ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/03/2020

By blogger on ಗುರುವಾರ, ಮಾರ್ಚ್ 12, 2020


                                     ಯಾದಗಿರ ಜಿಲ್ಲೆಯ ದೈನಂದಿನ ಅಪ
ರಾದಗಳ ಮಾಹಿತಿ 10/03/2020
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 41/2020 ಕಲಂ: 279,337, 338, 304(ಎ) ಐಪಿಸಿ ಮತ್ತು ಕಲಂ: 187 ಐ.ಎಮ್.ವಿ ಆಕ್ಟ್:- ನಿನ್ನೆ ದಿನಾಂಕ 09.03.2020 ರಂದು ಫಿರ್ಯಾದಿ, ಮೃತಳು ಮತ್ತು ಗಾಯಾಳುದಾರರು ಸೇರಿ ತಮ್ಮ ಮನೆಯ ದೇವರಾದ ಸೇಡಂ ತಾಲೂಕಿನ ಕೋನಾಪೂರ ಗ್ರಾಮದ ಯಲ್ಲಮ್ಮ ದೇವಿಯ ಹುಡಿ ತುಂಬಿ ಬರುವ ಸಲುವಾಗಿ ಆಟೋ ಟಂ ಟಂ ಕೆಎ-33-ಎ-8207 ನೇದ್ದನ್ನು ತೆಗೆದುಕೊಂಡು ಕೋನಾಪೂರ ಗ್ರಾಮಕ್ಕೆ ಹೋಗಿ ಅಲ್ಲಿ ಹುಡಿ ತುಂಬಿದ ನಂತರ ಇಂದು ದಿನಾಂಕ 10.03.2020 ರಂದು ಮರಳಿ ಮೇಲ್ಕಂಡ ಟಂ ಟಂನಲ್ಲಿಯೇ ತಮ್ಮ ಊರಿಗೆ ಬುರುತ್ತಿದ್ದಾಗ ಟಂ ಟಂ ವಾಹನವನ್ನು ಆರೋಪಿ ಯಲ್ಲಪ್ಪ ಈತನು ಚಲಾಯಿಸುತ್ತಿದ್ದನು. ಅವರೆಲ್ಲಾರು ಕೂಡಿ ಮೋತಕಪಲ್ಲಿ, ಯಾನಾಗುಂದಿ ಗ್ರಾಮಗಳಿಗೆ ಹೋಗಿ ಅಲ್ಲಿಯ ದೇವರ ದರ್ಶನ ಮಾಡಿಕೊಂಡು ಮರಳಿ ಗುರುಮಠಕಲ್ ಮಾರ್ಗವಾಗಿ ಖಾನಾಪೂರಕ್ಕೆ ಹೋಗುತ್ತಿದ್ದಾಗ ಸಿಂದಗಿ-ಕೊಡಂಗಲ್ ಮುಖ್ಯ ರಸ್ತೆಯ ಮೇಲೆ ಬೋರಬಂಡಾ ಗ್ರಾಮ ದಾಟಿದ ನಂತರ ಟಂ ಟಂ ಚಾಲಕ ಯಲ್ಲಪ್ಪ ಈತನು ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ತಿರುವಿನಲ್ಲಿ ನಿಯಂತ್ರಿಸಲು ಸಾಧ್ಯವಾಗದೇ ಕಟ್ ಹೊಡೆದಿದ್ದರ ಪರಿಣಾಮವಾಗಿ ಸಮಯ ಮಧ್ಯಾಹ್ನ 12:30 ಗಂಟೆಗೆ ಅಪಘಾತ ಸಂಭವಿಸಿದ್ದು ಸದರಿ ಅಪಘಾತದಲ್ಲಿ ಸಾಬಮ್ಮ ಮೃತಪಟ್ಟಿದ್ದು ಉಳಿದ 14 ಜನರಿಗೆ ಭಾರಿ ಮತ್ತು ಸಾಧಾ ಸ್ವರೂಪದ ರಕ್ತಗಾಯಗಳು ಹಾಗೂ ಗುಪ್ತಗಾಯಗಳಾಗಿರುತ್ತವೆ ಅಂತಾ ಫಿರ್ಯಾದಿ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಅದೆ.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 79/2020 ಕಲಂ 323,498(ಎ),354,504,506 ಸಂಗಡ 149 ಐಪಿಸಿ ಮತ್ತು 3 & 4 ಡಿ.ಪಿ.ಯಾಕ್ಟ:- ಇಂದು ದಿನಾಂಕ: 10/03/2020 ರಂದು 6.00 ಪಿ.ಎಂ.ಕ್ಕೆ ಪ್ರಕರಣದ ಫಿಯರ್ಾದಿ ಶ್ರೀಮತಿ ನಿಶರತ ಪಾಶಾ ಗಂ/ ಮಹ್ಮದ ಶಖೀಲ್ ಸಗರ ಸಾ|| ಕೋಲ್ಡ್ ಸ್ಟೋರೆಜ್ ಹಿಂದೆ, ರಾಕಮಗೇರಾ ತಾ||ಶಹಾಪುರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದರ ಸಾರಾಂಶವೇನೆಂದರೆ,  ದಿನಾಂಕ: 30/12/2013 ರಂದು ನನ್ನ ತವರು ಮನೆಯಲ್ಲಿ ಮಹ್ಮದ ಶಖೀಲ್ ತಂ/ ಶೇಖದಾವುದ ಸಗರ ಉ||ಸಿ.ಆರ್.ಪಿ.ಎಫ್ ಸಿಪಾಯಿ, ಸಾ|| ಕೊಲ್ಡ್ ಸ್ಟೋರೇಜ್ ಹಿಂದೆ, ರಾಕಮಗೇರಾ, ಶಹಾಪುರ ತಾ|| ಸಹಾಪುರ ರವರೊಂದಿಗೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿರುತ್ತದೆ. ಆ ಸಮಯದಲ್ಲಿ ನನ್ನ ತಂದೆ ಅಲ್ಲಾವುದ್ದಿನ ತಂ/ ಖಾಸಿಂಸಾಬ ಚುಡಿಯಾ, ತಾಯಿ ಬಿಪಾಷಾಬೇಗಂ ಗಂ/ ಅಲ್ಲಾವುದ್ದಿನ್ ಚುಡಿಯಾ, ಅಣ್ಣಂದಿರಾದ ಶಹಬಾಜಮಿಯಾ ತಂ/ ಅಲ್ಲಾವುದ್ದಿನ್ ಚುಡಿಯಾ, ಶಮರ್ೊದ್ದಿನ್ ತಂ/ ಅಲ್ಲಾವುದ್ದಿನ ಚುಡಿಯಾ ತಮ್ಮನಾದ ರಮೀಜರಾಜ ತಂ/ ಅಲ್ಲಾವುದ್ದಿನ್ ಮತ್ತು ಓಣಿಯ ಇಸ್ತಿಯಾಕ್ ಹುಸೇನ್ ತಂ/ ಮುಸ್ತಾಕ ಹುಸೇನ್ ಸವಾರ, ಮಹಿಮೂದ ತಂ/ ಮದರಸಾಬ ಹಾಗೂ ನಮ್ಮ ಮಾವ ಮೊಹಿನುದ್ದಿನ್ ತಂ/ ಮಹ್ಮದ ಷರೀಫಸಾಬ ಅರಿಕೇರಿ ಇವರೆಲ್ಲರ ಇವರ ಸಮಕ್ಷಮದಲ್ಲಿ ನಿಶ್ಮಿತಾರ್ಥದ ಮಾತು ಕತೆಯಾಗಿದ್ದು, ಮದುವೆ ಸಮಯದಲ್ಲಿ ವರನಿಗೆ ವರೋಪಚಾರವಾಗಿ 10 ತೊಲೆ ಬಂಗಾರ ಮತ್ತು 2 ಲಕ್ಷ ರೂಪಾಯಿ ಹಾಗೂ ಇತರೆ ಗೃಹೋಪಯೋಗಿ ಸಾಮಗ್ರಿಗಳನ್ನು ಕೊಡಬೇಕೆಂದು ಮಾತು ಕತೆ ಆಗಿತ್ತು. ನಂತರ ದಿನಾಂಕ: 25/04/2014 ರಂದು ನನ್ನ ತವರು ಮನೆಯಲ್ಲಿ ನಡೆದ ಮದುವೆ ಸಮಯದಲ್ಲಿ ಮಾತುಕತೆ ಆಡಿದ ಪ್ರಕಾರ ವರ ಮಹ್ಮದ ಶಖೀಲ್ ತಂ/ ಶೇಖದಾವುದ ಸಗರ ಇವರಿಗೆ 8 ತೊಲೆ ಬಂಗಾರ ಹಾಗೂ 1 ಲಕ್ಷ ಹಣ ಇತರೆ ಗೃಹೋಪಯೋಗಿ ಸಾಮಗ್ರಿಗಳನ್ನು ನಮ್ಮ ತಂದೆ-ತಾಯಿಯವರು ಕೊಟ್ಟು ಲಗ್ನ ಮಾಡಿ ಇನ್ನುಳಿದ ಹಣ ಮತ್ತು ಬಂಗಾರ ನಂತರ ಕೊಡುವುದಾಗಿ ಹೇಳಿದ್ದರು. ಸದರಿ ಮದುವೆಗೆ ನಿಶ್ಚಿತಾರ್ಥ ಕಾಲಕ್ಕೆ ಹಾಜರಿದ್ದ ಹಿರಿಯರು ಹಾಗೂ ಇತರೆ ಬಂದು ಬಳಗದವರು ನಮ್ಮ ತಂದೆ ತಾಯಿಯವರು, ವರನ ತಾಯಿ ಹಾಗೂ ವರನ ಬಂದು ಬಳಗದವರು ಹಾಜರಿದ್ದರು. ಲಗ್ನವಾಗಿ 5-6 ತಿಂಗಳ ವರೆಗೆ ನಾನು ಮತ್ತು ನನ್ನ ಗಂಡ ಇಬ್ಬರು ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದೆವು, ನಂತರ ನನ್ನ ಗಂಡನು ತನ್ನ ಅತ್ತೆ, ಮಾವ ಮತ್ತು ನಾದಿನಿ ಗೋರಿಬಿ ಹಾಗೂ ಮೈದುನ ಖಲೀಲ್ ಅಹ್ಮದ ಇವರ ಮಾತು ಕೇಳಿ ಇನ್ನೂ ಕೊಡಬೇಕಾದ 2 ತೊಲೆ ಬಂಗಾರ, 1 ಲಕ್ಷ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ನನಗೆ ಕಿರುಕುಳ ಕೊಡಲಾರಂಬಿಸಿದರು, ನಾನು ನನ್ನ ಗಂಡ ಮತ್ತು ಆತನ ಮನೆಯವರು ಕೊಡುತ್ತಿದ್ದ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನನ್ನ ತವರು ಮನೆಯವರಿಗೆ ತಿಳಿಸದೆ ತಾಳಿಕೊಂಡಿದ್ದೆನು. ಇಂದಲ್ಲ ನಾಳೆ ಅವರು ಸುಧಾರಿಸಬಹುದು ಎಂದು ಯಾವುದೇ ದೂರನ್ನು ನೀಡಿರಲಿಲ್ಲ. ಆಗಾಗ ಹೀಗೆ ನನ್ನ ಗಂಡ ಹಾಗೂ ಅತ್ತೆ, ಮಾವನವರ ಮಾನಸಿಕ ಮತ್ತು ದೈಹಿಕ ಕಿರುಕುಳ ಮುಂದುವರೆದಿತ್ತು, ನಾದಿನಿ ಗೋರಿಬಿ ಗಂ/ ಗುಡುಸಾ ಸಾ|| ಪುನಾ ಇವಳು ಆಗಾಗ ತವರು ಮನಗೆ ಬಂದಿದ್ದಾಗ ಅವಳೂ ಕೂಡ ಕಿರುಕುಳ ನಿಡುತ್ತಿದ್ದಳು ಹಾಗೂ ನಿನಗೆ ಇನ್ನೂ ಮಕ್ಕಳಾಗಿಲ್ಲ ನೀನು ವರದಕ್ಷಿಣೆ ತಂದು ಕೊಡದಿದ್ದರೆ ನನ್ನ ತಮ್ಮನಿಗೆ ಇನ್ನೊಂದು ಮದುವೆ ಮಾಡುತ್ತೇನೆ ಅಂತಾ ಹೆದರಿಸುತ್ತಿದ್ದಳು. ನಂತರ ದಿನಾಂಕ: 19/10/2017 ರಂದು ರಾತ್ರಿ 8.30 ಪಿ.ಎಂ. ಸುಮಾರಿಗೆ ನನ್ನ ಗಂಡ ಮಹ್ಮದ ಶಖೀಲ್ ಸಗರ, ಮೈದುನ ಖಲೀಲ ಅಹ್ಮದ್ ಸಗರ ಅತ್ತೆ ಇಮಾಮಬಿ ಸಗರ ಹಾಗೂ ಶೇಖ ದಾವುದ್ ಸಗರ, ಇವರೆಲ್ಲರೂ ಏ ಬೋಸಡಿ 3 ತಿಂಗಳ ಸಂಬಳ ನಮಗೆ ಏಕೆ ಕೊಟ್ಟಿಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸಿದಾಗ ನಾನು ಆಸ್ಪತ್ರೆ ಬಿಲ್ಲು ಕಟ್ಟಿರುತ್ತೇನೆ ಇನ್ನುಳಿದ ಹಣ ನಾಳೆ ಬ್ಯಾಂಕಿಗೆ ಹೋಗಿ ಡ್ರಾ ಮಾಡಿಕೊಂಡು ತಂದು ಕೊಡುತ್ತೇನೆ ಅಂತಾ ಹೇಳಿದರೂ ಕೇಳದೆ ನನ್ನ ಗಂಡನು ನನಗೆ ಹಿಡಿದು ಎಳೆದಾಡಿ ಮನ ಬಂದಂತೆ ಹೊಡೆದಿದ್ದು, ನನ್ನ ಅತ್ತೆ, ಮಾವ ಹಾಗೂ ಮೈಧುನ ಇವರು ನನಗೆ ಕಪಾಳಕ್ಕೆ ಬೆನ್ನಿಗೆ ಗುದ್ದಿ ರೂಮಿನಲ್ಲಿ ಹಾಕಿದ್ದರು. ದಿನಾಲೂ ಇವರ ಕಿರುಕುಳ ತಾಳದೆ ದಿನಾಂಕ: 23/10/2017 ರಂದು ನನ್ನ ಗಂಡ ಮತ್ತು ಅತ್ತೆ, ಮಾವ ಹಾಗೂ ಮೈಧುನ ಕೊಡುವ ಕಿರುಕುಳದ ಬಗ್ಗೆ ನನ್ನ ಅಣ್ಣ ಶಮರ್ೊದ್ದಿನ್ ಇವರಿಗೆ ಫೋನ್ ಮಾಡಿ ತಿಳಿಸಿದಾಗ ಅವರು ನಾನು ನಾಳೆ ನಿಮ್ಮ ಮನೆಗೆ ಬರುತ್ತೇನೆ ಅಂತಾ ಹೇಳಿದ್ದರು. ದಿನಾಂಕ:24/10/2017 ರಂದು ಬೆಳಿಗ್ಗೆ 8.00 ಎ.ಎಂ. ಸುಮಾರಿಗೆ ಪುನಃ ಎಲ್ಲರೂ ಕೂಡಿ ನೀನು ಇನ್ನೂ ವರದಕ್ಷಿಣೆ ತಂದಿಲ್ಲ ನಿನ್ನನ್ನು ಖಲಾಸ್ ಮಾಡುತ್ತೇವೆ ಅಂತಾ ಹೊಡೆಯಲು ಬಂದಾಗ ನಾನು ಮನೆಯಿಂದ ಹೊರಗೆ ಓಡಿ ಬರುವ ಸಮಯಕ್ಕೆ ಸರಿಯಾಗಿ ನನ್ನ ಅಣ್ಣ ಶಮರ್ೋದ್ದಿನ್ ಇವರು ಬಂದು ನನ್ನ ಗಂಡ ಮತ್ತು ಇತರರಿಗೆ ತಿಳುವಳಿಕೆ ಹೇಳಿ ನನಗೆ ತನ್ನೊಂದಿಗೆ ಸುರಪುರಕ್ಕೆ ಕರೆದುಕೊಂಡು ಹೋಗಿದ್ದರು. 4-5 ದಿವಸಗಳ ನಂತರ ನಮ್ಮ ಸಂಬಂಧಿಗಳಾದ ಇಸ್ತಿಯಾಕ ಹುಸೇನ್ ತಂ/ ಮುಸ್ತಾಕ ಸವಾರ, ಮಹಿಮೂದ ತಂ/ ಮದರಾಸಬ, ಮೊಹಿನುದ್ದಿನ ತಂ/ ಮಹ್ಮದ ಷರೀಫಸಾಬ ಅರಿಕೇರಿ, ನನ್ನ ಅಣ್ಣ ಶಮರ್ೊದ್ದಿನ್ ಎಲ್ಲರೂ ಶಹಾಪುರದಲ್ಲಿ ನನ್ನ ಗಂಡ ಮತ್ತು ಸಂಬಂದಿಕರೊಂದಿಗೆ ನ್ಯಾಯಾ ಪಂಚಾಯತಿ ಮಾಡಿದಾಗ ನನ್ನ ಗಂಡನು ನಾನು ಮತ್ತು ನನ್ನ ಹೆಂಡತಿಯೊಂದಿಗೆ ಸಪರೇಟ್ ಆಗಿ ಮನೆ ಮಾಡಿಕೊಂಡು ಇರುತ್ತೇನೆ ಅಂತಾ ಒಪ್ಪಿಕೊಂಡಿದ್ದರಿಂದ ನನಗೆ ನನ್ನ ಗಂಡನ ಮನೆಯಲ್ಲಿ ಬಿಟ್ಟು ಬಂದಿದ್ದರು. ಒಂದು ವಾರದ ನಂತರ ನನ್ನ ರಜೆ ಮುಕ್ತಾಯವಾಗಿವೆ ನಾನು ಕೆಲಸಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದ ನನ್ನ ಗಂಡ ಬಹಳ ದಿವಸಗಳಾದರೂ ಬರದೆ ಇದ್ದಾಗ ನಾನು ಮಾನ್ಯ ಡಿ.ಜಿ ಸಿ.ಆರ್.ಪಿ.ಎಫ್ ಹೊಸ ದೆಹಲಿ ಹಾಗೂ ಇತರರಿಗೆ ನನ್ನ ಗಂಡನ ಬಗ್ಗೆ ಪತ್ರ ವ್ಯವಹಾರ ಮಾಡಿದ್ದೆನು ಮತ್ತು ನನ್ನ ಅತ್ತೆ ಮಾವ, ಮೈದುನರ ಕಿರುಕುಳ ಹೆಚ್ಚಾಗಿದ್ದರಿಂದ 3 ತಿಂಗಳ ಹಿಂದೆ ನಾನು ನನ್ನ ತವರು ಮನೆಗೆ ಹೋಗಿದ್ದೆನು. ಅಜರ್ಿ ವಿಚಾರಣೆ ಕುರಿತು ನನ್ನ ಗಂಡನು ಶಹಾಪುರಕ್ಕೆ ಬಂದಿದ್ದಾಗ ನಿನ್ನೆ ದಿನಾಂಕ: 09/03/2020 ರಂದು ಸಾಯಂಕಾಲ 8.00 ಪಿ.ಎಂ. ಸುಕಾರಿಗೆ ನನ್ನ ಅಣ್ಣ ಶಮರ್ೋದ್ದಿನ ಚುಡಿಯಾ, ತಮ್ಮ ರಮೀಜ್ರಾಜಾ ಚುಡಿಯ ನಮ್ಮ ಹಿರಿಯರಾದ ಶಬ್ಬೀರ ಪಟೇಲ್ ತಂ/ ಸಾಹೇಬ ಪಟೇಲ್, ಮಹ್ಮದ್ದಾವೂದ್ ತಂ/ ಖಾಜಾ ಮೊಯಿನುದ್ದಿನ ಖುರೇಷಿ, ಮೊಹಿನುದ್ದಿನ್ ತಂ/ ಮಹ್ಮದ ಷರಫ್ಸಾಬ ಅರಿಕೇರಿ ಎಲ್ಲರೊಂದಿಗೆ ನಾನು ನನ್ನ ಗಂಡನ ಮನೆಗೆ ಹೋಗಿ ನ್ಯಾಯಾ ಪಂಚಾಯತಿ ಮಾಡಲು ಹೋಗಿದ್ದಾಗ ನನ್ನ ಗಂಡ ಶಖೀಲ್ ಪಾಶಾ ಈತನು ನನ್ನ ಮೇಲೆ ಅಜರ್ಿ ಹಾಕ್ತಿಯೇನು ಬೋಸಡಿ ಅಂತಾ ಅವಾಚ್ಯವಾಗಿ ಬೈದು ನನ್ನ ಕಪಾಳಕ್ಕೆ ಹೊಡೆದನು ಆಗ ಅಲ್ಲಿಯೇ ಇದ್ದ ನನ್ನ ಸಂಬಂದಿಗಳು ಜಗಳ ಬಿಡಿಸಿದ್ದು, ಇನ್ನೊಮ್ಮೆ ನಮ್ಮ ಮನೆಗೆ ಬಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿರುತ್ತಾನೆ. ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ ಕಾರಣ ನನಗೆ ಮಾನಸಿಕ, ದೈಹಿಕವಾಗಿ ಕಿರುಕುಳ ಕೊಟ್ಟ ನಿಮ್ಮ ತವರು ಮನೆಯಿಂದ ವರದಕ್ಷಿಣೆ  ತೆಗದುಕೊಂಡು ಬಾ ಅಂತ ವರದಕ್ಷಿಣೆ ಕಿರುಕುಳ ಕೊಟ್ಟು ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ಜೀವದ ಭಯ ಹಾಕಿದ ಕಿರುಕುಳ ಕೊಟ್ಟ ನನ್ನ ಗಂಡ ಮಹ್ಮದ ಶಖೀಲ್ ಸಗರ, ಮೈದುನ ಖಲೀಲ ಅಹ್ಮದ್ ಸಗರ ಅತ್ತೆ ಇಮಾಮಬಿ ಸಗರ ಮಾವ ಶೇಖ ದಾವುದ್ ಸಗರ ಹಾಗೂ ನಾದಿನಿ ಗೋರಿಬಿ ಗಂ/ ಗುಡುಸಾ ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ-79/2020 ಕಲಂ 323, 498(ಎ), 354, 504, 506 ಸಂಗಡ 149 ಐಪಿಸಿ ಮತ್ತು 3 & 4 ಡಿ.ಪಿ.ಯಾಕ್ಟ ನೇದ್ದರಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡೆನು. 

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 33/2020 ಕಲಂ 498(ಎ), 323, 326, 504, 506 ಸಂ 34 ಐಪಿಸಿ:- ಸುಮಾರು 8 ವರ್ಷಗಳ ಹಿಂದೆ ಫಿರ್ಯಾಧಿಗೆ ಆರೋಪಿತನಾದ ಭೀಮರಾಯ ತಂದೆ ದೇವಿಂದ್ರಪ್ಪ ಶಹಾಪೂರದೊರ ಸಾಃ ಹೊನಗೇರಾ ಇವನ ಜೋತೆಗೆ ಮದುವೆಯಾಗಿದ್ದು, ಸುಮಾರು 2 ವರ್ಷಗಳಿಂದ ಆರೋಪಿತನು ಫಿರ್ಯಾಧಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕೂಳ ಕೊಡುತ್ತಾ ಬಂದಿದ್ದು, ದಿನಾಂಕ 10-03-2020 ರಂದು ಬೆಳಿಗ್ಗೆ 9-00 ಗಂಟೆಗೆ ಫಿರ್ಯಾದಿದಾರಳು ತನ್ನ ಮನೆಯಲ್ಲಿ ಇರುವಾಗ ಆರೋಪಿತನು ಫಿರ್ಯಾಧಿ ಜೋತೆಗೆ ಜಗಳ ತೆಗೆದು ಅವಾಚ್ಯವಾಗಿ ಬೈದು, ಕೈಯಿಂದ, ಕಲ್ಲಿನಿಂದ ಹೊಡೆಬಡೆ ಮಾಡಿ ಭಾರಿ ಗುಪ್ತಗಾಯ ಮಾಡಿ ಕೈಮುರಿದು, ಜೀವದ ಭಯ ಹಾಕಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕೂಳ ಕೊಟ್ಟ ಬಗ್ಗೆ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.

ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 12/2020  ಕಲಂ 279,  283, 338 ಐಪಿಸಿ:- ಇಂದು ದಿನಾಂಕ 10/03/2020 ರಂದು ರಂದು ಮದ್ಯರಾತ್ರಿ 2-30 ಎ.ಎಂ.ದ ಸುಮಾರಿಗೆ ಈ ಕೇಸಿನ ಗಾಯಾಳು ಹಾಗು ಎ-2 ಆರೋಪಿತನಾದ ಕರಣ್ ಈತನು ತನ್ನ ಮೋಟಾರು ಸೈಕಲ್ ನಂಬರ ಕೆಎ-01, ಎಚ್.ಯು-5369  ನೇದ್ದನ್ನು ಅಲ್ಲಿಪುರ  ಕಡೆಯಿಂದ ವೆಂಕಟೇಶನಗರ ತಾಂಡ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಅದೇ ಸಮಯಕ್ಕೆ  ಮುಖ್ಯ ರಸ್ತೆ ಮೇಲೆ ಮಾರ್ಗ ಮದ್ಯೆ  ಅರಿಕೇರಾ(ಬಿ) ಕ್ರಾಸ್ ಹತ್ತಿರ  ಬೂದಿ ಟ್ಯಾಂಕರ್ ಲಾರಿ ನಂಬರ ಕೆಎ-01, ಎಬಿ-5211 ನೇದ್ದರ ಚಾಲಕನು ತನ್ನ ಬೂದಿ ಲಾರಿಯನ್ನು ವಾಡಿ ಕಡೆಗೆ ಮುಖ ಮಾಡಿ ಮುಖ್ಯ ರಸ್ತೆಯ ಮೇಲೆ ಯಾವುದೇ ಇಂಡಿಕೇಟರ್, ಪಾಕರ್ಿಂಗ್ ಲೈಟ್ ಹಾಕದೇ ಮಾನವ ಜೀವಕ್ಕೆ ಅಪಾಯಕಾರಿಯಾಗುವಂತೆ ನಿಲ್ಲಿಸಿದ್ದು ಅದಕ್ಕೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು  ಸದರಿ ಘಟನೆಯಲ್ಲಿ ಕರಣ್ ಈತನಿಗೆ ಎಡಗಾಲಿನ ಮೊಣಕಾಲಿನ ಕೆಳಗೆ ಭಾರೀ ರಕ್ತಗಾಯವಾಗಿದ್ದು ಮತ್ತು  ಎಡಭುಜಕ್ಕೆ ಭಾರೀ ಒಳಪೆಟ್ಟಾಗಿರುತ್ತದೆ. ಈ ಘಟನೆ ಬಗ್ಗೆ ಪಿಯರ್ಾದಿ ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.12/2020 ಕಲಂ 279, 283, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.  

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 29/2020 ಕಲಂ 287,337, 338 ಐಪಿಸಿ :- ಇಂದು ದಿನಾಂಕ-10-03-2020 ರಂದು ಮದ್ಯಾಹ್ನ 02-00 ಗಂಟೆಗೆ ರೀಮ್ಸ ಆಸ್ಪತ್ರೆ ರಾಯಚೂರದಿಂದ ಎಮ್.ಎಲ್.ಸಿ ಇದೆ ಅಂತಾ ಪೊನ್ ಮೂಲಕ ತಿಳಿಸಿದ ಮೇರೆಗೆ ನಾನು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಗಾಯಾಳುಗಳನ್ನು ವಿಚಾರಿಸಿ ಅಲ್ಲಿ ಗಾಯಾಳುವಿನ ಅಣ್ಣನಾದ ಇಂಮ್ತಿಯಾಜ್ ತಂದೆ ಖಾಜಾಹುಸೇನ ಕೋನಂಪಲ್ಲಿ ವ|| 31 ವರ್ಷ ಜಾ|| ಮುಸ್ಲಿಂ ಉ|| ಎಲೆಕ್ಟ್ರೇಶನ್ ಕೆಲಸ ಸಾ|| ಕಡೆಚೂರ ತಾ|| ಜಿ|| ಯಾದಗಿರಿ ಇತನ ಹೇಳಿಕೆ ನೀಡಿದ್ದೆನೆಂದರೆ ದಿನಾಂಕ: 10-03-2020 ರಂದು ಬೆಳಿಗ್ಗೆ ನಮ್ಮ ತಮ್ಮ ಆರೀಪ್ ಮತ್ತು ಗಾಯಳುಗಳು ಕಡೆಚೂರ ಕೆಐಎಡಿಬಿಯಲ್ಲಿರುವ ಪ್ಯಾರಲಿಸಸ್ ಕಂಪನಿಯಲ್ಲಿ ಕೆಲಸಕ್ಕೆ ಹೋಗಿದ್ದು ಕಂಪನಿಯಲ್ಲಿ ಕೆಲಸ ಮಾಡುವಾಗ ಮದ್ಯಾಹ್ನ 12-00 ಗಂಟೆಗೆ ಮಶಿನ್ ಬ್ಲಾಸ್ಟ್ ಆಗಿ ನಮಗೆ ಗಾಯಗಳು ಆಗಿವೆ ಅಂತಾ ತಿಳಿಸಿದ್ದರಿಂದ ನಾನು ಮತ್ತು ನಮ್ಮೂರಿನ ಇತರರು ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮೂರಿನವರಿಗೆ ಮತ್ತು ಅಲ್ಲಿ ಕೆಲಸ ಮಾಡುವ ಇಬ್ಬರಿಗೆ ಕಂಪನಿಯಲ್ಲಿ ಮಶಿನ್ ಬ್ಲಾಸ್ಟ್ ಆಗಿ ಭಾರಿ ಮತ್ತು ಸಾದಾ ಸ್ವರೂಪದ ಗಾಯಗಳು ಆಗಿದ್ದವು  ಆಗ ನಾವು 108 ಅಂಬುಲೆನ್ಸದಲ್ಲಿ  ರಾಯಚೂರ ರೀಮ್ಸ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ ಕಂಪನಿಯಲ್ಲಿ ಮಶಿನ್ ಯಂತ್ರದಿಂದ ಜನರಿಗೆ ಯಾವುದೆ ಘಟನೆ ನಡೆಯದಂತೆ ಸುವ್ಯವಸ್ಥೆ ಮಾಡದೆ ನಿರ್ಲಕ್ಷತನ ಮಾಡದಿರುವದರಿಂದ ಈ ಘಟನೆ ಜರುಗಿರುತ್ತದೆ ಕಾರಣ ಕಂಪನಿಯ ಮಾಲಿಕರಾದ ಭರತಗೌಡ ತಂದೆ ಪರಮಣಗೌಡ ಮಾಲಿಪಾಲಿಟ್ ಸಾ|| ಅಬ್ಬೆತೂಮಕೂರ, ಸೀರಜ್ಪಟೆಲ್ ತಂದೆ ಎಸ್.ಬಿ ಪಟೆಲ್,ಸಾ|| ರಾಯಚೂರ  ಶಿವಕುಮಾರ ಸಾ|| ರಾಯಚೂರ ಮತ್ತು ಈ ಕಂಪನಿಯನ್ನು ಲೀಜಿಗೆ ಪಡೆದ ರಾಜಶೇಖರ ತಂದೆ ಗಂಗಯ್ಯ ವ|| 30 ವರ್ಷ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಂತ ಪಿಯರ್ಾಧಿ ನೀಡಿದ ಸಾರಂಶದ ಮಏಲಿಂದ ಠಾಣಾ ಗುನ್ನೆ ನಂ. 29/2020 ಕಲಂ.287,337,338 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
                                   
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 40/2020 ಕಲಂ: 32, 34 ಕೆಇ ಆಕ್ಟ್;- ಇಂದು ದಿನಾಂಕ 10.03.2020 ರಂದು ರಾತ್ರಿ 00.30 ಎ.ಎಂಕ್ಕೆ ಆರೋಪಿತರು ಅಕ್ರಮವಾಗಿ ಸರಕಾರದ ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲಿಗಳನ್ನು ಚೆಪೆಟ್ಲಾ ಗ್ರಾಮದ ಒಂದು ಹೋಟಲ ಹತ್ತಿರ ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದಾಗ ಪಿ.ಎಸ್. ಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ತನ್ನ ವಶದಲ್ಲಿದ್ದ ವಿವಿಧ ನಮೂನೆಯ ಒಟ್ಟು 4812/-ರೂ ರೂ ಬೆಲೆಯ ಮುದ್ದೆ ಮಾಲನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಪಿ.ಎಸ್.ಐ ರವರು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು ಕೈಕೊಂಡು ಮರಳಿ ಠಾಣೆಗೆ ಬಂದು ಆರೋಪಿತರ ವಿರುದ್ಧ ಕಾನೂನು ಕ್ರಮಕ್ಕಾಗಿ ವರದಿ ನೀಡಿದ್ದು ಆ ಬಗ್ಗೆ ಠಾಣಾ ಗುನ್ನೆ ನಂ: 40/2020 ಕಲಂ: 32, 34 ಕೆಇ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.


ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:-    21/2020 ಕಲಂ, 32, 34 ಕೆ.ಇ ಆ್ಯಕ್ಟ್ :- ಇಂದು ದಿನಾಂಕ: 10/30/2020 ರಂದು 07.15 ಪಿಎಮ್ ಕ್ಕೆ ಶ್ರೀ ಸೋಮಲಿಂಗ ಒಡೆಯರ ಪಿಎಸ್.ಐ ಗೋಗಿ ಪೊಲೀಸ ಠಾಣೆ ರವರು ಮಾನ್ಯ ಸಿಪಿಐ ಸಾಹೇಬರು ಶಹಾಪೂರ ರವರ ಮಾರ್ಗದರ್ಶನದಲ್ಲಿ ಅಬಕಾರಿ ದಾಳಿಯಿಂದ ಮರಳಿ ಬಂದು ಮುದ್ದೇಮಾಲು ಮತ್ತು ಜಪ್ತಿಪಂಚನಾಮೆ ತಂದು ಹಾಜರ್ ಪಡಿಸಿ ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದು, ಸದರಿ ಜಪ್ತಿ ಪಂಚನಾಮೆ ಸಾರಾಂಶವೆನೆಂದರೆ, ಗೋಗಿ ರೇವುನಾಯ್ಕ ತಾಂಡಾದ ಹತ್ತಿರ ರೋಡಿನ ಕ್ರಾಸ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ 5-40 ಪಿಎಂ ಕ್ಕೆ ದಾಳಿ ಮಾಡಬೇಕೆನ್ನುವಷ್ಟರಲ್ಲಿ ಆರೋಪಿತನು ಮಧ್ಯವನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದು, ಮಧ್ಯವನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡಿದ್ದು, ಜಪ್ತಿಪಡಿಕೊಂಡ ಮುದ್ದೇಮಾಲು, ಜಪ್ತಿ ಪಂಚನಾಮೆ ಜೋತೆಯಲ್ಲಿ ಠಾಣೆಗೆ ಬಂದು ಒಂದು ವರದಿಯನ್ನು ಕೊಟ್ಟು ಮುಂದಿನ ಕ್ರಮ ಕುರಿತು ಸೂಚಿಸಿದ ಮೇರೆಗೆ ಠಾಣೆ ಗುನ್ನೆ ನಂ: 21/2020 ಕಲಂ, 32, 34 ಕೆ.ಇ ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ 10/2020 ಕಲಂ 174 ಸಿ.ಆರ್.ಪಿ.ಸಿ:- ಇಂದು ದಿನಾಂಕ 10/03/2020 ರಂದು  18-45 ಪಿ.,ಎಂಕ್ಕೆ ಪಿಯರ್ಾದಿ ಶ್ರೀ ಮತಿ ಸುಮಿತ್ರಾ ಗಂಡ ಮುತ್ತಪ್ಪ ದಾಸರ ವ|| 38 ವರ್ಷ ಜಾ|| ಹೋಲಿ ದಾಸರ  ಉ|| ಕೂಲಿ ಸಾ|| ಅಮರಗೋಳ ತಾ|| ಮುದ್ದೆಬಿಹಳ ಕೊಡುವ ದೂರು ಅಜರ್ಿ ಸಾರಂಶವೆನಂದರೆ ಏನಂದರೆ. ನನಗೆ ಸುಮಾರು ವರ್ಷಗಳಿಂದೆ ಮುತ್ತಪ್ಪ ದಾಸರ ಸಾ|| ಅಮರಗೋಳ ಇವರ ಜೋತೆಯಲ್ಲಿ ಮದುವೇಯಾಗಿದ್ದು ನಮಗೆ ದಿವ್ಯಾ 3 ವರ್ಷದ ಒಂದು ಹೆಣ್ಣು ಮಗುವಿದ್ದು ನಾವು ಕೂಲಿ ಕೆಲಸಕ್ಕೆ ಹೋಗುವದರಿಂದ ಮಗಳನ್ನು ನೋಡಿಕೊಳ್ಳಲು ಯಾರ ಇಲ್ಲದ ಕಾರಣ ಮತ್ತು ನಮ್ಮ ತಮ್ಮನ ಹೆಂಡತಿ ಅಂಗನವಾಡಿ ಟೀಚರ ಇದ್ದು, ಹೀಗೆ ಮೂರು-ನಾಲ್ಕು ತಿಂಗಳಿಂದೆ ನನ್ನ ತವರು ಮನೆ ಯಕ್ಷಂತಿ ಕಳಿಸಿದ್ದು ಇರುತ್ತದೆ,  
               ಹೀಗಿದ್ದು ದಿನಾಂಕ 10/03/2020 ರಂದು ಕೂಲಿ ಕೆಲಸಕೆಂದು ಹೋಗಿದ್ದಾಗ ಅಂದಾಜು ಸಮಯ 11:20 ಎ.ಎಂ ಸುಮಾರು ನನ್ನ ತಮ್ಮ ಯಂಕಪ್ಪ ತಂದೆ ಶೀವಪ್ಪ ಇತನು ಪೋನ ಮಾಡಿ ಇಂದು ಮುಂಜಾನೆ 10 ಎ.ಎಂ ಸುಮಾರಿಗೆ ಮನೆಯಿಂದ ಅಂಗನವಾಡಿಗೆ ಹೋಗುತ್ತಿರುವಾಗ ಯಾವೂದೊ ಒಂದು ಹಾವೂ ಕಚ್ಚಿದ್ದು ಉಪಚಾರ ಕುರಿತು ಆಸ್ಪತ್ರೆ ಕರೆದುಕೊಂಡು ಹೋಗುತ್ತಿದ್ದೇವೆ ನೀವು ಕೂಡಲೇ ಬನ್ನಿ ಅಂತಾ ತಿಳಿಸಿದ್ದ ಮೇರೆಗೆ ನಾನು ಮತ್ತು ನನ್ನ ಗಂಡ ಮುತ್ಪಪ್ಪ ಅಲ್ಲಿಂದ ಯಕ್ಷಂತಿ ಗ್ರಾಮಕ್ಕೆ ಬಂದು ನಮ್ಮ ತಮ್ಮನ್ನು ವಿಚಾರಿಸಿದೇವು, ದಿನಾಂಕ 10/03/2020 ರಂದು ನಾನು ಒಕ್ಕಲುತನ ಕೆಲಸ ಕುರಿತು ಹೋಗಲು ಹೋರಗಡೆ ಹೋಗಿದ್ದು, ನನ್ನ ಹೆಂಡತಿ ಸರಸ್ವತಿ ಇವಳು ಅಂಗನವಾಡಿ ಕರ್ತವ್ಯ ಕುರಿತು ನಮ್ಮ ಮನೆಯಿಂದ 50-60 ಪೀಟ ದೂರದಲ್ಲಿ ಇದ್ದ ಅಂಗನವಾಡಿ ಕೆಂದ್ರಕ್ಕೆ ಹೋಗಿದ್ದು, ಅಂದಾಜು ಸಮಯ 10 ಎ.ಎಂಕ್ಕೆ ದಿವ್ಯಾ ಇವಳುನ್ನು ನನ್ನ ಅಣ್ಣನ ಹೆಂಡತಿ ಜಳಕಮಾಡಿಸಿ ಅಂಗನವಾಡಿಗೆ ಕಳಿಸಿಕೊಟ್ಟಿದ್ದು ಇರುತ್ತದೆ, 
      ಯಕ್ಷಂತಿ ಗ್ರಾಮದ ಹೋಟೆಲ ಹತ್ತಿರ ನಿಂತ್ತಿದ್ದಾಗ 11:00 ಎ.ಎಂಕ್ಕೆ ನನ್ನ ಹೆಂಡತಿ ಪೋನ ಮಾಡಿ ದಿವ್ಯಾ ಇವಳಿಗೆ ಹಾವೂ ಕಚ್ಚಿದೆ ಬನ್ನಿ ಅಂತಾ ತಿಳಿಸಿದ್ದು ನಾನು ಕೂಡಲೇ ಹೋಗಿ ನೋಡಿ, ನನ್ನ ಹೆಂಡತಿ ಸರಸ್ವತಿಗೆ ವಿಚಾರಿಸಿದೆನು, ಮನೆಯಿಂದ ಅಳುತ್ತಾ ಅಂಗನವಾಡಿಗೆ ಬಂದಿದ್ದು ಎಕೆ ಅಳುತ್ತಾ ಇದ್ದಾಯ ಅಂತಾ ಕೆಳಿದರು ಸರಿಯಾಗಿ ಎನು ಹೇಳಿರುವದಿಲ್ಲಾ 11:00 ಎ.ಎಂ ಬಾಯಿಯಲ್ಲಿ ಬುರಗಾ ಬಂದಾಗ ಕಾಲಿಗೆ ಅಲ್ಲಿ ಚೇಕಮಾಡಲಾಗಿ ಮನೆಯಿಂದ ಅಂಗನಾಡಿಗೆ ಬರುವಾಗ ಯಾವುದೋ ಒಂದು ವಿಷ ಪೂರಿತ ಹಾವು ಬಲ ಕಾಲಿನ ಪಾದದ ಮೇಲೆ ಮೋಳಕಾಲು ಕೇಳಗೆ (ಇಟಛಠತಿ) ಕಚ್ಚಿದ್ದ ಇರುತ್ತದೆ ಅಂತಾ ತಿಳಿಸಿದ್ದು ನಾನು ನೋಡಿದೇನು, ಅಷ್ಠರಲ್ಲೆ ಅಲ್ಲಿಗೆ ಬಂದ ನನ್ನ ಅಣ್ಣ  ಅಣ್ಣ ಮೌನೇಶ, ನಮ್ಮ ದೋಡಪನ ಮಗ ತಿರುಪತಿ ತಂದೆ ಯಂಕಪ್ಪ, ನನ್ನ ಹೆಂಡತಿ ಸರಸ್ವತಿ, ಒಂದು ಅಟೋದಲ್ಲಿ ಉಪಚಾರ ಕುರಿತು ಅಲ್ಲಲ್ಲಿ ದೇಸಿ ಔಷದಿ ಹಾಕಿಸಿದ್ದು ಕಡಿಮೆಯಾಗಲಿಲ್ಲಾ, ನಂತರ ಶಹಾಪೂರ ಸರಕಾರಿ ಆಸ್ಪತ್ರೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು 2:00 ಪಿ.ಎಂ ಸುಮಾರಿಗೆ ಉಪಚಾರ ಹೊಂದುತ್ತ ದಿವ್ಯಾ ಇವಳು ಮೃತ ಪಟ್ಟಿದ್ದಾಳೆ ಅಂತಾ ವೈದ್ಯಾದೀಕಾರಿಗಳು ತಿಳಿಸಿದ್ದು ಇರುತ್ತದೆ ನಾವೂ ಮನೆಗೆ ಕರೆದುಕೊಂಡು ಬಂದಿದ್ದ ಇರುತ್ತದೆ ಅಂತಾ ನನ್ನ ತಮ್ಮ ಯಂಕಪ್ಪ ಇತನು ತಿಳಿಸಿದ್ದ, ನಾನು ನೋಡಲಾಗಿ ನನ್ನ ಮಗಳು ದಿವ್ಯಾಳ ಬಲ ಕಾಲಿನ ಪಾದದ ಮೇಲೆ ಮೋಳಕಾಲು ಕೇಳಗೆ (ಇಟಛಠತಿ) ಕಚ್ಚಿದ್ದರಿಂದ ತರಚಿದ ಗಾಯ ಕಂಡುಬಂದಿದ್ದು ಇರುತ್ತದೆ,                                                       
           ಕಾರಣ ನನ್ನ ಮಗಳಾದ ದಿವ್ಯಾ ತಂದೆ ಮುತ್ತಪ್ಪ ವ|| 3 ವರ್ಷ ಸಾ|| ಅಮರಗೋಳ ಹಾ||ವ ಯಕಂತ್ತಿ ಇವಳಿಗೆ ಮನೆಯಿಂದ ಅಂಗನವಾಡಿಗೆ ಹೋಗುವಾಗ ಯಾವುದೋ ಒಂದು ವಿಷ ಪೂರಿತ ಹಾವೂ ಕಚ್ಚಿದ್ದರಿಂದ ಮೃತ ಪಟ್ಟಿದ್ದು ಯಾರ ಮೇಲೆ ಯಾವೂದೆ ರೀತಿಯಾ ಸಂಶಾಯ ಇರುವದಿಲ್ಲಾ  ಮುಂದಿನ ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ, ಅಂತಾ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಯು,ಡಿ,ಆರ್, ನಂ-10/2020 ಕಲಂ 174 ಸಿ.ಆರ್.ಪಿ.ಸಿ. ನೇದ್ದರ ಪ್ರಕಾರ ಯು.ಡಿ,ಆರ್. ಧಾಖಲಿಸಿಕೊಂಡು ತನಿಕೆ ಕೈಕೊಂಡೆನು. 

ಶಾಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 77/2020.ಕಲಂ.15(ಎ), 32(3) ಕೆ.ಇ.ಯ್ಯಾಕ್ಟ:- ಇಂದು ದಿನಾಂಕ 10/03/2020 ರಂದು 12-30 ಗಂಟೆಗೆ ಶ್ರೀ ಚಂದ್ರಕಾಂತ ಪಿ.ಎಸ್.ಐ. ( ಕಾ.ಸೂ-1.) ಸಾಹೇಬರು ಠಾಣೆಗೆ ಹಾಜರಾಗಿ ಒಂದು ಆರೋಪಿ ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಹಾಜರ ಪಡಿಸಿ ಒಂದು ವರದಿಯನ್ನು ಸಲ್ಲಿಸಿದ್ದು ಸದರಿ ವರದಿಯ ಸಾರಾಂಶ ವೆನೆಂದರೆ, ಇಂದು ದಿನಾಂಕ: 10/03/2020 ರಂದು ಬೆಳಿಗ್ಗೆ 9-30 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ಮಾಹಿತಿ ಬಂದಿದ್ದೆನೆಂದರೆ, ಹಳಿಸಗರದ ಹಮಾಲರ ಓಣಿಯಲ್ಲಿ ತಮ್ಮ ಮನೆಯ ಮುಂದೆ ಇರುವ ಪಾನಡೆಬ್ಬಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಯಾವುದೇ ಅನುಮತಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಡುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದಮೇರೆಗೆ, ಠಾಣೆಯಲ್ಲಿ ಹಾಜರಿದ್ದ ನಾರಾಯಣ ಹೆಚ್,ಸಿ,49, ಶರಣಪ್ಪ ಹೆಚ್,ಸಿ,164, ಬೀಮನಗೌಡ ಪಿ.ಸಿ.402. ಇವರಿಗೆ ಬಾತ್ಮೀ ವಿಷಯ ತಿಳಿಸಿ, ಹೋಗಿ ದಾಳಿ ಮಾಡಬೆಕೆಂದು ನಾರಾಯಣ ಹೆಚ್,ಸಿ, 49, ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿ ಕಳುಹಿಸಿದಂತೆ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಕಾಮಣ್ಣ ತಂದೆ ಭೀಮಣ್ಣ ಬಡಿಗೇರ ವ|| 45 ಜಾ|| ಕಬ್ಬಲಿಗ ಸಾ|| ಹಳಿಸಗರ ಶಹಾಪೂರ 2] ಶ್ರೀ ರವಿಂದ್ರ ತಂದೆ ಕಾಮಣ್ಣ ನರಸನಾಯಕ ವ|| 65 ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಹಳಿಗರ ಶಹಾಪೂರ ಇವರಿಗೆ ಕರೆದುಕೊಂಡು ಬಂದು 09-50 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಪಂಚರಂತ ಬರಮಾಡಿಕೊಂಡು ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಿ ಸಹಕರಿಸಲು ಕೆಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. 
           ಮಾನ್ಯ ಡಿವೈ,ಎಸ್,ಪಿ, ಸಾಹೇಬರು ಸುರಪೂರ, ಪಿ.ಐ.ಸಾಹೇಬರು ಶಹಾಪೂರ, ರವರ ಮಾರ್ಗದರ್ಶನದಲ್ಲಿ ದಾಳಿಕುರಿತು ನಾನು ಮತ್ತು ಪಂಚರು, ಸಿಬ್ಬಂದಿ ಜನರು, ಎಲ್ಲರು ಕೂಡಿ ಒಂದು ಕಾಸಗಿ ಜೀಪ ನೇದ್ದರಲ್ಲಿ ಕುಳಿತುಕೊಂಡು 10-00 ಗಂಟೆಗೆ ಠಾಣೆಯಿಂದ ಹೋರಟೆವು. ನೇರವಾಗಿ 10-15 ಗಂಟೆಗೆ ಹಳಿಸಗರದ ಗ್ಯಾಸ್ ಪಂಪ ಹತ್ತಿರ ಹೋಗಿ ಜೀಪನಿಲ್ಲಿಸಿ ಎಲ್ಲರು ಜೀಪಿನಿಂದ ಇಳಿದು ನಡೆದುಕೊಂಡು ಹಮಾಲರ ಓಣಿಯಲ್ಲಿ ಹೋಗಿ ಮನೇಗಳ ಗೋಡೆಯ ಮರೆಯಲ್ಲಿ ನಿಂತು ನಿಗಾಮಾಡಿ ನೋಡಲಾಗಿ, ಒಬ್ಬ ವ್ಯೆಕ್ತಿ ರಸ್ತೆಯ ಪಕ್ಕದಲ್ಲಿ ಪಾನಡೆಬ್ಬಿ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಟ್ಟಿದ್ದನು ನೋಡಿ ಖಚಿತ ಪಡಿಸಿಕೊಂಡು 10-25 ಗಂಟೆಗೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಸದರಿಯವನ ಸುತ್ತುವರೆದು ದಾಳಿ ಮಾಡಿ ಹಿಡಿದಾಗ ಮದ್ಯ ಕುಡಿಯಲು ಅನುಕುಲ ಮಾಡಿಕೊಟ್ಟಿದ್ದ ಒಬ್ಬ ವ್ಯಕ್ತಿ ಸಿಕ್ಕಿದ್ದು. ಮತ್ತು ಮದ್ಯ ಕುಡಿಯಲು ಬಂದ ಜನರು ಮದ್ಯದ ಬಾಟಲ್ಗಳನ್ನು ಬಿಟ್ಟು ಓಡಿ ಹೋದರು ಮದ್ಯ ಕುಡಿಯಲು ಅನುವು ಮಾಡಿಕೊಟ್ಟ ವ್ಯಕ್ತಿ ಸಿಕ್ಕಿದ್ದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಹಣಮಂತ ತಂದೆ ಸಾಹೇಬಗೌಡ ದೋರಿಗಳು ವ|| 48 ಜಾ|| ಬೇಡರ ಉ|| ವ್ಯಾಪಾರ ಸಾ|| ಹಮಾಲರ ಓಣಿ ಶಹಾಪೂರ ಅಂತ ತಿಳಿಸಿದನು. ಆಗ ನಾನು ಪಂಚರ ಸಮಕ್ಷಮದಲ್ಲಿ ಸದರಿಯವನಿಗೆ ವಿಚಾರಣೆ ಮಾಡಲಾಗಿ ಹಳಿಸಗರದ ಹಮಾಲರ ಓಣಿಯಲ್ಲಿ ಪಾನಡೆಬ್ಬಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಿದ್ದರ ಬಗ್ಗೆ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಸದರಿಯವನು ಯಾವದೆ ದಾಖಲಾತಿಗಳು ಹೊಂದಿರುವದಿಲ್ಲ ಅಂತ ಹೇಳಿದನು. ನಾನು ಪಂಚರ ಸಮಕ್ಷಮದಲ್ಲಿ ಸದರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ 1] 650 ಎಂ.ಎಲ್.ನ ಒಟ್ಟು 12 ಕಿಂಗ್ ಫೀಷರ್ ಸ್ಟ್ರಾಂಗ್ ಬೀಯರ ಇದ್ದು ಒಂದು ಬಾಟಲ ಕಿಮ್ಮತ್ತು 145/- ರೂ ಅಂತಾ ಇದ್ದು, ಒಟ್ಟು ಬೀಯರ ಬಾಟಲ್ಗಳ ಕಿಮ್ಮತ್ತು 1740 ರೂ ಗಳಾಗುತ್ತಿದ್ದು, 2] ಒಂದು ಬೀಳಿಬಣ್ಣ ಪ್ಲಾಸ್ಟಿಕ್ ಚೀಲಾ ಅ:ಕಿ: 00 =00 ರೂ 3] 2 ಪ್ಲಾಸ್ಟಿಕ್ ಖಾಲಿ  ಗ್ಲಾಸ್ ಇದ್ದು ಮದ್ಯಕುಡಿಯಲು ಉಪಯೋಗಿಸಿದಂತೆ ಕಂಡುಬಂದಿದ್ದು ಅ:ಕಿ: 00=00 ರೂ 4] ಮದ್ಯ ಕುಡಿಯಲು ಉಪಯೋಗಿಸಿದ 650 ಎಂ.ಎಲ್.ನ 2 ಖಾಲಿ ಕಿಂಗ್ ಫೀಷರ್ ಸ್ಟ್ರಾಂಗ್ ಬೀಯರ ಬಟಲ್ಗಳು ಇದ್ದವು. ಅ:ಕಿ:00=00 ರೂ, ಒಟ್ಟು 12 ಮದ್ಯದ ಬಾಟಲ್ಗಳಲ್ಲಿ ಒಂದು 650 ಎಂ.ಎಲ್.ನ ಒಟ್ಟು 12 ಕಿಂಗ್ ಫೀಷರ್ ಸ್ಟ್ರಾಂಗ್ ಬೀಯರ ಬಾಟಲ್ನ್ನು ಪಂಚರ ಸಮಕ್ಷಮದಲ್ಲಿ ಎಫ್.ಎಸ್.ಎಲ್ ಪರೀಕ್ಷೆ  ಕುರಿತು ಕಳುಹಿಸುವ ಸಲುವಾಗಿ ಒಂದು ಬಿಳಿಯ ಬಟ್ಟೆ ಚೀಲದಲ್ಲಿ ಹಾಕಿ ಹೊಲೆದು ಖಊಕ ಅಂತಾ ಇಂಗ್ಲೀಷ ಅಕ್ಷರದ ಅರಗಿನ ಶೀಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆಯುಳ್ಳ ಚೀಟಿ ಅಂಟಿಸಿ ಇನ್ನೂಳಿದ ಮುದ್ದೆಮಾಲುಗಳನ್ನು ತಾಬೆಗೆ ತೆಗದುಕೊಂಡು. ಸದರಿ ಜಪ್ತಿ ಪಂಚನಾಮೆಯನ್ನು 10-30 ಗಂಟೆಯಿಂದ 11-30 ಎ.ಎಂ. ವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡೆನು. ಮತ್ತು ಮುದ್ದೆಮಾಲು ಹಾಗೂ ಆರೋಪಿತನೊಂದಿಗೆ ಮರಳಿ ಠಾಣೆಗೆ 12-00 ಗಂಟೆಗೆ ಬಂದು ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ಧ ವರದಿಯನ್ನು ತಯಾರಿಸಿ ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರುಪಡಿಸಿ 12-30 ಗಂಟೆಗೆ ಮುಂದಿನ ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 77/2020 ಕಲಂ 15(ಎ) 32( 3) ಕೆ.ಇ.ಯಾಕ್ಟ ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 78/2020. ಕಲಂ 279, 337, 338 ಐ.ಪಿ.ಸಿ.:-  ದಿನಾಂಕ:10-03-2020 ರಂದು ಮುಂಜಾನೆ 10:00 ಗಂಟೆಯ ಸುಮಾರಿಗೆ ಆರೋಪಿತನು ತನ್ನ ಮೊಟಾರ ಸೈಕಲ್ ನಂ. ಕೆ.ಎ.33-ಡಬ್ಲ್ಯೂ-4602 ನೇದ್ದನ್ನು ಅತೀ ವೇಗ ವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಪಲ್ಸರ ಮೊಟಾರ ಸೈಕಲ್ ಗೆ ಡಿಕ್ಕಿ ಮಡಿಸಿ ಮೊಟಾರ ಸೈಕಲ್ ಸವಾರ ಮರೆಪ್ಪ ನಿಗೆ  ಭಾರೀ ಗಾಯ ಪಡಿಸಿ ಮುಂದೆ ಹೊಗಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಎರಡು ಹುಡುಗರಿಗೆ ಡಿಕ್ಕಿ ಪಡಿಸಿ ನಾಲ್ಕು ಜನರಿಗೆ  ಭಾರಿ ಗಾಯಪಡಿಸಿ ತಾನೂ ಗಾಯಗೊಂಡಿದ್ದು ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ   ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.78/2020 ಕಲಂ. 279, 337, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!