ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/03/2020

By blogger on ಬುಧವಾರ, ಮಾರ್ಚ್ 18, 2020



                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/03/2020 
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 28/2020 ಕಲಂ:143,147,148,504,324,323 ಸಂ 149 ಐಪಿಸಿ:- ಇಂದು ದಿನಾಂಕ: 18/03/2020 ರಂದು 5 ಪಿಎಮ್ ಕ್ಕೆ ಶ್ರೀ ನಿಂಗಪ್ಪ ತಂದೆ ಬಸಣ್ಣ ಕುರಿಯರ್, ವ:36, ಜಾ:ಕುರುಬರ, ಉ:ಒಕ್ಕಲುತನ ಸಾ:ಅನಕಸೂಗೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಮ್ಮ ದೊಡ್ಡಪ್ಪನಾದ ಭೀಮಣ್ಣ ತಂದೆ ನಿಂಗಪ್ಪ ಕುರಿಯರ್ ಈತನು ತೀರಿಕೊಂಡಿರುತ್ತಾನೆ. ಆತನ ಮಗನಾದ ಹಣಮಂತ ಈತನಿಗೆ ನಮ್ಮೂರು ತಾಯಪ್ಪ ತಂದೆ ಅಯ್ಯಪ್ಪನ ಮಗಳೊಂದಿಗೆ ಮದುವೆ ಮಾಡಿದ್ದು, ಹಣಮಂತ ಇತ್ತಿಚ್ಚೆಗೆ ಸ್ವಲ್ಪ ಮಾನಸಿಕ ಅಸ್ವಸ್ಥನಾಗಿದ್ದು, ಆತನ ತಂದೆ ಹೆಸರಿನಲ್ಲಿರಿವ ಜಮೀನನ್ನು ತಾಯಪ್ಪ ಮತ್ತು ಇತರರು ತಾಯಪ್ಪನ ಮಗಳಾದ ಸೌಭಾಗ್ಯ ಇವರ ಹೆಸರಿನಲ್ಲಿ ಮಾಡಬೇಕೆಂದು ಮಾತಾಡುತ್ತಿದ್ದರಿಂದ ನಾವು ವಿರೋಧ ವ್ಯಕ್ತಪಡಿಸಿದ್ದಕ್ಕೆ ನಮ್ಮ ಮೇಲೆ ದ್ವೇಷ ಬೆಳೆಸಿಕೊಂಡು ಬಂದಿರುತ್ತಾರೆ. ಹೀಗಿದ್ದು ನಮ್ಮ ತಮ್ಮನಾದ ದೇವಪ್ಪ ತಂದೆ ಬಸಣ್ಣ ಕುರಿಯರ್ ಊರ ಮುಂದೆ ಚನ್ನೂರ ಗೌಡರ ಹೊಲಕ್ಕೆ ಕೆಲಸಕ್ಕೆ ಹೋಗುತ್ತಿದ್ದು, ದಿನಾಂಕ: 15/03/2020 ರಂದು ಸಾಯಂಕಾಲ 5-30 ಪಿಎಮ್ ಸುಮಾರಿಗೆ ಸದರಿ ಹೊಲಕ್ಕೆ ಹಾಕಿದ್ದ ತಂತಿ ರೆಡ್ಡೆಪ್ಪ ತಂದೆ ಶಿವಪ್ಪ ಗುಳಗಿ ಬಿಚ್ಚಿ ಹೋಗುತ್ತಿದ್ದಾಗ ದೇವಪ್ಪೆ ಬೇಡವೆಂದು ಹೇಳಿದ್ದಕ್ಕೆ 1) ರಡ್ಡೆಪ್ಪ ತಂದೆ ಶಿವಪ್ಪ, 2) ಮಲ್ಲಪ್ಪ ತಂದೆ ಶಿವಪ್ಪ, 3) ಸೋಮಪ್ಪ ತಂದೆ ಸಿದ್ದಪ್ಪ ಪೂಜಾರಿ, 4) ನಾಗಪ್ಪ ತಂದೆ ಸಿದ್ದಪ್ಪ ಪೂಜಾರಿ, 5) ತಾಯಪ್ಪ ತಂದೆ ಅಯ್ಯಪ್ಪ, 6) ದೇವಪ್ಪ ತಂದೆ ತಾಯಪ್ಪ, 7) ಬಸಪ್ಪ ತಂದೆ ತಾಯಪ್ಪ, 8) ದಂಡಪ್ಪ ತಂದೆ ಅಯ್ಯಪ್ಪ, 9) ನಾಗಪ್ಪ ತಂದೆ ಯಲ್ಲಪ್ಪ, 10) ಯಲ್ಲಪ್ಪ ತಂದೆ ಅಯ್ಯಪ್ಪ ಇವರೆಲ್ಲರೂ ಸೇರಿ ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಅಲೋಬ್ಲಾಕ ತುಕ್ಕಡಿ ಮತ್ತು ಕಟ್ಟಿಗೆಯನ್ನು ಹಿಡಿದುಕೊಂಡು ಬಂದು ಜಗಳ ತೆಗೆದು ಮಾನಯ್ಯ ತಂದೆ ಮಲ್ಲಯ್ಯ ಮುಸ್ತಾಜೀರ ಇವರ ಅಂಗಡಿ ಹತ್ತಿರ ದೇವಪ್ಪನಿಗೆ ಹೊಡಯುತ್ತಿದ್ದಾಗ ಬಿಡಿಸಲು ಹೋದಾಗ ನನ್ನ ತೆಲೆಗೆ ಹಿಂಭಾಗಕ್ಕೆ ನಾಗಪ್ಪನು ಹೊಡೆದು ಒಳಪೆಟ್ಟು ಮಾಡಿದ್ದು, ಸೋಮಪ್ಪ ಈತನು ಕಟ್ಟಿಗೆಯಿಂದ ಹೊಡೆದು ಮೂಗಿನ ಮುಖ್ಯ ಎಲುಬಿಗೆ ಹೊಡೆದಿದ್ದರಿಂದ ಎಲುಬಿಗೆ ಪೆಟ್ಟಾಗಿರುತ್ತದೆ. ಗಿರಿಲಿಂಗಮ್ಮ ಗಂಡ ದೇವಪ್ಪ ಇವಳು ನನಗೆ ಹೊಡೆಯುವುದನ್ನು ನೋಡಿ ಜಗಳ ಬಿಡಿಸಲು ಬಂದಾಗ ಆಕೆಗೆ ದೇವಪ್ಪನು ಬಲ ಪ್ರಯೋಗ ಮಾಡಿ ತಳ್ಳಿರುತ್ತಾನೆ. ನಮ್ಮ ತಮ್ಮನಾದ ದೇವಪ್ಪನಿಗೆ ಬಸಪ್ಪ ತಂದೆ ತಾಯಪ್ಪ ಮತ್ತು ದೇವಪ್ಪ ತಂದೆ ತಾಯಪ್ಪ ಇಬ್ಬರೂ ಸೇರಿಕೊಂಡು ಮನಸು ಇಚ್ಚೆಯಂತೆ ಥಳಿಸಿದ್ದಾರೆ ಮತ್ತು ಕಟ್ಟಿಗೆಯಿಂದ ಹೊಡೆದಿದ್ದಾರೆ. ನಮ್ಮ ಜಗಳವನ್ನು ನೋಡಿ ಈ ಕೆಳಗಿನವರು ಬಿಡಿಸಿರುತ್ತಾರೆ. ಮಲ್ಲಪ್ಪ ತಂದೆ ಬಸಣ್ಣ ದೊರಿ, ಪರವತಪ್ಪ ತಂದೆ ಭೀಮಣ್ಣ ಕುಂಬಾರ ಮತ್ತು ಮಲ್ಲಮ್ಮ ಗಂಡ ಭೀಮಣ್ಣ ಉಡೇದ ಸಾ:ಚನ್ನೂರು. ಆದ್ದರಿಂದ ಕಾನೂನು ಕ್ರಮ ಜರುಗುಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 28/2020 ಕಲಂ:143,147,148,504,324,323 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 29/2020 ಕಲಂ, 87 ಕೆ.ಪಿ ಆ್ಯಕ್ಟ್:- ದಿನಾಂಕ 18/03/2020 ರಂದು 07.45 ಪಿಎಂ ಕ್ಕೆ ಶ್ರೀ ಸೊಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ರವರು ಗೋಗಿ ಕೆ ಸೀಮಾಂತರದಲ್ಲಿ ಎಂ.ಬಿ.ಸಿ ಕೆನಾಲ ವಾಯ್. ಜಂಗಷನ್ ಪಕ್ಕದಲ್ಲಿನ ಖುಲ್ಲಾ ಜಾಗದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 08 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 6830=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು 06.30 ಪಿಎಮ್ ದಿಂದ 07.10 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 07.45 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರಪಡಿಸಿದ್ದರಿಂದ ಠಾಣೆ ಗುನ್ನೆ ನಂ 29/2020 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಭಿಗುಡಿ ಪೊಲೀಸ ಠಾಣೆ ಗುನ್ನೆ ನಂ:- 36/2020 ಕಲಂ 20(ಬಿ) ಎನ್.ಡಿ.ಪಿ.ಎಸ್. ಎಕ್ಟ್ 1985:- ಆರೋಪಿತನು ಹೊತಪೇಟ ಕ್ರಾಸ್ ಹತ್ತಿರ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಫಿಯರ್ಾದಿದಾರರು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಿನಾಂಕ:18/03/2020 ರಂದು 12 ಪಿ.ಎಮ್. ಕ್ಕೆ ದಾಳಿ ಮಾಡಿ ಆರೋಪಿತನ ಕಡೆಯಿಂದ 900 ಗ್ರಾಂ ಸುಮಾರಾಗಿ ಒಣಗಿದ ಹಸಿಗಾಂಜಾ ಅ.ಕಿ. 5,000=00 ರೂ ನೇದ್ದನ್ನು ಜಪ್ತಿಪಡಿಸಿಕೊಂಡು ಆರೋಪಿ & ಮುದ್ದೆಮಾಲನ್ನು ಪತ್ರಾಂಕಿತ ಅಧಿಕಾರಿಗಳಾದ ತಹಸಿಲ್ದಾರರು ಶಹಾಪುರ ರವರ ಸಮಕ್ಷಮ ವಶಕ್ಕೆ ತೆಗೆದುಕೊಂಡು ಇದರ ಬಗ್ಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು ಆರೋಪಿತನ ವಿರುಧ್ಧ ಸೂಕ್ತ ಕಾನೂನು ಕ್ರಮ ಜರುಗಿಸಿದ ಬಗ್ಗೆ.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 54/2020 ಕಲಂ: 323, 326, 504, 506 ಐಪಿಸಿ:- ಇಂದು ದಿನಾಂಕ:18/03/2020 ರಂದು 7:00 ಪಿ.ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಭಿಮಣ್ಣ ತಂದೆ ನಂದಪ್ಪ ನಾಯ್ಕಲ್ ವ:50 ವರ್ಷ, ಜಾ: ಪ.ಜಾತಿ (ಹೊಲೆಯ) ಉ:ಕೂಲಿ ಸಾ|| ಬೂದನೂರ ತಾ|| ಶಹಾಪುರ ಇವರು ಕೊಟ್ಟ ಫಿಯರ್ಾದಿ ಅಜರ್ಿ ಏನೆಂದರೆ, ಇಂದು ದಿನಾಂಕ:18/03/2020 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ಹಾಗೂ ನಮ್ಮೂರ ಪುತ್ರಣ್ಣ ತಂದೆ ನಿಂಗಪ್ಪ ದೊರಿ, ಭೀಮಣ್ಣ ತಂದೆ ಮಲ್ಲಪ್ಪ ಪೂಜಾರಿ ನಾವು 3 ಜನರು ಸೇರಿ ಕವಳಿಗೆ ಕ್ರಿಮಿನಾಶಕ ತೆಗೆದುಕೊಂಡು ಹೋಗಲು ಕೆಂಭಾವಿಗೆ ಬಂದು ಬಾಯಾರಿಕೆ ಆಗಿದ್ದರಿಂದ ಕೆಂಭಾವಿಯ ಆಶಿವರ್ಾದ ಬಾರ್ದಲ್ಲಿ ನೀರು ಕುಡಿಯಲು ಹೋದಾಗ ಕೆಂಭಾವಿ ಪಟ್ಟಣದ ದೇವಿಂದ್ರಪ್ಪ ತಂದೆ ಸಾಯಬಣ್ಣ ಕವಾಲ್ದಾರ ಈತನು ಏನಲೆ ಸೂಳೆ ಮಗನೆ ಯಾವೂರು ನಿನ್ನದು ಇಲ್ಲಿ ಏಕೆ ಬಂದಿರುವಿ ಅಂತ ಕೇಳಿದಾಗ ನಾನು ನೀರು ಕುಡಿಯಲು ಬಂದಿದ್ದೇನೆ ಯಾಕೇ ಬೈಯುತ್ತೀರಿ ಅಂತ ಅಂದಾಗ ದೇವಿಂದ್ರಪ್ಪ ಕವಾಲ್ದಾರ ಈತನು ಲೇ ಮಗನೆ ಕೆಂಭಾವಿಯಲ್ಲಿ ನಾನು ಹೇಳಿದಂತೆ ನಡೆಯುತ್ತದೆ ನನಗೆ ಎದುರು ಮಾತಾಡುತ್ತಿಯಾ ಸೂಳೆ ಮಗನೆ ಅಂತ ಬೈಯುತ್ತಾ ಅಲ್ಲಿಯೇ ಬಿದ್ದ ಖಾಲಿ ಬೀರ್ ಬಾಟಲಿ ತೆಗೆದುಕೊಂಡು ನೆಲಕ್ಕೆ ಒಡೆದು ಅದೇ ಬೀರ್ ಬಾಟಲಿಯಿಂದ ನನ್ನ ಎಡಗಾಲ ಹಿಮ್ಮಡಿಗೆ ಬಲವಾಗಿ ಹೊಡೆದು ಭಾರಿ ರಕ್ತಗಾಯ ಪಡಿಸಿದನು. ಅಲ್ಲದೆ ಕೈಯಿಂದ ಮುಖಕ್ಕೆ ಬೆನ್ನಿಗೆ ಹೊಡೆಯಲಿಕ್ಕೆ ಹತ್ತಿದನು. ಆಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಆಗ ನನ್ನ ಜೊತೆ ಬಂದಿದ್ದ ಭೀಮಣ್ಣ ತಂದೆ ಮಲ್ಲಪ್ಪ ಪೂಜಾರಿ ಹಾಗೂ ಪುತ್ರಣ್ಣ ದೊರಿ ಇವರು ಬಂದು ಸದರಿಯವನು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು ನಂತರ ಸದರಿ ದೇವಿಂದ್ರಪ್ಪ ಈತನು ಹೊಡೆಯುವದನ್ನು ಬಿಟ್ಟು ಮಗನೆ ಇನ್ನೊಮ್ಮೆ ನನ್ನ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದನು. ಕಾರಣ ಮೇಲ್ಕಾಣಿಸಿದ ದೇವಿಂದ್ರಪ್ಪ ಕವಾಲ್ದಾರ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:54/2020 ಕಲಂ:323, 326, 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 96/2020.ಕಲಂ. 379. ಐ.ಪಿ.ಸಿ.:-    ಇಂದು ದಿನಾಂಕ 18/03/2020 ರಂದು ರಾತ್ರಿ 21-30 ಗಂಟೆಗೆ ಠಾಣೆಗೆ ಪಿಯರ್ಾದಿ ಶ್ರೀ ದೇವಿಂದ್ರಪ್ಪ ತಂದೆ ಈರಣ್ಣ ಸಾವೂರ ವ|| 35 ಜಾ|| ಲಿಂಗಾಯತ ಉ|| ಕೂಲಿ ಸಾ|| ರಸ್ತಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ತಂದು ಹಾಜರ ಪಡಿಸಿದ್ದು. ಸದರಿ ಅಜರ್ಿಯ ಸಾರಾಂಶ ವೆನೆಂದರೆ, ದಿನಾಂಕ 08/01/2020 ರಂದು ರಾತ್ರಿ 9-00 ಗಂಟೆಗೆ ದಿನನಿತ್ಯದಂತೆ ನಾನು ನನ್ನ ಕೆಲಸಮುಗಿಸಿಕೊಂಡು ಬಂದು ನನ್ನ ಮೋಟರ್ ಸೈಕಲ್ ನಂ ಕೆಎ-33ವಿ-6680 ನೇದ್ದು ನಮ್ಮ ಮನೆಯ ಮುಂದೆ ನಿಲ್ಲಿಸಿ ದಿನನಿತ್ಯದಂತೆ ನಾನು ಮತ್ತು ನನ್ನ ತಮ್ಮ ನಾಗರಾಜ ತಂದೆ ಈರಣ್ಣ ಸಾವೂರ ಇಬ್ಬರು ಊಟಮಾಡಿ ಹೋರಗಡೆ ಬಂದು ನಾನು ನನ್ನ ಗಾಡಿಯ ಹ್ಯಾಂಡ ಲಾಕಮಾಡಿ ರಾತ್ರಿ 10-00 ಗಂಟೆಗೆ ಮನೆಯಲ್ಲಿ ಎಲ್ಲರು ಮಲಗಿಕೊಂಡೆವು ನಂತರ ಬೆಳಿಗ್ಗೆ 6-00 ಗಂಟೆಗೆ ನಾನು ಎದ್ದು ಹೊರಗಡೆ ಬಂದು ಮನೆಯ ಮುಂದೆ ನಿಲ್ಲಿಸಿದ ನನ್ನ ಮೋಟರ್ ಸೈಕಲ್ ನೋಡಲಾಗಿ ಕಾಣಲಿಲ್ಲ. ಆಗ ನನ್ನ ತಮ್ಮ ನಾಗರಾಜನಿಗೆ ಸದರಿ ಮೋಟರ್ ಸೈಕಲ್ ಬಗ್ಗೆ ವಿಚಾರಿಸಲಾಗಿ ನನಗೆ ಗೋತ್ತಿರುವದಿಲ್ಲಾ ಅಂತ ತಿಳಿಸಿದನು. ನಂತರ ನಾನು ಮತ್ತು ನನ್ನ ತಮ್ಮ ನಾಗರಾಜ ಇಬ್ಬರು ಕೂಡಿ ನನ್ನ ಮೋಟರ್ ಸೈಕಲ್ ನಂ ಕೆಎ-33ವಿ-6680 ನೇದ್ದು ಉಡುಕಾಡಲಾಗಿ ಸಿಕ್ಕಿರುವದಿಲ್ಲ ನನ್ನ ಬಜಾಜ್ ಕಂಪನಿಯ ಪಲ್ಸರ ಮೋಟರ್ ಸೈಕಲ್ ನಂ. ಏಂ-33ಗಿ-6680 ಇಓಉಓಇ ಓಔ-ಆಊಙಘಊಈ67744. ಅಊಇಖಖ ಓಔ-ಒಆ2ಂ11ಅಙ2ಊಘಈ16729 ಅ:ಕಿ:49000=00 ರೂ ನೇದ್ದನ್ನು ನಮ್ಮ ಮನೆಯ ಮುಂದೆ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ಸಮಯದಲ್ಲಿ ದಿನಾಂಕ 08/01/2020 ರಂದು 10-00 ಪಿ.ಎಂ. ರಿಂದ ದಿನಾಂಕ 9/01/2020 ರಂದು ಬೆಳಿಗ್ಗೆ 6-00 ಗಂಟೆಯ ಅವದಿಯಲ್ಲಿ ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ಹುಡುಕಾಡಲಾಗಿ ಸಿಕ್ಕಿರುವದಿಲ್ಲಾ. ಕಳ್ಳತನವಾದ ನನ್ನ ಮೋಟರ್ ಸೈಕಲ್ ಇಂದಲ್ಲಾ ನಾಳೆ ಸಿಗಬಹುದು ಎಂದು ತಿಳಿದು ಹುಡುಕಾಡಿದರು ಸಿಗದೆ ಇದ್ದಾಗ ಮತ್ತು ನನ್ನ ಗೆಳೆಯನಾದ ಸುನೀಲ್ ತಂದೆ ಶರಬಣ್ಣ ಹುಗಾರ ಸಾ|| ರಸ್ತಾಪೂರ ಈತನಿಗೆ ನನ್ನ ಮೋಟರ್ ಸೈಕಲ್ ಕಳ್ಳತನವಾದ ಬಗ್ಗೆ ತಿಳಿಸಿದಾಗ ಸುನೀಲನು ಮೋಟರ್ ಸೈಕಲ್ ಕಳೇದ ಬಗ್ಗೆ ಕೇಸ ಕೊಟ್ಟರೆ ಸಿಗುತ್ತದೆ ಅಂತ ತಿಳಿಸಿದ್ದರಿಂದ ಇಂದು ದಿನಾಂಕ 18/03/2020 ರಂದು ತಡವಾಗಿ ಠಾಣೆಗೆ ಹಾಜರಾಗಿ ಕಳುವಾದ ನನ್ನ ಮೋಟರ್ ಸೈಕಲ್ ಪತ್ತೆ ಮಾಡಿಕೊಡಲು ಅಜರ್ಿ ಸಲ್ಲಿಸಿದ್ದು. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 96/2020 ಕಲಂ 379 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಕಲಿಸಿ ಕೊಂಡು ತನಿಕೆ ಕೈಕೊಂಡೆನು

                             
ಶಹಾಪೂರ  ಠಾಣೆ ಗುನ್ನೆ ನಂ:- 95/2020 ಕಲಂ ಮನುಷ್ಯ ಕಾಣೆ:- ಇಂದು 18/03/2020 ರಂದು 8.30  ಪಿ ಎಮ್ ಕ್ಕೆ ಪಿಯರ್ಾದಿ ಶೀವಾನಿ ಗಂಡ ರಾಜಶೇಖರ ಜಕಾತಿ ವ|| 28 ವರ್ಷ ಉ|| ಮನೆ ಕೆಲಸ ಜಾ|| ಲಿಂಗಾಯತ ಸಾ|| ದೇವಿನಗರ ಶಹಾಪೂರ ಇದ್ದು, ನನಗೆ 4 ವರ್ಷಗಳಿಂದೆ ಶಹಾಪೂರದ ಬಸವರಾಜ ಇವರ ಮಗ ರಾಜಶೇಖರ ಇವರೊಂದಿಗೆ ಮದುವೆಯಾಗಿದ್ದು, ನನಗೆ ಒಂದು ಹೆಣ್ಣು ಮಗುವಿದ್ದು, ನಾನು ಮತ್ತು ನನ್ನ ಗಂಡ, ನಮ್ಮ ಬಾವ ಮಹೇಶ ಮತು ಅವರ ಕುಟಂಬ ಮತ್ತು ನಮ್ಮ ಅತ್ತಿ-ಮಾವ ಎಲ್ಲರೂ ವ್ಯಾಪಾರ ಮಾಡಿಕೊಂಡು ಉಪಜಿವಿಸುತ್ತಿದ್ದು, ನನ್ನ ಗಂಡ ರಾಜಶೇಖರ ಇತನು ಹತ್ತಿಗೂಡುರು ಗ್ರಾಮದಲ್ಲಿ ಹತ್ತಿ ವ್ಯಾಪಾರ ಮಾಡುತ್ತಿದ್ದು, ಜೋತೆಗೆ ಜುಜಾಟ ಆಡುವ ಚಟವಿದ್ದ, ಹೀಗಾಗಿ 5-6 ಲಕ್ಷ ಸಾಲ ಮಾಡಿದ್ದು ಯಾವಗಲು ಸದರಿ ಸಾಲದ ಬಗ್ಗೆ ಚಿಂತೆ ಮಾಡುತ್ತಿದ್ದು, ನಾವೂ ಯಾಕೆ ಚಿಂತೆ ಮಾಡುತ್ತಿದ್ದ ಅಂತಾ ಕೆಳಿದರು ಏನು ಹೆಳಿತ್ತಿರಲಿಲ್ಲಾ,
          ಹೀಗಿದ್ದು ದಿನಾಂಕ 18/03/2020 ರಂದು ನಮ್ಮ ನನ್ನ ಗಂಡ ರಾಜಶೇಖರ ಇತನು ಮುಂಜಾನೆ 10:00 ಎ,ಎಂ ಸುಮಾರಿಗೆ ನಾನು ಹತ್ತಿ ವ್ಯಾಪಾರ ಕುರಿತು ಹೋಗುತ್ತೇನೆ ಅಂತಾ ಹೇಳಿ ಹೋಗಿದ್ದು, 5:30 ಪಿ.ಎಂ ಸುಮಾರಿಗೆ ನಮ್ಮ ಬಾವ ಮಹೇಶ ಇತನು ಮನೆಗೆ ಬಂದು ತಿಳಿಸಿದ್ದೆನಂದರೆ, ನಾನು ಅಂಗಡಿಯಲ್ಲಿದ್ದಾಗ ಸಾಯಾಂಕಾಲ 5:00 ಪಿ.ಎಂ ಸುಮಾರಿಗೆ ರಮೇಶ ಇತನು ನಮ್ಮ ಅಂಗಡಿಯಲ್ಲಿ ಕೆಲಸಮಾಡುವ ಚನ್ನಬಸವ ಇತನಿಗೆ ಪೋನ ಮಾಡಿ ತಿಳಿಸಿದ್ದೆನಂದರೆ ನಿಮ್ಮ ಮಾಲಿಕ ರಾಜಶೇಖರ ಇತನು ಒಂದು ಬ್ಯಾಗ ಕೊಟ್ಟಿದ್ದು ನೀನ್ನ ಕೈಯಲ್ಲಿ ಕೊಡು ಅಂತಾ ಹೇಳಿದ್ದಾನೆ ಆಂತಾ ತಿಳಸಿದ್ದು ಸದರ ಬ್ಯಾಗ ತೆಗಿದುಕೊಂಡು ಬರವ ಕುರಿತು ಚನ್ನಬಸವ ಇತನಿಗೆ ಕಳಿಸಿದ್ದು, ಬ್ಯಾಗ ಮತ್ತು ಅಲ್ಲೆ ಇದ್ದ ನಮ್ಮ ತಮ್ಮನ ಬೈಕ ತೆಗಿದುಕೊಂಡು ಬಂದಿದ್ದಾನೆ ಅಂತಾ ತಿಳಿಸಿದ್ದು, ನಾನು ಮತ್ತು ನಮ್ಮ ಬಾವ ಮಹೇಶರ ಕೂಡಿ ನಾವೂ ಸದರ ಬ್ಯಾಗನ್ನು ತೆಗೆದು ನೋಡಿದ್ದು ಅದರಲ್ಲಿ ಎರಡು ಮೋಬೈಲ, ಎರಡು ಉಂಗುರು ಇದ್ದು ಅದರಲ್ಲಿ ಒಂದು ಲೇಟರ ಇದ್ದು ನನಗೆ ಸಾಲವಾಗಿದ್ದರಿಂದ ನಾನು ಮನೆ ಬಿಟ್ಟು ಹೋಗುತ್ತೇನೆ ಅಂತಾ ಬರೆದಿದ್ದು ಇರುತ್ತದೆ. ಕೂಡಲೇ ನಮ್ಮ ಬಾವ ಮಹೇಶ ಮತ್ತು ಮಹೇಶಗೌಡ ಸುಬೇದಾರ, ವೆಂಕಟೇಶ ಬೋನಾರ, ಶೀವಲಿಂಗ ಎಲ್ಲರೂ ಕೂಡಿ ಶಹಾಪೂರ ನಗರದ ಬಾಪೂಗೌಡ ನಗರ, ಚರಬಸವೇಶ್ವರ ಮಂದಿರ, ಗಂಜ ಏರಿಯಾ ಎಲ್ಲಾಕಡೆ ಹುಡಿಕಾಡಿದ್ದು ಸಿಕ್ಕಿರುವದಿಲ್ಲಾ ಮತ್ತು ನಮ್ಮ ಬಂದು ಬಳಗದವರಿಗೆ ವಿಚಾರಿಸಿದ್ದು ನಮ್ಮ ಹತ್ತಿರ ಬಂದಿರುವದಿಲ್ಲಾ ಅಂತಾ ಹೇಳಿದ್ದು, ಮರಳಿ ಮನೆಗೆ ಬಾರದೆ ಎಲ್ಲೋ ಹೋಗಿದ್ದು, ಕಾರಣ ಮಾನ್ಯರವರು ಕಾಣೆಯಾದ ನನ್ನ ಗಂಡ ರಾಜಶೇಖರ ಇವರನ್ನು ಹುಡುಕಿ ಕೊಡಲು ಮಾನ್ಯರವಲ್ಲಿ ವಿನಂತಿ. ಅಂತ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 95/2020 ಕಲಂ ಮನುಷ್ಯ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!