ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/03/2020
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 35/2020 ಕಲಂ 454, 380 ಐಪಿಸಿ :- ಇಂದು ದಿನಾಂಕ 12/03/2020 ರಂದು ರಾತ್ರಿ 8-05 ಗಂಟೆಗೆ ಫಿರ್ಯಾಧಿದಾರರಾದ ಮಹಿಪಾಲರೆಡ್ಡಿ ತಂದೆ ಬೊರೆಡ್ಡಿ ಪೊಲೀಸ್ ಪಾಟೀಲ ವಯಾಃ 53 ವರ್ಷ ಜಾಃ ಲಿಂಗಾಯತರೆಡ್ಡಿ ಉಃ ವಕೀಲ ವೃತ್ತಿ ಸಾಃ ಹತ್ತಿಕುಣಿ ಇವರು ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಯಾದಗಿರಿ ನ್ಯಾಯಾಲಯದಲ್ಲಿ ವಕೀಲ ವೃತ್ತಿಯನ್ನು ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ನಮ್ಮೂರಲ್ಲಿ ನನ್ನದೊಂದು ಸ್ವಂತ ಮನೆಯಿದ್ದು ನಾನು ದಿನಾಲೂ ನಮ್ಮೂರಿನಿಂದ ಬೆಳಿಗ್ಗೆ ಯಾದಗಿರಿಗೆ ಹೋಗಿ ಸಾಯಂಕಾಲ ನಮ್ಮೂರಿಗೆ ಬರುತ್ತೆನೆ, ನನ್ನದೊಂದು ನಮ್ಮೂರಲ್ಲಿ ಖಾಸಗಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ ಇರುತ್ತದೆ, ಆ ಶಾಲೆಯ ಉಸ್ತುವಾರಿಯನ್ನು ನನ್ನ ಧರ್ಮಪತ್ನಿಯಾದ ವಿಜಯಲಕ್ಷ್ಮಿ ಇವರು ನೋಡಿಕೊಂಡು ಹೋಗುತ್ತಾರೆ, ಅವರು ಕೂಡಾ ದಿನಾಲೂ ಬೆಳಿಗ್ಗೆ ಶಾಲೆಗೆ ಹೋಗಿ ಸಾಯಂಕಾಲ ಮನೆಗೆ ಬರುತ್ತಾರೆ,
ಹೀಗಿರುವಾಗ ಪ್ರತಿನಿತ್ಯದಂತೆ ಇಂದು ದಿನಾಂಕ 12/03/2020 ರಂದು ಬೆಳಿಗ್ಗೆ 9-30 ಗಂಟೆಗೆ ನಾನು ನನ್ನ ಹೆಂಡತಿಯನ್ನು ಶಾಲೆಗೆ ಬಿಟ್ಟು ನಂತರ ನಾನು ಯಾದಗಿರಿಗೆ ಬಂದಿದ್ದೆನು, ಇಂದು ಯಾದಗಿರಿಯ ನ್ಯಾಯಾಲಯದಲ್ಲಿ ನನ್ನ ಕೆಲಸ ಬೇಗ ಮುಗಿದಿದ್ದರಿಂದ ನಾನು ಸಾಯಂಕಾಲ ಯಾದಗಿರಿಯಿಂದ ನಮ್ಮೂರಿನಲ್ಲಿರುವ ಸ್ಕೂಲಿಗೆ 4-15 ಪಿ.ಎಂಕ್ಕೆ ಹೋಗಿ ಅಲ್ಲಿ ನನ್ನ ಧರ್ಮಪತ್ನಿಯಾದ ವಿಜಯಲಕ್ಷ್ಮಿ ಇವರನ್ನು ಕರೆದುಕೊಂಡು ಸಾಯಂಕಾಲ 4-30 ಗಂಟೆಗೆ ನಮ್ಮ ಮನೆಗೆ ಹೋದೆನು, ನಮ್ಮ ಮನೆಯ ಕಂಪೌಂಡ ಗೇಟ ತೆರೆದುಕೊಂಡು ಒಳಗೆ ಹೋಗಿ ಮುಖ್ಯದ್ವಾರ ನೋಡುವಷ್ಟರಲ್ಲಿ ನನ್ನ ಮನೆಯ ಮುಖ್ಯ ಬಾಗಿಲದ ಕೊಂಡಿ ಮುರಿದು ಬಿದ್ದಿತ್ತು ಮತ್ತು ಕೀಲಿ ಕೆಳಗಡೆ ಬಿದ್ದಿತ್ತು ಆಗ ನಾನು ಮನೆಯ ಮುಖ್ಯದ್ವಾರ ದಬ್ಬಿ ನೋಡಲಾಗಿ ಒಳಗಡೆ ಕೊಂಡಿ ಹಾಕಿತ್ತು, ನಂತರ ನಾವು ಹಿಂದಿನ ಬಾಗಿಲ ಕಡೆಗೆ ಹೋಗಿ ನೋಡಲಾಗಿ ಹಿಂದಿನ ಬಾಗಿಲು ತೆರೆದಿತ್ತು, ನಾವು ಇಬ್ಬರೂ ಮನೆಯ ಒಳಗೆ ಹೋಗಿ ನೋಡಲಾಗಿ ಬೆಡ ರೂಮದಲ್ಲಿ ಇದ್ದ ಅಲಮಾರಿ ಬಾಗಿಲ ತೆರೆದಿತ್ತು, ಅದರ ಒಳಗಡೆಯಿದ್ದ ಲಾಕರ ಕೂಡಾ ತೆರೆದಿತ್ತು, ಮತ್ತು ಬಟ್ಟೆ ಬರೆಗಳು ಚಲ್ಲಾಪಿಲ್ಲಿಯಾಗಿದ್ದವು, ಲಾಕರ ಒಳಗಡೆ ನೋಡಲಾಗಿ ನಾನು ನಿನ್ನೆ ಇಟ್ಟಿದ್ದ ನಗದು 1,90,000/ರೂ ಹಣ ಕಾಣಲಿಲ್ಲ ಮತ್ತು ಇನ್ನೊಂದು ಅಲಮಾರಿಯ ಬಾಗಿಲ ತೆರೆದು ಅದರಲ್ಲಿದ್ದ ಸೀರೆಗಳು ಚಲ್ಲಾಪಿಲ್ಲಿಯಾಗಿದ್ದವು, ಯಾರೋ ಕಳ್ಳರು ನಮ್ಮ ಮನೆ ಕಳ್ಳತನ ಮಾಡಿದ್ದಾರೆ ಅಂತಾ ಖಚಿತಪಡಿಸಿಕೊಂಡೆವು,
ಇಂದು ದಿನಾಂಕ 12/03/2020 ರಂದು ಬೆಳಿಗ್ಗೆ 9-30 ಗಂಟೆಯಿಂದ ಸಾಯಂಕಾಲ 4-30 ಗಂಟೆಯ ಅವಧಿಯಲ್ಲಿ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಮನೆಯಲ್ಲಿಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಮುಖ್ಯ ದ್ವಾರದ ಕೊಂಡಿಯನ್ನು ಮುರಿದು ಮನೆಯೊಳಗೆ ಪ್ರವೇಶ ಮಾಡಿ ಮನೆಯ ಬೆಡ್ ರೂಮಿನ ಅಲಮಾರಿಯಲ್ಲಿಟ್ಟಿದ್ದ ನಗದು ಹಣ 1,90,000/ರೂ ಹಣವನ್ನು ಕಳ್ಳತನ ಮಾಡಿಕೊಂಡು ನಂತರ ಮುಖ್ಯದ್ವಾರದ ಮನೆಯ ಒಳಗಡೆ ಕೊಡಿ ಹಾಕಿ ಹಿಂದಿನ ಬಾಗಿಲದ ಒಳಗಡೆ ಕೊಂಡಿಯನ್ನು ತೆರೆದುಕೊಂಡು ಹೊರಗೆ ಹೋಗಿರುತ್ತಾರೆ, ಆದ್ದರಿಂದ ನನ್ನ ಮನೆ ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನು ರೀತಿ ಕ್ರಮ ಕೈಕೊಂಡು ನನ್ನ ಹಣ ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 35/2020 ಕಲಂ 454, 380 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗುರಮಿಠಕಲ ಪೊಲೀಸ ಠಾಣೆ ಗುನ್ನೆ ನಂ:- 43/2020 ಕಲಂ 454, 380 ಐಪಿಸಿ;- ಇಂದು ದಿನಾಂಕ 12.03.2020 ರಂದು ಪಿರ್ಯಾಧಿ ಮತ್ತು ಆತನ ಹೆಂಡತಿ ಇಬ್ಬರೂ ಸಹ ಶಿಕ್ಷಕರಿದ್ದು ಅವರು ಎಂದಿನಂತೆ ಇಂದು ಬೆಳಿಗ್ಗೆ 9.30 ಗಂಟೆಗೆ ಶಾಲೆಗೆ ಹೋದಾಗ ಸಮಯ ಬೆಳಿಗ್ಗೆ 10.00 ಗಂಟೆಯಿಂದ 10.45 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಪಿರ್ಯಾಧಿಯ ಮನೆ ಬಾಗಿಲು ಕೊಂಡಿ ಮುರಿದು ಮನೆಯಲ್ಲಿದ್ದ ಅಲಮರಿಯ ಕೊಂಡಿ ಮುರಿದು ಅದರಲ್ಲಿದ್ದ 12 ಗ್ರಾಮ್ ಬಂಗಾರದ ರಿಂಗು ಅ.ಕಿ 36000/-ರೂ ಮತ್ತು 5 ಗ್ರಾಮ್ ತಾಳಿಯ 12000/-ರೂ ಒಟ್ಟು 48000/-ರೂ ಮೌಲ್ಯದ ಬಂಗಾರದ ವಸ್ತುಗಳು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿದ ಬಗ್ಗೆ ಅಪರಾಧ.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 71/2019 ಕಲಂ 32(3) 15(ಎ) ಕನರ್ಾಟಕ ಅಭಕಾರಿ ಕಾಯ್ದೆ 1965:- ಇಂದು ದಿನಾಂಕ: 12/03/2020 ರಂದು 10 ಎ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀ ಚೇತನ್ ಪಿಎಸ್ಐ (ಕಾಸೂ-1) ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲು ನೊಂದಿಗೆ ಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:12-03-2020 ರಂದು 07 ಎ.ಎಂ.ಕ್ಕೆ ಶಖಾಪುರ ಗ್ರಾಮದ ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ್ ಖುಲ್ಲಾ ಸ್ಥಳದಲ್ಲಿ ಆರೋಪಿತನು ಒಂದು ಪ್ಲಾಸ್ಟೀಕ ಚೀಲದಲ್ಲಿದ್ದ ಮದ್ಯವನ್ನು ಸಂಗ್ರಹಿಸಿ ಮದ್ಯ ಮಾರಾಟ ಮಾಡಲು ಪರವಾನಿಗೆ ಇಲ್ಲದೆ ಚಿಲ್ಲರೆಯಾಗಿ ಮಾರಾಟ ಮಾಡುತ್ತಿರುವಾಗ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನಿಂದ 1) 90 ಎಮ್ಎಲ್ನ 50 ಒರಿಜಿನಲ್ ಚಾಯಿಸ್ ಡಿಲಕ್ಷ ವಿಸ್ಕಿ ಪ್ರತಿಯೊಂದಕ್ಕೆ 30.32=00 ರೂ ಗಳಿದ್ದು ಒಟ್ಟು 1516=00 ರೂಗಳು ಆಗುತ್ತದೆ. ಹೀಗೆ ಒಟ್ಟು 4500 ಎಮ್.ಎಲ್ನ ಮಧ್ಯ ವಿದ್ದು ಅದರ ಅ.ಕಿ 1516=00 ರೂ. ಕಿಮ್ಮತ್ತಿನವುಗಳಿದ್ದು ಇದಲ್ಲದೆ ನಗದು ಹಣ 670/- ರೂಗಳು ಮತ್ತು 4 ಪ್ಲಾಸ್ಟೀಕ ಗ್ಲಾಸುಗಳು ಅ.ಕಿ 00=00 ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.71/2020 ಕಲಂ: 32(3), 15(ಎ) ಕೆ.ಇ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಹುಣಸಗಿ ಗ್ರಾಮೀಣ ಠಾಣೆ ಗುನ್ನೆ ನಂ:-. 4/2020 174 ಸಿ.ಆರ್.ಪಿ.ಸಿ:- ದಿ:12/03/2020 ರಂದು ಬೆಳಿಗ್ಗೆ 08.30 ಗಂಟೆಗೆ ಫೀರ್ಯಾದಿ ಶ್ರೀಮತಿ.ದುಂಡಮ್ಮಾ ಗಂಡ ನಿಂಗಣ್ಣಗೌಡ ಅಗತಿರ್ಥ ವಯ-45 ಜಾ:ಹಿಂದೂ ರೆಡ್ಡಿ ಉ:ಹೊಲಮನೆಗೆಲಸ ಸಾ:ಗುಳಬಾಳ ತಾ:ಹುಣಸಗಿ ಜಿ:ಯಾದಗಿರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ದೂರು ಸಲ್ಲಿಸಿದ್ದರ ಸಾರಾಂಶವೆನೆಂದರೇ, ಮೃತನಿಗೆ ಸುಮಾರು 7-8 ವರ್ಷಗಳ ಹಿಂದೆ ಎಡಗೈ, ಎಡಗಾಲು & ಬಾಯಿಗೆ ಪಾಶ್ವರ್ುವಾಯು (ಲಕ್ವಾ) ಹೊಡೆದಿದ್ದು, ಸುಮಾರು ಕಡೆ ಆಸ್ಪತ್ರೆಗೆ ತೋರಿಸಿದರೂ ಗುಣಮುಖವಾಗಿರುವದಿಲ್ಲ. ಗುಣಮುಖವಾಗದೆ ಇದ್ದುದಕ್ಕೆ ಮೃತನು ಚಿಂತೆಯಲ್ಲಿದ್ದು, ಈಗ 3-4 ದಿವಸಗಳಿಂದ ಸಾಯುತ್ತೇನೆ ಅಂತಾ ಮನಸ್ಸಿನಲ್ಲಿ ಕೊರಗುತ್ತಾ ಊಟ ವಗೈರೆ ಬಿಟ್ಟಿದ್ದು ಇದ್ದು, ನಿನ್ನೆ ದಿನಾಂಕ: 11/03/2020 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ಮನೆಯಲ್ಲಿ ಎತ್ತಿನ ಕೊಟ್ಟಿಗೆ ಇರುವ ಅಟ್ಟದ ಕಟ್ಟಿಗೆಗೆ ಹಗ್ಗ ಕಟ್ಟಿ ಉರುಲು ಹಾಕಿಕೊಂಡು ನೇತಾಡುತ್ತಿದ್ದಾಗ ಫಿರ್ಯಾದಿ ಹಾಗೂ ಮಗಳು & ಅಳಿಯ ಕೂಡಿಕೊಂಡು ನೋಡಿದಾಗ ಮೃತಪಟ್ಟಿದ್ದು ಕಂಡು, ನಂತರ ಹಗ್ಗ ಬಿಚ್ಚಿ ಮನೆಯಲ್ಲಿ ಮಲಗಿಸಿರುತ್ತೇವೆ. ನನ್ನ ಗಂಡ ಪಾಶ್ವರ್ುವಾಯು (ಲಕ್ವಾ) ಹೊಡೆದಿದ್ದು, ಗುಣಮುಖವಾಗದೆ ಇದ್ದುರಿಂದ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಉರುಲು ಹಾಕಿಕೊಂಡು ಮೃತಪಟ್ಟಿದ್ದು, ನನ್ನ ಗಂಡನ ಮರಣದಲ್ಲಿ ಯಾರ ಮೇಲೆ ಯಾವ ಸಂಶಯವು ಇರುವದಿಲ್ಲ ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 12/2020 ಕಲಂ 107 ಸಿಆರ್ಪಿಸಿ :- ಇಂದು ದಿನಾಂಕ: 12/03/2020 ರಂದು 11.30 ಎಎಂ ಕ್ಕೆ ಠಾಣೆಯ ಶ್ರೀ ನಬಿಲಾಲ ಎಎಸ್ಐ ರವರು ಠಾಣೆಗೆ ಹಾಜರಾಗಿ ಒಂದು ವರದಿಯನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 12/03/2020 ರಂದು 10.00 ಎಎಮ್ ಸುಮಾರಿಗೆ ಬೀಟ ಉಸ್ತುವಾರಿ ಅಧಿಕಾರಿಯಾಗಿ ನನಗೆ ನೇಮಿಸಿದ ಬೀಟ ಏರಿಯಾದಲ್ಲಿನ ಸಗರ(ಬಿ) ಗ್ರಾಮಕ್ಕೆ ಭೇಟಿ ನೀಡಿದ್ದು ಸಗರ(ಬಿ) ಗ್ರಾಮದ ಹೊರವಲಯದಲ್ಲಿರುವ ಹಜರತ್ ಸೋಫಿ ಸರಮಸ್ತ್ ದಗರ್ಾದ ಮುತವಲ್ಲಿಯ ಅಧಿಕಾರಕ್ಕಾಗಿ ಎರಡು ಗುಂಪಿನವರ ಮಧ್ಯ ನನಗೆ ಬರುತ್ತದೆ ನನಗೆ ಬರುತ್ತದೆ ಎಂಬ ತಿಕ್ಕಾಟ ನಡೆದಿದ್ದು ಈ ಹಿಂದೆ ನಡೆದಿದ್ದ ಸದರಿ ದಗರ್ಾದ ಉರುಸ್ ಸಮಯದಲ್ಲಿ ಗಂಧದ ಚಾಜಾ ವಿಷಯದಲ್ಲಿ ತಕರಾರು ಮಾಡಿಕೊಂಡಿದ್ದು ಅದನ್ನು ಮಾತಿನಿಂದ ಹೇಳಿ ಬಗೆಹರಿಸಿದ್ದು ಆದರೆ ಸದ್ಯ ಅದೇ ವಿಷಯಕ್ಕೆ ಸಂಬಂಧಿಸಿದ ಹಾಗೆ ದಗರ್ಾದ ಮುತವಲ್ಲಿಯ ಉಸ್ತುವಾರಿ ಕುರಿತು ಸಮಸ್ಯೆ ಮಾಡಿಕೊಳ್ಳುತ್ತಿದ್ದ ಬಗ್ಗೆ ಕಂಡು ಬಂದಿದ್ದು ಇದಕ್ಕೆ ಸಂಬಂಧಿಸಿದಂತೆ ಎರಡೂ ಗುಂಪಿನ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಗ್ರಾಮದಲ್ಲಿ ಶಾಂತಿ ಕದಡುವ ಸಂಭವ ಕಂಡು ಬಂದಿದ್ದು ತಕರಾರಿಗೆ ಕಾರಣರಾದ 1ನೇ ಪಾಟರ್ಿಯವರಾದ 1) ಸೈಯದ ಶಹಾ ಅಸದುಲ್ಲಾ ಸರ್ಮಸ್ತ ತಂದೆ ಸೈಯದ ಶಹಾ ಗಯಾಸೋದ್ದೀನ ಸರ್ಮಸ್ತ ವ|| 40ವರ್ಷ ಜಾ|| ಮುಸ್ಲಿಂ ಸಾ|| ಸಗರ(ಬಿ)ತಾ|| ಶಹಾಪೂರ ರವರು ಸದರಿ ದಗರ್ಾದ ಮುತವಲ್ಲಿ ಉಸ್ತುವಾರಿ ವಿಷಯದಲ್ಲಿ ತಕರಾರು ಮಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗ ಉಂಟು ಮಾಡುವ ಸಾಧ್ಯತೆ ಕಂಡು ಬಂದಿದ್ದರಿಂದ ಇಂದು ದಿನಾಂಕ: 12/03/2020 ರಂದು 11.30 ಎಎಮ್ ಕ್ಕೆ ಠಾಣೆಗೆ ಬಂದು ಸದರಿಯವರ ವಿರುದ್ದ ಮುಂಜಾಗ್ರತ ಕ್ರಮ ಜರುಗಿಸಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಪಿಎಆರ್ ನಂ 12/2020 ಕಲಂ 107 ಸಿಆರ್ ಪಿಸಿ ನೇದ್ದರಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಪಿಎಆರ್ ನಂ 13/2020 ಕಲಂ 107 ಸಿಆರ್ಪಿಸಿ :- ಇಂದು ದಿನಾಂಕ: 12/03/2020 ರಂದು 12.30 ಪಿಎಂ ಕ್ಕೆ ಠಾಣೆಯ ಶ್ರೀ ನಬಿಲಾಲ ಎಎಸ್ಐ ರವರು ಠಾಣೆಗೆ ಹಾಜರಾಗಿ ಒಂದು ವರದಿಯನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 12/03/2020 ರಂದು 10.00 ಎಎಮ್ ಸುಮಾರಿಗೆ ಬೀಟ ಉಸ್ತುವಾರಿ ಅಧಿಕಾರಿಯಾಗಿ ನನಗೆ ನೇಮಿಸಿದ ಬೀಟ ಏರಿಯಾದಲ್ಲಿನ ಸಗರ(ಬಿ) ಗ್ರಾಮಕ್ಕೆ ಭೇಟಿ ನೀಡಿದ್ದು ಸಗರ(ಬಿ) ಗ್ರಾಮದ ಹೊರವಲಯದಲ್ಲಿರುವ ಹಜರತ್ ಸೋಫಿ ಸರಮಸ್ತ್ ದಗರ್ಾದ ಮುತವಲ್ಲಿಯ ಅಧಿಕಾರಕ್ಕಾಗಿ ಎರಡು ಗುಂಪಿನವರ ಮಧ್ಯ ನನಗೆ ಬರುತ್ತದೆ ನನಗೆ ಬರುತ್ತದೆ ಎಂಬ ತಿಕ್ಕಾಟ ನಡೆದಿದ್ದು ಈ ಹಿಂದೆ ನಡೆದಿದ್ದ ಸದರಿ ದಗರ್ಾದ ಉರುಸ್ ಸಮಯದಲ್ಲಿ ಗಂಧದ ಚಾಜಾ ವಿಷಯದಲ್ಲಿ ತಕರಾರು ಮಾಡಿಕೊಂಡಿದ್ದು ಅದನ್ನು ಮಾತಿನಿಂದ ಹೇಳಿ ಬಗೆಹರಿಸಿದ್ದು ಆದರೆ ಸದ್ಯ ಅದೇ ವಿಷಯಕ್ಕೆ ಸಂಬಂಧಿಸಿದ ಹಾಗೆ ದಗರ್ಾದ ಮುತವಲ್ಲಿಯ ಉಸ್ತುವಾರಿ ಕುರಿತು ಸಮಸ್ಯೆ ಮಾಡಿಕೊಳ್ಳುತ್ತಿದ್ದ ಬಗ್ಗೆ ಕಂಡು ಬಂದಿದ್ದು ಇದಕ್ಕೆ ಸಂಬಂಧಿಸಿದಂತೆ ಎರಡೂ ಗುಂಪಿನ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಗ್ರಾಮದಲ್ಲಿ ಶಾಂತಿ ಕದಡುವ ಸಂಭವ ಕಂಡು ಬಂದಿದ್ದು ತಕರಾರಿಗೆ ಕಾರಣರಾದ 2ನೇ ಪಾಟರ್ಿಯವರಾದ 1) ಮುಜಿಬೋದ್ದೀನ್ ಸರ್ಮಸ್ತ ತಂದೆ ನಜಿಮುಲ್ಲಾ ಉದಾ ಸರ್ಮಸ್ತ ವ|| 30ವರ್ಷ ಜಾ|| ಮುಸ್ಲಿಂ ಸಾ|| ಇಸ್ಲಾಮಾಬಾದ ಕಾಲೋನಿ ಕಲಬುರಗಿ ತಾ|| ಜಿ|| ಕಲಬುರಗಿ 2) ಸೈಯದ ಸೈಯದುದ್ದೀನ ಖಾದ್ರಿ ತಂದೆ ಸೈಯದ ಗೌಸ್ ಮೈನೋದ್ದೀನ ಖಾದ್ರಿ ವ|| 40ವರ್ಷ ಜಾ|| ಮುಸ್ಲಿಂ ಸಾ|| ಜಾಲಗಾರ ಓಣಿ ಶಹಾಪೂರ ತಾ|| ಶಹಾಪೂರ 3) ತಲಕಚಾಂದ ತಂದೆ ಗಫೂರಚಾಂದ ಚಾಂದ ವ|| 38ವರ್ಷ ಜಾ|| ಮುಸ್ಲಿಂ ಸಾ|| ಖವಾಸಪೂರ ಓಣಿ ಶಹಾಪೂರ ತಾ|| ಶಹಾಪೂರ ರವರು ಸದರಿ ದಗರ್ಾದ ಮುತವಲ್ಲಿ ಉಸ್ತುವಾರಿ ವಿಷಯದಲ್ಲಿ ತಕರಾರು ಮಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗ ಉಂಟು ಮಾಡುವ ಸಾಧ್ಯತೆ ಕಂಡು ಬಂದಿದ್ದರಿಂದ ಇಂದು ದಿನಾಂಕ: 12/03/2020 ರಂದು 12.30 ಪಿಎಮ್ ಕ್ಕೆ ಠಾಣೆಗೆ ಬಂದು ಸದರಿಯವರ ವಿರುದ್ದ ಮುಂಜಾಗ್ರತ ಕ್ರಮ ಜರುಗಿಸಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಪಿಎಆರ್ ನಂ 13/2020 ಕಲಂ 107 ಸಿಆರ್ ಪಿಸಿ ನೇದ್ದರಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 84/2020. ಕಲಂ 379 ಐ.ಪಿ.ಸಿ.ಮತ್ತು ಕಲಂ.44 (1) ಕೆ.ಎಮ್.ಎಮ್.ಸಿ.ಆರ್ ರೂಲ್:- ದಿನಾಂಕ: 12-02-2020 ರಂದು 12:30 ಪಿ.ಎಮ್.ಕ್ಕೆ ಆರೋಪಿತರು ತಮ್ಮ ಟ್ರ್ಯಾಕ್ಟರದಲ್ಲಿ ನೇದ್ದರಲ್ಲಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಸರಕಾರಕ್ಕೆ ಯಾವುದೇ ತೆರಿಗೆ ತುಂಬದೇ ಅಕ್ರಮವಾಗಿ ಸಾಗಿಸುತ್ತಿದ್ದಾಗ ಫಿಯರ್ಾದಿದಾರರು ಯಕ್ಷಂತಿ ಗ್ರಾಮದ ಕೃಷ್ನಾ ನದಿಯಲ್ಲಿ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಹೋಗಿ ದಾಳಿಮಾಡಿ ಮರಳು ತುಂಬಿದ ಟ್ರ್ಯಾಕ್ಟರ ವಶಪಡಿಸಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರ ಆಧಾರದ ಮೇಲಿಂದ ಠಾಣೆ ಗುನ್ನೆ ನಂ.84/2019 ಕಲಂ. 379 ಐ.ಪಿ.ಸಿ. ಮತ್ತು ಕಲಂ 44(1) ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 85/2020.ಕಲಂಃ 379.ಐ.ಪಿ.ಸಿ. 44(1) ಕೆ.ಎಂ.ಎಂ.ಸಿ.ಆರ್.:- ಇಂದು ದಿನಾಂಕ 12/03/2020 ರಂದು 2.30 ಪಿ.ಎಂ ಕ್ಕೆ ಠಾಣೆಗೆ ಬಂದು ಸ.ತ. ಶ್ರೀ ಚಂದ್ರಕಾಂತ ಪಿಎಸ್ಐ. ಶಹಾಪೂರ ಠಾಣೆರವರು ಒಂದು ಮರಳು ತುಂಬಿದ ಟ್ರ್ಯಾಕ್ಟರ್, ಜಪ್ತಿ ಪಂಚನಾಮೆ, ಒಬ್ಬ ವ್ಯಕ್ತಿಯನ್ನು ಹಾಜರಪಡಿಸಿ ವರದಿ ಕೊಟ್ಟ ಸಾರಾಂಶವೆನೆಂದರೆ ಇಂದು ದಿನಾಂಕ 12/03/2020 ರಂದು 12.30 ಪಿ.ಎಂ ಕ್ಕೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ ಯಕ್ಷಿಂತಿ ಹೊಳೆಯ ಕಡೆಯಿಂದ ಹತ್ತಿಗುಡೂರ ಗ್ರಾಮದ ಮುಖಾಂತರ ಒಂದು ಟ್ರ್ಯಾಕ್ಟರದಲ್ಲಿ ಮರಳು ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ವಿಭೂತಿಹಳ್ಳಿ ಕಡೆಗೆ ಬರುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ದೇವರಾಜ ಪಿಸಿ 282 ರವರಿಗೆ ಇಬ್ಬರು ಪಂಚರನ್ನು ಠಾಣೆಗೆ ಕರೆದುಕೊಂಡು ಬರಲು ತಿಳಿಸಿದೆನು. ದೇವರಾಜ ಪಿಸಿ 282 ರವರು ಹೋಗಿ ಇಬ್ಬರು ಪಂಚರಾದ 1) ಶ್ರೀ ಅಮಲಪ್ಪ ತಂದೆ ಭೀಮಪ್ಪ ಐಕೂರ ವ|| 50 ವರ್ಷ ಜಾ|| ಪ.ಜಾತಿ ಉ|| ಕೂಲಿ ಸಾ|| ದೇವಿನಗರ ಶಹಾಪೂರ 2) ಶ್ರೀ ಭೀಮಣ್ಣ ತಂದೆ ಸಾಯಬಣ್ಣ ಭಜಂತ್ರಿ ವ|| 32ವರ್ಷ ಜಾ|| ಪ.ಜಾತಿ ಉ|| ಕೂಲಿ ಸಾ|| ಸಗರ(ಬಿ) ತಾ|| ಶಹಾಪೂರ ರವರನ್ನು ಕರೆದುಕೊಂಡು ಠಾಣೆಗೆ ಬಂದಿದ್ದು ಪಂಚರಿಗೆ ಸದರಿ ವಿಷಯ ತಿಳಿಸಿ ನಮ್ಮೊಂದಿಗೆ ಪಂಚರಾಗಿ ಬಂದು ದಾಳಿಗೆ ಸಹಕರಿಸಬೇಕು ಅಂತಾ ಕೇಳಿಕೊಂಡ ಮೇರೆಗೆ ಅವರು ಒಪ್ಪಿಕೊಂಡರು. ನಂತರ ನಾನು ಠಾಣೆಯ ಸಿಬ್ಬಂದಿ ಜನರಾದ ದೇವರಾಜ ಪಿಸಿ 282, ಮಲ್ಲಣ್ಣ ಹೆಚ್.ಸಿ 79 ಮತ್ತು ಶಿವರಾಜ ಪಿಸಿ 150 ರವರಿಗೆ ವಿಷಯ ತಿಳಿಸಿ ದಾಳಿ ಕುರಿತು ಅವರಿಗೆ ಮತ್ತು ಪಂಚರಿಗೆ ಕರೆದುಕೊಂಡು ಠಾಣೆಯಿಂದ 12.40 ಪಿ.ಎಂ ಕ್ಕೆ ಠಾಣೆಯ ಜೀಪ್ ನಂ ಕೆಎ 32 ಜಿ 618 ನೇದ್ದರಲ್ಲಿ ಹೊರಟು ರಸ್ತಾಪೂರ ಕ್ರಾಸ್ ಹತ್ತಿರ 12.50 ಪಿ.ಎಂ ಕ್ಕೆ ಹೋಗಿದ್ದು ರಸ್ತಾಪೂರ ಕ್ರಾಸ್ ಹತ್ತಿರ ಮರೆಯಲ್ಲಿ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ನಿಂತೆವು. ನಿಂತಾಗ ಹತ್ತಿಗುಡೂರ ಕಡೆಯಿಂದ 12.55 ಪಿ.ಎಂ ಕ್ಕೆ ಒಂದು ಮರಳು ತುಂಬಿದ ಟ್ರ್ಯಾಕ್ಟರ ಬಂತು ನಾವು ಅದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರೊದಿಗೆ ಕೈಮಾಡಿ ನಿಲ್ಲಿಸಿ ಟ್ರ್ಯಾಕ್ಟರ ಚಾಲಕನಿಗೆ ಮರಳು ಸಾಗಿಸಲು ಸಕರ್ಾರಕ್ಕೆ ತುಂಬಿದ ರಾಜಧನದ ರಸೀದಿ ನೀಡಲು ಮತ್ತು ಕಾಗದ ಪತ್ರಗಳನ್ನು ವಿಚಾರಿಸಲಾಗಿ ಚಾಲಕನು ತನ್ನ ಹತ್ತಿರ ಯಾವುದೇ ಕಾಗದ ಪತ್ರಗಳು ಇರುವುದಿಲ್ಲ ಟ್ರ್ಯಾಕ್ಟರ ಮಾಲೀಕರು ಯಕ್ಷಿಂತಿ ಹೊಳೆಯಲ್ಲಿ ಅಕ್ರಮವಾಗಿ ಮರಳು ತುಂಬಿಸಿ ಕಳುಹಿಸಿದ್ದು ಅದನ್ನು ನಾನು ತೆಗೆದುಕೊಂಡು ಹೋಗುತ್ತಿದ್ದೇನೆ ಅಂತಾ ಹೇಳುತ್ತ ಅವನ ಹೆಸರು ವಿಳಾಸ ಕೇಳುವಷ್ಟರಲ್ಲಿ ಟ್ರ್ಯಾಕ್ಟರ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಟ್ರ್ಯಾಕ್ಟರನ ಚಾಲಕ ಮತ್ತು ಮಾಲೀಕನ ಹೆಸರು ಗೊತ್ತಾಗಲಿಲ್ಲ. ಸದರಿ ಮರಳು ತುಂಬಿದ ಟ್ರ್ಯಾಕ್ಟರ ನಂಬರನ್ನು ಸಿಬ್ಬಂದಿಯ ಸಹಾಯದಿಂದ ಪರಿಶೀಲಿಸಿ ನೋಡಲಾಗಿ ಅದು ಮಹಿಂದ್ರಾ 475 ಕಂಪನಿಯ ಕೆಂಪು ಬಣ್ಣದ ಟ್ರ್ಯಾಕ್ಟರ ಇದ್ದು ಟ್ರ್ಯಾಕ್ಟರಗೆ ನಂಬರ ಇರುವುದಿಲ್ಲ ಅದರ ಇಂಜಿನ್ ನಂ ಖಎಘಿಃ00022 ನೇದ್ದು ಅಂ|| ಕಿ|| 2,00,000/- ರೂ ಹಾಗೂ ಅದರೊಂದಿಗೆ ಕೆಂಪು ಬಣ್ಣದ ಟ್ರಾಲಿ ಸಮೇತ ಇದ್ದು ಟ್ರಾಲಿಗೆ ನಂಬರ ಇರುವುದಿಲ್ಲ ಟ್ರಾಲಿಯ ಅಂ|| ಕಿ|| 50,000/- ರೂ ಇದ್ದು ಟ್ರಾಲಿಯಲ್ಲಿ ಅಂದಾಜು 1 ಬ್ರಾಸ್ ಮರಳು ತುಂಬಿದ್ದು ಅದರ ಅ|| ಕಿ|| 1500=00 ರೂ ಆಗಬಹುದು ಮತ್ತು ಮರಳು ಸಾಗಾಣಿಕೆ ಮಾಡುತ್ತಿದ್ದ ಮಹಿಂದ್ರಾ 475 ಟ್ರ್ಯಾಕ್ಟರ ಇಂಜಿನ್ ನಂ ಖಎಘಿಃ00022 ನೇದ್ದರಲ್ಲಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲೀಕ ಇಬ್ಬರೂ ಕೂಡಿ ಸರಕಾರದಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ ಪಂಚರ ಸಮಕ್ಷಮ 1.00 ಪಿ.ಎಮ್. ದಿಂದ 2.00 ಪಿ.ಎಮ್ದ ವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಸದರಿ ಟ್ರ್ಯಾಕ್ಟರನ್ನು ಬೇರೆ ಪರಿಚಯಸ್ಥ ಚಾಲಕನ ಮೂಲಕ ಸಿಬ್ಬಂದಿಯವರ ಸಹಾಯದಿಂದ ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ಠಾಣೆಗೆ 2.15 ಪಿಎಂ ಕ್ಕೆ ತಂದು ನಿಲ್ಲಿಸಿ ವರದಿಯನ್ನು ತಯ್ಯಾರಿಸಿ ಸದರಿ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕನ ವಿರುದ್ದ ಮುಂದಿನ ಕ್ರಮ ಕೈಕೊಳ್ಳಲು ದಿನಾಂಕ 12/3/2020 ರಂದು 2.30 ಪಿ.ಎಂ.ಕ್ಕೆ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 85/2020 ಕಲಂ 379. ಐ.ಪಿ.ಸಿ. ಮತ್ತು 44(1) ಕೆ.ಎಂ.ಎಂ.ಸಿ.ಆರ್ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಂ 86/2020.ಕಲಂಃ 379.ಐ.ಪಿ.ಸಿ. 44(1) ಕೆ.ಎಂ.ಎಂ.ಸಿ.ಆರ್.:- ಇಂದು ದಿನಾಂಕ 12/03/2020 ರಂದು 5.00 ಪಿಎ.ಎಂ ಕ್ಕೆ ಠಾಣೆಗೆ ಬಂದು ಸ.ತ. ಶ್ರೀ ಸಿದ್ದೇಶ್ವರ ಪಿಎಸ್ಐ. ಶಹಾಪೂರ ಠಾಣೆರವರು ಒಂದು ಮರಳು ತುಂಬಿದ ಟ್ರ್ಯಾಕ್ಟರ್, ಜಪ್ತಿ ಪಂಚನಾಮೆ, ಒಬ್ಬ ವ್ಯಕ್ತಿಯನ್ನು ಹಾಜರಪಡಿಸಿ ವರದಿ ಕೊಟ್ಟ ಸಾರಾಂಶವೆನೆಂದರೆ ಇಂದು ದಿನಾಂಕ 12/03/2020 ರಂದು 2.30 ಪಿ.ಎಂ ಕ್ಕೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ ಯಕ್ಷಿಂತಿ ಹೊಳೆಯ ಕಡೆಯಿಂದ ಹತ್ತಿಗುಡೂರ ಗ್ರಾಮದ ಮುಖಾಂತರ ಒಂದು ಟ್ರ್ಯಾಕ್ಟರದಲ್ಲಿ ಮರಳು ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ಹುಂಡೇಕಲ್ ಕಡೆಗೆ ಬರುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಭೀಮನಗೌಡ ಪಿಸಿ 402 ರವರಿಗೆ ಇಬ್ಬರು ಪಂಚರನ್ನು ಠಾಣೆಗೆ ಕರೆದುಕೊಂಡು ಬರಲು ತಿಳಿಸಿದೆನು. ಭೀಮನಗೌಡ ಪಿಸಿ 402 ರವರು ಹೋಗಿ ಇಬ್ಬರು ಪಂಚರಾದ 1) ಶ್ರೀ ಅಮಲಪ್ಪ ತಂದೆ ಭೀಮಪ್ಪ ಐಕೂರ ವ|| 50 ವರ್ಷ ಜಾ|| ಪ.ಜಾತಿ ಉ|| ಕೂಲಿ ಸಾ|| ದೇವಿನಗರ ಶಹಾಪೂರ 2) ಶ್ರೀ ಭೀಮಣ್ಣ ತಂದೆ ಸಾಯಬಣ್ಣ ಭಜಂತ್ರಿ ವ|| 32ವರ್ಷ ಜಾ|| ಪ.ಜಾತಿ ಉ|| ಕೂಲಿ ಸಾ|| ಸಗರ(ಬಿ) ತಾ|| ಶಹಾಪೂರ ರವರನ್ನು ಕರೆದುಕೊಂಡು ಠಾಣೆಗೆ ಬಂದಿದ್ದು ಪಂಚರಿಗೆ ಸದರಿ ವಿಷಯ ತಿಳಿಸಿ ನಮ್ಮೊಂದಿಗೆ ಪಂಚರಾಗಿ ಬಂದು ದಾಳಿಗೆ ಸಹಕರಿಸಬೇಕು ಅಂತಾ ಕೇಳಿಕೊಂಡ ಮೇರೆಗೆ ಅವರು ಒಪ್ಪಿಕೊಂಡರು. ನಂತರ ನಾನು ಠಾಣೆಯ ಸಿಬ್ಬಂದಿ ಜನರಾದ ಭೀಮನಗೌಡ ಪಿಸಿ 402, ಮತ್ತು ಶಿವರಾಜ ಪಿಸಿ 150 ರವರಿಗೆ ವಿಷಯ ತಿಳಿಸಿ ದಾಳಿ ಕುರಿತು ಅವರಿಗೆ ಮತ್ತು ಪಂಚರಿಗೆ ಕರೆದುಕೊಂಡು ಠಾಣೆಯಿಂದ 2.40 ಪಿ.ಎಂ ಕ್ಕೆ ಒಂದು ಖಾಸಗಿ ಜೀಪಿನಲ್ಲಿ ಹೊರಟು ಹಯ್ಯಾಳ ಕ್ರಾಸ್ ಹತ್ತಿರ 3.00 ಪಿ.ಎಂ ಕ್ಕೆ ಹೋಗಿದ್ದು ಹಯ್ಯಾಳ ಕ್ರಾಸ್ ಹತ್ತಿರ ಮರೆಯಲ್ಲಿ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ನಿಂತೆವು. ನಿಂತಾಗ ಹತ್ತಿಗುಡೂರ ಕಡೆಯಿಂದ 3.10 ಪಿ.ಎಂ ಕ್ಕೆ ಒಂದು ಮರಳು ತುಂಬಿದ ಟ್ರ್ಯಾಕ್ಟರ ಬಂತು ನಾವು ಅದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರೊದಿಗೆ ಕೈಮಾಡಿ ನಿಲ್ಲಿಸಿ ಟ್ರ್ಯಾಕ್ಟರ ಚಾಲಕನಿಗೆ ಮರಳು ಸಾಗಿಸಲು ಸಕರ್ಾರಕ್ಕೆ ತುಂಬಿದ ರಾಜಧನದ ರಸೀದಿ ನೀಡಲು ಮತ್ತು ಕಾಗದ ಪತ್ರಗಳನ್ನು ವಿಚಾರಿಸಲಾಗಿ ಚಾಲಕನು ತನ್ನ ಹತ್ತಿರ ಯಾವುದೇ ಕಾಗದ ಪತ್ರಗಳು ಇರುವುದಿಲ್ಲ ಟ್ರ್ಯಾಕ್ಟರ ಮಾಲೀಕರು ಯಕ್ಷಿಂತಿ ಹೊಳೆಯಲ್ಲಿ ಅಕ್ರಮವಾಗಿ ಮರಳು ತುಂಬಿಸಿ ಕಳುಹಿಸಿದ್ದು ಅದನ್ನು ನಾನು ತೆಗೆದುಕೊಂಡು ಹೋಗುತ್ತಿದ್ದೇನೆ ಅಂತಾ ಹೇಳುತ್ತ ಅವನ ಹೆಸರು ವಿಳಾಸ ಕೇಳುವಷ್ಟರಲ್ಲಿ ಟ್ರ್ಯಾಕ್ಟರ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಟ್ರ್ಯಾಕ್ಟರನ ಚಾಲಕ ಮತ್ತು ಮಾಲೀಕನ ಹೆಸರು ಗೊತ್ತಾಗಲಿಲ್ಲ. ಸದರಿ ಮರಳು ತುಂಬಿದ ಟ್ರ್ಯಾಕ್ಟರ ನಂಬರನ್ನು ಸಿಬ್ಬಂದಿಯ ಸಹಾಯದಿಂದ ಪರಿಶೀಲಿಸಿ ನೋಡಲಾಗಿ ಅದು ಮಹಿಂದ್ರಾ 475 ಡಿಐ ಕಂಪನಿಯ ಕೆಂಪು ಬಣ್ಣದ ಟ್ರ್ಯಾಕ್ಟರ ಇದ್ದು ಟ್ರ್ಯಾಕ್ಟರಗೆ ನಂಬರ ಇರುವುದಿಲ್ಲ ಅದರ ಇಂಜಿನ್ ನಂ ಚಎಃಅ03192 ನೇದ್ದು ಅಂ|| ಕಿ|| 2,00,000/- ರೂ ಹಾಗೂ ಅದರೊಂದಿಗೆ ಕೆಂಪು ಬಣ್ಣದ ಟ್ರಾಲಿ ಸಮೇತ ಇದ್ದು ಟ್ರಾಲಿಗೆ ನಂಬರ ಇರುವುದಿಲ್ಲ ಟ್ರಾಲಿಯ ಅಂ|| ಕಿ|| 50,000/- ರೂ ಇದ್ದು ಟ್ರಾಲಿಯಲ್ಲಿ ಅಂದಾಜು 1 ಬ್ರಾಸ್ ಮರಳು ತುಂಬಿದ್ದು ಅದರ ಅ|| ಕಿ|| 1500=00 ರೂ ಆಗಬಹುದು ಮತ್ತು ಮರಳು ಸಾಗಾಣಿಕೆ ಮಾಡುತ್ತಿದ್ದ ಮಹಿಂದ್ರಾ 475 ಡಿಐ ಟ್ರ್ಯಾಕ್ಟರ ಇಂಜಿನ್ ನಂ ಚಎಃಅ03192 ನೇದ್ದರಲ್ಲಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲೀಕ ಇಬ್ಬರೂ ಕೂಡಿ ಸರಕಾರದಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ ಪಂಚರ ಸಮಕ್ಷಮ 3.15 ಪಿ.ಎಮ್. ದಿಂದ 4.15 ಪಿ.ಎಮ್ದ ವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಸದರಿ ಟ್ರ್ಯಾಕ್ಟರನ್ನು ಬೇರೆ ಪರಿಚಯಸ್ಥ ಚಾಲಕನ ಮೂಲಕ ಸಿಬ್ಬಂದಿಯವರ ಸಹಾಯದಿಂದ ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ಠಾಣೆಗೆ 4.45 ಪಿಎಂ ಕ್ಕೆ ತಂದು ನಿಲ್ಲಿಸಿ ವರದಿಯನ್ನು ತಯ್ಯಾರಿಸಿ ಸದರಿ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕನ ವಿರುದ್ದ ಮುಂದಿನ ಕ್ರಮ ಕೈಕೊಳ್ಳಲು ದಿನಾಂಕ 12/3/2020 ರಂದು 5.00 ಪಿ.ಎಂ.ಕ್ಕೆ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 86/2020 ಕಲಂ 379. ಐ.ಪಿ.ಸಿ. ಮತ್ತು 44(1) ಕೆ.ಎಂ.ಎಂ.ಸಿ.ಆರ್ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.
ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 44/2020 ಕಲಂ 341, 323, 504, 506 ಸಂ 34 ಐಪಿಸಿ:- ದಿನಾಂಕ 10.3.2020 ರಂದು ಮಧ್ಯಾಹ್ನ 3.00 ಗಂಟೆ ಸುಮಾರಿಗೆ ನಜರಾಪೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಅನುಧಾನದಲ್ಲಿ ಎಸ್.ಸಿ ಕೇರಿಯಲ್ಲಿ ನೀರಿನ ಪೈಪಲೈನ ಕಾಮಗಾರಿ ವೀಕ್ಷಣೆ ಮಾಡಿ ಮರಳಿ ಬರುತ್ತಿದ್ದಾಗ ಆರೋಪಿತರು ಪಿರ್ಯಾಧಿಗೆ ತಡೆದು ನಿಲ್ಲಿಸಿ ಮಾಹಿತಿ ಹಕ್ಕು ಅಡಿಯಲ್ಲಿ ಮಾಹಿತಿ ಕೇಳುತಾನ ಅಂತಾ ಅವಾಚ್ಯವಾಗಿ ಬೈದು ಕೈಯಿಂದ, ಚಪ್ಪಲಿಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ
Hello There!If you like this article Share with your friend using