾಜಚಿಕ್ಕಮೇಟಿ ವ|| 26 ವರ್ಷಜಾ|| ಲಿಂಗಾಯತರೆಡ್ಡಿ ಉ|| ಒಕ್ಕಲುತನ ಸಾ|| ಬೇವಿನಾಳ ಎಸ್.ಹೆಚ್ ಇವನ ಹತ್ತಿರ 180/- ರೂಗಳು ದೊರೆತವು 5) ಭೀಮಣ್ಣತಂದೆ ಹಣಮಂತ ಹುಗಾರ ವ|| 38 ವರ್ಷಜಾ|| ಹುಗಾರ ಉ|| ಒಕ್ಕಲುತನ ಸಾ|| ಬೆವಿನಾಳ ಎಸ್.ಹೆಚ್ ಇವನ ಹತ್ತಿರ 200/- ರೂಗಳು ದೊರೆತವ 6) ಗುರಪ್ಪತಂದೆ ಭೀಮಪ್ಪ ಮಕಾಶಿ ವ|| 45 ವರ್ಷಜಾ|| ಬೇಡರು ಉ|| ಕೂಲಿ ಕೆಲಸ ಸಾ|| ಬೇವಿನಾಳ ಎಸ್.ಹೆಚ್ ಇವನ ಹತ್ತಿರ 100/- ರೂಗಳು ದೊರೆತವು 7) ಬಾಲಪ್ಪತಂದೆರಾಮಪ್ಪ ಸಾಸಗಿರಿ ವ|| 50 ವರ್ಷಜಾ|| ಹೊಲೆಯ ಉ|| ಕೂಲಿ ಕೆಲಸ ಸಾ|| ಬೇವಿನಾಳ ಎಸ್.ಹೆಚ್ ಇವನ ಹತ್ತಿರ 110/- ರೂಗಳು ದೊರೆತವು 8) ರಸೂಲಸಾಬ ತಂದೆಇಮಾಮಸಾಬ ಮಾಸ್ತರ ವ|| 60 ವರ್ಷಜಾ|| ಮುಸ್ಲಿಂ ಉ|| ಕೂಲಿ ಕೆಲಸ ಸಾ|| ಬೆವಿನಾಳ ಎಸ್.ಹೆಚ್ ಇವನ ಹತ್ತಿರ 120/- ರೂಗಳು ದೊರೆತವು 9) ಭೀಮಣ್ಣತಂದೆ ಸೋಮಯ್ಯಆಕಲಕುಪ್ಪಿ ವ|| 39 ವರ್ಷಜಾ|| ಬೇಡರು ಉ|| ಕೂಲಿಕೆಲಸ ಸಾ|| ಬೇವಿನಾಳ ಎಸ್.ಹೆಚ್ ಇವನ ಹತ್ತಿರ 200/- ರೂಗಳು ದೊರೆತವು 10) ಸಿದ್ದಾರ್ಥ ತಂದೆತಿಪ್ಪಣ್ಣ ತಳವಾರ ವ|| 23 ವರ್ಷಜಾ|| ಹೊಲೆಯ ಉ|| ಕೂಲಿ ಕೆಲಸ ಸಾ|| ಬೇವಿನಾಳ ಎಸ್.ಹೆಚ್ ಇವನ ಹತ್ತಿರ 240/- ರೂಗಳು ದೊರೆತವು 11) ಬುಡ್ಡೆಸಾಬ ತಂದೆಖಾಜಾಹುಸೇನಿ ದೇವದುರ್ಗ ವ|| 32 ವರ್ಷಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಬೇವಿನಾಳ ಎಸ್.ಹೆಚ್ ಇವನ ಹತ್ತಿರ 300/- ರೂಗಳು ದೊರೆತವು 12) ಶಿವಬಸವ ತಂದೆ ಹನಮಂತಗುಜ್ಜಲ ವ|| 35 ವರ್ಷಜಾ|| ಬೇಡರು ಉ|| ಕೂಲಿ ಕೆಲಸ ಸಾ|| ಬೇವಿನಾಳ ಎಸ್.ಹೆಚ್ ಇವನ ಹತ್ತಿರ 180/- ರೂಗಳು ದೊರೆತವು 13) ಯಂಕಣ್ಣತಂದೆರಂಗಪ್ಪದೋರಿ ವ|| 37 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ಬೇವಿನಾಳ ಎಸ್.ಹೆಚ್ ಇವನ ಹತ್ತಿರ 170/- ರೂಗಳು ದೊರೆತವು 14) ಭೀಮಣ್ಣತಂದೆತಿಮ್ಮಣ್ಣರೊಡ್ಡರ ವ|| 43 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ಬೇವಿನಾಳ ಎಸ್.ಹೆಚ್ ಇವನ ಹತ್ತಿರ 200/- ರೂಗಳು ದೊರೆತವು 15) ಭೀಮಣ್ಣತಂದೆಗುರಪ್ಪ ಬನ್ನೆಟ್ಟಿ ವ|| 30 ವರ್ಷಜಾ|| ಹೊಲೆಯ ಉ|| ಕೂಲಿ ಕೆಲಸ ಸಾ|| ಬೇವಿನಾಳ ಎಸ್.ಹೆಚ್ ಇವನ ಹತ್ತಿರ 220/- ರೂಗಳು ದೊರೆತವು  16) ರಾಮಪ್ಪತಂದೆ ಹಣಮಂತಅಡ್ಡೊಡಗಿ ವ|| 40 ವರ್ಷಜಾ|| ಹೊಲೆಯ ಉ|| ಕೂಲಿ ಕೆಲಸ ಸಾ|| ಬೇವಿನಾಳ ಎಸ್.ಹೆಚ್ ಇವನ ಹತ್ತಿರ 200/- ರೂಗಳು ದೊರೆತವು 17) ಶಾಂತಗೌಡತಂದೆ ಲಿಂಗನಗೌಡ ಬಾಟೇರ ವ|| 26 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ಬೇವಿನಾಳ ಎಸ್.ಹೆಚ್ ಇವನ ಹತ್ತಿರ 300/- ರೂಗಳು ದೊರೆತವು 18) ಭೀಮಣ್ಣತಂದೆ ನಿಂಗಪ್ಪ ಹಾವಿನ ವ|| 36 ವರ್ಷಜಾ|| ಕುರಬರ ಉ|| ಕೂಲಿ ಕೆಲಸ ಸಾ|| ಬೇವಿನಾಳ ಎಸ್.ಹೆಚ್ ಇವನ ಹತ್ತಿರ 100/- ರೂಗಳು ದೊರೆತವು 19) ಮರೆಪ್ಪತಂದೆ ಬಸಣ್ಣ ಮಡಿವಾಳ ವ|| 40 ವರ್ಷಜಾ|| ಮಡಿವಾಳ ಉ|| ಒಕ್ಕಲುತನ ಸಾ|| ಬೇವಿನಾಳ ಎಸ್.ಹೆಚ್ ಇವನ ಹತ್ತಿರ 220/- ರೂಗಳು ದೊರೆತವು 20) ಶರಣಪ್ಪತಂದೆ ಹಣಮಂತ ಬಡಿಗೇರ ವ|| 37 ವರ್ಷಜಾ|| ಹೊಲೆಯ ಉ|| ಒಕ್ಕಲುತನ ಸಾ|| ಬೇವಿನಾಳ ಎಸ್.ಹೆಚ್ ಇವನ ಹತ್ತಿರ 100/- ರೂಗಳು ದೊರೆತವುಇದಲ್ಲದೆ ಪಣಕ್ಕೆಇಟ್ಟ ಹಣ 3360/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 6880/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿಜಪ್ತಿ ಪಂಚನಾಮೆಯನ್ನು 06:05 ಪಿ.ಎಮ್ ದಿಂದ 07:05 ಪಿ.ಎಮ್ ವರೆಗೆ ಬರೆದುಕೊಂಡಿದ್ದುಇರುತ್ತದೆ. ನಂತರ 20 ಜನಆರೋಪಿರೊಂದಿಗೆ ಮರಳಿ ಠಾಣೆಗೆ ಬಂದು ಸದರಿಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದುಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ. ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!