ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03/04/2020

By blogger on ಶುಕ್ರವಾರ, ಏಪ್ರಿಲ್ 3, 2020
                         ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03/04/2020 
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 03/2020 ಕಲಂ 174  ಸಿ.ಆರ್.ಪಿಸಿ:- ದಿನಾಂಕ:19/03/2020 ರಂದು 5 ಪಿ.ಎಮ್. ಸುಮಾರಿಗೆ ಮೃತಳು ಚಹಾ ಮಾಡಲು ಅಂತಾ ಅಡುಗೆ ಕೋಣೆಗೆ ಹೋಗಿ ಗ್ಯಾಸ್ ಒಲೆ ಚಾಲು ಮಾಡಿ ಲೈಟರ್ ಹುಡುಕಾಡಲಾಗಿ ಸಿಕ್ಕಿರುವದಿಲ್ಲ. ಆಗ ಕಡ್ಡಿಪೆಟ್ಟಿಗೆ ಹುಡುಕಾಡಿಕೊಂಡು ಅಡುಗೆ ಕೋಣೆಗೆ ಬರುವಷ್ಟರಲ್ಲಿ ಒಲೆಯಿಂದ ಗ್ಯಾಸ್ ಲೀಕ್ ಆಗಿ ಅಡುಗೆ ಕೋಣೆ ತುಂಬಾ ಆವರಿಸಿದ್ದು ಗ್ಯಾಸ್ ಒಲೆ ಹಚ್ಚಬೇಕು ಅಂತಾ ಬೆಂಕಿಕಡ್ಡಿ ಗೀರಿದಾಗ ಆಕಸ್ಮಿಕವಾಗಿ ಲೀಕ್ ಆದ ಗ್ಯಾಸ್ಗೆ ಬೆಂಕಿ ಹತ್ತಿ ಮೃತಳಿಗೆ ಸಹ ಬೆಂಕಿ ಹತ್ತಿ ಮೈಪೂತರ್ಿ ಸುಟ್ಟಿರುತ್ತದೆ. ಆಗ ಮನೆಯವರು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ವೈದ್ಯಕೀಯ ಉಪಚಾರ ಕುರಿತು ಶಹಾಪುರದ ಸರಕಾರಿ ಆಸ್ಪತ್ರೆಗೆ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದು ಇರುತ್ತದೆ. ಮೃತಳು ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೇ ಇಂದು ದಿನಾಂಕ:03/04/2020 ರಂದು ಬೆಳಗಿನ ಜಾವ 01.30 ಎ.ಎಮ್. ಸುಮಾರಿಗೆ ಮೃತಪಟ್ಟಿರುತ್ತಾಳೆ. ಸದರಿ ವಿಷಯದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ:03/2020 ಕಲಂ 174 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 58/2020 ಕಲಂ:143.147.148.323.324.326.504.506 ಸಂಗಡ 149 ಐ.ಪಿ.ಸಿ:- ಇಂದು ದಿನಾಂಕ 03.04.2020 ರಂದು 1 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ದೇವಕ್ಕೆಮ್ಮ ಗಂಡ ಮುದಕಪ್ಪ ಬರದೇವನಾಳ ವ|| 50 ವರ್ಷ ಉ|| ಹೊಲಮನೆಗೆಲಸ ಜಾ|| ಕುರಬರ ಸಾ|| ಚಿಗರಿಹಾಳ ತಾ|| ಸುರಪುರ ರವರು ಕೊಟ್ಟ ಅಜರ್ಿ ಏನೆಂದರೆ, ನಮ್ಮ ಖಾಸ ತಮ್ಮ ದೊಡ್ಡ ದೇವಿಂದ್ರಪ್ಪ ಹಾಗು ಅವರ ತಮ್ಮ ಸಣ್ಣ ದೇವೀಂದ್ರಪ್ಪ ಗೋಸಿ ಇವರ ಮದ್ಯ ಸುಮಾರು ದಿನಗಳಿಂದ ಹೊಲ ಸವರ್ೇ ನಂಬರ 261 ನೇದ್ದರ ವಿಷಯದಲ್ಲಿ ತಕರಾರು ನಡೆದಿದ್ದು ಇದೆ ವಿಷಯವಾಗಿ ಒಬ್ಬರಿಗೊಬ್ಬರು ಹಗೆತನ ಸಾದಿಸುತ್ತಿದ್ದರು.ಹೀಗಿದ್ದು ಇಂದು ದಿನಾಂಕ 03/04/2020 ರಂದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ನಾನು ಸವರ್ೇ ನಂಬರ 261 ನೇದ್ದರ ಹೊಲದಲ್ಲಿನ ನಮ್ಮ ತಮ್ಮನಾದ ದೊಡ್ಡ ದೇವೀಂದ್ರಪ್ಪ ಇವರ ಮನೆಯ ಮುಂದೆ ಕುಳಿತಿದ್ದೆನು. ಅದೇ ಸಮಯಕ್ಕೆ ನಮ್ಮ ತಮ್ಮನಾದ ದೊಡ್ಡ ದೆವೀಂದ್ರಪ್ಪ ಈತನ ಹೊಲದಲ್ಲಿನ ತೊಗರಿ ಬೆಳೆಯಲ್ಲಿ ಸಣ್ಣ ದೆವೀಂದ್ರಪ್ಪ ಈತನು ಕುರಿಗಳನ್ನು ಬಿಟ್ಟಿದ್ದು ಆಗ ನಾನು ತೊಗರಿ ಹೊಲದಲ್ಲಿ ಕುರಿಗಳು ಬಿಟ್ಟರೇ ಹೊಲ ಹಾಳಾಗುತ್ತದೆ ಅಂತ ಮನೆಯ ಮುಂದೆ ನಿಂತು ಅಂದಾಗ ಅಲ್ಲಿಯೇ ಇದ್ದ 1] ಸಣ್ಣ ದೇವೀಂದ್ರಪ್ಪ ತಂದೆ ಹಣಮಂತ್ರಾಯ ಗೋಸಿ 2] ಆನಂದಪ್ಪ ತಂದೆ ಸಣ್ಣ ದೇವೀಂದ್ರಪ್ಪ ಗೋಸಿ 3] ನಿಂಗಪ್ಪ ತಂದೆ ಸಣ್ಣ ದೇವೀಂದ್ರಪ್ಪ ಗೋಸಿ  4] ಮುದಕಪ್ಪ ತಂದೆ ಸಣ್ಣ ದೇವೀಂದ್ರಪ್ಪ ಗೋಸಿ 5] ಸಣ್ಣಮುದಕಪ್ಪ ತಂದೆ ಸಣ್ಣ ದೇವೀಂದ್ರಪ್ಪ ಗೋಸಿ 6] ಭೀಮಬಾಯಿ ಗಂಡ ಸಣ್ಣ ದೇವೀಂದ್ರಪ್ಪ ಗೋಸಿ 7] ಸೂಲಪ್ಪ ತಂದೆ ಭೀಮಣ್ಣ ಯಮನೂರ ಈ ಎಲ್ಲಾ ಜನರು ಕೈಯಲ್ಲಿ ಕಲ್ಲು ಬಡಿಗೆ ಹಿಡಿದುಕೊಂಡು ಗುಂಪು ಕಟ್ಟಿಕೊಂಡು ಬಂದವರೇ ಏನಲೇ ಸೂಳಿ ದೇವಿ ಹೊಲದಲ್ಲಿ ಕುರಿಗಳನ್ನು ಬಿಟ್ಟರೇ ನಿನಗೇನು ಆಗುತ್ತದೆ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ಯಾಕೇ ಬೈಯುತ್ತೀರಿ ಬೆಳೆ ಹಾಳಾಗುತ್ತದೆ ಅನ್ನುವದು ತಪ್ಪಾ ಅಂತ ಅಂದಾಗ ಎಲ್ಲರೂ ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ಆನಂದಪ್ಪ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಎಡಗೈ ರಟ್ಟಿಗೆ ಬಲವಾಗಿ ಹೊಡೆದು ಭಾರೀ ಗುಪ್ತಗಾಯ ಪಡಿಸಿದ್ದು ಕಾರಣ ನನ್ನ ಕೈಮುರಿದಂತಾಗಿರುತ್ತದೆ. ಅಲ್ಲದೇ ಸಣ್ಣ ದೇವೀಂದ್ರಪ್ಪ ಈತನು ಈ ಸೂಳಿಯದು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ತನ್ನ ಕೈಯಲ್ಲಿದ್ದ ಕಲ್ಲಿನಿಂದ ನನ್ನ ಟೊಂಕಕ್ಕೆ ಹೊಡೆದು ಗುಪ್ತಗಾಯ ಪಡಿಸಿದನು. ಆಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ನಮ್ಮ ತಮ್ಮನ ಮಗ ಮುದಕಪ್ಪ ತಂದೆ ದೊಡ್ಡದೇವೀಂದ್ರಪ್ಪ ಗೋಸಿ ಈತನು ಬಿಡಿಸಿಕೊಳ್ಳಲು ಬಂದಾಗ ಅವನಿಗೂ ಸಹ ನಿಂಗಪ್ಪ, ದೊಡ್ಡ ಮುದಕಪ್ಪ, ಹಾಗು ಸಣ್ಣ ಮುದಕಪ್ಪ ಇವರು ತಮ್ಮ ಕೈಯಲ್ಲಿದ್ದ ಕಲ್ಲುಗಳಿಂದ ಆತನ ಬೆನ್ನಿಗೆ ಹಾಗು ಬುಜಕ್ಕೆ ಗುದ್ದಿ ಗುಪ್ತಗಾಯ ಪಡಿಸಿದರು. ನಂತರ ಎಲ್ಲರೂ ನಮಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾವಿಬ್ಬರೂ ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಮನೆಯಲ್ಲಿದ್ದ ನಮ್ಮ ತಮ್ಮ ದೊಡ್ಡ ದೇವೀಂದ್ರಪ್ಪ ಗೋಸಿ ಹಾಗು ದೇವಕ್ಕೆಮ್ಮ ಗಂಡ ದೊಡ್ಡದೇವೀಂದ್ರಪ್ಪ ಗೋಸಿ, ತಿಪ್ಪಣ್ಣ ತಂದೆ ಹಣಮಂತ ಇವರು ಓಡಿ ಬಂದಾಗ ಸದರಿಯವರು ನಮಗೆ ಹೊಡೆಯುವದನ್ನು ಬಿಟ್ಟು ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋಗಿದ್ದು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 58/2020 ಕಲಂ 143,147,148,323,324,326,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 59/2020 ಕಲಂ  15[ಎ],32[3]  ಕೆ. ಇ ಯಾಕ್ಟ :- ದಿನಾಂಕ: 03.04.2020 ರಂದು 4 ಪಿ ಎಮ್ ಕ್ಕೆ ಪಿರ್ಯಾದಿದಾರರು ಠಾಣೆಯಲ್ಲಿದ್ದಾಗ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಸಂಜೀವನಗರ ಏರಿಯಾದ ಶರಣಪ್ಪ ಇವರ ಅಂಗಡಿಯ ಪಕ್ಕದಲ್ಲಿ ಮಲ್ಲಿಕಾಜರ್ುನ ತಂದೆ ಸಿದ್ದಪ್ಪ ಕಾರಟಗಿ ಸಾ|| ಕೆಂಭಾವಿ ಈತನು ಸಾರ್ವಜನಿಕ ಸ್ಥಳದಲ್ಲಿ ಸರಕಾರದ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯವನ್ನು ಮಾರಾಟ ಮಾಡಿ ಮಧ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದಾನೆಂದು ಮಾಹಿತಿ ಮೇರೆಗೆ ನಾನು ಠಾಣೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಪಂಚರಿಗೂ ಮಾಹಿತಿ ತಿಳಿಸಿ ದಾಳಿ ಮಾಡಲು ಸಹಕರಿಸಲು ತಿಳಿಸಿದ್ದು ಅವರು ಒಪ್ಪಿದ್ದರಿಂದ ನಾನು ಮತ್ತು ಠಾಣೆಯಲ್ಲಿದ್ದ ಪಿಸಿ 195 ಬೀರಪ್ಪ, ಪಿಸಿ 244 ಸಂಗಮೇಶ, ಪಿಸಿ 214 ಪೆದ್ದಪ್ಪಗೌಡ ರವರನ್ನು ಕರೆದುಕೊಂಡು ಸರಕಾರಿ ಜೀಪ ನಂಬರ ಕೆಎ-33 ಜಿ-0074 ಠಾಣೆಯಿಂದ 04.30 ಪಿಎಮ್ಕ್ಕೆ ಹೊರಟು 04.45 ಪಿಎಮ್ಕ್ಕೆ ಸಂಜೀವನಗರ ಕೆನಾಲ ಹತ್ತಿರ ಹೋಗುತ್ತಿದ್ದಾಗ ಅಂದರೆ ಮಲ್ಲಿಕಾಜರ್ುನ ಕಾರಟಗಿ ಈತನು ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ಸ್ಥಳದಿಂದ ಸುಮಾರು 100 ಅಡಿ ದೂರದಲ್ಲಿ ನಿಂತು ನಾನು, ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಹೋಗುತ್ತಿದ್ದಾಗ ನಮ್ಮನ್ನು ನೋಡಿ ಅಲ್ಲಿ ಸೇರಿದ್ದ ಜನರು ಓಡಿ ಹೋದರು. ಮಧ್ಯ ಮಾರಾಟ ಮಾಡುತ್ತಿದ್ದವನು ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ನಾನು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ಸದರಿ ವ್ಯಕ್ತಿಯನ್ನು ಹಿಡಿದು ಆತನ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ಮಲ್ಲಿಕಾಜರ್ುನ ತಂದೆ ಸಿದ್ದಪ್ಪ ಕಾರಟಗಿ  ವಯಾ|| 21 ವರ್ಷ ಜಾ|| ಕುರಬರ ಉ|| ಕೂಲಿ ಸಾ|| ಕೆಂಭಾವಿ ಅಂತ ತಿಳಿಸಿದನು. ನಂತರ ಸದರಿ ಸ್ಥಳದಲ್ಲಿದ್ದ ಒಂದು ಹಳೆಯ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿ ನೋಡಲಾಗಿ ಅದರಲ್ಲಿ ಮಧ್ಯ ತುಂಬಿದ್ದು ಸದರ ಚೀಲದಲ್ಲಿ 180 ಎಮ್ಎಲ್ನ ಓರಿಜಿನಲ್ ಚೊಯಿಸ್ ಒಟ್ಟು 09 ಪೌಚುಗಳು ಇದ್ದು ಒಂದು ಪೌಚಿನ ಬೆಲೆ 60.64 ಪೈಸೆ ಅಂತ ಇದ್ದು ಒಟ್ಟು 09 ಪೌಚ್ಗಳ ಬೆಲೆ 545.76/- ರೂ ಆಗುತ್ತಿದ್ದು ನಂತರ ಮಲ್ಲಿಕಾಜರ್ುನ ಈತನನ್ನು ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಮಾರಾಟ ಹಾಗೂ ಸೇವನೆಗೆ ಅವಕಾಶ ಮಾಡಿಕೊಡಲು ಯಾವುದಾದರು ಅಧಿಕೃತ ಪರವಾನಿಗೆ ಇದೆಯೇ ಎಂದು ವಿಚಾರಿಸಲಾಗಿ ತಮ್ಮ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದನು. ಸದರಿ ಮಧ್ಯ ತುಂಬಿದ 180 ಎಮ್ಎಲ್ನ 09 ಪೌಚ್ಗಳನ್ನು 04.50 ಪಿಎಮ್ದಿಂದ 05.50 ಪಿಎಮ್ದವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ವರದಿಯನ್ನು ನೀಡಿದ್ದರ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 59/2020 ಕಲಂ: 15 (ಎ), 32 (3) ಕೆಇ ಆಕ್ಟ ನೇದ್ದರ ಪ್ರಕರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಅದೆ.   

ಯಾದಗಿರ ನಗರ ಠಾಣೆ ಗುನ್ನೆ ನಂ;- 36/2020 ಕಲಂ: 188, 269 ಐಪಿಸಿ:- ಇಂದು ದಿನಾಂಕ; 03/04/2020 ರಂದು 3-00 ಪಿಮ್ ಕ್ಕೆ  ಶ್ರೀ ಮಲ್ಲಿಕಾಜರ್ುನ ಎಮ್ ಗ್ರಾಮಲೆಕ್ಕಾಧಿಕಾರಿಗಳು ತಹಸೀಲ ಕಾಯರ್ಾಲಯ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ಮಾನ್ಯ ಜಿಲ್ಲಾದಿಕಾರಿಗಳು ಯಾದಗಿರಿ ರವರು ಕರೋನಾ ವೈರಸ್ (ಕೋವಿಡ-19) ಪ್ರಯುಕ್ತ ನನಗೆ ಯಾದಗಿರಿ ನಗರದಲ್ಲಿ ಕರ್ತವ್ಯಕ್ಕೆ ನೇಮಿಸಿದ್ದರಿಂದ ಇಂದು ದಿನಾಂಕ; 03/04/2020 ರಂದು ಬೆಳಿಗ್ಗೆಯಿಂದ ಯಾದಗಿರಿ ನಗರದಲ್ಲಿ ಕರೋನಾ ವೈರಸ ಹರಡದಂತೆ ಮುಂಜಾಗೃತ ಕ್ರಮಕ್ಕಾಗಿ ಕರ್ತವ್ಯದಲ್ಲಿದ್ದಾಗ ಚೌಕ ಮಜೀದದಲ್ಲಿ ಕೆಲವರು ಸೇರಿಕೊಂಡು ಫ್ರಾರ್ಥನೆ(ನಮಾಜ) ಮಾಡುವ ಸಲುವಾಗಿ ಸೇರಿರುತ್ತಾರೆ ಅಂತಾ ಮಾಹಿತಿ ಮೇರೆಗೆ  ನಾನು ಯಾದಗಿರಿ ನಗರ ಠಾಣೆಗೆ ಬಂದು  ಠಾಣೆಯ ಸಿಬ್ಬಂದಿಯವರಾದ ರವೀಂದ್ರ ಪಿಸಿ-281 ಹಾಗೂ ಸಾಬರೆಡ್ಡಿ ಪಿಸಿ-379 ರವರಿಗೆ ಕರೆದುಕೊಂಡು 1-15 ಪಿಎಮ್ ಕ್ಕೆ ಹೋದಾಗ ಚೌಕ ಮಜೀದದಲ್ಲಿ ಕೆಲ ಜನರು ಒಳಗಡೆ ನಮಾಜ ಮಾಡುವ ಕುರಿತು ಸೇರಿದ್ದು, ನಮಗೆ ನೋಡಿ ಸದರಿಯವರೆಲ್ಲರೂ ಓಡಿ ಹೋದರು. ಆಗ ಅಲ್ಲಿದ್ದ ಚೌಕ ಮಜೀದ ಅಧ್ಯಕ್ಷನಾದ ಅಬ್ದುಲ ಹಮೀದ ತಂದೆ ಅಬ್ದುಲ ಬಷೀರ ಹಾಗೂ ಇನ್ನೊಬ್ಬ ಖಲೀಲ ಅಹ್ಮದ  ತಂದೆ ಮಹ್ಮದ ಖಾಜಾ ಘೋರಿ ಇವರು ಇದ್ದು ಸದರಿಯವರು ಮುಸ್ಲಿಂ ಭಾಂದವರನ್ನು ಮಜೀದದಲ್ಲಿ ನಮಾಜ (ಪ್ರಾರ್ಥನೆ) ಮಾಡುವ ಸಲುವಾಗಿ ಸೇರಿಸಿ ಸಕರ್ಾರದ ಆದೇಶ ಉಲ್ಲಂಘನೆ ಮಾಡಿದ್ದು ಹಾಗೂ ಜನರು ಗುಂಪಾಗಿ ಸೇರುವದರಿಂದ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ವೈರಸ್ ಸೊಂಕು ಹರಡುವ ಸಂಭವಿರುವ ಬಗ್ಗೆ ತಿಳಿದ್ದಿದ್ದು ಸಹ ವಿದಿ ವಿರುದ್ದವಾಗಿ ಜನರನ್ನು ಸೇರಿಸಿ ಈ ಕೃತ್ಯವೆಸಗಿದ್ದು ಇರುತ್ತದೆ. ಕಾರಣ ಸಾರ್ವಜನಿಕರು ಗುಂಪುಗುಡಿಕೊಂಡು ಯಾವುದೇ ಫ್ರಾರ್ಥನೆ(ನಮಾಜ) ಮಾಡಬಾರದು ಅಂತಾ ಸಕರ್ಾರದ ಆಧೇಶ ಇದ್ದರೂ ಹಾಗೂ ಕಲಂ.144 ಸಿ.ಆರ್.ಪಿ.ಸಿ ಜಾರಿ ಇದ್ದರು ಕೂಡಾ ಸಕರ್ಾರದ ಆದೇಶ ಉಲ್ಲಂಘನೆ ಮಾಡಿ ಚೌಕ ಮಜೀದದಲ್ಲಿ ಫ್ರಾಥನೆ(ನಮಾಜ) ಮಾಡುವ ಸಲುವಾಗಿ ಜನರನ್ನು ಗುಂಪು ಸೇರಿಸಿ ಸಕರ್ಾರದ ಆಧೇಶ ಉಲ್ಲಂಘನೆ ಮಾಡಿದ್ದು ಹಾಗೂ ಜನರು ಗುಂಪಾಗಿ ಸೇರುವದರಿಂದ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ವೈರಸ್ ಸೊಂಕು ಹರಡುವ ಸಂಭವಿರುವ ಬಗ್ಗೆ ತಿಳಿದ್ದಿದ್ದು ಸಹ ವಿಧಿ ವಿರುದ್ದವಾಗಿ ಜನರನ್ನು ಸೇರಿಸಿ ಈ ಕೃತ್ಯವೆಸಗಿದ್ದು ಇರುತ್ತದೆ. ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.36/2020 ಕಲಂ 188, 269 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 


ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 34/2020 ಕಲಂ, 87 ಕೆ.ಪಿ ಆ್ಯಕ್ಟ್:- ಇಂದು ದಿನಾಂಕ 03/04/2020 ರಂದು 10.15 ಪಿಎಂ ಕ್ಕೆ ಶ್ರೀ ವೆಂಕಟೇಶ ಆರಕ್ಷಕ ಉಪಾಧಿಕ್ಷಕರು ಸುರಪೂರ ಉಪ ವಿಭಾಗ ಸುರಪೂರ ರವರು ಠಾಣೆೆಗೆ ಬಂದು ವರದಿ ನೀಡಿ ಕ್ರಮ ಜರುಗಿಸಲು ಸೂಚಿಸಿದ್ದರ ಸಾರಂಶ ಏನಂದರೆ, ದರಿಯಾಪೂರ ಗ್ರಾಮದ ಗಣೇಕಲ್ ಮಡ್ಡಿಯ ಹತ್ತಿರ ಸಾರ್ವಜನಿಕ ಸಾರ್ವಜನಿಕ ಜಾಗದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 06 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 51000=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು ಮತ್ತು 2 ಚಾರ್ಜರ ಲೈಟಗಳನ್ನು 08.25 ಪಿಎಮ್ ದಿಂದ 09.25 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 10.15 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಹಾಜರಪಡಿಸಿದ್ದರಿಂದ ಠಾಣೆ ಗುನ್ನೆ ನಂ 34/2020 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
   
ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ.05/2020 ಕಲಂ: 174(ಸಿ) ಸಿ.ಆರ್.ಪಿ.ಸಿ:- ನಿನ್ನೆ ದಿನಾಂಕ 02.04.2020 ರಂದು ಮಧ್ಯಾಹ್ನ 1:00 ಗಂಟೆಯ ಸುಮಾರಿಗೆ ಮೃತ ವಿಶ್ವನಾಥರೆಡ್ಡಿ ನಾಯ್ಕೋಡಿ ಈತನು ಹಳ್ಳಕ್ಕೆ ಹೋಗಿ ಮೀನು ಹಿಡಿದುಕೊಂಡು ಬರುವುದಾಗಿ ತನ್ನ ಹೆಂಡಿಯಾದ ಫಿರ್ಯಾದಿದಾರಳಿಗೆ ಹೇಳಿ ಹೋಗಿರುತ್ತಾನೆ. ನಂತರ ಸಂಜೆಯಾದರು ಮನೆಗೆ ಬಾರದೇ ಇರುವುದರಿಂದ ಫಿರ್ಯಾದಿದಾರಳು ತನ್ನ ಮಗ ರಾಜಶೇಖರಗೆ ಹೇಳಿ ಮೃತನ ಮೊಬೈಲ್ ಫೋನ್ಗೆ ಫೋನ್ ಮಾಡಿಸಿದಾಗ ಫೋನ್ ಸ್ವೀಚ್ ಆಫ್ ಅಂತಾ ಗೊತ್ತಾಗಿರುತ್ತದೆ. ನಂತರ ನಿರಂತರವಾಗಿ ಸಂಪಕರ್ಿಸಲು ಪ್ರಯತ್ನಿಸಿದರೂ ಸಹ ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ. ನಂತರ ಇಂದು ದಿನಾಂಕ 03.04.2020 ರಂದು ಬೆಳಿಗ್ಗೆ 7:00 ಗಂಟೆಗೆ ಫಿರ್ಯಾದಿದಾರಳು ಪುನಃ ತನ್ನ ಮಗನಿಗೆ ಯಾರನ್ನಾದರೂ ಕರೆದುಕೊಂಡು ಹೋಗಿ ಹಳ್ಳದ ಕಡೆ ಹುಡುಕುವಂತೆ ಹೇಳಿದ್ದರಿಂದ ಮೃತನ ಮಗ ಮೊಟ್ನಳ್ಳಿ ಸಿಮಾಂತರ ಬೂದೂರೋರ ಕತವಾದ ಕಡೆಗೆ ಹೋಗಿ ನೋಡಿದಾಗ ಹಳ್ಳದ ನೀರಲ್ಲಿ ಮೃತನು ಬಿದಿದ್ದನು ಕಂಡು ನಂತರ ವಿಷಯವನ್ನು ಮನೆಯಲ್ಲಿ ತಿಳಿಸಿದ ನಂತರ ಮೃತ  ದೇಹವನ್ನು ಹೊರಗೆ ತೆಗೆದು ನೋಡಿದಾಗ ಮುಖಕ್ಕೆ, ಕೈಗೆ, ಕಾಲಿಗೆ ಅಲ್ಲಲ್ಲಿ ಗಾಯಗಳಾಳಿ ರಂದ್ರಗಳು ಇರುವುದು ಕಂಡು ಬಂದಿದ್ದು ಮೃತನ ಸಾವಿನಲ್ಲಿ ಸಂಶವಿದೆ ಅಂತಾ ಫಿರ್ಯಾದಿದಾರಳು ಹಾಜರುಪಡಿಸಿದ ಗಣಕೀಕೃತ ದೂರಿನ ಸಾರಾಂಶ ಮೇಲಿಂದ ಠಾಣೆ ಯು.ಡಿ.ಆರ್ ನಂಬರ 05/2020 ಕಲಂ: 174(ಸಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 86/2020 ಕಲಂ 379 ಐ.ಪಿ.ಸಿ.  ಮತ್ತು ಕಲಂ. 44(1) ಕೆ.ಎಮ್.ಎಮ್.ಸಿ.ಆರ್.ಆಕ್ಟ 1994:- ಇಂದು ದಿನಾಂಕ:03-04-2020 ರಂದು 08:45 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಸಾಹೇಬಗೌಡ ಎಂ ಪಾಟೀಲ್ ಪಿಐ ಸುರಪೂರ ಪೊಲೀಸ್ ಠಾಣೆ ಸಾಹೇಬರು ಎರಡು ಮರಳು ತುಂಬಿದ ಟ್ಯಾಕ್ಟರಗಳೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ ಸಾರಾಂಶವೆನೆಂದರೆ, ಇಂದು ದಿನಾಂಕ:03-04-2020 ರಂದು 5-30 ಎ.ಎಮ್ ಸುಮಾರಿಗೆ ನಾನು ಸಂಗಡ ಶ್ರೀ ಮಂಜುನಾಥ ಹೆಚ್ಸಿ-176 ರವರೊಂದಿಗೆ ಗಾಂದಿ ಚೌಕದಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಯಾರೋ ಇಬ್ಬರು ವ್ಯಕ್ತಿಗಳು ತಮ್ಮ ಟ್ಯಾಕ್ಟರದಲ್ಲಿ ಕನರ್ಾಳ  ಸೀಮಾಂತರದ ಕೃಷ್ಣಾ ನಧಿ ಪಾತ್ರದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ರುಕ್ಮಾಪೂರ ಕ್ರಾಸ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ಸಂಗಡ ಇದ್ದ ಶ್ರೀ ಮಂಜುನಾಥ ಹೆಚ್ಸಿ-176, ಹಾಗೂ ಜೀಪ ಚಾಲಕನಾದ ಶ್ರೀ ಮಾಹಾಂತೇಶ ಎಪಿಸಿ-48 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ ರವರಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಬರಲು ಸೂಚಿಸಿದ ಮೇರೆಗೆ ಮಂಜುನಾಥ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದ್ರಿ ವ|| 56 ವರ್ಷ ಜಾ|| ಮುಸ್ಲಿಂ ಉ|| ಡ್ರೈವರ ಸಾ|| ದೇವಾಪೂರ 2) ಕೃಷ್ಣಪ್ಪ ತಂದೆ ಅಯ್ಯಪ್ಪ ಡೊಳ್ಳ ವ|| 55 ವರ್ಷ ಜಾ|| ಕುರಬರ ಉ|| ಕೂಲಿಕೆಲಸ ಸಾ|| ವೆಂಕಟಾಪೂರ ಇವರನ್ನು ಬೆಳಿಗ್ಗೆ 06:00 ಗಂಟೆಗೆ ಗಾಂದಿ ಚೌಕ ಹತ್ತಿರ ಕರೆದುಕೊಂಡು ಬಂದಿದ್ದು, ಸದರಿ ಪಂಚರಿಗೆ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಪಂಚರು ಮತ್ತು ಮತ್ತು ಸಿಬ್ಬಂಧಿಯೊಂದಿಗೆ ನಮ್ಮ ಠಾಣೆಯ ಸಕರ್ಾರಿ ಜೀಪ ನಂಬರ ಕೆಎ-33 ಜಿ-0238 ನೇದ್ದರಲ್ಲಿ ಕುಳಿತುಕೊಂಡು ಬೆಳಿಗ್ಗೆ 06:15 ಕ್ಕೆ ಗಾಂದಿಚೌಕದಿಂದ ಹೊರಟು ಬೆಳಿಗ್ಗೆ 06:50 ಗಂಟೆಗೆ ರುಕ್ಮಾಪೂರ ಕ್ರಾಸ ಹತ್ತಿರ ಹೋಗಿ ನಮ್ಮ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ನಿಂತುಕೊಂಡೆವು. ಅಂದಾಜ ಬೆಳಿಗ್ಗೆ 07:00 ಗಂಟೆಗೆ ರುಕ್ಮಾಪೂರ ಕಡೆಯಿಂದ ಎರಡು ಟ್ಯಾಕ್ಟರಗಳ ಚಾಲಕರು ತಮ್ಮ ಟ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ಸಿಬ್ಬಂಧಿಯವರ ಸಹಾಯದಿಂದ ಸದರಿ ಟ್ಯಾಕ್ಟರಗಳ ಚಾಲಕರಿಗೆ ಕೈ ಮಾಡಿ ನಿಲ್ಲಿಸಲು ಸೂಚಿಸಿದಾಗ ಎರಡು ಟ್ಯಾಕ್ಟರ ಚಾಲಕರು ನಮ್ಮ ಪೊಲೀಸ್ ಜೀಪನ್ನು ನೋಡಿ ತಮ್ಮ ಎರಡು ಟ್ಯಾಕ್ಟರಗಳನ್ನು ನಮ್ಮಿಂದ ಸ್ವಲ್ಪ ಅಂತರದ ರೋಡಿನ ಸೈಡಿನಲ್ಲಿ ನಿಲ್ಲಿಸಿ ಕೆಳಗೆ ಇಳಿದು ರಸ್ತೆಯ ಪಕ್ಕದಲ್ಲಿ ಓಡಿ ಹೋದರು. ನಂತರ ನಾನು ಪಂಚರ ಸಮಕ್ಷಮ ಸದರಿ ಟ್ಯಾಕ್ಟರಗಳ ಹತ್ತಿರ ಹೋಗಿ ಪರೀಶಿಲಿಸಿ ನೋಡಲು. 1) ಒಂದು ಮಹೇಂದ್ರ 575ಆ ಒಏಒ ಕಂಪನಿ ಟ್ಯಾಕ್ಟರ ಇದ್ದು ಅದರ ಇಂಜಿನ್ ನಂ. ಓಏಚಅ02692 ಚೆಸ್ಸಿ ನಂ. ಓಏಚಅ02692 ಇದ್ದು ಟ್ರಾಲಿಗೆ ನಂಬರ ಇರುವುದಿಲ್ಲ. ಅದರಲ್ಲಿ 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆ. 2) ಒಂದು ಸ್ವರಾಜ್ಯ 735 ಈಇ ಕಂಪನಿಯ ಟ್ಯಾಕ್ಟರ ಇದ್ದು ನಂಬರ ಕೆಎ-32, ಟಿಎ-6138 ಹಾಗೂ ಟ್ರಾಲಿ ನಂಬರ ಕೆಎ-32 ಟಿ-3760 ಇರುತ್ತದೆ ಸದರಿ ಟ್ರಾಲಿಯಲ್ಲಿ 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆೆ. ಹೀಗೆ ಒಟ್ಟು ಎರಡು ಟ್ಯಾಕ್ಟರದಲ್ಲಿಯ ಒಟ್ಟು 04 ಘನ ಮೀಟರ ಮರಳು ಇದ್ದು ಅದರ ಅ.ಕಿ 3200/- ರೂಗಳು ಆಗುತ್ತದೆ.  ಮರಳು ತುಂಬಿದ ಎರಡು ಟ್ಯಾಕ್ಟರಗಳನ್ನು ಪಂಚರ ಸಮಕ್ಷಮ 07:00 ಎ.ಎಮ್ ದಿಂದ 08:00 ಎ.ಎಮ್.ದವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡು ಟ್ಯಾಕ್ಟರಗಳನ್ನು ಜಪ್ತಿ ಪಡಿಸಿಕೊಂಡು ತಾಬಾಕ್ಕೆ ತಗೆದುಕೊಂಡಿದ್ದು ಇರುತ್ತದೆ. ಕಾರಣ ಸದರಿ ಎಡರು ಟ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಂದಾಜು 3200/- ರೂ.ಗಳ ಕಿಮ್ಮತ್ತಿನ ಅಂದಾಜು 04 ಘನ ಮೀಟರ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಎರಡು ಮರಳು ತುಂಬಿದ ಟ್ಯಾಕ್ಟರಗಳನ್ನು ಖಾಸಗಿ ಚಾಲಕರ ಸಹಾಯದಿಂದ ಠಾಣೆಗೆ ಬೆಳಿಗ್ಗೆ 08:45 ಎ.ಎಂ.ಕ್ಕೆ ತಂದು ಒಪ್ಪಿಸಿ ವರದಿಯೊಂದಿಗೆ ಜಪ್ತಿ ಪಂಚನಾಮೆಯನ್ನು ನೀಡಿದ್ದು, ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲುವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ  ನಂ. 79/2020 ಕಲಂ: 379 ಐಪಿಸಿ ಮತ್ತು 44(1) ಕೆ.ಎಂ.ಎಂ.ಸಿ.ಆರ್ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!