ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11/03/2020

By blogger on ಶುಕ್ರವಾರ, ಮಾರ್ಚ್ 13, 2020                                ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11/03/2020 

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 34/2020 ಕಲಂ 143, 147, 148, 504, 506, 447 ಸಂಗಡ 149 ಐಪಿಸಿ:- ಇಂದು ದಿನಾಂಕ 11-03-2020 ರಂದು 10 ಎ.ಎಮ್ ಕ್ಕೆ ಶ್ರೀ ದೇವಪ್ಪಾ ತಂದೆ ಹರ್ಯಾ ಸಾ: ಜೀನಕೇರಾ ತಂಡಾ ತಾಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಲಿಖಿತ ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಜೀನಕೇರಾ ಗ್ರಾಮದ ಹೋಲ ಸವರ್ೆ ನಂ: 199 ಇದರ ಕ್ಷೇತ್ರ 1 ಎಕರೆ 21 ಗುಂಟೆ  ಇದ್ದು ಸದರಿ ಜಮೀನನ್ನು ನಾನೇ ಮಾಲೀಕ ಮತ್ತು ಕಬ್ಜೇದಾರನಿದ್ದು ಮತ್ತು ಸಾಗುವಳಿ ಮಾಡುತ್ತಾ ಬಂದಿರುತ್ತೆನೆ. ಕಳೆದ ದಿನಾಂಕ 07-03-2020 ರಂದು 4 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಮ್ಮನಾದ ಶರಣ್ಯಾ ತಂದೆ ಸೀತ್ಯಾ ನಾವಿಬ್ಬರೂ ಮತ್ತು ಸಿದ್ದ್ಯಾ ತಂದೆ ನರಸಿಂಗ ನಾವು ಮೂವರು ನಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಜೀನಕೇರಾ ತಾಂಡಾದ 1) ಸೂರಪ್ಪಾ ತಂದೆ ಲೋಕಪ್ಪಾ ಜಾಧವ 2) ಹನ್ನಿಬಾಯಿ ಗಂಡ ಸೂರಪ್ಪಾ ಜಾಧವ 3) ಕಾಳಪ್ಪಾ ತಂದೆ ಸೂರಪ್ಪಾ ಜಾಧವ 4)ಲಕ್ಷ್ಮೀಬಾಯಿ ಗಂಡ ಕಾಳಪ್ಪಾ 5) ಪರಶುರಾಮ ತಂದೆ ಸೂರಪ್ಪಾ 6) ಶಾಣಿಬಾಯಿ ಗಂಡ ಪರಶುರಾಮ 7) ವಿಜಯಕುಮಾರ ತಂದೆ ಸೂರಪ್ಪಾ 8)ಗೋಬ್ರ್ಯಾ ತಂದೆ ರೇವ್ಯಾ 9) ಪನ್ನಿಬಾಯಿ ಗಂಡ ಗೋಬ್ರ್ಯಾ 10) ಪರಶುರಾಮ ತಂದೆ ಗೋಬ್ರ್ಯಾ 11)ಶಂಕ್ರೀಬಾಯಿ ಗಂಡ ಪರಶುರಾಮ 12)ಯಂಕಪ್ಪಾ ತಂದೆ ಗೋಬ್ರ್ಯಾ 13) ತುಕ್ಕಪ್ಪಾ ತಂದೆ ಗೋಬ್ರ್ಯಾ 14)ಕಮಲಿಬಾಯಿ ಗಂಡ ಯಂಕಪ್ಪಾ 15)ಶಂಕರ ತಂದೆ ಗೋಬ್ರ್ಯಾ 16) ಜಯಾ ತಂದೆ ಯಂಕಪ್ಪಾ 17) ಶಂಕರ ತಂದೆ ತುಕ್ಕಪ್ಪಾ 18)ದೇವಿಬಾಯಿ ಗಂಡ ಶಂಕರ ಇವರೆಲ್ಲರೂ ಕಲ್ಲು ಬಡಿಗೆ ಹಿಡಿದುಕೊಂಡು ನನ್ನ ಜಮೀನುನಲ್ಲಿ ಬಂದವರೇ ಎಲ್ಲರೂ ಎಲೇ ದೇವ್ಯಾ ಭೊಸುಡಿ ಮಗನೇ, ರಂಡಿ ಮಗನೇ ಮತ್ತು ನನ್ನ ಅಣ್ಣ ತಂಮ್ಮಂದಿರರಿಗೆ ಅವಾಚ್ಯ ಶಬ್ದಗಳಿಂದ ಬೈದು ನಾವು ಇದೇ ಜಮೀನುನಲ್ಲಿ ಟ್ರ್ಯಾಕ್ಟರ ನಿಲ್ಲಿಸುತ್ತೆವೆ, ಎಮ್ಮೆಗಳನ್ನು ಕಟ್ಟುತ್ತೆವೆ, ಮತ್ತು ಕಲ್ಲು ಕಟ್ಟಿಗೆ ಹಾಕುತ್ತೆವೆ ಅಂತಾ ಅಂದವರೇ ನೀನು ಏನು ಮಾಡಕೊಳ್ಳುತ್ತಿ ಮಾಡಕೋ ಅಂತಾ ಹೇಳುತ್ತಿದ್ದಾಗ ನಾವು ಇಲ್ಲಿ ಏಕೆ ಕಟ್ಟಿಗೆ ಕಲ್ಲು ಟ್ರ್ಯಾಕ್ಟರ ನಿಲ್ಲಿಸುತ್ತೀರಾ, ಎಮ್ಮೆ ಯಾಕೆ ಕಟ್ಟುತ್ತೀರಾ, ಅಂತಾ ನಾವು ಹೇಳುತ್ತಿದ್ದಾಗ ಎಲ್ಲರೂ ನಮಗೆ ಎತ್ತಿನ ಬಂಡಿಯ ಚನಗೀಲ ಕಟ್ಟಿಗೆಯಿಂದ ಪರಶುರಾಮ ತಂದೆ ಸೂರಪ್ಪಾ ಇವರು ಹೊಡೆಯಲಿಕ್ಕೆ ಬಂದಾಗ ನಾನು ತಪ್ಪಿಸಿಕೊಂಡೆನು. ಇನ್ನೂಲಿದವರು ಭೋಸಡಿ ಮಗನೇ ರಂಡಿ ಮಗನೇ ಅಂತಾ ಜೀವದ ಬೆದರಿಕೆ ಹಾಕಿ ಕಲ್ಲುಗಳನ್ನು ಎಸೆದು ಕಟ್ಟಿಗೆಯಿಂದ ಹೊಡೆಯುತ್ತೆವೆ ಅಂತಾ ಇವತ್ತು ನಿನ್ನನ್ನು ಖಲಾಸ ಮಾಡುತ್ತೆವೆ ಅಂತಾ ನಾವು ಸದರಿ ಜಮೀನುನಲ್ಲಿಯೇ ಎಮ್ಮೆ ಕಟ್ಟುತ್ತೆವೆ, ಕಲ್ಲು ಕಟ್ಟಿಗೆ ಹಾಕುತ್ತೆವೆ. ಟ್ರ್ಯಾಕ್ಟರ ನಿಲ್ಲಿಸುತ್ತೆವೆ ನೀನು ಏನು ಮಾಡಿಕೊಳ್ಳುತ್ತಿ ಮಾಡಿಕೊಳ್ಳಿರಿ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ, ಮತ್ತು ಸದರಿ ಜಮೀನಿನ ಮುಳ್ಳು ತಂತಿ ಬೇಲಿನ  ಕಡಿದು ಹಾಕಿ ಮುಳ್ಳು ತಂತಿಯ ಬಾಂಡು ಕಲ್ಲನ್ನು ಸಹ ಹೊಡೆದು ಹಾಕಿ ನಮ್ಮ ಜಮೀನಿನ ಬಹಳಷ್ಟು ಹಾನಿ ಮಾಡಿ ಅನಾವಶ್ಯಕವಾಗಿ ಜಗಳಾ ತೆಗೆದು ದಬ್ಬಾಳಿಕೆ ಮಾಡಿ ಸದರಿಯವರ ಯಾವುದೇ ಹಕ್ಕು ಅಧಿಕಾರವಿಲ್ಲದೇ ನಮ್ಮ ಜಮೀನಿನಲ್ಲಿ ಅತೀಕ್ರಮಣ ಪ್ರವೇಶಿಸಿ ನಮಗೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದವರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೆನೆ. ಸದರಿ ಘಟಮೆಯ ಬಗ್ಗೆ ನಾವು ಊರಿನಲ್ಲಿ ನ್ಯಾಯ ಪಂಚಾಯತಿ ಮಾಡಿ ಸದರಿಯವರಿಗೆ ತಾಂಡಾದ ಪ್ರಮುಖರು ಈ ತರಹ ತಪ್ಪು ಮಾಡಿಬೇಡಿರಿ ಅಂತಾ ಸದರಿಯವರಿಗೆ ಬುದ್ದಿವಾದ ಹೇಳೀದ್ದರೂ ಸಹ ಮತ್ತೆ ಅವಶ್ಯವಾಗಿ ತೊಂದರೆ ಕೊಡುತ್ತಿದ್ದು ಇಂದು ತಡವಾಗಿ ಫಿರ್ಯಾಧಿಯನ್ನು ಸಲ್ಲಿಸುತ್ತಿದ್ದೆನೆ ಅಂತಾ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:34/2020 ಕಲಂ 143, 147, 148, 504, 506, 447 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 69/2020 ಕಲಂ 379 ಐ.ಪಿ.ಸಿ.  ಮತ್ತು ಕಲಂ. 44(1) ಕೆ.ಎಮ್.ಎಮ್.ಸಿ.ಆರ್.ಆಕ್ಟ 1994:- ಇಂದು ದಿನಾಂಕ:11-03-2020 ರಂದು 8:10 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಚೇತನ್ ಪಿ.ಎಸ್.ಐ (ಕಾ&ಸು) ಸುರಪೂರ ಪೊಲೀಸ್ ಠಾಣೆ ಸಾಹೇಬರು ಮರಳು ತುಂಬಿದ ಟ್ಯಾಕ್ಟರಗಳೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ  ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:11-03-2020 ರಂದು 5-15 ಎ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಯಾರೋ ಒಬ್ಬ ವ್ಯಕ್ತಿಯು ತಮ್ಮ ಟ್ಯಾಕ್ಟರದಲ್ಲಿ ಶೇಳ್ಳಗಿ ಸೀಮಾಂತರದ ಕೃಷ್ಣಾ ನಧಿ ಪಾತ್ರದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ದೇವಾಪೂರ ಕ್ರಾಸ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ಠಾಣೆಯ ಸಿಬ್ಬಂಧಿಯವರಾದ ಶ್ರೀ ಮಂಜುನಾಥ ಹೆಚ್ಸಿ-176, ಶ್ರೀ ಮಂಜುನಾಥ ಸಿಪಿಸಿ-271 ಹಾಗೂ ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ ರವರಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಬರಲು ಸೂಚಿಸಿದ ಮೇರೆಗೆ ಮಂಜುನಾಥ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಲಕ್ಷ್ಮಣ್ಣ ತಂದೆ ಸಂಜೀವಪ್ಪ ನವದಿ ವಯಾ:33 ವರ್ಷ ಉ:ಕೂಲಿ ಜಾ:ಬೇಡರು ಸಾ:ದೇವತ್ಕಲ್ ತಾ:ಸುರಪೂರ ತಾ|| ಸುರಪುರ 2) ಶ್ರೀ ಮಾನಪ್ಪ ತಂದೆ ಭೀಮಪ್ಪ ತಳವಾರ ವಯಾ:30 ವರ್ಷ ಉ:ಒಕ್ಕಲುತನ ಜಾ:ಹೊಲೆಯ ಸಾ:ದೇವತ್ಕಲ್ ಇವರನ್ನು ಬೆಳಿಗ್ಗೆ 05-30 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿ ಪಂಚರು ಮತ್ತು ಸಿಬ್ಬಂಧಿಯವರಿಗೆ ವಿಷಯ ತಿಳಿಸಿ ಇಬ್ಬರು ಪಂಚರಿಗೆ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಪಂಚರು ಮತ್ತು ಎಲ್ಲಾ ಸಿಬ್ಬಂಧಿಯವರು ನಮ್ಮ ಸಕರ್ಾರಿ ಜೀಪ ನಂಬರ ಕೆಎ-33 ಜಿ-0094 ನೇದ್ದರಲ್ಲಿ ಕುಳಿತುಕೊಂಡು ಬೆಳಿಗ್ಗೆ 05:45 ಗಂಟೆ ಸುಮಾರಿಗೆ ಠಾಣೆಯಿಂದ ಹೊರಟು ಬೆಳಿಗ್ಗೆ 06:15 ಗಂಟೆ ಸುಮಾರಿಗೆ ದೇವಾಪೂರ ಕ್ರಾಸ ಹತ್ತಿರ ಹೋಗಿ ನಮ್ಮ ಜೀಪ್ ನಿಲ್ಲಿಸಿದ್ದು ಅದೇ ಸಮಯಕ್ಕೆ ಶೇಳ್ಳಗಿ ಕಡೆಯಿಂದ ಎರಡು ಟ್ಯಾಕ್ಟರಗಳ ಚಾಲಕರು ತಮ್ಮ ಟ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ಎಲ್ಲರೂ ಕೆಳಗೆ ಇಳಿದು ಸಿಬ್ಬಂಧಿಯವರ ಸಹಾಯದಿಂದ ಸದರಿ ಟ್ಯಾಕ್ಟರಗಳ ಚಾಲಕರಿಗೆ ಕೈ ಮಾಡಿ ನಿಲ್ಲಿಸಲು ಸೂಚಿಸಿದಾಗ ಎರಡು ಟ್ಯಾಕ್ಟರ ಚಾಲಕರು ನಮ್ಮ ಪೊಲೀಸ್ ಜೀಪನ್ನು ನೋಡಿ ತಮ್ಮ ಎರಡು ಟ್ಯಾಕ್ಟರಗಳನ್ನು ನಮ್ಮಿಂದ ಸ್ವಲ್ಪ ಅಂತರದ ರೋಡಿನ ಸೈಡಿನಲ್ಲಿ ನಿಲ್ಲಿಸಿ ಕೆಳಗೆ ಇಳಿದು ರಸ್ತೆಯ ಪಕ್ಕದಲ್ಲಿ ಓಡಿ ಹೋದರು. ನಂತರ ನಾನು ಪಂಚರ ಸಮಕ್ಷಮ ಸದರಿ ಟ್ಯಾಕ್ಟರಗಳ ಹತ್ತಿರ ಹೋಗಿ ಪರೀಶಿಲಿಸಿ ನೋಡಲು 1) ಒಂದು ಒಚಿಜಥಿ ಈಜಡಿರಣಠಟಿ ಕಂಪನಿ ಟ್ಯಾಕ್ಟರ ಇದ್ದು ಅದರ ಇಂಜಿನ್ ನಂ. ಊಎ ಖಎ327ಂ43007,  ಚೆಸ್ಸಿ ನಂ. ಒಇಂ4ಂ6ಆ7ಊಎ2206722 ಇದ್ದು ಟ್ರಾಲಿಗೆ ನಂಬರ ಇರುವುದಿಲ್ಲ. ಅದರಲ್ಲಿ 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆ. 2) ಒಂದು ಮಹೀಂದ್ರಾ 575 ಆ ಕಂಪನಿಯ ಟ್ಯಾಕ್ಟರ ನಂಬರ ಕೆಎ-33 ಟಿಎ-6540 ಇದ್ದು ಟ್ರಾಲಿಗೆ ನಂಬರ ಇರುವುದಿಲ. ಅದರಲ್ಲಿ 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆೆ. ಹೀಗೆ ಒಟ್ಟು ಎರಡು ಟ್ಯಾಕ್ಟರದಲ್ಲಿಯ ಒಟ್ಟು 04 ಘನ ಮೀಟರ ಮರಳು ಇದ್ದು ಅದರ ಅ.ಕಿ 3200/- ರೂಗಳು ಆಗುತ್ತದೆ.  ಸದರಿ ಮರಳು ತುಂಬಿದ ಎರಡು ಟ್ಯಾಕ್ಟರಗಳನ್ನು ಪಂಚರ ಸಮಕ್ಷಮ ಬೆಳಿಗ್ಗೆ 06:20 ಗಂಟೆಯಿಂದ ಬೆಳಿಗ್ಗೆ 07:20 ಗಂಟೆಯವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡು ಟ್ಯಾಕ್ಟರಗಳನ್ನು ಜಪ್ತಿ ಪಡಿಸಿಕೊಂಡು ತಾಬಾಕ್ಕೆ ತಗೆದುಕೊಂಡಿದ್ದು ಇರುತ್ತದೆ. ಕಾರಣ ಸದರಿ ಎರಡು ಟ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಂದಾಜು 3200/- ರೂ.ಗಳ ಕಿಮ್ಮತ್ತಿನ ಅಂದಾಜು 04 ಘನ ಮೀಟರ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಎರಡು ಮರಳು ತುಂಬಿದ ಟ್ಯಾಕ್ಟರಗಳನ್ನು ಖಾಸಗಿ ಚಾಲಕರ ಸಹಾಯದಿಂದ ಠಾಣೆಗೆ ಬೆಳಿಗ್ಗೆ 08:10 ಗಂಟೆಗೆ ತಂದು ಒಪ್ಪಿಸಿ ವರದಿಯೊಂದಿಗೆ ಜಪ್ತಿ ಪಂಚನಾಮೆಯನ್ನು ನೀಡಿದ್ದು, ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ  ನಂ. 69/2020 ಕಲಂ: 379 ಐಪಿಸಿ ಮತ್ತು 44(1) ಕೆ.ಎಂ.ಎಂ.ಸಿ.ಆರ್ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.                                                                   

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 70/2020 ಕಲಂ 379 ಐ.ಪಿ.ಸಿ.  ಮತ್ತು ಕಲಂ. 44(1) ಕೆ.ಎಮ್.ಎಮ್.ಸಿ.ಆರ್.ಆಕ್ಟ 1994:- ಇಂದು ದಿನಾಂಕ:11-03-2020 ರಂದು 2:20 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಸಾಹೇಬಗೌಡ ಎಂ ಪಾಟೀಲ್ ಪಿಐ ಸುರಪೂರ ಪೊಲೀಸ್ ಠಾಣೆ ಸಾಹೇಬರು ಎರಡು ಮರಳು ತುಂಬಿದ ಟ್ಯಾಕ್ಟರಗಳೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ ಸಾರಾಂಶವೆನೆಂದರೆ, ಇಂದು ದಿನಾಂಕ:11-03-2020 ರಂದು 11-45 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಯಾರೋ ಇಬ್ಬರು ವ್ಯಕ್ತಿಗಳು ತಮ್ಮ ಟ್ಯಾಕ್ಟರದಲ್ಲಿ ಶೇಳ್ಳಗಿ ಸೀಮಾಂತರದ ಕೃಷ್ಣಾ ನಧಿ ಪಾತ್ರದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ಕವಡಿಮಟ್ಟಿ ಗ್ರಾಮದ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ಶ್ರೀ ಚಂದ್ರಶೇಖರ ಪಿಎಸ್ಐ (ಕಾಸೂ-2) ಮತ್ತು ಠಾಣೆಯ ಸಿಬ್ಬಂಧಿಯವರಾದ ಶ್ರೀ ಮಂಜುನಾಥ ಹೆಚ್ಸಿ-176, ಶ್ರೀ ಮಂಜುನಾಥ ಸಿಪಿಸಿ-271, ಶ್ರೀ ಮಾಹಾಂತೇಶ ಎಪಿಸಿ-48 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ ರವರಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಬರಲು ಸೂಚಿಸಿದ ಮೇರೆಗೆ ಮಂಜುನಾಥ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಲಕ್ಷ್ಮಣ್ಣ ತಂದೆ ಸಂಜೀವಪ್ಪ ನವದಿ ವಯಾ:33 ವರ್ಷ ಉ:ಕೂಲಿ ಜಾ:ಬೇಡರು ಸಾ:ದೇವತ್ಕಲ್ ತಾ:ಸುರಪೂರ ತಾ|| ಸುರಪುರ 2) ಶ್ರೀ ಮಾನಪ್ಪ ತಂದೆ ಭೀಮಪ್ಪ ತಳವಾರ ವಯಾ:30 ವರ್ಷ ಉ:ಒಕ್ಕಲುತನ ಜಾ:ಹೊಲೆಯ ಸಾ:ದೇವತ್ಕಲ್ ಇವರನ್ನು 12 ಪಿ.ಎಮ್ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿ ಪಂಚರು ಮತ್ತು ಪಿಎಸ್ಐ ಹಾಗೂ ಸಿಬ್ಬಂಧಿಯವರಿಗೆ ವಿಷಯ ತಿಳಿಸಿ ಇಬ್ಬರು ಪಂಚರಿಗೆ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಪಂಚರು ಮತ್ತು ಮೇಲ್ಕಂಡ ಸಿಬ್ಬಂಧಿಯವರು ನಮ್ಮ ಸಕರ್ಾರಿ ಜೀಪ ನಂಬರ ಕೆಎ-33 ಜಿ-0238 ನೇದ್ದರಲ್ಲಿ ಕುಳಿತುಕೊಂಡು 12-15 ಪಿ.ಎಮ್.ಕ್ಕೆ ಠಾಣೆಯಿಂದ ಹೊರಟು 12-45 ಪಿ.ಎಮ್.ಕ್ಕೆ ಶೆಳ್ಳಗಿ  ಕ್ರಾಸ ಹತ್ತಿರ ಹೋಗಿ ನಮ್ಮ ಜೀಪ್ ನಿಲ್ಲಿಸಿದ್ದು ಅದೇ ಸಮಯಕ್ಕೆ ಶೇಳ್ಳಗಿ ಕಡೆಯಿಂದ ಎರಡು ಟ್ಯಾಕ್ಟರಗಳ ಚಾಲಕರು ತಮ್ಮ ಟ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ಎಲ್ಲರೂ ಕೆಳಗೆ ಇಳಿದು ಸಿಬ್ಬಂಧಿಯವರ ಸಹಾಯದಿಂದ ಸದರಿ ಟ್ಯಾಕ್ಟರಗಳ ಚಾಲಕರಿಗೆ ಕೈ ಮಾಡಿ ನಿಲ್ಲಿಸಲು ಸೂಚಿಸಿದಾಗ ಎರಡು ಟ್ಯಾಕ್ಟರ ಚಾಲಕರು ನಮ್ಮ ಪೊಲೀಸ್ ಜೀಪನ್ನು ನೋಡಿ ತಮ್ಮ ಎರಡು ಟ್ಯಾಕ್ಟರಗಳನ್ನು ನಮ್ಮಿಂದ ಸ್ವಲ್ಪ ಅಂತರದ ರೋಡಿನ ಸೈಡಿನಲ್ಲಿ ನಿಲ್ಲಿಸಿ ಕೆಳಗೆ ಇಳಿದು ರಸ್ತೆಯ ಪಕ್ಕದಲ್ಲಿ ಓಡಿ ಹೋದರು. ನಂತರ ನಾನು ಪಂಚರ ಸಮಕ್ಷಮ ಸದರಿ ಟ್ಯಾಕ್ಟರಗಳ ಹತ್ತಿರ ಹೋಗಿ ಪರೀಶಿಲಿಸಿ ನೋಡಲು 1) ಒಂದು ಸ್ವರಾಜ್ ಕಂಪನಿ ಟ್ಯಾಕ್ಟರ ಇದ್ದು ಅದರ ಇಂಜಿನ್ ನಂ. 39.1357/ಖಘಊ10754 ಚೆಸ್ಸಿ ನಂ. ಘಙಖಿಊ28432134474 ಇದ್ದು ಟ್ರಾಲಿಗೆ ನಂಬರ ಇರುವುದಿಲ್ಲ. ಅದರಲ್ಲಿ 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆ. 2) ಒಂದು ಮಹೀಂದ್ರಾ 475 ಆ ಕಂಪನಿಯ ಟ್ಯಾಕ್ಟರ ಇದ್ದು ಅದರ ಇಂಜಿನ್ ನಂ. ಖಎಃಅ00604 ಇದ್ದು ಟ್ರಾಲಿಗೆ ನಂಬರ ಇರುವುದಿಲ. ಅದರಲ್ಲಿ 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆೆ. ಹೀಗೆ ಒಟ್ಟು ಎರಡು ಟ್ಯಾಕ್ಟರದಲ್ಲಿಯ ಒಟ್ಟು 04 ಘನ ಮೀಟರ ಮರಳು ಇದ್ದು ಅದರ ಅ.ಕಿ 3200/- ರೂಗಳು ಆಗುತ್ತದೆ.  ಸದರಿ ಮರಳು ತುಂಬಿದ ಮೂರು ಟ್ಯಾಕ್ಟರಗಳನ್ನು ಪಂಚರ ಸಮಕ್ಷಮ 12:50 ಪಿ.ಎಮ್ ದಿಂದ 01:50 ಪಿ.ಎಮ್.ದವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡು ಟ್ಯಾಕ್ಟರಗಳನ್ನು ಜಪ್ತಿ ಪಡಿಸಿಕೊಂಡು ತಾಬಾಕ್ಕೆ ತಗೆದುಕೊಂಡಿದ್ದು ಇರುತ್ತದೆ. ಕಾರಣ ಸದರಿ ಎಡರು ಟ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಂದಾಜು 3200/- ರೂ.ಗಳ ಕಿಮ್ಮತ್ತಿನ ಅಂದಾಜು 04 ಘನ ಮೀಟರ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಎರಡು ಮರಳು ತುಂಬಿದ ಟ್ಯಾಕ್ಟರಗಳನ್ನು ಖಾಸಗಿ ಚಾಲಕರ ಸಹಾಯದಿಂದ ಠಾಣೆಗೆ 02:20 ಪಿ.ಎಮ್ ಕ್ಕೆ ತಂದು ಒಪ್ಪಿಸಿ ವರದಿಯೊಂದಿಗೆ ಜಪ್ತಿ ಪಂಚನಾಮೆಯನ್ನು ನೀಡಿದ್ದು, ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ  ನಂ. 70/2020 ಕಲಂ: 379 ಐಪಿಸಿ ಮತ್ತು 44(1) ಕೆ.ಎಂ.ಎಂ.ಸಿ.ಆರ್ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


 ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 32/2020 ಕಲಂ 32, 34 ಕೆ.ಇ ಎಕ್ಟ್:- ಇಂದು ದಿನಾಂಕ: 11/03/2020 ರಂದು 3.15 ಪಿ.ಎಮ್.ಕ್ಕೆ ಆರೋಪಿತನು ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಹುರಸಗುಂಡಗಿ ಹೊಸಗ್ರಾಮದಲ್ಲಿನ ಆರೋಪಿತನ ಕಿರಾಣಿ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 3.30 ಪಿಎಮ್ ಕ್ಕೆ ದಾಳಿ ಮಾಡಿದ್ದು, ದಾಳಿ ಸಮಯದಲ್ಲಿ ಆರೋಪಿತನು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ 1)180 ಎಮ್.ಎಲ್ ನ 9 ಬ್ಯಾಗಪೈಪರ್ ವಿಸ್ಕಿ ಪೌಚಗಳು, ಅ.ಕಿ. 810 ರೂ, 2)180 ಎಮ್.ಎಲ್ ನ 12 ಓಲ್ಡ್ ಟವರ್ನ ವಿಸ್ಕಿ ಪೌಚಗಳು, ಅ.ಕಿ. 888 ರೂ, 3)330 ಎಮ್.ಎಲ್ ನ 15 ಕಿಂಗ್ ಫಿಶರ್ ಬೀರ್ ಟಿನ್ಗಳು ಅ.ಕಿ. 1200 ರೂ, 4)650 ಎಮ್.ಎಲ್ ನ 6 ಕಿಂಗ್ ಫಿಶರ್ ಬೀರ್ ಬಾಟಲಿಗಳು ಅ.ಕಿ. 870 ರೂ, ಹೀಗೆ ಒಟ್ಟು 3768/- ರೂ ಕಿಮ್ಮತ್ತಿನ ಮದ್ಯವನ್ನು ಜಪ್ತಿಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.

ಹುಣಸಗಿ ಗ್ರಾಮೀಣ ಠಾಣೆ ಗುನ್ನೆ ನಂ:-. 27/2020 ಕಲಂ. 279 337 338 ಐಪಿಸಿ:-ದಿನಾಂಕ:11/03/2020 ರಂದು ಹುಣಸಗಿ ಸರಕಾರಿ ದವಾಖಾನೆಯಿಂದಾ 10.45 ಗಂಟೆಗೆ ಪೋನ ಮುಖಾಂತರ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರಗೆ ಬೇಟಿ ಕೊಟ್ಟು ಫಿರ್ಯಾದಿ ದಾರರಿಗೆ ವಿಚಾರಿಸಲು   ಹೇಳಿಕೆ ಕೊಟ್ಟಿದ್ದು ಏನೆಂದರೆ, ನಾನು ಮತ್ತು ನಮ್ಮೂರಿನ ವಿಠಲ ತಂದೆ ನರಸಪ್ಪ ಪತ್ತಾರ ಇಬ್ಬರೂ ಕೂಡಿ ನನ್ನ  ಮೋಟಾರ್ ಸೈಕಲ್ ನಂ. ಕೆಎ-33 ವೈ-4650 ನೇದ್ದರ ಮೇಲೆ ಹುಣಸಗಿಗೆ ಬಂದು ಹುಣಸಗಿ ಪೊಲೀಸ್ ಠಾಣೆ ಹತ್ತಿರ ಇರುವ ಸಣ್ಣ ಬಸನಿಲ್ದಾಣ ಹತ್ತಿರ ರಸ್ತೆಯ ಎಡಗಡೆ ನಿಲ್ಲಿಸಿದ್ದು, ಹುಣಸಗಿ ಪಟ್ಟಣದೊಳಗಿಂದ ಎದರುಗಡೆ ಬಂದ ಟ್ರ್ಯಾಕ್ಟರ್ ನಂ. ಕೆಎ-36 ಟಿಬಿ-8889 & ನಂಬರಿಲ್ಲದ ಕೆಂಪು ಬಣ್ಣದ ಟ್ರೈಲರ್ ನೇದ್ದರ ಚಾಲಕನು ಅತೀ ವೇಗ ಹಾಗೂ ನಿಸ್ಕಾಳಜಿನದಿಂದ ನಡೆಯಿಸಿಕೊಂಡು ನಮ್ಮ ಮೋಟಾರ್ ಸೈಕಲಗೆ ಡಿಕ್ಕಿಹೊಡೆದು ಅಪಘಾತ ಮಾಡಿದ್ದು, ಅಪಘಾತದಲ್ಲಿ ವಿಠಲ ತಂದೆ ನರಸಪ್ಪ ಪತ್ತಾರ ಈತನಿಗೆ ಭಾರಿ ಮತ್ತು ಸಾಧಾಗಾಯವಾಗಿದ್ದು ಇರುತ್ತದೆ ಅಂತಾ ಇತ್ಯಾದಿ ಹೇಳಿಕೆ ದೂರು ಕೊಟ್ಟಿದ್ದು ಪಡೆದುಕೊಂಡು ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಮೇಲಿಂದಾ ಕ್ರಮ ಜರುಗಿಸಲಾಗಿದೆ.   

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 28/2020 78 (3) ಕೆ.ಪಿ ಯಾಕ್ಟ:- ದಿನಾಂಕ:11/03/2020 ರಂದು 17.30 ಪಿ.ಎಮ್ ಕ್ಕೆ, ಶ್ರೀ.  ವೆಂಕಟೇಶ ಹುಗಿಬಂಡಿ ಡಿ.ಎಸ್.ಪಿ, ಉಪ ವಿಭಾಗ  ಶೋರಾಪುರ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ  ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಯಡಹಳ್ಳಿ ಗ್ರಾಮದಲ್ಲಿ ನಿಂಗನಗೌಡರವರ ಮನೆಯ ಹತ್ತಿರ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ  ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ ಸ್ಥಳಕ್ಕೆ ಬೇಟಿ ನೀಡಿ ಖಚಿತಪಡಸಿಕೊಂಡು ಮಟಕಾ ಬರೆದುಕೊಳ್ಳುವನ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:28/2020 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 29/2020 11/03/2020 78 (3) ಕೆ.ಪಿ ಯಾಕ್ಟ:- ದಿನಾಂಕ:11/03/2020 ರಂದು 17.40 ಪಿ.ಎಮ್ ಕ್ಕೆ, ಶ್ರೀ.  ವೆಂಕಟೇಶ ಹುಗಿಬಂಡಿ ಡಿ.ಎಸ್.ಪಿ, ಉಪ ವಿಭಾಗ  ಶೋರಾಪುರ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ  ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಯಡಹಳ್ಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ ಸ್ಥಳಕ್ಕೆ ಬೇಟಿ ನೀಡಿ ಖಚಿತಪಡಸಿಕೊಂಡು ಮಟಕಾ ಬರೆದುಕೊಳ್ಳುವನ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:29/2020 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.
       ನಂತರ ಮಾನ್ಯ ಡಿ.ಎಸ್.ಪಿ ಸಾಹೇಬರು 20.20 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 1860/- ರೂ.ಗಳು ಒಂದು ಮಟಕಾ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.
                                                                   
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 04/2020 ಕಲಂ. 107 ಸಿ. ಆರ್. ಪಿ.ಸಿ:-      ನಾನು ಗುಂಡಪ್ಪ ಹೆಚ್.ಸಿ-37 ಎಸ್.ಹೆಚ್.ಓ ವಡಗೇರಾ ಪೊಲೀಸ್ ಠಾಣೆ ಮಾನ್ಯರವರಲ್ಲಿ ನಿವೇದಿಸಿಕೊಳ್ಳುವುದೆನೆಂದರೆ, ಇಂದು ದಿನಾಂಕ: 11/03/2020 ರಂದು ಬೆಳಗ್ಗೆ 9.00 ಗಂಟೆ ಸುಮಾರಿಗೆ ಶಿವುಪುತ್ರ ಹೆಚ್.ಸಿ 82 ವಡಗೇರಾ ಪೊಲೀಸ್ ಠಾಣೆ (ಉಕ್ಕಡ ಠಾಣೆ ಬೆಂಡೆಬೆಂಬಳಿ) ರವರು ಗುಂಡ್ಲೂರು ಗ್ರಾಮಕ್ಕೆ ಬೀಟ್ ಮಾಹಿತಿ ಸಂಗ್ರಹಿಸಲು ಭೇಟಿ ನೀಡಿ ಹೊಸ ಬೀಟ್ ಸದಸ್ಯರಿಗೆ ಗ್ರಾಮದಲ್ಲಿ ಸದ್ಯದ ಪರಿಸ್ಥಿತಿ ಮತ್ತು ಆಗುಹೋಗುಗಳ ಬಗ್ಗೆ ವಿಚಾರಿಸಿದಾಗ ತಿಳಿದುಬಂದಿದ್ದೇನಂದರೆ, ಗುಂಡ್ಲೂರು ಗ್ರಾಮದ 1) ಸೈಯದಬಾಷಾ ತಂದೆ ಹುಸೇನಸಾಬ ಪೊಲೀಸ್ ಪಟೇಲ 2) ಅಜ್ಮೀರ ತಂದೆ ಹುಸೇನಸಾಬ ಪೊಲೀಸ್ ಪಟೇಲ ಇವರ ಹೊಲವು ಕೆಳಗಡೆ ಒಣ ಬೇಸಾಯವಿದ್ದು ಮತ್ತು 1) ಬಡೇಸಾಬ ತಂದೆ ಅಹ್ಮದಸಾಬ ಸಾಹುಕಾರ 2) ಅಹ್ಮದಸಾಬ ತಂದೆ ಬಡೇಸಾಬ ಸಾಹುಕಾರ ಇವರ ಹೊಲವು ಮೇಲ್ಗಡೆ ಇದ್ದು ಭತ್ತದ ಗದ್ದೆ ಮಾಡಿಕೊಂಡಿರುತ್ತಾರೆ. ಭತ್ತದ ಗದ್ದೆಯಿಂದ ನೀರು ಬಸೀದು ಬಂದು ಕೆಳಗಡೆ ಇರುವ ಸೈಯದ ಬಾಷಾ ಇವರ ಹೊಲದಲ್ಲಿ ನೀರು ಬರುತ್ತವೆ. ಅದರಿಂದ ಸೈಯದಬಾಷಾ ನಮ್ಮ ಹೊಲವು ಹಾಳಾಗುತ್ತಿದ್ದು ಇದರಿಂದ ಬೆಳೆಗಳು ಒಣಗುತ್ತವೆ ಅಂತ ವಾದ ಮಾಡುತ್ತಿದ್ದು ಬಡೇಸಾಬ ಇವರು ನಮ್ಮ ಹೊಲದಲ್ಲಿಂದ  ಮೊದಲಿನಿಂದಲೂ ನೀರು ಕೆಳಗಡೆ ಹೊಲದಲ್ಲಿಯೇ ಹೋಗುತ್ತಿದ್ದು, ಆ ಕಾರಣಕ್ಕಾಗಿ ನಾವು ನೀರು ಅಲ್ಲಿಯೇ ಬೀಡುತ್ತೇವೆ ಅಂತ ಒಬ್ಬರಿಗೊಬ್ಬರು ಬಾಯಿ ಮಾತಿನ ಜಗಳ ಮಾಡಿಕೊಂಡು ಒಂದು ಕೈ ನೋಡೊಣ ಎಂದು ಅಂದಾಡುತ್ತಾ ಅವರು ಕಂಡಕಂಡಲ್ಲಿ ಬೈಯುವುದು ಅವರಿಗೆ ನೋಡಿ ಕ್ಯಾಕರಿಸಿ ಉಗಿಯುವುದು ಮಾಡುತ್ತಿದ್ದಾರೆ. ಯಾವುದೇ ಸಮಯದಲ್ಲಿ ಜಗಳ ಮಾಡಿ ಹಲ್ಲೆ ಮಾಡುವ ಸಾಧ್ಯತೆಗಳು ದಟ್ಟವಾಗಿರುತ್ತವೆ. ಆದ್ದರಿಂದ ಇವರಿಗೆ ಹೀಗೆಯೆ ಬಿಟ್ಟಲ್ಲಿ ಸದರಿಯವರು ಯಾವುದೇ ಸಮಯದಲ್ಲಿ ಹೊಡೆದಾಡ, ಬಡೆದಾಟ ಮಾಡಿಕೊಂಡು ಆಸ್ತಿಹಾನಿ ಮತ್ತು ಜೀವಹಾನಿ ಮಾಡುವ ಇರಾದೆವುಳ್ಳವರಾಗಿದ್ದು, ಗ್ರಾಮದಲ್ಲಿ ಗುಂಪು ಘರ್ಷಣೆ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದು ಸಾರ್ವಜನಿಕ ಶಾಂತತಾ ಭಂಗವುಂಟು ಮಾಡುವ ಸಾಧ್ಯತೆಗಳು ಕಂಡಬಂದ ಹಿನ್ನೆಲೆಯಲ್ಲಿ ಇದಾವುದಕ್ಕೂ ಆಸ್ಪದವನ್ನಿಯದೆ ಸದರಿಯವರಿಂದ ಜರುಗಬಹುದಾದ ಸಂಭವನಿಯ ಸಂಜ್ಞೇಯ ಅಪರಾಧಗಳನ್ನು ತಡೆಗಟ್ಟುವ ಕುರಿತು ಎರಡು ಪಾಟರ್ಿಯವರ ಮೇಲೆ ಸೂಕ್ತ ಮುಂಜಾಗ್ರತಾ ಕ್ರಮ ಜರುಗಿಸುವುದು ಅತ್ಯವಶ್ಯಕವಾಗಿರುವುದರಿಂದ 2-30 ಪಿಎಮ್ ಕ್ಕೆ ಮರಳಿ  ಠಾಣೆಗೆ ಬಂದು ಸದರಿ ಈ ಮೇಲ್ಕಾಣಿಸಿದವರ ಮೇಲೆ ಮುಂಜಾಗೃತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು, ಅದರ ಸಾರಾಂಶದ ಮೇಲಿಂದ ವಡಗೇರಾ ಪೊಲೀಸ್ ಠಾಣೆ ಪಿ.ಎ.ಆರ್. ನಂ: 04/2020 ಕಲಂ: 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 25/2020 ಕಲಂ: 379 ಐಪಿಸಿ :- ಇಂದು ದಿನಾಂಕ: 11/03/2020 ರಂದು 8-30 ಪಿಎಮ್ ಕ್ಕೆ ಶ್ರೀ ಯಮನಪ್ಪ ತಂದೆ ಭಿಮರಾಯ ತುಮಕೂರು, ವ:24, ಜಾ:ಕುರುಬರ, ಉ:ಗೌಂಡಿ ಕೆಲಸ ಸಾ:ಕುರಿಹಾಳ ಹಾ:ವ: ತುಮಕೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಗೌಂಡಿ ಕೆಲಸ ಮಾಡಿಕೊಂಡಿರುತ್ತೇನೆ. ನಾನು ಆಗಾಗ ಬೆಂಗಳೂರಿಗೆ ದುಡಿಯಲು ಹೋಗವುದು ಬರುವುದು ಮಾಡುತ್ತಿರುತ್ತೇನೆ. ನಾನು ಸುಮಾರು 2017 ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ಒಂದು ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ಖರೀದಿ ಮಾಡಿದ್ದು, ನನ್ನ ಹೆಸರಿನಲ್ಲಿ ನೊಂದಣಿ ಆಗಿರುತ್ತದೆ. ಮೋಟರ್ ಸೈಕಲ್ ನೊಂದಣಿ ಸಂ. ಕೆಎ 50 ಯು 1459 ಇದ್ದು, ಚೆಸ್ಸಿ ನಂ. ಒಃಐಊಂ10ಂಒಇಊಎ81412 ಮತ್ತು ಇಂಜನ ನಂ. ಊಂ10ಇಎಇಊಎ59244 ಇರುತ್ತದೆ. ಹೀಗಿದ್ದು ದಿನಾಂಕ: 04/03/2020 ರಂದು ಸಾಯಂಕಾಲದವರೆಗೆ ನಾನು ಗೌಂಡಿ ಕೆಲಸ ಮಾಡಿ ಸಾಯಂಕಾಲ 7 ಗಂಟೆ ಸುಮಾರಿಗೆ ನಮ್ಮ ಮಾವನವರ ಮನೆ ಸಮೀಪ ಮಾರೆಮ್ಮ ಗುಡಿ ಹತ್ತಿರ ನನ್ನ ಮೋಟರ್ ಸೈಕಲ್ ನಂ. ಕೆಎ 50 ಯು 1459 ನೇದ್ದನ್ನು ನಿಲ್ಲಿಸಿ, ಮನೆಗೆ ಹೋದೆನು. ಮರು ದಿವಸ ದಿನಾಂಕ: 05/03/2020 ರಂದು ಬೆಳಗ್ಗೆ 7-30 ಎಎಮ್ ಸುಮಾರಿಗೆ ಗೌಂಡಿ ಕೆಲಸಕ್ಕೆ ಹೋಗಬೇಕೆಂದು ನಾನು ಮೋಟರ್ ಸೈಕಲ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮೋಟರ್ ಸೈಕಲ್ ನಿಲ್ಲಿಸಿದ ಜಾಗದಲ್ಲಿ ಇರಲಿಲ್ಲ. ಅದೇ ರೀತಿ ನಮ್ಮೂರ ಹಸೇನ ತಂದೆ ಚಂದಾಸಾಬ ಅಂಬಿಗೇರ ಈತನು ತನ್ನ ಮಾವನಾದ ಇಸ್ಮಾಯಿಲ್ ತಂದೆ ಬಂದಿಸಾಬ ಸಾ:ತುಮಕೂರು ಈತನ ಮಾಲಿಕತ್ವದ ಮೋಟರ್ ಸೈಕಲ್ ನಂ. ಕೆಎ 36 ಇಇ 3588 ಚೆಸ್ಸಿ ನಂ. ಒಃಐಊಂ11ಂಇಇ9ಇ34882 ಮತ್ತು ಇಂಜನ ನಂ. ಊಂ11ಇಈಇ9ಇ35381 ನೇದ್ದನ್ನು ಕೂಡಾ ನಮ್ಮ ಮೋಟರ್ ಸೈಕಲದಿಂದ ಸ್ವಲ ದೂರದಲ್ಲಿ ನಿನ್ನೆ ರಾತ್ರಿ ನಿಲ್ಲಿಸಿ ಮನೆಗೆ ಹೋಗಿದ್ದು, ಇಂದು ಬೆಳಗ್ಗೆ ಬಂದು ನೋಡಲಾಗಿ ನಿಲ್ಲಿಸಿದ ಜಾಗದಲ್ಲಿ ಮೋಟರ್ ಸೈಕಲ್ ಇಲ್ಲ ಎಂದು ನನಗೆ ಹೇಳಿದನು. ಆಗ ಗಾಬರಿಯಾದ ನಾನು ಮತ್ತು ನಮ್ಮ ಮಾವ ಮಲ್ಲಿಕಾಜರ್ುನ ತಂದೆ ಸಿದ್ದಪ್ಪ ಕಂದಕೂರ ಹಾಗೂ ಹಸೇನ ತಂದೆ ಚಂದಾಸಾಬ ಮೂರೂ ಜನ ಕೂಡಿ ಇಟಗಿ, ಕದರಾಪೂರ, ಗೂಗಲ್ ಮುಂತಾದ ಕಡೆ ನಮ್ಮ ಕಳುವಾದ ಮೋಟರ್ ಸೈಕಲ್ಗಳನ್ನು ಹುಡುಕಾಡಲಾಗಿ ಎಲ್ಲಿಯು ಸಿಗಲಿಲ್ಲ. ಯಾರೋ ಕಳ್ಳರು ನನ್ನ ಮೋಟರ್ ಸೈಕಲ್ ನಂ. ಕೆಎ 50 ಯು 1459 ಅ:ಕಿ: 20,000=00 ರೂ. ಮತ್ತು ಇಸ್ಮಾಯಿಲ್ ಈತನ ಮೋಟರ್ ಸೈಕಲ್ ನಂ. ಕೆಎ 36 ಇಇ 3588 ಅ:ಕಿ: 20,000=00 ರೂ. ನೇದ್ದವುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ನಾನು ಮತ್ತು ಹಸೇನ ಹಾಗೂ ಇತರರು ಕೂಡಿ ಎಲ್ಲಾ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಕಾನೂನು ಕ್ರಮ ಜರುಗಿಸಿ ನಮ್ಮ ಕಳುವಾದ ಎರಡು ಮೋಟರ್ ಸೈಕಲ್ಗಳು ಪತ್ತೆ ಹಚ್ಚಬೇಕಾಗಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 25/2020 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.  


ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 42/2020 ಕಲಂ: 87  ಕೆ.ಪಿ. ಆಕ್ಟ್:- ಇಂದು ದಿನಾಂಕ 11.03.2020 ರಂದು ಮಧ್ಯಾಹ್ನ 2.30 ಪಿ.ಎಂ ಸುಮಾರಿಗೆ ಚಿಂತನಳ್ಳಿ ಗ್ರಾಮದ ಶ್ರೀ ಗವಿಸಿದ್ದೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎನ್ನುವ ದೈವಲಿಲೆ ಎನ್ನು ಇಸ್ಪೀಟ ಜೂಜಾಟ ಆಡುತ್ತಿದ್ದಾಗ ಫೀರ್ಯಾದಿ ಹಾಗೂ  ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಸದರಿ ಆರೋಪಿತರನ್ನು ದಸ್ತಗಿರಿ ಮಾಡಿ ಅವರ ವಶದಲ್ಲಿದ್ದ 1]ನಗದು ಹಣ 3300/-, 2) 52 ಇಸ್ಫಿಟ್ ಎಲೆಗಳು ಅ.ಕಿ 00=00 ಹೀಗೆ ಒಟ್ಟು 3300/-ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಸದರಿ ವರದಿ ಹಾಗೂ ಪಂಚನಾಮೆಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದ ನಂತರ ಠಾಣಾ ಗುನ್ನೆ ನಂ: 42/2020 ಕಲಂ: 87 ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡೆನು.

 ಗೊಗಿ ಠಾಣೆ ಗುನ್ನೆ ನಂ;- 04/2020174 ಸಿ.ಆರ್.ಪಿ.ಸಿ:- ಇಂದು ದಿನಾಂಕ 11/03/2020 ರಂದು 07.30 ಎಎಂ ಕ್ಕೆ ಅಜರ್ಿದಾರರಾದ ಶ್ರೀ. ಅಂಬ್ರಪ್ಪ ತಂದೆ ಸಾಬಪ್ಪ ಮಾದರ ವಯಾ:48 ಉ; ಕೂಲಿ ಜಾ; ಮಾದರ ಸಾ: ಸಂತೆ ಕೆಲ್ಲೂರ ತಾ: ಮಸ್ಕಿ ಜಿ: ರಾಯಚೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆಯಿಸಿದ ಅಜರ್ಿ ಹಾಜರ ಪಡೆಸಿದ್ದು, ಅದರ ಸಾರಂಶವೇನಂದರೆ, ನಾನು ಅಂಬ್ರಪ್ಪ ತಂದೆ ಸಾಬಪ್ಪ ಮಾದರ ವಯಾ:48 ಉ; ಕೂಲಿ ಜಾ; ಮಾದರ ಸಾ: ಸಂತೆ ಕೆಲ್ಲೂರ ತಾ: ಮಸ್ಕಿ ಜಿ: ರಾಯಚೂರ ಇದ್ದು, ಈ ಮೂಲಕ ಅಜರ್ಿ ನೀಡುವದೇನಂದರೆ, ನನಗೆ ಮೂರು ಜನರು ಗಂಡುಮಕ್ಕಳು ಇದ್ದು, ನನ್ನ ಸಣ್ಣ ಮಗನಾದ ಹನುಮಂತ ತಂದೆ ಅಂಬ್ರಪ್ಪ ಮಾದರ ವ:20 ವರ್ಷ ಉ: ಕೂಲಿ ಜಾ: ಮಾದರ ಸಾ: ಸಂತೆ ಕೆಲ್ಲೂರ ತಾ: ಮಸ್ಕಿ ಜಿ: ರಾಯಚೂರ ಈತನು ನಮ್ಮ ಮಗಳ ಗಂಡನಾದ ಹನುಮಂತ ತಂದೆ ಮಲ್ಲಪ್ಪ ಮಾದರ ವ;32 ಉ:ಕೂಲಿ ಜಾ: ಮಾದರ ಸಾ:ಸಜರ್ಾಪೂರ ಈತನ ಜೋತೆಯಲ್ಲಿ ಕೂಲಿ ಕೆಲಸಕ್ಕೆ ಅಂತಾ ಈಗ್ಗೆ ಸುಮಾರು 15 ದಿನಗಳ ಹಿಂದೆ ಹೋಗಿದ್ದುನು, ನಮ್ಮ ಅಳಿಯ ಮತ್ತು ಆತನ ತಮ್ಮಂದಿರಾದ ಮೌನೇಶ ತಂದೆ ಮಲ್ಲಪ್ಪ ಮಾದರ, ಹುಲಗಪ್ಪ ತಂದೆ ಅಂಬ್ರಪ್ಪ ಮಾದರ, ದುಗರ್ೇಶ ತಂದೆ ಮಾನಪ್ಪ ಮಾದರ ಇರಿವರೆಲ್ಲರೂ ಕೂಡಿ ಶಹಾಪೂರ ತಾಲೂಕಿನ ಕರಕಳ್ಳಿ ತಾಂಡಾದಲ್ಲಿ ನೀರಿನ ಟಾಕಿ ಕಟ್ಟುವ ಕೆಲಸ ಮಾಡುತ್ತಿದ್ದುದಾಗಿ ತಿಳಿಸಿದ್ದರು, 
      ಹೀಗಿದ್ದು, ನಿನ್ನೆ ದಿನಾಂಕ: 10/03/2020 ರಂದು 03.00 ಪಿಎಂ ಸುಮಾರಿಗೆ ನಾನು ನಮ್ಮ ಊರಲ್ಲಿನ ನಮ್ಮ ಮನೆಯಲ್ಲಿ ಇದ್ದಾಗ ನಮ್ಮ ಅಳಿಯ ಹನುಮಂತ ತಂದೆ ಮಲ್ಲಪ್ಪ ಮಾದರ ಸಾ: ಸಜರ್ಾಪೂರ ಈತನು ಪೊನ ಮಾಡಿ ಹೇಳಿದ್ದೇನಂದರೆ, ತಾವೆಲ್ಲರೂ ಇಂದು ಹೊಳಿ ಹಬ್ಬ ಇದ್ದರಿಂದ ಕೆಲಸಕ್ಕೆ ರಜೆ ಇತ್ತು ತಾವೆಲ್ಲರೂ, ಅಂದರೆ, ತಾನು ತನ್ನ ತಮ್ಮಂದಿರೂ ಹಾಗೂ ನನ್ನ ಮಗನಾದ ಹನುಮಂತ ತಂದೆ ಅಂಬ್ರಪ್ಪ ಎಲ್ಲರೂ ಕರಕಳ್ಳಿ ತಾಂಡಾ ದಿಂದ ಕರಕಳ್ಳಿ ಗ್ರಾಮದ ಹತ್ತಿರ ಇರುವ ಕೆನಾಲಕ್ಕೆ ಬಟ್ಟ್ಟೆ ತೊಳೆಯಲು ಹೋಗಿದ್ದೇವು, ಅಂದಾಜು 02.30 ಪಿಎಂ ಸುಮಾರಿಗೆ ಬಟ್ಟೆ ತೊಳೆಯುತ್ತಿದ್ದಾಗ, ಹನುಮಂತ ಈತನು ಕಾಲು ಜಾರಿ ನಿರಿನಲ್ಲಿ ಬಿದ್ದು ಮಾಮಾ, ಮಾಮಾ ಅಂತಾ ಚೀರಿದ್ದು, ಆಗ ನಾವು ನೋಡಿದೆವು, ನಮಗೆ ಈಜು ಬರದಿದ್ದ ರಿಂದ ನಮ್ಮ ತಮ್ಮನಾದ ಹುಲುಗಪ್ಪ ತಂದೆ ಅಂಬ್ರಪ್ಪ ಮಾದರ ಈತನು ನೀರಿನಲ್ಲಿ ಹಾರಿ ಹನುಮಂತ ಈತನಿಗೆ ಮೇಲೆ ಎಳೆಯಲು ಪ್ರಯತ್ನಿಸಿದನು ಆಗ ಅವನಿಗೂ ಆಗದೆ ನೀರಿನ ರಬಸಕ್ಕೆ ಹನುಮಂತ ಈತನು ನೀರಿನಲ್ಲಿ ಮುಳಗಿದ್ದಾನೆ, ಹುಲುಗಪ್ಪ ಈತನು ದಂಡೆಗೆ ಬಂದು ಮೇಲೆ ಬಂದಿದ್ದಾನೆ, ಹನುಮಂತ ಮೇಲೆ ಬಂದಿರುವದಿಲ್ಲ ನೀರಲ್ಲಿ ಎಲ್ಲಿ ಸಿಕ್ಕಿಬಿದ್ದಿದ್ದಾನೆ ಅಂತಾ ಗೊತ್ತಾಗುತ್ತಿಲ್ಲ ಅಂತಾ ತಿಳಿಸಿದ, ನಾವು ಗಾಬರಿಯಾಗಿ ನಮ್ಮೂರಿನಿಂದ ಅಂಬ್ರಪ್ಪ ತಂದೆ ದ್ಯಾವಪ್ಪ ಮಾದರ ಇವರಿಗೆ ಕರೆದುಕೊಂಡು ನಂತರ ಹುಲುಗಪ್ಪ ತಂದೆ ಅಂಬಣ್ಣ ಮಾದರ ಸಾ: ಸಜರ್ಾಪುರ, ಇವರಿಗೆ ಕರೆದು ಎಲ್ಲರೂ ಕೂಡಿ ಕರಕಳ್ಳಿ ಕೆನಾಲ ಹತ್ತಿರ ಇಂದು ದಿನಾಂಕ: 11/03/2020 ರಂದು 03.00 ಎಎಮ್ ಸುಮಾರಿಗೆ ಬಂದೆವು. ಅಲ್ಲಿಯ ವರೆಗೆ ನನ್ನ ಮಗ ಹನುಮಂತ ಈತನು ಸಿಕ್ಕಿರಲಿಲ್ಲ, ಕೆನೆಲ ನೀರು ಬಂದ ಮಾಡಿಸಿದ್ದು, ಎಲ್ಲರೂ ಕೂಡಿ ಹುಡುಕಾಡಲಾಗಿ ಬೆಳಿಗ್ಗೆ 06.00 ಎಎಂ ಸುಮಾರಿಗೆ ನನ್ನ ಮಗನಾದ ಹನುಮಂತ ತಂದೆ ಅಂಬ್ರಪ್ಪ ಮಾದರ ವ:20 ವರ್ಷ ಉ: ಕೂಲಿ ಜಾ: ಮಾದರ ಸಾ: ಸಂತೆ ಕೆಲ್ಲೂರ ತಾ: ಮಸ್ಕಿ ಜಿ: ರಾಯಚೂರ ಈತನ ಶವ ನೀರಿನಲ್ಲಿ ಬಿದ್ದ ಸ್ಥಳ ದಿಂದ ಸುಮಾರು 600 ಮೀಟರ ಅಂತರದಲ್ಲಿ ತೇಲಿದ್ದು ಇರುತ್ತದೆ. ನಾನು ನನ್ನ ಮಗನ ಶವ ನೋಡಿ ಗುರುತಿಸಿರುತ್ತೇನೆ.   
      ನನ್ನ ಮಗನಾದ ಹನುಮಂತ ತಂದೆ ಅಂಬ್ರಪ್ಪ ಮಾದರ ವ:20 ವರ್ಷ ಉ: ಕೂಲಿ ಜಾ: ಮಾದರ ಸಾ: ಸಂತೆ ಕೆಲ್ಲೂರ ತಾ: ಮಸ್ಕಿ ಜಿ: ರಾಯಚೂರ ಈತನು ನಿನ್ನೆ ದಿನಾಂಕ: 10/03/2020 ರಂದು 02.30 ಪಿಎಮ ಸುಮಾರಿಗೆ ಬಟ್ಟೆ ತೊಳೆಯುತ್ತಿದ್ದಾಗ ಆಕಸ್ಮಿಕವಾಗಿ ಕೆನಾಲ ನೀರಲ್ಲಿ ಬಿದ್ದು ಮೃತಪಟ್ಟಿರುತ್ತಾನೆ. ನನ್ನ ಮಗನ ಸಾವಿನ ವಿಷಯದಲ್ಲಿ ಯಾರ ಮೇಲೆ ಯಾವುದೆ ರೀತಿಯ ಸಂಶಯ ಇರುವದಿಲ್ಲ. ತಾವು ಮುಂದಿನ ಕ್ರಮ ಕೈಕೊಳ್ಳಬೇಕು ಅಂತಾ ಮಾನ್ಯರವರಲ್ಲಿ ವಿನಂತಿ ಮುಂದಿನ ಕ್ರಮ ಜರುಗಿಸಿ ಅಂತಾ ಸಾರಾಂಶದ ಮೇಲಿಂದ ಗೋಗಿ ಪೊಲೀಸ್ ಠಾಣೆ ಯುಡಿಆರ್ ನಂ:04/2020 ಕಲಂ: 174 ಸಿ.ಆರ್.ಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
                                                     
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:-   22/2020 ಕಲಂ, 78(3) ಕೆ.ಪಿ.ಆ್ಯಕ್ಟ್ :- ಇಂದು ದಿನಾಂಕ: 11/03/2020 ರಂದು 09.15 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಸೋಮಲಿಂಗ ಒಡೆಯರ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ  ಸಾರಾಂಶವೆನೆಂದರೆ, ಇಂದು ದಿನಾಂಕ: 11/03/2019 ರಂದು 05.30 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೇನಂದರೆ. ಚನ್ನೂರ ಕೆ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ ಕಲ್ಯಾಣ ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ. ಅಂತಾ ಬಾತ್ಮೀ ಬಂದಿದ್ದು, ಈ ಬಗ್ಗೆ ದಾಳಿ ಮಾಡಲು ಮತ್ತು ದಾಳಿ ಮಾಡಿದ ನಂತರ ಅಸಂಜ್ಞಯ ಪ್ರಕರಣ ದಾಕಲು ಮಾಡಿಕೊಳ್ಳುವ ಕುರಿತು ಮಾನ್ಯ ಹೆಚ್ಚುವರಿ ಜೆ.ಎಮ.ಫ್.ಸಿ ನ್ಯಾಯಾಲಯ ಶಹಾಪುರ ರವರಲ್ಲಿ ಅನುಮತಿ ಕೋರಿ ಪತ್ರ ಬರೆದು ವಿನಂತಿಸಿಕೊಂಡೆನು, ಮಾನ್ಯ ನ್ಯಾಯಾಲದಿಂದ ಅನುಮತಿ ಪಡೆದುಕೊಂಡ ನಂತರ ಇಬ್ಬರು ಪಂಚರು, ಸಿಬ್ಬಂದಿಯವರ ಜೋತೆಗೆ ಚನ್ನೂರ (ಕೆ) ಗ್ರಾಮದ ಬಸ್ ನಿಲ್ದಾಣದ ಹತ್ತಿರ 07.50 ಪಿ.ಎಮ್ ಕ್ಕೆ ದಾಳಿ ಮಾಡಿ ಆರೋಪಿತನಾದ ರತ್ನಚಂದ್ರ ತಂದೆ ವರದಪ್ಪ ಬಳಗಾರ ವ:45 ಉ: ಕೂಲಿ ಜಾ: ಜೈನ ಸಾ: ಚನ್ನೂರ ಕೆ ತಾ: ಶಹಾಪೂರ ಹಿಡಿದು ನಗದು ಹಣ 2010/- ರೂ. ಹಾಗೂ ಒಂದು ಮಟ್ಕಾ ಚೀಟಿ ಮತ್ತು ಒಂದು ಬಾಲ್ ಪೆನ್ನು ಸಿಕ್ಕಿದ್ದು ಅವುಗಳನ್ನು ಜಪ್ತಿ ಮಾಡಿಕೊಂಡು ತಮ್ಮ ವಶಕ್ಕೆ ತಗೆದುಕೊಂಡಿದ್ದು ಸದರಿ ಆರೋಪಿತನ ವಿರುದ್ಧ ಕಲಂ: 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:22/2020 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 80/2020  ಕಲಂ 279 337 338 ಐ.ಪಿ.ಸಿ ಸಂ 187 ಐ.ಎಮ್.ವಿ ಆಕ್ಟ:- ಇಂದು ದಿನಾಂಕ 11/03/2020 ರಂದು ಮುಂಜಾನೆ  08-15 ಗಂಟೆಗೆ ಫಿಯರ್ಾದಿ ಶ್ರೀ,  ಶಿವಕಾಂತ ತಂದೆ ಝರೇಪ್ಪ ಸಜ್ಜನ ವಯ 28 ವರ್ಷ ಜಾತಿ ಪ.ಜಾತಿ(ಹೊಲೆಯ) ಉಃ ಖಾಸಗಿ ಕೆಲಸ ಸಾಃ ಬೋರಂಪಳ್ಳಿ ತಾಃ ಹುಮನಾಬಾದ ಜಿಃ ಬೀದರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀರಿಸಿದ ಫಿಯರ್ಾದಿ ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 07/03/2020 ರಂದು 1) ನಾನು, ಮತ್ತು ಬಸವಕಲ್ಯಾಣ ತಾಲೂಕಿನ ಗೆಳೆಯರಾದ 2) ಗಿರಿಧರ ತಂದೆ ಬಾಳಪ್ಪ ಹಡಪದ ವಯ 28 ವರ್ಷ ಜಾತಿ ಹಡಪದ ಉಃ ಪಿ.ಆರ್ ಡಿಗ್ರಿ ಕಾಲೇಜ್ ಪ್ರಿನ್ಸಿಪಾಲ್ ಸಾಃ ಬೆಂಕಿಪಳ್ಳಿ ಹಾಲಿವಸತಿ ಮನ್ನಾಏಖೇಳ್ಳಿ 3) ಶಶಿಕಾಂತ ತಂದೆ ದಿಗಂಬರ ಗೊಡಬೊಲೆ ವಯ 26 ವರ್ಷ ಸಾಃ ತೆಗಲೂರ ತಾಃ ಬಸವಕಲ್ಯಾಣ 4) ರಾಮ ತಂದೆ  ಮಹಾದೇವ ವಯ 19 ವರ್ಷ  ಜಾತಿ ಪ.ಜಾತಿ (ಹೊಲೆಯ) ಉಃ ವಿದ್ಯಾಥರ್ಿ ಸಾಃ ನೀಲಕಂಠ ಪೋಸ್ಟ ಖಾನಾಪೂರ ತಾಃ ಬಸವಕಲ್ಯಾಣ
 5) ಸಿದ್ದಾರ್ಥ ತಂದೆ ಸಂಗಶೆಟ್ಟಿ ವಯ 28 ವರ್ಷ ಜಾತಿ ಪ.ಜಾತಿ(ಹೊಲೆಯ) ಉಃ ಪಿ.ಆರ್ ಡಿಗ್ರಿ ಕಾಲೇಜ್ ಮ್ಯಾನೇಜಮೆಂಟ್ ಸಾಃ ಬಸವಕಲ್ಯಾಣ ರವರೆಲ್ಲರೂ ಕೂಡಿ ಸಿದ್ದಾರ್ಥ ಈತನು ತಂದಿದ್ದ ಇಂಡಿಕಾ ವಿಸ್ತಾ ಕಾರ ನಂ ಕೆಎ-39-ಎಮ್-1507  ನೇದ್ದರಲ್ಲಿ ಬಸವಕಲ್ಯಾಣದಿಂದ ರಾತ್ರಿ 8-00 ಗಂಟೆಗೆ ಹೊರಟೇವು. ಸದರಿ ಕಾರ ಸಿದ್ದಾರ್ಥನು ಚಲಾಯಿಸುತಿದ್ದನು. ಕನರ್ಾಟಕ ರಾಜ್ಯದ ಪ್ರವಾಸಿತಾಣಗಳಾದ  ಗೋಕಾಕ್ ಪಾಲ್ಸ್,  ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಬೇಲೂರ, ಹಳೆಬೀಡು, ಚಿತ್ರದುರ್ಗ ಕೋಟೆ ನೋಡಿಕೊಂಡು  ಹೊಸಪೇಠೆ. ಲಿಂಗಸೂಗುರು ಮಾರ್ಗವಾಗಿ ಊರಿಗೆ ಹೋಗುತಿದ್ದೆವು.
     ಹೀಗಿರುವಾಗ ಇಂದು ದಿನಾಂಕ 11/03/2020 ರಂದು ಬೆಳಗಿನ ಜಾವ  05-50 ಗಂಟೆಯ ಸುಮಾರಿಗೆ   ಶಹಾಪೂರ ಪಟ್ಟಣದಲ್ಲಿ ಬರುತಿದ್ದಾಗ ಎದರುಗಡೆಯಿಂದ ಅಂದರೆ ಶಹಾಪೂರ ಪಟ್ಟಣದ ಕಡೆಯಿಂದ ಒಬ್ಬ ವಾಹನ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಕಾರಗೆ ಅಪಘಾತ ಪಡಿಸಿದ್ದರಿಂದ ನಮ್ಮ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡು ಕಾರಿನಲ್ಲಿ ಕುಳಿತಿದ್ದ ನನಗೆ ಎದೆಗೆ, ಸೊಂಟಕ್ಕೆ, ಎರಡು ಮೋಳಕಾಲಿಗೆ ಗುಪ್ತಗಾಯವಾಗಿರುತ್ತವೆ. ಶಶಿಕಾಂತ ಈತನಿಗೆ ತಲೆಯ ಮುಂಭಾಗ ಕಟ್ಟಾದ ಭಾರಿ ರಕ್ತಗಾಯವಾಗಿ ತಿವ್ರ ರಕ್ತಬರುತಿತ್ತು.  ಗಿರಿಧರ ತಂದೆ ಬಾಳಪ್ಪ ಹಡಪದ ಈತನಿಗೆ ಎಡಗಣ್ಣಿನ ಹುಬ್ಬಿನ ಮೇಲೆ, ಎರಡು ಮೋಣಕಾಲುಗಳಿಗೆ, ಬಲಗಾಲಿನ ಪಾದಕ್ಕೆ ರಕ್ತಗಾಯವಾಗಿರುತ್ತದೆ. ರಾಮ ತಂದೆ ಮಹಾದೇವ ಈತನಿಗೆ ಎದೆಗೆ, ಬೆನ್ನಿಗೆ ಒಳಪೆಟ್ಟಾಗಿರುತ್ತವೆ. ಕಾರ ಚಾಲಕ ಸಿದ್ದಾರ್ಥನಿಗೆ ತಲೆಗೆ, ಬಲಗಾಲಿಗೆ ರಕ್ತಗಾಯ ಮತ್ತು ಬಲಗೈಗೆ ತರಚಿದ ರಕ್ತಗಾಯವಾಗಿರುತ್ತದೆ. ನಮ್ಮ ಕಾರಗೆ ಅಪಘಾತ ಪಡಿಸಿದವಾಹನ ಐಷರ್ ಟೆಂಪೂ ವಾಹನ ಇದ್ದು, ಸದರಿ ವಾಹನ ಚಾಲಕನ ಹತ್ತಿರ ಹೋಗಿ ಅವನ ಹೆಸರು ವಿಳಾಸ ಕೇಳುವಷ್ಟರಲ್ಲಿ ಚಾಲಕನು ವಾಹನ ಬಿಟ್ಟು ಓಡಿ ಹೋಗಿದ್ದು, ಅವನ ಮುಖ ನೋಡಿರುತ್ತೆನೆ. ಡ್ರೈವನನ್ನು ಪುನಃ ನೋಡಿದಲ್ಲಿ ಗುರುತಿಸುತ್ತೆನೆ. ಅಪಘಾತ ಪಡಿಸಿ ಐಷರ್ ಟೆಂಪೂ ವಾಹನ  ನಂ ನೋಡಲಾಗಿ ಕೆಎ-07-ಎ-5990 ಅಂತ ಇರುತ್ತದೆ ಸದರಿ ವಾಹನದ ಬಲಭಾಗ ಜಖಂಗೊಂಡಿರುತ್ತದೆ. ಸದರಿ ಅಪಘಾತವು ಶಹಾಪುರ ಪಟ್ಟಣದ ಮಮತಾ ಕಾಲೋನಿಯಲ್ಲಿ ಹಾದು ಹೋಗಿರುವ ಹತ್ತಿಗೂಡುರ - ಶಹಾಪೂರ ರೋಡಿನ ಮೇಲೆ ಮುನ್ನಾ ಹೊಟೇಲ್ ಎದರುಗಡೆ ರೋಡಿನ ಮೇಲೆ ಅಪಘಾತವಾಗಿರುತ್ತದೆ.  ನಂತರ ಗಾಯಗೊಂಡ ನಾವೆಲ್ಲರೂ ಒಂದು ಆಟೋದಲ್ಲಿ ಕುಳಿತುಕೊಂಡು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದಿರುತ್ತೆವೆ. ವೈದ್ಯಾಧಿಕಾರಿಗಳು ಗಾಯಗೊಂಡ ನಮ್ಮೆಲ್ಲರಿಗೆ ಉಪಚಾರ ಮಾಡಿರುತ್ತಾರೆ.  ನಂತರ ವೈದ್ಯಾಧಿಕಾರಿಯವರ ಸಲಹೆ ಮೆರೆಗೆ, ಶಶಿಕಾಂತ, ಸಿದ್ದಾರ್ಥ, ಗಿರಿಧರ ಇವರಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಿಗೆ ಹೋಗಲು ತಿಳಿಸಿದ್ದು ಅವರ ಜೊತೆಯಲಿ ರಾಮ ತಂದೆ ಮಹಾದೇವ ಈತನು ಕಲಬುರಗಿಗೆ ಅಂಬುಲೇನ್ಸದಲ್ಲಿ ಕರೆದುಕೊಂಡು ಹೋದನು. ನಂತರ  ನಾನು ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿಕೊಂಡು ದೂರು ಕೊಡಲು ಠಾಣೆಗೆ ಬಂದಿರುತ್ತೆನೆ.
       ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ವಾಹನ ಚಲಾಯಿಸಿ ಅಪಘಾತ  ಪಡಿಸಿ ಓಡಿ ಹೋದ ಐಷರ್ ಟೆಂಪೂ ವಾಹನ ನಂ ಕೆಎ-07-ಎ-5990 ರ  ಚಾಲಕನ ವಿರುದ್ದ ಕ್ರಮ ಕೈಕೊಳ್ಳಲು ವಿನಂತಿ ಅಂತ  ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 80/2020 ಕಲಂ  279, 337, 338 ಐ.ಪಿ.ಸಿ ಸಂ 187 ಐ.ಎಮ್.ವಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.


ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 81/2020 ಕಲಂ 406, 463, 467 ಮತ್ತು 420  ಐ.ಪಿ.ಸಿ :- ಇಂದು ದಿನಾಂಕ 11/03/2020 ರಂದು 4.30 ಪಿಎಂ ಕ್ಕೆ ಅಜರ್ಿದಾರರಾದ ಭೀಮಣ್ಣ ತಂದೆ ಶರಬಣ್ಣ ತಪ್ಪೆದಾರ ವ|| 29ವರ್ಷ ಉ|| ಹಿಟಾಚಿ ಡ್ರೈವರ ಸಾ|| ರಸ್ತಾಪೂರ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ತಮಗೆ ಪರಿಚಯವಿರುವ ವಕೀಲರಿಂದ ಟೈಪ ಮಾಡಿಸಿದ ಅಜರ್ಿಯನ್ನು ತೆಗೆದುಕೊಂಡು ಬಂದು ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನಾನು ಭೀಮಣ್ಣ ಇದ್ದು ಹಿಟಾಚಿ ಡ್ರೈವರ ಕೆಲಸ ಮಾಡಿಕೊಂಡು ಇದ್ದು ಆರೋಪಿತನಾದ ಯೋಗೇಶ ಶೆಟ್ಟಿ ಈತನು 2017 ರಲ್ಲಿ ಪರಿಚಯವಾಗಿದ್ದು ಪರಿಚಯವಾದ ನಂತರ ನನಗೆ ಒಂದು ಪಿಸಿ 130 ಎಲ್ ಎನ್ ಟಿ ಕಾಮರ್ಸ 2013 ಮಾಡೆಲ್ ಹಿಟಾಚಿ ಮಶಿನನ್ನು ಅಕ್ಟೋಬರ 2017 ರಲ್ಲಿ ಕೆ ರಾಮಚಂದ್ರ ಆಚಾರ್ಯ ಕೋರವಾಡಿ ಕುಂಬಾಶಿ ಸಾ|| ಕುಂದಾಪೂರ ಇವರ ಹತ್ತಿರ 22,00,000/- ರೂಪಾಯಿಗೆ ಕೊಡಿಸಿದ್ದು ಅದರ ಪ್ರಕಾರ 17/07/2017 ರಂದು 1,50,000/- ರೂ ಹಣದ ಮುಖಾಂತರ, 27/07/2017 ರಂದು 3,00,000/- ಚೆಕ್ ಮುಖಾಂತರ ನೆಫ್ಟ ಮಾಡಿದ್ದು, 26/09/2017 ರಂದು 2,50,000/- ರೂ ಕ್ಯಾಶ ಮುಖಾಂತರ ಮತ್ತು 03/11/2017 ರಂದು 75,000/- ರೂ ಹಣ ನೀಡಿ ಮತ್ತು ಶ್ರೇಯಾ ಫೈನಾನ್ಸ ಕಡೆಯಿಂದ 14,25,000/- ರೂ ಹೀಗೆ ಒಟ್ಟು 22,00,000/- ರೂ ಹಿಟಾಚಿ ಮಾಲೀಕನಾದ ರಾಮಚಂದ್ರ ಆಚಾರ್ಯ ಇವರಿಗೆ ನಿಡಿ ಖರೀದಿ ಪತ್ರ ಮಾಡಿಕೊಂಡು ಮಶಿನನ್ನು ನಮ್ಮ ಊರಿಗೆ ತೆಗೆದುಕೊಂಡು ಬಂದಿದ್ದೆನು.  ದುಗರ್ಾ ಬಾಂಡೆ ಶೆಟ್ಟಿ ಯವರ ಕಂಪನಿಯಲ್ಲಿ ಕೆಲಸವಿದೆ ತಿಂಗಳಿಗೆ 1,50,000/- ರೂ ಬಾಡಿಗೆ ಕೊಡುತ್ತಾರೆ ಅಲ್ಲಿಯೇ ಕೆಲಸಕ್ಕೆ ಬಿಡು ಅಂತಾ ನನಗೆ ಪುಸಲಾಯಿಸಿ ನಮ್ಮ ಸ್ವಗ್ರಾಮ ರಸ್ತಾಪೂರದಿಂದ ನನ್ನ ಹಿಟಾಚಿಯ ಜೊತೆಗೆ ನನಗೆ ಬರಲು ತಿಳಿಸಿದ್ದರಿಂದ ನಾನು ಬಾಡಿಗೆ ಹಣ ಜಾಸ್ತಿ ಬರುತ್ತದೆಂದು ತಿಳಿದು ನನ್ನ ಹಿಟಾಚಿ ಮಶಿನನ್ನು ತೆಗೆದುಕೊಂಡು ಮಂಗಳೂರು ನಗರಕ್ಕೆ ಹೋದೆನು. ನಂತರ ಯೋಗೇಶ ಶೆಟ್ಟಿ ಈತನು ದುಗರ್ಾ ಕನ್ಸಟ್ರಕ್ಷನ್ಸ ಕನಂಬದೂರು ಸೈಟ ಹೊಸನಗರ ತಾಲೂಕು ಶಿವಮೊಗ್ಗ ಜಿಲ್ಲೆಯಲ್ಲಿ ದಿನಕ್ಕೆ 5000/- ರೂ ನಂತೆ ಅಲ್ಲಿ 7 ತಿಂಗಳು ಕೆಲಸ ಮಡಿದೆ. ನಾನು ಮಾಡಿದ ಬಾಡಿಗೆ ಹಣ ಕೇಳುವಾಗ ಆರೋಪಿತನು ನನ್ನ ಜಿಎಸ್ಟಿ ನಂಬರ ಇದೆ ನನ್ನ ಹೆಸರಲ್ಲೇ ಬಿಲ್ ಮಾಡಿಸಿ ನನ್ನ ಅಕೌಂಟಿಗೆ ಜಮಾ ಮಾಡಿ ನಂತರ ನಿನ್ನ ಅಕೌಂಟಿಗೆ ವಗರ್ಾವಣೆ ಮಾಡುತ್ತೇನೆಂದು ಹೇಳಿದ. ಕಂಪನಿಯವರು ಕೊಟ್ಟಿದ್ದಾರೋ ಇಲ್ಲವೋ ಎನ್ನುವುದರ ಬಗ್ಗೆ ನನಗೆ ತಿಳಿದಿಲ್ಲ ಮತ್ತು ನನ್ನ ಅಕೌಂಟಿಗೆ ಯಾವುದೇ ಹಣ ಬಂದಿಲ್ಲ. ಇದರ ಬಗ್ಗೆ ನಾವು ಕೇಳಲಾಗಿ ನಿಮ್ಮ ತಂದೆ ತಂದೆ 7,00,000/- ರೂ ತೆಗೆದುಕೊಂಡು ಹೋಗಿದ್ದಾನೆಂದು ಭಯ ಹಾಕಿ ನಮ್ಮನ್ನು ಕಳುಹಿಸಿಕೊಟ್ಟರು. ನಮ್ಮ ತಂದೆಗೆ 7,00,000/- ರೂ ಕೊಡಬೇಕಾದರೆ ಚೆಕ್ ಮುಖಾಂತರ ಅವರು ಕೊಡಬೇಕು ಅಷ್ಟೊಂದು ಹಣ ಕಂಪನಿಯವರು ಕೊಡಲು ಬರುವುದಿಲ್ಲ ಚೆಕ್ ಕೊಟ್ಟಿದ್ದರೆ ಅದು ನಮ್ಮ ಹೆಸರು ಅಥವಾ ನನ್ನ ಹೆಸರಿನಿಂದ ಸಂದಾಯವಾಗುತ್ತಿತ್ತು. ಹೀಗಿರುವಾಗ ನಾನು ಊರಿನ ಕಡೆ ಬರೋಣ ಅಂತಾ ನನ್ನ ಮಶೀನ ಮೇಲೆ ದುಗರ್ೇಶ ಆಪರೇಟರನ್ನು ಇಟ್ಟು ಊರಿಗೆ ಬಂದೆ. ಊರಿನಲ್ಲಿ ಸ್ವಲ್ಪ ದಿನ ಇದ್ದು ವಾಪಸ್ ನಾನು ಹೋದಾಗ ನನ್ನ ಮಶೀನ್ ಬಗ್ಗೆ ವಿಚಾರಣೆ ಮಾಡಿದಾಗ ಮಶೀನ್ ಈಗಾಗಲೇ ನೀನು ರಘುರಾಮ ಶೆಟ್ಟಿಗೆ ಮಾರಾಟ ಮಾಡಿದ್ದೀ ಅಂತಾ ನನ್ನ ಸಹಿಯನ್ನು ಫೋರ್ಜರಿ ಮಾಡಿ ಒಂದು ಖರೀದಿ ಪತ್ರವನ್ನು ಸೃಷ್ಟಿಸಿ ನನಗೆ ಮೋಸ ಮಾಡಿರುತ್ತಾನೆ. ಆದ್ದರಿಂದ ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿ ನನಗೆ ಅಪನಂಬಿಕೆ ಮಾಡಿ ಮೋಸತನದಿಂದ ನನ್ನ ಬಾಡಿಗೆ ಹಣವನ್ನು ಕೂಡ ಎತ್ತಿಹಾಕಿ ಕೊನೆಗೆ ನನ್ನ ಮಶೀನನ್ನು ಕೂಡ ಫೋರ್ಜರಿ ಮತ್ತು ನಕಲು ಕಾಗದಗಳನ್ನು ಸೃಷ್ಟಿಸಿ ನನಗೆ ಭಯವನ್ನು ಹುಟ್ಟಿಸಿದ ಆರೋಪಿಯ ಮೇಲೆ ಸೂಕ್ತ ಕ್ರಮ ಜರುಗಿಸಿ ನನ್ನ ಹಿಟಾಚಿಯನ್ನು ನನಗೆ ವಾಪಸ್ ಕೊಡಿಸಲು ವಿನಂತಿಸುತ್ತೇನೆ ಮತ್ತು ನಾನು ಮಶಿನ್ ಮಾರಾಟ ಮಾಡಬೇಕಾದರೆ ಫೈನಾನ್ಸ ಹಣಕಾಸಿನ ಸಂಸ್ಥೆಯಿಂದ ಹಣ ಪಡೆದಿರುತ್ತೇನೆ ಅವರ ಸಮ್ಮತಿ ಇಲ್ಲದೇ ನಾನು ಆ ಹಿಟಾಚಿಯನ್ನು ಮಾರಾಟ ಮಾಡಲು ಬರುವುದಿಲ್ಲ ಇದ್ದ ವಿಷಯವನ್ನು ಮಾನ್ಯರವರಲ್ಲಿ ತಿಳಿಸಿದ್ದು ಯೋಗೇಶ ಶೆಟ್ಟಿ ಇವರಿಗೆ ನಾನು ವಿಚಾರಿಸಲು ಹೋದರೆ ಭಯದ ವಾತಾವರಣ ಸೃಷ್ಟಿಸಿದ ಕಾರಣ ತಡವಾಗಿ ಬಂದು ದೂರನ್ನು ನೀಡಿದ್ದು ಕಾರಣ ಸದರಿಯವನ ಮೇಲೆ ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 81/2020 ಕಲಂ 406, 463, 467, ಮತ್ತು 420 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು. 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 82/2020.ಕಲಂ 87 ಆ್ಯಕ್ಟ:-    ಇಂದು ದಿನಾಂಕ 11/03/2020 ರಂದು 20-10 ಗಂಟೆಗೆ ಸ||ತ|| ಶ್ರೀ ಸಿದ್ದೇಶ್ವರ ಗೇರಡೆ ಪಿ.ಎಸ್.ಐ.(ಕಾ.ಸೂ-2) ಸಾಹೇಬರು ಠಾಣೆಗೆ ಬಂದು 4 ಜನ ಆರೋಪಿಗಳು, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ. ಇಂದು ದಿನಾಂಕ 11/03/2020 ರಂದು ಠಾಣೆಯಲ್ಲಿದ್ದಾಗ ರಸ್ತಾಪೂರ ಗ್ರಾಮದ ನಾಗಪ್ಪನ ಕೆಂಚಮ್ಮ ದೇವಿ ಗುಡಿಯ ಮುಂದೆ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೆರೆಗೆ, ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪುರ ರವರಿಗೆ ಪತ್ರ ವ್ಯವಹಾರ ಮಾಡಿ 17-30 ಗಂಟೆಗೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಶರಣಪ್ಪ ಹೆಚ್.ಸಿ 164, ಬಸವಂತಪ್ಪ ಹೆಚ್,ಸಿ,09. ಲಕಕ್ಪ್ಪ ಪಿ.ಸಿ.163. ಮುತ್ತಪ್ಪ ಪಿ.ಸಿ 118, ರವರಿಗೆ ಮಾಹಿತಿ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ಮುತ್ತಪ್ಪ ಪಿ.ಸಿ 118 ರವರಿಗೆ 18-35 ಗಂಟೆಗೆ ಕಳುಹಿಸಿಕೊಟ್ಟಿದ್ದು, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 27 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 49 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು 17-40 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ನಾನು ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಲು ಕೇಳಿಕೊಂಡ ಮೇರೆಗೆ ಒಪ್ಪಿಕೊಂಡರು. 
       ಮಾನ್ಯ ಡಿವೈ.ಎಸ್.ಪಿ. ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ನಾನು ಮತ್ತು ಸಿಬ್ಬಂದಿಯವರು ಹಾಗೂ ಪಂಚರು ಎಲ್ಲರು ಕೂಡಿ ದಾಳಿಕುರಿತು ಖಾಸಗಿ ಜೀಪ ನೇದ್ದರಲ್ಲಿ ಠಾಣೆಯಿಂದ 17-50 ಗಂಟೆಗೆ ಹೊರಟು ರಸ್ತಾಪೂರ ಗ್ರಾಮದ ಕೆಂಚಪ್ಪ ದೇವಿ ಹತ್ತಿರ 18-10 ಗಂಟೆಗೆ ಹೋಗಿ ಜೀಪನಿಂದ ಕೆಳಗಡೆ ಇಳಿದು ನಾಗಪ್ಪನ ಗುಡಿಯ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮನೆಗಳ ಗೋಡೆಗಳ ಮರೆಯಲ್ಲಿ ನಿಂತು 18-15 ಗಂಟೆಗೆ ನಿಗಮಾಡಿ ನೋಡಲಾಗಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದರು ಜೂಜಾಟ ಆಡುತಿದ್ದವರಲ್ಲಿ ಒಬ್ಬನು ಅಂದರಕ್ಕೆ 40 ರೂಪಾಯಿ ಅಂದರೆ ಇನ್ನೊಬ್ಬನು ಬಾಹರಕ್ಕೆ 40 ರೂಪಾಯಿ ಅಂತ ಹೇಳಿ ಜೂಜಾಟ ಆಡುತಿದ್ದರು, ಆಗ ನಾವು ಮತ್ತು ಪಂಚರು ಸದರಿಯವರು ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು, 18-20 ನಾವೆಲ್ಲರೂ ಸದರಿಯವರ ಮೇಲೆ ದಾಳಿ ಮಾಡಿದಾಗ 4 ಜನರು ಸಿಕ್ಕಿದ್ದು. ನಾನು ಪಂಚರ ಸಮಕ್ಷಮದಲ್ಲಿ ಅವರ ಹೆಸರು ವಿಳಾಸ ವಿಚಾರಿಸಿ ಅಂಗಸೋದನೆ ಮಾಡಲಾಗಿ ಒಬ್ಬೊಬ್ಬರಾಗಿ ತಮ್ಮ ಹೆಸರುಗಳನ್ನು ಈ ಕೆಳಗಿನಂತೆ ಹೇಳಿರುತ್ತಾರೆ. 1] ಶರಬಣ್ಣ ತಂದೆ ಹೈಯಾಳಪ್ಪ ಬೋಮ್ಮನಹಳ್ಳಿ ವ|| 30 ಜಾ|| ಮಾದಿಗ ಉ|| ಕೂಲಿ ಸಾ|| ರಸ್ತಾಪೂರ ಈತನ ಅಂಗಶೋಧನೆ ಮಾಡಿದಾಗ  ನಗದು ಹಣ 810/- ರೂಪಾಯಿ ಸಿಕ್ಕವು 2] ಶರಬಣ್ಣ ತಂದೆ ನಾಗಪ್ಪ ಮ್ಯಾಗೇರಿ ವ|| 45 ಜಾ|| ಮಾದಿಗ ಉ|| ಕೂಲಿ ಸಾ|| ರಸ್ತಾಪೂರ ಈತನ ಅಂಗಶೋಧನೆ ಮಾಡಿದಾಗ  ನಗದು ಹಣ 630/- ರೂಪಾಯಿ ಸಿಕ್ಕವು 3] ಪರಮಣ್ಣ ತಂದೆ ಲಕ್ಮಣ್ಣ ಹಲಿಗಿ ವ|| 25 ಜಾ|| ಮಾದಿಗ ಉ|| ಕೂಲಿ ಸಾ|| ರಸ್ತಾಪೂರ ಈತನ ಅಂಗಶೋಧನೆ ಮಾಡಿದಾಗ ನಗದು ಹಣ 480/- ರೂಪಾಯಿ ಸಿಕ್ಕವು 4] ಸಾಬಣ್ಣ ತಂದೆ ದ್ಯಾವಪ್ಪ ಹೋಸಮನಿ ವ|| 40 ಜಾ|| ಮಾದಿಗ ಉ|| ಕೂಲಿ ಸಾ|| ರಸ್ತಾಪೂರ ಈತನ ಅಂಗಶೋಧನೆ ಮಾಡಿದಾಗ ನಗದು ಹಣ 540/- ರೂಪಾಯಿ ಸಿಕ್ಕವು ಕಣದಲ್ಲಿ ಪಣಕ್ಕೆ ಇಟ್ಟ ಹಣ 240/- ಸಿಕ್ಕವು ಹೀಗೆ ಒಟ್ಟು 2700/- ರೂಪಾಯಿ ಹಾಗೂ 52 ಇಸ್ಪೇಟ್ ಎಲೆಗಳನ್ನು ಒಂದು ಲಕೊಟೇಯಲ್ಲಿ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ 18-30  ಗಂಟೆಯಿಂದ 19-30 ಗಂಟೆಯವರೆಗೆ ಕೆಂಚಮ್ಮ ದೇವಿ ಗುಡಿಯ ಲೈಟಿನ ಬೆಳಕಿನಳಲ್ಲಿ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಕೇಸಿನ ಪುರಾವೆ ಕುರಿತು ತಾಬೆಗೆ ತೆಗೆದುಕೊಂಡಿರುತ್ತೆನೆ. ಮತ್ತು ಜೂಜಾಟದಲ್ಲಿ ಸಿಕ್ಕ 4 ಜನರನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 19-50 ಗಂಟೆಗೆ ಬಂದು ವರದಿಯನ್ನು ತಯ್ಯಾರಿಸಿ 20-10 ಗಂಟೆಗೆ 4 ಜನ ಆರೋಪಿತರನ್ನು ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರು ಪಡಿಸಿ ಮುಂದಿನ ಕ್ರಮ ಕೈಕೊಳ್ಳುವಂತೆ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 82/2020 ಕಲಂ 87 ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 83/2020. ಕಲಂ 78 (3) ಕೆ.ಪಿ.ಆಕ್ಟ:-    ಆರೋಪಿತನು ದಿನಾಂಕ: 11-03-2020 ರಂದು 7:05 ಪಿ.ಎಮ್.ಕ್ಕೆ ಪರಸಾಪೂರ ಗ್ರಾಮದ ದೇವಿಂದ್ರಯ್ಯ ಮಠದ  ಹತ್ತಿರ   ಸಾರ್ವಜನಿಕ ಸ್ಥಳದಲ್ಲಿ ಹೋಗಿ ಬರುವ ಜನರನ್ನು ಕೂಗಿ ಕರೆದು ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗಗ ಫಿಯರ್ಾದಿದಾರರು ಸಿಬ್ಬಂದಿಯೊಂದಿಗೆ ಹೊಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಅವರಿಂದ ಒಟ್ಟು 1020/- ರೂ. ನಗದು ಹಣ , ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಅನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು ಸದರಿ ವರದಿಯು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 83/2020 ಕಲಂ.78 (3) ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರರಣ ಧಾಖಲಿಇಸಿಕೊಂಡು ತನಿಖೆ ಕೈಗೊಂಡೆಎನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 50/2020 ಕಲಂ: 78(3) ಕೆಪಿ ಯಾಕ್ಟ:- ಇಂದು ದಿನಾಂಕ 11/03/2020 ರಂದು 18.45 ಪಿ.ಎಮ್ ಕ್ಕೆ  ಶ್ರೀ ಸುದರ್ಶನರೆಡ್ಡಿ ಪಿಎಸ್ಐ ರವರು  ಠಾಣೆಗೆ ಹಾಜರಾಗಿ ಜ್ಞಾಪನ ನೀಡಿದ್ದೇನಂದರೆ ದಿನಾಂಕ:11/03/2020 ರಂದು ನಾನು ಪೇಟ್ರೋಲಿಂಗ ಕುರಿತು  ಪೊಲೀಸ್ ಠಾಣಾ ವ್ಯಾಪ್ತಿಯ ಯಾಳಗಿ ಗ್ರಾಮದ ಕಡೆಗೆ ಹೋದಾಗ ಸದರ ಯಾಳಗಿ ಗ್ರಾಮದಲ್ಲಿ ಇರುವ ಹಜರತ್ ಯಮನೂರಪ್ಪನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಭಾತ್ಮೀ ಬಂದಿದ್ದು, ಬಾತ್ಮಿ ಬಂದ ಮೇರೆಗೆ ನಾನು ಖುದ್ದಾಗಿ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಮಟಕಾ ನಂಬರ ಬರೆದುಕೊಳ್ಳುವ ಬಗ್ಗೆ 17-00 ಗಂಟೆಗೆ ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡು ನಂತರ ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು 18.45 ಗಂಟೆಗೆ ಅನುಮತಿ ನೀಡಿದ್ದರಿಂದ ಠಾಣಾ ಗುನ್ನೆ ನಂಬರ 50/2020 ಕಲಂ 78[3] ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ಧಾಖಲಿಸಿ ದಾಳಿ ಕೈಕೊಂಡಿದ್ದು ದಾಳಿಯಲ್ಲಿ ಆರೋಪಿ ದೇವಪ್ಪ ತಂದೆ ಭಿಮರಾಯ ಗೊಗಡಿಹಾಳ ವಯಾ|| 45 ಜಾ|| ಬೇಡರ ಉ|| ಕೂಲಿ ಸಾ|| ಯಾಳಗಿ  ಈತನಿಗೆ ದಸ್ತಗಿರಿ ಮಾಡಿ ಆತನಿಂದ ಪಂಚರ ಸಮಕ್ಷಮ 850/- ರೂಪಾಯಿ ನಗದು ಹಣ ಹಾಗು ಒಂದು ಮಟಕಾ ಚೀಟಿ ಹಾಗು ಒಂದು ಬಾಲಪೆನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ ಅಂತ ಮಾನ್ಯರವರಲ್ಲಿ ವಿನಂತಿ ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 51/2020  ಕಲಂ: 273, 328 ಐಪಿಸಿ:- ಇಂದು ದಿನಾಂಕ 11.03.2020 ರಂದು 11.35 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀ ಸುದರ್ಶನರಡ್ಡಿ ಪಿಎಸ್ಐ ಕೆಂಭಾವಿ ಪೊಲೀಸ್ ಠಾಣೆ ಈ ಮೂಲಕ ವರದಿ ಸಲ್ಲಿಸುವುದೇನೆಂದರೆ, ಇಂದು ದಿನಾಂಕ: 11.03.2020 ರಂದು 9.00 ಪಿ.ಎಮ್ ಸುಮಾರಿಗೆ ನಾನು ಹಾಗೂ ಸಿಬ್ಬಂದಿಯವರಾದ ಬಲರಾಮ ಹೆಚ್ಸಿ 146, ಶಿವಲಿಂಗಪ್ಪ ಹೆಚ್ಸಿ 185, ಮಹೇಶ ಪಿಸಿ 309, ಚಂದಪ್ಪ ಪಿಸಿ 316, ಬೀರಪ್ಪ ಪಿಸಿ 195 ಹಾಗು ಜೀಪ ಚಾಲಕ ಪೆದ್ದಪ್ಪಗೌಡ ಪಿ.ಸಿ-214 ರವರೊಂದಿಗೆ ಪೆಟ್ರೊಲಿಂಗ್ ಕುರಿತು ಗೌಡಗೇರಾ ಕ್ರಾಸ್ನಲ್ಲಿ ಇದ್ದಾಗ ಗೌಡಗೇರಾ ಗ್ರಾಮದ ಮಲ್ಲಯ್ಯನ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಪ್ಲಾಸ್ಟಿಕ್ ಬಾಟಲ್ಗಳಲ್ಲಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದಾನೆ ಅಂತ ಭಾತ್ಮಿ ಬಂದ ಮೇರೆಗೆ ಭೀರಪ್ಪ ಪಿಸಿ-195 ರವರ ಮುಖಾಂತರ ಪಂಚ ಜನರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವ|| 38 ಜಾ|| ಪ ಜಾತಿ ಉ||ಕೂಲಿ ಸಾ|| ಕೆಂಭಾವಿ 2) ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ವ|| 48 ಜಾ|| ಪ ಜಾತಿ ಉ|| ಕೂಲಿ ಸಾ|| ಕೆಂಭಾವಿ ಇವರನ್ನು 9.30 ಪಿಎಮ್ಕ್ಕೆ ಗೌಡಗೇರಾ ಕ್ರಾಸ್ಗೆ ಕರೆಯಿಸಿ ಅವರಿಗೂ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ:ಕೆಎ 33 ಜಿ 0074 ನೇದ್ದರಲ್ಲಿ ಗೌಡಗೇರಾ ಕ್ರಾಸ್ದಿಂದ 9.45 ಪಿಎಮ್ಕ್ಕೆ ಹೊರಟು ಗೌಡಗೇರಾ ಗ್ರಾಮದ ಮಲ್ಲಯ್ಯನ ಕಟ್ಟೆಯ ಪಕ್ಕದಲ್ಲಿ 10.00 ಪಿಎಮ್ಕ್ಕೆ ನಮ್ಮ ಜೀಪ್ ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಸದರ ಮಲ್ಲಯ್ಯನ ಕಟ್ಟೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುವದನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 10.05 ಪಿ.ಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುವ ವ್ಯಕ್ತಿ ಓಡಿಹೋಗಿದ್ದು ಸದರಿಯವನ ಹೆಸರು ವಿಚಾರಿಸಿ ತಿಳಿಯಲಾಗಿ ದೇವಪ್ಪ ತಂದೆ ಮೈಲಾರಪ್ಪ ಪೊಲೀಸ್ ಬಿರಾದಾರ ವಯಾ|| 50 ಜಾ|| ಬೇಡರ ಉ|| ಕೂಲಿ ಸಾ|| ಗೌಡಗೇರಾ ಅಂತ ತಿಳಿದುಬಂದಿದ್ದು ನಂತರ ಸದರಿ ಸ್ಥಳದಲ್ಲಿದ್ದ 2 ಲೀಟರನ 3 ಕಳ್ಳಭಟ್ಟಿ ಸರಾಯಿ ತುಂಬಿದ ಪ್ಲಾಸ್ಟಿಕ ಬಾಟಲ್ಗಳನ್ನು ಪಂಚರ ಸಮಕ್ಷಮ ವಶಕ್ಕೆ ಪಡೆದುಕೊಂಡಿದ್ದು, ಸದರ ಬಾಟಲ್ಗಳಲ್ಲಿ 01 ಪ್ಲಾಸ್ಟಿಕ್ ಬಾಟಲನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಕುರಿತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಪ್ರತ್ಯೇಕವಾಗಿ ಬಿಳಿ ಬಟ್ಟೆಯಿಂದ ಹೊಲಿದು ಅದರ ಮೇಲೆ ಅರಗಿನಿಂದ ಏ ಅಂತ ಶೀಲ್ ಹಾಕಿ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಆರೊಪಿತನು ಅನರ್ಹವಾದಂತಹ ಸ್ಥಿತಿಯಲ್ಲಿರುವ ಪದಾರ್ಥವು ಮಾನವ ಜೀವಕ್ಕೆ ಸೇವಿಸಲು ಹಾನಿಕಾರವಾಗಿದೆ ಎಂದು ತಿಳಿದೂ ಈ ಪದಾರ್ಥವನ್ನು ಮಾರಾಟ ಮಾಡಿದ್ದು ಅಲ್ಲದೆ ಸದರ ಪಾನೀಯ (ಕಳ್ಳಭಟ್ಟಿ ಸರಾಯಿ) ಸೇವನೆಯಿಂದ ಮಾನವ ಜೀವಕ್ಕೆ ಹಾನಿ ಇದೆ ಎಂದು ತಿಳಿದೂ ಮಾರಾಟ ಮಾಡುತ್ತಿದ್ದರಿಂದ ಸದರ ಸ್ಥಳದಲ್ಲಿದ್ದ 2ಲೀಟರನ 03 ಪ್ಲಾಸ್ಟಿಕ್ ಬಾಟಲ್ಗಳಲ್ಲಿದ್ದ ಕಳ್ಳಭಟ್ಟಿ ಸರಾಯಿಯನ್ನು ಪಂಚರ ಸಮಕ್ಷಮ 10.05 ಪಿಎಮ್ದಿಂದ 11.05 ಪಿಎಮ್ದವರೆಗೆ  ಜಪ್ತಪಡಿಸಿಕೊಂಡು ಮರಳಿ ಠಾಣೆಗೆ 11.35 ಪಿಎಮ್ಕ್ಕೆ ಬಂದು ಈ ವರದಿ ನೀಡಿದ್ದು ಕಾರಣ ಸದರಿ ಆರೋಪಿತನ ವಿರುದ್ದ ಮುಂದಿನ ಕ್ರಮ ಜರುಗಿಸಲು ಅದೇಶ ನೀಡಿದ್ದರಿಂದ ಕೆಂಭಾವಿ ಠಾಣೆ ಗುನ್ನೆ ನಂ 51/2020 ಕಲಂ 273, 328 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ. ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!