ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 29/03/2020

By blogger on ಸೋಮವಾರ, ಮಾರ್ಚ್ 30, 2020

                 

                            ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 29/03/2020 
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 43/2020 ಕಲಂ 279, 304(ಎ) ಐಪಿಸಿ ಸಂ 187 ಐ.ಎಂ.ವಿ. ಕಾಯ್ದೆ:- ಇಂದು ದಿನಾಂಕ 29-03-2020 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾಧಿದಾರನಾದ ಶ್ರೀಮತಿ ಶರಣಮ್ಮ ಗಂಡ ಸಾಬಯ್ಯ ಕಲಾಲ ಸಾಃ ರಾಮಸಮುದ್ರ ಇವರು ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದೆನೆಂದರೆ ನಾನು ಮೇಲ್ಕಂಡ ವಿಳಸದ ನಿವಾಸಿಯಾಗಿದ್ದು ಮನೆಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, 
     ಹೀಗಿರುವಾಗ ಇಂದು ದಿನಾಂಕ 29/03/2020 ರಂದು ನನ್ನ ಗಂಡನಾದ ಸಾಬಯ್ಯ ತಂದೆ ಸಾಬಯ್ಯ ಕಲಾಲ ಮತ್ತು ನನ್ನ ಸೊಸೆಯಾದ ರಾಜೇಶ್ವರಿ ತಂದೆ ನರಸಿಂಗಪ್ಪ ಕಲಾಲ ಇಬ್ಬರೂ ಕೂಡಿಕೊಂಡು ಪಸಫೂಲ ಗ್ರಾಮದಿಂದ ನನ್ನ ನಾದಿನಿಯ ರೇಶನ್ ತೆಗೆದುಕೊಂಡು ಬರುವ ಕುರಿತು ನಮ್ಮ ಟಿ.ವಿ.ಎಸ್. ಎಕ್ಸೆಲ್ ನಂ ಕೆ.ಎ-33-ಡಬ್ಲ್ಯೂ-7663 ನೆದ್ದರ ಮೇಲೆ ಕುಳಿತುಕೊಂಡು ನಮ್ಮ ಮನೆಯಿಂದ ಬೆಳಿಗ್ಗೆ 9-30 ಗಂಟೆಗೆ ಹೋದರು, ಸ್ವಲ್ಪ ಸಮಯದ ನಂತರ ನಾನು, ನನ್ನ ಅಳಿಯ ನಾಗರಾಜ, ನನ್ನ ಅತ್ತೆ ಸೌರಮ್ಮ ಮತ್ತು ನನ್ನ ಮಕ್ಕಳು ಮನೆಯಲ್ಲಿರುವಾಗ ನನ್ನ ಸೊಸೆ ರಾಜೇಶ್ವರಿ ಇವಳು ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ನಾನು ಮತ್ತು ಮಾವ ಇಬ್ಬರೂ ನಮ್ಮ ಟಿ.ವಿ.ಎಸ್. ಎಕ್ಸೆಲ್ ಮೇಲೆ ಕುಳಿತುಕೊಂಡು ರಾಮಸಮುದ್ರ-ಅರಿಕೇರಾ(ಕೆ) ರೋಡಿನ ಮೇಲೆ ಹೋಗುವಾಗ ನಮ್ಮ ಹಿಂದುಗಡೆಯಿಂದ ಒಂದು ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ನಮ್ಮ ಟಿ.ವಿ.ಎಸ್. ಎಕ್ಸೆಲ್ಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ನಾನು ಮತ್ತು ಮಾವ ಇಬ್ಬರೂ ಸಿಡಿದು ಕೆಳಗಡೆ ಬಿದ್ದೆವು, ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರ ನಿಲ್ಲಿಸದೇ ಹಾಗೇ ಓಡಿಸಿಕೊಂಡು ಹೋಗಿರುತ್ತಾನೆ, ಆ ಟ್ರ್ಯಾಕ್ಟರದ ಮುಂದಿನ ಗಾಲಿಯು ನನ್ನ ಮಾವನ ಮೇಲೆ ಹಾಯ್ದು ಹೋಗಿ ಭಾರಿ ರಕ್ತಗಾಯಗಳು ಮತ್ತು ಗುಪ್ತಗಾಯಗಳು ಆಗ ಸ್ಥಳದಲ್ಲಿಯೇ ಸತ್ತಿರುತ್ತಾನೆ, ಈ ಅಪಘಾತವು ಇಂದು ಬೆಳಿಗ್ಗೆ 9-40 ಗಂಟೆಗೆ ನಡೆದಿರುತ್ತದೆ, ನೀವು ಬೇಗನೇ ಸ್ಥಳಕ್ಕೆ ಬಾ ಅಂತಾ ಹೇಳಿದ್ದರಿಂದ ಆಗ ನಾನು, ನನ್ನ ಅಳಿಯ ನಾಗರಾಜ, ನನ್ನ ಅತ್ತೆ ಸೌರಮ್ಮ ಮೂವರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಈ ಮೇಲಿನಂತೆ ಘಟನೆ ನಡೆದು ನನ್ನ ಗಂಡ ಸಾಬಯ್ಯ ತಂದೆ ಸಾಬಯ್ಯ ಕಲಾಲ ಇತನ ಎಡಗಲ್ಲದ ಹತ್ತಿರ ಭಾರಿ ರಕ್ತಗಾಯ, ತಲೆಗೆ ಭಾರಿ ಗುಪ್ತಗಾಯವಾಗಿ ಎಡಕಿವಿಯಿಂದ ರಕ್ತ ಬರುತ್ತಿತ್ತು, ಬಲಗೈ ಹಸ್ತದ ಮೇಲೆ, ಬಲಗೈ ಮುಂಡಕ್ಕೆ ಭಾರಿ ರಕ್ತಗಾಯ, ಎದೆಗೆ ಗುಪ್ತಗಾಯ ಮತ್ತು ಬಲಗಾಲು ಮೊಳಕಾಲು ಕೆಳಗೆ ಭಾರಿ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಸತ್ತಿದ್ದನು, ಅಪಘಾತ ಮಾಡಿದ ಟ್ರ್ಯಾಕ್ಟರದ ಇಂಜಿನದ ಚೆಸ್ಸಿ ನಂ ಆರ್ಇ0901037 ಅಂತಾ ಇದ್ದು, ಅದರ ಟ್ರ್ಯಾಲಿಗೆ ನಂಬರ ಇರುವದಿಲ್ಲ, ಮತ್ತು ಟ್ರ್ಯಾಕ್ಟರ ಚಾಲಕನ ಹೆಸರು ಮತ್ತು ವಿಳಾಸ ಗೋತ್ತಾಗಿರುವದಿಲ್ಲ, ಅವನ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 43/2020 ಕಲಂ 279, 304(ಎ) ಐಪಿಸಿ ಸಂ 187 ಐ.ಎಂ.ವಿ. ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.    

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 57/2020 ಕಲಂ: ಕಲಂ 188, 505[1][ಬಿ] ಐಪಿಸಿ ಮತ್ತು ಆಚಿಣಜಡಿ ಒಚಿಟಿಚಿರಜಟಜಟಿಣ ಂಛಿಣ-54;- ಇಂದು ದಿನಾಂಕ 29.03.2020 ರಂದು 6.45 ಪಿ.ಎಮ್ ಕ್ಕೆ ಪಿರ್ಯಾದಿ ಅಜರ್ಿದಾರರಾದ ಶ್ರೀ ಹಣಮಂತರಡ್ಡಿ ತಂದೆ ಬಸರಾಜಪ್ಪ ಮಾಲಿ ಪಾಟೀಲ ಕಂದಾಯ ನಿರೀಕ್ಷಕರು ಹುಣಸಗಿ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ದಿನಾಂಕ 28/03/2020 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ಆರೋಪಿತನಾದ ರೇವಣಸಿದ್ದಪ್ಪ ತಂದೆ ಮಾಳಪ್ಪ ಪೂಜಾರಿ ಸಾ|| ಅಮಲಿಹಾಳ ಈತನು ತನ್ನ ಮೋಬೈಲ ನಂಬರ 8496842151 ನೇದ್ದರ ಮೂಲಕ ಸಾಮಾಜಿಕ ಜಾಲತಾಣ ವ್ಯಾಟ್ಸಪ್ ಗ್ರುಪದಲ್ಲಿ ಯಡ್ಡಳ್ಳಿ ಗ್ರಾಮದ ಬೆಂಗಳೂರಿನಿಂದ ಬಂದ ಎರಡು ಜನರಲ್ಲಿ ಕರೋನಾ ಕೋವಿಡ್-19 ಸೊಂಕು ಹರಡಿರುತ್ತದೆ ಅಂತ ಸುಳ್ಳು ಸಂದೇಶ ಕಳುಹಿಸಿ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಉದ್ದೇಶದಿಂದ ಭಯ ಮತ್ತು ಆತಂಕ ಮೂಡಿಸುವಂತೆ ಮಾಡಿದ್ದು ಸದರ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 57/2020 ಕಲಂ 188, 505[1][ಬಿ] ಐಪಿಸಿ ಮತ್ತು ಆಚಿಣಜಡಿ ಒಚಿಟಿಚಿರಜಟಜಟಿಣ ಂಛಿಣ-54 ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 30/2020 ಕಲಂ: 323, 324 504 506 ಸಂ 34   ಕಅ;- ಇಂದು ದಿನಾಂಕ:29.03.2020 ರಂದು ಬೆಳಿಗ್ಗೆ 7:30 ಗಂಟೆಗೆ ನನಗೆ ಎಸ್ ಹೆಚ್ಓ ರವರು ಪೋನ್ ಮಾಡಿ ರಮೇಶ ತಂದೆ ಕಾನಪ್ಪ ರಾಠೋಡ ಸಾ: ರಾಜವಾಳ ತಾಂಡಾ ಇತನು ಜಗಳಲ್ಲಿ ಗಾಯ ಹೊಂದಿ ಉಪಚಾರಕ್ಕಾಗಿ ಸುರಪೂರ ಸಕರ್ಾರಿ ಆಸ್ಪತ್ರೆಗೆ ದಾಖಲಾಗಿದ್ದು ಸುರಪೂರ ಸಕರ್ಾರಿ ಆಸ್ಪತ್ರೆಗೆ ಹೋಗಿ ಸದರ ಎಮ್ ಎಲ್ಸಿ ವಿಚಾರಣೆ ಮಾಡಿಕೊಂಡು ಬರಲು ತಿಳಿಸಿದ್ದರಿಂದ ನಾನು ಸುರಪುರ ಸಕರ್ಾರಿ ಆಸ್ಪತ್ರೆಗೆ 9:00 ಗಂಟೆಗೆ ಹೋಗಿ ಸದರಿ ಗಾಯಾಳುವಿನ ಎಮ್ಎಲ್ಸಿ ಪಡೆದುಕೊಂಡು ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳು ರಮೇಶ ತಂದೆ ಖಾನಪ್ಪ ರಾಠೋಡ ವ:30 ವರ್ಷ ಜಾ: ಲಂಬಾಣಿ ಉ: ಒಕ್ಕಲುತನ ಸಾ: ರಾಜವಾಳ ತಾಂಡಾ ತಾ:ಹುಣಸಗಿ ಇವರಿಗೆ ಘಟೆಯ ಬಗ್ಗೆ ವಿಚಾರಿಸಿ ಸದರಿಯವರ ಹೇಳಿಕೆಯನ್ನು ಬೇಳಿಗ್ಗೆ 9:15 ಗಂಟೆಯಿಂದ 10:15 ಗಂಟೆಯ ವರೆಗೆ ಆಸ್ಪತ್ರೆಯಲ್ಲಿ ಪಡೆದುಕೊಂಡು ಸದರ ಪಿರ್ಯಾಧಿಯ ಹೇಳಿಕಯೊಂದಿಗೆ ಮರಳಿ ಠಾಣೆಗೆ 1:00 ಪಿಎಮ್ ಕ್ಕೆ ಬಂದಿದ್ದು. ಸದರ ಪಿರ್ಯಾಧಿಯ ಹೇಳಿಕೆ ಸಾರಾಂಶವೆನೆಂದರೆ ನಮ್ಮ ತಾಂಡಾದ ಜನರು ಹೊಟ್ಟೆ ಪಾಡಿಗಾಗಿ ಮಹಾರಾಷ್ಟ್ರ ಮತ್ತು ಗೋವಾ ಕಡೆಗೆ ದುಡಿಯಲಿಕ್ಕೆ ಕೂಲಿ ಕೆಲಸಕ್ಕಾಗಿ ಹೋಗಿದ್ದು ಈಗ ದೇಶದಾದ್ಯಂತ ಕೊರೊನಾ ಕೋವಿಡ್-19 ಮಾಹಾಮಾರಿ ರೋಗ ಹರಡಿದ್ದರಿದ ನಾನು ನಮ್ಮ 
ತಾಂಡಾದ ಜನರಿಗೆ ಮನಯಿಂದ ಹೊರಗೆ ಬರದಂತೆ ಅರಿವು ಮೂಡಿಸಿದ್ದು ಇರುತ್ತದೆ. 
ಹೀಗಿದ್ದು ನಿನ್ನೆ ದಿನಾಂಕ:28.03.2020 ರಂದು ನಾನು ನಮ್ಮ ತಾಂಡಾಕ್ಕೆ ಯಾರು ಹೊರಗಡೆಯಿಂದ ಕೊರೋನ ರೋಗಾ ಹರಡಿದ್ದರಿಂದ ಬರಬಾದೆಂದು ನಮ್ಮ ತಾಂಡಾದಿಂದ ಸ್ವಲ್ಪ ದೂರಲ್ಲಿ ರಾಜವಾಳಕ್ಕೆ ಹೋಗುವ ರಸ್ತೆ ಮೇಲೆ ಬೆಳಿಗ್ಗೆ 8:00 ಗಂಟೆಯ ಸುಮಾರಿಗೆ ಕಲ್ಲು ಮುಳ್ಳು ಹಾಕಿ ಬಂದು ಮಾಡಿದ್ದು. ನಂತರ ಸ್ವಲ್ಪ ಮುಂದೆ ಹೋಗಿ ನಾನು ನಮ್ಮ ತಾಂಡಾದ  ಗೋವಿಂದಪ್ಪ ತಂದೆ ಮುರಗಪ್ಪ ಇವರ ಹೊಲದಲ್ಲಿಯ ಮನೆಯ ಮುಂದೆ  ಬೆಳಿಗ್ಗೆ 9:30 ಗಂಟೆಯ ಸುಮಾರಿಗೆ ಇದ್ದಾಗ ನಮ್ಮ ತಾಂಡಾದ ಲಕ್ಷ್ಮಣ್ ನಾಯಕ  ತಂದೆ ಟೋಪಣ್ಣ ನಾಯಕ ರಾಠೋಡ, ರವಿ ತಂದೆ ಲಕ್ಷ್ಮಣ್ ನಾಯಕ ರಾಠೋಡ, ಗುಂಡುರಾವ ತಂದೆ ಸಕ್ರೆಪ್ಪ @ ಚಂಬು ರಾಠೋಡ, ಕೃಷ್ಣಪ್ಪ ತಂದೆ ಭೀಮಶೆಪ್ಪ @ ಮೂಲಿ ರಾಠೋಡ, ಇವರರೆಲ್ಲರೂ ಬಂದವರೆ ನನಗೆ ಕರೆದು ಈ ರೀತಿ ರಸ್ತೆ ಬಂದ ಮಾಡುವದು ಸರಿಯಲ್ಲ. ರಸ್ತೆಯ ಮೇಲೆ ಹಾಕಿದ ಕಲ್ಲು ಮುಳ್ಳು ತೆಗಿ ಅಂತ ಅಂದಿದ್ದು. ನಾನು ಅವರಿಗೆ ತಾಂಡಕ್ಕೆ ಹೊರಗಿನ ಜನ  ಮತ್ತು ವಾಹನಗಳು ಬರುತ್ತವೆ  ಇದರಿಂದ  ತಾಂಡಾದ ಜನರಿಗೆ ರೋಗ ಹರಡುವ ಸಂಬವ ಇದ್ದುದರಿಂದ ನಾನು ರಸ್ತೆಯನ್ನು ಬಂದ ಮಾಡಿದ್ದೇನೆ ಅಂತ ಅನ್ನುತ್ತಿವಾಗಲೇ, ಎಲ್ಲರೂ ನನಗೆ ಬೋಸಡಿ ಮಗನ್ಯಾ ರಸ್ತೆಯ ಮೇಲೆ ಹಾಖಿದ ಮುಳ್ಳು ತೆಗೆಯಲೇ ಅಂತಾ ಬೈಯ ಹತ್ತಿದ್ದು. ಆಗ ಅವರಲ್ಲಿಯ ಲಕ್ಷ್ಮಣ್ ನಾಯಕ ಇತನು ನನಗೆ ಸೊಳೆ ಮಗನ್ಯಾ ನೀನು ರಸ್ತೆ ಬಂದ ಮಾಡುವರಿಂದ ಜನರಿಗೆ ತೊಂದರೆಯಾಗುತ್ತದೆ ಅಂತ ಅಂದವನೇ ಕೈಯಿಂದ ನನ್ನ ಹೊಟ್ಟೆಯ ಮೇಲೆ ಗುದ್ದಿದ್ದು. ರವಿ ಇತನು ಅಲ್ಲಿಯೇ ಬಿದ್ದಿದ್ದ ಒಂದು ಕಟ್ಟಿಗೆಯನ್ನು ತೆಗೆದುಕೊಂಡು ತೆಲೆಯ ಮೇಲೆ ಹೊಡೆದಿದ್ದು ಇದರಿಂದ ನನ್ನ ತೆಲೆಗೆ ಒಳಪೆಟ್ಟಾಗಿದ್ದು. ಗುಂಡುರಾವ್ ಇತನು ಕಲ್ಲಿನಿಂದ ನನ್ನ ಬಲಗಾಲು ಮೊಳಕಾಳಿಗೆ ಹೊಡೆದು ಒಳ ಪೆಟ್ಟು ಮಾಡಿದ್ದು. ಗುಂಡುರಾವನು ಕೈಯಿಂದ ನನ್ನ ಕುತ್ತಿಗೆಯ ಮೇಲೆ ಹೊಡೆದು ಒಳ ಪೆಟ್ಟು ಮಾಡಿದ್ದು ಆಗ ನಾನು ಚಿರಾಡಲು ಅಲ್ಲಿಯೇ ಇದ್ದ ನಮ್ಮ ತಾಂಡಾದ ಹೀರಾಲಾಲ ತಂದೆ ಠಾಕ್ರೆಪ್ಪ ರಾಠೋಡ ಹಾಗೂ ಗೋಪಿಲಾಲ ತಂದೆ ಹಣಮಂತ ರಾಠೋಡ ಇವರುಗಳು ಬಂದು ನೋಡಿ ಬಿಡಿಸಿದ್ದು. ಇವರು ಬಂದು ಬಿಡಿಸದಿದ್ದರ ಮೇಲೆ ನಮೂದಿಸಿ ನಾಲ್ಕು ಜನರು ನಗೆ ಇನ್ನೂ ಹೊಡೆ-ಬಡೆ ಮಾಡುತ್ತಿದ್ದು ಹೋಗುವಾಗ ನಾಲ್ಕು ಜನರು ನನಗೆ ಸೊಳೆ ಮಗನ್ಯಾ ಇವತ್ತು ನಮ್ಮ ಕೈಯಲ್ಲಿ ಉಳಿದಿದದಿ ಇನ್ನೊಂದು ಸಲ ಸಿಕ್ಕರೆ ಜೀವಂತ ಬಿಡುವದಿಲ್ಲಾ ಅಂತ ಬೈದು ಹೋಗಿದ್ದು. ನಂತರ ನಾನು ಮನೆಗೆ ಹೋಗಿ ನನ್ನ ತಮ್ಮ ಶಾಂತಿಲಾಲನಿಗೆ ವಿಷಯ ತಿಳಿಸಿದ್ದು ಅವನು ನಿನ್ನೆ ದಿನ ಸಾಯಂಕಾಲ 6:55 ಗಂಟೆಗೆ ಇಲ್ಲಿಗೆ ಕರೆದುಕೊಂಡು ಬಂದು ನನಗೆ ಉಪಚಾರಕ್ಕಾಗಿ ಸೇರಿಕೆ ಮಾಡಿದ್ದು ನಾನು ಇನ್ನೂ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದು. ನನಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆ-ಬಡೆ ಮಾಡಿ ಜೀವದ ಬೇದರಿಕೆ ಹಾಕಿದ ಮೇಲೆ ನಮೂದಿಸಿದ 4 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ  ಪಿರ್ಯಾಧಿಯ ಹೇಳಿಕೆಯ  ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:30/2020 ಕಲಂ: 323 324 504 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು 

ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 17/2020  ಕಲಂ 279,  337, 338 ಐಪಿಸಿ  ಸಂ.187 ಐಎಂವಿ ಆ್ಯಕ್ಟ್:- ಇಂದು ದಿನಾಂಕ 29/03/2020 ರಂದು 7-45 ಪಿ.ಎಂ.ಕ್ಕೆ ಗಾಯಾಳು ಫಿಯರ್ಾದಿ  ಶ್ರೀ ಬಸವರಾಜ ತಂದೆ ಗುಂಡಪ್ಪ ರಾಜಾಪುರ ವಯ;66 ವರ್ಷ, ಉ; ನಿವೃತ್ತ ಎ.ಎಸ್.ಐ, ಜಾ;ಲಿಂಗಾಯತ್, ಸಾ;ಬಸವೇಶ್ವರ ನಗರ ಯಾದಗಿರಿ ರವರು ಠಾಣೆಗೆ ಹಾಜರಾಗಿ  ತಮ್ಮದೊಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ಪಿಯರ್ಾದು  ಕೊಟ್ಟಿದ್ದು ಪಿಯರ್ಾದಿ ಅಜರ್ಿಯ ಸಾರಾಂಶವೇನೆಂದರೆ ನಾನು ದಿನಾಂಕ 19/03/2020 ರಂದು ಬೆಳಿಗ್ಗೆ ಜಿಲ್ಲಾ ಕ್ರೀಡಾಂಗಣದ ಕಡಗೆ ವಾಯು ವಿಹಾರಕ್ಕೆ ಹೊರಟಿದ್ದಾಗ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಲೆ ಬರುವ ಗ್ರೀನ್ ಸಿಟಿ-ಡಾನ್ ಬೋಸ್ಕೋ ಶಾಲೆ ಮದ್ಯೆ ಬರುವ ಯಾದಗಿರಿ ಹಳ್ಳದ ಬ್ರಿಡ್ಜ್ ಮೇಲೆ ಯಾವುದೋ ಒಬ್ಬ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲನ್ನು ಯಾದಗಿರಿ ಕಡೆಯಿಂದ ವಾಡಿ ಕಡೆಗೆ ಹೊಗುತ್ತಿದ್ದಾಗ ತನ್ನ ಮೋಟಾರು ಸೈಕಲ್ನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ನನಗೆ ಹಿಂದಿನಿಂದ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದು ಆಗ ನಾನು ಬೋರಲಾಗಿ ರಸ್ತೆ ಮೇಲೆ ಬಿದ್ದಾಗ ಸದರಿ ಅಪಘಾತದಲ್ಲಿ ನನಗೆ ಬಲಗೈ ಮುಂಗೈ ಹತ್ತಿರ ಭಾರೀ ಗುಪ್ತಗಾಯ, ಎಡಭುಜಕ್ಕೆ ಭಾರೀ ಗುಪ್ತಗಾಯ, ತುಟಿಗೆ ರಕ್ತಗಾಯ, ಮೂಗಿಗೆ ರಕ್ತಗಾಯ, ಬಲಗಾಲಿನ ಮೊಣಕಾಲು ಹಿಂದುಗಡೆ  ತರಚಿದ ಗಾಯ, ಎಡಗಾಲು ಮೊಣಕಾಲಿಗೆ ರಕ್ತಗಾಯವಾಗಿದ್ದು ನನಗೆ ಅಪಘಾತಪಡಿಸಿದ ಮೋಟಾರು ಸೈಕಲ್ ಸವಾರನು ಸ್ವಲ್ಪ ದೂರ ಹೋಗಿ ಬಿದ್ದಿದ್ದು, ಆತನು ನನಗೆ ನೋಡಿ ಗಡಿಬಿಡಿ ಮಾಡುತ್ತಾ ತನ್ನ ಮೋಟಾರು ಸೈಕಲ್ ಚಾಲು ಮಾಡಿಕೊಂಡು ಘಟನಾ ಸ್ಥಳದಿಂದ ಓಡಿ ಹೋಗಿದ್ದು ಇರುತ್ತದೆ. ಆತನನ್ನು ಮತ್ತು ಆತನ ಮೋಟಾರು ಸೈಕಲನ್ನು ನಾನು ಮತ್ತೆ ನೋಡಿದಲ್ಲಿ ಗುತರ್ಿಸುತ್ತೇನೆ. ಅದೇ ರಸ್ತೆ ಮಾರ್ಗವಾಗಿ ಹೊರಟಿದ್ದ ನಮ್ಮ ಓಣಿಯ ಶ್ರೀ ಪ್ರಶಾಂತ ಹಾಗೂ ಬಾಬು ತಂದೆ ಸಂಗಪ್ಪ ಶೆಟ್ಟಿ ಇವರುಗಳು ಬಂದು ನನಗೆ ಅಪಘಾತದ ಬಗ್ಗೆ ವಿಚಾರಿಸಿದ್ದು ಇರುತ್ತದೆ ನನಗೆ ತಲೆಗೆ ಚಕ್ಕರ್ ಬಂದಾಂತಾಗುತ್ತಿದ್ದಾಗ ನನಗೆ ಉಪಚಾರ ಕುರಿತು ಪ್ರಶಾಂತ ಮತ್ತು ಬಾಬು ಇವರು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆತಂದು ಸೇರಿಕೆ ಮಾಡಿದ್ದು ಇರುತ್ತದೆ. ನಂತರ ಯಾದಗಿರಿ ಸಕರ್ಾರಿ ಆಸ್ಪತ್ರೆಯ ವೈದ್ಯರು ನನಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಕಳಿಸಿದಾಗ ನಾನು ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ಸೇರಿಕೆಯಾಗಿ ದಿನಾಂಕ 19/03/2020 ರಿಂದ 26/03/2020 ರ ವರೆಗೆ ಚಿಕಿತ್ಸೆ ಪಡೆದುಕೊಂಡಿದ್ದು ಇರುತ್ತದೆ. ಈ ಘಟನೆಯ ನಂತರ ನಾನು ಚಿಕಿತ್ಸೆ ಹೊಂದುವ ಸಲುವಾಗಿ ಕೇಸು ಕೊಡುವುದು ತಡವಾಗಿದ್ದು ಇರುತ್ತದೆ.        ಹೀಗಿದ್ದು ನನಗೆ ದಿನಾಂಕ 19/03/2020 ರಂದು 6 ಎ.ಎಂ.ಕ್ಕೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಲೆ ಬರುವ ಗ್ರೀನ್ ಸಿಟಿ-ಡಾನ್ ಬೋಸ್ಕೋ ಶಾಲೆ ಮದ್ಯೆ ಬರುವ ಯಾದಗಿರಿ ಹಳ್ಳದ ಬ್ರಿಡ್ಜ್ ಮೇಲೆ  ಯಾವುದೋ ಒಬ್ಬ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲನ್ನು  ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ನನಗೆ ಅಪಘಾತ ಮಾಡಿದ್ದು ಆತನ ಮೇಲೆ ಮುಂದಿನ ಕಾನುನು ಕ್ರಮ ಜರುಗಿಸಿರಿ ಅಂತಾ ವಿನಂತಿ ಅಂತಾ ನೀಡಿದ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 17/2020 ಕಲಂ 279, 337, 338 ಐಪಿಸಿ ಸಂಗಡ 187 ಐಎಂವಿ ಆ್ಯಕ್ಟ್  ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 55/2020 ಕಲಂ 188, 269, 270 ಐಪಿಸಿ:-ದಿನಾಂಕ 29.03.2020 ರಂದು ಪಿರ್ಯಾಧಿ ಠಾಣೆಗೆ ಹಾಜರಾಗಿ ದೂರು ಅಜರ್ಿ ಸಲ್ಲಿಸಿದ್ದು ಏನೆಂದರೆ ದಿನಾಂಕ 29.03.2020 ರಂದು ಬೆಳಿಗ್ಗೆ ಕರೋನ ಕೋವಿಡ್-19 ಸೊಂಕು ತಡೆಗಟ್ಟುವ ಬಗ್ಗೆ ಸಾರ್ವಜನಿಕರಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳುವಳಿಕೆ ನೀಡುವ ಕಾಲಕ್ಕೆ ಗ್ರಾಮಸ್ಥರಿಂದ ತಿಳಿದುಬಂದಿದ್ದೆನೆಂದರೆ ಕೆಲ ವ್ಯಕ್ತಿಗಳು ಗೃಹ ಕ್ವಾರಂಟಿನ ಬೆಂಗಳುರಿನಿಂದ ತಪ್ಪಿಸಿಕೊಂಡು ಬಂದಿರುತ್ತಾರೆ ಅಂತಾ ವಿಚಾರಣೆ ಕಾಲಕ್ಕೆ ಗೊತ್ತಾಗಿ ಸದರಿ ಆರೋಪಿತರು ಸಕರ್ಾರಿ ಆದೇಶವನ್ನು ಉಲ್ಲಂಘನೆ ಮಾಡಿ ಸಾರ್ವಜನಿಕ ಜೀವಕ್ಕೆ ಅಪಾಯಕಾರಿ ರೋಗದ ಸೊಂಕನ್ನು ಹರಡುವ ಸಾಧ್ಯತೆ ಇದೆ ಅಂತಾ ಗೊತ್ತಿದ್ದರು ಸಹ ನಿರ್ಲಕ್ಷದಿಂದ ಸದರಿ ಆರೋಪಿತರ ಗೃಹ ಕ್ವಾರಂಟೈನಿನಲ್ಲಿ ಇರದೆ ಸಸಾರ್ವಜನಿಕ ಸ್ಥಳಗಳಲ್ಲಿ ಮಾರಣಾಂತಿಕ ಮತ್ತು ಜೀವಕ್ಕೆ ಅಪಾಯಕಾರಿಯಾದ ರೋಗ ಹರಡುವ ಸಾಧ್ಯತೆ ಇದೆ ಅಂತಾ ಕಂಡು ಬಂದಿದ್ದರಿಂದ ಸದರಿ ಆರೋಪಿತರ ಮೇಲೆ ಕಾನೂನು ಕ್ರಮಕ್ಕಾಗಿ ವರದಿ ನೀಡಿದ್ದು ಇರುತ್ತದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!