ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11/04/2020

By blogger on ಭಾನುವಾರ, ಏಪ್ರಿಲ್ 12, 2020




                           ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11/04/2020 
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 59/2020 ಕಲಂ 323, 324, 504, 506 ಸಂಗಡ 34 ಐಪಿಸಿ:- ಇಂದು ದಿನಾಂಕ 11.04.2020 ರಂದು ಬೆಳಿಗ್ಗೆ 7.00 ಗಂಟೆ ಸುಮಾರಿಗೆ ಪಿರ್ಯಾಧಿ ಮನೆ ಮುಂದೆ ಕುಳಿತ್ತಿದ್ದಾಗ ಆರೋಪಿತನು ಪಿರ್ಯಾಧಿ ಮನೆ ಮುಂದಿನ ಅಂಗಳದಿಂದ ಹೋಗುತ್ತಿದ್ದನು ನೋಡಿ ಪಿರ್ಯಾಧಿಯು ಆರೋಪಿತನಿಗೆ ನೀವು ಸುಮಾರು 3- ತಿಂಗಳು ಹಿಂದೆ ನಮ್ಮ ಕವಳಿ ಗದ್ದೆ ಬದುವು ಕಡೆದು ನನ್ನ ಸಂಗಡ ಜಗಳ ಮಾಡಿರಿ ಇಂದು ನಮ್ಮ ಅಂಗಳದಲ್ಲಿ ಯಾಕೆ ಬಂದಿರಿ ಅಂತಾ ಕೇಳಿದಾಗ ಆರೋಪಿತನು ಲೇ ಬೋಸಡಿ ಮಗನ್ಯಾ ನನಗೆ ಅಂಗಳದಲ್ಲಿ ಯಾಕ ಬಂದಿ ಅಂತಾ ಕೇಳುತ್ತಿ ಸೂಳಿ ಮಗನ್ಯಾ ಅಂತಾ ಬೈದು ಪಿರ್ಯಾದಿ ಮನೆ ಮುಂದೆ ಇದ್ದ ಕಟ್ಟಿಗೆ ಬಡಿಗೆಯಿಂದ ಪಿರ್ಯಾಧಿ ತೆಲೆಗೆ ಹೊಡೆದು ರಕ್ತಗಾಯ ಮಾಡಿ ಕೈಯಿಂದ ದಬ್ಬಿ ಕೆಳಗೆ ಬಿಳಿಸಿದಾಗ ಆ.ನಂ. 2 ರವರು ಕಾಲಿನಿಂದ ಒದ್ದು ಗುಪ್ತಪೆಟ್ಟು ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.



ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 60/2020 ಕಲಂ 341, 323, 324, 504, 506 ಸಂಗಡ 34 ಐಪಿಸಿ:- ಇಂದು ದಿನಾಂಕ 11.04.2020 ರಂದು ಬೆಳಿಗ್ಗೆ 7:00 ಗಂಟೆಗೆ ಫಿರ್ಯಾದಿಯು ತನ್ನ ಹೊಲದಲ್ಲಿ ಟ್ರ್ಯಾಕ್ಟರನಿಂದ ಟಿಲ್ಲರ ಹೊಡಿಸುವ ಸಲುವಾಗಿ ಟ್ರ್ಯಾಕ್ಟರನ್ನು ಕೇಳಲು ತನ್ನ ಅಣ್ಣತಮ್ಮಕಿಯವರ ಮನೆಗೆ ಹೋಗಿ ನಂತರ ಅಲ್ಲಿ ಟ್ರ್ಯಾಕ್ಟರ ಬೇರೆಯವರ ಹೊಲಕ್ಕೆ ಹೋಗಿದೆ ಅಂತಾ ಗೊತ್ತಾಗಿದ್ದರಿಂದ ಮರಳಿ ಆರೋಪಿತ ಮನೆಯ ಮುಂದಿನಿಂದ ತನ್ನ ಮನೆಗೆ ಬರುತ್ತಿದ್ದಾಗ ಆರೋಪಿ ಶರಣಪ್ಪನು ಫೀರ್ಯಾದಿಯನ್ನು ತನ್ನ ಮನೆಯ ಮುಂದಿನ ಸಿಸಿ ರಸ್ತೆಯ ಮೇಲೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದಿದ್ದು, ಶರಣಪ್ಪನ ಮಗ ಹಣಮಂತನು ಸಹ ಅಲ್ಲಿಗೆ ಬಂದು ಇಬ್ಬರು ಕೂಡಿ ಫಿರ್ಯಾದಿಯನ್ನು ಕೈಯಿಂದ, ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿದ್ದು ಅಲ್ಲದೆ ಬಿಡಿಸಲು ಬಂದಿದ್ದ ಫಿರ್ಯಾದಿಯ ಹೆಂಡತಿ ನೀಲಮ್ಮಳೀಗೆ ನೂಕಿ ಕೊಟ್ಟಿದ್ದು ಅಲ್ಲದೇ ಜೀವದ  ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 60/2020 ಕಲಂ: 341, 323, 324, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 61/2020 ಕಲಂ 379 ಐಪಿಸಿ:- ಇಂದು ದಿನಾಂಕ 12.04.2020 ರಂದು ಸಮಯ ಬೆಳಗಿನ ಜಾವ 3:00 ಆರೋಪಿತರು ತಮ್ಮ-ತಮ್ಮ ಟ್ರ್ಯಾಕ್ಟರಗಳ ಮಾಲೀಕರು ಹೇಳಿದಂತೆ ತಮ್ಮ-ತಮ್ಮ ಟ್ರ್ಯಾಕ್ಟರಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಸದರಿ ಮರಳನ್ನು ಸಾಗಿಸುತ್ತಿದ್ದಾಗ ಮಾನ್ಯ ಎಸ್.ಪಿ ಸಾಹೇಬ, ಯಾದಗಿರಿ ಮತ್ತು ಮಾನ್ಯ ಪಿ.ಐ ಸಾಹೇಬ, ಡಿ.ಸಿ.ಆರ್.ಬಿ ಘಟಕ, ಯಾದಗಿರಿ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಸಿಕ್ಕಿಬಿದ್ದ ಆರೋಪಿತರ ವಶದಲ್ಲಿದ್ದ ಹಾಗೂ ಓಡಿ ಹೋದ ಆರೋಪಿತನ ಮರಳು ತುಂಬಿದ ಟ್ರ್ಯಾಕ್ಟರಗಳನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಟ್ರ್ಯಾಕ್ಟರ ಚಾಲಕರ ಮೇಲೆ ಮತ್ತು ಸಂಬಂಧಪಟ್ಟ ಮಲೀಕರ  ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 61/2020 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 66/2020 ಕಲಂ  15[ಎ],32[3]  ಕೆ. ಇ ಯಾಕ್ಟ :- ಇಂದು ದಿನಾಂಕ: 11/04/2020 ರಂದು 11/04/2020 ರಂದು 12.15 ಪಿ.ಎಮ್ ಕ್ಕೆ ಸುದರ್ಶನರೆಡ್ಡಿ ಪಿಎಸ್,ಐ ಸಾಹೇಬರು ಠಾಣೆಗೆ ಹಾಜರಾಗಿ ಒಂದು ವರದಿ ಸಲ್ಲಿಸಿದ ಸಾರಾಂಶವೆನೆಂದರೆ   ಇಂದು ದಿನಾಂಕ 11/04/2020  ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಮುರಕನಾಳ ಕ್ಯಾಂಪ ಸಮೀಪ ಕೆನಾಲ್ ಡಿಸ್ಟ್ರುಬುಟರ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಮಡಿವಾಳಪ್ಪ ತಂದೆ ಚಂದಪ್ಪ ಕಲಕೇರಿ ಸಾ|| ಕೆಂಭಾವಿ ಈತನು ಸರಕಾರದ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯವನ್ನು ಮಾರಾಟ ಮಾಡಿ ಮಧ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದಾನೆಂದು ಮಾಹಿತಿ ಮೇರೆಗೆ ನಾನು ಠಾಣೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಪಂಚರಿಗೂ ಮಾಹಿತಿ ತಿಳಿಸಿ ದಾಳಿ ಮಾಡಲು ಸಹಕರಿಸಲು ತಿಳಿಸಿದ್ದು ಅವರು ಒಪ್ಪಿದ್ದರಿಂದ,  ಠಾಣೆಯಲ್ಲಿದ್ದ  ಬೀರಪ್ಪ, ಪಿಸಿ-195 ಚಂದಪ್ಪ ಪಿಸಿ-316, ಹಾಗೂ ಜೀಪ ಚಾಲಕನಾದ ಪೆದ್ದಪ್ಪಗೌಡ ಪಿಸಿ-214 ರವರನ್ನು ಕರೆದುಕೊಂಡು ಸರಕಾರಿ ಜೀಪ ನಂಬರ ಕೆಎ-33 ಜಿ-0074 ಠಾಣೆಯಿಂದ 10.30 ಎ.ಎಮ್ಕ್ಕೆ ಹೊರಟು 10.40 ಎಎಮ್ಕ್ಕೆ ಮುರಕನಾಳ ಕ್ಯಾಂಪ ಸಮೀಪ ಕೆನಾಲ ಡಿಸ್ಟ್ರಿಬುಟರ ಹತ್ತಿರ ಹೋಗುತ್ತಿದ್ದಾಗ ಅಂದರೆ ಮಡಿವಾಳಪ್ಪ ಕಲಕೇರಿ ಈತನು ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ಸ್ಥಳದಿಂದ ಸುಮಾರು 100 ಅಡಿ ದೂರದಲ್ಲಿ ನಿಂತು ನಾನು, ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಹೋಗುತ್ತಿದ್ದಾಗ ನಮ್ಮನ್ನು ನೋಡಿ ಅಲ್ಲಿ ಸೇರಿದ್ದ ಜನರು ಓಡಿ ಹೋದರು. ಮಧ್ಯ ಮಾರಾಟ ಮಾಡುತ್ತಿದ್ದವನು ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ನಾನು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ಸದರಿ ವ್ಯಕ್ತಿಯನ್ನು ಹಿಡಿದು ಆತನ ಹೆಸರು ಮತ್ತು ವಿಳಾಸವನ್ನು ವಿಚಾರಿಸಲು ಮಡಿವಾಳಪ್ಪ ತಂದೆ ಚಂದಪ್ಪ ಕಲಕೇರಿ ವಯಾ|| 40 ವರ್ಷ ಜಾ|| ಲಿಂಗಯತ ಉ|| ವ್ಯಾಪಾರ ಸಾ|| ಕೆಂಭಾವಿ ಅಂತ ತಿಳಿಸಿದನು. ನಂತರ ಸದರಿ ಸ್ಥಳದಲ್ಲಿದ್ದ ಒಂದು ಹಳೆಯ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿ ನೋಡಲಾಗಿ ಅದರಲ್ಲಿ ಮಧ್ಯ ತುಂಬಿದ್ದು ಸದರ ಚೀಲದಲ್ಲಿ 180 ಎಮ್ಎಲ್ನ ಓರಿಜಿನಲ್ ಚೊಯಿಸ್ ಒಟ್ಟು 09 ಪೌಚುಗಳು ಇದ್ದು ಒಂದು ಪೌಚಿನ ಬೆಲೆ 60.64 ಪೈಸೆ ಅಂತ ಇದ್ದು ಒಟ್ಟು 09 ಪೌಚ್ಗಳ ಬೆಲೆ 545.76/- ರೂ ಆಗುತ್ತಿದ್ದು ನಂತರ ಮಡಿವಾಳಪ್ಪನು ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಮಾರಾಟ ಹಾಗೂ ಸೇವನೆಗೆ ಅವಕಾಶ ಮಾಡಿಕೊಡಲು ಯಾವುದಾದರು ಅಧಿಕೃತ ಪರವಾನಿಗೆ ಇದೆಯೇ ಎಂದು ವಿಚಾರಿಸಲಾಗಿ, ತಮ್ಮ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದನು. ಸದರಿ ಮಧ್ಯ ತುಂಬಿದ 180 ಎಮ್ಎಲ್ನ 09 ಪೌಚ್ಗಳನ್ನು 10.45 ಎ.ಎಮ್ದಿಂದ 11.45 ಎ.ಎಮ್ದವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತಪಡಿಸಿಕೊಳ್ಳಲಾಯಿತು, ನಂತರ ಮೇಲ್ಕಂಡ ಆರೋಪಿಯನ್ನು 12.15  ಪಿ.ಎಮ್ಕ್ಕೆ ಠಾಣೆಗೆ ಕರೆದುಕೊಂಡು ಬಂದು ಸದರಿ ಆರೋಪಿತನ ವಿರುದ್ದ ಕಲಂ: 15 (ಎ), 32 (3) ಕೆಇ ಆಕ್ಟ ರೀತ್ಯಾ ಕ್ರಮ ಜರುಗಿಸಲು ವಿಶೇಷ ವರದಿಯನ್ನು ನೀಡಿದ್ದರ ಸಾರಾಂಶ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 66/2020 ಕಲಂ: 15 (ಎ), 32 (3) ಕೆಇ ಆಕ್ಟ ನೇದ್ದರ ಪ್ರಕರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಅದೆ. 

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ;- 67/2020 ಕಲಂ: 87 ಕೆಪಿ ಯಾಕ್ಟ:- ಇಂದು ದಿ : 11/04/2020 ರಂದು 1530 ಗಂಟೆಗೆ ಮಾನ್ಯ ಸುದರ್ಶನರೆಡ್ಡಿ ಪಿಎಸ್ಐ ಸಾಹೇಬರು  ಠಾಣೆಗೆ ಹಾಜರಾಗಿ ಕೊಟ್ಟ ಜ್ಞಾಪನ ಪತ್ರದ ಸಾರಾಂಶವೇನೆಂದರೆ, ಇಂದು ದಿನಾಂಕ:11/04/2020 ರಂದು 1300 ಗಂಟೆಗೆ ಕೆಂಭಾವಿ ಪೊಲೀಸ್ ಠಾಣೆಯ ಹದ್ದಿಯ ಪೈಕಿ ಕಿರದಳ್ಳಿ ತಾಂಡಾ ಕಡೆಗೆ ಕರೋನಾ ಮಹಮಾರಿ ನಿಮಿತ್ಯವಾಗಿ ಪೆಟ್ರೋಲಿಂಗ ಕುರಿತು ಹೋದಾಗ ಸದರ ತಾಂಡಾದ ಸೇವಾಲಾಲ ಗುಡಿಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ್-ಬಾಹರ್ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಖುದ್ದಾಗಿ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಸುಮಾರು 4-5 ಜನರು ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ 1330 ಗಂಟೆಗೆ ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡು ನಂತರ ಠಾಣೆಗೆ 1400 ಗಂಟೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು,  ಮಾನ್ಯ ನ್ಯಾಯಾಲಯವು 1530 ಗಂಟೆಗೆ ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ. 66/2020 ಕಲಂ : 87 ಕೆಪಿ ಆಕ್ಟ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು. ನಂತರ ಪಿರ್ಯಾದಿದಾರರು ದಾಳಿ ಕೈಕೊಂಡಿದ್ದು ದಾಳಿಯಲ್ಲಿ 4 ಜನ ಆರೋಪಿತರಿಗೆ ದಸ್ತಗಿರಿ ಮಾಡಿ ಅವರಿಂದ ಪಂಚರ ಸಮಕ್ಷಮ 1700/- ರೂಪಾಯಿ ನಗದು ಹಣ ಹಾಗು 52 ಇಸ್ಪೀಟ ಎಲೆಗಳನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ ಅಂತ ಮಾನ್ಯರವರಲ್ಲಿ ವಿನಂತಿ ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 108/2020. ಕಲಂ 87 ಕೆ.ಪಿ.ಆಕ್ಟ:-    ಆರೋಪಿತರು ದಿನಾಂಕ: 11-04-2020 ರಂದು 3:00 ಪಿ.ಎಮ್.ಕ್ಕೆ ಎಮ್ .ಕೊಳ್ಳೂರ ಗ್ರಾಮದ ಟೊಣ್ಣೂರ ರಸ್ತೆಯ ಪಕ್ಕದಲ್ಲಿ ಬೇವಿನ ಗಿಡದ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಕೂಡಿ ದುಂಡಾಗಿ ಕುಳಿತು 52 ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಇಸ್ಪೀಟ ಜೂಜಾಟ ಆಡುತ್ತಿದ್ದಾಗ ಫಿಯರ್ಾದಿದಾರರು ಸಿಬ್ಬಂದಿಯೊಂದಿಗೆ ಹೊಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಅವರಿಂದ ಒಟ್ಟು 2010/- ರೂ. ನಗದು ಹಣ , ಮತ್ತು 52 ಇಸ್ಪೀಟ ಎಲೆಗಳನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು ಸದರಿ ವರದಿಯು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 87/2020 ಕಲಂ.87 ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 109/2020.ಕಲಂ 87 ಆ್ಯಕ್ಟ:-    ಇಂದು ದಿನಾಂಕ 11/04/2020 ರಂದು 18-00 ಗಂಟೆಗೆ ಸ||ತ|| ಶ್ರೀ ಹನುಮರೆಡೆಪ್ಪ ಪಿ.ಐ. ಸಾಹೇಬರು ಠಾಣೆಗೆ ಬಂದು 10 ಜನ ಆರೋಪಿಗಳು, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ. ಇಂದು ದಿನಾಂಕ 11/04/2020 ರಂದು ಠಾಣೆಯಲ್ಲಿದ್ದಾಗ ಗೌಡೂರ ಗ್ರಾಮದ ಹನುಮಾನ ಗುಡಿಯ ಮುಂದೆ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೆರೆಗೆ, ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪುರ ರವರಿಗೆ ಪತ್ರ ವ್ಯವಹಾರ ಮಾಡಿ 14-30 ಗಂಟೆಗೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ನಾರಾಯಣ ಹೆಚ್.ಸಿ,79, ಶರಣಪ್ಪ ಹೆಚ್.ಸಿ 164, ಸತೀಶ ಹೆಚ್,ಸಿ, 165. ಮಾಳಪ್ಪ ಹೆಚ್,ಸಿ,64. ಬಾಬು ಹೆಚ್.ಸಿ. 162. ವೆಂಕಟೇಶ ಪಿ.ಸಿ.134. ಲಕ್ಕಪ್ಪ ಪಿ.ಸಿ.163. ರಾಮಚಂದ್ರ ಪಿ.ಸಿ.266. ಜೀಪ ಚಾಲಕ ನಾಗರೆಡ್ಡಿ ಎ.ಪಿ.ಸಿ. 161. ರವರಿಗೆ ಮಾಹಿತಿ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ರಾಮಚಂದ್ರ ಪಿ.ಸಿ.266 ರವರಿಗೆ 14-10 ಗಂಟೆಗೆ ಕಳುಹಿಸಿಕೊಟ್ಟಿದ್ದು, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 27 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 49 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು 14-20 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ನಾನು ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಲು ಕೇಳಿಕೊಂಡ ಮೇರೆಗೆ ಒಪ್ಪಿಕೊಂಡರು. 
       ಮಾನ್ಯ ಡಿವೈ.ಎಸ್.ಪಿ. ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ನಾನು ಮತ್ತು ಸಿಬ್ಬಂದಿಯವರು ಹಾಗೂ ಪಂಚರು ಎಲ್ಲರು ಕೂಡಿ ದಾಳಿಕುರಿತು ಠಾಣೆ ಜೀಪ ನಂ ಕೆಎ-33ಜಿ-0138 ನೇದ್ದರಲ್ಲಿ  ಠಾಣೆಯಿಂದ 14-30 ಗಂಟೆಗೆ ಹೊರಟು ಗೌಡೂರ ಗ್ರಾಮದ ಹನುಮಾನ ದೆವರಗುಡಿಯ ಹತ್ತಿರ ಸ್ವಲ್ಪ ದರೂರದಲ್ಲಿ 15-40 ಗಂಟೆಗೆ ಹೋಗಿ ಜೀಪನಿಲ್ಲಿಸಿ ಜೀಪನಿಂದ ಕೆಳಗಡೆ ಎಲ್ಲರು ಇಳಿದು ಹನುಮಾನ ಗುಡಿಯ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮನೆಗಳ ಗೋಡೆಗಳ ಮರೆಯಲ್ಲಿ ನಿಂತು  15-45 ಗಂಟೆಗೆ ನಿಗಮಾಡಿ ನೋಡಲಾಗಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದರು ಜೂಜಾಟ ಆಡುತಿದ್ದವರಲ್ಲಿ ಒಬ್ಬನು ಅಂದರಕ್ಕೆ 50 ರೂಪಾಯಿ ಅಂದರೆ ಇನ್ನೊಬ್ಬನು ಬಾಹರಕ್ಕೆ 50 ರೂಪಾಯಿ ಅಂತ ಹೇಳಿ ಜೂಜಾಟ ಆಡುತಿದ್ದರು, ಆಗ ನಾವು ಮತ್ತು ಪಂಚರು ಸದರಿಯವರು ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು, 15-50 ನಾವೆಲ್ಲರೂ ಸದರಿಯವರ ಮೇಲೆ ದಾಳಿ ಮಾಡಿದಾಗ 10 ಜನರು ಸಿಕ್ಕಿದ್ದು. ನಾನು ಪಂಚರ ಸಮಕ್ಷಮದಲ್ಲಿ ಅವರ ಹೆಸರು ವಿಳಾಸ ವಿಚಾರಿಸಿ ಅಂಗಸೋದನೆ ಮಾಡಲಾಗಿ ಒಬ್ಬೊಬ್ಬರಾಗಿ ತಮ್ಮ ಹೆಸರುಗಳನ್ನು ಈ ಕೆಳಗಿನಂತೆ ಹೇಳಿರುತ್ತಾರೆ.
 1] ನಿಂಗಯ್ಯ ತಂದೆ ಚಂದಪ್ಪ ತಳವಾರ ವ|| 50 ಜಾ|| ಬೇಡರ ಉ|| ಒಕ್ಕಲುತನ ಸಾ|| ಗೌಡೂರ. ಈತನ 
    ಅಂಗಶೋಧನೆ ಮಾಡಿದಾಗ  ನಗದು ಹಣ 850/- ರೂಪಾಯಿ ಸಿಕ್ಕವು 
2] ಸಂಜೀವಪ್ಪ ತಂದೆ ಹಣಮಂತ್ರಾಯ ಬೆಳ್ಳಿಕಟ್ಟಿ ವ|| 37 ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಗೌಡೂರ. ಈತನ 
    ಅಂಗಶೋಧನೆ ಮಾಡಿದಾಗ  ನಗದು ಹಣ 640/- ರೂಪಾಯಿ ಸಿಕ್ಕವು 
3] ಮಲ್ಲಪ್ಪ ತಂದೆ ಚಂದಪ್ಪ ತಳವಾರ ವ|| 50 ಜಾ|| ಬೇಡರ ಉ|| ಒಕ್ಕಲುತನ ಸಾ|| ಗೌಡೂರ. ಈತನ ಅಂಗಶೋಧನೆ 
    ಮಾಡಿದಾಗ ನಗದು ಹಣ 740/- ರೂಪಾಯಿ ಸಿಕ್ಕವು 
4] ಬಾಗಣ್ಣ ತಂದೆ ಸಾಬಣ್ಣ ನಂದೆಳ್ಳಿ ವ|| 38 ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಗೌಡೂರ. ಈತನ ಅಂಗಶೋಧನೆ 
    ಮಾಡಿದಾಗ ನಗದು ಹಣ 620/- ರೂಪಾಯಿ ಸಿಕ್ಕವು
5] ಆದಪ್ಪ ತಂದೆ ಮಲ್ಲಪ್ಪ ಬೆಳ್ಳಿಕಟ್ಟಿ ವ|| 74 ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಗೌಡೂರ. ಈತನ ಅಂಗಶೋಧನೆ 
     ಮಾಡಿದಾಗ  ನಗದು ಹಣ 700/- ರೂಪಾಯಿ ಸಿಕ್ಕವು 
6] ದೊಡ್ಡಪ್ಪ ತಂದೆ ಯಮನಪ್ಪ ಬೆಳ್ಳಿಕಟ್ಟಿ ವ|| 50 ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಗೌಡೂರ. ಈತನ 
     ಅಂಗಶೋಧನೆ ಮಾಡಿದಾಗ  ನಗದು ಹಣ 580/- ರೂಪಾಯಿ ಸಿಕ್ಕವು 
7] ಬಸವರಾಜ ತಂದೆ ರಂಗಣ್ಣಗೌಡ ಮಾಲಿ ಪಾಟೀಲ್ ವ|| 45 ಜಾ|| ಬೇಡರ ಉ|| ಒಕ್ಕಲುತನ ಸಾ|| ಗೌಡೂರ ಈತನ 
    ಅಂಗಶೋಧನೆ ಮಾಡಿದಾಗ  ನಗದು ಹಣ 520/- ರೂಪಾಯಿ ಸಿಕ್ಕವು 
8] ದೇವರಾಜ ತಂದೆ ನರಸಪ್ಪ ನಾಯ್ಕೋಡಿ ವ|| 30 ಜಾ|| ಕೂರುಬರ ಉ|| ಒಕ್ಕಲುತನ ಸಾ|| ಗೌಡೂರ. ಈತನ 
    ಅಂಗಶೋಧನೆ ಮಾಡಿದಾಗ  ನಗದು ಹಣ 550/- ರೂಪಾಯಿ ಸಿಕ್ಕವು
 9] ಮಲ್ಲಪ್ಪ ತಂದೆ ಮಹಾದೇವಪ್ಪ ದೋರಿ ವ|| 60 ಜಾ|| ಬೇಡರ ಉ|| ಒಕ್ಕಲುತನ ಸಾ|| ಗೌಡೂರ. ಈತನ 
     ಅಂಗಶೋಧನೆ ಮಾಡಿದಾಗ  ನಗದು ಹಣ 650/- ರೂಪಾಯಿ ಸಿಕ್ಕವು
10] ಗೋವಿಂದ ತಂದೆ ಹೋನ್ನಪ್ಪ ಚನ್ನೂರ ವ|| 24 ಜಾ|| ಬೇಡರ ಉ|| ಒಕ್ಕಲುತನ ಸಾ|| ಗೌಡೂರ. ಈತನ ಅಂಗಶೋಧನೆ ಮಾಡಿದಾಗ  ನಗದು ಹಣ 450/- ರೂಪಾಯಿ ಸಿಕ್ಕವು ಕಣದಲ್ಲಿ ಪಣಕ್ಕೆ ಇಟ್ಟ ಹಣ 800/- ಸಿಕ್ಕವು ಹೀಗೆ ಒಟ್ಟು 7050/- ರೂಪಾಯಿ ಹಾಗೂ 52 ಇಸ್ಪೇಟ್ ಎಲೆಗಳನ್ನು ಒಂದು ಲಕೊಟೇಯಲ್ಲಿ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ 16-00 ಗಂಟೆಯಿಂದ 17-00 ಗಂಟೆಯವರೆಗೆ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಕೇಸಿನ ಪುರಾವೆ ಕುರಿತು ತಾಬೆಗೆ ತೆಗೆದುಕೊಂಡಿರುತ್ತೆನೆ. ಮತ್ತು ಜೂಜಾಟದಲ್ಲಿ ಸಿಕ್ಕ 10 ಜನರನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 17-30 ಗಂಟೆಗೆ ಬಂದು ವರದಿಯನ್ನು ತಯ್ಯಾರಿಸಿ 18-00 ಗಂಟೆಗೆ 10 ಜನ ಆರೋಪಿತರನ್ನು ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರು ಪಡಿಸಿ ಮುಂದಿನ ಕ್ರಮ ಕೈಕೊಳ್ಳುವಂತೆ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 109/2020 ಕಲಂ 87 ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.



ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 110/2020 ಕಲಂ 87 ಕೆಪಿ ಯಾಕ್ಟ:- ಇಂದು ದಿನಾಂಕ: 11/04/2020 ರಂದು 7.15 ಪಿ.ಎಮ್.ಕ್ಕೆ ಮಾನ್ಯ ಶ್ರೀ ಸಿದ್ದೇಶ್ವರ ಪಿ.ಎಸ್.ಐ ಶಹಾಪೂರ ಠಾಣೆ ರವರು ಠಾಣೆಗೆ ಬಂದು ಒಂದು ವರದಿಯೊಂದಿಗೆ ಜಪ್ತಿ ಪಂಚನಾಮೆ , ಮುದ್ದೆಮಾಲು ಮತ್ತು 7 ಜನ ಆರೋಪಿತರನ್ನು ತಂದು ಹಾಜರು ಪಡಿಸಿ ಕ್ರಮ ಜರುಗಿಸಲು ಸೂಚಿಸಿದ್ದು ಸದರಿ ವರದಿಯ ಸಾರಾಂಶವೇನಂದರೆ  ಇಂದು ದಿನಾಂಕ 11/04/2020 ರಂದು 4.00 ಪಿ.ಎಂಕ್ಕೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ ಶಹಾಪೂರ ತಾಲೂಕಿನ ತಿಪ್ಪನಳ್ಳಿ ಗ್ರಾಮದ ಗ್ರಾಮದೇವತೆ ದೇವಸ್ಥಾನದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು 52 ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ದಾಳಿ ಮಾಡುವ ಸಲುವಾಗಿ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರಿಂದ 4.40 ಪಿಎಂ ಕ್ಕೆ ಪರವಾನಿಗೆ ಪಡೆದುಕೊಂಡು ಠಾಣೆಯಲ್ಲಿದ್ದ ಸಿಬ್ಬಂದಿಯವರಾದ ಶ್ರೀ ಭೀಮಣ್ಣ ಹೆಚ್.ಸಿ 122, ಗೌಡಪ್ಪ ಹೆಚ್.ಸಿ 57, ಶಿವರಾಜ ಪಿಸಿ 150, ವೀರೇಶ ಪಿಸಿ 401, ಸುರೇಶ ಪಿಸಿ 200, ಮುತ್ತಪ್ಪ ಪಿಸಿ 118, ಶರಣಪ್ಪ ಪಿಸಿ 05 ಮತ್ತು ಮಂಜುನಾಥ ಪಿಸಿ 73 ರವರಿಗೆ ಬಾತ್ಮೀ ವಿಷಯ ತಿಳಿಸಿ ಹೋಗಿ ದಾಳಿ ಮಾಡಬೇಕೆಂದು ಹೇಳಿ ದಾಳಿ ಕುರಿತು ಹೋಗುವ ಸಂಬಂಧ ತಿಪ್ಪನಳ್ಳಿ ಗ್ರಾಮದ ಬೀಟ ಸಿಬ್ಬಂದಿಯಾದ ವೀರೇಶ ಪಿಸಿ 401 ರವರ ಮುಖಾಂತರ ಇಬ್ಬರು ಪಂಚರಾದ 1) ಶ್ರೀ ಸಂದೀಪ ತಂದೆ ಸಂಜೀವ ಕೊರಚ ವ|| 22ವರ್ಷ ಜಾ|| ಕೊರಚ ಉ|| ವ್ಯಾಪಾರ ಸಾ|| ಬಸವೇಶ್ವರ ನಗರ ಶಹಾಪೂರ 2) ಶ್ರೀ ಅಂಬ್ಲಪ್ಪ ತಂದೆ ಭಿಮಪ್ಪ ಐಕೂರ ವ|| 45ವರ್ಷ ಜಾ|| ಎಸ್.ಸಿ. ಉ|| ಕೂಲಿ ಸಾ|| ದೇವಿ ನಗರ ಶಹಾಪೂರ ಇವರಿಗೆ 4.50 ಪಿ.ಎಂಕ್ಕೆ ಠಾಣೆಗೆ ಕರೆದುಕೊಂಡು ಸದರಿಯವರಿಗೆ ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ಪಂಚರಾಗಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ನಂತರ ಸದರಿಯವರ ಮೇಲೆ ದಾಳಿ ಮಾಡಲು ನಾನು, ಪಂಚರು ಮತ್ತು ಸಿಬ್ಬಂದಿಯವರು ಕೂಡಿ ಒಂದು ಖಾಸಗಿ ಜೀಪಿನಲ್ಲಿ ಕುಳಿತುಕೊಂಡು ಠಾಣೆಯಿಂದ 5.00 ಪಿ.ಎಂ ಕ್ಕೆ ಹೊರಟು ಶಹಾಪೂರ ತಾಲೂಕಿನ ತಿಪ್ಪನಳ್ಳಿ ಗ್ರಾಮದ ಗ್ರಾಮದೇವತೆ ದೇವಸ್ಥಾನದ ಹತ್ತಿರ 5.20 ಪಿ.ಎಂ.ಕ್ಕೆ ಹೋಗಿ ಜೀಪ ನಿಲ್ಲಿಸಿ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ 7 ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದು ಅದರಲ್ಲಿ ಒಬ್ಬ ಅಂದರ 50 ರೂ ಇನ್ನೊಬ್ಬ ಬಾಹರ 50 ರೂ. ಎಂದು ಹೇಳಿ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಸೇರಿ ಸುತ್ತುವರೆದು ಅವರ ಮೇಲೆ 5.25 ಪಿ.ಎಮ್ ಕ್ಕೆ ಒಮ್ಮೆಲೆ ದಾಳಿ ಮಾಡಿ ಹಿಡಿಯಲಾಗಿ 7 ಜನರು ಸಿಕ್ಕಿದ್ದು ಸದರಿಯವರಿಗೆ ವಿಚಾರಿಸಿ ಹೆಸರು ವಿಳಾಸ ಕೇಳಲಾಗಿ  1) ಮಹಿಬೂಬ  ತಂದೆ ಯುನುಸ್ ಗಿಡ್ಡೆವಾಲೆ ವ|| 21ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ತಿಪ್ಪನಳ್ಳಿ ತಾ||| ಶಹಾಪೂರ 2) ಭೀಮಣ್ಣ ತಂದೆ ಮಲ್ಲಪ್ಪ ಕೋರವಾರ ವ|| 35ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಗುಂಡಗುತರ್ಿ ತಾ|| ಶಹಾಪೂರ 3) ಭೀಮಯ್ಯ ತಂದೆ ತಿಪ್ಪಯ್ಯ ಗುತ್ತೆದಾರ ವ|| 40ವರ್ಷ ಜಾ|| ಈಳಿಗೇರ ಉ|| ಒಕ್ಕಲುತನ ಸಾ|| ಗುಂಡಗುತರ್ಿ ತಾ|| ಶಹಾಪೂರ 4) ಮಕ್ಬೂಲ್ ತಂದೆ ಶರಮೋದ್ದೀನ್ ಗಿಡ್ಡೆವಾಲೆ ವ|| 25ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ತಿಪ್ಪನಳ್ಳಿ ತಾ|| ಶಹಾಪೂರ 5) ಕಾಸಿಂಸಾಬ ತಂದೆ ವಾಹಿದಸಾಬ ಗಿಡ್ಡೆವಾಲೆ ವ|| 32ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ತಿಪ್ಪನಳ್ಳಿ ತಾ|| ಶಹಾಪೂರ 6) ಮಹಾದೇವ ತಂದೆ ವೆಂಕಟೇಶ ದೊರಿ ವ|| 28ವರ್ಷ ಜಾ|| ಬೇಡರ ಉ|| ಒಕ್ಕಲುತನ  ಸಾ|| ತಿಪ್ಪನಳ್ಳಿ ತಾ|| ಶಹಾಪೂರ 7) ಈಶ್ವರಲಿಂಗ ತಂದೆ ಮಾರ್ತಂಡಪ್ಪ ನಾಟೇಕಾರ ವ|| 25ವರ್ಷ ಜಾ|| ಹೊಲೆಯ ಉ|| ಒಕ್ಕಲುತನ ಸಾ|| ತಿಪ್ಪನಳ್ಳಿ ತಾ|| ಶಹಾಪೂರ ಇದ್ದು ಇವರ ಅಂಗಶೋದನೆ ಮಾಡಲಾಗಿ 6100/- ರೂ ನಗದು ಹಣ ಸಿಕ್ಕಿದ್ದು ಎಲ್ಲರ ಮುಂದಿನ ಕಣದಲ್ಲಿ 750/-ರೂ. ಮತ್ತು 52 ಇಸ್ಪೀಟ ಎಲೆಗಳು ಇದ್ದು ಹೀಗೆ ಒಟ್ಟು 6850/- ರೂ. ನಗದು ಹಣ ಮತ್ತು 52 ಇಸ್ಪೀಟ ಎಲೆಗಳು ಸದರಿ ಮುದ್ದೆಮಾಲುಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ಸಿಕ್ಕ ಮುದ್ದೆಮಾಲನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 5.30 ಪಿ.ಎಮ್.ದಿಂದ 6.30 ಪಿ.ಎಂ ದ ವರೆಗೆ ಜಪ್ತಿ ಪಂಚನಾಮೆಯನ್ನು  ಮಾಡಿ ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡೆನು. ದಾಳಿಯಲ್ಲಿ ಸಿಕ್ಕ ಆರೋಪಿತರೊಂದಿಗೆ ಮರಳಿ ಠಾಣೆಗೆ 6.50 ಪಿ.ಎಂ ಕ್ಕೆ ಬಂದು 7 ಜನ ಆರೋಪಿತರು, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರುಪಡಿಸಿ ವರದಿ ತಯಾರಿಸಿ ಸದರಿ ಆರೋಪಿತರ ಮೇಲೆ ಮುಂದಿನ ಕ್ರಮ ಕೈಕೊಳ್ಳಲು 7.15 ಪಿ.ಎಂ.ಕ್ಕೆ ವರದಿ ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 110/2020 ಕಲಂ. 87 ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.



ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 111/2020 ಕಲಂ: 273, 328 ಐಪಿಸಿ:-           ಇಂದು ದಿನಾಂಕ: 11/04/2020 ರಂದು ರಾತ್ರಿ 21-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾಧಿ ಶ್ರೀ ಹನುಮರಡ್ಡೆಪ್ಪ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ಇಂದು ಸಾಯಂಕಾಲ 18-10 ಗಂಟೆಯ ಸುಮಾರಿಗೆ ಠಾಣೆಯಲ್ಲಿದ್ದಾಗ ರಸ್ತಾಪೂರ ಕಮಾನ ಹತ್ತಿರ ಒಂದು ಹೊಟೇಲ್ ಪಕ್ಕದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿದ್ದು ಆರೋಪಿತನು ಓಡಿ ಹೋಗಿದ್ದು ಸ್ಥಳದಲ್ಲಿದ್ದ ಅಂದಾಜು 2 ಲೀಟರನಷ್ಟು ಕಳ್ಳಭಟ್ಟಿ ಸರಾಯಿ ಅಂ.ಕಿ 400 ಕಿಮ್ಮತ್ತಿನದು ಅದರಲ್ಲಿ ಪರೀಕ್ಷೆ ಕುರಿತು ಅರ್ಧ ಲೀಟರನಷ್ಟು ಪ್ರತ್ಯಕವಾಗಿ ಪಡೆದುಕೊಂಡಿರುತ್ತದೆ ಸದರಿ ಮುದ್ದೆಮಾಲನ್ನು ಸಾಯಂಕಲ 19-10 ಗಂಟೆಯಿಂದ ರಾತ್ರಿ 20-10 ಗಂಟೆಯವರೆಗೆ  ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಸದರಿ  ಆರೋಪಿತನ ವಿರುದ್ದ ಠಾಣೆ ಗುನ್ನೆ ನಂ  111/2020 ಕಲಂ 273, 328 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.


ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 38/2019  ಕಲಂ: 273, 328 ಐಪಿಸಿ:- ಇಂದು ದಿನಾಂಕ: 11/04/2020 ರಂದು 08.25 ಪಿಎಮ್ ಕ್ಕೆ ಶ್ರೀ ಸೋಮಲಿಂಗ್ ಒಡೆಯರ ಪಿಎಸ್.ಐ ಗೋಗಿ ಪೊಲೀಸ ಠಾಣೆ ರವರು ಮುದ್ದೇಮಾಲು ಮತ್ತು ಜಪ್ತಿಪಂಚನಾಮೆ ತಂದು ಹಾಜರ್ ಪಡಿಸಿ ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದು ವರದಿ ನೀಡಿದ್ದು, ಸದರಿ ವರದಿ ಸಾರಾಂಶವೆನೆಂದರೆ, ನಾಗನಟಗಿ ಡೊಂಗ್ರಿ ತಾಂಡಾ ಸೇವಲಾಲ ಗುಡಿ ಹತ್ತಿರ ರೋಡಿನ ಮೇಲೆ ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಕಳ್ಳಬಟ್ಟಿ ಸರಾಯಿಯು ಮಾನವ ಜೀವಕ್ಕೆ ಹಾನಿಕಾರಕ ಅಂತಾ ಗೊತ್ತಿದ್ದು, ಕೂಡ ಕಳ್ಳ ಬಟ್ಟಿ ಸರಾಯಿ ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಕೊಂಡು 06.45 ಎಎಂಕ್ಕೆ ದಾಳಿ ಮಾಡಿ ಅನಧಿಕೃತವಾಗಿ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯು ಓಡಿ ಹೋಗಿದ್ದು, ಅವನ ಹೆಸರು ವಿಚಾರಿಸಿಲಾಗಿ ಮನೋಜ ತಂದೆ ಜಾಪಲುನಾಯ್ಕ ರಾಠೊಡ ವ:42 ಉ: ಕೂಲಿ ಜಾ: ಲಂಬಾಣಿ ಸಾ: ನಾಗನಟಗಿ ಡೋಂಗ್ರಿ ತಾಂಡಾ ತಾ: ಶಹಾಪೂರ. ಅಂತಾ ತಿಳಿದ ಬಂದಿದ್ದು, ಸ್ಥಳದಲ್ಲಿ ಮೇಲಿನ ಮುದ್ದೆ ಮಾಲು, ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿಪಡಿಸಿಕೊಂಡು ಮುದ್ದೆಮಾಲು, ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ಸೂಚಿಸಿ ವರದಿ ನೀಡಿದ್ದು, ಸದರಿ ವರದಿ ಸಾರಂಶದ ಮೇರೆಗೆ ಠಾಣೆ ಗುನ್ನೆ ನಂ: 38/2020 ಕಲಂ: 273, 328 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 39/2020  ಕಲಂ, 323, 498(ಎ), 504, 506 ಸಂ: 149 ಐಪಿಸಿ :- ಇಂದು ದಿನಾಂಕ: 11/04/2020 ರಂದು 07.30 ಪಿಎಂ ಕ್ಕೆ ಅಜರ್ಿದಾರರಾದ ಶ್ರೀಮತಿ ಶಾಂತಿಬಾಯಿ ಗಂಡ ಮನ್ನು ವ:32 ಸಾ: ರಾಮಾನಾಯ್ಕ ತಾಂಡಾ ಇವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಹಾಜರ ಪಡೆಸಿದ್ದು, ಸದರಿ ಅಜರ್ಿಯ  ಸಾರಂಶ ಏನಂದರೆ, ನಾನು ಶ್ರೀಮತಿ ಶಾಂತಿಬಾಯಿ ಗಂಡ ಮನ್ನು ರಾಠೋಡ ವಯಾ:32 ಉ: ಕೂಲಿ ಜಾ: ಲಂಬಾಣಿ ಸಾ: ರಾಮಾನಾಯ್ಕ ತಾಂಡಾ ಗೋಗಿ ಇದ್ದು ನನ್ನ ಗಂಡ ಮನ್ನು ತಂದೆ ತಿಪ್ಪಣ್ಣ ರಾಠೋಡ ಸಾ: ರಾಮಾನಾಯ್ಕ ತಾಂಡಾ ಇತನೊಂದಿಗೆ ಮದುವೆಯಾಗಿ 10 ವರ್ಷಗಳಾಗಿದ್ದು, ನಮಗೆ ವಿಷ್ಣು ಹಾಗೂ ಆರೇಶ ಎಂಬ ಎರಡು ಗಂಡು ಮಕ್ಕಳಿದ್ದಾರೆ. ನನ್ನ ಮದುವೆಯಾದ 3 ವರ್ಷ ವರ್ಷಗಳ ವರೆಗೆ ನನ್ನನ್ನು ನನ್ನ ಗಂಡನ ಮನೆಯವರು ಚೆನ್ನಾಗಿ ನೋಡಿಕೊಂಡಿದ್ದರು, ನಂತರ ನನ್ನ ಗಂಡನು ಪ್ರತಿದಿನ ಕುಡಿದು ಬಂದು ನನಗೆ ಹೊಡಿಬಡಿ ಮಾಡುತ್ತಾ ತಾನು ಇನ್ನೊಂದು ಮದುವೆ ಮಾಡಿಕಳ್ಳುತ್ತೇನೆ ಅದಕ್ಕೆ ವಿಚ್ಚೇಧನ ನೀಡುವಂತೆ ಹಿಂಸಿಸುತ್ತಿದ್ದನು. ಅದಕ್ಕೆ ಸದರಿ ನನ್ನ ಗಂಡನೊಂದಿಗೆ ನನ್ನ ಮಾವ ತಿಪ್ಪಣ್ಣ ತಂದೆ ಧಮರ್ು, ಅತ್ತೆ ಚವಳಿಬಾಯಿ ಗಂಡ ತಿಪ್ಪಣ್ಣ, ನನ್ನ ಗಂಡನ ಅಣ್ಣ ರವಿ ತಂದೆ ತಿಪ್ಪಣ್ಣ, ನನ್ನ ನಾದಿನಿ ತಾರಿಬಾಯಿ ಗಂಡ ಥಾವರು, ನೆಗೆಣ್ಣಿ ಲಲ್ಲಿಬಾಯಿ ಗಂಡ ರವಿ, ಮೈದುನ ಲಕ್ಷ್ಮೀಣ ತಂದೆ ತಿಪ್ಪಣ್ಣ ಇವರುಗಳೆಲ್ಲರು ಸೇರಿಕೊಂಡು ಪ್ರತಿ ನಿತ್ಯ ನನ್ನನ್ನು ಹೀಯಾಳಿಸಿ ಅವಮಾನ ಪಡಿಸುತ್ತಿದ್ದರು, ಅದನ್ನೆಲ್ಲವನ್ನು ನಾನು ಸಹಿಸಿಕೊಂಡು, ಕೂಲಿ ಮಾಡುತ್ತಾ ನನ್ನ ಮಕ್ಕಳನ್ನು ಸಾಕುತ್ತಿದ್ದೇನೆ. ಹೀಗಿರುವಾಗ ಸದರಿ ತಾಂಡಾದ ನನ್ನ ತವರು ಮನೆಯಲ್ಲಿ ನನ್ನ ತಾಯಿಯೊಂದಿಗೆ ಪಡಸಾಲೆಯಲ್ಲಿ ಕುಳಿತಿರುವಾಗ ನನ್ನ ಮಾವ ತಿಪ್ಪಣ್ಣ ಅತ್ತೆ ಚವಳಿಬಾಯಿ ನನ್ನ ಗಂಡ ಮನ್ನು, ಆತನ ಅಣ್ಣ ರವಿ, ನಾದನಿ ತಾರಿಬಾಯಿ ಗಂಡ ಥವರು, ನೆಗೆಣ್ಣಿ ಲಲ್ಲಿಬಾಯಿ, ಲಕ್ಷ್ಮೀಣ ತಂದೆ ತಿಪ್ಪಣ್ಣ ಇವರುಗಳೆಲ್ಲರೂ ಸೇರಿಕೊಂಡು ದಿನಾಂಕ: 28/03/2020 ರಂದು ಮದ್ಯಾಹ್ನ 01.00 ಗಂಟೆ ಸುಮಾರಿಗೆ ಏಕಾಎಕಿ ಬಂದವರೆ ನನ್ನ ಗಂಡನು ನನ್ನ ಕೂದಲನ್ನು ಹಿಡಿದು ಮನೆಯ ಹೊರೆಗೆ ಏಳೆದುಕೊಂಡು ಬಂದು ನನಗೆ ಕೈಯಿಂದ ಬೆನ್ನಿಗೆ ಹಾಗೂ ಹೊಟ್ಟೆಗೆ ಹೊಡೆದನು ಹಾಗು ನನ್ನ ಅತ್ತೆ ಮತ್ತು ಮಾವ ಇವರುಗಳು ನನ್ನ ಕಪಾಳಕ್ಕೆ ಹೊಡೆದರು. ಅಲ್ಲದೆ ಉಳಿದವರೆಲ್ಲರು ಇವಳನ್ನು ಕಲಾಸ ಮಾಡ್ರಿ ಅಂದರೆ ಆಗ ಮಾತ್ರ ಮನ್ನು ಅವನಿಗೆ ಇನ್ನೊಂದು ಮದುವೆ ಮಾಡಬಹುದು ಅಂತಾ ಕೂಗಾಡುತ್ತಿದ್ದರು, ನನ್ನ ತಾಯಿ ತಿಪ್ಪಿಬಾಯಿ ಬಿಡಿಸಲು ಬಂದಾಗ ಅವಳಿಗೂ ನನ್ನ ಗಂಡ ಮನ್ನು ಕಪಾಳಕ್ಕೆ ಹೊಡೆದನು. ಆಗ ಗಲಾಟೆಯನ್ನು ಕೇಳಿ ನನ್ನ ತಮ್ಮ ಕುಮಾರ ಮತ್ತು ಹೀರಾಸಿಂಗ್ ಇವರುಗಳು ಬಂದು ಜಗಳವನ್ನು ಬಿಡಿಸಿರುತ್ತಾರೆ, ನಂತರ ಮರುದಿವಸ ನಾನು ನನ್ನ ಗಂಡನಿಗೆ ಪೋನ ಮಾಡಿ ಇನ್ನೊಂದು ಮದುವೆಯನ್ನು ಮಾಡಿಕೊಳ್ಳಬೇಡ ಅಂತ ಪುನಃ ಕೇಳಿಕೊಂಡಿದ್ದು ಆಗ ನನ್ನ ಗಂಡನು ಇನ್ನೊಂದು ಮದುವೆಯನ್ನು ಮಾಡಿಕೊಳ್ಳುತ್ತೇನ್ಲೇ ಬೋಸಡಿ ಅದೇನು ಮಾಡಿಕೊಳ್ತಿದಿ ಮಾಡಿಕೊ ಅಡ್ಡ ಬಂದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಬೆದರಿಸಿರುತ್ತಾನೆ. 
         ನನ್ನ ತಾಯಿ, ತಮ್ಮಂದಿರೊಂದಿಗೆ ಚಚರ್ಿಸಿ ಇಂದು ದೂರನ್ನು ನಿಡುತ್ತಿದ್ದೇನೆ. ಆದ್ದುದ್ದರಿಂದ  ಮೇಲೆ ತಿಳಿಸಿದ ಆರೋಪಿತರೆಲ್ಲರೂ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ. ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 39/2020 ಕಲಂ, 323, 498(ಎ), 504, 506 ಸಂ: 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.  



ಶೋರಾಪೂರ  ಪೊಲೀಸ್ ಠಾಣೆ ಗುನ್ನೆ ನಂ:- 100/2020 ಕಲಂ: 87 ಕೆ.ಪಿ.ಕಾಯ್ದೆ:- ಇಂದು ದಿನಾಂಕ: 11/04/2020 ರಂದು 6:35 ಪಿ.ಎಮ್. ಕ್ಕೆ ಶ್ರೀ ಚೇತನ್ ಪಿ.ಎಸ್.ಐ (ಕಾ&ಸು-1) ಸಾಹೇಬರು ಸುರಪೂರ ಪೊಲೀಸ್ಠಾಣೆರವರು 11 ಜನಆರೋಪಿತರೊಂದಿಗೆಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ಠಾಣೆಗೆ ಬಂದು ವರದಿ ಸಾರಾಂಶವೆನಂದರೆಇಂದು ದಿನಾಂಕ:11/04/2020 ರಂದು 4  ಪಿ.ಎಂ ಸುಮಾರಿಗೆಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ಠಾಣಾ ವ್ಯಾಪ್ತಿಯತಳವಾರಗೇರಾ ಗ್ರಾಮದಯಲ್ಲಮ್ಮದೇವಿ ಗುಡಿಯಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿದ್ದಾರೆಅಂತಾಖಚಿತ ಬಾತ್ಮಿ ಬಂದ ಮೇರೆಗೆ, ನಾನು ಮತ್ತು ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೋಹರ ಹೆಚ್ಸಿ-105 3) ಶ್ರೀ ನಿಂಗಪ್ಪ ಹೆಚ್.ಸಿ-118 4) ಶ್ರೀ ಪರಮೇಶ ಸಿಪಿಸಿ-142 5) ದಯಾನಂದ ಪಿ.ಸಿ 337 6)  ಮಂಜುನಾಥ ಸಿಪಿಸಿ-271 7) ಮಾನಯ್ಯ ಸಿಪಿಸಿ-372, 8) ಬಸವರಾಜ ಸಿಪಿಸಿ-395 9) ವಿರೇಶ ಸಿಪಿಸಿ-374 ವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ರಾಮಚಂದ್ರತಂದೆ ಸಂಜೀವಪ್ಪದೊರಿ ವ|| 51 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ತಳವಾರಗೇರಾ 2) ಶ್ರೀ ವೆಂಕಟೇಶತಂದೆ ಮರೆಪ್ಪ ಸಜ್ಜನ  ವ|| 56 ವರ್ಷಜಾ|| ಬೇಡರು ಉ|| ಕೂಲಿ ಕೆಲಸ ಸಾ|| ತಳವಾರಗೇರಾ ಇವರನ್ನು 4:15 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡುಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 4:30 ಪಿ.ಎಮ್ ಕ್ಕೆ ಠಾಣೆಯಒಂದು ಖಾಸಗಿ ವಾಹನ ನೇದ್ದರಲ್ಲಿ ಹೊರಟು 5:00 ಪಿ.ಎಮ್ ಕ್ಕೆ ತಳವಾರಗೇರಾ ಗ್ರಾಮದಯಲ್ಲಮ್ಮದೇವಿ ಗುಡಿಯಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲುಗುಡಿಯ ಮುಂದಿನ ಸಾರ್ವಜನಿಕಖುಲ್ಲಾ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದಒಮ್ಮೆಲೆಅವರ ಮೇಲೆ 05:05 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿಒಟ್ಟು 11 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ಹಣಮಂತತಂದೆ ಭೀಮಣ್ಣಚನ್ನಪಟ್ಟಣದವರ ವಯಾ: 28 ವರ್ಷತಾ: ಸುರಪುರ ಇವನ ಹತ್ತಿರ 1950/- ರೂಗಳು ದೊರೆತವು 2) ಕೃಷ್ಣಾ ತಂದೆ ಬಸಪ್ಪದೇಸಾಯಿ ವ|| 32 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ತಳವಾರಗೇರಾ ತಾ|| ಸುರಪುರ ಇವನ ಹತ್ತಿರ 2500/- ರೂಗಳು ದೊರೆತವು 3) ಮೌನೇಶತಂದೆ ನರಸಪ್ಪ ಹವಾಲ್ದಾರ ವಯಾ: 35 ವರ್ಷಜಾ: ಕಬ್ಬಲಿಗ ವರ್ಷ  ಉ: ಒಕ್ಕಲುತನ ಸಾ|| ತಳವಾರಗೇರಾ ತಾ|| ಸುರಪುರ ಇವನ ಹತ್ತಿರ 1550/- ರೂಗಳು ದೊರೆತವು 4) ಈರಪ್ಪತಂದೆಗೋಪಣ್ಣ ಹುಜರತಿ ವಯಾ: 27 ವರ್ಷಜಾ: ಕಬ್ಬಲಿಗ ಉ: ಕೂಲಿ ಸಾ: ತಳವಾರಗೇರಾ ತಾ|| ಸುರಪುರ ಇವನ ಹತ್ತಿರ 1880/- ರೂಗಳು ದೊರೆತವು 5) ಈರಯ್ಯತಂದೆಚಿದಾನಂದ ಹಿರೇಮಠ ವಯಾ: 37 ವರ್ಷಜಾ: ಜಂಗಮ ಉ: ಕೂಲಿ ತಳವಾರಗೇರಾ ತಾ|ಸುರಪುರ ಇವನ ಹತ್ತಿರ 2500/- ರೂಗಳು ದೊರೆತವ 6) ಆನಂದಯ್ಯತಂದೆ ಶಿವಶಂಕ್ರಯ್ಯ ಹಿರೇಮಠ ವಯಾ: 41 ವರ್ಷಜಾ: ಜಂಗಮ ಉ: ಚಾಲಕ ಸಾ: ತಳವಾರಗೇರಾ ಇವನ ಹತ್ತಿರ 1570/- ರೂಗಳು ದೊರೆತವು 7) ಮಹಾದೇವಪ್ಪತಂದೆ ನಾಗರಾಜ ಮಳ್ಳಿದೊರೆ ವಯಾ: 26 ವರ್ಷಜಾ: ಬೇಡರು ಉ: ಕೂಲಿ ಕೆಲಸ ಸಾ: ತಳವಾರಗೇರಾ ಇವನ ಹತ್ತಿರ 1600/- ರೂಗಳು ದೊರೆತವು 8) ಪರಮಣ್ಣತಂದೆ ಬಸಪ್ಪ ಹವಾಲ್ದಾರ ವಯಾ: 55 ವರ್ಷಜಾ: ಕಬ್ಬಲಿಗ ಉ: ಒಕ್ಕಲುತನ ಸಾ: ತಳವಾರಗೇರಾ ಇವನ ಹತ್ತಿರ 1200/- ರೂಗಳು ದೊರೆತವು 9) ತಿಮ್ಮಣ್ಣತಂದೆದೊಡ್ಡಸಂಜಿವಪ್ಪ ಪೂಜಾರಿ ವಯಾ: 28 ಜಾ: ಬೇಡರು ಉ: ಕೂಲಿಕೆಲಸ ಸಾ: ತಳವಾರಗೇರಾ ಇವನ ಹತ್ತಿರ 1300/- ರೂಗಳು ದೊರೆತವು 10) ನಾಗರಾಜತಂದೆಚಂದ್ರಪ್ಪ ಹುಜರತಿ ವಯಾ: 24 ವರ್ಷಜಾ: ಕಬ್ಬಲಿಗ ಸಾ: ತಳವಾರಗೇರಾ ಇವನ ಹತ್ತಿರ 2100/- ರೂಗಳು ದೊರೆತವು 11) ಪರಶುರಾಮತಂದೆ ಶರಣಪ್ಪದೊಡ್ಡಮನಿ ವಯಾ: 22 ವರ್ಷಜಾ: ಹೊಲೆಯ ಉ: ಒಕ್ಕಲುತನಜಾ: ತಳವಾರಗೇರಾ ಇವನ ಹತ್ತಿರ 2000/- ರೂಗಳು ದೊರೆತವುಇದಲ್ಲದೆ ಪಣಕ್ಕೆಇಟ್ಟ ಹಣ 3300/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 23450/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿಜಪ್ತಿ ಪಂಚನಾಮೆಯನ್ನು 05:05 ಪಿ.ಎಮ್ ದಿಂದ 06:05 ಪಿ.ಎಮ್ ವರೆಗೆ ಬರೆದುಕೊಂಡಿದ್ದುಇರುತ್ತದೆ. ನಂತರ 11 ಜನಆರೋಪಿರೊಂದಿಗೆ ಮರಳಿ ಠಾಣೆಗೆ ಬಂದು ಸದರಿಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದುಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ. ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ


ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 37/2020 ಕಲಂ: 188,269,270 ಸಂ 149 ಐಪಿಸಿ:-ಇಂದು ದಿನಾಂಕ: 11/04/2020 ರಂದು 11-30 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ಇವರು ಠಾಣೆಗೆ ಬಂದು ಸರಕಾರಿ ತಫರ್ೆಯಿಂದ ಫಿರ್ಯಾಧಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ: 11/04/2020 ರಂದು ರಾತ್ರಿ 10 ಗಂಟೆ ಸುಮಾರಿಗೆ ಮಾನ್ಯ ಆರಕ್ಷಕ ಉಪ-ಅಧೀಕ್ಷಕರು ಯಾದಗಿರಿ ಉಪ-ವಿಭಾಗ ರವರು ನನಗೆ ಫೋನ ಮೂಲಕ ಹೇಳಿದ್ದೇನಂದರೆ ಯಾದಗಿರಿ ಉಪ-ವಿಭಾಗದ ಸಹಾಯಕ ಆಯುಕ್ತರಾದ ಶ್ರೀ ಶಂಕರಗೌಡ ಸೋಮನಾಳ ಇವರು ನನಗೆ ಫೋನ ಮಾಡಿ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಯ್ಕಲ್ ಗ್ರಾಮದ ಪೆಟ್ರೋಲ್ ಬಂಕ ಹತ್ತಿರ ಕೆಲವು ಜನರು ಗುಂಪಾಗಿ ಸೇರಿ ಬುದ್ದನ ಕಟ್ಟೆ ಕಟ್ಟುತ್ತಿರುವುದಾಗಿ ಖಚಿತ ಮಾಹಿತಿ ಬಂದಿರುತ್ತದೆ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿರಿ ಎಂದು ಹೇಳಿರುತ್ತಾರೆ. ಆದ್ದರಿಂದ ನೀನು ಕೂಡಲೇ ನಾಯ್ಕಲ್ ಗ್ರಾಮಕ್ಕೆ ಹೋಗಿ ಏನು ನಡೆದಿದೆ ಅಂತಾ ಪರಿಶೀಲನೆ ಮಾಡು ಎಂದು ಹೇಳಿದ್ದರಿಂದ ನಾನು ತಕ್ಷಣ ಪ್ರಕಾಶ ಹೆಚ್.ಸಿ 18 ರವರೊಂದಿಗೆ ನಾಯ್ಕಲ್ ಗ್ರಾಮದ ಪೆಟ್ರೋಲ್ ಬಂಕ್ ಹತ್ತಿರ ರಾತ್ರಿ 10-30 ಪಿಎಮ್ ಸುಮಾರಿಗೆ ಬಂದು ನೋಡಲಾಗಿ ಸ್ಥಳದಲ್ಲಿ ಬಸವರಾಜ ಮೆತ್ರಿ ಸಾ:ನಾಯ್ಕಲ್ ಎಂಬುವನು ತನ್ನ ಸಂಗಡ ಸುಮಾರು 9 ಜನರೊಂದಿಗೆ ಹಾಜರ ಇದ್ದು, ಗೌತಮ ಬುದ್ಧನ ಕಟ್ಟೆ ಕಟ್ಟಲು ತೋಡಗಿದ್ದನು. ಅಲ್ಲಿ ಸ್ಥಳದಲ್ಲಿ 1) ಕೆಎ 33 ವ್ಹಿ 9810, 2) ಕೆಎ 33 ಡಬ್ಲ್ಯೂ 0181, 3) ಕೆಎ 33 ವೈ 6690 ಮತ್ತು 4) ಕೆಎ 37 ಕೆ 0768 ಈ ನಾಲ್ಕು ಮೋಟರ್ ಸೈಕಲಗಳು ಇದ್ದು, ಸದರಿಯವರೆಲ್ಲರೂ ಸೇರಿ ಈಗ ನಮ್ಮ ರಾಜ್ಯದಲ್ಲಿ ಕೋವಿಡ್-19 (ಕೋರೋನಾ) ಎಂಬ ಮಹಾಮಾರಿ ಭಯಂಕರ ರೋಗವು ಸಾಂಕ್ರಾಮಿಕವಾಗಿ ಹರಡುತ್ತಿರುವುದರಿಂದ ಮಾನ್ಯ ಘನ ಕನರ್ಾಟಕ ಸರಕಾರವು ಸಾರ್ವಜನಿಕ ಸಭೆ ಸಮಾರಂಭಗಳಾದ ಜಾತ್ರೆ, ಸಂತೆ, ಮದುವೆ ಮುಂತಾದವುಗಳನ್ನು ಮತ್ತು 5 ಅಥವಾ 5 ಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವುದನ್ನು ನಿರ್ಬಂಧಿಸಿ ಸಂಪೂರ್ಣ ಲಾಕಡೌನ ಆದೇಶ ಹೊರಡಿಸಿರುತ್ತಾರೆ. ಅದರಂತೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಕೂಡಾ ಲಾಕಡೌನ ಮಾಡಿ ಯಾವುದೇ ಜಾತ್ರೆ ಸಮಾರಂಭ ಮಾಡದಂತೆ ಹಾಗೂ 5 ಅಥವಾ 5 ಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದು ಇರುತ್ತದೆ. ಹೀಗಿದ್ದರು ಕೂಡಾ ಈ ಮೇಲ್ಕಂಡ ಬಸವರಾಜ ಮೇತ್ರಿ ಸಾ:ನಾಯ್ಕಲ್ ಮತ್ತು ಸಂಗಡಿರೆಲ್ಲರೂ ಒಂದು ಕಡೆ ಸೇರಿ ಕೋವಿಡ್-19 (ಕೋರೋನಾ) ಎಂಬ ಮಹಾಮಾರಿ ಸಾಂಕ್ರಾಮಿಕ ರೋಗ ಹರಡುತ್ತದೆ ಅಂತಾ ಗೊತ್ತಿದ್ದರು, ಕೂಡಾ ಉದ್ದೇಶ ಪೂರ್ವಕವಾಗಿ ಗೌತಮ ಬುದ್ಧನ ಕಟ್ಟೆಯನ್ನು ಕಟ್ಟಲು ತೊಡಗಿಸಿಕೊಂಡು ಸದರಿ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಅಪಾಯಕಾರಿ ಸೊಂಕು ಹರಡುವ ನಿರ್ಲಕ್ಷತನವನ್ನು ತೋರಿಸಿರುತ್ತಾರೆ. ನಾವು ಸ್ಥಳಕ್ಕೆ ಹೋಗಿ ಏನು ಮಾಡುತ್ತಿದ್ದಾರೆ ಎಂದು ಸ್ಥಳ ಪರಿಶೀಲನೆ ಮಾಡುವಾಗ ಸದರಿಯವರು ತಮ್ಮ ತಮ್ಮ ಮೋಟರ್ ಸೈಕಲಗಳೊಂದಿಗೆ ಪರಾರಿಯಾಗಿರುತ್ತಾರೆ. ಕಾರಣ ಸದರಿಯವರು ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಅಪಾಯಕಾರಿ ಸೊಂಕು ಹರಡುವ ನಿರ್ಲಕ್ಷತನವನ್ನು ತೋರಿಸಿರುವುದರಿಂದ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಈ ಮೂಲಕ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 37/2020 ಕಲಂ: 188,269,270 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!