ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03/03/2020

By blogger on ಬುಧವಾರ, ಮಾರ್ಚ್ 4, 2020


                        ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03/03/2020
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 22/2020 ಕಲಂ: 279,337 ಐಪಿಸಿ:- ಇಂದು ದಿನಾಂಕ: 03/03/2020 ರಂದು 2-30 ರಂದು ಜಿಜಿಹೆಚ್ ಯಾದಗಿರಿಯಿಂದ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದಿದ್ದು, ಶ್ರೀ ಗಂಗಾಧರ ಪಾಟೀಲ್ ಎ.ಎಸ್.ಐ ರವರು ಎಮ್.ಎಲ್.ಸಿ ವಿಚಾರಣೆಗೆ ಹೋಗಿ ಗಾಯಾಳು ಉಮೇಶ ತಂದೆ ತುಕಾರಾಮ ಬಾಣತಿಹಾಳ, ವ:29, ಜಾ:ಹೊಲೆಯ, ಉ:ಕ್ಲೀನರ ಸಾ:ಸಾವಳಸಂಗ ತಾ:ಇಂಡಿ ಜಿ:ವಿಜಯಪೂರ ಈತನ ಹೇಳಿಕೆ ಫಿರ್ಯಾಧಿ ಪಡೆದುಕೊಂಡು 6-30 ಪಿಎಮ್ ಕ್ಕೆ ಮರಳಿ ಬಂದು ಹಾಜರಪಡಿಸಿದ್ದು, ಸದರಿ ಹೇಳಿಕೆ ಫಿರ್ಯಾಧಿ ಸಾರಾಂಶವೇನಂದರೆ ನಾನು ಟಿಪ್ಪರ ನಂ. ಕೆಎ 36 ಬಿ 4879 ನೇದ್ದರ ಮೇಲೆ ಕ್ಲೀನರ ಅಂತಾ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ಸದರಿ ಟಿಪ್ಪರ ಮೇಲೆ ಸುಖದೇವ ತಂದೆ ಗಿರಿಮಲ್ಲಪ್ಪ ದೇಗಿನಾಳಕಲ್ ಈತನು ಡ್ರೈವರ ಅಂತಾ ಕೆಲಸ ಮಾಡಿಕೊಂಡಿರುತ್ತಾನೆ. ಈ ದಿವಸ ದಿನಾಂಕ: 03/03/2020 ರಂದು ಸದರಿ ನಮ್ಮ ಮೇಲ್ಕಂಡ ಟಿಪ್ಪರ ನಂ. ಕೆಎ 36 ಬಿ 4879 ನೇದ್ದನ್ನು ನಾನು ಮತ್ತು ಸುಖದೇವ ಇಬ್ಬರೂ ಗೂಗಲ್ದಿಂದ ತೆಗೆದುಕೊಂಡು ಬೀದರ ಕಡೆಗೆ ಹೊರಟೇವು. ಸದರಿ ಟಿಪ್ಪರನ್ನು ಸುಖದೇವ ತಂದೆ ಗಿರಿಮಲ್ಲಪ್ಪ ದೇಗಿನಾಳ ಸೋನಕನಹಳ್ಳಿ ಈತನು ಚಲಾಯಿಸುತ್ತಿದ್ದನು. ನಾನು ಕ್ಲೀನರ ಸೀಟಿನಲ್ಲಿ ಕುಳಿತ್ತಿದ್ದೆನು. ಮದ್ಯಾಹ್ನ 12 ಗಂಟೆ ಸುಮಾರಿಗೆ ಯಾದಗಿರಿ-ವಡಗೇರಾ ಮೇನ ರೋಡ ಹಾಲಗೇರಾ ದಾಟಿದ ನಂತರ ಫಕಿರಸಾಬ ದಗರ್ಾದ ಸಮೀಪ ಹೋಗುತ್ತಿದ್ದಾಗ ಟಿಪ್ಪರ ಚಾಲಕ ಸುಖದೇವನು ಟಿಪ್ಪರನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೊರಟು ಯಾವುದೋ ಒಂದು ವಾಹನವನ್ನು ಓರಟೇಕ ಮಾಡಲು ಹೋಗಿ ಹಳ್ಳದ ಬ್ರಿಜ್ಡ್ ಹತ್ತಿರ ಟಿಪ್ಪರನ್ನು ಒಮ್ಮಲೇ ಬಲಕ್ಕೆ ಕಟ್ ಮಾಡಿದ್ದರಿಂದ ಟಿಪ್ಪರ ಅವನ ನಿಯಂತ್ರಣ ತಪ್ಪಿ ಹಳ್ಳದ ತೆಗ್ಗಿನಲ್ಲಿ ಬೋರಲಾಗಿ ಪಲ್ಟಿಯಾಗಿ ಬಿದ್ದು ಬಿಟ್ಟಿತ್ತು. ನಾವಿಬ್ಬರು ಟಿಪ್ಪರ ಕ್ಯಾಬನದಲ್ಲಿ ಸಿಕ್ಕಿಹಾಕಿಕೊಂಡು ಬಿದ್ದೆವು. ದಾರಿ ಮೇಲೆ ಹೋಗುತ್ತಿದ್ದ ಯಾರೋ ಸಾರ್ವಜನಿಕರು ನೋಡಿ ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳದವರಿಗೆ ಹೇಳಿದ್ದರಿಂದ ಅವರು ಬಂದು ಕ್ರೇನ ತರಿಸಿ, ನಮಗೆ ಕ್ಯಾಬಿನದಿಂದ ಹೊರಗಡೆ ತೆಗೆದರು. ಸದರಿ ಅಪಘಾತದಲ್ಲಿ ನನಗೆ ಕಾಲುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಡ್ರೈವರ ಸುಖದೇವನಿಗೆ ಕೂಡಾ ಎರಡು ಕಾಲುಗಳಿಗೆ ಅಲ್ಲಲ್ಲಿ ರಕ್ತ ಮತ್ತು ಗುಪ್ತಗಾಯಗಳಾಗಿದ್ದವು. ನಮಗೆ 108 ಅಂಬ್ಯುಲೇನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಗೆ ತಂದು ಸೇರಿಕೆ ಮಾಡಿರುತ್ತಾರೆ. ಸದರಿ ಅಪಘಾತವು ಟಿಪ್ಪರ ಚಾಲಕ ಸುಖದೇವ ಈತನ ನಿರ್ಲಕ್ಷತನದಿಂದ ಸಂಭವಿಸಿರುತ್ತದೆ. ಕಾರಣ ಸದರಿ ಟಿಪ್ಪರ ಚಾಲಕ ಸುಖದೇವ ತಂದೆ ಗಿರಿಮಲ್ಲಪ್ಪ ದೇಗಿನಾಳಕಲ್ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 22/2020 ಕಲಂ: 279,337 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 36/2020 ಕಲಂ 143, 147, 323, 324, 504, 506 ಸಂಗಡ 149 ಐಪಿಸಿ:-ದಿನಾಂಕ 29.02.2020 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾಧಿದಾರಳು ಆರೋಪಿತರಿಂದ ಖರೀದಿ ಮಾಡಿದ ಜಾಗದಲ್ಲಿ ಕಲ್ಲನ್ನು ಹಾಕುತ್ತಿದ್ದಾಗ ಆರೋಪಿತರೆಲ್ಲರೂ ಸೇರಿ ಏಕ್ಕೊದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು ಬಂದು ಪಿರ್ಯಾಧಿದಾರಳೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕಲ್ಲಿನಿಂದ, ಕೈಯಿಂದ ಹೊಡೆಬಡಿ ಮಾಡಿ ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾಧಿದಾರಳು ಊರಲ್ಲಿ ಹಿರಿಯರೊಂದಿಗೆ ವಿಚಾರ ಮಾಡಿ ತಡವಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ: 36/2020 ಕಲಂ 143,147, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 67/2020. ಕಲಂ 279, 338 ಐ.ಪಿ.ಸಿ.:-    ಆರೋಪಿತನು ದಿನಾಂಕ:29-02-2020 ರಂದು 4:00 ಪಿ.ಎಮ್. ಸುಮಾರಿಗೆ ಶಹಾಪೂರ ಭೀಮರಾಯನ ಗುಡಿ ಮುಖ್ಯ ರಸ್ತೆಯ ಆರಬೋಳ ಕಲ್ಯಾಣ ಮಂಟಪದ ಹತ್ತಿರ ಫಿಯರ್ಾದಿಯ ಅಣ್ಣನಾದ ಮಲ್ಲೇಶಿ ಕವಾಲ್ದಾರ ಈತನು ಹೊರಟ ಮೊಟಾರ ಸೈಕಲ್ ನಂ. ಕೆ.ಎ.33 ಎಸ್-2099 ನೇದ್ದಕ್ಕೆ ಎದುರಿನಿಂದ  ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ಡಿಕ್ಕಿಪಡಿಸಿ  ಭಾರೀ ಗಾಯ ಪಡಿಸಿದ ಲಾರಿ ನಂ. ಎ.ಪಿ 12-ವಿ-7161 ನೇದ್ದರ ಚಾಲಕನಾದ ರಾಜುಕುಮಾರ ತಂದೆ ಮಲ್ಲಪ್ಪ ಮಹೇಶಗುಂಡ ಸಾ: ಮಾಡಗೋಳ ತಾ: ಹುಮನಾಬಾದ ಅವನ ಮೇಲೆ   ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇತ್ಯಾದಿ ಇದ್ದ ಫಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 67/2020 ಕಲಂ.279, 338 ಐ.ಪಿ.ಸಿ. ಅಡಿಯಲ್ಲಿ ಪ್ರಕರರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ,ಆರ್ ನಂ: 02/2020 ಕಲಂ 174 ಸಿ ಆರ್ ಪಿ ಸಿ:- ಇಂದು ದಿನಾಂಕ:03.03.2020 ರಂದು 20:15 ಗಂಟೆಗೆ ಪಿರ್ಯಾಧಿ ಶ್ರೀ. ಗೌಡಪ್ಪ ತಂದೆ ಹಣಮಂತ್ರಾಯ ಹಳ್ಳಿಗೌಡರ ವ:50 ವರ್ಷ ಉ: ಒಕ್ಕಲುತನ ಜಾ: ಬೇಡರ ಸಾ: ಹಳ್ಳೇರ ದೊಡ್ಡಿ ಕಕ್ಕೇರಾ ತಾ: ಸುರಪೂರ ಇದ್ದು. ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ಪಿರ್ಯಾಧಿ ಅಜರ್ಿಯನ್ನು ಹಾಜರ ಪಡಿಸಿದ್ದು. ಅದರ ಸಾರಾಂಶವೆನೆಂದರೆ ನಮ್ಮ ತಂದೆ ತಾಯಿಗೆ ದೇವೀಂದ್ರಪ್ಪಗೌಡ, ನಂದಪ್ಪ, ಗೂಳಪ್ಪ ಮತ್ತು ನಾನು 4 ಜನ ಗಂಡು ಮಕ್ಕಳಿದ್ದು. ಎಲ್ಲರದ್ದು ಮದುವೆಯಾಗಿದ್ದು. ಎಲ್ಲರೂ ಬೇರೆ-ಬೇರೆ ಇದ್ದು. ಎಲ್ಲರ ಮನೆಗಳು ಅಕ್ಕಪಕ್ಕದಲ್ಲಿಯೇ ಇರುತ್ತವೆ. ನನ್ನ ಅಣ್ಣಂದಿರಾದ ದೇವೀಂದ್ರಪ್ಪಗೌಡ ಮತ್ತು ಗೂಳಪ್ಪ ರವರು ತೀರಿಕೊಂಡಿದ್ದು. ನನ್ನ ಅಣ್ಣ ಗೂಳಪ್ಪನಿಗೆ ಹಣಮಂತ್ರಾಯ ಅಂತ ಒಬ್ಬನೇ ಮಗನಿದ್ದು. ಅವನದು ಮದುವೆಯಾಗಿದ್ದು. ಇಬ್ಬರೂ ಮಕ್ಕಳಿದ್ದು. ಹಣಮಂತ್ರಾಯ ತಂಗಿ ನಂದಮ್ಮಳಿಗೆ ಚನ್ನಪಟ್ಟಣಕ್ಕೆ ಕೊಟ್ಟಿದ್ದು. ಆಕೆಯ ಗಂಡ ಪರಮಣ್ಣನು ತನ್ನ ಕುಟುಂಬದೊಡನೇ ನಮ್ಮ ದೊಡ್ಡಿಯಲ್ಲಿ ಮಗ ಹಣಮಂತ್ರಾಯನ ಜಾಗದಲ್ಲಿ ಟೀನ್ ಶಡ್ಡ ಹಾಕಿಕೊಂಡು ಇರುತ್ತಾನೆ. ನನ್ನ ಅಣ್ಣ ಗೂಳಪ್ಪನ ಮಗ ಹಣಮಂತ್ರಾಯ ಇತನು ಈಗ 2-3 ದಿನಗಳಿಂದ ವಿಪರೀತವಾಗಿ ಸರಾಯಿ ಕುಡಿಯುವ ಚಟಕ್ಕೆ ಬಲಿಯಾಗಿ ಯಾವುದೇ ಕೆಲಸ ಮಾಡದೇ. ಸೋಮಾರಿಯಾಗಿ ಸರಾಯಿ ಕುಡಿಯುತ್ತಾ ತಿರುಗುತ್ತಿದ್ದು. ನಾನು ಮತ್ತು ನನ್ನ ಅಣ್ಣ ನಂದಪ್ಪ ಹಾಗೂ ಅವನ ಹೆಂಡತಿ ದೇವಮ್ಮ ರವರು ಅವನಿಗೆ ಸರಾಯಿ ಕುಡಿಯುವದು ಬಿಡು ಅಂತ ಹೇಳಿದರು ಬಿಟ್ಟಿರಲಿಲ್ಲಾ. ಹಣಮಂತ್ರಾಯನು ತನ್ನ ಹೊಲದಲ್ಲಿ ಶೇಂಗಾ ಹರಿದು ಕಣ ಹಾಕಿದ್ದರಿಂದ ತನ್ನ ಮನೆಯ ಸಮೀಪ ಇರುವ ಹೊಲಕ್ಕೆ ರಾತ್ರಿ 8:00 ರ ಸುಮಾರಿಗೆ ಹೋಗಿ ಮಲಗಿಕೊಂಡಿದ್ದು. ಈ ದಿವಸ ಬೆಳಿಗ್ಗೆ 4:00 ಗಂಟೆಯ ಸುಮಾರಿಗೆ ಹಣಮಂತ್ರಾಯನ ಅಳಿಯ ಪರಮಣ್ಣನು ಹಣಮಂತ್ರಾಯ ಹೊಲದಲ್ಲಿ ಚಿರಾಡುವದನ್ನು ಕೇಳಿ ಏಕೆ ಅಂತ ಅವನ ಹತ್ತಿರ ಹೋಗಿ ನೋಡಿದಾಗ ಮಗ ಹಣಮಂತ್ರಾಯನು ಕ್ರೀಮಿನéಾಷಕ ಔಷಧ ಕುಡಿದಿದ್ದಾಗಿ ತಿಳಿಸಿದ್ದು. ಮತ್ತು ಅವನ ಬಾಯಿಯಿಂದ ಕ್ರೀಮಿನಾಷಕ ಔಷಧದ ವಾಸನೆ ಬರುತ್ತಿದ್ದರಿಂದ ನನ್ನ ಅಳಿಯ ಪರಮಣ್ಣನು ಬಂದು ನನಗೆ ಮತ್ತು ನನ್ನ ಅಣ್ಣ ನಂದಪ್ಪ ರವರಿಗೆ ಹಾಗೂ ಹಣಮಂತ್ರಾಯ ತಂದೆ ದೇವಿಂದ್ರಪ್ಪ ಮತ್ತು ಹಣಮಂತ್ರಾಯನ ಹೆಂಡತಿ ದೇವಮ್ಮ ರವರಿಗೆ ಹಣಮಂತ್ರಾಯನು ವಿಷಸೇವನೆ ಮಾಡಿದ ವಿಷಯವನ್ನು ತಿಳಿಸಿದ್ದು. ನಾವೆಲ್ಲರೂ ಹಣಮಂತ್ರಾಯನ ಹತ್ತಿರ ಹೋಗಿ ನೋಡಲಾಗಿ ಹಣಮಂತ್ರಾಯ ವಿಷಸೇವನೆ ಮಾಡಿದ್ದರಿಂದ ತುಂಬಾ ತ್ರಾಸ್ ಮಾಡಿಕೊಳ್ಳುತ್ತಿದ್ದು. ನಾವೆಲ್ಲರೂ ಕೂಡಿ ನನ್ನ ಮಗನಿಗೆ ಉಪಚಾರಕ್ಕಾಗಿ ಕಕ್ಕೇರಾ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಲಿಂಗಸೂರಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಉಪಚಾರ ಮಾಡಿಸಿಕೊಂಡು ಹೆಚ್ಚಿನ ಉಪಚಾರಕ್ಕಾಗಿ ಹಣಮಂತ್ರಾಯನಿಗೆ ರಾಯಚೂರಿನ ರೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಉಳಿದವರು ಹೋಗಿದ್ದು. ನಾನು ಲಿಂಗಸೂರಿನಿಂದ ಮರಳಿ ಊರಿಗೆ ಬಂದು ಊರಲ್ಲಿ ಇದ್ದಾಗ ಸಾಯಂಕಾಲ 4:00 ಗಂಟೆಯ ಸುಮಾರಿಗೆ ನಮ್ಮ ಸಂಬಂಧಿ ಹಣಮಂತ್ರಾಯ ತಂದೆ ದೇವೀಂದ್ರಪ್ಪ ಇವರು ನನಗೆ ಪೋನ್ ಮಾಡಿ ಹಣಮಂತ್ರಾಯನು ಉಪಚಾರ ಫಲಿಸದೇ 3:45 ಪಿಎಮ್  ಸುಮಾರಿಗೆ ಆಸ್ಪತ್ರೆಯಲ್ಲಿ ಸತ್ತಿದ್ದಾಗಿ ತಿಳಿಸಿ ನನಗೆ ಕೊಡೇಕಲ್ಲ ಪೊಲೀಸ್ ಠಾಣೆಗೆಹೋಗಿ ಈ ಬಗ್ಗೆ ದೂರು ಕೊಡಲು ತಿಳಿಸಿದ್ದರಿಂದ ನಾನು ಬಂದು ದೂರು ಕೊಡುತ್ತಿದ್ದು. ನನ್ನ ಅಣ್ಣನ ಮಗ ಹಣಮಂತ್ರಾಯ ತಂದೆ ಗೂಳಪ್ಪ ಹಳ್ಳಿಗೌಡರ ವ:28 ವರ್ಷ ಇತನು ಸರಾಯಿ ಕುಡಿದ ನಶೆಯಲ್ಲಿ ಹೊಲದಲ್ಲಿ ಬೇಳೆಗಳಿಗೆ ಹೊಡೆಯಲು ತಂದಿಟ್ಟಿದ್ದ ಕ್ರೀಮಿನಾಷಕ ಔಷಧವನ್ನು ತನ್ನಿಂದ ತಾನೇ ಸೇವಿಸಿದ್ದು. ಉಪಚಾರಕ್ಕಾಗಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಉಪಚಾರ ಫಲಿಸದೇ ಈ ದಿವಸ 3:45 ಪಿಎಮ್ಗೆ ಸತ್ತಿದ್ದು. ನನ್ನ ಅಣ್ಣನ ಮಗನ ಮರಣದಲ್ಲಿ ಯಾರ ಮೇಲೂ ಯಾವುದೆ ಸಂಶಯ ಇರುವದಿಲ್ಲಾ ಶವವು ರಾಯಚೂರಿನ ರೀಮ್ಸ್ ಆಸ್ಪತ್ರೆಯಲ್ಲಿದ್ದು. ಮುಂದಿನ ಕ್ರಮ ಜರುಗಿಸಬೇಕು ಅಂತ ಲಿಖಿತ ಪಿರ್ಯಾಧಿ ಸಾರಾಂಶದ ಮೇಲಿಂದ ಠಾಣೆಯ ಯುಡಿಆರ್ ನಂ:02/2020 ಕಲಂ 174  ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು.

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 27/2020  ಕಲಂ 363 ಐಪಿಸಿ :- ನಾನು ಈ ಮೇಲ್ಕಂಡ ಹೆಸರು ವಿಳಾಸದ ನಿವಾಸಿತನಿದ್ದು ಒಕ್ಕಲುತನ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಉಪಜೀವನ ಮಾಡಿಕೊಂಡಿರುತ್ತೇನೆ  ದಿನಾಂಕ: 28-02-2020 ರಂದು ನಾನು ಬೆಳಿಗ್ಗೆ 06-00 ಗಂಟೆಗೆ ನಾನು ಹೊಲಕ್ಕೆ ಹೋಗಿದ್ದು, ಬೆಳಿಗ್ಗೆ 09-00 ಗಂಟೆ ಸುಮಾರಿಗೆ ನನ್ನ ಹೆಂಡತಿ ಈಶಮ್ಮ ಮತ್ತು ನನ್ನ ಸಣ್ಣಮಗ ಮಲ್ಲೇಶ ಇಬ್ಬರು ಕೂಡಿ ಹೊಲಕ್ಕೆ ಬಂದರು ನಾನು ಹೊಲದಲ್ಲಿ ಉಳ್ಳಗಡ್ಡೆ ಹೊಲಕ್ಕೆ ನೀರು ಕಟ್ಟುತಿದ್ದೆನು, ನನ್ನ ಹೆಂಡತಿ ಮತ್ತು ನನ್ನ ಮಗ ಮಲ್ಲೇಶ ಇಬ್ಬರು ಹೊಲದಲ್ಲಿ ಶೇಂಗ ಆರಿಸುತಿದ್ದರು ನಾನು ಹೊಲದಲ್ಲಿ ನೀರು ಕಟ್ಟುವಾಗ ನನ್ನ ಮಗ ಮಲ್ಲೇಶ ಇತನು ನನಗೆ ಮತ್ತು ನನ್ನ ಹೆಂಡತಿಗೆ ಹೇಳದೆ ಕೇಳದೆ ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಹೊಲದಿಂದ ಮನೆಯ ಕಡೆಗೆ ಹೋದನು ಆಗ ನಾವು ಮನೆಗೆ ಹೋಗಿರಬಹುದು ಅಂತಾ ಸುಮ್ಮನಾದೆವು ಸಾಯಂಕಾಲ 06-00 ಗಂಟೆ ಸುಮಾರಿಗೆ ನನ್ನ ಹೆಂಡತಿ ಹೊಲದಿಂದ ಮನೆಗೆ ಹೋದಳು, ನಾನು ಹೊಲದಲ್ಲಿ ಇರುವಾಗ ನನ್ನ ಹೆಂಡತಿ ನನಗೆ ಪೊನ್ ಮಾಡಿ ತಿಳಿಸಿದ್ದೆನೆಂದರೆ ನಮ್ಮ ಸಣ್ಣಮಗ ಮಲ್ಲೇಶ ಇತನು ಮನೆಯಲ್ಲಿ ಇಲ್ಲ ನಾನು ಊರಲ್ಲಿ ಎಲ್ಲಾ ಕಡೆ ನೋಡಿದರು ಕಾಣಿಸುತಿಲ್ಲ ಅಂತಾ ತಿಳಿಸಿದಳು. ಆಗ ನಾನು ನನ್ನ ಹೆಂಡತಿಗೆ ಹೊಲದಲ್ಲಿ ಎತ್ತು ದನ ಶೇಂಗಾ ಇದ್ದಾವೆ ನಾನು ಬೆಳಿಗ್ಗೆ ಬರುತ್ತೆನೆ ಅಂತಾ ಹೇಳಿದೆನು. ಮರು ದಿನ ನಾನು ಬೆಳಿಗ್ಗೆ 07-30 ಗಂಟೆಗೆ ಹೊಲದಿಂದ ಮನೆಗೆ ಬಂದು ಊರಲ್ಲಿ ರೋಡಿನ ಹತ್ತಿರ ಗೇಟಿಗೆ ಹೋಗಿ ಹುಡುಕಾಡಿದೆನು ಅಲ್ಲಿ ಇರಲಿಲ್ಲ, ಸೈದಾಪೂರ ಕಡೆ ಹೋಗಿರಬಹುದು ಅಂತಾ ಸೈದಾಪೂರಕ್ಕೆ ಬಂದು ಅಲ್ಲಿ ಕೂಡ ನನ್ನ ಮಗನಿಗೆ ಹುಡಕಾಡಲಾಗಿ ನನ್ನ ಮಗ ಸಿಗಲಿಲ್ಲ ಆಗ ನಮ್ಮ ಸಂಬಂದಿಕರ ಊರುಗಳಾದ ಯರಮರಸ, ರಾಯಚೂರ ಹೆಗನೂರ, ರಾಚನಳ್ಳಿ, ಪಸಪೂಲ್, ಇಮಲಾಪೂರ ಗ್ರಾಮಗಳಿಗೆ ಹೋಗಿ ತಿರುಗಾಡಿ ನನ್ನ ಮಗನ ಬಗ್ಗೆ ಕೇಳಲಾಗಿ ಅವರು ಮಲ್ಲೇಶ ಇತನು ಬಂದಿಲ್ಲ ಅಂತಾ ತಿಳಿಸಿದರು ಮತ್ತು ಪೊನ್ ಮೂಲಕ ಕೂಡ ನಮ್ಮ ಸಂಬಂದಿಕರಿಗೆ ಇತರೆ ಊರುಗಳಿಗೆ ನನ್ನ ಮಗ ಮಲ್ಲೇಶ ಇತನು ಬಂದಿದಾನೆ ಏನು ಅಂತಾ ಕೇಳಲಾಗಿ ಅವರು ಬಂದಿಲ್ಲ ಅಂತಾ ತಿಳಿಸದರು, ಆಗ ನಾವು ಎಲ್ಲಾ ಕಡೆ ಹುಡುಕಾಡಿದರು ನಮ್ಮ ಮಗ ಸಿಗಲಿಲ್ಲ ಎಲ್ಲಿಯಾದರು ಹೋಗಿರಬೇಕು ನಂತರ ಬರಬಹುದು ಅಂತಾ ಅಲಲ್ಲಿ ಹುಡುಕಾಡುತ್ತಾ ಇದ್ದೆವು ನಾವು ನಮ್ಮ ಎಲ್ಲಾ ಬಿಗರು ನೆಂಟರು ಊರುಗಳಿಗೆ ಹೋಗಿ ಹುಡುಕಾಡಿದರೂ ಎಲ್ಲಿಯೂ ನಮ್ಮ ಮಗ ಮಲ್ಲೇಶ ವ|| 10 ವರ್ಷ ಉ|| ವಿಧ್ಯಾಥರ್ಿ ಸಾ|| ಬಳಿಚಕ್ರ ಇತನು ಸಿಗದ ಕಾರಣ ಇಂದು ದಿನಾಂಕ: 03-03-2020 ರಂದು  ತಡವಾಗಿ ಠಾಣೆಗೆ ಬಂದಿರುತ್ತೇನೆ ನನ್ನ ಮಗನು ಕಾಣೆಯಾದ ಬಗ್ಗೆ ದೂರು ದಾಖಲಿಸಿಕೊಳ್ಳಬೇಕು ಅಂತಾ ಮಾನ್ಯರವರಲ್ಲಿ ವಿನಂತಿ ಇರುತ್ತದೆ

ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 29/2020 ಕಲಂ 78[3] ಕೆಪಿ ಎಕ್ಟ:- :   ಇಂದು ದಿನಾಂಕ 03/03/2020 ರಂದು 1.30 ಪಿಎಮ್ ಕ್ಕೆ ಹುರಸಗುಂಡಗಿ ಗ್ರಾಮದ ಅಂಬೇಡ್ಕರ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 3.15 ಪಿ.ಎಮ್ ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 4.45 ಪಿಎಮ್ ಕ್ಕೆ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 1120=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡು 6 ಪಿ.ಎಮ್.ಕ್ಕೆ ಠಾಣೆಗೆ ತಂದು ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ ಬಗ್ಗೆ. 

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 40/2020 ಕಲಂ: 279,337,338, 304(ಎ) ಐ.ಪಿ.ಸಿ ಸಂ 187 ಐ ಎಮ್ ವಿ ಆಕ್ಟ್:- ದಿನಾಂಕ 27/02/2020 ರಂದು ಯುನೈಟೆಡ್ ಆಸ್ಪತ್ರೆ ಕಲಬುಗರ್ಿಯಿಂದ ಆರ್ ಟಿ ಎ ಎಮ್ ಎಲ್ ಸಿ ವಸೂಲಾದ ಮೇರೆಗೆ ಆಸ್ಪತ್ರೆಗ ಬೇಟಿ ನೀಡಿ ಗಾಯಾಳು ಮಾತನಾಡುವ ಸ್ತಿತಿಯಲ್ಲಿ ಇರದೇ ಇರುವದರಿಂದ ಗಾಯಾಳುವಿನ ಹೆಂಡತಿ ಶರಣಮ್ಮ ಗಂಡ ವಿಠಲ ಗೌಂಡಿ ವಯಾ|| 38 ಜಾ|| ಹಿಂದು ಹೊಲೆಯ ಉ|| ಕೂಲಿಕೆಲಸ ಸಾ|| ಮಲ್ಲಾ[ಕೆ] ತಾ|| ಸುರಪುರ  ಇವರ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದಿದ್ದು ಸದರ ಹೇಳಿಕೆ ಸಾರಾಂಶವೇನಂದರೆ ನಿನ್ನೆ ದಿನಾಂಕ 26/02/2020 ರಂದು ಮುಂಜಾನೆ 09 ಗಂಟೆಯ ಸುಮಾರಿಗೆ ನನ್ನ ಗಂಡ ವಿಠಲ ಹಾಗು ನಮ್ಮೂರ ನಮ್ಮ ಜನಾಂಗದ ಮಲ್ಲಿಕಾಜರ್ುನ ತಂದೆ ಅಯ್ಯಪ್ಪ ಗೌಂಡಿ ಇಬ್ಬರೂ ಕೂಡಿಕೊಂಡು ನಮ್ಮ ಮೋಟರ ಸೈಕಲ ಮೇಲೆ ಏವೂರ ಗ್ರಾಮಕ್ಕೆ ಗೌಂಡಿ ಕೆಲಸಕ್ಕೆಂದು ಹೋದರು. ರಾತ್ರಿ 07-30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರ ಬಸನಗೌಡ ತಂದೆ ಶಿವಪ್ಪಗೌಡ ಮೇಟಿ ಇವರು ನಮ್ಮ ಮನೆಗೆ ಪೋನ ಮಾಡಿ ತಿಳಿಸಿದ್ದೇನಂದರೆ ನನ್ನ ಗಂಡ ವಿಠಲ ಹಾಗು ಮಲ್ಲಿಕಾಜರ್ುನ ಗೌಂಡಿ ಇಬ್ಬರೂ ಕೂಡಿಕೊಂಡು ತಮ್ಮ ಕೆಲಸ ಮುಗಿಸಿ ಮರಳಿ ಊರಿಗೆ ಬರುವ ಕುರಿತು ನಮ್ಮ ಮೋಟರ ಸೈಕಲ ಮೇಲೆ ಬರುತ್ತಿದ್ದು ಸದರ ಮೋಟರ ಸೈಕಲ ನನ್ನ ಗಂಡನೇ ನಡೆಸುತ್ತಿದ್ದು ಆಗ ಇಬ್ಬರೂ ಕೂಡಿಕೊಂಡು ಮಲ್ಲಾ ಶಹಾಪೂರ ಮುಖ್ಯ ರಸ್ತೆಯ ಮಲ್ಲಾ ಬಿ ಹತ್ತಿರದ ಇಟ್ಟಂಗಿ ಬಟ್ಟೆಯ ಹತ್ತಿರ ರೋಡಿನಲ್ಲಿ ಬರುತ್ತಿದ್ದಾಗ ಟ್ರ್ಯಾಕ್ಟರ ಅಪಘಾತವಾಗಿದೆ  ಅಂತ ತಿಳಿಸಿದಾಗ ಕೂಡಲೇ ನಾನು ಹಾಗು ನಮ್ಮ ಮಾವ ಮಾನಪ್ಪ ತಂದೆ ರಾಮಪ್ಪ ಗೌಂಡಿ ಇಬ್ಬರು ಕೂಡಿ ಸದರ ಸ್ಥಳಕ್ಕೆ ಬಂದು ನೋಡಲು ನನ್ನ ಗಂಡ ವಿಠಲ ಹಾಗು ಮೋಟರ ಸೈಕಲ ಹಿಂದೆ ಕುಳಿತ ಮಲ್ಲಿಕಾಜರ್ುನ ಗೌಂಡಿ ಇಬ್ಬರೂ ರೋಡಿನ ಪಕ್ಕದಲ್ಲಿ ಬಿದ್ದಿದ್ದು ನನ್ನ ಗಂಡನಿಗೆ ನೋಡಲಾಗಿ ಎಡಗಾಲ ಹಿಂಬಡಿಗೆ ಭಾರೀ ರಕ್ತಗಾಯವಾಗಿ ಕತ್ತರಿಸಿದ್ದು ಅಲ್ಲದೇ ಮೊಳಕಾಲ ಕೆಳಗೆ ಹಾಗು ಮೊಳಕಾಲಿನ ಚಿಪ್ಪಿನ ಹತ್ತಿರ ಭಾರೀ ರಕ್ತಗಾಯ ಹಾಗು ಗುಪ್ತಗಾಯಗಳಾಗಿ ಕಾಲು ಮುರಿದಿರುತ್ತದೆ. ಅಲ್ಲದೇ ಎಡಗೈ ಮೊಳಕೈ ಹಾಗು ಬುಜಕ್ಕೆ ಭಾರೀ ಗುಪ್ತಗಾಯವಾಗಿರುತ್ತದೆ. ಹಾಗು ತಲೆಗೆ ರಕ್ತಗಾಯ ಹಾಗು ಗುಪ್ತಗಾಯವಾಗಿರುತ್ತದೆ. ಮತ್ತು ಮಲ್ಲಿಕಾಜರ್ುನ ಗೌಂಡಿ ಈತನಿಗೆ ಎಡಭುಜಕ್ಕೆ ರಕ್ತಗಾಯವಾಗಿ ಭಾರೀ ಗುಪ್ತಗಾಯವಾಗಿರುತ್ತದೆ. ಅಲ್ಲದೇ ತಲೆಗೆ ಭಾರೀ ಒಳಪೆಟ್ಟಾಗಿರುತ್ತದೆ. ನಂತರ ಸದರಿ ಘಟನೆಯನ್ನು ಕಂಡ ಬಸನಗೌಡ ಮೇಟಿ ಇವರಿಂದ ಕೇಳಿ ತಿಳಿಯಲಾಗಿ ನನ್ನ ಗಂಡ ವಿಠಲ ಹಾಗು ಮಲ್ಲಿಕಾಜರ್ುನ ಗೌಂಡಿ ಇಬ್ಬರೂ ಕೂಡಿಕೊಂಡು ತಮ್ಮ ಮೋಟರ ಸೈಕಲ ಮೇಲೆ ಬರುತ್ತಿದ್ದಾಗ ಮುಂದೆ ಒಂದು ಟ್ರ್ಯಾಕ್ಟರ ಹೋಗುತ್ತಿದ್ದು ಆಗ ಸದರ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀ ವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಹೊರಟವನು ಒಮ್ಮಲೇ ರೋಡಿನ ಬಲಭಾಗಕ್ಕೆ ಅಡ್ಡ ತಮದಾಗ  ನನ್ನ ಗಂಡನ ಮೋಟರ ಸೈಕಲಗೆ ಟ್ರ್ಯಾಕ್ಟರ್ ಟ್ರಾಲಿ ಬಡಿದು ಅಪಘಾತವಾಗಿದ್ದು ಇರುತ್ತದೆ ಅಂತ ತಿಳಿಸಿದನು.  ನಂತರ ನನ್ನ  ಗಂಡನ ಮೋಟರ ಸೈಕಲಗೆ ಡಿಕ್ಕಿಪಡಿಸಿದ ಅಲ್ಲಿಯೇ ನಿಂತಿದ್ದ ಟ್ರ್ಯಾಕ್ಟರ್ ಇಂಜನ ನಂಬರ ನೋಡಲಾಗಿ ಕೆಎ-33 ಟಿಬಿ-1046 ಹಾಗು ಟ್ರಾಲಿ ನಂಬರ ಕೆಎ-33 ಟಿ- 4628 ಅಂತ ಇದ್ದು  ಓಡಿಹೋದ ಟ್ರ್ಯಾಕ್ಟರ ಚಾಲಕನ ಬಗ್ಗೆ ವಿಚಾರಿಸಿ ತಿಳಿಯಲಾಗಿ ಆತನ ಹೆಸರು ಇರಫಾನ ತಂದೆ ಬಂದಗೀಸಾಬ ನಾಶಿ ಸಾ|| ಕೆಂಭಾವಿ ಅಂತ ಗೊತ್ತಾಯಿತು. ನಂತರ ನನ್ನ ಗಂಡ ವಿಠಲ ಹಾಗು ಮಲ್ಲಿಕಾಜರ್ುನ ಗೌಂಡಿ ಇವರಿಗೆ ಉಪಚಾರ ಕುರಿತು ಕಲಬುಗರ್ಿಯ ಯುನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ಮಾನ್ಯರವರು ನನ್ನ ಗಂಡನಿಗೆ ಅಪಘಾತ ಪಡಿಸಿದ ಟ್ರ್ಯಾಕ್ಟರ್ ನಂಬರ ಕೆಎ-33 ಟಿಬಿ-1046 ಹಾಗು ಟ್ರಾಲಿ ನಂಬರ ಕೆಎ-33 ಟಿ- 4628 ನೇದ್ದರ ಚಾಲಕ ಇರಫಾನ ತಂದೆ ಬಂದಗೀಸಾಬ ನಾಶಿ ಸಾ|| ಕೆಂಭಾವಿ ಈತನ ವಿರುದ್ದ ಸೂಕ್ತ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 40/2020 ಕಲಂ 279,337,338 ಐಪಿಸಿ ಸಂಗಡ 187 ಐಎಮ್ವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
ಇಂದು ದಿ: 03/03/2020 ರಂದು 9 ಪಿಎಮ್ಕ್ಕೆ ಪ್ರಕರಣದ ಪಿರ್ಯಾಧಿದಾರಳಾದ ಶರಣಮ್ಮ ಗಂಡ ವಿಠಲ ಗೌಂಡಿ ಸಾ|| ಮಲ್ಲಾ[ಕೆ] ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಸದರ ಪ್ರಕರಣದಲ್ಲಿಯ ಗಾಯಾಳು (ಗಂಡ) ವಿಠಲ ತಂದೆ ರಾಮಪ್ಪ ಗೌಂಡಿ ಈತನು ಭಾರಿ ರಕ್ತಗಾಯ ಹಾಗೂ ಗುಪ್ತಗಾಯ ಹೊಂದಿ ಕಲಬುರಗಿಯ ಜಯದೇವ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದ ನನ್ನ ಗಂಡನು ಉಪಚಾರ ಫಲಕಾರಿಯಾಗದೆ ಇಂದು ದಿ: 03/03/2020 ರಂದು 6.30 ಪಿಎಮ್ಕ್ಕೆ ಮೃತಪಟ್ಟಿದ್ದು ತಾವು ಬಂದು ಮುಂದಿನ ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಪುರವಣಿ ಹೇಳಿಕೆ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯಕ್ಕೆ ಸದರ ಪ್ರಕರಣದಲ್ಲಿ ಕಲಂ: 304 (ಎ) ಐಪಿಸಿ ಅಳವಡಿಸಿಕೊಳ್ಳಲು ಅನುಮತಿ ಕುರಿತು ಪತ್ರದ ಮೂಲಕ ವಿನಂತಿಸಿ ಮುಂದಿನ ಕ್ರಮ ಜರುಗಿಸಿದ್ದು ಇರುತ್ತದೆ.
ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 37/2020 ಕಲಂ: 78() ಕೆ.ಪಿ. ಆಕ್ಟ್:- ಇಂದು ದಿನಾಂಕ 03.03.2020  ರಂದು ಸಂಜೆ 04:00 ಗಂಟೆಗೆ ಆರೋಪಿ ಭೀಮಶಪ್ಪ ಈತನು ಚಪೆಟ್ಲಾ ಗ್ರಾಮದ ಮಾತಾ ಮಾಣೀಕೇಶ್ವರಿ ದೇವಸ್ಥಾನದ ಹತ್ತಿರ ರೋಡಿನ ಮೇಲೆ ಅಕ್ರಮ ಮಟಕಾ ಜೂಜಾಟ ಅಂಕಿ ಸಂಖ್ಯೆ ಬರೆದುಕೊಂಡು ಸಾರ್ವಜನಿಕರಿಗೆ 1/- ರೂ ಗೆ 80/- ರೂ ಮಟಕಾ ಬರೆಯಿಸಿದರೆ ಕೊಡುವುದಾಗಿ ಹೇಳಿ ಅವರಿಂದ ಹಣ ಸಂಗ್ರಹಿಸುತ್ತಿದ್ದಾಗ ಫೀರ್ಯಾದಿದಾರರಾದ ಶ್ರೀಮತಿ ಶೀಲಕಾದೇವಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚಸ ಸಮಕ್ಷಮದಲ್ಲಿ ದಾಳೀ ಮಾಡಿ ಸದರಿ ಆರೋಪಿತನ ವಶದಲ್ಲಿದ್ದ 1]ನಗದು ಹಣ 870/-, 2] ಮಟಕಾ ಅಂಕಿ ಸಂಖ್ಯೆ ಬರೆದುಕೊಂಡ ಚೀಟಿ, 3] ಒಂದು ಬಾಲ ಪೆನ್ ಅ.ಕಿ-00, ಹೀಗೆ ಒಟ್ಟು 870/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಸದರಿ ವರದಿ ಹಾಗೂ ಪಂಚನಾಮೆಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದ ನಂತರ ಠಾಣಾ ಗುನ್ನೆ ನಂ: 37/2020 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡೆನು.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ:- 38/2020 ಕಲಂ 379 ಐಪಿಸಿ:- ಇಂದು ದಿನಾಂಕ 04.03.2020 ರಂದು ರಾತ್ರಿ 00.05 ಎ.ಎಂ ಕ್ಕೆ ಶ್ರೀ ಸಂಗಮೇಶ.ಜಿಡಗಿ ತಹಶೀಲ್ದಾರರು ಗುರುಮಠಕಲ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಸಾರಾಂಶವೆನೆಂದರೆ ದಿನಾಂಕ 03.03.2020 ರಂದು ರಾತ್ರಿ 10.30 ನಿ ಕ್ಕೆ ಗುರುಮಠಕಲ ಪಟ್ಟಣದ ಯಾದಗಿರಿ-ಗುರುಮಠಕಲ ಮುಖ್ಯ ರಸ್ತೆಯ ಮಾರ್ಗವಾಗಿ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಮಹೇಂದ್ರ 575ಡಿ.ಐ ಟ್ರ್ಯಾಕ್ಟರ ಸಂಖ್ಯೆ ಟಿ.ಎಸ್-06-ಇ.ಎಂ-2823 ರ ಟ್ರ್ಯಾಕ್ಟರನ್ನು ಬಸ್ ಡಿಪೋ ಹತ್ತಿರ ತಡೆದು ಈ ಟ್ರ್ಯಾಕ್ಟರನ ಚಾಲಕನಾದ ಸಂತೋಷ ತಂದೆ ಬುಗ್ಗ್ಯಾ ನಾಯಕ ಸಾಃ ಬೆಟ್ಟದಳ್ಳಿ ಇವರನ್ನು ವಿಚಾರಿಸಲಾಗಿ ದಾಖಲಾತಿಗಳನ್ನು ಕೇಳಲಾಗಿ ಯಾವುದೇ ದಾಖಲಾತಿಗಳನ್ನು ನೀಡಿರುವುದಿಲ್ಲ ಹಾಗೂ ಯಾವ ಸ್ಥಳದಿಂದ ಮರಳನ್ನು ತುಂಬಿಕೊಂಡು ಬಂದಿರುತ್ತಾರೆಂಬ ಬಗ್ಗೆ ಮಾಹಿತಿ ನಿಡಿರುವುದಿಲ್ಲ. ಆದ್ದರಿಂದ ಸದರಿಯವರು ಅಕ್ರಮವಾಗಿ ಮರಳು ಸಾಗಿಸುತ್ತಿರುವುದು ಕಂಡು ಬಂದ ಪ್ರಯುಕ್ತ ಮಹೇಂದ್ರ 575ಡಿ.ಐ ಟ್ರ್ಯಾಕ್ಟರ ಸಂಖ್ಯೆ ಟಿ.ಎಸ್-06-ಇ.ಎಂ-2823ರ ಟ್ರ್ಯಾಕ್ಟರನ್ನು ನಿಮ್ಮ ಸುಪದರ್ಿಗೆ ಪಡೆದು ಐಪಿಸಿ ಕಲಂ 379ರಡಿ ಪ್ರಕರಣವನ್ನು ದಾಖಲಿಸಿಕೊಂಡು ಕ್ರಮ ಜರುಗಿಸಲು ಸೂಚಿಸಿದೆ ಅಂತಾ ರೀತ್ಯಾ ಇರುತ್ತದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!