ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/03/2020

By blogger on ಸೋಮವಾರ, ಮಾರ್ಚ್ 9, 2020

                               
                                                                     
                                  ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/03/2020
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 32/2020 ಕಲಂ 279, 337, 338, 304(ಎ) ಐಪಿಸಿ:- ಇಂದು ದಿನಾಂಕ 08/03/2020 ರಂದು ಸಾಯಂಕಾಲ 7-30 ಗಂಟೆಗೆ ಆರೋಪಿತನಾದ ಹಣಮಂತ ತಂದೆ ಭೀಮಶಾ ಪೂಜಾರಿ ಸಾಃ ಕೊಯಿಲೂರ ಇತನು ತನ್ನ ಟಂ.ಟಂ. ನಂ ಕೆ.ಎ-33-ಎ-0271 ನೆದ್ದರಲ್ಲಿ ಗಾಯಾಳುಗಳನ್ನು ಕೂಡಿಸಿಕೊಂಡು ಅರಿಕೆರಾ(ಕೆ) ಗೇಟಿನ ಕಡೆಯಿಂದ ರಾಮಸಮುದ್ರ ಮಾರ್ಗವಾಗಿ ಕೊಯಿಲೂರ ಗ್ರಾಮದ ಕಡೆಗೆ ಬರುವಾಗ ಅರಿಕೆರಾ(ಕೆ)-ರಾಮಸಮುದ್ರ ರೋಡಿನ ಮೇಲೆ ತನ್ನ ಟಂ.ಟಂ. ಅನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಎದುರಿಗೆ ರಾಮಸಮುದ್ರ ಕಡೆಯಿಂದ ಬರುತ್ತಿದ್ದ ಮೃತ ಜಗಧೀಶ ತಂದೆ ಸಣ್ಣಭೀಮರಾಯ ಕಲಾಲ ವಯಾಃ 21 ವರ್ಷ ಸಾಃ ಪಸಫೂಲ ಇತನ ಮೋಟಾರ ಸೈಕಲ್ ನಂ ಕೆ.ಎ-33-ಕ್ಯೂ-8350 ನೆದ್ದಕ್ಕೆ ಜೋರಾಗಿ ಡಿಕ್ಕಿ ಪಡಿಸಿದ ಪ್ರಯುಕ್ತ ಜಗಧೀಶ ಇತನು ಭಾರಿ ಗಾಯಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನುಳಿದ ಟಂಟಂ. ಚಾಲಕ ಸೇರಿ 9 ಜನರು ಸಾದಾ ಮತ್ತು ಭಾರಿ ಗಾಯಗಳು ಹೊಂದಿದ್ದು ಇರುತ್ತದೆ ಅಂತಾ ಫಿರ್ಯಾಧಿ ಸಾರಾಂಶ ಇರುತ್ತದೆ.

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 31/2020 ಕಲಂ 143, 147, 148, 323, 324, 504, 506 ಸಂ 149 ಐಪಿಸಿ :- ಇಂದು ದಿನಾಂಕ 08/03/2020 ರಂದು ಮಧ್ಯಾಹ್ನ 12-00 ಗಂಟೆಗೆ ಫಿರ್ಯಾಧಿ ಮತ್ತು ಅವನ ಮನೆಯವರು ತಮ್ಮ ಮನೆಯ ಮುಂದೆ ಇರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಕಲ್ಲು ಮತ್ತು ಬಡಿಗೆಗಳನ್ನು ಹಿಡಿದುಕೊಂಡು ಬಂದು ನಿನ್ನೆ ನೀರಿನ ಟಾಕಿ ಹತ್ತಿರ ನನ್ನ ಹೆಂಡತಿ ಜೋತೆಗೆ ತಕರಾರು ಮಾಡಿದ್ದಿರಿ ಚೋದು ಸೂಳೇ ಮಕ್ಕಳೇ ನಿಮಗೆ ಬಹಳ ಸೊಕ್ಕುಯಿದೆ ಅಂತಾ ಅವಾಚ್ಯವಾಗಿ ಬೈದು ಜಗಳ ತೆಗೆದು ಕಲ್ಲಿನಿಂದ ಬಡಿಗೆಯಿಂದ ಮತ್ತು ಕೈಯಿಂದ ಫಿರ್ಯಾಧಿಗೆ ಮತ್ತು ಅವನ ಮನೆಯವರಿಗೆ ಹೊಡೆಬಡೆ ಮಾಡಿ ಜೀವದ ಭಯ ಹಾಕಿದ ಬಗ್ಗೆ.

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- ಪಿ.ಎ.ಆರ್ ನಂ: 03/2020 ಕಲಂ 110 (ಇ) ಮತ್ತು (ಜಿ) ಸಿಆರ್ಪಿಸಿ:- ಮಾನ್ಯ ನ್ಯಾಯಾಲಯದ ಹದ್ದಿಯ ಪೈಕಿ ಯಾದಗಿರಿ ಗ್ರಾಮೀಣ ಪೋಲಿಸ್ ಠಾಣೆಯ ಹದ್ದಿಯ ಹಳ್ಳ್ಳಿಗಳ ಬೇಟಿಗಾಗಿ ಇಂದು ದಿನಾಂಕ 08-03-2020 ರಂದು ಮಧ್ಯಾಹ್ನ 3-30 ಗಂಟೆಗೆ ಠಾಣೆಯಿಂದ ನಾನು ಮತ್ತು ಶ್ರೀ ಮೋನಪ್ಪಾ ಪಿಸಿ-263 ಇಬ್ಬರೂ ಕೂಡಿ ಠಾಣೆಯಿಂದ ಹೊರಟು ಪಗಲಾಪೂರ ಗ್ರಾಮಕ್ಕೆ 4 ಪಿ.ಎಮ್ ಕ್ಕೆ ಬೇಟಿ ಕೊಟ್ಟಾಗ  ಗ್ರಾಮದಲ್ಲಿ ಒಬ್ಬ ಮನುಷ್ಯನು ಕೈಯಲ್ಲಿ ಕಲ್ಲು ಹಿಡಿದುಕೊಂಡು ಸಾರ್ವಜನಿಕ ರಸ್ತೆಯ ಮೇಲೆ ನಿಂತು ಹೋಗಿ ಬರುವ ಸಾರ್ಜಜನಿಕರಿಗೆ ಅವಾಚ್ಯವಾಗಿ ಬೈಯ್ಯುತ್ತಾ ಮತ್ತು ಚೀರಾಡುತ್ತಾ ಗುಂಡಾಗಿರಿಯನ್ನು ಪ್ರದರ್ಶನ ಮಾಡುತ್ತಾ ನಿಂತಿದ್ದನು. ಇತನ ಈ ಗುಂಡಾಗಿರಿ ವರ್ತನೆಯಿಂದ ಅಮಾಯಕ ಜನರು ಮತ್ತು ಹೆಣ್ಣುಮಕ್ಕಳು ಭಯ ಭೀತರಾಗಿದ್ದರು.  ಇವನನ್ನು ಹೀಗೆ ಬಿಟ್ಟಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗವುಂಟಾಗುವ ಕೃತ್ಯ ಎಸಗಬಹುದು ಅಂತಾ ಬಲವಾದ ಸಂಶಯ ಬಂದಿದ್ದರಿಂದ ಅವನನ್ನು ಕೂಡಲೇ ನಮ್ಮ ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಾರೆಪ್ಪಾ ತಂದೆ ದಂಡಪ್ಪಾ ಲೋಕನಳ್ಳಿ ವಯಾ:30 ಉ: ಕೂಲಿ ಜಾ:ಬೇಡರ ಸಾ: ಪಗಲಾಪೂರ ಗ್ರಾಮ ಅಂತಾ ಹೇಳಿದನು. ಇವನನ್ನು ಹೀಗೆ ಬಿಟ್ಟಲ್ಲಿ ಅಮಾಯಕ ಜನರಿಗೆ ಹಾಗು ಹೆಣ್ಣುಮಕ್ಕಳಿಗೆ ಹೆದರಿಸಿ ಬೆದರಿಸಿ ಬಯದ ವಾತಾವರಣ ಸೃಷ್ಟಿ ಮಾಡಿ ಕಾನೂನು ಸುವ್ಯವಸ್ಥೆಗೆ ದಕ್ಕೇ ಮಾಡುವ ಸಂಭಂವ ಕಂಡು ಬಂದಿದ್ದರಿಂದ ಸದರಿಯವನೊಂದಿಗೆ ಠಾಣೆಗೆ ಬಂದು 5 ಪಿ.ಎಮ್ ಕ್ಕೆ ಠಾಣೆಗೆ ಬಂದು ಆತನ ವಿರುದ್ದ ಮುಂಜಾಗೃತಾ ಕ್ರಮಕ್ಕಾಗಿ ಯಾದಗಿರಿ ಗ್ರಾಮೀಣ ಪಿ.ಎ.ಆರ್ ನಂ: 03/2020 ಕಲಂ 110 (ಇ) ಮತ್ತು (ಜಿ)  ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 74/2020 ಕಲಂ 279, 304(ಎ) ಐ.ಪಿ.ಸಿ :- ಇಂದು ದಿನಾಂಕ: 08/03/2020 ರಂದು 8.00 ಪಿ.ಎಂ.ಕ್ಕೆ ಶ್ರೀ ಭೀಮರಾಯ ತಂ/ ರಂಗಯ್ಯ ಗುತ್ತೆದಾರ ಸಾ|| ಮಂಗಳೂರು ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶ ಏನೆಂದರೆ, ನನಗೆ ಒಟ್ಟು 3 ಜನ ಗಂಡು ಮಕ್ಕಳು ಮತ್ತು 3 ಜನ ಹೆಣ್ಣು ಮಕ್ಕಳು ಇರುತ್ತಾರೆ. ಸುಮಾರು ಎರಡು ತಿಂಗಳಿಂದ ನಮ್ಮೂರು ಬಿಟ್ಟು ಶಹಾಪುರ ತಾಲೂಕಿನ ಬೀರನೂರು, ಎಂ.ಕೊಳ್ಳೂರ, ಸಾವೂರು ಸೀಮಾಂತರದ ಹೊಲಗಳಲ್ಲಿ ಕುರಿಗಳನ್ನು ಮೇಯಿಸುತ್ತಾ ಬೀರನೂರಿನ ಮಲ್ಲಮ್ಮ ಹಡಪದ ಇವರ ಹೊಲದಲ್ಲಿ ಕುರಿ ಹಟ್ಟಿಯನ್ನು ಮಾಡಿಕೊಂಡು ನಾನು ಮತ್ತು ನಮ್ಮೂರ ಭೀಮಣ್ಣ ತಂ/ ಸಿದ್ದಪ್ಪ ಗೊರಕೇರ, ಸಿದ್ದಪ್ಪ ತಂ/ ನಿಂಗಪ್ಪ ಜಮಾದಾರ, ಮತ್ತು ಹಣಮಂತ ತಂ/ ಯಂಕಪ್ಪ ಕಮತಗಿ ಎಲ್ಲರೂ ಸೇರಿಕೊಂಡು ವಾಸವಾಗಿದ್ದೇವೆ ನನ್ನ ಸಂಗಡ ನನ್ನ ಹೆಂಡತಿ ಸೀತಮ್ಮಳು ಇರುತ್ತಾಳೆ. ನಮ್ಮ ಮಕ್ಕಳು ನಮ್ಮೂರು ಮಂಗಳೂರಿನಲ್ಲಿ ಇರುತ್ತಾರೆ. ಹೀಗಿದ್ದು, ಇಂದು ರವಿವಾರ ಶಾಲೆಗೆ ರಜೆ ಇದ್ದುದರಿಂದ ಮಂಗಳೂರಿನ ಸರಕಾರಿ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗ ನಾಗಾರಾಜನು ನಿನ್ನೆ ದಿನಾಂಕ: 07/03/2020 ರಂದು ಶನಿವಾರ ಶಾಲೆ ಬಿಟ್ಟ ನಂತರ ನಮ್ಮ ಹತ್ತಿರ ಬಂದಿದ್ದನು. ಎಂದಿನಂತೆ ಇಂದು ಬೆಳಿಗ್ಗೆ ನಾನು ಮತ್ತು ನಮ್ಮೂರ ಭೀಮಣ್ಣ ತಂ/ ಸಿದ್ದಪ್ಪ ಗೊರಕೇರ, ಸಿದ್ದಪ್ಪ ತಂ/ ನಿಂಗಪ್ಪ ಜಮಾದಾರ, ಮತ್ತು ಹಣಮಂತ ತಂ/ ಯಂಕಪ್ಪ ಕಮತಗಿ ಎಲ್ಲರೂ ಕೂಡಿ ಕುರಿ ಮೇಯಿಸಿಕೊಂಡು ಬರಲು ಹಟ್ಟಿಯಿಂದ ಹೊರಟಾಗ ನನ್ನ ಮಗ ನಾಗರಾಜನು ನಮ್ಮೊಂದಿಗೆ ಬಂದಿದ್ದನು. ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ಕುರಿ ಮೇಯಿಸಿಕೊಂಡು ಸಾಯಂಕಾಲ 6.00 ಪಿ.ಎಂ. ಸುಮಾರಿಗೆ ಕುರಿಗಳನ್ನು ನಮ್ಮ ಹಟ್ಟಿಯ ಹತ್ತಿರ ಹೊಡೆದುಕೊಂಡು ಬರುತ್ತಿದ್ದಾಗ ಶಹಾಪುರ-ದೇವದುರ್ಗ ಮುಖ್ಯರಸ್ತೆಯಲ್ಲಿನ ಬೀರನೂರು ಗ್ರಾಮದ ಮಲ್ಲಮ್ಮ ಹಡಪದ ಇವರ ಹೊಲದ ಹತ್ತಿರ ರಸ್ತೆ ಕ್ರಾಸ್ ಮಾಡಿಕೊಂಡು ನಮ್ಮ ಕುರಿ ಹಟ್ಟಿಕಡೆಗೆ ಹೊರಟಿದ್ದಾಗ ಮಗ ನಾಗರಾಜನು ಕುರಿಗಳ ಹಿಂದೆ ರಸ್ತೆ ದಾಟುತಿದ್ದನು ಅದೆ ಸಮಯಕ್ಕೆ ದೇವದುರ್ಗ ಕಡೆಯಿಂದ ಒಂದು ಮೋಟರ ಸೈಕಲ್ ಚಾಲಕನು ತನ್ನ ಮೋಟರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಾ ರಸ್ತೆ ದಾಟುತ್ತಿದ್ದ ನನ್ನ ಮಗ ನಾಗರಾಜನಿಗೆ ಡಿಕ್ಕಿಪಡಿಸಿದ ಪರಿಣಾಮ ನಾಗರಾಜನು ನೆಲಕ್ಕೆ ಮುಖ ಮಾಡಿ ರೋಡಿನಲ್ಲಿಬಿದ್ದ ಪರಿಣಾಮ ಅವನ ಬಲಗಣ್ಣಿಗೆ ಬಾರಿ ಒಳಪೆಟ್ಟಾಗಿ ಕಣ್ಣಿಗೆ ಬಾವು ಬಂದಿರುತ್ತದೆ. ಬಾಯಿಯಲ್ಲಿನ ಹಲ್ಲುಗಳು ಮುರಿದಿದ್ದು, ತುಟಿಯ ಬಲಭಾಗದಲ್ಲಿ ಹರಿದು ಬಾಯಿಯಿಂದ ರಕ್ತ ಬಂದಿರುತ್ತದೆ. ಹಾಗು ಎರಡೂ ಕಿವಿಯಿಂದ ರಕ್ತ ಬಂದಿದ್ದು, ನನ್ನ ಮಗನು ಅಪಘಾತದಲ್ಲಿ ಬಾರಿಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಲ್ಲಿಯೇ ಇದ್ದ ಮೋಟರ ಸೈಕಲ್ ಸವಾರನಿಗೆ ಹೆಸರು ವಿಚಾರಿಸಲಾಗಿ ಅವನು ತನ್ನ ಹೆಸರು ಸಾಯಬಣ್ಣ ತಂ/ ಚೌಡಪ್ಪ ಚೌದರಿ ಸಾ||ಸದಬ ತಾ|| ಹುಣಸಗಿ ಅಂತಾ ಹೇಳಿದನು. ನಂತರ ಅಲ್ಲಿಯೇ ಇದ್ದ ಮೋಟರ ಸೈಕಲ ನಂಬರ ನೋಡಲಾಗಿ ಕೆಎ-33 ವಿ-0215 ಅಂತಾ ಇದ್ದು, ಆರೋಪಿತನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ. ನನ್ನ ಮಗನ ಮೃತ ದೇಹವನ್ನು ಶಹಾಪುರ ಸರಕಾರಿ ಆಸ್ಪತ್ರೆಯ ಮರ್ಚರಿ ಕೋಣೆಯಲ್ಲಿ ತಂದು ಹಾಕಿರುತ್ತೇವೆ. ಕಾರಣ ಈ ಅಪಘಾತಕ್ಕೆ ಕಾರಣನಾದ ಹೋಂಡಾ ಶೈನ್ ಮೋಟರ ಸೈಕಲ್.ನಂ.ಕೆಎ-33 ವಿ-0215 ನೇದ್ದರ ಚಾಲಕ ಸಾಯಬಣ್ಣ ತಂ/ ಚೌಡಪ್ಪ ಸಾ|| ಸದಬ ತಾ|| ಹೂಣಸಗಿ ಇವನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 74/2020 ಕಲಂ 279, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.       


ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 13/2020 ಕಲಂ 143,147,323,354,504,506, ಸಂಗಡ 149 ಐಪಿಸಿ :- ಇಂದು ದಿನಾಂಕ 08/03/2020 ರಂದು 4:00 ಪಿ.ಎಂ ಕ್ಕೆ ಶ್ರೀ  ಗದ್ದೆಪ್ಪಗೌಡ ತಂದೆ ಅಬಲೆಪ್ಪಗೌಡ ಗೌಡರ ವ:24 ವರ್ಷ ಉ:ಒಕ್ಕಲುತನ ಜಾ:ಹಿಂದು ಕುರಬರ ಸಾ:ಜೊಗಂಡಬಾವಿ ತಾ:ಹುಣಸಗಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ    ನಾನು ದಿನಾಂಕ 06/03/2020 ರಂದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ನಾನು ನಮ್ಮ ಮಾವನರ ಊರಾದ ನೆರಬೆಂಚಿಯಲ್ಲಿ ಇದ್ದಾಗ ನಮ್ಮ  ತಂಗಿಯಾದ ಸಿದ್ದಮ್ಮ ತಂದೆ ಅಬ್ಲೆಪ್ಪಗೌಡ ಗೌಡರ ಇವಳು ಪೋನ ಮಾಡಿ ತಿಳಿಸಿದ್ದೆನೆಂದರೆ ನಮ್ಮ ಅವ್ವ ದೇವಮ್ಮ ಗಂಡ ಅಬಲೆಪ್ಪಗೌಡ ಗೌಡರ ವ:45 ವರ್ಷ ಹಾಗೂ ನಮ್ಮ ದೊಡ್ಡವ್ವ ಶಶಿಕಲಾ ರವರು ಕಟ್ಟಿಗೆ ವಿಷಯದಲ್ಲಿ ಜಗಳಮಾಡಿದ್ದು ನಮ್ಮ ಅವ್ವನಿಗೆ ಶಿಶಿಕಲಾ ಹಾಗೂ ಅವರ ಮನೆಯವರುಕೂಡಿಕೊಂಡು ಹೊಡೆದಿರುತ್ತಾರೆ ಅಂತಾ ತಿಳಿಸಿದಮೇರೆಗೆ ನಾನು ಕೂಡಲೇ ನಮ್ಮ ಊರಾದ ಜೊಗಂಡಬಾವಿಗೆ ಬಂದು ನಮ್ಮ ತಾಯಿಯನ್ನು ಉಪಚಾರ ಕುರಿತು ಲಿಂಗಸೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ದಿನಾಂಕ 07/03/2020 ರಂದು ನಾರಾಯಣಪೂರ ಪೊಲೀಸ್ ಠಾಣೆಯ ಬಾಬು  ಎ.ಎಸ್.ಐ ರವರು ಲಿಂಗಸೂರ ಆಸ್ಪತ್ರೆಗೆ ಬಂದು ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ನಮ್ಮ ತಾಯಿಯವರಿಗೆ ವಿಚಾರ ಮಾಡಿದ್ದು ನಮ್ಮ ತಾಯಿಯವರು ನಾರಾಯಣಪೂರ ಪೊಲೀಸ್ ಠಾಣೆಯ ಬಾಬು ಎ.ಎಸ್.ಐ ರವರ ಮುಂದೆ ತಿಳಿಸಿದ್ದೆನೆಂದರೆ ನಾವು ಹಾಗೂ ಶಿಶಿಕಲಾ ರವರು ಅಕ್ಕ ತಂಗಿಯಾಗಬೇಕಾಗಿದ್ದು ನಾವು ಮನೆಯಲ್ಲಿ ವಿಚಾರ ಮಾಡಿಕೊಂಡು ನಂತರ ಠಾಣೆಗೆ ಬಂದು ಈ ಬಗ್ಗೆ 

ಅಜರ್ಿನೀಡುವದಾಗಿ ಹೇಳಿದ್ದು ಇರುತ್ತದೆ. ಇಂದು ನಮ್ಮ ತಾಯಿಯವರು ನಮ್ಮ ಮನೆಯವರೊಂದಿಗೆ ವಿಚಾರ ಮಾಡಿದ್ದು ತನಗೆ ಹೊಡೆಬಡೆ ಮಾಡಿದವರ ಮೇಲೆ ಪಿಯರ್ಾದಿ ಸಲ್ಲಿಸಬೆಕು ನೀನು ನಾರಾಯಣಪೂರ ಪೊಲೀಸ್ ಠಾಣೆಗೆ ಹೋಗಿ ನನಗೆ ಹೊಡೆಬಡೆ ಮಾಡಿದವರ ವಿರುದ್ದ ಪಿಯರ್ಾದಿ ಕೊಟ್ಟು ಬಾ ಅಂತಾ ಹೇಳಿ ನನಗೆ ಜಗಳ ನಡೆದ ಬಗ್ಗೆ ಹೇಳಿದ್ದು ನಮ್ಮ ತಾಯಿಯವರು ಜಗಳ ನಡೆದ ಬಗ್ಗೆ ತಿಳಿಸಿದ್ದೆನೆಂದರೆ ನಾನು ದಿನಾಂಕ 06-03-2020 ರಂದು ಸಾಯಂಕಾಲ 5:00 ಗಂಟೆಯ ಸುಮಾರಿಗೆ ನಮ್ಮ ಹೊಲಕ್ಕೆ ಕೆಲಸಕ್ಕೆ ಹೋಗಿ ಮರಳಿ ಬರುತ್ತಿರುವಾಗ ಜೊಗಂಡಬಾವಿ ಸೀಮಾಂತರದ ಹೊಲ ಸವರ್ೆ ನಂ 8 ರಲ್ಲಿಯ ನಮ್ಮ ತಂಗಿ ರೇಣುಕಮ್ಮ ರವರ ಹೊಲದ ಬದುವಿನಲ್ಲಿ ನಮ್ಮೂರ ಬಸಮ್ಮ ಗಂಡ ನಿಂಗಪ್ಪ ಹೂಗಾರ ಇವರು ಕಟ್ಟಿಗೆ ಮಾಡುತ್ತಿದ್ದಾಗ ನಾನು ಬಸಮ್ಮ ರವರಿಗೆ ನಮ್ಮ ತಂಗಿಯ ಹೊಲದಲ್ಲಿ ಯಾಕೆ ಕಟ್ಟಿಗೆ ಮಾಡುತ್ತಿದ್ದಿಯಾ ಅಂತಾ ಕೆಳಿದೇನು ಆಗ ತಮ್ಮ ಹೊಟೆಲ್ದಲ್ಲಿ ಕೆಲಸ ಮಾಡುತ್ತಿದ್ದ ಶಶಿಕಲಾ ಗಂಡ ಬನ್ನಪ್ಪ ಪೂಜಾರಿ ಇವರು ನನಗೆ ಬಸಮ್ಮ ರವರು ನಿಮ್ಮ ಹೊಲದಲ್ಲಿ ಕಟ್ಟಿಗೆ ಮಾಡುತ್ತಿದ್ದಾರೇನು ಅವರು ರೇಣುಕಾ ಗಂಡ ಬಸವರಾಜ ರವರ ಹೊಲದಲ್ಲಿ ಕಟ್ಟಿಗೆ ಮಾಡುತ್ತಿದ್ದಾರೆ ಅದಕ್ಕೆ ನೀನಗೇನು ತ್ರಾಸ ಆಗುತ್ತಿದೆ ಅಂತಾ ಅಂದಳು ಅದಕ್ಕೆ ನಾನು ಅದು ನಮ್ಮ ತಂಗಿಯ ಹೊಲವಿರುತ್ತದೆ ನಾನು ಕೇಳುತ್ತೇನೆ ಇದರಲ್ಲಿ ನಿನ್ನದೇನು ಕೆಲಸ ಅಂತಾ ನಾನು ಶಶಿಕಲಾಗೆ ಅಂದಾಗ 1). ಶಶಿಕಲಾ ಇವಳು ಬೋಸುಡಿ ನನಗೆ ಎದುರು ಮಾತನಾಡುತ್ತಿಯಾ ಅಂತಾ ಬಂದು ನನ್ನೊಂದಿಗೆ ಜಗಳಕ್ಕೆ ಇಳಿದು ನನ್ನೊಂದಿಗೆ ಜೋರಾಗಿ ಜಗಳ ಮಾಡುತ್ತಾ ನನ್ನ ತಲೆಯಲ್ಲಿಯ ಕೂದಲನ್ನು ಹಿಡಿದು ನನಗೆ ಕೈಯಿಂದ ಹೊಡೆಯತೊಡಗಿದಳು ಶಶಿಕಲಾ ನನ್ನೊಂದಿಗೆ ಜಗಳ ಮಾಡುವ ದ್ವನಿಕೇಳಿ ಶಶಿಕಲಾ ಇವರ ಮನೆಯರಾದ 2). ಬನ್ನಪ್ಪ ಜೆಟ್ಟೆಪ್ಪ ಪೂಜಾರಿ, 3). ದೇವಮ್ಮ ಗಂಡ ಚಿದಾನಂದ ಗೌಡರ, 4). ಶರಣಬಸವ ತಂದೆ ಸಿದ್ದಪ್ಪ ಪೂಜಾರಿ, 5). ಹುಲಗಮ್ಮ ಗಂಡ ಶರಣಬಸವ ಪೂಜಾರಿ, 6). ಪ್ರಸನ್ನ ತಂದೆ ಬನ್ನಪ್ಪ ಪೂಜಾರಿ, 7). ಸುನೀಲ ತಂದೆ ಬನ್ನಪ್ಪ ಪೂಜಾರಿ, 8). ಲಕ್ಷ್ಮಿಂಬಾಯಿ ಗಂಡ ಚಿದಾನಂದ ಗೌಡರ, 9). ಸಾಬವ್ವ ಗಂಡ ರಮೇಶ ಯರಝೇರಿ, 10). ರಮೇಶ ಯರಝೇರಿ, 11). ದೇವೆಕೆಮ್ಮ ಗಂಡ ಸಿದ್ದಪ್ಪ ಪೂಜಾರಿ, 12). ಸೋಮನಾಥ ತಂದೆ ಸಿದ್ದಪ್ಪ ಪೂಜಾರಿ, 13). ನಿಂಗಮ್ಮ ಗಂಡ ಸೋಮನಾಥ ಪೂಜಾರಿ, 14). ಶಿವಕುಮಾರಿ ಗಂಡ ಪ್ರಸನ್ನ  ಪೂಜಾರಿ ಸಾ: ಎಲ್ಲರೂ ಜೊಗಂಡಬಾವಿ ರವರು ಕೂಡಿಕೊಂಡು ಅಕ್ರಮ ಕೂಟ ರಚಿಸಿಕೊಂಡು ಬಂದು ಅದರಲ್ಲಿಯ ಸಾಬಮ್ಮ ಇವಳು ನನ್ನ ತಾಯಿಗೆ ಪಕ್ಕಡಿಗೆ ಕೈಯಿಂದ ಮುಷ್ಟಿಮಾಡಿ ಗುದ್ದಿದ್ದು ಹಾಗೂ ಸಾಬವ್ವ ಗಂಡ ರಮೇಶ ಯರಝೇರಿ ಇವಳು ನನಗೆ ಕೈಯಿಂದ ಕಪಾಳಕ್ಕೆ ಹೊಡೆದಿದ್ದು ಹಾಗೂ ರಮೇಶ ಯರಝೇರಿ ಈತನು ನನ್ನ ಸೀರೆಹಿಡಿದು ಜಗ್ಗಾಡಿ ನನಗೆ ಅವಮಾನ ಪಡಿಸಿದ್ದು ಉಳಿದವರು ಈಕೆಯ ಸೊಕ್ಕು ಬಹಳ ಆಗಿದೆ ಈಕೆಯನ್ನು ಬಿಡಬ್ಯಾಡರಿ ಇಲ್ಲಿಯೇ ಹೊಡೆದು ಖಲಾಸ ಮಾಡಿ ಬಿಡರಿ ಅಂತಾ ಜೀವದ ಬೆದರಿಕೆ ಹಾಕಿದರು ಆಗ ನಾನು ಚಿರಾಡಹತ್ತಿದ್ದು ಆಗ ಅಲ್ಲಿಯೇ ಇದ್ದ ಪಿಡ್ಡಪ್ಪಗೌಡ ತಂದೆ ಗದ್ದೆಪ್ಪಗೌಡ ಗೌಡರ, ಮಹಾದೇವಿ ಗಂಡ ಬಸಪ್ಪ ಗಡ್ಡಿ, ಅಮಾತೆಪ್ಪ ತಂದೆ ಅಂಬ್ರಪ್ಪ ಹುಡೇದ ರವರು ಬಂದು ಜಗಳ ಬಿಡಿಸಿದ್ದು ಹೋಗುವಾಗ ಅವರು ನನಗೆ ಇವತ್ತು ಇವರು ಬಂದು ಜಗಳ ಬಿಡಿಸಿದರು ಅಂತಾ ನೀನು ಉಳಿದಿರುವೆ ಇಲ್ಲದಿದ್ದರೆ ನಿನಗ ಇವತ್ತು ಇಲ್ಲಿಯೇ ಖಲಾಸ ಮಾಡಿ ಬಿಡುತ್ತಿದ್ದೆವು ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ತಿಳಿಸಿದರು ಆದ್ದರಿಂದ ನಮ್ಮ ತಾಯಿಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು, ಸೀರೆ ಹಿಡಿದು ಎಳೆದಾಡಿ ಅವಮಾನ ಪಡಿಸಿ ಜೀವದ ಬೆದರಿಕೆ ಹಾಕಿದ ಮೆಲೆ ನಮೂದಿಸಿದ 14 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 13/2020 ಕಲಂ 143,147,323,354,504,506, ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
  
ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 14/2020 ಕಲಂ 143,147,323,354,504,506, ಸಂಗಡ 149 ಐಪಿಸಿ :- ಇಂದು ದಿನಾಂಕ 08/03/2020 ರಂದು 3:30 ಪಿ.ಎಂಕ್ಕೆ ಶ್ರೀಮತಿ ಶಶಿಕಲಾ ಗಂಡ ಬನ್ನೆಪ್ಪ ಪೂಜಾರಿ ಸಾ: ಜೊಗಂಡಬಾವಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪುಮಾಡಿಸಿದ ಪಿಯಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೆನಂದರೆ ನಾನು ಶಶಿಕಲಾ ಗಂಡ ಬನ್ನೆಪ್ಪ ಪೂಜಾರಿ ಇದ್ದು ತಮ್ಮಲ್ಲಿ ಪಿಯರ್ಾದಿ ಸಲ್ಲಿಸುವದೆನೆಂದರೆ ನಾನು ದಿನಾಂಕ ದಿನಾಂಕ 06/03/2020 ರಂದು ಸಾಯಂಕಾಲ 4:15 ಗಂಟೆಯ ಸುಮಾರಿಗೆ ನಾನು ಜೊಗಂಡ ಬಾವಿ ಸೀಮಾಂತರದಲ್ಲಿ ಇರುವ ನಮ್ಮ ತಂಗಿ ರೇಣುಕಾ ಇವರ ಹೊಲದಲ್ಲಿ ಕಟ್ಟಿಗೆ ಮಾಡುತ್ತಿದ್ದಾಗ ನಮ್ಮ ತಂಗಿಯಾದ ದೇವಮ್ಮ ಇವರು ನನಗೆ ಬೋಸುಡಿ ಇಲ್ಲಿಯಾಕೆ ಕಟ್ಟಿಗೆ ಮಾಡಕತ್ತಿದಿ ನೀನು ನಮ್ಮ ಮೈದುನನ್ನು ಕಟ್ಟಿಕೊಂಡಿಯಾ ಇಲ್ಲ ಇಟ್ಟುಕೊಂಡಿಯಾ ಅಂತಾ ಅವಾಚ್ಯವಾಗಿ ಬೈಯಹತ್ತಿದಳು ಆಗ ನಾನು ದೇವಮ್ಮಗಳಿಗೆ ಬಸಪ್ಪನ ಮಗ ದೇವರಾಜ ಈತನು ಚಿಕ್ಕಮ್ಮ ನಾನು ಜೆ.ಸಿ.ಬಿ ಇಂದ ಕಟ್ಟಿಗೆಯನ್ನು ಕಿತ್ತಿಸಿದ್ದೆನೆ ಕಟ್ಟಿಗೆಯನ್ನು ಮಾಡಿಕೊಂಡು ಉಳಿದ ಚುದುರು ಕಟ್ಟಿಗೆಯನ್ನು ಸುಟ್ಟುಬಿಡಿರಿ ಅಂತಾ ಹೇಳಿದ್ದಕ್ಕೆ  ನಾನು ಇಲ್ಲಿ ಕಟ್ಟಿಗೆಯನ್ನು ಮಾಡುತ್ತಿದ್ದೆನೆ ನೀನ್ಯಾಕೆ ಒದರಾಡುತ್ತಿಯಾ ಬೇಕಾದರೆ ನೀನು ಕಟ್ಟಿಗೆ ಮಾಡಿಕೊಂಡು ಹೋಗು ಅಂತಾ ಅಂದೇನು ಅದಕ್ಕೆ ದೇವಮ್ಮ ಇವಳು ಬೋಸುಡಿ ನಿನ್ನೆ ಹಾಗೆ ನಾನು ಮೂರು ಬಿಟ್ಟವಳಿಲ್ಲ ನೀನು ತಂಗಿಯ ಹೊಲವನ್ನು ನುಂಗಾಕ ನಿಂತಿದಿ ಅಂತಾ ಅಂದಳು ಅದಕ್ಕೆ ನಾನು ದೇವಮ್ಮಳಿಗೆ ದೇವಮ್ಮ ಬಾಯಿ ಉದ್ದ ಬಿಡಾಕ ಹತ್ತಿದಿ ನಾಲಿಗಿ ಹಿಡಿತದಲ್ಲಿ ಇಟ್ಟುಕೊಂಡು ಮಾತನಾಡು ಅಂತಾ ಅಂದೇನು ಅದಕ್ಕೆ ದೇವಮ್ಮ ಇವಳು ನನಗೆ ನಾಲಿಗೆ ಹಿಡಿತದಲ್ಲಿ ಇಟ್ಟುಕೊ ಅಂತಾ ಅಂತಿಯಾ ಬೊಸುಡಿ ಸೂಳಿ ಅಂತಾ ನನ್ನೊಂದಿಗೆ ಜೋರು ಮಾತಿನಲ್ಲಿ ಜಗಳ ಮಾಡುತ್ತಾ ನನ್ನ ತೆಕ್ಕೆಗೆ ಬಿದ್ದು ನನ್ನ ಕೂದಲನ್ನು ಹಿಡಿದು ನನಗೆ ಹೊಡೆಯತೊಡಗಿದಳು ಆಗ ದೇವಮ್ಮರವರು ಬಾಯಿ ಮಾಡುವ ದ್ವನಿ ಕೇಳಿ ಅವರ ಮನೆಯವರು ಮತ್ತು ಸಂಬಂದಿಕರಾದ 2) ಸಿದ್ದಮ್ಮ ತಂದೆ ಅಬಲೆಪ್ಪ ಗೌಡರ 3)ಗದ್ದೆಪ್ಪಗೌಡ ತಂದೆ ಅಬಲೆಪ್ಪಗೌಡ ಗೌಡರ 4) ಗಂಗವ್ವ ಗಂಡ ಸಂಗಪ್ಪ ಗುರಿಕಾರ 

5) ಸಂಗಪ್ಪ ತಂದೆ ಸಿದ್ದಪ್ಪ ಗುರಿಕಾರ 6) ದ್ಯಾಮಣ್ಣ ತಂದೆ ಸಂಗಪ್ಪ ಗುರಿಕಾರ 7)ಸೋಮನಾಥ ತಂದೆ ಸಂಗಪ್ಪ ಗುರಿಕಾರ 8) ಗುರವ್ವ ಗಂಡ ದ್ಯಾಮಣ್ಣ ಗುರಿಕಾರ 9) ನಿಂಗವ್ವ ಗಂಡ ಸಂಗಪ್ಪ ಅಳ್ಳೆಪ್ಪನವರ 10) ಶರಣಪ್ಪ ತಂದೆ ಸಂಗಪ್ಪ ಅಳ್ಳೆಪ್ಪನವರ 11)ನಾಗಪ್ಪ ತಂದೆ ಸಂಗಪ್ಪ ಅಳ್ಳೆಪ್ಪನವರ 12) ಸಾಬಣ್ಣ ತಂದೆ ಗುಂಡಪ್ಪ ಧರೆಣ್ಣವರ 13) ಹುಲಗವ್ವ ಗಂಡ ಸಾಬಣ್ಣ ಧರೆಣ್ಣವರ 14) ಗುಂಡಪ್ಪ ತಂದೆ ಸಾಬಣ್ಣ ಧರೆಣ್ಣವರ 15) ರೇವಣಸಿದ್ದಪ್ಪ ತಂದೆ ಸಾಬಣ್ಣ ಧರೆಣ್ಣವರ  ರವರು ಗುಂಪುಕಟ್ಟಿಕೊಂಡು ನಾವಿದ್ದಲ್ಲಿಗೆ ಬಂದು ದೇವಮ್ಮ ರವರ ಮಗಳಾದ ಸಿದ್ದಮ ಇವಳು ನನಗೆ ನಮ್ಮ ತಾಯಿಯೊಂದಿಗೆ ಜಗಳ ಮಾಡಕತ್ತಿದ್ದಿಯಾ ಬೋಸುಡಿ ಅಂತಾ ಬೈದು ಕೈಯಿಂದ ಮುಷ್ಟಿಮಾಡಿ ನನ್ನ ಹೊಟ್ಟೆಗೆ ಹಾಗೂ ಬೆನ್ನಿಗೆ ಗುದ್ದಿದ್ದು ಹಾಗೂ ದೇವಮ್ಮ ರವರ ಮಗನಾದ ಗದ್ದೆಪ್ಪಗೌಡ ಇವನು ನನಗೆ ಕೈಯಿಂದ ಕಪಾಳಕ್ಕೆ ಹೊಡೆದು ನನ್ನ ಸಿರೇ ಹಿಡಿದು ಎಳೆದಾಡಿ ನನಗೆ ಅವಮಾನ ಪಡಿಸಿದ್ದು ಆಗ ಉಳಿದವರು ಈ ಸೂಳಿದು ಬಹಳ ಆಗಿದೆ ಇವಳನ್ನು ಇಲ್ಲಿಯೇ ಕಲಾಸ ಮಾಡಿಬಿಡರಿ ಅಂತಾ ಅನ್ನುತ್ತಿದ್ದರು ಆಗ ಅವರು ಹೊಡೆಯುವದನ್ನು ತಾಳಲಾರದೆ ನಾನು ಚೀರಾಡಹತ್ತಿದಾಗ ಹೊಲದಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಂಗಿಯಾದ ದೇವಮ್ಮ ಗಂಡ ಚಿದಾನಂದ ಗೌಡರ , ಸಾಬವ್ವ ಗಂಡ ರಮೇಶ ಯರಝೇರಿ, ಮಹಾದೇವಿ ಗಂಡ ಬಸಪ್ಪ ಗಡ್ಡಿ, ಬಸಮ್ಮ ಗಂಡ ನಿಂಗಪ್ಪ ಹೂಗಾರ, ಚಂದಪ್ಪ ಹೂಗಾರ ರವರು ಬಂದು ಬಿಡಿಸಿದರು ಹೋಗುವಾಗ ಅವರು ಬೋಸುಡಿ ಇವತ್ತು ಇವರು ಬಂದರು ಅಂತಾ ನಿನ್ನ ಜೀವ ಉಳದಿದೆ ಇಲ್ಲದಿದ್ದರೆ ಇವತ್ತು ನಿನಗೆ ಇಲ್ಲಿಯೇ ಖಲಾಸ ಮಾಡಿ ಬಿಡುತ್ತಿದ್ದೇವು ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ. ನಂತರ ನಾನು ಅವರು ಹೊಡೆದ ಗಾಯಗಳಿಂದ ನನಗೆ ಬಹಳ ತ್ರಾಸ ಆಗುತ್ತಿದ್ದರಿಂದ ನಾನು ಉಪಚಾರ ಕುರಿತು ಲಿಂಗಸೂರ ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆ ಯಾಗಿದ್ದು ದಿನಾಂಕ  ದಿನಾಂಕ 07/03/2020 ರಂದು ನಾರಾಯಣಪೂರ ಪೊಲೀಸ್ ಠಾಣೆಯ ಬಾಬು  ಎ.ಎಸ್.ಐ ರವರು ಲಿಂಗಸೂರ ಆಸ್ಪತ್ರೆಗೆ ಬಂದು ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ನನಗೆ ವಿಚಾರ ಮಾಡಿದ್ದು ನಾನು ನಾರಾಯಣಪೂರ ಪೊಲೀಸ್ ಠಾಣೆಯ ಬಾಬು ಎ.ಎಸ್.ಐ ರವರ ಮುಂದೆ ತಿಳಿಸಿದ್ದೆನೆಂದರೆ ನಾವು ಹಾಗೂ ದೇವಮ್ಮ ರವರು ಅಕ್ಕ ತಂಗಿಯಾಗಬೇಕಾಗಿದ್ದು ನಾವು ಮನೆಯಲ್ಲಿ ವಿಚಾರ ಮಾಡಿಕೊಂಡು ನಂತರ ಠಾಣೆಗೆ ಬಂದು ಈ ಬಗ್ಗೆ ಅಜರ್ಿನೀಡುವದಾಗಿ ಹೇಳಿದ್ದು ಇರುತ್ತದೆ. ಇಂದು ನಾನು ನಮ್ಮ ಮನೆಯವರೊಂದಿಗೆ ವಿಚಾರ ಮಾಡಿ ಠಾಣೆಗೆ ಬಂದು  ನನಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು, ಸೀರೆ ಹಿಡಿದು ಎಳೆದಾಡಿ ಅವಮಾನ ಪಡಿಸಿ ಜೀವದ ಬೆದರಿಕೆ ಹಾಕಿದ ಮೆಲೆ ನಮೂದಿಸಿದ 15 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 14/2020 ಕಲಂ 143, 147, 323, 354, 504, 506  ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 20/2020 ಕಲಂ, 87 ಕೆ.ಪಿ ಆ್ಯಕ್ಟ್:- ದಿನಾಂಕ 08/03/2020 ರಂದು 10.15 ಪಿಎಂ ಕ್ಕೆ ಶ್ರೀ ಸೊಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ರವರ ಕೊಡಮನಳ್ಳಿ ಗ್ರಾಮದಲ್ಲಿ ಆರೋಪಿತರೆಲ್ಲರೂ ಕೊಡಂನಳ್ಳಿ ಗ್ರಾಮದ ಮಸೂತಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 08 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 5420=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು 08.30 ಪಿಎಮ್ ದಿಂದ 09.30 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 10.15 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರಪಡಿಸಿದ್ದರಿಂದ ಠಾಣೆ ಗುನ್ನೆ ನಂ 20/2020 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ                                        
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 05/2019 ಕಲಂ. 174  ಸಿಆರ್ಪಿಸಿ :- ಇಂದು ದಿನಾಂಕ:08-03-2020 ರಂದುಮುಂಜಾನೆ 7 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀಮತಿ ಹಣಮಂತಿಗಂಡತಿರುಮಣ್ಣ ಕವಲಿ ವ:48 ವರ್ಷ ಉ:ಮನೆಗೆಲಸಜಾ:ಬೇಡರ ಸಾ:ಕುಂಬಾರಪೇಟತಾ:ಸುರಪೂರಇವರುಪಿಯರ್ಾದಿ  ನಿಡಿದ್ದು ಸಾರಾಂಶವೆನೆಂದರೆ ನನಗೆ 3 ಜನ ಹೆಣ್ಣು ಮಕ್ಕಳು 2 ಜನಗಂಡು ಮಕ್ಕಳಿದ್ದು ಅದರಲ್ಲಿ ಹಿರಿಯ ಮಗಳಿಗೆ ಮದುವೆ ಮಾಡಿಕೊಟ್ಟಿದ್ದುಇರುತ್ತದೆ. ನನ್ನಗಂಡನಅಣ್ಣತಮ್ಮಂದಿರು 4 ಜನರಿದ್ದುಎಲ್ಲರೂ ಬೇರೆ ಬೇರೆ ಮನೆ ಮಾಡಿಕೊಂಡಿರುತ್ತವೆ. ಆದರೆ ಹಿರಿಯರ ಆಸ್ತಿ ಇನ್ನು ಪಾಲು ಮಾಡಿಕೊಂಡಿರುವದಿಲ್ಲ ಸವರ್ೆ ನಂ. 28 ರಲ್ಲಿ 3 ಎಕರೆ 09 ಗುಂಟೆಜಮೀನು ನಾವೆ ಸಾಗುವಳಿಮಾಡಿಕೊಂಡಿರುತ್ತೆ. ಅದರಲ್ಲಿ ಹತ್ತಿ ಬೆಳೆ ಹಾಕಿರುತ್ತೆವೆ. ಮತ್ತು 1 ಎಕರೆಜಮೀನುಕರಿದಿ ಮಾಡಿದ್ದುಅದರಲ್ಲಿ ಹತ್ತಿ ಬೆಳೆ ಹಾಕಿರುತ್ತೆವೆ. ಮತ್ತು 3 ಎಕರೆಜಮೀನು ಲೀಜಿಗೆ ಹಾಕಿರುತ್ತೆವೆ. ಅದರಲ್ಲಿ ಭತ್ತ ಹಾಕಿರುತ್ತೆವೆ. 2 ವರ್ಷಗಳ ಹಿಂದೆ ವ್ಯವಸಾಯಕ್ಕಾಗಿ ಮತ್ತು ಸಂಸಾರಕ್ಕಾಗಿ 4 ಲಕ್ಷರೂಪಾಯಿಕೈಗಡ ಸಾಲ ಮಾಡಿದ್ದು ಮಾಡಿರುತ್ತೆವೆ. ಮತ್ತು ಈ ವರ್ಷ 1 ಲಕ್ಷರೂಪಾಯಿಕೈಗಡ ಸಾಲ ಮಾಡಿರುತ್ತಾರೆ. ಆದರೆ ಸಂಸಾರಅಡಚಣೆಗೆ ಸಾಳ ತಿರಿಸಲುಆಗಿರುವದಿಲ್ಲಿ. ನನ್ನಗಂಡ ದಿನಾಲು ಸಾಳದ ಬಗ್ಗೆ ಚಿಂತೆ ಮಾಡುತ್ತಿದ್ದನ್ನುಅದಕ್ಕೆ ಮನೆಯಲ್ಲಿಎಲ್ಲರೂ ಬುದ್ದಿ ಮಾತು ಹೇಳಿರುತ್ತೆವೆ. ಆದರೂ ನಿನ್ನೆ ದಿನಾಂಕ:07/03/2020 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ಮನೆಯಲ್ಲಿದ್ದ ಬೆಳೆಗೆ ಹೊಡೆಯುವಕ್ರೀಮಿನಾಷಕಔಷದ ಸೇವಿಸಿ ಒದ್ದಾಡುತ್ತಿದ್ದನು. ಯಾಕೆಏನಾಗಿದೆಎಂದು ವಿಚಾರಿಸಿದಾಗ ಸಾಲ ಬಾಧೆ ತಾಳದೇ ಜಿಗುಪ್ಸೆಗೊಂಡುಕ್ರೀಮಿನಾಷಕಔಷದ ಸೇವಿಸಿದೆನೆ. ಅಂತ ತಿಳಿಸಿದನು ಆಗ ನಾನು ಮಗ ಮಂಜುನಾಥ ಮೈದುನರುಕೃಷ್ಣಪ್ಪ, ಹಣಮಂತಎಲ್ಲರೂಕೂಡಿ ಸಕರ್ಾರಿಆಸ್ಪತ್ರೆ ಸುರಪೂರಕ್ಕೆಉಪಚಾರಕುರಿತುಆಟೋದಲ್ಲಿಕರೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ 9  ಗಂಟೆ ಸುಮಾರಿಗೆ ಮೃಪಟ್ಟಿರುತ್ತಾನೆ. ನನ್ನಗಂಡನ ಸಾವಿನಲ್ಲಿಯಾರ ಮೇಲೆ ಸಂಶಯಇರುವದಿಲ್ಲ. ನನ್ನಗಂಡ ಸಾಳ ಬಾಧೆ ತಾಳದೆ ಕ್ರೀಮಿನಾಷಕಔಷದ ಸೇವಿಸಿ ಮೃತಪಟ್ಟಿರುತ್ತಾನೆ ಮುಂದಿನ ಕಾನೂನು ಕ್ರಮಜರುಗಿಸಲು ಪಿಯರ್ಾದಿ ನೀಡಿದ್ದರಿಂದಠಾಣಾ
ನಂಬರ 05/2020 ಕಲಂ. 174 ಸಿಆರ್ಪಿಸಿ ನೇದ್ದರಡಿಯಲ್ಲಿ ಪ್ರಕರಣದದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!