ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 30/03/2020

By blogger on ಸೋಮವಾರ, ಮಾರ್ಚ್ 30, 2020                       ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 30/03/2020 
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 102/2020. ಕಲಂ 279,338 ಐ.ಪಿ.ಸಿ.;-  ದಿನಾಂಕ 13-03-2020 ರಂದು 10:30 ಎ.ಎಮ್.ಕ್ಕೆ ಲಕ್ಷ್ಮೀಪೂರ ಮತ್ತು ಪರಸಾಪುರ ಗ್ರಾಮದ ನಡುವೆ ಪರಸಾಪುರ ಸೀಮಾಂತರದ ರಸ್ತೆಯ ಮೇಲೆ ಫಿಯರ್ಾದಿಯವರು  ತಮ್ಮೂರಿನಿಂದ ಹೈಯಾಳ ಗ್ರಾಮಕ್ಕೆ ಕುಳಿತು ಹೊರಟ ಆಟೋ ನಂ. ಕೆ.ಎ.33-ಬಿ-1203 ನೇದ್ದರ ಚಾಲನಾದ ಬೈಲಪ್ಪ ತಂದೆ ಅಯ್ಯಪ್ಪ ಕಟಗಿ ಈತನು ತನ್ನ ಅಟೋವನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ರಸ್ತೆಯ ಪಕ್ಕಕ್ಕೆ ಪಲ್ಟಿ ಮಾಡಿ  ಆಟೋದಲ್ಲಿದ್ದ ಸವಿತಾ ಮತ್ತು ದೇವಮ್ಮ ಇವರಿಗೆ ಭಾರೀ ಗಾಯಮಾಡಿದ್ದು ಅವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ  ಅಂತಾ ಇತ್ಯಾದಿ ಇದ್ದ ಫಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.78/2020 ಕಲಂ. 279,338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 31/2020 ಕಲಂ:341 323, 324 504 506 ಸಂ 34   ಕಅ:- ಇಂದು ದಿನಾಂಕ:30.03.2020 ರಂದು ಬೆಳಿಗ್ಗೆ 10:00 ಗಂಟೆಗೆ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ರಾಜನಕೊಳುರು ರವರು ಪೋನ್ ಮಾಡಿ ಗುಂಡುರಾವ ತಂದೆ ಸಕ್ರೆಪ್ಪ ರಾಠೋಡ ಸಾ: ರಾಜವಾಳ ತಾಂಡಾ ಇತನು ಜಗಳಲ್ಲಿ ಗಾಯ ಹೊಂದಿ ಉಪಚಾರಕ್ಕಾಗಿ ತಮ್ಮ ಆಸ್ಪತ್ರೆಗೆ ದಾಖಲಾಗಿದ್ದು ಬಂದು ಮುಂದಿನ ಕ್ರಮ ಜರುಗಿಸಬೇಕು ಅಂತ ತಿಳಿಸಿದ್ದರಿಂದ ನಾನು 10:15 ಗಂಟೆಗೆ ರಾಜನಕೊಳುರು ಸಕರ್ಾರಿ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳು ಗುಂಡುರಾವ ತಂದೆ ಸಕ್ರೆಪ್ಪ ರಾಠೋಡ ವ:28 ವರ್ಷ ಜಾ: ಲಂಬಾಣಿ ಉ: ಕೂಲಿಕೆಲಸ ಸಾ: ರಾಜವಾಳ ತಾಂಡಾ ತಾ: ಹುಣಸಗಿ ಇವರಿಗೆ ಘಟನೆಯ ಬಗ್ಗೆ ವಿಚಾರಿಸಿ ಸದರಿಯವರ ಹೇಳಿಕೆಯನ್ನು ಬೆಳಿಗ್ಗೆ 10:30 ಗಂಟೆಯಿಂದ 11:30 ಗಂಟೆಯ ವರೆಗೆ ಆಸ್ಪತ್ರೆಯಲ್ಲಿ ಪಡೆದುಕೊಂಡು ಸದರ ಪಿರ್ಯಾಧಿಯ ಹೇಳಿಕಯೊಂದಿಗೆ ಮರಳಿ ಠಾಣೆಗೆ 12:00 ಪಿಎಮ್ ಕ್ಕೆ ಬಂದಿದ್ದು. ಸದರ ಪಿರ್ಯಾಧಿಯ ಹೇಳಿಕೆ ಸಾರಾಂಶವೆನೆಂದರೆ ನನಗೆ ನಮ್ಮ ತಾಂಡಾದ ಕಾನಪ್ಪ ತಂದೆ ಸಕ್ರೆಪ್ಪ ರಾಠೋಡ ರವರ ಹಾಗೂ ಅವರ ಮನೆಯವರ ಪರಿಚಯ ಗುರುತು ಇರುತ್ತದೆ. ನಮಗೂ ಮತ್ತು ಕಾನಪ್ಪ ತಂದೆ ಸಕ್ರೆಪ್ಪ ರಾಠೋಡ ರವರಿಗೂ ಬಹಳ ದಿವಸದಿಂದ ಹಳೆಯ ವೈಶಮ್ಯ ಇದ್ದು ಅಲ್ಲದೇ ಮೊನ್ನೆ ದಿನ ಕಾನಪ್ಪನ ಮಗನಾದ ರಮೇಶನು ನಮ್ಮ ತಾಂಡಾದ ಹತ್ತಿರ ರಸ್ತೆಗೆ ಮುಳ್ಳು ಕಲ್ಲು ಹಾಕಿ ಬಂದು ಮಾಡಿದ್ದನ್ನು ನಾನು ಕೇಳಿದಕ್ಕೆ ನನ್ನ ಮೇಲೆ ರಮೇಶನು ಸಿಟ್ಟಾಗಿದ್ದು ಇರುತ್ತದೆ.
ಹೀಗಿದ್ದು ಮೊನ್ನೆ ದಿನಾಂಕ:28.03.2020 ರಂದು ಬೆಳಿಗ್ಗೆ 10:30 ಗಂಟೆಯ ಸುಮಾರಿಗೆ ನಾನು ನಮ್ಮ ತಾಂಡಾದಿಂದ ನಮ್ಮ ಹೊಲಕ್ಕೆ ಹೋಗಲು ನಮ್ಮ ತಾಂಡಾದ ರಾಮಣ್ಣ ತಂದೆ ಠಾಕ್ರೆಪ್ಪ ರವರ ಹೊಲದ ಹತ್ತಿರದ ಕ್ಯಾನಲ್ ಗೇಟ್ ಹತ್ತಿರ ಹೋಗುತ್ತಿರುವಾಗ ನಮ್ಮ ತಾಂಡಾದ ಕಾನಪ್ಪ ತಂದೆ ಸಕ್ರೆಪ್ಪ ರಾಠೋಡ ಹಾಗೂ ಆತನ ಮಕ್ಕಳಾದ ರಮೇಶ ತಂದೆ ಕಾನಪ್ಪ ರಾಠೋಡ, ಶಾಂತಿಲಾಲ ತಂದೆ ಕಾನಪ್ಪ ರಾಠೋಡ, ರೂಪ್ಲೆಪ್ಪ ತಂದೆ ಕಾನಪ್ಪ ರಾಠೋಡ ಇವರೆಲ್ಲರೂ ಎದುರಿನಿಂದ ಬಂದವರೇ ನನಗೆ ತಡೆದು ನಿಲ್ಲಿಸಿ ಬೋಸಡಿ ಮಗನ್ಯಾ ನಿನ್ನದು ತಾಂಡಾದಲ್ಲಿ ಬಹಳ ಆಗಿದೆ. ನಾವು ತಾಂಡಾದ ಜನರ ಹಿತಕ್ಕಾಗಿ ಕೊರೊನಾ ರೋಗ ಹರಡಬಾರದೆಂದು ಜನರು ಮತ್ತು ವಾಹನಗಳು ತಾಂಡಾದೊಳಕ್ಕೆ ಬರದಂತೆ ರಸ್ತೆಯ ಮೇಲೆ ಕಲ್ಲು ಮುಳ್ಳು ಹಾಕಿ ಬಂದ ಮಾಡಿದರೇ ಯಾಕೆ ಬಂದ ಮಾಡಿರಿ  ಅಂತ ನಮ್ಮೊಂದಿಗೆ ಜಗಳ ಮಾಡಿದ್ದೀರಿ ನೀನು  ನಾವು ಹೇಳಿದ ಹಾಗೆ ಕೇಳಿಕೊಂಡು ಇರುವದು ಬಿಟ್ಟು. ತಾಂಡಾದಲ್ಲಿ ಸೊಕ್ಕಿನಿಂದ ತಿರುಗುತ್ತಿ   ಸೂಳ್ಯಾ ಮಗನ್ಯಾ ಇವತ್ತು ನಿನಗೆ ಬಿಡುವದಿಲ್ಲಾ ಆಂತಾ ಅಂದವರೆ ಅವರಲ್ಲಿಯ  ಕಾನಪ್ಪ ತಂದೆ ರೂಪ್ಲೆಪ್ಪ ಇತನು ನನಗೆ ತನ್ನ ತೆಕ್ಕೆಯಲ್ಲಿ ಬಿಗಿಯಾಗಿ ಹಿಡಿದುಕೊಂಡಿದ್ದು ಆಗ ರಮೇಶನು ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ನನ್ನ ಬೆನ್ನಿನ ಮೇಲೆ ಹೊಡೆದು ಕಂದುಗಟ್ಟಿದ ಗಾಯ ಪಡಿಸಿದ್ದು. ಶಾಂತಿಲಾಲನು ನನಗೆ ನೆಲಕ್ಕೆ ಕೆಡವಿದ್ದು ನಾನು ನೆಲಕ್ಕೆ ಬಿದ್ದಾಗ ರೂಪ್ಲೆಪ್ಪನು ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಜೋರಾಗಿ ಬೀಸಿದ್ದು ಆ ಕಲ್ಲು ನನ್ನ ಬಲಗಾಲ ತೊಡೆಯ ಮೇಲೆ ಬಡಿದು ಒಳಪೆಟ್ಟಾಗಿದ್ದು. ಕಾನಪ್ಪನು ಸೂಳ್ಯಾ ಮಗನ್ಯಾ ನಿನ್ನದು ತಾಂಡಾದಲ್ಲಿ ಸೊಕ್ಕು ಬಹಳ ಆಗಿದೆ ಅಂತ ಬೈದು ಕಾಲಿನಿಂದ ನನ್ನ ಹೊಟ್ಟೆಯ ಮೇಲೆ ಒದ್ದು ಗುಪ್ತಗಾಯ ಪಡಿಸಿದ್ದು. ಆಗ  ನಾನು ಚಿರಾಡಲು ಅಲ್ಲಿಯೇ ಹೊಲದಲ್ಲಿದ್ದ ನಮ್ಮ ತಾಂಡಾದ ಸಕ್ರೆಪ್ಪ ತಂದೆ ಬೀಲಪ್ಪ ಜಾಧವ, ಚಂದಪ್ಪ ತಂದೆ ಕಾಶಪ್ಪ ರಾಠೋಡ ಇವರು  ಬಂದು ನೋಡಿ ಅವರುಗಳು ನನಗೆ ಹೊಡೆಯುವದನ್ನು ಬಿಡಿಸಿದ್ದು. ಇವರು ಬಂದು ಬಿಡಿಸದಿದ್ದರೆ ಮೇಲೆ ನಮೂದಿಸಿ ನಾಲ್ಕು ಜನರು ನನಗೆ ಇನ್ನೂ ಹೊಡೆ-ಬಡೆ ಮಾಡುತ್ತಿದ್ದರು ಹೋಗುವಾಗ ನಾಲ್ಕು ಜನರು ನನಗೆ ಸೊಳೆ ಮಗನ್ಯಾ ಇವತ್ತು ನಮ್ಮ ಕೈಯಲ್ಲಿ ಉಳಿದಿದದಿ ಇನ್ನೊಂದು ಸಲ ಸಿಕ್ಕರೆ ಜೀವಂತ ಬಿಡುವದಿಲ್ಲಾ ಅಂತ ಬೈದು ಜೀವದ ಬೇದರಿಕೆ ಹಾಕಿ ಹೋಗಿದ್ದು. ನಂತರ ನಾನು ಆ ದಿವಸ ರಾಜನಕೊಳುರು ಸಕರ್ಾರಿ ಆಸ್ಪತ್ರೆಗೆ ಹೋಗಿ ಉಪಚಾರ ಹೊಂದಿ ಮನಗೆ ಹೋಗಿ ಮತ್ತೆ ನನಗೆ ಈ ದಿವಸ ಜಗಳದಲ್ಲಿ ಆದ ಗಾಯಗಳ ಬಾದೆಯಾಗಿದ್ದರಿಂದ ಈ ದಿವಸ ಮತ್ತೆ ಇಲ್ಲಿಗೆ ಬಂದು ಉಪಚಾರಕ್ಕಾಗಿ ಸೇರಿಕೆಯಾಗಿದ್ದು. ನಾನು ಇನ್ನೂ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದು ನನಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆ-ಬಡೆ ಮಾಡಿ ಜೀವದ ಬೇದರಿಕೆ ಹಾಕಿದ ಮೇಲೆ ನಮೂದಿಸಿದ 4 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸ ಬೇಕು ಅಂತಾ  ಪಿರ್ಯಾಧಿಯ ಹೇಳಿಕೆಯ  ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:31/2020 ಕಲಂ: 341 323 324 504 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು

ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 33/2020  505 (2), ಸಂ: 149 ಐಪಿಸಿ:- ಇಂದು ದಿನಾಂಕ: 30/03/2020 ರಂದು 01.40 ಪಿಎಂ ಸುಮಾರಿಗೆ ಅಜರ್ಿದಾರರಾದ ಮಾನಪ್ಪ ತಂದೆ ಬಸ್ಸಣ್ಣ ನಾಯ್ಕೋಡಿ ವ:42 ಜಾ: ಬೇಡರ ಸಾ: ಬಾಣತಿಹಾಳ ಇವರು ಠಾಣೆಗೆ ಹಾಜರಾಗಿ ದಸ್ತೂರ ಮೂಲಕ ಬರೆಯಿಸಿದ ಅಜರ್ಿ ಹಾಜರ ಪಡೆಸಿದ ಸಾರಂಶ ಏನಂದರೆ, ನಾನು ಮಾನಪ್ಪ ತಂದೆ ಬಸ್ಸಣ್ಣ ನಾಯ್ಕೊಡಿ ವ: 42 ವರ್ಷ ಉ: ಒಕ್ಕಲುತನ ಜಾ: ಬೇಡರ ಸಾ: ಬಾಣತಿಹಾಳ ತಾ; ಶಹಾಪೂರ ಜಿ: ಯಾದಗಿರಿ ಇದ್ದು ಈ ಮೂಲಕ ಅಜರ್ಿ ನೀಡುವದೇನಂದರೆ, ನಮ್ಮ ಊರಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಅವಮಾನ ಮಾಡುವ ಉದ್ದೇಶದಿಂದ ನಮ್ಮ ಊರಿನವರಾದ 1) ಮಾನಪ್ಪ ತಂದೆ ಅಮ್ಮಣ್ಣ ಮೂಲಿಮನಿ ವ:20 ಜಾ: ಕುರುಬರ 2) ಮಾಳಪ್ಪ ತಂದೆ ಚಂದಪ್ಪ ಗುಡ್ಯಾಳ ವ: 21 ವಷ ಜಾ; ಕುರುಬರ 3) ಮಾಳಪ್ಪ ತಂದೆ ನಿಂಗಪ್ಪ ಗುಡ್ಯಾಳ  ವಯಾ: 22 ವರ್ಷ ಜಾ: ಕುರುಬರ 4) ಪರಶುರಾಮ ತಂದೆ ಹೊನ್ನಪ್ಪ ಗುಡ್ಯಾಳ ವ:19 ವರ್ಷ ಜಾ: ಕುರುಬರ 5) ದೊಡ್ಡಪ್ಪ ತಂದೆ ಹಣಮಂತ ಗುಡ್ಯಾಳ ವ:19 ವರ್ಷ ಜಾ: ಕುರುಬರ 6) ಮಾಳಪ್ಪ ತಂದೆ ಸಿದ್ದಪ್ಪ ಬಬಲಾದಿ ವ:20 ವರ್ಷ ಜಾ:ಕುರುಬರ 7) ಶರಣಪ್ಪ ತಂದೆ ಸಿದ್ದಪ್ಪ ಮೂಲಿಮನಿ ವ:19 ವರ್ಷ ಜಾ: ಕುರುಬರ ಎಲ್ಲರೂ ಸಾ: ಬಾಣತಿಹಾಳ ಇವರೆಲ್ಲರೂ ಕೂಡಿ ನಮ್ಮ ವಾಲ್ಮೀಕಿ ಜನಾಂಗದವರ ಆರಾದ್ಯ ದೇವರಾದ ಮಹಷರ್ಿ ವಾಲ್ಮೀಕಿ ರವರ ಭಾವ ಚಿತ್ರಕ್ಕೆ ಅವಮಾನ ಮಾಡಿ ಚಿತ್ರದ ಮೇಲೆ ನಿಮತು ತಮ್ಮ ಮೋಬೈಲ್ ಗಳ ಮೂಲಕ ಮೊನ್ನೆ ದಿನಾಂಕ: 28/3/2020 ರಂದು ಬೆಳಗಿನ ಸಮಯ 10.00 ಎಎಂ ಸುಮಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿರುತ್ತಾರೆ. ಸದರಿ ಅಪಮಾನ ಮಾಡಿದ ಭಾವ ಚಿತ್ರಗಳು ರವಿ ತಮದೆ ಅಂಬಲಯ್ಯ, ಭಾಗಪ್ಪ ತಂದೆ ಸಿದ್ದಪ್ಪ ಸಲಾದಪೂರ, ಸಣ್ಣ ಯಲ್ಲಪ್ಪ ತಂದೆ ಬಲವಂತ ಗೋಗಿ ಸಾ: ಬಾಣತಿಹಾಳ ಇನ್ನು ಇತರರ ಮೋಬೈಲ್ ಗಳಿಗೆ ಕಳುಹಿಸಿರುತ್ತಾರೆ. ಕಾರಣ ಸದರಿ ಘಟನೆಯಿಂದ ನಮ್ಮ ಸಮೂದಾಯಕ್ಕೆ ಘಾಸಿಯಾಗಿದ್ದು, ಸದರಿ ಅಪರಾಧ ಮಾಅಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಮನವಿ. ಊರಲ್ಲಿ ವಿಚಾರ ಮಾಡಿ ತಡವಾಗಿ ಇಂದು ಠಾಣೆಗೆ ಬಂದಿರುತ್ತೇವೆ ಅಂತಾ ಅಜರ್ಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 33/2020 ಕಲಂ ಕಲಂ, 505(2), ಸಂ: 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!