ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04/04/2020
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ ಆರ್.ನಂ.07/2020 ಕಲಂ 174 ??.??? ????:- ಇಂದು ದಿನಾಂಕ.04/04/2020 ರಂದು 10-00 ಎಎಂಕ್ಕೆ ಶ್ರೀ ಮಲ್ಲಿಕಾಜರ್ುನ ತಂದೆ ಬಸಲಿಂಗಪ್ಪ ಈಟೇ ವಃ35 ಜಾಃ ಹೊಲೆಯ ಉಃ ಅಟೋ ಚಾಲಕ ಸಾಃ ಅಂಭೇಡ್ಕರ ನಗರ ಯಾದಗಿರಿ ಠಾಣೆಗೆ ಹಾಜರಾಗಿ ಒಂದು ಹೇಳಿಕೆಯನ್ನು ನೀಡಿದ್ದು ಸಾರಾಂಶವನೆಂದರೆ, ನಾನು ಯಾದಗಿರಿ ನಗರದಲ್ಲಿ ಆಟೋ ಚಾಲನೆ ಮಾಡಿಕೊಂಡು ಉಪಜೀವಿಸುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ.03/04/2020 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ನಾನು ಯಾದಗಿರಿ ನಗರದ ಹಳೆ ಬಸ ನಿಲ್ದಾಣದ ಆಟೋ ಸ್ಟ್ಯಾಂಡದಲ್ಲಿ ನಿಂತಿರುವಾಗ ಹಳೆ ಬಸ ನಿಲ್ದಾಣದ ಒಳಗಡೆ ಯಾರೋ ಒಬ್ಬ ಮೃತಪಟ್ಟಿರುತ್ತಾನೆ ಅಂತಾ ಗೊತ್ತಾಗಿ ಅಲ್ಲಿಗೆ ಹೋಗಿ ನೋಡಲಾಗಿ ಒಬ್ಬ ವಯಸ್ಸಾದ ಮುದುಕ ಅಂದಾಜ ವಯಸ್ಸು 60-65 ಇರಬಹುದು ಸದರಿಯವನು ಮಲಗಿದ್ದಲ್ಲಿಯೇ ಮೃತಪಟ್ಟಿದ್ದು ನಾನು ಮತ್ತು ಈತರರು ನೋಡಲಾಗಿ ಮೃತನ ಗುರುತು ಸಿಕ್ಕಿರುವುದಿಲ್ಲ. ಮೃತ ಅಪರಿಚಿತ ಮನುಷ್ಯನಿದ್ದು ಸದರಿಯವನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ. ಸಾದಾ ಕಪ್ಪುಬಣ್ಣ, ಸಾದಾರಣ ಮೈಕಟ್ಟು, ತಲೆಯಲ್ಲಿ ಬಿಳಿ ಕೂದಲು, ಬಿಳಿ ದಾಡಿ, ಬಿಳಿ ಮಿಸೆ ಇದ್ದು ಮೈಮೇಲೆ ಪ್ಯಾಂಟ ಶರ್ಟ ಧರಿಸಿದ್ದು ಸದರಿಯವನು ನಿನ್ನೆ ದಿನಾಂಕ. 03/04/2020 ರಂದು ಮಧ್ಯಾಹ್ನ 12-00 ಪಿಎಮ್ ದಿಂದ 2-00 ಪಿಎಮ್ ದ ಮಧ್ಯದ ಅವಧಿಯಲ್ಲಿ ಮೃತಪಟ್ಟಿರಬಹುದು ಅಂತಾ ತಿಳಿದು ಬಂದಿದ್ದು ಮೃತನಿಗೆ ವಯಸ್ಸಾದಂತೆ ಕಂಡು ಬರುತ್ತಿದ್ದು, ಅನಾರೋಗ್ಯದಿಂದ, ನಿಶಕ್ತನಾಗಿ ಯಾವುದೋ ಕಾಯಿಲೆಯಿಂದ ಹೊಟ್ಟೆಗೆ ಆಹಾರವಿಲ್ಲದೆ ಮೃತಪಟ್ಟಂತೆ ಕಂಡು ಬರುತ್ತದೆ. ಜಿಲ್ಲಾ ಸಕರ್ಾರಿ ಆಸ್ಪತ್ರೆ ಯಾದಗಿರಿಯಲ್ಲಿ ಇರಿಸೋಣ ಅಂತಾ ಶವವನ್ನು ಸಕರ್ಾರಿ ಆಸ್ಪತ್ರೆಯ ಶವಗಾರ ಕೋಣೆಗೆ ಸಾಗಿಸಿದೆವು. ಮೃತ ಅಪರಿಚಿತ ವ್ಯಕ್ತಿಯಾಗಿದ್ದು ಅನಾರೋಗ್ಯದಿಂದ, ನಿಶಕ್ತನಾಗಿ ಹೊಟ್ಟೆಗೆ ಆಹಾರವಿಲ್ಲದೆ ಯಾವುದೋ ಕಾಯಿಲೆಯಿಂದ ಮೃತಪಟ್ಟಂತೆ ಕಂಡು ಬರುತ್ತದೆ. ಇಲ್ಲಿಯವರೆಗೆ ಸದರಿಯವನ ವಾರಸುದಾರರು ಯಾರು ಅಂತಾ ಗೊತ್ತಾಗಿರುವುದಿಲ್ಲಾ. ಮತ್ತು ಯಾರು ವಾರಸುದಾರರು ಇಲ್ಲಿಯವರೆಗೆ ಬಂದಿರುವುದಿಲ್ಲ. ಕಾರಣ ಸದರಿಯವನಿಗೆ ಯಾರು ವಾರಸುದಾರರು ಇಲ್ಲದ ಕಾರಣ ಇಂದು ದಿನಾಂಕ; 03/04/2020 ರಂದು 10-00 ಎಎಮ್ ಕ್ಕೆ ನಾನು ಠಾಣೆಗೆ ಬಂದು ಈ ದೂರು ನೀಡುತ್ತಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ.07/2020 ಕಲಂ.174 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಪಿಎಆರ್ ನಂ 18/2020 ಕಲಂ 110(ಇ&ಜಿ) ಸಿಆರ್ಪಿಸಿ :- ಇಂದು ದಿನಾಂಕ 04/04/2020 ರಂದು 7.00 ಪಿಎಂ ಕ್ಕೆ ಠಾಣೆಯ ಶ್ರೀ ಹುಸೇನಪ್ಪ ಹೆಚ್.ಸಿ 103 ರವರು ಠಾಣೆಗೆ ಬಂದು ಒಬ್ಬ ಆರೋಪಿ ಮತ್ತು ಒಂದು ವರದಿಯನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ನಾನು ಹುಸೇನಪ್ಪ ಹೆಚ್.ಸಿ 103 ಶಹಾಪೂರ ಪೊಲೀಸ್ ಠಾಣೆ ಇಂದು ದಿನಾಂಕ: 04/04/2020 ರಂದು 6.00 ಪಿ.ಎಂ ಕ್ಕೆ ನನಗೆ ನೇಮಿಸಿದ ಬೀಟ ಗ್ರಾಮವಾದ ಕನ್ಯಾಕೊಳ್ಳೂರ ಗ್ರಾಮಕ್ಕೆ ಹೋದಾಗ ಕನ್ಯಾಕೊಳ್ಳೂರ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಅಲ್ಲಿ ಒಬ್ಬ ವ್ಯಕ್ತಿ ರಸ್ತೆಯ ಮೇಲೆ ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈಯುತ್ತ ರೌಡಿ ವರ್ತನೆ ಪ್ರದಶರ್ಿಸುತ್ತಿದ್ದ ಬಗ್ಗೆ ಕಂಡು ಬಂದಿದ್ದು ಆಗ ನಾನು ಸದರಿ ವ್ಯಕ್ತಿಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಹುಚ್ಚಪ್ಪ ತಂದೆ ನಿಂಗಪ್ಪ ದಾಳೆರ ವ|| 30 ಜಾ|| ಕುರುಬರ ಉ|| ಕೂಲಿ ಸಾ|| ಕನ್ಯಾಕೊಳ್ಳೂರ ತಾ|| ಶಹಾಪೂರ ಅಂತಾ ತಿಳಿಸಿದ್ದು ಆತನನ್ನು ಹೀಗೆಯೇ ಬಿಟ್ಟಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾಳು ಮಾಡುವ ಸಂಭವ ಕಂಡು ಬಂದಿದ್ದರಿಂದ ಸದರಿ ವ್ಯಕ್ತಿಗೆ ವಶಕ್ಕೆ ಪಡೆದುಕೊಂಡು ಮರಳಿ ಠಾಣೆಗೆ ಕರೆದುಕೊಂಡು ಬಂದಿದ್ದು ಸದರಿ ವ್ಯಕ್ತಿಯ ಮೇಲೆ ಮುಂಜಾಗೃತ ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಪಿಎಆರ್ ನಂ 18/2020 ಕಲಂ 110(ಇ & ಜಿ) ಸಿಆರ್ ಪಿಸಿ ನೇದ್ದರಲ್ಲಿ ಮುಂಜಾಗ್ರತಾ ಕ್ರಮ ವರದಿ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 105/2020 ಕಲಂ 32, 34 ಕೆ.ಇ ಆಕ್ಟ:- ಇಂದು ದಿನಾಂಕ 04-04-2020 ರಂದು 5:40 ಪಿ.ಎಮ್.ಕ್ಕೆ ಆರೋಪಿತನು ತನ್ನ ಮನೆಯ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಫಿಯರ್ಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿಮಾಡಿ ಅವರಿಂದ 90 ಎಮ್.ಎಲ್.ನ್ 96 ಹೈವರ್ಡಸ್ ವಿಸ್ಕಿ ಪಾಕೇಟ್ ಕಿಮ್ಮತ್ತ 2910 ರೂಪಾಯಿ ಮೌಲ್ಯದ. ಮದ್ದವನ್ನು ವಸಪಡಿಸಿಕೊಂಡು ಆತನ ಮೇಲೆ ಕ್ರಮ ಜರುಗಿಸಲು ಸೂಚಿಸಿದ್ದು ಅದರ ಆಧಾರದ ಮೇಲಿಂದ ಠಾಣೆ ಗುನ್ನೆ ನಂ.105/2020 ಕಲಂ 32, 34 ಕೆ.ಇ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇದೆ
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:-. 87/2020 ಕಲಂ 379 ಐ.ಪಿ.ಸಿ. ಮತ್ತು ಕಲಂ. 44(1) ಕೆ.ಎಮ್.ಎಮ್.ಸಿ.ಆರ್.ಆಕ್ಟ 1994:- ಇಂದು ದಿನಾಂಕ:04-04-2020 ರಂದು 08:30 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಸಾಹೇಬಗೌಡ ಎಂ ಪಾಟೀಲ್ ಪಿಐ ಸುರಪೂರ ಪೊಲೀಸ್ ಠಾಣೆ ಸಾಹೇಬರು ಎರಡು ಮರಳು ತುಂಬಿದ ಟಿಪ್ಪರಗಳೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ ಸಾರಾಂಶವೆನೆಂದರೆ, ಇಂದು ದಿನಾಂಕ:04-04-2020 ರಂದು 5:30 ಎ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಯಾರೋ ಇಬ್ಬರು ವ್ಯಕ್ತಿಗಳು ತಮ್ಮ ಟಿಪ್ಪರದಲ್ಲಿ ಹೇಮನೂರ ಸೀಮಾಂತರದ ಕೃಷ್ಣಾ ನಧಿ ಪಾತ್ರದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ಹೇಮನೂರ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ (ಕಾ&ಸು.2) ಮತ್ತು ಠಾಣೆಯ ಸಿಬ್ಬಂಧಿಯವರಾದ ಶ್ರೀ ಮಂಜುನಾಥ ಹೆಚ್ಸಿ-176, ಶ್ರೀ ಮನೋಹರ ಹೆಚ್ಸಿ-105, ಶ್ರೀ ಪರಮೇಶ ಸಿಪಿಸಿ-142 ಹಾಗೂ ಜೀಪ ಚಾಲಕನಾದ ಶ್ರೀ ಮಾಹಾಂತೇಶ ಎಪಿಸಿ-48 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ ರವರಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಬರಲು ಸೂಚಿಸಿದ ಮೇರೆಗೆ ಮಂಜುನಾಥ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದ್ರಿ ವ|| 56 ವರ್ಷ ಜಾ|| ಮುಸ್ಲಿಂ ಉ|| ಡ್ರೈವರ ಸಾ|| ದೇವಾಪೂರ 2) ಕೃಷ್ಣಪ್ಪ ತಂದೆ ಅಯ್ಯಪ್ಪ ಡೊಳ್ಳ ವ|| 55 ವರ್ಷ ಜಾ|| ಕುರಬರ ಉ|| ಕೂಲಿಕೆಲಸ ಸಾ|| ವೆಂಕಟಾಪೂರ ಇವರನ್ನು ಬೆಳಿಗ್ಗೆ 05:45 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿ ಪಂಚರು ಸಿಬ್ಬಂಧಿಯವರಿಗೆ ವಿಷಯ ತಿಳಿಸಿ ಇಬ್ಬರು ಪಂಚರಿಗೆ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಪಿ.ಎಸ್.ಐ (ಕಾ&ಸೂ-2) ಮತ್ತು ಪಂಚರು ಹಾಗೂ ಮೇಲ್ಕಂಡ ಸಿಬ್ಬಂಧಿಯವರು ನಮ್ಮ ಸಕರ್ಾರಿ ಜೀಪ ನಂಬರ ಕೆಎ-33 ಜಿ-0238 ನೇದ್ದರಲ್ಲಿ ಕುಳಿತುಕೊಂಡು ಬೆಳಿಗ್ಗೆ 06:00 ಠಾಣೆಯಿಂದ ಹೊರಟು ಬೆಳಿಗ್ಗೆ 06:30 ಗಂಟೆಗೆ ಹೇಮನೂರ ಕ್ರಾಸ ಹತ್ತಿರ ಹೋಗಿ ನಮ್ಮ ಜೀಪ್ ನಿಲ್ಲಿಸಿದ್ದು, ಬೆಳಿಗ್ಗೆ 06:35 ಸಮಯಕ್ಕೆ ಹೇಮನೂರ ಸೀಮಾಂತರದ ಕೃಷ್ಣಾ ನದಿಯಿಂದ ಎರಡು ಟಿಪ್ಪರಗಳ ಚಾಲಕರು ತಮ್ಮ ಟಿಪ್ಪ್ಟರಗಳಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ಎಲ್ಲರೂ ಕೆಳಗೆ ಇಳಿದು ಸಿಬ್ಬಂಧಿಯವರ ಸಹಾಯದಿಂದ ಸದರಿ ಟಿಪ್ಪರಗಳ ಚಾಲಕರಿಗೆ ಕೈ ಮಾಡಿ ನಿಲ್ಲಿಸಲು ಸೂಚಿಸಿದಾಗ ಎರಡು ಟಿಪ್ಪರಗಳ ಚಾಲಕರು ನಮ್ಮ ಪೊಲೀಸ್ ಜೀಪನ್ನು ನೋಡಿ ತಮ್ಮ ಎರಡು ಟಿಪ್ಪರಗಳನ್ನು ನಮ್ಮಿಂದ ಸ್ವಲ್ಪ ಅಂತರದ ರೋಡಿನ ಸೈಡಿನಲ್ಲಿ ನಿಲ್ಲಿಸಿ ಕೆಳಗೆ ಇಳಿದು ರಸ್ತೆಯ ಪಕ್ಕದಲ್ಲಿ ಓಡಿ ಹೋದರು. ನಂತರ ನಾನು ಪಂಚರ ಸಮಕ್ಷಮ ಸದರಿ ಟಿಪ್ಪರ್ಟರಗಳ ಹತ್ತಿರ ಹೋಗಿ ಪರೀಶಿಲಿಸಿ ನೋಡಲು. 1) ಒಂದು ಭಾರತ್ಬೆಂಜ್ ಕಂಪನಿ ಟಿಪ್ಪರ ನಂಬರ. ಕೆಎ-33, ಎ-8717 ಇದ್ದು ಅದರಲ್ಲಿ 13 ಘನ ಮೀಟರ ಮರಳು ಇದ್ದು ಅದರ ಅ.ಕಿ 10400/- ರೂಗಳು ಆಗುತ್ತದೆ. 2) ಒಂದು ಭಾರತ್ಬೆಂಜ್ ಕಂಪನಿ ಟಿಪ್ಪರ ನಂಬರ. ಕೆಎ-33, ಎ-7188 ಇದ್ದು. ಅದರಲ್ಲಿ 13 ಘನ ಮೀಟರ ಮರಳು ಇದ್ದು ಅದರ ಅ.ಕಿ 10400/- ರೂಗಳು ಆಗುತ್ತದೆೆ. ಹೀಗೆ ಒಟ್ಟು ಎರಡು ಟಿಪ್ಪರದಲ್ಲಿಯ ಒಟ್ಟು 26 ಘನ ಮೀಟರ ಮರಳು ಇದ್ದು ಅದರ ಅ.ಕಿ 20800/- ರೂಗಳು ಆಗುತ್ತದೆ. ಸದರಿ ಮರಳು ತುಂಬಿದ ಎರಡು ಟಿಪ್ಪರಗಳನ್ನು ಪಂಚರ ಸಮಕ್ಷಮ 06:35 ಎ.ಎಮ್ ದಿಂದ 7:35 ಎ.ಎಮ್.ದವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡು ಟಿಪ್ಪರಗಳನ್ನು ಜಪ್ತಿ ಪಡಿಸಿಕೊಂಡು ತಾಬಾಕ್ಕೆ ತಗೆದುಕೊಂಡಿದ್ದು ಇರುತ್ತದೆ. ಕಾರಣ ಸದರಿ ಎಡರು ಟಿಪ್ಪರಗಳ ಚಾಲಕರು ಮತ್ತು ಮಾಲಿಕರು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಂದಾಜು 20800/- ರೂ.ಗಳ ಕಿಮ್ಮತ್ತಿನ ಅಂದಾಜು 26 ಘನ ಮೀಟರ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಎರಡು ಮರಳು ತುಂಬಿದ ಟಿಪ್ಪರಗಳನ್ನು ಖಾಸಗಿ ಚಾಲಕರ ಸಹಾಯದಿಂದ ಠಾಣೆಗೆ ಬೆಳಿಗ್ಗೆ 08:30 ಗಂಟೆಗೆ ತಂದು ಒಪ್ಪಿಸಿ ವರದಿಯೊಂದಿಗೆ ಜಪ್ತಿ ಪಂಚನಾಮೆಯನ್ನು ನೀಡಿದ್ದು, ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲುವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.87/2020 ಕಲಂ: 379 ಐಪಿಸಿ ಮತ್ತು 44(1) ಕೆ.ಎಂ.ಎಂ.ಸಿ.ಆರ್ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ವಡಗೇರಾ ಠಾಣೆ ಗುನ್ನೆ ನಂ;- 34/2020 ಕಲಂ: 32, 34 ಕೆ.ಇ ಎಕ್ಟ್ 1965:- ಇಂದು ದಿನಾಂಕ: 04/04/2020 ರಂದು 5-30 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮುದ್ದೆಮಾಲು ಮತ್ತು ಜಪ್ತಿ ಪಂಚನಾಮೆ ಹಾಜರಪಡಿಸಿ, ವರದಿ ನೀಡಿದ್ದೇನಂದರೆ ಈ ಮೂಲಕ ನಿಮಗೆ ವರದಿ ಕೊಡುವುದೇನಂದರೆ ಇಂದು ದಿನಾಂಕ: 04/04/2020 ರಂದು ಮದ್ಯಾಹ್ನ ನಾನು ಮತ್ತು ಪ್ರಕಾಶ ಹೆಚ್.ಸಿ 18 (ಪಿ) ಮತ್ತು ಚಂದ್ರಶೇಖರ ಹೆಚ್.ಸಿ 18 (ಸಿ) ಎಲ್ಲರೂ ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ ಗುಂಡಳ್ಳಿ ತಾಂಡಾದ ತಿಪ್ಪಣ್ಣ ರಾಠೋಡ ಈತನ ಕಿರಾಣಾ ಅಂಗಡಿ ಹತ್ತಿರ ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರಿಗೆ ಅಕ್ರಮವಾಗಿ ಕ್ವಾಟರ ಪೌಚು ಮತ್ತು ಬಿಯರಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರಿಗೆ ಮತ್ತು ನಮ್ಮ ಸಿಬ್ಬಂದಿಯವರಿಗೆ ದಾಳಿ ಬಗ್ಗೆ ತಿಳಿಸಿ, ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಸರಕಾರಿ ಜೀಪ ನಂ. ಕೆಎ 33 ಜಿ 115 ನೇದ್ದರಲ್ಲಿ ಕರೆದುಕೊಂಡು ಹೊರಟು 3-15 ಪಿಎಮ್ ಕ್ಕೆ ಗುಂಡಳ್ಳಿ ತಾಂಡಾದ ಹೊರ ವಲಯದಲ್ಲಿ ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ, ಅಲ್ಲಿಂದ ನಡೆದುಕೊಂಡು ಹೋಗಿ ತಿಪ್ಪಣ್ಣ ಈತನ ಕಿರಾಣಾ ಅಂಗಡಿ ಮುಂದೆ ಪೌಚು ಮತ್ತು ಬಿಯರಗಳನ್ನು ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು 3-20 ಪಿಎಮ್ ಕ್ಕೆ ನಾನು ಮತ್ತು ಸಿಬ್ಬಂದಿಯವರು ಅವನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿಯಬೇಕೆನ್ನುವಷ್ಟರಲ್ಲಿ ಅವನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದನು. ಅಲ್ಲಿದ್ದ ಪೊಲೀಸ್ ಬಾತ್ಮಿದಾರರಿಗೆ ಅವನ ಹೆಸರು ವಿಳಾಸ ಕೇಳಲಾಗಿ ಶಂಕರ ತಂದೆ ರೇವ್ಯಾ ಚವ್ಹಾಣ, ವ:45, ಜಾ:ಲಮ್ಮಾಣಿ, ಉ:ಒಕ್ಕಲುತನ ಸಾ:ಗುಂಡಳ್ಳಿ ತಾಂಡಾ ತಾ:ಶಹಾಪೂರ ಎಂದು ಹೇಳಿದರು. ಸದರಿ ವ್ಯಕ್ತಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ ಒಂದು ಕಾಟನ ಬಾಕ್ಸದಲ್ಲಿ 180 ಎಮ್.ಎಲ್ ದ ಓಲ್ಡ್ ಟವರೇನ ಪೌಚುಗಳು ಇದ್ದು, ಎಣಿಕೆ ಮಾಡಿ ನೋಡಲಾಗಿ ಒಟ್ಟು 48 ಪೌಚುಗಳು ಇದ್ದು, 180ಘಿ48=8 ಲೀಟರ್ 640 ಎಮ್.ಎಲ್ ಮದ್ಯ ಆಗುತ್ತಿದ್ದು, ಸದರಿ ಪೌಚುಗಳ ಮೇಲೆ ಎಮ್.ಆರ್.ಪಿ ಬೆಲೆ 74. 13ಘಿ48=3558. 24/- ರೂ. ಗಳು ಆಗುತ್ತಿದ್ದು, ಇನ್ನೊಂದು ಕಾಟನ್ ಬಾಕ್ಸದಲ್ಲಿ 650 ಎಮ್.ಎಲ್ ದ ಕಿಂಗಫಿಶಯರ್ ಸ್ಟ್ರಾಂಗ್ ಬಿಯರ ಬಾಟಲಿಗಳು ಇದ್ದು, ಎಣಿಕೆ ಮಾಡಿ ನೋಡಲಾಗಿ ಒಟ್ಟು 12 ಬಾಟಲಿಗಳು ಇದ್ದು, 650ಘಿ12=7 ಲೀಟರ್ 800 ಎಮ್.ಎಲ್ ಮದ್ಯ ಆಗುತ್ತಿದ್ದು, ಎಮ್.ಆರ್.ಪಿ ಬೆಲೆ 145ಘಿ12=1740/- ರೂ. ಗಳು ಆಗುತ್ತದೆ. ಮತ್ತೊಂದು ಕಾಟನ ಬಾಕ್ಸದಲ್ಲಿ 330 ಎಮ್.ಎಲ್ ದ ಕಿಂಗಫಿಶಯರ್ ಸ್ಟ್ರಾಂಗ್ ಟಿನ ಬಿಯರ ಡಬ್ಬಿಗಳು ಇದ್ದು, 330ಘಿ48=15 ಲೀಟರ್ 840 ಎಮ್.ಎಲ್ ಮದ್ಯ ಆಗುತ್ತದೆ. ಎಮ್.ಆರ್.ಪಿ ಬೆಲೆ 80ಘಿ48=3840/- ರೂ. ಆಗುತ್ತದೆ. ಸದರಿಯವುಗಳಲ್ಲಿಂದ ರಾಸಾಯನಿಕ ಪರೀಕ್ಷೆ ಕುರಿತು ಒಂದು ಪೌಚನ್ನು ಪ್ರತ್ಯೇಕ ಪಡೆದುಕೊಂಡು ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲೆದು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಘಆಉ ಅಂತಾ ಅರಗಿನಿಂದ ಸೀಲ್ ಮಾಡಿ ಜಪ್ತಿ ಮಾಡಿಕೊಂಡು 3-20 ಪಿಎಮ್ ದಿಂದ 4-30 ಪಿಎಮ್ ದವರೆಗೆ ಪಂಚನಾಮೆ ಜರುಗಿಸಿ, 5-30 ಪಿಎಮ್ ಕ್ಕೆ ಮುದ್ದೆಮಾಲಿನೊಂದಿಗೆ ಪೊಲೀಸ ಠಾಣೆಗೆ ಬಂದು ಜಪ್ತಿ ಪಂಚನಾಮೆ ಪ್ರಿಂಟ ಹಾಕಿ ವರದಿ ತಯಾರಿಸಿ ಕೊಡುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ. ಸದರಿ ಆರೋಪಿತನು ನಾವು ಸತ್ಯ ಶೋಧನಾ ಪ್ರಮಾಣ ಪತ್ರ ಪಡೆದುಕೊಂಡು ಹೋಗಿ ದಾಳಿ ಮಾಡುವಷ್ಟರಲ್ಲಿ ಅಪರಾಧ ಕೃತ್ಯದಿಂದ ತಪ್ಪಿಸಿಕೊಳ್ಳುವುದಲ್ಲದೆ ಸದರಿ ಮಾಲನ್ನು ಕೂಡ ಮುಚ್ಚಿಡುವ ಸಾಧ್ಯತೆಗಳಿರುವುದರಿಂದ ತಕ್ಷಣ ದಾಳಿ ಮಾಡಿ ಜಪ್ತಿ ಪಂಚನಾಮೆಯ ಕ್ರಮ ಜರುಗಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 34/2020 ಕಲಂ: 32, 34 ಕೆ.ಇ ಎಕ್ಟ್ 1965 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 34/2020 279, 337, 338, 304(ಎ) ಐಪಿಸಿ:-ದಿನಾಂಕ:16/03/2020 ರಂದು 18.55 ಗಂಟೆಗೆ ಪಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಟೈಪ್ ಮಾಡಿಸಿದ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ:13/03/2020 ರಂದು ಮುಂಜಾನೆ 11.00 ಗಂಟೆಯ ಸುಮಾರಿಗೆ ನಮ್ಮ ತಮ್ಮನಾದ ಗೋಪಾಲರಾವ ತಂದೆ ಕಿಶನರಾವ ಕುಲಕಣರ್ಿ ಸಾ:ವಜ್ಜಲ ಇವರು ತಾನು ನಡೆಯಿಸುವ ಸ್ಕೂಟಿ ನಂ. ಕೆಎ-33 ಎಕ್ಸ್-5823 ನೇದ್ದನ್ನು ಹುಣಸಗಿ ಶಂಕರ ರೈಸ್ ಮಿಲ್ ಹತ್ತಿರ ಮನಗೂಳಿ-ದೇವಾಪುರ ರಾಜ್ಯ ಹೆದ್ದಾರಿ ಮೇಲೆ ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿ ತನ್ನಷ್ಟಕ್ಕೆ ತಾನೆ ಬಿದ್ದು ಅಪಘಾತ ಮಾಡಿಕೊಂಡು ಭಾರಿ ರಕ್ತಗಾಯ ಮಾಡಿಕೊಂಡಿದ್ದು, ಸದರಿ ಗೋಪಾಲರಾವ ತಂದೆ ಕಿಶನರಾವ ಕುಲಕಣರ್ಿ ಸಾ:ವಜ್ಜಲ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇತ್ಯಾದಿ ಹೇಳಿಕೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ.
ಇಂದು ದಿನಾಂಕ:04/04/2020 ರಂದು 18.30 ರಂದು ಗಂಟೆಗೆ ಪ್ರಕರಣದ ಪಿಯರ್ಾದಿ ಠಾಣೆಗೆ ಬಂದು ಒಂದು ಪುರವಣಿ ಹೇಳಿಕೆ ಕೊಟ್ಟಿದ್ದೇನೆಂದರೆ, ದಿನಾಂಕ:13/03/2020 ರಂದು ಅಪಘಾತದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿದ್ದ ನಮ್ಮ ತಮ್ಮನಾದ ಗೋಪಾಲರಾವ ಕುಲಕಣರ್ಿ ಇವರಿಗೆ ಬೆಂಗಳೂರ ದವಾಖಾನೆಯಲ್ಲಿ ಉಪಚಾರ ಮಾಡಿಸುತ್ತಿದ್ದಾಗ ವೈದ್ಯಾಧಿಕಾರಿಗಳು ಗೋಪಾಲರಾವ ಇವರಿಗೆ ಇನ್ನೇನು ಆರಾಮವಾಗುವದಿಲ್ಲಾ ನಿಮಗೆ ಸಮೀಪದ ದವಾಖಾನೆಗೆ ತೆಗೆದುಕೊಂಡು ಹೋಗಲು ಹೇಳಿದ್ದರಿಂದಾ ದಿನಾಂಕ:02/04/2020 ರಂದು ಬೆಳಿಗ್ಗೆ 08.30 ಗಂಟೆಗೆ ಗೋಪಾಲರಾವ ಈತನಿಗೆ ಬೆಂಗಳೂರ ಶಿರಡಿ ಸಾಯಿ ಆಸ್ಪತ್ರೆಯಿಂದಾ ಬಿಡುಗಡೆ ಮಾಡಿಸಿಕೊಂಡು ಕಲಬುಗರ್ಿ ದನ್ವಂತರಿ ದವಾಖಾನೆಗೆ ಅಂದೇ ರಾತ್ರಿ ತಂದು ಸೇರಿಕೆ ಮಾಡಿದೆವು. ದನ್ವಂತರಿ ದವಾಖಾನೆಯಲ್ಲಿ ವೈದ್ಯರು ದಿನಾಂಕ:04/04/2020 ರ ವರಗೆ ಉಪಚಾರ ಮಾಡಿ ಅವರೂ ಕೂಡಾ ಆರಾಮವಾಗುದಿಲ್ಲಾ ನೀವು ಮನೆಗೆ ತೆಗೆದುಕೊಂಡು ಹೋಗಿರಿ ಎಂದು ಹೇಳಿದಾಗ ಇಂದು ದಿನಾಂಕ:04/04/2020 ರಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ಗೋಪಾಲರಾವ ಈತನಿಗೆ ಕಲಬುಗರ್ಿ ದನ್ವಂತರಿ ದವಾಖಾನೆಯಿಂದಾ ಬಿಡುಗಡೆ ಮಾಡಿಸಿಕೊಂಡು ಮರಳಿ ವಜ್ಜಲ ಗ್ರಾಮದ ಮನೆಗೆ ಸಾಯಂಕಾಲ 6.00 ಗಂಟೆಯ ಸುಮರಿಗೆ ತಂದು ಹಾಕಿದ್ದು, ಸಾಯಂಕಾಲ 06.10 ಗಂಟೆಯ ಸುಮಾರಿಗೆ ಮನೆಯಲ್ಲಿ ಗೋಪಾಲರಾವ ಈತನು ಮೃತಪಟ್ಟಿದ್ದು ಅಂತಾ ಕೊಟ್ಟ ಹೇಳಿಕೆ ಮೇಲಿಂದಾ ಮಾನ್ಯ ನ್ಯಾಯಾಲಯಕ್ಕೆ ಪ್ರಕರಣದಲ್ಲಿ ಕಲಂ.304(ಎ) ಐಪಿಸಿ ಅಳವಡಿಸಿಕೊಳ್ಳಲು ಪರವಾನಿಗೆ ಕುರಿತು ವಿನಂತಿಸಿಕೊಂಡಿದ್ದು ಇರುತ್ತದೆ. ಪ್ರಕರಣದಲ್ಲಿ ಈ ಶೀಘ್ರವರದಿಯನ್ನು ಸಲ್ಲಿಸಲಾಗುತ್ತಿದೆ
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 19/2020 ಕಲಂ:143, 147, 148, 323, 324, 504, 506, ಸಂಗಡ 149 ಐಪಿಸಿ.:-:- ಇಂದು ದಿನಾಂಕ 04/04/2020 ರಂದು ರಾತ್ರಿ 8:30 ಪಿ.ಎಂ ಕ್ಕೆ ಶಿ ಬಸವರಾಜ ತಂದೆ ರೇಖಪ್ಪ ಜಾದವ ವ:31 ವರ್ಷ ಉ:ಒಕ್ಕಲುತನ ಜಾ:ಹಿಂದು ಲಂಬಾಣಿ ಸಾ:ಬೆಲ್ಲದಗಿಡದ ತಾಂಡಾ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ನಮ್ಮ ತಂದೆಯವರಿಗೆ 5 ಜನ ಅಣ್ಣ ತಮ್ಮಂದಿರಿದ್ದು ಎಲ್ಲರೂ ಈಗ ಸುಮಾರು 15 ವರ್ಷಗಳಿಂದ ಎಲ್ಲರೂ ಬೇರೆಬೇರೆಯಾಗಿದ್ದು ಇರುತ್ತದೆ. ನಮ್ಮ ಮನೆ ಹಾಗೂ ನಮ್ಮ ದೊಡ್ಡಪ್ಪ ರವರ ಮನೆ ನಮ್ಮ ತಾಂಡಾದಲ್ಲಿ ಅಕ್ಕಪಕ್ಕದಲ್ಲಿ ಇರುತ್ತವೆ. ನಮ್ಮ ತಂದೆಯವರಿಗೆ ಮಾರನಾಳ ಸೀಮಾಂತರದಲ್ಲಿ ಸವರ್ೇ ನಂ 29 ರಲ್ಲಿ 3 ಎಕರೆ ಮತ್ತು ಸವರ್ೆ ನಂ 30 ರಲ್ಲಿ ಒಂದು ಎಕರೆ 16 ಗುಂಟೆ ಜಮೀನು ನಮಗೆ ಬರಬೇಕಾಗಿದ್ದು ಇದನ್ನು ನಮ್ಮ ಅಜ್ಜ ಮೇಘಪ್ಪ ಜಾದವ ರವರು ಕೋಡುತ್ತೇನೆ ಅಂತಾ ಅಂದರೂ ಸಹಿತ ನಮ್ಮ ದೊಡ್ಡಪ್ಪ ಶಂಕ್ರಪ್ಪ ರವರು ನಮಗೆ ನಮ್ಮ ಜಮೀನುಗಳನ್ನು ವಾಟನಿ ಮಾಡಿಕೊಟ್ಟಿರುವದಿಲ್ಲ. ನಮ್ಮ ದೊಡ್ಡಪ್ಪ ಶಂಕ್ರಪ್ಪ ರವರು ನಮ್ಮ ತಂದೆಯವರ ಹೆಸರಿನಲ್ಲಿ ಉದ್ಯೋಗ ಕಾತ್ರಿ ಯೋಜನೆ ಅಡಿಯಲ್ಲಿ ಕೃಷಿಹೊಂಡ ಹಾಕಿಸಿಕೊಂಡು ಅದನ್ನು ತಮ್ಮ ಹೊಲದಲ್ಲಿ ತೋಡಿಸಿ ಅದರು ದುಡ್ಡುನ್ನು ಪಡೆದುಕೊಂಡಿದ್ದು ನಾನು ಈ ಬಗ್ಗೆ ತಾಲುಕಾ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ಅಜರ್ಿ ಸಲ್ಲಿಸಿರುತ್ತೇನೆ. ಮುಂದುವರೆದು ನಾನು ಈ ರೀತಿ ಯಾಕೆ ಮಾಡಿದ್ದಿರಿ ಅಂತಾ ಇಂದು ದಿನಾಂಕ 04/04/2020 ರಂದು ಸಾಯಂಕಾಲ 6:00 ಗಂಟೆಯ ಸುಮರಿಗೆ ನಮ್ಮ ಮನೆಯ ಮುಂದೆ ನಿಂತು ನಮ್ಮ ದೊಡ್ಡಪ್ಪ ಶಂಕ್ರಪ್ಪ ರವರಿಗೆ ಕೇಳಿದಾಗ ನಮ್ಮ ದೊಡ್ಡಪ್ಪ ಶಂಕ್ರಪ್ಪ ತಂದೆ ಮೇಘಪ್ಪ ಜಾದವ ರವರು ಬೋಸುಡಿ ಮಗನೇ ಅದನ್ನ ಏನು ಕೇಳತಿದಿ ನಾವು ಊರು ಮಂದಿ ರೊಕ್ಕತಿಂದಿವ ಅಂತಾ ಅಂದನು ಆಗ ನಾನು ನಮ್ಮ ದೊಡ್ಡಪ್ಪನಿಗೆ ಸರಿಯಾಗಿ ಮಾತಡು ನೀನು ಊರು ಮಂದಿ ರೊಕ್ಕ ತಿಂದ್ದದ್ದು ನಾನು ಕೇಳಕತ್ತಿಲ್ಲ ನಮ್ಮ ಅಪ್ಪನ ಹೆಸರಿನಲ್ಲಿ ಆದ ಕೃಷಿ ಹೊಂಡದ ರೊಕ್ಕ ಯಾಕ ತಿಂದಿದಿ ಅಂತಾ ಕೇಳಿದಾಗ, ಶಂಕಪ್ಪನ ಮನೆಯಲ್ಲಿ ಇದ್ದ ಅವರ ಮನೆಯವರಾದ ಶಿವಪ್ಪ ತಂದೆ ಶಂಕ್ರಪ್ಪ ಜಾದವ, ತುಕರಾಮ ತಂದೆ ಶಂಕ್ರಪ್ಪ ಜಾದವ, ಖೀರಪ್ಪ ತಂದೆ ಶಂಕ್ರಪ್ಪ ಜಾದವ, ಗುರುನಾಥ ತಂದೆ ಶಂಕ್ರಪ್ಪ ಜಾದವ, ತಾರಾಬಾಯಿ ಗಂಡ ಶಂಕ್ರಪ್ಪ ಜಾದವ, ಛಾಯಾ ಗಂಡ ಶಿವಪ್ಪ ಜಾದವ, ಗುಲಾಬಿ ಗಂಡ ಖೀರಪ್ಪ ಜಾದವ, ಲಕ್ಷ್ಮಣ್ಣ ತಂದೆ ಮೇಘಪ್ಪ ಜಾದವ ರವರ ಕೂಡಿಕೊಂಡು ಕೈಯಲ್ಲಿ ಕಲ್ಲು ಮತ್ತು ಬಡಿಗೆಗಳನ್ನು ಹಿಡಿದುಕೊಂಡು ಗುಂಪಾಗಿ ನಮ್ಮ ಮನೆಯ ಮುಂದೆ ಬಂದು ನನಗೆ ಅವರಲ್ಲಿಯ ಶಿವಪ್ಪನು ಬೋಸುಡಿ ಮಗನೇ ನಮ್ಮ ಅಪ್ಪನಿಗೆ ಎದುರು ಮಾತನಾಡುತ್ತಿಲೇ ಬೋಸುಡಿ ಮಗನೇ ಅಂತಾ ನನ್ನ ತೆಕ್ಕೆ ಕುಸ್ತಿಗೆ ಬಿದ್ದು ಕೈಯಿಂದ ನನ್ನ ಕಪಾಳಕ್ಕೆ ಹೋಡೆದನು ಮತ್ತು ಅವರಲ್ಲಿಯ ತುಕಾರಾಮ ತಂದೆ ಶಂಕ್ರಪ್ಪ ಜಾದವ ಈತನು ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ನನ್ನ ಬಲಗಾಲ ಮೊಳಕಾಲ ಕೆಳಗೆ ಹಾಗೂ ಎಡಗಾಲಿನ ಹಿಮ್ಮಡಿಗೆ ಹೋಡೆದು ರಕ್ತಗಾಯಮಾಡಿದ್ದು ಆಗ ನಾನು ಚಿರಾಡಲು ನಮ್ಮ ಮನೆಯಲ್ಲಿ ಇದ್ದ ನಮ್ಮ ತಂದೆ ರೇಖಪ್ಪ ತಂದೆ ಮೆಘಪ್ಪ ಜಾದವ ರವರು ಬಿಡಿಸಿಕೊಳ್ಳಲು ಬಂದಾಗ ನಮ್ಮ ದೊಡ್ಡಪ್ಪ ಶಂಕ್ರಪ್ಪನು ನಮ್ಮ ಅಪ್ಪನಿಗೆ ಬೋಸುಡಿ ಮಗನ್ಯಾ ಮಗನ ಜಗಳಕ್ಕೆ ಕಳುಹಿಸಿ ಈಗ ಬಿಡಸಾಕ ಬಂದಿಯಾ ಅಂತಾ ಅಂದು ನಮ್ಮ ಅಪ್ಪನಿಗೆ ತೆಕ್ಕೆ ಕುಸ್ತಿಗೆ ಬಿದ್ದು ನೆಲಕ್ಕೆ ಕೆಡುವಿದನು, ಆಗ ಗುರುನಾಥನು ಅಲ್ಲಿಯೇ ಇದ್ದ ಬಡಿಗೆಯಿಂದ ನಮ್ಮ ಅಪ್ಪನ ಡುಬ್ಬಕ್ಕೆ ಹಾಗು ಕುತ್ತಿಗೆಗೆ ಬಡಿಗೆಯಿಂದ ಹೊಡೆದು ಗುಪ್ತ ಪೆಟ್ಟು ಪಡಿಸಿದ್ದು ಲಕ್ಷ್ಮಣ್ಣ ತಂದೆ ಮೇಘಪ್ಪ ಜಾದವ ಈತನು ಅಲ್ಲಿಯೇ ಬಿದ್ದದ್ದ ಕಲ್ಲಿನಿಂದ ನಮ್ಮ ಅಪ್ಪನ ಬಲಗಾಲ ಮೊಳಕಾಲ ಕೆಳಗೆ ಹೊಡೆದು ರಕ್ತಗಾಯ ಪಡಿಸಿದ್ದನು ಉಳಿದವರು ಈ ಸುಳಿಮಕ್ಕಳದ್ದು ಸೊಕ್ಕ ಬಹಳ ಆಗಿದೆ ಇವರನ್ನು ಹೊಡೆದು ಖಲಾಸ ಮಾಡಿಬಿಡರಿ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಆಗ ನಾನು ಹಾಗೂ ನಮ್ಮ ತಂದೆ ಚೀರಾಡಲು ಅಲ್ಲಿಯೇ ಇದ್ದ ಮಲ್ಲೇಶ ತಂದೆ ಪೀರಪ್ಪ ಜಾದವ, ಮೋತಿಲಾಲ ತಂದೆ ಮೇಘಪ್ಪ ಜಾದವ, ಥಾವರಪ್ಪ ತಂದೆ ಮೋತಿಲಾಲ ಜಾದವ, ಸುರೇಶ ತಂದೆ ಮಲ್ಲೇಶ ಜಾದವ ರವರು ಬಂದು ಬಿಡಿಸಿದ್ದು ಇರುತ್ತದೆ ಆದ್ದರಿಂದ ನನಗೆ ಹಾಗೂ ನನ್ನ ತಂದೆಗೆ ಅವಾಚ್ಯವಾಗಿ ಬೈದು, ಕೈಯಿಂದ, ಬಡಿಗೆಯಿಂದ, ಹಾಗೂ ಕಲ್ಲಿನಿಂದ ಹೊಡೆದು ಜೀವ ಬೇದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸ ಬೇಕು ಮತ್ತು ನನಗೆ ಮತ್ತು ನಮ್ಮ ತಂದೆಗೆ ಉಪಚಾರ ಕುರಿತು ಆಸ್ಪತ್ರೆ ಕಳುಹಿಸಕೊಡಬೇಕೆಂದು ನೀಡಿದ ಲಿಖಿತ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 19/2020 ಕಲಂ 143, 147, 148, 323, 324, 504, 506, ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
Hello There!If you like this article Share with your friend using