ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/04/2020

By blogger on ಶನಿವಾರ, ಏಪ್ರಿಲ್ 11, 2020
                            ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/04/2020 
ಯಾದಗಿರಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 46/2020 ಕಲಂ 269, 270. 188, 160 ಐಪಿಸಿ:- ಇಂದು ದಿನಾಂಕ 09/04/2020 ರಂದು 10-15 ಎ.ಎಮ್ ಕ್ಕೆ ಶ್ರೀ ಅಯ್ಯನಗೌಡ ಸಿ.ಹೆಚ್.ಸಿ-29 ರವರು ಠಾಣೆಗೆ ಬಂದು ವರದಿ ಕೊಟ್ಟಿದ್ದೆನೆಂದರೆ ಇಂದು ದಿನಾಂಕ 09/04/2020 ರಂದು ನಾನು ಮೇಲಾಧಿಕಾರಿಗಳ ಆದೇಶದ ಮೇರೆಗೆ ನನಗೆ ನಿಯೋಜಿಸಿದ ಬೀಟ ಹಳ್ಳಿಯಾದ ಪಗಲಾಪೂರ ಗ್ರಾಮಕ್ಕೆ ಕೋರೋನಾ ವೈರಾಣು ಹರಡುವಿಕೆಯ ಬಗ್ಗೆ ಜಾಗೃತಿಯ ಮೂಡಿಸುವ ಹಿನ್ನೆಲೆಯಲ್ಲಿ ಬೇಟಿ ನೀಡಿ ಜನರು ಗುಂಪಾಗಿ ಸೇರದಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಾರ್ವಜನಿಕರಿಗೆ ತಿಳಿ ಹೇಳುತ್ತಾ ಬೆಳಗ್ಗೆ 9-30 ಗಂಟೆ ಸುಮಾರಿಗೆ ಗ್ರಾಮದ ಮರೆಮ್ಮಾ ದೇವಿ ಗುಡಿ ಹತ್ತಿರ ಬಂದಾಗ ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಸುಮಾರು ಜನರು ಗುಂಪು ಸೇರಿದ್ದು ನಾನು ಅಲ್ಲಿಗೆ ಹೋಗಿ ಅವರನ್ನು ಅಲ್ಲಿಂದ ಚದುರಿಸಬೇಕೆನ್ನುವಷ್ಟರಲ್ಲಿ ಅಲ್ಲಿ ಒಂದನೇ ಪಾಟರ್ಿಯವರಾದ 1) ರಂಗಪ್ಪಾ ತಂದೆ ಬೀಮಶೇಪ್ಪಾ ವಡ್ಡರ ಹಾಗೂ ಈತನ ಮಕ್ಕಳಾದ 2) ಶಂಕ್ರೆಪ್ಪಾ ತಂದೆ ರಂಗಪ್ಪಾ ವಡ್ಡರ 3) ಯಲ್ಲಾಲಿಂಗ ತಂದೆ ರಂಗಪ್ಪಾ ವಡ್ಡರ ಮತ್ತು 4) ಮರೆಪ್ಪಾ ತಂದೆ ಹಣಮಂತ ವಡ್ಡರ ಹಾಗೂ ಎರಡನೇ ಪಾಟರ್ಿಯವರಾದ 1) ಸಹದೇವಪ್ಪಾ ತಂದೆ ಮಲ್ಲಯ್ಯಾ ಅಗಸರ ಮತ್ತು 2) ಹಣಮಂತ್ರಾಯ ತಂದೆ ರಾಯಣ್ಣಾ ಚಿಕ್ಕಮೇಟಿ ಇವರೆಲ್ಲರೂ ಕೂಡಿಕೊಂಡು ಸಾರ್ವಜನಿಕ ರಸ್ತೆಯ ಮೇಲೆ ಗುಂಪುಗೂಡಿಕೊಂಡು ಒಬ್ಬರಿಬ್ಬರೂ ಅವಾಚ್ಯವಾಗಿ ಬೈದಾಡುತ್ತಾ ಒಬ್ಬರ ಮೇಲೆ ಒಬ್ಬರೂ ಏರಿ ಹೋಗುತ್ತಾ ಸಾರ್ವಜನಿಕರ ಶಾಂತತೆಗೆ ಭಂಗವಾಗುವಂತೆ ಜಗಳವಾಡುತ್ತಾ ನಿಂತಿದ್ದರು. ಈಗ ಸಧ್ಯ ಕೋರೊನೋ ವೈರಾಣು ಸಂಭಂಧ ಇಡಿ ದೇಶದಲ್ಲಿ ಲಾಕ್ ಡೌನ್ ಇದ್ದು, ಮಾನ್ಯ ಕನರ್ಾಟಕ ಸರಕಾರ ಮತ್ತು ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶದ  ಪ್ರಕಾರ ಅಪಾಯಕರಿಯಾದ ಕೋರೊನೋ ವೈರಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾದ್ಯತೆ ಇರುವದರಿಂದ ಒಬ್ಬರಿಗೊಬ್ಬರೂ ಮೂರು ಫೀಟಿನಷ್ಟು ಅಂತರ ಕಾಯ್ದು ಕೊಂಡು ಇರಬೇಕು ಅಂತಾ ಆದೇಶ ಗೊತ್ತಿದ್ದರೂ ಕೂಡಾ ಆ ಸಮಯದಲ್ಲಿ ನಿರ್ಲಕ್ಷತನದಿಂದ ಈ ಮೇಲ್ಕಂಡ ಎರಡು ಪಾಟರ್ಿಯವರು ಸರಕಾರದ ಆದೆೇಶ ಪಾಲನೆ ಮಾಡದೇ ಗುಂಪು ಗುಂಪಾಗಿ ನಿಂತು ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿದ್ದು ಅಲ್ಲದೇ ಸಾರ್ವಜನಿಕರ ಶಾಂತತೆಗೆ ಭಂಗವನ್ನುಂಟು ಮಾಡಿದ್ದು ಇರುತ್ತದೆ. ಇವರ ಜಗಳದ ಬಗ್ಗೆ ವಿಚಾರಿಸಲಾಗಿ ನಿನ್ನೆ ದಿನಾಂಕ 08-04-2020 ರಂದು ರಾತ್ರಿ 10 ಗಂಟೆ ಸುಮಾರಿಗೆ ಎರಡನೇ ಪಾಟರ್ಿಯ ಇಬ್ಬರೂ ಹಾಗೂ ಇನ್ನಿತರರು ಸೇರಿಕೊಂಡಿ ಮರೆಮ್ಮಾ ದೇವಿ ದೇವಾಸ್ಥಾನದಲ್ಲಿ ಭಜನೆ ಮಾಡುವ ಸಮಯದಲ್ಲಿ ಎರಡನೇ ಪಾಟರ್ಿಯವರು ಅಲ್ಲಿಗೇ ಹೋಗಿ ಈಗ ಭಜನೆ ಮಾಡಿಬೇಡಿರಿ ಅಂತಾ ಅಂದಾಗ ಇದೇ ವಿಷಯದ ಸಂಬಂಧವಾಗಿ ಎರಡು ಪಾಟರ್ಿಯವರು ನಿನ್ನೆ ರಾತ್ರಿ ಕಿತ್ತಾಡಿಕೊಂಡಿದ್ದು ಇಂದು ಮತ್ತೆ ಅದೇ ವಿಷಯದಲ್ಲಿಯೇ ತಕರಾರು ಮಾಡಿಕೊಳ್ಳುತ್ತಾ ಗುಂಪು ಸೇರಿರುತ್ತಾರೆ ಅಂತಾ ತಿಳಿಯಿತು. ಇವರನ್ನು ಹೀಗೆ ಬಿಟ್ಟಲ್ಲಿ ಇವರು ಹೀಗೆ ಗುಂಪು ಸೇರುವುದರಿಂದ ಅಪಾಯಕರಿಯಾದ ಕೋರೊನೋ ವೈರಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾದ್ಯತೆ ಇರುವದರಿಂದ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿ ಸಾರ್ವಜನಿಕರ ಶಾಂತತೆಗೆ ಭಂಗವುಂಟಾಗುವ ಸಾಧ್ಯತೆ ಕಂಡುಬಂದಿದ್ದರಿಂದ ಎರಡು ಪಾಟರ್ಿ ಜನರನ್ನು ನನ್ನ ವಷಕ್ಕೆ ಪಡೆದುಕೊಂಡು ಎಲ್ಲರನ್ನು ಠಾಣೆಗೆ ಕರೆದಿಕೊಂಡು ಬಂದು ನನ್ನ ವರದಿಯೊಂದಿಗೆ ತಮ್ಮ ಮುಂದೆ ಮುಂದಿನ ಕ್ರಮಕ್ಕಾಗಿ ಹಾಕರುಪಡಿಸಿದ್ದು ಈ ಬಗ್ಗೆ ಎರಡು ಪಾಟರ್ಿ ಜನರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ನೀಡಿದ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 46/2020 ಕಲಂ 269, 270, 188, 160 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.ಯಾದಗಿರಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 47/2020 ಕಲಂ 269, 270. 188, 160 ಐಪಿಸಿ:- ಇಂದು ದಿನಾಂಕ 09/04/2020 ರಂದು 12-15 ಪಿ.ಎಮ್ ಕ್ಕೆ ಶ್ರೀ ಅಯ್ಯನಗೌಡ ಸಿ.ಹೆಚ್.ಸಿ-29 ರವರು ಠಾಣೆಗೆ ಬಂದು ವರದಿ ಕೊಟ್ಟಿದ್ದೆನೆಂದರೆ ಇಂದು ದಿನಾಂಕ 09/04/2020 ರಂದು 10-30 ಎ.ಎಮ್ ಕ್ಕೆ ಪಿ.ಎಸ್.ಐ ರವರ ಆದೇಶದ ಮೇರೆಗೆ ನನಗೆ ನಿಯೋಜಿಸಿದ ಬೀಟ ಹಳ್ಳಿಯಾದ ಪಗಲಾಪೂರ ಗ್ರಾಮಕ್ಕೆ ಕೋರೋನಾ ವೈರಾಣು ಹರಡುವಿಕೆಯ ಬಗ್ಗೆ ಜಾಗೃತಿಯ ಮೂಡಿಸುವ ಹಿನ್ನೆಲೆಯಲ್ಲಿ ಬೇಟಿ ನೀಡಿ ಜನರು ಗುಂಪಾಗಿ ಸೇರದಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಾರ್ವಜನಿಕರಿಗೆ ತಿಳಿ ಹೇಳುತ್ತಾ ಬೆಳಗ್ಗೆ 11-30 ಎ.ಎಮ್ ಕ್ಕೆ ನಾನು ಗ್ರಾಮದ ಹನುಮಾನ ಹತ್ತಿರ ಬಂದಾಗ ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಸುಮಾರು ಜನರು ಗುಂಪು ಸೇರಿದ್ದು ನಾನು ಅಲ್ಲಿಗೆ ಹೋಗಿ ಅವರನ್ನು ಅಲ್ಲಿಂದ ಚದುರಿಸಬೇಕೆನ್ನುವಷ್ಟರಲ್ಲಿ ಅಲ್ಲಿ ಒಂದನೇ ಪಾಟರ್ಿಯವರಾದ 1) ಯಲ್ಲಪ್ಪಾ ತಂದೆ ಹಣಮಂತ ವಡ್ಡರ  ಹಾಗೂ ಎರಡನೇ ಪಾಟರ್ಿಯವರಾದ 1) ವಿಜಯಕುಮಾರ ತಂದೆ ಸಾಹೇಬಗೌಡ ಪೋಲಿಸ್ ಪಾಟೀಲ್ 2) ಸಿದ್ದಣ್ಣಗೌಡ ತಂದೆ ಸಾಹೇಬಗೌಡ ಪೋಲಿಸ್ ಪಾಟಿಲ್ ಹಾಗೂ 3) ಮಲ್ಲಣಗೌಡ ತಂದೆ ತಿಪ್ಪಾರೆಡ್ಡಿಗೌಡ ಪರಸನಳ್ಳಿ ಇವರೆಲ್ಲರೂ ಕೂಡಿಕೊಂಡು ಸಾರ್ವಜನಿಕ ರಸ್ತೆಯ ಮೇಲೆ ಗುಂಪುಗೂಡಿಕೊಂಡು ಒಬ್ಬರಿಬ್ಬರೂ ಅವಾಚ್ಯವಾಗಿ ಬೈದಾಡುತ್ತಾ ಒಬ್ಬರ ಮೇಲೆ ಒಬ್ಬರೂ ಏರಿ ಹೋಗುತ್ತಾ ಸಾರ್ವಜನಿಕರ ಶಾಂತತೆಗೆ ಭಂಗವಾಗುವಂತೆ ಜಗಳವಾಡುತ್ತಾ ನಿಂತಿದ್ದರು. ಈಗ ಸಧ್ಯ ಕೋರೊನೋ ವೈರಾಣು ಸಂಭಂಧ ಇಡಿ ದೇಶದಲ್ಲಿ ಲಾಕ್ ಡೌನ್ ಇದ್ದು, ಮಾನ್ಯ ಕನರ್ಾಟಕ ಸರಕಾರ ಮತ್ತು ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶದ  ಪ್ರಕಾರ ಅಪಾಯಕರಿಯಾದ ಕೋರೊನೋ ವೈರಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾದ್ಯತೆ ಇರುವದರಿಂದ ಒಬ್ಬರಿಗೊಬ್ಬರೂ ಮೂರು ಫೀಟಿನಷ್ಟು ಅಂತರ ಕಾಯ್ದು ಕೊಂಡು ಇರಬೇಕು ಅಂತಾ ಆದೇಶ ಗೊತ್ತಿದ್ದರೂ ಕೂಡಾ ಆ ಸಮಯದಲ್ಲಿ ನಿರ್ಲಕ್ಷತನದಿಂದ ಈ ಮೇಲ್ಕಂಡ ಎರಡು ಪಾಟರ್ಿಯವರು ಸರಕಾರದ ಆದೆೇಶ ಪಾಲನೆ ಮಾಡದೇ ಗುಂಪು ಗುಂಪಾಗಿ ನಿಂತು ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿದ್ದು ಅಲ್ಲದೇ ಸಾರ್ವಜನಿಕರ ಶಾಂತತೆಗೆ ಭಂಗವನ್ನುಂಟು ಮಾಡಿದ್ದು ಇರುತ್ತದೆ. ಇವರ ಜಗಳದ ಬಗ್ಗೆ ವಿಚಾರಿಸಲಾಗಿ ನಿನ್ನೆ ದಿನಾಂಕ 08-04-2020 ರಂದು ರಾತ್ರಿ 10 ಗಂಟೆ ಸುಮಾರಿಗೆ ಎರಡನೇ ಪಾಟರ್ಿಯವರಿಗೆ  ಸಂಬಂಧಪಟ್ಟ ಇಬ್ಬರೂ ಹಾಗೂ ಇನ್ನಿತರರು ಸೇರಿಕೊಂಡಿ ಮರೆಮ್ಮಾ ದೇವಿ ದೇವಾಸ್ಥಾನದಲ್ಲಿ ಭಜನೆ ಮಾಡುವ ಸಮಯದಲ್ಲಿ ಒಂದನೇ ಪಾಟರ್ಿಯವ ಮತ್ತು ಆತನ ಸಂಬಂಧಿಕರು ಅಲ್ಲಿಗೇ ಹೋಗಿ ಈಗ ಭಜನೆ ಮಾಡಿಬೇಡಿರಿ ಅಂತಾ ಅಂದಾಗ ಇದೇ ವಿಷಯದ ಸಂಬಂಧವಾಗಿ ಎರಡು ಪಾಟರ್ಿಯವರು ನಿನ್ನೆ ರಾತ್ರಿ ಕಿತ್ತಾಡಿಕೊಂಡಿದ್ದು ಇಂದು ಮತ್ತೆ ಅದೇ ವಿಷಯದಲ್ಲಿಯೇ ತಕರಾರು ಮಾಡಿಕೊಳ್ಳುತ್ತಾ ಗುಂಪು ಸೇರಿರುತ್ತಾರೆ ಅಂತಾ ತಿಳಿಯಿತು. ಇವರನ್ನು ಹೀಗೆ ಬಿಟ್ಟಲ್ಲಿ ಇವರು ಹೀಗೆ ಗುಂಪು ಸೇರುವುದರಿಂದ ಅಪಾಯಕರಿಯಾದ ಕೋರೊನೋ ವೈರಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾದ್ಯತೆ ಇರುವದರಿಂದ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿ ಸಾರ್ವಜನಿಕರ ಶಾಂತತೆಗೆ ಭಂಗವುಂಟಾಗುವ ಸಾಧ್ಯತೆ ಕಂಡುಬಂದಿದ್ದರಿಂದ ಎರಡು ಪಾಟರ್ಿಯ 4 ಜನರನ್ನು ನನ್ನ ವಷಕ್ಕೆ ಪಡೆದುಕೊಂಡು ಎಲ್ಲರನ್ನು ಠಾಣೆಗೆ ಕರೆದಿಕೊಂಡು ಬಂದು ನನ್ನ ವರದಿಯೊಂದಿಗೆ ತಮ್ಮ ಮುಂದೆ ಮುಂದಿನ ಕ್ರಮಕ್ಕಾಗಿ ಹಾಕರುಪಡಿಸಿದ್ದು ಈ ಬಗ್ಗೆ ಎರಡು ಪಾಟರ್ಿ ಜನರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ನೀಡಿದ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 47/2020 ಕಲಂ 269, 270, 188, 160 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 


ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ. 07/2020 ಕಲಂ 174 ಸಿ.ಆರ್.ಪಿ.ಸಿ:- ಇಂದು ದಿನಾಂಕ 09.04.2020 ರಂದು ಬೆಳಿಗ್ಗೆ 7.30 ಗಂಟೆಗೆ ಗುರುಮಠಕಲ ಪಟ್ಟಣದ ದೊಡ್ಡ ಮಠದ ಹತ್ತಿರ ಅರನ್ಯ ಪ್ರದೇಶದಲ್ಲಿ ಮೃತ ದೇವ ಬಿದ್ದ ಬಗ್ಗೆ ಭಾತ್ಮೀ ಮೇರೆಗೆ ಪಿರ್ಯಾಧಿ ಸ್ಥಳಕ್ಕೆ ಬೇಟಿ ನೀಡಿದ್ದು ಅಲ್ಲಿ ಪಿರ್ಯಾಧಿಯು ಮೃತನ ಪ್ಯಾಂಟಿನಲ್ಲಿದ್ದ ಪಿರ್ಯಾಧಿ ತಮ್ಮನ ಪೋಟ, ತಮ್ಮನ ಹೆಂಡತಿ ಪೋಟ, ಮತ್ತು ಮಗಳ ಪೋಟ ಹಾಗೂ ತನ್ನ ತಮ್ಮನ ಮೊಬೈಲ ನಂಬರ ಪೋನ ನೊಡಿ ಗುತರ್ಿಸಿ ಹೇಳಿಕೆ ನೀಡಿದ್ದೆನೆಂದರೆ ನನ್ನ ತಮ್ಮ ಸುಮಾರು 15 ವರ್ಷಗಳಿಂದ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದು ಆತನಿಗೆ ಎಲ್ಲಾ ಕಡೆ ದವಖಾನೆಗೆ ತೋರಿಸಿದರು ಕಡಿಮೇ ಆಗಿರಲಿಲ್ಲ ಮತ್ತು ನನ್ನ ತಮ್ಮನು ಮನೆಯಲ್ಲಿ ಹೇಳದೆ ಕೇಳದೆ 4-5 ದಿನಗಳಿಂದ ಹೊರಗೆ ಹೋಗಿ ಬರುತ್ತಿದ್ದನು. ಈಗ್ಗೆ ಸುಮಾರು 1 ತಿಂಗಳಿಂದ ನನ್ನ ತಮ್ಮನು ಗ್ರಾಮದಲ್ಲಿ ಕಾಣಲಿಲ್ಲ ನಾವು ಎಲ್ಲಿಯಾದರು ಹೋಗಿರಬಹುದೆಂದು ಸುಮ್ಮನಿದ್ದೆವು. ನನ್ನ ತಮ್ಮನು ಇತ್ತಿಚ್ಚಿಗೆ ಕರೋನ ರೋಗ ಬಂದಿದ್ದರಿಂದ ನನ್ನ ತಮ್ಮನಿಗೆ ತಿನ್ನಲು ಊಟ ಸಿಗದೇ ಹಸಿವಿನಂದ ದೈಹಿಕವಾಗಿ ಬಳಲಿ ಊಟ ನೀರಿಲ್ಲದೆ ಬಿಸಿಲಿನ ಜಳಕ್ಕೆ ಮೃತಪಟ್ಟಿದ್ದು ಆತನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತಾ ವಗೈರೆ ಇರುತ್ತದೆ.


   
ಗುರಮಿಠಕಲ್ ಗುನ್ನೆ ನಂ;- 58/2020 ಕಲಂ 323, 324, 354, 504, 506 ಸಂಗಡ 34 ಐಪಿಸಿ;- ಇಂದು ದಿನಾಂಕ 09.04.2020 ರಂದು ಬೆಳಿಗ್ಗೆ 7:00 ಗಂಟೆಗೆ ಫಿರ್ಯಾದಿಯು ತನ್ನ ಗಂಡನೊಂದಿಗೆ ತಮ್ಮ ಸೌಳು ಹೊಲದಲ್ಲಿಯ ಹತ್ತಿಕಟ್ಟಿಗೆಯನ್ನು ಆಯ್ದು ಸುಡುವ ಸಲುವಾಗಿ ಹೋಗಿ ಕೆಲಸ ಮಾಡುತ್ತಿದ್ದಾಗ ಮಲ್ಲಿಕಾಜರ್ುನ ಈತನು ಫಿರ್ಯಾದಿ ಇದ್ದಲ್ಲಿಗೆ ಬಂದು ಅವರೊಂದಿಗೆ ದೊಡ್ಡಿ ಜಾಗದಲ್ಲಿ ನಿಮ್ಮ ಜಾಗ ಇಲ್ಲ ಅಂತಾ ಹೇಳಿ ಜಗಳ ತೆಗೆದು ಅವಾಚ್ಯವಾಗಿ ಬೈದು ನಂತರ ತನ್ನ ಅಣ್ಣನಾದ ಶಿವಶಂಕರಗೆ ಕರೆದು ನಂತರ ಇಬ್ಬರು ಸೇರಿ ಫಿರ್ಯಾದಿಗೆ ಮತ್ತು ಆಕೆಯ ಗಂಡನಿಗೆ ಕೈಯಿಂದ ಹೊಡೆ-ಬಡೆ ಮಾಡಿದ್ದು ಹಾಗೂ ಫಿರ್ಯಾದಿದಾರಳ ತಲೆಯ ಕೂದಲು ಹಿಡಿದು ಬೆನಿಗೆ ಹೊಡೆದು ಮಾನಭಂಗಕ್ಕೆ ಯತ್ನಿಸಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾಧಿದಾರಳು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 58/2020 ಕಲಂ 323, 324, 354, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 35/2020 ಕಲಂ: 188,269,270 ಸಂ 149 ಐಪಿಸಿ:- ಇಂದು ದಿನಾಂಕ: 09/04/2020 ರಂದು 4 ಪಿಎಮ್ ಕ್ಕೆ ಶ್ರೀ ಶಂಕರಗೌಡ ತಂದೆ ಸಿದ್ದನಗೌಡ ವ:27, ಉ:ಗ್ರಾಮ ಲೇಖಾಪಾಲಕ ಕಾಡಂಗೇರಾ (ಬಿ) ತಾ:ವಡಗೇರಾ ಸಾ:ಜಟ್ಟನಾಳ ತಾ:ಸಿಂಧಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಕಾಡಂಗೇರಾ (ಬಿ) ಗ್ರಾಮದಲ್ಲಿ ಈಗ ಸುಮಾರು ಒಂದು ವರ್ಷದಿಂದ ಗ್ರಾಮ ಲೇಖಾಪಾಲಕ ಎಂದು ಕೆಲಸ ಮಾಡಿಕೊಂಡಿರುತ್ತೇನೆ. ಈಗ ನಮ್ಮ ರಾಜ್ಯದಲ್ಲಿ ಕೋವಿಡ್-19 (ಕೋರೋನಾ) ಎಂಬ ಮಹಾಮಾರಿ ಭಯಂಕರ ರೋಗವು ಸಾಂಕ್ರಾಮಿಕವಾಗಿ ಹರಡುತ್ತಿರುವುದರಿಂದ ಮಾನ್ಯ ಘನ ಕನರ್ಾಟಕ ಸರಕಾರವು ಸಾರ್ವಜನಿಕ ಸಭೆ ಸಮಾರಂಭಗಳಾದ ಜಾತ್ರೆ, ಸಂತೆ, ಮದುವೆ ಮುಂತಾದವುಗಳನ್ನು ನಿರ್ಬಂಧಿಸಿ ಸಂಪೂರ್ಣ ಲಾಕಡೌನ ಆದೇಶ ಹೊರಡಿಸಿರುತ್ತಾರೆ. ಅದರಂತೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಕೂಡಾ ಲಾಕಡೌನ ಮಾಡಿ ಯಾವುದೇ ಜಾತ್ರೆ ಸಮಾರಂಭ ಮಾಡದಂತೆ ಆದೇಶ ಹೊರಡಿಸಿದ್ದು ಇರುತ್ತದೆ. ಹೀಗಿದ್ದು ಕಾಡಂಗೇರಾ (ಬಿ) ಗ್ರಾಮದಲ್ಲಿ ನಿನ್ನೆ ದಿವಸ ದಿನಾಂಕ: 08/04/2020 ರಂದು ಶ್ರೀ ದುಗರ್ಾದೇವಿ ಜಾತ್ರೆ ಇದ್ದುದ್ದರಿಂದ ಬೆಳಗ್ಗೆ 11 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಕಂದಾಯ ನಿರೀಕ್ಷಕರು ಹಾಗೂ ವಡಗೇರಾ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಕೂಡಿ ಕಾಡಂಗೇರಾ (ಬಿ) ಗ್ರಾಮಕ್ಕೆ ಹೋಗಿ ಗ್ರಾಮದ ದುಗರ್ಾದೇವಿ ಗುಡಿ ಪೂಜಾರಿ ಮತ್ತು ಗ್ರಾಮದ ಎಲ್ಲಾ ಮುಖಂಡರಿಗೆ ಬರ ಮಾಡಿಕೊಂಡು ಈಗ ಸದ್ಯ ದೇಶದಲ್ಲಿ ಕೋರೊನಾ ರೋಗ ಸಾಂಕ್ರಾಮಿಕವಾಗಿ ಹರಡುತ್ತಿರುವುದರಿಂದ ಸಂಪೂರ್ಣ ಲಾಕಡೌನ ಇದ್ದುದ್ದರಿಂದ ಜಾತ್ರೆ ವಗೈರೆ ಮಾಡಬಾರದೆಂದು ಸೂಕ್ತ ತಿಳುವಳಿಕೆ ಹೇಳಿದೆವು. ಅದಕ್ಕೆ ಅವರು ಆಯಿತು ನಾವು ದುಗರ್ಾದೇವಿ ಜಾತ್ರೆ ಮಾಡುವುದಿಲ್ಲ ಅಂತಾ ಹೇಳಿದರು. ಆದರೆ ನಿನ್ನೆ ದಿವಸ ದಿನಾಂಕ: 08/04/2020 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ಕಾಡಂಗೇರಾ (ಬಿ) ಗ್ರಾಮದ 1) ಸಿದ್ದಪ್ಪ ತಂದೆ ಹೊನ್ನಪ್ಪ ಕಲ್ಮನಿ, (ಗುಡಿ ಪೂಜಾರಿ), 2) ಗುರಪ್ಪ ತಂದೆ ಸಿದ್ದಪ್ಪ ಬಡಿಗೇರ, 3) ಮೌನೇಶ ತಂದೆ ಮಹಾರುದ್ರಪ್ಪ ವಿಶ್ವಕರ್ಮ, 4) ರಾಜಪ್ಪ ತಂದೆ ಸಿದ್ದರಾಮಪ್ಪ ವಿಶ್ವಕರ್ಮ, 5) ಪ್ರಕಾಶ ತಂದೆ ದೇವಿಂದ್ರಪ್ಪ ವಿಶ್ವಕರ್ಮ, 6) ರಾಮಲಿಂಗಪ್ಪ ತಂದೆ ಮಹಾರುದ್ರಪ್ಪ ವಿಶ್ವಕರ್ಮ ಹಾಗೂ ಇನ್ನಿತರ ಸುಮಾರು 60 ರಿಂದ 70 ಜನರು ಕೂಡಿ ಕೋವಿಡ್-19 (ಕೋರೋನಾ) ಎಂಬ ಮಹಾಮಾರಿ ಸಾಂಕ್ರಾಮಿಕ ರೋಗ ಹರಡುತ್ತದೆ ಅಂತಾ ಗೊತ್ತಿದ್ದರು, ಕೂಡಾ ಉದ್ದೇಶ ಪೂರ್ವಕವಾಗಿ ಶ್ರೀ ದುಗರ್ಾದೇವಿ ಜಾತ್ರೆಯನ್ನು ಆಚರಣೆ ಮಾಡಿ ಜಾತ್ರೆಯ ಪೂಜೆ ಪುನಸ್ಕಾರಗಳನ್ನು ಮಾಡಿ ಸದರಿ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಅಪಾಯಕಾರಿ ಸೊಂಕು ಹರಡುವ ನಿರ್ಲಕ್ಷತನವನ್ನು ತೋರಿಸಿರುತ್ತಾರೆ. ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಮ್ಮ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 35/2020 ಕಲಂ: 188,269,270 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 49/2020 ಕಲಂ 15[ಎ], 32[3]  ಕೆ,ಇ ಯಾಕ್ಟ್:- ಇಂದು ದಿನಾಂಕ: 09-04-2020 ರಂದು ಸಾಯಂಕಾಲ 05-00 ಗಂಟೆಗೆ ಪಿ.ಎಸ್.ಐ ರವರು ಬದ್ದೆಪಲ್ಲಿ ತಾಂಡದ ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಪರವಾನಿಗೆ ಇಲ್ಲದೆ ಮದ್ಯ ಸೇವನೆ ಮಾಡುವ ವ್ಯಕ್ತಿಗಳನ್ನು ಮತ್ತು ಮದ್ಯವನ್ನು ವಶಕ್ಕೆ ಪಡೆದುಕೊಂಡು ಜ್ಞಾಪನ ಪತ್ರದೊಂದಿಗೆ ಮದ್ಯದ ಜಪ್ತಿಪಂಚನಾಮೆಯನ್ನು ಹಾಗೂ ಆರೋಪಿತರನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ  ಮೇಲಿಂದ ಠಾಣಾ ಗುನ್ನೆ ನಂ. 49/2020 ಕಲಂ. 15[ಎ], 32[3]  ಕೆ.ಇ ಕಾಯ್ದೆ  ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 41/2020  ಕಲಂ 273, 328 ಐಪಿಸಿ:- ಇಂದು ದಿನಾಂಕ 09.04.2020 ರಂದು 06.30 ಪಿ.ಎಮ್ ಕ್ಕೆ ಆರೋಪಿತನು ತನ್ನ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ 5 ಲೀಟರನ 1 ಪ್ಲಾಸ್ಟಿಕ ಡಬ್ಬಿಯಲ್ಲಿ ಅಂದಾಜು 4 ಲೀಟರದಷ್ಟು ಕಳ್ಳಭಟ್ಟಿ ಸರಾಯಿಯನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ಪಂಚರ ಸಮಕ್ಷಮ ಫಿಯರ್ಾದಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಕಳ್ಳಭಟ್ಟಿ ಸರಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಆರೋಪಿತನು ಅನರ್ಹವಾದಂತಹ ಸ್ಥಿತಿಯಲ್ಲಿರುವ ಪದಾರ್ಥವು ಮಾನವ ಜೀವಕ್ಕೆ ಸೇವಿಸಲು ಹಾನಿಕಾರವಾಗಿದೆ ಎಂದು ತಿಳಿದೂ ಈ ಪದಾರ್ಥವನ್ನು ಮಾರಾಟ ಮಾಡಿದ್ದು ಅಲ್ಲದೆ ಸದರ ಪಾನೀಯ (ಕಳ್ಳಭಟ್ಟಿ ಸರಾಯಿ) ಸೇವನೆಯಿಂದ ಮಾನವ ಜೀವಕ್ಕೆ ಹಾನಿ ಇದೆ ಎಂದು ತಿಳಿದೂ ಮಾರಾಟ ಮಾಡುತ್ತಿದ್ದರಿಂದ ಸದರ ಕಳ್ಳಭಟ್ಟಿ ಸರಾಯಿಯನ್ನು ಪಂಚರ ಸಮಕ್ಷಮ 06.40 ಪಿ.ಎಮ್ ದಿಂದ 07.40 ಪಿ.ಎಮ್. ವರೆಗೆ  ಜಪ್ತಿಪಡಿಸಿಕೊಂಡು ಮರಳಿ ಠಾಣೆಗೆ ಬಂದು ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಅದೆ.ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 36/2020 ಕಲಂ, 87 ಕೆ.ಪಿ ಆ್ಯಕ್ಟ್:- ದಿನಾಂಕ 09/04/2020 ರಂದು 06.15 ಪಿಎಂ ಕ್ಕೆ ಶ್ರೀ ಸೊಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ರವರ ಠಾಣೆಗೆ ಬಂದು ಒಂದು ವರದಿ ಹಾಜರ ಪಡೆಸಿದ್ದು, ಅದರ ಸಾರಂಶ ಏನಂದರೆ ಗೋಗಿ ಕೆ ಗ್ರಾಮದ ವನದುಗರ್ಾ ರೋಡಿನ ಯುರೇನಿಯಂ ಘಟಕದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 05 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 4800=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು 03.20 ಪಿಎಮ್ ದಿಂದ 04.20 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 06.15 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರಪಡಿಸಿದ್ದರಿಂದ ಠಾಣೆ ಗುನ್ನೆ ನಂ 36/2020 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 63/2020  ಕಲಂ: 273, 328 ಐಪಿಸಿ:-;-  ಇಂದು ದಿನಾಂಕ 09.04.2020 ರಂದು 07.30 ಎ.ಎಮ್ ಕ್ಕೆ ಪಿರ್ಯಾದಿ ಶ್ರೀ ಸುದರ್ಶನರಡ್ಡಿ ಪಿಎಸ್ಐ ಕೆಂಭಾವಿ ಪೊಲೀಸ್ ಠಾಣೆ ಈ ಮೂಲಕ ವರದಿ ಸಲ್ಲಿಸುವುದೇನೆಂದರೆ, ಇಂದು ದಿನಾಂಕ: 09.04.2020 ರಂದು 5.00 ಎ.ಎಮ್ ಸುಮಾರಿಗೆ ನಾನು ಹಾಗೂ ಸಿಬ್ಬಂದಿಯವರಾದ ಬಲರಾಮ ಹೆಚ್ಸಿ 146, ಶಿವಲಿಂಗಪ್ಪ ಹೆಚ್ಸಿ 185, ಚಂದಪ್ಪ ಪಿಸಿ 316, ವಿಜಯಾನಂದ ಪಿಸಿ 103, ಬೀರಪ್ಪ ಪಿಸಿ 195 ಹಾಗು ಜೀಪ ಚಾಲಕ ಪೆದ್ದಪ್ಪಗೌಡ ಪಿ.ಸಿ-214 ರವರೊಂದಿಗೆ ಪೆಟ್ರೊಲಿಂಗ್ ಕುರಿತು ಕಿರದಳ್ಳಿ ಕ್ರಾಸ್ನಲ್ಲಿ ಇದ್ದಾಗ ಕಿರದಳ್ಳಿ ತಾಂಡಾದ ರಡ್ಡಿ ಇವರ ಮನೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಪ್ಲಾಸ್ಟಿಕ್ ಬಾಟಲ್ಗಳಲ್ಲಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದಾನೆ ಅಂತ ಭಾತ್ಮಿ ಬಂದ ಮೇರೆಗೆ ಭೀರಪ್ಪ ಪಿಸಿ-195 ರವರ ಮುಖಾಂತರ ಪಂಚ ಜನರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವ|| 38 ಜಾ|| ಪ ಜಾತಿ ಉ||ಕೂಲಿ ಸಾ|| ಕೆಂಭಾವಿ 2) ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ವ|| 48 ಜಾ|| ಪ ಜಾತಿ ಉ|| ಕೂಲಿ ಸಾ|| ಕೆಂಭಾವಿ ಇವರನ್ನು 05.30 ಎಎಮ್ಕ್ಕೆ ಕಿರದಳ್ಳಿ ಕ್ರಾಸ್ಗೆ ಕರೆಯಿಸಿ ಅವರಿಗೂ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ:ಕೆಎ 33 ಜಿ 0074 ನೇದ್ದರಲ್ಲಿ ಕಿರದಳ್ಳಿ ಕ್ರಾಸ್ದಿಂದ 05.45 ಎಎಮ್ಕ್ಕೆ ಹೊರಟು ಕಿರದಳ್ಳಿ ತಾಂಡಾದ ರಡ್ಡಿ ಇವರ ಮನೆಯ ಪಕ್ಕದಲ್ಲಿ 06 ಎಎಮ್ಕ್ಕೆ ನಮ್ಮ ಜೀಪ್ ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಸದರ ಸದರ ತಾಂಡಾದ ರಡ್ಡಿ ಇವರ ಮನೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುವದನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 06.05 ಎ.ಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುವ ವ್ಯಕ್ತಿ ಸಿಕ್ಕಿಬಿದ್ದಿದ್ದು ಸದರಿಯವನ ಹೆಸರು ವಿಚಾರಿಸಿ ತಿಳಿಯಲಾಗಿ ಗೋಪಾಲ ತಂದೆ ಚಂದು ಪವಾರ ವಯಾ|| 25 ಜಾ|| ಲಮಾಣಿ ಉ|| ಕೂಲಿ ಸಾ|| ಕಿರದಳ್ಳಿ ತಾಂಡಾ ಅಂತ ತಿಳಿಸಿದ್ದು ನಂತರ ಸದರಿ ಸ್ಥಳದಲ್ಲಿದ್ದ 2 ಲೀಟರನ 2 ಕಳ್ಳಭಟ್ಟಿ ಸರಾಯಿ ತುಂಬಿದ ಪ್ಲಾಸ್ಟಿಕ ಬಾಟಲ್ಗಳನ್ನು ಪಂಚರ ಸಮಕ್ಷಮ ವಶಕ್ಕೆ ಪಡೆದುಕೊಂಡಿದ್ದು, ಸದರ ಬಾಟಲ್ಗಳಲ್ಲಿ 01 ಪ್ಲಾಸ್ಟಿಕ್ ಬಾಟಲನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಕುರಿತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಪ್ರತ್ಯೇಕವಾಗಿ ಬಿಳಿ ಬಟ್ಟೆಯಿಂದ ಹೊಲಿದು ಅದರ ಮೇಲೆ ಅರಗಿನಿಂದ ಏ ಅಂತ ಶೀಲ್ ಹಾಕಿ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಆರೊಪಿತನು ಅನರ್ಹವಾದಂತಹ ಸ್ಥಿತಿಯಲ್ಲಿರುವ ಪದಾರ್ಥವು ಮಾನವ ಜೀವಕ್ಕೆ ಸೇವಿಸಲು ಹಾನಿಕಾರವಾಗಿದೆ ಎಂದು ತಿಳಿದೂ ಈ ಪದಾರ್ಥವನ್ನು ಮಾರಾಟ ಮಾಡಿದ್ದು ಅಲ್ಲದೆ ಸದರ ಪಾನೀಯ (ಕಳ್ಳಭಟ್ಟಿ ಸರಾಯಿ) ಸೇವನೆಯಿಂದ ಮಾನವ ಜೀವಕ್ಕೆ ಹಾನಿ ಇದೆ ಎಂದು ತಿಳಿದೂ ಮಾರಾಟ ಮಾಡುತ್ತಿದ್ದರಿಂದ ಸದರ ಸ್ಥಳದಲ್ಲಿದ್ದ 2ಲೀಟರನ 02 ಪ್ಲಾಸ್ಟಿಕ್ ಬಾಟಲ್ಗಳಲ್ಲಿದ್ದ ಕಳ್ಳಭಟ್ಟಿ ಸರಾಯಿಯನ್ನು ಪಂಚರ ಸಮಕ್ಷಮ 06.05 ಎಎಮ್ದಿಂದ 07.05 ಎಎಮ್ದವರೆಗೆ  ಜಪ್ತಪಡಿಸಿಕೊಂಡು ಮರಳಿ ಠಾಣೆಗೆ 07.35 ಎಎಮ್ಕ್ಕೆ ಬಂದು ಈ ವರದಿ ನೀಡಿದ್ದು ನೀಡಿದ್ದು ಕಾರಣ ಸದರಿ ಆರೋಪಿತನ ವಿರುದ್ದ ಮುಂದಿನ ಕ್ರಮ ಜರುಗಿಸಲು ಅದೇಶ ನೀಡಿದ್ದರಿಂದ ಕೆಂಭಾವಿ ಠಾಣೆ ಗುನ್ನೆ ನಂ 63/2020 ಕಲಂ 273, 328 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 64/2020 ಕಲಂ: 87 ಕೆಪಿ ಯಾಕ್ಟ:- ಇಂದು ದಿ : 09/04/2020 ರಂದು 15.30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಕೊಟ್ಟ ಜ್ಞಾಪನ ಪತ್ರದ ಸಾರಾಂಶವೇನೆಂದರೆ, ಇಂದು ದಿನಾಂಕ:09.04.2020 ರಂದು 1400 ಗಂಟೆಗೆ ಕೆಂಭಾವಿ ಪೊಲೀಸ್ ಠಾಣೆಯ ಹದ್ದಿಯ ಪೈಕಿ ಏವೂರ ಗ್ರಾಮದ ಕಡೆಗೆ ಕರೋನಾ ಮಹಮಾರಿ ನಿಮಿತ್ಯವಾಗಿ ಪೆಟ್ರೋಲಿಂಗ ಕುರಿತು ಹೋದಾಗ ಸದರ ಗ್ರಾಮದ ಈದಗಾದ ಪಕ್ಕದ ಸಾರ್ವಜನಿಕ ಸ್ಥಳದ ಒಂದು ಮಾವಿನ ಮರದ ಕೆಳಗಡೆ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ್-ಬಾಹರ್ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಖುದ್ದಾಗಿ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಸುಮಾರು 10-12 ಜನರು ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ 1420 ಗಂಟೆಗೆ ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡು ನಂತರ ಠಾಣೆಗೆ 1440 ಗಂಟೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ  ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು 1530 ಗಂಟೆಗೆ ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ. 64/2020 ಕಲಂ : 87 ಕೆಪಿ ಆಕ್ಟ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು. ನಂತರ ಪಿರ್ಯಾದಿದಾರರು ದಾಳಿ ಕೈಕೊಂಡಿದ್ದು ದಾಳಿಯಲ್ಲಿ 12 ಜನ ಆರೋಪಿತರಿಗೆ ದಸ್ತಗಿರಿ ಮಾಡಿ ಅವರಿಂದ ಪಂಚರ ಸಮಕ್ಷಮ 6950/- ರೂಪಾಯಿ ನಗದು ಹಣ ಹಾಗು 52 ಇಸ್ಪೀಟ ಎಲೆಗಳನ್ನು ಹಾಘೂ 1 ಬಿಳಿ ಬರಕಾವನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ ಅಂತ ಮಾನ್ಯರವರಲ್ಲಿ ವಿನಂತಿ ಇರುತ್ತದೆ.ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 25/2020 ಕಲಂ:143, 147, 148, 323, 324, 504, 506 ಸಂಗಡ 149 ಐಪಿಸಿ:- ಇಂದು ದಿನಾಂಕ:09.04.2020 ರಂದು 5:00 ಪಿ.ಎಂ ಕ್ಕೆ ಫಿಯರ್ಾದಿ ಗೋಪಾಲ ತಂದೆ ಕಸ್ತೂರೆಪ್ಪ ಜಾಧವ ವಯ:43 ವರ್ಷ, ಜಾ:ಹಿಂದೂ ಲಂಬಾಣಿ, ಉ:ಒಕ್ಕಲುತನ, ಸಾ:ಮಾರನಾಳ ತಾಂಡಾ ತಾ:ಹುಣಸಗಿ. ಜಿ:ಯಾದಗಿರಿ ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಫಿಯರ್ಾದಿ ಸಾರಾಂಶವೇನೆಂದರೆ, ನಮ್ಮ ಹೊಲ ಮತ್ತು ನಮ್ಮ ಸಂಬಂಧಿ ಸೂರಪ್ಪ ತಂದೆ ಲಚಮಪ್ಪ ಜಾಧವ ಹೊಲಗಳು ಒಂದೇ ಕಡೆಗೆ ಇರುತ್ತವೆ. ಮತ್ತು ನಮ್ಮ-ನಮ್ಮ ಮನೆಗಳೂ ಕೂಡಾ ಹೊಲದಲ್ಲಿ ಇರುತ್ತವೆ. 

ನಾವು ನಮ್ಮ ಜಮೀನಿನಲ್ಲಿ ಭತ್ತ ಹಾಕಿದ್ದು, ದಿನಾಂಕ:05.04.2020 ರಂದು ಮದ್ಯಾಹ್ನ 12:00 ಗಂಟೆಯ ಸುಮಾರಿಗೆ ಸೂರಪ್ಪ ಜಾಧವ ರವರ ಆಕಳು ನಮ್ಮ ಭತ್ತದ ಹೊಲದಲ್ಲಿ ಬಂದು ಭತ್ತದ ಬೆಳೆಯನ್ನು ತಿಂದಿದ್ದು, ಆಗ ನನ್ನ ಮಗ ಮೋನೇಶ ಈತನ ಆಕಳು ಬೆಳೆ ತಿನ್ನುತ್ತಿದ್ದುದನ್ನು ನೋಡಿ ನನ್ನ ಮಗ ಮೋನೇಶ ಈತನು ಅಲ್ಲಿಯೇ ಇದ್ದ ಓಂಪತಿ ಈತನಿಗೆ ಸೂರಪ್ಪ ರವರ ಆಕಳಗಳುಗಳನ್ನು ದೂರ ಹೊಡೆದು ಬರುತ್ತೇನೆಂದು ಹೇಳುತ್ತಿರುವಾಗ ಅಲ್ಲಿಯೇ ಇದ್ದ ಸೂರಪ್ಪನ ಹೆಂಡತಿ ಶಾರದಾಬಾಯಿಯು ಯಾಕೆ ನಮ್ಮ ಆಕಳುಗಳನ್ನು ದೂರ ಹೊಡೆದು ಬರುತ್ತಿ ಅಂತಾ ಬಾಯಿ ಮಾಡುತ್ತಿರುವಾಗ ಮನೆಯಲ್ಲಿದ್ದ ನಾನು ಹೊರಗೆ ಬಂದು ನೋಡಲಾಗಿ, ನನ್ನ ಮಗ ಮೋನೇಶ ಈತನು ಸೂರಪ್ಪನ ಹೆಂಡತಿ ಶಾರಾಬಾಯಿ ಗಂಡ ಸೂರಪ್ಪ ಇವಳಿಗೆ ಅವಾಚ್ಯ ಶಬ್ದಗಳಿಂದ ಬೈಯುವಾಗ ಅಲ್ಲಿಯೇ ಇದ್ದ ಸೂರಪ್ಪನು ನನ್ನ ಹೆಂಡತಿಗೆ ಯಾಕೆ ಬೈಯುತ್ತಿ ಅಂತಾ ಕೇಳಿದ್ದಕ್ಕೆ ಮೋನೇಶ ಈತನು ನಮ್ಮ ಅಣ್ಣತಮ್ಮಂದಿರಿಗೆ ಕರಿಸಲೇನು ಅಂತಾ ಹೇಳಿದನು. ಯಾರಿಗೆ ಕರಿಸುತ್ತೀ ಕರಿಸು ಎಂದು ಸೂರಪ್ಪನು ಮೋನೇಶ ಈತನ ಕಪಾಳಕ್ಕೆ ಒಂದು ಏಟು ಹೊಡೆದೆನು ನಾನು ಆಗ ಮದ್ಯ ಹೋಗಿ ನನ್ನ ಮಗನಿಗೆ ಬುದ್ದಿ ಹೇಳಿ ಮನೆಗೆ ಕರೆದುಕೊಂಡು ಬಂದೆನು. ಈ ವಿಷಯದ ಸಂಬಂಧವಾಗಿ ದಿನಾಂಕ:06.04.2020 ನಮ್ಮ ಸಮಾಜದ ಮಾಜಿ ತಾಲೂಕಾ ಪಂಚಾಯತ (ಟಿ.ಪಿ) ಮೇಂಬರ್ ಶೇಖರ, ಮುಖಂಡರಾದ ಗಣಪತಿ, ನಾರಾಯಣ, ಶಾಂತಿಲಾಲ್, ರಾಮುನಾಯಕ, ಮೋನಪ್ಪ, ಡಾ:ರಾಮುನಾಯ್ಕ, ದೀರಪ್ಪ, ದೀರಪ್ಪ ಪೂಜಾರಿ ಎಲ್ಲರೂ ಕೂಡಿ ನ್ಯಾಯ ಪಂಚಾಯತಿ ಮಾಡಿದರು.
ಹೀಗಿದ್ದು ದಿನಾಂಕ:06.04.2020 ರಂದು ಸಾಯಂಕಾಲ 6:00 ಪಿ.ಎಮ್ ಕ್ಕೆ ನಾನು ಮತ್ತು ನನ್ನ ಹೆಂಡತಿ ಮಲ್ಲಮ್ಮ ಗಂಡ ಗೋವಿಂದ ಜಾಧವ ಹಾಗು ನನ್ನ ಮಕ್ಕಳಾದ ಗುರುರಾಜ ಮೋನೇಶ ನಾಲ್ವರು ನಮ್ಮ ಮನೆಯ ಮುಂದೆ ಕುಳಿತಿರುವಾಗ 1) ಸೂರಪ್ಪ ತಂದೆ ಲಚಮಪ್ಪ ಜಾಧವ 2) ಶಾರದಾಬಾಯಿ ಗಂಡ ಸೂರಪ್ಪ ಜಾಧವ, 3) ಬದ್ದೆಪ್ಪ ತಂದೆ ಲಚಮಪ್ಪ ಜಾಧವ 4) ಲಲಿತಾ ಗಂಡ ಬದ್ದೆಪ್ಪ ಜಾಧವ 5) ಧರ್ಮಣ್ಣ ತಂದೆ ಲಚಮಪ್ಪ ಜಾಧವ 6) ಶಾರದಾಬಾಯಿ ಗಂಡ ಧರ್ಮಣ್ಣ ಜಾಧವ 7) ಪೂರಪ್ಪ ತಂದೆ ಲಚಮಪ್ಪ ಜಾಧವ 8) ಮಂಜುಳಾ ಗಂಡ ಪೂರಪ್ಪ ಜಾಧವ ಇವರೆಲ್ಲರೂ ಕೂಡಿಕೊಂಡು ಬಂದು ನನ್ನ ಮಗ ಮೋನೇಶನಿಗೆ ಸೂರಪ್ಪನು ಅಲ್ಲಿಯೇ ಬಿದಿದ್ದ  ಕಲ್ಲು ತೆಗೆದುಕೊಂಡ ಮೊಳಕಾಲಿಗೆ ಹೊಡೆದು ಗುಪ್ತಪೆಟ್ಟು ಮಾಡಿದ್ದು, ಆಗ ನಾನು ಹಾಗು ನನ್ನ ಹೆಂಡತಿ ಮಲ್ಲಮ್ಮ ಕೂಡಿ ನನ್ನ ಮಗನಿಗೆ ಹೊಡೆಯುವದನ್ನು ನೋಡಿ ಬಿಡಿಸಲು ಹೋದಾಗ ಬದ್ದೆಪ್ಪ ಈನತು ನನ್ನನ್ನು ತೆಕ್ಕೆಯಲ್ಲಿ ಹಿಡಿದುಕೊಂಡನು ಆಗ ಧರ್ಮಣ್ಣ ಮತ್ತು ಪೂರಪ್ಪ ಇವರಿಬ್ಬರು ನನಗೆ ಕೈಯಿಂದ ಬೆನ್ನಿಗೆ ಹೊಡೆದು ಗುಪ್ತಪೆಟ್ಟು ಮಾಡಿರುತ್ತಾರೆ. ಸೂರಪ್ಪ ಈತನು ನನ್ನ ಇನ್ನೊಬ್ಬ ಮಗನಾದ ಗುರುರಾಜನಿಗೆ ಹಿಡಿದು ಎದೆಯ ಹತ್ತಿರ ಎಡಗಡೆ ಬಾಯಿಯಿಂದ ಕಚ್ಚಿ ಗಾಯ ಮಾಡಿರುತ್ತಾನೆ. ನನ್ನ ಹೆಂಡತಿ ಮಲ್ಲಮ್ಮ ಇವಳಿಗೆ ಶಾರದಾಬಾಯಿ ಗಂಡ ಸೂರಪ್ಪ, ಲಲಿತಾ ಗಂಡ ಬದ್ದೆಪ್ಪ ಹಾಗು ಶಾರದಾಬಾಯಿ ಗಂಡ ಧರ್ಮಣ್ಣ ಇವರೆಲ್ಲರೂ ನನ್ನ ಹೆಂಡತಿಗೆ ದಬ್ಬಿಕೊಟ್ಟು ಕೆಳಗೆ ಕೆಡವಿ ಈ ಸೂಳಿದು ಜಾಸ್ತಿ ಆಗಿದೆ ಅಂತ ಕಾಲಿನಿಂದ ಪಕ್ಕಡಿಗೆ ಒದ್ದು ಗುಪ್ತಪೆಟ್ಟು ಮಾಡಿರುತ್ತಾರೆ. ಆಗ ನಮ್ಮ ತಾಂಡಾದ ಚಂದ್ರು ತಂದೆ ರಾಮಪ್ಪ ಜಾಧವ ಹಾಗು ನಮ್ಮ ಹತ್ತಿರ ಹೊಲದವರಾದ ಬಸವರಾಜ ತಂದೆ ಅಮರಪ್ಪ ಮಾದರ ರವರುಗಳು ಬಂದು ಜಗಳ ಬಿಡಿಸಿ ಕಳುಹಿಸಿದರು. ಸದರಿಯವರು ಹೋಗುವಾಗ ಇವತ್ತು ನೀಮ್ಮನ್ನು ಬಿಟ್ಟಿದ್ದಿವಿ ಇನ್ನೊಂದು ಸಲ ಸಿಕ್ಕರೆ ನಿಮ್ಮನ್ನು ಜೀವಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋಗಿತ್ತಾರೆ. ನನಗೆ ಹಾಗು ನನ್ನ ಹೆಂಡತಿ ಮಲ್ಲಮ್ಮ ಇವಳಿಗೆ ಅಷ್ಟೇನು ಪೆಟ್ಟಾಗಿರುವದಿಲ್ಲ. ನನ್ನ ಮಕ್ಕಳಾದ ಗುರುರಾಜ ಹಾಗು ಮೋನೇಶ ಇವರಿಗೆ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿಕೊಂಡು, ನಮ್ಮ ಸಮಾಜದ ಮುಖಂಡರ ಜೊತೆ ವಿಚಾರ ಮಾಡಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಡುತ್ತಿದ್ದು, ನನ್ನ ಮಕ್ಕಳಾದ ಗುರುರಾಜ ಹಾಗು ಮೋನೇಶ ಇವರುಗಳಿಗೆ ಆಸ್ಪತ್ರೆಗೆ ಕಳುಹಿಸಿಕೊಡಬೇಕು. ನಮಗೆ ಅವಾಚ್ಯ ಬೈದು, ಹೊಡೆಬಡೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಹೇಳಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಹೇಳಿಕೆ ನಿಜವಿರುತ್ತದೆ. ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ 25/2020 ಕಲಂ:143, 147, 148, 323, 324, 504, 506 ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 96/2020 ಕಲಂ: 143,147,148,341,323,324,504,506 ಸಂಗಡ 149 ಐಪಿಸಿ ಮತ್ತು 3(1)(ಆರ್), 3(1)(ಎಸ್) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ 1989:- ಇಂದು ದಿನಾಂಕಃ 09/04/2020 ರಂದು 8-30 ಪಿ.ಎಮ್ ಕ್ಕೆ ಶ್ರೀ ಮಹೇಶ ತಂದೆ ಶರಣಪ್ಪ ಕುಂಬಾರ ಸಾ: ಕಾಡಮಗೇರಾ(ಬಿ), ಹಾ.ವಃ ಜಾಲಿಬೆಂಚಿ ತಾಃ ಸುರಪೂರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿ ನೀಡಿದ್ದರ ಸಾರಾಂಶವೆನೆಂದರೆ, ನಮ್ಮ ತಂದೆ-ತಾಯಿಗೆ ನಾನು ಮತ್ತು ನನ್ನ ಅಣ್ಣ ಶಿವರಾಜಕುಮಾರ ಇಬ್ಬರು ಗಂಡು ಮಕ್ಕಳು ಹಾಗು ನಮಗೆ ಶಾಂತಮ್ಮ ಅಂತ ಒಬ್ಬಳು ಅಕ್ಕ ಹೀಗೆ ಮೂವರು ಮಕ್ಕಳಿರುತ್ತೇವೆ. ನನ್ನ ತಾಯಿಯಾದ ದಾನಮ್ಮ ಇವಳ ತವರೂರು ಸಹ ಜಾಲಿಬೆಂಚಿ ಗ್ರಾಮವಿರುತ್ತದೆ. ನನ್ನ ತಂದೆಯವರು ಸುಮಾರು 12 ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ. ನನ್ನ ತಂದೆಯವರು ಮೃತಪಟ್ಟ ಬಳಿಕ ನನ್ನ ತಾಯಿಯಾದ ದಾನಮ್ಮ ಇವಳು ಕಾಡಮಗೇರಾ(ಬಿ) ಗ್ರಾಮದಿಂದ ನಮಗೆ ಕರೆದುಕೊಂಡು ತವರೂರಾದ ಜಾಲಿಬೆಂಚಿ ಗ್ರಾಮಕ್ಕೆ ಬಂದು ನನ್ನ ಸೋದರಮಾವನ ಮನೆಯಲ್ಲಿ ವಾಸವಿದ್ದು ಕೂಲಿ-ನಾಲಿ ಮಾಡುತ್ತ ನಮಗೆ ಬೆಳೆಸಿರುತ್ತಾಳೆ. ನನ್ನ ಅಣ್ಣನಾದ ಶಿವರಾಜಕುಮಾರ ಇತನು ಶಾಲೆ ಓದುತ್ತಿದ್ದು ದಿನಾಂಕಃ 31/08/2018 ರಂದು ಜಾಲಿಬೆಂಚಿ ಗ್ರಾಮದ ಮಮತಾ ತಂದೆ ಬಸವರಾಜ ಕುಂಬಾರ ಎಂಬಾಕೆ ನನ್ನ ಅಣ್ಣನ ಹತ್ತಿರ ಪುಸ್ತಕ ಕೇಳುತ್ತ ಮಾತನಾಡುತ್ತಾ ನಿಂತಿದ್ದನ್ನು ನೋಡಿದ ಆಕೆಯ ಅಣ್ಣ ಪ್ರಕಾಶ ತಂದೆ ಬಸವರಾಜ ಕುಂಬಾರ ಇತನು ತನ್ನ ತಂದೆ ಹಾಗು ಅಣ್ಣ-ತಮ್ಮಕಿವರೊಂದಿಗೆ ನಮ್ಮ ಮನೆಗೆ ಬಂದು ನನ್ನ ಅಣ್ಣನಿಗೆ ಮಗನೇ ನಮ್ಮ ಹುಡುಗಿಯೊಂದಿಗೆ ಏಕೆ ಮಾತನಾಡುತ್ತೀದ್ದಿ, ನೀವಾಗಿಯೇ ನಮ್ಮೂರು ಜಾಲಿಬೆಂಚಿ ಗ್ರಾಮ ಬಿಟ್ಟು ಕಾಡಮಗೇರಾಗೆ ಹೋದರೆ ಒಳ್ಳೇಯದು, ಇಲ್ಲದಿದ್ದರೆ ನಾವೇ ಒದ್ದು ಊರು ಬಿಡಿಸುತ್ತೇವೆ ಅಂತ ತಕರಾರು ಮಾಡಿದ್ದರಿಂದ ನಾವು ನಮ್ಮ ತಾಯಿಯವರೊಂದಿಗೆ ನಮ್ಮ ಸ್ವಂತ ಊರು ಕಾಡಮಗೇರಾ (ಬಿ) ಗ್ರಾಮಕ್ಕೆ ಹೋಗಿರುತ್ತೇವೆ. ಈಗ್ಗೆ ದಿನಾಂಕ: 01/04/2020 ರಿಂದ ನಾನು ಜಾಲಿಬೆಂಚಿ ಗ್ರಾಮದ ಬೇಡರ ಜನಾಂಗದ ದೇವಿಂದ್ರಪ್ಪ ತಂದೆ ಸಿದ್ದಣ್ಣ ಹವಾಲ್ದಾರ ಇವರ ಹತ್ತಿರ ಟ್ರ್ಯಾಕ್ಟರ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ: 09/04/2020 ರಂದು 10-00 ಎ.ಎಮ್ ಸುಮಾರಿಗೆ ನಾನು ಟ್ರ್ಯಾಕ್ಟರ ನಂಬರ ಕೆ.ಎ 33 ಟಿ.ಎ 4960 ನೇದ್ದನ್ನು ನಡೆಸಿಕೊಂಡು ಜಾಲಿಬೆಂಚಿ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಸ್ತೆಯ ಮೇಲೆ ಹೊರಟಿದ್ದಾಗ ನಮ್ಮೊಂದಿಗೆ ವೈಷಮ್ಯ ಹೊಂದಿರುವ ನಮ್ಮ ಜನಾಂಗದ 1) ಪ್ರಕಾಶ ತಂದೆ ಬಸವರಾಜ ಕುಂಬಾರ ಹಾಗು ಆತನ ತಂದೆಯಾದ 2) ಬಸವರಾಜ ಮಹಾದೇವಪ್ಪ ಕುಂಬಾರ ಮತ್ತು ಅವರ ಅಣ್ಣ-ತಮ್ಮಕೀಯವರಾದ 3) ಶೇಖಪ್ಪ ತಂದೆ ಮಹಾದೇವಪ್ಪ ಕುಂಬಾರ 4) ರಮೇಶ ತಂದೆ ಶೇಖಪ್ಪ ಕುಂಬಾರ 5) ಮಂಜುನಾಥ ತಂದೆ ಶೇಖಪ್ಪ ಕುಂಬಾರ 6) ಚಂದ್ರಶೇಖರ ತಂದೆ ಗುಡದಪ್ಪ ಕುಂಬಾರ ಇವರೆಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಂದು ನನ್ನ ಟ್ರಾಕ್ಟರ ಅಡ್ಡಗಟ್ಟಿ ತಡೆದು ನಿಲ್ಲಿಸಿ ಲೇ ಮಹೇಶ ಸೂಳೆ ಮಗನೇ ನಮ್ಮೂರಿಗೆ ಬರಬ್ಯಾಡ್ರಿ ಅಂತ ಹೇಳಿದರೂ ಮತ್ತೆ ಬರುತ್ತೀರೇನಲೇ, ನಿಮಗೆ ಬೇರೆ ಕಡೆ ಕೆಲಸ ಸಿಗುವದಿಲ್ಲಾ ಏನೋ ಮಗನೇ ಅನ್ನುತ್ತ ಪ್ರಕಾಶನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಚಾಲಕನ ಸೀಟಿನಲ್ಲಿಂದ ಕೆಳಗಡೆ ಎಳೆದು ಕೈಯಿಂದ ಕಪಾಳಕ್ಕೆ ಹೊಡೆದಿದ್ದು, ಬಸವರಾಜನು ಕೈಯಿಂದ ನನ್ನ ಎದೆಗೆ, ಹೊಟ್ಟೆಗೆ ಹೊಡೆದಿರುತ್ತಾನೆ. ಹಾಗು ಶೇಖಪ್ಪನು ಕೈಯಿಂದ ನನ್ನ ಬೆನ್ನಿಗೆ ಹೊಡೆದಾಗ ರಮೇಶನು ಹಿಂದಿನಿಂದ ನನ್ನ ಕುಂಡಿಗೆ ಒದ್ದಿರುತ್ತಾನೆ. ಮಂಜುನಾಥ ಹಾಗು ಚಂದ್ರಶೇಖರ ಇಬ್ಬರೂ ಇನ್ನು ಹೊಡಿರಿ ಸೂಳೆಮಗನಿಗೆ ಅಂತ ಬೈಯ್ಯುತ್ತಿದ್ದಾಗ ನನಗೆ ಹೊಡೆಯುವದನ್ನು ನೋಡಿದ ನಮ್ಮ ಟ್ರ್ಯಾಕ್ಟರ ಮಾಲೀಕ ದೇವಿಂದ್ರಪ್ಪ ತಂದೆ ಸಿದ್ದಣ್ಣ ಹವಾಲ್ದಾರ ಜಾತಿಃ ಬೇಡರು ಹಾಗೂ ಆತನ ಮಗನಾದ ವಿಜಯಕುಮಾರ ತಂದೆ ದೇವಿಂದ್ರಪ್ಪ ಹವಾಲ್ದಾರ ಇಬ್ಬರೂ ಬಿಡಿಸಲು ಬಂದಾಗ ಅವರೆಲ್ಲರೂ ದೇವಿಂದ್ರಪ್ಪನಿಗೆ ಏನಲೇ ಬ್ಯಾಡ ಸೂಳೆ ಮಕ್ಕಳೇ ನಿಮಗೆ ಬೇರೆ ಕಡೆ ಯಾರು ಡ್ರೈವರ ಸಿಗಲಿಲ್ಲಾ ಏನಲೇ, ನಮ್ಮ ಜೊತೆ ಜಗಳವಾಡಿದವರಿಗೆ ಮತ್ತೆ ಊರಲ್ಲಿ ಕರೆದುಕೊಂಡು ಬಂದಿದ್ದೀರಿ, ನಿಮ್ಮದು ಬಹಳ ಸೊಕ್ಕು ಐತಿ, ಅಂತ ಅವಾಚ್ಯ ಶಬ್ದಗಳಿಂದ ಬೈದು ಅವರಲ್ಲಿ ಶೇಖಪ್ಪ ಮತ್ತು ರಮೇಶ ಇಬ್ಬರೂ ದೇವಿಂದ್ರಪ್ಪನಿಗೆ ಬಿಗಿಯಾಗಿ ಹಿಡಿದಾಗ ಪ್ರಕಾಶನು ಅಲ್ಲೆ ಬಿದ್ದಿದ್ದ ಬಡಿಗೆ ತಗೆದುಕೊಂಡು ದೇವಿಂದ್ರಪ್ಪನ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಮಂಜುನಾಥ ಹಾಗು ಚಂದ್ರಶೇಖರ ಇಬ್ಬರೂ ವಿಜಯಕುಮಾರನಿಗೆ ಬಿಗಿಯಾಗಿ ಹಿಡಿದುಕೊಂಡಾಗ ಬಸವರಾಜನು ಈ ಬ್ಯಾಡರ ಕೀಳು ಜಾತಿಯವರಿಗೆ ಬಹಳ ಸೊಕ್ಕಿದೆ ಮಕ್ಕಳಿಗೆ ಅನ್ನುತ್ತ  ತನ್ನ ಮಗನ ಕೈಯಲ್ಲಿದ್ದ ಬಡಿಗೆ ಕಸಿದುಕೊಂಡು ವಿಜಯಕುಮಾರನ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಆಗ ನಮಗೆ ಹೊಡೆಯುವದನ್ನು ನೋಡಿ ಮೌನೇಶ ಹಾಗು ಬಸಪ್ಪ ಇಬ್ಬರೂ ಬಂದು ಜಗಳ ಬಿಡಿಸಿದ್ದು ಆಗ ಅವರೆಲ್ಲರೂ ಇವತ್ತು ಜನರು ಬಿಡಿಸಿದ್ದಕ್ಕೆ ಉಳಿದಿದ್ದೀರಿ ಮಕ್ಕಳೇ, ಇನ್ನೊಮ್ಮೆ ಸಿಕ್ಕಲ್ಲಿ ಖಲಾಸ ಮಾಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ಬಳಿಕ ನಾವು ಮೂವರು ಸುರಪೂರ ಸಕರ್ಾರಿ ಆಸ್ಪತ್ರೆಗೆ ಬಂದು ಇಲಾಜ ಮಾಡಿಸಿಕೊಂಡು ನಂತರ ನಾವು ಮೂರು ಜನರು ಚಚರ್ೆ ಮಾಡಿ ಈಗ ತಡವಾಗಿ ಠಾಣೆಗೆ ಬಂದಿರುತ್ತೇವೆ ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 96/2020 ಕಲಂ. 143 147 148 341 323 324 504 506 ಸಂಗಡ 149 ಐಪಿಸಿ ಮತ್ತು ಕಲಂ 3(1)(ಆರ್), 3(1)(ಎಸ್) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ 1989 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!