ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/04/2020

By blogger on ಗುರುವಾರ, ಏಪ್ರಿಲ್ 9, 2020
                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/04/2020 
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 93/2019 ಕಲಂ 379 ಐ.ಪಿ.ಸಿ. ಮತ್ತು ಕಲಂ. 44(1) ಕೆಎಮ್ಎಮ್ ಸಿಆರ್ ಆಕ್ಟ್- 1994:- ಇಂದು ದಿನಾಂಕ:08-04-2020 ರಂದು 3-30 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಚೇತನ ಪಿ.ಎಸ್.ಐ ಸುರಪೂರ ಪೊಲೀಸ್ ಠಾಣೆ ಇವರು ಒಂದು ಮರಳು ತುಂಬಿದ ಟ್ಯಾಕ್ಟರನೊಂದಿಗೆ ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ  ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:08-04-2020 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ನಾನು ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮನೋಹರ ಹೆಚ್ಸಿ-105 2) ಶ್ರೀ ಶರಣು ಸಿಪಿಸಿ-224 3) ಶ್ರೀ ಪರಮೇಶ ಸಿಪಿಸಿ- 142 4) ಶ್ರೀ ಬಸವರಾಜ ಸಿಪಿಸಿ-180 ಎಲ್ಲರೂ ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಹೇಮನೂರ ಸೀಮಾಂತರದ ಕೃಷ್ಣಾ ನದಿಯ ತೀರದಿಂದ ಯಾರೋ ತಮ್ಮ ಟ್ಯಾಕ್ಟರದಲ್ಲಿ  ಅಕ್ರಮವಾಗಿ ಮರಳು ತುಂಬಿಕೊಂಡು ಲಕ್ಷ್ಮಿಪೂರ ಕ್ರಾಸ  ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದರಿ ವಯಾ:50 ವರ್ಷ ಉ:ಡ್ರೈವರ ಜಾತಿ:ಮುಸ್ಲಿಂ ಸಾ:ದೇವಾಪೂರ 2) ಕೃಷ್ಣಪ್ಪ ತಂದೆ ಅಯ್ಯಪ್ಪ ಡೊಳ್ಳ ವ|| 55 ವರ್ಷ ಜಾ|| ಕುರಬರ ಉ|| ಕೂಲಿಕೆಲಸ ಸಾ|| ವೆಂಕಟಾಪೂರ ಇವರನ್ನು ಠಾಣೆಗೆ 12:45 ಪಿ.ಎಂ.ಕ್ಕೆ ಠಾಣೆಗೆ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ನಾವೆಲ್ಲ ಸಿಬ್ಬಂದಿಯವರೆಲ್ಲರೂ ಕೂಡಿ ಸದರಿ ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ನಂಬರ ಕೆಎ-33, ಜಿ-0094 ನೇದ್ದರ ವಾಹನದಲ್ಲಿ 1 ಪಿ.ಎಮ್ಕ್ಕೆ ಠಾಣೆಯಿಂದ ಹೊರಟು 01-30 ಪಿ.ಎಮ್ ಕ್ಕೆ ಲಕ್ಷ್ಮಿಪೂರ ಕ್ರಾಸ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ನಿಂತುಕೊಂಡಾಗ 01-45 ಪಿ.ಎಂ.ಕ್ಕೆ  ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುವುದನ್ನು ಕಂಡು ಟ್ಯಾಕ್ಟರ ಚಾಲನಿಗೆ ಟ್ಯಾಕ್ಟರ ನಿಲ್ಲಿಸುವಂತೆ ಕೈ ಮಾಡಿದಾಗ ಸದರಿ ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರನ್ನು ಅಲ್ಲೆ ನಿಲ್ಲಿಸಿ ಕೆಳಗೆ ಇಳಿದು ಓಡಿ ಹೋಗಿದ್ದು, ಸದರಿ ಮರಳು ತುಂಬಿದ ಟ್ಯಾಕ್ಟರನ್ನು ಪರಿಶೀಲಿಸಿ ನೋಡಲಾಗಿ ಒಂದು ಸ್ವರಾಜ್ಯ ಕಂಪನಿಯ ಟ್ಯಾಕ್ಟರ ಇದ್ದು ಅದಕ್ಕೆ ನಂಬರ ಇರುವದಿಲ್ಲ ಅದರ ಇಂಜಿನ ನಂಬರ 39.1358/ಖಂಊ07609  ಚೆಸ್ಸಿ ನಂಬರ ಒಃಓಂಕ49ಂಃಏಖಿಊ13712 ನೇದ್ದು ಇದ್ದು ಟ್ರಾಲಿಗೆ ನಂಬರ ಇರುವದಿಲ್ಲ ಟ್ರಾಲಿಯಲ್ಲಿ ಅಂದಾಜು 2 ಘನ ಮೀಟರ ಮರಳು ತುಂಬಿದ್ದು ಅದರ ಅಂದಾಜು ಕಿಮ್ಮತ್ತು 1600/- ರೂಗಳು ಆಗುತ್ತದೆ. ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲೀಕ ಇಬ್ಬರು ಕೂಡಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿ ಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಕಳ್ಳತನದಿಂದ ಅಕ್ರಮ ಸಾಗಾಣಿಕೆ ಮಾಡುತ್ತಿದ್ದು ಇರುತ್ತದೆ. ಸದರಿ ಮರಳು ತುಂಬಿದ ವಾಹನವನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 01-45 ಪಿ.ಎಮ್ ದಿಂದ 02-45 ಪಿ.ಎಮ್ ದ ವರೆಗೆ ಕೈಕೊಂಡಿದ್ದು ಇರುತ್ತದೆ. ಕಾರಣ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೇ ಮೇಲ್ಕಂಡ ಟ್ಯಾಕ್ಟರದಲ್ಲ್ಲಿ ಒಟ್ಟು 1600=00 ರೂ ಕಿಮ್ಮತ್ತಿನ  ಅಂದಾಜು 2 ಘನ ಮೀಟರ್ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಚಾಲಕ ಮತ್ತು ಮಾಲಿಕನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವರದಿ ನಿಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 94/2020 ಕಲಂ: 87 ಕೆ.ಪಿ.ಕಾಯ್ದೆ:- ಇಂದು ದಿನಾಂಕ:08/04/2020 ರಂದು 6 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಚಂದ್ರಶೇಖರ ಪಿ.ಎಸ್.ಐ (ಕಾಸು-02) ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ 7 ಜನ ಆರೋಪಿತರನ್ನು ಠಾಣೆಗೆ ತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:08/04/2020 ರಂದು 3 ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಕನರ್ಾಳ ಗ್ರಾಮದ ಪ್ರಾಥಮಿಕ ಶಾಲೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ನಾನು ಮತ್ತು ಸಿಬ್ಬಂಧಿಯವರಾದ 1) ಶ್ರೀ ರವಿಕುಮಾರ ಪಿಸಿ-376 2) ದಯಾನಂದ ಪಿ.ಸಿ 337 3)  ಮಂಜುನಾಥ ಸಿಪಿಸಿ-271 4) ದೇವಿಂದ್ರಪ್ಪ ಸಿಪಿಸಿ-184, 5) ಜಗದೀಶ ಸಿಪಿಸಿ-335 ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ರಂಗಪ್ಪ ತಂದೆ ತಿರುಪತಿ ಮಕಾಸಿ ವ|| 30 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಚೌಡೇಶ್ವರಹಾಳ 2) ಶ್ರೀ ನಾಗರಾಜ ತಂದೆ ಹಣಮಂತ್ರಾಯ ಮಕಾಸಿ ವ|| 21 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಚೌಡೇಶ್ವರಹಾಳವರನ್ನು 3:15 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 3:20 ಪಿ.ಎಮ್ ಕ್ಕೆ ಠಾಣೆಯ ಒಂದು ಖಾಸಗಿ ವಾಹನ ನೇದ್ದರಲ್ಲಿ ಹೊರಟು 4 ಪಿ.ಎಮ್ ಕ್ಕೆ ಕನರ್ಾಳ ಗ್ರಾಮದ ಪ್ರಾಥಮೀಕ ಶಾಲೆಯ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಪ್ರಾಥಮೀಕ ಶಾಲೆ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 4:10 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿ ಒಟ್ಟು 07 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ಯಂಕೋಬ ತಂದೆ ಭೀಮರಾಯ ಬಿರಾದಾರ ವ|| 35 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಕನರ್ಾಳ  ಇವನ ಹತ್ತಿರ 200/- ರೂಗಳು ದೊರೆತವು 2) ನರಸಿಂಹ ತಂದೆ ದಾಸಪ್ಪ ಸುಂಡಿ ವ|| 50 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಕನರ್ಾಳ ಇವನ ಹತ್ತಿರ 250/- ರೂಗಳು ದೊರೆತವು 3) ತಿರಕಯ್ಯ ತಂದೆ ಮಲ್ಲಯ್ಯ ನಾಗುಂಡಿ ವ|| 26 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಕನರ್ಾಳ ಹತ್ತಿರ 300/- ರೂಗಳು ದೊರೆತವು 4) ಕರೆಪ್ಪ ತಂದೆ ರಂಗಯ್ಯ ನಾಯ್ಕೋಡಿ ವ|| 45 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಕನರ್ಾಳ ಇವನ ಹತ್ತಿರ 240- ರೂಗಳು ದೊರೆತವು 5) ತಿಮ್ಮಪ್ಪ ತಂದೆ ಯಂಕಯ್ಯ ಪುಜಾರಿ ವ|| 38 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಕನರ್ಾಳ ಇವನ ಹತ್ತಿರ 350/- ರೂಗಳು ದೊರೆತವ 6) ಶಿವರಾಜ ತಂದೆ ದ್ಯಾವಪ್ಪ ಬಿರನೂರ ವ|| 30 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಕನರ್ಾಳ ಇವನ ಹತ್ತಿರ 300/- ರೂಗಳು ದೊರೆತವು 7) ರಂಗಪ್ಪ ತಂದೆ ಬಸಲಿಂಗಪ್ಪ ಕಡಗುಡ್ಡ ವ|| 40 ವರ್ಷ ಜಾ|| ಬೇಡರು ಉ| ಒಕ್ಕಲುತನ ಸಾ|| ಕನರ್ಾಳ ಇವನ ಹತ್ತಿರ 300/- ರೂಗಳು ದೊರೆತವು ಇದಲ್ಲದೆ ಪಣಕ್ಕೆ ಇಟ್ಟ ಹಣ 950/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 2940/- ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು ಜೀಪಿನ ಲೈಟಿನ ಬೆಳಕಿನಲ್ಲಿ 4:10 ಪಿ.ಎಮ್ ದಿಂದ 5:10 ಪಿ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ 07 ಜನ ಆರೋಪಿರೊಂದಿಗೆ ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 94/2020 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 95/2020 ಕಲಂ: 87 ಕೆ.ಪಿ.ಕಾಯ್ದೆ:- ಇಂದು ದಿನಾಂಕ:08/04/2020 ರಂದು 7 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಚೇತನ್ ಪಿ.ಎಸ್.ಐ (ಕಾ&ಸು-1)ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ 11 ಜನ ಆರೋಪಿತರನ್ನು ಠಾಣೆಗೆ ತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:08/04/2020 ರಂದು 4:30 ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಚೌಡೇಶ್ವರಹಾಳ ಗ್ರಾಮದ ಮಲ್ಲಯ್ಯ ಪುಜಾರಿ ರವರ ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ನಾನು ಮತ್ತು ಸಿಬ್ಬಂಧಿಯವರಾದ 1) ಮಂಜುನಾಥ ಹೆಚ್ಸಿ-173, 2) ಮನೋಹರ ಹೆಚ್ಸಿ-105, 3) ಬಸವರಾಜ ಸಿಪಿಸಿ-180, 4) ಪರಮೇಶ ಸಿಪಿಸಿ-142, 5) ವೀರೇಶ  ಸಿಪಿಸಿ-374, 6) ಬಸವರಾಜ ಸಿಪಿಸಿ-395 7) ಮಾನಯ್ಯ ಸಿಪಿಸಿ-372, 8) ಶರಣಪ್ಪ ಸಿಪಿಸಿ-224, 9) ಬಸಪ್ಪ ಸಿಪಿಸಿ-393 ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ವೆಂಕಟೇಶ ತಂದೆ ಚಂದಪ್ಪ ಅರಕೇರಾ ವ|| 33 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಚೌಡೇಶ್ವರಹಾಳ 2) ಶ್ರೀ ವೆಂಕಟೇಶ ತಂದೆ ಹಣಮಂತ್ರಾಯ ಪೊಲೀಸ್ ಪಾಟೀಲ್ ವ|| 46 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಚಂದಲಾಪುರ ಇವರನ್ನು 4:45 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 4:50 ಪಿ.ಎಮ್ ಕ್ಕೆ ಠಾಣೆಯ ಒಂದು ಖಾಸಗಿ ವಾಹನ ನೇದ್ದರಲ್ಲಿ ಹೊರಟು 5:30 ಪಿ.ಎಮ್ ಕ್ಕೆ ಚೌಡೇಶ್ವರಹಾಳ ಗ್ರಾಮದ ಮಲ್ಲಯ್ಯ ಪುಜಾರಿ ಇವರ ಹೊಲದ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಮಲ್ಲಯ್ಯ ಪುಜಾರಿ ಇವರ ಹೊಲದ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 5 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿ ಒಟ್ಟು 11 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ನಿಂಗಪ್ಪ ತಂದೆ ಹಣಮಂತ್ರಾಯ ಮಕಾಶಿ ವ|| 24 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಚೌಡೇಶ್ವರಹಾಳ  ಇವನ ಹತ್ತಿರ 450/- ರೂಗಳು ದೊರೆತವು 2) ರಾಮಸ್ವಾಮಿ ತಂದೆ ತಿಮ್ಮಣ್ಣ ಸಮುದ್ರ ವ|| 36 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಚೌಡೇಶ್ವರಹಾಳ ಇವನ ಹತ್ತಿರ 600/- ರೂಗಳು ದೊರೆತವು 3) ಲಂಕೆಣ್ಣ ತಂದೆ ಹಣಮಂತ್ರಾಯ ಮಕಾಶಿ ವ|| 51 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಚೌಡೇಶ್ವರಹಾಳ ಹತ್ತಿರ 550/- ರೂಗಳು ದೊರೆತವು 4) ರಂಗಪ್ಪ ತಂದೆ ಮರೆಪ್ಪ ಬಿರಾದಾರ ವ|| 36 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಚೌಡೇಶ್ವರಹಾಳ ಇವನ ಹತ್ತಿರ 500- ರೂಗಳು ದೊರೆತವು 5) ಯಂಕಪ್ಪ ತಂದೆ ಮಾನಶಪ್ಪ ಉದ್ಬಾಳ ವ|| 35 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಚೌಡೇಶ್ವರಹಾಳ ಇವನ ಹತ್ತಿರ 600/- ರೂಗಳು ದೊರೆತವ 6) ವೆಂಕೋಬ ತಂದೆ ಮರೆಪ್ಪ ಕರಿಗುಡ್ಡ ವ|| 45 ವರ್ಷ ಜಾ|| ಬೇಡರು ಉ|| ಕೂಲಿ ಕೆಲಸ ಸಾ|| ಚೌಡೇಶ್ವರಹಾಳ ಇವನ ಹತ್ತಿರ 700/- ರೂಗಳು ದೊರೆತವು 7) ಸೋಪಿಸಾಬ ತಂದೆ ಖಾಸಿಂಸಾಬ ಮುಲ್ಲಾ ವ|| 48 ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಚೌಢೇಶ್ವರಹಾಳ ಇವನ ಹತ್ತಿರ 650/- ರೂಗಳು ದೊರೆತವು 8) ನಾಗಪ್ಪ ತಂದೆ ಸಿದ್ರಾಮಪ್ಪ ಅಂಬಿಗೇರ ವ|| 35 ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಕೆಲಸ ಸಾ|| ಚೌಡೇಶ್ವರಹಾಳ ಇವನ ಹತ್ತಿರ 550/- ರೂಗಳು ದೊರೆತವು 9) ರಂಗಣ್ಣ ತಂದೆ ಹಣಮಂತ್ರಾಯ ಮಕಾಶಿ ವ|| 40 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ||ಚೌಡೇಶ್ವರಹಾಳ ಇವನ ಹತ್ತಿರ 450/- ರೂಗಳು ದೊರೆತವು 10) ಮಾನಶಪ್ಪ ತಂದೆ ನಿಂಗಪ್ಪ ಮಕಾಶಿ ವ|| 65 ವರ್ಷ ಜಾ|| ಬೇಡರು ಉ|| ಕೂಲಿ ಕೆಲಸ ಸಾ|| ಚೌಡೇಶ್ವರಹಾಳ ಇವನ ಹತ್ತಿರ 600/- ರೂಗಳು ದೊರೆತವು 11) ಸೋಪಿಸಾಬ ತಂದೆ ಪೀರಸಾಬ ಮುಲ್ಲಾ ವ|| 25 ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಚೌಡೇಶ್ವರಹಾಳ ಇವನ ಹತ್ತಿರ 400/- ರೂಗಳು ದೊರೆತವು ಇದಲ್ಲದೆ ಪಣಕ್ಕೆ ಇಟ್ಟ ಹಣ 4030/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 10,080/- ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು ಜೀಪಿನ ಲೈಟಿನ ಬೆಳಕಿನಲ್ಲಿ 5 ಪಿ.ಎಮ್ ದಿಂದ 6 ಪಿ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ 11 ಜನ ಆರೋಪಿರೊಂದಿಗೆ ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 95/2020 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.   
ಶಹಾಪೂರ ಠಾಣೆ ಗುನ್ನೆ ನಂ;- 107/2020. ಕಲಂ 188 ಐ.ಪಿ.ಸಿ.ಮತ್ತು ಕಲಂ 3 ಕೆ.ಪಿ.ಎಮ್.ಇ.ಆಕ್ಟ 2007:- ಇಂದು ದಿನಾಂಕ: 08-04-2020 ರಂದು 5:00 ಪಿ.ಎಮ್.ಕ್ಕೆ ಫಿಯರ್ಾದಿ ಶ್ರೀ ಡಾ: ಎಸ್.ಬಿ. ಪಾಟೀಲ ಜಿಲ್ಲಾ ಕೆ.ಪಿ.ಎಮ್.ಇ ನೋಡಲ್ ಅಧಿಕಾರಿಗಳು ಪದನಿಮಿತ್ಯ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾಕಾರಿಗಳು ಯಾದಗಿರಿ  ಇವರು ಠಾಣೆಗೆ ಬಂದು ದೂರು ನೀಡಿದ್ದು ಏನಂದರೆ ಕು. ಹಂಸಲೇಖಾ ತಂದೆ ರಾಮಪ್ಪ ಹೊಸಮನಿ ವಯ: 4 ವರ್ಷ ಸಾ: ಕೊಂಗಂಡಿ ತಾ: ಶಹಾಪೂರ ಇವರು ದಿನಾಂಕ:07-04-2020 ರಂದು ಚಿಕಿತ್ಸೆಗೆ ಸಾರ್ವಜನಿಕ ಆಸ್ಪತ್ರೆಗೆ ಬರುವಾಗ ದಾರಿ ಮದ್ಯೆಯಲ್ಲಿ ಮೃತಪಟ್ಟಿರುತ್ತಾಳೆ.ಈ ಸಾವು ಸಂಶಯಾಸ್ಪದ (ಕೋವಿಡ್19) ಎಂದು ಅನುಮಾನಾಸ್ಪದ ಸಾವು ಎಂದು ಪರಿಗಣಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು ವಿಧಿ ವಿಜ್ಞಾನ ತಜ್ಞರು ನಿಯಮಾನುಸಾರ ಮಗುವಿನ ಗಂಡಲು ಮಾದರಿಯನ್ನು ತೆಗೆಯಲಾಗಿದ್ದು ಪರೀಕ್ಷೆಗೆ ಕಳುಹಿಸಲಾಗಿರುತ್ತದೆ.   ಕುಮಾರಿ ಹಂಸಲೇಖಾ ತಂದೆ ರಾಮಪ್ಪ ಹೊಸಮನಿ ಸಾ: ಕೊಂಗಂಡಿ ತಾ: ಶಹಾಪೂರ, ಜೀವಂತ ಅವಧಿಯಲ್ಲಿ ಅನಾರೋಗ್ಯ ನಿಮಿತ್ಯ ಶ್ರೀ ದೇವು ತಂದೆ ಗೊಲ್ಲಾಳಪ್ಪ ಹಡಪದ ವಯ: 24 ವರ್ಷ ಮು: ಕೊಂಗಂಡಿ ಸಾ: ಕುಳಗೇರಿ ತಾ: ಜೇವಗರ್ಿ ಜಿ: ಕಲಬುರಗಿ ಹಾಗೂ ಸಂಜಯ ತಂದೆ ಪಗಲಮಂಡಲ ಮು: ಹತ್ತಿಗೂಡೂರ ಸಾ: ಸಿಂಧನೂರ ಜಿ: ರಾಯಚೂರ ಸದರಿ ಆರ್.ಎಮ್.ಪಿ. ವೈದ್ಯರನ್ನು ಚಿಕಿತ್ಸೆಗೆಂದು ಸಂಪಕರ್ಿಸಿರುತ್ತಾರೆ ಸದರಿ ಆರ್.ಎಮ್.ಪಿ.ವೈದ್ಯರು ಸದರಿಯವರಿಗೆ ಚಿಕಿತ್ಸೆ ನೀಡಿರುತ್ತಾರೆ ಈ ವಿಷಯ ಮೃತ ಹಂಸಲೇಖಾ ಳ ತಂದೆ ತಾಯಿಯ ಹೇಳಿಕೆ ಹಾಗೂ ಕಿರಿಯ ಆರೋಗ್ಯ ಸಹಾಯಕ (ಕು) ಹಾಗೂ ಕಿರಿಯ ಆರೋಗ್ಯ ಸಹಾಯಕಿ (ಮ) ಉಪಕೇಂದ್ರ ಕೊಂಗಂಡಿ ಇವರ ಹೇಳಿಕೆಯಿಂದ ತಿಳಿದು ಬಂದಿರುತ್ತದೆ ಎಂದು ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಹತ್ತಿಗೂಡೂರ ರವರು ದೃಢಿಕರಿಸಿರುತ್ತಾರೆ  ಸದರಿ ಶ್ರೀ ದೇವು ತಂದೆ ಗೊಲ್ಲಾಳಪ್ಪ ಹಡಪದ ವಯ: 24 ವರ್ಷ ಮು:ಕೊಂಗಂಡಿ ಸಾ: ಕುಳಗೇರಿ ತಾ: ಜೇವಗರ್ಿ ಜಿ: ಕಲಬುರಗಿ ಹಾಗೂ ಸಂಜಯ ತಂದೆ ಪಗಲಮಂಡಲ ಮು:ಹತ್ತಿಗೂಡೂರ ಸಾ: ಸಿಂಧನೂರ ಜಿ: ರಾಯಚೂರು ಸದರಿ ಆರ್.ಎಮ್.ಪಿ.ವೈದ್ಯರು ಆಗಿದ್ದು ಇವರ ವೈದ್ಯೋಪಚಾರ ಮಾಡಿರುವುದೇ ನಿಯಮ ಬಾಹಿರವಾಗಿರುತ್ತದೆ. ಹಾಗೂ ಕೋವಿಡ್ 19 ತುತರ್ು ಪರಿಸ್ಥಿತಿಯಲ್ಲಿ ಜ್ವರದ ಪ್ರಕರಣಗಳನ್ನು ಆರೋಗ್ಯ ಇಲಾಖೆಗೆ ಯಾವುದೇ ಮಾಹಿತಿ ನೀಡದೇ ನಿರ್ಲಕ್ಷ ತೋರಿಸಿರುತ್ತಾರೆ. ಆದುದರಿಂದ ಈ ಇಬ್ಬರು ವ್ಯಕ್ತಿಗಳ ವಿರುದ್ಧ ಕಾನೂನು ಪ್ರಕಾರ ಶಿಸ್ತು ಕ್ರಮ ಜರುಗಿಸಲು ಈ ಮೂಲಕ ತಮ್ಮಲ್ಲಿ ವಿನಂತಿಸಲಾಗಿದೆ ಎಂದು ಇದ್ದ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.107/2020 ಕಲಂ. 188 ಐ.ಪಿ.ಸಿ. ಮತ್ತು ಕಲಂ. 3 ಕೆ.ಪಿ.ಎಮ್.ಇ ಆಕ್ಟ 2007 ನೇದ್ದರ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.  

ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ. 06/2020:- ಇಂದು ದಿನಾಂಕ 08.04.2020 ರಂದು ಶಿವರಾಮರೆಡ್ಡಿ ಪಿ.ಸಿ-223 ರವರು ಠಾಣೆಗೆ ಹಾಜರಾಗಿ ಮಾನ್ಯ ಎಸ್.ಪಿ ಸಾಹೇಬರು ಯಾದಗಿರಿ ರವರ ಕಾಯರ್ಾಲಯದ ಜ್ಞಾಪನ ಪತ್ರ ಸಂ. 80/ಡಿ.ಸಿ.ಆರ್.ಬಿ/ಯಾಜಿ/2020 ದಿನಾಂಕ 18.01.2020 ನೆದ್ದು ತಂದು ಹಾಜರುಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ. 06/2020 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  
   
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 22/2020 ಕಲಂ:143, 147, 148, 323, 324, 504, 506 ಸಂಗಡ 149 ಐಪಿಸಿ:- ಇಂದು ದಿನಾಂಕ:08.04.2020 ರಂದು 09:00 ಎ.ಎಮ್ ಫಿಯರ್ಾದಿ ಸೂರಪ್ಪ ತಂದೆ ಲಕ್ಷ್ಮಪ್ಪ ಜಾಧವ ಸಾ:ಮಾರನಾಳ ತಾಂಡಾ ತಾ:ಹುಣಸಗಿ. ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಫಿಯರ್ಾದಿ ಸಾರಾಂಶವೇನೆಂದರೆ, ನಮ್ಮ ಹೊಲ ಮತ್ತು ನಮ್ಮ ದೊಡ್ಡಪ್ಪ ಕಸ್ತೂರೆಪ್ಪನ ಹೊಲಗಳು ಒಂದೇ ಕಡೆಗೆ ಇರುತ್ತವೆ. ಮತ್ತು ನಮ್ಮ-ನಮ್ಮ ಮನೆಗಳೂ ಕೂಡಾ ಹೊಲದಲ್ಲಿ ಇರುತ್ತವೆ. ನಾವು ನಮ್ಮ ಜಮೀನಿನಲ್ಲಿ ಭತ್ತ ಹಾಕಿದ್ದು, ಅದರಂತೆ ನಮ್ಮ ದೊಡ್ಡಪ್ಪನೂ ಕೂಡಾ ಭತ್ತ ಹಾಕಿದ್ದು, ದಿನಾಂಕ:05.04.2020 ರಂದು ಮದ್ಯಾಹ್ನ 12:00 ಗಂಟೆಯ ಸುಮಾರಿಗೆ ನಮ್ಮ ಆಕಳು ನಮ್ಮ ಅಣ್ಣ ಭದ್ರಪ್ಪನ ಆಕಳುಗಳು ನಮ್ಮ ದೊಡ್ಡಪ್ಪ ಕಸ್ತೂರೆಪ್ಪನ  ಭತ್ತದ ಹೊದಲ್ಲಿ ಹೋಗಿ ಭತ್ತದ ಬೆಳೆಯನ್ನು ತಿಂದಿದ್ದು, ಆಗ ನಮ್ಮ ದೊಡ್ಡಪ್ಪ ಕಸ್ತೂರೆಪ್ಪನ ಮೊಮ್ಮಗನಾದ ಮೋನೇಶ ತಂದೆ ಗೋಪಾಲ ಈತನು ಓಂಪತಿ ಈತನಿಗೆ ನಿಮ್ಮ ದನಗಳನ್ನು ನೀವು ಕಟ್ಟಿಕೊಳ್ಳಿರಿ ನಾನು ಸೂರಪ್ಪನ ಆಕಳನ್ನು ದೂರ ಹೊಡೆದು ಬರುತ್ತೇನೆಂದು ಹೇಳುತ್ತಿರುವಾಗ ನಾನು ಮನೆಯಿಂದ ಹೊರಕ್ಕೆ ಬಂದು ನೋಡಲಾಗಿ ಅಲ್ಲಿಯೇ ಇದ್ದ ನನ್ನ ಹೆಂಡತಿ ಶಾರದಾಬಾಯಿ ಇವಳು ಯಾಕೆ ನಮ್ಮ ಆಕಳು ದೂರ ಹೊಡೆದು ಬರುತ್ತಿ ಅಂತಾ ಮೋನೇಶನಿಗೆ ಕೇಳಿದಾಗ ಮೋನೇಶ ಈತನು ನನ್ನ ಹೆಂಡತಿಗೆ ಬೋಸಡಿ, ರಂಡಿ, ಸೂಳಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುವಾಗ ನಾನು, ಮೋನೇಶ ಈತನಿಗೆ ನನ್ನ ಹೆಂಡತಿಗೆ ಯಾಕೆ ಬೈಯುತ್ತಿ ಅಂತಾ ಕೇಳಿದ್ದಕ್ಕೆ ಮೋನೇಶ ಈತನು ನಮ್ಮ ಅಣ್ಣತಮ್ಮಂದಿರಿಗೆ ಕರಿಸಲೇನು ಅಂತಾ ಹೇಳಿದನು. ಯಾರಿಗೆ ಕರಿಸುತ್ತೀ ಎಂದು ನಾನು ಮೋನೇಶ ಈತನ ಕಪಾಳಕ್ಕೆ ಒಂದು ಏಟು ಹೊಡೆದೆನು. ಈ ವಿಷಯದ ಸಂಬಂಧವಾಗಿ ದಿನಾಂಕ:06.04.2020 ನಮ್ಮ ಸಮಾಜದ ಮಾಜಿ ತಾಲೂಕಾ ಪಂಚಾಯತ (ಟಿ.ಪಿ) ಮೇಂಬರ್ ಶೇಖರ, ಮುಖಂಡರಾದ ಗಣಪತಿ, ನಾರಾಯಣ, ಶಾಂತಿಲಾಲ್, ರಾಮುನಾಯಕ, ಮೋನಪ್ಪ, ಡಾ:ರಾಮುನಾಯ್ಕ, ದೀರಪ್ಪ, ದೀರಪ್ಪ ಪೂಜಾರಿ ಎಲ್ಲರೂ ಕೂಡಿ ನ್ಯಾಯ ಪಂಚಾಯತಿ ಮಾಡಿದರು. ಹೀಗಿದ್ದು ದಿನಾಂಕ:06.04.2020 ರಂದು ಸಾಯಂಕಾಲ 5:30 ಪಿ.ಎಮ್ ಕ್ಕೆ ನಾನು ನಮ್ಮ ತಾಂಡಾದಲ್ಲಿಯ ದ್ಯಾವಮ್ಮ ಗುಡಿಯ ಹತ್ತಿರ ಇರುವ ಸಾರ್ವಜನಿಕ ಬೋರ್ವೆಲ್ಗೆ ಹೋಗಿ ನೀರು ತುಂಬುತ್ತಿರುವಾಗ ಅಲ್ಲಿಗೆ ಆಗ ನೀರು ತುಂಬಲು ಬಂದ ಮಲ್ಲಿಬಾಯಿ ಗಂಡ ಗೋಪಾಲ ಇವಳು ನನಗೆ ಯಾಕೇ ಗುರಾಯಿಸಿ ನೋಡುತ್ತಿ ಅಂತ ತನ್ನ ಮಕ್ಕಳಾದ 1) ಮೋನೇಶ ತಂದೆ ಗೋಪಾಲ  2) ಅನೀಲ್ ತಂದೆ ಗೋಪಾಲ, 3) ಗುರಪ್ಪ ತಂದೆ ಗೋಪಾಲ 4) ಬಸವರಾಜ ತಂದೆ ರಮೇಶ 5) ಸಂತೋಷ ತಂದೆ ರಮೇಶ 6) ರಮೇಶ ತಂದೆ ಕಸ್ತೂರೆಪ್ಪ 7) ಗೋಪಾಲ ತಂದೆ ಕಸ್ತೂರೆಪ್ಪ 8) ಅಂಚಿಬಾಯಿ ಗಂಡ ರಮೇಶ ಇವರೆಲ್ಲರೂ ಕೂಡಿಕೊಂಡು ಬಂದು ಮೋನೇಶ ಕಲ್ಲು ತೆಗೆದುಕೊಮಡು ಬೆನ್ನಿಗೆ ಹೊಡೆದನು. ಗುರಪ್ಪ ನನ್ನನ್ನು ತೆಕ್ಕೆಯಲ್ಲಿ ಹಿಡಿದುಕೊಂಡು ಸಂತೋಷ, ಬಸವರಾಜ, ಗೋಪಾಲ ಇವರೆಲ್ಲರೂ ಕೈಯಿಂದ ಬೆನ್ನಿಗೆ ಹೊಡೆದಿರುತ್ತಾರೆ. ಇನ್ನುಳಿದವರು ಅನೀಲ್, ರಮೇಶ ಅಂಚಿಬಾಯಿ ಇವರೆಲ್ಲರೂ ಈ ಸೂಳಿ ಮನಗನಿಗೆ ಬಿಡಬ್ಯಾಡ್ರಿ ಖಲಾಸ್ ಮಾಡ್ರಿ ಅಂತಾ ಜೀವದ ಬೆದರಿಕೆ  ಹಾಕಿದರು. ಆನ ನಮ್ಮ ತಮ್ಮ ಧರ್ಮಪ್ಪ ಬಂದು ಜಗಳ ಬಿಡಿಸಿ ಕಳುಹಿಸಿದನು. ನಿನ್ನೆ ದಿನಾಂಕ:07.04.2020 ರಂದು ಆಸ್ಪತ್ರೆಗೆ ತೋರಿಸಿಕೊಂಡು ಇಂದು ನಮ್ಮ ಸಮಾಜದ ಮುಖಂಡರ ಜೊತೆ ವಿಚಾರ ಮಾಡಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಡುತ್ತಿದ್ದು, ನನಗೆ ಅವಾಚ್ಯ ಬೈದು, ಹೊಡೆಬಡೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಹೇಳಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಹೇಳಿಕೆ ನಿಜವಿರುತ್ತದೆ. ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.22/2020 ಕಲಂ:143, 147, 148, 323, 324, 504, 506 ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 23/2020 ಕಲಂ: 143, 147, 323, 354, 307, 504, 506 ಸಂ 149 ಐಪಿಸಿ  :- ದಿನಾಂಕ 08/04/2020 ರಂದು ರಾತ್ರಿ 11:30 ಎ.ಎಂ ಕ್ಕೆ ಫಿಯರ್ಾದಿ ರೇಖಪ್ಪ ತಂದೆ ಮೇಘಪ್ಪ ಜಾಧವ ವಯ:52 ವರ್ಷ, ಜಾ:ಹಿಂದೂ ಲಂಬಾಣಿ, ಉ:ಒಕ್ಕಲುತನ, ಸಾ:ಬ್ಯಾಲದಗಿಡದ ತಾಂಡಾ ತಾ:ಹುಣಸಗಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ, ನಮ್ಮ ತಂದೆ ತಾಯಿಗೆ ನಾನು ಮತ್ತು ಶಂಕ್ರಪ್ಪ ಜಾಧವ, ಮೋತಿಲಾಲ್ ಜಾಧವ, ಈಶ್ವರಪ್ಪ ಜಾಧವ, ಲಕ್ಷ್ಮಣ್ಣ ಜಾಧವ ಹೀಗೆ ಒಟ್ಟು 5 ಜನ ಗಂಡುಮಕ್ಕಳಿದ್ದು, ಮಾರನಾಳ ಸೀಮಾಂತರದ ಹೊಲ ಸವರ್ೆ ನಂ:29 ರಲ್ಲಿಯ 10 ಎಕರೆ 36 ಗುಂಟೆ ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ, ಸವರ್ೆ ನಂ:30 ರಲ್ಲಿಯ 2 ಎಕರೆ 32 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಸುಮಾರು ವರ್ಷಗಳ ಹಿಂದಿನಿಂದ ನಮ್ಮಗಳ ನಡುವೆ ತಂಟೆ ತಕರಾರು ನಡೆಯುತ್ತ ಬಂದಿದ್ದು, ನಮ್ಮ ಜಮೀನಿನ ಸಮಸ್ಯೆಯು ಪೂರ್ಣವಾಗಿ ಇತ್ಯರ್ಥವಾಗಿರುವದಿಲ್ಲ. ಇದರಿಂದಾಗಿ ನಮ್ಮ ಅಣ್ಣತಮ್ಮಂದಿರು ನಮ್ಮ ಮೇಲೆ ಆಗಾಗ ಜಗಳತೆಗೆದು ಹೊಡೆ ಬಡೆ ಮಾಡುತ್ತಾ ಬಂದಿರುತ್ತಾರೆ. ಹಾಗು ನಮ್ಮ ತಾಂಡಾದಲ್ಲಿ ನಮ್ಮದು ಮತ್ತು ಈಶ್ವರಪ್ಪ ಜಾಧವ ಹಾಗು ಲಕ್ಷ್ಮಣ ಜಾಧವ ರವರುಗಳ ಮೂರು ಪ್ಲಾಟ್ಗಳಿದ್ದು, ನಡುವಿನ ಪ್ಲಾಟ್ ನಮ್ಮದು ಆಗಿರುತ್ತದೆ. ಈ ಪ್ಲಾಟಿನಲ್ಲಿ ದಿನಾಂಕ:08.04.2020 ರಂದು ಮುಂಜಾನೆ 08:30 ಎ.ಎಮ್ ಗಂಟೆಗೆ ಸಜ್ಜೆ ಬಣಿವೆಯನ್ನು ಹಾಕಿದಾಗ ನಮ್ಮ ಪ್ಲಾಟಿಗೆ ಹೊಂದಿಕೊಂಡು ಬೆಳೆದಿದ್ದ ಜಾಲಿಗಿಡವನ್ನು ನಾಔಉ ಕಡಿದು ಬಣಿವೆಯನ್ನು ಹಾಕಿ ಮನೆಗೆ ಹೋಗಿರುತ್ತೇವೆ. ನಾವು ಮಾರನಾಳಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡು ತಿಪ್ಪೆಯನ್ನು ಹಾಕಿದ್ದು, ಅದರ ಮೇಲೆ ಈಶ್ವರಪ್ಪ ಜಾಧವ ಶಂಕ್ರಪ್ಪ ಜಾಧವ ಕಲ್ಲು ಹಾಕಿ ಮುಚ್ಚುತ್ತಿದ್ದಾರೆ. ಹೀಗಿದ್ದು, ಇಂದು ದಿನಾಂಕ:08.04.2020 ರಂದು ಮುಂಜಾನೆ 09:30 ಎ.ಎಮ್ ಸುಮಾರಿಗೆ ನಾನು, ನನ್ನ ಮಗ ಬಸವರಾಜ, ನನ್ನ ಹೆಂಡತಿ ಗುರುಬಾಯಿ, ನನ್ನ ಸೊಸೆ ಸುಮಿತ್ರಾ, ನನ್ನ ಇನ್ನೊಬ್ಬ ಮಗನಾದ ನಿಂಗರಾಜ ನಮ್ಮ ಮನೆಯ ಮುಂದೆ ಇದ್ದಾಗ ಅಕ್ರಮ ಕೂಟ ಕಟ್ಟಿಕೊಂಡು ಬಂದ ಈಶ್ವರಪ್ಪ ತಂದೆ ಮೇಘಪ್ಪ ಜಾಧವ, ತುಕಾರಾಮ ತಂದೆ ಶಂಕ್ರಪ್ಪ ಜಾಧವ ಶಿವಪ್ಪ ತಂದೆ ಶಂಕ್ರಪ್ಪ ಜಾದವ, ಗುರುನಾಥ ತಂದೆ ಶಂಕ್ರಪ್ಪ ಜಾಧವ, ಖೀರಪ್ಪ ತಂದೆ ಶಂಕ್ರಪ್ಪ ಜಾದವ, ಸೀತಾರಾಮ ತಂದೆ ಈಶ್ವರಪ್ಪ ಜಾದವ ಎಲ್ಲರೂ ಸಾ:ಬ್ಯಾಲದಗಿಡದ ತಾಂಡಾ ಇವರು ನಮ್ಮ ಮನೆಯ ಹತ್ತಿರ ಬಂದು ನಮಗೆ ಜೀನಿ ಮುಳ್ಳು ಏಕೆ ಕಡಿದಿಯಾ ಬೋಸಡೀಕೆ ರಂಡಿ ಮಗನೇ ನಿಮ್ಮನ್ನ ಜೀವಂತ ಬಿಡುವದಿಲ್ಲ ಆಸ್ತಿಯನ್ನು ವಾಟ್ನಿ ಆಗಲು ಬಿಡುವುದಿಲ್ಲ ಎನಾದರು ಆಗಲಿ ಇವತ್ತು ನಿಮಗೆ ಕೊಲೆ ಮಾಡುತ್ತೇವೆಂದು ಜಗಳ ತೆಗೆದು ನನಗೆ ಮತ್ತು ನಮ್ಮ ಮಗ ಬಸವರಾಜನಿಗೆ ಕೊಲೆ ಮಾಡುವ ಉದ್ದೇಶದಿಂದ ಅವರಲ್ಲಿಯ ಈಶ್ವರಪ್ಪ ಜಾಧವ, ರಾಜು ಜಾಧವ ಇವರುಗಳು ನನ್ನ ಮಗನೊಂದಿಗೆ ತೆಕ್ಕೆ ಕುಸ್ತಿಗೆ ಬಿದ್ದು, ಕೈಯಿಂದ ಹೊಡೆಬಡೆ ಮಾಡಿ ಕೊಲೆ ಮಾಡುವ ಉದ್ದೇಶದಿಂದ ನನ್ನ ಮಗನ ಕುತ್ತಿಗೆಯನ್ನು ಹಿಡಿದಿದ್ದು, ಆಗ ನಮ್ಮ ಸೊಸೆ ಸುಮಿತ್ರಾ ಇವಳು ಬಿಡಿಸಲು ಹೋದಾಗ ಈಶ್ವರಪ್ಪ ಈತನು ಕಪಾಳಕ್ಕೆ ಹೊಡೆದನು. ಅವರಿಂದ ನಮ್ಮ ಮಗನಿಗೆ ನಾನು ಬಿಡಿಸಿಕೊಂಡೆನು. ಆಗ ನನಗೆ ತುಕಾರಾಮ ಜಾಧವ ಶಿವಪ್ಪ ಜಾದವ, ಗುರುನಾಥ ಜಾಧವ ಇವರು ಕೈಯಿಂದ ಹೊಡೆಬಡೆ ಮಾಡಿರುತ್ತಾರೆ. ಹಾಗು ಅವರೊಂದಿಗೆ ಬಂದಿದ್ದ ಇತರರಾದ ಗುಲಾಬಿ ಗಂಡ ಖೀರಪ್ಪ ಜಾಧವ, ಛಾಯಾ ಗಂಡ ಶಿವಪ್ಪ ಜಾಧವ, ತಾರಾಬಾಯಿ ಗಂಡ ಶಂಕ್ರಪ್ಪ ಎಲ್ಲರೂ ಸೇರಿ ನನ್ನ ಹೆಂಡತಿ ಗುರುಬಾಯಿಗೆ, ನಮ್ಮ ಸೊಸೆ ಸುಮಿತ್ರಾಗೆ ಲೇ ಸೂಳೆರ ನಿಮ್ಮದು ಸೊಕ್ಕು ಜಾಸ್ತಿ ಆಗೆದ ಇವತ್ತು ನಿಮ್ಮನ್ನ ಬಿಡುವುದಿಲ್ಲ ಖಲಾಸ್ ಮಾಡುತ್ತೇವೆ ಎಂದು ಜೀವಬೇದರಿಕೆಯನ್ನು ಹಾಕಿ ಕೈಯಿಂದ ಹೊಡೆ-ಬಡೆ ಮಾಡಿರುತ್ತಾರೆ. ತುಕಾರಾಮ ಜಾಧವ ಈತನು ನಮ್ಮ ಸೊಸೆಗೆ ಜಗ್ಗಾಡಿ ತಾಳಿ ಸರ ಕಿತ್ತಿರುತ್ತಾನೆ. ನನ್ನ ಇನ್ನೊಬ್ಬ ಮಗನಾದ ನಿಂಗರಾಜನಿಗೆ ಈಶ್ವರಪ್ಪ ಜಾಧವ, ಹಾಮಾನಾಯಕ ಜಾಧವ, ತುಕಾರಾಮ ಜಾಧವ ಇವರುಗಳು ಕೆಳಕ್ಕೆ ಬಿಳಿಸಿ ಕೈಯಿಂದ ಹೊಡೆದಿದ್ದು ಇರುತ್ತದೆ. ಈ ಜಗಳವನ್ನು ನಮ್ಮ ತಾಂಡಾದವರಾದ ದೇಸಪ್ಪ ತಂದೆ ಯಂಕಪ್ಪ ಜಾದವ, ನಾರಾಯಣ ತಂದೆ ಪೇಮಪ್ಪ ಜಾದವ, ರೆಡ್ಡಿ ತಂದೆ ವಾಚಪ್ಪ ಚಾದವ ಎಲ್ಲಾರೂ ಸಾ|| ಬ್ಯಾಲದಗಿಡದ ತಾಂಡಾ ಇವರುಗಳು ಜಳವನ್ನು ಬಿಡಿಸಿರುತ್ತಾರೆ. ಕಾರಣ ನಮಗೆ ಹಾಗು ನಮ್ಮ ಅಣ್ಣತಮ್ಮಕೀಯರ ನಡುವೆ ಈ ಮೊಲದಲಿನಿಂದಲು ಆಸ್ತಿ ವಿಷಯದಲ್ಲಿ ವೈಮನಸಿದ್ದುದು ಈ ಕಾರಣದಿಂದ ಮೇಲ್ಕಾಣಿಸಿದವರು ನಮ್ಮ ಕುಟುಂಬದವರಿಗೆ ಕೊಲೆ ಮಾಡುವ ಉದ್ದೇಶದಿಂದ ನಮ್ಮ ಜೊತೆ ಜಗಳ ತೆಗೆದು ಹೊಡೆ ಬಡೆ ಮಾಡಿದ್ದು, ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸಿಕೊಡಲು ವಿನಂತಿ. ಅಂತಾ ನೀಡಿದ ಲಿಖಿತ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 23/2020 ಕಲಂ: 143, 147,  323, 354, 307, 504, 506, ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.


ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 24/2020 ಕಲಂ: 143, 147, 148, 323, 324, 326, 307, 504, 506 ಸಂ 149 ಐಪಿಸಿ:-ದಿನಾಂಕ 08/04/2020 ರಂದು ರಾತ್ರಿ 12:00 ಪಿ.ಎಂ ಕ್ಕೆ ಫಿಯರ್ಾದಿ ಈಶ್ವರಪ್ಪ ತಂದೆ ಜಾಧವ ಸಾ:ಬ್ಯಾಲದಗಿಡದ ತಾಂಡಾ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ, ನಮ್ಮ ತಂದೆ ತಾಯಿಗೆ ನಾನು ಮತ್ತು ಶಂಕ್ರಪ್ಪ ಜಾಧವ, ಮೋತಿಲಾಲ್ ಜಾಧವ, ರೇಖಪ್ಪ ಜಾಧವ, ಲಕ್ಷ್ಮಣ್ಣ ಜಾಧವ ಹೀಗೆ ಒಟ್ಟು 5 ಜನ ಗಂಡುಮಕ್ಕಳಿದ್ದು, ಮಾರನಾಳ ಸೀಮಾಂತರದ ಹೊಲ ಸವರ್ೆ ನಂ:29 ರಲ್ಲಿಯ 10 ಎಕರೆ 36 ಗುಂಟೆ ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ, ಸವರ್ೆ ನಂ:30 ರಲ್ಲಿಯ 2 ಎಕರೆ 32 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಸುಮಾರು ವರ್ಷಗಳ ಹಿಂದಿನಿಂದ ನಮ್ಮಗಳ ನಡುವೆ ತಂಟೆ ತಕರಾರು ನಡೆಯುತ್ತ ಬಂದಿದ್ದು, ನಮ್ಮ ಜಮೀನಿನ ಸಮಸ್ಯೆಯು ಪೂರ್ಣವಾಗಿ ಇತ್ಯರ್ಥವಾಗಿರುವದಿಲ್ಲ. ಹಾಗು ನಮ್ಮ ತಾಂಡಾದಲ್ಲಿ ನಮ್ಮದು ಮತ್ತು ರೇಖಪ್ಪ ಜಾಧವ ಹಾಗು ಲಕ್ಷ್ಮಣ ಜಾಧವ ರವರುಗಳ ಮೂರು ಪ್ಲಾಟ್ಗಳಿದ್ದು, ನಡುವಿನ ಪ್ಲಾಟ್ ನಮ್ಮ ತಮ್ಮ ರೇಖಪ್ಪನದು ಆಗಿರುತ್ತದೆ. ನಮಗೆ ಮತ್ತು ನಮ್ಮ ತಮ್ಮನ ಮಗನಾದ ಬಸವರಾಜ ಜಾಧವ ಈತನು ನಮ್ಮ ಮನೆಯ ಪಕ್ಕದಲ್ಲಿನ ಟೊಯ್ಲಟ್ ರೂಮನ್ನು ಕೆಡವಿ ಹಾಕಿ ಆ ಜಾಗೆಯಲ್ಲಿ ತನ್ನ ಎತ್ತಿನ ಗಾಡಿಯನ್ನು ನಿಲ್ಲಿಸುತ್ತಿದ್ದಾನೆ. ಇದನ್ನು ನನ್ನ ಹೆಂಡತಿಯಾದ ವಿಮಲಾಬಾಯಿ ಅವರಿಗೆ ಕೇಳಿದಾಗ ಅವರು ಇದನ್ನು ಹೊಡಿತಿನಿ, ನಿಮ್ಮದು ಇನ್ನೊಂದಿದೆಯಲ್ಲಿ ಅದನ್ನು ಹೊಡೆಯುತ್ತೇನೆಂದು ಹೊಡೆದಿರುತ್ತಾನೆ. ಈ ವಿಷಯ ನನ್ನ ಹೆಂಡತಿ ನನಗೆ ತಿಳಿಸಿರುವದಿಲ್ಲ. ನಂತರ ನನಗೆ ಸದರಿ ವಿಷಯ ತಿಳಿದುಬಂದಿರುತ್ತದೆ. ನಮ್ಮ ಮನೆಯ ಹತ್ತಿರ ರೇಖಪ್ಪನು ತಿಪ್ಪಿಯನ್ನು ಹಾಕಿದ್ದು ಇದರಿಂದ ಹುಳು-ಉಪ್ಪಡಿ ಆಗಿದ್ದು, ನಮ್ಮ ಕುಟುಂಬದವರಿಗೆ ತೊಂದರೆಯಾಗುತ್ತಿದೆ. ದಿನಾಂಕ:08.04.2020 ರಂದು ಮುಂಜಾನೆ 08:30 ಎ.ಎಮ್ ಗಂಟೆಯ ಸುಮಾರಿಗೆ ನಮ್ಮ ತಮ್ಮನಾದ ರೇಖಪ್ಪ ಜಾಧವ, ನಮ್ಮ ತಮ್ಮನ ಮಕ್ಕಳಾದ ಬಸವರಾಜ ಜಾಧವ, ನಿಂಗರಾಜ ಜಾಧವ ನಮ್ಮ ತಮ್ಮನ ಹೆಂಡತಿಯಾದ ಗುರುಬಾಯಿ, ನನ್ನ ತಮ್ಮನ ಸೊಸೆಯಂದಿರಾದ ಸುಮಿತ್ರಾ @ ಸಾವಿತ್ರಿ ಜಾಧವ, ಪ್ರೇಮಾ ಜಾಧವ ಇವರುಗಳು ನಮ್ಮ ಪ್ಲಾಟಿನಲ್ಲಿನ ಜಾಲಿಗಿಡವನ್ನು ಕಡಿದು ನನ್ನ ತಮ್ಮ ಲಕ್ಷ್ಮಣನ ಪ್ಲಾಟಿನಲ್ಲಿ ಸಜ್ಜೆ ಬಣಿವೆಯನ್ನು ಹಾಕಿರುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ನಮ್ಮ ತಮ್ಮನಾದ ರೇಖಪ್ಪ ಜಾಧವ ಇವರ ಮನೆಯ ಹತ್ತಿರ ಇಂದು ದಿನಾಂಕ:08.04.2020 ರಂದು 9:45 ಎ.ಎಮ್ ಗಂಟೆಯ ಸುಮಾರಿಗೆ ಹೋಗಿ ನಮ್ಮ ತಮ್ಮನ ಕುಟುಂಬದವರಿಗೆ ನಾನು ನೀವು ಯಾಕೆ ನನ್ನ ಪ್ಲಾಟಿನಲ್ಲಿಯ ಜಾಲಿಗಿಡವನ್ನು ಕಡಿದು ಲಕ್ಷ್ಮಣನ ಪ್ಲಾಟಿನಲ್ಲಿ ಸಜ್ಜೆ ಬಣಿವೆಯನ್ನು ಯಾಕೆ ಹಾಕಿದಿ ಅಂತಾ ವಿಚಾರಿಸಿದಾಗ ನಮ್ಮ ತಮ್ಮನಾದ ರೇಖಪ್ಪ ಜಾಧವ, ನಮ್ಮ ತಮ್ಮನ ಮಕ್ಕಳಾದ ಬಸವರಾಜ ಜಾಧವ, ನಿಂಗರಾಜ ಜಾಧವ ಇವರುಗಳು ನನಗೆ ಲೇ ಹಲಕಾ ಸೂಳೀ ಮಗನೇ ಅದನ್ನೆಲ್ಲ ನೀನು ಏನು ಕೇಳುತ್ತಿ? ಪ್ಲಾಟು ನಮಗೆ ಸೇರಿದ್ದು, ಅದರಲ್ಲಿ ನಿಮ್ಮದು ಯಾವುದೇ ಪಾಲು ಇರುವದಿಲ್ಲ. ಈ ವಿಷಯಕ್ಕೆ ಮನೆಯವರೆಗೆ ಬಂದಿರೀ ಅಂತಾ ಜಗಳ ತೆಗೆದಾಗ ನಾನು ಭಯಗೊಂಡು ನಮ್ಮ ಮನೆಯ ಕಡೆಗೆ ಬಂದೆನು. ಆಗ ನನ್ನ ಹಿಂದೆ ಬಂದ ಅವರುಗಳಲ್ಲಿ ರೇಖಪ್ಪ, ನಿಂಗರಾ ಇವರುಗಳು ನನ್ನೊಂದಿಗೆ ತೆಕ್ಕಿಕುಸ್ತಿಗೆ ಬಿದ್ದು, ಕೈಯಿಂದ ಮತ್ತು ಬಡಿಗೆಯಿಂದ ಮೈ ಕೈಗೆ ಹೊಡೆ-ಬಡೆ ಮಾಡಿ ಡುಬ್ಬಕ್ಕೆ ತರಚಿದಗಾಪಡಿಸಿ ಮೈಕೈಗೆ ಒಳಪೆಟ್ಟುಗೊಳಿಸಿರುತ್ತಾರೆ. ಅಲ್ಲಿಯೇ ನಮ್ಮ ಮನೆಯ ಮುಂದೆ ಇದ್ದ ನನ್ನ ಮಗ ಹಾಮಾನಾಯಕನು ನನಗೆ ಹೊಡೆಯುವದನ್ನು ಬಿಡಿಸಲು ಬಂದಾಗ ಬಸರಾಜ ಜಾಧವ ಈತನು ನನ್ನ ಮಗನಿಗೆ ಕೊಲೆ ಮಾಡುವ ಉದ್ದೇಶದಿಂದ ಜಾಡಿಸಿ ದಬ್ಬಿಕೊಟ್ಟು ಕೆಳಗಡೆ ಹಾಕಿ ಗುದ್ದಿ ನಂತರ ಕಾಲಿನಿಂದ ತುಳಿದಾಡಿದನು ಆಗ ಎದೆಗೆ ಒಳಪೆಟ್ಟಾಗಿರುತ್ತದೆ. ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ಬಸವರಾಜನು ನನ್ನ ಮಗನ ಮುಖಕ್ಕೆ ಹೊಡೆದು ಮೂಗಿಗೆ ಭಾರಿ ರಕ್ತಗಾಯ ಪಡಿಸಿರುತ್ತಾನೆ. ಬಾಯಿಗೂ ಸಹ ರಕ್ತಗಾಯವಾಗಿದ್ದು ಇರುತ್ತದೆ. ನಮ್ಮ ತಮ್ಮನ ಹೆಂಡತಿಯಾದ ಗುರುಬಾಯಿ, ನನ್ನ ತಮ್ಮನ ಸೊಸೆಯಂದಿರಾದ ಸುಮಿತ್ರಾ @ ಸಾವಿತ್ರಿ ಜಾಧವ, ಪ್ರೇಮಾ ಜಾಧವ ಇವರು ನನಗೆ ಮೈಮೇಲಿನ ಅಂಗಿಯನ್ನು ಜಗ್ಗಾಡಿ ನಿನಗೆ ಜೀವಂತ ಬಡುವದಿಲ್ಲ ಖಲಾಸ್ ಮಾಡುತ್ತೇವೆ ಎಂದು ಕೈಯಿಂದ ಹೊಡೆ-ಬಡೆ ಮಾಡಿರುತ್ತಾರೆ. ಈ ಜಗಳವನ್ನು ನಮ್ಮ ತಾಂಡಾದ ರಾಮಪ್ಪ ತಂದೆ ಠಾಕರೆಪ್ಪ ಜಾಧವ, ಮೋತಿಲಾಲ ತಂದೆ ಮೇಘಪ್ಪ ಜಾಧವ, ಕಸ್ತೂರಿಬಾಯಿ ಗಂಡ ಪೂರಪ್ಪ ಜಾಧವ ರವರು  ಜಳವನ್ನು ಬಿಡಿಸಿರುತ್ತಾರೆ. ಕಾರಣ ನಮಗೆ ಹಾಗು ನಮ್ಮ ಅಣ್ಣತಮ್ಮಕೀಯರ ನಡುವೆ ಈ ಮೊಲದಲಿನಿಂದಲು ಆಸ್ತಿ ವಿಷಯದಲ್ಲಿ ವೈಮನಸಿದ್ದುದು ಈ ಕಾರಣದಿಂದ ಮೇಲ್ಕಾಣಿಸಿದವರು ನಮ್ಮ ಕುಟುಂಬದವರಿಗೆ ಕೊಲೆ ಮಾಡುವ ಉದ್ದೇಶದಿಂದ ನಮ್ಮ ಜೊತೆ ಜಗಳ ತೆಗೆದು ಹೊಡೆ ಬಡೆ ಮಾಡಿದ್ದು, ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸಿಕೊಡಲು ವಿನಂತಿ ಅಂತಾ ನೀಡಿದ ಲಿಖಿತ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 24/2020 ಕಲಂ: 143, 147, 148, 323, 324, 326, 307, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.


ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 62/2020 ಕಲಂ: 87 ಕೆಪಿ ಯಾಕ್ಟ:- ಇಂದು ದಿನಾಂಕ 08/04/2020 ರಂದು 3.45 ಪಿ.ಎಮ್ ಕ್ಕೆ  ಶ್ರೀ ವೆಂಕಟೇಶ ಡಿವೈಎಸ್ಪಿ ಸುರಪುರ ಉಪ-ವಿಭಾಗ ರವರು  ಠಾಣೆಗೆ ಹಾಜರಾಗಿ  ಜ್ಞಾಪನ ನೀಡಿದ್ದೇನಂದರೆ, ಇಂದು ದಿನಾಂಕ:08.04.2020 ರಂದು 1.45 ಪಿ.ಎಂ ಕ್ಕೆ ಪೆಟ್ರೋಲಿಂಗ ಕುರಿತು ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಲಗತ್ತಿ ಗ್ರಾಮದ ಕಡೆಗೆ ಪೆಟ್ರೋಲಿಂಗ ಕುರಿತು ಹೋದಾಗ ಭಾತ್ಮೀದಾರರಿಂದ ತಿಳಿದುಬಂದಿದ್ದೇನೆಂದರೆ, ಮಾಲಗತ್ತಿ ಸೀಮಾಂತರದ ವನದುರ್ಗ ಕಡೆಗೆ ಹೋಗುವ ರಸ್ತೆಯ ಪಕ್ಕದ ವನಿಕಲ್ಲ ಹುಣಚಿಮರದ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ್-ಬಾಹರ್ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಭಾತ್ಮೀ ಬಂದಿದ್ದರಿಂದ ಸದರಿ ವಿಷಯವನ್ನು  ಖಚಿತಪಡಿಸಿಕೊಂಡು ನಂತರ ಕೆಂಭಾವಿ ಪೊಲೀಸ್ ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಕೂಡಾ ಲಗತ್ತಿಸಿ ಜ್ಞಾಪನ ನೀಡಿದ ಪ್ರಕಾರ ಠಾಣಾ ಗುನ್ನೆ ನಂಬರ 62/2020 ಕಲಂ 87 ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಳ್ಳಲಾಗಿದೆ.
ನಂತರ ದಾಳಿ ಮಾಡಿ ಒಟ್ಟು 10 ಜನ ಆರೋಪಿತರನ್ನು ದಸ್ತಗಿರಿ ಮಾಡಿಕೊಂಡು 24,250/- ರೂ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಮತ್ತು 1 ಬಿಳಿ ಬಣ್ಣದ ಬರಕಾವನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ. ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!