ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14/03/2020

By blogger on ಸೋಮವಾರ, ಮಾರ್ಚ್ 16, 2020



                                 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14/03/2020 

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 36/2020 ಕಲಂ 143, 147, 341, 504, 506 ಸಂ 149 ಐಪಿಸಿ:- ಇಂದು ದಿನಾಂಕ 14/03/2020 ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಜಲಾಲಸಾಬ ತಂದೆ ಖಾಸಿಂಸಾಬ ಮುಲ್ಲಾನೊರ ಸಾಃ ಹೊನಗೇರಾ ಇವರು ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದೆನೆಂದರೆ ನಾನು ಅಂದರೆ ಜಲಾಲ್ ಸಾಬ ತಂದೆ ಖಾಸೀಮ್ ಸಾಬ ವಯಸ್ಸು 62 ಉಧ್ಯೋಗ: ಒಕ್ಕಲುತನ ಸಾ: ಹೊನಗೇರಾ ಇದ್ದು, ಆದ ನಾನು ಸವರ್ೆ ನಂ 247 ರ ಜಮೀನನ್ನು ಸುಮಾರು 20 ವರ್ಷಗಳಿಂದ ಶಾಕುಂತಲಮ್ಮ ಗಂಡ ಬಸವಂತ್ರಾಯ ಮಾಲಿ ಪಾಟೀಲ್ ಮತ್ತು ವಿಶ್ವನಾಥರಡ್ಡಿ ತಂದೆ ಬಸವಂತ್ರಾಯ ಮಾಲಿ ಪಾಟೀಲ್ ರವರಿಂದ ಜಮೀನು ಉಳುಮೆ ಮಾಡುತ್ತಾ ಬಂದಿದ್ದೇನೆ ಮತ್ತು ಇವರಿಗೆ ಲೀಸ ಹಣವನ್ನು ಶಾಕುಂತಲಮ್ಮ ಇವರಿಗೆ ಕೊಡುತ್ತಾ ಬಂದಿದ್ದೇನೆ. ಆದರೆ ದೇವಮ್ಮ ಗಂಡ ವಿಶ್ವನಾಥರಡ್ಡಿ ಇವರು ದಿನಾಂಕ 20-01-2020 ರಂದು ನನ್ನ ಮೇಲೆ ಗ್ರಾಮೀಣ ಠಾಣೆ ಯಾದಗಿರಿಯಲ್ಲಿ ದೂರು ಕೊಟ್ಟು ಎಫ್.ಐ.ಆರ್ ನಂ 09/2020 ದಾಖಲಿಸಿ ಜಲಾಲ ಸಾಬ ಲೀಜ ಮಾಡುತ್ತಿದ್ದೇನೆ ಅಂತ ಎಫ್.ಐ.ಆರ್ ರಲ್ಲಿ ದಾಖಲಿಸಿ ಬೆಳೆ ಬೆಳೆತ್ತಿದ್ದಾನೆ.
   ಅಂತ ಹೇಳಿ ಯಾದಗಿರಿ ನ್ಯಾಯಾಲಯದಲ್ಲಿ ಸಿವಿಲ್ ದಾಖಲೆ ಸಲ್ಲಿಸಿದ್ದಾರೆ ಮತ್ತು ಅ ದಾವೆಯಲ್ಲಿ ಓಠಣ ಖಿಠ ಟಿಣಜಡಿಜಿಜಡಿಜ  ಅಂತಾ ಆದೇಶವಿದ್ದು, ಆದರೆ 1} ದೇವಮ್ಮ ಇವರು ರೌಡಿಗಳಾದ 2}ನಿಂಗಪ್ಪ ತಂದೆ ದೇವಿಂದ್ರಪ್ಪ ಗುಡಗುಡಿ 3}ಅಂಜಪ್ಪ ತಂದೆ ಯಲ್ಲಪ್ಪ ತಾತಳಗೇರಿ. 4}ವಡ್ಡಮಲ್ಲಪ್ಪ ತಂದೆ ನಿಂಗಪ್ಪ ಕಾಮಸ್ನಳ್ಳಿ, 5}ಕುಡ್ಡಬೀಮಣ್ಣ ತಾತಳಗೇರಿ ಮತ್ತು 6} ಕಳ್ಳುಹೊನ್ನಪ್ಪ ಕಾಮಸ್ನಳ್ಳಿ(ವಡ್ಡ) ಇವರಗಳ ಸಹಾಯದಿಂದ ದಿನಾಂಕ 27-02-2020 ರಂದು ಮಧ್ಯಾಹ್ನ 12 ಗಂಟೆಗೆ ಸವರ್ೆ ನಂ 247 ರಲ್ಲಿ ದೌರ್ಜನ್ಯದಿಂದ ಬಂದು ನನಗೆ ಮತ್ತು ನನ್ನ ಹೆಂಡತಿ ಮಕ್ಕಳಿಗೆ ಹೆದರಿಸಿ ಜೀವ ಬೆದರಿಕೆ ಹಾಕಿರುತ್ತಾರೆ ಮತ್ತು ನನಗೆ ಮತ್ತು ನನ್ನ ಹೆಂಡತಿ ಮಕ್ಕಳಿಗೆ ಹೊಡೆಯಲು ಬಂದು ನೀನು ಮತ್ತು ನಿನ್ನ ಹೆಂಡತಿ ಮಕ್ಕಳು ಹೊಲದಲ್ಲಿ ಕಾಲು ಇಡಬಾರದು ಅಂತಾ ಹೆದರಿಸಿ ಬೆದರಿಸಿ ನಾವು ಹೋಗುವ ದಾರಿಗೆ ಅಡ್ಡ ನಿಂತು ನಮ್ಮಗೆ ಹೆದರಿಸಿ ಜೀವ ಬೆದರಿಕೆ ಹಾಕಿ ನಮ್ಮೆಲ್ಲರನ್ನು ಹೊಲದಿಂದ ಹೊರಗಡೆ ಹಾಕಿರುತ್ತಾರೆ.  ನಾನು ಬಿತ್ತಿ ಬೆಳೆದ 50 ಕ್ವಿಂಟಾಲ ಜೋಳದ ರಾಶಿಯನ್ನು ಮಾಡಿಕೊಂಡು ಹೋಗಿರುತ್ತಾರೆ.
        ಆದ್ದರಿಂದ ಬಡವನಾಗಿರುವ ನಾನು ವರ್ಷ ಪೂತರ್ಿ ಹೊಲದಲ್ಲಿ ಉಳುಮೆ ಮಾಡಿ ಬಿತ್ತಿ ಬೆಳೆದ ಬೆಳೆಯನ್ನು ದೇವಮ್ಮ ನಾನೇ ಗೌಡಸಾನಿ ಅಂತಾ ದೌರ್ಜನ್ಯದಿಂದ ಊರಿನ ರೌಡಿಗಳಾದ 2}ನಿಂಗಪ್ಪ ತಂದೆ ದೇವಿಂದ್ರಪ್ಪ ಗುಡಗುಡಿ 3}ಅಂಜಪ್ಪ ತಂದೆ ಯಲ್ಲಪ್ಪ ತಾತಳಗೇರಿ. 4}ವಡ್ಡಮಲ್ಲಪ್ಪ ತಂದೆ ನಿಂಗಪ್ಪ ಕಾಮಸ್ನಳ್ಳಿ, 5}ಕುಡ್ಡಬೀಮಣ್ಣ ತಾತಳಗೇರಿ ಮತ್ತು 6} ಕಳ್ಳುಹೊನ್ನಪ್ಪ ಕಾಮಸ್ನಳ್ಳಿ(ವಡ್ಡ) ಇವರಗಳ ಸಹಾಯದಿಂದ 50 ಕ್ವಿಂಟಾಲ ಜೋಳದ ರಾಶಿಯನ್ನು ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ಈ ಮೇಲ್ಕಂಡವರ ಮೇಲೆ ಕಾನೂನು ಪ್ರಕಾರ ಎಫ್.ಐ.ಆರ್ ದಾಖಲಿಸಿಕೊಂಡು ನನಗೆ ಕಾನೂನು ರಕ್ಷಣೆ ಕೊಡಬೇಕೆಂದು ತಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 36/2020 ಕಲಂ 143, 147, 341, 504, 506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 27/2020 ಕಲಂ: 32, 34 ಕೆ.ಇ ಆಕ್ಟ್ :- ಇಂದು ದಿನಾಂಕ: 14.03.2020 ರಂದು 4:30 ಪಿ.ಎಮ್ ಗಂಟೆಗೆ ಪಿಎಸ್ಐ ಸಾಹೇಬರು ಠಾಣೆಗೆ ಹಾಜರಾಗಿ ತಾವು ಪುರೈಸಿದ ಜಪ್ತಿ ಪಂಚನಾಮೆ ಹಾಗೂ ಜ್ಞಾಪನಾ ಪತ್ರ ಮತ್ತು ಮುದ್ದೇಮಾಲನ್ನು ಹಾಪಡಿಸಿದ್ದು, ಪಿಎಸ್ಐ ರವರು ಹಾಜಪಡಿಸಿದ ಜಪ್ತಿ ಪಂಚನಾಮೆ ಹಾಗೂ ಜ್ಞಾಪನಾ ಪತ್ರ ಸಾರಾಂಶವೆನೆಂದರೆ,ಇಂದು ದಿನಾಂಕ: 14.03.2020 ರಂದು 2:00 ಪಿ.ಎಮ್ ಗಂಟೆಗೆ ನಾನು ಕಕ್ಕೇರಾ ಉಪ ಠಾಣೆಯಲ್ಲಿದ್ದಾಗ ಕಕ್ಕೇರಾ ಪಟ್ಟಣದ ಯುಕೆಪಿ ಕ್ಯಾಂಪ್ ಮುಂದಿನ ಬಲಶೆಟ್ಟಿಹಾಳ- ಶಾಂತಪೂರ ಕ್ರಾಸ್ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಅನಧಿಕೃತವಾಗಿ ಯಾವುದೇ ದಾಖಲಾತಿ ಇಲ್ಲದೇ ಮತ್ತು ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯ ಮಾರಾಟ ಮಾಡುತ್ತಿರುವದಾಗಿ ಖಚಿತ ಬಾತ್ಮಿ ಬಂದಿದ್ದು. ಸದರಿ ದಾಳಿಗೆ ಮಾಡುವ ಕುರಿತು  ಇಬ್ಬರು ಪಂಚರಿಗೆ ಕರೆದುಕೊಂಡು ಬರಲು ಯಲ್ಲಪ್ಪ ಹೆಚ್ಸಿ-117 ರವರಿಗೆ ಕಳುಹಿಸಿದ್ದು. ಯಲ್ಲಪ್ಪ ಹೆಚ್ಸಿ-117 ರವರು ಪಂಚರನ್ನಾಗಿ ರಾಘವೇಂದ್ರ ತಂದೆ ಹಳ್ಳೆಪ್ಪ ದಾಸರ, ಅಂಬ್ರೇಶ ತಂದೆ ಪಿಡ್ಡಪ್ಪ ಬಂಡೇಬಾಯಿ ಸಾ: ಇಬ್ಬರೂ ಕಕ್ಕೇರಾ  ಇವರಿಗೆ  2:10 ಪಿಎಮ್ ಕ್ಕೆ ಉಪ ಠಾಣೆಗೆ ಕರೆದುಕೊಂಡು ಬಂದಿದ್ದು. ಸದರಿ  ಪಂಚರಿಗೆ ವಿಷಯ ತಿಳಿಸಿ ಪಂಚರಾಗಲು ಕೇಳಿಕೊಂಡು ಸದರಿ ಪಂಚರು  ಒಪ್ಪಿಕೊಂಡ ಮೇರೆಗೆ ನಾನು, ಪಂಚರು ಮತ್ತು ಸಿಬ್ಬಂದಿಯವರಾದ ಯಲ್ಲಪ್ಪ ಹೆಚ್ಸಿ-117, ಬಸನಗೌಡ ಹೆಚ್ ಸಿ 100, ಸಣಕೆಪ್ಪ ಹೆಚ್ಸಿ-27, ಪ್ರಬುಗೌಡ ಹೆಚ್ಸಿ-120 ರವರನ್ನು ಕರೆದುಕೊಂಡು ಉಪ ಠಾಣೆಯಿಂದ ಠಾಣೆ ಜೀಪ್ ನಂ ಕೆಎ-33 ಜಿ-0165 ನೇದ್ದರಲ್ಲಿ  2:15 ಪಿಎಮ್ ಕ್ಕೆ  ಬಿಟ್ಟು, ಬಾತ್ಮಿ ಬಂದು ಸ್ಥಳಕ್ಕೆ 2:20 ಪಿಎಮ್ ಕ್ಕೆ ತಲುಪಿ ಕಕ್ಕೇರಾ ಪಟ್ಟಣದ ಯುಕೆಪಿ ಕ್ಯಾಂಪ್ ಹತ್ತಿರ ಸ್ವಲ್ಪ ದೂರದಲ್ಲಿ  ಜೀಪನ್ನು ಮರೆಯಾಗಿ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಒಬ್ಬನು  ರಸ್ತೆಯ ಪಕ್ಕದಲ್ಲಿ ಆಕ್ರಮ ಮದ್ಯ ಮಾರಾಟ ಮಾಡುವದು ಖಾತ್ರಿಯಾದ ಮೇಲೆ 2:25 ಪಿಎಮ್ ಕ್ಕೆ ದಾಳಿ ಮಾಡಲಾಗಿ ನಮ್ಮನ್ನು  ನೋಡಿ ಮದ್ಯ ಮಾರಾಟ ಮಾಡುತ್ತಿರುವನು ಓಡಿ ಹೋಗಿದ್ದು ನಾನು ಮತ್ತು ಸಿಬ್ಬಂದಿಯವರು ಬೆನ್ನು ಹತ್ತಿದರು ಸಿಗಲಿಲ್ಲ ಓಡಿ ಹೋದವನ ಬಗ್ಗೆ ಅಲ್ಲಿಯೆ ಇದ್ದ ರಾಜು ತಂದೆ ಹಣಮಂತಪ್ಪ ಬೊಮ್ಮನಳ್ಳಿ, ಬಸವರಾಜ ತಂದೆ ನಂದಪ್ಪ ಕಂಚಿ ರವರಿಗೆ ವಿಚಾರಿಸಿ ಕೇಳಲಾಗಿ ಓಡಿ ಹೋದವನ ಹೆಸರು ಮದನಸಾಬ ತಂದೆ ಹಸನಸಾಬ ನದಾಪ್ ವ:28 ವರ್ಷ ಉ: ಕಿರಾಣಿ ವ್ಯಾಪಾರ ಸಾ: ಕಕ್ಕೇರಾ ಯುಕೆಪಿ ಕ್ಯಾಂಪ್ ಅಂತಾ ತಿಳಿಸಿದ್ದು. ಸದರಿಯವರು ಹೋಗುವಾಗ ಮಾರಾಟ ಮಾಡುತ್ತಿದ್ದ ಮದ್ಯ ಪೌಚಗಳಿದ್ದ ರಟ್ಟಿನ ಬಾಕ್ಸ್ನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಸದರಿ ಮದ್ಯದ ಪೌಚ್ಗಳಿದ್ದ ರಟ್ಟಿನ ಬಾಕ್ಸನ್ನು ಪಂಚರ ಸಮಕ್ಷಮದಲ್ಲಿ ಪರಿಶೀಲಿಸಿ ನೋಡಲಾಗಿ ಔಡಿರಟಿಚಿಟ ಅಠಛಿಜ,  180 ಟಟ  ನ 60.64 ಬೆಲೆಯುಳ್ಳ ಬಿಳಿ ಮತ್ತು ಕೆಂಪು ಬಣ್ಣದ ಮಧ್ಯದ ತುಂಬಿದ 38 ಪೌಚಗಳಿದ್ದು.  ಎಲ್ಲಾ 38 ಮಧ್ಯ ತುಂಬಿದ ಪೌಚಗಳಒಟ್ಟು ಕಿಮ್ಮತು 2304.32/- ರೂಪಾಯಿಗಳು ಆಗುತ್ತಿದ್ದು.  ಎಲ್ಲಾ 38 ಮಧ್ಯ ತುಂಬಿದ ಪೌಚಗಳನ್ನು  ಒಂದು ರಟ್ಟಿನ ಡಬ್ಬಿಯಲ್ಲಿ ಹಾಕಿ ಈ ರಟ್ಟಿನ ಡಬ್ಬಿಯನ್ನು  ಬಿಳಿಯ ಬಣ್ಣದ ಬಟ್ಟೆಯಲ್ಲಿ ಹಾಕಿ ಕಟ್ಟಿ ದಾರದಿಂದ  ಹೊಲೆದು ಈ ಡಬ್ಬಿಗೆ ಎಡಿಬಿ ಅಂತಾ ಇಂಗ್ಲೀಷ ಅಕ್ಷರದಿಂದ ಶಿಲ್ ಮಾಡಿ ಅವುಗಳಿಗೆ ನನ್ನ ಮತ್ತು ಪಂಚರ ಸಹಿ ನಿಶಾನೆ ಚೀಟಿ ಅಂಟಿಸಿ ಜಪ್ತುಮಾಡಿದ್ದು ಸದರಿ ಜಪ್ತಿ ಪಂಚನಾಮೆಯನ್ನು 2:25 ಪಿಎಮ್ ದಿಂದ 3:25 ಪಿಎಮ್ ದವರೆಗೆ ಸ್ಥಳದಲ್ಲಿಯೇ ಕುಳಿತು ಪೂರೈಸಿದ್ದು. ಮುದ್ದೆ ಮಾಲಿನೊಂದಿಗೆ 4:30 ಪಿಎಮ್ಕ್ಕೆ ಠಾಣೆಗೆ ಬಂದು ಸದರಿ ಆರೋಪಿತನ ಮೇಲೆ ಕ್ರಮ ಜರುಗಿಸಲು ಈ ಜ್ಞಾಪನ ಪತ್ರದೊಂದಿಗೆ ಸೂಚಿಸಿದ್ದು. ಪಿ.ಎಸ್.ಐ ಸಾಹೇಬರು ರವರು ಹಾಜರು ಪಡಿಸಿದ ಪಂಚನಾಮೆ ಮತ್ತು ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 27/2020 ಕಲಂ: 32, 34 ಕೆ.ಇ ಎಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.                                                   

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 31/2019 ಕಲಂ 78 (3) ಕೆ.ಪಿ ಕಾಯ್ದೆ:- ಇಂದು ದಿನಾಂಕ: 14-03-2020 ರಂದು 04-30 ಪಿಎಮ್ ಕ್ಕೆ ಪಿ.ಎಸ್.ಐ ರವರು ಠಾಣೆಗೆ ಬಂದು ಸೈದಾಪೂರದ ಬಸನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮದ್ಯಾಹ್ನ 03-15 ಗಂಟೆಗೆ ಮಟಕಾ   ಜೂಜಾಟದ ದಾಳಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.31/2020 ಕಲಂ. 78 (3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

                               
ಶೋರಾಪೂರ ಗ್ರಾಮೀಣ ಠಾಣೆ ಗುನ್ನೆ ನಂ:- 10/2020 ಕಲಂ: 110 (ಇ)&(ಜಿ) ಸಿ.ಆರ್.ಪಿ.ಸಿ:- ಮಾನ್ಯರವರ ಬಳಿಗೆ ಈ ಮೂಲಕ ನಿವೇದಿಸಿಕೊಳ್ಳುವುದೆನೆಂದರೆ, ನಾನು ಶ್ಯಾಮಸುಂದರ ಎ.ಎಸ್.ಐ ಶೋರಾಪೂರ ಪೊಲೀಸ ಠಾಣೆ ಸರಕಾರಿ ತಪರ್ೆ ಫಿರ್ಯಾದಿ ಏನೆಂದರೆ, ಇಂದು ದಿನಾಂಕ: 13/03/2020 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ನಾನು ಸುರಪೂರ ಪಟ್ಟಣದಲ್ಲಿ ಪೆಟ್ರೋಲಿಂಗ ಮಾಡುತ್ತಾ ಗಾಂಧಿ ಚೌಕ್ ಹತ್ತಿರ 2-20 ಪಿ.ಎಂ.  ಸುಮಾರಿಗೆ ಗಾಂಧಿ ಚೌಕ್ ಹತ್ತಿರ ಹೋಗುತ್ತಿದ್ದಾಗ ಗಾಂಧಿ ಚೌಕ್ದ ಸಾರ್ವಜನಿಕ ಸ್ಥಳದಲ್ಲಿ ಎದುರುದಾರನು ರಸ್ತೆಯಲ್ಲಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈಯ್ಯುತ್ತಾ, ಅಸಭ್ಯವಾಗಿ ವತರ್ಿಸುತ್ತಾ, ಕೈಯಲ್ಲಿ ಕಲ್ಲು ಹಿಡಿದುಕೊಂಡು ಇವತ್ತು ಧಮ್ಮಿದರೆ ನನ್ನ ಹತ್ತಿರ ಬನ್ನಿ ಅಂತಾ ಅನ್ನುತ್ತಾ ಹೋಗಿ ಬರುವ ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನುಂಟು ಮಾಡುತ್ತಾ ಗುಂಡಾ ಗೀರಿ ಪ್ರದರ್ಶನ ಮಾಡುತ್ತಾ ಹೋಗಿ ಬರುವ ಸಾರ್ವಜನಿಕರೊಂದಿಗೆ ಕಿರಕಿರಿ ಮಾಡುತ್ತಿದ್ದು ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಸಾರ್ವಜನಿಕರೊಂದಿಗೆ ಗಲಾಟೆ ಮಾಡಿ ಶಾಂತತೆಗೆ ಭಂಗ ಉಂಟು ಮಾಡುವ ಸಾದ್ಯತೆ ಕಂಡು ಬಂದಿದ್ದರಿಂದ ಸದರಿಯವನನ್ನು ಸ್ಥಳದಲ್ಲಿಯೇ ವಶಕ್ಕೆ ತಗೆದುಕೊಂಡು ಠಾಣೆಗೆ ತಂದಿದ್ದು ಇರುತ್ತದೆ. ಸದರಿಯವನು ಸಾರ್ವಜನಿಕರ ಶಾಂತತೆಗೆ ಭಂಗ ಉಂಟು ಮಾಡುವ ಸಾದ್ಯತೆ ಕಂಡು ಬಂದ್ದಿದ್ದರಿಂದ ಅವನ ವಿರುದ್ಧ ಮುಂಜಕಾಗೃತಾ ಕ್ರಮದ ಅಡಿಯಲ್ಲಿ ಕ್ರಮ ಜರೂಗಿಸುವ ಕುರಿತು ಸರಕಾರದ ತಪರ್ೆಯಾಗಿ ಠಾಣೆ ಪಿ.ಎ.ಆರ್ ನಂ. 10/2020 ಕಲಂ 110 (ಇ)&(ಜಿ) ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿ ಭಂದನ ಕ್ರಮ ಜರುಗಿಸಿದ್ದು, ಈ ವರದಿಯನ್ನು ನಿವೇಧಿಸಿಕೊಂಡಿದ್ದು ಇರುತ್ತದೆ.

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 16/2020 ಕಲಂ: 143, 147, 148, 341, 323, 324, 504, 506, ಸಂಗಡ 149 ಐಪಿಸಿ.:-:-        ಇಂದು ದಿನಾಂಕ 14/03/2020 ರಂದು ಬೇಳಿಗ್ಗೆ 9:00 ಗಂಟೆಗೆ ರಾಜನಕೋಳುರ ಆಸ್ಪತ್ರೆಯಿಂದ ಎಂ.ಎಲ್.ಸಿ ವಸುಲಾಗಿದ್ದು ಸದರಿ ಎಂ.ಎಲ್.ಸಿ ವಿಚಾರಣೆ ಕುರಿತು 11:00 ಎ.ಎಂ ಕ್ಕೆ ರಾಜನಕೋಳೂರ ಸರಕಾರಿ ಆಸ್ಪತ್ರೆಗೆ ಬೇಟಿನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಪಿಯರ್ಾದಿ ಗದ್ದೆಪ್ಪ ತಂದೆ ಹಣಮಂತ ಹುಲಿಕೇರಿ ರವರಿಗೆ ವಿಚಾರಿಸಿ 12:00 ಪಿ.ಎಂ ಕ್ಕೆ ರಾಜನಕೋಳುರ ಸರಕಾರಿ ಆಸ್ಪತ್ರೆಯಲ್ಲಿ ಹೇಳಿಕೆ ಪಡೆದುಕೊಂಡು ಮರಳಿ 1:00 ಪಿ.ಎಂ ಕ್ಕೆ ಠಾಣೆಗೆ ಬಂದಿದ್ದು ಪಿಯರ್ಾದಿ ಹೇಳಿಕೆಯ ಸಾರಾಂಶವೆನಂದರೆ ನಾವು ನಮ್ಮ ಅಣ್ಣತಮ್ಮಕೀಯ ನಮ್ಮ ದೊಡ್ಡಪ್ಪ ಯಮನಪ್ಪ ತಂದೆ ದೊಡ್ಡಬಸಪ್ಪ ಹುಲಿಕೇರಿ ಇವರ 4 ಎಕರೆ ಹೊಲದಲ್ಲಿ 2 ಎಕರೆ ಹೊಲವನ್ನು ಈಗ ಸುಮಾರು 20 ವರ್ಷಗಳ ಹಿಂದೆ ಕೊಂಡುಕೊಂಡಿದ್ದು ಇರುತ್ತದೆ. ನಾವು ಯಾವಾಗಲು ಕೊಂಡುಕೊಂಡ ಹೊಲಕ್ಕೆ ಹೋಗಬೇಕಾದರೆ ನಮ್ಮ ದೊಡ್ಡಪ್ಪ ಯಮನಪ್ಪ ರವರ ಉಳಿದ ಎರಡು ಎಕರೆ ಹೊಲದ ಬದುವಿನಂದಲೇ ಹೋಗುತ್ತಿದ್ದೇವೆ ಹೀಗಿದ್ದು ನಿನ್ನೆ ದಿನಾಂಕ 13/03/2020 ರಂದು ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ನಾನು ನಮ್ಮ ಟ್ರ್ಯಾಕ್ಟರನ್ನು ತಗೆದುಕೊಂಡು ನಾವು ಕೊಂಡುಕೊಂಡ ನಮ್ಮ ದೊಡ್ಡಪ್ಪ ಯಮನಪ್ಪ ರವರ ಹೊಲಕ್ಕೆ ಗಳೆ ಹೊಡೆಯಲು ನಮ್ಮ ದೊಡ್ಡಪ್ಪ ಯಮನಪ್ಪ ರವರ ಹೊಲದ ದಾರಿಯ ಮೇಲಿಂದ ಹೋಗುತ್ತಿದ್ದಾಗ ನಮ್ಮ ದೊಡ್ಡಪ್ಪ ಯಮನಪ್ಪ ರವರ ಅಣ್ಣನ ಮಕ್ಕಳಾದ 1) ಶರಣಪ್ಪ ತಂದೆ ಹಣಮಂತ ಹುಲಿಕೇರಿ 2) ಅಮರಪ್ಪ ತಂದೆ ಶರಣಪ್ಪ 3) ಬಸಪ್ಪ @ ಮುತ್ತಪ್ಪ ತಂದೆ ಶರಣಪ್ಪ 4) ಸಂಗಪ್ಪ ತಂದೆ ಹಣಮಂತ್ರಾಯ 5) ಸಣ್ಣ ಮುತ್ತಪ್ಪ ತಂದೆ ಸಂಗಪ್ಪ ಹುಲಿಕೇರಿ 6) ಪರಸಪ್ಪ ತಂದೆ ಸಂಗಪ್ಪ 7) ಮಲ್ಲಮ್ಮ ಗಂಡ ಶರಣಪ್ಪ 8) ಸತ್ಯವ್ವ ಗಂಡ ಅಂಬ್ರಪ್ಪ 9) ಯಲ್ಲವ್ವ ಗಂಡ ಬಸಪ್ಪ @ ಮುತ್ತಪ್ಪ ಇವರೆಲ್ಲರೂ ಕೂಡಿ ನನ್ನನ್ನು ತಡೆದು ನಿಲ್ಲಿಸಿ ನಿಮಗೆ ಇಲ್ಲಿ ದಾರಿ ಇರುವದಿಲ್ಲ ನೀವು ಇಲ್ಲಿ ತಿರುಗಾಡ ಬೇಡಿರಿ ಅಂತಾ ಅಂದರು ಅದಕ್ಕೆ ನಾನು ನನ್ನ ಟ್ರ್ಯಾಕ್ಟರನ್ನು ದಾರಿಯ ಮೇಲೆ ನಿಲ್ಲಿಸಿ ಕೆಳಗೆ ಇಳಿದು ಹೊಗಿ ಶರಣಪ್ಪ ತಂದೆ ಹಣಮಂತ ಹುಲಿಕೇರಿ ರವರಿಗೆ ನಾವು ಯಾವಾಗಲು ಇಲ್ಲಿಂದಲೆ ತಿರುಗಾಡುತ್ತೆವೆ ಇವತ್ತು ಬೇಡ ಅಂದರೆ ಹೇಗೆ ಅಂತಾ ಅಂದೆನು ಅದಕ್ಕೆ ಶರಣಪ್ಪ ರವರು ಬೋಸುಡಿ ಮಗನೆ ಇದು ನಮ್ಮ ತಮ್ಮನ ಹೊಲ ಇದ್ದು ಇಲ್ಲಿ ನಾವು ಯಾರಿಗೆ ದಾರಿ ಕೊಡುವದಿಲ್ಲಾ ಅಂತಾ ಅಂದನು ಆಗ ನಾನು ಶರಣಪ್ಪನಿಗೆ ನಾವು ನಿಮ್ಮ ತಮ್ಮನ ಪಟ್ಟಿಯಲ್ಲಿಯ 2 ಎಕರೆ ಜಮೀನನ್ನು ಕೊಂಡುಕೊಂಡಿರುತ್ತೇವೆ ನಮಗೆ ದಾರಿ ಇಲ್ಲೆ ಇರುತ್ತದೆ ಅಂತಾ ಅಂದೇನು ಅದಕ್ಕೆ ಶರಣಪ್ಪ ರವರು ಬೋಸುಡಿ ಮಗನೆ ಇಲ್ಲಿ ದಾರಿ ಇಲ್ಲ ಅಂತಾ ಹೇಳಿದರೆ ನನಗೆ ಎದರು ಮಾತನಾಡುತ್ತಿಯಾ ಬೊಸುಡಿ ಮಗನೆ ಅಂತಾ ಅವಾಚ್ಯವಾಗಿ ಬೈದು ನನಗೆ ಕೈಯಿಂದ ಕಪಾಳ ಮೇಲೆ ಹೊಡೆದು ನನ್ನ ತೆಕ್ಕೆ ಕುಸ್ತಿಗೆ ಬಿದ್ದಾಗ ಶರಣಪ್ಪ ರವರ ಮಗ ಬಸಪ್ಪನು ಬಂದು ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ನನ್ನ ಕುತ್ತಿಗೆಯ ಹಿಂಬಾಜುವಿಗೆ ಹೊಡೆದು ಗುಪ್ತಪೆಟ್ಟು ಮಾಡಿದನು ಹಾಗೂ ಉಳಿದವರು ಇವನನ್ನು ಖಲಾಸ ಮಾಡಬಿಡರಿ ಅಂತಾ ಜೀವದ ಬೆದರಿಕೆ ಹಾಕಿದ್ದು ಆಗ ನಾನು ಚೀರಾಡಲು ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಾಲಪ್ಪ ತಂದೆ ಹಣಮಂತ್ರಾಯ ಹುಲಿಕೇರಿ, ಹಾಗೂ ಬಸಪ್ಪ ತಂದೆ ಹಣಮಂತ್ರಾಯ  ಹುಲಿಕೇರಿ ರವರು ಬಂದು ಜಗಳ ಬಿಡಿಸಿದ್ದು ಇರುತ್ತದೆ ನಿನ್ನೆ ದಿನ ಬಸಪ್ಪನು ಬಡಿಗೆಯಿಂದ ನನ್ನ ಕುತಿಗೆಯ ಹಿಂಬುಜುವಿಗೆ ಹೊಡೆದ ಪೆಟ್ಟು ಇಂದು ನನಗೆ ಬಹಳ ತ್ರಾಸ ಮಾಡುತ್ತಿದ್ದರಿಂದ ನಾನು ಇಂದು ರಾಜನಕೋಳುರ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆಯಾಗಿದ್ದು ಕಾರಣ ನನಗೆ  ಹೊಡೆಬಡೆ ಮಾಡಿದವರ ಮೇಲೆ ಕೇಸು ಮಾಡಬೇಕೆಂದು ನೀಡಿದ ಪಿಯರ್ಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 16/2020 ಕಲಂ 143, 147, 148, 341, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು

ಹುಣಸಗಿ  ಪೊಲೀಸ್ ಠಾಣೆ ಗುನ್ನೆ ನಂ:-  31/2020 78 (3) ಕೆ.ಪಿ ಯಾಕ್ಟ :- ದಿನಾಂಕ:14/03/2020 ರಂದು 20.00 ಪಿ.ಎಮ್ ಕ್ಕೆ, ಶ್ರೀ. ಎನ್.ಎಸ್ ಜನಗೌಡ ಪಿಎಸ್ಐ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ  ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನೂರ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ ಸ್ಥಳಕ್ಕೆ ಬೇಟಿ ನೀಡಿ ಖಚಿತಪಡಸಿಕೊಂಡು ಮಟಕಾ ಬರೆದುಕೊಳ್ಳುವನ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:31/2020 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.
       ನಂತರ ಮಾನ್ಯ ಪಿಎಸ್ಐ ಸಾಹೇಬರು 21.45 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 1650/- ರೂ.ಗಳು ಒಂದು ಮಟಕಾ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. ಆರೋಪಿತರ ಹೆಸರು

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 52/2020 ಕಲಂ: 87 ಕೆಪಿ ಯಾಕ್ಟ:- ಇಂದು ದಿ : 14/03/2020 ರಂದು 20.45 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಕೊಟ್ಟ ಜ್ಞಾಪನ ಪತ್ರದ ಸಾರಾಂಶವೇನೆಂದರೆ, ನಾನು ಇಂದು ದಿನಾಂಕ:14.03.2020 ರಂದು ಕೆಂಭಾವಿ ಪೊಲೀಸ್ ಠಾಣೆಯ ಹದ್ದಿಯ ಪೈಕಿ ಗೌಡಗೇರಾ ಕ್ರಾಸ ಕಡೆ ಪೆಟ್ರೋಲಿಂಗ ಕುರಿತು ಹೋದಾಗ ಗೌಡಗೇರಾ ಗ್ರಾಮದ ಹನುಮಾನ ದೇವರ ಗುಡಿಯ ಪಕ್ಕದ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ್-ಬಾಹರ್ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ 1600 ಗಂಟೆಗೆ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಖುದ್ದಾಗಿ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಸುಮಾರು 5-6 ಜನರು ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ 16.20 ಗಂಟೆಗೆ ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡು ನಂತರ ಠಾಣೆಗೆ 17.00 ಗಂಟೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು 20.45 ಗಂಟೆಗೆ ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ. 52/2020 ಕಲಂ : 87 ಕೆಪಿ ಆಕ್ಟ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು. ನಂತರ ಪಿರ್ಯಾದಿದಾರರು ದಾಳಿ ಕೈಕೊಂಡಿದ್ದು ದಾಳಿಯಲ್ಲಿ 06 ಜನ ಆರೋಪಿತರಿಗೆ ದಸ್ತಗಿರಿ ಮಾಡಿ ಅವರಿಂದ ಪಂಚರ ಸಮಕ್ಷಮ 2530/- ರೂಪಾಯಿ ನಗದು ಹಣ ಹಾಗು 52 ಇಸ್ಪೀಟ ಎಲೆಗಳನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ ಅಂತ ಮಾನ್ಯರವರಲ್ಲಿ ವಿನಂತಿ ಇರುತ್ತದೆ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!