ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/04/2020

By blogger on ಸೋಮವಾರ, ಏಪ್ರಿಲ್ 13, 2020
                                ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/04/2020 
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 38/2020 ಕಲಂ:504,341,506 ಸಂ 34 ಐಪಿಸಿ:- ಇಂದು ದಿನಾಂಕ: 13/04/2020 ರಂದು 6 ಪಿಎಮ್ ಕ್ಕೆ ಶ್ರೀ ನಾರಾಯಣರಾವ ತಂದೆ ಸುಬ್ಬಾರಾವ ಸಾ:ನಾಯ್ಕಲ್ ತಾ:ವಡಗೇರಾ ರವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಸುಮಾರು 2 ವರ್ಷಗಳಿಂದ ಸೂಗರೆಡ್ಡಿ ತಂದೆ ಸಿದ್ದಪ್ಪ ಪೊಲೀಸ್ ಪಾಟಿಲ್ ಸಾ:ಗುರುಸಣಗಿ ಈತನ ಸುಮಾರು 18 ಎಕರೆ ಗದ್ದೆಯನ್ನು ಲೀಜಿಗೆ ಮಾಡಿಕೊಂಡು ಬರುತ್ತಿದ್ದೇನೆ. ನಾನು ಸದರಿ ಹೊಲವನ್ನು ಲೇವಲಿಂಗ ಮಾಡಿ ಗದ್ದೆ ಮಾಡಲು ಸುಮಾರು 2,50,000/- ರೂ. ಖಚರ್ು ಮಾಡಿರುತ್ತೇನೆ. ಆದರೆ ಇತ್ತಿಚ್ಚೆಗೆ ಸೂಗರೆಡ್ಡಿ ತಂದೆ ಸಿದ್ದಪ್ಪ ಪೊಲೀಸ್ ಪಾಟಿಲ್ ಮತ್ತು ಅವನ ಮಗ ಸಿದ್ದಲಿಂಗರೆಡ್ಡಿ ತಂದೆ ಸೂಗರೆಡ್ಡಿ ಪೊಲೀಸ್ ಪಾಟಿಲ್ ಇಬ್ಬರೂ ಸಾ:ಗುರುಸಣಗಿ ಇವರು ನಾನು ಲೀಜಿಗೆ ಮಾಡಿದ ಗದ್ದೆಯಲ್ಲಿ ಕೂಡಿಸಿದ ಮೋಟರ್ ಬಿಚ್ಚಿಕೊಡು ಮತ್ತು ನಮ್ಮ ಲೀಜಿನ ಹಣ ನಮಗೆ ಕೊಡು ಎಂದು ನನ್ನೊಂದಿಗೆ ತಕರಾರು ಮಾಡುತ್ತಾ ಬರುತ್ತಿದ್ದಾರೆ. ಹೀಗಿದ್ದು ದಿನಾಂಕ: 16/03/2020 ರಂದು ಮದಾಹ್ನ 12-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಬೇಬಿ ಇಬ್ಬರೂ ನಾವು ಲಿಜಿಗೆ ಮಾಡಿದ ಸೂಗರೆಡ್ಡಿಯ ಗದ್ದೆಯಲ್ಲಿ ಕೆಲಸ ಮಾಡಲಿಕ್ಕೆ ಹೋಗುತ್ತಿದ್ದಾಗ ಸದರಿ ಗದ್ದೆಯ ಮ್ಯಾರಿ ಮೇಲೆ ಬಂದ ಗದ್ದೆ ಮಾಲಿಕ ಸೂಗರೆಡ್ಡಿ ಮತ್ತು ಅವನ ಮಗ ಸಿದ್ದಲಿಂಗರೆಡ್ಡಿ ಇಬ್ಬರೂ ಸೇರಿ ನನಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಏ ಮಗನೆ ನಾರಾಯಣ್ಯಾ ನಮ್ಮ ಮೋಟರ್ ಬಿಚ್ಚಿಕೊಡು ಎಂದರೆ ಕೊಡುತ್ತಿಲ್ಲ ಮತ್ತು ಲೀಜಿನ ಹಣ ಕೊಡು ಅಂದರು ಕೊಡುತ್ತಿಲ್ಲ ನಿನ್ನ ಸೊಕ್ಕು ಜಾಸ್ತಿಯಾಗ್ಯಾದ ಮಗನೆ ಎಂದು ನನಗೆ ಬಾಯಿಗೆ ಬಂದಂಗೆ ಅವಾಚ್ಯ ಶಬ್ದಗಳಿಂದ ಬೈದು ಜಗಳ ತೆಗೆದು, ಇಂದು ನಾಳೆ ಅನ್ನುವಷ್ಟರಲ್ಲಿ ನಮ್ಮ ಲೀಜಿನ ಹಣ ಮತ್ತು ಮೋಟರ್ ಎರಡು ನಮಗೆ ಕೊಡಲಿಲ್ಲ ಅಂದ್ರ ನಿನಗೆ ಜೀವಂತ ಖಲಾಸ ಮಾಡುತ್ತೆವೆ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೊದರು. ಅವರು ನನಗೆ ಅವಾಚ್ಯ ಬೈದು ಜೀವ ಬೆದರಿಕೆ ಹಾಕಿದ್ದನ್ನು ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕುಮಾರ ಮತ್ತು ವಿರೇಶ ಇವರು ನೋಡಿರುತ್ತಾರೆ. ಸದರಿಯವರು ನನಗೆ ಗದ್ದೆಯಲ್ಲಿ ಕೆಲಸ ಮಾಡಲು ಬಿಡದೆ ಇದ್ದುದ್ದರಿಂದ ಗದ್ದೆಯಲ್ಲಿ ಭತ್ತದ ಬೆಳೆ ಓಣಗಿ ನನಗೆ ಸುಮಾರು 25-30 ಲಕ್ಷ ರೂ. ಬೆಲೆ ಬಾಳುವ ಕವಳೆ ಬೆಳೆ ಲಾಸ ಆಗಿರುತ್ತದೆ. ಆದ್ದರಿಂದ ಸದರಿಯವರಿಂದ ನನಗೆ ಜೀವ ಭಯ ಇದ್ದು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 38/2020 ಕಲಂ: 504,341,506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 114/2020 ಕಲಂ 87  ಕೆ.ಪಿ ಆಕ್ಟ:- ಇಂದು ದಿನಾಂಕ 13/04/2020  ರಂದು ರಾತ್ರಿ 20-15 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಹನುಮರಡೆಪ್ಪ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು, 8 ಜನ ಆಪಾಧಿತರು ಹಾಗೂ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ,  ಇಂದು ದಿನಾಂಕ 13/04/2020 ರಂದು ಸಾಯಂಕಾಲ 17-00 ಗಂಟೆಗೆ ಫಿರ್ಯಾಧಿಯವರು ಠಾಣೆಯಲ್ಲಿದ್ದಾಗ, ಸಿದ್ರಾಮಯ್ಯ ಪಿ.ಸಿ 258 ಇವರು ತನಗೆ  ಹಂಚಿಕೆಯಾದ ಬೀಟ್ ನಂ 18 ಕಿರಿ ಹೈಯ್ಯಾಳ ಗ್ರಾಮದ ಹನುಮಾನ ಗುಡಿಯ ಹತ್ತಿರ ಕೆಲವು ಜನರು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ತನಗೆ ಬಂದ ಮಾಹಿತಿ ತಿಳಿಸಿದ ಮೇರೆಗೆ ಫಿರ್ಯಾದಿಯವರು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಿಬ್ಬಂದಿ ಮತ್ತು ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ 8 ಜನ ಜೂಜಾಟ ಆಡುತಿದ್ದವರನ್ನು ಹಿಡಿದು ಅವರ ಅಂಗಶೋಧನೆ ಮಾಡಿದಾಗ 2570 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು ಸಾಯಂಕಾಲ 18-20 ಗಂಟೆಯಿಂದ 19-20 ಗಂಟೆಯ ಅವಧಿಯಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ  ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 114/2020 ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 41/2019 427 353 ಸಂ: 34 ಐಪಿಸಿ:- ಇಂದು ದಿನಾಂಕ: 13/04/2020 ರಂದು 01.15 ಪಿಎಮ್ ಕ್ಕೆ ಶ್ರೀ. ಶಂಭುಲಿಂಗ ತಂದೆ ಧರ್ಮಣ್ಣ ನಾಟೇಕಾರ ವಯಾ:32 ಉ: ಪ್ರಭಾರಿ ಶಾಖಾಧಿಕಾರಿಗಳು, ಜೇಸ್ಕಾಂ ವನದುಗರ್ಾ ಸಾ: ವಿಭೂತಿಹಳ್ಳಿ ತಾ ಶಹಾಪೂರ ಜಿ: ಯಾದಗಿರಿ. ರವರು ಠಾಣೆಗೆ ಹಾಜರಾಗಿ ಲಿಖಿತ ಅಜರ್ಿ ನೀಡಿದ್ದು, ಅದರ ಸಾರಂಶ ಏನಂದರೆ, ನಾನು ಶಂಭುಲಿಂಗ ತಂದೆ ಧರ್ಮಣ್ಣ ನಾಟೇಕಾರ ವಯಾ:32 ಉ: ಪ್ರಭಾರಿ ಶಾಖಾಧಿಕಾರಿಗಳು, ಜೇಸ್ಕಾಂ ವನದುಗರ್ಾ ಸಾ: ವಿಭೂತಿಹಳ್ಳಿ ತಾ ಶಹಾಪೂರ ಜಿ: ಯಾದಗಿರಿ. ಇದ್ದು ಈ ಮೂಲಕ ಅಜರ್ಿ ನೀಡುವದೇನಂದರೆ, ಕರಕಳ್ಳಿ ಗ್ರಾಮದಿಂದ ಚಂದಾಪೂರ ಗ್ರಾಮಕ್ಕೆ ನೀರಾವರಿ ಪಂಪಸೆಟ್ ಗಳಿಗೆ ಸರಬರಾಜು ಆಗುವ ಸಾರ್ವಜನಿಕ ವಿತರಣೆ ಮಾರ್ಗದ ಲೈಟಿನ ಕಂಬವನ್ನು ದಿನಾಂಕ: 28/03/2020 ರಂದು 10.30 ಎಎಂ ಸುಮಾರಿಗೆ ಕರಕಳ್ಳಿ ಸೀಮಾಂತರದ ಹೊಲದಲ್ಲಿನ ಲೈಟಿನ ಕಂಬವನ್ನು 1) ನಾಗಪ್ಪ ತಂದೆ ಶರಣಪ್ಪ ಹೂಗಾರ 2) ಈರಪ್ಪ ತಂದೆ ಶರಣಪ್ಪ 3) ದೇವಪ್ಪ ತಂದೆ ಶರಣಪ್ಪ ಸಾ: ಕರಕಳ್ಳಿ ಈ ಮೂರು ಜನರು ಕೂಡಿ ತಮ್ಮ ಒಂದು ಟ್ರ್ಯಾಕ್ಟರ ನಂ: ಕೆಎ-33 ಟಿಎ-9848 ನೇದ್ದರಿಂದ ಕಂಬಕ್ಕೆ ಹಾಯಿಸಿ ಮುರದಿರುತ್ತಾರೆ. ಅಂತಾ ಟೋಪು ತಂದೆ ಕೃಷ್ಣಾ ರಾಠೋಡ, ಅಜರ್ುನ ತಂದೆ ಸೋಮಲು ಚವ್ಹಾಣ, ನೀಲಕಂಠ ತಂದೆ ತೇಜು ಚವ್ಹಾಣ ಇವರುಗಳು ನೋಡಿ ನಮಗೆ ತಿಳಿಸಿದಾಗ, ಮಹಾಂತೇಶ ಶಾಖಾಧಿಕಾರಿಗಳು ವನದುಗರ್ಾ ರವರಿಗೆ ತಿಳಿಸಿದಾಗ ಮಹಾಂತೇಶ ಎಸ್.ಒ ರವರು ಕಿರಿಯ ಪವರ ಮ್ಯಾನ್ ರವರಾದ ಶ್ರೀನಾಥ, ರವರಿಗೆ ಕಳುಹಿಸಿ ಸದರಿ ಮೇಲಿನ ಮೂರುಜನರಿಗೆ ಕಂಬ ಮುರದಿದ್ದೀರಿ ಅದನ್ನು ಹೊಸದಾಗಿ ಹಾಕಿಸಿ ಅಥವಾ ಅದರ ವೆಚ್ಚವನ್ನು ಭರಿಸಿರಿ. ಈಗ ಬೇಸಗಿ ಇದೆ ರೈತರಿಗೆ ನೀರು ಬಿಡಲು ವಿದ್ಯೂತ್ ಅವಶ್ಯ ಇರುತ್ತದೆ ಕೂಡಲೆ ಕಂಬ ಹಾಕಬೇಕು, ಅಂತಾ ಕೇಳಿ ಕೊಂಡಿದ್ದು, ಸದರಿಯವರು ಹಾಕುವದಿಲ್ಲ ಅಂತಾ ಒದರಾಡಿದ್ದಾಗಿ ತಿಳಿಸಿದರು. ಸದರಿಯವರ ವಿಷಯ ಆಮೇಲೆ ನೋಡಿದರಾಯಿತು ಈಗ ರೈತರಿಗೆ ನೀರಿನ ಅವಶ್ಯ ಇರುತ್ತದೆ. ನಮ್ಮ ಕಡೆಯಿಂದ ಹೊಸದಾಗಿ ಕಂಬ ಹಾಕಿದರಾಯಿತು ಅಂತಾ ಶ್ರೀ ಮಹಾಂತೇಶ ಶಾಖಾಧಿಕಾರಿಗಳು, ನಾನು ಮತ್ತು ಕಿರಿಯ ಪವರ ಮ್ಯಾನ್ ರವರಾದ ಶ್ರೀನಾಥ, ಹಾಗೂ ಮುಂದಿನ ಚಂದಾಪೂರ ಸೀಮೆಯ ಹೊಲದವಾರಾದ ಟೋಪು ತಂದೆ ಕೃಷ್ಣಾ ರಾಠೊಡ, ಅಜರ್ುನ ತಂದೆ ಸೋಮಲು ಚವ್ಹಾಣ, ನೀಲಕಂಠ ತಂದೆ ತೇಜು ಚವ್ಹಾಣ ಎಲ್ಲರೂ ಕೂಡಿ ದಿನಾಂಕ: 11/04/2020 ರಂದು ಹೊಸ ಕಂಬ ಹಾಕಲು ನಾಗಪ್ಪ ತಂದೆ ಶರಣಪ್ಪ ಹೂಗಾರ ಇವರ ಹೊಲದಲ್ಲಿ ಹೋಗಿ ತಗ್ಗು ತೋಡುತ್ತಿದ್ದಾಗ ದಿನಾಂಕ: 11/04/2020 ರಂದು ಅಂದಾಜು 04.30 ಪಿಎಂ ಸುಮಾರಿಗೆ  1) ನಾಗಪ್ಪ ತಂದೆ ಶರಣಪ್ಪ ಹೂಗಾರ 2) ಈರಪ್ಪ ತಂದೆ ಶರಣಪ್ಪ 3) ದೇವಪ್ಪ ತಂದೆ ಶರಣಪ್ಪ ಇವರುಗಳು ನಮ್ಮ ಹೊಲದಲ್ಲಿಂದ ಕಂಬ ಹಾಕಲು ಬಿಡುವದಿಲ್ಲ ಅಂತಾ ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹೊಸದಾಗಿ ತಂದ ಕಂಬವನ್ನು ಕೂಡ ಟ್ರ್ಯಾಕ್ಟರ ನಂ: ಕೆಎ-33 ಟಿಎ-9848 ನೇದ್ದರಿಂದ ಕಂಬಕ್ಕೆ ಹಾಯಿಸಿ ಮುರದಿರುತ್ತಾರೆ. ಕಾರಣ ಸದರಿ ಮೂರು ಜನರು ಎರಡು ಲೈಟಿನ ಕಂಬಗಳನ್ನು ಮುರಿದು ಅಂದಾಜು: 20,000=00 ರೂ ಸ್ವತ್ತನ್ನು ಹಾನಿಗೊಳಿಸಿದ್ದಾರೆ, ಈ ವಿಷಯದಲ್ಲಿ ನಮ್ಮ ಅಧಿಕಾರಿಗಳೊಂದಿಗೆ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ:13/04/2020 ರಂದು ಪೊಲೀಸ್ ಠಾಣೆಗೆ ಬಂದು ಈ ಅಜರ್ಿಯನ್ನು ನೀಡಿದ್ದು ಇರುತ್ತದೆ. 
          ಕಾರಣ ಸದರಿ 1) ನಾಗಪ್ಪ ತಂದೆ ಶರಣಪ್ಪ ಹೂಗಾರ 2) ಈರಪ್ಪ ತಂದೆ ಶರಣಪ್ಪ 3) ದೇವಪ್ಪ ತಂದೆ ಶರಣಪ್ಪ ಸಾ: ಕರಕಳ್ಳಿ ಈ ಮೂರು ಜನರು ಸಾರ್ವಜನಿಕ ವಿತರಣೆಯ ಲೈಟಿನ ಕಂಬಗಳನ್ನು ಮುರಿದು ಹಾನಿ ಮಾಡಿ ನಮ್ಮ ಕರ್ತವ್ಯಕ್ಕೆ ಅಡೆತಡೆ ಮಾಡಿದ್ದು ಸದರಿಯವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಸಾರಂಶದ ಮೇರೆಗೆ ಠಾಣೆ ಗುನ್ನೆ ನಂ: 41/2020 ಕಲಂ: 353, 427 ಸಂ: 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 39/2020 87  ಕೆ.ಪಿ ಯಾಕ್ಟ:- ಇಂದು ದಿನಾಂಕ:12/04/2020 ರಂದು 17.30 ಮಾನ್ಯ ಡಿವೈಎಸ್ಪಿ ಸಾಹೇಬರಾದ ಶ್ರೀ ವೆಂಕಟೇಶ ಸುರಪುರ ಉಪ-ವಿಭಾಗ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಣಸಗಿ ಮದ್ದಿನಿಮನಿ ಕ್ಯಾಂಪ್ ಸಮೀಪ್ ಕೆನಾಲ ದಂಡೆಗೆ ಒಂದು ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದ ಮೆರೆಗೆ ಸ್ಥಳಕ್ಕೆ ಬೇಟಿ ನೀಡಿ ಖಚಿತಪಡಸಿಕೊಂಡು ಜೂಜಾಟವನ್ನು ಆಡುವವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:39/2020 ಕಲಂ. 87 ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.
       ನಂತರ ಮಾನ್ಯ ಡಿವೈಎಸ್ಪಿ ಸಾಹೇಬರಾದ ಶ್ರೀ ವೆಂಕಟೇಶ ಸುರಪುರ ಉಪ-ವಿಭಾಗ ರವರು ಠಾಣೆಗೆ 20.20 ಗಂಟೆಗೆ ಮರಳಿ ಠಾಣೆಗೆ ಬಂದು 6 ಜನ ಆರೋಪಿತರು & ನಗದು ಹಣ 16.700/- ರೂ.ಗಳು ಹಾಗೂ 52 ಇಸ್ಪೀಟ್ ಎಲೆಗಳು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಲ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. ಆರೋಪಿತರ ಹೆಸರು ಈ ರೀತಿ ಇದೆ,  1) ದಾವಲ್ ತಂದೆ ದಸ್ತಗಿರ್ ಮೂಕಿಹಾಳ ವಯ:30 ವರ್ಷ ಜಾ:ಮುಸ್ಲಿಂ ಉ:ವೆಲ್ಡಿಂಗ ಕೆಲಸ ಸಾ:ಆಶ್ರಯಕಾಲೋನಿ ಹುಣಸಗಿ 2) ಮೈಬೂಬ ಅಲಿ ತಂದೆ ಮಶಾಕಸಾಬ ಮುನ್ಸಿ ವಯ:36 ವರ್ಷ ಜಾ:ಮುಸ್ಲಿಂ ಉ:ಒಕ್ಕಲತನ ಸಾ:ಗಾಂಧಿ ಬಜಾರ ಹುಣಸಗಿ 3)ಇಮಾಮೋದ್ದಿನ ತಂದೆ ಉಮ್ಮರಸಾಬ ನಭೋಜಿ ವಯ:35 ಜಾ:ಮುಸ್ಲಿಂ ಉ:ಎಲೆಕ್ಟ್ರೀಷಿಯನ್ ಸಾ:ಗಾಂಧಿ ಬಜಾರ ಹುಣಸಗಿ 4)ಇಬ್ರಾಹಿಂ ತಂದೆ ಖಾಸಿಂಸಾಬ ಖುರೇಷಿ  ವಯ: 37 ವರ್ಷ ಜಾ:ಮುಸ್ಲಿಂ ಉ:ಮೆಕ್ಯಾನಿಕ್ ಕೆಲಸ ಸಾ:ಹನುಮಾನ ನಗರ ಹುಣಸಗಿ 5)ಮುತರ್ುಜಾ ತಂದೆ ಬುಡಾನಸಾಬ ಹಿರೇಮನಿ ವಯ:40 ವರ್ಷ, ಜಾ:ಮುಸ್ಲಿಂ ಉ:ಟ್ರ್ಯಾಕ್ಟರ್ ಮೆಕ್ಯಾನಿಕ್ ಸಾ:ಹನುಮನ ನಗರ ಹುಣಸಗಿ 6) ಅಲ್ಲಾಬಕ್ಷ ತಂದೆ ಇಮಾಮಸಾಬ ಯಾಳಗಿ ವಯ:39 ಜಾ:ಮುಸ್ಲಿಂ ಉ:ಇಟಾಚಿ ಆಪರೇಟರ್ ಸಾ:ಕೆಂಭಾವಿ ಕ್ರಾಸ್ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!