ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16/03/2020

By blogger on ಸೋಮವಾರ, ಮಾರ್ಚ್ 16, 2020



                           ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16/03/2020 
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 27/2020 ಕಲಂ: 306 ಸಂ 34 ಐಪಿಸಿ:-   ಇಂದು ದಿನಾಂಕ: 16/03/2020 ರಂದು 10 ಎಎಮ್ ಕ್ಕೆ ಪಿಸಿ 290 ರವರು ಗಂಗಾಧರ ಪಾಟೀಲ್ ಎ.ಎಸ್.ಐ ರವರು ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಕಳುಹಿಸಿದ ಶ್ರೀಮತಿ ಮೋನಿಕಾ ಗಂಡ ಸಿದ್ದಲಿಂಗಪ್ಪ ತಳವಾರ, ವ:30 ಜಾ:ಕಬ್ಬಲಿಗ, ಉ:ಹೊಲಮನೆಕೆಲಸ ಸಾ:ಗುರಸಣಗಿ ತಾ:ವಡಗೇರಾ ಇವರ ಹೇಳಿಕೆ ಫಿರ್ಯಾಧಿ ಹಾಜರಪಡಿಸಿದ್ದರ ಸಾರಾಂಶವೆನಂದರೆ ನಮಗೆ 1) ಮಧು ವ:12 ವರ್ಷ, 2) ಭರತ 09 ವರ್ಷ ಹಾಗು 3) ಭಾಗ್ಯಲಕ್ಷ್ಮಿ ವ:07 ವರ್ಷ ಹೀಗೆ ಒಂದು ಗಂಡು ಎರಡು ಹೆಣ್ಣುಮಕ್ಕಳಿರುತ್ತಾರೆ. ನಮ್ಮದು ಅವಿಭಕ್ತ ಕುಟುಂಬವಿದ್ದು ಮನೆಯಲ್ಲಿ ನಮ್ಮ ಮಾವ ಮಾಹಾದೇವಪ್ಪ ಮೈದುನದವರಾದ ರಾಜೇಂದ್ರ, ರುದ್ರಪ್ಪ ಮತ್ತು ನೆಗೆಣೀಯರು ಸೇರಿ ಎಲ್ಲರೂ ಒಂದೇ ಕಡೆ ವಾಸ ಮಾಡಿಕೊಂಡಿರುತ್ತೇವೆ. ನಮ್ಮ ಅತ್ತೆ ಲಕ್ಷ್ಮೀಬಾಯಿ ಸುಮಾರು 9 ವರ್ಷಗಳ ಹಿಂದೆ ತೀರಿಕೊಂಡಿರುತ್ತಾರೆ. ನನ್ನ ಗಂಡನು ಒಕ್ಕಲುತನ ಕೆಲಸ ಮಾಡಿಕೊಂಡಿದ್ದನು. ನನ್ನ ಮೈದುನದವರು ಡೈವರ ಹಾಗು ಜೆ.ಸಿ.ಬಿ. ಆಪರೇಟರ ಕೆಲಸ ಮಾಡಿಕೊಂಡಿರುತ್ತಾರೆ. ಹೀಗಿದ್ದು ನಮ್ಮ ಹಿರಿಯರು ನನ್ನ ಗಂಡನ ಅಣ್ಣ ತಮ್ಮಕೀಯವರಾದ ಸಿದ್ದಲಿಂಗಪ್ಪ ತಂದೆ ಸಿದ್ದಪ್ಪ ಬಾವೂರ ಇವರ ಹೊಲ ಸವರ್ೆ.ನಂ. 424 ವಿಸ್ತಿರ್ಣ 2 ಎಕರೆ 21 ಗುಂಟೆ ಜಮೀನು ಮತ್ತು ಸವರ್ೆ. ನಂ. 319 ವಿಸ್ತಿರ್ಣ 0 ಎಕರೆ 35 ಗುಂಟೆ ಜಮೀನು ನಮ್ಮ ಮಾವನವರು ಖರೀದಿ ಮಾಡಿದ್ದರು. ಆದರೆ ಜಮೀನು ನಮ್ಮ ಮಾವ ಮಹದೇವಪ್ಪನವರ ಹೆಸರಿನಲ್ಲಿ ರಜಿಸ್ಟರ್ ಆಗಿರಲ್ಲಿಲ್ಲ. ಈಗ ಸುಮಾರು 20-30 ವರ್ಷಗಳಿಂದ ಈ ಮೇಲ್ಕಂಡ  ಜಮೀನುಗಳನ್ನು ನಾವೇ ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವು. ಆದರೆ ಇತ್ತಿಚ್ಚೆಗೆ ಸುಮಾರು 2 ವರ್ಷಗಳಿಂದ ನಮ್ಮ ಎದುರಿನವರಾದ ಸಿದ್ದಲಿಂಗಪ್ಪ ತಂದೆ ಸಿದ್ದಪ್ಪ ಮತ್ತು ಅವನ ತಮ್ಮಂದಿರಗಳೂ ಕೂಡಿ ಜಮೀನುಗಳು ತಮ್ಮ ಹೆಸರಿನಿಂದ ಇದ್ದಿರುವುದರಿಂದ  ನನ್ನ ಗಂಡನ ಕಡೆಯಿಂದ ಸಾಗುವಳಿ ಮಾಡಿಸುವುದು ಬಿಡಿಸಿ, ತಾವೇ ಸಾಗುವಳಿ ಮಾಡಲಾರಂಭಿಸಿದ್ದರು. ಆಗ ನನ್ನ ಗಂಡ, ಮಾವ ಮತ್ತು ಮೈದುನರು ಹೋದರೆ ಹೋಗಲಿ ಬೀಡು ಎಂದು ಜಮೀನು ಅವರಿಗೆ ಬಿಟ್ಟುಕೊಟ್ಟಿರುತ್ತಾರೆ. ಇಷ್ಟಾದರೂ ಕೂಡ ಸುಮ್ಮನಿರದ ನಮ್ಮ ಎದುರಿನವರಾದ 1) ಸಿದ್ದಲಿಂಗಪ್ಪ ತಂದೆ ಸಿದ್ದಪ್ಪ ಬಾವೂರ, 2) ಸಾಬಣ್ಣ ತಂದೆ ಸಿದ್ದಪ್ಪ ಬಾವೂರ, 3) ಮಲ್ಲಪ್ಪ ತಂದೆ ಸಿದ್ದಪ್ಪ ಬಾವೂರ ಮತ್ತು 4) ಲಕ್ಷ್ಮೀ ಗಂಡ ಸಿದ್ದಪ್ಪ ಬಾವೂರ ಎಲ್ಲರೂ ಸಾ. ಗುರುಸಣಗಿ ಈ 4 ಜನರು ಸೇರಿ ನನ್ನ ಗಂಡನಿಗೆ ಈ ಮಗ ಸಿದ್ಯಾ ನಮ್ಮ ಜಮೀನು ನಮ್ಮಗೆ ಮರಳಿ ಬಿಡಲು ಸತ್ಯಾಯಿಸ್ಯಾನ ಈ ಮಗನಿಗೇ ಬೀಡುವುದು ಬೇಡ ಎಲ್ಲಿ ಸಿಗುತ್ತಾನೆ ಅಲ್ಲಿ ಟ್ರಾಕ್ಟರ-ಆಟೋದಿಂದ ಗುದ್ದಿ ಸಾಯಿಸಿ ಬೀಡೋಣ ಎಂದೂ ಜೀವ ಬೆದರಿಕೆ ಹಾಕುತ್ತಾ ಬರುತಿದ್ದರು. ಈಗ ಸುಮಾರು 5-6 ದಿವಸಗಳ ಹಿಂದೆ ನನ್ನ ಗಂಡನು ನಮ್ಮ ಮಗಳಿಗೆ ಮೋಟಾರ ಸೈಕಲ್ ಮೇಲೆ ಅಜಿಂಪ್ರೇಮಜಿ ಶಾಲೆಗೆ ಬೀಡಲು ಹೋಗುವಾಗ ಆರೋಪಿ ಸಿದ್ದಲಿಂಗಪ್ಪನು ಇದೇ ಆಸ್ತಿ ಸಂಬಂದ ತನ್ನ ಗಾಡಿಯಿಂದ ಗುದ್ದಿ ಸಾಯಿಸಲು ಬಂದಿರುತ್ತಾನೆ ಎಂದೂ ನನ್ನ ಗಂಡ ಶಾಲೆಗೆ ಬಿಟ್ಟು ಮರಳಿ ಬಂದಾಗ ನನಗೆ ಮತ್ತು ತನ್ನ ತಂದೆ ಹಾಗೂ ತಮ್ಮಂದಿರಿಗೆ ಹೇಳಿರುತ್ತಾನೆ. ಹೀಗಿದ್ದು ನಿನ್ನೆ ದಿವಸ ದಿನಾಂಕ: 15/03/2020 ರಂದು ರಾತ್ರಿ 8 ಗಂಟೆ ಸುಮಾರಿಗೆ ನನ್ನ ಗಂಡನು ಹೊರಗಡೆಯಿಂದ ಬಂದಿದ್ದು, ನನಗೆ ದಾರಿಯಲ್ಲಿ ಆರೋಪಿ ಸಿದ್ದಲಿಂಗಪ್ಪ ಮತ್ತು ಅವನ ಕಡೆಯವರು ಗಾಡಿ ಅಡ್ಡಹಾಕಲು ಬಂದಿದ್ದಾರೆ ಅವರ ಮನೆಗೆ ಹೋಗಿ ಕೇಳಿ ಬರುತ್ತೇನೆ ಎಂದೂ ಹೇಳಿ ಹೋದವನು ಸ್ವಲ್ಪ ಹೊತ್ತಿನಲ್ಲಿಯೇ ಮರಳಿ ಮನೆಗೆ ಬಂದು ಎತ್ತಿನ ಕೊಟ್ರಿಯಲ್ಲಿ ಹೋದನು. ಕೆಲ ಹೊತಿನ ನಂತರ 8-30 ಪಿಎಮ ಸುಮಾರಿಗೆ ನನ್ನ ಮಗ ಭರತ ಈತನು ಬಂದು ಅಮ್ಮಾ ಅಪ್ಪಾ ಎತ್ತಿನ ಕೊಟ್ರಿಯಲ್ಲಿ ಕ್ರಿಮಿನಾಶಕ ಎಣ್ಣೆ ಕುಡಿದು ಒದ್ದಾಡುತ್ತಿದ್ದಾನೆ ಎಂದು ಹೇಳಿದಾಗ ಗಾಬರಿಯಾದ ನಾನು ಮತ್ತು ನನ್ನ ಮಾವ, ಮೈದುನದವರು ಹೋಗಿ ನೋಡಲಾಗಿ ನನ್ನ ಗಂಡನು ಹತ್ತಿ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಎಣ್ಣೆ ಕುಡಿದು ಒದ್ದಾಡುತ್ತಿದ್ದನು. ಆಗ ಆತನಿಗೆ ನಮ್ಮ ಅಟೋದಲ್ಲಿಯೇ ಹಾಕಿಕೊಂಡು ಉಪಚಾರ ಕುರಿತು ಯಾದಗಿರಿಗೆ ತೆಗೆದುಕೊಂಡು ಹೊರಟೆವು. ದಾರಿಯಲ್ಲಿ ನನ್ನ ಗಂಡನಿಗೆ ಯಾಕೆ ಎಣ್ಣೆ ಕುಡಿದಿ ಎಂದು ಕೇಳಿದಾಗ ಅವನು ಹೇಳಿದ್ದೇನಂದರೆ  ಮನೆಗೆ ಬರುತ್ತಿದ್ದ ನನಗೆ ದಾರಿಯಲ್ಲಿ ಆರೋಪಿ ಸಿದ್ದಲಿಂಗಪ್ಪನು ಗಾಡಿ ಅಡ್ಡ ಹಾಕಿದ್ದಕ್ಕೆ ಅವರ ಮನಗೆ ಕೇಳಲು ಹೋದಾಗ ಸಿದ್ದಲಿಂಗಪ್ಪ ತಂದೆ ಸಿದ್ದಪ್ಪ, ಸಾಬಣ್ಣ, ಮಲ್ಲಪ್ಪ ಮತ್ತು ಲಕ್ಷ್ಮೀ ಗಂಡ ಸಿದ್ದಪ್ಪ ಈ ನಾಲ್ಕು ಜನರು ಸೇರಿ ಏ ಮಗನೆ ಸಿದ್ಯಾ ನಮ್ಮ ಮನೆ ತನಕ ಕೇಳಲು ಬರುತ್ತಿ ನಿನ್ನ ಇವತ್ತು ಬಿಡುವುದಿಲ್ಲಾ ಮಗನೆ ಬೆಳಗಾವುದರೊಳಗೆ ನಿನಗೆ ಖಲಾಸ್ ಮಾಡುತ್ತೇವೆ. ಇಲ್ಲಾ ನಿನ್ನಷ್ಟಕ್ಕೆ ನೀನು ಊರು ಬಿಟ್ಟು ಎಲ್ಲಿಯಾದರೂ ಹೋಗಿ ಸಾಯಬೇಕು ಅಲ್ಲಿ ತನಕ ನಿನಗೆ ಬಿಡುವುದಿಲ್ಲಾ ಎಂದು ನನಗೆ ಧಮಕಿ ಹಾಕಿದ್ದಾರೆ. ಆಗ ಅಲ್ಲಿದ್ದ ಮಹಾಲಕ್ಷ್ಮೀ ಮತ್ತು ಸಾಬಮ್ಮ ಇವರು ಬಂದು ನನಗೆ ಮನೆ ಕಡೆ ಕಳುಹಿಸಿರುತ್ತಾರೆ. ಕಾರಣ ನನಗೆ ಅವರು ಇವತ್ತು ಬೆಳಗಾಗುವದರೊಳಗೆ ಖಲಾಸ ಮಾಡುತ್ತೇವೆ ಇಲ್ಲ ನಿನ್ನಷ್ಟಕ್ಕೆ ನೀನು ಸತ್ತು ಹೋಗು ಎಂದು  ಪ್ರಚೋದನೆ ಮಾಡಿದ್ದರಿಂದ ಇದರಿಂದ ಮನನೊಂದ ನಾನು ಮನಗೆ ಬಂದು ನಮ್ಮ ಎತ್ತಿನ ಕೊಟ್ರಿಯಲ್ಲಿ ಇಟ್ಟ ಕ್ರಿಮಿನಾಷಕ ಎಣ್ಣೆ ಕುಡಿದಿರುತ್ತೇನೆ ಎಂದು ಹೇಳಿದನು. ನನ್ನ ಗಂಡನಿಗೆ ಉಪಚಾರ ಕುರಿತು ಜಿಜಿಹೆಚ್ ಯಾದಗಿರಿಗೆ ತಂದು ತೋರಿಸಿದಾಗ ಅವರು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಕಡೆ ಒಯ್ಯುವಂತೆ ಸಲಹೆ ನೀಡಿದ್ದರಿಂದ ಬೇರೆ ಕಡೆ ಒಯ್ಯಬೇಕು ಎನ್ನುತ್ತಿರುವಾಗ 10 ಪಿಎಮ್ ಸುಮಾರಿಗೆ ಯಾದಗಿರಿಯ ಸೌದಾಗರ್ ಆಸ್ಪತ್ರೆಯ ಸಮೀಪ ನನ್ನ ಗಂಡ ಮೃತಪಟ್ಟಿರುತ್ತಾನೆ. ಮೃತ ನನ್ನ ಗಂಡನ ಶವವನ್ನು ಜಿಜಿಹೆಚ್ ಯಾದಗಿರಿ ಶವಗಾರ ಕೋಣೆಯಲ್ಲಿ ತಂದು ಹಾಕಿರುತ್ತೇವೆ. ಕಾರಣ ನನ್ನ ಗಂಡನಿಗೆ ಸಾಯಲು ಪ್ರಚೋದನೆ ಮಾಡಿದ ಈ ಮೇಲ್ಕಂಡ 4 ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ. ನಮ್ಮ ಹಿರಿಯರಿಗೆ ವಿಚಾರ ಮಾಡಿ ಫಿರ್ಯಾಧಿ ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 27/2020 ಕಲಂ: 306 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 45/2020 ಕಲಂ: 87 ಕೆ.ಪಿ. ಆಕ್ಟ್:-  ದಿನಾಂಕ 16.03.2020 ರಂದು ಮಧ್ಯಾಹ್ನ 12:30 ಗಂಟೆಗೆ ಸುಮಾರಿಗೆ ಈ ಮೇಲ್ಕಂಡ ಆರೋಪಿತರು ಸಿದ್ದಾಪೂರ (ಬಿ )ಗ್ರಾಮದ ಹನುಮಾನ ದೇವರ ಗುಡಿಯ ಮುಂದಿನ ಕಟ್ಟೆಯ ಮೇಲೆ ಸಾರ್ವಜನಿಕ ಖೂಲ್ಲಾ ಸ್ಥಳದಲ್ಲಿ ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ್ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ಸಾಹೇಬರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ 04 ಆರೋಪಿತರ ವಶದಲ್ಲಿದ್ದ 2090/- ಮತ್ತು 52 ಇಸ್ಪೀಟ್ ಎಲೆಗಳನ್ನು ಸೇರಿ ಒಟ್ಟು 2090/-  ರೂ ಬೆಲೆಯ ಮುದ್ದೆ ಮಾಲನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ವರದಿ ನೀಡಿದ್ದು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆ ಗುನ್ನೆ ನಂ: 45/2020 ಕಲಂ: 87 ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

                               
ಭೀಗುಡಿ  ಠಾಣೆ ಗುನ್ನೆ ನಂ:- 04/2020 ಕಲಂ 107 ಸಿಆರ್ಪಿಸಿ:- ಇಂದು ದಿನಾಂಕ 16/03/2020 ರಂದು 5.30 ಪಿಎಮ್ ಕ್ಕೆ ಮದ್ರಕಿ ಗ್ರಾಮದ ಬೀಟ್ ಸಿಬ್ಬಂದಿಯವರಾದ ಶ್ರೀ ಶಿವನಗೌಡ ಸಿಪಿಸಿ 141 ರವರು ಠಾಣೆಗೆ ಹಾಜರಾಗಿ ಒಂದು ವರದಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ  ಇಂದು ದಿನಾಂಕ: 16/03/2020 ರಂದು ಸಾಯಂಕಾಲ 4 ಗಂಟೆಗೆ ಹಳ್ಳಿ ಭೇಟಿ ಕುರಿತು ಮದ್ರಕಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿಯ ವಾತಾವರಣದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನೆಂದರೆ ಈಗ ಸುಮಾರು 2 ತಿಂಗಳಿಂದ ಮದ್ರಕಿ ಗ್ರಾಮದ ಸೋಪಣ್ಣ ತಂದೆ ಈರಣ್ಣ ಮಂದರವಾಡ, ಶರಣಗೌಡ ತಂದೆ ಈರಣ್ಣ ಮಂದರವಾಡ, ಸಿದ್ದು ತಂದೆ ಅಮೃತ ಮಂದರವಾಡ ಇವರ ಮತ್ತು ಅದೇ ಗ್ರಾಮದ ಶಿವರಾಜ ತಂದೆ ಓಂಕಾರೆಪ್ಪ ಸಿಂದಗಿ, ಭೀಮರಾಯ ತಂದೆ ಶಿವರಾಜ ಸಿಂದಗಿ ಹಾಗು ಭೋಜಮ್ಮ ಗಂಡ ಶಿವರಾಜ ಸಿಂದಗಿ ಇವರ ನಡುವೆ ಮನೆ ಮುಂದಿನ ಜಾಗದ ವಿಷಯದಲ್ಲಿ ವೈಮನಸ್ಸು ಬೆಳೆದಿದ್ದು ಇರುತ್ತದೆ. ಸದರಿ ಜಾಗವು ತಮಗೆ ಸೇರಿದ್ದು ಅಂತ ಸೋಪಣ್ಣ ತಂದೆ ಈರಣ್ಣ ಮಂದರವಾಡ ಹಾಗು ಆತನ ಸಂಗಡಿಗರು ಅಂದಾಡುತ್ತಿದ್ದು ಅದರಂತೆ ಶಿವರಾಜ ತಂದೆ ಓಂಕಾರೆಪ್ಪ ಸಿಂದಗಿ ಹಾಗು ಆತನ ಸಂಗಡಿಗರು ಈ ಜಾಗ ನಮಗೆ ಸೇರಿದ್ದು ಅಂತ ಅಂದಾಡುತ್ತ ತಿರುಗಾಡುತ್ತಿರುತ್ತಾರೆ. ಈ ಎರಡೂ ಪಾಟರ್ಿಯ ಜನರ ನಡುವೆ ಮನೆ ಮುಂದಿನ ಜಾಗದ ವಿಷಯದಲ್ಲಿ ವೈಷಮ್ಯ ಬೆಳೆದಿರುತ್ತದೆ. ಸದರಿ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಎರಡೂ ಪಾಟರ್ಿಯ ಜನರು ಜಗಳ ಮಾಡಿಕೊಂಡು ಗ್ರಾಮದ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದ ಸಾರ್ವಜನಿಕ ಶಾಂತತೆ ಕಾಪಾಡುವ ಹಿತ ದೃಷ್ಟಿಯಿಂದ ಸೋಪಣ್ಣ ತಂದೆ ಈರಣ್ಣ ಮಂದರವಾಡ, ಶರಣಗೌಡ ತಂದೆ ಈರಣ್ಣ ಮಂದರವಾಡ, ಸಿದ್ದು ತಂದೆ ಅಮೃತ ಮಂದರವಾಡ ಮೂವರು ಸಾ:ಮದ್ರಕಿ ಇವರ ಮೇಲೆ ಮುಂಜಾಗ್ರತಾ ಕ್ರಮದ ಅವಶ್ಯಕತೆ ಇರುವದಾಗಿ ಕಂಡು ಬಂದಿದ್ದರಿಂದ 5.30 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ತಮ್ಮಲ್ಲಿ ವರದಿ ಸಲ್ಲಿಸಿದ್ದು ಇರುತ್ತದೆ ಅಂತ ಕೊಟ್ಟ ವರದಿ ಆಧಾರದ ಮೇಲಿಂದ ಠಾಣೆ ಪಿ.ಎ.ಆರ್ ನಂ: 04/2020 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಮುಂಜಾಗೃತಾ ಪ್ರಕರಣ ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.

ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 05/2020 ಕಲಂ 107 ಸಿಆರ್ಪಿಸಿ:-  ಇಂದು ದಿನಾಂಕ 16/03/2020 ರಂದು 5.30 ಪಿಎಮ್ ಕ್ಕೆ ಮದ್ರಕಿ ಗ್ರಾಮದ ಬೀಟ್ ಸಿಬ್ಬಂದಿಯವರಾದ ಶ್ರೀ ಶಿವನಗೌಡ ಸಿಪಿಸಿ 141 ರವರು ಠಾಣೆಗೆ ಹಾಜರಾಗಿ ಒಂದು ವರದಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ  ಇಂದು ದಿನಾಂಕ: 16/03/2020 ರಂದು ಸಾಯಂಕಾಲ 4 ಗಂಟೆಗೆ ಹಳ್ಳಿ ಭೇಟಿ ಕುರಿತು ಮದ್ರಕಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿಯ ವಾತಾವರಣದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನೆಂದರೆ ಈಗ ಸುಮಾರು 2 ತಿಂಗಳಿಂದ ಮದ್ರಕಿ ಗ್ರಾಮದ ಶಿವರಾಜ ತಂದೆ ಓಂಕಾರೆಪ್ಪ ಸಿಂದಗಿ, ಭೀಮರಾಯ ತಂದೆ ಶಿವರಾಜ ಸಿಂದಗಿ ಹಾಗು ಭೋಜಮ್ಮ ಗಂಡ ಶಿವರಾಜ ಸಿಂದಗಿ ಮತ್ತು ಗ್ರಾಮದ ಸೋಪಣ್ಣ ತಂದೆ ಈರಣ್ಣ ಮಂದರವಾಡ, ಶರಣಗೌಡ ತಂದೆ ಈರಣ್ಣ ಮಂದರವಾಡ, ಸಿದ್ದು ತಂದೆ ಅಮೃತ ಮಂದರವಾಡ  ಇವರ ನಡುವೆ ಮನೆ ಮುಂದಿನ ಜಾಗದ ವಿಷಯದಲ್ಲಿ ವೈಮನಸ್ಸು ಬೆಳೆದಿದ್ದು ಇರುತ್ತದೆ. ಸದರಿ ಜಾಗವು ತಮಗೆ ಸೇರಿದ್ದು ಅಂತ ಶಿವರಾಜ ತಂದೆ ಓಂಕಾರೆಪ್ಪ ಸಿಂದಗಿ ಹಾಗು ಆತನ ಸಂಗಡಿಗರು ಅಂದಾಡುತ್ತಿದ್ದು ಅದರಂತೆ  ಸೋಪಣ್ಣ ತಂದೆ ಈರಣ್ಣ ಮಂದರವಾಡ  ಹಾಗು ಆತನ ಸಂಗಡಿಗರು ಈ ಜಾಗ ನಮಗೆ ಸೇರಿದ್ದು ಅಂತ ಅಂದಾಡುತ್ತ ತಿರುಗಾಡುತ್ತಿರುತ್ತಾರೆ. ಈ ಎರಡೂ ಪಾಟರ್ಿಯ ಜನರ ನಡುವೆ ಮನೆ ಮುಂದಿನ ಜಾಗದ ವಿಷಯದಲ್ಲಿ ವೈಷಮ್ಯ ಬೆಳೆದಿರುತ್ತದೆ. ಸದರಿ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಎರಡೂ ಪಾಟರ್ಿಯ ಜನರು ಜಗಳ ಮಾಡಿಕೊಂಡು ಗ್ರಾಮದ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದ ಸಾರ್ವಜನಿಕ ಶಾಂತತೆ ಕಾಪಾಡುವ ಹಿತ ದೃಷ್ಟಿಯಿಂದ ಶಿವರಾಜ ತಂದೆ ಓಂಕಾರೆಪ್ಪ ಸಿಂದಗಿ, ಭೀಮರಾಯ ತಂದೆ ಶಿವರಾಜ ಸಿಂದಗಿ ಹಾಗು ಭೋಜಮ್ಮ ಗಂಡ ಶಿವರಾಜ ಸಿಂದಗಿ ಮೂವರು ಸಾ:ಮದ್ರಕಿ ಇವರ ಮೇಲೆ ಮುಂಜಾಗ್ರತಾ ಕ್ರಮದ ಅವಶ್ಯಕತೆ ಇರುವದಾಗಿ ಕಂಡು ಬಂದಿದ್ದರಿಂದ ಮರಳಿ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ತಮ್ಮಲ್ಲಿ ವರದಿ ಸಲ್ಲಿಸಿದ್ದು ಸದರಿ ವರದಿ ಆಧಾರದ ಮೇಲಿಂದ 6 ಪಿಎಮ್ ಕ್ಕೆ ಠಾಣೆ ಪಿ.ಎ.ಆರ್ ನಂ: 05/2020 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಮುಂಜಾಗೃತಾ ಪ್ರಕರಣ ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 91/2020 ಕಲಂ 87  ಕೆ.ಪಿ ಆಕ್ಟ:- ಇಂದು ದಿನಾಂಕ 16/03/2020 ರಂದು ರಾತ್ರಿ 21-15 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಚಂದ್ರಕಾಂತ ಪಿ.ಎಸ್.ಐ ಕಾಸು ಶಹಾಪೂರ ಪೊಲೀಸ್ ಠಾಣೆ ರವರು, 3 ಜನ ಆಪಾಧಿತರು ಹಾಗೂ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ,  ಇಂದು ದಿನಾಂಕ 16/03/2020ರಂದು ಸಾಯಂಕಾಲ 18-30 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಅಲ್ಫಾ ದಾಬಾದ  ಹಿಂದುಗಡೆ  ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಮಾಹಿತಿ ತಿಳಿಸಿದ ಮೇರೆಗೆ ಫಿಯರ್ಾದಿಯವರು, ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ದಾಳಿ ಮಾಡಿ ತನಿಖೇ ಕೈಕೊಳ್ಳಲು ಅನುಮತಿ ಪಡೆದುಕೊಂಡು  ಠಾಣೆಯಲ್ಲಿ ಹಾಜರಿದ್ದ ಅಧಿಕಾರಿ ಮತ್ತು ಸಿಬ್ಬಂದಿ, ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ ಕೆಎ-32-ಜಿ-618 ನೇದ್ದರಲ್ಲಿ  ಹೋಗಿ ಜೂಜಾಟ ಆಡುತಿದ್ದವರ ಮೇಲೆ ಸಾಯಂಕಾಲ 19-30 ಗಂಟೆಗೆ ದಾಳಿ ಮಾಡಿ 3 ಜನರನ್ನು ಹಿಡಿದು ಅವರ ಅಂಗ ಶೋಧನೆ ಮಾಡಿ ಅವರಿಂದ ನಗದು ಹಣ 1200=00 ರೂಪಾಯಿ ಹಾಗೂ ಜೂಜಾಟದಲ್ಲಿ ಪಟಕ್ಕಿಟ ನಗದು ಹಣ 620 ಹೀಗೆ ಒಟ್ಟು ಜೂಜಾಟಕ್ಕೆ ಬಳಸಿದ ನಗದು ಹಣ 1820=00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು ಸಾಯಂಕಾಲ 19-40 ಗಂಟೆಯಿಂದ 20-40 ಗಂಟೆಯ ಅವಧಿಯಲ್ಲಿ ಲೈಟಿನ ಬೆಳಕಿನಲ್ಲಿ  ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು, ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ 3 ಜನ ಆರೋಪಿತರ ವಿರುದ್ದ ವರದಿ ಸಲ್ಲಿಸಿದ್ದು, ಸದರಿ ವರದಿ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ 91/2020  ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.     
                                                                                                 
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 34/2020 279 337 338 ಐಪಿಸಿ:- ಇಂದು ದಿನಾಂಕ:16/03/2020 ರಂದು 18.55 ಗಂಟೆಗೆ ಪಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಟೈಪ್ ಮಾಡಿಸಿದ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ:13/03/2020 ರಂದು ಮುಂಜಾನೆ 11.00 ಗಂಟೆಯ ಸುಮಾರಿಗೆ ನಮ್ಮ ತಮ್ಮನಾದ ಗೋಪಾಲರಾವ ತಂದೆ ಕಿಶನರಾವ ಕುಲಕಣರ್ಿ ಸಾ:ವಜ್ಜಲ ಇವರು ತಾನು ನಡೆಯಿಸುವ ಸ್ಕೂಟಿ ನಂ. ಕೆಎ-33 ಎಕ್ಸ್-5823 ನೇದ್ದನ್ನು ಹುಣಸಗಿ ಶಂಕರ ರೈಸ್ ಮಿಲ್ ಹತ್ತಿರ ಮನಗೂಳಿ-ದೇವಾಪುರ ರಾಜ್ಯ ಹೆದ್ದಾರಿ ಮೇಲೆ ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿ ತನ್ನಷ್ಟಕ್ಕೆ ತಾನೆ ಬಿದ್ದು ಅಪಘಾತ ಮಾಡಿಕೊಂಡು ಭಾರಿ ರಕ್ತಗಾಯ ಮಾಡಿಕೊಂಡಿದ್ದು, ಸದರಿ ಗೋಪಾಲರಾವ ತಂದೆ ಕಿಶನರಾವ ಕುಲಕಣರ್ಿ ಸಾ:ವಜ್ಜಲ ಇವರ ಮೇಲೆ ಕಾನೂನು ಕ್ರಮ  ಅಂತಾ ಇತ್ಯಾದಿಯಾಗಿ ದೂರಿನ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ. 


ಹುಣಸಗಿ  ಪೊಲೀಸ್ ಠಾಣೆ ಗುನ್ನೆ ನಂ:- 35/2020 448 354 504 506ಐ.ಪಿ.ಸಿ:- ಇಂದು ದಿನಾಂಕ:16/03/2020 ರಂದು 19.35 ಗಂಟೆಗೆ ಪಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಟೈಪ್ ಮಾಡಿಸಿದ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ:14/03/2020 ರಂದು ನಾನು ನಮ್ಮ ಮನೆಯಲ್ಲಿದ್ದಾಗ ಮದ್ಯಾಹ್ನ 3 ಗಂಟೆಯ ಸುಮಾರಿಗೆ ನಮ್ಮ ತಮ್ಮನ ಮಗನಾದ ಧರ್ಮಪ್ಪ ತಂದೆ ಮಲ್ಲಪ್ಪ ಹಟ್ಟಿ ಸಾ:ಅಗ್ನಿ ಹಾವ:ಕಲಬುಗರ್ಿ ಈತನು ನಮ್ಮ ಮನೆಯೊಳಗೆ ಬಂದವನೇ ಏ ರಂಡಿ ನಿಂಗಿ ಈಗ ಒಂದು ತಿಂಗಳ ಹಿಂದೆ ನಮ್ಮ ಮನೆಗೆ ಬಂದು ಇದ್ದು, ಮರಳಿ ಊರಿಗೆ ಬರುವಾಗ ನಮ್ಮಪ್ಪನಿಗೆ ಬೈದು ಬರುತ್ತಿಯಾ ಸೂಳಿ ಅಂತಾ ನನಗೆ ಹೊಡೆಯಲು ಬಂದು  ನನ್ನ ಸೀರೆಯನ್ನು ಹಿಡಿದು ಎಳದೆ ಅವಮಾನ ಮಾಡಿದನು ಆಗ ಮನೆಯಲ್ಲಿದ್ದ ನಮ್ಮ ಚಿಕ್ಕಮ್ಮ ಬಾಲಮ್ಮ ಮ್ಯಾಗೇರಿ ಇವರು ಯಾಕೋ ಧರ್ಮಪ್ಪ ಹೀಗ ಮಾಡತಿ ನಿಮ್ಮ ಅತ್ತಿಗೆ ಎಂದು ಕೇಳಿದರೆ, ಏ ಮುದಕಿ ಸುಮ್ಮನೇ ಮೂಲ್ಯಾಗ ಕುಂಡರು ಇಲ್ಲಾ ಅಂದರ ನಿನಗೂ ಹೊಡೆದು ಕಲಾಸ ಮಾಡುತ್ತೇನೆ ಎಂದು ಜೀವದ ಬೆದರಿಕೆ ಹಾಕಿದ್ದು ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇತ್ಯಾದಿಯಾಗಿ ದೂರಿನ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ. 

 ನರಾಯಣಪೂರ ಠಾಣೆ ಗುನ್ನೆ ನಂ;- 18/2020 ಕಲಂ: 78 (3) ಕೆ.ಪಿ ಯಾಕ್ಟ್:- ಇಂದು ದಿನಾಂಕ:16.03.2020 ರಂದು 5:10 ಪಿ.ಎಮ್ಕ್ಕೆ ಸರಕಾರಿ ತಪರ್ೆ ಶ್ರೀ ಅಜರ್ುನಪ್ಪ ಅರಕೇರಾ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಠಾಣೆಯಲ್ಲಿ ಇದ್ದಾಗ 1:00 ಗಂಟೆಗೆ ನಾರಾಯಣಪೂರ ವಾಲ್ಮಿಕಿ ವೃತ್ತದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೆಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 18/2020 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
      ನಂತರ ಮಾನ್ಯ ಪಿಎಸ್ಐ ಸಾಹೇಬರು 8:00 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಆರೋಪಿ ಹಾಗೂ ಒಂದು ಬಾಲ್ ಪೆನನ್ನು, ಒಂದು ಅಂಕಿ ಸಂಖ್ಯೆಗಳನ್ನು ಬರೆದ ಮಟಕಾ ಚೀಟಿ ಹಾಗೂ ನಗದು ಹಣ 1650/- ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.

ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
1) ಗದ್ದೆಪ್ಪ ತಂದೆ ಕೃಷ್ಣಪ್ಪ ಹಾಲಭಾವಿ ವ|| 30ವರ್ಷ ಜಾ|| ಹಿಂದೂ ಬೇಡರ ಉ|| ಕೂಲಿ ಕೆಲಸ ಸಾ|| ನಾರಾಯಣಪೂರ



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!