ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 21/03/2020

By blogger on ಭಾನುವಾರ, ಮಾರ್ಚ್ 22, 2020                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 21/03/2020 
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 30/2020 ಕಲಂ: 504,341,323,506 ಐಪಿಸಿ:- ಇಂದು ದಿನಾಂಕ: 21/03/2020 ರಂದು 3-20 ಪಿಎಮ್ ಕ್ಕೆ ಶ್ರೀ ಮಲ್ಲಪ್ಪ ತಂದೆ ಮರೆಪ್ಪ ಹಲಗಿ, ವ:28, ಜಾ:ಮಾದಿಗ, ಉ:ಗ್ರಾಮ ಉಪಾಧ್ಯಕ್ಷ ಸಾ:ಕುರುಕುಂದಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಹಾಲಿ ಕುರಕುಂದಾ ಗ್ರಾಮ ಪಂಚಾಯತ ಉಪಾಧಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಹೀಗಿದ್ದು ದಿನಾಂಕ: 20/03/2020 ರಂದು ಸಂಜೆ 7:00 ಗಂಟೆ ಸುಮಾರಿಗೆ ನಮ್ಮ ಗ್ರಾಮ ಪಂಚಾಯತಿಯ ಅಭಿವೃದ್ದಿಯ ಅಧಿಕಾರಿಯಾದ ಲಂಬಾಣಿ ಸಮುದಾಯದ ಶಿವಾಜಿ ಚವ್ಹಾಣ ಇವರು ನಮ್ಮ ಗ್ರಾಮ ಪಂಚಾಯತ ಕಾರ್ಯಲಯದಲ್ಲಿ ಇದ್ದಾಗ ನಾನು ಅಲ್ಲಿಗೆ ನಮ್ಮ ಗ್ರಾಮ ಪಂಚಾಯತಿಯಲ್ಲಿ ಈ ವರ್ಷದ ಸಕರ್ಾರದ ಯೋಜನೆಗಳಾದ ಉದ್ಯೋಗ ಖಾತ್ರಿ (ನರೇಗಾ) ಮತ್ತು 14 ನೇ ಹಣಕಾಸಿನ ಅನುದಾನಗಳ  ದುರುಪಯೋಗಗಳ ಬಗ್ಗೆ ನಾನು ಯಾದಗಿರಿ ಜಿಲ್ಲಾ ಪಂಚಾಯತಗೆ ದೂರು ನೀಡಿದ್ದರ ಬಗ್ಗೆ ಪಿಡಿಓ ರವರಿಗೆ ಕೇಳಿದಾಗ ಪಂಚಾಯತ ಅಭಿವೃದ್ದಿ ಅಧಿಕಾರಿಯು ಏಕಾಏಕಿ ಎದ್ದವನೇ ಏ ಬೋಸುಡಿ ಮಗನೇ  ನನಗೆ  ಲೆಕ್ಕ ಕೇಳುತ್ತೀಯಾ ಎಂದವನೇ ಕೈಯಿಂದ ನನ್ನ ಹೊಟ್ಟೆಗೆ ಗುದ್ದಿ ಬೂಟುಗಾಲಿನಿಂದ ಬೆನ್ನಿಗೆ ಒದ್ದನು. ನಾನು ಅಂಗವಿಕಲನಿದ್ದರೂ ಅದನ್ನು ನೋಡದೇ ಅವಾಚ್ಯವಾಗಿ ಬೈದು ನನ್ನ ಮೇಲೆ ಹಲ್ಲೆ ಮಾಡಿದಾಗ ಅಲ್ಲಿಯೇ ಇದ್ದ ನಮ್ಮೂರಿನ ಯಲ್ಲಪ್ಪ ತಂದೆ ಭೀಮಪ್ಪ, ನಾಗರಾಜ ತಂದೆ ಶರಣಪ್ಪ ಮತ್ತು ಶರಣಪ್ಪ ತಂದೆ ಚಿದಾನಂದಪ್ಪರವರು ನೋಡಿ ಬೀಡಿಸಿರುತ್ತಾರೆ. ನಾವು ಬಾಬಾ ಸಾಹೇಬ ಅಂಬೇಡ್ಕರರವರ ಸಂವಿಧಾನದ ಕಾನೂನು ಪ್ರಕಾರ ಕೆಲಸ ಮಾಡಿ ಎಂದರೆ ಅದರ ಬಗ್ಗೆ ಬಗ್ಗೆ ಏನು ಹೇಳತ್ತೀಯಾ ಮಾತು ಮಾತಿಗೆ ಅಂಬೇಡ್ಕರ ಅಂತಿಯಾ ಅವರೇನು ಮಾಡಿದಾರೆ ನಾನು ಮಾಡಿದರೆನೆ ಎಲ್ಲಾ ಆಗುತ್ತದೆ ಲೆ ಬೋಸಡಿ ಮಗನೇ ಕಂಪ್ಲೇಂಟ್ ಕಂಪ್ಲೇಂಟ್ ಅಂತಾ  ಸಾಯತ್ತೀಯಾ ಏನು ಕಂಪ್ಲೇಂಟ್ ಮಾಡುತ್ತೀಯಾ ಮಾಡು ನಾನು ಸಸ್ಪೆಂಡ್ ಮಾಡಿದ್ದರೆ ಆಗ್ಗಿಂದಾಗೆ ರೀ ಆರ್ಡರ ಮಾಡಿಸಿಕೊಂಡು ಬರುತ್ತೇನೆ ಎಂದೂ ಬಾಯಿಗೆ ಬಂದತೆ ಬೈದು ನನಗೆ ಯಾರು ಏನು ಮಾಡಲು ಆಗುವುದಿಲ್ಲ ಎಂದು ಅವಾಚ್ಯ ಬೈದನು. ನಾನು ಪಂಚಾಯತಿಯಿಂದ ಹೊರಗೆ ಬರುತ್ತಿದ್ದವನಿಗೆ ಪುನಃ ತಡೆದು ನಿಲ್ಲಿಸಿ, ಮಗನೆ ಇನ್ನು ಮುಂದೆ ನೀನು ಪಂಚಾಯತ ಕಡೆ ಬಂದರೆ ನಿನ್ನನ್ನು ಜೀವ ಸಹಿತ ಬೀಡುವುದಿಲ್ಲ ಎಂದೂ ಜೀವಬೆದರಿಕೆ ಹಾಕಿರುತ್ತಾನೆ. ಆದ್ದರಿಂದ ಪಿ.ಡಿ.ಓ ಶಿವಾಜಿ ಚವ್ಹಾಣ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 30/2020 ಕಲಂ: 504,341,323,506 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ  ಪೊಲೀಸ ಠಾಣೆ ಗುನ್ನೆ ನಂ:- 31/2020 ಕಲಂ: 498(ಎ), 504, 323, 506 ಸಂ 149 ಐಪಿಸಿ:- ಇಂದು ದಿನಾಂಕ: 21/03/2020 ರಂದು 5-30 ಪಿಎಮಕ್ಕೆ ಶ್ರೀಮತಿ ಶೈನಾಜ ಬೇಗಂ ಗಂಡ ಅಬ್ದುಲ್ ಪಟೇಲ್, ವ:32 ವರ್ಷ, ಜಾ:ಮುಸ್ಲಿಂ, ಉ:ಮನೆಕೆಲಸ ಸಾ:ನಾಯ್ಕಲ್ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನ್ನ ತವರು ಮನೆಯು ಯಾದಗಿರಿಯ ಅಜೀಜ ಕಾಲೋನಿ ಇರುತ್ತದೆ. ನನಗೆ ಸುಮಾರು 13 ವರ್ಷಗಳ ಹಿಂದೆ ಮನಗನಾಳ ಗ್ರಾಮದ ಅಬ್ದುಲ್ ಪಟೇಲ್ ತಂದೆ ಇಮಾಮ ಪಟೇಲ್ ಸಾ:ಮನಗನಾಳ ತಾ:ವಡಗೇರಾ ಈತನೊಂದಿಗೆ ನನ್ನ ತಂದೆ-ತಾಯಿಯವರು ನಮ್ಮ ಗುರು ಹಿರಿಯರ ಸಮಕ್ಷಮ ಲಗ್ನ ಮಾಡಿಕೊಟ್ಟಿರುತ್ತಾರೆ. ನಮಗೆ ಎರಡು ಜನ ಗಂಡು ಮತ್ತು ಎರಡು ಜನ ಹೆಣ್ಣು ಮಕ್ಕಳಿರುತ್ತಾರೆ. ನಾವು ಗಂಡ-ಹೆಂಡತಿ ಮನಗನಾಳದಲ್ಲಿ ನಮ್ಮ ಅತ್ತೆ ಸುರಯ್ಯ ಬೇಗಂ, ಮಾವ ಇಮಾಮ ಪಟೇಲ್, ನನ್ನ ಗಂಡನ ಅಣ್ಣ ಚಾಂದ ಪಟೇಲ್ ನವರೊಂದಿಗೆ ವಾಸವಾಗಿದ್ದೆವು. ಅಲ್ಲಿ ನನ್ನ ಗಂಡ, ಅತ್ತೆ-ಮಾವ ಮತ್ತು ನನ್ನ ಗಂಡನ ಅಣ್ಣ ಮತ್ತು ನಾದಿನಿಯವರಾದ ಹನೀಫಾ ಗಂಡ ದಾವೂದ ಹಾಗೂ ಹಸೀನಾ ಬೇಗಂ ಗಂಡ ಶಮಶು ಇವರೆಲ್ಲರೂ ನನಗೆ ವಿನಾಕಾರಣ ನಿನಗೆ ಕೆಲಸ ಮಾಡಲು ಬರಲ್ಲ, ಅಡಿಗೆ ಮಾಡಲು ಬರಲ್ಲ, ನೀನು ಸಿಟಿಯಿಂದ ಬಂದಿನಿ ಅಂತಾ ಧಿಮಾಕು ತೋರಿಸುತ್ತಿ ಎಂದು ನನಗೆ ಹೊಡೆಬಡೆ ಮಾಡುವುದು ಮಾಡಿ ಕಿರುಕುಳ ಕೊಡಲಾರಂಭಿಸಿದ್ದರು. ಆಗ ನನ್ನ ತಂದೆ-ತಾಯಿಗೆ ನಾನು ನನಗೆ ಕಿರುಕುಳ ಕೊಡುತ್ತಿರುವ ವಿಷಯ ಹೇಳಿದಾಗ ನನ್ನ ತಂದೆ-ತಾಯಿ ನಮ್ಮ ಹಿರಿಯರಾದ 1) ಜುಬೇರ ತಂದೆ ಅಬ್ದುಲ ಸಮದ 2) ಜಲಾಲ ಪಟೇಲ್ ತಂದೆ ಅಮೀರಪಟೇಲ್ ಇವರುಗಳಿಗೆ ಕರೆದುಕೊಂಡು ಬಂದು ನನ್ನ ಗಂಡ, ಅತ್ತೆ-ಮಾವನರಿಗೆ ಕೂಡಿಸಿಕೊಂಡು ಬುದ್ದಿ ಮಾತು ಹೇಳಿದ್ದು, ಆಗ ಅವರು ನಾವು ಶೈನಾಜ ಬೆಗಂಳಿಗೆ ಕಿರುಕುಳ ಕೊಟ್ಟಿದ್ದು ತಪ್ಪಾಗಿರುತ್ತದೆ. ಇನ್ನು ಮುಂದೆ ಅವಳಿಗೆ ಸರಿಯಾಗಿ ನೋಡಿಕೊಳ್ಳುತ್ತೇವೆ ಎಂದು ಹೇಳಿ ಕಳುಹಿಸಿದರು. ಅಲ್ಲಿಂದ ಕೆಲವು ದಿನಗಳು ಸರಿಯಾಗಿ ನೋಡಿಕೊಂಡು ನನ್ನ ಗಂಡ, ಅತ್ತೆ-ಮಾವ ಮತ್ತು ನನ್ನ ಗಂಡನ ಅಣ್ಣ, ನಾದಿನಿಯವರು ನನಗೆ ಪುನ: ಕಿರುಕುಳ ಕೊಟ್ಟು ಹೊಡೆಬಡೆ ಮಾಡುವುದು ಮಾಡಲಾರಂಭಿಸಿದ್ದರು. ನಂತರ ನನ್ನ ಗಂಡನು ನನಗೆ ಮತ್ತು ನನ್ನ ಮಕ್ಕಳಿಗೆ ಕರೆದುಕೊಂಡು ಬಂದು ನಾಯ್ಕಲ್ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿ ಇಟ್ಟನು. ನಾಯ್ಕಲ್ ಗ್ರಾಮದಲ್ಲಿ ಕೆಲ ದಿನ ಸರಿಯಾಗಿ ಇದ್ದ ನನ್ನ ಗಂಡ ನಂತರ ಮತ್ತೆ ತನ್ನ ತಂದೆ-ತಾಯಿ, ಅಣ್ಣ ಮತ್ತು ಅಕ್ಕತಂಗಿಯವರಿಗೆ ಕರೆಸಿ, ನನಗೆ ಹೊಡೆಬಡೆ ಮಾಡುವುದು ಮಾಡುತ್ತಿದ್ದನು. ಹೀಗಿದ್ದು ದಿನಾಂಕ: 12/03/2020 ರಂದು 7-30 ಪಿಎಮ್ ಸುಮಾರಿಗೆ ನನ್ನ ಗಂಡನು ಮನೆಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಛಿನಾಲಿ ತೂ ಕುಚ್ ಕಾಮ ನಹಿ ಕರತಿ ಮೇರೆ ಘರಕೊ ಬರಬಾದ ಕರನೆ ಆಯಿ ಎಂದು ಅವಾಚ್ಯ ಬೈದು ಕೈಯಿಂದ ತೆಲೆ ಹಿಂಭಾಗ ಹೊಡೆದು ಒಳಪೆಟ್ಟು ಮಾಡಿದನು ಮತ್ತು ನನಗೆ ನೆಲಕ್ಕೆ ಹಾಕಿ ಕಾಲಿನಿಂದ ಹೊಟ್ಟೆಗೆ ಒದ್ದಿರುತ್ತಾನೆ. ನೀನು ಇವತ್ತೆ ತವರು ಮನೆಗೆ ಹೋದರೆ ಸರಿ ಇಲ್ಲಂದ್ರೆ ನಿನಗೆ ಇವತ್ತೆ ಖಲಾಸ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾನೆ. ಆಗ ಜಗಳವನ್ನು ನಮ್ಮ ಮನೆ ಮಾಲಿಕರಾದ ಪುತಲಿ ಬೇಗಂ ಇವರು ನೋಡಿರುತ್ತಾರೆ. ನಾನು ಅಲ್ಲಿಂದ ನನ್ನ ಗಂಡನಿಗೆ ಅಂಜಿ ನನ್ನ ತವರು ಮನೆ ಯಾದಗಿರಿಗೆ ಹೋಗಿ ಅವರಿಗೆ ವಿಷಯ ತಿಳಿಸಿ, ಇಂದಲ್ಲ ನಾಳೆ ನನ್ನ ಗಂಡ ಸರಿ ಹೋಗಿ ಬಂದು ನನಗೆ ಕರೆದುಕೊಂಡು ಹೋಗಬಹುದು ಎಂದು ಕಾಯುತ್ತಾ ಕುಳಿತ್ತಿದ್ದರಿಂದ ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನನಗೆ ವಿನಾಕಾರಣ ದೈಹಿಕ ಮತ್ತು ಮಾನಸಿಕಿ ಕಿರುಕುಳ ನೀಡಿ, ಕೈಯಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ  ನನ್ನ ಗಂಡ ಮತ್ತು ಅತ್ತೆ-ಮಾವ, ಗಂಡನ ಅಣ್ಣ ಮತ್ತು ನಾದಿನಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 31/2020 ಕಲಂ: 498(ಎ), 504, 323, 506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.  

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- : 50/2020 ಕಲಂ: 323, 324, 325, 504, 506 ಸಂಗಡ 149:- ಇಂದು ದಿನಾಂಕ: 21.03.2020 ರಂದು ಸಂಜೆ 7:30 ಗಂಟೆಗೆ ಶ್ರೀ ಚಂದ್ರಕಾಂತ ಹೆಚ್.ಸಿ-109 ಗುರುಮಠಕಲ್ ಪೊಲೀಸ್ ಠಾಣೆಗೆ ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ದಿಂದ ವಸೂಲಾದ ಖಾಸಗಿ ದೂರು ಸಂಖ್ಯೆ : 17/2020 ದಿನಾಂಕ 17.03.20 ನೇದ್ದನ್ನು ತೆಗೆದುಕೊಂಡು ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಸದರಿ ಖಾಸಗಿ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 50/2020 ಕಲಂ: 323, 324, 325, 504, 506 ಸಂಗಡ 149 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 99/2020.ಕಲಂ 188 ಐ.ಪಿ.ಸಿ.:- ದಿನಾಂಕ 21/03/2020 ರಂದು 11-30 ಗಂಟೆಗೆ ಪಿಯರ್ಾದಿ ಶ್ರೀ ಜಗನ್ನಾಥ ರೆಡ್ಡಿ ತಹಸೀಲ್ದಾರರು  ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ನಾನು ಜಗನ್ನಾಥರೆಡ್ಡಿ ತಹಸೀಲ್ದಾರ ಶಹಾಪುರ ಆಗಿದ್ದು, ನನ್ನ ಅದೀನದ ವ್ಯಾಪ್ತಿಯಲ್ಲಿ ಶಹಾಪುರ ತಾಲೂಕುಗಳು ಒಳಗೊಡಿರುತ್ತದೆ. ಯಾದಗಿರಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡದಂತೆ ಸಾರ್ವಜನಿಕರ ಆರೋಗ್ಯ ಕಾಪುಡುವಂತೆ ಮುಂಜಾಗೃತೆ ಕ್ರಮವಾಗಿ ಯಾದಗಿರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಯಾದಗಿರಿ ಜಿಲ್ಲೆ ಇವರು ಸಿ.ಆರ್.ಪಿ.ಸಿ ಕಲಂ 133, 144(3) ರ ಪ್ರಕಾರ ಹಾಗೂ ಖಿಜ ಏಚಿಡಿಟಿಚಿಣಚಿಞಚಿ ಇಠಿಜಠಟಛಿ ಆಜಚಿಜ ಅಠತಜ-19 ಖಜರಣಟಚಿಣಠಟಿ-2020 ರ ನಿಯಮ 12 ರ ಮೇರೆಗೆ ಆಧೇಶಿಸುವುದು ಅವಶ್ಯಕವೆಂದು ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ದಿನಾಂಕ: 18/03/2020 ರ ಪ್ರಕರಾರ ಜಿಲ್ಲೆಯಾದ್ಯಾಂತ ಕರೋನಾ ವೈರಸ್ ಸೊಂಕಿನಿಂದಾಗಿ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ದಿನಾಂಕ: 14/03/2020 ರಿಂದ 30/03/2020 ರ ವರೆಗೆ ಅನುಸರಣಾ ಕ್ರಮಗಳನ್ನು ಕೈಗೊಳ್ಳಲು ಆಧೇಶಿರುತ್ತಾರೆ. 
ಈ ಆಧೇಶದ ಸಂಖ್ಯೆ ಅನುಕ್ರಮ 1 ರ ಪ್ರಕಾರ ಯಾದಗಿರಿ ಜಿಲ್ಲೆಗೆ ಹೊರ ದೇಶದಿಂದ ಆಗಮಿಸಿದ ಸಾರ್ವಜಿನಕರಿಗೆ ಸೊಂಕು/ರೋಗದ ಲಕ್ಷಣ ಇಲ್ಲದಿದ್ದರೂ(ಂಥಿಟಣಠಟಚಿಣಛಿ) ಸಹ ಮನೆಯಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಗಿರಿಸುವುದು ಎಂಬ ಆಧೇಶವನ್ನು ಮಾಡಲಾಗಿದೆ.

ಶಹಾಪುರ ತಾಲೂಕಿನ ಶಹಾಪುರ ಪಟ್ಟಣದ ನಿವಾಸಿ ಮಲ್ಲಿಕಾಜರ್ುನ ತಂ/ ಶಾಂತಪ್ಪ ಉಳ್ಳಿ ಶಹಾಪುರ ಈತನು ದಿನಾಂಕ: 11/03/2020 ರಂದು ದುಬೈ ಪ್ರವಾಸದಿಂದ ಶಹಾಪುರ ಪಟ್ಟಣಕ್ಕೆ ಆಗಮಿಸಿರುತ್ತಾನೆ ತಾಲೂಕಾ ಆರೋಗ್ಯಾಧಿಕಾರಿ ರವರು ಮನೆಗೆ ಬೇಟಿ ನೀಡಿ ಮನೆಯಲ್ಲಿ 14 ದಿನಗಳ ಕಾಲ ಮನೆಯಿಂದ ಹೊರಗೆ ಬರದೆ ಇರಲು ಸೂಚನೆ ನೀಡಿ ಈ ಆಧೇಶದ ಬಗ್ಗೆ ಆತನಿಗೆ ಸಂಪೂರ್ಣ ಮನವರಿಕೆ ಮಾಡಿದ್ದರೂ ಆದರೆ ವಿದೇಶದಿಂದ ವಾಪಾಸಾದ ಈತನು ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ದಿನಾಂಕ: 18/03/2020 ರ ಆಧೇಶವನ್ನು ಪಾಲನೆ ಮಾಡದೆ ಮನೆಯಲ್ಲಿಯೇ ಪ್ರತ್ಯೇಕವಾಗಿ ಇದ್ದು, ಉದ್ದೇಶಪೂರ್ವವಾಗಿ ರಾತ್ರಿ ಸಮಯದಲ್ಲಿ ತಮ್ಮ ಪಿಗ್ಮಿ ವ್ಯವಹಾರದಸಲುವಾಗಿ ಜನ ನಿಬಿಡ ಪ್ರದೇಶದಲ್ಲಿ ಸಂಚರಿಸಿ ಸಾರ್ವಜನಿಕರ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಕೃತವನ್ನು ಎಸಗಿರುತ್ತಾನೆಂದು ತಾಲೂಕಾ ಆರೋಗ್ಯ ಅಧೀಕಾರಿಗಳು ವರದಿ ನೀಡಿರುತ್ತಾರೆ.
ಕಾರಣ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾದಿಕಾರಿಗಳು ಯಾದಗಿರಿ ರವರ ದಿನಾಂಕ: 18/03/2020 ರ ಆದೇಶಕ್ಕೆ ಅವಿಧೇಯತೆ ತೋರಿ ಸಾರ್ವಜನಿಕರ ಆರೋಗ್ಯ ಮತ್ತು ರಕ್ಷಣೆಗೆ ಭೀತಿ ಉಂಟು ಮಾಡಿರುತ್ತಾನೆ. ಕಾರಣ ಐಪಿಸಿ ಕಲಂ 188 ರ  ಅಡಿಯಲ್ಲಿ ಈತನ ವಿರುದ್ದ ಪ್ರಕರಣ ದಾಖಲು ಮಾಡಿಕೊಳ್ಳಲು ಕೋರಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ. 99/2020 ಕಲಂ 188 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು. 

                             
ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 37/2020 ಕಲಂ 324, 504, 506 ಐಪಿಸಿ:-ದಿನಾಂಕ:20/03/2020 ರಂದು ರಾತ್ರಿ 9.15 ಗಂಟೆ ಸುಮಾರಿಗೆ ಫಿಯರ್ಾದಿ ಮನೆಯಲ್ಲಿದ್ದಾಗ ಆರೋಪಿತನು ಮನೆಗೆ ಬಂದು ಹೊಲದ ಪಾಲಿನ ವಿಷಯದಲ್ಲಿ ಫಿಯರ್ಾದಿಯೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಫಿಯರ್ಾದಿಯ ಹಣೆಗೆ ಹೊಡೆದು ರಕ್ತಗಾಯ ಮಾಡಿ ಜೀವದ ಬೆದರಿಕೆ ಹಾಕಿ ಹೋಗಿದ್ದು ಫಿಯರ್ಾದಿಯು ಠಾಣೆಗೆ ಬಂದು ಆರೋಪಿತನ ವಿರುಧ್ಧ ದೂರು ನೀಡಿದ್ದು ಇರುತ್ತದೆ.

ಶೋರಾಪೂರ ಠಾಣೆ ಗುನ್ನೆ ನಂ;- 76/2020 ಕಲಂ: 78 () ಕೆ.ಪಿ. ಕಾಯ್ದೆ  :- ಇಂದು ದಿನಾಂಕ: 21/03/2020 ರಂದು 4-30 ಪಿ.ಎಮ್. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಚೇತನ್ ಪಿ.ಎಸ್.ಐ (ಕಾ&ಸೂ)ಸಾಹೇಬರು ಒಬ್ಬ ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಹಾಗು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:21/03/2020 ರಂದು 2 ಪಿ.ಎಮ್. ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪಟ್ಟಣದ ಹಳೆಯ ಬಸ್ಸ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ  ಸಿಬ್ಬಂದಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ನಿಂಗಪ್ಪ ಹೆಚ್.ಸಿ-118  3) ಶ್ರೀ ಬಸಪ್ಪ ಸಿಪಿಸಿ-393 4) ಶ್ರೀ ದಯಾನಂದ ಸಿಪಿಸಿ-337 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ- 176 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಶಿವು ತಂದೆ ಮರೆಪ್ಪ ಕುರಕುಂದಿ ವಯಾ:35 ವರ್ಷ ಉ:ಒಕ್ಕಲುತನ ಜಾತಿ:ಬೇಡರ ಸಾ:ಡೊಣ್ಣೆಗೇರಾ ಓಣಿ ಸುರಪೂರ  2) ಶ್ರೀ ನಾಗರಾಜ ತಂದೆ ದಶರಥ ಬಿಚಗತ್ತಿ ವಯಾ:24ವರ್ಷ ಜಾ:ಬೇಡರ ಉ:ಕಿರಾಣಿ ವ್ಯಾಪಾರ ಸಾ: ಬಿಚಗತಕೇರಿ ಸುರಪುರ ಇವರನ್ನು 2-30 ಪಿ,ಎಂ,ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 02:45 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33, ಜಿ-0094 ನೇದ್ದರಲ್ಲಿ ಹೊರಟು 03:00 ಪಿ.ಎಮ್ ಕ್ಕೆ ಸುರಪೂಋ ಹಳೆಯ ಬಸ್ಸ ನಿಲ್ದಾಣದ ಹತ್ತಿರ  ಹೋಗಿ ವಾಹನ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಹಳೆ ಬಸ್ಸ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 03-05 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ತಿಮ್ಮಯ್ಯಾ ತಂದೆ ಮರೆಪ್ಪ ಕುರಕುಂದಿ ವಯಾ:45 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ಮ್ಯಾಗೇರಿ ಓಣಿ ಸುರಪೂರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ  ನಗದು ಹಣ 1500=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 03-05 ಪಿ.ಎಮ್ ದಿಂದ 04-05 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ಆದೇಶ ನೀಡಿದ್ದರ  ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 55/2020 ಕಲಂ: 87 ಕೆಪಿ ಯಾಕ್ಟ:- ಇಂದು ದಿ : 21/03/2020 ರಂದು 20.45 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಕೊಟ್ಟ ಜ್ಞಾಪನ ಪತ್ರದ ಸಾರಾಂಶವೇನೆಂದರೆ, ಇಂದು ದಿನಾಂಕ:21.03.2020 ರಂದು 1600 ಗಂಟೆಗೆ ಕೆಂಭಾವಿ ಪೊಲೀಸ್ ಠಾಣೆಯ ಹದ್ದಿಯ ಪೈಕಿ ಕೆಂಭಾವಿ ಪಟ್ಟಣದ ಭಗೀರಥ ಸಮುದಾಯ ಭವನದ ಹತ್ತಿರ ಪೆಟ್ರೋಲಿಂಗ ಕುರಿತು ಹೋದಾಗ ಸದರ ಭವನದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ್-ಬಾಹರ್ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ 1600 ಗಂಟೆಗೆ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಖುದ್ದಾಗಿ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಸುಮಾರು 6-7 ಜನರು ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ 1620 ಗಂಟೆಗೆ ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡು ನಂತರ ಠಾಣೆಗೆ 1700 ಗಂಟೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ  ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು 2045 ಗಂಟೆಗೆ ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ. 55/2020 ಕಲಂ : 87 ಕೆಪಿ ಆಕ್ಟ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು. ನಂತರ ಪಿರ್ಯಾದಿದಾರರು ದಾಳಿ ಕೈಕೊಂಡಿದ್ದು ದಾಳಿಯಲ್ಲಿ 07 ಜನ ಆರೋಪಿತರಿಗೆ ದಸ್ತಗಿರಿ ಮಾಡಿ ಅವರಿಂದ ಪಂಚರ ಸಮಕ್ಷಮ 7130/- ರೂಪಾಯಿ ನಗದು ಹಣ ಹಾಗು 52 ಇಸ್ಪೀಟ ಎಲೆಗಳನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ ಅಂತ ಮಾನ್ಯರವರಲ್ಲಿ ವಿನಂತಿ ಇರುತ್ತದೆ.
   
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 56/2020 ಕಲಂ: 56/2020 ಕಲಂ:323.324.354.504.506 ಸಂಗಡ 34 ಐಪಿಸಿ:- ಇಂದು ದಿನಾಂಕ 21.03.2020 ರಂದು 9.45 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀಮತಿ ದೇವಕ್ಕೆಮ್ಮ ಗಂಡ ಶರಣಗೌಡ ಮೇಲಿನಮನಿ ವ|| 43 ಜಾ|| ರಡ್ಡಿ ಉ|| ಹೊಲಮನೆಗೆಲಸ ಸಾ|| ವಂದಗನೂರ ತಾ|| ಸುರಪೂರ ಆದ ನಾನು ತಮ್ಮಲ್ಲಿ ಸಲ್ಲಿಸುವ ಫಿಯರ್ಾದಿ ಅಜರ್ಿ ಏನಂದರೆ ನಮ್ಮ ಮಾವನವರಾದ ಬಸರಡ್ಡೆಪ್ಪಗೌಡ ಇವರಿಗೆ ಎರಡು ಜನ ಗಂಡು ಮಕ್ಕಳು ಹಾಗು ಮೂರು ಜನ ಹೆಣ್ಣು ಮಕ್ಕಳಿದ್ದು ಎಲ್ಲಾ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನನ್ನ ಗಂಡನಾದ ಶರಣಗೌಡ ಇವರು ಹಿರಿಯ ಮಗನಾಗಿದ್ದು ಕಿರಿಯವನು ಮಂಜುನಾಥ ಅಂತ ಇರುತ್ತಾನೆ. ನನ್ನ ಗಂಡನ ಹೆಸರಿನಲ್ಲಿ 10 ಎಕರೆ ಹೊಲವಿದ್ದು ಸದರಿ ಹೊಲ ನನ್ನ ಗಂಡ ಮಾರಾಟ ಮಾಡಿದ್ದು ಇರುತ್ತದೆ. ನಮ್ಮ ಮಾವನವರ ಹೆಸರಿನಲ್ಲಿ ಇನ್ನೂ 30 ಎಕರೆ ಹೊಲವಿದ್ದು ಅದರಲ್ಲಿ ನನ್ನ ಗಂಡ ಇನ್ನೂ 10 ಎಕರೆ ಹೊಲ ಬರುತ್ತದೆ. ಅದನ್ನು ಕೇಳಿದ್ದಕ್ಕೆ ನನ್ನ ಗಂಡನೊಂದಿಗೆ ತಕರಾರು ಮಾಡಿದ್ದು ಇರುತ್ತದೆ. ನನ್ನ ಗಂಡನ ಪಾಲಿಗೆ ಬರಬೇಕಾದ ಹೊಲದಲ್ಲಿ ಕಡಲಿ ಬೆಳೆ ಮಾಡಿ ಇಂದು ದಿನಾಂಕ 21.03.2020 ರಂದು ಮುಂಜಾನೆ 11.30 ಗಂಟೆಗೆ ನಮ್ಮ ಮಾವ ಹಾಗು ಮೈದುನ ಮತ್ತು ನಮ್ಮ ಸಂಬಂದಿಕರು ಕೂಡಿ  ರಾಶಿ ಮಾಡುತ್ತಿದ್ದು ಆಗ ನಾನು ಹಾಗು ನನ್ನ ಗಂಡ ಇಬ್ಬರೂ ಕೂಡಿ ನಮ್ಮ ಕಡಲಿ ರಾಶಿ ಮಾಡುವ ಹೊಲಕ್ಕೆ ಹೋಗಿ ಇದರಲ್ಲಿ ನಮಗೂ ಪಾಲು ಬರುತ್ತದೆ ಅಂತ ಅಂದಾಗ ಮೈದುನ 1] ಮಂಜುನಾಥ ತಂದೆ ಬಸರಡ್ಡೆಪ್ಪಗೌಡ ಮೇಲಿನಮನಿ, ಮಾವ 2] ಬಸರಡ್ಡೆಪ್ಪಗೌಡ ತಂದೆ ತಿಪ್ಪರಡ್ಡೆಪ್ಪಗೌಡ ಮೇಲಿನಮನಿ ಹಾಗು  ಏವೂರ ಗ್ರಾಮದ 3] ಅಭಿಶೇಕ ತಂದೆ ರಾಜಶೇಖರ ಮೇಟಿ 4] ರಾಜಶೇಖರ ತಂದೆ ಮಹಾಂತಗೌಡ ಮೇಟಿ ಈ ನಾಲ್ಕು ಜನರು ಬಂದವರೇ ಏನಲೇ ಸೂಳಿ ದೇವಿ ನಮ್ಮ ಹೊಲದಲ್ಲಿ ಪಾಲು ಕೇಳುತ್ತೀಯಾ ರಂಡಿ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಮಂಜುನಾಥ ಹಾಗು ಅಭಿಶೇಖ ಇವರು ನನಗೆ ಎತ್ತಿ ನೆಲಕ್ಕೆ ಒಗೆದು ನನ್ನ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸುತ್ತಿದ್ದಾಗ ಅವರಲ್ಲಿಯ ಮಾವ ಬಸರಡ್ಡೆಪ್ಪಗೌಡ ಇವನು ಅಲ್ಲಿಯೇ ಬಿದ್ದ ಒಂದು ಕಟ್ಟಿಗೆಯನ್ನು ತೆಗೆದುಕೊಂಡು ನನ್ನ ಎರಡು ಮೊಳಕೈ ಹತ್ತಿರ ಹೊಡೆದು ತರಚಿದ ರಕ್ತಗಾಯ ಪಡಿಸಿದನು. ಆಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನನ್ನ ಗಂಡ ಶರಣಗೌಡ ಬಿಡಿಸಿಕೊಳ್ಳಲು ಬಂದಾಗ ಎಲ್ಲರೂ ಈ ಸೂಳೇ ಮಗನ ಸೊಕ್ಕು ಬಹಾಳ ಆಗಿದೆ ಅಂತ ಅನ್ನುತ್ತಾ ಎಲ್ಲರೂ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ರಾಜಶೇಖರ ಮೇಟಿ ಈತನು ಅಲ್ಲಿಯೇ ಬಿದ್ದ ಒಂದು ಕಲ್ಲನ್ನು ತೆಗೆದುಕೊಂಡು ನನ್ನ ಗಂಡನ ಬಲಗಣ್ಣಿನ ಮೇಲೆ ಹಣೆಗೆ ಹೊಡೆದು ರಕ್ತಗಾಯ ಪಡಿಸಿ ಕುತ್ತಿಗೆಗೆ ಹೊಡೆದು ಗುಪ್ತಗಾಯ ಪಡಿಸಿ ಎತ್ತಿ ನೆಲಕ್ಕೆ ಒಗೆದು ನಮ್ಮಿಬ್ಬರಿಗೂ ಕಾಲಿನಿಂದ ಒದೆಯುತ್ತಿದ್ದಾಗ ನಾವಿಬ್ಬರೂ ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಹೊರಟಿದ್ದ ಹನುಮಗೌಡ ದೋರನಳ್ಳಿ ಹಾಗು ಗೌಡಪ್ಪಗೌಡ ಜಲಪೂರ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರೆಲ್ಲರೂ ನಿಮಗೆ ಹೊಲ ಕೊಡುವದಿಲ್ಲ ಹೊಲ ಕೇಳಲು ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋಗಿದ್ದು ಇರುತ್ತದೆ. ಸದರಿ ಜಗಳದಲ್ಲಿ ನನ್ನ ಕೊರಳಲ್ಲಿದ್ದ ಅರ್ಧ ತೊಲೆಯ ತಾಳಿಗುಂಡು ಎಲ್ಲಿಯೋ ಕಳೆದು ಹೋಗಿರುತ್ತವೆ. ಕಾರಣ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಂತಾ ಕೊಟ್ಟ ಪಿರ್ಯಾದಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 56/2020 ಕಲಂ 323, 324, 354, 504, 506 ಸಂಗಡ 34 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ:- 30/2020 ಕಲಂ 273,284,ಐಪಿಸಿ ಮತ್ತು 32, 34 ಕೆ ಇ ಆಕ್ಟ:- ಇಂದು ದಿನಾಂಕ.21/03/2020 ರಂದು 10-30 ಪಿಎಂಕ್ಕೆ ಶ್ರೀ ಕೃಷ್ಣ ಸುಬೇದಾರ ಪಿ.ಎಸ್ಐ (ಅ.ವಿ) ಸಾಹೇಬರು ರವರು ಠಾಣೆಗೆ ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯನ್ನು ಜ್ಞಾಪನ ಪತ್ರದೊಂದಿಗೆ ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ.21/03/2020 ರಂದು 7-45 ಪಿಎಂ ಸುಮಾರಿಗೆ ಠಾಣೆಯಲ್ಲಿರುವಾಗ ಮಾನ್ಯ ಎಸ್.ಪಿ ಸಾಹೇಬರು ಯಾದಗಿರಿ ಮತ್ತು ಶ್ರೀ ಸದಾಶಿವ ಸೋನಾವಣೆ ಪಿ.ಐ ಡಿ.ಸಿ.ಐ.ಬಿ ಘಟಕ ಯಾದಗಿರಿ ಹಾಗೂ ತಂಡದ ಮಾರ್ಗದರ್ಶನದಲ್ಲಿ ಯಾದಗಿರಿ ನಗರದ ಸಹರಾ ಕಾಲೋನಿಯ ರವೀಂದ್ರ ಗುತ್ತೆದಾರ ಈತನ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸೆಂಧಿ(ಹೆಂಡ) ವನ್ನು ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ ಸದರಿ ಸೆಂಧಿಯನ್ನು ಮನುಷ್ಯನು ಸೇವನೆ ಮಾಡಿದಲ್ಲಿ ಮನುಷ್ಯನ ಪ್ರಾಣಕ್ಕೆ ಅಪಾಯವಾಗುವಂತಹ ಹಾಗೂ ಮಾನವನ ದೇಹಕ್ಕೆ ಮಾರಣಾಂತಿಕ ಹಾನಿಯುಂಟಾಗುವ ರಾಸಾಯನಿಕ ಮಿಶ್ರಿತ ವಿಷಕಾರಿ ಕಲಬೆರೆಕೆ ಸೆಂಧಿ ಇದ್ದು ಹಾನಿಕರವಾದ ಪಾನೀಯ ಮಾರಾಟ ಮಾಡುತ್ತಿದ್ದು ದಾಳಿ ಕುರಿತು ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣೆಯಿಂದ 8-30 ಪಿಎಂಕ್ಕೆ ಠಾಣೆ ಜೀಪ ನಂ.ಕೆಎ-33-ಜಿ-0075 ನೇದ್ದರಲ್ಲಿ ಹೋರಟು  8-45 ಪಿಎಂಕ್ಕೆ ಸಹರಾ ಕಾಲೋನಿಯ ಮುಷ್ಠೂರ ಸಾಬಣ್ಣ ಇವರ ಮನೆಯ ಹತ್ತಿರ ಮರೆಯಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗಡೆ ಇಳಿದು ಮುಂದೆ ಹೊರಟು ನೋಡಲಾಗಿ ಒಬ್ಬನು ಪ್ಲಾಸ್ಟಿಕ ಕ್ಯಾನ ಮತ್ತು ಎರಡು ಪ್ಲಾಸ್ಟಿಕ ಬಕೆಟಗಳಲ್ಲಿ ಸೆಂಧಿಯನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದನ್ನು ಖಚಿತ ಪಡಿಸಿಕೊಂಡು ಒಮ್ಮೇಲೆ ದಾಳಿ ಮಾಡಿ 9-00 ಪಿಎಮ್ ಕ್ಕೆ ಹಿಡಿದು ಸದರಿಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ರವೀಂದ್ರ ತಂದೆ ನರಸಿಂಗಪ್ಪ ಗುತ್ತೆದಾರ ವ;33 ಜಾ; ಇಳಿಗೇರ ಉ; ಸೆಂಧಿ ಮಾರಾಟ ಮಾಡುವುದು ಸಾ; ಸಹರಾ ಕಾಲೋನಿ ಯಾದಗಿರಿ ಅಂತಾ ತಿಳಿಸಿದ್ದು ನಂತರ ಸದರಿಯವನ ಹತ್ತಿರ ಸ್ಥಳದಲ್ಲಿ ಒಂದು 20 ಲೀಟರಿನ ಪ್ಲಾಸ್ಟಿಕ ಕ್ಯಾನದಲ್ಲಿ ಸೆಂಧಿ ಇದ್ದು ಮತ್ತು ಎರಡು ಪ್ಲಾಸ್ಟಿಕ ಬಕೆಟಗಳಲ್ಲಿ 30 ಪ್ಲಾಸ್ಟಿಕ ಚೀಲಗಳಲ್ಲಿ ಅಂದಾಜು ಒಂದು ಲೀಟರಿನಷ್ಟು ಸೆಂಧಿ ತುಂಬಿರುವ ಸೆಂಧಿಯನ್ನು ಬಕೆಟಗಳಲ್ಲಿ ಇಟ್ಟಿದ್ದು ಒಟ್ಟು 50 ಲೀಟರ ಸೆಂಧಿ ಇದ್ದು ಸದರಿ ರವೀಂದ್ರ ಈತನಿಗೆ ಸೆಂಧಿ ಮಾರಾಟ ಮಾಡಲು ಯಾವುದಾದರೂ ಪರವಾನಿಗೆ ಇದ್ದರೆ ಹಾಜರುಪಡಿಸುವಂತೆ ವಿಚಾರಿಸಲು ಯಾವುದೇ ಪರವಾನಿಗೆ ಇರುವುದಿಲ್ಲ ಅನಧಿಕೃತವಾಗಿ ಸೆಂಧಿಯನ್ನು ಮಾರಾಟ ಮಾಡುತ್ತೇನೆ ಅಂತಾ ತಿಳಿಸಿದ್ದು ಒಂದು ಪ್ಲಾಸ್ಟಿಕ ಚೀಲದಲ್ಲಿ ಅಂದಾಜು ಒಂದು ಲೀಟರಿನಷ್ಟು ತುಂಬಿರುವ ಸೆಂಧಿಗೆ 10/-ರೂ  ದಂತೆ ಮಾರಾಟ ಮಾಡುತ್ತೇವೆ ಅಂತಾ ತಿಳಿಸಿದ್ದು ಒಟ್ಟು 50 ಲೀಟರ ಸೆಂಧಿಗೆ ಅಂದಾಜು ಕಿಮ್ಮತ್ತು 500=00 ರೂ. ಕಿಮತ್ತಿನ ಸೆಂಧಿಯಿದ್ದು ನಂತರ ಜಪ್ತಿಪಡಿಸಿಕೊಂಡ ಮೇಲ್ಕಂಡ 50 ಲೀಟರ ಸೆಂಧಿಯಲ್ಲಿ ಒಂದು ಲೀಟರನ ಎರಡು ಪ್ಲಾಸ್ಟಿಕ ವಾಟರ ಬಾಟಲಿಗಳಲ್ಲಿ ರಾಸಾಯನಿಕ ಪರಿಕ್ಷೇ ಕುರಿತು ಎಫ್.ಎಸ್.ಎಲ್ ಪರೀಕ್ಷೆಗೆ ಒಳಪಡಿಸಲು ಶ್ಯಾಂಪಲ್ಗಾಗಿ ತೆಗೆದು ಬಿಳಿಯ ಬಟ್ಟೆಯಿಂದ ಬಾಯಿ ಕಟ್ಟಿ ಹೊಲಿದು ವೈ.ಟಿ. ಅಂತಾ ಅರಗಿನಿಂದ ಸೀಲು ಮಾಡಿ ಪಂಚರ ಸಹಿವುಳ್ಳ ಮತ್ತು ನಾನು ಸಹಿ ಮಾಡಿದ ಚೀಟಿ ಅಂಟಿಸಿ ಪ್ರತ್ಯೇಕವಾಗಿ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ನಂತರ ಉಳಿದ ಎಲ್ಲಾ ಸೆಂಧಿಯನ್ನು  ಮುಂದಿನ ಪುರಾವೆ ಕುರಿತು ಪ್ಲಾಸ್ಟಿಕ ಕ್ಯಾನ ಮತ್ತು ಎರಡು ಪ್ಲಾಸ್ಟಿಕ ಬಕೆಟಗಳಲ್ಲಿ ಹಾಕಿ  ತಾಬೆಗೆ ತೆಗೆದುಕೊಂಡಿದ್ದು ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 21/03/2020 ರಂದು 9-00 ಪಿಎಂ ದಿಂದ 10-00 ಪಿಎಂ ದವರೆಗೆ ಠಾಣೆಯ ಜೀಪಿನ ಬೆಳಕಿನಲ್ಲಿ ಹಾಗೂ ಆರೋಪಿತನ ಮನೆಯ ಮುಂದಿನ ಬೆಳಕಿನಲ್ಲಿ ಸ್ಥಳದಲ್ಲಿ ಕುಳಿತು ಲ್ಯಾಪಟ್ಯಾಪನಲ್ಲಿ ಜಪ್ತಿ ಪಂಚನಾಮೆಯನ್ನು ತಯ್ಯಾರಿಸಿ ನಂತರ ಯಾದಗಿರಿ ನಗರ ಠಾಣೆಗೆ 10-15 ಪಿಎಂಕ್ಕೆ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ  ಬಂದು ಠಾಣೆಯಲ್ಲಿ ಪ್ರಿಂಟ್ ತೆಗೆದು  ಪಂಚರ ಸಹಿ ಮಾಡಿಸಿ ಮುಂದಿನ ಕ್ರಮಕ್ಕಾಗಿ 10-30 ಪಿಎಮ್ ಕ್ಕೆ ಜಪ್ತಿ ಪಂಚನಾಮೆಯನ್ನು ಜ್ಞಾಪನ ಪತ್ರದೊಂದಿಗೆ ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ್ದು ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.30/2020 ಕಲಂ.273, 284 ಐಪಿಸಿ ಮತ್ತು 32, 34, ಕೆ.ಇ ಆಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು

ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 51/2020 ಕಲಂ 379, 511 ಐಪಿಸಿ ಮತ್ತು ಕಲಂ 86, 87 ಕನರ್ಾಟಕ ಅರಣ್ಯ ಕಾಯ್ದೆ ಅಧನಿಯಮ -1963:- ಇಂದು ದಿನಾಂಕ 21.03.2020 ರಂದು ಮಧ್ಯಾಹ್ನ ಪಿರ್ಯಾಧಿ ಮತ್ತು ಇತರರು ಕೂಡಿ ಶ್ರೀ ಮರಗಮ್ಮ ದೇವಸ್ಥಾನದ ಹತ್ತಿರ ಸೋಲರ ಲೈಟ್ ಗಳು ಹಾಕಿ ಸ್ವಲ್ಪ ಹೊತ್ತು ಬಿಟ್ಟು ಹೊಲದ ಕಡೆಗೆ ಹೋದೆವು ನಮ್ಮ ಹೊಲದಲ್ಲಿ ಯಾರೋ ಮೂರು ಜನರು ಬದುವಿಗೆ ಇದ್ದ ಮರಗಳು ಕಡಿಯುವದು ಕಂಡಿತ್ತು. ಅದನ್ನು ನೋಡಿದ ಪಿರ್ಯಾಧಿ ಜೋರಾಗಿ ಚೀರಿದ್ದರು ಅವರತ್ತ ಓಡುತ್ತ ಸಮೀಪ ಹೋದಾಗ ಪಿರ್ಯಾಧಿಗೆ ನೋಡಿದ ಆ ಮೂರು ಜನರು ಎರಡು ಮರದ ತುಂಡುಗಳು ಹೆಗಲ ಮೇಲೆ ಇಟ್ಟುಕೊಂಡು ಜಮೀನುಗಳಲ್ಲಿ ಓಡಿ ಹೋಗುತ್ತಿದ್ದಾಗ ಇಬ್ಬರೂ ವ್ಯಕ್ತಿಗಳು ಗಿಡದ ತುಂಡುಗಳು ಬಿಸಾಡಿ ಓಡಿ ಹೋಗುವ ಕಾಲಕ್ಕೆ ಒಬ್ಬನಿಗೆ ಹಿಡಿದುಕೊಂಡಿದ್ದು ಇರುತ್ತದೆ. ಪಿರ್ಯಾಧಿಯ ಜಮೀನು ಬದುವಿಗೆ ಬೆಳೆದ ಮರಗಳ ಪೈಕಿ ಸುಮಾರು 6-7 ವರ್ಷಗಳ ಪ್ರಾಯದ ತಲಾ 5 ಸಾವಿರ ರೂಪಾಯಿಗಳು ಬೆಲೆ ಬಾಳುವ ಎರಡು ಶ್ರೀಗಂಧದ ಮರಗಳನ್ನು ಕಳುವು ಮಾಡುವ ಉದ್ದೇಶದಿಂದ ಾರೋಪಿತರು ಇಂದು ದಿನಾಂಕ 21.03.2020 ರಂದು ಮಧ್ಯಾಹ್ನ 3.30 ಗಂಟೆ ಸುಮಾರಿಗೆ ಕಡೆದು ಕಳುವು ಮಾಡಿಕೊಂಡು ಹೋಗಲು ಪ್ರಯತ್ನ ಮಾಡಿರುತ್ತಾರೆ ಅಂತಾ ಪಿರ್ಯಾಧಿ ಇರುತ್ತದೆ. 
ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!