ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25/03/2020

By blogger on ಬುಧವಾರ, ಮಾರ್ಚ್ 25, 2020

   

                        ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25/03/2020 
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 44/2020 ಕಲಂ. 143,147,148,323,354,504,506 ಸಂಗಡ 149 ಐಪಿಸಿ:- ಇಂದು ದಿನಾಂಕ 25.03.2020  ರಂದು 12.30 ಪಿ.ಎಮ್.ಕ್ಕೆ ಅಜರ್ಿದಾರ ನೀಡಿದ ದೂರು ಅಜರ್ಿ ಸಾರಾಂಶವೆನೇಂದರೆ, , ನಮ್ಮೂರಿನಲ್ಲಿ ನಾವು ಎಲ್ಲ ಜಾತಿಯ ಜನರು ಸೇರಿ ಕರೆಮ್ಮ ದೇವಿ ಗುಡಿ ಕಟ್ಟುತ್ತಿದ್ದು ಆ ಸಂಬಂಧ ಮನೆಮನೆಗೆ ದೇಣಿಗೆ ಸಂಗ್ರಹ ಮಾಡುವ ಸಮಯದಲ್ಲಿ ನಮ್ಮುರಿನ ಹಣಮಂತು ಬಾಜುಲ ಇವರಿಗೂ ನನಗೂ ಬಾಯಿ ಮಾತಿನ ತಕರಾರು ಆಗಿರುತ್ತದೆ. ನಂತರ ದಿನಾಂಕ 20.03.2020 ರಂದು ರಾತ್ರಿ  8-00 ಗಂಟೆಗೆ ನಾನು ರಾಜೇಂದ್ರ ಅವರ ಹೊಟೆಲ ಹತ್ತಿರ ಚಹಾ ಕುಡಿಯುವದಕ್ಕೆ ಹೋದಾಗ ನಮ್ಮ ಊರಿನವರಾದ ಹಣಮಂತು ತಂದೆ ಹುಸೇನಪ್ಪ ಬಾಜುಲ್ ಇವರು ನನ್ನ ನೋಡಿ  ಸೂಳೇ ಮಗನೇ, ರಂಡೀ ಮಗನೇ ಅಂತ ಅವಾಚ್ಯವಾಗಿ ಬೈದಿದ್ದು ನನಗೆ ಯಾಕೆ ಬೈಯುತ್ತಿ ಅಂತ ಕೇಳುತ್ತಿರುವಾಗಲೇ ಅವರ ಮಕ್ಕಳಾದ ಬನ್ನಪ್ಪ, ವಸಂತಕುಮಾರ, ಶಂಕರ ಮತ್ತು ರವಿಕುಮಾರ  ಇವರು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಬಂದು ಬನ್ನಪ್ಪ ಈತನು ನನ್ನನ್ನು ಒದ್ದು ಕೆಳಗೆ ಬೀಳಿಸಿದ್ದು, ಜಗಳ ಬಿಡಿಸಲು ಬಂದ ನಮ್ಮ ಕಾಕನವರಾದ ಮಾಣಿಕಪ್ಪ ತಂದೆ ಬಾಲಪ್ಪ ಇವರಿಗೆ ವಸಂತಕುಮಾರ ಈತನು ಅವರ ಎದೆಯ ಭಾಗಕ್ಕೆ ಬಡಿಗೆ ತೆಗೆದುಕೊಂಡು ಹೊಡೆದು ಗುಪ್ತಗಾಯ ಮಾಡಿರುತ್ತಾನೆ. ನನ್ನ ಹೆಂಡತಿಯಾದ ನವನೀತಾ ಇವರಿಗೆ ಶಂಕರ ಈತನು ಕೈ ಹಿಡಿದು ಎಳೆದಾಡಿ ಅವಮಾನ ಮಾಡಿರುತ್ತಾನೆ. ರವಿಕುಮಾರ ಈತನು ಮಕ್ಕಳೇ ನಿಮಗೆ ಜೀವಸಹಿತ ಬಿಡುವದಿಲ್ಲ ನಿಮ್ಮ ಜೀವ ತೆಗೆಯುತ್ತೇವೆ ಅಂತ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿರುತ್ತಾನೆ.  ಸಾರಾಂಶ ಇದ್ದು ಸದರಿ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆಯ ಗುನ್ನೆ ನಂ.44/2020 ಕಲಂ 143,147,148,323,354,504,506 ಸಂಗಡ 149 ಐಪಿಸಿ ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು,

ಶೊರಾಪೂರ ಪೊಲೀಸ ಠಾಣೆ ಗುನ್ನೆ ನಂ:- 73/2020 ಕಲಂ  188 ಐಪಿಸಿ ಮತ್ತು ಕಲಂ 79, 80 ಕೆ.ಪಿ. ಕಾಯ್ದೆ  :- ಇಂದು ದಿನಾಂಕ: 25/03/2020 ರಂದು 7 ಪಿ.ಎಮ್. ಕ್ಕೆ ಶ್ರೀ ಎಸ್ ಎಮ್ ಪಾಟೀಲ ಪಿ.ಐ ಸಾಹೇಬರು ಸುರಪೂರ ಪೊಲೀಸ್ ಠಾಣೆ ರವರು 11 ಜನ ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ಠಾಣೆಗೆ ಬಂದು ವರದಿ ಸಾರಾಂಶವೆನಂದರೆ, ಮಾನ್ಯ ಗೌರವಾನ್ವಿತ ಪ್ರಧಾನ ಮಂತ್ರಿಗಳು ಭಾರತ ಸರಕಾರ ರವರು ದೇಶಾದ್ಯಾಂತ ಕೋವಿಡ್-19 ಕರೋನಾ ವೈರಾಣುವಿನಿಂದಾಗಿ ಸಂಬವಿಸಬಹುದಾದ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ದಿನಾಂಕ:25/03/2020 ರಿಂದ 14/04/2020 ರವರ ವರೆಗೆ ಭಾರತ ದೇಶಾದ್ಯಾಂತ ಲಾಕ್ ಡೌನ್ ಅಂದರೆ ಕಲಂ: 144 ಸಿ.ಆರ್.ಪಿ.ಸಿ ಅಡಿಯಲ್ಲಿ ಕಪ್ಯರ್ೂಜಾರಿಗೊಳಿಸಿದ್ದು ಇರುತ್ತದೆ. ಅದರಂತೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಜಿಲ್ಲೆಯಲ್ಲಿ ಒಂದು ಅಥವಾ ಎರಡಕ್ಕಿಂತ ಹೆಚ್ಚುಮಂದಿ ಒಂದೆಕಡೆಯಲ್ಲಿ ಸೇರದಂತೆ ಮತ್ತು ಜಿಲ್ಲೆಯಲ್ಲಿ ತೀವೃ ಅವಶ್ಯಕ ಕೆಲಸಗಳಿಗೆ ಹೊರತುಪಡಿಸಿ ಜನರಿಗೆ ಮನೆಯಿಂದ ಹೊರಬರದಂತೆ ಆಧೇಶಿಸಿದ್ದು ಇರುತ್ತದೆ. ಇಂದು ದಿನಾಂಕ:25/03/2020 ರಂದು ಸುರಪೂರ ನಗರದಲ್ಲಿ ನಾನು ಕೋವಿಡ್-19 ವೈರಾಣುವಿನ ತಡೆಗಟ್ಟು ಮುನ್ನೆಚ್ಚರಿಕಾ ಕಾರ್ಯಕ್ರಮಗಳ ಕರ್ತವ್ಯದಲ್ಲಿದ್ದಾಗ 4:30 ಪಿ.ಎಂ ಸುಮಾರಿಗೆ ಸುರಪುರ ನಗರದ ಸಿದ್ದಾರ್ಥ ಲಾಡ್ಜ ರೂಮ್ ನಂ.216 ರಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ದಾಳಿ ಮಾಡುವ ಕುರಿತು ಮಾನ್ಯ ಡಿ.ಎಸ್.ಪಿ ಸಾಹೇಬರ ಸುರಪೂರ ರವರಿಗೆ ಸರ್ಚ ವಾರೆಂಟ ಹೊರಡಿಸಲು ಕೇಳಿಕೊಂಡ ಮೆರೆಗೆ, ಮಾನ್ಯ ಡಿ.ಎಸ್.ಪಿ ಸಾಹೇಬರು ಸುರಪುರ ರವರು ಸಾಯಂಕಾಲ 5 ಪಿಎಂಕ್ಕೆ ಸರ್ಚವಾರೆಂಟ ಹೊರಡಿಸಿದ ಮೇರೆಗೆ, ನಾನು ಮತ್ತು ಶ್ರೀ ಚೇತನ್ ಪಿ.ಎಸ್.ಐ (ಕಾ&ಸೂ) ಹಾಗೂ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ದೇವಿಂದ್ರಪ್ಪ ಸಿಪಿಸಿ-184 3) ಶ್ರೀ ಜಗದಿಶ ಸಿಪಿಸಿ-335 4) ಶ್ರೀ ಶರಣಗೌಡ ಸಿಪಿಸಿ-218 5) ದಯಾನಂದ ಪಿ.ಸಿ 337 6) ಮಂಜುನಾಥ ಸಿಪಿಸಿ-271 ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ಪ್ರಕಾಶ ತಂದೆ ಮರೆಪ್ಪ ಹಳ್ಳಿಗಿಡ ವ|| 28 ವರ್ಷ ಜಾ|| ಬೇಡರ ಉ|| ಕೂಲಿ ಕೆಲಸ ಸಾ|| ಮ್ಯಾಗೇರಿ ಓಣಿ ಸುರಪುರ 2) ಶ್ರೀ ಹುಸೇನ ಪಾಶಾ ತಂದೆ ಹುಸೇನಸಾಬ ಮುಜಾವರ ವ|| 44 ವರ್ಷ ಜಾ|| ಮುಸ್ಲಿಂ ಉ|| ಕೂಲಿ ಕೆಲಸ ಸಾ|| ಕುಂಬಾರಪೇಟ ಸುರಪುರ ಇವರನ್ನು 5:15 ಪಿ.ಎಂ ಕ್ಕೆ ಸುರಪೂರ ಬಸ್ ನಿಲ್ದಾಣದ ಹತ್ತಿರ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 5:20 ಪಿ.ಎಮ್ ಕ್ಕೆ ಒಂದು ಖಾಸಗಿ ವಾಹನ ನೇದ್ದರಲ್ಲಿ ಹೊರಟು 5:25 ಪಿ.ಎಮ್ ಕ್ಕೆ ಸುರಪುರ ನಗರದ ಸಿದ್ದಾರ್ಥ ಲಾಡ್ಜ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ರೂಮ್ ನಂ.216 ರಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 5:30 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿ ಒಟ್ಟು 11 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ರಾಘವೇಂದ್ರ ತಂದೆ ಮನೋಹರ ಜೇವಗರ್ಿ ವ|| 35 ವರ್ಷ ಜಾ|| ಬೆಡರ ಉ|| ಕೂಲಿ ಕೆಲಸ ಸಾ|| ಮ್ಯಾಗೇರಿ ಓಣಿ ಸುರಪುರ ಇವನ ಹತ್ತಿರ 2200/- ರೂಗಳು ದೊರೆತವು 2) ರಾಕೇಶ ತಂದೆ ನಾರಾಯಣ ಸುಣ್ಣದಮನಿ ವ|| 28 ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ಮ್ಯಾಗೇರಿ ಓಣಿ ಸುರಪುರ ಇವನ ಹತ್ತಿರ 2500/- ರೂಗಳು ದೊರೆತವು 3) ನಾಗೇಶ ತಂದೆ ಮಾಣಿಕರಾವ್ ಮಾಳದಕರ ವ|| 26 ವರ್ಷ ಜಾ|| ಮರಾಠ ಉ|| ಒಕ್ಕಲುತನ ಸಾ|| ರಂಗಮಪೇಠ್ ಸುರಪುರ ಇವನ ಹತ್ತಿರ 3000/- ರೂಗಳು ದೊರೆತವು 4) ಕೊಂಡಪ್ಪ ತಂದೆ ತಿಪ್ಪಣ್ಣ ಪ್ಯಾಪಲಿ ವ|| 26 ವರ್ಷ ಜಾ|| ಬೇಡರ ಉ|| ಕೂಲಿಕೆಲಸ ಸಾ|| ಉಪ್ಪಾರ ಮೊಹಲ್ಲಾ ಸುರಪೂರ ಇವನ ಹತ್ತಿರ 1900/- ರೂಗಳು ದೊರೆತವು 5) ವಿವೇಕ ತಂದೆ ಸೂಲಪ್ಪ ಕಮತಗಿ ವ|| 33 ವರ್ಷ ಜಾ|| ಕುರಬರ ಉ|| ಕೂಲಿ ಕೆಲಸ ಸಾ|| ಹಸನಾಪುರ ಇವನ ಹತ್ತಿರ 1800/- ರೂಗಳು ದೊರೆತವು 6) ಹಣಮಂತ ತಂದೆ ಯಂಕಪ್ಪ ನಗರಕಾನೆ ವ|| 40 ವರ್ಷ ಜಾ|| ಬೇಡರ ಉ|| ಕೂಲಿ ಕೆಲಸ ಸಾ|| ಉಪ್ಪಾರ ಮೋಹಲ್ಲಾ ಸುರಪೂರ ಇವನ ಹತ್ತಿರ 1500/- ರೂಗಳು ದೊರೆತವು 7) ಹಣಮಂತ ತಂದೆ ದುರ್ಗಪ್ಪ ಕುರಕುಂದಿ ವ|| 27 ವರ್ಷ ಜಾ|| ಬೇಡರ ಉ|| ಕೂಲಿಕೆಲಸ ಸಾ|| ಮ್ಯಾಗೇರಿ ಒಣಿ ಸುರಪುರ ಇವನ ಹತ್ತಿರ 1700/- ರೂಗಳು ದೊರೆತವು 8) ಬನದೇಶ್ವರ ತಂದೆ ಶರಣಯ್ಯಸ್ವಾಮಿ ಹಿರೇಮಠ ವ|| 38 ವರ್ಷ ಜಾ|| ಜಂಗಮ ಉ|| ಕೂಲಿ ಕೆಲಸ ಸಾ|| ಕುಂಬಾರಪೇಟ ಸುರಪುರ ಇವನ ಹತ್ತಿರ 1800/- ರೂಗಳು ದೊರೆತವು 9) ಮದುಸುದ್ದನ್ ತಂದೆ ಚನ್ನಪ್ಪ ಸುಣ್ಣದಮನಿ ವ|| 19 ವರ್ಷ ಜಾ|| ಬೇಡರ ಉ|| ಕೂಲಿಕೆಲಸ ಸಾ|| ಉಪ್ಪಾರಮೊಹಲ್ಲಾ ಸುರಪುರ ಇವನ ಹತ್ತಿರ 1500/- ರೂಗಳು ದೊರೆತವು 10) ಮುರಳಿ ತಂದೆ ಶೆಂಕ್ರೆಪ್ಪ ಸಪ್ಪಂಡಿ ವ|| 34 ವರ್ಷ ಜಾ|| ಲಿಂಗಾಯತ ಉ|| ಕಿರಾಣಿ ವ್ಯಾಪಾರ ಸಾ|| ರಂಗಮಪೇಟ್ ಸುರಪುರ ಇವನ ಹತ್ತಿರ 1600/- ರೂಗಳು ದೊರೆತವು 11) ರೆಡ್ಡಿ ತಂದೆ ವಿಶ್ವನಾಥರೆಡ್ಡಿ ತೆಗ್ಗಿನಮನಿ ವ|| 26 ವರ್ಷ ಜಾ|| ಲಿಂಗಾಯತರೆಡ್ಡಿ ಉ|| ಒಕ್ಕಲುತನ ಸಾ|| ರಾಜನಕೊಳ್ಳುರ ಇವನ ಹತ್ತಿರ 2000/- ರೂಗಳು ದೊರೆತವು ಇದಲ್ಲದೆ ಪಣಕ್ಕೆ ಇಟ್ಟ ಹಣ 9600/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 31,100/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಆರೋಪಿತರಿಗೆ ವಿಚಾರಿಸಲಾಗಿ ಸಿದ್ದಾರ್ಥ ಲಾಡ್ಜ ಮಾಲಿಕ ಆಡಿಸುತ್ತಿದ್ದಾನೆ ಅಂತಾ ತಿಳಿಸಿದರು. ಸದರಿ ಜಪ್ತಿ ಪಂಚನಾಮೆಯನ್ನು 5:30 ಪಿ.ಎಮ್ ದಿಂದ 6:30 ಪಿ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ.
ನಂತರ 11 ಜನ ಆರೋಪಿತರೊಂದಿಗೆ ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು, ಕಾರಣ ಜಿಲ್ಲ್ಲೆಯಲ್ಲಿ ಕಲಂ:144 ಸಿ.ಆರ್.ಪಿ.ಸಿ ಅಡಿಯಲ್ಲಿ ಕಪ್ಯರ್ೂಜಾರಿಯಲ್ಲಿದ್ದರು ಕೂಡಾ ಮಾನ್ಯ ಜಿಲ್ಲಾಧಿಕಾರಿಗಳ ಆಧೇಶವನ್ನು ಉಲ್ಲಂಘನೆ ಮಾಡಿ ಒಂದೆಡೆಯಲ್ಲಿ ಅಕ್ರಮವಾಗಿ ಜೂಜಾಟ ಆಡಿಸುತ್ತಿದ್ದ ಮತ್ತು ಆಡಿದ ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ. ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!