ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 27/03/2020

By blogger on ಸೋಮವಾರ, ಮಾರ್ಚ್ 30, 2020

               


                         ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 27/03/2020  
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 32/2020 302, 201, 120 (ಬಿ) ಸಂ: 149 ಐಪಿಸಿ:- ಇಂದು ದಿನಾಂಕ 27/03/2020 ರಂದು 07.15 ಪಿಎಂ ಕ್ಕೆ ಅಜರ್ಿದಾರರಾದ ಶ್ರೀಮತಿ. ಸಿದ್ದಮ್ಮ ಗಂಡ ನಾಗಪ್ಪ ಸುರಪೂರ ವ:35 ಉ: ಕುರಿಕಾಯುವದು ಜಾ: ಕುರುಬರ ಸಾ: ಶೆಟ್ಟಿಕೇರಾ ಹಾ:ವ: ಮದ್ರಿಕಿ ತಾ; ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರ ಪಡೆಸಿದ್ದು, ಅದರ ಸಾರಂಶವೇನಂದರೆ, ನಾನು ಶ್ರೀಮತಿ ಸಿದ್ದಮ್ಮ ಗಂಡ ನಾಗಪ್ಪ ಸುರಪೂರ ವಯ 38 ವರ್ಷ ಉ: ಕುರಿಕಾಯುವುದು ಜಾತಿ: ಕುರುಬರ ಸಾ: ಶೆಟ್ಟಿಕೇರಾ ಹಾ:ವ: ಮದ್ರಿಕಿ ತಾ: ಶಹಾಪೂರ ಇದ್ದು ತಮ್ಮಲ್ಲಿ ವಿನಂತಿಸಿಕೊಳ್ಳುವುದೆನೆಂದರೆ ನಾನು ದಿನಾಂಕ 19-03-2020 ರಂದು 07.30 ಪಿ.ಎಂಕ್ಕೆ ಗೋಗಿ ಪೊಲೀಸ್ ಠಾಣೆಗೆ ಹಾಜರಾಗಿ ನನ್ನ ಗಂಡನಾದ ನಾಗಪ್ಪ ತಂದೆ ಹಣಮಂತ ಸುರಪೂರ ವಯ 38 ಸಾ: ಶೆಟ್ಟಿಕೇರಾ ಇತನು ಮೃತಪಟ್ಟ ಬಗ್ಗೆ ಅಜರ್ಿ ನೀಡಿದ್ದು ಸದರಿ ಅಜರ್ಿಯಲ್ಲಿ ನನ್ನ ಗಂಡ ಮೃತಪಟ್ಟಿದ್ದು ಮರಣದಲ್ಲಿ ಸಂಶಯವಿರುತ್ತದೆ ಅಂತ ಅಜರ್ಿ ನೀಡಿರುತ್ತೇನೆ. ನಾನು ಅಜರ್ಿ ನೀಡಿದ್ದರ ಮೇರೆಗೆ ಗೋಗಿ ಠಾಣೆ ಯು.ಡಿ.ಆರ್ ನಂ:05/2020 ಕಲಂ 174(ಸಿ) ನೆದ್ದು ದಾಖಲಾಗಿದ್ದು ಇರುತ್ತದೆ.
ಮುಂದುವರೆದು ಸದರಿ ನಾನು ದಿನಾಂಕ 27-03-2020 ರಂದು 7 ಎ.ಎಂಕ್ಕೆ ನನ್ನ ಗಂಡನ ಊರಾದ ಶೆಟ್ಟಿಕೇರಾ ಗ್ರಾಮದಲ್ಲಿದ್ದಾಗ ಅಲ್ಲಿ ನನಗೆ ಶೆಟ್ಟಿಕೇರಾ ಗ್ರಾಮದ ಸೋಪಣ್ಣ ತಂದೆ ರಾಮಣ್ಣ ಪೊಲೀಸ್ ಪಾಟೀಲ ಹಾಗೂ ನಿಂಗಪ್ಪ ತಂದೆ ಶಾಂತಗೌಡ ಪೊಲೀಸ್ ಪಾಟೀಲ್ ಇವರಿಂದ ತಿಳಿದು ಬಂದಿದ್ದೆನೆಂದರೆ ದಿನಾಂಕ 12-03-2020 ರಂದು ರಾತ್ರಿ 11 ಗಂಟೆ ಸುಮಾರಿಗೆ ನಾವು ನಮ್ಮಮನೆಯಲ್ಲಿದ್ದಾಗ ರೇಣುಕಮ್ಮ ಇವರ ಮನೆಯಿಂದ ನಿನ್ನ ಗಂಡ ನಾಗಪ್ಪ ಇತನು ಚೀರಾಡುವ ಸಪ್ಪಳ ಕೇಳಿ ರೇಣುಕಮ್ಮ ಮನೆ ಕಡೆ ಹೋಗಿ ನೋಡಲು ನಿನ್ನ ಗಂಡನಾದ ನಾಗಪ್ಪ ಇತನು ಕೊಲೆಯಾಗಿ ಬಿದ್ದಿದ್ದನು. ಅಲ್ಲಿ ಇದ್ದ ನಿಮ್ಮ ಅಣ್ಣತಮ್ಮಕೀಯ 1) ಭೀಮಣ್ಣ ತಂದೆ ಹಣಮಂತ ಸುರಪೂರ 2) ಸಾಯಬಣ್ಣ ತಂದೆ ಹಣಮಂತ ಸುರಪೂರ 3) ನಿಂಗಪ್ಪ ತಂದೆ ಹಣಮಂತ ಸುರಪೂರ ಹಾಗೂ ನಿಂಗಪ್ಪನ ಮಾವನಾದ 4) ಜೆಟ್ಟೆಪ್ಪ ತಂದೆ ಸಾಯಬಣ್ಣ ಸುರಪೂರ ಮತ್ತು 5) ರೇಣುಕಮ್ಮ ಗಂಡ ಭೀಮನಗೌಡ ಪೊಲೀಸ್ ಪಾಟೀಲ್ ಇವರು ಇವತ್ತಿಗೆ ನಾಗಪ್ಪನ ಕತೆ ಮುಗಿತು, ಇನ್ನು ರೇಲ್ವೆ ಇಲಾಖೆಯಿಂದ ಬರುವ ಹಣ ಎಲ್ಲರೂ ಸೇರಿ ನಾವು ಹಂಚಿಕೊಳ್ಳೋಣ ಅಂತ ಮಾತಾಡಿಕೊಳ್ಳುತ್ತಿದ್ದರು. ಅವರೆಲ್ಲರೂ ಕೂಡಿ ನಿನ್ನ ಗಂಡ ನಾಗಪ್ಪ ಇತನ ಕೊಲೆ ಮಾಡಿರುತ್ತಾರೆ. ನಾವು ಹೆದರಿ ನಮ್ಮ ಮನೆಗೆ ಹೋಗಿ ಮಲಗಿಕೊಂಡಿರುತ್ತೆವೆ. ನಂತರ ಶವವನ್ನು ಹೊಸಕೇರಾ ಪಕ್ಕದಲ್ಲಿರುವ ಕೆನಾಲದಲ್ಲಿ ಹಾಕಿದ್ದು ದಿನಾಂಕ 18-03-2020 ರಂದು ಸಿಕ್ಕಿರುತ್ತದೆ ಅಂತ ಗೊತ್ತಾಗಿರುತ್ತದೆ. ಇಷ್ಟು ದಿನ ನನಗೆ ಯಾಕೆ ತಿಳಿಸಲಿಲ್ಲಾ ಅಂತ ಕೇಳಿದಾಗ ನಾವು ಅಂಜಿ ಯಾರಿಗೂ ತಿಳಿಸಿರುವುದಿಲ್ಲಾ ಅಂತಾ ಹೇಳಿರುತ್ತಾರೆ. ಆಗ ನಾನು ವಿಚಾರಿಸಿದಾಗ ತಿಳಿದು ಬಂದಿದ್ದೆನೆಂದರೆ ನನ್ನ ಗಂಡನ ಅಣ್ಣತಮ್ಮಂದಿರು ಒಟ್ಟು ನಾಲ್ಕು ಜನರು ಇದ್ದು ಎಲ್ಲ ಅಣ್ಣತಮ್ಮಂದಿರು ಸೇರಿ ಈಗ 15 ವರ್ಷದ ಹಿಂದೆ ಹತ್ತಿಗೂಡುರು ಸಮೀಪ ಇರುವ ಒಟ್ಟು ಸುಮಾರು 16 ಎಕರೆ ಜಮೀನನ್ನು ಎಲ್ಲರೂ ಸಂಸಾರದಲ್ಲಿ ಕೂಡಿಯೇ ಇದ್ದಾಗ ಖರೀದಿ ಮಾಡಿದ್ದು ಇರುತ್ತದೆ. ಇದಾದ ನಂತರ ನನ್ನ ಮದುವೆ ಮುಂಚೆನೇ ನನ್ನ ಗಂಡನ ಅಣ್ಣತಮ್ಮಂದಿರು ಸಂಸಾರದಿಂದ ಬೇರೆಯಾಗಿದ್ದರಿಂದ ಎಲ್ಲಾ ಅಣ್ನತಮ್ಮಂದಿರಿಗೆ ಹತ್ತಿಗೂಡುರು ಹತ್ತಿರ ಇರುವ ಆಸ್ತಿಯಲ್ಲಿ ಒಟ್ಟು ತಲಾ 4 ಎಕರೆ ಭೂಮಿ ಪಾಲ ಬಂದಿದ್ದು ಎಲ್ಲರ ಹೆಸರಿನಲ್ಲಿ ಪೋಡಿ ಯಾಗಿದ್ದು ಇರುತ್ತದೆ. ಆದರೆ ಭೀಮಣ್ಣ ಹೆಸರಿನಲ್ಲಿದ್ದ ಬೂಮಿ ನನ್ನ ಗಂಡ ನಾಗಪ್ಪ ಇತನು ಕಬ್ಜಾದಲ್ಲಿ ಇರುತ್ತಾನೆ. ನನ್ನ ಗಂಡ ನಾಗಪ್ಪ ಹೆಸರಿನಲ್ಲಿದ್ದ ಭೂಮಿಯು ಭೀಮಣ್ಣ ಇತನು ಕಬ್ಜಾದಲ್ಲಿ ಇರುತ್ತಾನೆ.
ಅದರಂತೆ ನನ್ನ ಗಂಡನು ಭೀಮಣ್ಣ ಇತನ ಹೆಸರಿನಲ್ಲಿದ್ದ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಇದ್ದನು. ನಾಗಪ್ಪ ಇತನ ಹೆಸರಿನಲ್ಲಿದ್ದ ಭೂಮಿಯನ್ನು ಭೀಮಣ್ಣ ಇತನು ಸಾಗುವಳಿ ಮಾಡುತ್ತಿದ್ದನು. ಹೀಗಿದ್ದು ಮುಂದೆ ಎಂದಾದರೂ ಹೆಸರನ್ನು ಬದಲಾವಣೆ ಮಾಡಿಸಿದರಾಯಿತು ಅಂತ ಸುಮ್ಮನೇ ಇದ್ದು ಸಾಗುವಳಿ ಮಾಡಿಕೊಂಡು ಹೋಗುತ್ತಿದ್ದೇವು. ಸದರಿ ನನ್ನ ಗಂಡನ ಕಬ್ಜಾದಲ್ಲಿ ಇದ್ದ ಭೂಮಿಯಾದ ಭೀಮಣ್ಣ ಹೆಸರಿನಲ್ಲಿರುವ ಹೊಲದಲ್ಲಿ ಈಗ ಒಂದು ವರ್ಷದ ಹಿಂದೆ ರೇಲ್ವೆ ಇಲಾಖೆಯಿಂದ ರೇಲ್ವೆ ಹಳಿ ಹಾಯ್ದು ಹೋಗುತ್ತಿದ್ದರಿಂದ ಪರಿಹಾರ ಕುರಿತು ರೇಲ್ವೆ ಇಲಾಖೆಯಿಂದ ಅಂದಾಜು 40 ಲಕ್ಷ ರೂ ನನ್ನ ಗಂಡನ ಅಣ್ಣನಾದ ಭೀಮಣ್ಣ ತಂದೆ ಹಣಮಂತ ಇತನ ಹೆಸರಿನಲ್ಲಿ ಮಂಜೂರು ಆಗುತ್ತಿದೆ ಅಂತ ಗೊತ್ತಾಗಿರುತ್ತದೆ. ಆಗ ಭೀಮಣ್ಣ ಹಾಗೂ ಇನ್ನಿತರು ನನ್ನ ಗಂಡನಿಗೆ ಕೇಳಿ ಈಗ ರೆಲ್ವೆಇಲಾಖೆಯಿಂದ ಬರುವ ಹಣವನ್ನು ಎಲ್ಲರೂ ಹಂಚಿಕೊಳ್ಳೋಣ, ನಂತರ ಇನ್ನೊಮ್ಮೆ ಹೊಲ ಪಾಲ ಮಾಡೋಣ ಅಂತ ಅಂದಾಗ ಆಗ ನನ್ನ ಗಂಡ ಇಲ್ಲಾ ಈಗ ಬರುವ ಹಣ ನಾನು ಸಾಗುವಳಿ ಮಾಡುವ ಭೂಮಿಯಿಂದ ಬಂದಿರುತ್ತವೆ ನನಗೆ ಎಲ್ಲಾ ಹಣ ಬೇಕು ನಾನು ಯಾರಿಗೂ ಕೊಡುವುದಿಲ್ಲಾ ನನ್ನ ಕಬ್ಜಾದಲ್ಲಿ ಇರುವ ಭೂಮಿಯಲ್ಲಿ ರೇಲ್ವೆ ಹಳಿ ಹಾಯ್ದು ಹೋಗಿರುತ್ತದೆ. ಆದ್ದರಿಂದ ಭೀಮಣ್ಣ ಇತನ ಹೆಸರಿನಿಂದ ನಾಗಪ್ಪ ಹೆಸರಿನಲ್ಲಿ ಹಾಗೂ ನಾಗಪ್ಪನ ಹೆಸರಿನಲ್ಲಿದ್ದನ್ನು ಭೀಮಣ್ಣ ಹೆಸರಿಗೆ ಪಹಣಿ ಬದಲಾವಣೆಗೆ ಭೀಮಣ್ಣ ಒಪ್ಪದೇ ಸಹಿ ಮಾಡದೇ ಇದ್ದನು.
ಇದರಿಂದ ಈಗ ಒಂದು ತಿಂಗಳ ಹಿಂದೆ ಹತ್ತಿಗೂಡುರದಲ್ಲಿ ರೇಲ್ವೆ ಇಲಾಖೆಯಿಂದ ಮಂಜೂರು ಆಗುವ ಹಣ ಹಂಚಿಕೊಳ್ಳಲು ಮತ್ತು ಇನ್ನೊಂದು ಸಲ ಅಣ್ನತಮ್ಮಂದಿರ ನಡುವೆ ಹೊಲ ಪಾಲ ಮಾಡುವ ಸಂಬಂದ ಹತ್ತಿಗೂಡುರು ಗ್ರಾಮದ ಅಂಬೇಡ್ಕರ ಚೌಕ ಹತ್ತಿರ ಉಸ್ಮಾನಸಾಬ ಹತ್ತಿಗೂಡರು, ಚಂದ್ರು ಹತ್ತಿಗೂಡುರು, ಮೈಬೂಬಸಾಬ ಚೌದರಿ ಮೂಡಬೂಳ ಹಾಗೂ ಇನ್ನಿತರ ಸಮಕ್ಷಮದಲ್ಲಿ ನ್ಯಾಯ ಮಾಡಲು ಕುಳಿತಾಗ ನನ್ನ ಗಂಡನು ತಾನು ಸಾಗುವಳಿ ಮಾಡುವ ಕಬ್ಜದಾದಲ್ಲಿರುವ ಹೊಲಕ್ಕೆ ಸಂಬಂದಿಸಿದಂತೆ ರೇಲ್ವೆ ಇಲಾಖೆಯಿಂದ ಬರುವ ಹಣ ನಾನು ಕೊಡುವುದಿಲ್ಲಾ ಏನಾದರೂ ಆಗಲಿ ಅಂತ ಹೇಳಿ ನ್ಯಾಯಕ್ಕೆ ಒಪ್ಪದೇ ಮರಳಿ ಮನೆಗೆ ಬಂದು ನನಗೆ ತಿಳಿಸಿದ್ದು ಇರುತ್ತದೆ.

ಇದಾದ ನಂತರ ನನ್ನ ಗಂಡನು ಅಣ್ಣ ತಮ್ಮಂದಿರು ಬಿದ್ದಿರುವ ಹಠಕ್ಕೆ ಬೇಸತ್ತು ಅವನು ರೇಲ್ವೆ ಇಲಾಖೆಯ ಪರಿಹಾರ ಹಣ ನ್ಯಾಯಯುತವಾಗಿ ಸಿಕ್ಕರೆ ತನಗೆ ಸಿಗಬೇಕು, ತನ್ನ ಅಣ್ಣ ಭೀಮಣ್ಣ ಹಾಗೂ ಇತರ ಸೋದರು ಹಕ್ಕುದಾರರಲ್ಲಾ ಅಂತ ತನ್ನ ತಕರಾರನ್ನು ಹೊಂದಿದ್ದನು. ಸದರಿ ಹಣವು ಇಲ್ಲಿಯವರೆಗೆ ರೇಲ್ವೆ ಇಲಾಖೆಯವರಿಂದ ಯಾರಿಗೂ ಮಂಜೂರು ಆಗಿ ಬಂದಿರುವುದಿಲ್ಲಾ.
ದಿನಾಂಕ 12-03-2020 ರಂದು ನನ್ನ ಗಂಡನು ಶರಣಪ್ಪ ಕುರುಬರ ಹಾಗೂ ಹೊನ್ನಪ್ಪ ಕುರುಬರ ಇವರ ಜೊತೆ ಮದ್ರಿಕಿ ಸಿಮಾಂತರದಲ್ಲಿ ಕುರಿಗಳ ಜೊತೆ ಇದ್ದಾಗ ರಾತ್ರಿ 8 ಗಂಟೆ ಸುಮಾರಿಗೆ ಶೆಟ್ಟಿಕೇರಾ ಗ್ರಾಮದ ರೇಣುಕಾ ಇವಳು ಪೋನ ಮಾಡಿ ಕರೆಯುತ್ತಿದ್ದಾಳೆ ಹೋಗಿ ಬರುತ್ತೇನೆ ಅಂತ ಹೇಳಿ ಹೋಗಿರುತ್ತಾನೆ. ಆದರೆ ಇಲ್ಲಿಯವರೆಗೆ ಬಂದಿರುವುದಿಲ್ಲಾ ಅಂತಾ ನನಗೆ ಆ ಇಬ್ಬರು ಹುಡುಗರು ಸಹ ತಿಳಿಸಿರುತ್ತಾರೆ. ಆದ್ದರಿಂದ ರೇಲ್ವೆ ಇಲಖೆಯಿಂದ ಬರುವ ಪರಿಹಾರದ ಹಣವನ್ನು ನನ್ನ ಗಂಡನಿಗೆ ಸಿಗದ ಹಾಗೆ ಕೊಲೆ ಮಾಡಿದರೇ ಪೂತರ್ಿ ನಾವೇ ತೆಗೆದುಕೊಳ್ಳಬಹುದು ಅನ್ನುವ  ಕಾರಣದಿಂದ ನನ್ನ ಗಂಡನ ಅಣ್ಮತಮ್ಮಂದಿರು ಆದ 1) ಭೀಮಣ್ಣ ತಂದೆ ಹಣಮಂತ ಸುರಪೂರ 2) ಸಾಯಬಣ್ಣ ತಂದೆ ಹಣಮಂತ ಸುರಪೂರ 3) ನಿಂಗಪ್ಪ ತಂದೆ ಹಣಮಂತ ಸುರಪೂರ ನಿಂಗಪ್ಪನ ಮಾವನಾದ 4) ಜೆಟ್ಟೆಪ್ಪ ತಂದೆ ಸಾಯಬಣ್ಣ ನಾಯಿಕೋಡಿ ಇವರೆಲ್ಲರೂ ನನ್ನ ಗಂಡನ ಮೇಲೆ ವೈಷ್ಯಮ್ಯ ಬೆಳಸಿಕೊಂಡು ಹೇಗಾದರೂ ಮಾಡಿ ನನ್ನ ಗಂಡನಿಗೆ ಖಲಾಸ ಮಾಡಿದರಾಯಿತು ಅಂತ ಯೋಜನೆ ಮಾಡಿ ದಿನಾಂಕ 12-03-2020 ರಂದು ರಾತ್ರಿ ವೇಳೆಗೆ ನನ್ನ ಗಂಡನಾದ ನಾಗಪ್ಪ ಇತನು ಮದ್ರಿಕಿ ಗ್ರಾಮದಲ್ಲಿದ್ದಾಗ ನನ್ನ ಗಂಡನಿಗೆ ಶೆಟ್ಟಿಕೇರಾ ಗ್ರಾಮದ ರೇಣುಕಮ್ಮ ಇವಳು ಪೋನ ಮಾಡಿ ಊರಿಗೆ ಬಾ ಅಂತ ಪೋನ ಮಾಡಿದ್ದರಿಂದ ನನ್ನ ಗಂಡನು ಶೆಟ್ಟಿಕೇರಾ ಗ್ರಾಮದ ರೇಣುಕಾ ಗಂಡ ಭೀಮನಗೌಡ ಪೊಲೀಸ ಪಾಟೀಲ್ ಇವಳೊಂದಿಗೆ ನನ್ನ ಗಂಡ ಅನೈತಿಕ ಸಂಪರ್ಕದಲ್ಲಿದ್ದನ್ನು ಬಳಸಿಕೊಂಡು ಎಲ್ಲರೂ ಕೂಡಿ ಪ್ಲ್ಯಾನ ಮಾಡಿ ರೇಣುಕಮ್ಮ ಅವಳಿಗೆ ಒಪ್ಪಿಸಿ ಸಂಚು ಮಾಡಿ ಅವಳ ಕಡೆಯಿಂದ ನನ್ನ ಗಂಡನಿಗೆ ಪೋನ ಮಾಡಿಸಿ, ಮದ್ರಿಕಿ ಗ್ರಾಮದಿಂದ ಕರೆಯಿಸಿಕೊಂಡು ನನ್ನ ಗಂಡನಿಗೆ ಶೆಟ್ಟಿಕೇರಾ ಗ್ರಾಮದಲ್ಲಿ ರೇಣುಕಾ ಭೀಮನಗೌಢ ಪೊಲೀಸ್ ಪಾಟೀಲ್ ಇವರ ಮನೆಗೆ ಕರೆಯಿಸಿ ಎಲ್ಲರೂ ಕೊಲೆ ಮಾಡಬೇಕೆಂಬ ಉದ್ದೇಶದಿಂದ ನನ್ನ ಗಂಡನಿಗೆ 1) ಭೀಮಣ್ಣ ತಂದೆ ಹಣಮಂತ, ಸುರಪೂರ 2) ಸಾಯಿಬಣ್ಣ ತಂದೆ ಹಣಮಂತ, ಸುರಪೂರ 3) ನಿಂಗಪ್ಪ ತಂದೆ ಹಣಮಂತ ಸುರಪೂರ, ನಿಂಗಪ್ಪನ ಮಾವನಾದ 4) ಜೆಟ್ಟೆಪ್ಪ ತಂದೆ ಸಾಯಬಣ್ಣ ಇವರೆಲ್ಲರೂ ಕೂಡಿ ದಿನಾಂಕ 12-03-2020 ರಂದು ಸುಮಾರು 11 ಗಂಟೆ ಸುಮಾರಿಗೆ ಅವನಿಗೆ ಮನೆಯಲ್ಲಿ ಹೊಡೆದು ಕೊಲೆ ಮಾಡಿರುತ್ತಾರೆ. ನಂತರ ಶವವನ್ನು ಹೊಸಕೇರಾ ಗ್ರಾಮದ ಬಾಜು  ಇರುವ ಕೆನಾಲ ಬಾಜು ತಗ್ಗಿನಲ್ಲಿ ಮೋಟಾರ ಸೈಕಲ ಸಮೇತ ಹಾಕಿರುತ್ತಾರೆ.

      ಆದ್ದರಿಂದ ಸದರಿ ಘಟನೆಯ ಬಗ್ಗೆ ಅವರ ಮೇಲೆ ಕೊಲೆ ಕೇಸ್ ದಾಖಲಿಸಿ ಕಾನೂನು ಕ್ರಮ ಜರುಗಿಸಲು ಗೋಗಿ ಪೊಲೀಸ ಠಾಣೆಗೆ ನನ್ನ ಅಣ್ಣನಾದ ಮಾಳಪ್ಪ ತಂದೆ ನಿಂಗಪ್ಪ ಇವರಿಗೆ ಎಲ್ಲಾ ವಿಷಯವನ್ನು ತಿಳಿಸಿ ವಿಚಾರಿಸಿ ತಡಮಾಡಿ ಬಂದು ಇಂದು ಗೋಗಿ ಪೊಲೀಸ್ ಠಾಣೆಗೆ ಬಂದು ಅಜರ್ಿಯನ್ನು ನೀಡಿರುತ್ತೇನೆ. ಅಂತಾ ಸಾರಾಂಶದ ಮೇಲಿಂದ ಗೋಗಿ ಪೊಲೀಸ್ ಠಾಣೆ ಗುನ್ನೆ ನಂ: 32/2020 ಕಲಂ: 302, 201, 120(ಬಿ) ಸಂ: 149 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 34/2020 ಕಲಂ. 87 ಕೆ.ಪಿ ಎಕ್ಟ್ 1963 :- ಇಂದು ದಿನಾಂಕ; 27/03/2020 ರಂದು 12-00 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು-2) ಯಾದಗಿರಿ ನಗರ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ.27/03/2020 ರಂದು  11-00 ಎಎಮ್ ಕ್ಕೆ ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೈಲ್ವೇ ಕ್ವಾರ್ಟಸ್ ಗಾರ್ಡನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಭಾತ್ಮೀ ಬಂದಿದ್ದು ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.34/2020 ಕಲಂ.87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 35/2020 ಕಲಂ: 188 ಐಪಿಸಿ ಇಂದು ದಿನಾಂಕ; 27/03/2020 ರಂದು 8-45 ಪಿಮ್ ಕ್ಕೆ  ಶ್ರೀ ಗಿರೀಶ ವಿ. ರಾಯಕೋಟಿ ಕಂದಾಯ ನಿರಿಕ್ಷಕರು ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ;27/03/2020 ರಂದು ಕರೋನಾ ವೈರಸ ಹರಡದಂತೆ ಸಾರ್ವಜನಿಕರು ಗುಂಪುಗುಡದಂತೆ ಸಕರ್ಾರದ ಆದೇಶವಿದ್ದರು ಸಹಾ ಯಾದಗಿರಿ ನಗರದ ಗೋಗಿ ಮೊಹಲ್ಲಾದಲ್ಲಿ ಕೆಲವರು ಗುಂಪು ಸೇರಿ ಫ್ರಾಥನೆ(ನಮಾಜ) ಮಾಡುತ್ತಿರುವ ಭಾವಚಿತ್ರವೂ ಸಾಮಾಜಿಕ ಜಾಲತಾಣದಲ್ಲಿ (ಟ್ವೀಟರ) ಬಂದಿರುವುದರಿಂದ ಮಾನ್ಯ ತಹಸಿಲ್ದಾರರು ಯಾದಗಿರಿ ರವರು ಫ್ರರ್ಥನೆ (ನಮಾಜ) ಗುಂಪು ಗುಡಿದವರನ್ನು ಪರಿಶಿಲಿಸಿ ನಿಯಮಾನುಸಾರ ಕ್ರಮ ಕೈಕೊಳ್ಳಲು ನಿದರ್ೇಶಿಸಿರುವುದರಿಂದ ಫ್ರಾರ್ಥನೆ(ನಮಾಜ್) ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಕೊಳ್ಳಲು ಮಾನ್ಯರವರಲ್ಲಿ ವಿನಂತಿ ಅಂತಾ ಕೊಟ್ಟ ಅಜರ್ಿಯು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಪಿಸಿ-398 ರವರು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು 9-45 ಪಿಎಮ್ ಕ್ಕೆ ಪರವಾನಿಗೆ ಪತ್ರ ತಂದು ಹಾಜರುಪಡಿಸಿದ್ದು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.35/2020 ಕಲಂ.188 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 53/2020 ಕಲಂ 276, 336, 419 ಐಪಿಸಿ ಮತ್ತು ಕಲಂ 42 ಪಾರ್ಮಸಿ ಆಕ್ಟ್-1948:- ಇಂದು ದಿನಾಂಕ 27.03.2020 ರಂದು ಮಧ್ಯಾಹ್ನ 2.45 ಗಂಟೆಗೆ ಪಿರ್ಯಾಧಿ ಠಾಣೆಗೆ ಹಾಜರಾಗಿ ದೂರು ಅಜರ್ಿ ನೀಡಿದ್ದೆನೆಂದರೆ ಇಂದು ಬೆಳಿಗ್ಗೆ 11.30 ಗಂಟೆಗೆ ಪಿರ್ಯಾಧಿ ಮತ್ತು ಕರೋನ ಜಾಗೃತಿ ತಂಡದ ಇತರರು ಕೂಡಿ ಕರೋನ ಸೊಂಕು ನಿಯಂತ್ರಣ ಕುರಿತು ಜನರಲ್ಲಿ ತಿಳುವಳಿಕೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾಗ ಗುಂಜನೂರ ಗ್ರಾಮದ ಈಶ್ವರ ದೇವಸ್ಥಾನದ ಮುಂದೆ ಆರೋಪಿತನು ಹೋಮಿಯೊಪತಿ ವೈದ್ದನಿದ್ದು ಕರೋನ ಸೊಂಕು ನಿವಾರಣೆಗೆ ಔಷದಿಯನ್ನು ತಂದಿರುವುದಾಗಿ ಸುಳ್ಳು ಹೇಳುತ್ತ ಮತ್ತು ಯಾವುದೇ ಸಕರ್ಾರದಿಂದ ನಿಯಮಿಸಲ್ಪಟ್ಟ ವ್ಯಕ್ತಿಯಾಗಿರದೆ ಸಾರ್ವಜನಿಕನಿದ್ದು ತನ್ನ ವಶದಲ್ಲಿದ್ದ ಉಚಿತ ವಿತರಣೆ ಕರೋನ ರೋಗ ನಿವಾರಣೆಗೆ ಹೋಮಿಯೊಪತಿ ಔಷದ ಆಸರ್ೇನಿಯಮ್ ಅಲ್ಬಮ್-30 ಎಂಬ ಲೇಬಲವುಳ್ಳ ಪೇಪರನ ಚೀಲದಲ್ಲಿನ ಔಷದಿಯನ್ನ ಇನ್ನೊಬ್ಬ ಆರೋಪಿ ಎ2 ಈತನು ಹೇಳಿದಂತೆ ಸಾರ್ವಜನಿಕರ ಪ್ರಾಣ ಸುರಕ್ಷತೆಗೆ ಹಾನಿಯನ್ನುಂಟು ಮಾಡಲು ಯಾವುದೋ ಔಷದಿಯನ್ನ ಕರೋನ ರೋಗ ನಿವಾರಣೆಯ ಔಷದಿಯೆಂದು ಸಾರ್ವಜನಿಕರಿಗೆ ವಿತರಣೆ ಮಾಡುತ್ತಿದ್ದ ಬಗ್ಗೆ ಅಪರಾಧ.

                       
ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 39/2020 ಕಲಂ 279, 338 ಐ.ಪಿ.ಸಿ:- ದಿನಾಂಕ: 18/03/2020 ರಂದು 6.30 ಪಿಎಮ್ ಸುಮಾರಿಗೆ ಫಿಯರ್ಾದಿಯು ಮದ್ರಕಿ ಗ್ರಾಮದಿಂದ ತನ್ನ ಹೊಲಕ್ಕೆ ನಡೆದುಕೊಂಡು ಮದ್ರಕಿ ಕ್ರಾಸ ಕಡೆಗೆ ಫೂಲ ಹತ್ತಿರ ಹೊರಟಾಗ ಆರೋಪಿ ಶರಣಬಸಪ್ಪ ಕೋಟೆಖಾನಿ ಈತನು ಎದುರಿನಿಂದ ತನ್ನ ಮೋ/ಸೈ ನಂ ಕೆಎ: 33, ಎಕ್ಸ: 4871 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿ ನಡೆದುಕೊಂಡು ಹೊರಟಿದ್ದ ಫಿಯರ್ಾದಿಗೆ  ಅಪಘಾತಪಡಿಸಿ ಮೋಟರ್ ಸೈಕಲ್ದೊಂದಿಗೆ ಓಡಿ ಹೋಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಫಿಯರ್ಾದಿಗೆ ಎಡಗಾಲಿಗೆ ಭಾರಿ ಒಳಪೆಟ್ಟಾಗಿ ಎಲುಬು ಮುರಿದಿರುತ್ತದೆ. ಇಲ್ಲಿಯವರೆಗೆ ಉಪಚಾರ ಪಡೆದುಕೊಂಡು ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ದೂರು ನೀಡಿರುತ್ತೇನೆ ಅಂತ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಸೈದಾಪೂರ ಠಾಣೆ ಗುನ್ನೆ ನಂ;- 46/2020 ಕಲಂ 32,34 ಕೆ,ಇ ಯಾಕ್ಟ್ ಮತ್ತು 284  ಐಪಿಸಿ;- ಇಂದು ದಿನಾಂಕ: 27-03-2020 ರಂದು 06-30 ಪಿ.ಎಮ್ ಕ್ಕೆ ಸುವರ್ಣ ಪಿ.ಎಸ್.ಐ ರವರು ಜ್ಞಾಪನ ಪತ್ರದೊಂದಿಗೆ ಸಿಂಧಿ ಜಪ್ತಿಪಂಚನಾಮೆ ಮತ್ತು 32 ಲೀಟರ ಸಿಂಧಿಯನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 46/2020 ಕಲಂ. 32, 34 ಕೆ.ಇ ಕಾಯ್ದೆ ಮತ್ತು 284 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 81/2020 ಕಲಂ 32,34 ಕನರ್ಾಟಕ ಅಭಕಾರಿ ಕಾಯ್ದೆ 1965:- ಇಂದು ದಿನಾಂಕ: 27/03/2020 ರಂದು 8-50 ಪಿ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀ ಚೇತನ್ ಪಿ.ಎಸ್.ಐ. (ಕಾ&ಸು) ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲು ನೊಂದಿಗೆ ಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:27/03/2020 ರಂದು 7-15 ಪಿ.ಎಂ.ಕ್ಕೆ ದೇವಪೂರ ಕ್ರಾಸ್ ಹತ್ತಿರ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಅಲ್ಲಾಭಕ್ಷ ತಂದೆ ಸೋಪಿಸಾಬ್ ಗುತ್ತಪನವರ ಈತನು ಮದ್ಯ ಮಾರಾಟ ಮಾಡುವ ಪರವಾನಿಗೆ ಇಲ್ಲದೆ ಅಕ್ರಮವಾಗಿ ಒಂದು  ಪ್ಲಾಸ್ಟೀಕ ಚೀಲದಲ್ಲಿದ್ದ ಮದ್ಯವನ್ನು ಸಂಗ್ರಹಿಸಿ  ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವಾಗ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನಿಂದ 1) 180ಎಮ್ಎಲ್ನ 20 ಓಲ್ಡ್ ಟಾವರನ್ ವಿಸ್ಕಿ ಪೌಚಗಳಿದ್ದು ಪ್ರತಿಯೊಂದಕ್ಕೆ 74.13=00 ರೂಗಳಿದ್ದು ಒಟ್ಟು 1482.6=00 ರೂಗಳೂ, 2) 650ಎಮ್ಎಲ್ನ 9 ಕಿಂಗಪಿಷರ್ ಪ್ರಿಮಿಯಮ್ ಲೇಸರ್ ಬೀಯರ ಬಾಟಲಿಗಳು ಪ್ರತಿಯೊಂದಕ್ಕೆ 140=00 ರೂಗಳು ಒಟ್ಟು 1260/- ರೂ.ಗಳು, 3) 330ಎಮ್.ಎಲ್.ನ 22 ಕಿಂಗಫಿಶರ್ ಸ್ಟ್ರಾಂಗ್ ಪ್ರಿಮಿಯಮ್ ಬಿಯರ್ ಬಾಟಲಿಗಳು ಪ್ರತಿಯೊಂದಕ್ಕೆ 80=00 ರೂ.ಗಳಿದ್ದು ಒಟ್ಟು 1760=00 ರೂ.ಗಳು, 4) 90ಎಮ್.ಎಲ್.ನ 10 ಓಲ್ಡ್ ಟಾವರನ್ ವಿಸ್ಕಿ ಪೌಚಗಳಿದ್ದು ಪ್ರತಿಯೊಂದಕ್ಕೆ 45.10=00 ರೂಗಳಿದ್ದು ಒಟ್ಟು 451 ರೂ.ಗಳು ಹಾಗು 5)90 ಎಮ್.ಎಲ್. ನ 10 ಖೋಡೆಸ್ ಥ್ರಿಬಲ್ ಎಕ್ಷ್ ರಮ್ ಪೌಚಗಳು ಪ್ರತಿಯೊಂದಕ್ಕೆ 45.10 ರೂ.ಗಳಿದ್ದು ಒಟ್ಟು 451ರೂ.ಗಳು ಹೀಗೆ ಒಟ್ಟು 18,510 ಎಮ್ಎಲ್ನ ಮಧ್ಯವಿದ್ದು ಅದರ  ಒಟ್ಟು ಅ.ಕಿ 5404.6/-ರೂಗಳು ಮಧ್ಯವನ್ನು ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!