ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/03/2020

By blogger on ಬುಧವಾರ, ಮಾರ್ಚ್ 18, 2020



                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/03/2020 
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 93/2020. ಕಲಂ 279, 338 ಐ.ಪಿ.ಸಿ. ಮತ್ತು ಕಲಂ 187 ಐ.ಎಮ್.ವಿ. ಆಕ್ಟ:- ದಿನಾಂಕ: 16-03-2020 ರಂದು 12:30 ಪಿ.ಎಮ್.ಕ್ಕೆ  ಆರೋಪಿತನು ತನ್ನ ಲ್ಯಾಟ್ರಿನ ಟ್ಯಾಂಕರ ವಾಹನವನ್ನು ಅತೀವೆಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಮಡು ಬಂದು ಶಹಾಪೂರದ ಸುಬೇದಾರ ಆಸ್ಪತ್ರೆಯ ಸಮೀಪ ಫಿಯರ್ಾದಿಯವರ ಮೊಟಾರ ಸೈಕಲ್ ನಂ. ಕೆ.ಎ.33-ಡಬ್ಲ್ಯೂ-3052 ನೆದ್ದಕ್ಕೆ ಡಿಕ್ಕಿ ಪಡಿಸಿ ಫಿಯರ್ಾದಿಯ ಹಿಂದೆ ಕುಳಿತ ಫಿಯರ್ಾದಿಯ ಮಾವನಿಗೆ ಡಿಕ್ಕಿ ಪಡಿಸಿ ಗಾಯ ಪಡಿಸಿದ ಲಾಟ್ರಿನ ಟ್ಯಾಂಕ ವಾಹನ ನಂ ಕೆ.ಎ.07-2472 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ   ಅಂತಾ ಇದ್ದ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.93/2020 ಕಲಂ. 279, 338 ಐ.ಪಿ.ಸಿ ಮತ್ತು ಕಲಂ. 187 ಐ.ಎಮ್.ವಿ. ಆಕ್ಟ  ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 94/2020 ಕಲಂ 323,498(ಎ), 504, 506 ಸಂಗಡ 34 ಐಪಿಸಿ ಮತ್ತು 3 & 4 ಡಿ.ಪಿ.ಯಾಕ್ಟ:- ಇಂದು ದಿನಾಂಕ: 17/03/2020 ರಂದು 9.00 ಪಿ.ಎಂ.ಕ್ಕೆ ಪ್ರಕರಣದ ಫಿಯರ್ಾದಿ ಶ್ರೀಮತಿ ವಿಜಯಲಕ್ಷ್ಮಿ ಗಂ/ ಅಶೋಕ ಮಡಿವಾಳ ಸಾ|| ಕಲಿಕೇರಿ ಹಾ.ವ|| ಹಳಿಸಗರ, ಶಹಾಪುರ ತಾ|| ಶಹಾಪುರ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದರ ಸಾರಾಂಶವೇನೆಂದರೆ,  ನನ್ನ ತಂದೆ-ತಾಯಿಗೆ ಒಟ್ಟು 6 ಜನ ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು ಇರುತ್ತೇವೆ ನನ್ನ 3 ಜನ ಅಕ್ಕಂದಿರಿಗೆ ಮದುವೆಯಾಗಿದ್ದು ಗಂಡನ ಮನೆಯಲ್ಲಿರುತ್ತಾರೆ. ಹೀಗಿದ್ದು, ನಮ್ಮ ಸಂಬಂಧಿ ಅರುಣಮ್ಮ ಗಂ/ ಭೀಮಣ್ಣ ಮಡಿವಾಳ ಸಾ|| ದಿಗ್ಗಿ ತಾ|| ಶಹಾಪುರ ಇವರು ನಮ್ಮ ಸಂಬಂಧಿಕರಲ್ಲಿ ಸಿಂದಗಿ ತಾಲೂಕಿನ ಕಲಕೇರಿಯ ಕಂಟೆಪ್ಪ ಮಡಿವಾಳ ಇವರ ಮಗ ಅಶೋಕನಿಗೆ ನಿಮ್ಮ ಮಗಳು ವಿಜಯಲಕ್ಷ್ಮಿಗೆ ಕೊಟ್ಟು ಮದುವೆ ಮಾಡಿದರಾಯಿತು ಹುಡುಗ ಒಳ್ಳೆಯವನಿದ್ದಾನೆ ಅಂತಾ ಹೇಳಿದ್ದರಿಂದ ದಿನಾಂಕ: 15/03/2017 ರಂದು ನಮ್ಮ ತಾಯಿ, ಅಕ್ಕಂದಿರು ಮತ್ತು ಮಾವಂದಿರೆಲ್ಲರೂ ಹಾಗೂ ಅರುಣಮ್ಮ ಎಲ್ಲರೂ ಕೂಡಿ ಕಲಿಕೇರಿಗೆ ಹೋಗಿ ಹೋಳಿಗೆ ಕಾರ್ಯಕ್ರಮ ಮುಗಿಸಿಕೊಂಡು ಬಂದು ದಿನಾಂಕ: 19/03/2017 ರಂದು ನನ್ನ ತವರು ಮನೆಯಲ್ಲಿ ನಿಶ್ಚಿತಾರ್ಥ ಮಾಡಿದ್ದು ಆ ಸಮಯದಲ್ಲಿ ನನ್ನ ಗಂಡನ ಮನೆಯವರು ಮತ್ತು ಹಾಗೂ ನನ್ನ ತಾಯಿ, ಅಕ್ಕ, ತಂಗಿ ಮತ್ತು ತಮ್ಮಂದಿರು ಹಾಗೂ ಮಾವಂದಿರೆಲ್ಲರೂ ಸೇರಿ ವರದಕ್ಷಿಣೆಯಾಗಿ 2 ತೊಲಿ ಬಂಗಾರ, 50 ಸಾವಿರ ರೂಪಾಯಿ ಮತ್ತು ಗೃಹೋಪಯೋಗಿ ವಸ್ತುಗಳನ್ನು ಕೊಡುವುದಾಗಿ ಒಪ್ಪಿಕೊಂಡು ನಿಶ್ಚಿತಾರ್ಥ ಮಾಡಿಕೊಟ್ಟಿದ್ದು, ನನ್ನ ಗಂಡ ಅಶೋಕನು ನಿಶ್ಚಿತಾರ್ಥ ಜರುಗಿದ 4 ತಿಂಗಳ ನಂತರ ದುಡಿಯಲು ವಿದೇಶಕ್ಕೆ(ದುಬೈ)ಗೆ ಹೋಗಿ 18 ತಿಂಗಳ ನಂತರ ಮರಳಿ ಊರಿಗೆ ಬಂದ ನಂತರ ದಿನಾಂಕ: 28/02/2019 ರಂದು ಕಲಿಕೇರಿಯ ಶ್ರೀ ಮತೋಶ್ರಿ ತಂಗಮ್ಮ ದೇಸಾಯಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಯಕ್ಕೆ ನಿಶ್ಚಿತಾರ್ಥ ಸಮಯದಲ್ಲಿ ಮಾತುಕತೆ ಆಡಿದ ಪ್ರಕಾರ ವರ ಅಶೋಕನಿಗೆ 2 ತೊಲಿ ಬಂಗಾರ ಹಾಗೂ ಗೃಹೋಪಯೋಗಿ ಸಾಮಗ್ರಿಗಳನ್ನು ನಮ್ಮ ತಾಯಿಯವರು ವರದಕ್ಷಿಣೆಯಾಗಿ ಕೊಟ್ಟು ಲಗ್ನ ಮಾಡಿದ್ದು, ಇನ್ನುಳಿದ 50 ಸಾವಿರ ರೂಪಾಯಿಗಳನ್ನು ನಂತರ ಕೊಡುವುದಾಗಿ ಹೇಳಿದ್ದರು. ಸದರಿ ಮದುವೆಗೆ ನಿಶ್ಚಿತಾರ್ಥ ಕಾಲಕ್ಕೆ ಹಾಜರಿದ್ದ ಹಿರಿಯರು ಹಾಗೂ ನನ್ನ ತಾಯಿ, ಅಕ್ಕ, ತಂಗಿಯರು, ತಮ್ಮಂದಿರು ಹಾಗೂ ಮಾವಂದಿರು ಹಾಗೂ ಇತರೆ ಬಂದು ಬಳಗದವರು ಮತ್ತು ವರನ ತಂದೆ, ತಾಯಿ ಬಂದು ಬಳಗದವರು ಹಾಜರಿದ್ದರು. ಲಗ್ನವಾಗಿ 4-5 ದಿನಗಳ ವರೆಗೆ ನಾನು ಮತ್ತು ನನ್ನ ಗಂಡ ಇಬ್ಬರು ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದೆವು, ನಂತರ ನನ್ನ ಗಂಡ, ಅತ್ತೆ ಶಂಕ್ರೆಮ್ಮ, ಮಾವ ಕಂಟೆಪ್ಪ ಮತ್ತು ನಾದಿನಿ ಮಲ್ಲಮ್ಮ ಗಂ/ ಬಸವರಾಜ ಮಡಿವಾಳ ಎಲ್ಲರೂ ಕೂಡಿ ಇನ್ನೂ ಕೊಡಬೇಕಾದ ವರದಕ್ಷಿಣೆ 50000=00 ರೂಪಾಯಿ ಹಣವನ್ನು ನಿನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಡಲಾರಂಬಿಸರು, ನನ್ನ ತಂದೆ ಮೃತಪಟ್ಟಿರುತ್ತಾರೆ ನನ್ನ ತಾಯಿ ಕಷ್ಟ ಪಟ್ಟು ಮದುವೆ ಮಾಡಿಕೊಟ್ಟಿದ್ದಾಳೆ, ಸ್ವಲ್ಪ ದಿವಸ ತಾಳಿ ಅಂತಾ ಹೇಳಿದರೂ ಕೂಡಾ ಕೇಳದೆ ದಿನಾಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡಲಾರಂಬಿಸಿದರು. ನಿನಗೆ ಇನ್ನೂ ಮಕ್ಕಳಾಗಿಲ್ಲ ನೀನು ವರದಕ್ಷಿಣೆ ತಂದು ಕೊಡದಿದ್ದರೆ ನಮ್ಮ ಅಶೋಕನಿಗೆ ಇನ್ನೊಂದು ಮದುವೆ ಮಾಡುತ್ತೇವೆ ಅಂತಾ ಹೆದರಿಸುತ್ತಿದ್ದರು. ನಾನು ಹಾಗೆ ಕಿರುಕುಳ ಸಹಿಸಿಕೊಂಡು ಇದ್ದೆನು. ನಂತರ ನನ್ನ ತವರು ಮನೆಗೆ ಬಂದಾಗ ವಿಷಯವನ್ನು ನನ್ನ ತಾಯಿ, ಅಕ್ಕ, ತಂಗಿ, ತಮ್ಮಂದಿರು ಮತ್ತು ಮಾವನವರಿಗೆ ತಿಳಿಸಿದಾಗ ಅವರು ನನಗೆ ಸಮಾದಾನ ಮಾಡಿ ಇಂದಲ್ಲಾ ನಾಳೆ ಸುಧಾರಿಸುತ್ತದೆ ಅಂತಾ ಹೇಳಿ ಗಂಡನ ಮನೆಗೆ ಕಳುಹಿಸುತ್ತಿದ್ದರು. ಅಂದಾಜು 5 ತಿಂಗಳ ಹಿಂದೆ ನನ್ನ ಗಂಡ, ಅತ್ತೆ, ಮಾವ ಮತ್ತು ನಾಧಿನಿ ಎಲ್ಲರೂ ಕೂಡಿ ನಿನಗೆ ಎಷ್ಟು ಹೇಳಿದರು ವರದಕ್ಷಿಣೆ ಹಣ 50000=00 ರೂಪಾಯಿ ತಂದು ಕೊಡುತ್ತಿಲ್ಲ ಸೂಳೆ ನಿನ್ನದು ಸೊಕ್ಕು ಬಹಳ ಆಗಿದೆ ಈಗ ಹೋಗಿ ವರದಕ್ಷಿಣೆ ಹಣದೊಂದಿಗೆ ಮರಳಿ ಬಾ ನೀನು ಹಾಗೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿ ನನಗೆ ನನ್ನ ತವರು ಮನೆಗೆ ಕಳುಹಿಸಿದ್ದರು. ಇಷ್ಟು ದಿವಸ ನಾನು ನನ್ನ ತವರು ಮನೆಯಲ್ಲಿಯೇ ಇದ್ದೆನು. ಇಂದು ದಿನಾಂಕ:17/03/2020 ರಂದು ಸಾಯಂಕಾಲ 5.00 ಪಿ.ಎಂ. ಸುಮಾರಿಗೆ ನಾನು ಮತ್ತು ನನ್ನ ತಾಯಿ, ಅಕ್ಕ ಶಾಂತಮ್ಮ, ಬಸವರಾಜ ಎಲ್ಲರೂ ಹಳಿಸಗರದ ನನ್ನ ತಾಯಿಯ ಮನೆಯಲ್ಲಿದ್ದಾಗ ನಮ್ಮ ಮನೆಗೆ ಬಂದ ನನ್ನ ಗಂಡ ಅಶೋಕ, ಮಾವ ಕಂಟೆಪ್ಪ ಮತ್ತು ಅತ್ತೆ ಶಂಕ್ರೆಮ್ಮ ಇವರೆಲ್ಲರೂ ಬಂದವರೆ ಎಲೆ ಬೋಸಡಿ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಅಂತಾ ಹೇಳಿದರೆ ನೀನು ಇಲ್ಲಿಯೇ ಬಂದು ಕುಳಿತಿದ್ದಿ ಏನು ಅಂತಾ ಅಂದವರೆ ನನ್ನ ಗಂಡ ಅಶೋಕನು ನನ್ನ ಕೂದಲು ಹಿಡಿದು ಜಗ್ಗಾಡಿ ನನ್ನ ಬೆನ್ನಿಗೆ ಕೈಯಿಂದ ಗುದ್ದಿದನು, ಆಗ ಅತ್ತೆ ಮತ್ತು ಮಾವ ಇವರು ಕಲಾಸ ಮಾಡು ಇವಳಿಗೆ ಅಂತಾ ಅನ್ನುತ್ತಿದ್ದಾಗ ನನ್ನ ಮಾವ ಬಸವರಾಜ ಮತ್ತು ತಾಯಿ, ಅಕ್ಕ ಎಲ್ಲರೂ ಕೂಡಿ ಜಗಳ ಬಿಡಿಸಿರುತ್ತಾರೆ. ಕಾರಣ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟು ನಿಮ್ಮ ತವರು ಮನೆಯಿಂದ ವರದಕ್ಷಿಣೆ  ತೆಗದುಕೊಂಡು ಬಾ ಅಂತ ವರದಕ್ಷಿಣೆ ಕಿರುಕುಳ ಕೊಟ್ಟು ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ಜೀವದ ಭಯ ಹಾಕಿದ ನನ್ನ ಗಂಡನಾದ ಅಶೋಕ ತಂ/ ಕಂಟೆಪ್ಪ ಮಡಿವಾಳ ಹಾಗು ಇತರರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ-94/2020 ಕಲಂ 323, 498(ಎ), 504, 506 ಸಂಗಡ 34 ಐಪಿಸಿ ಮತ್ತು 3 & 4 ಡಿ.ಪಿ.ಯಾಕ್ಟ ನೇದ್ದರಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.       

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ 11/2020 ಕಲಂ 174 ಸಿ.ಆರ್.ಪಿ.ಸಿ:- ಇಂದು ದಿನಾಂಕ 17/03/2020 ರಂದು  01-05 ಎ.,ಎಂಕ್ಕೆ ಪಿಯರ್ಾದಿ ಶ್ರೀ ಮಂಜುನಾಥ ತಂದೆ ಜನಾರ್ಧನ ಪಾಡಮುಖಿ ವ|| 24 ವರ್ಷ ಜಾ|| ಸಕುಳಸಾಳೆ ಉ|| ಕೂಲಿ ಸಾ|| ಜಿವೇಶ್ವರ ನಗರ ಶಹಾಪೂರ ಕೊಡುವ ದೂರು ಅಜರ್ಿ ಸಾರಂಶವೆನಂದರೆ ಏನಂದರೆ. ನಾವೂ ನಮ್ಮ ತಂದೆ-ತಾಯಿಗೆ ಮೂರು ಜನ ಗಂಡು ಮಕ್ಕಳಿದ್ದು ಸುಮಾರು ವರ್ಷಗಳಿಂದೆ ನಮ್ಮ ತಂದೆ ತಿರುಕೊಂಡಿದ್ದು, ನಮ್ಮ ತಾಯಿ ಜೋತೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದು ಇರುತ್ತದೆ ನನ್ನ ಎರಡನೇಯ ಅಣ್ಣ ರಾಜ ವ|| 31 ಇತನು ಬೆಂಗಳೂರಿನಲ್ಲಿ ಕೂಲಿ ಕೆಲಸಮಾಡಕೊಂಡು ಇದ್ದು ನಾನು ಮತ್ತು ನಮ್ಮ ಅಣ್ಣ ಅಂಬಾದಾಸ ಶಹಾಪೂರದ ಈರಣ್ಣ ತಂದೆ ಭೀಮಣ್ಣ ಚಿಲ್ಲಾಳ ಇವರ ಮನೆಯಲ್ಲಿ ಬಾಡಿಗೆ ಒಂದು ರೂಮ ತೆಗಿದುಕೊಂಡು ನಮ್ಮ ತಾಯಿಯ ಜೊಂತೆಯಲ್ಲಿ ವಾಸವಾಗಿದ್ದು, ನಮ್ಮ ಅಣ್ಣ ಅಂಬಾದಾಸ ಇತನು ಹಾಗಾಗ ಮಾನಸಿಕ ಖಾಯಿಲೆ ಬಳುಲುತ್ತಿದ್ದನು, ಮತ್ತು  ಸರಾಯಿ ಕುಡಿಯುವ ಚಟಕೂಡ ಇತ್ತು.
           ದಿನಾಂಕ 14/03/2020 ರಂದು ಇಲ್ಲಕಲದಲ್ಲಿ ನಮ್ಮ ಸಂಬಂದಿಕರ ಮದುವೆ ಇದ್ದ ಕಾರಣ ನಮ್ಮ ತಾಯಿ ಮದುವೆ ಹೋಗಿ ಅಲ್ಲಿಂದ ನಮ್ಮ ಅಣ್ಣನ ಹತ್ತಿರ ಬೆಂಗಳೂರಿಗೆ ಹೋಗಿರುತ್ತಾಳೆ, ಹೀಗಿದ್ದು ದಿನಾಂಕ 16/03/2020 ರಂದು ನಾನು ಎಂದಿನಂತೆ ಮುಂಜಾನೆ ಎದ್ದು ಕೂಲಿ ಕೆಲಸಕ್ಕೆಂದು ಜಳಕಮಾಡಿ ಹೋರಟೇನು ನಮ್ಮ ಅಣ್ಣ ಹೀಗೇ ಎರಡು ಮೂರುದಿನ ದಿಂದ ಮಾನಸಿಕವಾಗಿ ಕುಂದಿದ್ದು ಕೆಲಸಕ್ಕೆ ಹೋಗಿರಲಿಲ್ಲಾ, ನಾನು ನಮ್ಮ ಅಣ್ಣ ಅಂಬಾದಾಸ ಇತನಿಗೆ ಇವತ್ತು ಕೆಲಸಕ್ಕೆ ಹೋಗುತ್ತೆನು ಎಂದು ಕೇಳಿದ, ನಾನು ಇವತ್ತು ಕೂಡ ಕೆಲಸಕ್ಕೆ ಹೋಗುವದಿಲ್ಲ ಅಂತಾ ತಿಳಿಸಿದ್ದು, ಮದ್ಯಾಹ್ನ 03:00 ಪಿ,ಎಂ ಕ್ಕೆ ಮನೆಗೆ ಬಂದು ಮನೆಯಲ್ಲಿ ಮೋಬೈಲ ಜಾರ್ಜಗೆ ಇಟ್ಟು ಹೋರಗಡೆ ಹೋಗಿ ಊಟಮಾಡಿಕೊಂಡು ಮರಳಿ ಬಂದು ಮೋಬೈಲ ತೆಗಿದುಕೊಂಡು ಹೋಗುವಾಗ, ನಮ್ಮ ಅಣ್ಣ ಮನೆಯಲ್ಲಿ ಇದ್ದನು ಊಟಮಾಡಿದೇನು ಅಣ್ಣ ಅಂತಾ ಕೇಳಿದ್ದು  ಊಟಮಾಡಿನಿ ಅಂತಾ ಹೇಳಿದನು, ನಂತರ ನಾನು ಕೆಲಸಕ್ಕೆ ಹೋಗಿ 8:40  ಪಿ.ಎಂ ಸುಮರಿಗೆ ಮರಳಿ ಮನಗೆ ಬಂದು ಬಾಗಲು ತೆರೆದಾಗ ನಮ್ಮ ಅಣ್ಣ ನಮ್ಮ ಮನೆಯ ಪತ್ರಾಸಿನ ಎಂಗಲಿಗೆ ವೈರಿನ ಹಗ್ಗದಿಂದ ನೆಣುಹಾಕಿಕೊಂಡಿದ್ದು  ಮೃತ ಪಟ್ಟಿದ್ದು ಇರುತ್ತದೆ, ನಮ್ಮ ಅಣ್ಣ ಅಂಬಾದಾಸ ತಂದೆ ಜನಾರ್ದನ ಪಾಡಮುಖಿ ವ|| 35 ಇತನು ತನಗಿದ್ದ ಮಾನಿಸಿಕ ಕಾಯಿಲೆಯಿಂದ ಜುಗುಪ್ಸೆಗೊಂಡು, ನೆಣುಹಾಕಿಕೊಂಡ ಮೃತ ಪಟ್ಟಿದ್ದು ನಂತರ ನಾನು ನಮ್ಮ ಅಕ್ಕಪಕ್ಕದವರಾದ ಸಂತೋಷ ತಂದೆ ವೆಂಕೋಬಾ ಟೋಣಪೆ, ಕೋಟ್ರೇಪ ತಂದೆ ಬೀಮಣ್ಣ ಚಿಲ್ಲಾಳ ಇತರನ್ನು ಕರೆದು ನಮ್ಮ ತಾಯಿಗೆ ಮತ್ತು ನಮ್ಮ ಅಣ್ಣ ಪೋನಮಾಡಿ ವಿಷಯ ತಿಳಿಸಿ ನಂತರ ಠಾಣೆಗೆ ಬಂದು ದೂರು ಅಜರ್ಿ ನೀಡಿದ್ದು ಇರುತ್ತದೆ
     
           ಕಾರಣ ನನ್ನ ತಮ್ಮ ಅಂಬಾದಾಸ ತಂದೆ ಜನಾರ್ಧನ ಪಾಡಮುಖಿ ವ|| 35 ವರ್ಷ ಜಾ|| ಸಕುಳ ಸಾಳೆ ಉ|| ಕೂಲಿ ಇತನು ತನಗಿದ್ದ ಮಾನಸಿಕ ಕಾಯಿಲೆಯಿಂದ ಜಿಗುಪ್ಸೆಕೊಂಡು ದಿನಾಂಕ 16/03/2020 ರಂದು 3:30 ಪಿ.ಎಂ ದಿಂದ 8:40 ಪಿ.ಎಂ ದೋಳಗೆ ನಮ್ಮ ಮನೆಯ ಪತ್ರಾಸಿನ ಎಂಗಲಿಗೆ ವೈರಿನ ಹಗ್ಗದಿಂದ ನೆಣುಹಾಕಿಕೊಂಡು ಮೃತ ಪಟ್ಟಿದ್ದು ಯಾರ ಮೇಲೆ ಯಾವೂದೆ ರಿತಿಯಾ ಸಂಶಾಯ ಇರುವದಿಲ್ಲಾ ಅಂತಾ ದೂರು ಅಜರ್ಿ ಇದ್ದು,  ಮುಂದಿನ ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ, ಅಂತಾ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಯು,ಡಿ,ಆರ್, ನಂ-11/2020 ಕಲಂ 174 ಸಿ.ಆರ್.ಪಿ.ಸಿ. ನೇದ್ದರ ಪ್ರಕಾರ ಯು.ಡಿ,ಆರ್. ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.


ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 27/2020 ಕಲಂ: 323, 506 ಐಪಿಸಿ:-ದಿನಾಂಕ; 16/03/2020 ರಂದು 8-30 ಪಿಎಮ್ ಕ್ಕೆ ಶ್ರೀ ನಾಯ್ಕೋಡಿ ತಂದೆ ನಾರಾಯಣಪ್ಪ ನಾಯಕ ಸಾ; ಜಗದಂಬಾ ದುರ್ಗ ನಿವಾಸ ಗಂಜ ಏರಿಯಾ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ನೀಡಿದ್ದೆನೆಂದರೆ, ನಾನು ಜಗದಂಬಾ ದುಗರ್ಾ ನಿವಾಸ ಗಂಜ ಏರಿಯಾ ಗಣೇಶ ನಗರದಲ್ಲಿ ವಾಸವಾಗಿರುವಾಗ ಭೀಮರಾಯ ತಂದೆ ಮರೆಪ್ಪ ಕೊಡ್ರಿಕಿ ಸಾ; ಕಟಗಿ ಶಹಾಪೂರ ಆದ ಇವನು ನನ್ನ ಮನೆಗೆ ಬಂದು ಕುಲ್ಲಕ ಕಾರಣಕ್ಕಾಗಿ ಜಗಳ ಮಾಡಿ ಹಲ್ಲೆ ಮಾಡಿರುತ್ತಾನೆ. ಇದಲ್ಲದೇ ನನಗೆ ಜೀವ ಬೆದರಿಕೆ ಹಾಕಿ ನಿನ್ನನ್ನು ಜೀವಂತವಾಗಿ ಕಡಿಯುತ್ತೇನೆ ನಿನಗೆ ಯಾರು ಕೇಳುವವರೆ ಇಲ್ಲ ಎಂದು ಬಾಯಿಗೆ ಬಂದಂತೆ ನಿಂದಿಸಿರುತ್ತಾನೆ. ಇವನು ನನ್ನ ತಮ್ಮನ ಭಾವಮೈದುನನಾಗಬೇಕು ನಮ್ಮ ಮನೆಯ ವಿಷಯವಾಗಿ ನಾನು ಮತ್ತು ನಮ್ಮ ತಮ್ಮ ಇಬ್ಬರು ನಮ್ಮ ಮನೆಯ ಆಸ್ತಿಯ  ಭಾಗವಾಗಿ ನ್ಯಾಯ ನಡೆದಿದ್ದು ಸದ್ಯ ಈ ವ್ಯಾಜ್ಯವು ಇನ್ನು ಕೋಟರ್ಿನಲ್ಲಿ ಇದೆ ಆದರೆ ಈ ನಮ್ಮ ಮನೆಯ ಆಸ್ತಿಯ ವಿಚಾರವು ನಾನು ಮತ್ತು ನನ್ನ ತಮ್ಮನಿಗೆ ಸಂಬಂಧಿಸಿರುವುದಾಗಿದೆ ಹಾಗೂ ಅದು ಇನ್ನು ಕೋಟರ್ಿನಲ್ಲಿದೆ ಇನ್ನೂ ಕೋಟರ್ಿನಲ್ಲಿ ಪ್ರಕರಣ ಇತ್ಯರ್ಥವಾಗದೇ ಇವನು ಬಂದು ಕ್ಷುಲ್ಲಕ ಕಾರಣಕ್ಕೆ ಮನೆವರೆಗೆ ಬಂದು ಹಲ್ಲೆ ಮಾಡಿದಲ್ಲದೇ ಜೀವ ಬೆದರಿಕೆ ಹಾಕಿರುತ್ತಾನೆ. ಕಾರಣ ತಾವು ನನಗೆ ಸೂಕ್ತವಾದ ರಕ್ಷಣೆ ನೀಡಿ ಭೀಮರಾಯ ತಂದೆ ಮರೆಪ್ಪ ಕೊಡ್ರಕಿ ಇವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕಾಗಿ ಈ  ಘಟನೆಯು ಇಂದು ದಿನಾಂಕ; 16/03/2020 ರಂದು 6-30 ಪಿಎಮ್ ಕ್ಕೆ ಜರುಗಿದ್ದು ಇರುತ್ತದೆ ಅಂತಾ ಅಜರ್ಿ ನೀಡಿದ್ದು ಸದರಿ ಪ್ರಕರಣವು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ಇಂದು ದಿನಾಂಕ; 17/03/2020 ರಂದು 12-15 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಪಿರ್ಯಾಧಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.27/2020 ಕಲಂ.323, 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 28/2020 ಕಲಂ 78(3) ಕೆ.ಪಿ ಎಕ್ಟ್ 1963:- ಇಂದು ದಿನಾಂಕ;17/03/2020 ರಂದು 4-20 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ.17/03/2020 ರಂದು 2-15 ಪಿಎಂಕ್ಕೆ ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ  ಗಾಂದಿ ನಗರ ತಾಂಡದಲ್ಲಿ  ಯಾರೋ ಒಬ್ಬನು ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/-ರೂ ಗೆ 80/-ರೂ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಪಡೆದುಕೊಂಡು ಸದರಿ ಪ್ರಕರಣವೂ ಅಸಂಜ್ಞೇಯ ಅಪರಾದವಾಗುತ್ತಿದ್ದರಿಂದ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.28/2020 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 29/2020 ಕಲಂ 454, 457, 380 ಐಪಿಸಿ:-ಫಿಯರ್ಾದಿ ಸಾರಾಂಶವೇನೆಂದರೆ, ದಿನಾಂಕ 14/03/2020 ರಂದು ಸಾಯಂಕಾಲ 07-30 ಗಂಟೆಗೆ ನಾನು ನನ್ನ ಕುಟುಂಬದೊಂದಿಗೆ ಮನೆಯ ಬೀಗ ಹಾಕಿಕೊಂಡು ಮಗನ ಉಪಚಾರಕ್ಕಾಗಿ ಶಹಾಪೂರ ಆಸ್ಪತ್ರೆಗೆ ಹೋದೆನು. ನಂತರ ನಿನ್ನೆ ದಿನಾಂಕ 16/03/2020 ರಂದು ಬೆಳಿಗ್ಗೆ 10-00 ಗಂಟೆಗೆ ನಾನು ಯಾದಗಿರಿಯ ಜಿಲ್ಲಾ ಪಂಚಾಯತ ಕಾಯರ್ಾಲಕ್ಕೆ ಕರ್ತವ್ಯಕ್ಕೆ ಹಾಜರಾದೆನು. ಮಧ್ಯಾಹ್ನ 01-30 ಗಂಟೆಯ ಸುಮಾರಿಗೆ ನಾನು ಕೆಲಸದ ಮೇಲೆ ಇದ್ದಾಗ ನಮ್ಮ ಎದುರಿನ ಮನೆಯವರಾದ ಮಹ್ಮದ ಮುಸ್ತಫ್ ತಂದೆ ಮಹ್ಮದ್ ಇಸ್ಮಾಯಿಲ್ ಇವರು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ, ನಿಮ್ಮ ಮನೆಯ ಬಾಗಿಲು ತೆಗೆದಿದ್ದು, ಮನೆಯ ಬೀಗ ಮುರಿದು ಕೆಳಗೆ ಬಿದ್ದಿರುತ್ತದೆ. ಯಾಕೋ ಮನೆ ಕಳ್ಳತನವಾದಂತೆ ಕಂಡು ಬರುತ್ತದೆ. ಕೂಡಲೆ ತಾವು ಮನೆಗೆ ಬಂದು ನೋಡಿರಿ ಅಂತಾ ತಿಳಿಸಿದಾಗ ನಾನು ಯಾದಗಿರಿಯ ಕಛೇರಿಯಿಂದ ಮನೆಗೆ ಬಂದು ನೋಡಲಾಗಿ, ಮನೆಗೆ ಹಾಕಿದ ಕೀಲಿಯ ಕೊಂಡಿ ಮುರಿದಿದ್ದು, ಬಾಗಿಲು ತೆಗೆದಿದ್ದು ಕಂಡು ಬಂತು. ನಂತರ ನಾನು ಚಾಮಾ ಲೇಔಟ್ದಲ್ಲಿ ಇರುವ ನನ್ನ ತಮ್ಮನಾದ ಅಪ್ರೋಜ್ಖಾನ್ ತಂದೆ ಯುಸುಫ್ ಖಾನ್ ಇವರಿಗೆ ವಿಷಯ ತಿಳಿಸಿದಾಗ ಅವರು ಕೂಡ ನಮ್ಮ ಮನೆಗೆ ಬಂದರು. ಹಾಗೂ ಮನೆಯ ಪಕ್ಕದವರಾದ ಮಹ್ಮದ ಮುಸ್ತಫ್ ತಂದೆ ಮಹ್ಮದ್ ಇಸ್ಮಾಯಿಲ್ ಇವರು ಕೂಡ ಬರಲಾಗಿ ಎಲ್ಲರು ಕೂಡಿ ಮನೆಯ ಒಳಗೆ ಹೋಗಿ ನೋಡಿದಾಗ ಮನೆಯ ಎರಡು ಬೆಡ್ ರೂಮಿನ ಅಲಮರಿಯಲ್ಲಿ ಇದ್ದ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು. ಅಲಮರಿಯಲ್ಲಿ ಇಟ್ಟಿದ್ದ 1] ಒಂದು 10. ಗ್ರಾಂ ಬಂಗಾರದ ಚೈನ್, ಅ.ಕಿ 35,000/ ರೂ|| ಗಳು 2] ತಲಾ 01. ಗ್ರಾಮಿನ 6 ಮಕ್ಕಳ ಉಂಗುರ (ಒಟ್ಟು 06 ಗ್ರಾಂ.) ಅ.ಕಿ 21,000/- ರೂ|| ಗಳು, ಹಾಗೂ ಮಗನ ಉಪಚಾರಕ್ಕೆಂದು ಇಟ್ಟಿದ್ದ ನಗದು ಹಣ 3] 40,000/ ರೂ|| ಗಳು ಹೀಗೆ ಒಟ್ಟು 96,000/- ರೂ|| ಕಿಮ್ಮತ್ತಿನ ಬಂಗಾರದ ಆಭರಣಗಳು ಮತ್ತು ನಗದು ಹಣ ಇರಲಿಲ್ಲ.  ಕಾರಣ ದಿನಾಂಕ 14/03/2020 ರ ಸಾಯಂಕಾಲ 07-30 ಗಂಟೆಯಿಂದ ದಿನಾಂಕ 16/03/2020 ರ ಮಧ್ಯಾಹ್ನ 01-30 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಬೀಗ ಹಾಕಿದ ನಮ್ಮ ಮನೆ ನೋಡಿ ಕಳ್ಳತನ ಮಾಡಿದ್ದು, ಅವರನ್ನು ಪತ್ತೆ ಮಾಡಿ, ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 29/2020 ಕಲಂ 454, 457 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

                               
ಸೈದಾಪುರ  ಠಾಣೆ ಗುನ್ನೆ ನಂ:- 33/2020 ಕಲಂ 457,380 ಐಪಿಸಿ :- ಇಂದು ದಿನಾಂಕ: 17.03.2020  ರಂದು 05-00 ಪಿ.ಎಮ್ಕ್ಕೆ ಫಿಯರ್ಾದಿ ಠಾಣೆಗೆ ಬಂದು ಹಾಜರಾಗಿ  ಒಂದು ಗಣಕಯಂತ್ರದಲ್ಲಿ ಟೈಪ ಮಾಡಿಸಿದ ದೂರು ಅಜರ್ಿ ನೀಡಿದ್ದು ಸಾರಾಂಶವೇನೆಂಧರೆ, ನಾನು ಬಳಿಚಕ್ರ ಗ್ರಾಮದಲ್ಲಿ ಬ್ಯಾಂಕ ಆಫ್ ಬರೋಡದಲ್ಲಿ  ಬ್ಯಾಂಕ ಮ್ಯಾನೇಜರ ಅಂತ ಕೆಲಸ ಮಾಡಿಕೊಂಡಿದ್ದು, ಸ್ಟೇಶನ ಸೈದಾಪೂರ ಗ್ರಾಮದ ಸಿದ್ರಾಮ ತಂದೆ ಮಾರ್ಕಂಡಯ್ಯ ತೊಗಟೆವಿರ ಇವರ ಮನೆಯಲ್ಲಿ 5 ತಿಂಗಳಿನಿಂದ ಬಾಡಿಗೆ ಇರುತ್ತೇನೆ., ದಿನಾಂಕ. 13.03.2020 ರ ರಾತ್ರಿ 11.00 ಗಂಟೆಯಿಂದ ದಿನಾಂಕ. 14.03.2020 ರ ಬೆಳಿಗ್ಗೆ 5.00 ಗಂಟೆವರೆಗಿನ ಅವಧಿಯಲ್ಲಿ ಯಾರೋ ಕಳ್ಳರು ಕೀಲಿ ಹಾಕಿದ ನಮ್ಮ ಮನೆಯ ಬಾಗಿಲು ಕೀಲಿ ಮುರಿದು ಕಳ್ಳತನ ಮಾಡಿದ್ದು ಬಾಗಿಲು ಕೀಲಿ ಮುರಿದಿದ್ದು, ಲಾಕ ಮಾಡದೆ ಬಿಟ್ಟಿದ್ದ ನಮ್ಮ ಮನೆಯಲ್ಲಿನ ಅಲಮಾರಿಯಲ್ಲಿಟ್ಟದ್ದ 35 ಗ್ರಾಂ.ಬಂಗಾರದ ಮ್ಯಾಂಗಲ ಸರ ಅ.ಕಿ. 55,000/- ರೂ ಬೆಲೆ ಬಾಳುವ ಬಂಗಾರದ ಆಭರಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಅಜರ್ಿ ಇರುತ್ತದೆ.  ಅಂತ ನೀಡಿದ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.33/2020 ಕಲಂ.457,,380 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 46/2019 ಕಲಂ: 15(ಎ), 32(ಸಿ) ಕೆಇ ಆಕ್ಟ್;- 17.03.2020 ರಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ದೇವರಳ್ಳಿ ಗ್ರಾಮದಲ್ಲಿ ಪೆಟ್ರೊಲಿಂಗ್ ಕರ್ತವ್ಯದಲ್ಲಿದ್ದಾಗ ದೇವರಳ್ಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಮಧ್ಯವನ್ನು ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ಸಮಯ ಬೆಳಿಗ್ಗೆ 10:20 ಗಂಟೆಗೆ ದಾಳೀ ಮಾಡಿ ಆತನ ವಶದಲ್ಲಿದ್ದ 1] 90 ಎಂ.ಎಲ್ನ ಓರಿಜಿನಲ್ ಚ್ವಾಯಿಸ್ ವಿಸ್ಕಿಯ 04 ಖಾಲಿ ಪೌಚ್ಗಳು ಅ.ಕಿ-00 2] ಮದ್ಯ ಸೇವನೆ ಮಾಡಲು ಬಳಸಿದ 01 ಪ್ಲಾಸ್ಟಿಕ್ ಗ್ಲಾಸ್ ಅ.ಕಿ-00 3] ಒಂದು ಲೀಟರ್ನ ಬಾಟಲಿ ಅ.ಕಿ-00 4] 90 ಎಮ್.ಎಲ್ನ 10 ಓರಿಜಿನಲ್ ಚ್ವಾಯಿಸ್ ವಿಸ್ಕಿಯ 10 ಪೌಚ್ಗಳ ಬೆಲೆ-303=20 ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಸಿಕೊಂಡು ವಶಕ್ಕೆ ತೆಗೆದುಕೊಂಡು ವಶಕ್ಕೆ ತೆಗೆದುಕೊಂಡು ನಂತರ ಆರೋಪಿ, ಮುದ್ದೆ ಮಾಲು, ಮೂಲ ಜಪ್ತಿಪಂಚನಾಮೆಯೊಂದಿಗೆ ಠಾಣೆಗೆ ಬಂದು ಆರೋಪಿತನ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಅದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡೆನು.

ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 35/2020 ಕಲಂ 379 ಐಪಿಸಿ ಮತ್ತು 44(1) ಕೆಎಮ್ಎಮ್ಸಿ ರೂಲ್ 1994:- ಇಂದು ದಿನಾಂಕ: 17/03/2020 ರಂದು 3.30 ಪಿ.ಎಂ.ಕ್ಕೆ ಫಿಯರ್ಾದಿದಾರರು ಭೀ.ಗುಡಿಯ ಬಾಂಬೆ ಪೆಟ್ರೋಲ್ ಪಂಪ್ ಹತ್ತಿರ ನಿಂತಾಗ ಶಹಾಪೂರ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ಬಂದಿದ್ದು ಅದರ ರಾಯಲ್ಟಿ ನೋಡಲಾಗಿ ಟಿಪ್ಪರ ನಂ ಕೆಎ:33 ಬಿ-2991 ನೇದ್ದಕ್ಕೆ ರಾಯಲ್ಟಿ ನಂ: 22202293 ಹಾಗೂ ಎಮ್.ಡಿ.ಪಿ ನಂ: ಖಂಓಖಂಔಖ222800002689 ನೇದ್ದು ನೀಡಿದ್ದು ಇರುತ್ತದೆ. ಜಿಪಿಎಸ್ ಚೆಕ್ ಮಾಡಿ ಪರಿಶೀಲಿಸಿ ನೋಡಲಾಗಿ ಸದರಿ ಒಂದು ರಾಯಲ್ಟಿ ಮೇಲೆ ಇಂದು ದಿನಾಂಕ:17/03/2020 ರಂದು 9.50 ಎ.ಎಮ್.ಕ್ಕೆ ಶಹಾಪುರದ ಲಕ್ಷ್ಮಿನಗರದಲ್ಲಿ ಒಂದನೇ ಟ್ರಿಪ್ ಮರಳನ್ನು ಅನ್ಲೋಡ ಮಾಡಿದ್ದು ಎರಡನೇ ಟ್ರಿಪ್ ಮರಳು ಲೋಡ ಮಾಡಿಕೊಂಡು ಹೊರಟಿದ್ದು ಇರುತ್ತದೆ. ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕ ಒಂದೇ ರಾಯಲ್ಟಿ ಪಡೆದು ಅದರ ಮೇಲೆ ಒಂದಕ್ಕಿಂತ ಹೆಚ್ಚು ಟ್ರಿಪ್ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಟಿಪ್ಪರ ನಂ ಕೆಎ-33 ಬಿ-2991 ನೇದ್ದನ್ನು ಜಪ್ತಿಪಡಿಸಿಕೊಂಡು ಸದರಿ ಟಿಪ್ಪರನ್ನು ಭೀ.ಗುಡಿ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿ ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಭೀ.ಗುಡಿ ಠಾಣೆ ಗುನ್ನೆ ನಂ. 35/2020 ಕಲಂ 379 ಐಪಿಸಿ ಮತ್ತು 44(1) ಕೆಎಮ್.ಎಮ್.ಸಿ ರೂಲ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
                                                                                               
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 27/2020 ಕಲಂ, 87 ಕೆ.ಪಿ ಆ್ಯಕ್ಟ್:- ದಿನಾಂಕ 17/03/2020 ರಂದು 09.15 ಪಿಎಂ ಕ್ಕೆ ಶ್ರೀ ಸೊಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ರವರ ಗೋಗಿ ಕೆ ಸೀಮಾಂತರದಲ್ಲಿ ಎಸ್.ಬಿ.ಸಿ ಕೆನಾಲ ಪಕ್ಕದಲ್ಲಿನ ಖುಲ್ಲಾ ಜಾಗದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 09 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 7600=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು 07.30 ಪಿಎಮ್ ದಿಂದ 08.30 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 09.15 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರಪಡಿಸಿದ್ದರಿಂದ ಠಾಣೆ ಗುನ್ನೆ ನಂ 27/2020 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗೋಗಿ  ಪೊಲೀಸ್ ಠಾಣೆ ಗುನ್ನೆ ನಂ:-.  28/2020 ಕಲಂ, 279, 338, ಐಪಿಸಿ ಸಂ: 187 ಐಎಂವಿ ಯಾಕ್ಟ:- ಇಂದು ದಿನಾಂಕ: 17/03/2020 ರಂದು 10.20 ಪಿಎಂ ಕ್ಕೆ ಅಜರ್ಿದಾರ ಶ್ರೀ. ದುರ್ಗಪ್ಪ ತಂದೆ ಗೋಲ್ಲಾಳಪ್ಪ ಗುಡಿಮನಿ ವಯಾ;28 ವರ್ಷ ಉ: ಕೂಲಿ ಜಾ: ಮಾದಿಗ ಸಾ: ಏವೂರ ತಾ: ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಅಜರ್ಿ ನೀಡಿದ್ದು,  ಅದರ ಸಾರಂಶ ಏನಂದರೆ, ನನ್ನ ತಮ್ಮನಾದ ಶ್ರೀಶೈಲ್ ತಂದೆ ಗೊಲ್ಲಾಳಪ್ಪ ಗುಡಿಮನಿ ವ:18 ವರ್ಷ ಉ: ಕೂಲಿ ಜಾ: ಮಾದಿಗ ಸಾ; ಏವೂರ ತಾ: ಸುರಪೂರ ಈತನು ನಿನ್ನೆ ದಿನಾಂಕ: 16/03/2020 ರಂದು 05.00 ಪಿಎಂ ಸುಮಾರಿಗೆ ಚಾಮನಾಳಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದನು. ನಂತರ 06.35 ಪಿಎಂ ಸುಮಾರಿಗೆ ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೇನಂದರೆ, ತಾನು ಚಾಮನಾಳಕ್ಕೆ ಹೋಗಿ ಮರಳಿ ಬರುವಾಗ ಶಹಾಪೂರ ಸಿಂದಗಿ ಮೇನ್ ರೋಡಿನ ಚಮನಾಳ-ಏವೂರ ಮಧ್ಯದಲ್ಲಿ ನಡಿಹಾಳ ತಾಂಡಾದ ಹತ್ತಿರ ರೋಡಿನ ಜಂಪ ಹತ್ತಿರ ತಾನು ಚಾಮನಾಳ ಕಡೆಯಿಂದ ಬರುತ್ತಿದ್ದಾಗ ಎದರುಗಡೆಯಿಂದ ಅಂದರೆ ಸಿಂದಗಿ ಕಡೆಯಿಂದ ಒಂದು ಕಾರ ಚಾಲಕ ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ತನ್ನ ಮೋಟಾರ್ ಸೈಕಲ ಕ್ಕೆ ಡಿಕ್ಕಿ ಪಡೆಸಿದ್ದರಿಂದ ತಾನು ಕೆಳಗೆ ಬಿದ್ದಿದ್ದರಿಂದ ಎಡಗಾಲಿನ ಮೋಳಕಾಲ ಕೆಳಗೆ ಎಲುಬು ಮುರಿದು ಭಾರಿ ರಕ್ತಾಗಾಯ ಆಗಿರುತ್ತದೆ ಅಂತಾ ತಿಳಿಸಿದ ಕೂಡಲೆ ನಾನು ನಮ್ಮ ಪರಿಚಯದ ಮಲ್ಲಿಕಾಜರ್ುನ ತಂದೆ ತಿಪ್ಪಣ್ಣ ಅಂಗಡಿ ಇಬ್ಬರು ಕೂಡಿ 06.45 ಪಿಎಂ ಸುಮಾರಿಗೆ ಸ್ಥಳಕ್ಕೆ ಬಂದು ನೋಡಿದೆವು, ನಮ್ಮ ತಮ್ಮ ಶ್ರೀಶೈಲ್ ತಂದೆ ಗೊಲ್ಲಾಲಪ್ಪ ಗುಡಿಮನಿ ಈತನಿಗೆ ಯಾರೊ ಎಬ್ಬಸಿ ಕೂಡಿಸಿದ್ದರು. ನಾವು ನೊಡಲಾಗಿ ನಮ್ಮ ತಮ್ಮನಿಗೆ ಎಡಗಾಲಿನ ಮೋಳಕಾಲಿನ ಕೆಳಗೆ ಭಾರಿ ರಕ್ತಗಾಯ ಆಗಿತ್ತು, ಅಪಘಾತ ಪಡೆಸಿದ ಕಾರ ಅಲ್ಲೆ ನಿಂತಿದ್ದು, ನೊಡಲಾಗಿ ಮಾರುತಿ ಸಿಪ್ಟ ಕಾರ ನಂ: ಕೆಎ-33-ಎಮ್-6044 ಅಂತಾ ಇತ್ತು, ಅದರ ಚಾಲಕನ ಹೆಸರು ಅಂಬ್ರೀಶ ತಂದೆ ನಿಂಗಪ್ಪ ಜಾಗೀರದಾರ ವಯಾ:33 ವರ್ಷ ಸಾ: ದಂಡಸೊಲ್ಲಾರ ಅಂತಾ ಇದ್ದು ಅಪಘಾತ ಮಾಡಿದ ಕೂಡಲೇ ಜನ ಬರುವದು ನೋಡಿ ವಾಹನ ಬಿಟ್ಟು ಓಡಿ ಹೋಗಿದ್ದಾಗಿ ಗೊತ್ತಾಯಿತು. ನಂತರ ನಾವು ನಮ್ಮ ತಮ್ಮನಿಗೆ ಶಹಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದೆವು ಅಲ್ಲಿಂದ ಇಂದು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತೇವೆ. ನಾನು ಆಸ್ಪತ್ರೆಗೆ ಸೇರಿಕೆ ಮಾಡಿದ ಕಾರಣ ಪೊಲೀಸ್ ಠಾಣೆಗೆ ಬರಲು ತಡವಾಗಿರುತ್ತದೆ. ಕಾರಣ ನಮ್ಮ ತಮ್ಮನಿಗೆ ಅಪಘಾತ ಮಾಡಿದ ಮಾರುತಿ ಸಿಪ್ಟ ಕಾರ ನಂ: ಕೆಎ-33-ಎಮ್-6044 ನೆದ್ದರ ಚಾಲಕ ಅಂಬ್ರೀಶ ತಂದೆ ನಿಂಗಪ್ಪ ಜಾಗೀರದಾರ ವಯಾ:33 ವರ್ಷ ಸಾ: ದಂಡಸೊಲ್ಲಾರ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 28/2020 ಕಲಂ, 279, 338 ಐಪಿಸಿ ಸಂ: 187 ಐಎಂವಿ ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!