ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/04/2020

By blogger on ಮಂಗಳವಾರ, ಏಪ್ರಿಲ್ 7, 2020




                            ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/04/2020 
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 106/2020  ಕಲಂ 279  338 ಐ.ಪಿ.ಸಿ :- ಇಂದು ದಿನಾಂಕ 05/04/2020 ರಂದು ಮದ್ಯಾಹ್ನ 12-00 ಗಂಟೆಗೆ ಫಿರ್ಯಾದಿ ಶ್ರೀಮತಿ ಸರೋಜಮ್ಮ ಗಂಡ ಹಣಮಂತ ಹತ್ತಿಗಿಡಿ ವಯ 24 ವರ್ಷ ಪ.ಜಾತಿ(ಮಾದಿಗ) ಉಃ ಕೂಲಿ  ಕೆಲಸ ಸಾಃ ಕಡೆಚೂರ ತಾಃ ಜಿಃ ಯಾದಗಿರಿ ಇವರು ಠಾಣೆಗೆ  ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ತನ್ನ ಗಂಡ ಹಣಮಂತ ಇವರಿಗೆ ಒಂದುವಾರದಿಂದ ಕೈ ಕಾಲು ಜೋಮು ತುಂಬುವದು ಮಾಡುತಿದ್ದರಿಂದ ಪಾಶ್ರ್ವವಾಯು (ಲಕ್ವಾ) ಲಕ್ಷಣಗಳು ಕಂಡು ಬಂದಿದ್ದರಿಂದ ಶಹಾಪುರ ತಾಲುಕಿನ ರಸ್ತಾಪುರ ಗ್ರಾಮದಲ್ಲಿ ಔಷದಿ ಹಾಕಿಕೊಂಡು ಬರುವ ಸಂಬಂಧ ದಿನಾಂಕ 02/04/2020 ರಂದು ಮುಂಜಾನೆಯ ಸುಮಾರಿಗೆ ಕಡೆಚೂರದಿಂದ ಫಿಯರ್ಾದಿ ಮತ್ತು ತನ್ನ ಚಿಕ್ಕಮ್ಮನ  ಮಗ ಅನಿಲ ಈತನ ಮೋಟರ ಸೈಕಲ್ ನಂ ಕೆಎ-50-ಆರ್-7778 ನೇದ್ದರ ಮೇಲೆ ಮತ್ತು ಫಿಯರ್ಾದಿಯ ಮೈದುನ ವಿಠ್ಠಲ ಈತನು ತನ್ನ ಗಂಡ ಹಣಮಂತ ಈತನಿಗೆ  ಮೋಟರ ಸೈಕಲ್ ನಂ ಕೆಎ-33-ಜೆ-4269 ನೇದ್ದರ  ಮೇಲೆ ಕೂಡಿಸಿಕೊಂಡು ತುಮಕೂರ ಮಾರ್ಗವಾಗಿ ರಸ್ತಾಪುರಕ್ಕೆ ಬರುತಿದ್ದಾಗ ಮುಂಜಾನೆ 07-30 ಗಂಟೆಗೆ ಹೈಯ್ಯಾಳ(ಬಿ) ಗ್ರಾಮ ಇನ್ನೂ ಅರ್ಧ ಕಿ.ಮೀ ಅಂತರದಲ್ಲಿರುವಾಗ ವಿಠ್ಠಲ ಈತನು ತನ್ನ ಮೋಟರ ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡಿನ ತಗ್ಗಿಗೆ ಹಾಕಿದ್ದರಿಂದ ಮೋಟರ ಸೈಕಲ್ ಸ್ಕಿಡ್ಡಾಗಿ ಬಿದ್ದಿದ್ದರಿಂದ ಮೋಟರ ಸೈಕಲ್ ಹಿಂದುಗಡೆ ಕುಳಿತಿದ್ದ ಫಿಯರ್ಾದಿಯ ಗಂಡನಿಗೆ ತಲೆಯ ಹಿಂದೆ ಭಾರಿ ಗುಪ್ತಗಾಯವಾಗಿ, ತರಚಿದ ರಕ್ತಗಾಯವಾಗಿರುತ್ತದೆ ಮತ್ತು ಬಲಭೂಜದ ಎಲಬು ಮುರಿದಂತೆ ಆಗಿ ಭಾರಿ ಗುಪ್ತಗಾಯವಾಗಿರುತ್ತದೆ. ಮೋಟರ ಸೈಕಲ್ ಸವಾರ ವಿಠ್ಠಲನಿಗೆ ಯಾವುದೇ ಗಾಯವಗೈರೆ ಆಗಿರುವುದಿಲ್ಲ. ಗಾಯಾಳು ಹಣಮಂತ ತಂದೆ ರಾಮಪ್ಪ ಹತ್ತಿಗಿಡಿ  ಈತನಿಗೆ ಒಂದು ಆಟೋದಲ್ಲಿ ಹಾಕಿಕೊಂಡು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ವೈದ್ಯರ  ಸಲಹೆ  ಮೆರೆಗೆ ಹೆಚ್ಚಿನ ಉಪಚಾರ ಕುರಿತು ಕಲಬುರಿಗೆ ಹೋಗಿ ಗಾಯಾಳುವಿಗೆ ಯುನೈಟೆಡ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ.    
      ಕಾರಣ ವಿಠ್ಠಲ ತಂದೆ ರಾಮಪ್ಪ ಹತ್ತಿಗಿಡಿ ಸಾಃ ಕಡೆಚೂರ ಈತನು ಮೋಟರ ಸೈಕಲ್ ನಂ ಕೆಎ-33-ಜೆ-4269 ನೇದ್ದು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಮೋಟರ ಸೈಕಲ್ ಸ್ಕಿಡ್ಡಾಗಿ ಬಿಳಿಸಿದ್ದರಿಂದ ತನ್ನ  ಗಂಡನಿಗೆ ಅಪಘಾತದಲ್ಲಿ ಗಾಯಗಳಾಗಿದ್ದು, ಸದರಿ ಮೋಟರ ಸೈಕಲ್ ಸವಾರನ ವಿರುದ್ದ ಕ್ರಮ ಕೈಕೊಳ್ಳಲು ವಿನಂತಿ.   


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 60/2020 ಕಲಂ: 87 ಕೆಪಿ ಯಾಕ್ಟ:- ಇಂದು ದಿನಾಂಕ 05/04/2020 ರಂದು 16-00 ಪಿ.ಎಮ್ ಕ್ಕೆ  ಶ್ರೀ ವೆಂಕಟೇಶ ಡಿವೈಎಸ್ಪಿ ಸುರಪುರ ಉಪ-ವಿಭಾಗ ರವರು  ಠಾಣೆಗೆ ಹಾಜರಾಗಿ  ಜ್ಞಾಪನ ನೀಡಿದ್ದೇನಂದರೆ, ಇಂದು ದಿನಾಂಕ:05.04.2020 ರಂದು 2:00 ಪಿ.ಎಂ ಕ್ಕೆ ಪೆಟ್ರೋಲಿಂಗ ಕುರಿತು ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯ ಕರಡಕಲ ಗ್ರಾಮದ ಕಡೆಗೆ ಪೆಟ್ರೋಲಿಂಗ ಕುರಿತು ಹೋದಾಗ  ಭಾತ್ಮೀದಾರರಿಂದ ತಿಳಿದುಬಂದಿದ್ದೇನೆಂದರೆ, ಕರಡಕಲ ಸೀಮಾಂತರದ ಆಲಗೂರ ಡಾಕ್ಟರ್ ರವರ ಹೊಲದ ಪಕ್ಕದ ಕೆನಾಲ ಪಕ್ಕದಲ್ಲಿ ಮಾವಿನ ಗಿಡದ ಕೆಳಗಡೆ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ್-ಬಾಹರ್ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಭಾತ್ಮೀ ಬಂದಿದ್ದರಿಂದ ಸದರಿ ವಿಷಯವನ್ನು  ಖಚಿತಪಡಿಸಿಕೊಂಡು ನಂತರ ಕೆಂಭಾವಿ ಪೊಲೀಸ್ ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಕೂಡಾ ಲಗತ್ತಿಸಿ ಜ್ಞಾಪನ ನೀಡಿದ ಪ್ರಕಾರ ಠಾಣಾ ಗುನ್ನೆ ನಂಬರ 60/2020 ಕಲಂ 87 ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಳ್ಳಲಾಗಿದೆ.
ನಂತರ ದಾಳಿ ಮಾಡಿ ಒಟ್ಟು 7 ಜನ ಆರೋಪಿತರನ್ನು ದಸ್ತಗಿರಿ ಮಾಡಿಕೊಂಡು 34,000/- ರೂ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.

ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 20/2020 ಕಲಂ:143, 147, 148, 323, 324, 504, 506, ಸಂಗಡ 149 ಐಪಿಸಿ.:- ಇಂದು ದಿನಾಂಕ 05/04/2020 ರಂದು 2:00 ಪಿ.ಎಂ ಕ್ಕೆ ಶಂಕ್ರಪ್ಪ ತಂದೆ ಮೇಘಪ್ಪ ಜಾದವ ವ:61 ವರ್ಷ ಉ:ಒಕ್ಕಲುತನ ಜಾ:ಹಿಂದು ಲಂಬಾಣಿ ಸಾ: ಬ್ಯಾಲದ ಗಿಡದ ತಾಂಡಾ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ನಮ್ಮ ತಂದೆಯವರಿಗೆ ನಾವು 5 ಜನ ಮಕ್ಕಳಿದ್ದು ಎಲ್ಲರೂ ಬೇರೆಬೇರೆಯಾಗಿದ್ದು ಇರುತ್ತದೆ.  ನಮ್ಮ ತಂದೆಯವರ ಹೆಸರಿನಲ್ಲಿ ಇರುವ ಹೊಲವನ್ನು ಇನ್ನು ತಾವೆ ಇಟ್ಟುಕೊಂಡಿದ್ದು  ಇರುತ್ತದೆ. ನಮ್ಮ ತಂದೆಯವರಿಗೆ ನಾನೆ ಹಿರಿಯ ಮಗನಿದ್ದು ನಮ್ಮ ತಮ್ಮನಾದ ರೇಖಪ್ಪ ಈತನು ನನಗೆ ನಮ್ಮ ಹೊಲವನ್ನು ನಮಗೆ ಬಿಟ್ಟುಕೋಡು ಅಂತಾ ಅಪ್ಪನಿಗೆ ಹೇಳು ಅಂತಾ ಅಂದಾಗ ನಾನು ಈ ವಿಷಯವನ್ನು ನಮ್ಮ ಅಪ್ಪನಿಗೆ ಹೇಳಿದಾಗ ನಮ್ಮ ಅಪ್ಪನು ನಾನು ಸಾಯುವ ವರೆಗೆ ಹೊಲವನ್ನು ಯಾರಿಗೆ ಬಿಟ್ಟುಕೊಡುವದಿಲ್ಲ ಅಂತಾ ಅಂದನು.ನಾನು ನಿನ್ನೆ ದಿನಾಂಕ 04/04/2020 ರಂದು ಸಾಯಂಕಾಲ 7:00 ಗಂಟೆಯ ಸುಮಾರಿಗೆ ತಮ್ಮ ಮನೆಯ ಮುಂದೆ ನಿಂತಿದ್ದ ನಮ್ಮ ತಮ್ಮ ರೇಖಪ್ಪನನ್ನು ನಮ್ಮ ಮನೆಗೆ ಕರೆದು ಅಪ್ಪನು ತಾನು ಸಾಯುವ ವರೆಗೆ ಹೋಲವನ್ನು ನಮಗೆ ಬಿಟ್ಟುಕೊಡುವದಿಲ್ಲ ಅಂತಾ ಅನ್ನುತ್ತಿದ್ದಾನೆ ಅಂತಾ ಅಂದೇನು ಆಗ ರೇಖಪ್ಪನು ನನ್ನ ಮೇಲೆ ಸಿಟ್ಟಾಗಿ ತಮ್ಮ ಮನೆಗೆ ಹೋಗಿ ತಮ್ಮ ಮನೆಯವರಾದ ಬಸವರಾಜ ತಂದೆ ರೇಖಪ್ಪ ಜಾದವ, ನಿಂಗರಾಜ ತಂದೆ ರೇಖಪ್ಪ ಜಾದವ, ಲಕ್ಷ್ಮಿ ತಂದೆ ರೇಖಪ್ಪ ಜಾದವ, ನಂದಪ್ಪ ತಂದೆ ಗೋವಿಂದ ರಾಠೋಡ, ಗೂರಿಬಾಯಿ ಗಂಡ ರೇಖಪ್ಪ ಜಾದವ, ಲಕ್ಷ್ಮಣ್ಣ ತಂದೆ ಗೋವಿಂದ ರಾಠೋಡ, ಪ್ರೇಮಾ ಗಂಡ ನಿಂಗರಾಜ ಜಾದವ ರವರನ್ನು ಕರೆದುಕೊಂಡು ಕೈಯಲ್ಲಿ ಬಡಿಗೆಯನ್ನು ಹಿಡಿದುಕೊಂಡು ಗುಂಪಾಗಿ ನಮ್ಮ ಮನಗೆ ಬಂದು ನಮ್ಮ ಮನೆಯ ಮುಂದೆ ಇದ್ದ  ನನಗೆ ಅವರಲ್ಲಿಯ ರೇಖಪ್ಪನು ಬೋಸುಡಿಮಗನೇ ನಮ್ಮ ಹೊಲವನ್ನು ನಮಗೆ ಬಿಟ್ಟುಕೊಡಿಸು ಅಂತಾ ಅಂದರೆ ಅಪ್ಪನಿಗೆ ಹೊಲವನ್ನು ನಮಗೆ ಬಿಟ್ಟುಕೊಡಬ್ಯಾಡರಿ ಅಂತಾ ಒಳಗಿಂದೊಳಗೆ ಹೇಳಿ ನಮಗೆ ಸತಾಯಿಸುತ್ತಿದ್ದಿಯಾ ಅಂತಾ ಅಂದನು, ಆಗ ನಾನು ಅಪ್ಪನಿಗೆ ನಾನ್ಯಾಕೆ ಆ ರೀತಿ ಹೇಳಲಿ ಅಂತಾ ಅಂದಾಗ ರೇಖಪ್ಪನ ಮಗ ಬಸವರಾಜನು ಬೋಸುಡಿ ಮಗನೇ ನೀನೆ ಆ ರೀತಿ ಹೇಳಿ ಮತ್ತೆ ನಮ್ಮ ಮುಂದೆ ಒಳ್ಳೆಯವನಂತೆ ನಾಟಕ ಮಾಡಕತ್ತಿಯಾ ಅಂತಾ ಅಂದು ನನ್ನ ತೆಕ್ಕೆ ಕುಸ್ತಿಗೆ ಬಿದ್ದು ನನಗೆ ಕೈಯಿಂದ ನನ್ನ ಕಪಾಳಕ್ಕೆ ಹೊಡೆದನು, ಅವರಲ್ಲಿಯ ನಿಂಗರಾಜನು ಈ ಬೋಸುಡಿ ಮಗ ಬೇಕಂತಲೆ ನಮ್ಮ ಹೊಲ ನಮಗೆ ಬಿಟ್ಟುಕೊಡವಲ್ಲಾಗ್ಯಾನ ಅಂತಾ ಅಂದು ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ನನ್ನ ಸೊಂಟಕ್ಕೆ ಹಾಗೂ ಎರಡು ಕಾಲುಗಳಿಗೆ ಹೊಡೆದು ಗುಪ್ತ ಪೆಟ್ಟು ಪಡಿಸಿದ್ದು ಉಳಿದವರು ಇವನನ್ನು ಹೊಡೆದು ಖಲಾಸ ಮಾಡಿಬಿಡಬೇಕು ಅಂತಾ ನನಗೆ ಜೀವದ ಬೆದರಿಕೆ ಹಾಕಿದ್ದು ಆಗ ನಾನು ಚೀರಾಡಲು ನಮ್ಮ ಮನೆಯ ಮುಂದಿನ ದಾರಿಯ ಮೇಲಿಂದ ಹೋಗುತ್ತಿದ್ದ ರಾಮಪ್ಪ ತಂದೆ ಠಾಕ್ರಪ್ಪ ಜಾದವ, ಗಂಗಾರಾಮ ತಂದೆ ರೂಪಲಪ್ಪ ಜಾದವ, ಕೃಷ್ಣಪ್ಪ ತಂದೆ ರೂಪಲಪ್ಪ ಜಾದವ ರವರು ಬಂದು ಬಿಡಿಸಿದ್ದು ಇರುತ್ತದೆ. ನಾನು ನಿನ್ನೆ ದಿನ ನಮ್ಮ ಮನೆಯವರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಬಂದು ಠಾಣೆಗೆ ಪಿಯರ್ಾದಿ ನೀಡುತ್ತಿದ್ದು ನನಗೆ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದವರ ಮೇಲೆ ಕೇಸು ಮಾಡಿ ನನಗೆ ಉಪಚಾರಕ್ಕೆ ಕಳುಹಿಸಬೇಕು ಅಂತಾ ವಿನಂತಿ. ಅಂತಾ ನೀಡಿದ ಲಿಖಿತ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 20/2020 ಕಲಂ 143, 147, 148, 323, 324, 504, 506, ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:-  88/2018 ಕಲಂ: 87 ಕೆ.ಪಿ.ಕಾಯ್ದೆ:- ಇಂದು ದಿನಾಂಕ:05/04/2020 ರಂದು 7:00 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಚಂದ್ರಶೇಖರ ಪಿ.ಎಸ್.ಐ (ಕಾಸು-02) ಸಾಹೇಬರುಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ 7 ಜನಆರೋಪಿತರನ್ನುಠಾಣೆಗೆತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆಇಂದು ದಿನಾಂಕ:05-04-2020 ರಂದು 4 ಪಿ.ಎಮ್ಕ್ಕೆಠಾಣೆಯಲ್ಲಿದ್ದಾಗ ಶ್ರೀ ಚಂದ್ರಶೇಖರ್ ಹೆಚ್.ಸಿ-134 ರವರಿಂದಖಚಿತವಾದ ಮಾಹಿತಿ ಬಂದಿದ್ದೆನೆಂದರೆಕವಡಿಮಟ್ಟಿ ಸೀಮಾಂತರದ ಕೇನಲ್ರಸ್ತೆಯ ಮಾರ್ಗ ಮಧ್ಯದಲ್ಲಿಮಹಾದೇವಪ್ಪ ಸಾಹುಕಾರ ಸುರಪೂರಇವರ ಹೊಲದಖುಲ್ಲಾ ಸ್ಥಳದಲ್ಲಿ ಕೆಲವು ಜನರು ಕೋಳಿ ಪಂದ್ಯದಲ್ಲಿ ಹಣವನ್ನು ಪಣಕ್ಕಿಟ್ಟುಜೂಜಾಟಆಡುತ್ತಿದ್ದಾರೆಅಂತಾಖಚಿತ ಮಾಹಿತಿ ಬಂದ ಮೇರೆಗೆಠಾಣೆಯಲ್ಲಿ ಹಾಜರಿದ್ದ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್.ಸಿ-176 2) ಶ್ರೀ ಈರಣ್ಣ ಹೆಚ್.ಸಿ-28 3) ಶ್ರೀ ಬಸವರಾಜ ಪಿಸಿ-180 4) ಜಗದೀಶ್ ಪಿಸಿ-335 5) ಶ್ರೀ ವಿರೇಶ ಸಿಪಿಸಿ-374 6) ಶ್ರೀ ಬಸಪ್ಪ-ಪಿಸಿ-393 7) ಶ್ರೀ ಬಸವರಾಜ ಪಿಸಿ-395 8) ಶ್ರೀ ರವಿಕುಮಾರ ಪಿಸಿ-376 9) ಮಲ್ಲಯ್ಯ ಪಿಸಿ-51 ಎಲ್ಲರಿಗೂ ವಿಷಯ ತಿಳಿಸಿ ಠಾಣೆಯ ಶ್ರೀ ಮಂಜುನಾಥ ಹೆಚ್.ಸಿ-176 ರವರಿಗೆಇಬ್ಬರು ಪಂಚರನ್ನುಕರೆದುಕೊಂಡು ಬರಲು ತಿಳಿಸಿದ ಪ್ರಕಾರ ಮಂಜುನಾಥ ಹೆಚ್.ಸಿ-176 ರವರುಇಬ್ಬರು ಪಂಚರಾದ 1) ಶ್ರೀ ಪರಶುರಾಮತಂದೆ ಭಿಮಣ್ಣಗುಡ್ಡಕಾಯಿ ವಯಾ:26 ವರ್ಷ ಉ:ಕೂಲಿ ಜಾ:ಬೇಡರ ಸಾ;ಕುಂಬಾರಪೇಠತಾ:ಸುರಪೂರ 2) ಶ್ರೀ ಹಣಮಂತತಂದೆ ಭೀಮಣ್ಣ ಹರಪನಳ್ಳಿ ವ: 25 ವರ್ಷ ಉ: ಡ್ರೈವರ ಸಾ: ಕುಂಬಾರಪೇಠಇವರನ್ನು 04:15 ಪಿ.ಎಂಕ್ಕೆ ಠಾಣೆಗೆ ಬರಮಾಡಿಕೊಂಡು ಬಂದಿದ್ದು ಸದರಿಯವರಿಗೆ ವಿಷಯವನ್ನು ತಿಳಿಸಿ ದಾಳಿ ಕಾಲಕ್ಕೆ ನಮ್ಮೋಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು ಸದರಿ ಪಂಚರೊಂದಿಗೆಎಲ್ಲರೂಕೂಡಿಠಾಣೆಯಿಂದ 4:30 ಪಿ.ಎಮ್ ಕ್ಕೆ ಒಂದು ಖಾಸಗಿ ವಾಹನದಲ್ಲಿ ಹೊರಟು 05:00 ಪಿ.ಎಮ್ ಕ್ಕೆ ಕವಡಿಮಟ್ಟಿ ಸೀಮಾಂತರದ ಕೇನಲ್ರಸ್ತೆಯ ಪಕ್ಕದಲ್ಲಿ ಮಹಾದೇವಪ್ಪ ಸಾಹುಕಾರ ಸುರಪೂರಇವರಹೊಲದ ಹತ್ತಿರ ಹೋಗಿ ವಾಹನ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಸ್ವಲ್ಪ ನಡೆದುಕೊಂಡು ಹೋಗಿ ಗಿಡಗಳ ಮರೆಯಾಗಿ ನಿಂತು ನೋಡಲಾಗಿಮಹಾದೇವಪ್ಪ ಸಾಹುಕಾರ ಸುರಪೂರಇವರಹೊಲದ ಪಕ್ಕದಲ್ಲಿರುವ ಸಾರ್ವಜನಿಕರಸ್ತೆಯಲ್ಲಿಜನರು ಗುಂಪಾಗಿ ಕೋಳಿ ಪಂದ್ಯವಾಡುತ್ತಾ ಅವುಗಳ ಮೇಲೆ ಹಣವನ್ನು ಪಣಕ್ಕಿಟ್ಟುಜೂಜಾಟವಾಡುತ್ತಿದ್ದದ್ದನ್ನುಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು 5:10 ಪಿ.ಎಮ್ ಕ್ಕೆ ಒಮ್ಮೆಲೆಅವರ ಮೇಲೆ ದಾಳಿಮಾಡಲಾಗಿ ಒಟ್ಟು 7 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ1) ಮೋಸಿನ್ ತಂದೆಇಮ್ರಾನ್ಚೌದರಿ ವಯಾ:19 ವರ್ಷಜಾ:ಮುಸ್ಲಿಂ ಉ: ಕೂಲಿ ಸಾ:ಖುರೇಶಿ ಮೋಹಲ್ಲಾ ಸುರಪುರ ಇವನ ಹತ್ತಿರ 900/- ನಗದು ಹಣ ಸಿಕ್ಕಿದ್ದು 2) ಮರೆಪ್ಪತಂದೆ ಮಾನಪ್ಪಗುಡ್ಡೆಕಾಯಿ ವ|| 19 ವರ್ಷಜಾ|| ಕಬ್ಬಲಿಗ ಉ||ವಿದ್ಯಾಥರ್ಿ ಸಾ||ವೆಣಕಟಾಪೂರತಾ||ಸುರಪುರಆತನ ಹತ್ತಿರ 1100/- ನಗದು ಹಣ ಸಿಕ್ಕಿದ್ದು 3) ಗೌಡಪ್ಪತಂದೆ ವೆಂಕಟೇಶಕಟಗಿಅಡ್ಡ ವ|| 30 ವರ್ಷಜಾ||ಬೇಡರ್ ಉ||ಕೂಲಿ ಸಾ||ಖುರೇಶಿ ಮೋಹಲ್ಲಾ ಸುರಪುರಆತನ ಹತ್ತಿರ 800/- ನಗದು ಹಣ ಸಿಕ್ಕಿದ್ದು 4) ಶ್ರೀನಾಥ ತಂದೆ ಸಾಯಬಣ್ಣ ಪೋತಲ್ಕರ್ ವ|| 26 ವರ್ಷಜಾ||ಕಬ್ಬಲಿಗ ಉ||ಮೀನುಗಾರಿಕೆ ಸಾ||ಬೋವಿಗಲ್ಲಿ ಸುರಪುರಈತನ ಹತ್ತಿರ 1050/- ನಗದು ಹಣ ಸಿಕ್ಕಿದ್ದು 5)  ಶರಣಬಸವ ತಂದೆಯಂಕಣ್ಣದೊರೆ ವ|| 25 ವರ್ಷಜಾ||ಬೇಡರ ಉ||ಒಕ್ಕಲುತನ ಸಾ||ಚಿಗರಿಹಾಳ ತಾ||ಸುರಪುರಈತನ ಹತ್ತಿರ 1250/- ನಗದು ಹಣ ಸಿಕ್ಕಿದ್ದು 6) ಅಬ್ಬಸಲಿ ತಂದೆ ಹುಸೇನ್ಸಾಬ್ ಖುರೇಶಿ ವ|| 22 ವರ್ಷ ಉ|| ಒಕ್ಕಲುತನ ಸಾ||ಮಾಲಗತ್ತಿತಾ||ಸುರಪುರಈತನ ಹತ್ತಿರ 950/- ನಗದು ಹಣ ಸಿಕ್ಕಿದ್ದು 7) ಲಕ್ಷ್ಮಣ್ಣತಂದೆಯಮನಪ್ಪ ಲಗಳೇರ್ ವ|| 42 ವರ್ಷಜಾ||ಕಬ್ಬಲಿಗ ಉ||ಕೂಲಿ ಸಾ||ಕವಡಿಮಟ್ಟಿಈತನ ಹತ್ತಿರ 1120/- ನಗದು ಹಣ ಸಿಕ್ಕಿದ್ದು ಇರುತ್ತದೆ ಹೀಗೆ ಒಟ್ಟು ನಗದು ಹಣ 7170=00 ಹಾಗೂ ಕಣದಲ್ಲಿ 2 ಹುಂಜಗಳು ಇದ್ದು ಅವುಗಳ ಅ.ಕಿ.400/-ರೂ ಮತ್ತು 4 ಕತ್ತಿಗಳು ಅ.ಕಿ 00=00 ದೊರೆತವು. ಸದರಿಯವರೆಲ್ಲರ ಹತ್ತಿರಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 7170=00 ರೂಪಾಯಿಗಳನ್ನು, ಮತ್ತು 2 ಹುಂಜಗಳು ಅ,ಕಿ 400=00 ಮತ್ತು4 ಕತ್ತಿಗಳು ಅ.ಕಿ 00=00 ಹೀಗೆ ಒಟ್ಟು 7570=00 ರೂ ನೇದ್ದವುಗಳನ್ನು ಪಂಚರ ಸಮಕ್ಷಮಜಪ್ತಿ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು 05:15 ಪಿ.ಎಮ್ ದಿಂದ 06:15 ಪಿ.ಎಮ್ದ ವರೆಗೆ ಮಾಡಿ 7 ಜನಆರೋಪಿತರು ಮತ್ತು ಮುದ್ದೇಮಾಲುಗಳನ್ನು ವಶಕ್ಕೆ ತಗೆೆದುಕೊಂಡು ಮರಳಿ ಠಾಣೆಗೆ 7 ಪಿ.ಎಂ ಕ್ಕೆ ಬಂದುತಮ್ಮ ವಶಕ್ಕೆ ಒಪ್ಪಿಸುತ್ತಿದ್ದು ಸದರಿ ವರದಿ ಸಾರಾಂಶ ಮೇಲಿಂದಠಾಣಾಗುನ್ನೆ ನಂ. 88/2020 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡೇನು.




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!