ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 15/03/2020

By blogger on ಸೋಮವಾರ, ಮಾರ್ಚ್ 16, 2020



                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 15/03/2020

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 89/2020 ಕಲಂ 87 ಕೆಪಿ.ಯಾಕ್ಟ:- ಇಂದು ದಿನಾಂಕ: 15/03/2020 ರಂದು 8.45 ಎ.ಎಮ್.ಕ್ಕೆ ಮಾನ್ಯ ಶ್ರೀ ಹನುಮರಡ್ಡೆಪ್ಪ ಪಿ.ಐ ಶಹಾಪೂರ ರವರು ಠಾಣೆಗೆ ಬಂದು ಒಂದು ವರದಿಯೊಂದಿಗೆ ಜಪ್ತಿ ಪಂಚನಾಮೆ , ಮುದ್ದೆಮಾಲು ಮತ್ತು 7 ಜನ ಆರೋಪಿತರನ್ನು ತಂದು ಹಾಜರು ಪಡಿಸಿ ಕ್ರಮ ಜರುಗಿಸಲು ಸೂಚಿಸಿದ್ದು ಸದರಿ ವರದಿಯ ಸಾರಾಂಶವೇನಂದರೆ  ಇಂದು ದಿನಾಂಕ 15/03/2020 ರಂದು 6.30 ಎ.ಎಂಕ್ಕೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೇನಂದರೆ ಶಹಾಪೂರ ನಗರದ ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು 52 ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ದಾಳಿ ಮಾಡುವ ಸಲುವಾಗಿ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರಿಂದ 7.00 ಎಎಂ ಕ್ಕೆ ಪರವಾನಿಗೆ ಪಡೆದುಕೊಂಡು ಠಾಣೆಯಲ್ಲಿದ್ದ ಸಿಬ್ಬಂದಿಯವರಾದ ಶ್ರೀ ನಾರಾಯಣ ಹೆಚ್.ಸಿ 49, ಬಾಬು ಹೆಚ್.ಸಿ.162, ಗೋಕುಲಹುಸೇನ ಪಿಸಿ 172, ಭಾಗಣ್ಣ ಪಿಸಿ 194, ಮುತ್ತಪ್ಪ ಪಿಸಿ 118, ಶಿವರಾಜ ಪಿಸಿ 150 ಮತ್ತು ನಾಗರೆಡ್ಡಿ ಎಪಿಸಿ 161 ರವರಿಗೆ ಬಾತ್ಮೀ ವಿಷಯ ತಿಳಿಸಿ ಹೋಗಿ ದಾಳಿ ಮಾಡಬೇಕೆಂದು ಹೇಳಿ, ದಾಳಿ ಕುರಿತು ಹೋಗುವ ಸಂಬಂಧ ಭಾಗಣ್ಣ ಪಿಸಿ 194 ರವರ ಮುಖಾಂತರ ಇಬ್ಬರು ಪಂಚರಾದ 1) ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 26 ವರ್ಷ ಜಾ|| ಲಿಂಗಾಯತ ಉ|| ಕೂಲಿ ಸಾ|| ಹಳಿಸಗರ ಶಹಾಪೂರ 2) ಶ್ರೀ ಅಂಬ್ಲಪ್ಪ ತಂದೆ ಭಿಮಪ್ಪ ಐಕೂರ ವ|| 45ವರ್ಷ ಜಾ|| ಎಸ್.ಸಿ. ಉ|| ಕೂಲಿ ಸಾ|| ದೇವಿ ನಗರ ಶಹಾಪೂರ ಇವರಿಗೆ 7.10 ಎ.ಎಂಕ್ಕೆ ಠಾಣೆಗೆ ಕರೆದುಕೊಂಡು ಸದರಿಯವರಿಗೆ ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ಪಂಚರಾಗಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ನಂತರ ಸದರಿಯವರ ಮೇಲೆ ದಾಳಿ ಮಾಡಲು ನಾನು, ಪಂಚರು ಮತ್ತು ಸಿಬ್ಬಂದಿಯವರು ಕೂಡಿ ಠಾಣೆಯ ಜೀಪ ನಂ ಕೆಎ 33 ಜಿ 0138 ನೇದ್ದರಲ್ಲಿ ಕುಳಿತುಕೊಂಡು, ಠಾಣೆಯಿಂದ 7.15 ಎ.ಎಂ ಕ್ಕೆ ಹೊರಟು ಹಳಿಸಗರ ಏರಿಯಾದಲ್ಲಿನ ಹನುಮಾನ ಗುಡಿಯ ಹತ್ತಿರ 7.20 ಎ.ಎಂ.ಕ್ಕೆ ಹೋಗಿ ಜೀಪ ನಿಲ್ಲಿಸಿ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ 7 ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದು ಅದರಲ್ಲಿ ಒಬ್ಬ ಅಂದರ 50 ರೂ ಇನ್ನೊಬ್ಬ ಬಾಹರ 50 ರೂ. ಎಂದು ಹೇಳಿ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಸೇರಿ ಸುತ್ತುವರೆದು ಅವರ ಮೇಲೆ 7.25 ಎ.ಎಮ್ ಕ್ಕೆ ಒಮ್ಮೆಲೆ ದಾಳಿ ಮಾಡಿ ಹಿಡಿಯಲಾಗಿ 7 ಜನರು ಸಿಕ್ಕಿದ್ದು ಸದರಿಯವರಿಗೆ ವಿಚಾರಿಸಿ ಹೆಸರು ವಿಳಾಸ ಕೇಳಲಾಗಿ  1) ಸೈಯದ ಆರ್ಶದ ತಂದೆ ಸೈಯದ ಶಾಹಿ ವ|| 24ವರ್ಷ ಜಾ|| ಮುಸ್ಲಿಂ ಉ|| ಚಾಲಕ ಸಾ|| ಹಳಿಸಗರ ತಾ|| ಶಹಾಪೂರ 2) ಸೈಯದ ನಿಸಾರ ತಂದೆ ಸೈಯದ ಮುಕ್ತಿಹಾರ ವ|| 25ವರ್ಷ ಜಾ|| ಮುಸ್ಲಿಂ ಉ|| ಚಾಲಕ ಸಾ|| ಹಳಿಸಗರ ತಾ|| ಶಹಾಪೂರ 3) ಶೇಖ ಇಬ್ರಾಹಿಂ ತಂದೆ ಉಸ್ಮಾನ ಶೇಖ ವ|| 36ವರ್ಷ ಜಾ|| ಮುಸ್ಲಿಂ ಉ|| ಚಾಲಕ ಸಾ|| ಹಳಿಸಗರ ತಾ|| ಶಹಾಪೂರ 4) ತಿಮ್ಮಣ್ಣ ತಂದೆ ಅಮಲಪ್ಪ ಯಕ್ಷಿಂತಿ ವ|| 48ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ಹಳಿಸಗರ ತಾ|| ಶಹಾಪೂರ 5) ಭೀಮಣ್ಣ ತಂದೆ ಹಣಮಂತ ಗಾಂಜಿ ವ|| 22ವರ್ಷ ಜಾ|| ಬೇಡರ ಉ|| ಕೂಲಿ ಸಾ|| ಹಳಿಸಗರ ತಾ|| ಶಹಾಪೂರ 6) ಹಣಮಂತ ತಂದೆ ಭೀಮರಾಯ ಗುಂಡಾಪೂರ ವ|| 19ವರ್ಷ ಜಾ|| ಕುರುಬರ ಉ|| ಕೂಲಿ  ಸಾ|| ಹಳಿಸಗರ ತಾ|| ಶಹಾಪೂರ 7) ಭೀಮರಾಯ ತಂದೆ ಮಾಳಪ್ಪ ಅರಳಳ್ಳಿ ವ|| 25ವರ್ಷ ಜಾ|| ಕುರುಬರ ಉ|| ಕೂಲಿ ಸಾ|| ಹಳಿಸಗರ ತಾ|| ಶಹಾಪೂರ ಇದ್ದು ಇವರ ಅಂಗಶೋದನೆ ಮಾಡಲಾಗಿ 2450/- ರೂ ನಗದು ಹಣ ಸಿಕ್ಕಿದ್ದು ಎಲ್ಲರ ಮುಂದಿನ ಕಣದಲ್ಲಿ 600/-ರೂ. ಮತ್ತು 52 ಇಸ್ಪೀಟ ಎಲೆಗಳು ಇದ್ದು ಹೀಗೆ ಒಟ್ಟು 3050/- ರೂ. ನಗದು ಹಣ ಮತ್ತು 52 ಇಸ್ಪೀಟ ಎಲೆಗಳು ಸದರಿ ಮುದ್ದೆಮಾಲುಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ಸಿಕ್ಕ ಮುದ್ದೆಮಾಲನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 7.30 ಎ.ಎಮ್.ದಿಂದ 8.30 ಎ.ಎಂ ದ ವರೆಗೆ ಜಪ್ತಿ ಪಂಚನಾಮೆಯನ್ನು  ಮಾಡಿ ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡೆನು. ದಾಳಿಯಲ್ಲಿ ಸಿಕ್ಕ ಆರೋಪಿತರೊಂದಿಗೆ ಮರಳಿ ಠಾಣೆಗೆ 8.35 ಎ.ಎಂ ಕ್ಕೆ ಬಂದು 7 ಜನ ಆರೋಪಿತರು, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರುಪಡಿಸಿ ವರದಿ ತಯಾರಿಸಿ ಸದರಿ ಆರೋಪಿತರ ಮೇಲೆ ಮುಂದಿನ ಕ್ರಮ ಕೈಕೊಳ್ಳಲು 8.45 ಎ.ಎಂ.ಕ್ಕೆ ವರದಿ ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 89/2020 ಕಲಂ. 87 ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 90/2020 ಕಲಂ 32, 34 ಕೆ.ಇ ಆಕ್ಟ:- ಇಂದು ದಿನಾಂಕ 15-03-2020 ರಂದು 3:45 ಪಿ.ಎಮ್.ಕ್ಕೆ ಆರೋಪಿತನು ತನ್ನ  ದಾಬಾದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಫಿಯರ್ಾದಿದಾರರು ದಾಳಿಮಾಡಿ ಅವರಿಂದ 1] 90 ಎಮ್.ಎಲ್.ನ್ 83 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪಾಕೇಟ್ ಇದ್ದು, ಒಂದು 90 ಎಮ್.ಎಲ್ ನ ಮದ್ಯದ ಪಾಕೇಟಿನ ಕಿಮ್ಮತ್ತ 30 ರೂಪಾಯಿ 32 ಪೈಸೆ ಇರುತ್ತದೆ. ಒಟ್ಟು 83 ಮದ್ಯದ ಪಾಕೇಟಿನ ಕಿಮ್ಮತ್ತ 2516./- ರೂಪಾಯಿ 56 ಪೈಸೆ ಆಗುತ್ತದೆ.  2] 180 ಎಮ್.ಎಲ್.ನ್ 19 ಬ್ಯಾಗ ಪೇಪರ ವಿಸ್ಕಿ ಪಾಕೇಟ್ ಇದ್ದು, ಒಂದು 180 ಎಮ್.ಎಲ್ ನ ಮದ್ಯದ ಪಾಕೇಟಿನ ಕಿಮ್ಮತ್ತ 90 ರೂಪಾಯಿ 21 ಪೈಸೆ ಇರುತ್ತದೆ. ಒಟ್ಟು 19 ಮದ್ಯದ ಪಾಕೇಟಿನ ಕಿಮ್ಮತ್ತ 1713/- ರೂಪಾಯಿ 99 ಪೈಸೆ ಆಗುತ್ತದೆ. 3] 90 ಎಮ್.ಎಲ್.ನ್ 14 ಬ್ಯಾಗ ಪೇಪರ ವಿಸ್ಕಿ ಪಾಕೇಟ್ ಇದ್ದು, ಒಂದು 90 ಎಮ್.ಎಲ್ ನ ಮದ್ಯದ ಪಾಕೇಟಿನ ಕಿಮ್ಮತ್ತ 47 ರೂಪಾಯಿ 75 ಪೈಸೆ ಇರುತ್ತದೆ. ಒಟ್ಟು 14 ಮದ್ಯದ ಪಾಕೇಟಿನ ಕಿಮ್ಮತ್ತ 786.94./- ರೂಪಾಯಿ ಆಗುತ್ತದೆ.  4] 90 ಎಮ್.ಎಲ್.ನ್ 11 ಹೈವರ್ಡಸ್ ವಿಸ್ಕಿ ಪಾಕೇಟ್ ಇದ್ದು, ಒಂದು 90 ಎಮ್.ಎಲ್ ನ ಮದ್ಯದ ಪಾಕೇಟಿನ ಕಿಮ್ಮತ್ತ 30 ರೂಪಾಯಿ 32 ಪೈಸೆ ಇರುತ್ತದೆ. ಒಟ್ಟು 11 ಮದ್ಯದ ಪಾಕೇಟಿನ ಕಿಮ್ಮತ್ತ 333.52/- ರೂಪಾಯಿ ಆಗುತ್ತದೆ. 5] 650 ಎಮ್.ಎಲ್.ನ್ 15 ಕಿಂಗಫಿಷರ ಸ್ಟ್ರಾಂಗ ಬೀಯರ ಬಾಟ್ಲಿಗಳು ಇದ್ದು, ಒಂದು 650 ಎಮ್.ಎಲ್ ನ ಮದ್ಯದ ಬಾಟ್ಲಿಯ ಕಿಮ್ಮತ್ತ 145 ರೂಪಾಯಿ ಇರುತ್ತದೆ. ಒಟ್ಟು 15 ಮದ್ಯದ ಬಾಟ್ಲಿಯ ಕಿಮ್ಮತ್ತು 2175/-ರೂಪಾಯಿ   ಆಗುತ್ತದೆ.6] 180 ಎಮ್.ಎಲ್.ನ್ 6 ಎಮ್.ಸಿ. ರಮ್ ಪಾಕೇಟ ಇದ್ದು, ಒಂದು 180 ಎಮ್.ಎಲ್ ನ ಮದ್ಯದ ಪಾಕೇಟಿನ ಕಿಮ್ಮತ್ತ 90.21 ರೂಪಾಯಿ ಇರುತ್ತದೆ. ಒಟ್ಟು 6 ಮದ್ಯದ ಪಾಕೇಟಿನ ಕಿಮ್ಮತ್ತ್ತು 541/- ರೂಪಾಯಿ ಆಗುತ್ತದೆ. ಹೀಗೆ 1 ರಿಂದ 6 ರವರೆಗೆ ಒಟ್ಟು 8067 ರೂಪಾಯಿ 32 ಪೈಸೆ ಆಗುತ್ತದೆ. ಮತ್ತು ಸದರಿಯವನು ಮದ್ಯ ಮಾರಾಟ ಮಾಡಿದ ಹಣ 3400 ರೂಪಾಯಿಗಳು ಆತನಲ್ಲಿ ಇದ್ದು ಸದರಿ ಹಣವನ್ನು ವಶಪಡಿಸಿಕೊಂಡಿದ್ದು ಕ್ರಮ ಜರುಗಿಸಿದ್ದು ಇದೆ

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 06/2019 ಕಲಂ: 109 ಸಿ.ಆರ್.ಪಿ.ಸಿ:- ನಾನು ಶರಣಪ್ಪ ಪಿ.ಎಸ್.ಐ (ಅ.ವಿ) ಸುರಪೂರ ಪೊಲೀಸ್ಠಾಣೆತಮ್ಮಲ್ಲಿಕೊಡುವ ವರದಿ ಏನೆಂದರೆಇಂದು ದಿನಾಂಕ:15-02-2020 ರಂದು ಬೆಳಿಗ್ಗೆ ಸುಮಾರಿಗೆ ನಾನು ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮನೋಹರ ಹೆಚ್ಸಿ-105 2) ಶ್ರಿ ಸುಭಾಸ ಸಿಪಿಸಿ-174 ಸುರಪೂರ ಪೊಲೀಸ್ಠಾಣೆಇವರನ್ನು ಸಂಗಡಕರೆದುಕೊಂಡು ಸುರಪೂರ ಪಟ್ಟಣದಅಪರಾಧ ವಿಭಾಗದಕುರಿತು ಪೆಟ್ರೋಲಿಂಗಕರ್ತವ್ಯ ಮಾಡುತ್ತಾ ನಸುಕಿನ 5 ಗಂಟೆ ಸುಮಾರಿಗೆಕುಂಬಾರ ಪೇಠ ಹತ್ತಿರ ಹೋಗುತ್ತಿರುವಾಗಕುಂಬಾರ ಪೇಠಚೌಕದರಸ್ತೆಯ ಪಕ್ಕದಲ್ಲಿರುವಅಂಗಡಿ ಮುಗ್ಗಟ್ಟುಗಳ ಮುಂದುಗಡೆಒಬ್ಬ ವ್ಯಕ್ತಿಅನುಮಾನರೀತಿಯಲ್ಲಿತೀರುಗಾಡುತ್ತಿದ್ದು ನಮ್ಮನ್ನುಕಂಡಕೂಡಲೆ ಮರೆ ಮಾಚುತ್ತಾಓಡಲು ಪ್ರಯತ್ನಿಸುತ್ತಿರುವಾಗಅವನನ್ನು ಗಮನಿಸಿ ಸಿಬ್ಬಂಧಿಯವರ ಸಹಾಯದಿಂದಅವರನ್ನು ಹಿಡಿದು ವಿಚಾರಿಸಲಾಗಿಅವರುತಮ್ಮ ಹೆಸರುತಡವರಿಸುತ್ತಾ ಹೆಸರು ಹೇಳಲು ಹಿಂಜರಿಯುತ್ತಿದ್ದುದರಿಂದಅವರನ್ನು ಕೂಲಂಕುಷವಾಗಿ ವಿಚಾರಿಸಲಾಗಿ ಅವನು ತನ್ನ ಹೆಸರು  ಮಹ್ಮದ ಅಲೀ ತಂದೆ ಸಾಬುದ್ದಿನ ಕವಿತಾಳ ವಯಾ:26 ವರ್ಷ ಉ:ವಿಧ್ಯಾಥರ್ಿ ಜಾತಿ: ಮುಸ್ಲಿಂ ಸಾ: ಸಿದ್ದಾಪೂರ(ಬಿ) ತಾ:ಹುಣಸಗಿಅಂತಾ ತಿಳಿಸಿದ್ದು ಸದರಿಯವನನ್ನುಅಲ್ಲೇ ಬಿಟ್ಟರೆಯಾವುದಾದರೂ ಸ್ವತ್ತಿನಅಪರಾಧ ಮಾಡುಬಹುದೆಂದು ಮನಗಂಡು ಸದರಿಯವರನ್ನು ಸ್ಥಳದಲ್ಲೇ ವಶಕ್ಕೆ ತೆಗೆದುಕೊಂಡುಅವರ ವಿರುದ್ದ ಮುಂಜಾಗೃತಕ್ರಮಾಕ್ಕಾಗಿ ಮರಳಿ ಠಾಣೆಗೆ 08-30 ಗಂಟೆಗೆ ಬಂದು ಬಂದು ಸದರಿಯವರ ವಿರುದ್ದಠಾಣೆ ಪಿಎಆರ್ ನಂಬರ:06/2020 ಕಲಂ.109 ಸಿಆರ್ಪಿಸಿ ನೇದ್ದರಡಿಯಲ್ಲಿದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

                               
ಶೋರಾಪೂರ ಗ್ರಾಮೀಣ ಠಾಣೆ ಗುನ್ನೆ ನಂ:- 07/2020 ಕಲಂ: 110 (ಇ)&(ಜಿ) ಸಿ.ಆರ್.ಪಿ.ಸಿ:- ಮಾನ್ಯರವರ ಬಳಿಗೆ ಈ ಮೂಲಕ ನಿವೇದಿಸಿಕೊಳ್ಳುವುದೆನೆಂದರೆ, ನಾನು ಚೇತನ್ ಪಿ.ಎಸ್.ಐ (ಕಾ&ಸು) ಸುರಪೂರ ಪೊಲೀಸ ಠಾಣೆ, ಸರಕಾರಿ ತಪರ್ೆ ಫಿರ್ಯಾದಿ ಏನೆಂದರೆ, ಇಂದು ದಿನಾಂಕ: 27/02/2020 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ನಾನು ಸುರಪೂರ ಪಟ್ಟಣದಲ್ಲಿ ಪೆಟ್ರೋಲಿಂಗ ಮಾಡುತ್ತಾ ಕಾನಕೇರಿ ಏರಿಯಾದ ಹತ್ತಿರ 9 ಎ.ಎಂ.  ಸುಮಾರಿಗೆ ವಾಲ್ಮೀಕಿ ಚೌಕ್ ಹತ್ತಿರ ಹೋದಾಗ ವಾಲ್ಮೀಕಿ ಚೌಕದ ಸಾರ್ವಜನಿಕ ಸ್ಥಳದಲ್ಲಿ ಎದುರುದಾರನು ರಸ್ತೆಯಲ್ಲಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈಯ್ಯುತ್ತಾ, ಅಸಭ್ಯವಾಗಿ ವತರ್ಿಸುತ್ತಾ, ಕೈಯಲ್ಲಿ ಕಲ್ಲು ಹಿಡಿದುಕೊಂಡು ಇವತ್ತು ಧಮ್ಮಿದರೆ ನನ್ನ ಹತ್ತಿರ ಬನ್ನಿ ಅಂತಾ ಅನ್ನುತ್ತಾ ಹೋಗಿ ಬರುವ ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನುಂಟು ಮಾಡುತ್ತಾ ಗುಂಡಾ ಗೀರಿ ಪ್ರದರ್ಶನ ಮಾಡುತ್ತಾ ಹೋಗಿ ಬರುವ ಸಾರ್ವಜನಿಕರೊಂದಿಗೆ ಕಿರಕಿರಿ ಮಾಡುತ್ತಿದ್ದು ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಸಾರ್ವಜನಿಕರೊಂದಿಗೆ ಗಲಾಟೆ ಮಾಡಿ ಶಾಂತತೆಗೆ ಭಂಗ ಉಂಟು ಮಾಡುವ ಸಾದ್ಯತೆ ಕಂಡು ಬಂದಿದ್ದರಿಂದ ಸದರಿಯವನನ್ನು ಸ್ಥಳದಲ್ಲಿಯೇ ವಶಕ್ಕೆ ತಗೆದುಕೊಂಡು ಠಾಣೆಗೆ ತಂದಿದ್ದು ಇರುತ್ತದೆ. ಸದರಿಯವನು ಸಾರ್ವಜನಿಕರ ಶಾಂತತೆಗೆ ಭಂಗ ಉಂಟು ಮಾಡುವ ಸಾದ್ಯತೆ ಕಂಡು ಬಂದ್ದಿದ್ದರಿಂದ ಅವನ ವಿರುದ್ಧ ಮುಂಜಕಾಗೃತಾ ಕ್ರಮದ ಅಡಿಯಲ್ಲಿ ಕ್ರಮ ಜರೂಗಿಸುವ ಕುರಿತು ಸರಕಾರದ ತಪರ್ೆಯಾಗಿ ಠಾಣೆ ಪಿ.ಎ.ಆರ್ ನಂ. 07/2020 ಕಲಂ 110 (ಇ)&(ಜಿ) ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿ ಭಂದನ ಕ್ರಮ ಜರುಗಿಸಿದ್ದು, ಈ ವರದಿಯನ್ನು ನಿವೇಧಿಸಿಕೊಂಡಿದ್ದು ಇರುತ್ತದೆ

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 5/2020 174 ಸಿ.ಆರ್.ಪಿ.ಸಿ :- ದಿ:14/03/2020 ರಂದು 09.00 ಗಂಟೆಗೆ ಶ್ರೀಮತಿ. ಕಮಲಾಕ್ಷಿ ಗಂಡ ಬಸವರಾಜ ವಜ್ಜಲ ವಯ:35 ವರ್ಷ ಜಾ;ಹಿಂದುರೆಡ್ಡಿ ಉ:ಹೊಲಮನೆಕೆಲಸ ಸಾ: ಅರಕೇರಾ(ಜೆ) ತಾ:ಹುಣಸಗಿ ಜಿ:ಯಾದಗಿರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ನನ್ನ ಗಂಡನಿಗೆ ಅವರ ಪಿತ್ರಾಜರ್ಿತ ಹೊಲ ಸವರ್ೆ ನಂ.333/ಆ ರಲ್ಲಿ ಒಟ್ಟ 7 ಎಕರೆ ಜಮೀನದಲ್ಲಿ 2 ಎಕರೆ 13 ಗುಂಟೆ ಜಮೀನು ಪಾಲಿಗೆ ಬಂದಿದ್ದು ಇರುತ್ತದೆ. ಇನ್ನೊಂದು ಹೊಲ ಸವರ್ೆ ನಂ.142/ಆ ರಲ್ಲಿ ಒಟ್ಟ 6 ಎಕರೆ 22 ಗುಂಟೆ ಜಮೀನದಲ್ಲಿ 2 ಎಕರೆ 7 ಗುಂಟೆ ಜಮೀನು ಪಾಲಿಗೆ ಬಂದಿದ್ದು ಇರುತ್ತದೆ. ಸದರಿ ಜಮೀನಗಳಲ್ಲಿ ನನ್ನ ಗಂಡನು ಒಕ್ಕಲತನ ಕೆಲಸ ಮಾಡಿಕೊಂಡು ಇರುತ್ತಾನೆ. ಒಕ್ಕಲತನ ಕೆಲಸಕ್ಕಾಗಿ ಅವರ ತಾಯಿ ಹೆಸರನಲ್ಲಿ 50000-00 ರೂ ಬೆಳೆ ಸಾಲವನ್ನು ಹುಣಸಗಿ ಎಸ್.ಬಿ.ಐ ಬ್ಯಾಂಕಿನಲ್ಲಿ ತೆಗೆದುಕೊಂಡಿದ್ದು, ಮತ್ತು ಅರಕೇರಾ(ಜೆ)ದ ಸೋಸಾಯಿಟಿಯಲ್ಲಿ ನನ್ನ ತನ್ನ ಹೆಸರಿನಲ್ಲಿ 25000-00 ರೂ ಸಾಲವನ್ನು ಮಾಡಿದ್ದು ಇರುತ್ತದೆ. ನಮ್ಮ ಹೊಲಗಳಿಗೆ ಕೆನಾಲ ನೀರು ಬರುತ್ತಿದ್ದು, ಆದರೆ ನಮ್ಮ ಹೊಲಗಳು ಟೇಲ್ಎಂಡ್ ಇದ್ದುದರಿಂದಾ ಸರಿಯಾಗಿ ನೀರು ಬರುತ್ತಿರಲಿಲ್ಲಾ, ಈಗ 2-3 ವರ್ಷಗಳಿಂದಾ ಕೆನಾಲಕ್ಕೆ ಸರಿಯಾಗಿ ನೀರು ಬರದೇ ಇದ್ದುದ್ದಕ್ಕೆ ಬೆಳೆ ಬಾರದೆ ಇರುವದರಿಂದಾ, ನನ್ನ ಗಂಡನ ಊರಲ್ಲಿ ಕೆಲವರ ಕಡೆಯಿಂದಾ ಕೈಗಡ ಸಾಲವನ್ನು ಮಾಡಿದ್ದು ಇರುತ್ತದೆ. ಮಾಡಿದ ಸಾಲವನ್ನ ಹೇಗೆ ತಿರಿಸುವದು ಅಂತಾ ಚಿಂತೆ ಮಾಡುತ್ತಾ ದಿನಾಂಕ:14/03/2020 ರಂದು ರಾತ್ರಿ 7.00 ಗಂಟೆಯ ಸುಮಾರಿಗೆ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಇತ್ಯಾದಿ ದೂರಿನ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 32/2020 324 354 354, 354(ಎ) () ಐಪಿಸಿ:- ಇಂದು ದಿನಾಂಕ:15/03/2020 ರಂದು 20.30 ಗಂಟೆಗೆ ಕುಮಾರಿ ವಿಜಯಲಕ್ಷ್ಮೀ ದೊಡಮನಿ ಸಾ:ಕಲ್ಲದೇವನಳ್ಳಿ ಇವರು ಠಾಣೆಗೆ ಬಂದು ಒಂದು ಕೈಯಿಂದಾ ಬರೆಯಿಸಿದ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಸುಮಾರು ಒಂದು ವರ್ಷದಿಂದಾ ನಮ್ಮ ಸಂಭಂದಿಯಾದ ನಂದಪ್ಪ ಬೈಚಬಾಳ ಈತನು ನಾನು ಬಟ್ಟೆಯನ್ನು ತೊಳೆಯಲು ಹೋದಾಗ, ಶಾಲೆಗೆ ಹೋಗುವಾಗ, ನನ್ನ ಬೆನ್ನ ಬಿದ್ದು ನಿನ್ನ ಪೋನ ನಂಬರ ಕೊಡು ನಿಮ್ಮ ಮನೆಯಲ್ಲಿ ಯಾರ್ಯಾರು ಇರುತ್ತಾರೆ, ನೀನು ಒಬ್ಬಳೇ ಮನೆಯಲ್ಲಿ ಯಾವಗ ಇರುತ್ತಿ ಎಂದು ಮಾನಸಿಕ ತೊಂದರೆಯನ್ನು ಕೊಡುತ್ತಾ ಬಂದಿದ್ದು, ನನ್ನ ಮಯರ್ಾದಿಗೆ ಅಂಜಿ ನಾನು ಈ ವಿಷಯವನ್ನು ಯಾರ ಮುಂದೆ ಹೇಳಿರುವದಿಲ್ಲಾ, ಈಗ ಒಂದು ವಾರದ ಹಿಂದೆ ನಮ್ಮ ತಾಯಿಗೆ ಈ ವಿಷಯ ಹೇಳಿದ್ದೇನು, ದಿನಾಂಕ:14/03/2020 ರಂದು ನಾನು ಮದ್ಯಾಹ್ನ 2 ಗಂಟೆಯ ಸುಮಾರಿಗೆ ನಮ್ಮ ಮನೆಯಲ್ಲಿ ಒಬ್ಬಳೇ ಓದುತ್ತಾ ಕುಳಿತಾಗ ನಂದಪ್ಪ ಬೈಚಬಾಳ ಈತನು ನಮ್ಮ ಮನೆಯ ಮುಂದೆ ಬಂದು ತಿರುಗಾಡಿ ಸನ್ನೆ ಮಾಡುವದು, ಸಿಳ್ಳೆಹೊಡೆಯುವದು ಮಾಡುತ್ತಿದ್ದಾಗ ನಾನು ಮನೆಯಿಂದಾ ಹೊರಗೆ ಬಂದು ಯಾಕೆ ಹೀಗೆ ಮಾಡುತ್ತಿ ಎಂದು ಕೇಳಿದರೆ ನನ್ನ ಕೈ ಹಿಡಿದು ಎಳೆದು ನಿನ್ನ ಮೇಲೆ ನನ್ನ ಮನಸ್ಸಾಗಿದೆ ಬಾ ಎಂದು ಎಳೆಯ ಹತ್ತಿದಾಗ ನಾನು ಅವನ ಕೈಯಿಂದಾ ಕೊಸರಿಕೊಂಡು ಅವರ ತಾಯಿಗೆ ಹೇಳಲು ಹೊರಟಾಗ ಹಿಂದಿನಿಂದಾ ಬಂದು ನನ್ನ ತೆಲೆಯ ಹಿಂಭಾಗ ಹೊಡೆದು ರಕ್ತಗಾಯ ಮಾಡಿರುತ್ತಾನೆ ಅಂತಾ ಇತ್ಯಾದಿ ದೂರಿನ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ. 


ಹುಣಸಗಿ  ಪೊಲೀಸ್ ಠಾಣೆ ಗುನ್ನೆ ನಂ:- 143, 147 324 354 ಸಂಗಡ  149 ಐಪಿಸಿ143, 147 324 354 ಸಂಗಡ  149 ಐಪಿಸಿ:- ಇಂದು ದಿನಾಂಕ:15/03/2020 ರಂದು 23.00 ಗಂಟೆಗೆ ಕೆಂಚಮ್ಮ ಗಂಡ ಹುಲಗಪ್ಪ ಬೈಚಬಾಳ ಸಾ:ಕಲ್ಲದೇವನಳ್ಳಿ ಇವರು ಠಾಣೆಗೆ ಬಂದು ಒಂದು ಟೈಪ್ ಮಾಡಿಸಿದ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ:14/03/2020 ರಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಗನಾದ ನಂದಪ್ಪ ಇಬ್ಬರೂ ನಮ್ಮ ಮನೆಯ ಮುಂದೆ ಇದ್ದಾಗ ಆರೋಪಿತರು ಬಂದು ಹಳೆಯ ವೈಷಮ್ಯದಿಂದಾ ನಮ್ಮೋಂದಿಗೆ ಜಗಳ ತೆಗೆದು ನನಗೆ ಹಾಗೂ ನನ್ನ ಮಗನಿಗೆ ಕಲ್ಲು ಮತ್ತು ಬಡಿಗೆಯಿಂದಾ ಹೊಡೆಬಡೆ ಮಾಡಿದ್ದು ಇರುತ್ತದೆ. ನನ್ನ ಮಗನಿಗೆ ತೆಲೆಗೆ ರಕ್ತಗಾಯವಾಗಿ ಮೈಯಲ್ಲಾ ರಕ್ತ ಸೋರಿದ್ದು ಇರುತ್ತದೆ.  ಅಂತಾ ಇತ್ಯಾದಿಯಾಗಿ ದೂರಿನ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ. 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!