ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04/03/2020

By blogger on ಗುರುವಾರ, ಮಾರ್ಚ್ 5, 2020


                              ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04/03/2020
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 27/2020 ಕಲಂ ಕಲಂ 323, 504, 506, 498(ಎ) ಸಂಗಡ 149 ಐಪಿಸಿ:- ಇಂದು ದಿನಾಂಕ 04-03-2020 ರಂದು 5 ಪಿ.ಎಮ್ ಕ್ಕೆ ಶ್ರೀಮತಿ ನೀಲಾಬಾಯಿ (ಸೋನಿಬಾಯಿ) ಗಂಡ ಚನ್ನಪ್ಪಾ ಜಾಧವ ವಯಾ:21 ಉ:ಕೂಲಿ ಕೆಲಸ ಜಾ: ಲಂಬಾಣಿ ಸಾ: ಜೀನಕೇರಾ ತಾಂಡಾ ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ನನ್ನ ಗಂಡ ಮತ್ತು ಅತ್ತೆ ಬಾವ ಮೈದನರೊಂದಿಗೆ ಕೂಲಿಕೆಲಸ ಮಾಡಿಕೊಂಡು ಉಪಜೀವಿಸುತ್ತೆನೆ. ನನ್ನ ತವರು ಮನೆ ಹತ್ತಿಕುಣಿ ರಾಮುನಾಯಕ ತಾಂಡಾವಿದ್ದು ನನ್ನ ತಂದೆ ತಾಯಿ ನನಗೆ ಈಗ 2 ವರ್ಷಗಳ ಹಿಂದೆ ಜೀನಕೇರಾ ತಂಡಾದ ಚನ್ನಪ್ಪಾ ತಂದೆ ಬಾಸು ಜಾಧವ ಎಂಬುವವನೊಂದಿಗೆ ಮದುವೆ ಮಾಡಿ ಕೊಟ್ಟಿರುತ್ತಾರೆ. ನನಗೆ ಈಗ ಭಾರತಿ ಅಂತಾ 10 ತಿಂಗಳದ ಒಬ್ಬಳು ಮಗಳಿರುತ್ತಾಳೆ. ನಮ್ಮ ಮನೆಯಲ್ಲಿ ನಾನು ನನ್ನ ಗಂಡನಾದ 1) ಚನ್ನಪ್ಪಾ ತಂದೆ ಬಾಸು ಅತ್ತೆಯಾದ 2) ಸೀತಿಬಾಯಿ ಗಂಡ ಬಾಸು ಭಾವನಾದ 3) ಅನೀಲ ತಂದೆ ಬಾಸು , ಮೈದುನನಾದ 4) ಬಲರಾಮ ತಂದೆ ಬಾಸು ಮತ್ತು ನೆಗೆಣ್ಣಿಯಾದ 5) ರೇಣುಕಾ ಗಂಡ ಅನೀಲ್ ಎಲ್ಲರೂ ಒಟ್ಟಾಗಿಯೇ ಇರುತ್ತೆವೆ. ನನಗೆ ಮದುವೆಯಾಗಿ ಸುಮಾರು 6 ತಿಂಗಳವರೆಗೆ ಮನೆಯಲ್ಲಿ ನನ್ನೊಂದಿಗೆ ಎಲ್ಲರೂ ಅನೋನ್ಯವಾಗಿ ಸಂಸಾರ ಮಾಡಿಕೊಂಡು ಬಂದಿರುತ್ತಾರೆ. ನಂತರ ಮೇಲ್ಕಂಡವರೆಲ್ಲರೂ ಕೂಡಿಕೊಂಡು ನೀನು ನೋಡುವದಕ್ಕೆ ಸರಿಯಾಗಿ ಇಲ್ಲಾ, ನೀನು ನಮ್ಮ ಮನೆಯಲ್ಲಿ ಮತ್ತು ಹೊಲದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲಾ, ನೀನು ನಮ್ಮ ಮನೆಗೆ ತಕ್ಕ ಸೊಸೆಯಲ್ಲಾ, ನೀನು ನಮ್ಮ ಮನೆ ಬಿಟ್ಟು ಎಲ್ಲಾದರೂ ಹೋಗು ರಂಡಿ, ಬೋಸಡಿ ಅಂತಾ ದಿನಾಲು ಬೈದು ಕೈಯಿಂದ ಹೊಡೆಬಡೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕೊಳ ಕೊಡುತ್ತಿದ್ದರು, ಮತ್ತು ನನಗೆ ಎಷ್ಟೋ ಸಲ ಉಪವಾಸ ಕೆಡವುತ್ತಿದ್ದರು. ಕೇಳದರೇ ನನ್ನ ಗಂಡನು ಮತ್ತು ಮನೆಯವರೆಲ್ಲರೂ ಸೇರಿಕೊಂಡು ನನ್ನನ್ನು ಮನಬಂದಂತೆ ಹೊಡೆಯುತ್ತಿದ್ದರು. ನನ್ನ ಗಂಡ ಮತ್ತು ನನ್ನ ಗಂಡನ ಮನೆಯವರು ನನಗೆ ನೀಡುವ ಕಿರುಕುಳ ನನ್ನ ತವರು ಮನೆಯವರಿಗೆ ವಿಷಯ ಗೊತ್ತಾಗಿ ಸುಮಾರು 2-3 ಸಲ ನನ್ನ ತವರು ಮನೆಯಿಂದ ನನ್ನ ತಂದೆಯಾದ ಶಂಕರ , ತಾಯಿಯಾದ ಶಾರುಬಾಯಿ, ಮತ್ತು ರಾಮುನಾಯಕ ತಾಂಡಾದ ಚಂದ್ರಶೇಖರ ತಂದೆ ಸೂರಜ್ಯಾ ಚವ್ಹಾಣ, ರಮೇಶ ತಂದೆ ಚಂದ್ರು ರಾಠೊಡ, ವೆಂಕಟೇಶ ತಂದೆ ಸೂರಜ್ಯಾ ಹಾಗೂ ಮೋಹನ ತಂದೆ ಶಂಕರ ಚವ್ಹಾಣ ಎಲ್ಲರೂ ಕೂಡಿ ನಮ್ಮ ತಾಂಡಾದಲ್ಲಿ ಕುಳಿತುಕೊಂಡು ನನ್ನ ಗಂಡ ಮತ್ತು ಅತ್ತೆ ಮತ್ತು ನನ್ನ ಗಂಡನ ಮನೆಯವರಿಗೆ ಬುದ್ದಿವಾದ ಹೇಳಿ ನನಗೆ ಸರಿಯಾಗಿ ನಡೆಸಿಕೊಂಡು ಹೋಗುವಂತೆ ಸುಮಾರು ಎರಡು ಸಲ ನ್ಯಾಯಪಂಚಾಯತಿ ಮಾಡಿ ಹೇಳಿ ಹೋಗಿದ್ದರು. ಆದರೂ ಕೂಡಾ ನನ್ನ ಗಂಡ ಮತ್ತು ಗಂಡನ ಮನೆಯವರು ನನಗೆ ಕಿರುಕುಳ ಕೊಡುವುದು ತಪ್ಪಿರಲಿಲ್ಲಾ. ಈಗ ಸುಮಾರು 10 ತಿಂಗಳ ಹಿಂದೆ ಅಂದರೆ ದಿನಾಂಕ 10-10-2018 ರಂದು ನಾನು ತುಂಬು ಗಭರ್ಿಣಿ ಇದ್ದಾಗ ನನ್ನ ಗಂಡ ಮತ್ತು ನನ್ನ ಗಂಡನ ಮನೆಯವರೆಲ್ಲರೂ ಕೂಡಿಕೊಂಡು ನನ್ನೊಂದಿಗೆ ಜಗಳಾ ತೆಗೆದು ನನಗೆ ಹೊಡೆಬಡಿ ಮಾಡಿ ಮನೆಯಿಂದ ಹೊರಹಾಕಿದಾಗ ಅಂದೇ  ನಾನು ನನ್ನ ತವರುಮನೆಯಾದ ರಾಮುನಾಯಕ ತಾಂಡಾಕ್ಕೆ ಬಂದು ಉಳಿದಿದ್ದು ಈಗ 10 ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಆ ವೇಳೆಯಲ್ಲಿ ನನ್ನ ಗಂಡನಾಗಲಿ ಅಥವಾ ನನ್ನ ನನ್ನ ಗಂಡನ ಮನೆಯವರಾಗಲಿ ಮಗುವಿಗೆ ನೋಡಿ ಹೋಗಲೂ ಕೂಡಾ ಬರಲಿಲ್ಲಾ. 
    ನನ್ನ ಗಂಡನಾದ 1) ಚನ್ನಪ್ಪಾ ತಂದೆ ಬಾಸು ಅತ್ತೆಯಾದ 2) ಸೀತಿಬಾಯಿ ಗಂಡ ಬಾಸು ಭಾವನಾದ 3) ಅನೀಲ ತಂದೆ ಬಾಸು, ಮೈದುನ 4) ಬಲರಾಮ ತಂದೆ ಬಾಸು ಮತ್ತು ನೆಗೆಣ್ಣಿಯಾದ 5) ರೇಣುಕಾ ಗಂಡ ಅನೀಲ್ ಅತ್ತೆ ಎಲ್ಲರೂ ಇವತ್ತಿಲ್ಲಾ ನಾಳೆ ನನ್ನನ್ನು ಕರೆದುಕೊಂಡು ಹೋಗಬಹುದು ಅಂತಾ ಕಾಯ್ದು ಕುಳಿತರು ಅವರು ನನಗೆ ಇಲ್ಲಿಯವರೆಗೆ ಕರೆದುಕೊಂಡು ಹೋಗದೇ ಇದ್ದಾಗ ನಮ್ಮ ತಂದೆ ತಾಯಿ ಹಾಗೂ ನನ್ನ ತವರು ಮನೆಯ ಹಿರಿಯವರು ಅವರಿಗೆ ಬುದ್ದಿವಾದ ಹೇಳಿದಾಗ ಅವರು ನಿಮ್ಮ ಮಗಳಿಗೆ ನಮ್ಮ ಮನೆಗೆ ಕರೆದುಕೊಂಡು ಬಂದಲ್ಲಿ ಒಬ್ಬೊಬ್ಬರಿಗೆ ಖಲಾಸ ಮಾಡುತ್ತೆವೆ ಭೋಸಡಿ ಮಕ್ಕಳೇ ಅಂತಾ ಅಂಜಿಸಿದ್ದು ಇರುತ್ತದೆ. ನನ್ನ ಗಂಡನು ನನಗೆ ಕರೆದುಕೊಂಡು ಹೋಗದೇ ಅವನು ತನ್ನ ಮನೆಯವರ ಕುಮ್ಮಕ್ಕಿನಿಂದ ದಿನಾಂಕ 26-02-2020 ರಂದು ತೊಟ್ಲೂರ ತಾಂಡಾದಲ್ಲಿ ತೊಟ್ಲೂರ ತಾಂಡಾದವಲೇ ಆದ ಸಂಗೀತಾ ತಂದೆ ಉಮಲಾ ಎಂಬಾಕೆಯೊಂದಿಗೆ ಮತ್ತೊಂದು ಮದುವೆ ಮಾಡಿಕೊಂಡಿದ್ದಾನೆ ಅಂತಾ ಗೊತ್ತಾಗಿರುತ್ತದೆ. ಸಂಗೀತಾ ಇವಳ ತಂದೆಯಾದ ಉಮಲಾ ತಂದೆ ಹೀರ್ಯಾ ನಾಯಕ ಮತ್ತು ಇತನ ಹೆಂಡತಿಯಾದ ಲಕ್ಷ್ಮೀಬಾಯಿ ಗಂಡ ಉಮಲಾ ಇವರಿಗೆ ನನ್ನ ಗಂಡನಿಗೆ ಈ ಮೊದಲು ನನ್ನೊಂದಿಗೆ ಮದುವೆಯಾಗಿದ್ದು ಮತ್ತು ಮೊದಲ ಹೆಂಡತಿಯಾದ ನಾನು ಜೀವಂತವಾಗಿದ್ದೆನೆ ಅಂತಾ ಗೊತ್ತಿದ್ದರೂ ಕೂಡಾ ತಮ್ಮ ಮಗಳಿಗೆ ನನ್ನ ಗಂಡನಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ಈ ರೀತಿಯಾಗಿ ನನಗೆ ಮಾನಸೀಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿದ ನನ್ನ ಗಂಡನಾದ 1) ಚನ್ನಪ್ಪಾ ತಂದೆ ಬಾಸು ಅತ್ತೆಯಾದ 2) ಸೀತಿಬಾಯಿ ಗಂಡ ಬಾಸು ಭಾವನಾದ 3) ಅನೀಲ ತಂದೆ ಬಾಸು, ಮೈದುನ 4) ಬಲರಾಮ ತಂದೆ ಬಾಸು ಮತ್ತು ನೆಗೆಣ್ಣಿಯಾದ 5) ರೇಣುಕಾ ಗಂಡ ಅನೀಲ್  ಮತ್ತು ನನ್ನ ಗಂಡನಿಗೆ ನನ್ನೊಂದಿಗೆ ಮೊದಲು ಮದುವೆಯಾಗಿದೆ ಅಂತಾ ಗೊತ್ತಿದ್ದರೂ ತಮ್ಮ ಮಗಳಾದ ಸಂಗೀತಾಳನ್ನು ನನ್ನ ಗಂಡನೊಂದಿಗೆ ಮದುವೆ ಮಾಡಿದ 6) ಉಮಲಾ ತಂದೆ ಹೀರ್ಯಾ ನಾಯಕ ಮತ್ತು ಇತನ ಹೆಂಡತಿಯಾದ 7) ಲಕ್ಷ್ಮೀಬಾಯಿ ಗಂಡ ಉಮಲಾ ಸಾ: ಇಬ್ಬರೂ ತೊಟ್ಲೂರ ತಾಂಡಾ ಈ 7 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 27/2020 ಕಲಂ 323, 504, 506, 498(ಎ) ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 37/2020 ಕಲಂ: 78() ಕೆ.ಪಿ. ಆಕ್ಟ್:- ಇಂದು ದಿನಾಂಕ 03.03.2020  ರಂದು ಸಂಜೆ 04:00 ಗಂಟೆಗೆ ಆರೋಪಿ ಭೀಮಶಪ್ಪ ಈತನು ಚಪೆಟ್ಲಾ ಗ್ರಾಮದ ಮಾತಾ ಮಾಣೀಕೇಶ್ವರಿ ದೇವಸ್ಥಾನದ ಹತ್ತಿರ ರೋಡಿನ ಮೇಲೆ ಅಕ್ರಮ ಮಟಕಾ ಜೂಜಾಟ ಅಂಕಿ ಸಂಖ್ಯೆ ಬರೆದುಕೊಂಡು ಸಾರ್ವಜನಿಕರಿಗೆ 1/- ರೂ ಗೆ 80/- ರೂ ಮಟಕಾ ಬರೆಯಿಸಿದರೆ ಕೊಡುವುದಾಗಿ ಹೇಳಿ ಅವರಿಂದ ಹಣ ಸಂಗ್ರಹಿಸುತ್ತಿದ್ದಾಗ ಫೀರ್ಯಾದಿದಾರರಾದ ಶ್ರೀಮತಿ ಶೀಲಕಾದೇವಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚಸ ಸಮಕ್ಷಮದಲ್ಲಿ ದಾಳೀ ಮಾಡಿ ಸದರಿ ಆರೋಪಿತನ ವಶದಲ್ಲಿದ್ದ 1]ನಗದು ಹಣ 870/-, 2] ಮಟಕಾ ಅಂಕಿ ಸಂಖ್ಯೆ ಬರೆದುಕೊಂಡ ಚೀಟಿ, 3] ಒಂದು ಬಾಲ ಪೆನ್ ಅ.ಕಿ-00, ಹೀಗೆ ಒಟ್ಟು 870/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಸದರಿ ವರದಿ ಹಾಗೂ ಪಂಚನಾಮೆಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದ ನಂತರ ಠಾಣಾ ಗುನ್ನೆ ನಂ: 37/2020 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡೆನು.

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 38/2020 ಕಲಂ 379 ಐಪಿಸಿ:- ಇಂದು ದಿನಾಂಕ 04.03.2020 ರಂದು ರಾತ್ರಿ 00.05 ಎ.ಎಂ ಕ್ಕೆ ಶ್ರೀ ಸಂಗಮೇಶ.ಜಿಡಗಿ ತಹಶೀಲ್ದಾರರು ಗುರುಮಠಕಲ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಸಾರಾಂಶವೆನೆಂದರೆ ದಿನಾಂಕ 03.03.2020 ರಂದು ರಾತ್ರಿ 10.30 ನಿ ಕ್ಕೆ ಗುರುಮಠಕಲ ಪಟ್ಟಣದ ಯಾದಗಿರಿ-ಗುರುಮಠಕಲ ಮುಖ್ಯ ರಸ್ತೆಯ ಮಾರ್ಗವಾಗಿ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಮಹೇಂದ್ರ 575ಡಿ.ಐ ಟ್ರ್ಯಾಕ್ಟರ ಸಂಖ್ಯೆ ಟಿ.ಎಸ್-06-ಇ.ಎಂ-2823 ರ ಟ್ರ್ಯಾಕ್ಟರನ್ನು ಬಸ್ ಡಿಪೋ ಹತ್ತಿರ ತಡೆದು ಈ ಟ್ರ್ಯಾಕ್ಟರನ ಚಾಲಕನಾದ ಸಂತೋಷ ತಂದೆ ಬುಗ್ಗ್ಯಾ ನಾಯಕ ಸಾಃ ಬೆಟ್ಟದಳ್ಳಿ ಇವರನ್ನು ವಿಚಾರಿಸಲಾಗಿ ದಾಖಲಾತಿಗಳನ್ನು ಕೇಳಲಾಗಿ ಯಾವುದೇ ದಾಖಲಾತಿಗಳನ್ನು ನೀಡಿರುವುದಿಲ್ಲ ಹಾಗೂ ಯಾವ ಸ್ಥಳದಿಂದ ಮರಳನ್ನು ತುಂಬಿಕೊಂಡು ಬಂದಿರುತ್ತಾರೆಂಬ ಬಗ್ಗೆ ಮಾಹಿತಿ ನಿಡಿರುವುದಿಲ್ಲ. ಆದ್ದರಿಂದ ಸದರಿಯವರು ಅಕ್ರಮವಾಗಿ ಮರಳು ಸಾಗಿಸುತ್ತಿರುವುದು ಕಂಡು ಬಂದ ಪ್ರಯುಕ್ತ ಮಹೇಂದ್ರ 575ಡಿ.ಐ ಟ್ರ್ಯಾಕ್ಟರ ಸಂಖ್ಯೆ ಟಿ.ಎಸ್-06-ಇ.ಎಂ-2823ರ ಟ್ರ್ಯಾಕ್ಟರನ್ನು ನಿಮ್ಮ ಸುಪದರ್ಿಗೆ ಪಡೆದು ಐಪಿಸಿ ಕಲಂ 379ರಡಿ ಪ್ರಕರಣವನ್ನು ದಾಖಲಿಸಿಕೊಂಡು ಕ್ರಮ ಜರುಗಿಸಲು ಸೂಚಿಸಿದೆ ಅಂತಾ ರೀತ್ಯಾ ಇರುತ್ತದೆ.

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 39/2019 ಕಲಂ 279, 337, 338 ಐಪಿಸಿ:- ಇಂದು ದಿನಾಂಕ 04.03.2020 ರಂದು ಮಧ್ಯಾಹ್ನ 12:30 ಗಂಟೆಗೆ ಗಾಯಾಳು ತನ್ನ ಹೆಂಡತಿ ಮತ್ತು ಮಕ್ಕಳನ್ನು ಮಾತನಾಡಿಸಿ ನಂತರ ತನ್ನ ಊರಿಗೆ ಮೋಟಾರು ಸೈಕಲ್ ನಂಬರ ಕೆಎ-33-ಎಸ್.-6367 ಮೇಲೆ ಹೋಗುತ್ತಿದ್ದಾಗ ಮೋಟಾರು ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಿಯಂತ್ರಿಸಲು ಸಾಧ್ಯವಾಗದೇ ಅಪಘಾತಪಡಿಸಿದ್ದು ಗಾಯಗೋಂಡಿದ್ದು ಸದರಿ ಅಪಘಾತದಲ್ಲಿ ಗಾಯಾಳುವಿಗೆ ತಲೆಯ ಹಿಂಬದಿ ಮತ್ತು ಮುಖದಲ್ಲಿ ತುಟಿಗಳಿಗೆ ರಕ್ತಗಾಯಗಳಾಗಿದ್ದು ಅಲ್ಲದೇ ವಾಹನವು ಜಖಂಗೊಂಡು ಸ್ಥಳದಲ್ಲಿಯೇ ಬಿದ್ದಿದ್ದ ಬಗ್ಗೆ ಗಾಯಾಳುವಿನ ಹೆಂಡತಿ ಫಿರ್ಯಾಧಿಯು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 39/2020 ಕಲಂ: 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಾಗಿದ್ದು ಇರುತ್ತದೆ.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಪಿ.ಎ.ಆರ್. ನಂ 09/2020. ಕಲಂ 110 (ಇ.)ಮತ್ತು (ಜಿ) ಸಿ.ಆರ.ಪಿ.ಸಿ.:- ಇಂದು ದಿನಾಂಕ 04-03-2020 ರಂದು 3:00 ಪಿ.ಎಮ್.ಕ್ಕೆ ಶ್ರೀ ಭಾಗಣ್ಣ ಪಿ.ಸಿ. 194 ಶಹಾಪೂರ ಪೊಲೀಸ ಠಾಣೆ ರವರು ಠಾಣೆಗೆ ಬಂದು ಒಂದು ವರದಿಯೊಂದಿಗೆ ಒಬ್ಬ ವ್ಯಕ್ತಿಯನ್ನು ತಂದು ಹಾಜರು ಪಡಿಸಿದ್ದು ವರದಿಯ ಸರಾಂಶ ವೇನಂದರೆ  ಇಂದು ದಿನಾಂಕ:04-03-2020 ರಂದು 2:30 ಗಂಟೆಗೆ ನಾನು ಮತ್ತು ಭೀಮನಗೌಡ ಪಿ.ಸಿ.402 ಇಬ್ಬರು ಕೂಡಿ   ತಮ್ಮ ಆದೇಶದಂತೆ ನನಗೆ ಹಂಚಿಕೆ ಮಾಡಿದ ಬೀಟ ಗ್ರಾಮವಾದ ಇಬ್ರಾಹಿಂಪೂರ ಗ್ರಾಮಕ್ಕೆ ಬೀಟ ಜಾರಿ ಕುರಿತು ಹೋದಾಗ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತು ಕೊಂಡು ಹೋಗಿ ಬರುವ ಜನರನ್ನು ಕಂಡು ಅವಾಚ್ಯ ಶಬ್ದಗಳಿಂದ ಬೈಯುತ್ತಾ  ತನ್ನಷ್ಟಕ್ಕೆ ತಾನೇ ಬೈಯುತ್ತಾ ಬರ್ರೆಲೇ ಮಕ್ಕಳ್ಯಾ ನಿಮ್ಮನ್ನು ಈ ಲೋಕ ಬಿಟ್ಟು ಪರಲೋಕಕ್ಕೆ ಕಳಿಸುತ್ತೇನೆ  ಎಂದು ಬೈಯುತ್ತಾ ಸಾರ್ವಜನಿಕ ಶಾಂತತಾ ಭಂಗ ಮಾಡುತ್ತಿದ್ದು ಆತನಲ್ಲಿಗೆ ಹೋಗಿ ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಈಶಪ್ಪ ತಂದೆ ಹಣಮಯ್ಯ ಕಲಾಲ ವಯ: 25 ವರ್ಷ ಜಾ: ಈಳಿಗ ಉ: ಕೂಲಿ ಕೆಲಸ ಸಾ: ಇಬ್ರಾಹಿಂಪೂರ ಅಂತಾ ತಿಳಿಸಿದ್ದು ಸದರಿಯವನನ್ನು ಹಾಗೇ ಬಿಟ್ಟಲ್ಲಿ ಸಾರ್ವಜನಿಕ ಶಾಂತತಾ ಭಂಗ ಮಾಡುವ ಸಂಭವಗಳು ಹೆಚ್ಚು ಇದ್ದು ಇಲ್ಲವೇ ತನಗೆ ತಾನೇ ಏನಾದರೂ ಅನಾಹುತ ಮಾಡಿಕೊಳ್ಳುವ ಸಂಭವವನ್ನು ಮನಗಂಡು ಅವನನ್ನು ಸ್ಥಳದಲ್ಲೆ ವಶಕ್ಕೆ ತೆರಗೆದುಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ಮೇಲೆ ಮುಂಜಾಗ್ರತಾ ಕ್ರಮಕ್ಕಾಗಿ ಮಾನ್ಯರವರಲ್ಲಿ ಈ ವರದಿ ನಿವೇದಿಸಿಕೊಂಡಿದ್ದು ಇದೆ. ಅಂತಾ ಇದ್ದ ವರದಿಯ ಆಧಾರದ ಮೇಲಿಂದ  ಸದರಿ ಎದುರು ದಾರನ ಮೇಲೆ ಮುಂಜಾಗ್ರತಾ ಕ್ರಮವಾಗಿ  ಠಾಣೆಯ ಪಿ.ಎ.ಆರ್.ನಂ. 09/2020 ಕಲಂ.110 (ಇ) ಮತ್ತು (ಜಿ) ಸಿ.ಆರ್.ಪಿ.ಸಿ. ಅಡಿಯಲ್ಲಿ  ಕ್ರಮ ಜರುಗಿಸಲಾಗಿದೆ 

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 69/2020  ಕಲಂ 78[3] ಕೆ.ಪಿ ಆಕ್ಟ:- ಇಂದು ದಿನಾಂಕ 04/03/2020  ರಂದು ರಾತ್ರಿ 21-30 ಗಂಟೆಗೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚಂದ್ರಕಾಂತ ಪಿ.ಎಸ್.ಐ (ಕಾಸು) ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ಒಬ್ಬ ವ್ಯಕ್ತಿಯೊಂದಿಗೆ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 04/03/2020  ರಂದು ಸಾಯಂಕಾಲ 18-30 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರನಗರದ ದಿಗ್ಗಿ ಬೇಸ್ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ  ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗಿದ್ದರಿಂದ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಸಾಯಂಕಾಲ 19-00 ಗಂಟೆಗೆ ಅನುಮತಿ ಪಡೆದುಕೊಂಡು, ನಂತರ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ರಾತ್ರಿ  20-00 ಗಂಟೆಗೆ ಲೈಟಿನ  ಬೆಳಕಿನಲ್ಲಿ ದಾಳಿ ಮಾಡಿ  ಆರೋಪಿ ಸುರೇಶ ತಂದೆ ಭೀಮಪ್ಪ ಬಿರಾದಾರ ವಯ 25 ವರ್ಷ ಜಾತಿ ಮಾದಿಗ ಉಃ ಮಟಕಾ ನಂಬರ ಬರೆದುಕೊಳ್ಳುವದು ಸಾಃ ಉಮ್ಮರದೊಡ್ಡಿ ತಾಃ ಶಹಾಪೂರ ಜಿಃ ಯಾದಗಿರಿ   ಈತನಿಂದ ನಗದು ಹಣ 2300 ರೂಪಾಯಿ ಮತ್ತು  ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು ರಾತ್ರಿ 20-00 ಗಂಟೆಯಿಂದ 21-00 ಗಂಟೆಯ ಅವಧಿಯಲ್ಲ ಜಪ್ತಿ ಪಂಚನಾಮೆ ಜಪ್ತಿ ಪಡಿಸಿಕೊಂಡಿರುತ್ತದೆ. ಸದರಿ ಆರೋಪಿತನ ವಿರುದ್ದ  ಕ್ರಮ ಕೈಕೊಳ್ಳಲು ಸೂಚಿಸಿದ ಮೇರೆಗೆ ಫಿಯರ್ಾದಿಯವರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 69/2020  ಕಲಂ 78 (3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 68/2020.ಕಲಂಃ 78(3) ಕೆ.ಪಿ.ಆ್ಯಕ್ಟ:- ಇಂದು ದಿನಾಂಕ 04/03/2020 ರಂದು 20-30 ಗಂಟೆಗೆ ಸ|| ತ|| ಪಿಯರ್ಾದಿ ಹನುಮರಡೆಪ್ಪ ಪಿ.ಐ.ಸಾಹೇಬರು ಠಾಣೆಗೆ ಬಂದು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 04/03/2020 ರಂದು ಮುಂಜಾನೆ  ಸಾಕ್ಷಿ ಕುರಿತು ಬೀದರಕ್ಕೆ ಹೋಗಿ ಮರಳಿ ಸಾಯಂಕಾಲ 17-30 ಗಂಟೆಗೆ ಪೊಲೀಸ್ ಠಾಣೆಗೆ ಬಂದಾಗ ಶಹಾಪೂರ ನಗರದ ಅಲ್ಪಾ ದಾಬಾದ ಹತ್ತಿರ ಒಂದು ಹೊಟೇಲ್ ಹತ್ತಿರ ಸಾರ್ವಜನಿಕ ಖುಲ್ಲಾ  ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ-ಸಂಖ್ಯೆಗಳು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೆರೆಗೆ, ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪುರ ರವರಿಗೆ ಪತ್ರ ವ್ಯವಹಾರ ಮಾಡಿ 18-00 ಗಂಟೆಗೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಸಿದ್ದವೀರ ಹೆಚ್.ಸಿ 167, ಸತೀಶ ಹೆಚ್.ಸಿ. 165. ಮುತ್ತಪ್ಪ ಪಿ.ಸಿ 118, ಭೀಮನಗೌಡ ಪಿ.ಸಿ.402. ಲಕ್ಕಪ್ಪ ಪಿ.ಸಿ.163. ಹಾಗೂ ಜೀಪ್ ಚಾಲಕ ನಾಗರೆಡ್ಡಿ ಎ.ಪಿ.ಸಿ 161 ರವರಿಗೆ ಮಾಹಿತಿ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ಭೀಮನಗೌಡ ಪಿ.ಸಿ 402 ರವರಿಗೆ 18-10 ಗಂಟೆಗೆ ಕಳುಹಿಸಿಕೊಟ್ಟಿದ್ದು, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ಪಂಚರಾದ 1] ಶ್ರೀ ಬಸವರಾಜ ತಂದೆ ಮಲ್ಲಿಕಾಜರ್ುನ ತಳವಾರ ವ|| 35 ಜಾ|| ಹೋಲೆಯ ಉ|| ಕೂಲಿ ಕೆಲಸ ಸಾ|| ದಿಗ್ಗಿ ಬೇಸ್ ಶಹಾಪೂರ  2] ಶ್ರೀ ಸಂಗಪ್ಪ ತಂದೆ ಮರೆಪ್ಪ ಮಾಡಿಗಿ ವ|| 40 ಜಾ|| ಹೋಲೇಯ ಉ|| ಕೂಲಿ ಸಾ|| ಅಣಬಿ ತಾ|| ಶಹಾಪೂರ ಇವರನ್ನು ಸಾಯಂಕಾಲ 18-20 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ನಾನು ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಲು ಕೇಳಿಕೊಂಡ ಮೇರೆಗೆ ಒಪ್ಪಿಕೊಂಡರು.
       ನಾನು ಮತ್ತು ಮೇಲ್ಕಂಡ ಸಿಬ್ಬಂದಿಯವರು, ಹಾಗೂ ಪಂಚರು ಇಲಾಖೆ ಜೀಪ ನಂ ಕೆಎ-33 ಜಿ-0138 ನೇದ್ದರಲ್ಲಿ, ಮೇಲಾಧಿಕಾರಿಯವರ  ಮಾರ್ಗದರ್ಶನದಲ್ಲಿ. ದಾಳಿ ಕುರಿತು ಠಾಣೆಯಿಂದ ಸಾಯಂಕಾಲ 18-25 ಗಂಟೆಗೆ ಹೊರಟೇವು. ಸದರಿ ವಾಹನವು ನಾಗರೆಡ್ಡಿ ಎ.ಪಿ.ಸಿ ಇವರು ಚಲಾಯಿಸುತಿದ್ದರು, ನೇರವಾಗಿ ಅಲ್ಫಾ ದಾಬಾದ ಹತ್ತಿರ  ಸಾಯಂಕಾಲ 18-35 ಗಂಟೆಗೆ ಹೋಗಿ ಜೀಪ್ ನಿಲ್ಲಿಸಿ ಜೀಪಿನಿಂದ ಎಲ್ಲರು ಇಳಿದು ಅಲ್ಲಿಂದ ನಡೆದುಕೊಂಡು ಹೋಗಿ ಸುಮಾರು 15 ಮೀಟರ ದೂರದಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಒಂದು ಹೊಟೇಲ್ ಹತ್ತಿರ ಗೊಡೆಯ ಮರೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾವಾದ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತಿದ್ದ ಸದರಿಯವನು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಳ್ಳುತಿದ್ದ ಬಗ್ಗೆ ಪಂಚರ ಸಮಕ್ಷಮದಲ್ಲಿ ಖಚಿತ ಪಡಿಸಿಕೊಂಡು, ನಾನು ಮತ್ತು ಸಿಬ್ಬಂದಿಯವರು ಸಾಯಂಕಾಲ 18-45 ಗಂಟೆಗೆ ದಾಳಿ ಮಾಡಿದಾಗ ಮಟಕಾ ಅಂಕಿ ಸಂಖ್ಯೆಗಳನ್ನು  ಬರೆಸಲು ಬಂದ ಜನರು ಓಡಿ ಹೋಗಿದ್ದು, ಮಟಕಾ ಅಂಕಿ ಬರೆದುಕೊಳ್ಳುತಿದ್ದ ವ್ಯಕ್ತಿ ಸಿಕ್ಕಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲು  ಮಲ್ಲಪ್ಪ ತಂದೆ ರಾಯಪ್ಪ ಬಡಿಗೇರ ವ|| 24 ಜಾ|| ಹೋಲೆಯ ಉ|| ಮಟಕಾ ಬರೆದುಕೊಳ್ಳುವದು ಸಾ|| ದಿಗ್ಗಿಬೇಸ್ ಶಹಾಪೂರ ಅಂತ ಹೇಳಿದನು. ಪಂಚರ ಸಮಕ್ಷಮದಲ್ಲಿ ಈತನ ಅಂಗಶೋಧನೆ ಮಾಡಿದಾಗ ನಗದು ಹಣ 1050-00 ರೂಪಾಯಿ ಮತ್ತು 1 ಬಾಲ್ ಪೆನ್ ಸಿಕ್ಕಿದ್ದು ಮತ್ತು 2 ಮಟಕಾ ಚೀಟಿಗಳು, ಸದರಿಯವನಿಗೆ ಸಿಕ್ಕ ಮುದ್ದೆಮಾಲಿನ ಬಗ್ಗೆ ವಿಚಾರಣೆ ಮಾಡಲಾಗಿ ಸಾರ್ವಜನಿಕರಿಂದ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಮತ್ತು ಮಟಕಾ ಅಂಕಿಗಳನ್ನು ಬರೆಯಲು ಉಪಯೋಗಿಸಿದ ಪೆನ್ನು ಇದೆ ಇರುತ್ತದೆ. ಸದರಿ ಹಣ ಮಟಕಾ ನಂಬರಗಳು ಬರೆದುಕೊಂಡಿದ್ದರಿಂದ ಜಮಾ ಆದ ಹಣ ಅಂತ ಹೇಳಿದನು. ನಗದು ಹಣ 1050-00 ರೂಪಾಯಿ ಮತ್ತು 2 ಮಟಕಾ ಚೀಟಿಗಳು ಹಾಗೂ ಒಂದು ಬಾಲ್ ಪೆನ್ ಒಂದು ಲಕೋಟೆಯಲ್ಲಿ ಹಾಕಿಕೊಂಡು, ನಾನು ಮತ್ತು ಪಂಚರು ಜಂಟಿಯಾಗಿ ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 19-00 ಗಂಟೆಯಿಂದ 20-00 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡೆನು. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 20-10 ಗಂಟೆಗೆ ಬಂದಿದ್ದು, ಠಾಣೆಯಲ್ಲಿ ಆರೋಪಿತನ ವಿರುದ್ದ ವರದಿಯನ್ನು ತಯ್ಯಾರಿಸಿ, ಆರೋಪಿ ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರು ಪಡಿಸಿ, ಸರಕಾರದ ಪರವಾಗಿ 20-30 ಗಂಟೆಗೆ ಮುಂದಿನ ಕ್ರಮಕೈಕೊಳ್ಳುವಂತೆ  ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 68/2020 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶೊರಾಪೂರ ಪೊಲೀಸ ಠಾಣೆ ಗುನ್ನೆ ನಂ:- 63/2020 ಕಲಂ 306 ಸಂ,34 ಐಪಿಸಿ  :- ಇಂದು ದಿನಾಂಕ:04/03/2020 ರಂದು 4 ಪಿ.ಎಂ. ಕ್ಕೆ ಠಾಣೆಯ ಎಸ್.ಹೆಚ್ಡಿ ಕರ್ತವ್ಯದಲ್ಲಿದ್ದಾಗ ಶ್ರೀಮತಿ ಶಾಂತಮ್ಮ ಗಂಡ ದಿ||ಲೋಕಪ್ಪ ಸಾಲಿ ವಯಾ:65 ವರ್ಷ ಉ:ಕೂಲಿ ಜಾತಿ:ಉಪ್ಪಾರ ಸಾ:ಕನ್ನಳ್ಳಿ ತಾ:ಹುಣಸಗಿನನಗೆ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ಗಂಡು ಮಕ್ಕಳಲ್ಲಿ ಚಿಕ್ಕವನಾದ ಬಸವರಾಜ ವಯಾ:28 ವರ್ಷ ಈತನಿಗೆ ಸುಮಾರು 5 ವರ್ಷಗಳ ಹಿಂದೆ ನಮ್ಮೂರ ಕನ್ನಳ್ಳಿ ಗ್ರಾಮದ ರಂಗಪ್ಪ ತಂದೆ ನಿಂಗಪ್ಪ ತೇಲಗರ ಇವರ ಮಗಳಾದ ಮಿನಾಕ್ಷಿಯೊಂದಿಗೆ ಮದುವೆ ಮಾಡಿದ್ದು ಇರುತ್ತದೆ. ಮಗನಾದ ಬಸವರಾಜ ಈತನಿಗೆ ಈ ಸಧ್ಯ ಮೂರು ವರ್ಷದ ಶ್ರಿದೇವಿ ಅನ್ನುವ ಒಬ್ಬಳು ಮಗಳಿರುತ್ತಾರೆ. ಮದುವೆಯಾದ 4 ವರ್ಷಗಳ ವರೆಗೆ ಮಗನಾದ ಬಸವರಾಜ ಹಾಗೂ ಸೊಸೆಯಾದ ಮಿನಾಕ್ಷಿ ಇಬ್ಬರು ನಮ್ಮ ಮನೆಯಲ್ಲಿಯೆ ಇರುತ್ತಿದ್ದರು. ಈಗ ಒಂದು ವರ್ಷದಿಂದ ಸೋಸೆಯಾದ ಮಿನಾಕ್ಷಿ ಇವಳು ಆಗಾಗ ತವರು ಮನೆಗೆ ಹೋಗಿ ತವರು ಮನೆಯಲ್ಲಿಯೆ ಇರುತ್ತಿದ್ದಳು. ನನ್ನ ಮಗನಾದ ಬಸವರಾಜ ಆಗಾಗ ಮಾವನ ಮನೆಗೆ ಹೋಗಿ ಬರುವದು ಮಾಡುತ್ತಿದ್ದನು. ಇದೆ ವಿಷಯಕ್ಕೆ ಸಂಬಂಧಿಸಿದಂತೆ ನಾನು ನನ್ನ ಮಕ್ಕಳಾದ ಹಣಮಂತ್ರಾಯ ಮತ್ತು ಬಸವರಾಜ ನಮ್ಮ ಗ್ರಾಮದವರಾದ ನಾದಬ್ರಹ್ಮ ತಂದೆ ಹಣಮಂತ್ರಾಯ ಹೇಬ್ಬಾಳಕರ, ದೇವಣ್ಣ ತಂದೆ ಹಳ್ಳೇಪ್ಪ ಸಾಲೀ, ಬಲಬೀಮ ತಂದೆ ಬಾಲಪ್ಪ ಸಾಲೀ, ಮಲಕಪ್ಪ ತಂದೆ ಬಸಪ್ಪ ಬಾಕಲಿ ಎಲ್ಲರೂ ಕೂಡಿ ನಮ್ಮ ಸೋಸೆಯಾದ ಮಿನಾಕ್ಷಿ ಇವರ ಮನೆಗೆ ಹೋಗಿ ಮಿನಾಕ್ಷಿಯ ತಂದೆಯಾದ ರಂಗಪ್ಪ ಅವರ ತಾಯಿಯಾದ ಯಂಕಮ್ಮ ಅವರ ಮಗನಾದ ನಿಂಗಪ್ಪ ಇವರಿಗೆ ಬುದ್ದಿ ಮಾತು ಹೇಳಿ ನಿಮ್ಮ ಮಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವದು ಬೇಡ ನಮ್ಮ ಮನೆಗೆ ಕಳುಹಿಸಿಕೊಡ್ರಿ ಅಂತಾ ಹೇಳಿದಾಗ ಆಗ ಅವರು ನಿಮ್ಮ ಮಗ ಬಸವರಾಜ ಈತನು ಬರಿ ಕುಡಿಯುವದು ಮಾಡುತ್ತಾನೆ ಅವನಿಗೆ ಮೊದಲು ಬುದ್ದಿ ಹೇಳಿರಿ ಅಂತಾ ಸೊಸೆಯಾದ ಮಿನಾಕ್ಷಿ ಇವಳನ್ನು ನಮ್ಮ ಮನೆಗೆ ಕಳುಹಿಸಿದ್ದರು. ಹಿಗಿದ್ದು ದಿನಾಂಕ:20-02-2020 ರಂದು ರಾತ್ರಿ 10 ಗಂಟೆ ಸುಮಾರಿಗೆ ನಾನು ನನ್ನ ಮಗನಾದ ಬಸವರಾಜ ಸೊಸೆಯಾದ ಮಿನಾಕ್ಷಿ ಮೂವರು ಮನೆಯಲ್ಲಿರುವಾಗ ಸೋಸೆ ಮಿನಾಕ್ಷಿ ಇವರ ತಂದೆಯಾದ ರಂಗಪ್ಪ  ಮಗನಾದ ನಿಂಗಪ್ಪ ಇಬ್ಬರು ಮನೆಗೆ ಬಂದವರೆ ಮಗನಾದ ಬಸವರಾಜನಿಗೆ ಕರೆದುಕೊಂಡು ಹೋಗುತ್ತಿರುವಾಗ ನಾನು ಅವರಿಗೆ ಯಾಕೇ ಕರೆದುಕೊಂಡು ಹೋಗುತ್ತಿರಿ ಅಂತಾ ಕೇಳಿದ್ದಕ್ಕೆ ಅವರು ಇವನಿಗೆ ಇನ್ನೊಮ್ಮೆ ಕುಡಿಯಲಾರದೆ ಹಾಗೇ ಬುದ್ದಿ ಕಲಿಸುತ್ತೆವೆ  ಅಂತಾ ಕರೆದುಕೊಂಡು ಹೋಗಿ ಅವರ ಮಾವನಾದ ರಂಗಪ್ಪ ಅತ್ತೆಯಾದ ಯಂಕಮ್ಮ ಅವರ ಮಗನಾದ ನಿಂಗಪ್ಪ ಮೂವರು ಕೂಡಿ ಮಗ ಬಸವರಾಜನಿಗೆ ಹೊಡೆ ಬಡೆ ಮಾಡಿ ಇನ್ನೊಮ್ಮೆ ಕುಡಿದರೆ ನೋಡು ಬೇದರಿಕೆ ಹಾಕಿದ್ದು ನನ್ನ ಮಗ ಈ ವಿಷಯವನ್ನು ನನ್ನ ಮುಂದೆ ಹೇಳಿದ್ದನು. ಅವತ್ತಿನಿಂದ ನನ್ನ ಮಗ ಅಂಜಿಕೊಂಡು ಹೆದರುತ್ತಾ ತಿರುಗಾಡುತ್ತಿದ್ದನು. ಹೀಗಿರುವಾಗ ದಿನಾಂಕ:22/02/2020 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ಬಸವರಾಜ ಈತನ ಮಾವನಾದ ರಂಗಪ್ಪ ಇವರು ನನ್ನ ಹಿರಿಯ ಮಗನಾದ ಹಣಮಂತ್ರಾಯ ಈತನಿಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ನಿಮ್ಮ ಮಗನಾದ ಬಸವರಾಜ ಈತನು ಇಂದು ನಮ್ಮ ಹೊಲದಲ್ಲಿರುವಾಗ 3-30 ಪಿ.ಎಂ. ಸುಮಾರಿಗೆ ಕವಳಿಗೆ ಗದ್ದಿಗೆ ಹೊಡೆಯುವ ಕ್ರಿಮಿನಾಶಕ ಔಷದ ಸೇವನೆ ಮಾಡಿರುತ್ತಾನೆ ಬನ್ನಿರಿ ಅಂತಾ ವಿಷಯ ತಿಳಿಸಿದಾಗ ನಾನು ನಮ್ಮ ಹಿರಿಯ ಮಗಳ ಗಂಡನಾದ ನಿಂಗಪ್ಪ ತಂದೆ ಚೆನ್ನಪ್ಪ ಡವಳಗಿ, ಸಣ್ಣ ಮಗಳ ಗಂಡನಾದ ಬಲಬೀಮ ತಂದೆ ಮಾನಪ್ಪ ಪೂಜಾರಿ ಹಾಗೂ ನಮ್ಮ ಅಣ್ಣತಮಕಿಯವರಾದ ಸಿದ್ರಾಮ ತಂದೆ ಬಾಲಪ್ಪ ಸಾಲೀ ಇವರಿಗೆ ವಿಷಯ ತಿಳಿಸಿದಾಗ ಅವರೆಲ್ಲರೂ  ಘಟನಾ ಸ್ಥಳಕ್ಕೆ ಹೋಗಿ ಮಗನಾದ ಬಸವರಾಜ ಈತನನ್ನು ನೋಡಿ ಉಪಚಾರ ಕುರಿತು ಕೆಂಬಾವಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿ ಅಲ್ಲಿಂದ ವೈಧ್ಯಾಧಿಕಾರಿಗಳ ಸಲಹೇ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ನಂತರ ನಾನು ಕಲಬುರಗಿ ಜಯದೇವ ಆಸ್ಪತ್ರೆಗೆ ಹೋಗಿ ಉಪಚಾರ ಪಡೆಯುತ್ತಿದ್ದ ಮಗ ಬಸವರಾಜನನ್ನು ನೋಡಿದ್ದು ಅವನು ಕೊಮಾ ಸ್ಥಿತಿಯಲ್ಲಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ನಂತರ ನಾನು ಮರಳಿ ಊರಿಗೆ ಬಂದು ಊರಲ್ಲಿ ಇದ್ದೆನು. ಇಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ನಮ್ಮ ಸೊಸೆಯಾದ ಮಿನಾಕ್ಷಿ ಇವಳು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ಉಪಚಾರ ಪಡೆಯುತ್ತಿದ್ದ ಮಗನಾದ ಬಸವರಾಜ ಈತನು ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ:04/03/2020 ರಂದು ಬೆಳಿಗ್ಗೆ 10 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂತಾ ವಿಷಯ ತಿಳಿಸಿದಾಗ ನಾನು ನಮ್ಮ ಮಗನಾದ ಹಣಮಂತ್ರಾಯ ಈತನೊಂದಿಗೆ  ಠಾಣೆಗೆ ಬಂದು ದೂರು ನಿಡಿದ್ದು ಇರುತ್ತದೆ. ನನ್ನ ಮಗ ಬಸವರಾಜ ಈತನಿಗೆ  ಅವರ ಮಾವನಾದ ರಂಗಪ್ಪ ಅತ್ತೆಯಾದ ಯಂಕಮ್ಮ ಹಾಗೂ ರಂಗಪ್ಪನ ಮಗನಾದ ನಿಂಗಪ್ಪ ಈ ಮೂವರು ಹೊಡೆ ಬಡೆ ಮಾಡಿದಕ್ಕೆ ಅವನು ಅಂಜಿ ವಿಷ ಸೇವನೆ ಮಾಡಿದ್ದು ಇರುತ್ತದೆ ಮೂವರ ಮೇಲೆ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ಒದಗಿಸಿಕೊಡಲು ವಿನಂತಿ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಶೊರಾಪೂರ ಪೊಲೀಸ ಠಾಣೆ ಗುನ್ನೆ ನಂ:- 62/2020 ಕಲಂ 379 ಐಪಿಸಿ :- ಇಂದು ದಿನಾಂಕ:04/03/2020 ರಂದು 1 ಪಿ.ಎಂ. ಕ್ಕೆ ಫಿಯರ್ಾದಿ ಶ್ರೀ ಪರಶುರಾಮತಂದೆಜಗದೇವಪ್ಪಕನಕಗಿರಿ ವ|| 24 ವರ್ಷಜಾ|| ಕಬ್ಬಲಿಗ ಉ|| ಕೂಲಿ ಕೆಲಸ ಸಾ|| ಮೇದಾರಗಲ್ಲಿ ಸುರಪುರತಾ|| ಸುರಪುರ,ಇವರುಠಾಣೆಗೆ ಬಂದುಒಂದುಅಜರ್ಿ ನಿಡಿದ್ದು ಸಾರಾಂಶವೆನೆಂದರೆನನ್ನದೊಂದು ಪಲ್ಸರ ಮೋಟರ ಸೈಕಲ್ ನಂಬರಏಂ-33-ಘ-2964ಇದ್ದುಅದರ ಚೆಸ್ಸಿ ನಂಬರಃ- ಒಆ2ಂ11ಅಙ2ಎಘಏ16465 ಇಂಜಿನ್ ನಂಬರಆಊಙಘಎಏ66418 ಇರುತ್ತದೆ. 
ಹಿಗಿದ್ದು ದಿನಾಂಕ 26/02/2020 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ನನ್ನ ಮೋಟರ ಸೈಕಲ್ ನಂ. ಏಂ-33-ಘ-2964 ನೇದ್ದನ್ನು ನಮ್ಮ ಮನೆಯ ಹತ್ತಿರಇರುವ ಹನುಮಾನದೇವರಗುಡಿಯ ಪಕ್ಕದಲ್ಲಿರುವಖುಲ್ಲಾಜಾಗದಲ್ಲಿ ಮೋಟರ್ ಸೈಕಲ್ ನಿಲ್ಲಿಸಿ ಹ್ಯಾಂಡ್ ಲಾಕ್ ಮಾಡಿಕೊಂಡು ಮನೆಗೆ ಹೊಗಿದ್ದೆನು. ನಂತರ ಸಾಯಂಕಾಲ 7:30 ಗಂಟೆ ಸುಮಾರಿಗೆ ನಾನು ಹೊರಗಡೆ ಹೊಗಬೇಕು ಅಂತಾ ಹನುಮಾನದೇವರಗುಡಿಯ ಹತ್ತಿರ ನಿಲ್ಲಿಸಿದ ಮೋಟರ್ ಸೈಕಲ್ತಗೆದುಕೊಂಡು ಹೊಗುವ ಸಲುವಾಗಿ ಮೋಟರ್ ಸೈಕಲ್ ನೋಡಲಾಗಿ ಸ್ಥಳದಲ್ಲಿ ಮೋಟರ್ ಸೈಕಲ್ಇರಲಿಲ್ಲ. ನಂತರ ನಾನು ಗಾಬರಿಯಾಗಿಆಕಡೆಈಕಡೆ ಹುಡುಕಾಡಿ ವಿಚಾರ ಮಾಡಲುಯಾವುದೇ ಮಾಹಿತಿ ಸಿಕ್ಕಿರುವದಿಲ್ಲ. ಯಾರೋ ಕಳವು ಮಾಡಿಕೊಂಡು ಹೊಗಿದ್ದಇರುತ್ತದೆ. ನನ್ನ ಕಳುವಾದ ಮೋಟರ್ ಸೈಕಲ್ ಅ.ಕಿ 45,000 ರೂಗಳು ಆಗುತ್ತದೆ. ನನ್ನ ಮೋಟರ್ ಸೈಕಲ್ ದಿನಾಂಕ 26/02/2020 ರಂದು 6:00 ಪಿ.ಎಂ ದಿಂದ 7:30 ಪಿ.ಎಂ ದಅವಧಿಯಲ್ಲಿಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾನು ಇಲ್ಲಿಯ ವರೆಗೆ ಹುಡುಕಾಡಿ ಸಿಗದೆ ಇರುವದಕ್ಕೆಇಂದುತಡವಾಗಿದೂರು ನಿಡುತ್ತಿದ್ದು, ಕಾರಣ ಕಳುವಾದ ನನ್ನ ಮೋಟರ ಸೈಕಲ್ ಬಗ್ಗೆ ಕಾನೂನು ಕ್ರಮ ಜರುಗಿಸಿ ಪತ್ತೆ ಮಾಡಿಕೊಡಲು ವಿನಂತಿ. ಕೊಟ್ಟಅಜರ್ಿ ಸಾರಾಂಶ ಮೇಲಿಂದಠಾಣಾಗುನ್ನೆ ನಂ. 62/2020 ಕಲಂ: 379 ಐಪಿಸಿ ನೇದ್ದರಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡೇನು.
 
ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 25/2020 ಕಲಂ: 87 ಕೆ.ಪಿ ಆಕ್ಟ್:- ಇಂದು ದಿನಾಂಕ:04.03.2020 ರಂದು ಮುಂಜಾನೆ 9:00 ಗಂಟೆಗೆ ಪಿಎಸ್ಐ ರವರು  ಠಾಣೆಯಲ್ಲಿದ್ದಾಗ ಕಕ್ಕೇರಾ ಗ್ರಾಮದ ಬೀಟ್ ಸಿಬ್ಬಂದಿಯಾದ ಸಣಕೆಪ್ಪ ಹೆಚ್ಸಿ-27 ರವರು ನನಗೆ ತಿಳಿಸಿದ್ದೇನೆಂದರೆ, ಕಕ್ಕೇರಾ ಪಟ್ಟಣದ ಪೋಲಬಾಯರ ದೊಡ್ಡಿಯ ಮಲ್ಲಪ್ಪ ತಂದೆ ಭೀಮಣ್ಣ  ಟೋಕಾಪೂರ ರವರ ಹೊಲದ ಹತ್ತಿರ ಹಳ್ಳದ ದಂಡೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ್-ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಅವರವಲ್ಲಿ ಹಣವನ್ನು ಪಣಕ್ಕೆ ಕಟ್ಟಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತ ತಿಳಿಸಿದ್ದು. ಸದರಿ ಸಿಬ್ಬಂದಿಯವರು ಹೇಳಿದ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ್ದರಿಂದ ಪಿಎಸ್ಐ ರವರು  ಉಪ ಠಾಣೆಯಲ್ಲಿ ಉಳಿದುಕೊಂಡು ಮಾನ್ಯ ನ್ಯಾಯಾಲಯವು ನೀಡಿದ ಅನುಮತಿ ಪತ್ರ ಮತ್ತು ಜ್ಞಾಪನಾ ಪತ್ರವನ್ನು  ಸಿದ್ರಾಮರೆಡ್ಡಿ ಪಿಸಿ-423 ರವರೊಂದಿಗೆ ಕಳುಹಿಸಿ ಕೊಟ್ಟಿದ್ದು. ಪಿಎಸ್ಐ ರವರು ಜ್ಞಾಪನ ಪತ್ರದಲ್ಲಿ  ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿದ್ದು. ಪಿಎಸ್ಐ ರವರುನ ಕಳುಹಿಸಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:25/2020 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ..
ನಂತರ ಮಾನ್ಯ ಪಿಎಸ್ಐ ಸಾಹೇಬರು 6:45 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಒಂದು 52 ಇಸ್ಪೀಟ್ ಎಲೆಗಳು ನಗದು ಹಣ 4600/- ರೂ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. 
ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 
1) ಬಂದಿಗಿಸಾಬ ತಂದೆ ಮೇರೆಸಾಬ ಓಂಟಿ ವ: 40 ವರ್ಷ  ಜಾ: ಮುಸ್ಲಿಂ ಉ: ಹೋಟೆಲ್ ಕೆಲಸ, ಸಾ: ಕಕ್ಕೇರಾ 
2) ಖಾಸಿಮಸಾಬ ತಂದೆ ರಸೂಲಸಾಬ ಸುರಪೂ ವ:33 ವರ್ಷ ಜಾ: ಮುಸ್ಲಿಂ ಉ: ಡ್ರೈವರ್ ಸಾ: ಕಕ್ಕೇರಾ ತಾ:ಸುರಪೂ 
3) ನಿಂಗಣ್ಣ ತಂದೆ ಮಲ್ಲಪ್ಪ ಟೋಕಾಪೂರ ವ:32 ವರ್ಷ ಜಾ: ಕಬ್ಬಲಿಗ ಉ: ಒಕ್ಕಲುತನ ಸಾ: ಕಕ್ಕೇರಾ ತಾ: ಸುರಪೂರ 
4) ಖಾದಸಾಬ ತಂದೆ ಬಂದಿಗಿಸಾಬ ಸುರಪೂರ ವ:40 ವರ್ಷ ಜಾ: ಮುಸ್ಲಿಂ ಉ: ಕೂಲಿ ಸಾ: ಕಕ್ಕೇರಾ. 
5) ಸೈಯದ್ ತಂದೆ ಮೌಲಾಸಾಬ ಓಂಟಿ ವ:45 ವರ್ಷ ಜಾ: ಮುಸ್ಲಿಂ ಉ; ಕೂಲಿಕೆಲಸ ಸಾ: ಕಕ್ಕೇರಾ 
6) ಮಾನಪ್ಪ ತಂದೆ ಚಂದಪ್ಪ ಜಂಪರ ವ:34 ವರ್ಷ ಜಾ: ಪುಜಾರಿ ಉ: ಒಕ್ಕಲುತನ ಸಾ: ಕಕ್ಕೇರಾ ತಾ: ಸುರಪೂರ. 
7) ದವಲಸಾಬ ತಂದೆ ಮದನಸಾನ ಶಹಾನಿ ವ: 50 ವರ್ಷ ಜಾ: ಮುಸ್ಲಿಂ ಉ: ಕೂಲಿಕೆಲಸ ಸಾ: ಕಕ್ಕೇರಾ ತಾ: ಸುರಪೂರ



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!