ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/03/2020
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 75/2020. ಕಲಂ 379 ಐ.ಪಿ.ಸಿ.:- ದಿನಾಂಕ:02-03-2020 ರಂದು 11:30 ಪಿ.ಎಮ್.ದಿಂದ ದಿನಾಂಕ: 03-03-2020 ರಂದು 6:00 ಎ.ಎಮ್.ದ ಮದ್ಯದ ಅವಧಿಯಲ್ಲಿ ಶಹಾಪೂರದ ಹಳಸಗರ ಏರಿಯಾನ ಫಿಯರ್ಾದಿಯ ಅಳಿಯ ಬಸವರಾಜನ ಮನೆಯ ಮುಂದೆ ನಿಲ್ಲಿಸಿದ ಬಜಾಜ ಪಲ್ಸರ 150 ಮೊಟಾರ ಸೈಕಲ್ ನಂ ಕೆ.ಎ.-33ಘಿ7943 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಕಳ್ಳರನ್ನು ಪತ್ತೆ ಹಚ್ಚಿ ಮೊಟಾರ ಸೈಕಲ್ ನ್ನು ಹುಡುಕಿ ಕೊಡಲು ತಮ್ಮಲ್ಲಿ ವಿನಂತಿ.ಅಂತಾ ಇದ್ದ ಫಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.75/2020 ಕಲಂ. 379 ಐ.ಪಿ.ಸಿ. ಅಡಿಯಲ್ಲಿ ಪ್ರಕರರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 76/2020 ಕಲಂ 323, 326 504 506 ಸಂ 34 ಐ.ಪಿ.ಸಿ:- ಇಂದು ದಿನಾಂಕ 09/03/2020 ರಂದು ರಾತ್ರಿ 20-00 ಗಂಟೆಗೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಇದೆ ಅಂತ ದೂರವಾಣಿ ಮೂಲಕ ಮಾಹಿತಿ ಬಂದ ಮೇರೆಗೆ ನಾನು ಜೊತೆಯಲಿ ಸಿದ್ರಾಮಯ್ಯ ಪಿ.ಸಿ 258 ರವರೊಂದಿಗೆ ಆಸ್ಪತ್ರೆಗೆ ಭೇಟಿ ಮಾಡಿ ಉಪಚಾರ ಪಡೆಯುತಿದ್ದ ಗಾಯಾಳು ಶ್ರೀ ಸಿದ್ದಲಿಂಗರೆಡ್ಡಿ ತಂದೆ ಗುರುಬಸಪ್ಪ ಮಾಲಿಪಾಟೀಲ ವಯ 58 ವರ್ಷ ಜಾತಿ ಲಿಂಗಾಯತ ರಡ್ಡಿ ಉಃ ಕ್ಕಲುತನ ಸಾಃ ಬೀರನಾಳ. ತಾಃ ಶಹಾಪೂರ ಜಿಃ ಯಾದಗಿರಿ ಇವರಿಗೆ ವಿಚಾರಣೆ ಮಾಡಲಾಗಿ ಸದರಿಯವರು ನೀಡಿದ ಹೇಳಿಕೆ ಸಾರಾಂಶವೆನೆಂದರೆ, ನನ್ನ ಮಗಳಾದ ಅಮರಜ್ಯೋತಿ ಇವಳಿಗೆ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ರುದ್ರಗೌಡ ತಂದೆ ಶರಣಪ್ಪ ಇವರ ಜೊತೆ ಮದುವೆ ಮಾಡಿರುತ್ತೆನೆ. ನನ್ನ ಅಳಿಯ ರುದ್ರಗೌಡ ಇವರಿಗೆ ಬಾಬು @ ರಾಯರೆಡ್ಡಿ ತಂದೆ ಶರಣಪ್ಪ ಈತನು ಅಣ್ಣನಿರುತ್ತಾನೆ. ಅಳಿಯ ರುದ್ರುಗೌಡ ಇವರ ತಾಯಿಯಾದ ವಿಶಾಲಾಕ್ಷಮ್ಮ ಗಂಡ ದಿ. ಶರಣಪ್ಪ ಇವರ ಹೆಸರಿನಲ್ಲಿ ಶಹಾಪುರ ತಾಲೂಕಿನ ತಂಗಡಗಿ ಸೀಮಾಂತರದಲ್ಲಿ ಹೊಲ ಸವರ್ೇ ನಂ 22 ಆಕಾರ 14 ಎಕರೆ 22 ಗುಂಟೆ ಜಮೀನು ಇರುತ್ತದೆ. ಸದರಿ ಜಮೀನು ಹಂಚಿಕೆಯ ವಿಷಯದ ಸಂಬಂಧ ನನ್ನ ಅಳಿಯ ಮತ್ತು ಆತನ ಅಣ್ಣ ಬಾಬು @ ರಾಯರೆಡ್ಡಿ ಇವರ ಮದ್ಯ ಸುಮಾರು 3-4 ವರ್ಷಗಳಿಂದ ತಕರಾರು ನಡೆದಿರುತ್ತದೆ. ಆದರೆ ಬಾಬು @ ರಾಯರಡ್ಡಿ ಈತನು ಸದರಿ ಜಮೀನು ನನ್ನ ಅಳಿಯ ರುದ್ರಗೌಡನಿಗೆ ಪಾಲು ಮಾಡಿಕೊಡುತ್ತೆನೆ ಅಂತ ಹೇಳಿಕೊಂಡು ಪಾಲು ಮಾಡಿಕೊಡದೆ ಈ ವರ್ಷಕೊಡುತ್ತೆನ, ಮುಂದಿನ ವರ್ಷ ಕೊಡುತ್ತೆನೆ ಅಂತ ಸತಾಯಿಸುತ್ತಾ ದಿನಗಳನ್ನು ಮುಂದಕ್ಕೆ ಹಾಕಿಕೊಂಡು ಬಂದಿರುತ್ತಾನೆ. ಆದರೆ ಸದರಿ ಜಮೀನು ಹಂಚಿಕೆಮಾಡದೆ ಇದ್ದುದ್ದರಿಂದ ಇಬ್ಬರೂ ಅಣ್ಣ-ತಮ್ಮಂದಿರರು ಸಾಗುವಳಿ ಮಾಡಿಕೊಂಡು ಬಂದಿರುತ್ತಾರೆ. ಹೀಗಿರುವಾಗ ಇಂದು ದಿನಾಂಕ 09/03/2020 ರಂದು ನನ್ನ ಅಳಿಯ ರುದ್ರಗೌಡನು ನನಗೆ ಫೋನ್ ಮಾಡಿ ತಂಗಡಗಿ ಸೀಮಾಂತರದಲ್ಲಿರುವ ನಮ್ಮ ಹೊಲದಲ್ಲಿ ಜೋಳದ ಕಣ ಹಾಕಿದ್ದೆವೆ ತೆನೆ ಮುರಿಯುವದು ನಡೆದಿದೆ ಸಾಯಂಕಾಲ ಹಾಸಿಗೆ ಮತ್ತು ಊಟ ತೆಗೆದುಕೊಂಡು ಬನ್ನಿ ಅಂತ ತಿಳಿಸಿದ ಮೇರೆಗೆ, ನಾನು ನಮ್ಮೂರಿನಿಂದ ಊಟ ಮತ್ತು ಹಾಸಿಗೆ ತೆಗೆದುಕೊಂಡು ತಂಗಡಗಿ ಸೀಮಾಂತರದಲ್ಲಿರುವ ನಮ್ಮ ಅಳಿಯನ ಹೊಲಕ್ಕೆ ಹೋದಾಗ ಹೊಲದಲ್ಲಿ ಜೋಳದ ಕಣ ಹಾಕಿದ್ದರು. ಕೂಲಿ ಜನರು ತೆನೆ ಮುರಿಯುತಿದ್ದರು. ಹೊಲದಲ್ಲಿ ನನ್ನ ಅಳಿಯ ರುದ್ರಗೌಡ ಮತ್ತು ನನ್ನ ಅಳಿಯನ ಅಣ್ಣ ಬಾಬು @ ರಾಯರಡ್ಡಿ, ಹಾಗೂ ಅವರ ಮಗ ಸಂತೋಷ ತಂದೆ ಬಾಬು @ ರಾಯರಡ್ಡಿ ರವರೆಲ್ಲರೂ ಇದ್ದರು. ನಾನು ನಮ್ಮ ಅಳಿಯ ರುದ್ರಗೌಡನಿಗೆ ಭೇಟಿಯಾಗಿ ಹಾಸಿಗೆ ಮತ್ತು ಊಟ ಕೊಟ್ಟು ಮರಳಿ ಸಾಯಂಕಾಲ 5-30 ಗಂಟೆಯ ಸುಮಾರಿಗೆ ಹೊಲದಲ್ಲಿನ ಕಣದ ಹತ್ತಿರದಿಮದ ಬರುತಿದ್ದಾಗ ಬಾಬು @ ರಾಯರಡ್ಡಿ ಮತ್ತು ಅವನ ಮಗ ಸಂತೋಷ ಇಬ್ಬರೂ ಕೂಡಿ ನನಗೆ ಏ ಬೋಸ್ಡಿ ಮಗನೆ ನಮ್ಮ ಹೊಲಕ್ಕೆ ಯಾಕೆ ಬಂದಿದ್ದಿಯಾ ನಿನ್ನಿಂದಲೇ ಆಗಾಗ ನಮ್ಮ ಅಣ್ಣ-ತಮ್ಮಂದಿರ ಮದ್ಯ ತಕರಾರು ನಡೆಯುತ್ತಿದೆ ಅಂತ ಅಂದವರೆ ಇಬ್ಬರೂ ಕೂಡಿ ನನಗೆ ಕೈಯಿಂದ ಹೊಟ್ಟೆಗೆ ಬೆನ್ನಿಗೆ ಹೊಡೆಯುತಿದ್ದಾಗ ಸಂತೋಷ ಈತನು ಕಣದ ಹತ್ತಿರ ಬಿದ್ದಿದ್ದ ಒಂದು ಕಬ್ಬಿಣದ ರಾಡ ತೆಗೆದುಕೊಂಡು ನನ್ನ ತಲೆಯ ಹಿಂದೆ ಎಡಭಾಗಕ್ಕೆ ಜೋರಾಗಿ ಹೊಡೆದರಿಂದ ತಲೆಗೆ ಭಾರಿ ರಕ್ತಗಾಯವಾಗಿ ನನ್ನ ಮೈ ಮೇಲಿನ ಬಟ್ಟೆ ರಕ್ತಮಯವಾಗಿರುತ್ತವೆ. ಆಗ ನನ್ನ ಅಳಿಯ ರುದ್ರಗೌಡನು ಓಡಿ ಬಂದು ಜಗಳ ಬಿಡಿಸಿಕೊಂಡನು. ಬಾಬು @ ರಾಯರಡ್ಡಿ ಮತ್ತು ಅವನ ಮಗ ಸಂತೋಷ ಇಬ್ಬರೂ ಕೂಡಿ ಇನ್ನೊಂದು ಸಲ ನಮ್ಮ ಸಂಸಾರದ ವಿಷಯದಲ್ಲಿ ತಲೆ ಹಾಕಿದರೆ ಖಲಾಸ ಮಾಡುತ್ತೆವೆ ಅಂತ ಜೀವ ಬೆದರಿಕೆ ಹಾಕಿದರು ನಂತರ ನನ್ನ ಅಳಿಯ ರುದ್ರಗೌಡನು ನನಗೆ ಉಪಚಾರ ಕುರಿತು ಶಹಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾನೆ. ಸದರಿ ಘಟನೆಯು ಸಾಯಂಕಾಲ 5-30 ಗಂಟೆಯಿಂದ 5-40 ಗಂಟೆಯ ಅವಧಿಯವರೆಗು ಆಗಿರುತ್ತದೆ.
ವಿನಾಕಾರನಣ ನನಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ರಾಡಿನಿಂದ ತಲೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿ ಜೀವ ಬೆದರಿಕೆ ಹಾಕಿದ 1) ಬಾಬು @ ರಾಯರಡ್ಡಿ ತಂದೆ ಶರಣಪ್ಪ ವಯ 48 ವರ್ಷ 2) ಸಂತೋಷ ತಂದೆ ಬಾಬು @ ರಾಯರಡ್ಡಿ ವಯ 25 ವರ್ಷ ಇಬ್ಬರೂ ಸಾಃಕೋಡ್ಲಾ ತಾಃ ಸೇಡಂ ಇವರ ವಿರುದ್ದ ಕಾನೂನು ರೀತಿಯ ಕ್ರಮ ಕೈಕೊಳ್ಳಲು ವಿನಂತಿ. ಅಂತ ಕೊಟ್ಟ ಹೇಳಿಕೆಯನ್ನು ಲ್ಯಾಪ್-ಟಾಪನಲ್ಲಿ ಟೈಪ್ ಮಾಡಿಕೊಂಡು ಪ್ರೀಂಟ್ ಔಟ್ ಮಾಡಿ ಫಿರ್ಯದಿಯವರ ಸಹಿ ಪಡೆದುಕೊಂಡು ಮರಳಿ ಠಾಣೆಗೆ ರಾತ್ರಿ 21-45 ಗಂಟೆಗೆ ಬಂದು ಫಿಯರ್ಾದಿಯವರ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 76/2020 ಕಲಂ 323 326 504 506 ಸಂ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 26/2020 ಕಲಂ: 78(3) ಕೆ.ಪಿ ಆಕ್ಟ್:- ಇಂದು ದಿನಾಂಕ:09.03.2020 ರಂದು 2:00ಎಎಮ್ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ ಠಾಣೆ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ನಾನು ಇಂದು ದಿನಾಂಕ:09.03.2020 ರಂದು ಮುಂಜಾನೆ 11:00 ಗಂಟೆಗೆ ಠಾಣೆಯಲ್ಲಿದ್ದಾಗ ಠಾಣೆಯ ಗುಪ್ತ ಮಾಹಿತಿ ಸಿಬ್ಬಂದಿಯಾದ ಯಲ್ಲಪ್ಪ ಹೆಚ್ಸಿ-117 ರವರು ಬಂದು ನನಗೆ ತಿಳಿಸಿದ್ದೇನೆಂದರೆ, ಬೊಮ್ಮಗುಡ್ಡ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮಟಕಾ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಡುತ್ತಿರುವುದಾಗಿ ತಿಳಿಸಿದ್ದು ಸದರಿ ಸಿಬ್ಬಂದಿಯವರು ಹೇಳಿದ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:26/2020 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
1) ಶಿವಣ್ಣ ತಂದೆ ಹಣಮಂತ್ರಾಯ ಗುಡಗುಂಟಿ ಸಾ:ಬೈಲಕುಂಟಿ ತಾ:ಹುಣಸಗಿ
ಪ್ರಭು ತಾಯಿ ಹುಲಗಮ್ಮ ಮೇಲಿನಮನಿ ಸಾ: ರಾಜನಕೊಳುರು ತಾ: ಹುಣಸಗಿ
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 28/2020 ಕಲಂ 32,34 ಕೆ,ಇ ಯಾಕ್ಟ್ ಮತ್ತು 284 ಐಪಿಸಿ:- ಇಂದು ದಿನಾಂಕ: 09-03-2020 ರಂದು 03-30 ಪಿ.ಎಮ್ ಕ್ಕೆ ಸುವರ್ಣ ಪಿ.ಎಸ್.ಐ ರವರು ಜ್ಞಾಪನ ಪತ್ರದೊಂದಿಗೆ ಸಿಂಧಿ ಜಪ್ತಿಪಂಚನಾಮೆ ಮತ್ತು 32 ಲೀಟರ ಸಿಂಧಿಯನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 28/2020 ಕಲಂ. 32, 34 ಕೆ.ಇ ಕಾಯ್ದೆ ಮತ್ತು 284 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 04/2020 ಕಲಂ. 174 ಸಿಆರ್ಪಿಸಿ :- ದಿನಾಂಕ: 09-03-2020 ರಂದು ಬೆಳಿಗ್ಗೆ 09-00 ಗಂಟೆಗೆ ಪಿಯರ್ಾಧಿ ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೇನೆಂದರೆ ನಾನು ಈ ಮೇಲ್ಕಾಣಿಸಿದ ಹೆಸರು ವಿಳಾಸದ ನಿವಾಸಿಯಾಗಿದ್ದು ನಾನು ನಮ್ಮ ಮನೆಯಲ್ಲಿ ಹೊಲಮನೆ ಕೆಲಸ ಮಾಡಿಕೊಂಡು ಉಪಜೀವನ ಮಾಡಿಕೊಂಡಿರುತ್ತೇನೆ. ನನ್ನ ಮಗಳಾದ ಸುಜಾತ ಈಕೆಗೆ ಲಿಂಗೆರಿ ಗ್ರಾಮಕ್ಕೆ ಮದುವೆ ಮಾಡಿ ಕೊಟ್ಟಿದ್ದು ಇರುತ್ತದೆ. ಸುಜಾತಳಿಗೆ 2 ಜನ ಗಂಡು ಮಕ್ಕಳು ಮತ್ತು 2 ಜನ ಹೆಣ್ಣು ಮಕ್ಕಳು ಇರುತ್ತಾರೆ ನನ್ನ ಮಗಳು ಸುಜಾತ ಈಕೆಯು ದುಡಿಯಲು ಬೆಂಗಳೂರಿಗೆ ಹೋಗಿದ್ದರಿಂದ ನನ್ನ ಮೊಮ್ಮಕ್ಕಳಾದ 1) ಅಭೀಷೇಕ ತಂದೆ ಜಾನವೇಸ್ಲಿ ವ|| 12 ವರ್ಷ 2) ಜೋಷೇಪ್ ತಂದೆ ಜಾನವೇಸ್ಲಿ ವ|| 10 ವರ್ಷ 3) ಮೇರಿ ಇವರನ್ನು ನಮ್ಮೂರಾದ ಬೆಳಗುಂದಿಯಲ್ಲಿ ನಮ್ಮ ಜೊತೆಯಲ್ಲಿ ಬಿಟ್ಟು ಹೋಗಿದ್ದು ನನ್ನ ಮೊಮ್ಮಕ್ಕಳು ನಮ್ಮೂರಲ್ಲಿ ಶಾಲೆ ಓದಿಕೊಂಡು ಇದ್ದುರು.
ದಿನಾಂಕ: 08-03-2020 ರಂದು ಶಾಲೆ ಇಲ್ಲದಿರುವದಿಂದ ನನ್ನ ಎರಡು ಮೊಮಕ್ಕಳಾದ ಅಭಿಷೇಕ ಮತ್ತು ಜೋಸೇಪ್ ಇಬ್ಬರನ್ನು ಕರೆದುಕೊಂಡು ಮದ್ಯಾಹ್ನ 02-30 ಗಂಟೆ ಸುಮಾರಿಗೆ ಹೊಲದಲ್ಲಿ ಹತ್ತಿ ಕಟ್ಟಿಗೆ ಆರಸಲು ಹೋಗಿದ್ದೆವು ನನ್ನ ಮೊಮ್ಮಕ್ಕಳು ಕೂಡ ಹೊಲದಲ್ಲಿ ಹತ್ತಿ ಕಟ್ಟಿಗೆಯನ್ನು ಆರಿಸುತಿದ್ದರು ಸಾಯಂಕಾಲ 05-30 ಗಂಟೆ ಸುಮಾರಿಗೆ ಹೊಲದಲ್ಲಿ ಹತ್ತಿ ಕಟ್ಟಿಗೆ ಆರಿಸುವದು ಮುಗಿಸಿಕೊಂಡು ಮನೆಗೆ ಬರುತ್ತಿರುವಾಗ ನನ್ನ ಮೊಮಕ್ಕಳಾದ ಅಭೀಷೇಕ್ ಮತ್ತು ಜೋಸೇಪ್ ಇಬ್ಬರು ಆಯಿ ನಾವು ಮಾವಿನ ಕಾಯಿಯನ್ನು ಹರಿದುಕೊಂಡು ಬರುತ್ತೇವೆ ನಿನು ಮನೆಗೆ ಹೋಗು ಅಂತಾ ತಿಳಿಸಿದರು ಅದಕ್ಕೆ ನಾನು ಮುಂದೆ ಊರ ಕಡೆ ಮನೆಗೆ ಹೋದೆನು. ಹೊತ್ತಾದರು ಕೂಡ ನನ್ನ ಮೊಮ್ಮಕ್ಕಳು ಮನೆಯ ಕಡೆಗೆ ಬರೆದು ಇರುವದರಿಂದ ನಾನು ನನ್ನ ಮಗ ರಾಚಪ್ಪ ಇಬ್ಬರು ಕೂಡಿ ಹೊಲಕ್ಕೆ ಹೋಗಿ ನೋಡಲಾಗಿ ಹೊಲದಲ್ಲಿ ಇಬ್ಬರು ಇರಲಿಲ್ಲ ಆಗ ನಾವು ದಾರಿಯಲ್ಲಿ ಇರುವ ನೀರಿನ ತಗ್ಗಿಗೆ ಹೋಗಿ ನೋಡಲಾಗಿ ತಗ್ಗಿನ ಹತ್ತಿರ ಅವರ ಚಪ್ಪಲಿಗಳು ಇದ್ದವು ಆಗ ನನ್ನ ಮಗ ರಾಚಪ್ಪ ಇತನು ನನ್ನ ಮೊಮ್ಮಕ್ಕಳು ನೀರಿನಲ್ಲಿ ಬಿದ್ದಿರಬಹುದು ಅಂತಾ ನೀರಿನ ತಗ್ಗಿನಲ್ಲಿ ಇಳಿದು ಹುಡಕಾಡಿ ನೋಡಲಾಗಿ ನನ್ನ ಇಬ್ಬರು ಮೊಮ್ಮಕ್ಕಳ ನೀರಿನ ತಗ್ಗಿನಲ್ಲಿ ಬಿದ್ದು ಮೃತಪಟ್ಟಿದ್ದರು. ನನ್ನ ಮೊಮ್ಮಕ್ಕಳಾದ 1) ಅಭೀಷೇಕ ತಂದೆ ಜಾನವೇಸ್ಲಿ ವ|| 12 ವರ್ಷ 2) ಜೋಷೇಪ್ ತಂದೆ ಜಾನವೇಸ್ಲಿ ವ|| 10 ವರ್ಷ ಸಾ|| ಬೆಳಗುಂದಿ ಇವರು ದಿನಾಂಕ: 08-03-2020 ರಂದು ಸಾಯಂಕಾಲ 05-30 ಗಂಟೆ ಯಿಂದ 06-00 ಗಂಟೆ ವರೆಗೆ ಹೊಲದಿಂದ ನೀರು ಕುಡಿಯಲು ಹೋಗಿ ಕಾಲು ಜಾರಿ ನೀರಿನ ತಗ್ಗಿನಲ್ಲಿ ಬಿದ್ದು ಮೃತಪಟ್ಟಿರುತ್ತಾರೆ.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 65/2019 ಕಲಂ 32(3) 15(ಎ) ಕನರ್ಾಟಕ ಅಭಕಾರಿ ಕಾಯ್ದೆ 1965:- ಇಂದು ದಿನಾಂಕ: 09/03/2020 ರಂದು 5 ಪಿ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀ ಸಾಹೇಬಗೌಡ ಎಂ.ಪಾಟೀಲ್ ಪಿ.ಐ ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲು ನೊಂದಿಗೆ ಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:09-03-2020 ರಂದು 3-30 ಪಿ.ಎಂ.ಕ್ಕೆ ಸುರಪುರ ಬಸ್ ನಿಲ್ದಾಣದ ಅಂಬೇಡ್ಕರ ಚೌಕ ಹತ್ತಿರ ಸಾರ್ವಜನಿಕ್ ಖುಲ್ಲಾ ಸ್ಥಳದಲ್ಲಿ ಆರೋಪಿತನು ಒಂದು ಪ್ಲಾಸ್ಟೀಕ ಚೀಲದಲ್ಲಿದ್ದ ಮತ್ತು ರಟ್ಟಿನ ಬಾಕ್ಷನಲ್ಲಿ ಮದ್ಯವನ್ನು ಸಂಗ್ರಹಿಸಿ ಮದ್ಯ ಮಾರಾಟ ಮಾಡಲು ಪರವಾನಿಗೆ ಇಲ್ಲದೆ ಚಿಲ್ಲರೆಯಾಗಿ ಮಾರಾಟ ಮಾಡುತ್ತಿರುವಾಗ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನಿಂದ 1) 180 ಎಮ್ಎಲ್ನ 06 ಒಲ್ಡ ಟವರಿನ್ ಪೌಚ್ಗಳಿದ್ದು ಪ್ರತಿಯೊಂದಕ್ಕೆ 74.13=00 ರೂ ಗಳಿದ್ದು ಒಟ್ಟು 444.78=00 ರೂಗಳು ಆಗುತ್ತದೆ. 2) 330 ಎಂ.ಎಲ್ನ 20 ಕಿಂಗ್ ಫಿಶರ ಸ್ಟ್ರಾಂಗ ಪ್ರೀಮಿಯಮ್ ಬಿಯರಗಳಿದ್ದು ಪ್ರತಿಯಂದಕ್ಕೆ 80=00 ರೂಗಳಿದ್ದು ಒಟ್ಟು 1600=00 ರೂಗಳಾಗುತ್ತದೆ. ಹೀಗೆ ಒಟ್ಟು 7680 ಎಮ್.ಎಲ್ನ ಮಧ್ಯ ವಿದ್ದು ಅದರ ಅ.ಕಿ 2044.78 ರೂ. ಕಿಮ್ಮತ್ತಿನವುಗಳಿದ್ದು ಇದಲ್ಲದೆ ನಗದು ಹಣ 920/- ರೂಗಳು ಮತ್ತು 4 ಪ್ಲಾಸ್ಟೀಕ ಗ್ಲಾಸುಗಳು ಅ.ಕಿ 00=00 ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.65/2020 ಕಲಂ: 32(3), 15(ಎ) ಕೆ.ಇ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 48/2020 ಕಲಂ: 78(3) ಕೆಪಿ ಯಾಕ್ಟ:- ಇಂದು ದಿನಾಂಕ 09/03/2020 ರಂದು 19.30 ಪಿ.ಎಮ್ ಕ್ಕೆ ಶ್ರೀ ಸುದರ್ಶನರೆಡ್ಡಿ ಪಿಎಸ್ಐ ರವರು ಠಾಣೆಗೆ ಹಾಜರಾಗಿ ಜ್ಞಾಪನ ನೀಡಿದ್ದೇನಂದರೆ ಇಂದು ದಿನಾಂಕ:09.03.2020 ರಂದು 16.30 ಗಂಟೆಗೆ ಕರಡಕಲ್ ಗ್ರಾಮದ ಹತ್ತಿರ ಪೆಟ್ರೋಲಿಂಗ್ ಕರ್ತವ್ಯದ ಮೇಲೆ ಇದ್ದಾಗ ಕರಡಕಲ್ ಗ್ರಾಮದ ಕೋರಿಸಿದ್ದೇಸ್ವರ ಗುಡಿಯ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಭಾತ್ಮೀ ಬಂದಿದ್ದು, ಬಾತ್ಮಿ ಬಂದ ಮೇರೆಗೆ ಖುದ್ದಾಗಿ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಮಟಕಾ ನಂಬರ ಬರೆದುಕೊಳ್ಳುವ ಬಗ್ಗೆ 17.00 ಗಂಟೆಗೆ ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡು ನಂತರ ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ಠಾಣಾ ಗುನ್ನೆ ನಂಬರ 48/2020 ಕಲಂ 78[3] ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ಧಾಖಲಿಸಿ ದಾಳಿ ಕೈಕೊಂಡಿದ್ದು ದಾಳಿಯಲ್ಲಿ ಆರೋಪಿ ನಂದಪ್ಪ ತಂದೆ ಚಂದ್ರಾಮಪ್ಪ ಕುಂಬಾರ ವ|| 38 ಜಾ|| ಕುಂಬಾರ ಉ|| ಕೂಲಿಕೆಲಸ ಸಾ|| ಕರಡಕಲ ಈತನಿಗೆ ದಸ್ತಗಿರಿ ಮಾಡಿ ಆತನಿಂದ ಪಂಚರ ಸಮಕ್ಷಮ 3480/- ರೂಪಾಯಿ ನಗದು ಹಣ ಹಾಗು ಒಂದು ಮಟಕಾ ಚೀಟಿ ಹಾಗು ಒಂದು ಬಾಲಪೆನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ ಅಂತ ಮಾನ್ಯರವರಲ್ಲಿ ವಿನಂತಿ ಇರುತ್ತದೆ.
Hello There!If you like this article Share with your friend using