ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/03/2020

By blogger on ಸೋಮವಾರ, ಮಾರ್ಚ್ 16, 2020
                                    ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/03/2020 
ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 13/2020  ಕಲಂ 279,  338 ಐಪಿಸಿ :- ಇಂದು ದಿನಾಂಕ 13/03/2020 ರಂದು 1-15 ಪಿ.ಎಂ.ಕ್ಕೆ ಯಾದಗಿರಿ ಜಿಜಿಎಚ್ ನಿಂದ ಆರ್.ಟಿ.ಎ ಎಮ್,ಎಲ್.ಸಿ  ಅಂತಾ ಪೊನ್ ಮಾಡಿ ಮಾಹಿತಿ ನೀಡಿದ್ದರಿಂದ ಆಸ್ಪತ್ರೆಗೆ ಬೇಟಿ ನೀಡಿದ್ದು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಫಿಯರ್ಾದಿ  ಶ್ರೀ ಶಿವಾನಂದ ತಂದೆ ಸಿದ್ದಪ್ಪ ಗಣೇಕಲ್ ವಯ;35 ವರ್ಷ, ಉ;ಪೊಲೀಸ್ ಪೇದೆ ನಂ.169 ಸಂಚಾರಿ ಪೊಲೀಸ್ ಠಾಣೆ, ಸಾ;ಯಾದಗಿರಿ ಇವರಿಗೆ ವಿಚಾರಿಸಿದ್ದು, ಗಾಯಾಳು ತಮ್ಮದೊಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ಪಿಯರ್ಾದು 2-45 ಪಿ.ಎಂ. ದ ಸುಮಾರಿಗೆ ಕೊಟ್ಟಿದ್ದು ಅದರ ಸಾರಾಂಶವೇನೆಂದರೆ ಮಾನ್ಯರೇ,  ನಾನು ಶಿವಾನಂದ ತಂದೆ ಸಿದ್ದಪ್ಪ ಗಣೇಕಲ್ ವಯ;35 ವರ್ಷ, ಉ;ಪೊಲೀಸ್ ಪೇದೆ ನಂ.169 ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುತ್ತೇನೆ. ಇಂದು ದಿನಾಂಕ 13/03/2020 ರಂದು ಬೆಳಿಗ್ಗೆ 9 ಗಂಟೆಗೆ ಮಾನ್ಯ ಪಿ.ಎಸ್.ಐ -01 ಸಾಹೇಬರ ಆದೇಶದ ಮೇರೆಗೆ  ನನಗೆ  ಯಾದಗಿರಿ ನಗರ ಸಂಚಾರಿ ಪೊಲೀಸ್ ಠಾಣೆಯ ಸಂಚಾರಿ ಪಾಯಿಂಟ್ ಸ್ಥಳವಾದ ಗಾಂಧಿಚೌಕ್ ಹತ್ತಿರ ನೇಮಿಸಿದ್ದು ಇರುತ್ತದೆ. ನನಗೆ ನೇಮಿಸಿದ ಸಂಚಾರಿ ಪಾಯಿಂಟ್ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಮ್ಮ ಪೊಲಿಸ್ ಠಾಣೆಯ ಶ್ರೀ ಸಾಯಿಬಣ್ಣ ಎ.ಎಸ್.ಐ ಸಾಹೇಬರು ಬಂದು ಹಳೆ ಎಸ್.ಬಿ.ಎಚ್. ಕ್ರಾಸದಲ್ಲಿ ನಿಂತು ಸ್ಥಳದಲ್ಲಿ ವಾಹನಗಳಿಗೆ ದಂಡ ಹಾಕೋಣ ಅಂತಾ ನನಗೆ ಕರೆದುಕೊಂಡು ವಾಹನಗಳಿಗೆ ನಿಲ್ಲಿಸುತ್ತಾ ಪರಿಶೀಲನೆ ಮಾಡುತ್ತಾ ಐ.ಎಂ.ವಿ ಪ್ರಕರಣಗಳನ್ನು ದಾಖಲು ಮಾಡುತ್ತಾ ಇದ್ದೆವು. ಸಮಯ 12-30 ಪಿ.ಎಂ.ದ ಸುಮಾರಿಗೆ ಗಾಂಧಿಚೌಕ್ ಕಡೆಯಿಂದ ಹತ್ತಿಕುಣಿ ಕ್ರಾಸ್ ಕಡೆಗೆ ಬರುತ್ತಿದ್ದ ಒಂದು ಆಟೋ ಚಾಲಕನು ನಮ್ಮನ್ನು ನೋಡಿದ ತಕ್ಷಣ ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಆಟೋ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮಿಬ್ಬರಲ್ಲಿ ನನಗೆ ನೇರವಾಗಿ ಡಿಕ್ಕಿಕೊಟ್ಟು ಅಪಘಾತ ಮಾಡಿದನು ಸದರಿ ಅಪಘಾತದಲ್ಲಿ ಡಿಕ್ಕಿಕೊಟ್ಟು ರಭಸಕ್ಕೆ ನಾನು ಹಿಮ್ಮುಖವಾಗಿ ಬಿದ್ದಾಗ ತಲೆಯ ಹಿಂಭಾಗಕ್ಕೆ ಭಾರೀ ರಕ್ತಗಾಯವಾಗಿದ್ದು, ಬಲಗೈ ರಟ್ಟೆಗೆ, ಬಲ ತೊಡೆಗೆ ತರಚಿದ ರಕ್ತಗಾಯಗಳಾಗಿದ್ದು ಇರುತ್ತವೆ, ನನಗೆ ಶ್ರೀ ಸಾಯಿಬಣ್ಣ ಎ.ಎಸ್.ಐ ರವರು ಮೇಲೆ ಎಬ್ಬಿಸಿದ್ದು ಇರುತ್ತದೆ. ನನಗೆ ಅಪಘಾತ ಪಡಿಸಿದ ಆಟೋ ಸ್ಥಳದಲ್ಲಿದ್ದು ಅದರ ನಂಬರ ಕೆಎ-33, ಎ-5727 ನೇದ್ದು ಇದ್ದು, ಅದರ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಿದ್ದು ತನ್ನ ಹೆಸರು ಆಂಜನೇಯ ತಂದೆ ಹಣಮಂತ ಮುಂಡರಗಿ ಸಾ;ಬೋವಿವಾಡ ಯಾದಗಿರಿ ಅಂತಾ ತಿಳಿಸಿರುತ್ತಾನೆ. ನನಗೆ ಉಪಚಾರ ಕುರಿತು ಶ್ರೀ ಸಾಯಿಬಣ್ಣ ಎ.ಎಸ್.ಐ ರವರು ಒಂದು ಖಾಸಗಿ ಆಟೋದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಹೀಗಿದ್ದು ಇಂದು ದಿನಾಂಕ 13/03/2020 ರಂದು 12-30 ಪಿ.ಎಂ.ಕ್ಕೆ ಯಾದಗಿರಿ ನಗರದ ಹಳೆ ಎಸ್.ಬಿ.ಎಚ್. ಕ್ರಾಸ್ ಹತ್ತಿರ ಆಟೋ ನಂಬರ ಕೆಎ-33, ಎ-5727 ನೇದ್ದರ ಚಾಲಕನು ತನ್ನ ಆಟೋವನ್ನು  ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ನನಗೆ ಅಪಘಾತ ಮಾಡಿದ್ದು ಆಟೋ ಚಾಲಕನ ಮೇಲೆ ಮುಂದಿನ ಕಾನುನು ಕ್ರಮ ಜರುಗಿಸಿರಿ ಅಂತಾ ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಮರಳಿ ಠಾಣೆಗೆ 3 ಪಿ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 13/2020 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 30/2020 ಕಲಂ. 279 337 338 304(ಎ) ಐಪಿಸಿ:- ಇಂದು ದಿನಾಂಕ:13/03/2020 ರಂದು ಬೆಳಿಗ್ಗೆ 07.00 ಗಂಟೆಗೆ ಹುಣಸಗಿ ಕಕ್ಕೇರಾ ಕ್ರಾಸ್ ಸಮೀಪ್ ಅಪಘಾತವಾಗಿದೆ ಎಂದು ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಬೇಟಿ ಕೊಟ್ಟು, ಪರಶೀಲನೆ ಮಾಡಲು ಅದೇ ಸಮಯಕ್ಕೆ ಅಂಬುಲೇನ್ಸ್ ವಾಹನ ಸ್ಥಳಕ್ಕೆ ಬಂದು ಇಬ್ಬರೂ ಗಾಯಾಳುದಾರರಿಗೆ ಉಪಚಾರಕ್ಕೆಂದು ಹುಣಸಗಿ ಸರಕಾರಿ ದವಾಖಾನೆಗೆ ತೆಗೆದುಕೊಂಡು ಬಂದಿದ್ದ, ಗಾಯಾಳುದಾರರೋಂದಿಗೆ ಹುಣಸಗಿ ಸರಕಾರಿ ದವಾಖಾನೆಗೆ ಬಂದು, ಗಾಯಾಳು ಪಿಯರ್ಾದಿಗೆ ವಿಚಾರಣೆ ಮಾಡಲು ಹೇಳಿಕೆ ಕೊಟ್ಟಿದ್ದು ಏನೆಂದರೆ. ಇಂದು ಮುಂಜಾನೆ ನಾನು ಮತ್ತು ನನ್ನ ಹೆಂಡತಿ ಕೆ ವರಲಕ್ಷ್ಮೀ ಇಬ್ಬರೂ ಕೂಡಿ ನಮ್ಮ ಮೋಟಾರ್ ಸೈಕಲ್ ನಂ. ಕೆಎ-37 ವ್ಹಿ-1551 ನೇದ್ದರ ಮೇಲೆ ನಮ್ಮ ಕ್ಯಾಂಪನಿಂದಾ ಕಕ್ಕೇರಾ ಕ್ರಾಸಿಗೆ ಬರಲು ಹುಣಸಗಿ-ನಾರಾಯಣಪುರ ರೋಡಿಗೆ ಬಂದು ಕಕ್ಕೇರಾ ಕ್ರಾಸ್ ಕಡೆಗೆ ನನ್ನ ಮೋಟಾರ್ ನಿಧಾನವಾಗಿ ಹೊರಳಿಸಿಕೊಂಡು ಹೊರಟಾಗ ಹಿಂದಿನಿಂದಾ ಆರೋಪಿತನು  ತನ್ನ ಮೋಟರ್ ಸೈಕಲ್ ನಂ:ಕೆಎ-36 ಡಬ್ಲೂ-6000 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು ನಮ್ಮ ಮೋಟಾರ್ ಸೈಕಲಗೆ ಡಿಕ್ಕಿಹೊಡೆದು ಅಪಘಾತ ಮಾಡಿ, ತಾನು ಮುಂದೆ ಹೋಗಿ ವಾಲ್ಮಿಕಿ ಚೌಕಿನ ಕಟ್ಟಿಗೆ ಡಿಕ್ಕಿ ಹೊಡೆದು ರೋಡಿನ ಮೇಲೆ ಬಿದ್ದು ತೆಲೆಗೆ ಮತ್ತು ಬಲಗಾಲಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು, ಅಪಘಾತದಲ್ಲಿ ನನಗೆ ಮತ್ತು ನನ್ನ ಹೆಂಡತಿ ಕೆ.ವರಲಕ್ಷ್ಮೀಗೆ ಭಾರಿ ಮತ್ತು ಸಾಧಾಗಾಯವಾಗಿದ್ದು ಇರುತ್ತದೆ ಕಾರಣ ಅಪಘಾತ ಮಾಡಿ ಮೃತಪಟ್ಟ  ಮೋಟರ್ ಸೈಕಲ್ ನಂ:ಕೆಎ-36 ಡಬ್ಲೂ-6000 ನೇದ್ದರ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟು ಅಂತಾ ಇತ್ಯಾದಿ ಹೇಳಿಕೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ. 

                               
ಭೀಗುಡಿ  ಠಾಣೆ ಗುನ್ನೆ ನಂ:- 34/2020 ಕಲಂ 96 ಕೆ.ಪಿ. ಎಕ್ಟ್:- ಫಿಯರ್ಾದಿದಾರರು ಸಿಬ್ಬಂದಿಯವರೊಂದಿಗೆ ದಿನಾಂಕ:13/03/2020 ರಂದು 3 ಎ.ಎಮ್. ಸುಮಾರಿಗೆ ಬಲಭೀಮೇಶ್ವರ ಗುಡಿ ಹತ್ತಿರ ರಾತ್ರಿ ಗಸ್ತು ಮಾಡುತ್ತಾ ಹೋದಾಗ 04 ಜನ ಆರೋಪಿತರು ಅವರನ್ನು ನೋಡಿ ಮರೆಮಾಚುತ್ತಾ ತಮ್ಮ ತಮ್ಮ ಮೋಟರ್ ಸೈಕಲಗಳ ಮೇಲೆ ಕುಳಿತು ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಬೆನ್ನಟ್ಟಿ ಅವರಿಗೆ ಹಿಡಿದು ವಿಚಾರಿಸಲಾಗಿ ಎಲ್ಲರೂ ವಿಧವಿಧವಾಗಿ ಅಸಮರ್ಪಕ ಉತ್ತರ ಕೊಡುತ್ತಿದ್ದು ಪರಿಶೀಲಿಸಿ ನೋಡಲಾಗಿ ಅವರ ಬಳಿ ಒಂದು ಕೈಚೀಲ ಇದ್ದು ಅದರಲ್ಲಿ ಒಂದು ಕಬ್ಬಿಣದ ರಾಡು, ಒಂದು ಕಟಿಂಗ ಪ್ಲೇಯರ್ ಹಾಗೂ ಕೆಲವು ಕೀಲಿ ಕೈಗಳು ಸಿಕ್ಕಿದ್ದು ಹಾಗೂ ಅವರ ಬಳಿ ಎರಡು ಮೋಟರ್ ಸೈಕಲಗಳಿದ್ದು ಸದರಿಯವರ ಮೇಲೆ ಬಲವಾದ ಸಂಶಯ ಬಂದಿದ್ದರಿಂದ ಮತ್ತು ಸದರಿಯವರಿಗೆ ಕೂಲಂಕುಷವಾಗಿ ವಿಚಾರಣೆಗೊಳಪಡಿಸುವ ಉದ್ದೇಶದಿಂದ ಅವರಿಗೆ ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಬಂದು ಆರೋಪಿತರ ವಿರುಧ್ಧ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 15/2020 ಕಲಂ: 143, 147, 148, 341, 323, 324, 504, 506, ಸಂಗಡ 149 ಐಪಿಸಿ.:- ಇಂದು ದಿನಾಂಕ 13/03/2020 ರಂದು 6:30 ಪಿ.ಎಂ ಕ್ಕೆ ಪಿಯಾದಿ ಶ್ರೀ ಶರಣಪ್ಪ ತಂದೆ ಹಣಮಂತ್ರಾಯ ಹುಲಿಕೇರಿ ವ:51 ವರ್ಷ ಉ:ಒಕ್ಕಲುತನ ಜಾ:ಹಿಂದು ಬೇಡರ ಸಾ:ಯರಕಿಹಾಳ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನಂದರೆ ನನಗೆ ಅಮರಪ್ಪ , ಬಸಪ್ಪ ಅಂತಾ ಇಬ್ಬರು ಗಂಡು ಮಕ್ಕಳಿದ್ದು ನನ್ನ ಹಿರಿಯ ಮಗ ಅಮರಪ್ಪ ರವರು ಪೈನಾನ್ಸದಲ್ಲಿ ಕೆಲಸ ಮಾಡಿಕೊಂಡು ಮುದ್ದೆಬಿಹಾಳದಲ್ಲಿ ವಾಸವಾಗಿದ್ದು ನನ್ನ ಕಿರಿಯ ಮಗ ಬಸಪ್ಪ ಮತ್ತು ನಾನು ನಮ್ಮ ಹೊಲದಲ್ಲಿಯ ಮನೆಯಲ್ಲಿ ವಾಸವಾಗಿರುತ್ತೇವೆ. ನಮ್ಮದ ಯರಕಿಹಾಳ ಸೀಮಾಂತರಲ್ಲಿ ಸವರ್ೆ ನಂ 45 ರಲ್ಲಿ ಎರಡು ಎಕರೆ ಜಮೀನು ಇದ್ದು ನಮ್ಮ ಹೊಲ ದಾಟಿ ಬಾಲಪ್ಪ ತಂದೆ ಹಣಮಂತ್ರಾಯ ಹುಲಿಕೇರಿ ರವರ ಹೊಲವಿರುತ್ತದೆ. ನಮ್ಮ ಹೊಲದಲ್ಲಿ ಬಾಲಪ್ಪ ರವರ ಹೊಲಕ್ಕೆ ಹೋಗುವ ಯಾವುದೆ ದಾರಿ ಇರುವದಿಲ್ಲ ಆದರೆ ಬಾಲಪ್ಪ ರವರು ನಮ್ಮ ಅಣ್ಣ ತಮ್ಮಕೀಯವರಾಗಿಬೇಕಾಗಿದ್ದರಿಂದ ನಮ್ಮ ಹೊಲದಲ್ಲಿ ದಾರಿಯನ್ನು ಕೊಟ್ಟಿದ್ದು ಅವರು ನಮ್ಮ ಹೊದಲ್ಲಿಂದ ತಮ್ಮ ಹೊಲಕ್ಕೆ ಹೋಗುವದು ಬರುವದು ಮಾಡುತ್ತಿದ್ದರು.
       ಹೀಗಿದ್ದು ಇಂದು ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ನಾನು ಹಾಗೂ  ನನ್ನ ಸೊಸೆ ಯಲ್ಲಮ್ಮ ರವರು ನಮ್ಮ ಹೊಲದಲ್ಲಿಯ ಮನೆಯಲ್ಲಿ ಇದ್ದಾಗ ಬಾಲಪ್ಪ ರವರ ತಮ್ಮ ಬಸವರಾಜ ಈತನು ಟ್ರ್ಯಾಕ್ಟರನ್ನು ನಮ್ಮ ಹೊಲದಲ್ಲಿಂದ ರಭಸವಾಗಿ ಹೊಡೆದುಕೊಂಡು ಹೋಗುತ್ತಿದ್ದ ಆಗ ನಾನು ಬಸವರಾಜನಿಗೆ ನಮ್ಮ ಮನೆಯಲ್ಲಿ ಸಣ್ಣ ಸಣ್ಣ ಹುಡುಗರು ಇರುತ್ತಾರೆ ಇಲ್ಲಿಂದ ನಿಧಾನವಾಗಿ ಹೊಡದುಕೊಂಡು ಹೋಗು ಅಂತಾ ಅಂದಾಗ ಬಸವರಾಜ ಈತನು ನನಗೆ ನಾನು ಯಾವರೀತಿ ಬೇಕಾದರು ಟ್ರ್ಯಾಕ್ಟರನ್ನು ಹೊಡೆದುಕೊಂಡು ಹೋಗುತ್ತೇನೆ ಅದನ್ನು ಕೇಳಲು ನೀನು ಯಾರು ಅಂತಾ ಹೇಳಿ ಟ್ರ್ಯಾಕ್ಟರನ್ನು ಹಾಗೆ ಹೊಡೆದುಕೊಂಡು ಹೋದನು ಆಗ ನಾನು ನನ್ನ ಮಗ ಬಸಪ್ಪನಿಗೆ ಪೋನ ಮಾಡಿ ಬಾಲಪ್ಪನ ತಮ್ಮ ಬಸವರಾಜನು ಟ್ರ್ಯಾಕ್ಟರನ್ನು ನಮ್ಮ ಹೊಲದಲ್ಲಿಂದ ರಭಸವಾಗಿ ತಗೆದುಕೊಂಡು ಹೋಗುತ್ತಿದ್ದಾಗ ನಾನು ಬಸವರಾಜನಿಗೆ ನೀಧಾನವಾಗಿ ತಿರುಗಾಡು ಅಂತಾ ಅಂದಿದ್ದಕ್ಕೆ ಬಸವರಾಜನು ನನಗೆ ನಾನು ಯಾವ ರೀತಿ ಬೇಕಾದರು ಟ್ರ್ಯಾಕ್ಟರನ್ನು ಹೊಡೆದುಕೊಂಡು ಹೋಗುತ್ತೇನೆ ಅದನ್ನು ಕೇಳಲು ನೀನು ಯಾರು ಅಂತಾ ಅಂದು ಟ್ರ್ಯಾಕ್ಟರನ್ನು ಹೊಡೆದುಕೊಂಡು ಹೋಗಿರುತ್ತಾನೆ ಅಂತಾ ತಿಳಿಸಿದೇನು. ನಾನು ಹಾಗೂ ನನ್ನ ಸೊಸೆ ಯಲ್ಲಮ್ಮ ರವರು ಹೊಲದಲ್ಲಿ ಇದ್ದಾಗ ನಮ್ಮ ಹೊಲದಲ್ಲಿಂದ ಸ್ವಲ್ಪ ದೂರದಲ್ಲಿ ನನ್ನ ಮಗ ಬಸಪ್ಪನು ಸಾಯಂಕಾಲ 4:00 ಗಂಟೆಯ ಸುಮಾರಿಗೆ ಇದನ್ನು ಕೇಳಲು ನಮ್ಮ ಹೊಲಕ್ಕೆ ಬಾಲಪ್ಪ ರವರ ಹೊಲದಲ್ಲಿಯ ದಾರಿಯ ಮೇಲೆ ಬರುತ್ತಿರುವಾಗ ಬಾಲಪ ಣಮಂತ್ರಾಯ ತಂದೆ ಬಾಲಪ್ಪ ಹುಲಿಕೇರಿ 5) ಯಂಕಪ್ಪ ತಂದೆ ಹಣಮಂತ್ರಾಯ ಹುಲಿಕೇರಿ 6)ಗದ್ದೆಪ್ಪ ತಂದೆ ಹಣಮಂತ್ರಾಯ ಹುಲಿಕೇರಿ 7) ರತ್ನಮ್ಮ ಗಂಡ ಹಣಮ್ಪನ ಹೊಲದಲ್ಲಿ ಇದ್ದ 1) ಬಾಲಪ್ಪ ತಂದೆ ಹಣಮಂತ್ರಾಯ ಹುಲಿಕೇರಿ 2)ಬಸವರಾಜ ಹಣಮಂತ್ರಾಯ ಹುಲಿಕೇರಿ 3)ಸುಭಾಶ ತಂದೆ ಹಣಮಂತ್ರಾಯ ಹುಲಿಕೇರಿ 4) ಹಂತ್ರಾಯ ಹುಲಿಕೆರಿ 8) ದಂಡಮ್ಮ ಗಂಡ ಬಾಲಪ್ಪ ಹುಲಿಕೇರಿ ರವರು ಗುಂಪುಕಟ್ಟಿಕೊಂಡು ಕೈಯಲ್ಲಿ ಬಡಿಗೆಯನ್ನು ಹಿಡಿದುಕೊಂಡು ನನ್ನ ಮಗ ಬಸಪ್ಪನಿಗೆ ತಡೆದು ನಿಲ್ಲಿಸಿ ಅದರಲ್ಲಿಯ ಬಸವರಾಜ ತಂದೆ ಹಣಮಂತ್ರಾಯ ಹುಲಿಕೇರಿ ಈತನು ಬೋಸುಡಿ ಮಗನೇ ನಿಮ್ಮ ಅಪ್ಪನಿಗೆ ನನಗೆ ದಾರಿಕೋಡಬ್ಯಾಡ ಅಂತಾ ಹೇಳಿ ಹೋಗುತ್ತಿಲೇ ಸುಳಿಮಗನೇ ನಿನ್ನ ಸೊಕ್ಕು ಬಹಳ ಆಗಿದೆ ಅಂತಾ ನನ್ನ ಮಗ ಬಸಪ್ಪನ ತೆಕ್ಕೆಕುಸ್ತಿಗೆ ಬಿದ್ದು ನನ್ನ ಮಗ ಬಸಪ್ಪನೊಂದಿಗೆ ಜಗಳಕ್ಕೆ ಬಿದ್ದು  ನನ್ನ ಮಗ ಬಸಪ್ಪನನ್ನು ನೆಲಕ್ಕೆ ಕೆಡುವಿದ್ದು ನಂತರ ಬಾಲಪ್ಪ ತಂದೆ ಹಣಮಂತ್ರಾಯ ಈತನು ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ನನ್ನ ಮಗನ ಎಡಗಡೆ ಕಿವಿಯ ಮೇಲಿನ ತಲೆಗೆ ಹಾಗೂ ಎಡಗಡೆ ಹಣೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು  ನಂತರ ನನ್ನ ಮಗ ಬಸಪ್ಪನ ತೊಡ್ಡಿಗೆ ಯಂಕಪ್ಪ ತಂದೆ ಹಣಮಂತ್ರಾಯ ಹುಲಿಕೇರಿ ಈತನು ಒದ್ದು ಗುಪ್ತಪೆಟ್ಟು ಪಡಿಸಿದನು. ಉಳಿದವರು ಈ ಬೋಸುಡಿ ಮಗಂದು ಸೊಕ್ಕು ಬಹಳ ಆಗಿದೆ ಪೆಟ್ರೋಲ ಹಾಕಿ ಸುಟ್ಟು ಖಲಾಸ ಮಾಡಿಬಿಡರಿ ಅಂತಾ ಜೀವದ ಬೆದರಿಕೆ ಹಾಕಿದರು ಆಗ ನಮ್ಮ ಮನೆಯ ಮುಂದೆ ಇದ್ದ ನಾನು ಹಾಗೂ ನನ್ನ ಸೊಸೆ ಯಲ್ಲಮ್ಮ ಗಂಡ ಬಸಪ್ಪ ಹುಲೇರಿ ಇಬ್ಬರು ಕೂಡಿಕೊಂಡು ಓಡಿಹೋಗಿ ನನ್ನ ಮಗನನ್ನು ಬಿಡಿಸಿಕೊಂಡಿದ್ದು  ಇರುತ್ತದೆ. ನಂತರ ನಾನು ಜಗಳ ನಡೆದ ವಿಷಯವನ್ನು ನನ್ನ ಹಿರಿಯ ಮಗ ಅಮರಪ್ಪ ಹಾಗೂ ನನ್ನ ಅಳಿಯ ಸಿದ್ದಪ್ಪ ತಂದೆ ಬಸಪ್ಪ ಗುರಿಕಾರ ರವರಿಗೆ ಪೋನ ಮಾಡಿ ತಿಳಿಸಿದ್ದು ಕೂಡಲೆ ಅಲ್ಲಿಗೆ ಬಂದ ನನ್ನ ಮಗ ಅಮರಪ್ಪ ಹಾಗೂ ನನ್ನ ಅಳಿಯ ಸಿದ್ದಪ್ಪ  ರವರು ನನ್ನ ಮಗ ಬಸಪ್ಪನಿಗೆ ಕರೆದುಕೊಂಡು ಉಪಚಾರ ಕುರಿತು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಾನು ಇಲ್ಲಿಗೆ ಬಂದು ನನ್ನ ಮಗನಿಗೆ ಹೊಡೆಬಡೆ ಮಾಡಿದವರ ಮೇಲೆ ಪಿಯರ್ಾದಿಕೊಡುತ್ತಿದ್ದು ಅವರ ಮೇಲೆ ಕೇಸು ಮಾಡಬೇಕು ಅಂತಾ ನೀಡಿದ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 15/2020 ಕಲಂ 143, 147, 148, 341, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 72/2019 ಕಲಂ 323,354,504,506 ಸಂ.34 ಐಪಿಸಿ:- ಇಂದು ದಿನಾಂಕ: 13/03/2020 ರಂದು 03 ಪಿ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀಮತಿ ರಜೀಯಾ ಬೇಗಂ ಗಂ/ ಹುಸೇನಭಾಷಾ ಬಿಸಣಕಿ ವಯಸ್ಸು:50 ವರ್ಷ ಉದ್ಯೋಗ|| ಕೂಲಿ ಜಾತಿ||ಮುಸ್ಲಿಂ ಸಾ||ಅಡ್ಡೋಡಗಿಇವರು ಠಾಣೆಗೆ ಬಂದು ಗಣಕೀಕರಿಸಿದ ಒಂದು ಅಜರ್ಿ ನೀಡಿದ್ದು ಸಾರಾಂಶವೆನೆಂದರೆ ನನಗೆ ಏಂಟು ಜನ ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳಿರುತ್ತಾಳೆ. ಏಂಟು ಜನ ಗಂಡು ಮಕ್ಕಳಲ್ಲಿ 6 ಜನ ಗಂಡು ಮಕ್ಕಳು ಹಾಗೂ ನನ್ನ ಗಂಡನಾದ ಹುಸೇನ ಬಾಷಾ ಇವರೆಲ್ಲರೂ ಬೆಂಗಳೂರಲ್ಲಿ ಕೂಲಿ ಕೆಲಸ ಮಾಡಿಕೊಂಡು ಬೆಂಗಳೂರಲ್ಲಿಯೆ ಕುಟುಂಬ ಸಮೇತವಾಗಿ ವಾಸವಾಗಿರುತ್ತಾರೆ. ನಾನು ನನ್ನ ಚಿಕ್ಕ ಮಕ್ಕಳಾದ ಶಾರುಖಾನ ಮತ್ತು  ಹಸನ ಪಟೇಲ ಮೂವರು ಅಡ್ಡೊಡ್ಡಗಿ ಗ್ರಾಮದಲ್ಲಿಯೆ ವಾಸವಾಗಿರುತ್ತೆವೆ. ಹೀಗಿರುವಾಗ ದಿನಾಂಕ||09-03-2020 ರಂದು ಸಾಯಂಕಾಲ 07;30 ಗಂಟೆ ಸುಮಾರಿಗೆ ನಾನು ನನ್ನ  ಮಗನಾದ ಶಾರುಖಾನ ಇಬ್ಬರು ನಮ್ಮ ಮನೆಯಲ್ಲಿ ಇರುವಾಗ ನಮ್ಮೂರ 1) ಮಂಜುನಾಥ ತಂದೆ ದ್ಯಾವಪ್ಪ ಹರಿಜನ 2) ಹಣಮಂತ ತಂದೆ ದ್ಯಾವಪ್ಪ ಹರಿಜನ 3) ಬೀಮಪ್ಪ ತಂದೆ ಸಂಜೀವಪ್ಪ ಹರಿಜನ 4) ಬಾಬು ತಂದೆ ಬೀಮಪ್ಪ ಹರಿಜನ ಈ ನಾಲ್ಕು ಜನರು ಗುಂಪು ಕಟ್ಟಿಕೊಂಡು  ನಮ್ಮ ಮನೆಯ ಹತ್ತಿರ ಬಂದು ಎಲೇ ತುರ್ಕ ಸುಳಿಮಕ್ಕಳೆ ನಿಮ್ಮದು ಬಹಳ ಆಗಿದೆ ಇವತ್ತು  ನಿಮಗೆ  ಒಂದು ಕೈ ನೋಡೆ ಬಿಡುತ್ತೆವೆ ಅಂತಾ ಅವಾಚ್ಯವಾಗಿ ಬೈಯುತ್ತಿರುವಾಗ ನಾನು ನನ್ನ ಮಗ ಶಾರುಖಾನ ಇಬ್ಬರು ಮನೆಯ ಹೊರಗಡೆ ಬಂದು ಅವರಿಗೆ ಯಾಕೇ ಸುಮ್ಮನೇ ಬೈಯುತ್ತಿರಿ ನಾವೇನು ಮಾಡಿದ್ದೆವೆ ಅಂತಾ ಕೇಳಿದಾಗ ಅವರಲ್ಲಿಯ ಮಂಜುನಾಥ ಈತನು ನನ್ನ ಮಗ ಶಾರುಖಾನ ಈತನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಹೊಡೆದು ಜಾಡಿಸಿ ಒದ್ದಾಗ ನನ್ನ ಮಗ ಕೇಳಗೆ ಬಿದ್ದಾಗ ಅವರೆಲ್ಲರೂ ಕೂಡಿ ಕೆಳಗೆ ಬಿದ್ದ ನನ್ನ ಮಗನಿಗೆ ಕಾಲಿನಿಂದ ಒದೆಯುತ್ತಿರುವಾಗ ನನ್ನ ಮಗ ಚಿರಾಡುತ್ತಾ ಅಳುತ್ತಿರುವಾಗ ಬಿಡಿಸಲು ಹೋದ ನನಗೆ ಮಂಜುನಾಥ ಈತನು ನನ್ನ ಸಿರೇ ಹಿಡಿದು ಎಳೆದಾಡಿ ಅವಮಾನ ಮಾಡಿ ಜಾಡಿಸಿ ದಬ್ಬಿದಾಗ ನಾನು ಕೆಳಗೆ ಬಿದ್ದಿದ್ದು ಆಗ ಅವೆಲ್ಲರೂ ನನಗೆ ಕಾಲಿನಿಂದ ಒದ್ದು ನನ್ನ ಮಗನಿಗೆ ಹೊಡೆ ಬಡೆ ಮಾಡುತ್ತಿರುವಾಗ ಅದೇ ಸಮಯಕ್ಕ ಅಲ್ಲಿಗೆ ಬಂದ ನಮ್ಮೂರ ವೆಂಕೋಬ ತದೆ ಶಿವಯ್ಯಾ ಮಾಲೀ ಪಾಟೀಲ, ಶಿವರಾಜ ತಂದೆ ಹಣಮಯ್ಯಾ ಕರಿಗುಡ್ಡ, ತಿಮ್ಮಯ್ಯಾ ತಂದೆ ಸಾಬಯ್ಯಾ ಮಾಲೀ ಪಾಟೀಲ ಇವರೆಲ್ಲರೂ ಬಂದು ಜಗಳವನ್ನು ನೋಡಿ ಬಿಡಿಸಿದಾಗ ಅವರೆಲ್ಲರೂ ಇವತ್ತು ಉಳದಿರಿ ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹೀತ ಹೊಡೆಯದೆ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೋಗಿರುತ್ತಾರೆ. ನಾನು ಅಂಜಿ ಏನು ತೋಚದೆ ಇರುವದರಿಂದ ಠಾಣೆಗೆ ಬಂದಿರುವದಿಲ್ಲ ಇಂದು ವಿಚಾರ ಮಾಡಿ ಠಾಣೆಗೆ ತಡವಾಗಿ ಬಂದು ದೂರು ನಿಡಿದ್ದು ಇರುತ್ತದೆ. ಆದಕಾರಣ ತಾವುಗಳು ಅವರ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಕೊಂಡು ನಮಗೆ ನ್ಯಾಯ ದೋರಕಿಸಿ ಕೋಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೆನೆ.  ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 73/2020 ಕಲಂ  87 ಕೆ.ಪಿ. ಕಾಯ್ದೆ:- ಇಂದು ದಿನಾಂಕ: 13/03/2020 ರಂದು 7 ಪಿ.ಎಮ್. ಕ್ಕೆ ಶ್ರೀ ಎಸ್ಎಮ್ ಪಾಟೀಲ ಪಿ.ಐ  ಸಾಹೇಬರು ಸುರಪೂರ ಪೊಲೀಸ್ಠಾಣೆರವರು 12 ಜನಆರೋಪಿತರೊಂದಿಗೆಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ಠಾಣೆಗೆ ಬಂದು ವರದಿ ಸಾರಾಂಶವೆನಂದರೆ, ಇಂದು ದಿನಾಂಕ:13-03-2020 ರಂದು 4 ಪಿ.ಎಂ. ಸುಮಾರಿಗೆಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ಠಾಣೆಯ ವ್ಯಾಪ್ತಿಯದೇವರಗೋನಾಲ ಸೀಮಾಂತರದ ಕರಿಗುಡ್ಡದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿದ್ದಾರೆಅಂತಾಖಚಿತ ಬಾತ್ಮಿ ಬಂದ ಮೇರೆಗೆ, ನಾನು ಶ್ರೀ ಚೇತನ್ ಪಿ.ಎಸ್.ಐ (ಕಾ&ಸೂ) ಹಾಗೂ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಗೋಪಾಲ ಹೆಚ್ಸಿ-183 3) ಶ್ರೀ ನಿಂಗಪ್ಪ ಹೆಚ್.ಸಿ-118 4) ಶ್ರೀ ಶರಣಗೌಡ ಸಿಪಿಸಿ-218 5) ಶ್ರೀ ವಿರೇಶ ಸಿಪಿಸಿ-374 6) ಶ್ರೀ ರವಿಕುಮಾರ ಪಿಸಿ-376 7) ಶ್ರೀ ಪರಮೇಶ ಸಿಪಿಸಿ-142  8) ದಯಾನಂದ ಪಿ.ಸಿ 337 9)  ಮಂಜುನಾಥ ಸಿಪಿಸಿ-271  ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ಲೋಹಿತಕುಮಾರತಂದೆ ಬಸವರಾಜ ನಾಯ್ಕೋಡಿ ವಯಾ:31 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ದೇವರಗೋನಾಲ  2) ಶ್ರೀ ಸಕ್ರೆಪ್ಪತಂದೆಕೊಂಡಪ್ಪ ದಿವಳಗುಡ್ಡ ವಯಾ:33 ವರ್ಷ ಉ:ಒಕ್ಕಲುತನ ಜಾತಿ:ಬೇಡರ ಸಾ:ದೇವರಗೋನಾಲ ಇವರನ್ನು 4-15 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡುಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 4-20 ಪಿ.ಎಮ್ ಕ್ಕೆ ಠಾಣೆಯಒಂದು ಖಾಸಗಿ ವಾಹನ ನೇದ್ದರಲ್ಲಿ ಹೊರಟು 4-55 ಪಿ.ಎಮ್ ಕ್ಕೆ ದೇವರಗೋನಾಲ ಸೀಮಾಂತರ ಕರಿಗುಡ್ಡದ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಗಿಡಿದ ಮರೆಯಾಗಿ ನಿಂತು ನೋಡಲುಕರಿಗುಡ್ಡದಲ್ಲಿರುವ ಸಾರ್ವಜನಿಕಖುಲ್ಲಾ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದಒಮ್ಮೆಲೆಅವರ ಮೇಲೆ 5 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿಒಟ್ಟು 12 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ದೇವಪ್ಪತಂದೆ ಮಲ್ಲಪ್ಪ ಕೊಳ್ಳೂರ ವಯಾ:30 ವರ್ಷ ಉ:ಒಕ್ಕಲುತನ ಜಾತಿ:ಬೇಡರ ಸಾ:ಸಿದ್ದಾಪೂರ ಇವನ ಹತ್ತಿರ2100/- ರೂಗಳು ದೊರೆತವು 2) ನೀಲಪ್ಪತಂದೆ ನಾಗಪ್ಪ ತಳಗೇರಿ ವಯಾ:22 ವರ್ಷ ಉ:ಕೂಲಿ ಜಾತಿ:ಮಾದಿಗ ಸಾ:ಮಾಲಗತ್ತಿ ಇವನ ಹತ್ತಿರ3500/- ರೂಗಳು ದೊರೆತವು 3) ಬಾಲದಂಡಪ್ಪತಂದೆ ಮಲ್ಲಪ್ಪ ಹೊಟ್ಟಿ ವಯಾ:23 ವರ್ಷ ಉ:ಒಕ್ಕಲುತನ ಜಾತಿ:ಕಬ್ಬಲಿಗ ಸಾ:ತಿಪ್ಪನೆಟಗಿ ಇವನ ಹತ್ತಿರ4300/- ರೂಗಳು ದೊರೆತವು 4) ಅಂಬ್ರೇಶತಂದೆಚಂದಾಲಾಲ ರಾಠೋಡ ವಯಾ:35 ವರ್ಷ ಉ:ಕೂಲಿ ಜಾತಿ:ಲಂಬಾಣಿ ಸಾ:ಕಿರದಳ್ಳಿ ತಾಂಡಾ ಇವನ ಹತ್ತಿರ1900/- ರೂಗಳು ದೊರೆತವು 5) ಬಸವರಾಜತಂದೆದ್ಯಾವಪ್ಪರುಕ್ಮಾಪೂರ ವಯಾ:39 ವರ್ಷ ಉ:ಒಕ್ಕಲುತನ ಜಾತಿ:ಕಬ್ಬಲಿಗ ಸಾ:ತಿಪ್ಪನೇಟಗಿ ಇವನ ಹತ್ತಿರ2600/- ರೂಗಳು ದೊರೆತವು 6) ಬೀಮಣ್ಣತಂದೆ ಶಿವಪ್ಪ ಕೊಡಮನಳ್ಳಿ ವಯಾ:40 ವರ್ಷ ಉ:ಕೂಲಿ ಜಾತಿ:ಕುರುಬರ ಸಾ:ಬಾದ್ಯಾಪೂರ ಇವನ ಹತ್ತಿರ4500/- ರೂಗಳು ದೊರೆತವು 7) ಮಾನಪ್ಪತಂದೆ ಬೀಮಣ್ಣದಾಸರ ವಯಾ:29 ವರ್ಷ ಉ:ಒಕ್ಕಲುತನ ಜಾತಿ:ಕುರುಬರ ಸಾ:ದೇವರಗೋನಾಲ ಇವನ ಹತ್ತಿರ1200/- ರೂಗಳು ದೊರೆತವು 8) ಸಾಬಣ್ಣತಂದೆ ಸಂಜೀವಪ್ಪ ಬಡಿಗೇರ ವಯಾ:25 ವರ್ಷ ಉ:ಗೌಂಡಿ ಜಾತಿ:ಬೇಡರ ಸಾ:ಸತ್ಯಂಪೇಠ ಇವನ ಹತ್ತಿರ1800/- ರೂಗಳು ದೊರೆತವು 9) ಮಹೇಶ ತಂದೆ ಹಣಮಂತತುಪ್ಪದ ವಯಾ:34 ವರ್ಷ ಉ:ಡ್ರೈವರ ಜಾತಿ:ಮಾದಿಗ ಸಾ:ಹಸನಾಪೂರ ಇವನ ಹತ್ತಿರ1500/- ರೂಗಳು ದೊರೆತವು 10) ತೇಲಸಿಂಗ ತಂದೆದೇವಾಜಿರಾಠೋಡ ವಯಾ:42 ವರ್ಷ ಉ:ಒಕ್ಕಲುತನ ಜಾತಿ:ಲಂಬಾಣಿ ಸಾ:ಕೀರದಳ್ಳಿ ತಾಂಡಾ  ಇವನ ಹತ್ತಿರ1600/- ರೂಗಳು ದೊರೆತವು 11) ಮಲ್ಲಪ್ಪತಂದೆ ಹಯ್ಯಾಳಪ್ಪ ಕುರಕುಂದಿ ವಯಾ:26 ವರ್ಷ ಉ:ಅಟೋ ಡ್ರೈವರಜಾತಿ:ಕುರುಬರ ಸಾ:ಸಿದ್ದಾಪೂರ ಇವನ ಹತ್ತಿರ3000/- ರೂಗಳು ದೊರೆತವು 12) ಸೈಯದಪಾಶಾತಂದೆಖಾಜಾಸಾಬ ವಡಗೇರಾ ವಯಾ:30 ವರ್ಷ ಉ:ಡ್ರೈವರ ಜಾತಿ:ಮುಸ್ಲಿಂ ಸಾ:ದೇವರಗೋನಾಲ ಇವನ ಹತ್ತಿರ2000/- ರೂಗಳು ದೊರೆತವುಇದಲ್ಲದೆ ಪಣಕ್ಕೆಇಟ್ಟ ಹಣ6000/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 36,000/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿಜಪ್ತಿ ಪಂಚನಾಮೆಯನ್ನುಜೀಪಿನ ಲೈಟಿನ ಬೆಳಕಿನಲ್ಲಿ 5-00 ಪಿ.ಎಮ್ ದಿಂದ 6-00 ಪಿ.ಎಮ್ ವರೆಗೆ ಬರೆದುಕೊಂಡಿದ್ದುಇರುತ್ತದೆ. ನಂತರ 12 ಜನಆರೋಪಿರೊಂದಿಗೆ ಮರಳಿ ಠಾಣೆಗೆ ಬಂದು ಸದರಿಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದುಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲು ವರದಿ ನೀಡಿದ್ದರ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!