ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/03/2020

By blogger on ಶುಕ್ರವಾರ, ಮಾರ್ಚ್ 20, 2020



                               ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/03/2020 
ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 03/2020 ಕಲಂ:110 (ಇ)&(ಜಿ)ಸಿಆರ್ಪಿಸಿ:-ನಾನು ಭೀಮಾಶಂಕರಎಎಸ್ಐಕೊಡೆಕಲ್ಲ ಪೊಲೀಸ್ಠಾಣೆ ಸರಕಾರದ ಪರವಾಗಿಕೊಡುವ ಪಿಯರ್ಾದಿ ಏನೆಂದರೆನಾನು ಠಾಣೆಯ ಸಿಬ್ಬಂದಿಯವರಾದ  ಅಂಬ್ರೇಶ ಪಿಸಿ-14 ರವರೊಂದಿಗೆ ಇಂದು ದಿನಾಂಕಃ 20.03.2020 ರಂದು ಬೆಳಿಗ್ಗೆ11:00 ಗಂಟೆಯ ಹಳ್ಳಿ ಬೇಟಿ ಮತ್ತು ಪೆಟ್ರೊಲಿಂಗ್ ಕುರಿತು  ಹೊರಟು ರಾಜನಕೊಳೂರು, ಬೊಮ್ಮಗುಡ್ಡ, ಕಡದರಾಳ  ಗ್ರಾಮಗಳಿಗೆ ಬೇಟಿ ನೀಡಿ  ಜುಮಾಲಪುರ ದೊಡ್ಡ ತಾಂಡಾಕ್ಕೆ   ಹೋದಾಗ ದುರ್ಗಮ್ಮ ಗುಡಿಯ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿಒಬ್ಬ ವ್ಯಕಿ ನಿಂತು ನಾನು ಈ ಊರಿನ ರೌಡಿ ಇದ್ದೇನೆ. ಅಂತಾ ಹೋಗು ಬರುವ ಜನರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತ, ಅಸಬ್ಯವಾಗಿ ವತರ್ಿಸುತ್ತ ನಿಂತಿದ್ದನು. ಅಲ್ಲದೆ ಊರಿನ ಜನರಿಗೆ ನೀವು ನಾನು ಹೇಳಿದ ಹಾಗೆ ಕೇಳಬೇಕು ಅಂತಾ ಅಸಬ್ಯವಾಗಿ ವತರ್ಿಸುತ್ತ ನಿಂತಿದ್ದನು. ಆಗ ನಾನು ಅವನಿಗೆ ಸಿಬ್ಬಂಧಿಯ ಸಹಾಯದಿಂದ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ ಅವರು ತನ್ನ ಹೆಸರು ಶಂಕ್ರೆಪ್ಪತಂದೆಠಾಕ್ರೇಪ್ಪ ಪವಾರ @ ಪುಜಾರಿ ವ:55 ವರ್ಷಜಾ: ಲಂಬಾಣಿ ಉ: ಒಕ್ಕಲುತನ ಸಾ: ಜುಮಾಳಪೂರ ದೊಡ್ಡತಾಂಡಾತಾ: ಹುಣಸಗಿ ಅಂತಾ ತಿಳಿಸಿದ್ದು.. ಸದರಿಯವರಿಗೆ ಹಾಗೇಯೇ ಬಿಟ್ಟಲ್ಲಿ ಯಾವ್ಯದಾದರೂ ಗಂಭೀರ ಸ್ವರೂಪದ ಅಪರಾಧ ಮಾಡಿ ಸಾರ್ವಜನಿಕ ಶಾಂತತೆಗೆ ದಕ್ಕೆಯನ್ನುಂಟು ಮಾಡಿ ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡುವ ಸ್ವಭಾವದವರಿರುವರೆೆಂದು ಕಂಡುಬಂದಿದ್ದರಿಂದ ಸದರಿಯವರಿಗೆ 4:00 ಪಿ.ಎಎಮ್ ಕ್ಕೆ  ವಶಕ್ಕೆ ತೆಗೆದುಕೊಂಡು 5:00 ಪಿ.ಎಮ್ ಗೆ  ಠಾಣೆಗೆ ಬಂದು ಸದರಿಯವನ ಮೇಲೆ ಮುಂಜಾಗ್ರತ ಕ್ರಮವಾಗಿ ಸರಕಾರದ ಪರವಾಗಿ ಫಿರ್ಯಾದಿಯಾಗಿ ಠಾಣಾ ಪಿಎಆರ್   ನಂ:03/2020 ಕಲಂ.110 (ಇ) &(ಜಿ) ಸಿಆರ್ಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ. ಸದರಿ ಆರೋಪಿತನಿಗೆ ನ್ಯಾಯಾಂಗ ಬಂದನಕ್ಕೆ ಕಳುಹಿಸಿದ್ದು ಅದೆ

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 49/2020 ಕಲಂ: 78() ಕೆ.ಪಿ. ಆಕ್ಟ್:- ಇಂದು ದಿನಾಂಕ 20.03.2020  ರಂದು ಸಂಜೆ 4.20 ಗಂಟೆಗೆ ಆರೋಪಿತನು ಗುರುಮಠಕಲ ಪಟ್ಟಣ ಕಾಕಲವಾರ ಕ್ರಾಸ ಹತ್ತಿರ ಸಾರ್ವಜನಿಕ ರೋಡಿನ ಮೇಲೆ ಅಕ್ರಮ ಮಟಕಾ ಜೂಜಾಟ ಅಂಕಿ ಸಂಖ್ಯೆ ಬರೆದುಕೊಂಡು ಸಾರ್ವಜನಿಕರಿಗೆ 1/- ರೂ ಗೆ 80/- ರೂ ಮಟಕಾ ಬರೆಯಿಸಿದರೆ ಕೊಡುವುದಾಗಿ ಹೇಳಿ ಅವರಿಂದ ಹಣ ಸಂಗ್ರಹಿಸುತ್ತಿದ್ದಾಗ ಫೀರ್ಯಾದಿ ಹಾಗೂ  ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಸದರಿ ಆರೋಪಿತನ ವಶದಲ್ಲಿದ್ದ 1]ನಗದು ಹಣ 3210/-, 2)ಮಟಕಾ ಅಂಕಿ ಸಂಖ್ಯೆ ಬರೆದುಕೊಂಡ ಚೀಟಿ, 3] ಒಂದು ಬಾಲ ಪೆನ್ ಅ.ಕಿ-00, ಹೀಗೆ ಒಟ್ಟು 3210/-ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಸದರಿ ವರದಿ ಹಾಗೂ ಪಂಚನಾಮೆಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದ ನಂತರ ಠಾಣಾ ಗುನ್ನೆ ನಂ: 49/2020 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡೆನು.

ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 15/2020  ಕಲಂ 279,  337, 338 ಐಪಿಸಿ:-ನಿನ್ನೆ ದಿನಾಂಕ 19/03/2020 ರಂದು ಮದ್ಯಾಹ್ನ 2-45 ಪಿ.ಎಂ. ದ ಸುಮಾರಿಗೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಮೇಲೆ ಬರುವ ಮುಂಡರಗಿ ಗ್ರಾಮದ ಸಮಿಫದ ವರ್ದಮಾನ್ ರೈಸ್ ಮಿಲ್ ಹತ್ತಿರ ಈ ಕೇಸಿನ ಪಿಯರ್ಾದಿ ಮತ್ತು ಗಾಯಾಳು ಇಬ್ಬರು ಕೂಡಿಕೊಂಡು ಆಟೋ ನಂಬರ ಕೆಎ33, ಬಿ-0942 ನೇದ್ದರಲ್ಲಿ ಮುಂಡರಗಿ ಕಡೆಯಿಂದ ಯಾದಗಿರಿಗೆ ಬರುವಾಗ ಲಾರಿ ನಂಬರ ಎಪಿ-05, ಟಿ.ಎಫ್-0689 ನೇದ್ದರ ಚಾಲಕನು ತನ್ನ ವಾಹನವನ್ನು ಯಾದಗಿರಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಆಟೋ ನೇದ್ದಕ್ಕೆ ಓವರ್ ಟೇಕ್ ಮಾಡುವಾಗ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ ಪಿಯರ್ಾದಿಗೆ ಎಡಗಡೆ ಹಣೆಯ ಹುಬ್ಬಿನ ಮೇಲೆ ರಕ್ತಗಾಯ, ಎಡಗೈ ಕಿರುಬೆರಳಿಗೆ ಭಾರೀ ರಕ್ತಗಾಯ, ಎಡರಟ್ಟೆಗೆ, ಬಲಗೈ ಮೊಣಕೈಗೆ ಭಾರೀ ತರಚಿದ ರಕ್ತಗಾಯಗಳಾಗಿದ್ದು ಮತ್ತು  ಸಂಗಡವಿದ್ದ ಗಾಯಾಳು ಭಾರತಿ ಶಿಕ್ಷಕರು ಇವರಿಗೆ ಬಲಗೈ ಮುಂಗೈಗೆ ಭಾರೀ ಗುಪ್ತಗಾಯವಾಗಿ ಮುರಿದಿದ್ದು, ಎದೆಗೆ ಭಾರೀ ಗುಪ್ತಗಾಯವಾಗಿದ್ದು ಇರುತ್ತದೆ. ಈ ಘಟನೆಯ ಬಗ್ಗೆ ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ದಿನಾಂಕ 20/03/2020 ರಂದು ಪಿಯರ್ಾದಿ ನೀಡಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 15/2020 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 36/2020 ಕಲಂ 379 ಐಪಿಸಿ:- ಇಂದು ದಿನಾಂಕ: 20.03.2020 ರಂದು 6-30 ಪಿ.ಎಮ್.ಕ್ಕೆ ಸ.ತಫರ್ೇ. ಶ್ರೀಮತಿ ಸುವಣರ್ಾ ಪಿ.ಎಸ್.ಐ ಸಾಹೇಬರು ಜಪ್ತಿಪಂಚನಾಮೆ ಮತ್ತು ಒಂದು ಮರಳು ತುಂಬಿದ ಟ್ರ್ಯಾಕ್ಟರ ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಸಾರಾಂಶವೇನೆಂದರೆ, 04-15 ಪಿ.ಎಮ್ ಕ್ಕೆ ಪಿ.ಎಸ್.ಐ ಸಾಹೇಬರು ತಮ್ಮ ಜೀಪ ನಂಬರ ಕೆಎ-33 ಜಿ-0095 ನೇದ್ದರಲ್ಲಿ ಪಂಚರನ್ನು ಹಾಗೂ ಸಿಬ್ಬಂದಿಯವರನ್ನು ಕೂಡಿಸಿಕೊಂಡು ಬಾತ್ಮಿ ಬಂದ ಸ್ಥಳಕ್ಕೆ ಹೋಗುತ್ತಿರುವಾಗ ಗೌಡಗೇರಾ ಕ್ರಾಸ ಹತ್ತಿರ ಒಂದು ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ಕಂಡು ಜೀಪನ್ನು ಮರೆಯಾಗಿ ನಿಲ್ಲಿಸಿ ಮರಳು ತುಂಬಿಕೊಂಡು ಬರುತ್ತಿರುವ ಟ್ರ್ಯಾಕ್ಟರನ್ನು ಸಾಯಂಕಾಲ 04-30 ಗಂಟೆಗೆ ದಾಳಿ ಮಾಡುವ ಕಾಲಕ್ಕೆ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ನಿಲ್ಲಿಸಿ ಓಡಿ ಹೋದನು. ಓಡಿ ಹೊದವನ ಹೆಸರು ವಿಳಾಸ ಗೊತ್ತಿರುವದಿಲ್ಲ. ಇನ್ನೊಮ್ಮೆ ನೋಡಿದಲ್ಲಿ ಸದರಿಯವನ್ನು ಗುರುತಿಸುತ್ತೇವೆ. ನಂತರ ಟ್ರ್ಯಾಕ್ಟರ ಪರಿಶೀಲಿಸಲಾಗಿ ಫಗರ್ೂಸನ ಕಂಪನಿಯ ಕೆಂಪು ಬಣ್ಣದ ಟ್ರ್ಯಾಕ್ಟರ ಇದ್ದು ಅದರ ನೊಂದಣಿ ಸಂಖ್ಯೆ ಇರುವದಿಲ್ಲ, ಅದರ ಇಂಜಿನ ಚೆಸ್ಸಿ ನಂ. 874405 ಇರುತ್ತದೆ. ಅದಕ್ಕೆ ಕೆಂಪು ಟ್ರ್ಯಾಲಿ ಇದ್ದು ಅದಕ್ಕೆ ನಂಬರ ಇರುವದಿಲ್ಲ. ಟ್ರ್ಯಾಕ್ಟರ ಇಂಜನ ಮತ್ತು ಟ್ರ್ಯಾಲಿ ಒಟ್ಟು ಅ|| ಕಿ|| 2,50,000/- ರೂಪಾಯಿಗಳು ಮತ್ತು ಮರಳಿನ ಅ||.ಕಿ|| 1500/-ರೂಪಾಯಿಗಳು ಆಗಬಹುದು. ಸದರಿ ಟ್ರ್ಯಾಕ್ಟರ ಚಾಲಕನು ಮತ್ತು ಅದರ ಮಾಲಿಕನು ಸರಕಾರದಿಂದ ಮರಳನ್ನು ಮಾರಾಟ ಮಾಡಲು ಯಾವುದೆ ಅನುಮತಿ ಮತ್ತು ರಾಜ ಧನ ಸಂದಾಯ ಮಾಡದೆ ಸರಕಾರದ ನೈಸಗರ್ಿಕ ಸಂಪತ್ತಾದ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತೆಗೆದುಕೊಂಡು ಹೋಗುವದು ಗೊತ್ತಾಗಿದ್ದು ಇರುತ್ತದೆ, ಆಧಾರದ ಮೇಲಿಂದ ಠಾಣಾ ಗುನ್ನೆ ನಂ.36/2020 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
                           
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 37/2020 ಕಲಂ. 341,323,324,504,506 ಸಂಗಡ 34 ಐಪಿಸಿ:-     ಇಂದು ದಿನಾಂಕ 20.03.2020  ರಂದು  9.00 ಪಿ.ಎಮ್.ಕ್ಕೆ ಸರಕಾರಿ ಆಸ್ಪತ್ರೆ  ಸೈದಾಪೂರದಿಂದ ಎಮ್.ಎಲ್.ಸಿ ವಸೂಲಾದ ಮೇರೆಗೆ ಸದರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀ ಬನ್ನಪ್ಪ ತಂದೆ ಹಣಮಂತ ವಯ: 30 ವರ್ಷ,ಜಾ: ಕಲಾಲ ಉ: ಒಕ್ಕಲುತನ   ಸಾ|| ಯಲಸತ್ತಿ  ತಾ|| ಗುರುಮಠಕಲ ಜಿ|| ಯಾದಗಿರಿ ಈತನ ಫಿಯರ್ಾದಿ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನೇಂದರೆ, ಇಂದು ದಿನಾಂಕ. 20.03.2020 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ನಾನು ಮನೆಯಿಂದ ನಮ್ಮೂರಿನ ರಾಜು ಇವರ ಹೊಟೇಲ ಕಡೆಗೆ ಹೊರಟಿದ್ದಾಗ ಅಲ್ಲಿ ರಸ್ತೆಯ ಮೇಲೆ  ನಮ್ಮ ತಂದೆಗೆ ನಮ್ಮೂರಿನ ರಾಜು ಕಂಡಕ್ಟರ ಈತನು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಏ ಸೂಳೆ ಮಗನೇ ಹಣಮ್ಯಾ ನಿನಗೆ ಟಿಕೇಟ್ ಕೂಡಾ ತೆಗೆಯುವಷ್ಟು ಗತಿಯಿಲ್ಲದ ಸೂಳೇ ಮಗ ನೀನು ಊರಲ್ಲಿ ನಿನ್ನದು ಬಹಳ ಆಗಿದೆ ಭೋಸಡೀ ಮಗನೇ ಸೂಳೇ ಮಗನೇ ಅಂತ ಬೈಯುತ್ತಿದ್ದನು. ಆಗ ನಾನು ಕಂಡಕ್ಟರ ರಾಜು ಈತನಿಗೆ ಯಾಕೆ ನಮ್ಮ ತಂದೆಗೆ ಬೈಯುತ್ತಿದ್ದೀ, ಅಂತಹ ತಪ್ಪು ನನ್ನ ತಂದೆ ಏನು ಮಾಡಿದ್ದಾನೇ, ಅಂತ ಕೇಳಲು ಹೋದರೆ, ನನಗೆ ಕಂಡಕ್ಟರ ರಾಜು ಈತನು ಅಲ್ಲಿಯೆ ಬಿದ್ದಿದ್ದ ಒಂದು ಹಿಡಿಗಾತ್ರದ ಕಲ್ಲಿನಿಂದ ಎಡಗಡೆ ತಲೆಗೆ ಜೋರಾಗಿ ಹೊಡೆದು ರಕ್ತಗಾಯಗೊಳಿಸಿದನು. ಅಲ್ಲದೇ ರಾಜು ಈತನ ಹೆಂಡತಿ ನವನೀತಾ ಮತ್ತು ಆತನ ತಾಯಿ ನರಸಮ್ಮ ಇವರು ಬಂದು ನನಗೆ ಹಿಡಿದುಕೊಂಡು ನೀನ್ಯಾಕೆ ಜಗಳಕ್ಕೆ ಬರುತ್ತಿದ್ದೀಯಾ ಅಂತ ಗಟ್ಟಿಯಾಗಿ ಹಿಡಿದಿರುತ್ತಾರೆ. ಮತ್ತು ಮಾಣಿಕಪ್ಪ ತಂದೆ ಬಾಲಪ್ಪ ಜೋಗಿ ಈತನು ಈ ಸೂಳೇ ಮಗನದೇ ಬಹಳ ಸೊಕ್ಕು ಇದೆ ಇವನಿಗೆ ಖಲಾಸ ಮಾಡಬೇಕು ಅಂತ ಜೀವದ ಬೆದರಿಕೆ ಹಾಕಿರುತ್ತಾನೆ. ಅಂತ ಸಾರಾಂಶ ಇದ್ದು ಸದರಿ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆಯ ಗುನ್ನೆ ನಂ 341,323,324,504,506 ಸಂಗಡ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು,

ವಡಗೇರಾ ಠಾಣೆ ಗುನ್ನೆ ನಂ;- 29/2020 ಕಲಂ:143,147,504,341,323,506 ಸಂ 149 ಐಪಿಸಿ:- ಇಂದು ದಿನಾಂಕ: 20/03/2020 ರಂದು 6-30 ಪಿಎಮ್ ಕ್ಕೆ ಶ್ರೀಮತಿ ನಾಗಮ್ಮ ಗಂಡ ಶಿವಪ್ಪ ಪೂಜಾರಿ, ವ:52, ಜಾ:ಕುರುಬರ, ಉ:ಹೊಲಮನೆ ಕೆಲಸ ಸಾ:ಅನಕಸೂಗೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನಗೆ ಇಬ್ಬರೂ ಗಂಡು ಮಕ್ಕಳು ಮತ್ತು ಇಬ್ಬರೂ ಹೆಣ್ಣು ಮಕ್ಕಳಿರುತ್ತಾರೆ. ಎಲ್ಲರದು ಮದುವೆಯಾಗಿರುತ್ತದೆ. ನಮ್ಮೂರ ಮುಂದುಗಡೆ ಚನ್ನೂರ ಗೌಡರ ಹೊಲ ಇದ್ದು, ಸದರಿ ಹೊಲದಲ್ಲಿ ನಮ್ಮ ಮಕ್ಕಳು ಯಾವಾಗಲಾದರೂ ಒಮ್ಮೊಮ್ಮೆ ಸಂಡಾಸಕ್ಕೆ ಹೋಗುತ್ತಿರುತ್ತಾರೆ. ಆದರೆ ಈ ಹೊಲದಲ್ಲಿ ಕೂಲಿ ಕೆಲಸ ಮಾಡುವ ನಮ್ಮೂರ ದೇವಪ್ಪ ತಂದೆ ಬಸಪ್ಪ ಕುರಿ ಈತನು ಏ ಮಕ್ಕಳೆ ನೀವು ಈ ಕಡೆ ಯಾಕೆ ಬರುತ್ತಿರಲೇ ಎಂದು ನನ್ನ ಮಕ್ಕಳೊಂದಿಗೆ ಜಗಳಕ್ಕೆ ಬರುವುದು ಮಾಡುತ್ತಾ ನಮ್ಮ ಮೇಲೆ ದ್ವೇಷ ಬೆಳೆಸಿಕೊಂಡಿರುತ್ತಾನೆ. ಹೀಗಿದ್ದು ದಿನಾಂಕ: 15/03/2020 ರಂದು ಸಾಯಂಕಾಲ ನನ್ನ ಮಗನಾದ ರೆಡ್ಡೆಪ್ಪ ತಂದೆ ಶಿವಪ್ಪ ಪೂಜಾರಿ ಈತನು ನಮ್ಮೂರ ಮುಂದುಗಡೆ ಇರುವ ಚನ್ನೂರು ಗೌಡರ ಹೊಲದ ಕಡೆ ಸಂಡಾಸಕ್ಕೆ ಹೋದನು. ಅವನು ಹೊದ ಕೆಲ ಹೊತ್ತಿನ ನಂತರ ಸಾಯಂಕಾಲ 5-30 ಗಂಟೆ ಸುಮಾರಿಗೆ ನನ್ನ ಮಗ ರೆಡ್ಡೆಪ್ಪನೊಂದಿಗೆ ಯಾರೋ ಜಗಳ ಮಾಡುವ ಸಪ್ಪಳ ಕೇಳಿ ನಾನು ಓಡಿ ಬಂದು ನೋಡಿದ್ದು, ನನ್ನ ಮಗ ರೆಡ್ಡೆಪ್ಪನು ಗೌಡರ ಹೊಲದ ಕಡೆ ಸಂಡಾಸಕ್ಕೆ ಹೋಗುತ್ತಿದ್ದವನಿಗೆ ನಮ್ಮೂರ ಮಾನಯ್ಯ ತಂದೆ ಮಲ್ಲಯ್ಯ ಮುಸ್ತಾಜೀರ ಈತನ ಅಂಗಡಿ ಮುಂದೆ ನಮ್ಮ ಜಾತಿಯ 1) ದೊಡ್ಡ ನಿಂಗಪ್ಪ ತಂದೆ ಬಸಪ್ಪ ಕುರಿ, 2) ದೇವಪ್ಪ ತಂದೆ ಬಸಪ್ಪ ಕುರಿ, 3) ನಿಂಗಪ್ಪ ತಂದೆ ಹಣಮಂತ ಕುರಿ, 4) ಮಹಾದೇವಪ್ಪ ತಂದೆ ಬಸಪ್ಪ ಕುರಿ, 5) ಬಸಪ್ಪ ತಂದೆ ನಿಂಗಪ್ಪ ಕುರಿ, 6) ಗಿರೆಮ್ಮ ಗಂಡ ದೇವಪ್ಪ ಕುರಿ, 7) ನಿಂಗಮ್ಮ ಗಂಡ ಬಸಪ್ಪ ಕುರಿ, 8) ಸಣ್ಣ ನಿಂಗಮ್ಮ ಗಂಡ ಹಣಮಂತ ಕುರಿ, 9) ಅಯ್ಯಮ್ಮ ಗಂಡ ಭೀಮನಗೌಡ ತೇಕರಾಳ, 10) ದೇವಮ್ಮ ಗಂಡ ನಿಂಗಪ್ಪ ಕುರಿ ಎಲ್ಲರೂ ಸಾ:ಅನಕಸೂಗೂರು ಇವರೆಲ್ಲರೂ ಅಕ್ರಮಕೂಟ ಕಟ್ಟಿಕೊಂಡು ಬಂದು ನನ್ನ ಮಗ ರೆಡ್ಡೆಪ್ಪನಿಗೆ ತಡೆದು ನಿಲ್ಲಿಸಿ, ಏ ಮಗನೆ ನಿನಗೆ ಈ ಕಡೆ ಸಂಡಾಸಕ್ಕೆ ಬರಬೇಡ ಎಂದು ಹೇಳಿದರು ಮತ್ತೆ ಬರುತ್ತಿ ನಿನ್ನ ಸೊಕ್ಕು ಜಾಸ್ತಿಯಾಗಿದೆ ಎಂದು ಜಗಳ ತೆಗೆದು ತಡೆದು ನಿಲ್ಲಿಸಿ, ದೊಡ್ಡ ನಿಂಗಪ್ಪ ಮತ್ತು ದೇವಪ್ಪ ಇಬ್ಬರು ತೆಕ್ಕೆ ಕುಸ್ತಿಗೆ ಬಿದ್ದು, ನನ್ನ ಮಗ ರೆಡ್ಡೆಪ್ಪನಿಗೆ ಕೈಯಿಂದ ಮುಖ ಮತ್ತು ಎದೆಗೆ ಮುಷ್ಟಿ ಮಾಡಿ ಗುದ್ದಿ, ನೆಲಕ್ಕೆ ಹಾಕಿ ಕಾಲಿನಿಂದ ಒದ್ದಿರುತ್ತಾರೆ. ಜಗಳ ಬಿಡಿಸಲು ಹೋದ ಸೋಮಪ್ಪ ಮತ್ತು ನಾಗಪ್ಪ ಇವರಿಗೆ ಏ ಮಕ್ಕಳೆ ನೀವು ಏಕೆ ನಡುವೆ ಬರುತ್ತಿರಿ ಎಂದು ಜಗಳ ತೆಗೆದು ನಿಂಗಪ್ಪ ಮತ್ತು ಮಹಾದೇವಪ್ಪ ಇವರಿಬ್ಬರೂ ಕೈಯಿಂದ ಕಪಾಳಕ್ಕೆ ಹೊಡೆದಿರುತ್ತಾರೆ. ಉಳಿದವರೆಲ್ಲರೂ ಮಕ್ಕಳೆ ನೀವು ಇನ್ನೊಂದು ಸಲ ಈ ಕಡೆ ಬಂದರೆ ನಿಮಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಆಗ ಜಗಳವನ್ನು ದಂಡಪ್ಪ ತಂದೆ ಅಯ್ಯಪ್ಪ ಕುರಿಹಾಳ ಮತ್ತು ಮಲ್ಲಪ್ಪ ತಂದೆ ಬಸಣ್ಣ ಮಾಚನೂರು ಇವರುಗಳು ಬಂದು ಜಗಳ ಬಿಡಿಸಿರುತ್ತಾರೆ. ಕಾರಣ ಸಂಡಾಸಕ್ಕೆ ಹೋಗುತ್ತಿದ್ದ ನನ್ನ ಮಗನಿಗೆ ಹಳೆ ವೈಷಮ್ಯದಿಂದ ಜಗಳ ತೆಗೆದು ತಡೆದು ನಿಲ್ಲಿಸಿ, ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಮ್ಮ ಹಿರಿಯರು ಊರಿಗೆ ಹೋಗಿದ್ದರಿಂದ ಅವರಿಗೆ ವಿಚಾರಿಸಿ ಕೊಂಡು ಠಾಣೆಗೆ ಬಂದು ಫಿರ್ಯಾಧಿ ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 29/2020 ಕಲಂ:143,147,504,341,323,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!