ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/03/2020

By blogger on ಶುಕ್ರವಾರ, ಮಾರ್ಚ್ 20, 2020                       ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/03/2020 
ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 01/2020 ಕಲಂ: 107 ಸಿಆರ್ಪಿಸಿ:-ನಾನು ಭೀಮಾಶಂಕರ ಎಎಸ್ಐ ಕೊಡೆಕಲ್ಲ ಪೊಲೀಸ್ ಠಾಣೆ ಸರಕಾರದ ಪರವಾಗಿ ಕೊಡುವ ಪಿಯರ್ಾದಿ ಏನೆಂದರೆ, ನಾನು ಇಂದು ದಿ:19.03.2020 ರಂದು ಗೆದ್ದಲಮರಿ ತಾಂಡಾದ ಬೀಟ್ ಸಿಬ್ಬಂದಿಯವರಾದ ಶಹಜಹಾನ ಹೆಚ್ಸಿ-141 ರವರೊಂದಿಗೆ ನಿನ್ನೆ ದಿನ ಗೆದ್ದಲಮರಿ ತಾಂಡಾದ ಹರಿಶ್ಚಂದ್ರ ತಂದೆ ಲಾಲಸಿಂಗ ಚವ್ಹಾಣ ರವರು ಕೊಟ್ಟು ಅಜರ್ಿ ವಿಚಾರಣೆಗಾಗಿ ಗೆದ್ದಲಮರಿ ತಾಂಡಾಕ್ಕೆ 11:00 ಎಎಮ್ ಕ್ಕೆ ಬೇಟಿ ನೀಡಿದಾಗ ತಾಂಡಾದಲ್ಲಿಯ ಭಾತ್ಮಿದಾರರಿಂದ ಮಾಹಿತಿ ತಿಳಿದುಬಂದಿದ್ದೇನೆಂದರೆ, ಗೆದ್ದಲಮರಿ ಸೀಮಾಂತರದಲ್ಲಿಯ ಸವರ್ೇ ನಂ:67 ರಲ್ಲಿಯ 6 ಎಕರೆ 12 ಗುಂಟೆ ಜಮೀನನ್ನು ಅಜರ್ಿದಾರ ಹರಿಶ್ಚಂದ್ರ ಇತನ  ಅಣ್ಣನಾದ ಶಾಂತಿಲಾಲ ಇತನು ಈಗ ಅಂದಾಜು 20 ವರ್ಷಗಳ ಹಿಂದೆ ಅದೇ ತಾಂಡಾದ ಜೈರಾಮ್ ತಂದೆ ಥಾವರೆಪ್ಪ ರಾಠೋಡ ವರಿಗೆ ಮಾರಾಟ ಮಾಡಿದ್ದು. ಸದರಿ ಜಮೀನಿನಲ್ಲಿ ಖರೀದಿಸಿದಾಗಿನಿಂದ ಜೈರಾಮನು ಸದರಿ ಜಮೀನನ್ನು ಸಾಗುವಳಿ ಮಾಡುತ್ತಾ ಜಮೀನನ್ನು ಕಲ್ಲು ಕಂಟಿ ಕಿತ್ತಿಸಿ ಸಮತಟ್ಟಾಗಿ ಒಳ್ಳೆಯ ರೀತಿಯಿಂದ ಮಾಡಿಕೊಂಡು ಬೆಳೆ ಬೆಳೆಯುತ್ತಾ ಬಂದಿದ್ದು. ಅಲ್ಲದೇ ಸದ್ಯ ಭತ್ತದ ಬೆಳೆಯನ್ನು ನಾಟಿ ಮಾಡಿದ್ದು. ಸದ್ಯ ಕಟಾವಿಗೆ ಬಂದಿದ್ದು  ಇರುತ್ತದೆ. ಅಜರ್ಿದಾರ ಹರಿಶ್ಚಂದ್ರನು ತನ್ನ ಸವರ್ೇ ನಂ:57 ರಲ್ಲಿ ಎರಡು ಎಕರೆ ಜಮೀನನ್ನು ಈಗ 10-15 ವರ್ಷಗಳ ಹಿಂದೆ ನಂದಪ್ಪ ತಂದೆ ಖೇಮಣ್ಣ ಪವಾರ ಎಂಬುವರಿಗೆ ಮಾರಾಟ ಮಾಡಿದ್ದು. ಆಗ ಅವರಿಗೆ ಹೆಸರಿಗೆ ಮಾಡಿಸಿಕೊಡುವಾಗ ಸದರಿ ಜಮೀನನ್ನು ಸವರ್ೆ ಮಾಡಿಸುವಾಗ ಸವರ್ೇ ನಂ;57 ರಲ್ಲಿ ಜಮೀನು ತನಗೆ ಸ್ವಲ್ಪ ಉಳಿದಿದ್ದರಿಂದ ತನಗೆ ಉಳಿಯಬೇಕಾದ ಜಮೀನು ಉಳಿಯದೇ ಇದುದರಿಂದ ತನ್ನ ಅಣ್ಣ ಶಾಂತಿಲಾಲನು ಜೈರಾಮನಿಗೆ ಮಾರಿದ ಜಮೀನು ಸವರ್ೇ ನಂ:57 ಇರುವದಾಗಿ ಗೊತ್ತಾಗಿದ್ದು. ನಂತರ ಅಜರ್ಿದಾರ ಹರಿಶ್ಚಂದ್ರನು ಜೈರಾಮನಿಗೆ ನಾವು ಮಾರಾಟ ಮಾಡಿದ ಜಮೀನು ನೀನು ಈಗ ಸಾಗುವಳಿ ಮಾಡುವ ಜಮೀನು ಇರುವದಿಲ್ಲಾ  ನಾನು ಸಾಗುವಳಿ ಮಾಡುವ ಜಮೀನು ನಿನಗೆ ಮಾರಾಟ ಮಾಡಿದ್ದು ಆಗಿದ್ದು. ಕಾರಣ ನೀನು ಸಾಗುವಳಿ ಮಾಡುವ ಜಮೀನು ನನಗೆ ಬಿಡಬೇಕು ಅಂತಾ ಕೇಳಿದ್ದು. ಆದರೆ ಜೈರಾಮನು ನಾನು ನಿಮ್ಮಂದ ಹೊಲ ಖರೀದಿ ಮಾಡಿದ ನಂತರ ಇಲ್ಲಿಯವರೆಗೆ ಹೊಲಕ್ಕೆ ಸಾಕಷ್ಟು ಖಚರ್ು ಮಾಡಿ ಸಮತಟ್ಟು ಮಾಡಿದ್ದು. ನಾನು ಈ ಜಮೀನು ನಿನಗೆ  ಬಿಡುವದಿಲ್ಲಾ ಅಂತಾ ಅಂದಿದ್ದರಿಂದ  ಇದರಿಂದ ಹರಿಶ್ಚಂದ್ರನು ಈ ಬಗ್ಗೆ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿದ್ದು ನ್ಯಾಯಾಲಯವು ಹರಿಶ್ಚಂದ್ರನಂತೆ ತೀಪರ್ು ನೀಡಿದ್ದು. ಅಲ್ಲದೇ ಹರಿಶ್ಚಂದ್ರನು ಮಾನ್ಯ ಉಚ್ಚ ನ್ಯಾಯಾಲಯ ಕಲಬುರಗಿ ಪೀಠದಲ್ಲಿ ಈ ಜಮೀನುಗಳ ವಿಷಯದಲ್ಲಿ ಕೆವಿಯಟ್ಅಜರ್ಿ ಸಲ್ಲಿಸಿದ್ದು ಅಲ್ಲದೆ ಸದ್ಯ ಹರಿಶ್ಚಂದ್ರನು ಜೈರಾಮನ ಬೆಳೆದ ಭತ್ತದ ಬೆಳೆಯನ್ನು  ತನಗೆ ರಾಶಿ ಮಾಡಿ ಕೊಡುವಂತೆ ಮತ್ತು ಜಮೀನು ಸಾಗುವಳಿ ಮಾಡಿಲು ತಕರಾರು ಮಾಡದಂತೆ ಅಜರ್ಿ ಸಲ್ಲಿಸಿದ್ದು. ಜೈರಾಮ ತಂದೆ ತಾವರೆಪ್ಪ ರಾಠೋಡ, ಹಾಗೂ ಅವರ ಅಣ್ಣ ನಾರಾಯಣ ತಂದೆ ಥಾವರೆಪ್ಪ ರಾಠೋಡ, ಹಾಗೂ ಪ್ರತಿವಾದಿ ಹರಿಶ್ಚಂದ್ರ ತಂದೆ ಲಾಲಸಿಂಗ ಚವ್ಹಾಣ, ಲಕ್ಷ್ಮೀಬಾಯಿ ಗಂಡ ಹರಿಶ್ಚಂದ್ರ ಚವ್ಹಾಣ, ಗಣೇಶ ತಂದೆ ಹರಿಶ್ಚಂದ್ರ ಚವ್ಹಾಣ, ರವಿ ತಂದೆ ಹರಿಶ್ಚಂದ್ರ ಚವ್ಹಾಣರವರ ಅವರವರಲ್ಲಿ ಭಾರಿ ವೈಮನಸ್ಸು ಉಂಟಾಗಿದ್ದು. ಸದರಿ ಎರಡೂ ಪಾಟರ್ಿಯವರು ಈ ವಿಷಯದಲ್ಲಿ ಯಾವ ವೇಳೆಯಲ್ಲಿ ತಮ್ಮ ತಮ್ಮಲ್ಲಿ  ಹೊಡೆಬಡೆ ಮಾಡಿಕೊಂಡು ತಮ್ಮ ಪ್ರಾಣ ಹಾನಿ ಮಾಡಿಕೊಳ್ಳುವದಾಗಲಿ ಅಥವಾ ತಾಂಡಾದಲ್ಲಿ ಯಾವುದೇಸಮಯದಲ್ಲಿ ಸಾರ್ವಜನಿಕ ಶಾಂತತಾ ಭಂಗ ಹಾಗು ವಿಷಮ ವಾತಾವರಣ ಉಂಟು ಮಾಡುವ ಸಂಭವ ಇದ್ದ ಬಗ್ಗೆ ತಿಳಿದುಬಂದಿದ್ದರಿಂದ ಮತ್ತು ಸಾರ್ವಜನಿಕ ಆಸ್ತಿಗಾಗಲಿ ಪ್ರಾಣಕ್ಕಾಗಿ ಹಾನಿಯನ್ನುಂಟು ಮಾಡುವ ಸಂಭವ ಕಂಡುಬಂದಿದ್ದರಿಂದ ಸದರಿಯವರಿಂದ ಮುಂದೆ ಜರುಗಬಹುದಾದ ಸಂಭವನೀಯ ಅಪರಾಧಗಳನ್ನು ತಡೆಗಟ್ಟುವ ದೃಷ್ಠಿಯಿಂದ ಪ್ರತಿವಾದಿ ಜನರ ಮೇಲೆ ಮುಂಜಾಗೃತ ಕ್ರಮ ಜರುಗಿಸುವದು ಅವಶ್ಯಕತೆ ಕಂಡುಬಂದಿದ್ದರಿಂದ 4:00 ಪಿಎಮ್ ಕ್ಕೆ ಠಾಣೆಗೆ ಬಂದು ಸರಕಾರದ ಪರವಾಗಿ ಫಿಯರ್ಾದಿಯಾಗಿ ಠಾಣಾ ಪಿ.ಎ.ಆರ್ ನಂ:01/2020 ಕಲಂ:107 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡಿದ್ದು ಇರುತ್ತದೆ

ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 02/2020 ಕಲಂ: 107 ಸಿಆರ್ಪಿಸಿ :- ನಾನು ಭೀಮಾಶಂಕರ ಎಎಸ್ಐ ಕೊಡೆಕಲ್ಲ ಪೊಲೀಸ್ ಠಾಣೆ ಸರಕಾರದ ಪರವಾಗಿ ಕೊಡುವ ಪಿಯರ್ಾದಿ ಏನೆಂದರೆ, ನಾನು ಇಂದು ದಿ:19.03.2020 ರಂದು ಗೆದ್ದಲಮರಿ ತಾಂಡಾದ ಬೀಟ್ ಸಿಬ್ಬಂದಿಯವರಾದ ಶಹಾಜಹಾನ ಹೆಚ್ಸಿ-141 ರವರೊಂದಿಗೆ ನಿನ್ನೆ ದಿನ ಗೆದ್ದಲಮರಿ ತಾಂಡಾದ ಹರಿಶ್ಚಂದ್ರ ತಂದೆ ಲಾಲಸಿಂಗ ಚವ್ಹಾಣ ರವರು ಕೊಟ್ಟು ಅಜರ್ಿ ವಿಚಾರಣೆಗಾಗಿ ಗೆದ್ದಲಮರಿ ತಾಂಡಾಕ್ಕೆ 11:00 ಎಎಮ್ ಕ್ಕೆ ಬೇಟಿ ನೀಡಿದಾಗ ತಾಂಡಾದಲ್ಲಿಯ ಭಾತ್ಮಿದಾರರಿಂದ ಮಾಹಿತಿ ತಿಳಿದುಬಂದಿದ್ದೇನೆಂದರೆ, ಗೆದ್ದಲಮರಿ ಸೀಮಾಂತರದಲ್ಲಿಯ ಸವರ್ೇ ನಂ:67 ರಲ್ಲಿಯ 6 ಎಕರೆ 12 ಗುಂಟೆ ಜಮೀನನ್ನು ಅಜರ್ಿದಾರ ಹರಿಶ್ಚಂದ್ರ ಇತನ  ಅಣ್ಣನಾದ ಶಾಂತಿಲಾಲ ಇತನು ಈಗ ಅಂದಾಜು 20 ವರ್ಷಗಳ ಹಿಂದೆ ಅದೇ ತಾಂಡಾದ ಪ್ರತಿವಾದಿ ಜೈರಾಮ್ ತಂದೆ ಥಾವರೆಪ್ಪ ರಾಠೋಡ ರವರಿಗೆ ಮಾರಾಟ ಮಾಡಿದ್ದು. ಸದರಿ ಜಮೀನಿನಲ್ಲಿ ಖರೀದಿಸಿದಾಗಿನಿಂದ ಪ್ರತಿವಾದಿ ಜೈರಾಮನು ಸದರಿ ಜಮೀನನ್ನು ಸಾಗುವಳಿ ಮಾಡುತ್ತಾ ಜಮೀನನ್ನು ಕಲ್ಲು ಕಂಟಿ ಕಿತ್ತಿಸಿ ಸಮತಟ್ಟಾಗಿ ಒಳ್ಳೆಯ ರೀತಿಯಿಂದ ಮಾಡಿಕೊಂಡು ಬೆಳೆ ಬೆಳೆಯುತ್ತಾ ಬಂದಿದ್ದು. ಅಲ್ಲದೇ ಸದ್ಯ ಭತ್ತದ ಬೆಳೆಯನ್ನು ನಾಟಿ ಮಾಡಿದ್ದು. ಸದ್ಯ ಕಟಾವಿಗೆ ಬಂದಿದ್ದು  ಇರುತ್ತದೆ. ಅಜರ್ಿದಾರ ಹರಿಶ್ಚಂದ್ರನು ತನ್ನ ಸವರ್ೇ ನಂ:57 ರಲ್ಲಿ ಎರಡು ಎಕರೆ ಜಮೀನನ್ನು ಈಗ 10-15 ವರ್ಷಗಳ ಹಿಂದೆ ನಂದಪ್ಪ ತಂದೆ ಖೇಮಣ್ಣ ಪವಾರ ಎಂಬುವರಿಗೆ ಮಾರಾಟ ಮಾಡಿದ್ದು. ಆಗ ಅವರಿಗೆ ಹೆಸರಿಗೆ ಮಾಡಿಸಿಕೊಡುವಾಗ ಸದರಿ ಜಮೀನನ್ನು ಸವರ್ೆ ಮಾಡಿಸುವಾಗ ಸವರ್ೇ ನಂ;57 ರಲ್ಲಿ ಜಮೀನು ತನಗೆ ಸ್ವಲ್ಪ ಉಳಿದಿದ್ದರಿಂದ ತನಗೆ ಉಳಿಯಬೇಕಾದ ಜಮೀನು ಉಳಿಯದೇ ಇದುದರಿಂದ ತನ್ನ ಅಣ್ಣ ಶಾಂತಿಲಾಲನು ಪ್ರತಿವಾದಿ ಜೈರಾಮನಿಗೆ ಮಾರಿದ ಜಮೀನು ಸವರ್ೇ ನಂ:57 ಇರುವದಾಗಿ ಗೊತ್ತಾಗಿದ್ದು. ನಂತರ ಅಜರ್ಿದಾರ ಹರಿಶ್ಚಂದ್ರನು ಪ್ರತಿವಾದಿ ಜೈರಾಮನಿಗೆ ನಾವು ಮಾರಾಟ ಮಾಡಿದ ಜಮೀನು ನೀನು ಈಗ ಸಾಗುವಳಿ ಮಾಡುವ ಜಮೀನು ಇರುವದಿಲ್ಲಾ  ನಾನು ಸಾಗುವಳಿ ಮಾಡುವ ಜಮೀನು ನಿನಗೆ ಮಾರಾಟ ಮಾಡಿದ್ದು ಆಗಿದ್ದು. ಕಾರಣ ನೀನು ಸಾಗುವಳಿ ಮಾಡುವ ಜಮೀನು ನನಗೆ ಬಿಡಬೇಕು ಅಂತಾ ಕೇಳಿದ್ದು. ಆದರೆ ಪ್ರತಿವಾದಿ ಜೈರಾಮನು ನಾನು ನಿಮ್ಮಂದ ಹೊಲ ಖರೀದಿ ಮಾಡಿದ ನಂತರ ಇಲ್ಲಿಯವರೆಗೆ ಹೊಲಕ್ಕೆ ಸಾಕಷ್ಟು ಖಚರ್ು ಮಾಡಿ ಸಮತಟ್ಟು ಮಾಡಿದ್ದು. ನಾನು ಈ ಜಮೀನು ನಿನಗೆ ಬಿಡುವದಿಲ್ಲಾ ಅಂತಾ ಅಂದಿದ್ದರಿಂದ  ಇದರಿಂದ ಹರಿಶ್ಚಂದ್ರನು ಈ ಬಗ್ಗೆ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿದ್ದು ನ್ಯಾಯಾಲಯವು ಹರಿಶ್ಚಂದ್ರನಂತೆ ತೀಪರ್ು ನೀಡಿದ್ದು. ಅಲ್ಲದೇ ಹರಿಶ್ಚಂದ್ರನು ಮಾನ್ಯ ಉಚ್ಚ ನ್ಯಾಯಾಲಯ ಕಲಬುರಗಿ ಪೀಠದಲ್ಲಿ ಈ ಜಮೀನುಗಳ ವಿಷಯದಲ್ಲಿ ಕೆವಿಯಟ್ ಅಜರ್ಿ ಸಲ್ಲಿಸಿದ್ದು ಅಲ್ಲದೆ ಸದ್ಯ ಹರಿಶ್ಚಂದ್ರನು ಪ್ರತಿವಾದಿ ಜೈರಾಮನ ಬೆಳೆದ ಭತ್ತದ ಬೆಳೆಯನ್ನು  ತನಗೆ ರಾಶಿ ಮಾಡಿ ಕೊಡುವಂತೆ ಮತ್ತು ಜಮೀನು ಸಾಗುವಳಿ ಮಾಡಲು ತಕರಾರು ಮಾಡದಂತೆ ಅಜರ್ಿ ಸಲ್ಲಿಸಿದ್ದು. ಪ್ರತಿವಾದಿಗಳಾದ 1)ಜೈರಾಮ ತಂದೆ ತಾವರೆಪ್ಪ ರಾಠೋಡ, ಹಾಗೂ ಅವರ ಅಣ್ಣ 2)ನಾರಾಯಣ ತಂದೆ ಥಾವರೆಪ್ಪ ರಾಠೋಡ, 3) ಕೃಷ್ಣಪ್ಪ ತಂದೆ ಜೈರಾಮ ರಾಠೋಡ, 4) ರುಕ್ಮಾಬಾಯಿ ಗಂಡ ನಾರಾಯಣ ರಾಠೋಡ, 5) ಬಾಲಾಬಾಯಿ ಗಂಡ ಜೈರಾಮ ರಾಠೋಡ, 6) ಶಾಂತಬಾಯಿ ತಂದೆ ಜೈರಾಮ ರಾಠೋಡ, 7) ಸುನೀತಾ ತಂದೆ ನಾರಾಯಣ ರಾಠೋಡ ಹಾಗೂ ಅಜರ್ಿದಾರ ಹರಿಶ್ಚಂದ್ರ ತಂದೆ ಲಾಲಸಿಂಗ ಚವ್ಹಾಣ, ಹಾಗೂ ಅವರ ಬೆಂಬಲಿಗರ ಮಧ್ಯದಲ್ಲಿ ಅವರವರಲ್ಲಿ ಭಾರಿ ವೈಮನಸ್ಸು ಉಂಟಾಗಿದ್ದು. ಸದರಿ ಎರಡೂ ಪಾಟರ್ಿಯವರು ಈ ವಿಷಯದಲ್ಲಿ ಯಾವ ವೇಳೆಯಲ್ಲಿ ತಮ್ಮ ತಮ್ಮಲ್ಲಿ  ಹೊಡೆಬಡೆ ಮಾಡಿಕೊಂಡು ತಮ್ಮ ಪ್ರಾಣ ಹಾನಿ ಮಾಡಿಕೊಳ್ಳುವದಾಗಲಿ ಅಥವಾ ತಾಂಡಾದಲ್ಲಿ ಯಾವುದೇ  ಸಮಯದಲ್ಲಿ ಸಾರ್ವಜನಿಕ ಶಾಂತತಾ ಭಂಗ ಹಾಗು ವಿಷಮ ವಾತಾವರಣ ಉಂಟು ಮಾಡುವ ಸಂಭವ ಇದ್ದ ಬಗ್ಗೆ ತಿಳಿದುಬಂದಿದ್ದರಿಂದ ಮತ್ತು ಸಾರ್ವಜನಿಕ ಆಸ್ತಿಗಾಗಲಿ ಪ್ರಾಣಕ್ಕಾಗಿ ಹಾನಿಯನ್ನುಂಟು ಮಾಡುವ ಸಂಭವ ಕಂಡುಬಂದಿದ್ದರಿಂದ ಸದರಿ ಪ್ರತಿವಾದಿಗಳಿಂದ ಮುಂದೆ ಜರುಗಬಹುದಾದ ಸಂಭವನೀಯ ಅಪರಾಧಗಳನ್ನು ತಡೆಗಟ್ಟುವ ದೃಷ್ಠಿಯಿಂದ ಪ್ರತಿವಾದಿ ಜನರ ಮೇಲೆ ಮುಂಜಾಗೃತ ಕ್ರಮ ಜರುಗಿಸುವದು ಅವಶ್ಯಕತೆ ಕಂಡುಬಂದಿದ್ದರಿಂದ 4:50 ಪಿಎಮ್ ಕ್ಕೆ ಠಾಣೆಗೆ ಬಂದು ಸರಕಾರದ ಪರವಾಗಿ ಫಿಯರ್ಾದಿಯಾಗಿ ಠಾಣಾ ಪಿ.ಎ.ಆರ್ ನಂ:02/2020 ಕಲಂ:107 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡಿದ್ದು ಇರುತ್ತದೆ. ಸದರಿ ಪ್ರತಿವಾದಿಗಳಿಂದ ಶಾಂತರೀತಿಯಿಂದ ಇರುವಂತೆ ಅವರ ಕಡೆಯಿಂದ ಕಲಂ:116 (2) ಸಿಆರ್ಪಿಸಿ ಪ್ರಕಾರ ಇಂಟೇರಿಯಂ ಬಾಂಡ್ ಪಡೆದುಕೊಳ್ಳಲು ಕೋರಿಕೊಂಡಿದ್ದು ಇರುತ್ತದೆ.

ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 5/2020174 (ಸಿ) ಸಿ.ಆರ್.ಪಿ.ಸಿ:- ಇಂದು ದಿನಾಂಕ 19/03/2020 ರಂದು 07.30 ಎಎಂ ಕ್ಕೆ ಅಜರ್ಿದಾರರಾದ ಶ್ರೀಮತಿ. ಸಿದ್ದಮ್ಮ ಗಂಡ ನಾಗಪ್ಪ ಸುರಪೂರ ವ:35 ಉ: ಕುರಿಕಾಯುವದು ಜಾ: ಕುರುಬರ ಸಾ: ಶೆಟ್ಟಿಕೇರಾ ಹಾ:ವ: ಮದ್ರಿಕಿ ಸೀಮಾಂತರ. ತಾ; ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆಯಿಸಿದ ಅಜರ್ಿ ಹಾಜರ ಪಡೆಸಿದ್ದು, ಅದರ ಸಾರಂಶವೇನಂದರೆ, ನನ್ನ ಗಂಡನಾದ ನಾಗಪ್ಪ ತಂದೆ ಹಣಮಂತ ಸುರಪೂರ ವ:38 ಉ: ಕುರಿಕಾಯುವದು ಜಾ: ಕುರುಬರ ಸಾ: ಶೆಟ್ಟಿಕೇರಾ ಈತನು ನನಗೆ ಮದುವೆ ಆಗುವದಕ್ಕು ಮೋದಲು ತನ್ನ ಅಕ್ಕನ ಮಗಳಾದ ಮಾನಮ್ಮ ಇವಳಿಗೆ ಮದುವೆ ಆಗಿದ್ದು, ಅವಳ ಹೊಟ್ಟೆಯಿಂದ ಒಂದು ಹೆಣ್ಣು ಮಗು, ಇರುತ್ತದೆ. ಎರಡನೇಯದಾಗಿ ರೇಣಮ್ಮ ಎನ್ನುವವಳನ್ನು ಮದುವೆ ಆಗಿದ್ದು ಅವಳು ಬಿಟ್ಟು ಹೋಗಿ ಬೇರೆ ಮದುವೆ ಆಗಿರುತ್ತಾಳೆ, ನಂತರ ನನಗೆ ಸುಮಾರು 6-7 ವರ್ಷದ ಹಿಂದೆ ಮದುವೆ ಆಗಿದ್ದು, ನಮಗೆ ಮೂರು ಜನರು ಹೇಣ್ಣು ಮಕ್ಕಳು ಇರುತ್ತಾರೆ. ನನ್ನ ಗಂಡನಿಗೆ 3 ಜನ ಅಣ್ಣತಮ್ಮಂದಿರು ಇದ್ದು, ದೋಡ್ಡವನಾದ ಭಿಮಣ್ಣ ತಂದೆ ಹಣಮಂತ ಸುರಪೂರ ಈತನು ನನ್ನ ಮದುವೆ ಆಗುವದುಕ್ಕು ಮೊದಲು ಬೇರೆಯಾಗಿದ್ದಾನೆ. ಇಬ್ಬರು ತಮ್ಮಂದಿರು ಸುಮಾರು 03 ವರ್ಷ ಗಳ ಹಿಂದೆ ಬೇರೆ ಆಗಿರುತ್ತಾರೆ. ನನ್ನ ಗಂಡನಿಗೆ ಒಟ್ಟು 5 ಎಕರೆ ಆಸ್ತಿ ಬಂದಿರುತ್ತದೆ. ಅದನ್ನು ಲೀಜಿಗೆ ಕೊಟ್ಟಿದ್ದನು. ನನ್ನ ಗಂಡನು ನಾವು ಇದ್ದಲ್ಲಿಂದ ಆಗಾಗಾ ಶೆಟ್ಟಿಕೇರಾಕ್ಕೆ ಹೋಗಿ ಬರುವದು ಮಾಡುತ್ತಿದ್ದ.
          ನಾನು ಈಗ ಗಭರ್ೀಣಿ ಇದ್ದು ಸುಮಾರು 15 ದಿನದ ಹಿಂದೆ ನನ್ನ ತವರೂರಾದ ಮೂಡಬೂಳ ಗ್ರಾಮಕ್ಕೆ ಹೆರಿಗೆಗೆ ಅಂತಾ ಹೋಗಿದ್ದೇನು. ಹೀಗಿದ್ದು ನನ್ನ ಗಂಡನು ನಮ್ಮ ಕುರಿಗಳ ಹತ್ತಿರ ಕುರಿಗಳನ್ನು ಹಾಕಿದ್ದ ನಿಂಗಪ್ಪ ತಂದೆ ರಾಯಪ್ಪ ಸಗರ ಈತನ ಅಳಿಯ ಹೊನ್ನಪ್ಪ ತಂದೆ ಪರಮಣ್ಣ ಇವರಿಗೆ ಶೆಟ್ಟಿಕೇರಿಗೆ ಹೋಗಿ ಬರುತ್ತೇನೆ ನಾಳೆ ಶಹಾಪೂರ ಸಂತೆಗೆ ಕುರಿ ಮಾರಲು ಹೊಗೋಣ ಅಂತಾ ಹೇಳಿ ದಿನಾಂಕ:12/03/2020 ರಂದು ಹೇಳಿ ತನ್ನ ಮೋಟಾರ್ ಸೈಕಲ್ ನಂ: ಕೆಎ-33-ಡಬ್ಲೂ-3298 ನೆದ್ದರ ಮೇಲೆ ಹೋಗಿದ್ದು, ಮರುದಿನ ಶಹಾಪೂರಕ್ಕೆ ಕುರಿ ತಗೆದುಕೊಂಡು ಹೋಗಲು ನನ್ನ ಗಂಡನಿಗೆ ಪೋನ ಮಾಡಿದರೆ ಪೋನ ಹತ್ತುತ್ತಿಲ್ಲ, ನಂತರ ಎಲ್ಲಿಗಾದರು ಹೋಗಿರ ಬಹುದು ಅಂತಾ ತಿಳಿದು ಸುಮ್ಮನಿದ್ದು, ಶನಿವಾರವೂ ಕೂಡ ನನ್ನ ಗಂಡ ಕುರಿ ಹತ್ತಿರ ಬಂದಿಲ್ಲದ ಕಾರಣ ವಿಷಯವನ್ನು ನಮ್ಮ ಅತ್ತೆಯವರಿಗೆ ನನಗೆ ತಿಳಿಸಿ ನಮ್ಮ ಅತ್ತೆಯಾದ ಭೀಮಬಾಯಿ ಇವರಿಗೆ ತಿಳಿಸಿದ್ದು, ನಾನು ಗಭರ್ೀಣಿಯಾದ್ದರಿಂದ ನನ್ನ ಗಂಡನ ತಾಯಿ (ನನ್ನ ಅತ್ತೆ) ನಮ್ಮ ಕುರಿಗಳ ಹತ್ತಿ ಕಾಯಲು ಬಂದು ಇದ್ದರು, ಆಕಡೆ ನಮ್ಮ ಬಾವ ಭೀಮಣ್ಣ ತಂದೆ ಹಣಮಂತ, ಮೈದುನರಾದ, ಸಾಯಿಬಣ್ಣ ತಂದೆ ಹಣಮಂತ, ನಿಂಗಪ್ಪ ತಂದೆ ಹಣಮಂತ ಸುರಪೂರ, ನಿಂಗಪ್ಪ ತಂದೆ ರಾಯಪ್ಪ ಸಗರ, ನಮ್ಮ ಖಾಸ್ ಅಣ್ಣ ಮಾಳಪ್ಪ ಎಲ್ಲರೂ ನನ್ನ ಗಂಡನಿಗೆ ಹುಡುಕಾಡಿದರೂ ಸಿಕ್ಕಿರಲಿಲ್ಲ. ಹೀಗಿದ್ದು, ನಿನ್ನೆ ದಿನಾಂಕ: 18/03/2020 ರಂದು ಒಬ್ಬ ಗಂಡಸ್ಸಿನ ಶವವು ಹೋಸ್ಕೆರಾ ಹತ್ತಿರ ಮೇನ್ ಕೆನಾಲದಿಂದ ಹೆಚ್ಚಿನ ನೀರು ಹೋಗುವ ನಾಲೆಯಲ್ಲಿ ಮೋಟಾರ್ ಸೈಕಲ್ ಜೋತೆಯಲ್ಲಿ ಬಿದ್ದಿರುತ್ತದೆ ಅಂತಾ ಸುದ್ದಿಯಾಗಿ ನನ್ನ ಬಾವ ಮತ್ತು ಮೈದುನರು, ಮತ್ತು ನಮ್ಮುರಿನ ಜೆಟ್ಟೆಪ್ಪ ತಂದೆ ಹಣಮಂತ , ಮಲ್ಲಪ್ಪ ತಂದೆ ದಂಡಪ್ಪ ಜೋಗಿನ, ದೇವಿಂದ್ರಪ್ಪ ತಂದೆ ಭಿಮಣ್ಣ ಜೋಗಿನ, ಲಕ್ಷ್ಮಯ್ಯ ತಂದೆ ತಾಯಣ್ಣ ಕಲಾಲ ಇವರೆಲ್ಲರೂ ಹೋಗಿ ನೋಡಿದ್ದು, ಸದರಿ ಸ್ಥಳದಲ್ಲಿ ಬಿದ್ದ ಮೋಟಾರ್ ಸೈಕಲ್ ನನ್ನ ಗಂಡನು ತಗೆದುಕೊಂಡು ಹೊಗಿದ್ದ ಮೋಟಾರ್ ಸೈಕಲ್ ನಂಬರ ಕೆಎ-33-ಡಬ್ಲೂ-3298 ನೇದ್ದು ಇದ್ದು, ನನ್ನ ಗಂಡನಾದ ನಾಗಪ್ಪನ ಶವ ನೀರಿನಲ್ಲಿ ಕೋಳೆತು ಜಲಚರ ಪ್ರಾಣಿಗಳು ಮುಖದ ಸುತ್ತಲು ತಿಂದಿದ್ದು, ಮೃತದೇಹದಲ್ಲಿ ಹುಳುಗಳು ಆಗಿದ್ದು, ನನ್ನ ಗಂಡನ ಬಲ ಕಿವಿಯಲ್ಲಿನ ಮುರವು, ಮೈಮೇಲಿನ ಅಂಗಿ ಮತ್ತು ಬನಿನ ನೋಡಿ ಸದರಿ ಶವವು ನನ್ನ ಗಂಡನ ಶವವೆ ಇರುತ್ತದೆ ಅಂತಾ ಗುರುತಿಸಿರುತ್ತಾರೆ.
        ನಾನು ನಿನ್ನೆ ರಾತ್ರಿ ತಡವಾಗಿ ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದು ನನ್ನ ಗಂಡನ ಶವವನ್ನು ನೋಡಿ ಗುರುತಿಸಿರುತ್ತೇನೆ. ನನ್ನ ಗಂಡನು ಶೆಟ್ಟಿಕೇರಾ ಗ್ರಾಮಕ್ಕೆ ಹೋಗಿ ಬರುತ್ತೇನು ಅಂತಾ ದಿ:12/03/2020 ರಂದು ರಾತ್ರಿ 09.00 ಪಿಎಂ ಸುಮಾರಿಗೆ ಹೋಗಿದ್ದು, ದಿನಾಂಕ: 18/03/2020 ರಂದು 05.30 ಪಿಎಂ ಮಧ್ಯದ ಅವದಿಯಲ್ಲಿ ಮೃತಪಟ್ಟಿದ್ದು, ಶವ ದೋರೆತ ಸ್ಥಳ ಮತ್ತು ಮೋಟಾರ್ ಸೈಕಲ್ ಸಮೇತವಾಗಿ ಕೆನಾಲ ಕಾಲುವೆ ನೀರಲ್ಲಿ ಶವ ದೋರೆತಿದ್ದು, ನನ್ನ ಗಂಡನ ಸಾವಿನ ರೀತಿಯಲ್ಲಿ ನನಗೆ ಸಂಶಯ ಇರುತ್ತದೆ, ನಾನು ಶಹಾಪುರ ಆಸ್ಪತ್ರೆಗೆ ಬಂದು ನಮ್ಮ ಮನೆಯವರಲ್ಲಿ ವಿಚಾರ ಮಾಡಿ ಇಂದು ದಿನಾಂಕ:19/03/2020 ರಂದು 07.30 ಎಎಂ ಕ್ಕೆ ಠಾಣೆಗೆ ಬಂದು ಅಜರ್ಿ ನೀಡಿದ್ದು, ಮಾನ್ಯರವರು ನನ್ನ ಗಂಡನ ಸಾವಿನ ಬಗ್ಗೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಾರಾಂಶದ ಮೇಲಿಂದ ಗೋಗಿ ಪೊಲೀಸ್ ಠಾಣೆ ಯುಡಿಆರ್ ನಂ:05/2020 ಕಲಂ: 174 (ಸಿ) ಸಿ.ಆರ್.ಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 30/2020  ಕಲಂ, 323, 354, 504, 506 ಸಂ: 34 ಐಪಿಸಿ:-   ಇಂದು ದಿನಾಂಕ: 19/03/2020 ರಂದು 11.30 ಎಎಂ ಸುಮಾರಿಗೆ ಸರಕಾರಿ ಆಸ್ಪತ್ರೆ ಶಹಾಪೂರ ದಿಂದ ಹರ್ಟ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಶ್ರೀಮತಿ ಮಡಿವಾಳಮ್ಮ ಮ.ಹೆಚ್.ಸಿ-41 ರವರು ಸದರಿ ಆಸ್ಪತ್ರೆಗೆ ಬೇಟಿ ಮಾಡಿ ಗಾಯಾಳು ಶ್ರೀಮತಿ ವಿಜಮ್ಮ ಗಂಡ ಹೊನ್ನಪ್ಪ ಅನವರ ಇವರು ತಮ್ಮ ಚಿಕ್ಕಪ್ಪ ಆಸ್ಪತ್ರೆಗೆ ಬಮದ ನಂತರ ಹೇಳಿಕೆ ನೀಡಿದ್ದು, ಪಡೆದುಕೊಂಡು ಮರಳಿ ಠಾಣೆಗೆ 06.30 ಪಿಎಂಕ್ಕೆ ಬಂದು ಸದರಿ ಹೇಳೀಕೆ ಹಾಜರ ಪಡೆಸಿದ್ದು, ಸದರಿ ಪಿಯರ್ಾದಿ  ಸಾರಂಶ ಏನಂದರೆ,  ನನಗೆ ನಮ್ಮ ಊರಲ್ಲಿಯೇ ಹೊನ್ನಪ್ಪ ತಂದೆ ಬಸ್ಸಣ್ಣ ಅನವರ ಇವನೊಂದಿಗೆ ಸುಮಾರು 12-13 ವರ್ಷದ ಹಿಂದೆ ಮದುವೆ ಆಗಿರುತ್ತದೆ, ನನಗೆ 3 ಜನ ಮಕ್ಕಳಿರುತ್ತಾರೆ. ನಮಗೆ ಮನೆ ಇಲ್ಲದ ಕಾರಣ ನಾನು, ನನ್ನ ಗಂಡ ನನ್ನ ಮಕ್ಕಳು, ನನ್ನ ತವರು ಮನೆಯಲ್ಲಿಯೇ ನಮ್ಮ ತಾಯಿಯವರ ಜೋತೆಯಲ್ಲಿ ಇರುತ್ತೇವೆ.
      ಹೀಗಿದ್ದು ನನ್ನ ಗಂಡನಾದ ಹೊನ್ನಪ್ಪ ಈತನು ಇತ್ತಿಚೆಗೆ ಕುಡಿದು ಬಂದು ಒದರಾಡುತ್ತಿದ್ದ, ನಾನು ಅಕ್ಕಪಕ್ಕದವರಿಗೆ ತೊಂದರೆ ಆಗುತ್ತದೆ ಹೀಗೆ ಮಾಡ ಬೇಡ ಅಂತಾ ಹೇಳಿದರು ಕೇಳದ ಕಾರಣ ನಾನು ನಿನ್ನೆ ದಿನಾಂಕ:18/03/2020 ರಂದು ಗೋಗಿ ಪೊಲೀಸ್ ಠಾಣೆ ಗೋಗಿ ಕೇಸ್ ಮಾಡುತ್ತೇನೆ ಅಂತಾ ಹೇಳಿದ್ದೇನು. ಅದನ್ನು ಕೇಳಿದ ನನ್ನ ಗಂಡನ ಅಣ್ಣನಾದ ಶರಣಪ್ಪ ತಂದೆ ಬಸ್ಸಣ್ಣ ಅನವಾರ ಮತ್ತು ನಮ್ಮ ಮಾವನಾದ ಬಸ್ಸಣ್ಣ ತಂದೆ ಮಲ್ಲಯ್ಯ ಅನವಾರ ಇವರು ನಿನ್ನೆ ದಿ:18/03/2020 ರಂದು ರಾತ್ರಿ 10.30 ಪಿಎಂ ಸುಮಾರಿಗೆ ನನ್ನ ತಾಯಿಯವರ ಮನೆಯ ಮುಂದೆ ದಾರಿಯಲ್ಲಿ ಬಂದು ನನಗೆ ಬಸವಿ ಸೂಳಿ ನಮ್ಮ ಹೊನ್ನಪ್ಪನಿಗೆ ಕೇಸ್ ಮಾಡುತ್ತೇನೆ ಅಂತಾ ಹೇಳುತ್ತೇನು ಅಂತಾ ಅವಾಚ್ಯವಾಗಿ ಬೈಯ್ದು ಶರಣಪ್ಪ ಈತನು ನನ್ನ ಹೊಟ್ಟೆಯ ಹತ್ತಿರ ಪಕ್ಕಡಿಗೆ ಕಾಲಿನಿಂದ ಒದ್ದಿರುತ್ತಾನೆ. ನನ್ನ ಸೀರೆ ಹಿಡಿದು ಎಳೆದು ಕೈಯಿಂದ ಬೆನ್ನಿಗೆ ಹೊಡೆದಿರುತ್ತಾನೆ. ಬಸ್ಸಪ್ಪ ಈತನು ಸೂಳಿದು ಬಹಳ ಆಗಿದೆ ಅಂತಾ ಅವಾಚ್ಯವಾಗಿ ಬೈಯುತ್ತಾ ಎಲೆ ಸೂಳಿ ನೀನು ನಮ್ಮ ಮಗನಿಗೆ ತವರು ಮನೆಯಲ್ಲಿ ಇಟ್ಟುಕೊಂಡು ಅವನಿಗೆ ಹಾಳು ಮಾಡಿದಿ ಅಂತಾ ಅವಾಚ್ಯವಾಗಿ ಬೈಯುತ್ತಾ ಹೊಡೆಯಲು ಬಂದಾಗ ನಮ್ಮ ಚಿಕ್ಕಪ್ಪನ ಮಗಳಾದ ನಿಂಗಮ್ಮ ಗಂಡ ಶಿವಪ್ಪ ಇವಳು ಬಿಡಿಸಿಕೊಳ್ಳಲು ಬಂದಾಗ ಅವಳಿಗೂ ಶರಣಪ್ಪ ಈತನು ಹೊಟ್ಟೆಗೆ ಒದ್ದಿರುತ್ತಾನೆ. ಆಗ ನಮ್ಮ ಚಿಕ್ಕಪ್ಪ ಮಾನಯ್ಯ ತಂದೆ ಭೀಮಣ್ಣ ವೆಂಕಟಗಿರಿ, ಪಾರ್ವವತಿ ಗಂಡ ಮಾನಯ್ಯ ಅನವರ ಮತ್ತು ನಮ್ಮ ತಾಯಿ ಬಸ್ಸಮ್ಮ ಗಂಡ ಹಣಮಂತ್ರಾಯ ವೆಂಕಟಗಿರಿ ಇವರು ಬಿಡಿಸಿಕೊಂಡರು, ಆಗ ಶರಣಪ್ಪ ಮತ್ತು ಬಸ್ಸಣ್ಣ ಇಬ್ಬರು ಸೂಳಿ ಇವತ್ತು ಉಳದಿದಿ ಇನ್ನೊಮ್ಮೆ ಸಿಗು ನಿನಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಘಟನೆಯು ಲೈಟಿನ ಬೆಳಕಿನಲ್ಲಿ ನಡೆದಿದ್ದು ನೊಡಿರುತ್ತೇವೆ. ನನಗೆ ಮತ್ತು ನನ್ನ ಚಿಕ್ಕಪ್ಪನ ಮಗಳಾದ ನಿಂಗಮ್ಮ ಇಬ್ಬರಿಗೂ ಹೊಟ್ಟೆಗೆ ಹೊಡೆದಿದ್ದರಿಂದ ನಾವು ಇಂದು ಬೆಳಿಗ್ಗೆ 10.00 ಎಎಂ ಸುಮಾರಿಗೆ ನೇರವಾಗಿ ಸರಕಾರಿ ಆಸ್ಪತ್ರೆ ಶಹಾಪೂರ ಕ್ಕೆ ಬಂದು ಸೇರಿಕೆ ಆಗಿರುತ್ತೇವೆ.
        ಕಾರಣ ನಾನು ನನ್ನ ಗಂಡ ಹೊನ್ನಪ್ಪನ ಜೋತೆ ಬೆರೆಯಾಗಿ ನಮ್ಮ ತವರು ಮನೆಯಲ್ಲಿ ಇದ್ದರು ನಮ್ಮ ಸಂಸಾರದಲ್ಲಿ ಸಂಬಂದ ಹೊಂದಿರದ ಶರಣಪ್ಪ ತಂದೆ ಬಸ್ಸಣ್ಣ ಅನವಾರ, ಬಸ್ಸಣ್ಣ ತಂದೆ ಮಲ್ಲಯ್ಯ ಅವನಾರ ಇವರು ಇಬ್ಬರು ನನ್ನ ತಾಯಿ ಮನೆಯ ಮುಂದೆ ಬಂದು  ನನಗೆ ಕಾಲಿನಿಂದ ಹೊಟ್ಟೆಗೆ ಒದ್ದು, ಕೈ ಹಿಡಿದು ಎಳೆದಾಡಿ ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈಯ್ದು ಜೀವದ ಭಯ ಹಾಕಿದ ಮೇಲಿನ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 30/2020 ಕಲಂ, 323, 354, 504, 506 ಸಂ: 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
                           
ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ:- ಪಿ.ಎ.ಆರ್ ನಂ. 06/2020 ಕಲಂ 109 ಸಿ.ಆರ್.ಪಿ.ಸಿ:- ಮಾನ್ಯರವಲ್ಲಿ ನಾನು ಕೃಷ್ಣಾ ಸುಬೇದಾರ ಪಿ.ಎಸ್.ಐ (ಅ.ವಿ) ಯಾದಗಿರಿ ನಗರ ಠಾಣೆ ತಮ್ಮಲ್ಲಿ ಸಲ್ಲಿಸುವ ವರದಿ ಏನೆಂದರೆ, ಇಂದು ದಿನಾಂಕ 19/03/2020 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ನಾನು ಸಂಗಡ ಶ್ರೀನಿವಾಸರೆಡ್ಡಿ ಹೆಚ್.ಸಿ 111 ರವರನ್ನು ಕರೆದುಕೊಂಡು ಯಾದಗಿರಿ ನಗರದಲ್ಲಿ ಪೆಟ್ರೋಲಿಂಗ್ ಕುರಿತು ಹೊರಟು ಅಂಬೇಡ್ಕರ್ ನಗರ, ಲಕ್ಷ್ಮೀ ನಗರ, ಚಿತ್ತಾಪೂರ ರಸ್ತೆಯಿಂದ ಹೊಸ ಬಸ್ ನಿಲ್ದಾಣದ ಕಡೆಗೆ ಬಂದಾಗ, ಒಬ್ಬ ಹೆಣ್ಣು ಮಗಳು ಬಹಳ ಹೊತ್ತಿನಿಂದ ಸಂಶಯಾಸ್ಪದ ರೀತಿಯಲ್ಲಿ ಹೊಸ ಬಸ್ ನಿಲ್ದಾಣದಲ್ಲಿ ತಿರುಗಾಡುತ್ತಿದ್ದಾಳೆ ಅಂತಾ ಸಾರ್ವಜನಿಕರು ತಿಳಿಸಿದಾಗ ನಾವು ಆ ಹೆಣ್ಣು ಮಗಳನ್ನು ನೋಡಿ ವಾಚ್ ಮಾಡುತ್ತಾ, ಠಾಣೆಯಿಂದ ಒಬ್ಬ ಮಹಿಳಾ ಪೇದೆಯಾದ ಸುಧಾ ಮಪಿಸಿ.161 ಸ್ಥಳಕ್ಕೆ ಬರ ಮಾಡಿಕೊಂಡೆನು. ನಂತರ ಇಂದು ಬೆಳಿಗ್ಗೆ 09-45 ಗಂಟೆಯ ಸುಮಾರಿಗೆ ನಾವು ಮತ್ತು ಸಾರ್ವಜನಿಕರು ಕೂಡಿ ಹಿಡಿದು ವಿಚಾರಿಸಲಾಗಿ, ತನ್ನ ಹೆಸರು ತಪ್ಪು ತಪ್ಪಾಗಿ ಹೇಳಿದಳು. ಇದರಿಂದ ಅವಳ ಮೇಲೆ ನಮಗೆ ಬಲವಾಗಿ ಸಂಶಯ ಬಂದಿದ್ದರಿಂದ ಮಹಿಳಾ ಪೇದೆಯೊಂದಿಗೆ ಆಕೆಗೆ ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಲು ತನ್ನ ಹೆಸರು ನೂರಿ ಗಂಡ ರಂಜಿತ್ ಉಪಾದ್ಯಾ ವಯಾ 36 ವರ್ಷ, ಜಾ|| ಮರಾಠ ಉ|| ಪ್ಲಾಸ್ಟಿಕ್ ಸಾಮಾನು ಮಾರಾಟ ಮಾಡುವುದು ಸಾ|| ದಕ್ಕಾ ತಾಂಡಾ ಶಾಹಾಬಾದ ತಾ|| ಚಿತ್ತಾಪೂರ ಜಿ|| ಕಲಬುರಗಿ ಅಂತಾ ತಿಳಿಸಿದಳು.

        ಕಾರಣ ಸದರಿಯವರು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದರಿಂದ ಅವಳ ಮೇಲೆ ನಮಗೆ ಬಲವಾಗಿ ಸಂಶಯ ಬಂದಿದ್ದು, ಈಕೆಗೆ ಹೀಗೆ ಬಿಟ್ಟಲ್ಲಿ ಯಾವುದಾದರು ಸ್ವತ್ತಿನ ಅಪರಾಧ ಮಾಡುವ ಸಾದ್ಯತೆಗಳು ಇದ್ದುದ್ದರಿಂದ ಮುಂಜಾಗ್ರತೆ ಕ್ರಮ ಕುರಿತು ಇಂದು ಬೆಳಿಗ್ಗೆ 10-30 ಗಂಟೆಗೆ ಸದರಿಯವಳ ವಿರುದ್ದ ಠಾಣೆ ಪಿ.ಎ.ಆರ್ ನಂ 06/2020 ಕಲಂ 109 ಸಿ.ಆರ್.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು, ಅದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 97/2020 ಕಲಂ 78(3) ಕೆಪಿ.ಯಾಕ್ಟ:-         ಇಂದು ದಿನಾಂಕ 19/03/2020 ರಂದು 7.50 ಎಎಂ ಕ್ಕೆ ಶ್ರೀ ಹನುಮರಡ್ಡೆಪ್ಪ ಪಿಐ ಸಾಹೇಬರು ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ ವಿಭೂತಿಹಳ್ಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವದ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು ಪಿ.ಐ ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಒಬ್ಬ ವ್ಯಕಿಯನ್ನು ಹಿಡಿದು ವಿಚಾರಿಸಲಾಗಿ ಅವನ ಹೆಸರು ಶಶಿಧರ ತಂದೆ ಶರಣಯ್ಯ ಹಿರೇಮಠ ವ|| 38ವರ್ಷ ಜಾ|| ಲಿಂಗಾಯತ ಉ|| ಮಟಕಾ ನಂಬರ ಬರೆದುಕೊಳ್ಳುವುದು ಮತ್ತು ವ್ಯಾಪಾರ ಸಾ||  ಗುತ್ತಿಪೇಠ ಶಹಾಪೂರ ಹಾ|| ವ|| ವಿಭೂತಿಹಳ್ಳಿ ತಾ|| ಶಹಾಪೂರ ಈತನಿಂದ ನಗದು ಹಣ 1450/- ರೂಪಾಯಿ 1 ಬಾಲ್ ಪೆನ್ ಮತ್ತು ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಸಿಕ್ಕಿದ್ದು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿ ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 19/03/2020 ರಂದು 9.00 ಎಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 97/2020 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 98/2020 ಕಲಂ 457, 380 ಐಪಿಸಿ :- ಇಂದು ದಿನಾಂಕ: 19/03/2020 ರಂದು 5.30 ಪಿ.ಎಂ.ಕ್ಕೆ ಶ್ರೀ ಉಮೇಶ ತಂ/ ರಾಮಯ್ಯ ಕಟ್ಟಿಮನಿ ಸಾ|| ಮದ್ರಿಕಿ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಫಿಯರ್ಾದಿ ಸಾರಾಂಶವೇನೆಂದರೆ, ಶ್ರೀ ಈರಣ್ಣ ತಂ/ ಶಿವಪ್ಪ ಇಳಿಗೇರ ಸಾ|| ಹುಲಗಿ ತಾ||ಜಿ|| ಕೊಪ್ಪಳ ಇವರ ರೇಣುಕಾ ವೈನ್ಸ್ಶಾಪನಲ್ಲಿ ನಾನು ಸುಮಾರು 8 ವರ್ಷಗಳಿಂದ ಮ್ಯಾನೇಜರ್ ಅಂತಾ ಕೆಲಸ ಮಾಡಿಕೊಂಡಿರುತ್ತೇನೆ. ನಿನ್ನೆ ದಿನಾಂಕ: 18/03/2020 ರಂದು ಎಂದಿನಂತೆ ಬೆಳಿಗ್ಗೆ 10.30 ಎ.ಎಂ. ಕ್ಕೆ ವೈನ್ಶಾಪನ್ನು ಓಪನ್ ಮಾಡಿ ರಾತ್ರಿ 10.30 ಪಿ.ಎಂ.ಕ್ಕೆ ಬಂದ್ ಮಾಡಿ ನಾವೆಲ್ಲರೂ ಮನೆಗೆ ಹೋಗಿದ್ದೆವು. ಇಂದು ದಿನಾಂಕ: 18/03/2020 ರಂದು ಬೆಳಿಗ್ಗೆ 6.30 ಎ.ಎಂ. ಸುಮಾರಿಗೆ ಕೃಷ್ಣಾ ತಂ/ ರಂಗಯ್ಯ ಇಳಿಗೇರ ಈತನು ವೈನ್ಸ್ಶಾಪಗೆ ಹತ್ತಿರ ಚಹಾ ಕುಡಿಯಲು ಬಂದಿದ್ದಾಗ ನಮ್ಮ ವೈನ್ಸ್ಶಾಪನ ಸೆಟರ್ ಕೀಲಿ ಮುರಿದು ಸೆಟರ್ ಎತ್ತಿದ್ದನ್ನು ನೋಡಿ ಈ ಬಗ್ಗೆ ನನಗೆ ಫೋನ್ ಮಾಡಿ ತಿಳಿಸಿದಾಗ ನಾನು 7.00 ಎ.ಎಂ.ಕ್ಕೆ ವೈನ್ಸ್ಶಾಪ ಹತ್ತಿರ ಬಂದು ನೋಡಲಾಗಿ ದಿನಾಂಕ: 18/03/2020 ರಂದು ರಾತ್ರಿ 10.30 ಪಿ.ಎಂ. ಇಂದ ಇಂದು ದಿನಾಂಕ: 19/03/2020 ರಂದು ಬೆಳಿಗ್ಗೆ 6.30 ಎ.ಎಂ. ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ವೈನ್ಸ್ಶಾಪನ ಮುಂದಿನ ಸೆಟರ್ ಎತ್ತಿ ಒಳಗಡೆ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ  1)ಮಧ್ಯದ ಬಾಟಲ್ಗಳು ಅ.ಕಿ|| 100335=00 ರೂ, 2)ಸಿ.ಸಿ.ಟಿ.ವಿ ಡಿ.ವಿ.ಆರ್ ಅ.ಕಿ|| 28000=00 ರೂ, ನಗದು ಹಣ 6800=00 ರೂ ಹಾಗೂ ನಮ್ಮ ವೈನ್ಸ್ಶಾಪ ಹತ್ತಿರ ಇರುವ ಶಿವಾನಂದ ತಂ/ ಹುಸನಪ್ಪ ಖಾನಾಪೂರ ಸಾ|| ಶಹಾಪುರ ರವರ ಮನೆಯ ಕಿಟಕಿ ಗ್ರಿಲ್ ಕಿತ್ತಿ ಮನೆಯೊಳಗೆ ಪ್ರವೇಶ ಮಾಡಿ ದೇವರ ಕೋಣೆಯಲ್ಲಿನ ಅಲಮಾರಿ ಕೊಂಡಿ ಎತ್ತಿ ಅಲಮಾರಿಯಲ್ಲಿದ್ದ 157.5 ಗ್ರಾಂ. ಬಂಗಾರದ ಆಭರಣಗಳು ಅ.ಕಿ|| 472500=00 ರೂ ಹಾಗೂ 100 ಗ್ರಾಂ.ನ ಒಂದು ಬೆಳ್ಳಿ ಕಡಗ ಅ.ಕಿ|| 4000=00 ರೂ. ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.98/2020 ಕಲಂ 457, 380 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.   

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಪಿಎಆರ್ ನಂ 14/2020 ಕಲಂ 107 ಸಿಆರ್ಪಿಸಿ  :- ಇಂದು ದಿನಾಂಕ: 19/03/2020 ರಂದು 5.30 ಪಿಎಂ ಕ್ಕೆ ಠಾಣೆಯ ಶ್ರೀ ನಬಿಲಾಲ ಎಎಸ್ಐ ರವರು ಠಾಣೆಗೆ ಹಾಜರಾಗಿ ಒಂದು ವರದಿಯನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 19/03/2020 ರಂದು 4.00 ಪಿಎಮ್ ಸುಮಾರಿಗೆ ಬೀಟ ಉಸ್ತುವಾರಿ ಅಧಿಕಾರಿಯಾಗಿ ನನಗೆ ನೇಮಿಸಿದ ಬೀಟ ಏರಿಯಾದಲ್ಲಿನ ಸಗರ(ಬಿ) ಗ್ರಾಮಕ್ಕೆ ಭೇಟಿ ನೀಡಿದ್ದು ಸಗರ(ಬಿ) ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿ ಮನೆಯ ಮುಂದಿನ ಜಾಗದ ವಿಷಯದಲ್ಲಿ ಎರಡು ಗುಂಪಿನವರ ಸಮಸ್ಯೆ ಮಾಡಿಕೊಳ್ಳುತ್ತಿದ್ದ ಬಗ್ಗೆ ಕಂಡು ಬಂದಿದ್ದು ಇದಕ್ಕೆ ಸಂಬಂಧಿಸಿದಂತೆ ಎರಡೂ ಗುಂಪಿನವರು ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಗ್ರಾಮದಲ್ಲಿ ಶಾಂತಿ ಕದಡುವ ಸಂಭವ ಕಂಡು ಬಂದಿದ್ದು ತಕರಾರಿಗೆ ಕಾರಣರಾದ 1ನೇ ಪಾಟರ್ಿಯವರಾದ 1) ಮುದ್ದಪ್ಪ ತಂದೆ ಹುಲ್ಲೆಪ್ಪ ಕೊಂಡಗೂಳಿ ವ|| 30ವರ್ಷ ಜಾ|| ಉಪ್ಪಾರ ಉ|| ಕೂಲಿ ಸಾ|| ಸಗರ(ಬಿ)ತಾ|| ಶಹಾಪೂರ ರವರು ಸದರಿ ಜಾಗದ ವಿಷಯದಲ್ಲಿ ತಕರಾರು ಮಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗ ಉಂಟು ಮಾಡುವ ಸಾಧ್ಯತೆ ಕಂಡು ಬಂದಿದ್ದರಿಂದ ಇಂದು ದಿನಾಂಕ: 19/03/2020 ರಂದು 5.30 ಪಿಎಮ್ ಕ್ಕೆ ಠಾಣೆಗೆ ಬಂದು ಸದರಿಯವರ ವಿರುದ್ದ ಮುಂಜಾಗ್ರತ ಕ್ರಮ ಜರುಗಿಸಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಪಿಎಆರ್ ನಂ 14/2020 ಕಲಂ 107 ಸಿಆರ್ ಪಿಸಿ ನೇದ್ದರಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಪಿಎಆರ್ ನಂ 15/2020 ಕಲಂ 107 ಸಿಆರ್ಪಿಸಿ :- ಇಂದು ದಿನಾಂಕ: 19/03/2020 ರಂದು 6.15 ಪಿಎಂ ಕ್ಕೆ ಠಾಣೆಯ ಶ್ರೀ ನಬಿಲಾಲ ಎಎಸ್ಐ ರವರು ಠಾಣೆಗೆ ಹಾಜರಾಗಿ ಒಂದು ವರದಿಯನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 19/03/2020 ರಂದು 4.00 ಪಿಎಮ್ ಸುಮಾರಿಗೆ ಬೀಟ ಉಸ್ತುವಾರಿ ಅಧಿಕಾರಿಯಾಗಿ ನನಗೆ ನೇಮಿಸಿದ ಬೀಟ ಏರಿಯಾದಲ್ಲಿನ ಸಗರ(ಬಿ) ಗ್ರಾಮಕ್ಕೆ ಭೇಟಿ ನೀಡಿದ್ದು ಸಗರ(ಬಿ) ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿ ಮನೆಯ ಮುಂದಿನ ಜಾಗದ ವಿಷಯದಲ್ಲಿ ಎರಡು ಗುಂಪಿನವರ ಸಮಸ್ಯೆ ಮಾಡಿಕೊಳ್ಳುತ್ತಿದ್ದ ಬಗ್ಗೆ ಕಂಡು ಬಂದಿದ್ದು ಇದಕ್ಕೆ ಸಂಬಂಧಿಸಿದಂತೆ ಎರಡೂ ಗುಂಪಿನವರು ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಗ್ರಾಮದಲ್ಲಿ ಶಾಂತಿ ಕದಡುವ ಸಂಭವ ಕಂಡು ಬಂದಿದ್ದು ತಕರಾರಿಗೆ ಕಾರಣರಾದ 2ನೇ ಪಾಟರ್ಿಯವರಾದ 1) ರಮೇಶ ತಂದೆ ಸೋಪಣ್ಣ ಖೈನೂರ ವ|| 40ವರ್ಷ ಜಾ|| ಉಪ್ಪಾರ ಉ|| ಒಕ್ಕಲುತನ ಸಾ|| ಸಗರ(ಬಿ) 2) ಗೋಕುಲ ತಂದೆ ಸೋಪಣ್ಣ ಖೈನೂರ ವ|| 35ವರ್ಷ ಜಾ|| ಉಪ್ಪಾರ ಉ|| ಒಕ್ಕಲುತನ ಸಾ|| ಸಗರ(ಬಿ) 3) ನೀಲಕಂಠ ತಂದೆ ಮಂಜಪ್ಪ ಖೈನೂರ ವ|| 24ವರ್ಷ ಜಾ|| ಉಪ್ಪಾರ ಉ|| ಒಕ್ಕಲುತನ ಸಾ|| ಸಗರ(ಬಿ) ತಾ|| ಶಹಾಪೂರ ರವರು ಸದರಿ ಜಾಗದ ವಿಷಯದಲ್ಲಿ ತಕರಾರು ಮಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗ ಉಂಟು ಮಾಡುವ ಸಾಧ್ಯತೆ ಕಂಡು ಬಂದಿದ್ದರಿಂದ ಇಂದು ದಿನಾಂಕ: 19/03/2020 ರಂದು 6.15 ಪಿಎಮ್ ಕ್ಕೆ ಠಾಣೆಗೆ ಬಂದು ಸದರಿಯವರ ವಿರುದ್ದ ಮುಂಜಾಗ್ರತ ಕ್ರಮ ಜರುಗಿಸಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಪಿಎಆರ್ ನಂ 15/2020 ಕಲಂ 107 ಸಿಆರ್ ಪಿಸಿ ನೇದ್ದರಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.


ಯಾದಗಿರ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 14/2020  ಕಲಂ 279,  338, 304(ಎ) ಐಪಿಸಿ :- ಇಂದು ದಿನಾಂಕ 19/03/2020 ರಂದು 12-45 ಪಿ.ಎಂ.ದ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಲೆ ಬರುವ ಅಲ್ಲಿಪುರ ಕ್ರಾಸ್ ಹತ್ತಿರ ಈ ಕೇಸಿನಲ್ಲಿನ ಮೃತ ಹೊನ್ನಪ್ಪ ಮತ್ತು ಗಾಯಾಳು ಮಂಜುನಾಥ ಇಬ್ಬರು ಸೇರಿಕೊಂಡು ಮೋಟಾರು ಸೈಕಲ್ ನಂಬರ ಕೆಎ-36, ಯು-4850 ನೇದ್ದರ ಮೇಲೆ ನಾಲವಾರದಿಂದ ಯಾದಗಿರಿಗೆ ಬರುವಾಗ ಮಾರ್ಗ ಮದ್ಯೆ ಮೋಟಾರು ಸೈಕಲ್ ನಡೆಸುತ್ತಿದ್ದ ಮೃತ ಹೊನ್ನಪ್ಪನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ಚಾಲನೆ ಮೇಲಿನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಇರುವ ಬೋಟ್ಗಲ್ಲಿಗೆ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ ಮೃತ ಹೊನ್ನಪ್ಪನಿಗೆ ತಲೆಗೆ ಗಂಭೀರಗಾಯವಾಗಿ ಮೆದುಳು ಹೊರಬಂದಿದ್ದು, ಅಲ್ಲದೇ ಹೊಟ್ಟೆಗೆ, ಅಲ್ಲಲ್ಲಿ ಭಾರೀ ತರಚಿದ ಗಾಯಗಳಾಗಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಮೋಟಾರು ಸೈಕಲ್ ಹಿಂಬದಿ ಸವಾರ ಗಾಯಾಳು ಮಂಜುನಾಥ ಈತನಿಗೆ ಎಡಗಾಲಿನ ಮೊಳಕಾಲು ಕೆಳಗೆ ಭಾರೀ ಗುಪ್ತಗಾಯವಾಗಿ ಮುರಿದಿದ್ದು ಮತ್ತು ಅಲ್ಲಲ್ಲಿ ತರಚಿದ  ರಕ್ತಗಾಯಗಳಾಗಿರುತ್ತವೆ. ಈ ಘಟನೆಯ ಬಗ್ಗೆ ಪಿಯರ್ಾದಿ ನೀಡಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 14/2020 ಕಲಂ 279, 338, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                                                                                               
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 34/2020 ಕಲಂ. 279,337,338 ಐಪಿಸಿ  :- ಇಂದು ದಿನಾಂಕ 19.03.2020 ರಂದು ಮಧ್ಯಾನ್ಹ 2-30 ಗಂಟೆಗೆ ಸೈದಾಪೂರ ಸರಕಾರಿ ಆಸ್ಪತ್ರೆಯಿಂದ ಪೊನ್ ಮೂಲಕ ಎಮ್.ಎಲ್ ಸಿ ಬಂದಿದ್ದು ಎಮ್.ಎಲ್.ಸಿ ಕುರಿತು ಆಸ್ಪತ್ರೆ ಭೆಟಿ ನೀಡಿ ಅಲ್ಲಿ ಉಪಚಾರ ಪಡೆಯುತಿದ್ದ ಗಾಯಾಳು ಶಿವರಾಜ ತಂದೆ ದೊಡ್ಡ ನರಸಪ್ಪ ಕೊಳ್ಳೇರ ವಯ: 35 ವರ್ಷ, ಜಾ: ಕಬ್ಬಲಿಗ ಉ: ಒಕ್ಕಲುತನ ಸಾ: ಸಣ್ಣ ಸಂಬರ ತಾ: ಗುರುಮಠಕಲ ಜಿ: ಯಾದಗಿರಿ  ಈತನ ಹೇಳಿಕೆ ಪಡೆದಿದ್ದು ಮದ್ಯಾಹ್ನ 2-15 ಗಂಟೆ ಸುಮಾರಿಗೆ ಮರಳಿ ಸಣ್ಣಸಂಬ್ರ ಗ್ರಾಮಕ್ಕೆ ಹೊರಟಾಗ ಯಾದಗಿರಿ- ರಾಯಚೂರ ಮುಖ್ಯ ರಸ್ತೆಯ ಮೇಲೆ ಕರಿಬೆಟ್ಟ  ಕ್ರಾಸ ಬಳಿ ರೋಡಿನ ಮೇಲೆ ಹೊರಟಿದ್ದಾಗ  ರಾಯಚೂರ ಕಡೆಯಿಂದ  ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಬೈಕಗೆ  ಡಿಕ್ಕಿಪಡಿಸಿ ರೋಡಿನ ಮೇಲೆ ಬೀಳಿಸಿ ಅಪಘಾತಪಡಿಸಿರುತ್ತಾನೆ. ಸದರಿ ಅಪಘಾತದಲ್ಲಿ ನನಗೆ ತಲೆಯ ಎಡಭಾಗಕ್ಕೆ ಭಾರಿ ರಕ್ತಗಾಯವಾಗಿದ್ದು, ಸೊಂಟಕ್ಕೆ ಭಾರಿ ಒಳಪೆಟ್ಟಾಗಿರುತ್ತದೆ. ಮುಖಕ್ಕೆ, ಕಾಲುಗಳಿಗೆ, ಮೈ, ಕೈಗೆ ಸಣ್ಣ-ಪುಟ್ಟ ತೆರಚಿದ ಗಾಯಗಳಾಗಿರುತ್ತವೆ.. ಅಪಘಾತ ಪಡಿಸಿದ ಕಾರ ನೋಡಲಾಗಿ ಅದು ಮಾರುತಿ ಸುಜುಕಿ ಕಂಪನಿಯ ಸೆಲೆರೊ ಕಾರ ಇದ್ದು ಅದರ ನಂಬರ ಕೆಎ-05 ಎಮ.ವಿ-1265 ಅಂತಾ ಇದ್ದು ಅದರ ಚಾಲಕ ತನ್ನ ಹೆಸರು ತಾಯಪ್ಪ ತಂದೆ ಸಿದ್ದಪ್ಪ ಜಿನಕೇರಿ ವಯ:57 ವರ್ಷ, ಜಾ: ಮಾದಿಗ ಉ: ಕಾರ ಡ್ರೈವರ ಅಂತಾ ತಿಳಿಸಿರುತ್ತಾನೆ. ಮಧ್ಯಾನ್ಹ 4.00 ಗಂಟೆಗೆ ಮರಳಿ ಠಾಣೆಗೆ ಬಂದು ಫಿಯರ್ಾದಿ ಸಾರಾಂಶದ ಮೆಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ.34/2019 ಕಲಂ. 279,337,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!