ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06/03/2020

By blogger on ಶನಿವಾರ, ಮಾರ್ಚ್ 7, 2020

                           
                                                                 


                              ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06/03/2020
ಯದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 25/2020 ಕಲಂ 78(3) ಕೆ.ಪಿ ಎಕ್ಟ್ 1963:-ಇಂದು ದಿನಾಂಕ;06/03/2020 ರಂದು 2-10 ಪಿಎಂಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ.06/03/2020 ರಂದು 1-00 ಪಿಎಂಕ್ಕೆ ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹತ್ತಿಕುಣಿ ಕ್ರಾಸಿನಲ್ಲಿ ಯಾರೋ ಮೂರು ಜನರು ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/-ರೂ ಗೆ 80/-ರೂ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಪಡೆದುಕೊಂಡು ಸದರಿ ಪ್ರಕರಣವೂ ಅಸಂಜ್ಞೇಯ ಅಪರಾದವಾಗುತ್ತಿದ್ದರಿಂದ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದು ಇರುತ್ತದೆ. ಈ ಬಗ್ಗೆ ನೀವು ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.25/2020 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ವಡಗೆರಾ ಪೊಲೀಸ ಠಾಣೆ ಗುನ್ನೆ ನಂ:- 23/2020 ಕಲಂ: 379 ಐಪಿಸಿ:- ಇಂದು ದಿನಾಂಕ: 06/03/2020 ರಂದು 9-30 ಎಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಒಂದು ಮರಳು ತುಂಬಿದ ಟಿಪ್ಪರ ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ: 06/03/2020 ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ನಾನು ಪೊಲೀಸ್ ಠಾಣೆಯಲ್ಲಿದ್ದಾಗ ನನಗೆ ಗಡ್ಡೆಸೂಗೂರು ಸೀಮಾಂತರದಲ್ಲಿ ಭೀಮಾ ನದಿ ದಡದಿಂದ ಕಳ್ಳತನದಿಂದ ಮರಳನ್ನು ತುಂಬಿ ಟಿಪ್ಪರನಲ್ಲಿ ಸಾಗಿಸುತ್ತಿರುವುದಾಗಿ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಮತ್ತು ನಮ್ಮ ಸಿಬ್ಬಂದಿಯವರಾದ 1) ಪ್ರಕಾಶ ಹೆಚ್.ಸಿ 18 (ಪಿ) ಮತ್ತು 2) ಮಹೇಂದ್ರ ಪಿಸಿ 254 ರವರೊಂದಿಗೆ ಸಕರ್ಾರಿ ಜೀಪ ನಂ. ಕೆಎ-33-ಜಿ-115 ನೆದ್ದರಲ್ಲಿ ಹೊರಟು 7-30 ಎ.ಎಮ್ ಸುಮಾರಿಗೆ ಯಾದಗಿರಿ-ವಡಗೇರಾ ಮೇನ ರೋಡ ಗಡ್ಡೆಸೂಗೂರು ಕ್ರಾಸನಲ್ಲಿ ಹೋದಾಗ ಗಡ್ಡೆಸೂಗೂರು ಗ್ರಾಮದ ಒಳಗಡೆಯಿಂದ ಒಂದು ಟಿಪ್ಪರ ಮರಳು ತುಂಬಿಕೊಂಡು ಬರುವುದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರು ಸದರಿ ಟಿಪ್ಪರ ನಿಲ್ಲಿಸಲು ಹೋದಾಗ ಟಿಪ್ಪರ ಚಾಲಕನು ಟಿಪ್ಪರ ಅನ್ನು ಅಲ್ಲಿಯೇ ರಸ್ತೆ ಪಕ್ಕದಲ್ಲಿ ನಿಲ್ಲಿಸಿ, ಓಡಿ ಹೋದನು. ಅವನ ಹಿಂದೆ ಬೆನ್ನತ್ತಿದರೂ ಸಿಗಲಿಲ್ಲ. ಸದರಿ ಟಿಪ್ಪರ ಚಾಲಕನಿಗೆ ನೋಡಿದಲ್ಲಿ ಗುರುತಿಸುತ್ತೇನೆ. ಟಿಪ್ಪರ ನಂಬರ ನೋಡಲಾಗಿ ನಂ. ಕೆಎ 32 ಡಿ 2138 ಇರುತ್ತದೆ. ಸದರಿ ಟಿಪ್ಪರ ಮರಳು ತುಂಬಿದ್ದು, ಇದರ ಚಾಲಕನು ಅಕ್ರಮವಾಗಿ ಮತ್ತು ಕಳ್ಳತನದಿಂದ ಸರಕಾರಕ್ಕೆ ಯಾವುದೇ ರಾಜಧನ ಪಾವತಿಸದೆ ಮರಳು ಸಾಗಾಣಿಕೆ ಮಾಡುತ್ತಿದ್ದು, ನಾವು ದಾಳಿ ಮಾಡಿದಾಗ ಟಿಪ್ಪರ ಚಾಲಕನು ತಮ್ಮ ಹತ್ತಿರ ರಾಯಲ್ಟಿ ವೈಗೆರೆ ದಾಖಲಾತಿ ಇಲ್ಲದ ಕಾರಣ ಟಿಪ್ಪರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕರ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಕುರಿತು ನಿಮಗೆ ದೂರು ನಿಡಿದ್ದು, ಕಾನೂನು ಪ್ರಕಾರ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 23/2020 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 

ವಡಗೆರಾ ಪೊಲೀಸ ಠಾಣೆ ಗುನ್ನೆ ನಂ:- 24/2020 ಕಲಂ: 379,511 ಐಪಿಸಿ:- ಇಂದು ದಿನಾಂಕ: 06/03/2020 ರಂದು 5-30 ಪಿಎಮ್ ಕ್ಕೆ ಶ್ರೀ ಸಂಜೀವ ಕಂದಾಯ ನಿರೀಕ್ಷಕರು ವಡಗೇರಾ ರವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ಮಾನ್ಯ ತಹಸಿಲ್ದಾರರು, ವಡಗೇರಾ ರವರಾದ ಶ್ರೀ ಸುರೇಶ ಅಂಕಲಗಿ ಮತ್ತು ನಾನು ಸಂಜೀವ ಕಾವಲಿ ಕಂದಾಯ ನಿರೀಕ್ಷಕ ವಡಗೇರಾ ಹಾಗೂ ವಡಗೇರಾ ಗ್ರಾಮ ಲೇಖಪಾಲಕರಾದ ಸಿದ್ದನಗೌಡ ಹಾಗೂ ಬೆಂಡೆಬೆಂಬಳ್ಳಿ   ಗ್ರಾಮ ಸಹಾಯಕ ಮಲ್ಲಪ್ಪ ಇವರ ಜೊತೆಗೂಡಿ ವಡಗೇರಾ ತಹಸೀಲ ಕಛೇರಿಯಿಂದ ರಾತ್ರಿ 8 ಗಂಟೆ ಸುಮಾರಿಗೆ ಅಕ್ರಮ ಮರಳುಗಾರಿಕೆ ತಡೆಗಟ್ಟಲು ತಹಸೀಲ್ದಾರರ ಖಾಸಗಿ ವಾಹನದಲ್ಲಿ ಬೆಂಡೆಬೆಂಬಳ್ಳಿ, ಕೋಡಾಲ ಗ್ರಾಮಗಳ ಕಡೆಗೆ ಹೋದೆವು. ಅಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಹೋದಾಗ ಅಲ್ಲಿ ಯಾವುದೇ ಅಕ್ರಮ ಮರಳುಗಾರಿಕೆ ಕಂಡುಬರಲಿಲ್ಲ. ಆಗ ಬೆಂಡೆಬೆಂಬಳ್ಳಿ ಹೊಟೆಲಿನಲ್ಲಿ ರಾತ್ರಿ ಉಪಹಾರ ಮುಗಿಸಿದೆವು. ಅಷ್ಟೊತ್ತಿಗೆ ಕುಮನೂರು ಗ್ರಾಮದ ತಾಲೂಕಾ ಪಂಚಾಯತ ಸದಸ್ಯರಾದ ಮರಿಲಿಂಗಪ್ಪ ತಂದೆ ಹಣಮಂತ್ರಾಯ ಪೂಜಾರಿ ಇವರು ತನ್ನ ಮೊಬೈಲ ನಂ. 9164156781 ನೇದ್ದರಿಂದ ತಹಸೀಲ್ದಾರರು ಮತ್ತು ನನಗೆ ಕರೆ ಮಾಡಿ ಕುಮನೂರು ಗ್ರಾಮದ ಭೀಮಾ ನದಿ ದಂಡೆಯಲ್ಲಿ ಅಕ್ರಮ ಮರಳುಗಾರಿಕೆ ನಡೆದಿದೆ ನೀವು ಬನ್ನಿ ಎಂದು ಹೇಳಿದಾಗ ಅಲ್ಲಿಂದ ಕೋನಳ್ಳಿ ಗ್ರಾಮಕ್ಕೆ ಬಂದು  ಗ್ರಾಮ ಸಹಾಯಕ ರಾಜ ಅಹ್ಮದ ಈತನಿಗೆ ನಮ್ಮ ಸಂಗಡ ಕರೆದುಕೊಂಡು ವಡಗೇರಾ ಪೊಲೀಸ್ ಠಾಣೆಗೆ ಬಂದು ಶ್ರೀ ಮೌನೇಶ್ವರ ಎ.ಎಸ್.ಐ ರವರಿಗೆ ನಮ್ಮೊಂದಿಗೆ ಕರೆದುಕೊಂಡು ಕುಮನೂರು ಗ್ರಾಮಕ್ಕೆ ರಾತ್ರಿ 00:30 ಗಂಟೆಗೆ ಬಂದು ಭೀಮಾ ನದಿ ದಂಡೆಗೆ ಹೋಗಿ ನೋಡಲಾಗಿ ಅಲ್ಲಿ ಅಕ್ರಮವಾಗಿ ಮರಳು ಜೆ.ಸಿ.ಬಿ ಯಿಂದ ತೆಗೆಯಲು ಪ್ರಯತ್ನಿಸುವುದನ್ನು ನೋಡಿ ನಾವು ತಡೆ ಹಿಡಿದೆವು. ಜೆ.ಸಿ.ಬಿ ನಂ. ಕೆಎ 33 ಎಮ್ 6724 ಇದ್ದಿತ್ತು. ಸದರಿ ಜೆ.ಸಿ.ಬಿ ಆಪರೇಟರ್ ಓಡಿ ಹೋದನು. ಸ್ಥಳದಲ್ಲಿ ಮರಳು ಸ್ಟಾಕ ಮಾಡಿರಲಿಲ್ಲ. ನಂತರ ಜೆ.ಸಿ.ಬಿ ಯನ್ನು ಗ್ರಾಮ ಸಹಾಯಕನೊಂದಿಗೆ ವಡಗೇರಾ ಪೊಲೀಸ್ ಠಾಣೆಗೆ ತರಲಾಯಿತು. ಸದರಿ ವಾಹನವನ್ನು ತಮ್ಮ ವಶಕ್ಕೆ ನೀಡಿ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 24/2020 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ 08/2020 ಕಲಂ 174 ಸಿ.ಆರ್.ಪಿ.ಸಿ :- ಃ  ಇಂದು ದಿನಾಂಕ 06/03/2020 ರಂದು  5-30 ಎ.,ಎಂಕ್ಕೆ ಪಿಯರ್ಾದಿ ಶ್ರೀ ದೇವಪ್ಪ ತಂದೆ ಲಕ್ಷ್ಮಣ ಅಗಸರ ವ|| 45 ವರ್ಷ ಉ|| ಕೂಲಿ ಜಾ|| ಅಗಸರ ಸಾ|| ಬಿರನೂರ ಇವರು ಠಾಣೆಗೆ ಬಂದು ಒಂದು ಅಜರ್ಿ ನೀಡಿದ್ದು ಸದರ ಅಜರ್ಿಯ ಸಾರಂಶವೆನಂದರೆ, ನನಗೆ ಒಟ್ಟು 4 ಜನ ಹೆಣ್ಣು ಮಕ್ಕಳಿದ್ದ, ನನ್ನ ಹಿರಿಯ ಮಗಳಾದ ಶ್ರೀದೇವಿ ಇವಳಿಗೆ 7 ವರ್ಷ 4 ತಿಂಗಳಿಂದೆ ಕಕ್ಕೇರಿ ಗ್ರಾಮದ ಶಿವಪ್ಪ ಅಗಸರ ಇವರ ಮಗನಾದ ಮಲ್ಲಿಕಾಜರ್ುನ ಇತನಿಗೆ ಕೊಟ್ಟು ಮದುವೇಮಾಡಿದ್ದು ಇರುತ್ತದೆ ಹಿರಿಯಾ ಮಗಳಾಧ ಶ್ರೀದೇವಿ ಇವಳಿಗೆ ಮಾನಸಿಕ ಕಾಯಿಲೆಯಿಂದ ಬಳುಲುತ್ತಿದ್ದಳು, ಇವಳಿಗೆ ಸುಮಾರು 4 ತಿಂಗಳಿಂದೆ ನಮ್ಮ ಬಿರನೂರು ಗ್ರಾಮಕ್ಕೆ ಕರೆದುಕೊಂಡು ಬಂದಿದ್ದು ನಾವೂ ಕೂಡ ಖಾಸಗಿ ಆಸ್ಪತ್ರೆ ತೋರಿಸಿದ್ದರು ಕಡಿಮೆಯಾಗಿರಲಿಲ್ಲಾ, 
      ಹೀಗಿದ್ದು ದಿನಾಂಕ 03/03/2020 ರಂದು ಸಮಯ 2:30 ಪಿ.ಎಂಕ್ಕೆ ನಮ್ಮ ಮನೆಯ ಕಡೆ ಅಳುವದು ಚಿರಾಡುವದು ಕೇಳಿ ಆಕಡೆ ಬಂದು ನೋಡಲಾಗಿ ನನ್ನ ಮಗಳು ಶ್ರೀದೇವಿ ಗಂಡ ಮಲ್ಲಿಕಾಜರ್ುನ ಅಗಸರ ಇವಳು ನಮ್ಮ ಪತ್ರಾಸಿನ ಮನೆಯ ಯಂಗಲಿಗೆ ಹಗ್ಗದಿಂದ ತನ್ನಗಿದ್ದ ಮಾನಸಿಕ ಖಾಯಿಲೆಯಿಂದ ಜುಗುಪ್ಸೆಗೊಂಡು ನೆಣುಹಾಕಿಕೊಂಡಿದ್ದು, ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆ ಕರೆದುಕೊಂಡು ಸೆರಿಕೆ ಮಾಡಿದ್ದು, ಅಲ್ಲಿಂದ ವೈದ್ಯಾಧೀಕಾರಿಗಳ ಸಲಹೆ ಮೇರೆಗೆ ನಾವು ಹೆಚ್ಚಿನ ಉಪಚಾರ ಕುರಿತು ಸರಕಾರಿ ಜಿಲ್ಲಾ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ, ದಿನಾಂಕ 05/03/2020 ರಂದು 7:30 ಪಿ.ಎಂ ಕ್ಕೆ ಉಪಚಾರ ಫಲಕಾರಿಯಾಗದೆ ಮೃತ ಪಟ್ಟಿದ್ದು ಇರುತ್ತದೆ, ನನ್ನ ಅಳಿಯಾ ಮಲ್ಲಿಕಾಜರ್ುನ ಇವರ ಬಂದ ಮೇಲೆ ತಡವಾಗಿ ಇಂದು ದಿನಾಂಕ 06/03/2020 ರಂದು 5:30  ಎ.ಎಂ ಕ್ಕೆ ದೂರು ಅಜರ್ಿ ನೀಡಿದುತಿರುತ್ತದೆ ಅಂತಾ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಯು,ಡಿ,ಆರ್, ನಂ-08/2020 ಕಲಂ 174 ಸಿ.ಆರ್.ಪಿ.ಸಿ. ನೇದ್ದರ ಪ್ರಕಾರ ಯು.ಡಿ,ಆರ್. ಧಾಖಲಿಸಿಕೊಂಡು ತನಿಕೆ ಕೈಕೊಂಡೆನು. 

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:-  ಪಿ.ಎ.ಆರ್ ನಂ 10/2020 ಕಲಂ 108 ಸಿ.ಆರ್.ಪಿ.ಸಿ   :- ಃ    ಇಂದು ದಿನಾಂಕ 06/03/2020 ರಂದು ಸಾಯಂಕಾಲ  17-30 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಹನುಮರಡ್ಡೆಪ್ಪ ಆರಕ್ಷಕ ನಿರೀಕ್ಷಕರು ಶಹಾಪೂರ ಪೊಲೀಸ್ ಠಾಣೆ ರವರು ವರದಿ ಸಲ್ಲಿಸಿದ್ದೆನೆಂದರೆ, ನಾಳೆ ದಿನಾಂಕ 07/03/2020 ರಂದು ಶಹಾಪೂರದ ಸಿ.ಪಿ.ಎಸ್ ಮೈದಾನದಲ್ಲಿ  ಸಂವಿಧಾನ ಸಂರಕ್ಷಣಾ ಆಂದೋಲನಾ ಸಮೀತಿಯ  ಕಾರ್ತಕರ್ತರಿಂದ ಇಗಿಒ, ಓಖಅ, ಅಂಂ, & ಓಕಖ ವಿರೋಧಿಸಿ ಬಹಿರಂಗ ಸಭೆ ಹಮ್ಮಿಕೊಂಡಿದ್ದರಿಂದ ಸದರಿ ಸಭೆಯ ಬಗ್ಗೆ ಮಾಹಿತಿ ಸಂಗ್ರಹಿಸುವ ಕುರಿತು ಇಂದು ದಿನಾಂಕ 06/03/2020 ರಂದು ನಾನು  ಮತ್ತು ಗುಪ್ತ ಮಾಹಿತಿ ಭೀಮನಗೌಡ ಪಿ.ಸಿ 402, ಮತ್ತು ಜೀಪ್ ಚಾಲಕ ನಾಗರೆಡ್ಡಿ ಎ.ಪಿ.ಸಿ 161 ರವರೊಂದಿಗೆ ಸರಕಾರಿ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ ಮದ್ಯಾಹ್ನ 15-30 ಗಂಟೆಗೆ ಠಾಣೆಯಿಂದ ಹೊರಟೇವು.
           ಮಾಹಿತಿ ಸಂಗ್ರಹಿಸುವ ಕುರಿತು ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಾ ಸಾಯಂಕಾಲ 16-00 ಗಂಟೆಗೆ ಸಿ.ಪಿ.ಎಸ್ ಮೈದಾನಕ್ಕೆ ಭೇಟಿ ನೀಡಿದಾಗ, ಖಾಸ ಪೊಲೀಸ್ ಬಾತ್ಮಿದಾರರಿಂದ  ತಿಳಿದು ಬಂದ ಸಂಗತಿಯೆನೆಂದರೆ ನಾಳೆ ನಡೆಯಲಿರುವ ಸಂವಿಧಾನ ಸಂರಕ್ಷಣಾ ಆಂದೋಲನಾ ಸಮೀತಿಯ ಸಭೆಯಲ್ಲಿ ಇಗಿಒ, ಓಖಅ, ಅಂಂ, & ಓಕಖ ವಿರೋಧಿಸಿ ಬಹಿರಂಗ ಸಭೆಯಲ್ಲಿ  ಕೆಲವು ಜನ ಕಾರ್ಯಕರ್ತರಾದ 1) ಅಜಯ ತಂದೆ ದತ್ತಪ್ಪ ಯಳಸಗಿ ಸಾಃ ಕೋರ್ಟ ರೋಡ ಶಹಾಪೂರ 2) ರಾಯಪ್ಪ ತಂದೆ  ಶಿವಪ್ಪ ಸಾಲಿಮನಿ  ಸಾಃ ಹಾರಣಗೇರಾ 3) ಕಾಶಿನಾಥ ತಂದೆ ಮರಲಿಂಗಪ್ಪ ನಾಟೇಕಾರ ಸಾಃ ಬಿರನಾಳ  4) ಮಲ್ಲಿನಾಥ ತಂದೆ ಭೀಮಪ್ಪ ಬಡಿಗೇರ ಸಾಃ ಮಕ್ತಾಪೂರ 5) ಚಂದ್ರಶೇಖರ ತಂದೆ ಮಹಾದೇವಪ್ಪ ನಾಟೇಕಾರ ಸಾಃ ಹತ್ತಿಗೂಡುರ 6) ಗುರುನಾಥ ತಂದೆ ಶಿವಪ್ಪ ನಾಟೇಕಾರ ಸಾಃ ವಡಗೇರಾ   7) ಶಿವಶರಣ ತಂದೆ ನಿಂಗಪ್ಪ ತಳವಾರ ಸಾಃ ದಿಗ್ಗಿ ಬೇಸ್ ಶಹಾಪೂರ ಇವರ ನೇತೃತ್ವದಲ್ಲಿ  ನಡೆಯಲಿರುವ ಕಾರ್ಯಕ್ರಮದಲ್ಲಿ ಯಾರಾದರು ಪ್ರಚೋದನಕಾರಿ ದೇಶ ವಿರೋಧಿ ಹೇಳಿಕೆ  ಅಥವಾ ಭಾಷಣ  ಮಾಡಬಹದು ಅಂತ ಮಾಹಿತಿ ತಿಳಿದು ಬಂದಿರುತ್ತದೆ.  
           ಕಾರಣ ನಾಳೆ ದಿನಾಂಕ 07/03/2020 ರಂದು ಒಂದು ದಿನ ನಡೆಯುವ ಸಭೆಯಲ್ಲಿ ಯಾರಾದರು ಪ್ರಚೋದನಕಾರಿಯಾಗಿ ದೇಶ ವಿರೋದಿ ಹೇಳಿಕೆ ಅಥವಾ ಭಾಾಷಣ  ಮಾಡದಂತೆ ಮುಂಜಾಗ್ರತವಾಗಿ ಸದರಿಯವರಿಂದ ಗರಿಷ್ಠ ಮೊತ್ತದ ಮುಚ್ಚಳಿಕೆ ಬರೆಯಿಸಿಕೊಳ್ಳುವ ಅವಶ್ಯಕತೆ ಕಂಡು ಬಂದಿದ್ದರಿಂದ, ನಾನು ಮರಳಿ ಠಾಣೆಗೆ ಸಾಯಂಕಾಲ 17-00 ಗಂಟೆಗೆ ಬಂದು, ಸಭೆಯ ನೇತೃತ್ವವಹಿಸಿಕೊಂಡ ಸದರಿ ಮೇಲ್ಕಂಡ 7 ಜನರ ವಿರುದ್ದ ಮುಂಜಾಗ್ರತ ಕ್ರಮ ಕೈಕೊಳ್ಳುಲು ಸೂಚಿಸಿದ  ಮೇರೆಗೆ ಠಾಣೆಯ ಪಿ.ಎ.ಆರ್  ನಂ 10/2020 ಕಲಂ 108 ಸಿ.ಆರ್.ಪಿ.ಸಿ ಅಡಿಯಲ್ಲಿ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 72/2020 ಕಲಂ 143, 147, 148, 323, 307, 504, 506 ಸಂಗಡ 149 ಐಪಿಸಿ ಮತ್ತು 3(1)(ಡಿ),3(1)()ಎಸ್.ಸಿ./ಎಸ್.ಟಿ. ಯಾಕ್ಟ 1989  :- ಇಂದು ದಿನಾಂಕ: 28/02/2020 ರಂದು 10.00 ಪಿ.ಎಂ.ಕ್ಕೆ ಶ್ರೀಮತಿ ತಾರಿಬಾಯಿ ಗಂ/ ಚಂದ್ರುನಾಯಕ ಚವ್ಹಾಣ ಸಾ|| ಇಬ್ರಾಹಿಂಪುರ ತಾಂಡಾ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ಹಾಜರಪಡಿಸಿದರ ಸಾರಾಂಶ ಏನೆಂದರೆ, ನಾನು ಮತ್ತು ನನ್ನ ಹಿರಿಯ ಮಗ ಸಂತೋಷ ಇಬ್ಬರು ಕೂಡಿಕೊಂಡು ಉಕ್ಕಾನಾಳ ತಾಂಡಾಕ್ಕೆ ಹೋಗಿದ್ದಾಗ, ಸಾಯಂಕಾಲ 4.30 ಪಿ.ಎಂ. ಸುಮಾರಿಗೆ ನನ್ನ ಗಂಡ ಚಂದ್ರುನಾಯಕ ಇವರು ಫೋನ್ ಮಾಡಿ ಮಗ ಆನಂದನಿಗೆ ಇಬ್ರಾಹಿಂಪುರದ ಸಾಹೇಬರಡ್ಡಿ ಮತ್ತು ಇತರರು ಕೂಡಿ ಹೊಡೆ ಬಡೆ ಮಾಡಿರುತ್ತಾರೆ ಅವನಿಗೆ ಶಹಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ನೀವು ಶಹಾಪುರಕ್ಕೆ ಬನ್ನಿ ಅಂತಾ ಹೇಳಿದಾಗ ನಾನು ಮತ್ತು ನನ್ನ ಮಗ ಸಂತೋಷ ಇಬ್ಬರು ಕೂಡಿಕೊಂಡು 5.00 ಪಿ.ಎಂ. ಸುಮಾರಿಗೆ ಶಹಾಪುರ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮಗ ಆನಂದನ ತಲೆಗೆ ಭಾರೀ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಅಲ್ಲಿಯೇ ಇದ್ದ ನನ್ನ ಗಂಡ ಚಂದ್ರುನಾಯಕನಿಗೆ ವಿಚಾರಿಸಲಾಗಿ ಇಂದು ಮಧ್ಯಾಹ್ನ ಶಾಲೆಯಿಂದ ಬಂದ ಮಗ ಆನಂದನು ಎತ್ತನ್ನು ಮೇಯಿಸಿಕೊಂಡು ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿ ಮರಳಿ 4.00 ಪಿ.ಎಂ. ಸುಮಾರಿಗೆ ಬಂದು ಎತ್ತು ಕಟ್ಟಿಹಾಕಿದನು ಅದೆ ಸಮಯಕ್ಕೆ ನಮ್ಮ ಮನೆಗೆ ಬಂದ ಇಬ್ರಾಹಿಂಪುರದ ಸಾಹೇಬರಡ್ಡಿ ತಂ/ ಮರೆಪ್ಪ ಪೂಜಾರಿ ಈತನು ಲೇ ಲಮಾಣಿ ಸೂಳೆ ಮಗನೆ ನಮ್ಮ ಹೊಲದಲ್ಲಿ ಯಾಕೆ ಎತ್ತನ್ನು ಮೇಯಿಸಿದ್ದಿ ಅಂತಾ ಅಂದಾಗ ಆನಂದನು ನಾನು ಮೇಯಿಸಿಲ್ಲ ಅಂತಾ ಅಂದನು. ಆಗ ಸಾಹೇಬರಡ್ಡಿ ಈತನು ಬಾ ತೋರಿಸುತ್ತೇನೆ ಅಂತಾ ಹೇಳಿ ಊರ ಮುಂದೆ ಇರುವ ತಮ್ಮ ಜೋಳದ ಹೊಲಕ್ಕೆ ಆನಂದನಿಗೆ ಕರೆದುಕೊಂಡು ಹೋಗುತ್ತಿದ್ದಾಗ ನಾನು ಅವರ ಹಿಂದೆಯೇ ಹೋದೆನು. 4.10 ಪಿ.ಎಂ. ಸುಮಾರಿಗೆ  ಆನಂದನಿಗೆ ಹೊಲಕ್ಕೆ ಕರೆದುಕೊಂಡು ಹೋದ ಸಾಹೇಬರಡ್ಡಿ ಈತನು ನೋಡು ಇಲ್ಲಿ ನಮ್ಮ ಹೊಲದಲ್ಲಿ ಎತ್ತು ಮೇಯಿಸಿದ್ದಿ ಸೂಳೆ ಮಗನೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲ ಅಂತಾ ಅಂದವನೆ ತನ್ನ ಹತ್ತಿರ ಇದ್ದ ಒಂದು ಕೊಡಲಿಯಿಂದ ನನ್ನ ಮಗನ ತಲೆಗೆ ಹೊಡೆದಾಗ ತಲೆಗೆ ಭಾರೀ ರಕ್ತಗಾಯವಾಗಿ ಆನಂದನು ನೆಲಕ್ಕೆ ಬಿದ್ದನು ಆಗ ಅಲ್ಲಿಯೇ ಇದ್ದ ಸಾಹೇಬರಡ್ಡಿಯ ತಂದೆಯಾದ ಮರೆಪ್ಪ ಪೂಜಾರಿ ಈತನು ಆನಂದನಿಗೆ ಕಲಾಸ ಮಾಡಿ ಈ ಲಮಾಣಿ ಸೂಳೆ ಮಗನಿಗೆ ಅಂತಾ ಅನ್ನುತ್ತಾ ತನ್ನ ಕಾಲಿನಿಂದ ಒದ್ದಿದ್ದು, ಸಾಹೇಬರಡ್ಡಿಯ ತಾಯಿ ಲಕ್ಷ್ಮಿ, ತಂಗಿಯರಾದ ಸಿದ್ದಮ್ಮ ಮತ್ತು ಅಂಬ್ಲಮ್ಮ ಇವರು ಕೊಂದು ಬಿಡ್ರಿ ಈ ಲಮಾಣಿ ಸೂಳೆ ಮಗನಿಗೆ ಸೊಕ್ಕು ಬಹಳ ಆಗಿದೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ನಾನು ನನ್ನ ಮಗನಿಗೆ ಹೊಡೆಯಬೇಡಿ ಬಿಡಿ ಅಂತಾ ಚಿರಾಡುವ ಶಬ್ದ ಕೇಳಿ ಪಕ್ಕದ ಹೊಲದಲ್ಲಿ ಸೂಡು ತಿರುವುತಿದ್ದ ನನ್ನ ತಮ್ಮ ವಿಠ್ಠುನಾಯಕ ಈತನು ಬಂದಿದ್ದು, ಇಬ್ಬರು ಕೂಡಿ ಜಗಳ ಬಿಡಿಸಿದಾಗ ಇನ್ನೊಮ್ಮೆ ನಮ್ಮ ಹೊಲದಲ್ಲಿ ಬನ್ನಿ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಮತ್ತು ನೀವು ನಮ್ಮ ಮೇಲೆ ಏನಾದರೂ ಕೇಸು ಕೊಟ್ಟರೆ ನಿಮಗೆ ಸುಮ್ಮನೆ ಬಿಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಹೇಳಿದ್ದು, ಕೇಳಿ ಗೊತ್ತಾಯಿತು. ನಂತರ ವೈಧ್ಯಾಧಿಕಾರಿಗಳ ಸಲಹೆಯ ಮೇರೆಗೆ ಅದೆ ದಿವಸ ರಾತ್ರಿ ಕಲಬುರಗಿಯ ಸಂಜೆ ನನ್ನ ಮಗ ಆನಂದನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೆಟೆಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಕುರಿತು ಸೇರಿಕೆ ಮಾಡಿರುತ್ತೇವೆ. ನಮಗೆ ಕಾನೂನಿನ ಅರಿವು ಇಲ್ಲದರಿಂದ ಇಲ್ಲಿಯ ವರೆಗೆ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿರುವುದಿಲ್ಲ ಇಂದು ನಮ್ಮ ಹಿರಿಯರು ತಿಳಿ ಹೇಳಿದ್ದರಿಂದ ನಾವು ಪೊಲೀಸ್ ಠಾಣೆಗೆ ದೂರು ನೀಡಲು ಬಂದಿರುತ್ತೇವೆ ಕಾರಣ ನನ್ನ ಮಗ ಆನಂದನಿಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಕೊಲೆಗೆ ಪ್ರಯತ್ನ ಮಾಡಿದ 1) ಸಾಹೇಬರಡ್ಡಿ ತಂ/ ಮರೆಪ್ಪ ಪೂಜಾರಿ, 2)ಮರೆಪ್ಪ ತಂ/ ಮಲ್ಲಪ್ಪ ಪೂಜಾರಿ, 3) ಲಕ್ಷ್ಮಿ ಗಂ/ ಮರೆಪ್ಪ ಪೂಜಾರಿ, 4) ಅಂಬ್ಲಮ್ಮ ಗಂ/ ಶಂಕ್ರೆಪ್ಪ ಚಟ್ನಳ್ಳೋರ ಮತ್ತು 5) ಸಿದ್ದಮ್ಮ ತಂ/ ಮರೆಪ್ಪ ಪೂಜಾರಿ ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 72/2020 ಕಲಂ 143, 147, 148, 323, 307, 504, 506 ಸಂಗಡ 149 ಐಪಿಸಿ ಮತ್ತು 3(1)(ಡಿ),3(1)()ಎಸ್.ಸಿ./ಎಸ್.ಟಿ. ಯಾಕ್ಟ 1989  ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.    
  
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 73/2020.ಕಲಂಃ 78(3) ಕೆ.ಪಿ.ಆ್ಯಕ್ಟ:- ಇಂದು ದಿನಾಂಕ 06/03/2020 ರಂದು 23-50 ಗಂಟೆಗೆ ಸ|| ತ|| ಪಿಯರ್ಾದಿ ಹನುಮರಡೆಪ್ಪ ಪಿ.ಐ.ಸಾಹೇಬರು ಠಾಣೆಗೆ ಬಂದು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 06/03/2020 ರಂದು ಶಹಾಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಚಟ್ನಳ್ಳಿ ಗ್ರಾಮದ ಬಸವಣ್ಣದೇವರ ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ  ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ-ಸಂಖ್ಯೆಗಳು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೆರೆಗೆ, ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪುರ ರವರಿಗೆ ಪತ್ರ ವ್ಯವಹಾರ ಮಾಡಿ 21-00 ಗಂಟೆಗೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರಿದ್ದ ಸಿದ್ದೇಶ್ವರ ಪಿ.ಎಸ್.ಐ. (ಕಾ.ಸೂ-2) ವೆಂಕಣ್ಣ ಎ.ಎಸ್.ಐ. ಸಿಬ್ಬಂದಿಯವರಾದ ಸಿದ್ದವೀರ ಹೆಚ್.ಸಿ 167, ಮುತ್ತಪ್ಪ ಪಿ.ಸಿ 118, ಹಾಗೂ ಜೀಪ್ ಚಾಲಕ ನಾಗರೆಡ್ಡಿ ಎ.ಪಿ.ಸಿ 161 ರವರಿಗೆ ಮಾಹಿತಿ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ಮುತ್ತಪ್ಪ ಪಿ.ಸಿ 118 ರವರಿಗೆ 18-10 ಗಂಟೆಗೆ ಕಳುಹಿಸಿಕೊಟ್ಟಿದ್ದು, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 27 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 49 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು 21-15 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ನಾನು ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಲು ಕೇಳಿಕೊಂಡ ಮೇರೆಗೆ ಒಪ್ಪಿಕೊಂಡರು.
       ನಾನು ಮತ್ತು ಮೇಲ್ಕಂಡ ಸಿಬ್ಬಂದಿಯವರು, ಹಾಗೂ ಪಂಚರು ಇಲಾಖೆ ಜೀಪ ನಂ ಕೆಎ-33 ಜಿ-0138 ನೇದ್ದರಲ್ಲಿ, ಮೇಲಾಧಿಕಾರಿಯವರ  ಮಾರ್ಗದರ್ಶನದಲ್ಲಿ. ದಾಳಿ ಕುರಿತು ಠಾಣೆಯಿಂದ 21-20 ಗಂಟೆಗೆ ಹೊರಟೇವು. ಸದರಿ ವಾಹನವು ನಾಗರೆಡ್ಡಿ ಎ.ಪಿ.ಸಿ ಇವರು ಚಲಾಯಿಸುತಿದ್ದರು, ನೇರವಾಗಿ ಚಟ್ನಳ್ಳಿ ಗ್ರಾಮದ ಬಸವಣ್ಣ ದೇವರ ಗುಡಿಯ ಹತ್ತಿರ 21-50 ಗಂಟೆಗೆ ಹೋಗಿ ಜೀಪ್ ನಿಲ್ಲಿಸಿ ಜೀಪಿನಿಂದ ಎಲ್ಲರು ಇಳಿದು ಅಲ್ಲಿಂದ ಬಸವಣ್ಣ ದೇವರ ಗುಡಿಯ ಹತ್ತಿರ ನಡೆದುಕೊಂಡು ಹೋಗಿ ಸುಮಾರು 15 ಮೀಟರ ದೂರದಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಒಂದು ಬಸವಣ್ಣ ದೇವರ ಗುಡಿಯಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾವಾದ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತಿದ್ದ ಸದರಿಯವನು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಳ್ಳುತಿದ್ದ ಬಗ್ಗೆ ಪಂಚರ ಸಮಕ್ಷಮದಲ್ಲಿ ಖಚಿತ ಪಡಿಸಿಕೊಂಡು, ನಾನು ಮತ್ತು ಸಿಬ್ಬಂದಿಯವರು 22-20 ಗಂಟೆಗೆ ದಾಳಿ ಮಾಡಿದಾಗ ಮಟಕಾ ಅಂಕಿ ಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು, ಮಟಕಾ ಅಂಕಿ ಬರೆದುಕೊಳ್ಳುತಿದ್ದ ವ್ಯಕ್ತಿ ಸಿಕ್ಕಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲು ಈಶಣ್ಣ ತಂದೆ ಶಂಕ್ರೇಪ್ಪ ವ|| 65 ಜಾ|| ರೆಡ್ಡಿ ಸಾ|| ಮಟಕಾಬರರೆದುಕೊಳ್ಳೂವದು ಸಾ|| ಚಟ್ನಳ್ಳಿ ತಾ|| ಶಹಾಪೂರ ಅಂತ ಹೇಳಿದನು. ಪಂಚರ ಸಮಕ್ಷಮದಲ್ಲಿ ಈತನ ಅಂಗಶೋಧನೆ ಮಾಡಿದಾಗ ನಗದು ಹಣ 750-00 ರೂಪಾಯಿ ಮತ್ತು 1 ಬಾಲ್ ಪೆನ್ ಸಿಕ್ಕಿದ್ದು ಮತ್ತು 2 ಮಟಕಾ ಚೀಟಿಗಳು, ಸದರಿಯವನಿಗೆ ಸಿಕ್ಕ ಮುದ್ದೆಮಾಲಿನ ಬಗ್ಗೆ ವಿಚಾರಣೆ ಮಾಡಲಾಗಿ ಸಾರ್ವಜನಿಕರಿಂದ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಮತ್ತು ಮಟಕಾ ಅಂಕಿಗಳನ್ನು ಬರೆಯಲು ಉಪಯೋಗಿಸಿದ ಪೆನ್ನು ಇದೆ ಇರುತ್ತದೆ. ಸದರಿ ಹಣ ಮಟಕಾ ನಂಬರಗಳು ಬರೆದುಕೊಂಡಿದ್ದರಿಂದ ಜಮಾ ಆದ ಹಣ ಅಂತ ಹೇಳಿದನು. ನಗದು ಹಣ 750-00 ರೂಪಾಯಿ ಮತ್ತು 2 ಮಟಕಾ ಚೀಟಿಗಳು ಹಾಗೂ ಒಂದು ಬಾಲ್ ಪೆನ್ ಒಂದು ಲಕೋಟೆಯಲ್ಲಿ ಹಾಕಿಕೊಂಡು, ನಾನು ಮತ್ತು ಪಂಚರು ಜಂಟಿಯಾಗಿ ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 22-00 ಗಂಟೆಯಿಂದ 23-00 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡೆನು. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 23-30 ಗಂಟೆಗೆ ಬಂದಿದ್ದು, ಠಾಣೆಯಲ್ಲಿ ಆರೋಪಿತನ ವಿರುದ್ದ ವರದಿಯನ್ನು ತಯ್ಯಾರಿಸಿ, ಆರೋಪಿ ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರು ಪಡಿಸಿ, ಸರಕಾರದ ಪರವಾಗಿ ದಿನಾಂಕ 06/03/2020 ರಂದು 23-50 ಗಂಟೆಗೆ ಮುಂದಿನ ಕ್ರಮಕೈಕೊಳ್ಳುವಂತೆ  ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 73/2020 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.                                                                                        
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 22/2020 87  ಕೆ.ಪಿ ಯಾಕ್ಟ :- : ದಿನಾಂಕ:06/03/2020 ರಂದು 14.40 ಪಿ.ಎಮ್ ಕ್ಕೆ, ಶ್ರೀ.  ಅಂಭಯ್ಯ ರಾಠೋಡ ಎ.ಎಸ್.ಐ ಹುಣಸಗಿ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ  ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಣಸಗಿ ಪಟ್ಟಣದ ಬಳಿರವರ ಮನೆಯ ಹಿಂದೆ ಇರುವ ಶ್ರೀ ಭೀರಪ್ಪ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದ ಮೆರೆಗೆ ಸ್ಥಳಕ್ಕೆ ಬೇಟಿ ನೀಡಿ ಖಚಿತಪಡಸಿಕೊಂಡು ಜೂಜಾಟವನ್ನು ಆಡುವವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:25/2020 ಕಲಂ. 87 ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.
       ನಂತರ ಮಾನ್ಯ ಎ.ಎಸ್.ಐ ಸಾಹೇಬರು 17.00 ಗಂಟೆಗೆ ಮರಳಿ ಠಾಣೆಗೆ ಬಂದು 7 ಜನ ಆರೋಪಿತರು & ನಗದು ಹಣ 4150/- ರೂ.ಗಳು ಹಾಗೂ 52 ಇಸ್ಪೀಟ್ ಎಲೆಗಳು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಲ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. ಆರೋಪಿತರ ಹೆಸರು ಈ ರೀತಿ ಇದೆ, 1) ನಿಂಗಣ್ಣ ತಂದೆ ಮೂಕಪ್ಪ ಹಳ್ಳಿ ವಯ:25 ಜಾ:ಬೇಡರ ಉ:ಒಕ್ಕಲತನ ಸಾ:ಹುಣಸಗಿ 2) ಹಣಮಂತ್ರಾಯ ತಂದೆ ತಿಮ್ಮಣ್ಣ ಬಿರಾದಾರ ವಯ:25 ಜಾ:ಬೇಡರ ಉ:ಒಕ್ಕಲತನ ಸಾ:ಹುಣಸಗಿ 3) ಅಂಬರೇಶ ತಂದೆ ದೇವಪ್ಪ ಹುಲಕಲ್ ವಯ:25 ಜಾ:ಬೇಡರ ಉ:ಒಕ್ಕಲತನ ಸಾ:ಹುಣಸಗಿ 4) ಯಂಕಪ್ಪ ತಂದೆ ಗೌಡಪ್ಪ ಬಾಲಗೌಡ ವಯ:25 ಜಾ:ಬೇಡರ ಉ:ಒಕ್ಕಲತನ ಸಾ:ಹುಣಸಗಿ 5) ಚಿದಾನಂದ ತಂದೆ ರಾಮಣ್ಣ ಬಿರಾದಾರ ವಯ:32 ಜಾ:ಬೇಡರ ಉ:ಒಕ್ಕಲತನ ಸಾ:ಹುಣಸಗಿ 6) ದೇವಪ್ಪ ತಂದೆ ಭೀಮಣ್ಣ ಬಿರಾದಾರ ವಯ:25 ಜಾ:ಬೇಡರ ಉ:ಒಕ್ಕಲತನ ಸಾ:ಹುಣಸಗಿ 7) ಪ್ರಭು ತಂದೆ ಸಾಯಬಣ್ಣ ಹುಲಕಲ್ ವಯ:23 ಜಾ;ಬೇಡರ ಉ:ಒಕ್ಕಲತನ ಸಾ:ಹುಣಸಗಿ ಅಂತಾ ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!