ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/04/2020
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 36/2020 ಕಲಂ: 304(ಎ) ಐಪಿಸಿ:-ಬೆಂಡೆಬೆಂಬಳ್ಳಿ ಸೀಮಾಂತರದ ಶಂಕರಗೌಡ ಇವರ ಕವಳೆಗದ್ದಯನ್ನು ಹರಿಕೃಷ್ಣ ಇವರು ಲೀಜಿಗೆ ಮಾಡಿಕೊಂಡು ಬರುತ್ತಿದ್ದು, ಸದರಿ ಹರಿಕೃಷ್ಣ ಇವರ ಹತ್ತಿರ ಶರಣಪ್ಪ ಜಿ @ ಶರಣು ತಂದೆ ಗುಂಡಪ್ಪ ಕದ್ನಳ್ಳಿ, ವ:26, ಜಾ:ಉಪ್ಪಾರ, ಉ:ಕೂಲಿ ಸಾ:ಮೂಡಲಗಿರಿ ಕ್ಯಾಂಪ ತಾ:ಸಿಂಧನೂರು ಈತನು ಸುಮಾರು 1 ವರ್ಷದಿಂದ ಕೂಲಿ ಕೆಲಸ ಮಾಡಿಕೊಂಡಿರುತ್ತಾನೆ. ನಿನ್ನೆ ದಿನಾಂಕ: 09/04/2020 ರಂದು ಸದರಿ ಗದ್ದೆಯಲ್ಲಿ ಭತ್ತದ ಕಟಾವು ಮುಗಿದಿದ್ದು, ರಾತ್ರಿ ಟ್ರ್ಯಾಕ್ಟರ ನಂ. ಕೆಎ 36 ಟಿಡಿ 4524 ಟ್ರ್ಯಾಲಿ ನಂ. ಇಲ್ಲ ಚೆಸ್ಸಿ ನಂ. 11/2001 ನೇದ್ದರಲ್ಲಿ ಸ್ವಲ್ಪ ಕವಳಿ ರಾಶಿ ಮಸಿನದಿಂದ ಹಾಕಿದ್ದು ಇತ್ತು. ರಾತ್ರಿ ಸಮಯದಲ್ಲಿ ಭತ್ತದ ಗದ್ದೆ ಲಿಜಿಗೆ ಮಾಡಿರುವ ಹರಿಕೃಷ್ಣಾ ಈತನು ಮನೆಗೆ ಬುತ್ತಿ ತರುವುದಾಗಿ ತನ್ನಲ್ಲಿ ಕೆಲಸ ಮಾಡುವ ಶರಣಪ್ಪನಿಗೆ ಹೇಳಿ ಹೋಗಿ ಮನೆಯಿಂದ ಬುತ್ತಿ ತೆಗೆದುಕೊಂಡು ಬರುತ್ತಿದ್ದಾಗ ರಾತ್ರಿ 10 ಗಂಟೆ ಸುಮಾರಿಗೆ ಸದರಿ ಶರಣಪ್ಪ ಜಿ @ ಶರಣು ತಂದೆ ಗುಂಡಪ್ಪ ಕದ್ನಳ್ಳಿ ಈತನು ಸ್ವಲ್ಪ ಭತ್ತ ಇದ್ದ ಟ್ರ್ಯಾಕ್ಟರ ನಂ. ಕೆಎ 36 ಟಿಡಿ 4524 ಟ್ರ್ಯಾಲಿ ನಂ. ಇಲ್ಲ ಚೆಸ್ಸಿ ನಂ. 11/2001 ನೇದ್ದನ್ನು ಗದ್ದೆಯಿಂದ ಹೊರಗಡೆ ತೆಗೆದರಾಯಿತು ಎಂದು ಚಲಾಯಿಸಿಕೊಂಡು ಬರುತ್ತಿದ್ದಾಗ ಸದರಿ ಗದ್ದೆ ಒಡ್ಡನ್ನು ನಿರ್ಲಕ್ಷತನದಿಂದ ಒಮ್ಮೆಲೆ ಟ್ರ್ಯಾಕ್ಟರ ಹತ್ತಿಸಲು ಹೋದಾಗ ಟ್ರ್ಯಾಕ್ಟರ ಅವನ ನಿಯಂತ್ರಣ ತಪ್ಪಿ ನ್ಯೂಟ್ರಲ್ ಆಗಿ ಇಳಿಜಾರಿಗೆ ಹಿಂದಕ್ಕೆ ಬಂದಿದ್ದರಿಂದ ಶರಣಪ್ಪನ ಎರಡು ಕಾಲುಗಳು ಎರಡು ಟೈರಗಳ ಮದ್ಯ ಸಿಕ್ಕಿ ಹಾಕಿಕೊಂಡಿದ್ದರಿಂದ ಎಡಗಾಲಿನ ಚೆಪ್ಪಿಗೆ ಭಾರಿ ಒಳಪೆಟ್ಟಾಗಿ, ಎಲುಬು ಮುರಿದಿದ್ದು, ಎಡ ಪಕ್ಕೆಯ ಎಲುಬುಗಳು ಮುರಿದಿದ್ದು, ಉಪಚಾರ ಕುರಿತು ರಾಯಚೂರು ರೀಮ್ಸ್ ಬೋಧಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ದಿನಾಂಕ:10/04/2020 ರಂದು 3 ಎಎಮ್ ಸುಮಾರಿಗೆ ಮೃತಪಟ್ಟಿರುತ್ತಾನೆ ಎಂದು ಮೃತನ ಅಣ್ಣನಾದ ಗುರುಪಾದಪ್ಪ ಇವರು ಕೊಟ್ಟ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 36/2020 ಕಲಂ: 304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 65/2020 ಕಲಂ: 87 ಕೆಪಿ ಯಾಕ್ಟ:- ಇಂದು ದಿನಾಂಕ:10/04/2020 ರಂದು 1600 ಗಂಟೆಗೆ ಕೆಂಭಾವಿ ಪೊಲೀಸ್ ಠಾಣೆಯ ಹದ್ದಿಯ ಪೈಕಿ ಮಾವಿನಮಟ್ಟಿ ಗ್ರಾಮದ ಕಡೆ ಪೆಟ್ರೋಲಿಂಗ ಕುರಿತು ಹೋದಾಗ ಮಾವಿನಮಟ್ಟಿ ಗ್ರಾಮ ಕೆರೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಕೋಳಿ ಪಂದ್ಯದ ಸಹಾಯದಿಂದ ಜೂಜಾಟ ಆಡುತ್ತಿದ್ದ ಬಗ್ಗೆ 1600 ಗಂಟೆಗೆ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಸುರಪೂರ ಹಾಗೂ ಮಾನ್ಯ ಸಿ.ಪಿ.ಐ ಸಾಹೇಬರು ಹುಣಸಗಿ ರವರ ಮಾರ್ಗದರ್ಶನದಲ್ಲಿ ನಾನು ಖುದ್ದಾಗಿ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಸುಮಾರು 9-10 ಜನರು ಕೂಡಿಕೊಂಡು ಹಣವನ್ನು ಪಣಕ್ಕೆ ಹಚ್ಚಿ ಕೋಳಿ ಕಾಳಗ ಎಂಬ ಜೂಜಾಟ ಆಡುತ್ತಿದ್ದ ಬಗ್ಗೆ 1630 ಗಂಟೆಗೆ ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡು ನಂತರ ಠಾಣೆಗೆ 1700 ಗಂಟೆಗೆ ಬಂದು ಮಾನ್ಯ ಹೀರಿಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು 1800 ಗಂಟೆಗೆ ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿದ್ದು, ????? ?????????? ?????? ?????????? ???? ?????? ?? 65/2020 ??? 87 ??.?? ????? ?????????? ?????? ????? ????????? ????? ??????????? ????????.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 97/2020 ಕಲಂ: 143, 147, 148, 323, 324, 341, 109, 504, 506 ಸಂ. 149 ಐಪಿಸಿ:- ಇಂದು ದಿನಾಂಕ:10/04/2020 ರಂದು 2:15 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಸರಕಾರಿ ಆಸ್ಪತ್ರೆಯಲ್ಲಿ ಎಂ.ಎಲ್.ಸಿ ಇದೆ ಅಂತಾ ಪೋನ ಮೂಲಕ ಮಾಹಿತಿ ತಿಳಸಿದ್ದು ಆಸ್ಪತ್ರೆಗೆ 2:30 ಪಿಎಂ ಕ್ಕೆ ಬೇಟಿ ನೀಡಿದ್ದು ಗಾಯಾಳುದಾರರನಾದ ಶ್ರೀ ಪ್ರಕಾಶ ತಂದೆ ಬಸವರಾಜ ಕುಂಬಾರ ವಯಾ||22 ವರ್ಷ ಉ:ಒಕ್ಕಲುತನ ಕುಂಬಾರ ಸಾ||ಜಾಲಿಬೆಂಚಿ ಇತನು ದೂರು ಅಜರ್ಿ ನೀಡಿದ್ದು ಅದನ್ನು ಸ್ವಿಕರಿಸಿಕೊಂಡಿದ್ದರ ಸಾರಾಂಶವೇನೆಂದರೆ, ನಮ್ಮ ದೂರದ ಸಂಬಂಧಿಕನಾದ ಮಹೇಶ ತಂದೆ ಶರಣಪ್ಪ ಕುಂಬಾರ ಸಾ||ಜಾಲಿಬೆಂಚಿ ಹಾಗೂ ಆತನ ಅಣ್ಣನಾದ ಶಿವರಾಜ ತಂದೆ ಶರಣಪ್ಪ ಇಬ್ಬರು ನನ್ನ ತಂಗಿಯಾದ ಮಮತಾ ಇವಳಿಗೆ ಸುಮ್ಮ ಸುಮ್ಮನೆ ಏಕ ವಚನದಲ್ಲಿ ಮಾತನಾಡುತಿದ್ದರಿಂದ ನಾನು ಅವರಿಗೆ ಹೀಗೆಲ್ಲಾ ಮಾತನಾಡಬಾರದು ಅಂತಾ ಸುಮಾರು ಒಂದು ವರ್ಷಗಳ ಹಿಂದೆ ಹೇಳಿದಾಗ ಅವರಿಗೂ ನಮಗೂ ತಕರಾಗಿ ಆಗಿ ನಮಗೂ ಅವರಿಗೂ ಅಂದಿನಿಂದ ವೈಷ್ಯಮ್ಯ ಬೆಳದಿತ್ತು. ಹಿಗಿದ್ದು ನಿನ್ನೆ ದಿನಾಂಕ:09-04-2020 ರಂದು ಬೆಳಿಗೆ 11 ಗಂಟೆ ಸುಮಾರಿಗೆ ನಾನು ನಮ್ಮೂರ ಸರಕಾರಿ ಶಾಲೆಯ ಹತ್ತಿರ ಹೋಗುತ್ತಿರುವಾಗ ಮಹೇಶ ತಂದೆ ಶರಣಪ್ಪ ಕುಂಬಾರ ಜಾತಿ ಕುಂಬಾರ ಈತನು ಟ್ಯಾಕ್ಟರ ತಗೆದುಕೊಂಡು ಹೊರಟಿದ್ದು ನನ್ನನ್ನು ನೋಡಿ ಟ್ಯಾಕ್ಟರ ಅಲ್ಲೆ ನಿಲ್ಲಿಸಿ ನನ್ನ ಹತ್ತಿರ ಬಂದವನೆ ಸುಮ್ಮನೆ ಹೋಗುತ್ತಿದ್ದ ನನಗೆ ಅಡ್ಡಗಟ್ಟಿ ತಡೆದು ನಿಲ್ಲಿಸಿದವನೆ ಈಗ ಒಬ್ಬನೆ ಸಿಕ್ಕಿದಿ ಏನು ಮಾಡಿಕೊಳ್ಳತ್ತಿ ಮಾಡಿಕೋ ಬೋಸಡಿ ಮಗನೆ ನಮ್ಮ ಅಣ್ಣ ಶಿವರಾಜ ಕುಂಬಾರ ಇತನು ನೀನು ಏನು ಮಾಡುತ್ತಿ ಮಾಡಿಬಾ ನಾನು ನೊಡಿಕೊಳ್ಳುತ್ತೇನೆ ಅಂತಾ ಹೇಳಿದ್ದಾನೆೆ ಮಗನೆ ಅಂತಾ ಅವಾಚ್ಯ ಬೈಯುತ್ತಿರುವಾಗ ಟ್ಯಾಕ್ಟರ ಮಾಲೀಕನಾದ ದೇವಪ್ಪ ತಂದೆ ಸಿದ್ದಣ್ಣ ಹವಲ್ದಾರ, ಹಾಗೂ ಮೌನೇಶ ಕೆಂಪ ಚೋಳ, ದೇವು ಕೆಂಪ ಚೋಳ, ನಾಗಪ್ಪ ಮಾವಿನಮಟ್ಟಿ ಎಲ್ಲರು ಜಾತಿ ಬೇಡರು ಇವರೆಲ್ಲರೂ ಬಂದವರೆ ನಮ್ಮ ಟ್ಯಾಕ್ಟರ ಡ್ರೈವರನಿಗೆ ಬೈಯುತ್ಯಾ ಕುಂಬಾರ ಸುಳೆ ಮಗನೆ ಇವತ್ತು ನೀನು ಒಬ್ಬನೆ ಸಿಕ್ಕಿದಿ ಏನು ಮಾಡುತ್ತಿ ಮಾಡಿಕೋ ಅಂತಾ ಬೈದವರೆ ಅವರಲ್ಲಿಯ ಮಹೇಶ ಈತನು ಒಂದು ಬಡಿಗೆಯಿಂದ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ದೇವಪ್ಪ ಈತನು ಕೂಡಾ ಒಂದು ಕಲ್ಲಿನಿಂದ ಎಡಗೈ ಮೊಳಕೈಗೆ ಹೊಡೆದು ಗುಪ್ತಗಾಯ ಪಡಿಸಿದನು. ದೇವು, ಮೌನೇಶ, ನಾಗಪ್ಪ ಇವರೆಲ್ಲರೂ ನನಗೆ ಕಾಲಿನಿಂದ ಒದ್ದು ಬೆನ್ನು ಬಗ್ಗಿಸಿ ಕೈಯಿಂದ ಹೊಡೆ ಬಡೆ ಮಾಡುತ್ತಿರುವಾಗ ಆಗ ಅದೇ ಸಮಯಕ್ಕೆ ಅಲ್ಲಿಗೆ ಬಂದ ನಮ್ಮ ಕಾಕನಾದ ಮುತ್ತಪ್ಪ ತಂದೆ ಮಲ್ಕಣ್ಣ ಕುಂಬಾರ, ಮಾವನಾದ ರಾಜಪ್ಪ ತಂದೆ ರಾಚಪ್ಪ ಕುಂಬಾರ ಇವರು ಬಂದು ಜಗಳ ಬಿಡಿಸಿದರು ಆಗ ಇವತ್ತು ಉಳದಿ ಮಗನೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನ ಖಲಾಸ ಮಾಡುವದೆ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೋಗಿರುತ್ತಾರೆ. ಸದರಿ ಜಗಳಕ್ಕೆ ಮಹೇಶ ಕುಂಬಾರ ಈತನ ಅಣ್ಣನಾದ ಶಿವರಾಜ ಇತನ ಪ್ರಚೋದನೆಯೆ ಕಾರಣವಾಗಿದ್ದು ಇರುತ್ತದೆ. ನಿನ್ನೆ ನನಗೆ ಏನು ತೋಚದೆ ಇರುವದರಿಂದ ಅಂಜಿ ಮನೆಯಲ್ಲಿಯೆ ಇದ್ದು ಇಂದು ಸುರಪೂರಕ್ಕೆ ಸರಕಾರಿ ಆಸ್ಪತ್ರೆಗೆ ಬಂದು ಉಪಚಾರ ಪಡೆದುಕೊಂಡು ಠಾಣೆಗೆ ತಡವಾಗಿ ಬಂದಿದ್ದು ಇರುತ್ತದೆ ನನಗೆ ಹೊಡೆ ಬಡೆ ಮಾಡಿದ ಮೇಲೆ ಹೇಳಿದ ಏಳು ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ;- 98/2020 ಕಲಂ 143, 147, 148, 323, 324, 354, 307, 504, 506 ಸಂ.149 ಐಪಿಸಿ :- ಇಂದು ದಿನಾಂಕ:10/04/2020 ರಂದು 9 ಪಿ.ಎಂ. ಕ್ಕೆ ಠಾಣೆಯ ಎಸ್.ಹೆಚ್ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಹಣಮಂತ ತಂದೆ ತಿಮ್ಮಣ್ಣ ಬಿಲ್ಲಾವ್ ವಯಾ: 22 ವರ್ಷ ಉ:ಕೂಲಿ ಜಾತಿ:ಮಾದಿಗ ಸಾ:ದೇವಿಕೇರಾ ತಾ:ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ದೂರು ಅಜರ್ಿ ಸಾರಾಂಶವೆನೆಂದರೆ ಹೀಗಿರುವಾಗ ಇಂದು ದಿನಾಂಕ:10-04-2020 ರಂದು 10 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಅಣ್ಣನಾದ ಅಯ್ಯಪ್ಪ ಇಬ್ಬರೂ ಕೂಡಿ ನಮ್ಮೂರ ಯಂಕಪ್ಪ ತಂದೆ ಸಿದ್ದಪ್ಪ ಹೊಸಮನಿ ಜಾತಿ:ಹೊಲೆಯ ಇವರ ಮನೆಯ ಮುಂದುಗಡೆ ಸಿಸಿ ರಸ್ತೆಯ ಮೇಲೆ ಹೋಗುತ್ತಿರುವಾಗ 1) ಯಂಕಪ್ಪ ತಂದೆ ಸಿದ್ದಪ್ಪ ಹೊಸಮನಿ, ಹಾಗೂ 2) ಭಾಗಪ್ಪ ತಂದೆ ಅಯಪ್ಪ ಬಡಿಗೇರ, 3) ಸಾಯಬಣ್ಣ ತಂದೆ ಮಹಾದೇವಪ್ಪ ಹೊಸಮನಿ, 4) ದೇವರಾಜ ತಂದೆ ಸೋಮಲಿಂಗಪ್ಪ ಹೊಸಮನಿ, 5) ಧರ್ಮಣ್ಣ ತಂದೆ ಸೋಮಲಿಂಗಪ್ಪ ಹೊಸಮನಿ, 6) ಸೋಮಲಿಂಗಪ್ಪ ತಂದೆ ಸಿದ್ದಪ್ಪ ಹೊಸಮನಿ, 7) ನಾಗರಾಜ ತಂದೆ ಬೀಮರಾಯ ಹೊಸಮನಿ, 8) ಮುದಕಪ್ಪ ತಂದೆ ಭಿಮರಾಯ ಹೊಸಮನಿ 9) ಸಾಯಬಣ್ಣ ತಂದೆ ಮುದಕಪ್ಪ ಹೊಸಮನಿ 10) ಬೀಮಣ್ಣ ತಂದೆ ಸಾಯಬಣ್ಣ ಹೊಸಮನಿ 11) ತಿಮ್ಮಣ್ಣ ತಂದೆ ಸಾಯಬಣ್ಣ ಗಡಿ 12) ಯಂಕಪ್ಪ ತಂದೆ ಮಲ್ಲಪ್ಪ ಹೊಸಮನಿ 13) ಮರೆಪ್ಪ ತಂದೆ ಮರಲಿಂಗಪ್ಪ ಪೂಜಾರಿ 14) ಬಸವರಾಜ ತಂದೆ ಮರಲಿಂಗಪ್ಪ ಹೊಸಮನಿ 15) ಮಹಾದೇವಪ್ಪ ತಂದೆ ಮರಲಿಂಗಪ್ಪ ಹೊಸಮನಿ ಇವರೆಲ್ಲರೂ ಸುಮ್ಮನೆ ಹೋಗುತ್ತಿದ್ದ ನಮ್ಮನ್ನು ಅಡ್ಡಗಟ್ಟಿ ನಿಲ್ಲಿಸಿ ಸಿಸಿ ರಸ್ತೆಯಲ್ಲಿ ಅಡ್ಡ ಕಟ್ಟಿಗೆಗಳನ್ನು ಇಟ್ಟು ಈ ರಸ್ತೆಯ ಮುಖಾಂತರ ನೀವು ಯಾಕೇ ಹೋಗುತ್ತಿರಿ ಮಾದಿಗ ಸುಳೆ ಮಕ್ಕಳೆ ನಿಮ್ಮನ್ನು ಇವತ್ತು ಬಿಡುವದಿಲ್ಲ ಅಂತಾ ಅಂದವರೆ ಅವರಲ್ಲಿಯ ಯಂಕಪ್ಪ ಹೊಸಮನಿ ಈತನು ಒಂದು ಬಡಿಗೆಯಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದಾಗ ನಾನು ಸತ್ತೆನೆಪ್ಪೊ ಕೆಳಗಡೆ ಬಿದ್ದು ಚಿರಾಡುತ್ತಿರುವಾಗ ಬಿಡಿಸಲು ಬಂದ ನನ್ನ ಮುತ್ಯಾನಾದ ಹಣಮಂತ ತಂದೆ ಮರೆಪ್ಪ ಬಿಲ್ಲಾವ್ ಈತನಿಗೆ ಭಾಗಪ್ಪ ಬಡಿಗೇರ, ಸಾಯಬಣ್ಣ ಹೊಸಮನಿ, ದೇವರಾಜ ಹೊಸಮನಿ, ಧರ್ಮಣ್ಣ ಹೊಸಮನಿ ಇವರೆಲ್ಲರೂ ಕೂಡಿ ನನ್ನ ಮುತ್ಯಾ ಹಣಮಂತ ಈತನನ್ನು ತೆಕ್ಕೆಯಲ್ಲಿ ಹಿಡಿದುಕೊಂಡು ಕೈಯಿಂದ ಬೆನ್ನಿಗೆ ಹೊಟ್ಟೆಗೆ ಗುದ್ದಿ ನೆಲಕ್ಕೆ ಕೆಡವಿದಾಗ ನನ್ನ ಮುತ್ಯಾ ಹಣಮಂತ ಕೆಳಗೆ ಬಿದ್ದಾಗ ಸೋಮಲಿಂಗ ಹೊಸಮನಿ ಈತನು ಒಂದು ಕಲ್ಲಿನಿಂದ ನನ್ನ ಎಡ ಬೆನ್ನಿನ ಹತ್ತಿರ ಹೊಡೆದು ಗುಪ್ತಗಾಯಪಡಿಸಿದನು. ಆಗ ಜಗಳ ಬಿಡಿಸಲು ಬಂದ ನನ್ನ ತಾಯಿ ದುರ್ಗಮ್ಮ ಇವಳಿಗೆ ನಾಗರಾಜ ಹೊಸಮನಿ, ಮುದಕಪ್ಪ ಹೊಸಮನಿ ಇಬ್ಬರು ನನ್ನ ತಾಯಿಯ ದುರ್ಗಮ್ಮಳ ಕೈ ಹಿಡಿದು ಎಳೆದಾಡಿ ಸೀರೆ ಜಗ್ಗಾಡಿ ಅವಮಾನ ಮಾಡಿ ನುಕಿಸಿಕೊಟ್ಟಾಗ ಅವಳು ಕೆಳಗೆ ಬಿದ್ದಳು. ಆಗ ಅವರೆಲ್ಲರೂ ನನಗೆ ಕಾಲಿನಿಂದ ಒದೆಯುತ್ತಿರುವಾಗ ನಮ್ಮ ಕಾಕನಾದ ರಾಮಪ್ಪ ತಂದೆ ಚಂದಪ್ಪ ಬಿಲ್ಲಾವ್, ಅಣ್ಣನಾದ ಧರ್ಮಣ್ಣ ತಂದೆ ಮಲ್ಲಪ್ಪ ಬಿಲ್ಲಾವ್ ಮಾವನಾದ ಮುತ್ತಪ್ಪ ತಂದೆ ನಿಂಗಪ್ಪ ಬಿಜಾಸಪೂರ ಇವರು ಬಂದು ಜಗಳವನ್ನು ನೋಡಿ ಬಿಡಿಸಿದ್ದು ಇರುತ್ತದೆ ಆಗ ಅವರು ಇವತ್ತು ಉಳದಿರಿ ಇನ್ನೊಮ್ಮೆ ನಮ್ಮ ಮನೆಯ ಮುಂದಿನ ರಸ್ತೆಗೆ ಬಂದರೆ ನೀಮ್ಮ ಜೀವ ಸಹೀತ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೋಗಿರುತ್ತಾರೆ. ನಂತರ ಗಾಯಹೊಂದಿದ ನಾನು ಮತ್ತು ನಮ್ಮ ಮುತ್ಯಾ ಹಣಮಂತ ತಂದೆ ಮರೆಪ್ಪ ಇಬ್ಬರು ಸರಕಾರಿ ಆಸ್ಪತ್ರೆ ಸುರಪೂರಕ್ಕೆ ಬಂದು ಉಪಚಾರ ಪಡೆದುಕೊಂಡು ವಿಚಾರ ಮಾಡಿ ಠಾಣೆಗೆ ತಡವಾಗಿ ಬಂದು ಪಿರ್ಯಾದಿ ನಿಡಿದ್ದು ಇರುತ್ತದೆ. ನನಗೂ ನಮ್ಮ ಮುತ್ಯಾ ಹಣಮಂತ ಇಬ್ಬರಿಗೂ ಅವಾಚ್ಯ ಬೈದು ಹೊಡೆ ಬಡೆ ಮಾಡಿ ಗಾಯಗೊಳಿಸಿ ನನ್ನ ತಾಯಿ ದುರ್ಗಮ್ಮ ಇವಳ ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿ ಜೀವದ ಬೇದರಿಕೆ ಹಾಕಿದ ಮೇಲೆ ಹೇಳಿದ ಹದಿನೈದು ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
Hello There!If you like this article Share with your friend using