ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 23/03/2020

By blogger on ಸೋಮವಾರ, ಮಾರ್ಚ್ 23, 2020



                                 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 23/03/2020 
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 39/2020 ಕಲಂ ಮನುಷ್ಯ ಕಾಣೆಯಾದ ಬಗ್ಗೆ.:- ದಿನಾಂಕ.23.03.2020 ರಂದು ಫಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಟೈಪ ಮಾಡಿಸಿದ ದೂರು ಅಜರ್ಿ ನೀಡಿದ್ದು ಸಾರಾಂಶವೆನೆಂದರೆ, ನನ್ನ ಅಕ್ಕನ ಮೊದಲನೆಯ ಮಗ ಶಿವಶಂಕರ ತಂದೆ ಮೈಲಾರಪ್ಪ ವಯ: 18 ವರ್ಷ, ಈತನು ಮಂಗಳೂರ ಜಿಲ್ಲೆಯ ಆಳ್ವಾಸ ಕಾಲೇಜ ಮೂಡಬಿದರೆ ನಲ್ಲಿ ಪಿ.ಯು.ಸಿ ದ್ವೀತಿಯ ವರ್ಷದಲ್ಲಿ ವಿಜ್ಞಾನ (ಸೈನ್ಸ್)ವಿಷಯ ಓದುತ್ತಿದ್ದು, ಈಗ 2 ತಿಂಗಳಿನಿಂದ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಕೊಡಿಸಿರುತ್ತೇವೆ. ಹೀಗಿದ್ದು ಒಂದು ವಾರದ ಹಿಂದೆ  ಬಾಡಿಯಾಳ ಗ್ರಾಮಕ್ಕೆ ಕರೆದುಕೊಂಡು ಬಂದು ಮನೆಯಲ್ಲಿಯೇ ಇಟ್ಟುಕೊಂಡಿದ್ದೇವು.  ಹೀಗಿದ್ದು ದಿನಾಂಕ, 18.03.2020 ರಂದು ರಾತ್ರಿ ಮನೆಯಲ್ಲಿ ನಾನು, ನಮ್ಮ ಅಜ್ಜಿ ಬಸಲಿಂಗಮ್ಮ, ಮಹೇಶ ಕುಮಾರ, ಅಶ್ವಿನಿ ಮತ್ತು ಶಿವಶಂಕರ ಎಲ್ಲರೂ ಊಟ ಮಾಡಿಕೊಂಡು ಮಲಗಿದ್ದ ವೇಳೆಯಲ್ಲಿ ರಾತ್ರಿ 11-30 ಗಂಟೆ ಸುಮಾರಿಗೆ ಶಿವಶಂಕರ ಈತನು ಒಬ್ಬನೇ ಎದ್ದು ಮನೆಯಿಂದ ಹೊರಗೆ ಹೋಗಿರುತ್ತಾನೆ. ಸ್ವಲ್ಪ ಸಮಯದ ನನಗೆ ಎಚ್ಚರವಾಗಿ ಎದ್ದು ನೋಡಲಾಗಿ ಶಿವಶಂಕರ ಈತನು ಕಾಣಲಿಲ್ಲ ಎಲ್ಲರೂ ಕೂಡಿ ಹುಡುಕಾಡಿ ನೋಡಲಾಗಿ ಎಲ್ಲಿಯೂ ಕಂಡಿರುವದಿಲ್ಲ. ಈಗ 5 ದಿನದಿಂದ ನಾವು ಮನೆಯವರು ಎಲ್ಲಾ ಕಡೆಗೆ ಹುಡುಕಾಡಿದ್ದು, ನಮ್ಮ ಸಂಬಂಧಿಕರಿಗೂ ಬೇರೆ ಊರಿನಲ್ಲಿ ವಿಚಾರಿಸಿದ್ದು ಇಲ್ಲಿಯವರೆಗೆ ಪತ್ತೆಯಾಗಿರುವದಿಲ್ಲ. ಕಾಣೆಯಾದ ಶಿವಶಂಕರ ಈತನ ಚಹರೆ ಕೋಲು ಮುಖ, ಸಾದಾರಣ ಮೈಕಟ್ಟು, ಸಾದಾಕೆಂಪು ಮೈಬಣ್ಣ, ನೆಟ್ಟನೆಯ ಮೂಗು, ತಲೆಯಲ್ಲಿ 3 ಇಂಚು ಕಪ್ಪು ಕೂದಲು, ಸಣ್ಣನೆಯ ಕಪ್ಪು ದಾಡಿ ಹೊಂದಿರುತ್ತಾನೆ. ಎತ್ತರ 5' 8 ಇದ್ದು, ಮೈಮೇಲೆ ಬಿಳಿ-ನೀಲಿ ಉದ್ದಗೆರೆಯಿರುವ ಹಾಫ ಶರ್ಟ, ಬ್ಲೂ ಜೀನ್ಸ್ ಪ್ಯಾಂಟ್ ಇರುತ್ತದೆ.  ಕಾರಣ ತಾವು ನನ್ನ ಮಗ ಕಾಣೆಯಾದ ಬಗ್ಗೆ ದೂರು ದಾಖಲಿಸಿ ಮುಂದಿನ ಕ್ರಮ ಕೈಗೊಳಬೇಕು . ಅಂತ ದೂರು ಇರುತ್ತದೆ. 

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 40.2020  ಕಲಂ. 279 ಐಪಿಸಿ  :- ಇಂದು ದಿನಾಂಕ  23.03.2020   ರಂದು ಮಧ್ಯಾನ್ಹ 1-00 ಗಂಟೆಗೆ   ಫಿಯರ್ಾದಿ ಠಾಣೆಗೆ ಬಂದು ಹೇಳಿಕೆ ನೀಡಿ ಗಣಕಯಂತ್ರದಲ್ಲಿ ಟೈಪ  ಮಾಡಿಸಿದ ಹೇಳಿಕೆ ಸಾರಾಂಶವೆನೆಂದರೆ, ದಿನಾಂಕ. 21.03.2020 ರಂದು ನಮ್ಮ ಸಂಬಂಧಿ ಬಿ.ಕೆ. ಈಶ್ವರಪ್ಪ ಇವರು ವೈಯಕ್ತಿಕ ಕೆಲಸದ ಮೇಲೆ ತನ್ನ ಬ್ರೀಜಾ ಕಾರ ನಂ. ಕೆ.ಎ-36 ಎನ್-8131 ನೇದ್ದನ್ನು ತೆಗೆದುಕೊಂಡು ಯಾದಗಿರಿಗೆ ಹೋಗಿದ್ದು ತನ್ನ ಸಹೋದರ ದೊಡ್ಡಪ್ಪ ತಂದೆ ಬಸವರಾಜ ಇವರನ್ನು ಭೇಟಿಯಾಗಿ ಕೆಲಸ ಮುಗಿಸಿಕೊಂಡು ಬೆಳಿಗ್ಗೆ ದಿನಾಂಕ. 22.03.2020 ರಂದು 5-00 ಗಂಟೆಗೆ ಶಕ್ತಿನಗರಕ್ಕೆ ವಾಪಸ್ಸು ಹೊರಟಾಗ ನನಗೆ ಫೋನ ಮಾಡಿ ತನ್ನೊಂದಿಗೆ ರಾಯಚೂರಗೆ ಬರಲು ತಿಳಿಸಿದ್ದರಿಂದ ನಾನು ಸೈದಾಪೂರ ಗ್ರಾಮದಿಂದ ಈಶ್ವರಪ್ಪ ಇವರ ಕಾರನಲ್ಲಿ ಪಕ್ಕದ ಶೀಟನಲ್ಲಿ ಕುಳಿತು ಹೊರಟಾಗ ಶೆಟ್ಟಿಹಳ್ಳಿ ಗ್ರಾಮದ ತಾಯಮ್ಮ ಗುಡಿ ಹತ್ತಿರ ಈಶ್ವರಪ್ಪ ಈತನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೊರಟಾಗ ಕಾರಿಗೆ ಅಡ್ಡವಾಗಿ ರಸ್ತೆಯ ಮೇಲೆ ನಾಯಿ ಬಂದಿದ್ದು ಅದನ್ನು ತಪ್ಪಿಸಲು ಹೋಗಿ ತನ್ನ  ಕಾರನ್ನು ಸೈಡಗೆ ತೆಗೆದುಕೊಂಡಾಗ ರಸ್ತೆಯ ಪಕ್ಕದಲ್ಲಿದ್ದ ಕಬ್ಬಿಣದ ಪೈಪಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿರುತ್ತದೆ. ಸದರಿ ಅಪಘಾತದಲ್ಲಿ ಕಾರಗೆ ಎದುರುಗಡೆ ಜಖಂಗೊಂಡು, ಏರಬ್ಯಾಗ ಡ್ಯಾಮೇಜ್ ಆಗಿರುತ್ತದೆ. ಕಾರಿನ ಮುಂದಿನ ಭಾಗದ ಹೆಡಲೈಟ್ ಮತ್ತು ಗ್ಲಾಸ ಒಡೆದು ನಷ್ಟವಾಗಿರುತ್ತದೆ. ಕಾರ ಬಲಬದಿಯ ಭಾಗ ಡ್ಯಾಮೇಜ್ ಆಗಿರುತ್ತದೆ. ಸದರಿ ಅಪಘಾತದಲ್ಲಿ ನಮಗೆ ಯಾವುದೆ ಗಾಯ ವಗೈರೆ ಆಗಿರುವದಿಲ್ಲ. ಸದರಿ ವಾಹನ ಚಾಲನೆ ಮಾಡುತ್ತಿದ್ದ ಆರೋಪಿತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಅಂತಾ ಇಂದು ಠಾಣೆಗೆ ಬಂದು  ಹೇಳಿಕೆ ನೀಡಿ ಗಣಕಯಂತ್ರದಲ್ಲಿ ಟೈಪ ಮಾಡಿಸಿದ್ದು ಅದೆ.


ಗುರಮಿಠಕಲ ಪೊಲೀಸ ಠಾಣೆ ಗುನ್ನೆ ನಂ:- 52/2020 ಕಲಂ: 341, 354(ಬಿ), 504, ಐಪಿಸಿ:-ಸಮಾರು 3 ತಿಂಗಳ ಹಿಂದೆ ಫಿರ್ಯಾದಿದಾರಳು ಆರೋಪಿತನ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದಾಗ ಆತನ ಫಿರ್ಯಾದಿದಾರಳನ್ನು ನೋಡಿ ನೀನು ನೋಡಲು ಚನ್ನಾಗಿದಿ ಅಂತಾ ಹೇಳಿದ್ದು ನಂತರ ಇಂದು ದಿನಾಂಕ 23.03.2020 ರಂದು ಬೆಳಗಿನ ಜಾವ 05:00 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ಬಹರ್ಿದೆಸೆಗೆ ಹೋಗಿ ಮರಳಿ ಮನೆಗೆ ಹೋಗುತ್ತಿದ್ದಾಗ ಆರೋಪಿತನು ತಡೆದು ನಿಲ್ಲಿಸಿ ಆಕೆಯ  ಕೈ ಹಿಡಿದು ಎಳೆದು ಮೈ ಮೇಲಿನ ಬಟ್ಟೆಗಳನ್ನು ಬಿಚ್ಚುತ್ತ ಮಾನಭಂಗ ಮಾಡಲು ಯತ್ನಸುತಿದ್ದಾಗ ಫಿರ್ಯಾದಿಯ ಅತ್ತೆ ಬಂದು ಬಿಡಿಸಿಕೊಂಡಿದು ಆಗ ಆರೋಪಿತನು ಲೇ ಸೂಳೆ ಇನ್ನೊಮ್ಮೆ ನಿನಗೆ ಬಿಡೋದಿಲ ಅಂತಾ ಅವಾಚ್ಯವಾಗಿ ಬೈದಿದ್ದ ಬಗ್ಗೆ ಫಿರ್ಯಾದಿದಾರಳು ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಸದರಿ ಫಿರ್ಯಾಧಿಯ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 52/2020 ಕಲಂ: 341, 354(ಬಿ), 504, ಐಪಿಸಿ

                             
ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 04/2020 ಕಲಂ 174 ಸಿ.ಆರ್.ಪಿ.ಸಿ:- ಇಂದು ದಿನಾಂಕ 23.03.2020 ರಂದು ಪಿರ್ಯಾಧೀ ಹೇಳಿಕೆ ನೀಡಿದ್ದೆನೆಂದರೆ ನನ್ನ ಮಗನಾದ ರಾಜೇಶ @ ರಾಜಪ್ಪನಿಗೆ ಸುಮಾರು 2-3 ವರ್ಷದಿಂದ ಹೊಟ್ಟೆಬೆನೆ ಇದ್ದು ಅಲ್ಲಲ್ಲಿ ಖಾಸಗಿಯಾಗಿ ಚಿಕಿತ್ಸೆ ನೀಡಿದ್ದರು ಸಹ ಕಡಿಮೆ ಆಗಿರಲಿಲ್ಲ. ನಮ್ಮೂರ ಸೀಮಾಂತರದ ನಮ್ಮ ಸವಳಪಟ್ಟಿ ಹೊಲದಲ್ಲಿ ದನಕರುಗಳು ಕಟ್ಟಿಹಾಕಿತ್ತಿದ್ದರು ಸದರಿ ಹೊಲಕ್ಕೆ ನಮ್ಮ ನನ್ನ ಮಗ ರಾಜೇಶ ಈತನು ಮಲಗಲು ಹೋಗುತ್ತಿದ್ದನು. ಎಂದಿನಂತೆ ದಿನಾಂಕ 20.03.2020 ರಂದು ರಾತ್ರಿ 8.00 ಗಂಟೆ ಸುಮಾರಿಗೆ ಊಟ ಮಾಡಿ ಹೊಲಕ್ಕೆ ಮಲಗಲು ಹೋಗಿದ್ದನು. ನಂತರ ದಿನಾಂಕ 21.03.2020 ರಂದು ಬೆಳಿಗ್ಗೆ 6-.30 ರಿಂದ 7.00 ಗಮಟೆ ಅವಧಿಯಲ್ಲಿ ಪಿರ್ಯಾಧಿಯ ಮಗ ಹೊಲದಲ್ಲಿ ವಿಷಯ ಸೇವನೆ ಮಾಡಿದ ಬಗ್ಗೆ ಗೊತ್ತಾಗಿ ನಂತರ ಸದರಿಯವನಿಗೆ ಉಪಚಾರ ಕುರಿತು ರೀಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 22.03.2020 ರಂದು ರಾತ್ರಿ 8.38 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಈ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತಾ ಪಿರ್ಯಾದಿ 

ವಡಗೇರಾ ಠಾಣೆ ಗುನ್ನೆ ನಂ;- 32/2020 ಕಲಂ: 186, 504, 323, 355, 341, 506 ಸಂ 34 ಐಪಿಸಿ:- ಇಂದು ದಿನಾಂಕ: 23/03/2020 ರಂದು 6-30 ಪಿಎಮ್ ಕ್ಕೆ ಶ್ರೀ ಶಿವಾಜಿ ತಂದೆ ಮಾಣಿಕ ಚವ್ಹಾಣ ವ:30 ವರ್ಷ ಪಂಚಾಯತ ಅಭಿವೃಧ್ದಿ ಅಧಿಕಾರಿ ಕುರುಕುಂದಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ದಿನಾಂಕ: 20/03/2020 ರಂದು 7 ಪಿಎಮ್ ಸುಮಾರಿಗೆ ನಮ್ಮ ಪಂಚಾಯತ ಕಛೇರಿಯಲ್ಲಿ ಹೆಚ್ಚು ಕೆಲಸ ಇದ್ದುದ್ದರಿಂದ ನಾನು ಕಛೇರಿಯ ಕೆಲಸದ ಅವಧಿ ಮುಗಿದ ನಂತರವು ಕೂಡಾ ಕೆಲಸ ಮಾಡುತ್ತಾ ಕುಳಿತ್ತಿದ್ದಾಗ ಕುರುಕುಂದಾ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಮಲ್ಲಪ್ಪ ತಂದೆ ಮರೆಪ್ಪ ಹಲಗಿ ಮತ್ತು ಶರಣಪ್ಪ ತಂದೆ ಚಿದಾನಂದಪ್ಪ ಬಬಲಾದಿ, ಯಲ್ಲಪ್ಪ ತಂದೆ ಭೀಮಪ್ಪ ಲಕ್ಷ್ಮೀಂಪೂರ ಈ ಮೂರು ಜನರು ಸೇರಿಕೊಂಡು ಬಂದು ನಾವು ಮಹಾತ್ಮಾಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಕಾಮಗಾರಿ ಮಾಡಿದ್ದು, ಕಾಮಗಾರಿ ಬಿಲ್ಲನ್ನು ಪಾವತಿಸಬೇಕು. ಈ ಕ್ಷಣವೇ ತಾವು ಎಮ್.ಐ.ಎಸ್ ಮಾಡಬೇಕು ನಮ್ಮ ಯಾವುದೇ ಕಾಮಗಾರಿಯನ್ನು ತಾವು ಖುದ್ದಾಗಿ ಪರಿಶೀಲಿಸಬಾರದು. ನಮಗೆ ಬೊಗಸ ಬಿಲ್ಲು ಮಾಡಿಕೊಡಬೇಕು. ನಾವು ಮೂವರು ಸೇರಿಕೊಂಡು ನಿಮಗೆ ಹೇಳಿದ ಮೇಲೆ ತಾವು ಬಿಲ್ಲುಗಳ ಹಣ ಪಾವತಿಸಲು ಏನು ತೊಂದರೆ ಎಂದು ಏರು ಧ್ವನಿಯಲ್ಲಿ ಪ್ರಶ್ನೆ ಮಾಡುತ್ತಿದ್ದರು. ಆಗ ನಾನು ಅವರಿಗೆ ಇವತ್ತೆ ಕಾಮಗಾರಿ ಮುಗಿದಿರುತ್ತದೆ. ನಾನು ಕಾಮಗಾರಿ ಪರಿಶೀಲನೆ ಮಾಡಿ ಸರಕಾರದ ನಿಯಮಾವಳಿಗಳ ಅಡಿಯಲ್ಲಿ ಹಣ ಪಾವತಿಸುತ್ತೇನೆ ಎಂದು ಸಮಾಧಾನದಿಂದ ಹೇಳಿದರು ಕೂಡಾ ಈ ಮೂರು ಜನ ಕೇಳದೆ ನನಗೆ ಅವಾಚ್ಯ ಶಬ್ದಗಳಿಂದ ಬೈದು ಸರಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ನನಗೆ ಅಡ್ಡಿಪಡಿಸಿ ಮಲ್ಲಪ್ಪ ಉಪಾಧ್ಯಕ್ಷನು ನನ್ನ ಕೊರಳ ಪಟ್ಟಿ ಹಿಡಿದು ತನ್ನ ಎಡಗಾಲ ಚಪ್ಪಲಿಯಿಂದ ನನಗೆ ಒಂದು ಏಟು ಹೊಡೆದನು. ಶರಣಪ್ಪ ಮತ್ತು ಯಲ್ಲಪ್ಪ ಇಬ್ಬರೂ ನನಗೆ ಕಪಾಳಕ್ಕೆ ಹೊಡೆದರು. ಯಲ್ಲಪ್ಪನು ನನಗೆ ಜಾಡಿಸಿ ನೂಕಿದನು. ನಾನು ಹೊರಗಡೆ ಹೋಗಬೇಕೆನ್ನುತ್ತಿದ್ದವನಿಗೆ ಮಗನೆ ಹೊರಗಡೆ ಹೇಗೆ ಹೋಗುತ್ತಿ ನಮ್ಮ ಬಿಲ್ಲು ಮಾಡಿಯೇ ಹೋಗಬೇಕು ಎಂದು ತಡೆದು ನಿಲ್ಲಿಸಿ, ಮತ್ತೆ ಹೊಡೆಯಲು ಬಂದಾಗ ನಮ್ಮ ಕಾರ್ಯಲಯಕ್ಕೆ ಕೆಲಸದ ಪ್ರಯುಕ್ತ ಬಂದಿದ್ದ ನಿಂಗಪ್ಪ ಕುರಿ ಮತ್ತು ಸದಸ್ಯರಾದ ಮಲ್ಲಣ್ಣ ಜಂಗರೆಡ್ಡಿ, ಸಂತೋಷ ಹೊರಟಪ್ಯಾಟಿ ಹಾಗೂ ಕಂಪ್ಯೂಟರ ಆಪರೇಟರ್ ರಂಗಪ್ಪ ಬಾಗ್ಲಿ, ಸದಸ್ಯರಾದ ಅಂಬ್ರೇಶಗೌಡ ಹಾಜರಿದ್ದು, ನನ್ನ ಮೇಲೆ ಹಲ್ಲೆ ಮಾಡಿದ್ದನ್ನು ತಡೆದು ಬಿಡಿಸಿರುತ್ತಾರೆ. ಆಗ ಹೊಡೆಯುವುದನ್ನು ಬಿಟ್ಟ ಮೂರು ಜನರು ನನಗೆ ಮಗನೆ ಈ ಪಂಚಾಯತಿಯಲ್ಲಿ ಹೇಗೆ ಡ್ಯೂಟಿ ಮಾಡುತ್ತಿಯಾ ನಿನಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಕಾರಣ ಕರ್ತವ್ಯದ ಮೇಲೆ ಇದ್ದ ನನಗೆ ಅವಾಚ್ಯ ಬೈದು ಚಪ್ಪಲಿಯಿಂದ ಮತ್ತು ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ನಮ್ಮ ಮೇಲಾಧಿಕಾರಿಗಳೊಂದಿಗೆ ಚಚರ್ೆ ಮಾಡಿ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 32/2020 ಕಲಂ: 186, 504, 323, 355, 341, 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ:- 32/2020 ಕಲಂ: 3 & 7, ಇಸಿ ಆಕ್ಟ್:- ಇಂದು ದಿನಾಂಕ;23/03/2020 ರಂದು 8-15 ಪಿಎಮ್ ಕ್ಕೆ ಶ್ರೀ ಶಂಕರಗೌಡ ಸೋಮನಾಳ ಮಾನ್ಯ ಸಹಾಯಕ ಆಯುಕ್ತರು ಯಾದಗಿರಿ ಉಪವಿಭಾಗ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ;23/03/2020 ರಂದು ಸಾಯಂಕಾಲ 7-30 ಗಂಟೆಗೆ ನಾನು ಮತ್ತು ಜಿಲ್ಲಾಸಮಾಜ ಕಲ್ಯಾಣ ಅಧಿಕಾರಿ ಕರ್ತವ್ಯದಲ್ಲಿ ಇದ್ದಾಗ ಯಾಧಗಿರಿ ನಗರದ ಸುಭಾಸ ಚೌಕ ಹತ್ತಿರ ಮಹಾಲಕ್ಷ್ಮೀ ಫಾರ್ಮ (ಮೆಡಿಕಲ್ ಸ್ಟೋರ್ಸ)ಗೆ ಹೋಗಿ ಮುಖಗವಸು(ಮಾಸ್ಕ)ಗಳನ್ನು ತೆಗೆದುಕೊಳ್ಳಲು ಹೋದಾಗ 2 ಲೇಯರ್ಗೆ 30 ರೂ ಹಾಗೂ ಬಟ್ಟೆ ಮಾಸ್ಕಗೆ 20 ರೂ ಪಡೆದು ಯಾವುದೇ ಬಿಲ್ಗಳನ್ನು ನೀಡಿರುವುದಿಲ್ಲಾ ಅಗತ್ಯ ವಸ್ತುಗಳನ್ನು ಸಕರ್ಾರ ನಿಗದಿ ಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಸ್ವತಃ ನನ್ನಗೇಯೇ ಅನುಭವವಾಗಿರುವುದರಿಂದ ಅಗತ್ಯ ವಸ್ತುಗಳ ಕಾಯ್ದೆ 1955, 2020 ರ ಪ್ರಕಾರ ಕಾನೂನು ಕ್ರಮ ಕೈಕೊಳ್ಳಲು ಕೋರಿದೆ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.32/2020 ಕಲಂ.3 ಮತ್ತು 7 ಇ.ಸಿ ಆಕ್ಟ್-1955, 2020 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೇ ಕೈಕೊಂಡೆನು.
   
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 100/2020 ಕಲಂ 3(2)(ಸಿ) & 7 ಇಸಿ ಕಾಯ್ದೆ 1955;- ಇಂದು ದಿನಾಂಕ 23/03/2020 ರಂದು 10.15 ಪಿಎಂ ಕ್ಕೆ ಮಾನ್ಯ ಶ್ರೀ ಶಂಕರಗೌಡ ಸೋಮನಾಳ ಸಹಾಯಕ ಆಯುಕ್ತರು ಯಾದಗೀರ ಉಪವಿಭಾಗ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಸ್ವಯಂ ಲಿಖಿತ ಅಜರ್ಿಯನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಶಹಾಪೂರ ನಗರದಲ್ಲಿ ಕೊರೋನಾ ವೈರಸ್ ಮುಂಜಾಗ್ರತಾ ಕ್ರಮ ವಹಿಸುವ ಕುರಿತು ಶಹಾಪೂರ ನಗರಕ್ಕೆ ಆಗಮಿಸಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಾದ ಶ್ರೀ ಚನ್ನಬಸವ ಹಾಗೂ ಶಹಾಪೂರ ತಹಸೀಲ್ದಾರರಾದ ಶ್ರೀ ಜಗನ್ನಾಥರೆಡ್ಡಿ ಯವರೊಂದಿಗೆ ಶಹಾಪೂರ ನಗರದ ಮುಖ್ಯ ಬಜಾರನಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಪರಿಶೀಲನೆ ಮಾಡುತ್ತಿರುವಾಗ ಮಾಹಿತಿ ಬಂದಿದ್ದೇನೆಂದರೆ, ಕೊರೋನಾ ವೈರಸ್ ಮುಂಜಾಗ್ರತೆಗಾಗಿ ಕೈಗೊಳ್ಳುವ ಕ್ರಮಗಳಲ್ಲಿ ಒಂದಾದ ಮಾಸ್ಕ ಧರಿಸುವುದು ಅವಶ್ಯಕತೆ ಇದ್ದು ಸಾಮಾನ್ಯ ಜನರು ಮಾಸ್ಕ ಧರಿಸುವುದ್ಕಾಗಿ ಲಭ್ಯವಿರುವ ಮೆಡಿಕಲ್ ಅಂಗಡಿಗಳಲ್ಲಿ ಖರೀದಿಸುತ್ತಿದ್ದು ಆದರೆ ಶಹಾಪೂರ ನಗರದ ನ್ಯೂ ಮೈಸೂರ್ ಮೆಡಿಕಲ್ ಸ್ಟೋರ ಹಾಗೂ ವಿಜಯ ಮೆಡಿಕಲ್ ಸ್ಟೋರಗಳಲ್ಲಿ ಅವಶ್ಯಕ ವಸ್ತುವಾದ ಮಾಸ್ಕನ್ನು ಸಕರ್ಾರ ನಿಗದಿಪಡಿಸಿದ ಬೆಲೆಗಿಂತ ದುಬಾರಿ ಬೆಲೆಗೆ ಸಾಮಾನ್ಯ ಜನರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿಯ ಮೇರೆಗೆ ನಾನು ಇಂದು ದಿನಾಂಕ 23/03/2020 ರಂದು 9.30 ಪಿಎಂ ಸುಮಾರಿಗೆ ಹೋಗಿ ಸದರಿ ಮೆಡಿಕಲ್ ಸ್ಟೋರಗಳಲ್ಲಿ ಮಾಸ್ಕನ್ನು ಖರೀದಿಸಲಾಗಿ ಸಕರ್ಾರದ ನಿಗದಿಯಂತೆ 3 ಪದರಿನ ಮಾಸ್ಕನ್ನು 10/- ರೂಪಾಯಿಗೆ ಹಾಗೂ 2 ಪದರಿನ ಮಾಸ್ಕನ್ನು 8/- ರೂಪಾಯಿಗೆ ಮಾರಾಟ ಮಾಡಬೇಕು ಆದರೆ ಸದರಿ ಎರಡೂ ಮೆಡಿಕಲ್ ಸ್ಟೋರನವರು 2 ಪದರಿನ ಸ್ವಲ್ಪ ದಪ್ಪನೆಯ ಮಾಸ್ಕನ್ನು 40/- ರೂಪಾಯಿಗೆ ಹಾಗೂ 2 ಪದರಿನ ತೆಳುವಾದ ಮಾಸ್ಕನ್ನು 15 ರೂಪಾಯಿಗೆ ಮಾರಾಟ ಮಾಡಿದ್ದು ಅಲ್ಲದೇ ಮಾಸ್ಕ ಖರೀದಿಸಿದ್ದಕ್ಕೆ ಯಾವುದೇ ಬಿಲ್ ನೀಡಿರುವುದಿಲ್ಲ. ಆದ್ದರಿಂದ ಸಕರ್ಾರದ ನಿಯಮ ಉಲ್ಲಂಘಿಸಿ ಅವಶ್ಯಕ ವಸ್ತುವಾದ ಮಾಸ್ಕನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಸಾರ್ವಜನಿಕರಿಗೆ ನಿಗದಿಪಡಿಸಿದ ಬೆಲೆಗಿಂತ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ನ್ಯೂ ಮೈಸೂರ್ ಮೆಡಿಕಲ್ ಸ್ಟೋರ ಶಹಾಪೂರದ ಮಾಲೀಕ ಹಾಗೂ ವಿಜಯ ಮೆಡಿಕಲ್ ಸ್ಟೋರ ಶಹಾಪೂರದ ಮಾಲೀಕರ ವಿರುದ್ದ ಅಗತ್ಯ ವಸ್ತುಗಳ ಕಾಯ್ದೆ 1955,2020 ನೇದ್ದರಲ್ಲಿ ಪ್ರಕರಣ ದಾಖಲಿಸುವಂತೆ ವರದಿ ನೀಡಿದ್ದರ ಮೇಲಿಂದ ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ 100/2020 ಕಲಂ 3(2)(ಸಿ) ಮತ್ತು 7 ಇ.ಸಿ ಕಾಯ್ದೆ 1955 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!