ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/03/2020

By blogger on ಮಂಗಳವಾರ, ಮಾರ್ಚ್ 24, 2020



                        ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/03/2020 
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 33/2020 ಕಲಂ: 188 ಐಪಿಸಿ:- ಇಂದು ದಿನಾಂಕ; 24/03/2020 ರಂದು 2-15 ಪಿಎಮ್ ಕ್ಕೆ ಶ್ರೀ ಶಂಕರಗೌಡ ಸೋಮನಾಳ ಮಾನ್ಯ ಸಹಾಯಕ ಆಯುಕ್ತರು ಯಾದಗಿರಿ ಉಪವಿಭಾಗ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ;24/03/2020 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ಯಾದಗಿರಿ ನಗರದಲ್ಲಿ ಅನುಷ್ಠಾನಧಿಕಾರಿಯಾಗಿ ತೀರುಗಾಡುತ್ತಿರುವಾಗ ಹತ್ತಿಕುಣಿ ರಸ್ತೆಯಲ್ಲಿರುವ ಶ್ರೀ ಮಂಜುನಾಥ ಆಗ್ರೋ ಏಜೆನ್ಸಿ ಮಳಿಗೆಯ ಮಾಲಿಕನು ಅಂಗಡಿಯನ್ನು ಮುಚ್ಚದೇ ಸಾರ್ವಜನಿಕವಾಗಿ ತೆರೆದು ಜಿಲ್ಲಾ ದಂಢಾದಿಖಾರಿಗಳ ಮಾಡಿದ ಆಧೇಶವನ್ನು ಉಲ್ಲೇಂಘಿಸಿ ತನ್ನ ಸ್ವಂತ ಲಾಭಕ್ಕಾಗಿ ಸಾರ್ವಜನಿಕ ಸ್ವಾಶ್ಥ್ಯವನ್ನು ಕಾಪಾಡಲು ಅನುಸರಿಸಲು ವಿಫಲನಾಗಿ ಉದ್ದೇಶಪೂರ್ವಕವಾಗಿ ಅಂಗಡಿ ತೆರೆದು ಆಧೇಶವನ್ನು ಪಾಲಿಸಿರುವುದಿಲ್ಲಾ ಈ ಅಂಗಡಿಯ ಮಾಲಿಕನ ಮೇಲೆ ಐಪಿಸಿ ಕಲಂ.188 ರ ಅಡಿ ಪ್ರಕರಣ ದಾಖಲಿಸಿಕೊಳ್ಳಲು ಈ ವರದಿ ನೀಡಿದೆ.  ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.33/2020 ಕಲಂ. 188 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 40/2020 ಕಲಂ 379, 114, ಸಂಗಡ 34  ಐಪಿಸಿ:-ಇಂದು ದಿನಾಂಕ 24-03-2020 ರಂದು 12-30 ಪಿ.ಎಮ್ ಕ್ಕೆ ಶ್ರೀ ಶರಣಗೌಡ ನ್ಯಾಮಣ್ಣವರಸಿಪಿಐ ಯಾದಗಿರಿ ವೃತ್ತ ಯಾದಗಿರಿ ಇವರು ಒಂದು ಉಸುಕು ತುಂಬಿದ ಟ್ರ್ಯಾಕ್ಟರ ಹಾಗೂ ಒಬ್ಬ ಆರೋಪಿಯನ್ನು ತಮ್ಮ ವರದಿಯೊಂದಿಗೆ ಠಾಣೆಗೆ ಬಂದು ಹಾಜರುಪಡಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ  ಇಂದು ದಿನಾಂಕ 24-03-2020 ರಂದು 10-30 ಎ.ಎಮ್ ಕ್ಕೆ ನಾನು ಕಚೇರಿಯಲ್ಲಿದ್ದಾದ ನನಗೆ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ರಾಮಸಮುದ್ರ ಗ್ರಾಮದ ಕಡೆಯಿಂದ ಯಾರೋ ಟ್ರ್ಯಾಕ್ಟರದಲ್ಲಿ ಅನಧೀಕೃತವಾಗಿ ಕಳ್ಳತನದಿಂದ ಉಸುಕು ಕಳುವು ಮಾಡಿಕೊಂಡು ಯಾದಗಿರಿ ಕಡೆಗೆ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದಿದ್ದು ಅಲ್ಲಿಗೆ ಹೋಗಿ ದಾಳಿ ಮಾಡುವ ಸಲುವಾಗಿ ನಮ್ಮ ಕಚೇರಿಯ ಸಿಬ್ಬಂದಿಯವರಾದ ಶ್ರೀ ಸೈದಪ್ಪಾ ಹೆಚ್.ಸಿ-34 ಮತ್ತು ಅಂಬರೀಷ ಎ.ಹೆಚ್.ಸಿ-47 ಇವರನ್ನು ನನ್ನ ಜೋತೆಗೆ ಕರೆದುಕೊಂಡು ನಮ್ಮ ಕಚೇರಿ ಜೀಪ ನಂ: ಕೆ.ಎ-33/ಜಿ-161 ನೆದ್ದರಲ್ಲಿ ಯಾದಗಿರಿ ವೃತ್ತ ಕಚೇರಿಯಿಂದ 10-15 ಎ.ಎಮ್ ಕ್ಕೆ ರಾಮಸಮುದ್ರ ಕಡೆಗೆ ಹೊರಟು 11-15 ಎ.ಎಮ್ ಕ್ಕೆ ರಾಮಸಮುದ್ರ ಗ್ರಾಮದ ಸಮೀಪ ಎಲ್&ಟಿ ಕಂಪನಿಯ ಪೈಪಲೈನ್ ಕಾಮಗಾರಿ  ನಡೆಯುವ ಸ್ಥಳದಿಂದ ಸ್ವಲ್ಪ ದೂರ ಮರೆಯಲ್ಲಿ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ರಾಮಸಮುದ್ರ ಗ್ರಾಮದ ಕಡೆಯಿಂದ ಬರುವ ಎಲ್ಲಾ ವಾಹನಗಳನ್ನು ಗಮನಿಸುತ್ತಾ ನಿಂತಾಗ 11-30 ಎ.ಎಮ್  ಸುಮಾರಿಗೆ ಮೈಲಾಪೂರ ಕಡೆಯಿಂದ ಒಂದು ಟ್ರ್ಯಾಕ್ಟರನಲ್ಲಿ ಉಸುಕು ತುಂಬಿಕೊಂಡು ಬಂದು ನೇರವಾಗಿ ಎಲ್&ಟಿ ಕಂಪನೀಯ ಪೈಪಲೈನ್ ನಡೆಯುವ ಸ್ಥಳಕ್ಕೆ ಹೋಗಿದ್ದು ನಮಗೆ ಆ ವಾಹನದ ಮೇಲೆ ಸಂಶಯ ಬಂದಾಗ ಎಲ್ಲರೂ ಸದರಿ ಟ್ರ್ಯಾಕ್ಟರ ಹತ್ತರಿ ಹೋಗುತ್ತಿದ್ದಂತೆ ಅದರ ಚಾಲಕನು ನಮ್ಮನ್ನು ನೋಡಿ ಟ್ರ್ಯಾಕ್ಟರನ್ನು ಅಲ್ಲಿಯೇ ನಿಲ್ಲಿಸಿ ತಾನು ಟ್ರ್ಯಾಕ್ಟರದಿಂದ ಇಳಿದು ನಮ್ಮಿಂದ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋದನು. ಟ್ರ್ಯಾಕ್ಟರ ಟ್ರೈಲಿಯಲ್ಲಿ ಒಬ್ಬನು ವ್ಯಕ್ತಿ ಕುಳಿತಿದ್ದು ಆತನಿಗೆ ವಿಚಾರಿಸಲು ಅವನು ತನ್ನ ಹೆಸರು ಶ್ರೀನಿವಾಸರಾವ ತಂದೆ ವೆಂಕಟೇಶ್ವರಾವ ವಲ್ಲಪ ವಯಾ:46 ಉ:ಬಿಜಿನೆಸ್ ಸಾ: ಲೋಕಾವರಂ, ಕಲ್ಲೂರ ಮಂಡಲ್ ಜಿಲ್ಲಾ:ಕಮ್ಮಂ ತೆಲಂಗಾಣ ಅಂತಾ ಹೇಳಿ ತಾನು ಸದರಿ ಟ್ರ್ಯಾಕ್ಟರದ ಮಾಲೀಕ ಅಂತಾ ಹೇಳಿದನು. ಮತ್ತು ಓಡಿ ಹೋದ ಟ್ರ್ಯಾಕ್ಟರ ಚಾಲಕನ ಹೆಸರು ರಾಮರಾವ್ ಅಂತಾ ಇದ್ದು ಆತನ ಊರು ಟೋಕಗುಡಂ, ಮಂಡಲ್ ಮನಗುರ ಮತ್ತು ಜಿಲ್ಲಾ ಭದ್ರಾದ್ರಿ ಕೊತ್ತಗುಡು ಅಂತಾ ಹೇಳಿದನು. ಟ್ರ್ಯಾಕ್ಟರನಲ್ಲಿರುವ ಉಸುಕಿನ ಬಗ್ಗೆ ವಿಚಾರಿಸಲಾಗಿ ತನಗೆ ಎಲ್&ಟಿ ಕಂಪನೀಯ ಮುತ್ತುರಾಮನ ಎಂಬುವವರು ಪೈಪಲೈನ್ ಕಾಮಗಾರಿ ಕೆಲಸಕ್ಕೆ  ಉಸುಕು ತರಲು ಹೇಳಿದ್ದರಿಂದ ತಾನು ಗೌಡಗೇರಿ ಹಳ್ಳದಿಂದ ಉಸುಕು ಉಸುಕನ್ನು ಟ್ರ್ಯಾಕ್ಟರದಲ್ಲಿ ತುಂಬಿಕೊಂಡು  ಬಂದು ಎಲ್&ಟಿ ಕಂಪನಿ ಕೆಲಸ ನಡೆಯುವ ಸ್ಥಳಕ್ಕೆ ತೆಗೆದುಕೊಂಡು ಬಂದಿರುತ್ತ್ತೆನೆ ಎಂದು ತಿಳಿಸಿದನು. ಸದರಿ ಟ್ರ್ಯಾಕ್ಟರ ನಂಬರ ಪರಿಶೀಲಿಸಲಾಗಿ ಅದರ ಇಂಜೀನ್ ನಂಬರ ಎ.ಪಿ-07/ಟಿ.ಬಿ-7863 ಮತ್ತು ಟ್ರಾಲಿ ನಂ: ಟಿ.ಎಸ್-06/ಯು.ಎ-7970 ಅಂತಾ ಇದ್ದು ಅದರಲ್ಲಿ ಉಸುಕು ತುಂಬಿದ್ದು ಸದರಿ ಉಸುಕಿನ ಅಂದಾಜ ಕಿಮ್ಮತ್ತು 1200 ರೂಪಾಯಿ ಆಗಬಹುದು. ಟ್ರ್ಯಾಕ್ಟರ ಚಾಲಕ ಮತ್ತು ಮಾಲೀಕರು ಕೂಡಿಕೊಂಡು ಎಲ್&ಟಿ  ಕಂಪನೀಯ ಮುತ್ತುರಾಮನ್ ಈತನ ಕುಮ್ಮಕ್ಕಿನಿಂದ ಗೌಡಗೇರಿ ಹಳ್ಳದಿಂದ ಟ್ರ್ಯಾಕ್ಟರದಲ್ಲಿ ಮರಳು ಸಾಗಾಣಿಕೆ ಮಾಡಲು ಸಕರ್ಾರದಿಂದ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಮರಳನ್ನು ಕದ್ದು, ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಟ್ರ್ಯಾಕ್ಟರದಲ್ಲಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಪಡಿಸಿಕೊಂಡು ಸದರಿ ಉಸುಕು ತುಂದಿದ ಟ್ರ್ಯಾಕರನ್ನು ಮತ್ತು ಟ್ರ್ಯಾಕ್ಟರ ಮಾಲೀಕನಾದ ಶ್ರೀನಿವಾಸರಾವ ತಂದೆ ವೆಂಕಟೇಶ್ವರಾವ ವಲ್ಲಪ ಇತನನ್ನು ನಮ್ಮ ವಷಕ್ಕೆ ಪಡೆದುಕೊಂಡು ಸದರಿ ಟ್ರ್ಯಾಕ್ಟರದೊಂದಿಗೆ ಮರಳಿ 12-30 ಪಿ.ಎಮ್ ಕ್ಕೆ ಯಾದಗಿರಿ ಗ್ರಾಮೀಣ ಠಾಣೆಗೆ ಬಂದು ನನ್ನ ವರದಿಯನ್ನು ನೀಡಿದ್ದು, ಟ್ರ್ಯಾಕ್ಟರ ಮಾಲೀಕ ಶ್ರೀನಿವಾಸರಾವ ವಲ್ಲಪ, ಟ್ರ್ಯಾಕ್ಟರ ಚಾಲಕ ರಾಮರಾವ ಹಾಗೂ ಎಲ್&ಟಿ ಕಂಪನಿಯ ಮುತ್ತುರಾಮನ್ ಇವರ ಮೇಲೆ ಕಾನೂನು ಪ್ರಕಾರ ಕೈಗೊಳ್ಳಲು ಅಂತಾ ನೀಡಿದ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 40/2020 ಕಲಂ 379,114 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 42/2020 ಕಲಂ 15[ಎ], 32[3]  ಕೆ,ಇ ಯಾಕ್ಟ್:- ಇಂದು ದಿನಾಂಕ: 24-03-2020 ರಂದು ಸಾಯಂಕಾಲ 04-45 ಗಂಟೆಗೆ ಪಿ.ಎಸ್.ಐ ರವರು ಸೈದಾಪೂರದ ಕರಿಬೆಟ್ಟ ಕ್ರಾಸ ಹತ್ತಿರ ರೋಡಿನ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಪರವಾನಿಗೆ ಇಲ್ಲದೆ ಮದ್ಯ ಸೇವನೆ ಮಾಡುವ ವ್ಯಕ್ತಿಯನ್ನು ಮತ್ತು ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡು ಜ್ಞಾಪನ ಪತ್ರದೊಂದಿಗೆ ಮದ್ಯದ ಬಾಟಲಿಗಳನ್ನು ಜಪ್ತಿಪಂಚನಾಮೆಯನ್ನು ಹಾಗೂ ಆರೋಪಿತನನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ  ಮೇಲಿಂದ ಠಾಣಾ ಗುನ್ನೆ ನಂ. 42/2020 ಕಲಂ. 15[ಎ], 32[3]  ಕೆ.ಇ ಕಾಯ್ದೆ  ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.



                           
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 43/2020 ಕಲಂ 32,34 ಕೆ,ಇ ಯಾಕ್ಟ್:- ಇಂದು ದಿನಾಂಕ: 24-03-2020 ರಂದು ರಾತ್ರಿ 7-00 ಗಂಟೆಗೆ ಪಿ.ಎಸ್.ಐ ರವರು ಸೈದಾಪೂರದದಲ್ಲಿ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡು ಜ್ಞಾಪನ ಪತ್ರದೊಂದಿಗೆ ಮದ್ಯದ ಬಾಟಲಿಗಳನ್ನು ಜಪ್ತಿಪಂಚನಾಮೆಯನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸಾರಾಂಶವೆನೆಂದರೆ, ಸ್ಟೇಶನ ಸೈದಾಪೂರ ಲಕ್ಷ್ಮೀ ನಗರದಲಿ ರೋಡಿನ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿ ಯಾವುದೇ ಪರವಾನಿಗೆ ಇಲ್ಲದೇ ಮದ್ಯಪಾನ ಮಾರುತ್ತಿದ್ದಾನೆ ಅಂತ ಖಚಿತ ಭಾತ್ಮೀ ಬಂದಿದ್ದು ದಾಳಿ ಮಾಡಲು  ನಂತರ ಪಿ.ಎಸ್.ಐ ಸಾಹೇಬರು ಮತ್ತು ಅವರ ಸಿಬ್ಬಂದಿಯವರು ಮತ್ತು ಪಂಚರು ಕೂಡಿ ಸರಕಾರಿ ಜೀಪ್ ನಂ.ಕೆಎ-33 ಜಿ-0095 ನೇದ್ದರಲ್ಲಿ ಕುಳಿತುಕೊಂಡು ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಿ ಸೈದಾಪೂರದ ಲಕ್ಮೀ ನಗರ ಏರಿಯಾದಲ್ಲಿ ರೋಡಿನ ಪಕ್ಕದ ಸಾರ್ವಜನಿಕ  ಸ್ಥಳದಲ್ಲಿ ಒಬ್ಬ ವ್ಯಕ್ತಿ ಯಾವುದೇ ಪರವಾನಿಗೆ ಇಲ್ಲದೇ ಆರಾಮ ಕುಳಿತುಕೊಂಡು ಮದ್ಯದ ಪೌಚ್, ಇಟ್ಟುಕೊಂಡು ಮದ್ಯಪಾನ ಮಾರುತ್ತಿದ್ದುದು ಖಚಿತಪಡಿಸಿಕೊಂಡು ಕೂಡಲೇ ಪಂಚರ ಸಮಕ್ಷಮದಲ್ಲಿ ಸಾಯಂಕಾಲ 05-30 ಗಂಟೆಗೆ ಅವನನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದುಕೊಳ್ಳಲು ಹೋದಾಗ ಸದರಿ ಮಧ್ಯ ಮಾರುತ್ತಿದ್ದ ವ್ಯಕ್ತಿಗೆ ಪೊಲೀಸರು ಬಂದು ದಾಳಿ ಮಾಡುತ್ತಿರುವ ವಿಷಯ ಗೊತ್ತಾಗಿ ಲಕ್ಷ್ಮೀನಗರ ಓಣಿಯಲ್ಲಿ ಓಡಿಹೋಗಿ ಮರೆಯಾಗಿರುತ್ತಾನೆ. ಅವನನ್ನು ಹಿಡಿಯಲು ಹೋದ ಸಿಬ್ಬಂದಿ ಓಣಿಯಲ್ಲಿ ಯಾರದೋ ಮನೆಯಲ್ಲಿ ಅಡಗಿಕೊಂಡಿರಬಹುದು ಕೈಗೆ ಸಿಕ್ಕಿರುವದಿಲ್ಲ ಅಂತ ತಿಳಿಸಿದರು. ಸದರಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಹೆಸರನ್ನು ಅಲ್ಲಿದ್ದವರಿಗೆ ವಿಚಾರಿಸಲಾಗಿ ಸದರಿಯವನ ಹೆಸರು 1) ರಾಜಾರಾಮ ತಂದೆ ಖಾಜಪ್ಪ ವಯ|| 61 ವರ್ಷ, ಜಾ|| ಮರಾಠ ಉ|| ಕೂಲಿ ಸಾ|| ಸ್ಟೇಶನ ಸೈದಾಪೂರ ಅಂತ ಗೊತ್ತಾಗಿರುತ್ತದೆ. ಸದರಿ ವ್ಯಕ್ತಿ  ಅಬಕಾರಿ ಕಾಯ್ದೆ ಉಲ್ಲಂಘನೆ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಮಾದ್ಯಪಾನ ಮಾಡುತಿದ್ದು ಮದ್ಯಪಾನ ಮಾಡುವ ಸ್ಥಳದಲ್ಲಿದ್ದ 1] 90ಎಂ.ಎಲ್ ನ ಓರಿಜಿನಲ್ ಚಾಯ್ಸ್ ವಿಸ್ಕಿ 125 ಟೆಟ್ರಾ ಪ್ಯಾಕೇಟ್ ಗಳು ಅ|| ಕಿ||  3750/- ರೂ. 2] 90 ಎಮ್.ಎಲ್.ನ ಬೆಂಗಳೂರು ಮಾಲ್ಟ್ ವಿಸ್ಕೀ 15 ಟೆಟ್ರಾ ಪ್ಯಾಕೇಟ್ಗಳು ಅ.ಕಿ. 360/- ರೂ.  ಒಟ್ಟು ಅ.ಕಿ|| 4110=00 ರೂ ಬೆಲೆ ಬಾಳುವ ಮುದ್ದೆ ಮಾಲನ್ನು ನಮ್ಮ ಸಮಕ್ಷಮ ಜಪ್ತಿ ಪಂಚನಾಮೆಯ ಮೂಲಕ ಜಪ್ತಿಪಡಿಸಿಕೊಂಡು ಬಂದಿರುತ್ತಾರೆ. ಸದರಿ ಜಪ್ತಿಪಂಚನಾಮೆಯ ಆಧಾರದ  ಮೇಲಿಂದ ಠಾಣಾ ಗುನ್ನೆ ನಂ. 43/2020 ಕಲಂ. 32, 34 ಕೆ.ಇ ಕಾಯ್ದೆ  ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಠಾಣೆ ಗುನ್ನೆ ನಂ;- 79/2020 ಕಲಂ 379 ಐ.ಪಿ.ಸಿ.  ಮತ್ತು ಕಲಂ. 44(1) ಕೆ.ಎಮ್.ಎಮ್.ಸಿ.ಆರ್.ಆಕ್ಟ 1994:- ಇಂದು ದಿನಾಂಕ:24-03-2020 ರಂದು 09:30 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಸಾಹೇಬಗೌಡ ಎಂ ಪಾಟೀಲ್ ಪಿಐ ಸುರಪೂರ ಪೊಲೀಸ್ ಠಾಣೆ ಸಾಹೇಬರು ಎರಡು ಮರಳು ತುಂಬಿದ ಟ್ಯಾಕ್ಟರಗಳೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ ಸಾರಾಂಶವೆನೆಂದರೆ, ಇಂದು ದಿನಾಂಕ:24-03-2020 ರಂದು 6 ಎ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಯಾರೋ ಇಬ್ಬರು ವ್ಯಕ್ತಿಗಳು ತಮ್ಮ ಟ್ಯಾಕ್ಟರದಲ್ಲಿ ಹೇಮನೂರ ಸೀಮಾಂತರದ ಕೃಷ್ಣಾ ನಧಿ ಪಾತ್ರದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ಲಕ್ಷ್ಮಿಪೂರ ಕ್ರಾಸ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ಠಾಣೆಯ ಸಿಬ್ಬಂಧಿಯವರಾದ ಶ್ರೀ ಮಂಜುನಾಥ ಹೆಚ್ಸಿ-176, ಹಾಗೂ ಜೀಪ ಚಾಲಕನಾದ ಶ್ರೀ ಮಾಹಾಂತೇಶ ಎಪಿಸಿ-48 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ ರವರಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಬರಲು ಸೂಚಿಸಿದ ಮೇರೆಗೆ ಮಂಜುನಾಥ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದ್ರಿ ವ|| 56 ವರ್ಷ ಜಾ|| ಮುಸ್ಲಿಂ ಉ|| ಡ್ರೈವರ ಸಾ|| ದೇವಾಪೂರ 2) ಕೃಷ್ಣಪ್ಪ ತಂದೆ ಅಯ್ಯಪ್ಪ ಡೊಳ್ಳ ವ|| 55 ವರ್ಷ ಜಾ|| ಕುರಬರ ಉ|| ಕೂಲಿಕೆಲಸ ಸಾ|| ವೆಂಕಟಾಪೂರ ಇವರನ್ನು ಬೆಳಿಗ್ಗೆ 06:30 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿ ಪಂಚರು ಸಿಬ್ಬಂಧಿಯವರಿಗೆ ವಿಷಯ ತಿಳಿಸಿ ಇಬ್ಬರು ಪಂಚರಿಗೆ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಪಂಚರು ಮತ್ತು ಮೇಲ್ಕಂಡ ಸಿಬ್ಬಂಧಿಯವರು ನಮ್ಮ ಸಕರ್ಾರಿ ಜೀಪ ನಂಬರ ಕೆಎ-33 ಜಿ-0238 ನೇದ್ದರಲ್ಲಿ ಕುಳಿತುಕೊಂಡು ಬೆಳಿಗ್ಗೆ 06:35 ಠಾಣೆಯಿಂದ ಹೊರಟು ಬೆಳಿಗ್ಗೆ 07:00 ಗಂಟೆಗೆ ಲಕ್ಷ್ಮಿಪೂರ ಕ್ರಾಸ ಹತ್ತಿರ ಹೋಗಿ ನಮ್ಮ ಜೀಪ್ ನಿಲ್ಲಿಸಿದ್ದು, ಬೆಳಿಗ್ಗೆ 07:10 ಸಮಯಕ್ಕೆ ಲಕ್ಷ್ಮಿಪೂರ ಕಡೆಯಿಂದ ಎರಡು ಟ್ಯಾಕ್ಟರಗಳ ಚಾಲಕರು ತಮ್ಮ ಟ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ಎಲ್ಲರೂ ಕೆಳಗೆ ಇಳಿದು ಸಿಬ್ಬಂಧಿಯವರ ಸಹಾಯದಿಂದ ಸದರಿ ಟ್ಯಾಕ್ಟರಗಳ ಚಾಲಕರಿಗೆ ಕೈ ಮಾಡಿ ನಿಲ್ಲಿಸಲು ಸೂಚಿಸಿದಾಗ ಎರಡು ಟ್ಯಾಕ್ಟರ ಚಾಲಕರು ನಮ್ಮ ಪೊಲೀಸ್ ಜೀಪನ್ನು ನೋಡಿ ತಮ್ಮ ಎರಡು ಟ್ಯಾಕ್ಟರಗಳನ್ನು ನಮ್ಮಿಂದ ಸ್ವಲ್ಪ ಅಂತರದ ರೋಡಿನ ಸೈಡಿನಲ್ಲಿ ನಿಲ್ಲಿಸಿ ಕೆಳಗೆ ಇಳಿದು ರಸ್ತೆಯ ಪಕ್ಕದಲ್ಲಿ ಓಡಿ ಹೋದರು. ನಂತರ ನಾನು ಪಂಚರ ಸಮಕ್ಷಮ ಸದರಿ ಟ್ಯಾಕ್ಟರಗಳ ಹತ್ತಿರ ಹೋಗಿ ಪರೀಶಿಲಿಸಿ ನೋಡಲು. 1) ಒಂದು ಸ್ವರಾಜ್ 735ಈಇ ಕಂಪನಿ ಟ್ಯಾಕ್ಟರ ಇದ್ದು ಅದರ ಇಂಜಿನ್ ನಂ. 39.1354/ಊಐ012440ಂ ಚೆಸ್ಸಿ ನಂ. ಒಃಓಂಎ46ಂಅಎಖಿಐ45265 ಇದ್ದು ಟ್ರಾಲಿಗೆ ನಂಬರ ಇರುವುದಿಲ್ಲ. ಅದರಲ್ಲಿ 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆ. 2) ಒಂದು ಸ್ವರಾಜ್ಯ 735ಈಇ ಕಂಪನಿಯ ಟ್ಯಾಕ್ಟರ ಇದ್ದು ನಂಬರ ಕೆಎ-36, ಟಿಬಿ-7786 ಇದ್ದು ಟ್ರಾಲಿಗೆ ನಂಬರ ಇರುವುದಿಲ. ಅದರಲ್ಲಿ 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆೆ. ಹೀಗೆ ಒಟ್ಟು ಎರಡು ಟ್ಯಾಕ್ಟರದಲ್ಲಿಯ ಒಟ್ಟು 04 ಘನ ಮೀಟರ ಮರಳು ಇದ್ದು ಅದರ ಅ.ಕಿ 3200/- ರೂಗಳು ಆಗುತ್ತದೆ.  ಸದರಿ ಮರಳು ತುಂಬಿದ ಎರಡು ಟ್ಯಾಕ್ಟರಗಳನ್ನು ಪಂಚರ ಸಮಕ್ಷಮ 07:10 ಪಿ.ಎಮ್ ದಿಂದ 08:10 ಪಿ.ಎಮ್.ದವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡು ಟ್ಯಾಕ್ಟರಗಳನ್ನು ಜಪ್ತಿ ಪಡಿಸಿಕೊಂಡು ತಾಬಾಕ್ಕೆ ತಗೆದುಕೊಂಡಿದ್ದು ಇರುತ್ತದೆ.  ಕಾರಣ ಸದರಿ ಎಡರು ಟ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಂದಾಜು 3200/- ರೂ.ಗಳ ಕಿಮ್ಮತ್ತಿನ ಅಂದಾಜು 04 ಘನ ಮೀಟರ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಎರಡು ಮರಳು ತುಂಬಿದ ಟ್ಯಾಕ್ಟರಗಳನ್ನು ಖಾಸಗಿ ಚಾಲಕರ ಸಹಾಯದಿಂದ ಠಾಣೆಗೆ ಬೆಳಿಗ್ಗೆ 09:30  ಕ್ಕೆ ತಂದು ಒಪ್ಪಿಸಿ ವರದಿಯೊಂದಿಗೆ ಜಪ್ತಿ ಪಂಚನಾಮೆಯನ್ನು ನೀಡಿ ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ  ನಂ. 79/2020 ಕಲಂ: 379 ಐಪಿಸಿ ಮತ್ತು 44(1) ಕೆ.ಎಂ.ಎಂ.ಸಿ.ಆರ್ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 38/2020 ಕಲಂ 337, 338 ಐಪಿಸಿ:-ದಿನಾಂಕ:23/03/2020 ರಂದು 4.30 ಪಿ.ಎಮ್. ಸುಮಾರಿಗೆ ಆರೋಪಿತರ ಮಾರ್ಗದರ್ಶನದಲ್ಲಿ ಅಣಬಿ ಗ್ರಾಮದ ಹತ್ತಿರ ಬರುವ ರೈಲ್ವೆ ಕಚ್ಚಾ ಟ್ರ್ಯಾಕ್ನಲ್ಲಿ ಬ್ರಿಜ್ ನಂ:323 ರ ನಿಮರ್ಾಣಕ್ಕಾಗಿ ಫಿಯರ್ಾದಿ ಮತ್ತು ಗಾಯಾಳುಗಳಿಗೆ ಆರೋಪಿತರು ಯಾವುದೇ ಸುರಕ್ಷಾ ಸಾಧನಗಳನ್ನು ಕೊಡದೇ ಅವರಿಂದ ಕಬ್ಬಿಣದ ಪೈಪಗಳ ಸ್ಟೇಜ ಮಾಡಿಸಿ ಹಾಗೂ ಕಬ್ಬಿಣದ ರಾಡಗಳನ್ನು ಕಟ್ಟಿಸಿರುತ್ತಾರೆ. ಆರೋಪಿತರು ಸುರಕ್ಷಾ ಸಾಧನಗಳನ್ನು ಕೊಡದೇ ನಿರ್ಲಕ್ಷವಹಿಸಿ ಕೂಲಿ ಕೆಲಸ ಮಾಡಿಸಿದ್ದರಿಂದ ಮತ್ತು ಬ್ರಿಜ್ ನಿಮರ್ಾಣ ಮಾಡಲು ಕಟ್ಟಿದ ಕಬ್ಬಿಣದ ಪೈಪಗಳ ಸ್ಟೇಜ್ ಹಾಗೂ ಕಬ್ಬಿಣದ ರಾಡಗಳನ್ನು ಸರಿಯಾಗಿ ಪರಿಶೀಲಿಸದೇ ನಿರ್ಲಕ್ಷ ವಹಿಸಿದ್ದರಿಂದ ಕಬ್ಬಿಣದ ಪೈಪಗಳ ಕ್ಲ್ಯಾಂಪಗಳು ಲೂಜ್ ಆಗಿ ಕಬ್ಬಿಣದ ಪೈಪಗಳು ಹಾಗೂ ಕಬ್ಬಿಣದ ರಾಡಗಳು ಫಿಯರ್ಾದಿ ಮತ್ತು ಗಾಯಾಳುಗಳ ಮೇಲೆ ಬಿದ್ದಿದ್ದರಿಂದ ಭಾರಿ ಮತ್ತು ಸಾದಾ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ.
 
ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- ಯು.ಡಿ,ಆರ್ ನಂ: 03/202 0ಕಲಂ 174 (ಸಿ) ಸಿ ಆರ್ ಪಿ ಸಿ ;- ಇಂದು ದಿನಾಂಕ:24.03.2020 ರಂದು 2:45 ಗಂಟೆಗೆ ಪಿರ್ಯಾಧಿ ರಾಜು ತಂದೆ ತಿರುಪತಿ ರಾಠೋಡ ವ:21 ವರ್ಷ ಉ: ವಿದ್ಯಾಥರ್ಿ (ಬಿಎ ಪೈನಲ್) ಜಾ:ಹಿಂದೂ ಲಂಬಾಣಿ ಸಾ:ಮಾರನಾಳ ದೊಡ್ಡ ತಾಂಡಾ ತಾ: ಹುಣಸಗಿ ಇದ್ದು. ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ಪಿರ್ಯಾಧಿ ಅಜರ್ಿಯನ್ನು ತಂದು ಹಾಜರ ಪಡಿಸಿದ್ದು. ಅದರ ಸಾರಾಂಶವೆನೆಂದರೆ ನಮ್ಮ ತಂದೆ ತಾಯಿಗೆ ನಾನು ವೆಂಕಟೇಶ ಪುಲಾವತಿ ಅಂತ ಮೂರು ಜನ ಮಕ್ಕಳಿದ್ದು ನಮ್ಮದೊಂದು ಜೆಸಿಬಿ. ಇದ್ದು. ಇರದ ಮೇಲೆ ನಮ್ಮ ತಂದೆಯವರು ನಿಗಾವಣೆ ಮಾಡುತ್ತಿದ್ದು. ನಮ್ಮ ಜೆಸಿಬಿಯನ್ನು ನಮ್ಮ ತಾಂಡಾದ ಕುಮಾರ ತಂದೆ ಶಂಕ್ರಪ್ಪ ರಾಠೋಡ ಇತನು ನಡಡೆಸುತ್ತಿದ್ದು. ದಿನನಿತ್ಯದಂತೆ ಭೀಮಸಿಂಗ ತಂದೆ ನೇಮಪ್ಪ ಜಾಧವ ರವರ ಹೊಲಕ್ಕೆ ನಿನ್ನೆ ದಿನ ನಮ್ಮ ಜೆಸಿಬಿಯು ಕೆಲಸಕ್ಕೆ ಹೋಗಿದ್ದು. ಅದರ ಹಿಂದೆ ನನ್ನ ತಂದೆ ತಿರುಪತಿ ಹೋಗಿ ರಾತ್ರಿ 8:00 ಗಂಟೆಗೆ ಮನೆಗೆ ಬಂದಿದ್ದು. ನಂತರ ಸ್ವಲ್ಪ ಹೊತ್ತು ಹೊರಗೆ ಹೋಗಿ ಬರೆತ್ತೇನೆ ಅಂತ ನನ್ನ ತಂದೆಯು ಮನೆಯಿಂದ ಹೋಗಿದ್ದು. ನಂತರ ರಾತ್ರಿ 8:30 ಗಂಟೆಯ ಸುಮಾರಿಗೆ ನನ್ನ ತಂದೆಯು ನಮ್ಮ ತಾಂಡಾದ ಸಂಗಪ್ಪ ತಂದೆ ನಾಗಪ್ಪ ರಾಠೋಡ ಮತ್ತು ಬದ್ದಪ್ಪ ತಂದೆ ಹಣಮಪ್ಪ ರಾಠೋಡ ರವರಿಗೆ ಮಾರನಾಳ ಕ್ರಾಸ್ ದಲ್ಲಿ ಸಿಕ್ಕಾಗ ಮಾನಾಡಿದ್ದು. ನನ್ನ ತಂದೆಯು ಅವರಿಗೆ ನೀವು ಹೋಗಿರಿ, ನಾನು ಅಂಗಡಿಗೆ ಹೋಗಿ ಬರುತ್ತೇನೆ ಅಂತಾ ತಿಳಿಸಿದ್ದು ಇರುತ್ತದೆ. ಇಂದು ದಿನಾಂಕ:24.03.2020 ಮುಂಜಾನೆ 9:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಾಯಿ, ನನ್ನ ತಂಗಿ ಪುಲಾವತಿ ಇವರು ಮನೆಯಲ್ಲಿದ್ದಾಗ ನಮ್ಮ ತಾಂಡಾದ ಹುಡುಗರು ಬಂದು ನಿಮ್ಮ ತಂದೆ ನಿಮ್ಮ ಹೊಲದ ಬದುವಿಗೆ ನೇಣುಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತ ತಿಳಿಸಿದ ಮೇರೆಗೆ ನಾನು ನನ್ನ ತಾಯಿ ತಂಗಿ ಹಾಗೂ ನಮ್ಮ ತಾಂಡಾದ ಶೇಖರ ತಂದೆ ಸೂರಪ್ಪ ನಾಯಕ, ಸುನೀಲ್ ತಂದೆ ಸೀತಾರಾಮ, ಭೀಮಪ್ಪ್ಪ ತಂದೆ ರಾಮಚಂದ್ರ ರಾಠೋಡ, ಶೇಖರಪ್ಪ ತಂದೆ ಧರ್ಮಪ್ಪ ರಾಠೋಡ, ಪುಂಡಲಿಕ್ಕ ತಂದೆ ರಾಮಚಂದ್ರ ರಾಠೋಡ ನಮ್ಮ ಹೊಲಕ್ಕೆ ಬಂದು ನೋಡಲಾಗಿ ನಮ್ಮ ತಂದೆಯವರು ಬೆಟ್ಟಲ ಗಿಡಕ್ಕೆ   ತಾನು ತೊಟ್ಟಂತ ಲುಂಗಿಯಿಂದ ಗಿಡಕ್ಕೆ ಕಟ್ಟಿಕೊಂಡು ನೇಣುಕಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ನಮ್ಮ ತಂದೆಯವರು ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ನೋಡಿದಾಗ ಸಂಶಯಾಸ್ಪದ ರೀತಿಯಲ್ಲಿ ಕಂಡು ಬಂದಿದ್ದು ಇರುತ್ತದೆ. ಕಾರಣ ಮಾನ್ಯರವರು ಕಾನೂನಿನ ಕ್ರಮ ಕೈಗೊಂಡು ನಮಗೆ ನ್ಯಾಯಾ ದೊರಕಿಸಿ ಕೊಡಬೇಕು ನನ್ನ ತಂದೆಯ ಶವವು ಬರದೇವನಾಳ ಸೀಮಾಂತರದಲ್ಲಿ ನಮ್ಮ ಜಮೀನು ಸವರ್ೇ ನಂ:109 ನಿರ್ಲಗಲ್ಲ ಹೊಲ ಅಂತ ಹೆಸರಿನ ಹೊಲದ ಬದುವಿನ ಮೇಲಿನ ಬೆಟ್ಟಲ ಗಿಡಕ್ಕೆ ನೇಣುಹಾಕಿಂಡು ಸ್ಥಿತಿಯಲ್ಲಿ ಇರುತ್ತದೆ. ನನ್ನ ತಂದೆಯ ಮೋಬೈಲ್ ನಂ:9916739663  ಇರುತ್ತದೆ. ನನ್ನ ತಂದೆಯು ನಿನ್ನೆ ರಾತ್ರಿ 9:00 ಗಂಟೆಯಿಂದ ಈ ದಿವಸ ಬೆಳಿಗಿನ 8:00 ಗಂಟೆಯ ಮಧ್ಯದಲ್ಲಿ ನೇಣು ಹಾಕಿಕೊಂಡು ಸತ್ತಿದ್ದು ಇರುತ್ತದೆ. ತಾವು ಮುಂದಿನ ಕ್ರಮ ಜರುಗಿಸಬೇಕು ಅಂತ ಪಿರ್ಯಾದಿಯಲಿಖಿತ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಯುಡಿಆರ್ ನಂ:03/2020 ಕಲಂ 174 (ಸಿ) ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕ್ಯಕೊಳ್ಳಲಾಗಿದೆ

±ÀºÁ¥ÀÆgÀ ¥Éưøï oÁuÉ UÀÄ£Éß £ÀA:- 101/2020 ಕಲಂ 279, 337, 338  ಐಪಿಸಿ ಸಂಗಡ 187 .ಎಂ.ವಿ ಯಾಕ್ಟ:- ಇಂದು ದಿನಾಂಕ: 24/03/202 ರಂದು 8.15 ಪಿ.ಎಂ.ಕ್ಕೆ ಶ್ರೀ  ಹಣಮಂತ್ರಾಯ ತಂ/ ಮಲ್ಲಯ್ಯ ಮುಂಡರಗಿ ಸಾ|| ಕಾಡಮಗೇರಾ(ಬಿ) ತಾ|| ವಡಗೇರಾ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅರ್ಜಿ ಸಲ್ಲಿಸಿದರ ಸಾರಾಂಶದ ಏನೆಂದರೆ, ದಿನಾಂಕ: 24/03/2020 ರಂದು ಗಾಯಾಳುದಾರರಿಬ್ಬರು ತಮ್ಮ ಮೋಟರ ಸೈಕಲ್ ಮೇಲೆ ಯುಗಾದಿ ಅಮಾವ್ಯಾಸೆ ನಿಮಿತ್ಯ ಅನ್ವರ ಗ್ರಾಮದ ಕಾಸಿಂ ಸಾಬ ದರ್ಗಾಕ್ಕೆ ಕಾಯಿ ಕೊಟ್ಟು ಮರಳಿ ಕಾಡಮಗೇರಾಕ್ಕೆ ಹೊರಟಿದ್ದಾಗ 10.30 .ಎಂ. ಸುಮಾರಿಗೆ ಹುಂಡೆಕಲ್ ಇನ್ನೂ 500 ಮೀಟರ ಅಂತರದಲ್ಲಿರುವಾಗ ಆರೋಪಿತನು ತನ್ನ ಟ್ರಾಕ್ಟರ ವಾಹನವನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಮೋಟರ ಸೈಕಲಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಭಾರಿ ಮತ್ತು ಸಾದಾ ಸ್ವರೂಪದ ಗಾಯಗಳಾಗಿರುತ್ತವೆ. ಅಪಘಾತಪಡಿಸಿದ ಟ್ರಾಕ್ಟರ ಚಾಲಕನು ತನ್ನ ಟ್ರಾಕ್ಟರ ಬಿಟ್ಟು ಓಡಿ ಹೋಗಿರುತ್ತಾನೆ. ಸ್ಥಳಕ್ಕೆ ಬಂದ 108 ವಾಹನದಲ್ಲಿ ಗಾಯಾಳುಗಳಿಗೆ ಹಾಕಿಕೊಂಡು ಶಹಾಪುರ ಸರಕಾರಿ ಆಸ್ಪತ್ರೆ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಕಾಮರಡ್ಡಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ತಡವಾಗಿ ಠಾಣೆಗ ಬಂದಿರುತ್ತೇನೆ. ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ. 101/2020 ಕಲಂ 279, 337, 338  ಐಪಿಸಿ ಸಂಗಡ 187 .ಎಂ.ವಿ ಯಾಕ್ಟ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.        


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!