ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/04/2020

By blogger on ಭಾನುವಾರ, ಏಪ್ರಿಲ್ 12, 2020





                           ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/04/2020 
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 37/2020 ಕಲಂ. 87 ಕೆ.ಪಿ ಎಕ್ಟ್ 1963:- ಇಂದು ದಿನಾಂಕ; 12/04/2020 ರಂದು 12-15 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು-2) ಯಾದಗಿರಿ ನಗರ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ.12/04/2020 ರಂದು  11-00 ಎಎಮ್ ಕ್ಕೆ ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವೇಶ್ವರ ನಗರದ ಮೆಟ್ರೋ ಹೊಟೇಲ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಭಾತ್ಮೀ ಬಂದಿದ್ದು ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 12-15 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.37/2020 ಕಲಂ.87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.




ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 48/2020 ಕಲಂ. 87 ಕೆ.ಪಿ ಎಕ್ಟ್ 1963:- ಇಂದು ದಿನಾಂಕ; 12/04/2020 ರಂದು 6-00 ಪಿಎಮ್ ಕ್ಕೆ ಶ್ರೀ ಶಂಕರಗೌಡ ಎ.ಎಸ್.ಐ ಯಾದಗಿರಿ ಗ್ರಾಮೀಣ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ ನಾನು ಇಂದು ದಿನಾಂಕ. 12/04/2020 ರಂದು  5-15 ಪಿಎಮ್ ಕ್ಕೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಇರುವಾಗ  ಮಾನ್ಯ ಸದಾಶೀವ ಸೋನಾವಣೆ ಪಿ.ಐ. ಸಾಹೇಬರು ಡಿ.ಸಿ.ಐ.ಬಿ. ಘಟಕ ಯಾದಗಿರಿ ರವರು ಪೋನ ಮೂಲಕ ಮಾಹಿತಿ ನೀಡಿದ್ದೆನೆಂದರೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಅಲ್ಲಿಪೂರ ಗ್ರಾಮದ ಸೀಮಾಂತರದಲ್ಲಿ   ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 48/2020 ಕಲಂ. 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 61/2020 ಕಲಂ 379 ಐಪಿಸಿ :- ಇಂದು ದಿನಾಂಕ 12.04.2020 ರಂದು ಸಮಯ ಬೆಳಗಿನ ಜಾವ 3:00 ಆರೋಪಿತರು ತಮ್ಮ-ತಮ್ಮ ಟ್ರ್ಯಾಕ್ಟರಗಳ ಮಾಲೀಕರು ಹೇಳಿದಂತೆ ತಮ್ಮ-ತಮ್ಮ ಟ್ರ್ಯಾಕ್ಟರಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಸದರಿ ಮರಳನ್ನು ಸಾಗಿಸುತ್ತಿದ್ದಾಗ ಮಾನ್ಯ ಎಸ್.ಪಿ ಸಾಹೇಬ, ಯಾದಗಿರಿ ಮತ್ತು ಮಾನ್ಯ ಪಿ.ಐ ಸಾಹೇಬ, ಡಿ.ಸಿ.ಆರ್.ಬಿ ಘಟಕ, ಯಾದಗಿರಿ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಸಿಕ್ಕಿಬಿದ್ದ ಆರೋಪಿತರ ವಶದಲ್ಲಿದ್ದ ಹಾಗೂ ಓಡಿ ಹೋದ ಆರೋಪಿತನ ಮರಳು ತುಂಬಿದ ಟ್ರ್ಯಾಕ್ಟರಗಳನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಟ್ರ್ಯಾಕ್ಟರ ಚಾಲಕರ ಮೇಲೆ ಮತ್ತು ಸಂಬಂಧಪಟ್ಟ ಮಲೀಕರ  ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 61/2020 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 62/2020 ಕಲಂ 341, 447, 323, 504, 506 ಸಂ. 34 ಐಪಿಸಿ:-ದಿನಾಂಕ 09.04.2020 ರಂದು ಬೆಳಿಗ್ಗೆ 8.00 ಗಂಟೆಯಿಂದ 8.45 ಗಂಟೆ ಅವಧಿಯಲ್ಲಿ ಪಿರ್ಯಾಧಿಯ ಮಗ ಮಲ್ಲಿಕಾಜರ್ುನ ಹೊಲದಲ್ಲಿ ಕುಂಟೆ ಹೊಡೆಯುತ್ತಿರುವಾಗ ಆರೋಪಿತನು ಪಿರ್ಯಾಧಿಯ ಹೊಲದಲ್ಲಿ ಅಕ್ರಮ ಪ್ರವೇಶಮಾಡಿ ಅವಾಚ್ಯವಾಗಿ ಬೈದು ಹೊಡೆಬಡಿ ಮಾಡಿ ಜೀವದ ಬೆದರಿಕೆ ಹಾಕಿ ಗುರುಮಠಕಲಗೆ ಬರುವಾಗ ತಡೆದು ನಿಲ್ಲಿಸಿದ ಬಗ್ಗೆ ಅಪರಾಧ.

ಸೈದಾಪೂರ  ಪೊಲೀಸ್ ಠಾಣೆ ಗುನ್ನೆ ನಂ:- 50/2020 ಕಲಂ. 279,337,338 ಐಪಿಸಿ ;- ದಿನಾಂಕ 12-04-2020 ರಂದು ಬೆಳಿಗ್ಗೆ 06-35 ಗಂಟೆಗೆ ಸರಕಾರಿ ಆಸ್ಪತ್ರೆ ಸೈದಾಪೂರದಿಂದ ಪೊನ್ ಮೂಲಕ ಎಮ್.ಎಲ್ ಇದೆ ಅಂತಾ ತಿಳಿಸಿದ್ದು ಎಮ್.ಎಲ್.ಸಿ ಕುರಿತು ಆಸ್ಪತ್ರೆ ಭೆಟಿ ನೀಡಿ ಅಲ್ಲಿ ಉಪಚಾರ ಪಡೆಯುತಿದ್ದ ಗಾಯಾಳು ಸಂತೋಷ ಕುಮಾರ ತಂದೆ ಗುರಬಸಯ್ಯ ಹಿರೇಮಠ ವಯಾ|| 36 ವರ್ಷ ಜಾ|| ಜಂಗಮ ಉ|| ಲಾರಿ ಕಿನ್ನರ್ ಸಾ|| ಬೈರಮಡಗಿ ತಾ|| ಅಫಜಲಪೂರ ಜಿ|| ಕಲಬುರಗಿ ಇತನಿಗೆ ವಿಚಾರಿಸಿಲಾಗಿ ಆತನು ಹೇಳಿಕೆ ನೀಡಿದ್ದೆನೆಂದರೆ ದಿನಾಂಕ: 12-04-2020 ರಂದು ಮದ್ಯ ರಾತ್ರಿ 02-00 ಗಂಟೆಗೆ ಲಾರಿ ನಂಬರ ಕೆಎ-32 ಎ-5174 ನೇದ್ದರಲ್ಲಿ ನಾನು ಮತ್ತು ಚಾಲಕ ಮತ್ತು ಮಾಲಿಕ 3 ಜನರು ಸೇರಿಕೊಂಡು  ಲಾರಿಯಲ್ಲಿ ಇಟ್ಟಿಗೆಯನ್ನು ಯಾದಗಿರಿ ಜಿಲ್ಲೆಯ ಕೂಡ್ಲೂರ ಗ್ರಾಮದಲ್ಲಿ ಹಾಕಲು ಯಾದಗಿರಿ- ರಾಯಚೂರ ಮುಖ್ಯ ರಸ್ತೆಯ ಮೇಲೆ ಸೈದಾಪೂರದ ಕರಿಬೆಟ್ಟ ಕ್ರಾಸ ಹತ್ತಿರ ಇಂದು ಬೆಳಿಗ್ಗೆ 05-30 ಗಂಟೆಗೆ ಬರುತ್ತಿರುವಾಗ ಲಾರಿ ಚಾಲಕನು ಲಾರಿಯನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿ ಲಾರಿ ಪಲ್ಟಿ ಮಾಡಿದ್ದು ಅಪಘಾತದಲ್ಲಿ ನನಗೆ ತಲೆಗೆ ಮತ್ತು ಬಗೈಗೆ ಭಾರಿ ರಕ್ತಗಾಯವಾಗಿರುತ್ತದೆ ಅಂತಾ ಪಿಯರ್ಾಧಿ ನೀಡಿದ್ದು ಇರುತ್ತದೆ.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ;- 51/2020 ಕಲಂ 87 ಕೆ.ಪಿ ಕಾಯ್ದೆ:- ಇಂದು ದಿನಾಂಕ: 12-04-2020 ರಂದು 02.00 ಪಿಎಮ್ ಕ್ಕೆ ಪಿ.ಎಸ್.ಐ ರವರು ಠಾಣೆಗೆ ಬಂದು ಆನೂರ(ಬಿ) ಗ್ರಾಮದಲ್ಲಿ ಮಧ್ಯಾಹ್ನ 12.30 ಗಂಟೆಗೆ ಅಂದರ ಬಾಹರ ಇಸ್ಪೆಟ  ಜೂಜಾಟದ ಮೇಲೆ ದಾಳಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆ ಜೊತೆಗೆ 5 ಜನ ಆರೋಪಿತರು ಮತ್ತು ಮುದ್ದೆಮಾಲುಗಳನ್ನು ತಂದು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಾಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 51/2020 ಕಲಂ.87 ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
  

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 52/2020 ಕಲಂ 15[ಎ], 32[3]  ಕೆ,ಇ ಯಾಕ್ಟ್:- ಇಂದು ದಿನಾಂಕ: 12-04-2020 ರಂದು ಸಾಯಂಕಾಲ 06-45 ಗಂಟೆಗೆ ಪಿ.ಎಸ್.ಐ ರವರು ಬಳಿಚಕ್ರ ಗ್ರಾಮದ ನಾಡಕಛೇರಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಪರವಾನಿಗೆ ಇಲ್ಲದೆ ಮದ್ಯ ಸೇವನೆ ಮಾಡುವ ವ್ಯಕ್ತಿಗಳನ್ನು ಮತ್ತು ಮದ್ಯವನ್ನು ವಶಕ್ಕೆ ಪಡೆದುಕೊಂಡು ಜ್ಞಾಪನ ಪತ್ರದೊಂದಿಗೆ ಮದ್ಯದ ಜಪ್ತಿಪಂಚನಾಮೆಯನ್ನು ಹಾಗೂ ಆರೋಪಿತರನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ  ಮೇಲಿಂದ ಠಾಣಾ ಗುನ್ನೆ ನಂ. 52/2020 ಕಲಂ. 15[ಎ], 32[3]  ಕೆ.ಇ ಕಾಯ್ದೆ  ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು


ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 112/2020. ಕಲಂ 87 ಕೆ.ಪಿ.ಆಕ್ಟ:- ಆರೋಪಿತರು ದಿನಾಂಕ: 12-04-2020 ರಂದು 3:00 ಪಿ.ಎಮ್.ಕ್ಕೆ ಪರಸಾಪೂರ ಗ್ರಾಮದ ಹನುಮಾನ ದೇವಸ್ಥಾನದ  ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಕೂಡಿ ದುಂಡಾಗಿ ಕುಳಿತು 52 ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದಾಗ ಫಿಯರ್ಾದಿದಾರರು ಸಿಬ್ಬಂದಿಯೊಂದಿಗೆ ಹೊಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಅವರಿಂದ ಒಟ್ಟು 3200/- ರೂ. ನಗದು ಹಣ , ಮತ್ತು 52 ಇಸ್ಪೀಟ ಎಲೆಗಳನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು ಸದರಿ ವರದಿಯು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 112/2020 ಕಲಂ.87 ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.



ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 113/2020.ಕಲಂ 87 ಆ್ಯಕ್ಟ:- ಇಂದು ದಿನಾಂಕ: 12/04/2020 ರಂದು 20-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾಧಿ ಶ್ರೀ ಹನುಮರಡ್ಡೆಪ್ಪ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ 5  ಜನ ಆರೋಪಿತರು ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ 12/04/2020 ರಂದು ಸಾಯಂಕಾಲ ಠಾಣೆಯಲ್ಲಿದ್ದಾಗ ಬೋಲಾರಿ ಗ್ರಮದ ಹನುಮಾನ ಗುಡಿಯ ಮುಂದೆ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಏಲೆಗಳ ಸಹಾಯದಿಂದ ಅಂದರ ಭಾಹಾರ ಜೂಜಾಟ ಆಡುತ್ತಿದ್ದೆರೆ ಅಂತ  ಖಚಿತ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಬೋಳಾರಿ ಗ್ರಾಮಕ್ಕೆ ಹೋಗಿ ದಾಳಿ ಮಾಡಿದ್ದು 5 ಜನ ಆರೋಪಿತರು ಸಿಕ್ಕಿದ್ದು ಅಂಶೋದನೆ ಮಾಡಲಾಗಿ ಮತು ಕಣದಲ್ಲಿ ಒಟ್ಟು 2010 ರೂ ಹಾಗೂ 52 ಇಸ್ಪೇಟ ಏಲೆಗಳು ಸಿಕ್ಕಿದ್ದು ಮುದ್ದೆಮಾಲಗಳನ್ನು ಸಾಯಂಕಲ 18-00 ಗಂಟೆಯಿಂದ 19-00 ಗಂಟೆಯವರೆಗೆ  ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಸದರಿ  ಆರೋಪಿತನ ವಿರುದ್ದ ಠಾಣೆ ಗುನ್ನೆ ನಂ  113/2020 ಕಲಂ 87 ಕೆ.ಪಿ.,ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ. 



ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 101/2020 20 (ಂ)(ಃ) ಎನ್.ಡಿ.ಪಿ.ಎಸ್. ಕಾಯ್ದೆ-1985:- ಇಂದು ದಿನಾಂಕ:12-04-2020 ರಂದು 2 ಪಿ ಎಂ ಕ್ಕೆ ಶ್ರೀ ಎಸ್.ಎಮ್.ಪಾಟೀಲ ಪಿ.ಐ ಸುರಪೂರಠಾಣೆರವರು ಮುದ್ದೇಮಾಲುಜಪ್ತಿ ಪಂಚನಾಮೆಯೊಂದಿಗೆಠಾಣೆ ಹಾಜರಾಗಿ ವರದಿ ನೀಡಿದ್ದು ಸಾರಾಂಶವೆನೆಂದರೆಇಂದು ದಿನಾಂಕ:12/04/2020 ರಂದು 10 ಎ.ಎಮ್.ಕ್ಕೆ ನಾನು ಸುರಪೂರ ಪೊಲೀಸ್ಠಾಣೆಯಲ್ಲಿದ್ದಾಗ ನನಗೆ ಖಚಿತ ಬಾತ್ಮಿ ಬಂದಿದ್ದೇನೆಂದರೆ, ಮಾಚಗುಂಡಾಳ ಸೀಮಾಂತರದ ಸವರ್ೆ ನಂ:33/2 ರಲ್ಲಿ ಬಾಲಂಡಪ್ಪತಂದೆದೇವಪ್ಪ ಬಾಕಲಿ  ಸಾ:ಮಾಚಗುಂಡಾಳ ಎಂಬುವನು ತನ್ನ ಹೊಲದಲ್ಲಿಅನಧಿಕೃತವಾಗಿಗಾಂಜಾ ಬೆಳೆದು ಅದನ್ನು ಮಾರಾಟ ಮಾಡಲುಕಿತ್ತುತ್ತಿದ್ದಾನೆಅಂತಾ ಮಾಹಿತಿ ಬಂದ ಮೇರೆಗೆಅನಧಿಕೃತವಾಗಿಗಾಂಜಾ ಬೆಳೆದ ಸ್ಥಳದ ಮೇಲೆ ದಾಳಿ ಮಾಡುವಕುರಿತು, ಇಬ್ಬರು ಪಂಚರಾದ 1) ಶ್ರೀ ಸತೀಶತಂದೆ ಶ್ರಿಶೈಲಪ್ಪಆಲಗೂರ ವಯಾ:35 ವರ್ಷ ಉ: ಪಂಚಾಯತಅಭಿವೃದ್ದಿ ಅಧಿಕಾರಿಗಳು ಬಾದ್ಯಾಪೂರಜಾತಿ:ಲಿಂಗಾಯತ ಸಾ:ಕೆಂಬಾವಿ 2) ಶ್ರೀ ಪ್ರಧಿಪಕುಮಾರತಂದೆ ಪಾಂಡುರಂಗರಾವ್ ನಲವಾಡೆ ವಯಾ:32 ವರ್ಷ ಉ:ಗ್ರಾಮ ಲೇಕ್ಕಾಧಿಕಾರಿಜಾತಿ:ಮರಾಠಾ ಸಾ:ಸುರಪೂರಇವರನ್ನುಠಾಣೆಯಎಸ್.ಬಿ ಕರ್ತವ್ಯ ನಿವರ್ಾಹಿಸುವ ಹೆಚ್ಸಿ-176 ತಮ್ಮಣ್ಣರವರ ಮುಖಾಂತರಠಾಣೆಗೆ ಕರೆಯಿಸಿ ಅವರಿಗೆ ವಿಷಯ ತಿಳಿಸಿ ಗಾಂಜಾತೂಕ ಮಾಡುವಕುರಿತುತೂಕ ಮಾಡುವ ಸಾಧನದೊಂದಿಗೆ ವ್ಯಾಪಾರಿಯಾದರಾಜುತಂದೆಈಷ್ಟಲಿಂಗಪ್ಪ ಬಾರಿ ಸಾ:ಸುರಪೂರಈತನಿಗೆ ಕರೆಸಿದೆನು. ಮಾನ್ಯ ಪತ್ರಾಂಕಿತ ಅಧಿಕಾರಿಗಳಾದ ನಿಂಗಪ್ಪ ಬಿರಾದಾರ ತಹಸಿಲ್ದಾರರು ಸುರಪೂರಇವರಿಗೆ ಮಾಹಿತಿ ನೀಡಿ ದಾಳಿಗೆ ಸಹಕರಿಸುವಂತೆ ಫೋನ್ ಮಾಡಿ ವಿನಂತಿಸಿಕೊಂಡಿದ್ದರಿಂದ ಮಾನ್ಯ ತಹಸಿಲ್ದಾರರು ಸುರಪೂರರವರುತಮ್ಮ ವಾಹನದಲ್ಲಿಠಾಣೆಗೆ ಬಂದರು. ಮಾನ್ಯಡಿ.ಎಸ್.ಪಿ ಸಾಹೇಬರು ಸುರಪುರರವರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ ಪತ್ರಾಂಕಿತ ಅಧಿಕಾರಿಗಳಾದ ಮಾನ್ಯ ತಹಸಿಲ್ದಾರರು, ಪಂಚರು, ತೂಕ ಮಾಡುವರು, ಇವರೆಲ್ಲರೊಂದಿಗೆ ನಾನು ಮತ್ತು ನಮ್ಮಠಾಣೆಯ ಸಿಬ್ಬಂದಿಯವರಾದ ಮನೋಹರ ಹೆಚ್ಸಿ-105  ಚಂದ್ರಶೇಖರ ಹೆಚ್ಸಿ-134, ಮಂಜುನಾಥ ಹೆಚ್ಸಿ-176, ಬಸವರಾಜ ಸಿಪಿಸಿ-180, ಸುಭಾಸ ಸಿಪಿಸಿ-174, ಪರಮೇಸಿ ಸಿಪಿಸಿ-142 ಹಾಗೂ ಜೀಪಚಾಲಕನಾದ ಮಹಾಂತೇಶ ಎಪಿಸಿ-48 ಇವರೊಂದಿಗೆಠಾಣೆಯ ಸರಕಾರಿಜೀಪ್ ನಂ:ಕೆಎ-33, ಜಿ-0238 ನೇದ್ದರಲ್ಲಿ ನಮ್ಮ ಸಿಬ್ಬಂದಿ ಜನರು, ಪಂಚರು, ತೂಕ ಮಾಡುವವರು ಮತ್ತು ತಹಸಿಲ್ದಾರರು ಸುರಪೂರಇವರ ಸರಕಾರಿಜೀಪ್ ನಂ:ಕೆಎ-33, ಜಿ-0233 ರಲ್ಲಿಅವರಜೀಪ್ಚಾಲಕರೊಂದಿಗೆಠಾಣೆಯಿಂದ 10-45 ಎ.ಎಮ್ಕ್ಕೆ ಹೊರಟುಗ್ರಾಮ ಲೆಕ್ಕಾಧಿಕಾರಿಗಳಾದ ಪ್ರಧಿಪಕುಮಾರಇವರ ಸಹಾಯದಿಂದ ಮಾಹಿತಿ ಸ್ಥಳವಾದ ಮಾಚಗುಂಡಾಳ ಸೀಮಾಂತರದಲ್ಲಿನ ಸವರ್ೆ ನಂ:33/2 ನೇದ್ದರ ಹೊಲದ ಹತ್ತಿರ 11.15 ಎ.ಎಮ್ಕ್ಕೆ ಹೋಗಿ ಜೀಪಗಳನ್ನು ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಹೊಲದಲ್ಲಿ ನಡೆದುಕೊಂಡು ಹೋಗುತ್ತಿದ್ದಂತೆ ಹೊಲದಲ್ಲಿದ್ದಒಬ್ಬ ವ್ಯಕ್ತಿ ನಮ್ಮನ್ನು ನೋಡಿಅಲ್ಲಿಂದ ಓಡಿ ಹೋದನು ನಾವು ಹೊಲದ ಒಳಗಡೆ ತಿರುಗಾಡಿ ಪರಿಶೀಲಿಸಿ ನೋಡಲಾಗಿ, ಹೊಲದಲ್ಲಿ ಸೆಂಗಾ ಬಿತ್ತಿದ್ದು ಸೆಂಗಾದ ಹೊಲದದಂಡೆಯಲ್ಲಿರುವ ಬಾದಾಮಿಗಿಡದ ಕೆಳಗೆ ಗಾಂಜಾ ಗಿಡಗಳ ಸುಡು ಮಾಡಿ ಗುಂಪೆ ಹಾಕಿದ್ದು, ಸದರಿ ಗಾಂಜಾಗಿಡಗಳನ್ನು ಪರಿಶೀಲಿಸಿ ನೋಡಲಾಗಿ ಸೆಂಗಾ ಬೆಳೆಯಲ್ಲಿ ಬೇಳದ ಗಾಂಜಾ ಗಿಡಗಳನ್ನು ಸುಡು ಮಾಡಿ ಗುಂಪೆ ಹಾಕಿದ್ದು, ಸದರಿ ಗಿಡಗಳನ್ನು ಜಪ್ತಿಪಡಿಸಿಕೊಳ್ಳುವ ಕುರಿತು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮಗಾಂಜಾ ಗಿಡಗಳ ಸುಡುಗಳನ್ನು ಪರೀಶಿಸಿ ನೋಡಲಾಗಿ ಅವು ಬೇರು ಮತ್ತು ಮಣ್ಣು ಸಮೇತ ಬಂದಿದ್ದು ಅವುಗಳನ್ನು ಎಣಿಕೆ ಮಾಡಿ ನೋಡಲಾಗಿಒಟ್ಟು 04 ಸುಡುಗಳಿದ್ದು ಒಂದೊಂದ್ದು ಸುಡುಗಳಲ್ಲಿ 20 ಹಸಿ ಗಾಂಜಾ ಗಿಡಗಳು ಇದ್ದು ಪ್ರತಿ ಸೂಡಿನಿಂದ ಶಾಂಪಲ್ಕುರಿತು ಸುಮಾರು 50 ಗ್ರಾಂ. ಹಸಿ ಗಾಂಜಾದ ಹೂವು, ಎಲೆಗಳನ್ನು ಪರೀಕ್ಷೆಕುರಿತು ತೆಗೆದಿರಿಸಿ ಅವುಗಳನ್ನು ಬೇರೆ ಬೇರೆಯಾಗಿ ವಿಂಗಡಿಸಿ ಪ್ರತ್ಯೇಕವಾಗಿ ಬಿಳಿ ಅರಿವೆಚೀಲದಲ್ಲಿ ಹಾಕಿ ಅವುಗಳ ಮೇಲೆ ನನ್ನ ಮತ್ತು ಪಂಚರು ಸಹಿ ಮಾಡಿದ ಚೀಟಿಗಳನ್ನು ಅಂಟಿಸಿ ಅವುಗಳಿಗೆ ಕೆಎಲ್ಆರ್ಅಂತಾಇರುವಅರಗಿನ ಸೀಲ್ ಹಾಕಿ ಅವುಗಳಿಗೆ ಎಸ್-1 ದಿಂದ ಎಸ್-4 ರ ವರೆಗೆಗುರುತು ಮಾಡಿದ್ದುಅದೆ. ಗಾಂಜಾಗಿಡಗಳಿದ್ದ ಸೂಡುಗಳನ್ನು ಪ್ರತ್ಯೇಕವಾಗಿತೂಕ ಮಾಡಿದ ವಿವರ ಈ ರೀತಿಅದೆ. 1] ಬೇರು ಮತ್ತು ಮಣ್ಣು ಸಮೇತಇರುವ ಹೂ & ಕಾಯಿಗಳುಳ್ಳ 20 ಹಸಿ ಗಾಂಜಾ ಗಿಡಗಳು ಇರುವ 1 ನೇ ಸೂಡುಇದರತೂಕ 5 ಕೆ.ಜಿ. ಅಂದಾಜು ಬೆಲೆ, 15000/- ರೂ,2] ಬೇರು ಮತ್ತು ಮಣ್ಣು ಸಮೇತಇರುವ ಹೂ & ಕಾಯಿಗಳುಳ್ಳ 20 ಹಸಿ ಗಾಂಜಾ ಗಿಡಗಳು ಇರುವ 2 ನೇ ಸೂಡುಇದರತೂಕ 3 ಕೆ.ಜಿ. 500 ಗ್ರಾಮಅಂದಾಜು ಬೆಲೆ, 10500/- ರೂ,3] ಬೇರು ಮತ್ತು ಮಣ್ಣು ಸಮೇತಇರುವ ಹೂ & ಕಾಯಿಗಳುಳ್ಳ 20 ಹಸಿ ಗಾಂಜಾ ಗಿಡಗಳು ಇರುವ 3 ನೇ ಸೂಡುಇದರತೂಕ 6 ಕೆ.ಜಿ. ಅಂದಾಜು ಬೆಲೆ, 18000/- ರೂ,4] ಬೇರು ಮತ್ತು ಮಣ್ಣು ಸಮೇತಇರುವ ಹೂ & ಕಾಯಿಗಳುಳ್ಳ 20 ಹಸಿ ಗಾಂಜಾ ಗಿಡಗಳು ಇರುವ 4 ನೇ ಸೂಡುಇದರತೂಕ 4 ಕೆ.ಜಿ. ಅಂದಾಜು ಬೆಲೆ, 12000/- ರೂಗಳುಈ ಪ್ರಕಾರಒಟ್ಟು 4 ಸೂಡುಗಳು ಇದ್ದು ಸದರಿಗಾಂಜಾ ಗಿಡಗಳ 4 ಸೂಡಿನಒಟ್ಟುತೂಕ 18 ಕೆ.ಜಿ. 500 ಗ್ರಾಂಆಗಿದ್ದು ಪ್ರತಿಕೆ.ಜಿಅಂದಾಜು 3000=00 ರೂ, ಗಳಂತೆ ಒಟ್ಟುಅಂದಾಜು ಬೆಲೆ 55,500=00 ರೂ ಗಳು ಆಗಬಹುದು. ಗಾಂಜಾ ಗಿಡಗಳ ಜಪ್ತಿ ಪಂಚನಾಮೆಯನ್ನು 11.30 ಎ.ಎಮ್.ದಿಂದ 12.45 ಪಿ.ಎಮ್. ವರೆಗೆಕೈಕೊಂಡಿದ್ದು ಪಂಚನಾಮೆ ಕಾಲಕ್ಕೆ ಸುಭಾಸ ಸಿಪಿಸಿ-174 ಇವರು ಫೋಟೊತೆಗೆದಿರುತ್ತಾರೆ. ಸದರಿ ಮುದ್ದೇಮಾಲು ಮತ್ತುಜಪ್ತಿ ಪಂಚನಾಮೆಯೊಂದಿಗೆ ಮರಳಿ ಠಾಣೆಗೆ 01:30 ಪಿ.ಎಮ್.ಕ್ಕೆ ಬಂದು 2 ಪಿ.ಎಮ್.ಕ್ಕೆ ವರದಿ ಸಲ್ಲಿಸಿದ್ದು ಸದರಿಅಕ್ರಮಗಾಂಜಾ ಬೆಳೆದ ಆರೋಪಿತನ ವಿರುಧ್ಧ ಕಾನೂನು ಕ್ರಮಜರುಗಿಸಲುಅಂತಾ ವರದಿ ಸಾರಂಶದ ಮೇಲಿಂದಠಾಣೆಗುನ್ನೆ ನಂ:101/2020 ಕಲಂ: 20(ಂ)(ಛ) ಎನ್.ಡಿ.ಪಿ.ಎಸ್. ಕಾಯ್ದೆ-1985 ಅಡಿ ಪರಕರಣ ದಾಖಲಿಸಿಕೊಂಡು ತನಿಖೆಕೈಕೊಂಡಿದ್ದುಇರುತ್ತದೆ.



ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 38/2020  87  ಕೆ.ಪಿ ಯಾಕ್ಟ;- ಇಂದು ದಿನಾಂಕ:12/04/2020 ರಂದು 11.00 ಪಿ.ಎಮ್ ಕ್ಕೆ, ಶ್ರೀ. ಎನ್.ಎಸ್.ಜನಗೌಡ ಪಿ.ಎಸ್.ಐ ಹುಣಸಗಿ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕಚಕನೂರ ಗ್ರಾಮದ ಸೀಮಾಂತರ ಕೆನಾಲ ದಂಡೆಗೆ ಒಂದು ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದ ಮೆರೆಗೆ ಸ್ಥಳಕ್ಕೆ ಬೇಟಿ ನೀಡಿ ಖಚಿತಪಡಸಿಕೊಂಡು ಜೂಜಾಟವನ್ನು ಆಡುವವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:37/2020 ಕಲಂ. 87 ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.


ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 102/2020 ಕಲಂ: 87 ಕೆ.ಪಿ.ಕಾಯ್ದೆ;- ಇಂದು ದಿನಾಂಕ:12/04/2020 ರಂದು 7:50 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಚಂದ್ರಶೇಖರ ಪಿ.ಎಸ್.ಐ (ಕಾಸು-02) ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ 3 ಜನ ಆರೋಪಿತರನ್ನು ಠಾಣೆಗೆ ತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:12/04/2020 ರಂದು 5:30 ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಾರಪೇಠದ ಬಸ್ ನಿಲ್ದಾಣದ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ನಾನು ಮತ್ತು ಸಿಬ್ಬಂಧಿಯವರಾದ 1) ಶಿವಪ್ಪ ಹೆಚ್ಸಿ-106 2) ಮಂಜುನಾಥ ಹೆಚ್ಸಿ-176 3) ದಯಾನಂದ ಪಿ.ಸಿ 337 4)  ಬಸವರಾಜ ಸಿಪಿಸಿ-395 5) ಮಾನಯ್ಯ ಸಿಪಿಸಿ-372, 6) ವಿರೇಶ ಸಿಪಿಸಿ-374 ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶಿವುಕುಮಾರ ತಂದೆ ಮುದಕಪ್ಪ ಶೇಟ್ಟಿ ವಯಾ;25 ವರ್ಷ ಜಾ:ಲಿಂಗಾಯತ ಉ:ವ್ಯಾಪಾರ ಸಾ:ನರಸಿಂಗಪೇಠ್ 2) ಶ್ರೀ ಗುರುಲಿಂಗಪ್ಪ ತಂದೆ ಶರಣಪ್ಪಗೌಡ ಪೊಲೀಸ್ ಪಾಟೀಲ್ ವಯಾ:28 ವರ್ಷ ಜಾ:ಲಿಂಗಾಯತ ಉ:ಕೂಲಿ ಸಾ:ನರಸಿಂಗಪೇಠ ಇವರನ್ನು 05:45 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 6:00 ಪಿ.ಎಮ್ ಕ್ಕೆ ಠಾಣೆಯ ಒಂದು ಖಾಸಗಿ ವಾಹನ ನೇದ್ದರಲ್ಲಿ ಹೊರಟು 6:20 ಪಿ.ಎಮ್ ಕ್ಕೆ ಕುಂಬಾರಪೇಠ ಬಸ್ ನಿಲ್ದಾನದ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಬಸ್ ನಿಲ್ದಾಣದ ಹತ್ತಿರ ಇರುವ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 6:25 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿ ಒಟ್ಟು 03 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ಮಲ್ಲಕಾಜರ್ುನ್ ತಂದೆ ಚನ್ನಬಸಯ್ಯಸ್ವಾಮಿ ಹಿರೇಮಠ ವಯಾ:30 ವರ್ಷ ಜಾ:ಜಂಗಮ್ ಉ:ಕೂಲಿ ಕೆಲಸ ಸಾ:ನರಸಿಂಗಪೇಠ ತಾ:ಸುರಪೂರ ಇವನ ಹತ್ತಿರ 1500/- ರೂಗಳು ದೊರೆತವು 2) ಕಾಶಿನಾಥ ತಂದೆ ಗುರುಪಾದಯ್ಯಸ್ವಾಮಿ ಹಿರೇಮಠ್ ವಯಾ;24 ವರ್ಷ ಜಾ:ಜಂಗಮ್ ಉ:ಕೂಲಿ ಸಾ:ಕುಂಬಾರಪೇಠ ಇವನ ಹತ್ತಿರ 1200/- ರೂಗಳು ದೊರೆತವು 3) ಲಕ್ಷ್ಮೀಕಾಂತ ತಂದೆ ಗುರುಲಿಂಗಪ್ಪ ಮುದೋಳ ವಯಾ:22 ವರ್ಷ ಜಾ:ಲಿಂಗಾಯತ ಉ:ಕಿರಾಣಿ ವ್ಯಾಪಾರ ಸಾ:ನರಸಿಂಗಪೇಠ ಹತ್ತಿರ 1300/- ರೂಗಳು ದೊರೆತವು ಇದಲ್ಲದೆ ಪಣಕ್ಕೆ ಇಟ್ಟ ಹಣ 2300/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 6300/- ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು ಜೀಪಿನ ಲೈಟಿನ ಬೆಳಕಿನಲ್ಲಿ 6:30 ಪಿ.ಎಮ್ ದಿಂದ 7:30 ಪಿ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ ಕ್ಕೆ 03 ಜನ ಆರೋಪಿರೊಂದಿಗೆ ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 102/2020 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.




ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 07/2020 174 ಸಿ.ಆರ್.ಪಿ.ಸಿ:- ಇಂದು ದಿನಾಂಕ: 12/04/2020 ರಂದು 03.30 ಪಿಎಮ್ ಕ್ಕೆ ಅಜರ್ಿದಾರಳಾದ ಶ್ರೀಮತಿ ಶಾಂತಮ್ಮ ಗಂಡ ದೇವಿಂದ್ರಪ್ಪ ಹಾದಿಮನಿ ವ:60 ಉ: ಹೊಲಮನಿ ಕೆಲಸ ಜಾ: ಕುರುಬರ ಸಾ; ಗಂಗನಾಳ ತಾ: ಶಹಾಪೂರ ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದನೆಂದರೆ, ನಾನು ಶಾಂತಮ್ಮ ಗಂಡ ದೇಂವಿದ್ರಪ್ಪ ಹಾದಿಮನಿ ವ:60 ಉ: ಹೊಲಮಿನಿ ಕೆಲಸ ಜಾ: ಕುರುಬರ ಸಾ; ಗಂಗನಾಳ ಇದ್ದುಉ, ಈ ಮೂಲಕ ಅಜರ್ಿ ನೀಡುವದೇನಂದರೆ, ಇಂದು ದಿನಾಂಕ: 12/04/2020 ರಂದು ಬೆಳಿಗ್ಗೆ 08.00 ಗಂಟೆಯ ಸುಮಾರಿಗೆ ನಾನು, ನನ್ನ ಗಂಡನಾದ ದೇವಿಂದ್ರಪ್ಪ ತಂದೆ ರಾಮಣ್ಣ ಹಾದಿಮನಿ ವ:65 ಉ: ಒಕ್ಕಲುತನ, ನನ್ನ ಮಗನಾದ ದೇವರಾಜ ನನ್ನ ಮೈದುನನ ಮಗನಾದ ಮಾಳಪ್ಪ ತಂದೆ ನಿಂಗಪ್ಪ ಎಲ್ಲರೂ ನಮ್ಮ ಹೊಲದಲ್ಲಿ ಕೌಳಿ (ಭತ್ತ) ದ ರಾಶಿ ಮಾಡಿವ ಕುರಿತು ನಮ್ಮ ಹೊಲಕ್ಕೆ ಹೊಗಿದ್ದೇವು, ನಮ್ಮ ಕೌಳಿ ರಾಶಿ ಮಾಡುವ ಮಷೀನದವರು ಇನ್ನು ಬಂದಿರಲಿಲ್ಲ. ಅಂದಾಜು ಬೆಳಿಗ್ಗೆ 09.30 ರ ಸುಮಾರಿಗೆ ನನ್ನ ಗಂಡ ದೇವಿಂದ್ರಪ್ಪ ಈತನು ಸದರಿ ಕೌಳಿಮಷಿನ್ ಮೇಲೆ ಏರಿ ಒಳಗೆ ಕೂಡುತ್ತೇನೆ ಅಂತಾ ಹತ್ತಿದ್ದನು. ಆಗ ಆಕಸ್ಮಿಕವಾಗಿ ಕಾಲುಜಾರಿ ಸದರಿ ರಾಶಿ ಮಷಿನಿನ ಮೇಲಿಂದ ಕೆಳಗೆ ಅಂದರೆ ಚೈನ್ ಪಟ್ಟಿ ಮೇಲೆ ಬಿದ್ದು, ಹೋಟ್ಟೆ ಟೋಂಕ, ತೋಡೆ ಮತ್ತು ತೊಎ ಸಂದಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯ ಹೊಂದಿದನು. ಆಗ  ನಾನು ನನ್ನ ಮಕ್ಕಳಾದ ದೇವರಾಜ ಮತ್ತು ಮಾಳಪ್ಪ ಎಲ್ಲರೂ ಓಡಿ ಹೋಗಿ ನೊಡಿ ನನ್ನ ಗಮಡನಿಗೆ ಆಸ್ಪತ್ರೆಗೆ ಕರೆದುಕೊಂಡು ಹೊಗಬೇಕು ಎನ್ನವಷ್ಟರಲ್ಲಿ ನನ್ನ ಗಂಡ ದೇವಿಂದ್ರಪ್ಪ ಈತನು ಹೊಲದಲ್ಲಿಯೇ ಮೃತಪಟ್ಟಿರುತ್ತಾನೆ. 
     ಸದರಿ ನಮ್ಮ ಹೊಲದಲ್ಲಿ ನನ್ನ ಗಮಡನಾದ ದೇವಿಂದ್ರಪ್ಪ ಇವರು ಆಕಷ್ಮಿಕವಾಗಿ ಕಾಲುಜಾರಿ ಮಷೀನ ಮೇಲಿಂದ ಬಿದ್ದು, ಮೃತಪಟ್ಟಿದ್ದು, ನನ್ನ ಗಂಡನ ಸಾವಿನ ವಿಷಯದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ, ದೂರು ಇತ್ಯಾದಿ ಇರುವದಿಲ್ಲ. ಘಟನೆ ನಡೆದ ಸ್ಥಳ ಇರುವ ಹೊಲದ ಸವರ್ೇ ನಂ:73 ಶೆಟ್ಟಿಕೇರಾ ಸೀಮೆಯಲ್ಲಿ ಬರುತ್ತಿದ್ದು, ಮುಂದಿನ ಕ್ರಮ ಕೈಕೊಳ್ಳಲು ಮಾನ್ಯರವರಲ್ಲಿ ವಿನಂತಿ. ಅಂತಾ ಅಜರ್ಿಯ ಮೇಲಿಂದ ಠಾಣೆ ಯು.ಡಿ.ಆರ್ ನಂ: 07/2020 ಕಲಂ, 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು






ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!