ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/03/2020

By blogger on ಶನಿವಾರ, ಮಾರ್ಚ್ 7, 2020

                                                             

                       ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/03/2020
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 30/2020 ಕಲಂ 505 (2) ಐಪಿಸಿ:- ಇಂದು ದಿನಾಂಕ 05-03-2020 ರಂದು 9 ಎ.ಎಮ್ ಕ್ಕೆ ಶ್ರೀ ಬಾಬುರಾವ ಎ.ಎಸ್.ಐ ಯಾದಗಿರಿ ಗ್ರಾಮೀಣ ಠಾಣೆರವರು ಠಾಣೆಗೆ ಹಾಜರಾಗಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನಾದ ಭೋಜು ತಂದೆ ನಿಂಗಪ್ಪಾ ಹತ್ತಿಕುಣೇರ ವಯಾ: 16 ಸಾ: ಯರಗೋಳ ಇತನ ಜೋತೆಗೆ ತಮ್ಮ ವರದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಸವೆನೆಂದರೆ ಇಂದು ದಿನಾಂಕ 05-03-2020 ರಂದು ಬೆಳಗ್ಗೆ 7 ಗಂಟೆಗೆ ನನ್ನ ಸರಕಾರಿ ಮೊಬೈಲ ನಂ: 9480803576 ನೇದ್ದಕ್ಕೆ ನಾಗ್ಲಾಪೂರದ ವಾಲ್ಮೀಕಿ ಸಮಾಜದ ಹುಡುಗರು ಅಂಬಿಗೇರ ಸಮಾಜದ ವಿರುದ್ದ ಅವಾಚ್ಯ ಶಬ್ದಗಳಿಂದ ಮಾತಾಡಿ ಆ ಸಮಾಜಕ್ಕೆ ಅವಮಾನಿಸಿ ಟಿಕ್ ಟಾಕ ಮಾಡಿದ ಐಡಿ ನಂ-2832941201389 ನೇದ್ದಕ್ಕೆ ಮೊಬೈಲದಲ್ಲಿ  ಸದರಿ ಟಿಕ್ ಟಾಕಗೆ ಅಡೀಟ್ ಮಾಡಿ ಹಾಗೇ ಮುಂದುವರೆದು ವಿಡಿಯೋ ಮಾಡಿದ ಒಬ್ಬ ಹುಡುಗನು ಮೋಬೈಲನಲ್ಲಿ ವಾಲ್ಮೀಕಿ ಸಮಾಜದವರಿಗೆ ಲೇ ಹಾದರಗಿತ್ತಿ ಮಕ್ಕಳೇ ಅಂಬಿಗೇರನ ಮುಟ್ಟಬೇಕಾದರೇ ಇನ್ನೊಂದು ಸಲ ಹುಟ್ಟಿ ಬರಬೇಕಲೇ ಬಸವಿ ಮಕ್ಕಳೇ, ಅಂಬಿಗರನ ಕಡಿತಾರಂತ ನರ ಹರಿಲಾರ ಸೂಳೆ ಮಕ್ಕಳೇ, ನಿಮ್ಮವ್ವನ ಕಾಲೇ ಸೂಳೇ ಮಕ್ಕಳೇ, ನಿಮ್ಮಲ್ಲಿ ದಮ್ಮ ಇದ್ದರೇ ಯಾದಗಿರಿ ಜಿಲ್ಲೆಯ ಯರಗೋಳ ಗ್ರಾಮಕ್ಕೆ  ಬಂದು ನೋಡರಿ ನಾನೋಬ್ಬನೇ ಬರತೀನಲೇ ಬಸವಿ ಮಕ್ಕಳೇ ಅಂತಾ ವಾಲ್ಮೀಕಿ ಸಮಾಜಕ್ಕೆ ಅವಹೇಳನಕಾರಿಯಾಗಿ ನಿಂದನೆ ಮಾಡಿ ವಿಡೀಯೊ ಮಾಡಿ ಬಿಟ್ಟಿರುತ್ತಾರೆ. ಅದನ್ನು ನೋಡಿ  ನಾನು ವಿಡಿಯೋ ಬಿಟ್ಟ ಬಗ್ಗೆ ಯರಗೋಳ ಗ್ರಾಮಕ್ಕೆ ಹೋಗಿ ವಿಡಿಯೋ ಮಾಡಿ ಬಿಟ್ಟವರ ಬಗ್ಗೆ ಗ್ರಾಮಸ್ತರಿಗೆ ವಿಚಾರಿಸಲು ಅವನ ಹೆಸರು ಬೋಜು ತಂದೆ ನಿಂಗಪ್ಪಾ ಹತ್ತಿಕುಣೇರ ವಯಾ; 16 ಜಾ: ಕಬ್ಬಲಿಗ ಉ: ಕುರಿ ಕಾಯುವುದು ಸಾ: ಯರಗೋಳ ಅಂತಾ ಖಚಿತಪಡಿಸಿಕೊಂಡು. ಸದರಿಯವನನ್ನು ಸಿಬ್ಬಂದಿಯವರಾದ ಪಿಸಿ-237 ಶ್ರೀ ಅಬ್ದುಲ ಬಾಷಾ, ಮೋನಪ್ಪಾ ಪಿಸಿ-263 ರವರ ಸಹಾಯದಿಂದ 8 ಎ.ಎಮ್ ಕ್ಕೆ ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ಅವನು ಮೇಲಿನಂತೆ ತನ್ನ ಹೆಸರನ್ನು ಹೇಳಿದನು. ಮತ್ತು ತಾನು ಒಂದು ವಾರದ ಹಿಂದೆ ಈ ವಿಡಿಯೋ ತನ್ನ ಮೋಬೈಲ್ ನಂ 9611603345 ನೆದ್ದರಲ್ಲಿ ತಾನೋಬ್ಬನೇ ಆಡು ಕಾಯುತ್ತಾ ಹೋಗಿ ಅಡವಿಯಲ್ಲಿ ಮಾಡಿದ್ದು ಇರುತ್ತದೆ ಅಂತಾ ಹೇಳಿದನು. ಅವನೊಂದಿಗೆ ಇಂದು ದಿನಾಂಕ 05-03-2020 ರಂದು ಬೆಳೆಗ್ಗೆ 9 ಗಂಟೆಗೆ ಠಾಣೆಗೆ ಬಂದು  ಸದರಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನೊಂದಿಗೆ ನನ್ನ ವರದಿಯನ್ನು ಹಾಜರ ಪಡಿಸಿದ್ದು.  ಸದರಿಯವನ ಮೇಲೆ ಸೂಕ್ತ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 30/2020 ಕಲಂ 505 (2) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಯದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 24/2020 ಕಲಂ 78(3) ಕೆ.ಪಿ ಎಕ್ಟ್ 1963 :- ಇಂದು ದಿನಾಂಕ;05/03/2020 ರಂದು 7-00 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ.05/03/2020 ರಂದು 4-45 ಪಿಎಂಕ್ಕೆ ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದೇಶ್ವರ ಲಾಡ್ಜ ಹತ್ತಿರ ಯಾರೋ ಒಬ್ಬನು ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/-ರೂ ಗೆ 80/-ರೂ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಪಡೆದುಕೊಂಡು ಸದರಿ ಪ್ರಕರಣವೂ ಅಸಂಜ್ಞೇಯ ಅಪರಾದವಾಗುತ್ತಿದ್ದರಿಂದ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 7-00 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.24/2020 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 45/2020 ಕಲಂ: 323, 504, 504 ಸಂಗಡ 34 ಐಪಿಸಿ ಮತ್ತು ಕಲಂ: 3(1) (ಆರ್) (ಎಸ್) (ಡಬ್ಲೂ) ಎಸ್ಸಿ ಎಸ್ಟಿ ಪಿಎ ಆಕ್ಟ 1989:- ಇಂದು ದಿನಾಂಕ 05.03.2020 ರಂದು 07.15 ಪಿ.ಎಮ್ ಕ್ಕೆ ಪಿರ್ಯಾದಿ ಅಜರ್ಿದಾರರಾದ ಶ್ರೀಮತಿ ತಿಪ್ಪಮ್ಮ ಗಂಡ ಬಸನಗೌಡ ಬಿರಾದಾರ ಸಾ: ಕರಿಭಾವಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾಧಿ ಅರ್ಜಿ ಸಾರಾಂಶವೇನೆಂದರೆ, ನಮ್ಮೂರ ಸಂಗಣ್ಣ ತಂದೆ ಬಸಪ್ಪ ಬಿರಾದಾರ ಇವರು ನಮ್ಮೂರ ಹೂಗಾರ ರವರ ಹೊಲ ಖರೀದಿ ಮಾಡಿದ್ದು ಅದರಲ್ಲಿ ಉಳಿದ 1 ಎಕರೆ ಹೊಲವನ್ನು ನಾನು ಹೊಲದವರ ಮಾತಿನಂತೆ ಉಳಿಮೆ ಮಾಡಿಕೊಂಡು ಹೋಗುತ್ತಿದ್ದೇನೆ. ಆದರೆ ನಾವು ಸಾಗುವಳಿ ಮಾಡುವ ಹೊಲ ತನಗೆ ಬರುತ್ತದೆ ಅಂತ ನಮ್ಮೂರ ಲಿಂಗಾಯತ ಸಮುದಾಯದ ಸಂಗಣ್ಣ ತಂದೆ ಬಸಪ್ಪ ಬಿರಾದಾರ ಈತನು ನಮ್ಮೊಂದಿಗೆ ತಕರಾರು ಮಾಡಿ ಹಗೆತನ ಸಾಧಿಸುತ್ತಿದ್ದನು. ಹೀಗಿದ್ದು ದಿನಾಂಕ: 19.02.2020 ರಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ಇದ್ದಾಗ ನಮ್ಮೂರ ಲಿಂಗಾಯತ ಜನಾಂಗದ 1] ಶರಣಗೌಡ ತಂದೆ ಸಂಗಣ್ಣ ಬಿರಾದಾರ 2] ಶಿವಮ್ಮ ಗಂಡ ಸಂಗಣ್ಣ ಬಿರಾದಾರ 3] ಸಂಗಣ್ಣ ತಂದೆ ಬಸಪ್ಪ ಬಿರಾದಾರ ಸಾ|| ಎಲ್ಲರೂ ಕರಿಬಾವಿ ಇವರು ನಮ್ಮ ಮನೆಯ ಮುಂದೆ ಬಂದವರೇ ಏನಲೇ ಬ್ಯಾಡ ಸೂಳಿ ತಿಪ್ಪಿ, ಹೂಗಾರ ಹೊಲ ನಮಗೆ ಬರುತ್ತದೆ ಅಂತ ಅಂದರೂ ಸದರಿ ಹೊಲದಲ್ಲಿ ಯಾಕೇ ಬಿತ್ತನೆ ಮಾಡಿರುತ್ತೀರಿ ನಿಮ್ಮ ಸೊಕ್ಕು ಬಹಾಳ ಆಗಿದೆ ಅಂತ ಜಾತಿ ನಿಂದನೆಯಿಂದ ಬೈಯುತ್ತಿದ್ದಾಗ, ಆಗ ನಾನು ಸದರಿ ಹೊಲ ಸವರ್ೇ ಮಾಡಿಸಿದ್ದೇವೆ ಸದರ ಹೊಲ ಹೂಗಾರ ರವರಿಗೆ ಬರುತ್ತದೆ ಅಂತ ಅಂದಾಗ ಸದರಿ ಮೂರು ಜನರು ಈ ಸೂಳಿಯದು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ಹೊಡೆಬಡೆ ಮಾಡಿ ಎತ್ತಿ ನೆಲಕ್ಕೆ ಒಗೆದು ಕಾಲಿನಿಂದ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಹೊರಟಿದ್ದ ನಮ್ಮೂರ ನಾನಾಗೌಡ ತಂದೆ ಶಾಂತಗೌಡ ಬಿರಾದಾರ ಹಾಗು ನನ್ನ ಮಗ ಹಣಮಂತ್ರಾಯಗೌಡ ತಂದೆ ಬಸನಗೌಡ ಬಿರಾದಾರ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರು ನನಗೆ ಹೊಡೆಯುವದನ್ನು ಬಿಟ್ಟು ಸೂಳೇ ನೀನು ಇಷ್ಟಕ್ಕೆ ಸುಮ್ಮನೆ ಇದ್ದರೆ ಸರಿ ಇಲ್ಲದಿದ್ದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯಹಾಕಿ ಹೋದರು. ನಂತರ ನಾನು ಮನೆಯಲ್ಲಿ ನನ್ನ ಮಗ ಹಾಗು ಊರಿನ ನಮ್ಮ ಜನಾಂಗದವರಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ಫಿಯರ್ಾದಿ ಅಜರ್ಿ ನೀಡಿದ್ದು ನನಗೆ ಅಷ್ಟೇನು ಗಾಯಗಳು ಆಗಿರುವದಿಲ್ಲ ನಾನು ಆಸ್ಪತ್ರೆಗೆ ಹೋಗುವದಿಲ್ಲ ಕಾರಣ ನನಗೆ ಜಾತಿ ನಿಂದನೆಯಿಂದ ಅವಾಚ್ಯವಾಗಿ ಬೈಯ್ದು ಕೈಯಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿದ ಮೇಲ್ಕಾಣಿಸಿದ ಮೂರು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಪಿರ್ಯಾದಿ ಅಜರ್ಿ ಕೊಟ್ಟ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 45/2020 ಕಲಂ: 323, 504, 504 ಸಂಗಡ 34 ಐಪಿಸಿ ಮತ್ತು ಕಲಂ: 3(1) (ಆರ್) (ಎಸ್) (ಡಬ್ಲೂ) ಎಸ್ಸಿ ಎಸ್ಟಿ ಪಿಎ ಆಕ್ಟ 1989 ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 71/2020 ಕಲಂ 87  ಕೆ.ಪಿ ಆಕ್ಟ:- ಇಂದು ದಿನಾಂಕ 05/03/2020  ರಂದು ರಾತ್ರಿ 21-00 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಹನುಮರೆಡ್ಡೆಪ್ಪ ಆರಕ್ಷಕ ನಿರೀಕ್ಷಕರು ಶಹಾಪೂರ ಪೊಲೀಸ್ ಠಾಣೆ ರವರು, 7 ಜನ ಆಪಾಧಿತರು ಹಾಗೂ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ,  ಇಂದು ದಿನಾಂಕ 05/03/2020 ರಂದು ಸಾಯಂಕಾಲ 17-00 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ ಸಗರ(ಬಿ) ಗ್ರಾಮದ ಉಕ್ಕಡ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಶ್ರೀ ಸಂಗನಗೌಡ ಹೆಚ್.ಸಿ 02 ಇವರು ಫೋನ್ ಮಾಡಿ ಸಗರ(ಬಿ) ಗ್ರಾಮದ ಈಶ್ವರ ದೇವಸ್ಥಾನದ ಹತ್ತಿರ  ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಮಾಹಿತಿ ತಿಳಿಸಿದ ಮೇರೆಗೆ ಫಿಯರ್ಾದಿಯವರು, ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ದಾಳಿ ಮಾಡಿ ತನಿಖೇ ಕೈಕೊಳ್ಳಲು ಅನುಮತಿ ಪಡೆದುಕೊಂಡು  ಠಾಣೆಯಲ್ಲಿ ಹಾಜರಿದ್ದ ಅಧಿಕಾರಿ ಮತ್ತು ಸಿಬ್ಬಂದಿ, ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ  ಹೋಗಿ ಜೂಜಾಟ ಆಡುತಿದ್ದವರ ಮೇಲೆ ಸಾಯಂಕಾಲ 18-50 ಗಂಟೆಗೆ ದಾಳಿ ಮಾಡಿ 7 ಜನರನ್ನು ಹಿಡಿದು ಅವರ ಅಂಗ ಶೋಧನೆ ಮಾಡಿ ಅವರಿಂದ ನಗದು ಹಣ 3550=00 ರೂಪಾಯಿ ಹಾಗೂ ಜೂಜಾಟದಲ್ಲಿ ಪಟಕ್ಕಿಟ ನಗದು ಹಣ 1020 ಹೀಗೆ ಒಟ್ಟು ಜೂಜಾಟಕ್ಕೆ ಬಳಸಿದ ನಗದು ಹಣ 4570=00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು ಸಾಯಂಕಾಲ 19-00 ಗಂಟೆಯಿಂದ 20-00 ಗಂಟೆಯ ಅವಧಿಯಲ್ಲಿ ಲೈಟಿನ ಬೆಳಕಿನಲ್ಲಿ  ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು, ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಆರೋಪಿತರ ವಿರುದ್ದ ವರದಿ ಸಲ್ಲಿಸಿದ್ದು, ಸದರಿ ವರದಿ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ 71/2020  ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 64/2020 ಕಲಂ  87 ಕೆ.ಪಿ. ಕಾಯ್ದೆ:- ು ಚೇತನ ಪಿ.ಎಸ್.ಐ (ಕಾ&ಸೂ)) ಶೋರಾಪೂರ ಪೊಲೀಸ್ಠಾಣೆ ಈ ಮೂಲಕ ನಿಮಗೆ ಸೂಚಿಸುವುದೇನಂದರೆ, ಇಂದು ದಿನಾಂಕ:05-03-2020 ರಂದು3-20 ಪಿ.ಎಂ. ಸುಮಾರಿಗೆಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ಠಾಣೆಯ ವ್ಯಾಪ್ತಿಯಜಾಲಿಬೆಂಚಿಗ್ರಾಮದ ಹನುಮಾನದೇವರಗುಡಿಯಹತ್ತಿರ ಸಾರ್ವಜನಿಕಖುಲ್ಲಾ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿದ್ದಾರೆಅಂತಾಖಚಿತ ಬಾತ್ಮಿ ಬಂದ ಮೇರೆಗೆ, ನಾನು ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ದಯಾನಂದ ಪಿ.ಸಿ 337 3) ಶ್ರೀ  ವಿರೇಶ ಸಿಪಿಸಿ-374 4) ಶ್ರೀ ನಿಂಗಪ್ಪ ಹೆಚ್.ಸಿ 118 5) ಶ್ರೀ ಪರಮೇಶ ಪಿ.ಸಿ 142  6) ಶ್ರೀ ಶರಣಗೌಡ ಪಿ.ಸಿ 218 7) ಶ್ರೀ ಮಾನಯ್ಯಾ ಸಿಪಿಸಿ-372 ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ಮಲ್ಲಿಕಾಜರ್ುರೆಡ್ಡಿತಂದೆ ಸುಭಾಸರೆಡ್ಡಿ ಕೋಳಿಹಾಳ ವಯಾ: 33 ಉ: ಗ್ರಾಮ ಪಂಚಾಯತಿ ಸದಸ್ಯರು ಸಾ: ಪೇಠಅಮ್ಮಾಪೂರ. 2) ಖಾನುಲ್ಲಪ್ಪತಂದೆ ಸಂಗಪ್ಪ ಮೂಕನರ ವಯಾ: 36 ಉ: ಗ್ರಾಮ ಪಂಚಾಯತಿ ಸದಸ್ಯರು ಸಾ: ಪೇಠಅಮ್ಮಾಪೂರಇವರನ್ನು04-00 ಪಿ.ಎಂ.ಕ್ಕೆ ಠಾಣೆಗೆ ಬರಮಾಡಿಕೊಂಡುಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 3 ಪಿ.ಎಮ್ ಕ್ಕೆ ಠಾಣೆಯಜೀಪ ನಂಬರ ಕೆಎ-33 ಜಿ-0094 ನೇದ್ದರಲ್ಲಿ ಹೊರಟು04-40 ಪಿ.ಎಮ್ ಕ್ಕೆ ಜಾಲಿಬೆಂಚಿಗ್ರಾಮದ ಹೊರ ಹೊಲಯದ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಹಳ್ಳದ ಪಕ್ಕದಲ್ಲಿರುವ ಸಾರ್ವಜನಿಕಖುಲ್ಲಾ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದಒಮ್ಮೆಲೆಅವರ ಮೇಲೆ 04-45 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿ ಮೂರು ಸಿಕ್ಕಿದ್ದು ಅವರು ಹೆಸರು ವಿಳಾಸ ವಿಚಾರಿಸಿ ಅಂಗಶೋದನೆಮಾಡಲಾಗಿ 1) ಚಂದ್ರಶೇಖರತಂದೆಗುಡದಪ್ಪಕುಂಬಾರ ವಯಾ: 48 ವರ್ಷಜಾ: ಕುರುಬ ಉ: ಒಕ್ಕಲುತನ ಸಾ: ಜಾಲಿಬೆಂಚಿ ಇವನ ಹತ್ತಿರ 2020/- ರೂ2) ಭಿಮನಗೌಡತಂದೆ ಶರಣಪಪ್ಪಗೌಡ ಪಾಟೀಲ ವಯಾ: 42 ವರ್ಷಜಾ: ಲಿಮಗಾಯತ ಉ: ಒಕ್ಕಲುತನ ಸಾ: ಮಂಗಳೂರ. ಇವನ ಹತ್ತಿರ 1530/- ರೂ3) ಮಹ್ಮದ ಸಲೀಂ ತಂದೆ ಲತಿಫಸಾಬ ಅಮ್ಮಾಪೂರ ವಯಾ: 64 ವರ್ಷಜಾ: ಮುಸ್ಲಿಂ ಸಾ: ಉ: ನಿವೃತ್ತ ನೌಕರ ಸಾ: ಅಮ್ಮಾಪೂರ ಇವನ ಹತ್ತಿರ 1050/- ರೂ4) ತಿರುಪತಿತಂದೆ ಸಿದ್ದಣ್ಣ ಕರಡಕಲ್ ವಯಾ: 60 ವರ್ಷ: ಜಾ: ಬೇಡರು ಉ: ಒಕ್ಕಲುತನ ಸಾ: ಕರಡಕಲ್ಇವನ ಹತ್ತಿರ 1850/- ರೂ5) ಶರಣಪ್ಪತಂದೆ ಶಂಭುಲಿಂಗಪ್ಪ ಕೋಳಿಹಾಳ ವಯಾ: 40 ವರ್ಷಜಾ: ಲಿಂಗಾಯಿತ ಉ: ಒಕ್ಕಲುತನ ಸಾ: ಅಮ್ಮಾಪೂರಇವನ ಹತ್ತಿರ 1720/- ರೂ6) ಮೈಧುನಸಾತಂದೆ ಹಸನಸಾ ಖುರೇಷಿ ವಯಾ: 50 ವರ್ಷಜಾ: ಮುಸ್ಲಿಂ ಉ: ಕೂಲಿ ಸಾ: ಅಮ್ಮಾಪೂರ.ಇವನ ಹತ್ತಿರ 850/- ರೂಗಳು ದೊರೆತವುಇದಲ್ಲದೆ ಪಣಕ್ಕೆಇಟ್ಟ ಹಣ3010/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ12030/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿಜಪ್ತಿ ಪಂಚನಾಮೆಯನ್ನು04:50 ಪಿ.ಎಮ್.ದಿಂದ05-50 ಪಿ.ಎಮ್ ವರೆಗೆ ಬರೆದುಕೊಂಡಿದ್ದುಇರುತ್ತದೆ. ನಂತರ ಮೂರುಆರೋಪಿರೊಂದಿಗೆ ಮರಳಿ ಠಾಣೆಗೆ ಬಂದು ಸದರಿಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದುಆರುಜನಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ.ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲು ವರದಿ ನೀಡಿದ್ದರ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ

ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 17/2020 ಕಲಂ, 78(3) ಕೆ.ಪಿ.ಆ್ಯಕ್ಟ್:- ಇಂದು ದಿನಾಂಕ: 05/03/2020 ರಂದು 7-00 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಸೋಮಲಿಂಗ ಒಡೆಯರ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ  ಸಾರಾಂಶವೆನೆಂದರೆ, ಇಂದು ದಿನಾಂಕ: 05/03/2020 ರಂದು 4-00 ಪಿಎಂಕ್ಕೆ  ಪಿ.ಎಮ್ ಕ್ಕೆ ದರ್ಶನಾಪೂರ ಗ್ರಾಮದ ಬಸ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಟಕ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾಧ ಚಂದ್ರಕಾಂತ ತಂದೆ ಬಸವರಾಜ ನಾಯ್ಕೋಡಿ ವಯ|| 30 ವರ್ಷ ಜಾ|| ಕಬ್ಬಲಿಗ ಉ|| ಡ್ರೈವರ್ ಸಾ|| ದರ್ಶನಾಪೂರ. ತಾ|| ಶಹಾಪೂರ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 5-50 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 2160/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 17/2020 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 18/2020 ಕಲಂ, 78(3) ಕೆ.ಪಿ.ಆ್ಯಕ್ಟ್:- ಇಂದು ದಿನಾಂಕ: 05/03/2020 ರಂದು 08-10 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಸೋಮಲಿಂಗ ಒಡೆಯರ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ  ಸಾರಾಂಶವೆನೆಂದರೆ, ಇಂದು ದಿನಾಂಕ: 05/03/2020 ರಂದು ಗೋಗಿಪೇಠ ಗ್ರಾಮದ ಹಾರಣಗೇರಾ ರೋಡಿನ ಹಜರತ್ ಹಾಜೀಪೀರ್ ದಗರ್ಾದ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಟಕ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾಧ ಅಶೋಕ ತಂದೆ ಸಾಬಯ್ಯಾ ಕಲಾಲ ವಯ|| 50 ವರ್ಷ ಜಾ|| ಈಳಿಗೇರ ಉ|| ಒಕ್ಕಲುತನ ಸಾ|| ಗೋಗಿಪೇಠ ತಾ|| ಶಹಾಪೂರ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 7-15 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 2500/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 18/2020 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 


ಗೋಗಿ ಪೊಲೀಸ ಠಾಣೆ ಗುನ್ನೆ ನಂ:-   19/2020 ಕಲಂ, 78(3) ಕೆ.ಪಿ.ಆ್ಯಕ್ಟ್ :- ಇಂದು ದಿನಾಂಕ: 05/03/2020 ರಂದು 9-15 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಸೋಮಲಿಂಗ ಒಡೆಯರ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ  ಸಾರಾಂಶವೆನೆಂದರೆ, ಇಂದು ದಿನಾಂಕ: 05/03/2020 ರಂದು ಗೋಗಿ (ಕೆ) ಗ್ರಾಮದ ವನದುಗರ್ಾ ಕ್ರಾಸ್ ಹತ್ತಿರ ಗೋಗಿ-ಚಾಮನಾಳ ರೋಡಿನ ಬಾಜು ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಟಕ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾಧ ಈರಪ್ಪ ತಂ: ಬಸವಂತಪ್ಪ ದಂಡಂಬಳಿ ವಯ|| 55 ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಸಾ|| ಗೋಗಿ (ಕೆ) ತಾ|| ಶಹಾಪೂರ. ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 8-25 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 2500/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 19/2020 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 03.2020 ಕಲಂ. 174 ಸಿಆರಪಿಸಿ:- ಇಂದು ದಿನಾಂಕ. 05.03.2020 ರಂದು ಮಧ್ಯಾನ್ಹ 12-00 ಗಂಟೆ ಸುಮಾರಿಗೆ ಪೋನ ಮುಖಾಂತರ ಶೆಟ್ಟಿಹಳ್ಳಿ ಗ್ರಾಮದಲ್ಲಿ ಒಬ್ಬ ವ್ಯಕ್ತಿಯ ತಲೆಬುರುಡಿ ಅನುಮಾನಾಸ್ಪದ ರೀತಿಯಲ್ಲಿ ಜಮೀನುದಲ್ಲಿ ಬಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಸದರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿ ಹಾಜರಿದ್ದ ಗ್ರಾಮದ ಜನರನ್ನು ವಿಚಾರಿಸಿ ಶ್ರೀ ಸಿದ್ರಾಮರೆಡ್ಡಿ ತಂದೆ ವೆಂಕಟರೆಡ್ಡಿ ವಯ: 41 ವರ್ಷ, ಜಾ: ಲಿಂಗಾಯತ ಉ: ಒಕ್ಕಲುತನ ಸಾ: ಶೆಟ್ಟಿಹಳ್ಳಿ ಗ್ರಾಮ ತಾ: ಜಿ: ಯಾದಗಿರಿ ಇವರ ಹೇಳಿಕೆ ಪಡೆದುಕೊಂಡಿದ್ದು. ಸದರಿಯವರ ಹೇಳಿಕೆ ಸಾರಾಂಶವೆನೆಂದರೆ, ಇಂದು ದಿನಾಂಕ. 05.03.2020 ರಂದು ಬೆಳಿಗ್ಗೆ 10.00 ಗಂಟೆಗೆ ಜಮೀನು ನೋಡಿಕೊಂಡು ಬರಲು ಹೋಗಿದ್ದೇನು ಮತ್ತು ನಮ್ಮ ಪಕ್ಕದ ಜಮೀನಿನ ಮಾಳಪ್ಪ ಪೂಜಾರಿ ಈತನು ತಮ್ಮ ಜಮೀನದಲ್ಲಿ ಜೋಳ ಕಟಾವು ಮಾಡಲು ಬಂದಿದ್ದನು. ನಮ್ಮ ಜಮೀನಿನ ಬನ್ನಿಗಿಡದ ಕೆಳಗೆ ಒಬ್ಬ ವ್ಯಕ್ತಿಯ ಹರಿದ ಬಟ್ಟೆಗಳು ಒಂದು ನೀಲಿ-ಕಂದು ಚೌಕಡಿ ಶರ್ಟ ಮತ್ತು ಒಂದು ಒಂದು ಬಣ್ಣದ ಪ್ಯಾಂಟ್ ಇದ್ದು ಅದಕ್ಕೆ ರಕ್ತದ ಕಲೆಗಳು ಹತ್ತಿ ದುವರ್ಾಸನೆ ಬರುತ್ತಿದ್ದವು.  ಸಂಶಯ ಬಂದು ನಮ್ಮ ಹೊಲದಲ್ಲಿ  ಸುತ್ತಾಡಿ ನೋಡಲಾಗಿ ಅಲ್ಲಲ್ಲಿ ಮುರಿದು ಬಿದ್ದ ಮೂಳೆಗಳು ಕಂಡುಬಂದವು. ನಾನು ಸದರಿ ವಿಷಯವನ್ನು ನಮ್ಮ ಪಕ್ಕದ ಜಮೀನಿನ ಮಾಳಪ್ಪ ಪೂಜಾರಿಗೆ ತಿಳಿಸಿದ್ದು ಇಬ್ಬರು ಕೂಡಿ ಸಂಶಯ ಬಂದು ಹಾಗೆ ವಾಸನೆ ಮೇಲೆ ಮುಂದೆ ಹೋಗಿ ನೋಡಲಾಗಿ ನಮ್ಮ ಪಕ್ಕದ ಮಾಳಪ್ಪ ಪೂಜಾರಿ ಇವರ  ಜಮೀನು ಸವರ್ೇ ನಂ.119 ರಲ್ಲಿ ಒಂದು ಸತ್ತ ವ್ಯಕ್ತಿಯ ತಲೆಬುರುಡೆ ಬಿದ್ದಿರುವದು ಕಂಡು ಬಂದಿತು. ಅದರ ಮೇಲೆ ಯಾವುದೆ ಕೂದಲು ಅಥವಾ ಚರ್ಮ ಇರುವದಿಲ್ಲ ಮತ್ತು ದೇಹದ ಯಾವ ಭಾಗವು ಇರುವದಿಲ್ಲ. ಬಹುಶ: ಈಗ 10-12 ದಿನದ ಹಿಂದೆ ಯಾವುದೋ ಅಪರಿಚಿತ ವ್ಯಕ್ತಿ ಬಿಸಿಲಿನಲ್ಲಿ ನಮ್ಮ ಹೊಲದ ಕಡೆಗೆ ಬಂದು ಹಸಿವು ಮತ್ತು ನೀರಡಿಕೆಯಿಂದ  ಬಳಲಿ ಬಿಸಿಲು ತಾಳಲಾರದೆ ಅಥವಾ ಯಾವುದಾದರೂ ರೋಗದಿಂದ ಬಳಲಿ ನಮ್ಮ ಜಮೀನು ಸವರ್ೇ ನಂ.127 ರಲ್ಲಿನ ಬನ್ನಿಮರದ ಕೆಳಗೆ ಬಿದ್ದು ಸತ್ತಿರಬಹುದು ನಂತರ ನಾಯಿ-ನರಿಗಳು ಸತ್ತ ವ್ಯಕ್ತಿಯ ದೇಹವನ್ನು ತಿಂದು ಹಾಕಿರಬಹುದು ಅನ್ನುವ ಸಂಶಯ ಇರುತ್ತದೆ. ಸದರಿ ಸತ್ತ ವ್ಯಕ್ತಿಯ ತಲೆಬುರಡೆ ಬಗ್ಗೆ ಶೆಟ್ಟಿಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರಿಗೆ ವಿಚಾರಿಸಿ ಅನುಮಾನಗೊಂಡು ಪೊಲೀಸ್ ಠಾಣೆಗೆ ಫೋನ ಮಾಡಿ ವಿಷಯ ತಿಳಿಸಿರುತ್ತೇನೆ.  ಸದರಿ ಸತ್ತ (ತಲೆಬುರಡೆ)ವ್ಯಕ್ತಿಯ ಸಾವಿನಲ್ಲಿ ಯಾರ ಮೇಲು ಯಾವ ಸಂಶಯ, ದೂರು ಇರುವದಿಲ್ಲ. ಮುಂದಿನ ಕ್ರಮ ಜರುಗಿಸಬೇಕು ಅಂತಾ ಪಿಯರ್ಾಧಿ ನಿಡಿದ್ದು ಇರುತ್ತದೆ

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ 07/2020 ಕಲಂ 174 ಸಿ.ಆರ್.ಪಿ.ಸಿ:- ಇಂದು ದಿನಾಂಕ 05/03/2020 ರಂದು  15-30 ಪಿ.,ಎಂಕ್ಕೆ ಪಿಯರ್ಾದಿ ಶರಣಮ್ಮ ಗಂಡ ದಿ ಶಂಕ್ರೆಪ್ಪ ಹೆಡಗಿಮದ್ರಿ ವ|| 50 ವರ್ಷ ಜಾ|| ಕಬ್ಬಲಿಗ ಉ|| ಹೋಲಮನಿ ಕೆಲಸ ಸಾ|| ಗುತ್ತಿಪೇಠ ಶಹಾಪೂರ ಇವರು ಠಾಣೆಗೆ ಬಂದು ಒಂದು ಅಜರ್ಿ ನೀಡಿದ್ದು ಸದರ ಅಜರ್ಿಯ ಸಾರಂಶವೆನಂದರೆ, ನನಗೆ ಒಟ್ಟು 7 ಜನ ಹೆಣ್ಣು ಮಕ್ಕಳಿದ್ದು ಅದರಲ್ಲಿ ನಾಲ್ಕು ಜನ ಹೆಣ್ನು ಮಕ್ಕಳಿಗೆ ಮದುವೆಮಾಡಿಕೊಟ್ಟಿದ್ದು,  ಅವರು ತಮ್ಮ ಸಂಸಾರದೊಂದಿಗೆ ಸುಖಾವಾಗಿ ಜೀವನ ನಡೆಸುತ್ತಿದ್ದ, ಇನ್ನುಳಿದ ಮೂರು ಜನ ಹೆಣ್ಣು ಮಕ್ಕಳೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಉಪ ಜೀವಿಸುತ್ತಿದ್ದೇವು ನನ್ನ ನಾಲ್ಕನೆಯ ಮಗಳಾದ ತಾಯವಯಿವಳಿಗೆ ಸುಮಾರು 8 ವರ್ಷಗಳಿಂದೆ ಮಹಲರೋಜಾ ಗ್ರಾಮದ ಚಂದಪ್ಪ ಇವರ ಮಗನಾದ ಬಲಭೀಮಪ್ಪ ನಾಯ್ಕೋಡಿ ಇವರಿಗೆ ಮದುವೆ ಮಾಡಿಕೊಟ್ಟಿದ್ದು ಇವರ ಹೋಟ್ಟೆಯಿಂದ 4 ಜನ ಗಂಡು ಮಕ್ಕಳು ಹುಟ್ಟಿದ್ದು ಇರುತ್ತದೆ, 1 ವರ್ಷದ ಹಿಂದೆ ನನ್ನ ಅಳಿಯಾ ಬಲಬೀಮಪ್ಪ ಮತ್ತು ತಾಯಮ್ಮ ತಮ್ಮ ಕುಟಂಬದೊಂದಿಗೆ ಭೀಮರಾಯ ತಂದೆ ಅಂಬ್ಲಪ್ಪ ಸಗರ ಇವರ ಮನೆಯ ಒಂದುನೇಯ ಮಹಡಿಯನ್ನು ಬಾಡಿಗೆ ತೆಗಿದುಕೊಂಡು ಹೆಂಢತಿ ಮಕ್ಕಳೊಂದಿಗೆ ಚಾಲಕ ಕೆಲಸಮಾಡುತ್ತಾ ವಾಸವಾಗಿದ್ದರು, ನನ್ನ ಮಗಳಾದ ತಾಯಮ್ಮ ಇವಳಿಗೆ ಸುಮಾರು 2-3 ವರ್ಷಗಳಿಂದ ಹೊಟ್ಟೆನೋವು ಇದ್ದು ನಾವೂ ಮತ್ತು ಆಕೆಯ ಗಂಡ ಖಾಸಗಿ ಆಸ್ಪತ್ರೆಗೆ ತೋರಿಸಿದ್ದು ಖಡಿಮೆಯಾಗಿರಲಿಲ್ಲಾ 
         ಹೀಗಿದ್ದು, ದಿನಾಂಕ 04/03/2020 ರಂದು 5:30 ರ ಸುಮರಿಗೆ ನನ್ನ ಮಗಳು ತಾಯಮ್ಮಳು ಹೋಟ್ಟೆನೋವಿನಿಂದ ಬಳಲಿ ನೋವು ತಾಳದೆ ತನ್ನ ಮನೆಯ ಹೆಂಗಲ ಪಟ್ಟಿಗೆ ಸೀರೆಯಿಂದ ನೆಣುಹಾಕಿಕೊಂಡಿದ್ದಾಳೆ ಶಾಲೆಯಿಂದ ಹಿರಿಯ ಮಗನಾಧ ಜೀವನ ಇತನು ತನ್ನ ತಾಯಿ ನೆಣುಹಾಕಿಕೊಂಡು ನೇತ್ತಾಡುತ್ತಿದ್ದನು ನೋಡಿ ಜೋರಾಗಿ ಚಿರಾಡುತ್ತಾ ಅಳುವ ಶಬ್ದಕೇಳಿ ನನ್ನ ಬಾವನ ಮಗ ಶರಬಣ್ಣ ಹಾಗೂ ಓಣಿಯಾ ಇತರ ಮಹಿಳೆಯರು ತಾಯಮ್ಮಳಿಗೆ ನೇಣುನಿಂದ ಬಿಡಿಸಿ ನೆಲದಮೇಲೆ ಹಾಕಿದಾಗ ತಾಯಮ್ಮಳು ಮೃತಪಟ್ಟಿದ್ದಳು ನಮಗೆ ಕಾನೂನ ಅರಿವು ಇಲ್ಲದ ಕಾರಣ ನನ್ನ ಮಗಳ ಮೃತದೇಹವನ್ನು ಅಂತಿಮ ಸಂಸ್ಕಾರ ಕುರಿತು ಅವಳ ಗಂಡನ ಮನೆ ಮಹಲರೋಜಕ್ಕೆ ತೆಗಿದುಕೊಂಡು ಹೋಗಿದ್ದಾಗ ನಮ್ಮ ಜನಾಂಗದ ಹಿರಿಯರು ಪೊಲೀಸರಲ್ಲಿ ದೂರು ಸಲ್ಲಸಿ ಮುಂದಿನ ಕ್ರಮ ಕೈಗೊಳ್ಳಲು ತಿಳಿ ಹೇಳಿದ್ದರಿಂದ ತಡವಾಗಿ ಠಾಣೆಗೆ ಬಂದಿರುತ್ತೆನೆ, ನನ್ನ ಮಗಳು ಹೊಟ್ಟೆನೋವು ತಾಳಲಾರದೆ ನೆಣುಹಾಕಿಕೊಂಡು ಮೃತಪಟ್ಟಿದ್ದು ಅವಳ ಸಾವಿನಲ್ಲಿ ಯಾವೂದೆ ಸಂಶಯಾ ಇರುವದಿಲ್ಲಾ ಮುಂದಿನ ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತಾ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಯು,ಡಿ,ಆರ್, ನಂ-07/2020 ಕಲಂ 174 ಸಿ.ಆರ್.ಪಿ.ಸಿ. ನೇದ್ದರ ಪ್ರಕಾರ ಯು.ಡಿ,ಆರ್. ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.     
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 70/2020. ಕಲಂ 78 (3) ಕೆ.ಪಿ.ಆಕ್ಟ:- ಆರೋಪಿತನು ದಿನಾಂಕ: 05-03-2020 ರಂದು 3:30 ಪಿ.ಎಮ್.ಕ್ಕೆ ರಸ್ತಾಪೂರ ಗ್ರಾಮದ ಶರಭಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯ ಕಮಾನ ಹತ್ತಿರ   ಸಾರ್ವಜನಿಕ ಸ್ಥಳದಲ್ಲಿ ಹೋಗಿ ಬರುವ ಜನರನ್ನು ಕೂಗಿ ಕರೆದು ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗಗ ಫಿಯರ್ಾದಿದಾರರು ಸಿಬ್ಬಂದಿಯೊಂದಿಗೆ ಹೊಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಅವರಿಂದ ಒಟ್ಟು 1320/- ರೂ. ನಗದು ಹಣ , ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಅನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು ಸದರಿ ವರದಿಯು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 70/2020 ಕಲಂ.78 (3) ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರರಣ ಧಾಖಲಿಇಸಿಕೊಂಡು ತನಿಖೆ ಕೈಗೊಂಡೆಎನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!